Tag: G.T.Deve gowda

  • ನಾನು, ನನ್ನ ಮಗ ಜೈಲಿಗೆ ಹೋಗುವಂತಹ ತಪ್ಪು ಮಾಡಿಲ್ಲ: ಹೆಚ್.ಡಿ.ರೇವಣ್ಣಗೆ ಜಿಟಿಡಿ ತಿರುಗೇಟು

    ನಾನು, ನನ್ನ ಮಗ ಜೈಲಿಗೆ ಹೋಗುವಂತಹ ತಪ್ಪು ಮಾಡಿಲ್ಲ: ಹೆಚ್.ಡಿ.ರೇವಣ್ಣಗೆ ಜಿಟಿಡಿ ತಿರುಗೇಟು

    – ರೇವಣ್ಣ ಅವರೇ ನನ್ನ ಕುಟುಂಬವೇ ಬೇರೆ ನಿಮ್ಮದೇ ಬೇರೆ ಎಂದು ಟಾಂಗ್

    ಮೈಸೂರು: ನಾನು ಮತ್ತು ನನ್ನ ಮಗ ಜೈಲಿಗೆ ಹೋಗುವಂತಹ ಯಾವ ತಪ್ಪು ಮಾಡಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಮಾಜಿ ಸಚಿವ ಜಿ.ಟಿ.ದೇವೇಗೌಡ ತಿರುಗೇಟು ನೀಡಿದರು.

    ಜಿ.ಟಿ.ದೇವೇಗೌಡ ಮತ್ತು ಅವರ ಮಗನನ್ನು ಕಾಂಗ್ರೆಸ್ ಸರ್ಕಾರ ಜೈಲಿಗೆ ಕಳುಹಿಸಲು ಮುಂದಾಗಿತ್ತು ಎಂಬ ಹೆಚ್.ಡಿ.ರೇವಣ್ಣ ಹೇಳಿಕೆಗೆ ಮೈಸೂರಿನಲ್ಲಿ ಜಿಟಿಡಿ ಟಾಂಗ್ ಕೊಟ್ಟರು. ಕ್ಷೇತ್ರದ ಜನರ ಸೇವೆ ಮಾಡುವುದು ಮಾತ್ರ ನನ್ನ ತಲೆಯಲ್ಲಿ ಇರುವುದು. ಅದು ಬಿಟ್ಟರೆ ನನ್ನ ತಲೆಯಲ್ಲಿ ಬೇರೆ ಯೋಚನೆ ಇಲ್ಲ. ನನ್ನ ತಂದೆ ಪಟೇಲರು. ಅವರ ಮೇಲೆ ಒಂದೇ ಒಂದು ಪೊಲೀಸ್ ಕೇಸ್ ಇರಲಿಲ್ಲ. ನಾನು ಸಾರ್ವಜನಿಕ ಜೀವನಕ್ಕೆ ಬಂದು 54 ವರ್ಷವಾಗಿದೆ. ನನ್ನ ಮೇಲೆ ಇದುವರೆಗೆ ಒಂದೇ ಒಂದು ಕೇಸ್ ಕೂಡ ಪೊಲೀಸ್ ಠಾಣೆಯಲ್ಲಿ ಇಲ್ಲ. ನನ್ನ ಮಗನ ಮೇಲೂ ಇಲ್ಲ ಎಂದು ಸ್ಪಷ್ಟಪಡಿಸಿದರು.

    ರಾಜ್ಯ ಗೃಹ ಮಂಡಳಿ ಅಧ್ಯಕ್ಷನಾಗಿದ್ದಾಗ ಜೆಡಿಎಸ್ – ಕಾಂಗ್ರೆಸ್ ಇಬ್ಬರು ಸೇರಿ ಅದರಲ್ಲಿ ಅವ್ಯವಹಾರ ಆಗಿದೆ ಎಂದು ತನಿಖೆ ಮಾಡಿಸಿದ್ದರು ಅಷ್ಟೆ. ನಾನು ಇದುವರೆಗೆ ಯಾರಿಂದಲೂ ನನ್ನ ರಕ್ಷಣೆ ಮಾಡಿ ಎಂದು ದೂರವಾಣಿ ಕರೆ ಮಾಡಿಸಿಲ್ಲ. ಕುಮಾರಸ್ವಾಮಿಯಿಂದ ನಾನು ಯಾವುದೇ ಕರೆ ಮಾಡಿಸಿ ನನ್ನ ರಕ್ಷಣೆ ಮಾಡಿಸಿಕೊಂಡಿಲ್ಲ. ನಾನು ನನ್ನ ಮಗ ಬಂಧನವಾಗುವಂತಹ ಯಾವ ಅಪರಾಧವೂ ಮಾಡಿಲ್ಲ ಟಾಂಗ್ ಕೊಟ್ಟರು.

    ರೇವಣ್ಣ ಅವರೇ ನನ್ನ ಕುಟುಂಬವೇ ಬೇರೆ ನಿಮ್ಮದೇ ಬೇರೆ. ನಾನು ಬೆಳೆದಿರುವ ಪರಿಸರವೇ ಬೇರೆ. ನಾನು ನನ್ನ ಮಗ ಯಾವತ್ತೂ ಆ ರೀತಿಯ ತಪ್ಪು ಮಾಡಿಲ್ಲ. ನಾನು ನನ್ನ ಮಗ ಯಾವ ಅಪರಾಧವೂ ಮಾಡಿಲ್ಲ. ಬಂಧಿಸುವಂತಹ ಪ್ರಶ್ನೆಯೆ ಬಂದಿಲ್ಲ. ಸಿದ್ದರಾಮಯ್ಯ ಸೇರಿದಂತೆ ಯಾವ ಸಿಎಂ ಕೂಡ ನನ್ನ ಬಂಧಿಸುವಂತೆ ಹೇಳಿಲ್ಲ. ಸಿದ್ದರಾಮಯ್ಯ ಸೇಡು ತೀರಿಸಿಕೊಳ್ಳಲು ರಾಜಕೀಯ ಮಾಡಿದ್ದಾರೆ. ಆದರೆ ಬಂಧಿಸುವಂತಹ ರೀತಿ ವರ್ತಿಸಿಲ್ಲ. ರೇವಣ್ಣ ಯಾಕೆ ಈ ರೀತಿ ಹೇಳಿದ್ರು ಗೊತ್ತಿಲ್ಲ. ವಿಧಾನಸಭೆ ಅಧಿವೇಶನದಲ್ಲಿ ಅವರು ಸಿಗುತ್ತಾರೆ. ಅವತ್ತೇ ಅವರ ಬಳಿ ಕೇಳಿ ಹೇಳುತ್ತೇನೆ. ನನ್ನ ವಿರುದ್ಧ ಯಾರೂ ಬಂಧಿಸುವಂತಹ ಸೇಡಿನ ರಾಜಕಾರಣ ಮಾಡಿಲ್ಲ. ನಾನು ಕೂಡ ಆ ರೀತಿ ನಡೆದುಕೊಂಡಿಲ್ಲ ಎಂದು ತಿಳಿಸಿದರು.

    ಬಂಧನದ ಸೇಡನ್ನು ಯಾರು ಇಟ್ಟುಕೊಂಡಿಲ್ಲ. ನನ್ನ ತಂದೆ, ನಾನು ಮತ್ತು ನನ್ನ ಮಗ ಯಾವತ್ತೂ ಜೈಲಿಗೆ ಹೋಗುವ ಸ್ಥಿತಿ ಬಂದಿಲ್ಲ. ಮುಂದೆಯೂ ಅಂತಾ ಸ್ಥಿತಿ ಬರುವುದು ಬೇಡ ಅಂತಾ ಪ್ರಾರ್ಥಿಸುತ್ತೇನೆ. ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗುವುದನ್ನು ತಪ್ಪಿಸಿದ್ದು ಹೆಚ್.ಡಿ.ರೇವಣ್ಣ. 20 ರಲ್ಲಿ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಬೇಕಿತ್ತು. ಈ ಬಗ್ಗೆ ರೇವಣ್ಣ ಒಪ್ಪಿಕೊಂಡು ಕ್ಷಮೆ ಕೂಡ ಯಾಚಿಸಿದ್ದಾರೆ. ಅವರು ಡಿಸಿಎಂ ಆಗಬೇಕಿತ್ತು. ಅದು ಆಗುವುದಿಲ್ಲ ಅನ್ನೋ ಕಾರಣಕ್ಕೆ ತಪ್ಪಿಸಿದರು. ದೊಡ್ಡ ಗೌಡರ ಜೊತೆ ಮಾತನಾಡಿ ಯಡಿಯೂರಪ್ಪ ಅವರಿಗೆ ಸಿಎಂ ಸ್ಥಾನ ತಪ್ಪಿಸಿದರು ಎಂದರು.

    ಇನ್ಮುಂದೆ ನಾನು ರಾಜಕೀಯವಾಗಿ ಯಾರ ವಿರುದ್ಧವೂ ಮಾತನಾಡುವುದಿಲ್ಲ. ನನ್ನನ್ನು ಕಳ್ಳ ಅಂದರೂ ಸಹ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇದೇ ಕೊನೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.

  • ನಿಖಿಲ್ ಗೆಲ್ಲಿಸಲು ಆಗದಿದ್ದ ಮೇಲೆ ಯಾಕೆ ಕಣಕ್ಕೆ ಇಳಿಸಿದ್ರು: ಹೆಚ್‌ಡಿಕೆ ವಿರುದ್ಧ ದೇವೇಗೌಡ ಗರಂ

    ನಿಖಿಲ್ ಗೆಲ್ಲಿಸಲು ಆಗದಿದ್ದ ಮೇಲೆ ಯಾಕೆ ಕಣಕ್ಕೆ ಇಳಿಸಿದ್ರು: ಹೆಚ್‌ಡಿಕೆ ವಿರುದ್ಧ ದೇವೇಗೌಡ ಗರಂ

    – ನೋವುಂಡು ಜೆಡಿಎಸ್‌ನಲ್ಲೇ ಇದ್ದೀನಿ
    – ಹೆಚ್.ಡಿ.ದೇವೇಗೌಡರ ಬಳಿ ಈಗ ಕುಮಾರಸ್ವಾಮಿ ಬಿಟ್ಟರೆ ಬೇರೆ ಯಾರದ್ದೂ ನಡೆಯುತ್ತಿಲ್ಲ

    ಮೈಸೂರು: ನಿಖಿಲ್ ಗೆಲ್ಲಿಸಲು ಆಗದಿದ್ದ ಮೇಲೆ ಯಾಕೆ ಕಣಕ್ಕೆ ಇಳಿಸಿದ್ರು ಎಂದು ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ವಿರುದ್ಧ ಶಾಸಕ ಜಿ.ಟಿ.ದೇವೇಗೌಡ (G.T.Deve Gowda) ಗರಂ ಆದರು.

    ಮೈಸೂರಿನಲ್ಲಿ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನೋವುಂಡು ಕೊಂಡು ಜೆಡಿಎಸ್‌ನಲ್ಲಿದ್ದೀನಿ. ಇನ್ನೂ ಎಷ್ಟು ದಿನ ನೋವುಂಡು ಇಲ್ಲೇ ಇರು ಅಂತಾ ನನ್ನ ಕ್ಷೇತ್ರದ ಜನ, ನನ್ನ ಕಾರ್ಯಕರ್ತರು ಹೇಳುತ್ತಾರೋ ಅಷ್ಟು ದಿನ ಇರ್ತಿನಿ. ಜನರೇ ಎಲ್ಲಾ ತೀರ್ಮಾನ ಮಾಡಲಿ. ನನ್ನ ಕಾಂಗ್ರೆಸ್‌ಗೆ ಕಳಿಸೋಕೆ ಜೆಡಿಎಸ್ ನಾಯಕರು ಯಾರು? ನಾನೇನೂ ಪಕ್ಷ ಬಿಡ್ತೀನಿ ಅಂತಾ ಎಲ್ಲೂ ಹೇಳಿಲ್ಲ ಎಂದು ತಿಳಿಸಿದರು.

    ನಿಖಿಲ್ ಗೆಲ್ಲಿಸಲು ಆಗದಿದ್ದ ಮೇಲೆ ಯಾಕೆ ಕಣಕ್ಕೆ ಇಳಿಸಿದ್ರು? ಸಿ.ಪಿ. ಯೋಗೇಶ್ವರ್‌ಗೆ ಮೊದಲೇ ಟಿಕೆಟ್ ಘೋಷಿಸಿದ್ದರೆ, ಇವತ್ತು ಈ ಪರಿಸ್ಥಿತಿ ಬರ್ತಿತ್ತಾ ನಿಮಗೆ ಎಂದು ಜಿಟಿಡಿ ಅಸಮಾಧಾನ ಹೊರಹಾಕಿದರು.

    ನನಗೆ ಕುಮಾರಸ್ವಾಮಿ ಕೊನೆ ಕ್ಷಣದಲ್ಲಿ ಸಭಾ ನಾಯಕನ ಸ್ಥಾನ ತಪ್ಪಿಸಿದ್ರು. ನನಗೆ ಯಾರೊಬ್ಬರು ಪ್ರಚಾರಕ್ಕೆ ಬನ್ನಿ ಎಂದು ಪೋನ್ ಮಾಡಿ ಕರೆಯಲೇ ಇಲ್ಲ. ನಾನು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ. ನನಗೆ ಪ್ರಚಾರಕ್ಕೆ ಕರೆಯದಿದ್ದರೆ ಹೇಗೆ ಹೇಳಿ? ನನಗೆ ಹೇಳದೆ ಯಾವತ್ತೂ ಹೆಚ್.ಡಿ.ದೇವೇಗೌಡರು ಮೈಸೂರಿಗೆ ಬಂದವರೇ ಅಲ್ಲ. ಆದರೆ ಈಗ ಮೈಸೂರಿಗೆ ಬಂದರೂ, ನನಗೆ ಒಂದು ಮಾತು ಹೇಳುತ್ತಿಲ್ಲ. ಇಷ್ಟು ಬೇಡವಾಗಿದ್ದೇನೆ. ನಾನು ಯಾವ ತಪ್ಪು ಮಾಡಿದ್ದೇನೆ ಹೇಳಿ ಎಂದು ಪ್ರಶ್ನಿಸಿದರು.

    ಮೈಸೂರಿನಲ್ಲಿ ಕುಮಾರಣ್ಣ ಕುಮಾರಣ್ಣ ಅಂತಾ ಮೊದಲು ಅಚ್ಚೆ ಒತ್ತಿದ್ದು ನಾನೇ. ಇದು ಕುಮಾರಸ್ವಾಮಿಗೆ ಮರೆತು ಹೋಗಿದೆ. ಯಾವುದೋ ಒಂದು ವಿಚಾರಕ್ಕೆ ಕುಮಾರಸ್ವಾಮಿ ನನ್ನ ಏಕವಚನದಲ್ಲಿ ಮನ ಬಂದಂತೆ ಬೈಯ್ದಿದ್ದರು. ಅವತ್ತೆ ಹೇಳಿದ್ದೆ ನಾನು ಹಿರಿಯ ಇದ್ದೀನಿ ಬೈಯ್ಯ ಬೇಡಿ ಅಂತಾ. ಹೆಚ್.ಡಿ.ದೇವೇಗೌಡರ ಬಳಿ ಈಗ ಕುಮಾರಸ್ವಾಮಿಯದ್ದು ಬಿಟ್ಟರೆ ಬೇರೆ ಯಾರದ್ದು ನಡೆಯುತ್ತಿಲ್ಲ. ಅವರು ಹೇಳಿದ ಜಾಗಕ್ಕೆ ದೇವೇಗೌಡರು ಸೈನ್ ಹಾಕ್ತಿದ್ದಾರೆ ಅಷ್ಟೆ ಎಂದು ಹೇಳಿದರು.

    ನಾನು ಕುಮಾರಸ್ವಾಮಿಗಾಗಿ ದುಡಿದಿದ್ದನ್ನು ಅವರು ಯಾವತ್ತೂ ನೆನೆಸಿಕೊಳ್ಳಲೇ ಇಲ್ಲ. ಎಲ್ಲಾ ನಾನೇ ಮಾಡಿದ್ದು, ನಾನೇ ಮಾಡಿದ್ದು ಅಂತಾ ಕುಮಾರಸ್ವಾಮಿ ಹೇಳಿಕೊಳ್ಳುತ್ತಾರೆ. ನಾವೇನು ಅವರಿಗೆ ದುಡಿಯಲೇ ಇಲ್ವಾ? ಕಾಂಗ್ರೆಸ್ ಬಿರುಗಾಳಿಯಲ್ಲಿ ನಾನು, ನನ್ನ ಮಗ ಗೆದ್ದಿದ್ದೇವೆ. ನಾವು ಮಾಡಿಕೊಂಡ ಸಾಲ, ನಮ್ಮ ಕಷ್ಟ, ನಮ್ಮ ನೋವು, ನಮಗೆ ಮಾತ್ರ ಗೊತ್ತು ಎಂದು ನೊಂದು ನುಡಿದರು.

  • ಮಂಡ್ಯ ಲೋಕಸಭೆ ಟಿಕೆಟ್‌ ಜೆಡಿಎಸ್‌ಗೆ ಕನ್ಫರ್ಮ್‌: ಜಿ.ಟಿ.ದೇವೇಗೌಡ

    ಮಂಡ್ಯ ಲೋಕಸಭೆ ಟಿಕೆಟ್‌ ಜೆಡಿಎಸ್‌ಗೆ ಕನ್ಫರ್ಮ್‌: ಜಿ.ಟಿ.ದೇವೇಗೌಡ

    ರಾಮನಗರ: ಮಂಡ್ಯ (Mandya) ಲೋಕಸಭೆ ಟಿಕೆಟ್‌ ಜೆಡಿಎಸ್‌ಗೆ (JDS) ಕನ್ಫರ್ಮ್‌. ಅಭ್ಯರ್ಥಿ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹಿಸುತ್ತೇವೆ ಎಂದು ಶಾಸಕ ಜಿ.ಟಿ.ದೇವೇಗೌಡ (G.T.Deve Gowda) ಹೇಳಿಕೆ ನೀಡಿದರು.

    ಬಿಡದಿಯಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್‌.ಡಿ.ಕುಮಾರಸ್ವಾಮಿ (H.D.Kumaraswamy) ತೋಟದ ಮನೆಯಲ್ಲಿ ಭಾನುವಾರ ಮಂಡ್ಯ ಜೆಡಿಎಸ್ ನಾಯಕರ ಸಭೆ ನಡೆಸಲಾಯಿತು. ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿಡಿ, ಮಂಡ್ಯ ಸ್ಥಳೀಯ ನಾಯಕರ ಸಭೆ ಮಾಡಿ ಚುನಾವಣೆಗೆ ಸಿದ್ಧತೆ ಮಾಡ್ತಿದ್ದೇವೆ. ಅಭ್ಯರ್ಥಿ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮೋದಿ ಅವ್ರು ನನ್ನ ಪರವಾಗಿ ಕೆಲಸ ಮಾಡಿದ್ದಾರೆ: ಸುಮಲತಾ

    ಟಿಕೆಟ್‌ಗಾಗಿ ಸುಮಲತಾ ಸಭೆ ವಿಚಾರವಾಗಿ ಮಾತನಾಡಿ, ಸುಮಲತಾ ಅವರು ಬಿಜೆಪಿ ಅಧಿಕೃತ ಮೆಂಬರ್ ಅಲ್ಲ. ಆದರೂ ಅವರು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ. ಮಂಡ್ಯ ಕೇಳಿದರೆ ಬೆಂಗಳೂರು ಉತ್ತರ ಕೊಡಬಹುದು ಎಂಬ ಲೆಕ್ಕಾಚಾರ ಇರಬಹುದು. ನನಗೂ ಕೆಲವರು ಈ ಬಗ್ಗೆ ಹೇಳ್ತಿದ್ದಾರೆ. ಅಭ್ಯರ್ಥಿ ಯಾರೆಂದು ಇನ್ನೂ ನಿರ್ಧಾರ ಆಗಿಲ್ಲ ಎಂದು ಹೇಳಿದರು.

    ಮಾಜಿ ಶಾಸಕ ಸುರೇಶ್ ಗೌಡ ಮಾತನಾಡಿ, ಮಂಡ್ಯ ಟಿಕೆಟ್ ಬಗ್ಗೆ ಸಭೆ ಮಾಡಲಾಗ್ತಿದೆ. ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ಆಗಲಿದೆ. ಸುಮಲತಾ ಅವರು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ. ಅಂತಿಮವಾಗಿ ಮೈತ್ರಿ ನಾಯಕರು ಈ ಬಗ್ಗೆ ನಿರ್ಧಾರ ಮಾಡ್ತಾರೆ ಎಂದು ಮಾತನಾಡಿದರು. ಇದನ್ನೂ ಓದಿ: ಈಗ ನಡೆಯುವುದು ಗ್ಯಾರಂಟಿ ಬೇಕಾ? ಬೇಡವಾ? ಎನ್ನುವ ಚುನಾವಣೆ: ಹೆಚ್.ಸಿ.ಬಾಲಕೃಷ್ಣ

  • ರಾಮಲಲ್ಲಾ ವಿಗ್ರಹ ಕೆತ್ತನೆಗೆ ಬಳಸಿರುವ ಕಪ್ಪು ಶಿಲೆ ಸಿಕ್ಕ ಜಾಗದಲ್ಲೇ ರಾಮಮಂದಿರ – ಜ.22 ಕ್ಕೆ ಭೂಮಿಪೂಜೆ

    ರಾಮಲಲ್ಲಾ ವಿಗ್ರಹ ಕೆತ್ತನೆಗೆ ಬಳಸಿರುವ ಕಪ್ಪು ಶಿಲೆ ಸಿಕ್ಕ ಜಾಗದಲ್ಲೇ ರಾಮಮಂದಿರ – ಜ.22 ಕ್ಕೆ ಭೂಮಿಪೂಜೆ

    – ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಹಾರೋಹಳ್ಳಿ ಗ್ರಾಮದಲ್ಲಿ ಸಿಕ್ಕಿತ್ತು ಕಪ್ಪು ಶಿಲೆ
    – ಜಮೀನಿನ ಮಾಲೀಕ, ಭೂಮಿ ಅಗೆದು ಶಿಲೆ ತೆಗೆದವರನ್ನೂ ಅಯೋಧ್ಯೆಗೆ ಕಳಿಸ್ತೀವಿ
    – ಪಬ್ಲಿಕ್‌ ಟಿವಿ ಜೊತೆ ಶಾಸಕ ಜಿ.ಟಿ.ದೇವೇಗೌಡ ಮಾತು

    ಮೈಸೂರು: ನಗರದ ಚಾಮುಂಡೇಶ್ವರಿ ಕ್ಷೇತ್ರದ ಹಾರೋಹಳ್ಳಿ ಗ್ರಾಮದಲ್ಲಿ ಸಿಕ್ಕ ಕಪ್ಪು ಶಿಲೆಯಲ್ಲಿ ಅಯೋಧ್ಯೆಯ ಬಾಲರಾಮನನ್ನು ಕೆತ್ತಲಾಗಿದೆ. ಹೀಗಾಗಿ ಈ ಕಪ್ಪು ಶಿಲೆ ಸಿಕ್ಕ ಜಾಗದಲ್ಲೇ ಶ್ರೀರಾಮ ದೇವಸ್ಥಾನ ಕಟ್ಟುವ ನಿರ್ಧಾರ ಮಾಡಲಾಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡ (G.T.Deve Gowda) ತಿಳಿಸಿದ್ದಾರೆ.

    ಅಯೋಧ್ಯೆಯ (Ayodhya) ಬಾಲರಾಮನ ಕೆತ್ತನೆಗೆ ಬಳಕೆಯಾದ ಕಪ್ಪು ಶಿಲೆ ಸಿಕ್ಕ ಜಮೀನಿನಲ್ಲಿ ಶ್ರೀರಾಮ ಮಂದಿರ (Ram Mandir) ಕಟ್ಟುವ ನಿರ್ಧಾರ ಮಾಡಲಾಗಿದೆ. ಜನವರಿ 22 ರಂದು ಬೆಳಗ್ಗೆ ಈ ದೇವಸ್ಥಾನದ ಭೂಮಿಪೂಜೆ ನಡೆಯಲಿದೆ ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಮೋದಿ ಕಠಿಣ ವ್ರತ – ಪ್ರತಿದಿನ 1 ಗಂಟೆ ವಿಶೇಷ ಮಂತ್ರ ಪಠಣ

    ಜಾಗ ಸಿಕ್ಕ ಸ್ಥಳದ 4 ಗುಂಟೆ ಜಮೀನನ್ನು ಮಂದಿರ ನಿರ್ಮಾಣಕ್ಕೆ ಸಂತೋಷದಿಂದ ಕೊಡುವುದಾಗಿ ಜಮೀನು ಮಾಲೀಕ ರಾಮದಾಸ್ ಹೇಳಿದ್ದಾರೆ ಎಂದು ‘ಪಬ್ಲಿಕ್‌ ಟಿವಿ’ ಜೊತೆ ಶಾಸಕ ಜಿ.ಟಿ.ದೇವೇಗೌಡ ಮಾಹಿತಿ ಹಂಚಿಕೊಂಡಿದ್ದಾರೆ.

    ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ನಮ್ಮ ಕ್ಷೇತ್ರದ ಗ್ರಾಮದಲ್ಲೇ ಕೃಷ್ಣ ಶಿಲೆ ಸಿಕ್ಕಿದೆ. ಆ ಶಿಲೆಯಿಂದ ಮೂಡಿಬಂದ ಶ್ರೀರಾಮ ಮೂರ್ತಿ ದರ್ಶನ ಪ್ರಪಂಚದಾದ್ಯಂತ ಶಾಶ್ವತವಾಗಿದೆ. ಇಂತಹ ಅವಕಾಶ ನಮ್ಮ ಕ್ಷೇತ್ರಕ್ಕೆ ಲಭಿಸಿದ್ದರಿಂದ ನಾನೂ ಕೂಡ ಸೌಭಾಗ್ಯವಂತ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ : ಅವಕಾಶಕ್ಕಾಗಿ ಧನ್ಯವಾದ ಸಲ್ಲಿಸಿದ ರಿಷಬ್

    ಜಮೀನನ ಮಾಲೀಕ ದಲಿತ ಸಮುದಾಯದವರು. ರಾಮಮಂದಿರಕ್ಕಾಗಿ ಜಮೀನನ್ನೇ ಬಿಟ್ಟುಕೊಡುತ್ತೇನೆ ಎಂದು ಒಪ್ಪಿಕೊಂಡಿದ್ದಾರೆ. ಇದೆಲ್ಲವನ್ನೂ ನೋಡಿದರೆ, ತಾಯಿ ಚಾಮುಂಡೇಶ್ವರಿ ಆಶೀರ್ವಾದ ಮತ್ತು ನಮ್ಮೆಲ್ಲರ ಸೌಭಾಗ್ಯ ಎಂದು ತಿಳಿಸಿದ್ದಾರೆ.

    ಅಯೋಧ್ಯೆ ಶ್ರೀರಾಮಮಂದಿರ ಉದ್ಘಾಟನೆ ದಿನದಂದೇ ಮೈಸೂರಿನಲ್ಲಿ ಶಿಲೆ ಸಿಕ್ಕ ಜಾಗದಲ್ಲಿ ಭೂಮಿಪೂಜೆ ಮಾಡಲಾಗುವುದು. ಮೂರ್ತಿ ಕೆತ್ತನೆಗೆ ಅರುಣ್‌ ಯೋಗಿರಾಜ್‌ ಅವರನ್ನೇ ಸಂಪರ್ಕಿಸುತ್ತೇವೆ. ಅವರ ನಿರ್ದೇಶನದಂತೆಯೇ ನಡೆಯುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಾಣಪ್ರತಿಷ್ಠೆ ಕಣ್ತುಂಬಿಕೊಳ್ಳಲು ರಾಜ್ಯದಲ್ಲಿ ಸೋಮವಾರ ರಜೆ ಘೋಷಿಸಿ: ಸಿಎಂಗೆ ತೇಜಸ್ವಿ ಸೂರ್ಯ ಮನವಿ

    ರಾಮಲಲ್ಲಾ ವಿಗ್ರಹ ಕೆತ್ತನೆಗೆ ಬಳಸಿರುವ ಶಿಲೆ ಸಿಕ್ಕ ಜಮೀನಿನ ಮಾಲೀಕರು, ಕಷ್ಟ ಪಟ್ಟು ಶಿಲೆಯನ್ನು ತೆಗೆದ ಶ್ರೀನಿವಾಸ್‌ ಮತ್ತು ಅವರ ಜೊತೆ ಕೆಲಸ ಮಾಡಿದವರನ್ನು ಅಯೋಧ್ಯೆಗೆ ಕಳುಹಿಸುತ್ತೇವೆ. ಅಲ್ಲಿ ಪ್ರತ್ಯೇಕವಾಗಿ ಪೂಜಾ ಕಾರ್ಯಕ್ರಮ ನೆರವೇರಿಸಿ ಬರುತ್ತೇವೆ ಎಂದು ತಿಳಿಸಿದ್ದಾರೆ.

  • ಅಧಿವೇಶನದಲ್ಲಿ ಸಿದ್ದರಾಮಯ್ಯ ಪರ ಜಿಟಿಡಿ ಬ್ಯಾಟಿಂಗ್ – ಅನ್ನಭಾಗ್ಯಕ್ಕೆ ಜೈ ಎಂದ ಜೆಡಿಎಸ್ ಶಾಸಕ

    ಅಧಿವೇಶನದಲ್ಲಿ ಸಿದ್ದರಾಮಯ್ಯ ಪರ ಜಿಟಿಡಿ ಬ್ಯಾಟಿಂಗ್ – ಅನ್ನಭಾಗ್ಯಕ್ಕೆ ಜೈ ಎಂದ ಜೆಡಿಎಸ್ ಶಾಸಕ

    – ಕೇಂದ್ರ ಸರ್ಕಾರ, ಬಿಜೆಪಿ ನಾಯಕರ ವಿರುದ್ಧ ಜಿ.ಟಿ. ದೇವೇಗೌಡ ವಾಗ್ದಾಳಿ

    ಬೆಂಗಳೂರು: ಕೆಲ ದಿನಗಳ ಹಿಂದೆ ವಿಧಾನಸಭೆ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ (H.D.Kumaraswamy) ಪರಸ್ಪರ ವಾಗ್ಯುದ್ಧವನ್ನೇ ನಡೆಸಿದ್ದರು. ಆದರೆ ಜೆಡಿಎಸ್ (JDS) ಕೆಲ ನಾಯಕರು, ಕಾಂಗ್ರೆಸ್ (Congress) ಹಾಗೂ ಸಿದ್ದರಾಮಯ್ಯ ವಿಚಾರದಲ್ಲಿ ಸಾಫ್ಟ್‌ಕಾರ್ನರ್‌ ಹೊಂದಿದಂತೆ ಕಾಣುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ (G.T.Devegowda) ಅವರು ಸದನದಲ್ಲಿ ಕಾಂಗ್ರೆಸ್ ಸರ್ಕಾರ, ಸಿಎಂ ಸಿದ್ದರಾಮಯ್ಯ ಹಾಗೂ ಗ್ಯಾರಂಟಿಗಳ ಪರವಾಗಿ ಬ್ಯಾಟಿಂಗ್ ಮಾಡಿದರು.

    ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಚರ್ಚೆ ಮೇಲೆ ಮಾತನಾಡಿದ ಜಿ.ಟಿ. ದೇವೇಗೌಡ, ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಬೆಂಬಲಿಸಬೇಕಿತ್ತು. ಕೇಂದ್ರ ಅಕ್ಕಿ ಕೊಡಬೇಕಿತ್ತು, ಆದರೆ ಕೊಡಲಿಲ್ಲ. ರಾಜ್ಯ ಸರ್ಕಾರದ ತೆರಿಗೆ ಸಂಗ್ರಹದಿಂದ ಕೇಂದ್ರ ಸರ್ಕಾರ ನಡೆಯುತ್ತಿದೆ. ಅನ್ನಭಾಗ್ಯಕ್ಕೆ ಕೇಂದ್ರ ಬೆಂಬಲ ನೀಡದೆ ಇರುವುದು ಖಂಡನೀಯ. ಐದು ಗ್ಯಾರಂಟಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲು ಬಿಜೆಪಿಗೆ ಅಧಿಕಾರ ಇಲ್ಲ ಎಂದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೇ, ಸರ್ಕಾರ ಐದು ಗ್ಯಾರಂಟಿ ಜಾರಿಗೆ ತಂದಿದೆ. ತಿಂಗಳಿಗೆ ಒಂದೊಂದು ಮಾಡಲಿ. ಎಲ್ಲಾ ಕಾರ್ಯಕ್ರಮ ಜಾರಿಗೆ ತರಲಿ ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ವಿರೋಧ ಪಕ್ಷದ ನಾಯಕ ಕುಮಾರಸ್ವಾಮಿ? – ಸದನದಲ್ಲಿ ಸ್ವಾರಸ್ಯಕರ ಚರ್ಚೆ

    ಸಿಎಂ ಸಿದ್ದರಾಮಯ್ಯ ಪರವಾಗಿಯೂ ಜಿ.ಟಿ.ದೇವೇಗೌಡರು ಮಾತನಾಡಿದ್ದಾರೆ. ಅನ್ನಭಾಗ್ಯ ಯೋಜನೆ ಪರವಾಗಿ ಮಾತನಾಡುವಾಗ ಜಿಟಿಡಿ, ಅನ್ನಭಾಗ್ಯ ಯೋಜನೆಯ ಹಿಂದೆ ಸಿದ್ದರಾಮಯ್ಯ ಅವರ ಅನುಭವ ಇದೆ. ಬಡತನದ ಹಿನ್ನೆಲೆಯ ಸಿದ್ದರಾಮಯ್ಯ ಕುಟುಂಬದ ಬಗ್ಗೆ ನನಗೆ ಗೊತ್ತಿದೆ. ಆ ಕಾರಣಕ್ಕೆ ಸಿದ್ದರಾಮಯ್ಯ ಅನ್ನಭಾಗ್ಯ ತಂದಿದ್ದಾರೆ. ಅದಕ್ಕಾಗಿ ನಾನು ಸಿದ್ದರಾಮಯ್ಯ ಅವರನ್ನು ಅಭಿನಂದಿಸುತ್ತೇನೆ. ಸಿದ್ದರಾಮಯ್ಯ ಅವರ ಕುಟುಂಬ, ಹೊಲ, ಗದ್ದೆ ನನಗೆ ಗೊತ್ತು. ಅವರ ತುಂಬು ಕುಟುಂಬದ ಬಗ್ಗೆಯೂ ನನಗೆ ಗೊತ್ತು ಎಂದು ಹೇಳಿದರು.

    ಕೇಂದ್ರ ಸರ್ಕಾರ ಅನ್ನಭಾಗ್ಯಕ್ಕೆ ಅಕ್ಕಿ ಕೊಡಲ್ಲ ಅನ್ನೋದು ಸರಿಯಲ್ಲ. ಗಾಂಧೀಜಿ ಸಹ ಅನ್ನದ ಮಹತ್ವದ ಬಗ್ಗೆ ಹೇಳಿದ್ದಾರೆ. ಹಾಗಾಗಿ ಅನ್ನಭಾಗ್ಯ ಯೋಜನೆ ಸರಿಯಾಗಿ ಜಾರಿಯಾಗಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಇಂಗ್ಲಿಷ್ ಇರೋದೇ ತಪ್ಪು ಮಾತಾಡೋಕೆ, ಕನ್ನಡ ಇರೋದು ಸರಿಯಾಗಿ ಮಾತನಾಡಲು: ಪ್ರದೀಪ್ ಈಶ್ವರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೆಡಿಎಸ್‌ನಲ್ಲೇ ಉಳಿದ್ರು ಜಿಟಿಡಿ – ಜೆಡಿಎಸ್ ವರಿಷ್ಠರ ಸಂಧಾನ ಯಶಸ್ವಿ

    ಜೆಡಿಎಸ್‌ನಲ್ಲೇ ಉಳಿದ್ರು ಜಿಟಿಡಿ – ಜೆಡಿಎಸ್ ವರಿಷ್ಠರ ಸಂಧಾನ ಯಶಸ್ವಿ

    ಮೈಸೂರು: (Mysuru) ಅಂತೂ ಇಂತು ಕೊನೆಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರ (G.T.Deve Gowda) ಮುಂದಿನ ರಾಜಕೀಯ ನಡೆ ನಿರ್ಧಾರವಾಗಿದೆ. ಜೆಡಿಎಸ್ (JDS) ವರಿಷ್ಠರ ಸಂಧಾನ ಫಲಪ್ರದವಾಗಿದ್ದು ತಾನು ಮಾತ್ರವಲ್ಲಾ ಇಡೀ ಕುಟುಂಬ ಜೆಡಿಎಸ್‌ಗೆ ದುಡಿಯುದಾಗಿ ಜಿ.ಟಿ.ದೇವೇಗೌಡ ಘೋಷಿಸಿದ್ದಾರೆ.

    ದೊಡ್ಡಗೌಡ್ರು ಭಾವನಾತ್ಮಕವಾಗಿ ಮಾತನಾಡಿದರು. ಚಿಕ್ಕ ಗೌಡ್ರು ಗದ್ಗದಿತರಾದರು. ಮೈಸೂರಿನ ವಿವಿ ಮೊಹಲ್ಲಾದ ಜಿ.ಡಿ‌.ದೇವೇಗೌಡರ ನಿವಾಸ ಈ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯ್ತು. ಕಳೆದ ಮೂರು ವರ್ಷಗಳಿಂದ ಜೆಡಿಎಸ್ ಪಕ್ಷ ಚಟುವಟಿಕೆಗಳಿಂದ ದೂರವಿದ್ದ ಜಿ.ಟಿ.ದೇವೇಗೌಡರ ಮನವೊಲಿಸಲು ಖುದ್ದು ಹೆಚ್.ಡಿ.ದೇವೇಗೌಡರೇ (H.D.Deve Gowda) ಬಂದಿದ್ದರು. ಹೆಚ್.ಡಿ.ದೇವೇಗೌಡರ ಜೊತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy), ಮಾಜಿ ಸಚಿವ ಸಾ.ರಾ.ಮಹೇಶ್ (Sa.Ra.Mahesh), ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ (C.M.Ibrahim) ಈ ವೇಳೆ ದೇವೇಗೌಡರ ಜೊತೆ ಇದ್ದರು. ಇದನ್ನೂ ಓದಿ: ಜೆಡಿಎಸ್‍ನಲ್ಲೇ ಉಳೀತಾರಾ ಜಿ.ಟಿ. ದೇವೇಗೌಡ? – ಗುರುವಾರ ಹೆಚ್‌ಡಿಡಿ ಭೇಟಿ

    ಜೆಡಿಎಸ್‌ ನಾಯಕರ ದಂಡೇ ಜಿ.ಟಿ.ದೇವೇಗೌಡರ‌ ಮನೆಗೆ ಬಂದ ಕಾರಣ ಜಿಟಿಡಿ ಮನೆ ಇವತ್ತಿನ ಮಟ್ಟಿಗೆ ರಾಜಕೀಯ ಶಕ್ತಿ ಕೇಂದ್ರವಾಗಿತ್ತು. ಹೆಚ್ಚು ಕಡಿಮೆ ನಾಲ್ಕೈದು ತಾಸು ಎಲ್ಲಾ ದಳಪತಿಗಳು ಜಿಟಿಡಿ ಮನೆಯಲ್ಲಿ ಕುಳಿತು, ಜಿಟಿಡಿ ಕುಟುಂಬದ ಜೊತೆ ಮಾತನಾಡಿ ಅಲ್ಲೇ ಊಟ ಮಾಡಿ ಮುನಿಸು ಮರೆತು ಒಂದಾದರು.

    ಹೆಚ್.ಡಿ.ದೇವೇಗೌಡರು ಶಾಸಕ ಜಿ.ಟಿ.ದೇವೇಗೌಡ, ಪತ್ನಿ ಲಲಿತಾ ಹಾಗೂ ಪುತ್ರ ಹರೀಶ್ ಗೌಡ ಜೊತೆ ಮಾತುಕತೆ ನಡೆಸಿ ಮನವೊಲಿಸವಲ್ಲಿ ಯಶಸ್ವಿಯಾದರು. ದೇವೇಗೌಡರ ಭೇಟಿ ಶಾಸಕ ಜಿ.ಟಿ.ದೇವೇಗೌಡರನ್ನ ಭಾವುಕರಾನ್ನಗಿಸಿತ್ತು. ಗದ್ಗತಿತರಾಗಿ ಮಾತನಾಡಿದ ಜಿ.ಟಿ.ದೇವೇಗೌಡ, ನಾನು ಮಾತ್ರವಲ್ಲ ಇಡೀ ನನ್ನ ಕುಟುಂಬ ಜೆಡಿಎಸ್‌ಗಾಗಿ ದುಡಿಯುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ನ.1ರಂದು ನಟ ಪುನೀತ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ: ಸಿಎಂ ಬೊಮ್ಮಾಯಿ

    ಹೆಚ್.ಡಿ.ಕುಮಾರಸ್ವಾಮಿ ಸಹ ಜಿ.ಟಿ.ದೇವೇಗೌಡ, ಹರೀಶ್ ಗೌಡ ಜೊತೆ ಆತ್ಮೀಯವಾಗಿ ಮಾತನಾಡಿದರು. ಈ ವೇಳೆ ನೂರಾರು ಕಾರ್ಯಕರ್ತರು ಜಿಟಿಡಿ ಮನೆಯಲ್ಲಿ ಹಾಜರಿದ್ದರು. ಭೇಟಿ ಬಳಿಕ ಮಾತನಾಡಿದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಮುಂದೆ ಮೈಸೂರು ಜಿಲ್ಲೆಯ ಜೆಡಿಎಸ್ ನಾಯಕತ್ವವನ್ನ ಜಿ.ಟಿ.ದೇವೇಗೌಡರೇ ವಹಿಸಲಿದ್ದಾರೆ ಎಂದು ಘೋಷಿಸಿದರು. ಅಷ್ಟೇ ಅಲ್ಲ ಮುಂದಿನ ಮೈಸೂರು ಜಿಲ್ಲೆಯ ರಾಜಕೀಯ ತೀರ್ಮಾನಗಳನ್ನ ಜಿಟಿಡಿ ತೆಗೆದುಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

    ಈ ಮೂಲಕ ಜಿ.ಟಿ.ದೇವೇಗೌಡರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಜಿ.ಟಿ.ದೇವೇಗೌಡ ಅವರು ಕಾಂಗ್ರೆಸ್‌ಗೆ ಹೋಗ್ತಾರಾ ಅಥವಾ ಬಿಜೆಪಿಗೆ ಹೋಗ್ತಾರಾ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ ಹಾಗೂ ಬಿಜೆಪಿಯಿಂದ ಕೆಲ ನಾಯಕರು ಜಿಟಿಡಿ ಜೊತೆ ಮಾತನಾಡಿ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಇದೀಗ ಜೆಡಿಎಸ್‌ನಲ್ಲೇ ಉಳಿಯಲು ನಿರ್ಧರಿಸಿರುವ ಜಿ.ಟಿ.ದೇವೇಗೌಡ ಅವರು ಸಿದ್ದರಾಮಯ್ಯ ಹಾಗೂ ಬಿಜೆಪಿ ನಾಯಕರಿಗೆ ಕ್ಷಮೆಯಾಚಿಸಿದ್ದಾರೆ.

    ಮೈಸೂರಿನಿಂದ ಪಕ್ಷ ಸಂಘಟನೆ ಆರಂಭಿಸಿದ ಜೆಡಿಎಸ್‌ಗೆ ಜಿಟಿಡಿ ರೀ ಎಂಟ್ರಿಯಿಂದ ಆನೆ ಬಲ ಸಿಕ್ಕಂತಾಗಿದೆ. ಇದು ಮೈಸೂರು ಭಾಗದಲ್ಲಿ ಮುಂದಿನ ದಿನಗಳಲ್ಲಿ ಯಾವೆಲ್ಲಾ ರಾಜಕಾರಣ ಬದಲಾವಣೆಗೆ ಕಾರಣವಾಗುತ್ತೆ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ನಾನು ಈಗಲೂ ಜೆಡಿಎಸ್‍ನಲ್ಲೇ ಇದ್ದೀನಿ-ಜಿ. ಟಿ. ದೇವೇಗೌಡ

    ನಾನು ಈಗಲೂ ಜೆಡಿಎಸ್‍ನಲ್ಲೇ ಇದ್ದೀನಿ-ಜಿ. ಟಿ. ದೇವೇಗೌಡ

    ಮೈಸೂರು: ನಾನು ಈಗಲೂ ಜೆಡಿಎಸ್ ನಲ್ಲೇ ಇದ್ದೀನಿ. ವಿಧಾನಸಭೆಯಲ್ಲೂ ಜೆಡಿಎಸ್ ಶಾಸಕರ ಜೊತೆಯೇ ಕುಳಿತುಕೊಳ್ಳುತ್ತಿದ್ದೇನೆ. ನಾನು ಯಾವಗೂ ಜೆಡಿಎಸ್ ವಿರುದ್ಧವಾಗಿ ಮಾತನಾಡಿಲ್ಲ ಎಂದು ಶಾಸಕ ಜಿ.ಟಿ ದೇವೇಗೌಡ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ತೀರುಗೇಟುಕೊಟ್ಟಿದ್ದಾರೆ.

    ನಮ್ಮ ಪಕ್ಷದಿಂದ ಬೆಳೆದವರೆ ನಮ್ಮ ಪಕ್ಷ ಮುಗಿಸಲು ಹೊರಟಿದ್ದಾರೆ. ಮಾಜಿ ಸಚಿವ ಜಿ.ಟಿ.ದೇವೇಗೌಡರಿಗೆ ಜೆಡಿಎಸ್ ಬಾಗಿಲು ಮುಚ್ಚಿದೆ ಎಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದರು. ಈ ಹೇಳಿಕೆ ಸಂಬಂಧ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಿಟಿಡಿ, ನಾನು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ. ನಾನೇನು ಜೆಡಿಎಸ್ ವಿರುದ್ಧ ಕೆಲಸ ಮಾಡುತ್ತಿಲ್ಲ. ಮೈಸೂರಿನ ಹೈಕಮಾಂಡ್ ಮಾತು ಕೇಳಿಕೊಂಡು ಕುಮಾರಸ್ವಾಮಿಯವರು ಈ ರೀತಿ ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ

    ಮೈಮುಲ್ ಚುನಾವಣೆಯಲ್ಲಿ ಹೆಚ್. ಡಿ. ಕುಮಾರಸ್ವಾಮಿಯವರು ನನ್ನನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ. ಮೈಮುಲ್ ಚುನಾವಣೆಯನ್ನು ನಾನು ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ಕುಮಾರಸ್ವಾಮಿ ಏಕೆ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ. ಮೈಮುಲ್ ಚುನಾವಣೆಯಲ್ಲಿ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಗಳ ವಿರುದ್ಧವಾಗಿ ಪ್ರಚಾರ ಮಾಡುತ್ತಿದ್ದಾರೆ. ಮೈಸೂರಿನ ಹೈಕಮಾಂಡ್ ಮಾತು ಕೇಳಿಕೊಂಡು ಕುಮಾರಸ್ವಾಮಿ ಈ ರೀತಿ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಶಾಸಕ ಸಾ. ರಾ. ಮಹೇಶ್ ವಿರುದ್ಧ ಹರಿಹಾಯ್ದಿದ್ದಾರೆ.

    ಪಿರಿಯಾಪಟ್ಟಣದಲ್ಲಿ ಕಾಂಗ್ರೆಸ್ ನ ಮಾಜಿ ಶಾಸಕ ವೆಂಕಟೇಶ್ ಬೆಂಬಲಿಗರಿಗೆ ಜೆಡಿಎಸ್ ನವರೇ ಅನುಕೂಲ ಮಾಡಿಕೊಡುತ್ತಿದ್ದಾರೆ. ಜೆಡಿಎಸ್ ಶಾಸಕ ಮಹದೇವ್ ಪುತ್ರನ ವಿರುದ್ಧವಾಗಿ ಜೆಡಿಎಸ್ ನವರು ಕೆಲಸ ಮಾಡುತ್ತಿದ್ದಾರೆ. ಮಹಾಭಾರತದಲ್ಲಿ ಶಕುನಿಯಿಂದ ಕೌರವರ ಸಂತತಿ ಸರ್ವ ನಾಶವಾಯಿತು. ರಾಮಾಯಣದಲ್ಲಿ ಮಂಥರೆಯ ಮಾತು ಕೈಕೇಯಿ ಕೇಳಿದ ಪರಿಣಾಮ ರಾಮ ವನವಾಸಕ್ಕೆ ತೆರಳುವಂತಾಯಿತು. ಇದೀಗ ಮೈಸೂರಿನಲ್ಲೂ ಶಕುನಿ, ಮಂಥರೆಯ ಮಾತು ಕೇಳುತ್ತಿರುವ, ಕುಮಾರಸ್ವಾಮಿ ಜೆಡಿಎಸ್ ಅನ್ನು ಸರ್ವನಾಶ ಮಾಡಲು ಹೊರಟಿದ್ದಾರೆ ಎಂದು ಹೇಳಿ ವ್ಯಂಗ್ಯಮಾಡಿದ್ದಾರೆ.

  • ಎಂದಿಗೂ ಸರ್ಕಾರದಿಂದ ವೈದ್ಯಕೀಯ ವೆಚ್ಚ ಪಡೆಯದ ಜಿಟಿಡಿ

    ಎಂದಿಗೂ ಸರ್ಕಾರದಿಂದ ವೈದ್ಯಕೀಯ ವೆಚ್ಚ ಪಡೆಯದ ಜಿಟಿಡಿ

    – ಆ ಹಣವನ್ನು ಬಡವರ ಚಿಕಿತ್ಸೆ ನೀಡಲು ಸೂಚನೆ

    ಮೈಸೂರು: ಶಾಸಕರಿಗೆ ಸರ್ಕಾರ ನೀಡುವ ವೈದ್ಯಕೀಯ ವೆಚ್ಚವನ್ನು ಪಡೆಯುವ ವಿಚಾರದಲ್ಲಿ ಮೈಸೂರಿನ ಶಾಸಕ ಜಿ.ಟಿ. ದೇವೇಗೌಡ ಮಾದರಿಯಾಗಿದ್ದಾರೆ.

    ಕೊರೊನಾ ಸೋಂಕಿನ ನಿಯಂತ್ರಣಕ್ಕೆ ತರಲು ಸರ್ಕಾರ ಹೆಣಗಾಡುತ್ತಿದೆ. ಇದರ ನಡುವೆಯೇ ಆರ್ಥಿಕ ಸಂಕಷ್ಟ ಸುಧಾರಣೆ ಮಾಡಲು ಸಾಲವನ್ನು ಪಡೆಯಲು ಮುಂದಾಗಿದೆ. ಇದೇ ವೇಳೆ ಕೊರೊನಾಗೆ ತುತ್ತಾಗಿ ಗುಣಮುಖರಾಗಿರುವ ಜನಪ್ರತಿನಿಧಿಗಳ ಮತ್ತು ಕುಟುಂಬಸ್ಥರ ಆಸ್ಪತ್ರೆ ಬಿಲ್ ವೆಚ್ಚದ ಹೊರೆಯೂ ಸರ್ಕಾರ ಮೇಲೆ ಬಿದ್ದಿದೆ. ಆದರೆ ಇದಕ್ಕೆ ಜಿ.ಟಿ. ದೇವೇಗೌಡ ವಿರುದ್ಧವಾಗಿದ್ದು, ಅವರು ಎಂದಿಗೂ ಸರ್ಕಾರದಿಂದ ವೈದ್ಯಕೀಯ ವೆಚ್ಚವನ್ನು ತೆಗೆದುಕೊಂಡಿಲ್ಲ.

    ಜಿ.ಟಿ. ದೇವೇಗೌಡ, ಇದುವರೆಗೂ ಸರ್ಕಾರದಿಂದ ವೈದ್ಯಕೀಯ ಬಿಲ್ ಪಡೆದಿಲ್ಲ. ಪ್ರಥಮ ಬಾರಿ ಶಾಸಕರಾದಗಲೇ ತಮ್ಮ ವೈದ್ಯಕೀಯ ವೆಚ್ಚ ಪಡೆಯುವುದನ್ನು ನಿರಾಕರಿಸಿ ತಮಗೆ ಬಳಸುವ ಹಣವನ್ನು ಬಡವರ ಚಿಕಿತ್ಸೆಗೆ ಬಳಸುವಂತೆ ಹೇಳಿದ್ದಾರೆ. ಹೀಗಾಗಿ ಇವರು ಸರಕಾರದಿಂದ ಯಾವತ್ತಿಗೂ ವೈದ್ಯಕೀಯ ವೆಚ್ಚ ಪಡೆದೆ ಇಲ್ಲ. ಜಿ.ಟಿ. ದೇವೇಗೌಡ ಈ ಹೆಜ್ಜೆ ರಾಜ್ಯದ ಶಾಸಕರಿಗೆ ಮಾದರಿಯಾಗಿದೆ. ಇದನ್ನೂ ಓದಿ: ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ, ಸರ್ಕಾರಕ್ಕೆ ಬಿಲ್- ರಾಜ್ಯದ ಶಾಸಕರ ಕೊರೊನಾ ‘ಬಿಲ್’ವಿದ್ಯೆ

    ಕೊರೊನಾ ಸೋಂಕಿಗೆ ತುತ್ತಾಗಿರುವ ರಾಜ್ಯದ ಹಲವು ಜನ ಪ್ರತಿನಿಧಿಗಳು, ಅವರ ಕುಟುಂಬಸ್ಥರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈ ವೇಳೆ ಚಿಕಿತ್ಸೆ ಪಡೆದ ಆಸ್ಪತ್ರೆಯ ವೆಚ್ಚದ ಬಿಲ್ ಮರುಪಾವತಿಗೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜನಪ್ರತಿನಿಧಿಗಳು ಮತ್ತು ಕುಟುಂಬಸ್ಥರ ಕೋವಿಡ್ ಬಿಲ್ ಲಕ್ಷ ಲಕ್ಷ ಆಗಿದ್ದು, ಆಸ್ಪತ್ರೆ ವೆಚ್ಚದ ಬಿಲ್ ಗಳನ್ನು ವಿಧಾನಸಭೆ ಸಚಿವಾಲಯಕ್ಕೆ ಸಲ್ಲಿಸಲಾಗಿದೆ.

  • ನನ್ನದು ಅಬ್ಬರಿಸುವ ಪಾಲಿಟಿಕ್ಸ್ ಅಲ್ಲ: ಜಿ.ಟಿ.ದೇವೇಗೌಡ

    ನನ್ನದು ಅಬ್ಬರಿಸುವ ಪಾಲಿಟಿಕ್ಸ್ ಅಲ್ಲ: ಜಿ.ಟಿ.ದೇವೇಗೌಡ

    ಮೈಸೂರು: ಅಬ್ಬರಿಸಿ ಬೊಬ್ಬರಿಸಿದರಷ್ಟೇ ರಾಜಕಾರಣ ಅಲ್ಲ. ನಾನು ಮಾತನಾಡದೆ ಇರುವವರ ಜೊತೆ ರಾಜಕಾರಣ ಮಾಡಿದ್ದೇನೆ. ಹಾಗಾಗಿ ನಾನು ಮಾತನಾಡದೆಯೇ ರಾಜಕಾರಣ ಮಾಡುತ್ತೇನೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

    ಜಿ.ಟಿ. ದೇವೇಗೌಡ ಅವರು ಹುಣಸೂರು ಉಪ ಚುನಾವಣೆಯಲ್ಲಿ ತಟಸ್ಥ ನಿಲುವು ಪ್ರಕಟಿಸಿದ್ದರು. ಈಗ ಮೈಸೂರು ಮಹಾ ನಗರ ಪಾಲಿಕೆ ಮೇಯರ್-ಉಪ ಮೇಯರ್ ಚುನಾವಣೆಯಲ್ಲೂ ತಟಸ್ಥ ನಿಲುವು ಪ್ರಕಟಿಸಿದ್ದಾರೆ. ತಾವು ತಟಸ್ಥ ನಿಲುವು ಪ್ರಕಟಿಸುವುದಕ್ಕೆ ಇಂದು ಮೈಸೂರಿನಲ್ಲಿ ಕಾರಣ ಕೂಡ ತಿಳಿಸಿದರು.

    ಮಾಧ್ಯಮದವರ ಜೊತೆ ಮಾತನಾಡಿದ ಜಿಟಿಡಿ, ಅಬ್ಬರಿಸಿ ಬೊಬ್ಬರಿಸಿದರಷ್ಟೇ ರಾಜಕಾರಣ ಅಲ್ಲ. ನಾನು ಮಾತನಾಡದೆ ಇರುವವರ ಜೊತೆ ರಾಜಕಾರಣ ಮಾಡಿದ್ದೇನೆ. ಹಾಗಾಗಿ ನಾನು ಮಾತನಾಡದೆಯೇ ರಾಜಕಾರಣ ಮಾಡುತ್ತೇನೆ ಎಂದು ಹೇಳುವ ಮೂಲಕ ತಮ್ಮ ಮೌನದ ರಹಸ್ಯ ಬಿಚ್ಚಿಟ್ಟರು. ನನ್ನದು ಈಗ ಸೈಲೆಂಟ್ ಪಾಲಿಟಿಕ್ಸ್ ಎಂದು ಹೇಳುವ ಮೂಲಕ ಹುಣಸೂರು ಬೈ ಎಲೆಕ್ಷನ್ ಹಾಗೂ ಮೇಯರ್ ಚುನಾವಣೆ ವಿಚಾರದಲ್ಲಿ ತಟಸ್ಥ ನಿಲುವಿಗೆ ಜಿಟಿಡಿ ಸ್ಪಷ್ಟಿಕರಣ ನೀಡಿದರು.

    ಎಲ್ಲವನ್ನು ಸಾರಾ ಮಹೇಶನೇ ನೋಡಿಕೊಳ್ಳುತ್ತಿದ್ದಾನೆ. ಪಕ್ಷದ ಸಭೆ ಕರೆದಾಗಲು ನನ್ನನ್ನು ಆಹ್ವಾನ ಮಾಡಿರಲಿಲ್ಲ. ಕುಮಾರಸ್ವಾಮಿ ಸಾರಾ ಮಹೇಶ್‍ಗೆ ಎಲ್ಲವನ್ನು ಬಿಟ್ಟುಕೊಟ್ಟಿದ್ದಾರೆ. ಹಿಂದೆ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೇ ನನ್ನ ಮಾತು ನಡೆಯಲಿಲ್ಲ. ಈಗ ನಡೆಯಲು ಸಾಧ್ಯವೇ ಇಲ್ಲ. ಸಾರಾ ಮಹೇಶ್ ಯಾರು ಹೇಳುತ್ತಾರೋ ಅವರು ಮೇಯರ್ ಆಗುತ್ತಾರೆ. ಅವರು ಯಾರ ಜೊತೆ ಮೈತ್ರಿ ಅನ್ನುತ್ತಾರೋ ಅವರ ಜೊತೆ ಮೈತ್ರಿ ನಡೆಯುತ್ತದೆ. ನನ್ನದೇನಿದ್ದರು, ಜೆಡಿಎಸ್ ಮೇಯರ್ ಅಭ್ಯರ್ಥಿಗೆ ಮತ ಚಲಾಯಿಸುವುದು ಮಾತ್ರ ಎಂದು ಮಾರ್ಮಿಕವಾಗಿ ಹೇಳಿದರು.

  • ಪ್ಯಾಂಟ್-ಶರ್ಟ್‌ನಲ್ಲಿ ಗಮನ ಸೆಳೆದ ಜಿಟಿಡಿ

    ಪ್ಯಾಂಟ್-ಶರ್ಟ್‌ನಲ್ಲಿ ಗಮನ ಸೆಳೆದ ಜಿಟಿಡಿ

    ಮೈಸೂರು: ಜೂನ್ 21 ರಂದು ವಿಶ್ವ ಯೋಗ ದಿನದ ಹಿನ್ನೆಲೆಯಲ್ಲಿ ಮೈಸೂರಿನ ರೇಸ್ ಕೋರ್ಸ್ ನಲ್ಲಿ ಇಂದು ಮೆಗಾ ರಿಹರ್ಸಲ್ ನಡೆದಿದೆ.

    ಸುಮಾರು 5000ಕ್ಕೂ ಹೆಚ್ಚು ಯೋಗಪಟುಗಳಿಂದ ಸಾಮೂಹಿಕ ಯೋಗಾಭ್ಯಾಸ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್, ಶಾಸಕ ಎಸ್.ಎ.ರಾಮದಾಸ್, ಮೇಯರ್ ಪುಷ್ಪಾಲತಾ ಜಗನ್ನಾಥ್, ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.

    ಇದೇ ವೇಳೆ ಜಿ.ಟಿ. ದೇವೇಗೌಡರು ಹೆಚ್ಚು ಗಮನ ಸೆಳೆದರು. ಕಾರಣ ಪ್ಯಾಂಟ್, ಶರ್ಟ್ ನಲ್ಲಿ ಜಿ.ಟಿ ದೇವೇಗೌಡರು ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಜಿ.ಟಿ. ದೇವೇಗೌಡರು ಬಿಳಿ ಪಂಚೆ, ಬಿಳಿ ಶರ್ಟ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇಂದು ಅಪರೂಪಕ್ಕೆ ಸಚಿವರು ಕಂದು ಬಣ್ಣದ ಪ್ಯಾಂಟ್, ತಿಳಿ ಬೂದು ಬಣ್ಣದ ಶರ್ಟ್ ತೊಟ್ಟು ಯೋಗ ತಾಲೀಮಿಗೆ ಬಂದಿದ್ದಾರೆ. ಅವರ ಉಡುಪು ಎಲ್ಲರ ಗಮನಸೆಳೆಯಿತು.

    ರೇಸ್ ಕೋರ್ಸ್ ನಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿ ಸಾಮೂಹಿಕವಾಗಿ ಯೋಗಪಟುಗಳು ಯೋಗ್ಯಾಭ್ಯಾಸ ಮಾಡಿದ್ದಾರೆ. ಸಚಿವ ಜಿ.ಟಿ.ದೇವೇಗೌಡ ಮತ್ತು ಸಾ.ರಾ.ಮಹೇಶ್ ಯೋಗ ಪಟುಗಳು ಜೊತೆ ಸೇರಿ ತಾವೂ ಯೋಗಾಭ್ಯಾಸ ಮಾಡಿದ್ದಾರೆ.