Tag: gadag

  • ಕಳ್ಳ ಎಂದು ಅಟ್ಟಾಡಿಸಿದ ಗ್ರಾಮಸ್ಥರು – ಭಯದಿಂದ ತೆಂಗಿನ ಮರವೇರಿ ಕುಳಿತ ಯುವಕ

    ಕಳ್ಳ ಎಂದು ಅಟ್ಟಾಡಿಸಿದ ಗ್ರಾಮಸ್ಥರು – ಭಯದಿಂದ ತೆಂಗಿನ ಮರವೇರಿ ಕುಳಿತ ಯುವಕ

    ಗದಗ: ಇಲ್ಲಿನ ವಿವೇಕಾನಂದ ನಗರ ಬಡಾವಣೆಯಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಹೈಡ್ರಾಮಾ ನಡೆದಿದೆ. ಕಳ್ಳತನದ ಆರೋಪದ ಮೇಲೆ ಗ್ರಾಮಸ್ಥರು ಬೆನ್ನಟ್ಟಿದಾಗ, ಯುವಕ ಭಯದಿಂದ ತೆಂಗಿನ ಮರವೇರಿ ಕುಳಿತ ಘಟನೆ ನಡೆದಿದೆ.

    ಬಸವರಾಜ್ ಸೊಲ್ಲಾಪುರ ಎಂಬ ಯುವಕ ಸುಮಾರು 40 ಅಡಿ ಎತ್ತರದ ತೆಂಗಿನ ಮರವನ್ನು ಏರಿ ಕುಳಿತಿದ್ದಾನೆ. ಮೂಲತಃ ಬೆಳಗಾವಿ ಜಿಲ್ಲೆಯ ಕಬ್ಬೂರು ಗ್ರಾಮದ ನಿವಾಸಿಯಾಗಿರುವ ಬಸವರಾಜ್, ನಸುಕಿನ ಜಾವ ರೈಲಿನಲ್ಲಿ ಬಂದು ಗದಗದಲ್ಲಿ ಇಳಿದಿದ್ದ. ನಂತರ ವಿವೇಕಾನಂದ ಬಡಾವಣೆಯ ಮನೆ ಬಾಗಿಲು ಬಡಿದಿದ್ದ ಎನ್ನಲಾಗಿದೆ. ಇದನ್ನೂ ಓದಿ: ದಾವಣಗೆರೆ | ಇಬ್ಬರು ಬೈಕ್ ಕಳ್ಳರ ಬಂಧನ – 16.52 ಲಕ್ಷ ಮೌಲ್ಯದ 30 ಬೈಕ್ ವಶಕ್ಕೆ

    ಇದರಿಂದ ಭಯಗೊಂಡ ಸ್ಥಳೀಯರು ಆತನನ್ನು ಕಳ್ಳ ಎಂದು ಶಂಕಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ವಾಹನದ ಸೈರನ್ ಶಬ್ದ ಕೇಳುತ್ತಿದ್ದಂತೆ ಭಯಗೊಂಡ ಬಸವರಾಜ್, ತಪ್ಪಿಸಿಕೊಳ್ಳಲು ತೆಂಗಿನ ಮರ ಏರಿದ್ದ.

    ಸ್ಥಳೀಯರು ಕೆಳಗೆ ಇಳಿಯುವಂತೆ ಸಾಕಷ್ಟು ಮನವಿ ಮಾಡಿಕೊಂಡರೂ ಇಳಿಯದೇ ಸುಮಾರು ಎರಡರಿಂದ ಮೂರು ಗಂಟೆಗೂ ಹೆಚ್ಚು ಕಾಲ ಮರದಲ್ಲೇ ಕುಳಿತಿದ್ದ. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ಮತ್ತು ಸ್ಥಳೀಯರ ಸಹಾಯದಿಂದ ಸುರಕ್ಷಿತವಾಗಿ ಆತನನ್ನು ಕೆಳಗಿಳಿಸಿದ್ದಾರೆ. ನಂತರ ಯುವಕನನ್ನು ಬೆಟಗೇರಿ ಬಡಾವಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

  • ಹಾವೇರಿ, ಗದಗಕ್ಕೆ ಕೇಂದ್ರ ಸರ್ಕಾರ ಬಂಪರ್‌ ಕೊಡುಗೆ – ಧನ್ ಧಾನ್ಯ ಕೃಷಿ ಯೋಜನೆಗೆ ಜಿಲ್ಲೆಗಳ ಸೇರ್ಪಡೆ

    ಹಾವೇರಿ, ಗದಗಕ್ಕೆ ಕೇಂದ್ರ ಸರ್ಕಾರ ಬಂಪರ್‌ ಕೊಡುಗೆ – ಧನ್ ಧಾನ್ಯ ಕೃಷಿ ಯೋಜನೆಗೆ ಜಿಲ್ಲೆಗಳ ಸೇರ್ಪಡೆ

    ಹಾವೇರಿ/ಗದಗ: ದೇಶದ 100 ಜಿಲ್ಲೆಗಳಲ್ಲಿ ಜಾರಿಯಾಗುತ್ತಿರುವ ಪ್ರಧಾನ ಮಂತ್ರಿ ಧನ್‌ ಧಾನ್ಯ ಕೃಷಿ ಯೋಜನೆಗೆ ಹಾವೇರಿ ಮತ್ತು ಗದಗ ಜಿಲ್ಲೆಗಳು ಸೇರ್ಪಡೆಗೊಂಡಿವೆ. ಉಭಯ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ಬಂಪರ್‌ ಕೊಡುಗೆ ನೀಡಿದೆ.

    ಕೃಷಿ ಉತ್ಪಾದನೆ ಹೆಚ್ಚಳ, ನೀರಾವರಿ ಸೌಲಭ್ಯ, ಅಲ್ಪಾವಧಿ ಹಾಗೂ ದೀರ್ಘಾವಧಿ ಹಣಕಾಸು ನೆರವು ನೀಡುವ ಯೋಜನೆ ಇದಾಗಿದೆ. ಪಂಚಾಯತ್‌ ಮತ್ತು ಬ್ಲಾಕ್‌ ಕೇಂದ್ರಗಳಲ್ಲಿ ದಾಸ್ತಾನು ಘಟಕಗಳ ನಿರ್ಮಾಣವಾಗಲಿದೆ.

    ಇಂದು ಪ್ರಧಾನಿ ನರೇಂದ್ರ ಮೋದಿ ವರ್ಚ್ಯುವಲ್ ಮೂಲಕ ಯೋಜನೆಗೆ ಚಾಲನೆ ನೀಡಲಿದ್ದಾರೆ. ಕೃಷಿ ವಿದ್ಯಾಲಯ ಕೇಂದ್ರ, ಹನುಮನಹಟ್ಟಿಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಹಾವೇರಿ ಜಿಲ್ಲೆಯ ಧನ ದಾನ್ಯ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

  • Gadag | ಈರುಳ್ಳಿಗೆ ಬೆಂಬಲ ಬೆಲೆ ಘೋಷಣೆಗೆ ಆಗ್ರಹ – ರೈತರ ಪ್ರತಿಭಟನೆ

    Gadag | ಈರುಳ್ಳಿಗೆ ಬೆಂಬಲ ಬೆಲೆ ಘೋಷಣೆಗೆ ಆಗ್ರಹ – ರೈತರ ಪ್ರತಿಭಟನೆ

    ಗದಗ: ಈರುಳ್ಳಿಗೆ (Onion) ಬೆಂಬಲ ಬೆಲೆ ಘೋಷಣೆ ಮಾಡಬೇಕು. ಅಲ್ಲದೇ ಕೂಡಲೇ ಈರುಳ್ಳಿ ಖರೀದಿ ಕೇಂದ್ರವನ್ನು ತೆರೆಯಬೇಕು ಎಂದು ಆಗ್ರಹಿಸಿ ಗದಗನಲ್ಲಿ (Gadag) ರೈತರು ಪ್ರತಿಭಟನೆ ಮಾಡಿದರು.

    ನಗರದ ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ರ‍್ಯಾಲಿ ನಡೆಸಿದರು. ಅತಿವೃಷ್ಟಿಯಿಂದ ಸಾಕಷ್ಟು ಬೆಳೆಗಳು ಹಾಳಾದ್ರೂ ಪರಿಹಾರ ನೀಡದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ಹೊರಹಾಕಿದ್ದಾರೆ. ಈರುಳ್ಳಿ ಬೆಳೆ ಅತಿವೃಷ್ಟಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ರೈತನದ್ದಾಗಿದೆ. ಈ ಬಾರಿ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ಈರುಳ್ಳಿ ಬೆಳೆದ ರೈತರು, ಬೆಲೆ ಕುಸಿದ ಪರಿಣಾಮವಾಗಿ ಕಣ್ಣೀರು ಸುರಿಸುವಂತಾಗಿದೆ. ಈರುಳ್ಳಿ ಬೆಳೆಗೆ ಬೆಂಬಲ ಘೋಷಣೆ ಮಾಡಿ, ಖರೀದಿ ಕೇಂದ್ರ ಸ್ಥಾಪಿಸಿ ಅಂತ ಆಗ್ರಹಿಸಿದರು. ಇದನ್ನೂ ಓದಿ: ಕೈಗೆ ಬಂದ ಈರುಳ್ಳಿ ಫಸಲನ್ನು ಮಣ್ಣಲ್ಲೇ ಮುಚ್ಚಿದ ರೈತ

    ರೈತರು ಬೆಳೆದ ಈರುಳ್ಳಿ ಬೆಲೆ ಕುಸಿದಿದ್ದರಿಂದ ಈರುಳ್ಳಿಯನ್ನು ಮರಳಿ ಮಣ್ಣಲ್ಲೇ ಮುಚ್ಚುವಂತ ಸ್ಥಿತಿ ನಿರ್ಮಾಣವಾಗ್ತಿದೆ. ಸದ್ಯ ಈರುಳ್ಳಿ ಬೆಲೆ ಕುಸಿದಿದ್ದರಿಂದ ಕಟಾವು ಮಾಡಿದ ಖರ್ಚು ಸಹ ನಮಗೆ ಸಿಗ್ತಿಲ್ಲ. ಕಟಾವು ಮಾಡಿದ ಕೂಲಿ ಕಾರ್ಮಿಕರ ಕೂಲಿ ದುಡ್ಡು ನೀಡಲು ನಾವು ಶಕ್ತರಿಲ್ಲ. ಅತಿವೃಷ್ಠಿಗೆ ಬೆಳೆ ಹಾಳಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

    ಈ ವೇಳೆ ನಗರದ ಮುಳಗುಂದ ನಾಕಾದಲ್ಲಿ ಮಾನವ ಸರಪಳಿ ನಿರ್ಮಿಸಿ, ಕೆಲಕಾಲ ರಸ್ತೆ ತಡೆದರು. ನಂತರ ಈರುಳ್ಳಿಗೆ ಬೆಂಬಲ ಬೆಲೆ ಘೋಷಣೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

  • ಕ್ರಿಮಿನಾಶಕ ಸಿಂಪಡಿಸಿದ್ದ ಆಹಾರ ಸೇವನೆ ಶಂಕೆ – 60ಕ್ಕೂ ಹೆಚ್ಚು ಕುರಿಗಳು ಸಾವು

    ಕ್ರಿಮಿನಾಶಕ ಸಿಂಪಡಿಸಿದ್ದ ಆಹಾರ ಸೇವನೆ ಶಂಕೆ – 60ಕ್ಕೂ ಹೆಚ್ಚು ಕುರಿಗಳು ಸಾವು

    ಗದಗ: ಕ್ರಿಮಿನಾಶಕ ಔಷಧ ಸಿಂಪಡಿಸಿದ ಆಹಾರ ಸೇವಿಸಿ ಸುಮಾರು 60ಕ್ಕೂ ಹೆಚ್ಚು ಕುರಿಗಳು (Sheeps) ಸಾವನ್ನಪ್ಪಿದ ಘಟನೆ ಶಿರಹಟ್ಟಿ (Shirahatti) ತಾಲೂಕಿನ ಹೊಳೆಇಟಗಿ ಗ್ರಾಮದಲ್ಲಿ ನಡೆದಿದೆ.

    ಚಿಕ್ಕೋಡಿ ತಾಲೂಕಿನ ಶಿರಗಾಂವ್ ಗ್ರಾಮದ ಸಂಚಾರಿ ಕುರಿಗಾಹಿಗಳ ಕುರಿಗಳು ಸಾವನ್ನಪ್ಪಿವೆ. ಸಾವನ್ನಪ್ಪಿದ ಕುರಿಗಳು ಪದ್ಮಣ್ಣ ಪೂಜಾರಿ, ಮಣಿ ಪೂಜಾರಿ ಹಾಗೂ ಯಲ್ಲವ್ವ ಪೂಜಾರಿ ಎಂಬವರಿಗೆ ಸೇರಿದ್ದವು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಹಾಸನ | ಕೃಷಿ ಹೊಂಡಕ್ಕೆ ಬಿದ್ದ ಆಟಿಕೆ ರೈಲು ತರಲು ಇಳಿದ ಇಬ್ಬರು ಬಾಲಕರು ದುರ್ಮರಣ

    ಜಮೀನು ಅಥವಾ ಬದುವಿಗೆ ಕ್ರಿಮಿನಾಶಕ ಔಷಧ ಸಿಂಪಡಿಸಿರಬಹುದು. ಔಷಧ ಸಿಂಪಡಿಸಿದ ಹುಲ್ಲು ಸೇವಿಸಿ ಕುರಿಗಳು ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕುರಿಗಳನ್ನು ಕಳೆದುಕೊಂಡ ಕುರಿಗಾಹಿಗಳು ಕಂಗಾಲಾಗಿದ್ದು, ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.

    ಘಟನಾ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ, ಪಶುವೈದ್ಯರು ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಾಗಲಕೋಟೆ ಪಶು ವೈದ್ಯಕೀಯ ವಿಜ್ಞಾನ ಸಂಸ್ಥೆ ಮರಣೋತ್ತರ ಪರೀಕ್ಷೆ ನಂತರ ಸೂಕ್ತ ಪರಿಹಾರ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

  • ʻಐ ಲವ್ ಮಹಮ್ಮದ್ʼ ಮೊದಲು ಉರ್ದುನಲ್ಲಿ ಹಾಕ್ತಿದ್ರು, ಓದೋಕೆ ಬರದೇ ಗಲಾಟೆ ಆಗ್ತಿರಲಿಲ್ಲ: ಯತೀಂದ್ರ ಸಿದ್ದರಾಮಯ್ಯ

    ʻಐ ಲವ್ ಮಹಮ್ಮದ್ʼ ಮೊದಲು ಉರ್ದುನಲ್ಲಿ ಹಾಕ್ತಿದ್ರು, ಓದೋಕೆ ಬರದೇ ಗಲಾಟೆ ಆಗ್ತಿರಲಿಲ್ಲ: ಯತೀಂದ್ರ ಸಿದ್ದರಾಮಯ್ಯ

    • 5 ವರ್ಷ ನಮ್ಮಪ್ಪ ಸಿಎಂ 

    ಗದಗ: ʻಐ ಲವ್ ಮಹಮ್ಮದ್ʼ ಬ್ಯಾನರ್ (I Love Muhammad Banner) ಹೊಸದೇನಲ್ಲ. ಮೊದಲು ಉರ್ದುನಲ್ಲಿ ಹಾಕುತ್ತಿದ್ರೂ, ಉರ್ದು ಓದಲು ಆಗದೇ ಗಲಾಟೆ ಆಗುತ್ತಿರಲಿಲ್ಲ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹೇಳಿದ್ದಾರೆ.

    ಗದಗದಲ್ಲಿ (Gadag) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ರಾಜ್ಯದಲ್ಲಿ ನಡೆಯುತ್ತಿರುವ ʻಐ ಲವ್ ಮಹಮ್ಮದ್ʼಬ್ಯಾನರ್ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಇವೆಲ್ಲವೂ ಅನಗತ್ಯ ವಿವಾದಗಳು. ಈಗ ಇಂಗ್ಲಿಷ್‌ನಲ್ಲಿ ಹಾಕಿದ್ದಕ್ಕೆ ವಿವಾದ ಮಾಡ್ತಿದ್ದಾರೆ. ಪ್ರತಿಯೊಂದು ಧರ್ಮದವರು ತಮ್ಮ ಮಹನೀಯರು, ದೇವರ ಮೆಚ್ಚುಗೆಯ ಬ್ಯಾನರ್ ಹಾಕುವುದರಲ್ಲಿ ತಪ್ಪಿಲ್ಲ ಎಂದರು. ಇದನ್ನೂ ಓದಿ: ದಾವಣಗೆರೆ | `ಐ ಲವ್ ಮಹಮ್ಮದ್’ ಬ್ಯಾನರ್ ಗಲಾಟೆಯಾಗಿದ್ದ ಜಾಗದಲ್ಲೇ ರಾಮನ ಫ್ಲೆಕ್ಸ್ ಹರಿದು ವಿಕೃತಿ

    ವರ್ಷಾಂತ್ಯಕ್ಕೆ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಇಳಿಯುತ್ತಾರೆ ಎಂಬ ಬಿಜೆಪಿಗರು ಹೇಳಿಕೆ ಕುರಿತು, ಪ್ರತಿವರ್ಷ ಹೀಗೆ ಹೇಳ್ತಾನೇ ಇರುತ್ತಾರೆ. ಆದ್ರೆ ಮುಖ್ಯಮಂತ್ರಿಗಳು ಮುಂದುವರೆಯುತ್ತಾರೆ. ಮುಖ್ಯಮಂತ್ರಿ ಸ್ಥಾನ ಯಾವುದೇ ಚರ್ಚೆ ಆಗಿಲ್ಲ ಅಂತ ಸುರ್ಜೇವಾಲ ಅವರು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಸಿಎಂ ಇದ್ದಾರೆ ಅವರೇ ಮುಂದುವರೆಯುತ್ತಾರೆ. ಈ ಬಗ್ಗೆ ಸಿಎಂ ಅವರೇ ಹೇಳಿದ್ದಾರೆ. ಮುಂದಿನ 5 ವರ್ಷ ನಾನೇ ಇರುತ್ತೇನೆ. ದಸರಾ ಉದ್ಘಾಟನೆ ಮಾಡುತ್ತೇನೆ ಎಂದಿದ್ದಾರೆ ಎಂದು ತಿಳಿಸಿದರು.

    ಕೇಂದ್ರ ಜಿಎಸ್‌ಟಿ ವಿಚಾರವಾಗಿ, ಸಿಎಂ ಅವರೇ ಹೇಳಿದ್ದಾರೆ. ಜಿಎಸ್‌ಟಿ ಕಡಿಮೆ‌ ಮಾಡಿರುವುದರಿಂದ ರಾಜ್ಯಕ್ಕೆ ನಷ್ಟ ಆಗುತ್ತಿದೆ. ಅದಕ್ಕೆ ಪರಿಹಾರ ಕೊಡಬೇಕು ಅಂತ ಕೇಳಿಕೊಂಡಿದ್ದಾರೆ. ಕಳೆದ ಬಾರಿ 15ನೇ ಹಣಕಾಸು ಆಯೋಗ ಮಾಡಿದಾಗ ಕರ್ನಾಟಕಕ್ಕೆ ಅನ್ಯಾಯ ಆಗಿತ್ತು. ಆಯೋಗ ಸೂಚಿಸಿದ ಪರಿಹಾರ ಸಹ ಬಂದಿರಲಿಲ್ಲ. ಈ ಬಾರಿ ಮತ್ತೆ ನಷ್ಟವಾಗಿದೆ. ಹಾಗಾಗಿ ಆ ಪರಿಹಾರ ತುಂಬಿಕೊಡಬೇಕು ಎಂದು ಕೇಂದ್ರಕ್ಕೆ ಆಗ್ರಹ ಮಾಡಿದ್ದಾರೆ. ನಾನು ಕೂಡಾ ಆಗ್ರಹ ಮಾಡುತ್ತೇನೆ.

    ಬಜೆಟ್‌ನಲ್ಲಿ ಘೋಷಣೆ ಮಾಡಿದ ಭದ್ರಾ ಮೇಲ್ದಂಡೆ ಯೋಜನೆ 5 ಸಾವಿರ ಕೋಟಿ ರೂ. ಕೊಡಲಿಲ್ಲ. ಬಜೆಟ್‌ನಲ್ಲಿ ಪೆರಪೆರಿ ರಿಂಗ್ ರೋಡ್ ಕೊಡುತ್ತೇನೆ ಅಂದ್ರು ಕೊಡಲಿಲ್ಲ. ಕೇಂದ್ರ ಕೊಡದೇ ಇರುವುದನ್ನು ಸಿಎಂ ಕೇಳಿದ್ದು‌ ನ್ಯಾಯಯುತವಾಗಿದೆ. ನಾವು ಕೂಡಾ ಕೇಳುತ್ತಿದ್ದೇವೆ. ಜಿಎಸ್‌ಟಿ ಕಡಿತದಿಂದ ಆದ ನಷ್ಟ ಭರಿಸಿಕೊಡಿ ಅಂತ ನಾವೂ ಕೇಳ್ತೆವಿ ಎಂದರು. ಇದನ್ನೂ ಓದಿ: ಬೆಳಗಾವಿ | ‘ಐ ಲವ್ ಮುಹಮ್ಮದ್’ ಘೋಷಣೆ ಪ್ರಶ್ನಿಸಿದ್ದಕ್ಕೆ ಕಲ್ಲು ತೂರಾಟ – 50 ಮಂದಿ ವಿರುದ್ಧ FIR

  • ಗದಗ | ಕತ್ತೆಕಿರುಬಕ್ಕೆ ಡಿಕ್ಕಿಯಾಗಿ ಕಂದಕಕ್ಕೆ ಉರುಳಿದ ಪೊಲೀಸ್ ಜೀಪ್ – ಎಎಸ್‌ಐ ಸಾವು

    ಗದಗ | ಕತ್ತೆಕಿರುಬಕ್ಕೆ ಡಿಕ್ಕಿಯಾಗಿ ಕಂದಕಕ್ಕೆ ಉರುಳಿದ ಪೊಲೀಸ್ ಜೀಪ್ – ಎಎಸ್‌ಐ ಸಾವು

    ಗದಗ: ಪೊಲೀಸ್ ಜೀಪ್‌ಗೆ ಅಡ್ಡಲಾಗಿ ಬಂದ ಕತ್ತೆಕಿರುಬಕ್ಕೆ (Hyena) ಡಿಕ್ಕಿ ಹೊಡೆದು, ಜೀಪ್ ಕಂದಕಕ್ಕೆ ಉರುಳಿದ ಪರಿಣಾಮ ಮೂವರು ಪೊಲೀಸ್ ಅಧಿಕಾರಿಗಳಿಗೆ ಗಾಯಗೊಂಡಿದ್ದರು. ಇದೀಗ ಗಂಭೀರ ಗಾಯಗೊಂಡಿದ್ದ ಎಎಸ್‌ಐ (ASI) ಮೃತಪಟ್ಟಿದ್ದಾರೆ.

    ಬೆಟಗೇರಿ ಪೊಲೀಸ್ (Betageri Police) ಠಾಣೆಯ ಎಎಸ್‌ಐ ಕಾಶಿಮ್ ಸಾಬ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸೆ.23 ರಂದು ಬೆಳಗ್ಗಿನ ಜಾವ ಪೊಲೀಸ್ ಅಧಿಕಾರಿಗಳು ಗದಗ (Gadag) ಜಿಲ್ಲೆಯ ಲಕ್ಷ್ಮೇಶ್ವರ ಸಾಮ್ರಾಟ್ ಗಣೇಶ ವಿಸರ್ಜನೆ ಬಂದೋಬಸ್ತ್ ಮುಗಿಸಿ ವಾಪಾಸಾಗುತ್ತಿದ್ದರು. ಇದನ್ನೂ ಓದಿ: ಗದಗ | ಕತ್ತೆಕಿರುಬಕ್ಕೆ ಡಿಕ್ಕಿಯಾಗಿ ಕಂದಕಕ್ಕೆ ಉರುಳಿದ ಪೊಲೀಸ್ ಜೀಪ್

    ಈ ವೇಳೆ ಸೊರಟೂರ ಗ್ರಾಮದ ಬಳಿ ವಾಹನಕ್ಕೆ ಅಡ್ಡ ಬಂದ ಕತ್ತೆಕಿರುಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪೊಲೀಸ್ ಜೀಪ್ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿತ್ತು. ಘಟನೆ ವೇಳೆ ಜೀಪ್‌ನಲ್ಲಿದ್ದ ಇನ್ಸೆಪೆಕ್ಟರ್ ಉಮೇಶ್‌ಗೌಡ ಪಾಟೀಲ್, ಬೆಟಗೇರಿ ಎಎಸ್‌ಐ ಕಾಶಿಮ್ ಸಾಬ್ ಹಾಗೂ ಚಾಲಕ ಓಂನಾಥ್ ಅವರಿಗೆ ಗಾಯಗಳಾಗಿದ್ದವು. ಗಾಯಾಳುಗಳನ್ನು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಆದರೆ ಗಂಭೀರ ಗಾಯಗೊಂಡಿದ್ದ ಎಎಸ್‌ಐ ಕಾಶಿಮ್ ಸಾಬ್ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕಾಶಿಮ್ ಸಾಬ್ ಅವರ ನಿವೃತ್ತಿಗೆ ಕೇವಲ 5 ತಿಂಗಳು ಬಾಕಿಯಿದ್ದವು ಎನ್ನಲಾಗಿದೆ.

  • ಗದಗ | ಕತ್ತೆಕಿರುಬಕ್ಕೆ ಡಿಕ್ಕಿಯಾಗಿ ಕಂದಕಕ್ಕೆ ಉರುಳಿದ ಪೊಲೀಸ್ ಜೀಪ್

    ಗದಗ | ಕತ್ತೆಕಿರುಬಕ್ಕೆ ಡಿಕ್ಕಿಯಾಗಿ ಕಂದಕಕ್ಕೆ ಉರುಳಿದ ಪೊಲೀಸ್ ಜೀಪ್

    ಗದಗ: ರಸ್ತೆಗೆ ಅಡ್ಡಲಾಗಿ ಬಂದ ಕತ್ತೆಕಿರುಬಕ್ಕೆ (Hyena) ಪೊಲೀಸ್ ಜೀಪ್ ಡಿಕ್ಕಿ ಹೊಡೆದು ಕಂದಕಕ್ಕೆ ಉರುಳಿರುವ ಘಟನೆ ಗದಗದ (Gadag) ಸೊರಟೂರ ಗ್ರಾಮದ ಬಳಿ ನಡೆದಿದೆ.

    ಕತ್ತೆಕಿರುಬ ಮೃತಪಟ್ಟಿದೆ. ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಲಕ್ಷ್ಮೇಶ್ವರ ಸಾಮ್ರಾಟ್ ಗಣೇಶ ವಿಸರ್ಜನೆ ಕಾರ್ಯ ಮುಗಿಸಿಕೊಂಡು ಗದಗ ಕಡೆಗೆ ಬರುತ್ತಿದ್ದ ವೇಳೆ ಘಟನೆ ನಡೆದಿದೆ. ಇದನ್ನೂ ಓದಿ: ಕಾಪುವಿನಲ್ಲಿ ಹಿಟ್‌ & ರನ್‌ಗೆ ಯುವಕ ಬಲಿ – ಮೃತದೇಹದ ಛಿದ್ರ ಛಿದ್ರ

    ಪೊಲೀಸ್ ಜೀಪ್ ಕಂದಕಕ್ಕೆ ಉರುಳಿದ ಪರಿಣಾಮ ಗದಗನ ಬೇಟಗೇರಿ ಠಾಣೆ ಎಎಸ್‌ಐ ಕಾಶಿಂ ಸಾಬ್ ಅವರಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಗಾಜಿಯಾಬಾದ್‌ ಎನ್‌ಕೌಂಟರ್‌ – ಕಳ್ಳನ ಕಾಲುಮುರಿದು ಬಂಧಿಸಿದ ಮಹಿಳಾ ಪೊಲೀಸರ ತಂಡ

    ಪೊಲೀಸ್ ಇನ್ಸ್ಪೆಕ್ಟರ್ ಉಮೇಶ್‌ಗೌಡ ಪಾಟೀಲ್, ಚಾಲಕ ಓಂನಾಥ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುಳಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಸರ್ವರ್‌ನಲ್ಲಿ ಸಮಸ್ಯೆ; ಸಿಬ್ಬಂದಿ ಹೈರಾಣು

    ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಸರ್ವರ್‌ನಲ್ಲಿ ಸಮಸ್ಯೆ; ಸಿಬ್ಬಂದಿ ಹೈರಾಣು

    ಗದಗ: ಸೆ.22 ರಿಂದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ (Caste Census Survey) ಆರಂಭವಾಗಿದೆ. 2ನೇ ದಿನವೂ ಸರ್ವೆ ಕಾರ್ಯಕ್ಕೆ ವಿಘ್ನ ಎದುರಾಗಿದೆ. ಗದಗ (Gadag) ನಗರದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸಿಬ್ಬಂದಿ ಸರ್ವರ್ ಸಮಸ್ಯೆಯಿಂದ ಪರದಾಡಿದ್ದಾರೆ.

    ಸಮೀಕ್ಷೆಯ ಆಪ್ ಓಪನ್ ಆಗುತ್ತಿರಲಿಲ್ಲ. ಇನ್ನು ಕೆಲವು ಮೊಬೈಲ್‌ನಲ್ಲಿ ಓಪನ್ ಆದ್ರೂ ಓಟಿಪಿ ಬರುತ್ತಿರಲಿಲ್ಲ. ಅಪ್ಡೇಟ್ ಕೇಳಿ ತಂತಾನೆ ಆಪ್ ಕ್ಲೋಸ್ ಆಗುತ್ತಿತ್ತು. ಸರ್ವೆ ಸಂಬಂಧಿಸಿದ ಯುಹೆಚ್‌ಐಡಿ ಸ್ಟಿಕ್ಕರ್ ಸರಿಯಾಗಿ ಅಂಟಿಸಿರಲಿಲ್ಲ ಈ ರೀತಿಯಾದ ಸಮಸ್ಯೆಯನ್ನು ಸಿಬ್ಬಂದಿ ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಟಾರ್ಗೆಟ್‌ 20 ಲಕ್ಷ, ನಡೆದಿದ್ದು 10 ಸಾವಿರ ಮಂದಿ ಗಣತಿ – ಮೊದಲ ದಿನವೇ ನೀರಸ ಆರಂಭ

    ಕೆಲವು ಕಡೆಗಳಲ್ಲಿ ಸರಿಯಾಗಿ ಲೊಕೇಷನ್ ತೋರಿಸದೇ ಎಲ್ಲೆಲ್ಲೋ ತೋರಿಸುತ್ತಿದೆ. ಒಂದು ಮನೆ ಅರ್ಜಿ ಭರ್ತಿ ಮಾಡಲು 2 ರಿಂದ 3 ಗಂಟೆ ತೆಗೆದುಕೊಳ್ಳುತ್ತಿದೆ. ನಾಲ್ಕೈದು ಬಾರಿ ಒಟಿಪಿ ತೆಗೆದುಕೊಳ್ಳುತ್ತದೆ. ಪದೇಪದೇ ಒಟಿಪಿ ಹೇಳಲು ಜನರು ಹಿಂದೇಟು ಹಾಕ್ತಿದ್ದಾರೆ. ಇದನ್ನೂ ಓದಿ: ಹಾವೇರಿ | ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆಪ್‌ನಲ್ಲಿ ಮೊದಲ ದಿನವೇ ತಾಂತ್ರಿಕ ದೋಷ – ಸಿಬ್ಬಂದಿ ಪರದಾಟ

    ಇನ್ನು ಕೆಲವು ಮನೆಗಳಲ್ಲಿ ಸ್ಟಿಕ್ಕರ್ ಕಿತ್ತು ಹಾಕಿದ್ದಾರೆ. ಕೆಲವು ಮನೆಗಳಲ್ಲಿ ಬರಬೇಡಿ ಹೋಗಿ ಅಂತಾರೆ. ಇನ್ನು ಕೆಲವರು ಎಷ್ಟು ಸಮಯಬೇಕು ನಿಮಗೆ ಸಾಕು ಎದ್ದು ಹೋಗಿ ಎನ್ನುತ್ತಿದ್ದಾರೆಂದು ಸಿಬ್ಬಂದಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.

    ಕಷ್ಟಪಟ್ಟು ಅರ್ಜಿ ಭರ್ತಿ ಮಾಡಿದಾಗ ಕೊನೆ ಕ್ಷಣದಲ್ಲಿ ಸಬ್ಮಿಟ್ ತೆಗೆದುಕೊಳ್ಳುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದ್ರೂ ಯಾರೂ ಸೂಕ್ತ ಪರಿಹಾರ ಹೇಳುತ್ತಿಲ್ಲ. ಈ ಎಲ್ಲದರಿಂದ ನಾವೆಲ್ಲ ಗೊಂದಲಕ್ಕೀಡಾಗಿದ್ದೇವೆ. ಮೊದಲು ಸಮಸ್ಯೆ ಬಗೆಹರಿಸಿ, ನಂತರ ಕೆಲಸಕ್ಕೆ ಬರುತ್ತೇವೆ ಎಂದು ಸಿಬ್ಬಂದಿ ಹೇಳಿದ್ದಾರೆ.

  • ಹಿಂದೂ ಧರ್ಮದ ಜೊತೆ ಕ್ರಿಶ್ಚಿಯನ್ ಸೇರ್ಪಡೆ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಆಗಿದೆ: ಸಿದ್ದರಾಮಯ್ಯ

    ಹಿಂದೂ ಧರ್ಮದ ಜೊತೆ ಕ್ರಿಶ್ಚಿಯನ್ ಸೇರ್ಪಡೆ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಆಗಿದೆ: ಸಿದ್ದರಾಮಯ್ಯ

    – ಅನಗತ್ಯ ಇರುವುದನ್ನು ಗಣತಿಯಿಂದ ತಗೆದು ಹಾಕುತ್ತೇವೆ ಎಂದ ಸಿಎಂ

    ಗದಗ: ಹಿಂದೂ (Hindu) ಧರ್ಮದ ಜೊತೆ ಕ್ರಿಶ್ಚಿಯನ್ ಸೇರ್ಪಡೆ ಬಗ್ಗೆ ಸಚಿವ ಸಂಪುಟದಲ್ಲಿ (Cabinet Meet) ಚರ್ಚೆ ಆಗಿದೆ. ಅನಗತ್ಯ ಇರುವುದನ್ನು ಗಣತಿಯಿಂದ (Caste Census) ತಗೆದು ಹಾಕುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

    ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಣತಿಗೆ 1,45,000 ಶಿಕ್ಷಕರನ್ನು ನೇಮಿಸಲಾಗಿದೆ. 15 ದಿನಗಳ ಕಾಲ ಮನೆ ಮನೆಗೂ ಹೋಗಿ ಸಮೀಕ್ಷೆ ಮಾಡುತ್ತಾರೆ. ಇದು ಜಾತಿ ಗಣತಿ, ಸಮೀಕ್ಷೆ ಅಲ್ಲ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮಿಕ್ಷೆ ಮಾಡುತ್ತಾರೆ. ಅವಕಾಶದಿಂದ ವಂಚಿತರಾದವರಿಗೆ ಮೊದಲ ಆದ್ಯತೆಗೆ ಸಮೀಕ್ಷೆ ಮಾಡಲಾಗುತ್ತಿದೆ ಎಂದರು. ಸಮೀಕ್ಷೆ ಮೂಲಕ ಸಮಾಜ ಒಡೆಯುವ ಷಡ್ಯಂತರ ನಡೆಯುತ್ತಿದೆ ಎಂಬ ವಚನಾನಂದ ಶ್ರೀ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮುಂದೆ ಕೇಂದ್ರ ಸರ್ಕಾರ ಜಾತಿಗಣತಿ ಮಾಡುತ್ತಿದೆ, ಅಲ್ಲಿ ಷಡ್ಯಂತ್ರ ಇದೆಯಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ತರಾತುರಿ ಜಾತಿಗಣತಿ, ಜಾತಿಗಳ ಜೊತೆ ಕ್ರಿಶ್ಚಿಯನ್ ಧರ್ಮ ಸೇರಿಸುವುದು ಬೇಡ: ನಿರ್ಮಲಾನಂದ ಶ್ರೀಗಳ ಎಚ್ಚರಿಕೆ

    ಸಮೀಕ್ಷೆಗೆ ಕೆಲವು ಸಚಿವರು, ಶಾಸಕರು ವಿರೋಧ ಕುರಿತು ಮಾತನಾಡಿ, ಸಮಿಕ್ಷೆಗೆ ಸಚಿವರು, ಶಾಸಕರು ಯಾರೂ ವಿರೋಧ ಮಾಡಿಲ್ಲ. ಸಮಾಜದಲ್ಲಿ ಸಮಾನತೆ ತರಬೇಕಿದ್ದರೆ ಅವಕಾಶದಿಂದ ವಂಚಿತರಾದವರಿಗೆ ಅವಕಾಶ ಕೊಡಬೇಕು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿ ತಿಳಿಯಲು ಸಮಿಕ್ಷೆ ಮಾಡಲಾಗುತ್ತಿದೆ. ಹಿಂದುಳಿದ ಆಯೋಗ ಸಮಿಕ್ಷೆ ಮಾಡುತ್ತಿದೆ. ಅದರಲ್ಲಿ ನಾವು ಮಧ್ಯೆ ಪ್ರವೇಶಿಸಲ್ಲ ಎಂದರು. ಇದನ್ನೂ ಓದಿ: ಸಿಎಂ ಆಗೋಕೆ ಹೆಲಿಕಾಪ್ಟರ್ ಖರೀದಿಸಿದ್ದಾರೆ ಅನ್ನೋದು ತಪ್ಪು ಕಲ್ಪನೆ – ಸತೀಶ್ ಜಾರಕಿಹೊಳಿ ಪರ ಬೋಸರಾಜು ಬ್ಯಾಟಿಂಗ್

    ಹಿಂದೂ ಜೊತೆ ಕ್ರಿಶ್ಚಿಯನ್ ಪದ ಬಳಕೆ ಬಗ್ಗೆ ಮರು ಪರಿಶೀಲನೆ ಮಾಡಿ ಎಂದು ರಾಜ್ಯಪಾಲರು ಸಿಎಂಗೆ ಪತ್ರ ಬರೆದಿರುವ ಕುರಿತು ಮಾತನಾಡಿ, ಬಿಜೆಪಿಯವರು ಕಳುಹಿಸಿದ ಲೆಟರ್ ರಾಜ್ಯಪಾಲರು ನನಗೆ ಕಳುಹಿಸಿದ್ದಾರೆ. ಬಿಜೆಪಿ ಅವರ ಲೆಟರ್ ಫಾರ್ವಡ್ ಮಾಡಿದ್ದಾರೆ ಅಷ್ಟೇ. ಬಿಜೆಪಿಯವರು ರಾಜಕಿಯಕ್ಕಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಪ್ರಧಾನಿಗೆ ತಾನು ಬಿಡಿಸಿದ ಚಿತ್ರ ಕೊಟ್ಟು ಭಾವುಕನಾದ ಬಾಲಕ – ವೇದಿಕೆಯಿಂದಲೇ ಸಮಾಧಾನ ಮಾಡಿದ ಮೋದಿ

    ಇನ್ನು ಕುರುಬರನ್ನು ಎಸ್ಟಿಗೆ ಸೇರಿಸುವ ವಿಚಾರದ ಕುರಿತು ಮಾತನಾಡಿ, ಬಿಜೆಪಿಯವರಿದ್ದಾಗ ಕುರುಬರನ್ನು ಎಸ್ಟಿಗೆ ಸೇರಿಸಬೇಕೆಂದು ಮಾಡಿದ್ದರು. ಈಶ್ವರಪ್ಪ, ಕಾಗಿನೇಲೆ ಸ್ವಾಮಿಜಿಗಳು ಈ ಬಗ್ಗೆ ಶಿಫಾರಸು ಕೇಂದ್ರಕ್ಕೆ ಕಳುಹಿಸಿದ್ದರು. ಈ ಬಗ್ಗೆ ಅವರೇ ಉತ್ತರಿಸಬೇಕು. ಇನ್ನು ಎಸ್.ಸಿ, ಎಸ್‌ಟಿ ಪಟ್ಟಿಗೆ ಸೇರಿಸುವುದು ಕೇಂದ್ರದ ಕೆಲಸವಾಗಿದೆ. ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಸತ್ಯ ಹೇಳಿದ್ದಾರೆ. 6 ಸಾವಿರ ಮತಗಳನ್ನು ಕೈಬಿಡಲಾಗಿದೆ. ಆಳಂದ ಮತಗಳ್ಳತನ ಬಗ್ಗೆ ಎಸ್‌ಐಟಿ ತನಿಖೆ ನಡೆಯುತ್ತಿದೆ ಎಂದರು. ಬೆಳೆ ಹಾನಿ ಬಗ್ಗೆ ಸರ್ವೆ ನಡೆಸಿ ಪರಿಹಾರ ಕೊಡುತ್ತೇವೆ. ಮಳೆ ಈ ಬಾರಿ ಜಾಸ್ತಿ ಆಗಿದೆ ಎಂದು ತಿಳಿಸಿದರು. ಇದನ್ನೂ ಓದಿ: 60 ದಿನ ಜಾತಿಗಣತಿ ಮುಂದೂಡಿ, 15 ದಿನ ಕಾಲಮಿತಿ ಹೆಚ್ಚಿಸಿ – ಒಕ್ಕಲಿಗ ಸಭೆಯಲ್ಲಿ ನಿರ್ಣಯ

    ಇನ್ನು ಬೆಂಗಳೂರು ರಸ್ತೆ ಗುಂಡಿಗಳ ಬಗ್ಗೆ ಮಾತನಾಡಿ, ಕಳೆದ ವರ್ಷ ಹಾಗೂ ಈ ವರ್ಷ ಸಾಕಷ್ಟು ಮಳೆ ಆಗಿರುವುದರಿಂದ ರಸ್ತೆಗಳು ಕೆಟ್ಟು ಹೋಗಿದೆ. ಈ ಬಗ್ಗೆ ಮೀಟಿಂಗ್ ಮಾಡಿ, ರಸ್ತೆ ದುರಸ್ಥಿ ಮಾಡುತ್ತೇವೆ. ಬಿಜೆಪಿಯವರಿರುವಾಗ ಒಂದು ದಿನ ಗುಂಡಿ ಮುಚ್ಚಲಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ತಿಮರೋಡಿ ಬಳಿಗೆ ನಮ್ಮನ್ನ ಕರೆದುಕೊಂಡು ಹೋಗಿದ್ದೇ ಸೌಜನ್ಯ ಮಾವ: ಚಿನ್ನಯ್ಯನ 2ನೇ ಪತ್ನಿ ಬಾಂಬ್‌

  • ರಾಜ್ಯದ 1,275 ಹೊಸ ಪ್ರವಾಸಿ ತಾಣಗಳ ಪಟ್ಟಿಯಲ್ಲಿ `ಗದಗ’ದ 48 ತಾಣಗಳು ಆಯ್ಕೆ

    ರಾಜ್ಯದ 1,275 ಹೊಸ ಪ್ರವಾಸಿ ತಾಣಗಳ ಪಟ್ಟಿಯಲ್ಲಿ `ಗದಗ’ದ 48 ತಾಣಗಳು ಆಯ್ಕೆ

    ಗದಗ: ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ರ ಅಡಿಯಲ್ಲಿ ರಾಜ್ಯಾದ್ಯಂತ ಒಟ್ಟು 1,275 ಹೊಸ ಪ್ರವಾಸಿ ತಾಣಗಳನ್ನು ಗುರುತಿಸಿದೆ. ಅದರಲ್ಲಿ ಗದಗ ಜಿಲ್ಲೆಯ 48 ತಾಣಗಳು ಮಹತ್ವದ ಸ್ಥಾನ ಪಡೆಕೊಂಡಿವೆ.

    ಸಂಗೀತ, ಸಾಹಿತ್ಯ, ಕಲೆಗಳ ತವರೂರಾಗಿರುವ ಗದಗ ಜಿಲ್ಲೆಯು ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮ ತಾಣವಾಗಿಯೂ ಗಮನ ಸೆಳೆಯುತ್ತಿದೆ. ಇದೀಗ ರಾಜ್ಯ ಸರ್ಕಾರ ಗುರುತು ಮಾಡಿರುವ 1,275 ಹೊಸ ಪ್ರವಾಸಿ ತಾಣಗಳ ಪೈಕಿ ಗದಗ-ಬೆಟಗೇರಿ ಅವಳಿ ನಗರದಲ್ಲಿರುವ ವೀರೇಶ್ವರ ಪುಣ್ಯಾಶ್ರಮ, ವೀರಗಲ್ಲು, ಸಬರಮತಿ ಆಶ್ರಮದ ಪ್ರತಿರೂಪ ಸೇರಿದಂತೆ ಒಟ್ಟು 45 ತಾಣಗಳು ಸೇರಿಕೊಂಡಿವೆ. ಇದನ್ನೂ ಓದಿ: ಜಾತಿಗಣತಿಗೆ ಡಿಕೆಶಿ ಸೇರಿ ಹಲವು ಸಚಿವರ ಆಕ್ಷೇಪ, ನನಗೆ ಮೇಲ್ವರ್ಗದ ವಿರೋಧಿ ಅಂತಾ ಪಟ್ಟ ಕಟ್ಟುತ್ತಾರೆ: ಸಿಎಂ

    ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಅಂಕಿ ಅಂಶಗಳನ್ನು ಆಧರಿಸಿ, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಸಮಿತಿಯಿಂದ ಸ್ವೀಕರಿಸಿದ ಆಧಾರದ ಮೇಲೆ ಹೊಸ ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ಈ ಕುರಿತು ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮುಹಮ್ಮದ್ ಇಬ್ರಾಹಿಂ ಅಧಿಕೃತ ಆದೇಶ ಹೊರಡಿಸಿದ್ದಾರೆ.

    ಹೊಸದಾಗಿ ಗುರುತಿಸಲಾದ ತಾಣಗಳ ಅಭಿವೃದ್ಧಿಗೆ ಅಗತ್ಯವಾದ ಕ್ರಿಯಾ ಯೋಜನೆಗಳು ಮತ್ತು ಅಂದಾಜು ವೆಚ್ಚಗಳನ್ನು ಸಿದ್ಧಪಡಿಸಿ, ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮೋದನೆ ಪಡೆದ ನಂತರ ಕಾಮಗಾರಿಗಳನ್ನು ಆರಂಭಿಸಲು ಸೂಚಿಸಲಾಗಿದೆ. ಹೊಸ ಪ್ರವಾಸಿ ತಾಣಗಳ ಗುರುತಿಸುವಿಕೆಯಿಂದಾಗಿ ಪ್ರವಾಸಿ ತಾಣಗಳ ಮೂಲಸೌಕರ್ಯ ಅಭಿವೃದ್ಧಿಯ ನಿರೀಕ್ಷೆ ಗರಿಗೆದರಿದೆ. ವಿಶೇಷವಾಗಿ ರಾಜ್ಯ ಪುರಾತತ್ವ ಇಲಾಖೆ ಅಧೀನದಲ್ಲಿರುವ ಮತ್ತು ನಿರ್ಲಕ್ಷ್ಯಕ್ಕೆ ಒಳಗಾಗಿರುವ ಅನೇಕ ಧಾರ್ಮಿಕ ತಾಣಗಳು, ಐತಿಹಾಸಿಕ ದೇವಸ್ಥಾನಗಳು ಅಭಿವೃದ್ಧಿ ಕಂಡು ಪ್ರವಾಸಿಗರನ್ನು ಆಕರ್ಷಿಸಲಿವೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಜಿಲ್ಲೆಯ ಪ್ರವಾಸಿ ತಾಣಗಳ ವಿವರ:
    ಗದಗ ತಾಲೂಕು:
    * ಭೀಷ್ಮ ಕೆರೆ (116 ಅಡಿ ಎತ್ತರದ ಬಸವೇಶ್ವರ ಮೂರ್ತಿ)
    * ಶ್ರೀ ವೀರನಾರಾಯಣ ದೇವಸ್ಥಾನ
    * ಶ್ರೀ ತ್ರಿಕೂಟೇಶ್ವರ ದೇವಸ್ಥಾನ
    * ಶ್ರೀ ಸೋಮೇಶ್ವರ ದೇವಸ್ಥಾನ
    * ಶ್ರೀ ರಾಮೇಶ್ವರ ದೇವಸ್ಥಾನ
    * ಶ್ರೀ ತೋಂಟದಾರ್ಯ ಮಠ
    * ಶ್ರೀ ವೀರೇಶ್ವರ ಪುಣ್ಯಾಶ್ರಮ
    * ಜಾಮಿಯಾ ಮಸೀದಿ
    * ಬೆಟಗೇರಿ ಚರ್ಚ್
    * ಸಬರಮತಿ ಆಶ್ರಮ
    * ಶ್ರೀರಾಮಕೃಷ್ಣ ಆಶ್ರಮ
    * ಶ್ರೀ ವೆಂಕಟೇಶ್ವರ ದೇವಸ್ಥಾನ, ವೆಂಕಟಾಪುರ
    * ದಾವಲಮಲಿಕ ದರ್ಗಾ, ಮುಳಗುಂದ
    * ಶ್ರೀ ಸಿದ್ದೇಶ್ವರ ದೇವಸ್ಥಾನ, ಮುಳಗುಂದ
    * ಚಂದ್ರನಾಥ ಬಸದಿ, ಮುಳಗುಂದ
    * ಶ್ರೀ ಪಾರ್ವತಿ-ಪರಮೇಶ್ವರ ದೇವಸ್ಥಾನ, ಹರ್ತಿ
    * ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ
    * ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ
    * ಬೆಟಗೇರಿಯ ವೀರಗಲ್ಲುಗಳು
    * ಸರ್ಕಾರಿ ವಸ್ತು ಸಂಗ್ರಹಾಲಯ
    * ಬ್ರಹ್ಮ, ಜೀನಾಲಯ ದೇವಸ್ಥಾನ, ಲಕ್ಕುಂಡಿ
    * ಶ್ರೀ ನನ್ನೇಶ್ವರ ದೇವಸ್ಥಾನ, ಲಕ್ಕುಂಡಿ
    * ಮುಸಕಿನ ಭಾವಿ, ಲಕ್ಕುಂಡಿ
    * ಶ್ರೀ ಕಾಶಿವಿಶ್ವೇಶ್ವರ ದೇವಸ್ಥಾನ, ಲಕ್ಕುಂಡಿ
    * ಶ್ರೀ ಹಾಲಗುಂಡಿ ಬಸವೇಶ್ವರ ದೇವಸ್ಥಾನ, ಲಕ್ಕುಂಡಿ
    * ವಸ್ತು ಸಂಗ್ರಹಾಲಯ, ಲಕ್ಕುಂಡಿ

    ಮುಂಡರಗಿ ತಾಲೂಕು:
    * ಶ್ರೀ ವೀರಭದ್ರೇಶ್ವರ ದೇವಸ್ಥಾನ, ಸಿಂಗಟಾಲೂರು
    * ಹಮ್ಮಿಗಿ ಬ್ಯಾರೇಜ್, ಹಮ್ಮಿಗಿ.
    * ಶ್ರೀ ಅನ್ನದಾನೇಶ್ವರ ಮಠ, ಮುಂಡರಗಿ.
    * ಕಪ್ಪತ್ತಗುಡ್ಡ.
    * ಶ್ರೀ ದೊಡ್ಡಬಸಪ್ಪ ದೇವಸ್ಥಾನ, ಡಂಬಳ.
    * ಶ್ರೀ ಸೋಮೇಶ್ವರ ದೇವಸ್ಥಾನ, ಡಂಬಳ.
    * ವಿಕ್ಟೋರಿಯಾ ರಾಣಿ ಕೆರೆ, ಡಂಬಳ.
    * ಜಪದ ಬಾವಿ, ಡಂಬಳ

    ರೋಣ ಹಾಗೂ ಗಜೇಂದ್ರಗಡ:
    * ಶ್ರೀ ಕಲ್ಲೇಶ್ವರ ದೇವಸ್ಥಾನ, ರೋಣ
    * ಗಜೇಂದ್ರಗಡ ಕೋಟೆ, ಗಜೇಂದ್ರಗಡ
    * ಶ್ರೀ ಕಾಲಕಾಲೇಶ್ವರ ಕ್ಷೇತ್ರ, ಗಜೇಂದ್ರಗಡ
    * ಶ್ರೀ ನಾಗೇಶ್ವರ ದೇವಸ್ಥಾನ (ಜೋಡು ಕಳಸ), ಸೂಡಿ
    * ರಸದ ಬಾವಿ ನಾಗನ ಹೊಂಡ, ಗಜೇಂದ್ರಗಡ
    * ಶ್ರೀ ಭೀಮಾಂಬಿಕ ದೇವಸ್ಥಾನ, ಇಟಗಿ
    * ಶ್ರೀ ಶಂಭುಲಿಂಗ ದೇವಸ್ಥಾನ, ಇಟಗಿ

    ಶಿರಹಟ್ಟಿ ತಾಲೂಕು:
    * ಶ್ರೀ ಫಕೀರೇಶ್ವರ ಮಠ. ಶಿರಹಟ್ಟಿ
    * ಶ್ರೀ ಹೊಳಲಮ್ಮದೇವಿ ದೇವಸ್ಥಾನ, ಶ್ರೀಮಂತಗಡ
    * ಕೋಟೆ, ಶಿರಹಟ್ಟಿ
    * ಶ್ರೀ ವರವಿ ಮೌನೇಶ್ವರ ದೇವಸ್ಥಾನ, ಶಿರಹಟ್ಟಿ
    * ಮಾಗಡಿ ಕೆರೆ (ಪಕ್ಷಿ ಧಾಮ) ಶಿರಹಟ್ಟಿ

    ಲಕ್ಷ್ಮೇಶ್ವರ ತಾಲೂಕು:
    * ಶ್ರೀ ಸೋಮೇಶ್ವರ ದೇವಸ್ಥಾನ, ಲಕ್ಷ್ಮೇಶ್ವರ.
    * ಶಂಖ ಬಸದಿ, ಲಕ್ಷ್ಮೇಶ್ವರ

    ನರಗುಂದ ತಾಲೂಕು:
    * ಶ್ರೀ ವೆಂಕಟೇಶ್ವರ ದೇವಸ್ಥಾನ.

    ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ವಿಶೇಷ ಪ್ರಯತ್ನದಿಂದ ನೂತನ ಪ್ರವಾಸೋದ್ಯಮ ನೀತಿಯಡಿ ಗುರುತಿಸಲಾದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಗದಗ ಜಿಲ್ಲೆಯ 48 ತಾಣಗಳು ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ. ರಾಜ್ಯದ ಪ್ರವಾಸೋದ್ಯಮಕ್ಕೆ ಹೊಸ ರೂಪ ಕೊಡುವ ಉದ್ದೇಶದಿಂದ ನೂತನ ಪ್ರವಾಸೋದ್ಯಮ ನೀತಿಯಡಿ ರಾಜ್ಯದ 1,275 ತಾಣಗಳನ್ನು ಗುರುತಿಸಲಾಗಿದ್ದು, ಅವುಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಇದನ್ನೂ ಓದಿ: ಮತಗಳ್ಳತನ ಸಂಬಂಧ ತೀರ್ಪಿನ ಬಳಿಕವೇ ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾ ಗಾಂಧಿ: ಛಲವಾದಿ ನಾರಾಯಣಸ್ವಾಮಿ