– ಸುಪ್ರೀಂ ಕೋರ್ಟ್ ಹೊರಗೆ ತನ್ನನ್ನು ತಾನು ಸ್ಫೋಟಿಸಿಕೊಂಡ ವ್ಯಕ್ತಿ
ಬ್ರಿಜಿಲಿಯಾ: ಸುಪ್ರೀಂ ಕೋರ್ಟ್‌ನ ಹೊರಗೆ ವ್ಯಕ್ತಿಯೊಬ್ಬ ಆತ್ಮಹುತಿ ಬಾಂಬ್ ದಾಳಿ ನಡೆಸಿರುವ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ.
ಕೋರ್ಟ್ ಪ್ರವೇಶಿಸಲು ಪ್ರಯತ್ನಿಸುವಾಗ ವ್ಯಕ್ತಿಯೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಜಿ20 ಸಭೆಗೆ ಅಂತಿಮ ತಯಾರಿ ನಡೆಸುತ್ತಿರುವ ಹೊತ್ತಿನಲ್ಲೇ ಸ್ಫೋಟ ಸಂಭವಿಸಿರುವುದು ಭದ್ರತಾ ಆತಂಕವನ್ನು ಉಂಟು ಮಾಡಿದೆ.
ನ್ಯಾಯಾಲಯದ ಕಟ್ಟಡದ ಸಮೀಪವಿರುವ ಪಾರ್ಕಿಂಗ್ ಸ್ಥಳದಲ್ಲಿ ಮೊದಲ ಸ್ಫೋಟ ಸಂಭವಿಸಿತು. ಬಳಿಕ ಕೋರ್ಟ್ ಮುಂಭಾಗದಲ್ಲಿ ಎರಡನೇ ಸ್ಫೋಟ ಸಂಭವಿಸಿದೆ. ಸ್ಫೋಟದ ಪಳೆಯುಳಿಕೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಕೋರ್ಟ್ ಕಟ್ಟಡಕ್ಕೆ ಹಾನಿ ಮಾಡಲು ಸ್ಫೋಟ ನಡೆಸಿದ ಶಂಕಿತರು ಪ್ರಯತ್ನಿಸಿದ್ದರು. ಸದ್ಯ ಮೃತರ ಗುರುತು ಪತ್ತೆಯಾಗಿಲ್ಲ.
ಜಿ20 ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಸೇರಿ ಇಪ್ಪತ್ತು ದೇಶದ ನಾಯಕರು ಭಾಗಿಯಾಗಲಿದ್ದಾರೆ. ಅದಕ್ಕೂ ಮುನ್ನ ನಡೆದಿರುವ ಈ ಸ್ಫೋಟ ಆತಂಕವನ್ನು ಹೆಚ್ಚಿಸಿದೆ.
ಇಸ್ಲಾಮಾಬಾದ್: ನವದೆಹಲಿಯಲ್ಲಿ (New Delhi) ನಡೆದ 18ನೇ G20 ಶೃಂಗಸಭೆಯನ್ನು (G20 Summit) ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಭಾರತವನ್ನು ಪಾಕಿಸ್ತಾನದ (Pakistan) ಸ್ಥಳೀಯರು ಪ್ರಶಂಸಿಸಿದ್ದಾರೆ.
ಪಾಕಿಸ್ತಾನದ ಸ್ಥಳೀಯರೊಬ್ಬರು, ಟಾಪ್ 20 ರಾಷ್ಟ್ರಗಳ ಮುಖ್ಯಸ್ಥರು ಒಂದು ದೇಶಕ್ಕೆ ಭೇಟಿ ನೀಡಿದಾಗ, ಅದು ಆ ರಾಷ್ಟ್ರಕ್ಕೆ ಗೌರವವಾಗಿದೆ. ಭಾರತೀಯ ಆರ್ಥಿಕತೆಯು ಅನೇಕ ಪ್ರಯೋಜನಗಳನ್ನು ಪಡೆಯುತ್ತದೆ ಎಂದು ತಿಳಿಸಿದ್ದಾರೆ.
ಮತ್ತೊಬ್ಬ ಪಾಕಿಸ್ತಾನಿ ಸ್ಥಳೀಯ ಮಾತನಾಡಿ, ಭಾರತವು ಪ್ರಮುಖ ಆರ್ಥಿಕತೆಗಳ ಮುಖ್ಯಸ್ಥರಿಗೆ ಆತಿಥ್ಯ ವಹಿಸಿದೆ ಎಂಬ ಅಂಶವು ಒಂದು ರೀತಿಯಲ್ಲಿ ನಮ್ಮ ವಿದೇಶಾಂಗ ನೀತಿಯ ಮೇಲೆ ನಕಾರಾತ್ಮಕ ಬೆಳಕನ್ನು ಬೀರುತ್ತದೆ. ನಮ್ಮ ಆರ್ಥಿಕತೆ ಮತ್ತು ಭದ್ರತಾ ಪರಿಸ್ಥಿತಿಯು ಕಳೆದ ಅವಧಿಯಲ್ಲಿ ಗಮನಾರ್ಹವಾಗಿ ಹದಗೆಟ್ಟಿದೆ. ಜಗತ್ತು ನಮ್ಮನ್ನು ಬದಿಗಿಟ್ಟಿದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಭಾರತ, ಸೌದಿ ನಡುವೆ ದ್ವಿಪಕ್ಷೀಯ ಮಾತುಕತೆ – ಉತ್ಪಾದಕ ಮಾತುಕತೆ ಎಂದ ಪ್ರಧಾನಿ ಮೋದಿ
ನಾವು ನಮ್ಮ ದೇಶದ (ಪಾಕಿಸ್ತಾನ) ಆರ್ಥಿಕತೆಯನ್ನು ಮೇಲಕ್ಕೆತ್ತಲು ಪ್ರಯತ್ನಿಸುತ್ತಿರುವ ಹೊತ್ತಿನಲ್ಲಿ, ಭಾರತವು ವಿಶ್ವದ 20 ಪ್ರಮುಖ ಆರ್ಥಿಕತೆಗಳ ನಾಯಕರಿಗೆ ಆತಿಥ್ಯ ವಹಿಸಿತು. ಜಾಗತಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದು, ಭಾರತೀಯರಿಗೆ ಹೆಮ್ಮೆ ಎನಿಸಿತು. ನಾವೆಲ್ಲರೂ ಭಾರತದ ಚಿತ್ರಗಳನ್ನು ನೋಡಿದ್ದೇವೆ. ಪ್ರಧಾನಿ ಮೋದಿ ಅವರು ವಿಶ್ವ ನಾಯಕರೊಂದಿಗೆ ಪೋಸ್ ನೀಡಿದ್ದಾರೆ. ಜಾಗತಿಕ ಪ್ರೇಕ್ಷಕರ ಮುಂದೆ ಭಾರತವನ್ನು ಸಕಾರಾತ್ಮಕವಾಗಿ ಪ್ರದರ್ಶಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಸೌದಿ ಅರೇಬಿಯಾದ ‘ಶೆಜಾದಾ’ (ಕ್ರೌನ್ ಪ್ರಿನ್ಸ್ ಸಲ್ಮಾನ್) ಪಾಕಿಸ್ತಾನಕ್ಕೆ ಬಂದಿಲ್ಲ. ಆದರೆ ಜಿ 20 ಶೃಂಗಸಭೆಗಾಗಿ ಭಾರತಕ್ಕೆ ಹೋಗಿದ್ದರು. ಇದು ವಿಶ್ವಕ್ಕೆ ಭಾರತದ ಪ್ರಾಮುಖ್ಯತೆ ಎಷ್ಟಿದೆ ಎಂಬುದನ್ನು ತೋರಿಸುತ್ತದೆ. ಶೃಂಗಸಭೆಗೆ ಬಾಂಗ್ಲಾದೇಶವನ್ನು ಆಹ್ವಾನಿಸಲಾಗಿದೆ. ಆದರೆ ಪಾಕಿಸ್ತಾನವನ್ನು ಆಹ್ವಾನಿಸದಿರುವುದು ಆಶ್ಚರ್ಯಕರವಾಗಿದೆ ಎಂದು ಮತ್ತೊಬ್ಬ ಪಾಕಿಸ್ತಾನಿ ಸ್ಥಳೀಯರೊಬ್ಬರು ಹೇಳಿದ್ದಾರೆ.
ನವದೆಹಲಿ: ಜಿ20 ಶೃಂಗಸಭೆಗೆ (G20 Summit) ಆಗಮಿಸಿದ್ದ ಚೀನಾ (China) ನಿಯೋಗವು ಅನುಮಾನಾಸ್ಪದ ಬ್ಯಾಗ್‌ನೊಂದಿಗೆ (Suspicious Bag) ಹೋಟೆಲ್ ಪ್ರವೇಶಿಸಿದ್ದು, ತಪಾಸಣೆಗೆ ಒಳಪಡಿಸುವಂತೆ ಪೊಲೀಸರು ಒತ್ತಾಯಿಸಿದ ಬೆನ್ನಲ್ಲೇ ಅದನ್ನು ತನ್ನ ರಾಯಭಾರಿ ಕಚೇರಿಗೆ ಕಳುಹಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಚೀನಾದ ಪ್ರತಿನಿಧಿಗಳು ಚಾಣಕ್ಯಪುರಿಯಲ್ಲಿರುವ ತಾಜ್ ಪ್ಯಾಲೆಸ್ ಹೋಟೆಲ್‌ನಲ್ಲಿ ತಂಗಿದ್ದರು. ಹೋಟೆಲ್ ಪ್ರವೇಶಿಸುವ ವೇಳೆ ಅವರು ತಮ್ಮೊಂದಿಗೆ ಒಂದು ಬ್ಯಾಗ್ ತಂದಿದ್ದರು. ಭದ್ರತಾ ಶಿಷ್ಟಾಚಾರದ ಪ್ರಕಾರ ಬ್ಯಾಗ್ ಪರಿಶೀಲಿಸಲು ನೀಡುವಂತೆ ಪೊಲೀಸರು ಒತ್ತಾಯಿಸಿದರೂ ಬ್ಯಾಗ್ ನೀಡದೇ ಚೀನೀ ಪ್ರತಿನಿಧಿಗಳು ಹೋಟೇಲ್‌ನಲ್ಲಿ ಗದ್ದಲ ಸೃಷ್ಟಿಸಿದ್ದಾರೆ. ಇದನ್ನೂ ಓದಿ: ಕುಡಿಯುವ ನೀರಿನ ಹೆಸರಿನಲ್ಲಿ ತಮಿಳುನಾಡು ರೈತರಿಗೆ ಅನ್ಯಾಯ: ತ.ನಾಡು ಸಚಿವ
ಬ್ಯಾಗ್ ತಪಾಸಣೆಗೆ ನಿರಾಕರಿಸಿದ ಚೀನೀ ನಿಯೋಗವು ಬ್ಯಾಗ್ ಅನ್ನು ತನ್ನ ರಾಯಭಾರಿ ಕಚೇರಿಗೆ ಕಳುಹಿಸಿತು. ಸ್ವಲ್ಪ ಹೊತ್ತಿನ ಬಳಿಕ ಅಲ್ಲಿಂದ ಬಂದ ಅನೇಕ ಚೀನಾ ರಾಯಭಾರಿ ಕಚೇರಿ ಅಧಿಕಾರಿಗಳು ಅದನ್ನು ಪರೀಕ್ಷೆಗೆ ಒಳಪಡಿಸಿ ಹೋಟೆಲ್ ಒಳಗೆ ತೆಗೆದುಕೊಂಡು ಹೋಗಿದ್ದಾರೆ. ಚೀನಾ ನಿಯೋಗದ ಈ ವರ್ತನೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದನ್ನೂ ಓದಿ: ಭಾರತಕ್ಕೆ ಸ್ಪೇನ್‌ನ C-295 ಮಿಲಿಟರಿ ವಿಮಾನ ಹಸ್ತಾಂತರ – ಏನಿದರ ವಿಶೇಷ?
ಸೆಪ್ಟೆಂಬರ್ 9 ಮತ್ತು 10ರಂದು ನಡೆದ ಶೃಂಗಸಭೆಯಲ್ಲಿ ಚೀನಾದ ತಂಡವನ್ನು ಪ್ರೀಮಿಯರ್ ಲಿ ಕಿಯಾಂಗ್ ಪ್ರತಿನಿಧಿಸಿದರು. ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಅವರು ಶೃಂಗಸಭೆಗೆ ಗೈರಾದ ಹಿನ್ನೆಲೆ ಪ್ರೀಮಿಯರ್ ಲಿ ಕಿಯಾಂಗ್ ಭಾಗಿಯಾಗಿದ್ದರು. ಅವರೊಂದಿಗೆ ಬಂದ ನಿಯೋಗ ಅನುಮಾನಾಸ್ಪದ ರೀತಿಯಲ್ಲಿ ನಡೆದುಕೊಂಡಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್ ವಿರುದ್ಧ ಮುಂಬೈನಲ್ಲಿ ಎಫ್‌ಐಆರ್ ದಾಖಲು
ನವದೆಹಲಿ: ಜಿ20 ಶೃಂಗಸಭೆಗೆ (G20 Summit) ನಿಗಧಿಗಿಂತ 300 ಪಟ್ಟು ಅಧಿಕ ಹಣ ಖರ್ಚು ಮಾಡಿರುವ ಆರೋಪವನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ. ಪಿಐಬಿ ಮೂಲಕ ಸ್ಪಷ್ಟನೆ ನೀಡಿರುವ ಸರ್ಕಾರ ಜಿ20 ಶೃಂಗಸಭೆಯನ್ನು ಆಯೋಜಿಸುವುದಕ್ಕೆ ಖರ್ಚು ಸೀಮಿತವಾಗಿರದೇ ಮುಖ್ಯವಾಗಿ ಶಾಶ್ವತ ಆಸ್ತಿ ನಿರ್ಮಾಣಕ್ಕೆ ಖರ್ಚು ಮಾಡಲಾಗಿದೆ ಎಂದು ಹೇಳಿದೆ.
ಜಿ20 ಸಭೆಗೆ ಬಜೆಟ್‌ನಲ್ಲಿ (Budget) 990 ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ ಸರ್ಕಾರ 300% ಅಧಿಕ ಅಂದರೆ 4,100 ಕೋಟಿ ರೂ.ವರೆಗೆ ಖರ್ಚು ಮಾಡಿದೆ ಎಂದು ಮಮತಾ ಬ್ಯಾನರ್ಜಿ (Mamata Banerjee) ಪಕ್ಷದ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ (Saket Gokhale) ಪ್ರತಿಪಾದಿಸಿದ್ದರು. 2024ರ ಚುನಾವಣೆಗೂ ಮುನ್ನ ಮೋದಿಯವರ (Narendra Modi) ಸ್ವಯಂ ಜಾಹೀರಾತಿಗಾಗಿ 3,110 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಇದನ್ನು ಬಿಜೆಪಿ ಯಾಕೆ ಭರಿಸಬಾರದು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸನಾತನ ಧರ್ಮದ ತತ್ವಗಳ ವಿರುದ್ಧ ಹೋರಾಡಲು INDIA ಒಕ್ಕೂಟ ರಚಿಸಿದೆ: ಡಿಎಂಕೆ ನಾಯಕ ಪೊನ್ಮುಡಿ ವಿವಾದಾತ್ಮಕ ಹೇಳಿಕೆ
ಇದಕ್ಕೆ ಸ್ಪಷ್ಟನೆ ನೀಡಿದ ಸರ್ಕಾರ, ಇಂತಹ ಹೇಳಿಕೆಗಳು ತಪ್ಪುದಾರಿಗೆಳೆಯುವಂತಿವೆ ಎಂದು ಹೇಳಿದೆ. ಪ್ರಗತಿ ಮೈದಾನದಲ್ಲಿ ಇಂಡಿಯಾ ಟ್ರೇಡ್ ಪ್ರಮೋಷನ್ ಆರ್ಗನೈಸೇಶನ್ (ITPO) ಮತ್ತು ಇತರ ಮೂಲಸೌಕರ್ಯ ಅಭಿವೃದ್ಧಿಯಿಂದ ಶಾಶ್ವತ ಆಸ್ತಿ ಸೃಷ್ಟಿಗೆ ಈ ಮೊತ್ತವನ್ನು ಖರ್ಚು ಮಾಡಲಾಗಿದೆ. ಇದು ಕೇವಲ ಜಿ20 ಶೃಂಗಸಭೆಯನ್ನು ಆಯೋಜಿಸಲು ಸೀಮಿತವಾಗಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಹೊಸ ಸಂಸತ್ ಭವನದಲ್ಲಿ ಸಿಬ್ಬಂದಿಗೆ ನೂತನ ಡ್ರೆಸ್ ಕೋಡ್
ಭಾರತದ ಅಧ್ಯಕ್ಷತೆಯಲ್ಲಿ ಜಿ20 ಶೃಂಗಸಭೆಯು ನವದೆಹಲಿಯ ಭಾರತ್ ಮಂಟಪದಲ್ಲಿ ಅಂತಾರಾಷ್ಟ್ರೀಯ ಪ್ರದರ್ಶನ-ಕನ್ವೆನ್ಷನ್ ಸೆಂಟರ್ (IECC) ಪ್ರಗತಿ ಮೈದಾನದಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ನಡೆಯಿತು. 20 ಸದಸ್ಯ ರಾಷ್ಟ್ರಗಳು, ಒಂಭತ್ತು ಅತಿಥಿ ದೇಶಗಳು ಮತ್ತು ಹಲವು ಅಂತರಾಷ್ಟ್ರೀಯ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವು. ಇದನ್ನೂ ಓದಿ: ಔತಣಕೂಟಕ್ಕೆ ದೀದಿ ಹೋಗಿದ್ದಕ್ಕೆ ಕಾಂಗ್ರೆಸ್ ತಗಾದೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಸೌದಿಯ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ (Mohammed Bin Salman) ನಡುವೆ ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಸೋಮವಾರ ದ್ವಿಪಕ್ಷೀಯ ಮಾತುಕತೆ ನಡೆಯಿತು.
ಇಂಧನ ಭದ್ರತೆ, ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ಆರೋಗ್ಯ ರಕ್ಷಣೆ, ಆಹಾರ ಭದ್ರತೆ ಸೇರಿದಂತೆ ದ್ವಿಪಕ್ಷೀಯ ಸಹಕಾರದ ವಿವಿಧ ಕ್ಷೇತ್ರಗಳ ಕುರಿತು ಉಭಯ ನಾಯಕರು ಚರ್ಚಿಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ಸೌದಿ ಕ್ರೌನ್ ಪ್ರಿನ್ಸ್ ಫೆಬ್ರವರಿ 2019 ರಿಂದ 2ನೇ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದಾರೆ. ಜಿ20 ಶೃಂಗಸಭೆ (G20 Summit) ಹಿನ್ನಲೆ ಸೆಪ್ಟೆಂಬರ್ 8 ರಂದು ದೆಹಲಿಗೆ (Delhi) ಆಗಮಿಸಿದ್ದರು. ಪ್ರಧಾನಿ ನರೇಂದ್ರ ಮೋದಿ (Narendra Modi) ಜೊತೆಗೆ ದ್ವಿಪಕ್ಷೀಯ ಮಾತುಕತೆಗಾಗಿ ತಮ್ಮ ವಾಸ್ತವ್ಯವನ್ನು ವಿಸ್ತರಿಸಿದ್ದರು.
ಸೌದಿ ಕ್ರೌನ್ ಪ್ರಿನ್ಸ್ ಜೊತೆ ‘ಉತ್ಪಾದಕ ಮಾತುಕತೆ’ ನಡೆಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಉಭಯ ನಾಯಕರು ವ್ಯಾಪಾರ ಸಂಬಂಧಗಳು ಮತ್ತು ಗ್ರಿಡ್ ಸಂಪರ್ಕ, ನವೀಕರಿಸಬಹುದಾದ ಇಂಧನ, ಆಹಾರ ಭದ್ರತೆ ಮತ್ತು ಅರೆವಾಹಕಗಳು ಸೇರಿದಂತೆ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರಕ್ಕಾಗಿ ಅಗಾಧ ವ್ಯಾಪ್ತಿಯನ್ನು ಚರ್ಚಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮಾಲಿನ್ಯ ನಿಯಂತ್ರಣಕ್ಕೆ ಪಟಾಕಿ ನಿಷೇಧಿಸಿದ ದೆಹಲಿ ಸರ್ಕಾರ
ಹಿಸ್ ರಾಯಲ್ ಹೈನೆಸ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್ ಮತ್ತು ನಾನು ಬಹಳ ಉತ್ಪಾದಕ ಮಾತುಕತೆ ನಡೆಸಿದ್ದೇವೆ. ನಾವು ನಮ್ಮ ವ್ಯಾಪಾರ ಸಂಬಂಧಗಳನ್ನು ಪರಿಶೀಲಿಸಿದ್ದೇವೆ ಮತ್ತು ಮುಂದಿನ ದಿನಗಳಲ್ಲಿ ನಮ್ಮ ರಾಷ್ಟ್ರಗಳ ನಡುವಿನ ವಾಣಿಜ್ಯ ಸಂಬಂಧಗಳು ಇನ್ನಷ್ಟು ಬೆಳೆಯುತ್ತವೆ ಎಂಬ ವಿಶ್ವಾಸವಿದೆ. ಗ್ರಿಡ್‌ನಲ್ಲಿ ಸಹಕಾರದ ವ್ಯಾಪ್ತಿ ಸಂಪರ್ಕ, ನವೀಕರಿಸಬಹುದಾದ ಇಂಧನ, ಆಹಾರ ಭದ್ರತೆ, ಸೆಮಿಕಂಡಕ್ಟರ್‌ಗಳು ಮತ್ತು ಪೂರೈಕೆ ಸರಪಳಿಗಳು ಅಪಾರವಾಗಿವೆ ಎಂದು ಅವರು ಎಕ್ಸ್‌ನಲ್ಲಿ ಪೊಸ್ಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ಸೌದಿ ನಾಯಕ ರಾಷ್ಟ್ರಪತಿ ಭವನಕ್ಕೆ ತೆರಳಿದರು ಮತ್ತು ರಾಷ್ಟ್ರಪತಿ ಭವನದಲ್ಲಿ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಮತ್ತು ಇತರ ಸಚಿವರು ಸ್ವಾಗತಿಸಿದರು. ಸೌದಿ ಕ್ರೌನ್ ಪ್ರಿನ್ಸ್ ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಭಾರತವನ್ನು ಅಭಿನಂದಿಸಿದ್ದರು. ಭಾರತಕ್ಕೆ ಬಂದಿರುವುದಕ್ಕೆ ನನಗೆ ತುಂಬಾ ಖುಷಿಯಾಗಿದೆ. ಜಿ20 ರಾಷ್ಟ್ರಗಳಿಗೆ ಮತ್ತು ಜಗತ್ತಿಗೆ ಅನುಕೂಲವಾಗುವಂತಹ ಸಾಕಷ್ಟು ಘೋಷಣೆಗಳನ್ನು ಮಾಡಲಾಗಿದೆ. ಎರಡೂ ದೇಶಗಳಿಗೆ ಉತ್ತಮ ಭವಿಷ್ಯವನ್ನು ಸೃಷ್ಟಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.
ಸೌದಿ ಕ್ರೌನ್ ಪ್ರಿನ್ಸ್‌ನ ಭೇಟಿಯು ಆರ್ಥಿಕ ಸಹಕಾರದಲ್ಲಿ ಗಮನಾರ್ಹ ಮೈಲಿಗಲ್ಲು ಸಾಧಿಸಿದೆ. ದ್ವಿಪಕ್ಷೀಯ ವ್ಯಾಪಾರವು 2022-23 ರ ಆರ್ಥಿಕ ವರ್ಷದಲ್ಲಿ 52.75 ಶತಕೋಟಿ ಡಾಲರ್ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಭಾರತ ಮತ್ತು ಸೌದಿ ಅರೇಬಿಯಾ ಪರಸ್ಪರ ವ್ಯಾಪಾರ ಪಾಲುದಾರರಾಗಿ ಪ್ರಮುಖ ಸ್ಥಾನಗಳನ್ನು ಹೊಂದಿವೆ. ರಿಯಾದ್ ನವದೆಹಲಿಯ 4ನೇ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ಪ್ರತಿಯಾಗಿ ಇದಲ್ಲದೆ, ಜಿ20 ಶೃಂಗಸಭೆಯ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾವು ಭಾರತ ಸೇರಿದಂತೆ ಹಲವಾರು ದೇಶಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದೆ. ಗಣನೀಯವಾದ ರೈಲ್ವೆ ಮತ್ತು ಬಂದರು ಯೋಜನೆಯನ್ನು ಪ್ರಾರಂಭಿಸಲು ಭಾರತದಿಂದ ಮಧ್ಯಪ್ರಾಚ್ಯದಾದ್ಯಂತ ಯುರೋಪ್‌ಗೆ ವಾಣಿಜ್ಯ, ಶಕ್ತಿ ಮತ್ತು ಡೇಟಾದ ಹರಿವನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ. ಇದನ್ನೂ ಓದಿ: ಮಳೆಯಿಂದ ಭಾರತ ಮಂಟಪದಲ್ಲಿ ನಿಂತಿದ್ದ ನೀರನ್ನು ಕೂಡಲೇ ತೆರವುಗೊಳಿಸಲಾಗಿತ್ತು: PIB
ನವದೆಹಲಿ: ಜಿ20 ಶೃಂಗಸಭೆಯ (G20 Summit) ವೇದಿಕೆಯಾಗಿದ್ದ ಭಾರತ ಮಂಟಪ (Bharat Mandapam) ಹಾಗೂ ದೆಹಲಿಯ (Delhi) ಕೆಲವು ಪ್ರದೇಶಗಳು ಮಳೆಯಿಂದಾಗಿ ಜಲಾವೃತವಾಗಿತ್ತು. ನೀರು ನಿಂತಿದ್ದ ಪ್ರದೇಶಗಳನ್ನು ತೆರವುಗೊಳಿಸಲು ರಾತ್ರಿಯಿಡೀ ಸಿಬ್ಬಂದಿ ಶ್ರಮಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.
ಜಿ20 ಶೃಂಗಸಭೆಯ ಸ್ಥಳದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆಯೋಜಿಸಿದ್ದ ಔತಣಕೂಟದ ವೇಳೆ ಮಳೆ ಪ್ರಾರಂಭವಾಗಿತ್ತು. ಸಭೆಯ ಮುಖ್ಯ ಸ್ಥಳ ಹಾಗೂ ಇತರ ಪ್ರದೇಶಗಳಲ್ಲಿ ನಿಂತಿದ್ದ ನೀರನ್ನು 15 ನಿಮಿಷಗಳಲ್ಲಿ ಹೊರಹಾಕಲು ರಾಜ್ ನಿವಾಸ್ ಅಧಿಕಾರಿಗಳು ಸಿಬ್ಬಂದಿಗೆ ಹೇಳಿದ್ದಾರೆ. ಮರುದಿನ ಬೆಳಗ್ಗೆ ಮತ್ತೆ ಐಟಿಪಿಒ ಕಾಂಪ್ಲೆಕ್ಸ್‌ನ ಮುಖ್ಯ ದ್ವಾರದ ಬಳಿ ನೀರು ಸಂಗ್ರಹವಾಗಿತ್ತು.
ಕಟ್ಟಡವನ್ನು ಸರ್ಕಾರಿ ಸ್ವಾಮ್ಯದ ನಿರ್ಮಾಣ ಸಂಸ್ಥೆ ಕಟ್ಟಿದ್ದು, ರಾತ್ರಿಯ ಮಳೆಯಿಂದಾಗಿ ಜಲಾವೃತವಾಗಿದೆ. ಬೆಳಗ್ಗೆ 6 ಗಂಟೆ ವೇಳೆಗೆ ಎಲ್ಲಾ ನೀರು ಬರಿದಾಗಿದೆ. ಒಳಚರಂಡಿಗೆ ಯಾವುದೇ ಅಡೆತಡೆ ಅಥವಾ ಯಾವುದೇ ಸಮಸ್ಯೆಗಳಾಗಿಲ್ಲ ಎಂದು ರಾಷ್ಟ್ರೀಯ ಕಟ್ಟಡ ನಿರ್ಮಾಣ ನಿಗಮದ (NBCC ಭಾರತ) ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Bengaluru Bandh – ಇಂದು ರಾಜ್ಯ ಸರ್ಕಾರದ ವಿರುದ್ಧ ಖಾಸಗಿ ಸಮರ
ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಕಿಡಿ:
ಭಾರತ ಮಂಟಪದೊಳಗೆ ನೀರು ತುಂಬಿದ್ದ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಕಿಡಿ ಕಾರಿವೆ. ಇದು ಮೋದಿ ಸರ್ಕಾರದ ಟೊಳ್ಳು ಅಭಿವೃದ್ಧಿಯನ್ನು ಬಹಿರಂಪಡಿಸಿದೆ ಎಂದು ಟೀಕಿಸಿವೆ.
ಆದರೆ ಈ ಬಗ್ಗೆ ಎಕ್ಸ್‌ನಲ್ಲಿ ಬರೆದಿರುವ ಪಿಐಬಿ ಫ್ಯಾಕ್ಟ್ ಚೆಕ್, ಈ ಮಾಹಿತಿ ತಪ್ಪಾಗಿದ್ದು, ಗೊಂದಲಕ್ಕೀಡುಮಾಡುತ್ತಿದೆ ಎಂದು ತಿಳಿಸಿದೆ. ಮಳೆಯಿಂದಾಗಿ ಭಾರತ ಮಂಟಪದ ತೆರೆದ ಪ್ರದೇಶದಲ್ಲಿಷ್ಟೇ ಸಣ್ಣ ಪ್ರಮಾಣದಲ್ಲಿ ನೀರು ನಿಂತಿತ್ತು. ಅದನ್ನು ಪಂಪ್‌ಗಳ ಮೂಲಕ ತಕ್ಷಣವೇ ತೆರವುಗೊಳಿಸಲಾಗಿದೆ. ಪ್ರಸ್ತುತ ಪ್ರದೇಶದಲ್ಲಿ ನೀರು ನಿಲ್ಲದಂತೆ ಮಾಡಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಇಂಡಿಯಾ ಪಾಕ್ ಪಂದ್ಯಕ್ಕೆ ಮಳೆ ಕಾಟ – ಅಲ್ಲಾ ನಮ್ಮನ್ನು ಕಾಪಾಡಿದ ಎಂದ ಅಖ್ತರ್
– ವಿಮಾನದಲ್ಲಿ ತಾಂತ್ರಿಕ ದೋಷ, ಭಾರತದಲ್ಲೇ ಮತ್ತೊಂದು ದಿನ ಕಳೆಯಲಿರುವ ಕೆನಡಾ ಪ್ರಧಾನಿ
ನವದೆಹಲಿ: ಜಿ20 ಶೃಂಗಸಭೆಯ (G20 Summit) ಸಂದರ್ಭದಲ್ಲಿ ತಾವು ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೊಂದಿಗೆ ಖಲಿಸ್ತಾನಿಗಳ ಹಿಂಸಾಚಾರ ಹಾಗೂ ವಿದೇಶಿ ಹಸ್ತಕ್ಷೇಪದ ಕುರಿತು ಮಾತನಾಡಿರುವುದಾಗಿ ಕೆನಡಾದ (Canada) ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಭಾನುವಾರ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರುಡೋ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಾವು 2 ವಿಚಾರವಾಗಿ ಅನೇಕ ಚರ್ಚೆಗಳನ್ನು ನಡೆಸಿದ್ದೇವೆ ಎಂದು ಹೇಳಿದರು. ಖಲಿಸ್ತಾನಿ ಪ್ರತಿಭಟನೆಗಳ ಬಗ್ಗೆ ಮಾತನಾಡುತ್ತಾ, ಕೆನಡಾ ಯಾವಾಗಲೂ ಅಭಿವ್ಯಕ್ತಿ ಸ್ವಾತಂತ್ರ‍್ಯ, ಆತ್ಮಸಾಕ್ಷಿಯ ಸ್ವಾತಂತ್ರ‍್ಯ ಮತ್ತು ಶಾಂತಿಯುತ ಪ್ರತಿಭಟನೆಯ ಸ್ವಾತಂತ್ರ‍್ಯವನ್ನು ರಕ್ಷಿಸುತ್ತದೆ. ಮತ್ತು ಆ ದೇಶಕ್ಕೆ ಅವು ಅತ್ಯಂತ ಮಹತ್ವದ್ದಾಗಿವೆ. ಆದರೂ ಹಿಂಸೆಯನ್ನು ತಡೆಯಲು ಮತ್ತು ದ್ವೇಷದ ವಿರುದ್ಧ ಹಿಂದೆ ಸರಿಯಲು ನಾವು ಯಾವಾಗಲೂ ಸಿದ್ಧರಿರುತ್ತೇವೆ ಎಂದು ಹೇಳಿದರು.
ಸಮುದಾಯದ ವಿಷಯದ ಬಗ್ಗೆ ಹೇಳುವುದಾದರೆ, ಕೆಲವರ ಕ್ರಮಗಳು ಇಡೀ ಸಮುದಾಯ ಅಥವಾ ಕೆನಡಾವನ್ನು ಪ್ರತಿನಿಧಿಸುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಅದರ ಇನ್ನೊಂದು ಬದಿ ನಾವು ಕಾನೂನಿನ ನಿಯಮವನ್ನು ಗೌರವಿಸುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ್ದೇವೆ. ಮಾತ್ರವಲ್ಲದೇ ವಿದೇಶಿ ಹಸ್ತಕ್ಷೇಪದ ಬಗ್ಗೆ ಮಾತನಾಡಿ ನಾವು ಅದನ್ನು ಮಾಡಿದ್ದೇವೆ ಎಂದು ತಿಳಿಸಿರು. ಇದನ್ನೂ ಓದಿ: 2 ದಿನಗಳ ಜಿ-20 ಶೃಂಗಸಭೆ ಯಶಸ್ವಿ- ಗಾಂಧೀಜಿ ಸ್ಮಾರಕಕ್ಕೆ ವಿಶ್ವನಾಯಕರ ನಮನ
ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ನಾನು ಮತ್ತು ಕೆನಡಾದ ಪ್ರಧಾನ ಮಂತ್ರಿ ವಿವಿಧ ವಲಯಗಳಲ್ಲಿ ಭಾರತ-ಕೆನಡಾ ಬಾಂಧವ್ಯಗಳ ಸಂಪೂರ್ಣ ಶ್ರೇಣಿಯನ್ನು ಚರ್ಚಿಸಿದ್ದೇವೆ ಎಂದು ಹೇಳಿದ್ದಾರೆ.
ವಿಮಾನದಲ್ಲಿ ತಂತ್ರಿಕ ದೋಷ:
ಜಿ20 ಶೃಂಗಸಭೆಯ ಬಳಿಕ ಕೆನಡಾಗೆ ಹೊರಟಿದ್ದ ಜಸ್ಟಿನ್ ಟ್ರುಡೋ ಅವರ ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, ಈ ಹಿನ್ನೆಲೆ ಅವರು ಮತ್ತೊಂದು ದಿನ ಭಾರತದಲ್ಲೇ ಉಳಿಯಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: G20 Summit: ‘ಆರ್‌ಆರ್‌ಆರ್’ ಚಿತ್ರವನ್ನು ಹೊಗಳಿದ ಬ್ರೆಜಿಲ್ ಅಧ್ಯಕ್ಷ
ನವದೆಹಲಿ: 2024 ರ ಜಿ20 ಶೃಂಗಸಭೆಯ (G20 Summit) ಅಧ್ಯಕ್ಷತೆಯನ್ನು ಬ್ರೆಜಿಲ್ (Brazil) ದೇಶ ವಹಿಸಿಕೊಂಡಿದೆ. ನವದೆಹಲಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಜಿ20 ಶೃಂಗಸಭೆಯ ಅಧ್ಯಕ್ಷತೆ ಜವಾಬ್ದಾರಿಯನ್ನು ಬ್ರೆಜಿಲ್ ದೇಶದ ಅಧ್ಯಕ್ಷರಿಗೆ ಹಸ್ತಾಂತರಿಸಿದ್ದಾರೆ.
ಜಿ20 ಶೃಂಗಸಭೆಯ ಭಾಗವಾಗಿ 2ನೇ ದಿನದಂದು (ಭಾನುವಾರ) ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಳಗ್ಗೆ ವಿಶ್ವ ನಾಯಕರು ದೆಹಲಿಯಲ್ಲಿರುವ ರಾಜ್‌ಘಾಟ್‌ಗೆ ಭೇಟಿ ನೀಡಿ ಮಹಾತ್ಮ ಗಾಂಧಿ ಅವರಿಗೆ ಪುಷ್ಪನಮನ ಸಲ್ಲಿಸಿದರು. ಬಳಿಕ ನಡೆದ ಅಧಿವೇಶನದಲ್ಲಿ ಪ್ರಧಾನಿ ಮೋದಿ (Narendra Modi) ಅವರು ಮುಂದಿನ ವರ್ಷದ ಜಿ20 ಅಧ್ಯಕ್ಷತೆ ಜವಾಬ್ದಾರಿ ಹೊರಲು ಬ್ಯಾಟನ್ ಅನ್ನು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ (Luiz Inacio Lula da Silva) ಅವರಿಗೆ ನೀಡಿದ್ದಾರೆ. ಇದನ್ನೂ ಓದಿ: G-20 Summitː ಶಿಷ್ಟಾಚಾರ ಉಲ್ಲಂಘನೆ – ಜೋ ಬೈಡನ್ ಬೆಂಗಾವಲು ವಾಹನ ಚಾಲಕ ವಶಕ್ಕೆ
ಸೆಪ್ಟೆಂಬರ್ 9 ರಂದು ನವದೆಹಲಿಯ ಭಾರತ್ ಮಂಟಪಂ ಇಂಟರ್ನ್ಯಾಷನಲ್ ಎಕ್ಸಿಬಿಷನ್-ಕನ್ವೆನ್ಷನ್ ಸೆಂಟರ್‌ನಲ್ಲಿ G20 ನಾಯಕರ ಶೃಂಗಸಭೆಗೆ ಚಾಲನೆ ನೀಡಲಾಗಿತ್ತು. ಜಿ20 ನಾಯಕರು ಆಫ್ರಿಕಾ ಒಕ್ಕೂಟವನ್ನು ಖಾಯಂ ಸದಸ್ಯರನ್ನಾಗಿ ತಮ್ಮ ಗುಂಪಿಗೆ ಸ್ವಾಗತಿಸಿದರು.
ನವದೆಹಲಿ: ಜಿ20 ಶೃಂಗಸಭೆಯ (G20 Summit) ಹಿನ್ನೆಲೆ ಭಾರತಕ್ಕೆ ಆಗಮಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) ಅವರ ಬೆಂಗಾವಲು ವಾಹನ ಪಡೆಯ ಚಾಲಕನೊಬ್ಬ ಶಿಷ್ಟಾಚಾರ (ಪ್ರೋಟೋಕಾಲ್) ಉಲ್ಲಂಘಿಸಿದ್ದರಿಂದಾಗಿ ದೆಹಲಿಯಲ್ಲಿ ವಶಕ್ಕೆ ಪಡೆಯಲಾಯಿತು.
G-20 ಶೃಂಗಸಭೆ ಹಿನ್ನೆಲೆಯಲ್ಲಿ UAE ಅಧ್ಯಕ್ಷ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ತಂಗಿದ್ದ ತಾಜ್ ಹೋಟೆಲ್‌ಗೆ ಅಮೆರಿಕ ಅಧ್ಯಕ್ಷರ ಬೆಂಗಾವಲು ಪಡೆಯ ಕಾರು ಪ್ರವೇಶಿಸಿದ ನಂತರ ಈ ಘಟನೆ ನಡೆದಿದೆ. ವಾಹನ ಚಾಲನೆ ವೇಳೆ ನಿರ್ಲಕ್ಷ್ಯ ತೋರಿದ್ದರಿಂದಾಗಿ ಚಾಲಕನನ್ನ ವಶಕ್ಕೆ ಪಡೆಯಲಾಗಿತ್ತು. ವಿಚಾರಣೆಯ ನಂತರ ಆತನನ್ನ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: Aditya-L1: ಮತ್ತೊಂದು ಎತ್ತರದ ಕಕ್ಷೆ ಸೇರಿದ ಆದಿತ್ಯ ನೌಕೆ – ಸೂರ್ಯನಿಗೆ ಇನ್ನಷ್ಟು ಹತ್ತಿರ
ಬೆಂಗಾವಲು ವಾಹನದಲ್ಲಿ ಹಲವು ಸ್ಟಿಕರ್‌ಗಳಿರುವುದಾಗಿಯೂ ಭದ್ರತಾ ಸಿಬ್ಬಂದಿ ಸಂದೇಶ ರವಾನಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದಾಗ ಕಾರು ಚಾಲಕನು ಜೋ ಬೈಡನ್ ತಂಗಿದ್ದ ಐಟಿಸಿ ಮೌರ್ಯ ಹೋಟೆಲ್‌ಗೆ ಬೆಳಗ್ಗೆ 9:30ಕ್ಕೆ ಬರಬೇಕಿತ್ತು. ಆದರೆ ಚಾಲಕ ಲೋಧಿ ಎಸ್ಟೇಟ್ ಪ್ರದೇಶದಿಂದ ಬಂದ ಉದ್ಯಮಿಯನ್ನ ತಾಜ್‌ಗೆ ಬಿಡಬೇಕಾಗಿದ್ದರಿಂದ ತಾಜ್ ಹೋಟೆಲ್‌ಗೆ ಅದೇ ಕಾರಿನಲ್ಲಿ ಬಂದಿದ್ದ. ಆತನಿಗೆ ಪ್ರೋಟೋಕಾಲ್ (ಶಿಷ್ಟಾಚಾರ) (Protocol) ಬಗ್ಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಆತನನ್ನ ವಿಚಾರಣೆ ನಡೆಸಿದ ನಂತರ ಬಿಡುಗಡೆ ಮಾಡಲಾಯಿತು. ಇದನ್ನೂ ಓದಿ: G20 Summit: ವಿಶ್ವ ನಾಯಕರಿಂದ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ
ಇದಕ್ಕೂ ಮುನ್ನ ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್, ವಿಶ್ವ ಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ ಮತ್ತು ಇತರ ನಾಯಕರು, ಪ್ರತಿನಿಧಿಗಳು ಮಹಾತ್ಮ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.
ನವದೆಹಲಿ: ಭಾರತದ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ (New Delhi) ಆಯೋಜಿಸಿರುವ ಜಿ20 ಶೃಂಗಸಭೆಯ (G20 Summit) ಮೊದಲ ದಿನದ ಅಧಿವೇಶನಗಳನ್ನು ಭಾರತ ಯಶಸ್ವಿಯಾಗಿ ಮುಗಿಸಿದೆ. ಇಂದು ಕೂಡ ದೆಹಲಿಯಲ್ಲಿ ಶೃಂಗಸಭೆ ನಡೆಯಲಿದ್ದು, ವಿಶ್ವ ನಾಯಕರು ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಇಂದು ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮಗಳೇನು?
ಬೆಳಗ್ಗೆ 8:15 ರಿಂದ 9 ರ ವರೆಗೆ ಗಾಂಧಿ ಸಮಾಧಿ ಇರುವ ರಾಜ್‌ಘಾಟ್‌ಗೆ ವಿಶ್ವ ನಾಯಕರು ಮತ್ತು ನಿಯೋಗಗಳ ಮುಖ್ಯಸ್ಥರು ಆಗಮಿಸಲಿದ್ದಾರೆ. ರಾಜ್‌ಘಾಟ್‌ನಲ್ಲಿರುವ ಪುಸ್ತಕಕ್ಕೆ ಸಹಿ ಮಾಡಲಿದ್ದಾರೆ. ನಂತರ ಬೆಳಗ್ಗೆ 9 ರಿಂದ 9:20 ರ ನಡುವೆ ಮಹಾತ್ಮಾ ಗಾಂಧಿ ಸಮಾಧಿಗೆ ಮಾಲಾರ್ಪಣೆ ಮಾಡಲಿದ್ದಾರೆ. ಇದನ್ನೂ ಓದಿ: ಭಾರತ-ಮಧ್ಯಪ್ರಾಚ್ಯ-ಯುರೋಪ್ ನಡುವೆ ಮೆಗಾ ಕಾರಿಡಾರ್; ಜಿ20 ಶೃಂಗಸಭೆಯಲ್ಲಿ ಬಿಗ್ ಡೀಲ್
ಬಳಿಕ ನಾಯಕರು ಮತ್ತು ನಿಯೋಗದ ಮುಖ್ಯಸ್ಥರು ಭಾರತ್ ಮಂಟಪ ಕಡೆಗೆ ಪ್ರಯಾಣ ಮಾಡಲಿದ್ದಾರೆ. ಬೆಳಗ್ಗೆ 9:40 ರಿಂದ 10:15 ರ ಹೊತ್ತಿಗೆ ಭಾರತ ಮಂಟಪಕ್ಕೆ ನಾಯಕರು ಮತ್ತು ನಿಯೋಗದ ಮುಖ್ಯಸ್ಥರ ಆಗಮಿಸಲಿದ್ದಾರೆ.
ಬೆಳಗ್ಗೆ 10:15 ರಿಂದ 10:30 ರ ನಡುವೆ ಭಾರತ ಮಂಟಪದ ಸೌತ್ ಪ್ಲಾಜಾದಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ವಿಶ್ವ ನಾಯಕರು ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30 ರವರೆಗೆ ಶೃಂಗಸಭೆಯ ಮೂರನೇ ಅಧಿವೇಶನ ‘ಒಂದು ಭವಿಷ್ಯ’ದಲ್ಲಿ ಭಾಗಿಯಾಗಲಿದ್ದಾರೆ. ಕಡೆಯದಾಗಿ ನವದೆಹಲಿ ನಾಯಕರ ಘೋಷಣೆಯನ್ನು ಅಂಗೀಕಾರಿಸಲಾಗುವುದು. ಇದನ್ನೂ ಓದಿ: G20 Summit – ಜಾಗತಿಕ ಜೈವಿಕ ಇಂಧನ ಮೈತ್ರಿಕೂಟಕ್ಕೆ ಮೋದಿ ಚಾಲನೆ