Tag: gadag

  • ಕೋಲಾರ | ನಿಲ್ದಾಣದಲ್ಲಿ ನಿಂತಿದ್ದ ಬಸ್‌ಗಳಿಗೆ ಕಲ್ಲು ಎಸೆದ ದುಷ್ಕರ್ಮಿಗಳು

    ಕೋಲಾರ | ನಿಲ್ದಾಣದಲ್ಲಿ ನಿಂತಿದ್ದ ಬಸ್‌ಗಳಿಗೆ ಕಲ್ಲು ಎಸೆದ ದುಷ್ಕರ್ಮಿಗಳು

    ಕೋಲಾರ: ದುಷ್ಕರ್ಮಿಗಳು ನಿಂತಿದ್ದ ಬಸ್‌ಗಳಿಗೆ (Bus) ಕಲ್ಲು ಎಸೆದಿರುವ ಘಟನೆ ಕೋಲಾರ (Kolar) ಬಸ್ ನಿಲ್ದಾಣದ ಬಳಿ ನಡೆದಿದೆ.

    ಸಾರಿಗೆ ನೌಕರರ ಮುಷ್ಕರದ (Transport Employees Strike) ಹಿನ್ನೆಲೆ ಕೋಲಾರ ಬಸ್ ನಿಲ್ದಾಣವು ಮುಂಜಾನೆಯಿಂದ ಸ್ಥಬ್ದವಾಗಿತ್ತು. ಬಳಿಕ ಒಂದೆರಡು ಬಸ್‌ಗಳನ್ನು ನಿಲ್ದಾಣಕ್ಕೆ ಅಧಿಕಾರಿಗಳು ಕಳುಹಿಸಿದ್ದರು. ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ಕಿಡಿಗೇಡಿಗಳು ಬಸ್‌ಗೆ ಕಲ್ಲು ಎಸೆದಿದ್ದಾರೆ. ಪರಿಣಾಮ ಬಸ್‌ನ ಕಿಟಕಿ ಗಾಜು ಪುಡಿಯಾಗಿವೆ. ಇದನ್ನೂ ಓದಿ: ಸಾರಿಗೆ ನೌಕರರ ಬೇಡಿಕೆ ಈಡೇರಿಸಿ, ಇಲ್ಲದಿದ್ರೆ ಕರ್ನಾಟಕ ಬಂದ್‌ಗೆ ಕರೆ ನೀಡ್ತೆವೆ – ವಾಟಾಳ್

    ಇನ್ನೊಂದೆಡೆ ಕೋಲಾರದಿಂದ ಹರಟಿ ಮಾರ್ಗವಾಗಿ ಸಂಚರಿಸಿದ್ದ ಬಸ್ ಕಿಡಿಗೇಡಿಗಳು ಕಲ್ಲು ಎಸೆದು ಪರಾರಿಯಾಗಿದ್ದಾರೆ. ಇನ್ನು ನಿಲ್ದಾಣದಲ್ಲಿ ನಿಂತಿದ್ದ ಬಸ್‌ಗಳಿಗೂ ಕಲ್ಲು ಎಸೆದಿದ್ದಾರೆ. ಕೆಲವು ಘಟನಾ ಸ್ಥಳಕ್ಕೆ ಕೋಲಾರ ನಗರ ಪೊಲೀಸರು ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್, ಕೋಲಾರದ ಎಸ್ಪಿ ನಿಖಿಲ್.ಬಿ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಇದೀಗ ಬಸ್ ನಿಲ್ದಾಣದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಇದನ್ನೂ ಓದಿ: ಟ್ರಂಪ್ ಸುಂಕ ಬೆದರಿಕೆ ನಡ್ವೆ ಅಮೆರಿಕಕ್ಕೆ ತಿವಿದ ಇಂಡಿಯನ್ ಆರ್ಮಿ – ಪಾಕ್‌ಗೆ ಶಸ್ತ್ರಾಸ್ತ್ರ ಪೂರೈಕೆ ಬಗ್ಗೆ 1971ರ ಪೇಪರ್ ಕಟಿಂಗ್‌ ಪೋಸ್ಟ್

    ಗದಗದಲ್ಲೂ ಚಲಿಸುತ್ತಿದ್ದ ಬಸ್‌ಗೆ ಕಲ್ಲು ತೂರಾಟ:
    ಇನ್ನು ಹುಬ್ಬಳ್ಳಿಯಿಂದ ಗದಗ (Gadag) ಮಾರ್ಗವಾಗಿ ಹೊಸಪೇಟೆ ಸಂಚರಿಸುವ ಬಸ್‌ಗೆ ದುಷ್ಕರ್ಮಿಗಳು ಕಲ್ಲು ಹೊಡೆದಿದ್ದಾರೆ. ಪರಿಣಾಮ ಮುಂದಿನ ಗಾಜು ಪುಡಿ ಪುಡಿಯಾಗಿದೆ. ಜಾರ್ಕಿನ್, ಮಾಸ್ಕ್ ಧರಿಸಿ ಬೈಕ್‌ನಲ್ಲಿ ಬಂದ ಮುಸುಕುಧಾರಿಗಳು ಚಲಿಸುವ ಬಸ್ಸಿಗೆ ಕಲ್ಲು ಹೊಡೆದು ಎಸ್ಕೇಪ್ ಆಗಿದ್ದಾರೆ. ಸದ್ಯ ಗದಗ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ನಿಂತಿದೆ.

    ಇದು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವಿಜಯನಗರ ಜಿಲ್ಲೆ ಹೊಸಪೇಟೆ ಡಿಪೋಗೆ ಸೇರಿದ ಬಸ್ ಆಗಿದ್ದು, ಸೋಮವಾರ ಹುಬ್ಬಳ್ಳಿಗೆ ಹೋಗಿತ್ತು. ಇಂದು ಮರಳಿ ಹೊಸಪೇಟೆ ಹೋಗುವ ವೇಳೆ ಈ ಘಟನೆ ನಡೆದಿದೆ.

  • ರೈತರಿಗೆ ಸಮರ್ಪಕ ಗೊಬ್ಬರ ವಿತರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ – ಬೊಮ್ಮಾಯಿ

    ರೈತರಿಗೆ ಸಮರ್ಪಕ ಗೊಬ್ಬರ ವಿತರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ – ಬೊಮ್ಮಾಯಿ

    ಗದಗ: ರಾಜ್ಯದಲ್ಲಿ ರೈತರಿಗೆ ಯೂರಿಯಾ ಗೊಬ್ಬರ ಕೊರತೆ ಎದುರಾಗಿದ್ದು, ಸರ್ಕಾರ ಮುಂಚಿತವಾಗಿ ಸ್ಟಾಕ್ ಮಾಡಬೇಕಿತ್ತು. ರೈತರಿಗೆ ಸಮರ್ಪಕ ಗೊಬ್ಬರ ವಿತರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.

    ಜಿಲ್ಲೆಯ ಸೊರಟೂರ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಹೆಚ್ಚಿನ ಗೊಬ್ಬರ ಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕೇಳಿದೆ. ಕೇಂದ್ರ ಕೃಷಿ ಸಚಿವರ ಜೊತೆ ಮಾತನಾಡಿ ಕೊಡಿಸುವಂತಹ ಪ್ರಯತ್ನ ಮಾಡುತ್ತೇನೆ. ರಾಜ್ಯದಲ್ಲಿದ್ದ ಗೊಬ್ಬರವನ್ನು ರೈತರಿಗೆ ಸಮರ್ಪಕವಾಗಿ ಸರ್ಕಾರ ಪೂರೈಕೆ ಮಾಡಲಿ ಎಂದರು.ಇದನ್ನೂ ಓದಿ: ಕಠಿಣ ಸಂದರ್ಭದಲ್ಲೂ ಅಭಿವೃದ್ಧಿಯ ದೀಪ ಬೆಳಗಿಸಬಹುದು – ಮಾಜಿ ಮಾವೋವಾದಿಗಳ ಮೀನು ಕೃಷಿಗೆ ಮೋದಿ ಶ್ಲಾಘನೆ

    ಇನ್ನೂ ನಾಲ್ವಡಿ ಕೃಷ್ಣರಾಜ ಒಡೆಯರಿಗಿಂತ ಹೆಚ್ಚು ಅಭಿವೃದ್ಧಿ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಇದು ಹೋಲಿಕೆಗೆ ಅಸಾಧ್ಯವಾದದ್ದು. ಅವರ ತಂದೆ ಬಹಳ ಕೆಲಸ ಮಾಡಿದ್ದಾರೆಂದು ತೋರಿಸಲು ಹೋಲಿಕೆ ಮಾಡ್ತಿದ್ದಾರೆ. ಸೂರ್ಯನ ಜೊತೆಗೆ ಯಾವುದಾದರೂ ಸಣ್ಣ ಬೆಳಕನ್ನು ಹೋಲಿಕೆ ಮಾಡಲು ಸಾಧ್ಯನಾ? ಸಾಧ್ಯನೇ ಇಲ್ಲ. ಸೂರ್ಯ ಸೂರ್ಯನೇ ಎಂದು ಹೇಳಿದರು.

    ಮಹದಾಯಿ ವಿಚಾರವಾಗಿ ಮಾತನಾಡಿ, ಮಹದಾಯಿ ಏನಾದ್ರು ಪ್ರಗತಿಯಾಗಿದ್ರೆ ಅದಕ್ಕೆ ಕಾರಣ ಬಿಜೆಪಿ. ಮೋದಿ ಸರ್ಕಾರ ಬಂದ್ಮೇಲೆ ಮಹದಾಯಿ ಆದೇಶ ಹೊರಡಿಸಿದ್ದರು. ಮಾಡಿಸಿದ್ದ ಡಿಪಿಆರ್‌ನ್ನು ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಒಪ್ಪಿಗೆ ಪಡೆಯಿತು. ಕಾಂಗ್ರೆಸ್ ಏನು ಮಾಡಲಿಲ್ಲ. ಬರೀ ನಾವು ಮಾಡಿದ ಕೆಲಸಕ್ಕೆ ಅಡ್ಡಗೋಡೆ ಕಟ್ಟಿದ್ದಾರೆ. ಮಹದಾಯಿ ಮಲಪ್ರಭಾಗೆ ಹರಿಯಬಾರದು ಅಂತ ಗೋಡೆ ಕಟ್ಟಿದರು. ರಾಜ್ಯದ ವಿಷಯದಲ್ಲಿ ರಾಜಕಾರಣ ಬೇಡ. ನ್ಯಾಯ ಸಮ್ಮತವಾಗಿ ಕಾಂಗ್ರೆಸ್ ಸರ್ಕಾರ ನಡೆಯಲಿ. ಗೋವಾ ಸಿಎಂ ಹೇಳಿಕೆಯನ್ನು ನಾನು ಸಹ ಖಂಡಿಸುತ್ತೇನೆ. ಕಾಂಗ್ರೆಸ್‌ಗೆ ಮಹದಾಯಿ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಸೋನಿಯಾ ಗಾಂಧಿ ಗೋವಾ ಚುನಾವಣೆಯಲ್ಲಿ ಹನಿ ನೀರು ಮಹದಾಯಿಂದ ಮಲಪ್ರಭಾಗೆ ಕೊಡಲ್ಲ ಎಂದಿದ್ದರು. ಹೀಗಾಗಿ ಕಾಂಗ್ರೆಸ್‌ಗೆ ಯಾವ ನೈತಿಕ ಹಕ್ಕಿದೆ ಎಂದು ಕಿಡಿಕಾರಿದರು.

    ಈ ವೇಳೆ ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರ, ಶಿರಹಟ್ಟಿ ಶಾಸಕ ಡಾ ಚಂದ್ರು ಲಮಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜುಕುರುಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಇದನ್ನೂ ಓದಿ: Explained| ಬದಲಾದ ಮಾಲ್ಡೀವ್ಸ್‌ – ಇಂಡಿಯಾ ಔಟ್‌ ಹೇಳಿ ಈಗ ಮೋದಿಯನ್ನು ಆಹ್ವಾನಿಸಿದ್ದು ಯಾಕೆ?

  • ಒಂದೇ ಬೈಕ್‌ನಲ್ಲಿ ನಾಲ್ವರು ಪ್ರಯಾಣ – ಓವರ್ ಸ್ಪೀಡ್‌ನಿಂದ ಡಿವೈಡರ್‌ಗೆ ಡಿಕ್ಕಿ; ಓರ್ವ ಸಾವು

    ಒಂದೇ ಬೈಕ್‌ನಲ್ಲಿ ನಾಲ್ವರು ಪ್ರಯಾಣ – ಓವರ್ ಸ್ಪೀಡ್‌ನಿಂದ ಡಿವೈಡರ್‌ಗೆ ಡಿಕ್ಕಿ; ಓರ್ವ ಸಾವು

    ಗದಗ: ಒಂದೇ ಬೈಕ್‌ನಲ್ಲಿ ನಾಲ್ವರು ಪ್ರಯಾಣ ಮಾಡುತ್ತಿದ್ದ ವೇಳೆ ಓವರ್ ಸ್ಪೀಡ್‌ನಲ್ಲಿ (Over Speed ಡಿವೈಡರ್‌ಗೆ ಡಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ (Gadag) ಜಿಲ್ಲೆ ಮುಂಡರಗಿ ತಾಲೂಕಿನ ಹಳ್ಳಿಗುಡಿ ಬಳಿ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ನಡೆದಿದೆ.

    ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ದ್ಯಾಮನಕೊಪ್ಪ ನಿವಾಸಿ ಗಣೇಶ ಸೋಮಪ್ಪ ನ್ಯಾರಲಘಂಟಿ (36) ಮೃತ ಯುವಕ. ಬೈಕ್‌ನಲ್ಲಿ ಹಿಂದೆ ಕೂತಿದ್ದ ಓರ್ವ ಮಹಿಳೆ, ಓರ್ವ ವೃದ್ಧ ಹಾಗೂ 4 ವರ್ಷದ ಮಗು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ – ಎಸ್‌ಐಟಿ ತಂಡಕ್ಕೆ ಹೆಚ್ಚುವರಿ 20 ಅಧಿಕಾರಿಗಳ ನೇಮಕ

    ಹಾವೇರಿಯಿಂದ ಕೊಪ್ಪಳಕ್ಕೆ ಹೊರಟಿದ್ದ ವೇಳೆ ಘಟನೆ ಸಂಭವಿಸಿದೆ. ಅತಿಯಾದ ವೇಗವೇ ಈ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ಬೈಕ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಇದನ್ನೂ ಓದಿ: ಸೈಬರ್‌ ದಾಳಿಗೆ 158 ವರ್ಷದ ಹಳೆಯ ಕಂಪನಿ ಬಂದ್‌ – 700 ಮಂದಿ ಮನೆಗೆ

    ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗದಗ | ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ನಗರಸಭೆಗೆ ಸಾರ್ವಜನಿಕರಿಂದ ಮುತ್ತಿಗೆ

    ಗದಗ | ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ನಗರಸಭೆಗೆ ಸಾರ್ವಜನಿಕರಿಂದ ಮುತ್ತಿಗೆ

    – ಖಾಲಿ ಕೊಡಗಳನ್ನು ಹಿಡಿದು ನಗರಸಭೆ ಎದುರು ಪ್ರತಿಭಟನೆ

    ಗದಗ: ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರು ನಗರಸಭೆಗೆ ಮುತ್ತಿಗೆ ಹಾಕಿ, ಆಕ್ರೋಶ ವ್ಯಕ್ತಪಡಿಸಿದ ಘಟನೆ ಗದಗನಲ್ಲಿ (Gadag) ನಡೆದಿದೆ.

    ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ನೇತೃತ್ವದಲ್ಲಿ ನಗರದ ಮಹಾತ್ಮ ಗಾಂಧಿ ವೃತ್ತದಿಂದ ನಗರಸಭೆ ಕಚೇರಿವರೆಗೆ ಖಾಲಿ ಕೊಡ ಹಿಡಿದು ಪ್ರತಿಭಟನಾ ರ‍್ಯಾಲಿ ನಡೆಯಿತು. ಬಳಿಕ ಪ್ರತಿಭಟನಾಕಾರರು ನಗರಸಭೆ ಕಚೇರಿ ಆವರಣದೊಳಗೆ ನುಗ್ಗಲು ಯತ್ನಿಸಿದರು. ಇದನ್ನೂ ಓದಿ: ಇ-ಖಾತೆದಾರರಿಗೆ ಬಿಗ್ ಶಾಕ್ – ಬಿಬಿಎಂಪಿಯಿಂದ ಶೋಕಾಸ್ ನೋಟಿಸ್ ಜಾರಿ

    ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತವಾಗಿ ಗೇಟ್‌ಗೆ ಬೀಗ ಹಾಕಿ, ಮುಂದೆ ಬ್ಯಾರಿಕೇಡ್ ಇಟ್ಟು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ಸ್ಥಳದಲ್ಲಿ 3 ಜನ ಡಿವೈಎಸ್ಪಿ, 4 ಜನ ಸಿಪಿಐ, 10 ಜನ ಪಿಎಸ್‌ಐ, 15 ಎಎಸ್‌ಐ ಸೇರಿದಂತೆ ನೂರಾರು ಜನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿತ್ತು. ಪ್ರತಿಭಟನಾಕಾರರು ಒಳಹೋಗದಂತೆ ಪೊಲೀಸರು ತಡೆದರು. ಈ ವೇಳೆ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

    ನಂತರ ನಗರಸಭೆ ಕಚೇರಿ ಗೇಟ್ ಮುಂದೆ ಖಾಲಿ ಕೊಡಗಳೊಂದಿಗೆ ಕುಳಿತು ಪ್ರತಿಭಟನೆ ಮುಂದುವರಿಸಿದರು. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ನಗರಸಭೆ ಪೌರಾಯುಕ್ತ ರಾಜಾರಾಮ್ ಪವಾರ್ ಹಾಗೂ ಸಂಬಂಧಿಸಿ ಅಧಿಕಾರಿಗಳು ಆಗಮಿಸಿ ಪರಸ್ಥಿತಿ ತಿಳಿಗೊಳಿಸಲು ಯತ್ನಿಸಿದರು. ಇದನ್ನೂ ಓದಿ: ಮಿಗ್-21 ಯುದ್ಧ ವಿಮಾನದ 62 ವರ್ಷಗಳ ಸೇವೆಗೆ ವಿದಾಯ – ಸೆ. 19ರಂದು ಬೀಳ್ಕೊಡುಗೆ ಸಮಾರಂಭ

    ಕಳೆದ 50 ವರ್ಷಗಳಿಂದ ಗದಗ-ಬೆಟಗೇರಿ ಅವಳಿ ನಗರದಲ್ಲಿ ನೀರಿನ ಸಮಸ್ಯೆ ಮುಂದುವರಿದಿದ್ದು, ನಗರಸಭೆ ಸದಸ್ಯರು ವಾರ್ಡಿನ ಸಾರ್ವಜನಿಕರಿಂದ ನಿತ್ಯ ಪೇಚಾಟ ಅನುಭವಿಸುವಂತಾಗಿದೆ. ಇದಕ್ಕೆ ಪರಿಹಾರವೇ ಇಲ್ಲದಂತಾಗಿದೆ ಎಂದು ಜಿಲ್ಲಾಧಿಕಾರಿಗಳೊಂದಿಗೆ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಅಹಮದಾಬಾದ್ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ – ಪೊಲೀಸರು, ಬಾಂಬ್ ನಿಷ್ಕ್ರಿಯ ದಳದಿಂದ ಶೋಧ

    ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಸಭೆ ನಡೆಸಿ ಚರ್ಚಿಸೋಣ. 5 ಜನ ಮುಖಂಡರು ಸಭೆಗೆ ಬನ್ನಿ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು. ಇದಕ್ಕೆ ಪ್ರತಿಭಟನಾಕಾರರು 5 ಜನ ಆಗುವುದಿಲ್ಲ, ಎಲ್ಲ ಸದಸ್ಯರನ್ನು ಸಭೆ ಕರೆಯಿರಿ ಎಂದು ಪಟ್ಟುಹಿಡಿದರು.

    ಕಳೆದ 50 ವರ್ಷದಿಂದ ಅವಳಿ ನಗರಕ್ಕೆ ನೀರು ಪೂರೈಕೆ ಆಗುತ್ತಿಲ್ಲ. ಮಳೆಗಾಲದಲ್ಲೂ ನೀರು ಪೂರೈಕೆ ಮಾಡದ ಶಾಸಕರು, ಸಚಿವರು ನಮಗೆ ಬೇಡ. ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ ಪಾಟೀಲ್, ನಗರಸಭೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.

  • ಗದಗ | ವಿಚಿತ್ರ ಲವ್‌ಜಿಹಾದ್ ಪ್ರಕರಣ – ಬಲವಂತವಾಗಿ ಹಿಂದೂ ಯುವಕನ ಮತಾಂತರ ಮಾಡಿಸಿರೋ ಆರೋಪ

    ಗದಗ | ವಿಚಿತ್ರ ಲವ್‌ಜಿಹಾದ್ ಪ್ರಕರಣ – ಬಲವಂತವಾಗಿ ಹಿಂದೂ ಯುವಕನ ಮತಾಂತರ ಮಾಡಿಸಿರೋ ಆರೋಪ

    ಗದಗ: ಪ್ರೀತಿಸಿ ಮದುವೆಯಾದ ವಿವಾಹಿತೆ ಹಿಂದೂ ಯುವಕನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿರೋ ಆರೋಪ ಗದಗ (Gadag) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಗದಗ ನಗರದ ಗಾಂಧಿನಗರ ನಿವಾಸಿ ವಿಶಾಲಕುಮಾರ್ ಗೋಕಾವಿ ಹಾಗೂ ವಿವಾಹಿತೆ ತಹಸೀನಾ 3 ವರ್ಷದಿಂದ ಪ್ರೀತಿ ಮಾಡುತ್ತಿದ್ದರು. ಅಲ್ಲದೇ ಈ ಜೋಡಿಯು 2024ರ ನವೆಂಬರ್ 24ರಲ್ಲಿ ಗದಗ ರಿಜಿಸ್ಟರ್ ಕಚೇರಿನಲ್ಲಿ ಮದುವೆಯಾಗಿದ್ದರು. ರಿಜಿಸ್ಟರ್ ಮ್ಯಾರೇಜ್ ಬಳಿಕ ಮುಸ್ಲಿಂ ಸಂಪ್ರದಾಯದಂತೆ ಮದುವೆ ಮಾಡಿಕೊಳ್ಳಲು ತಹಸೀನಾ ಒತ್ತಾಯಿಸಿದ್ದಳು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಆನ್‌ಲೈನ್‌ ಜೂಜಿಗೆ ದಾಸನಾಗಿದ್ದ ಹೆಡ್ ಕಾನ್‌ಸ್ಟೆಬಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ

    ವಿಶಾಲಕುಮಾರ್, ಎರಡೂ ಕುಟುಂಬವು ಒಟ್ಟಿಗೆ ಚೆನ್ನಾಗಿರುವ ಉದ್ದೇಶದಿಂದ ಮದುವೆಗೆ ಒಪ್ಪಿ ಮುಸ್ಲಿಂ ಸಂಪ್ರದಾಯದಂತೆಯೂ ಮದುವೆವಾಗಿದ್ದ. ಈ ವೇಳೆ ಯುವತಿ ಮನೆಯವರು ನೀನು ಹಿಂದೂ ಧರ್ಮ ಬಿಟ್ಟು, ಮುಸ್ಲಿಂ ಧರ್ಮ ಸ್ವೀಕರಿಸು ಎಂದು ವಿಶಾಲಕುಮಾರ್‌ಗೆ ಒತ್ತಾಯ ಮಾಡಿದ್ದರು. 2025 ಏಪ್ರಿಲ್ 25ರಂದು ಜಮಾತ್‌ನಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮತ್ತೆ ಮದುವೆ ಮಾಡಿದ್ದರು. ಅಲ್ಲದೇ ಮದುವೆಯಲ್ಲಿ ವಿಶಾಲಕುಮಾರ್‌ಗೆ ಅರಿವಿಲ್ಲದಂತೆ ಆತನ ಹೆಸರು ಬದಲಾವಣೆ ಮಾಡಿದ್ದರು ಎನ್ನಲಾಗಿದೆ. ಇದನ್ನೂ ಓದಿ: 50% ಒಟ್ಟಾರೆ ಮೀಸಲಾತಿ ಮಿತಿ ತೆಗೆದು, 75%ಗೆ ಹೆಚ್ಚಿಸಬೇಕು: ಸಿದ್ದರಾಮಯ್ಯ ಪ್ರಸ್ತಾಪ

    ಬಳಿಕ ತಹಸೀನ್ ಹಾಗೂ ಆಕೆ ತಾಯಿ ಬೇಗಂ ಬಾನು ಜಮಾತ್‌ಗೆ ಹೋಗುವಂತೆ ಬಲವಂತ ಮಾಡಿದ್ದರು. ಟೋಪಿ, ಜುಬ್ಬಾ ಧರಿಸು, ಹಣೆ ಮೇಲಿನ ಕುಂಕುಮ ಅಳಿಸು, ಕಿವಿ ಹಾಕಿರುವ ರಿಂಗ್ ತೆಗೆ, ಗಡ್ಡ ಬಿಡು, ನಿತ್ಯ ನಮಾಜ್ ಮಾಡುವಂತೆ ಒತ್ತಾಯ ಮಾಡುತ್ತಿದ್ದರು. ಈ ಮಧ್ಯ ವಿಶಾಲಕುಮಾರ್, ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಚಾರ ತಿಳಿದ ಯುವಕನ ಕುಟುಂಬದಿಂದ ಹಿಂದೂ ಸಂಪ್ರದಾಯದಂತೆ ಮದುವೆಗೆ ಸಿದ್ಧತೆ ನಡೆಸಿದ್ದರು. ಜೂನ್ 5ರಂದು ಮದುವೆ ನಿಗದಿಯಾಗಿತ್ತು. ಇದನ್ನೂ ಓದಿ: ಏರ್‌ಪೋರ್ಟ್‌ನಲ್ಲಿ ದರ್ಶನ್ ಫೋಟೋ ರಿವೀಲ್

    ಆರಂಭದಲ್ಲಿ ಮುದುವೆಗೆ ಒಪ್ಪಿಗೆ ನೀಡಿದ್ದ ತಹಸೀನಾ, ಬಳಿಕ ಕುಟುಂಬಸ್ಥರ ಹಾಗೂ ಮುಸ್ಲಿಂ ಮುಖಂಡರ ಒತ್ತಾಯಕ್ಕೆ ಮಣಿದು ನಿರಾಕರಣೆ ಮಾಡಿದ್ದಾಳೆ. ಈಗ ವರಸೆ ಬದಲಿಸಿದ ಯುವತಿ ಕುಟುಂಬಸ್ಥರು, ಮುಸ್ಲಿಂ ಧರ್ಮಕ್ಕೆ ಮತಾಂತರ ಆಗದಿದ್ದರೆ, ಮುಂದೆ ಪರಿಣಾಮ ಬೇರೆಯಾಗುತ್ತೆ. ಅಲ್ಲದೇ ರೇಪ್ ಕೇಸ್ ಹಾಕ್ತೇನೆ. ಕೊಲೆ ಮಾಡಿಸ್ತಿನಿ ಎಂದು ಧಮ್ಕಿ ಹಾಕುತ್ತಿದ್ದಾರೆ ಎಂದು ವಿಶಾಲಕುಮಾರ್ ಆರೋಪಿಸಿದ್ದಾನೆ.

    ಈ ಯುವಕನ ಹೋರಾಟಕ್ಕೆ ಶ್ರೀರಾಮ ಸೇನೆ ಸಾಥ್ ನೀಡಿದ್ದು, ಇದು ಲವ್ ಜಿಹಾದ್ (Love Jihad). ಹೀಗಾಗಿ ಯುವತಿ ಹಾಗೂ ಅವರ ಕುಟುಂಬದ ಮೇಲೆ ಕ್ರಮ ಜರುಗಿಸುವಂತೆ ಒತ್ತಾಸಿದ್ದಾರೆ.

  • ಮನೆಯಲ್ಲಿ ಪ್ರೀತಿಗೆ ನಿರಾಕರಣೆ; ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನ – ಅಪ್ರಾಪ್ತೆ ಸಾವು

    ಮನೆಯಲ್ಲಿ ಪ್ರೀತಿಗೆ ನಿರಾಕರಣೆ; ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನ – ಅಪ್ರಾಪ್ತೆ ಸಾವು

    ಗದಗ: ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳಿಬ್ಬರು ಕ್ರಿಮಿನಾಶಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅಪ್ರಾಪ್ತೆ ಸಾವನ್ನಪ್ಪಿರುವ ಘಟನೆ ಗದಗ (Gadag) ಜಿಲ್ಲೆ ಗಜೇಂದ್ರಗಡ ತಾಲೂಕಿನ ರಾಜೂರ (Rajura) ಗ್ರಾಮದಲ್ಲಿ ನಡೆದಿದೆ.

    17 ವರ್ಷದ ಅಪ್ರಾಪ್ತ ಬಾಲಕಿ ಮೃತಪಟ್ಟಿದ್ದು, ಯುವಕ ದೇವಪ್ಪ ಅಲಿಯಾಸ್ ಮುತ್ತು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಇದನ್ನೂ ಓದಿ: ಡಿಕೆ ಬ್ರದರ್ಸ್ ಹೆಸ್ರಲ್ಲಿ ವಂಚನೆ ಕೇಸ್; ಸಿನಿಮಾ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಿದ್ದ `ಬಂಗಾರಿ’ ಗೌಡ!

    ಅಪ್ರಾಪ್ತೆಯ ಮನೆಯಲ್ಲಿ ಇಬ್ಬರ ಪ್ರೀತಿಯನ್ನು ನಿರಾಕರಿಸಿದ್ದರು. ಇದ್ದರಿಂದ ಮನನೊಂದ ಪ್ರೇಮಿಗಳಿಬ್ಬರು ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅಸ್ವಸ್ಥಗೊಂಡ ಇಬ್ಬರನ್ನು ಗ್ರಾಮಸ್ಥರು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಇದನ್ನೂ ಓದಿ: ನನ್ನ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ: ನಿಶಾ ಯೋಗೇಶ್ವರ್

    ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅಪ್ರಾಪ್ತೆ ಮೃತಪಟ್ಟಿದ್ದಾಳೆ. ಯುವಕ ತೀವ್ರ ನಿಗಾ ಘಟಕದಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಘಟನೆಯ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎನ್ನುವದು ತಪ್ಪು ಕಲ್ಪನೆ: ಯತೀಂದ್ರ

    ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎನ್ನುವದು ತಪ್ಪು ಕಲ್ಪನೆ: ಯತೀಂದ್ರ

    ಗದಗ: ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎನ್ನುವದು ತಪ್ಪು ಕಲ್ಪನೆ. ರಾಯರೆಡ್ಡಿ ಅವರು ಸಲಹೆ ಕೊಡುತ್ತಾರೆ. ಆದ್ರೆ, ಜನರಿಗೆ ಗ್ಯಾರಂಟಿ ಯೋಜನೆ ಕೊಟ್ಟು, ಅಭಿವೃದ್ಧಿ ಕಾರ್ಯಗಳನ್ನು ನಾವು ಮಾಡುತ್ತಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹೇಳಿದ್ದಾರೆ.

    ಗದಗದಲ್ಲಿ (Gadag) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂಡರಗಿಯಲ್ಲಿ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಕನಕ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೆ, ಎಲ್ಲಾ ಕ್ಷೇತ್ರಗಳಿಗೆ ಸಿಎಂ ತಲಾ 50 ಕೋಟಿ ರೂ. ಹಾಗೂ ಬೆಂಗಳೂರಿಗೆ 2 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎನ್ನುವದು ತಪ್ಪು ಕಲ್ಪನೆ ಎಂದಿದ್ದಾರೆ. ಇದನ್ನೂ ಓದಿ: ಕೊಹ್ಲಿ, ರೋಹಿತ್‌, ಇಮ್ರಾನ್‌ ನಿರ್ಮಾಣ ಮಾಡದ ವಿಶಿಷ್ಟ ದಾಖಲೆ ನಿರ್ಮಿಸಿದ ಗಿಲ್‌

    5 ವರ್ಷಗಳ ಕಾಲ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂದು ಸ್ವತಃ ಸಿಎಂ ಹಾಗೂ ಪಕ್ಷದ ಎಲ್ಲರೂ ಹೇಳಿದ್ದಾರೆ. ಬಿಜೆಪಿ ಅವಧಿಯಲ್ಲಿ ಎಷ್ಟು ಅನುದಾನ ಸಿಗುತ್ತಿತ್ತು ಎನ್ನುವದನ್ನು ನೋಡಿ ಹೇಳಿದ್ದಾರೆ. ಬಿಜೆಪಿಗೆ ಹೋಲಿಸಿದರೆ ಅಭಿವೃದ್ಧಿ ಕೆಲಸ ಚೆನ್ನಾಗಿಯೇ ಆಗುತ್ತಿವೆ. ಈಗಾಗಲೇ 25 ಕೋಟಿ ರೂ. ಅನುದಾನವನ್ನು ಎಲ್ಲಾ ಕ್ಷೇತ್ರಕ್ಕೂ ಕೊಟ್ಟಿದಾರೆ. ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಯಾವ ಕಾರ್ಯಗಳೂ ನಿಂತಿಲ್ಲ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನಾನು ಬಾಸ್ಕೆಟ್‌ಬಾಲ್ ಪ್ಲೇಯರ್, ಸ್ಪೋರ್ಟ್ಸ್‌ಗೆ ಹೈಟ್ ಮ್ಯಾಟರ್ ಆಗಲ್ಲ: ರಮ್ಯಾ

    `ಹೈ’ ಸಿಎಂ ಬದಲಾವಣೆಗೆ ಸೂಚನೆ ಕೊಟ್ಟಿಲ್ಲ
    ಸಿಎಂ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಸಿಎಂ ಬದಲಾವಣೆ ವರಿಷ್ಠರಿಗೆ ಬಿಟ್ಟಿದ್ದು. ಹೈಕಮಾಂಡ್ ಸಿಎಂ ಬದಲಾವಣೆಗೆ ಸೂಚನೆ ಕೊಟ್ಟಿಲ್ಲ. ಸಣ್ಣ-ಪುಟ್ಟ ಭಿನ್ನಾಭಿಪ್ರಾಯದಿಂದ ಕೆಲ ಶಾಸಕರು ಮಾತಾಡಿರಬಹುದು. ಅದು ಅವರ ವೈಯಕ್ತಿಕ ವಿಚಾರ. ಅದರ ಅರ್ಥ ಸರ್ಕಾರ ಅಸ್ಥಿರವಾಗಿದೆ ಅಂತಲ್ಲ. ಸುರ್ಜೇವಾಲ ಅವರೇ ಸಿಎಂ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ. ಹಾಗಾಗಿ 5 ವರ್ಷಗಳ ಕಾಲವೂ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ದುರಹಂಕಾರಿ ಅಂದ್ರೂ ಐ ಡೋಂಟ್ ಕೇರ್, ನಾನು ಸ್ವಾಭಿಮಾನಿ: ಸಿದ್ದರಾಮಯ್ಯ

    ಎಐಸಿಸಿ, ಒಬಿಸಿ ಘಟಕಕ್ಕೆ ಸಿದ್ದರಾಮಯ್ಯರನ್ನು (Siddaramaiah) ಸದಸ್ಯರನ್ನಾಗಿ ಮಾಡಿದ್ದಾರೆ. ಅಧ್ಯಕ್ಷರನ್ನಾಗಿ ಮಾಡಿಲ್ಲ. ತಪ್ಪು ಮಾಹಿತಿ ರವಾನೆಯಾಗಿದೆ. ಹಿಂದುಳಿದ ವರ್ಗಗಳ ಧ್ವನಿಯಾಗಿ ಕೆಲಸ ಮಾಡುವವರನ್ನು ಸದಸ್ಯರನ್ನಾಗಿ ಮಾಡಿದ್ದಾರೆ. ನಮ್ಮ ತಂದೆಯವರು ಹಿಂದುಳಿದ ವರ್ಗಗಳ ಹಾಗೂ ಸಾಮಾಜಿಕ ನ್ಯಾಯದ ಪರ ಕೆಲಸ ಮಾಡಿದ್ದಾರೆ. ಹೀಗಾಗಿ ಅವರನ್ನು ಸದಸ್ಯರನ್ನಾಗಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಡಿಕೆಶಿ ಪಕ್ಷಕ್ಕಾಗಿ ಶ್ರಮಪಟ್ಟಿದ್ದಾರೆ
    ಇನ್ನು ಡಿ.ಕೆ.ಶಿವಕುಮಾರ್ ಪರ ರಂಭಾಪುರಿ ಸ್ವಾಮೀಜಿ ಹೇಳಿಕೆ ಕುರಿತು ಪ್ರತಿಕ್ರಿತಿಸಿದ ಅವರು, ಸ್ವಾಮೀಜಿ ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬರಲು ಡಿ.ಕೆ.ಶಿವಕುಮಾರ್ (DK Shivakumar) ಅವರ ಕೊಡುಗೆ ಇದ್ದೇ ಇದೆ. ಅಧ್ಯಕ್ಷರಾಗಿ ಬಹಳಷ್ಟು ಶ್ರಮ ಪಟ್ಟಿದ್ದಾರೆ. ಪಕ್ಷದ ಬಲವರ್ಧನೆ ಮಾಡಿದ್ದಾರೆ ಎಂದಿದ್ದಾರೆ.

  • ಬಾಗಲಕೋಟೆ, ಗದಗ ಜಿಲ್ಲೆಯ ವಿವಿಧೆಡೆ ಬೆಳ್ಳಂಬೆಳಿಗ್ಗೆ ʻಲೋಕಾʼ ರೇಡ್

    ಬಾಗಲಕೋಟೆ, ಗದಗ ಜಿಲ್ಲೆಯ ವಿವಿಧೆಡೆ ಬೆಳ್ಳಂಬೆಳಿಗ್ಗೆ ʻಲೋಕಾʼ ರೇಡ್

    ಬಾಗಲಕೋಟೆ/ಗದಗ: ಇಂದು ಬೆಳಿಗ್ಗೆ ಬಾಗಲಕೋಟೆ (Bagalkote) ಹಾಗೂ ಗದಗ (Gadag) ಜಿಲ್ಲೆಯ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು (Lokayuktha Officers) ದಾಳಿ ನಡೆಸಿದ್ದಾರೆ.

    ಧಾರವಾಡದ ಕರ್ನಾಟಕ ನೀರಾವರಿ ನಿಗಮದ ಮಲಪ್ರಭಾ ಯೋಜನೆಯ ಮುಖ್ಯ ಇಂಜಿನಿಯರ್ ಆಗಿರುವ ಅಶೋಕ್ ವಸಂದ್‌ ಅವರ ನಿವಾಸದ ಮೇಲೆ ದಾಳಿ ನಡೆದಿದೆ. ಜಮಖಂಡಿ ಹಾಗೂ ಖಜ್ಜಿಡೋಣಿ ಗ್ರಾಮದಲ್ಲಿರುವ ಅಶೋಕ್ ಅವರ ಎರಡು ನಿವಾಸದ ಮೇಲೆಯೂ ಲೋಕಾ ದಾಳಿ ನಡೆಸಿ, ಪ್ರಮುಖ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ: ಪಬ್‌ನಲ್ಲಿ ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ – ಟೆಕ್ಕಿ ಅರೆಸ್ಟ್‌

    ಗದಗ ನಗರ ಠಾಣಾ ಸಿಪಿಐ ಆಗಿರುವ ಡಿ.ಬಿ.ಪಾಟೀಲ್ ಅವರ ಮನೆಯ ಗದಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಶಾಕ್ ನೀಡಿದ್ದಾರೆ. ಆದಾಯ ಮೀರಿ ಆಸ್ತಿಗಳಿಕೆ ಆರೋಪದ ಹಿನ್ನೆಲೆ ದಾಳಿ ಮಾಡಲಾಗಿದೆ. ಡಿ.ಬಿ ಪಾಟೀಲ್‌ಗೆ ಸಂಬಂಧಿಸಿದ ಏಳು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ, ಪರಿಶೀಲನೆ ನಡೆಸಿದ್ದಾರೆ. ಶಿವಾನಂದ ನಗರದ ಬಾಡಿಗೆ ಮನೆ, ಶಹರ ಪೊಲೀಸ್ ಠಾಣೆ ಕಚೇರಿ, ಬಾಗಲಕೋಟೆ, ಜಮಖಂಡಿ, ಕೆರೂರು ಮನೆಗಳ ಮೇಲೂ ದಾಳಿ ಮಾಡಲಾಗಿದೆ.

    ಇಂಚಿಂಚು ಪರಿಶೀಲನೆ ನಡೆಸಿದ ಅಧಿಕಾರಿಗಳು, ಶೌಚಾಲಯದೊಳಗೆ ಕುಳಿತಿದ್ದ ಸಿಪಿಐ ಮೊಬೈಲ್‌ನಲ್ಲಿ ಯಾರ ಜೊತೆಯಾದರೂ ಕದ್ದು ಮಾತಾಡುತ್ತಿದ್ದಾನಾ ಎಂದು ಬಾಗಿಲಿಗೆ ಕಿವಿಗೊಟ್ಟು ಕೇಳಿಸಿಕೊಂಡಿದ್ದಾರೆ. ಬಾಗಿಲು ತಟ್ಟಿ ಹೊರಗೆ ಬರುವಂತೆ ಸೂಚಿಸಿದ್ದ ಅಧಿಕಾರಿಗಳ ನಡೆಯನ್ನು ಕಂಡು ಡಿ.ಬಿ ಪಾಟೀಲ್ ಬೆಚ್ಚಿ ಬಿದ್ದಿದ್ದಾರೆ.

    ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ, ಪಿ.ಎಸ್ ಪಾಟೀಲ, ಸಿಪಿಐ ಪರಶುರಾಮ್ ಕವಟಗಿ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ದಾಳಿ ವೇಳೆ ಅನೇಕ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಹಣ, ಬೆಳ್ಳಿ, ಚಿನ್ನಾಭರಣಗಳ ದಾಖಲೆಗಳ ಪರಿಶೀಲನೆ ಮುಂದುವರೆದಿದೆ.ಇದನ್ನೂ ಓದಿ: ದೇಶ ತೊರೆಯಿರಿ ಇಲ್ವೋ ಇಂದು ಸಾಯಲು ಸಿದ್ಧವಾಗಿರಿ – ಕರೆ ಮಾಡಿ ಇರಾನ್‌ ಕಮಾಂಡರ್‌ಗಳಿಗೆ ಮೊಸಾದ್‌ ಎಚ್ಚರಿಕೆ

  • Gadag | ಶಾಲಾ ಮೇಲ್ಛಾವಣಿ ಪದರ ಕುಸಿತ – ಓರ್ವ ಶಿಕ್ಷಕ, ಐವರು ವಿದ್ಯಾರ್ಥಿಗಳಿಗೆ ಗಾಯ

    Gadag | ಶಾಲಾ ಮೇಲ್ಛಾವಣಿ ಪದರ ಕುಸಿತ – ಓರ್ವ ಶಿಕ್ಷಕ, ಐವರು ವಿದ್ಯಾರ್ಥಿಗಳಿಗೆ ಗಾಯ

    ಗದಗ: ಶಾಲೆಯ ಮೇಲ್ಛಾವಣಿ (Roof) ಪದರ ಕುಸಿದು ಐವರು ವಿದ್ಯಾರ್ಥಿಗಳು ಹಾಗೂ ಓರ್ವ ಶಿಕ್ಷಕರು ಗಾಯಗೊಂಡ ಘಟನೆ ಗದಗ (Gadag) ಜಿಲ್ಲೆ ಗಜೇಂದ್ರಗಡ ತಾಲೂಕಿನ ಚಿಲಝೆರಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ದುರಂತ ನಡೆದಿದೆ. 6ನೇ ತರಗತಿ ಕೊಠಡಿ ಮೇಲ್ಛಾವಣಿ ಕಾಂಕ್ರೀಟ್ ಪದರ ಏಕಾಏಕಿ ಕುಸಿದು ಬಿದ್ದಿದೆ. ಘಟನೆಯಲ್ಲಿ ಎಮ್.ಡಿ ಒಂಟಿ ಎಂಬ ಶಿಕ್ಷಕರ ತಲೆಗೆ ಗಂಭೀರ ಗಾಯಗಳಾಗಿವೆ. ಮಕ್ಕಳ ತಲೆ, ಕೈ, ಕಾಲು, ಮುಖಕ್ಕೆ ಗಾಯಗಳಾಗಿವೆ. ಗಾಯಾಳು ಮಕ್ಕಳು ಹಾಗೂ ಶಿಕ್ಷಕರನ್ನು ಕೂಡಲೇ ಗಜೇಂದ್ರಗಡ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಕಾಂಗ್ರೆಸ್‌ಗೆ ಕಮಿಷನ್ ಬಿಸಿ, ಹೈಕಮಾಂಡ್‌ಗೆ ತಲೆನೋವು – ಸಿಎಂ ಮಧ್ಯಪ್ರವೇಶ?

    ಶಿಥಿಲಗೊಂಡ ಹಳೆಯ ಕೊಠಡಿಯಲ್ಲಿ ಮಕ್ಕಳು ಶಿಕ್ಷಣ ಪಡೆಯುವ ಅನಿವಾರ್ಯತೆ ಎದುರಾಗಿತ್ತು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು, ಜನ ಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಆದರೂ ಪ್ರಯೋಜನವಾಗಿಲ್ಲ ಎಂದು ಶಿಕ್ಷಣ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಘಟನೆ ಸಂಬಂಧ ಗದಗ ಜಿಲ್ಲೆಯ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಲೂಟಿಕೋರರ ಸರ್ಕಾರ, ಮಾನ ಮರ್ಯಾದೆ ಇದ್ದರೆ ಸಿಎಂ, ಡಿಕೆಶಿ ರಾಜೀನಾಮೆ ಕೊಡಲಿ: ಛಲವಾದಿ ನಾರಾಯಣಸ್ವಾಮಿ

  • ಕಪ್ಪತಗುಡ್ಡದ 322 ಚದರ ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶ – ಕೇಂದ್ರದಿಂದ ಅಧಿಸೂಚನೆ

    ಕಪ್ಪತಗುಡ್ಡದ 322 ಚದರ ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶ – ಕೇಂದ್ರದಿಂದ ಅಧಿಸೂಚನೆ

    ನವದೆಹಲಿ/ಗದಗ: ಜಿಲ್ಲೆಯ ಕಪ್ಪತಗುಡ್ಡ (Kappatgudda) ವನ್ಯ ಜೀವಿಧಾಮದ 322 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ಅಂತಿಮ ಅಧಿಸೂಚನೆ ಹೊರಡಿಸಿದೆ. ಈ ಹಿಂದೆ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗಿತ್ತು. ಅದಾದ ಬಳಿಕ ಅಂತಿಮ ಅಧಿಸೂಚನೆ ಹೊರಡಿಸಿದೆ.

    ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಂದಾಯ ಗ್ರಾಮಗಳ 298.89 ಚದರ ಕಿ.ಮೀ. ಹಾಗೂ ಅಧಿಸೂಚಿತ ಅರಣ್ಯ ಪ್ರದೇಶಗಳ 23.80 ಕಿ.ಮೀ ಸೇರಿದೆ. ಈ ಪ್ರದೇಶದಲ್ಲಿ 62 ಗ್ರಾಮಗಳಿವೆ. ಪರಿಸರ ಸೂಕ್ಷ್ಮ ಪ್ರದೇಶವನ್ನು ಕನಿಷ್ಠ ಒಂದು ಕಿ.ಮೀನಿಂದ ಗರಿಷ್ಠ 4.30 ಕಿ.ಮೀವರೆಗೆ ಗುರುತಿಸಲಾಗಿದೆ.ಇದನ್ನೂ ಓದಿ: ಡ್ರೋನ್ ಕಣ್ಣಲ್ಲಿ ಸೆರೆಯಾದ ಬೈಂದೂರಿನ ಸೌಪರ್ಣಿಕಾ ನದಿ

    ಉತ್ತರ ದಿಕ್ಕಿನಲ್ಲಿ 1 ಕಿ.ಮೀನಿಂದ 3.25 ಕಿ.ಮೀವರೆಗೆ, ಪಶ್ಚಿಮ ದಿಕ್ಕಿನಲ್ಲಿ 4.30 ಕಿ.ಮೀವರೆಗೆ, ವಾಯವ್ಯ ದಿಕ್ಕಿನಲ್ಲಿ 1.96 ಕಿ.ಮೀವರೆಗೆ ಪರಿಸರ ಸೂಕ್ಷ್ಮ ಪ್ರದೇಶವೆಂದು ನಿಗದಿಪಡಿಸಲಾಗಿದೆ. ಉಳಿದ ದಿಕ್ಕುಗಳಲ್ಲಿ 1 ಕಿ.ಮೀ ಮಾತ್ರ ಇದೆ. ವನ್ಯಜೀವಿ ಧಾಮದ 10 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಅನುಮತಿ ಕೋರಿ ಒಟ್ಟು 28 ಪ್ರಸ್ತಾವಗಳು ಕರ್ನಾಟಕ ಸರ್ಕಾರಕ್ಕೆ ಸಲ್ಲಿಕೆಯಾಗಿವೆ.

    ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಯಾವುದಕ್ಕೆ ನಿರ್ಬಂಧ:
    ಈಗಿರುವ ಹಾಗೂ ಹೊಸ ವಾಣಿಜ್ಯ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಕಲ್ಲುಪುಡಿ ಮಾಡುವ ಘಟಕಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕೆಗಳ ಸ್ಥಾಪನೆಗೆ ನಿರ್ಬಂಧ ಇರಲಿದೆ. ಯಾವುದೇ ಹೊಸ ಉಷ್ಣ ವಿದ್ಯುತ್ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತಿಲ್ಲ. ಯಾವುದೇ ಅಪಾಯಕಾರಿ ವಸ್ತು ಬಳಕೆ, ಉತ್ಪಾದನೆ ಅಥವಾ ಸಂಸ್ಕರಣೆಗೆ ನಿರ್ಬಂಧ ಇರಲಿದೆ.

    ನೈಸರ್ಗಿಕ ಜಲಮೂಲಗಳು ಅಥವಾ ಸಂಸ್ಕರಿಸದ ತ್ಯಾಜ್ಯಗಳ ವಿಸರ್ಜನೆ ನಿಷೇಧ, ಹೊಸದಾಗಿ ಘನತ್ಯಾಜ್ಯ ವಿಲೇವಾರಿ ಘಟಕ ಮತ್ತು ಜೈವಿಕ, ವೈದ್ಯಕೀಯ ತ್ಯಾಜ್ಯ ಸುಡುವ ಘಟಕಕ್ಕೆ ಅವಕಾಶ ಇರುವುದಿಲ್ಲ, ಈಗಿರುವ ಹಾಗೂ ಹೊಸದಾಗಿ ಇಟ್ಟಿಗೆ ಗೂಡುಗಳ ಘಟಕ ಸ್ಥಾಪನೆಗೆ ನಿಷೇಧ ಇರಲಿದೆ. ಮರದ ಮಿಲ್‌ಗಳಿಗೆ ನಿರ್ಬಂಧ, ದೊಡ್ಡ ಪ್ರಮಾಣದಲ್ಲಿ ಜಾನುವಾರು ಹಾಗೂ ಕೋಳಿಗಳ ಫಾರ್ಮ್ಗಳಿಗೆ ಅವಕಾಶ ಇಲ್ಲ. ಮರ ಆಧಾರಿತ ಕೈಗಾರಿಕೆಗಳನ್ನು ಆರಂಭಿಸುವಂತಿಲ್ಲ. ಪರಿಸರ ಸೂಕ್ಷ್ಮ ಪ್ರದೇಶದ ಒಂದು ಕಿ.ಮೀ ವ್ಯಾಪ್ತಿಯೊಳಗೆ ಹೋಟೆಲ್‌ಗಳು ಹಾಗೂ ರೆಸಾರ್ಟ್ಗಳನ್ನು ತೆರೆಯುವಂತಿಲ್ಲ ಎಂದು ತಿಳಿಸಿದೆ.ಇದನ್ನೂ ಓದಿ: ವಾರದಲ್ಲಿ 2 ದಿನ ರಜೆ – ಕಾರ್ಮಿಕರ ಕೆಲಸದ ಅವಧಿ 10 ಗಂಟೆಗೆ ಹೆಚ್ಚಳ?