Tag: G.S Basavaraju

  • 550 ಕೋಟಿ ಅನುದಾನ ವಿಚಾರದಲ್ಲಿ ಜಿ.ಎಸ್ ಬಸವರಾಜು, ಎಸ್ ಆರ್ ಶ್ರೀನಿವಾಸ್ ನಡುವೆ ಕಿತ್ತಾಟ

    550 ಕೋಟಿ ಅನುದಾನ ವಿಚಾರದಲ್ಲಿ ಜಿ.ಎಸ್ ಬಸವರಾಜು, ಎಸ್ ಆರ್ ಶ್ರೀನಿವಾಸ್ ನಡುವೆ ಕಿತ್ತಾಟ

    ತುಮಕೂರು: ಜಿಲ್ಲೆಗೆ 550 ಕೋಟಿ ಅನುದಾನದ ವಿಚಾರದಲ್ಲಿ ತುಮಕೂರು ಸಂಸದ ಜಿ.ಎಸ್ ಬಸವರಾಜು ಅವರಿಗೆ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಅವಾಜ್ ಹಾಕಿರುವ ಪ್ರಸಂಗ ನಡೆದಿದೆ.

    ಗುಬ್ಬಿ ತಾಲೂಕಿನ ಚೇಳೂರು ಸಮೀಪದ ಸಿ. ನಂದಿಹಳ್ಳಿ ಗ್ರಾಮದಲ್ಲಿ ನಡೆದ ಬೆಸ್ಕಾಂ ವಿದ್ಯುತ್ ಎಂಎಸ್‍ಎಸ್ ಸ್ಟೇಷನ್ ಉದ್ಘಾಟನೆಯ ವೇಳೆ ಇಬ್ಬರು ನಾಯಕರು ಕೈಕೈ ಮಿಲಾಯಿಸಿಕೊಂಡು ಜಗಳಕ್ಕಿಳಿದ್ದಾರೆ. ಇದನ್ನೂ ಓದಿ: ವಾಜಪೇಯಿ ಹೆವೀ ಡ್ರಿಂಕರ್ – ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ

    ಚೇಳೂರು ಹೋಬಳಿಯಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಕೇಂದ್ರ ಸರ್ಕಾರ 500 ಕೋಟಿ ಮೀಸಲಿಟ್ಟಿದೆ ಎಂದು ಸಭೆಯಲ್ಲಿ ಜಿಎಸ್ ಬಸವರಾಜು ಹೇಳಿದರು. ಈ ವೇಳೆ ರೊಚ್ಚಿಗೆದ್ದ ಗುಬ್ಬಿ ಶ್ರೀನಿವಾಸ್, ರೈತರಿಗೆ ಸುಳ್ಳು ಹೇಳ್ತಿಯಾ, ನಿಮ್ ಯೋಗ್ಯತೆಗೆ ಇಷ್ಟು ಬೆಂಕಿ ಹಾಕ.. ಸುಳ್ಳು ಯಾಕೆ ಬೊಗಳುತ್ತೀಯಾ..? ವಯಸ್ಸಾಗಿದೆ ಈಗಲಾದ್ರೂ ಸುಳ್ಳು ಹೇಳೋದನ್ನ ನಿಲ್ಲಿಸು ಎಂದು ಏಕವಚನದಲ್ಲಿಯೇ ಮಾತಿಗಿಳಿದರು.

    ಇಲ್ಲದ ವಿಚಾರವನ್ನು ಮಾತಾಡಬೇಡ ನೀನು. ನೀನು ಅಯೋಗ್ಯ ನನ್ಮಗ ಎಂದು ಇಬ್ಬರೂ ನಾಯಕರು ಪರಸ್ಪರ ಬೈದಾಡಿಕೊಂಡರು. 550 ಕೋಟಿ ತಂದಿದ್ದೀವಿ ಎಂದ ಬಸವರಾಜುಗೆ 550 ಕೋಟಿ ನಿಮ್ ತಾತ ತಂದಿದ್ನಾ..? 550 ಕೋಟಿ ಎಲ್ ತಂದಿದ್ದೀರಿ ತೋರಿಸ್ರಿ ಎಂದು ಎಸ್ ಆರ್ ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದಾರೆ.

  • ನಾನು ಸಚಿವ ಸ್ಥಾನದ ಆಕಾಂಕ್ಷಿ: ತುಮಕೂರು ಸಂಸದ ಬಸವರಾಜು

    ನಾನು ಸಚಿವ ಸ್ಥಾನದ ಆಕಾಂಕ್ಷಿ: ತುಮಕೂರು ಸಂಸದ ಬಸವರಾಜು

    ನವದೆಹಲಿ: ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಆದರೆ ಮಂತ್ರಿ ಆಗೇ ಆಗುತ್ತೇನೆ ಎನ್ನುವ ಗ್ಯಾರಂಟಿ ಇಲ್ಲ ತುಮಕೂರು ನೂತನ ಸಂಸದ ಜಿ.ಎಸ್ ಬಸವರಾಜು ತಿಳಿಸಿದ್ದಾರೆ.

    ಈ ಬಗ್ಗೆ ನವದೆಹಲಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಸವರಾಜು, ನಾನೊಬ್ಬ ಆಕಾಂಕ್ಷಿ ಅಲ್ಲ. ಆದರೆ ಆಕಾಂಕ್ಷಿ ಅಂದರೆ 100ಕ್ಕೆ 100 ಮಂತ್ರಿ ಆಗುತ್ತೇನೆ ಎಂದಲ್ಲ. ಸಚಿವ ಸ್ಥಾನ ಕೊಟ್ಟರೆ ನಾನು ಒಪ್ಪಿಕೊಳ್ಳುತ್ತೇನೆ ಎಂದರು.

    ನನ್ನನ್ನು ಮಂತ್ರಿ ಮಾಡೋದು ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ ನಿರ್ಧಾರಕ್ಕೆ ಬಿಟ್ಟಿದ್ದು. ನಾವು ಅವರ ನಿರ್ಧಾರದ ಬಗ್ಗೆ ಪ್ರಶ್ನಿಸಲು ಸಾಧ್ಯವಿಲ್ಲ. ಆದರೆ ಸಚಿವ ಸ್ಥಾನ ಕೊಡಬಹುದು ಇಲ್ಲದೆ ಇರಬಹುದು. ನನಗೆ ಇವರೆಗೂ ಹೈಕಮಾಂಡ್‍ನಿಂದ ಯಾವುದೇ ಕರೆ ಬಂದಿಲ್ಲ. ನಾನು ಅದರ ಬಗ್ಗೆ ಯೋಚನೆ ಕೂಡ ಮಾಡುತ್ತಿಲ್ಲ. ಜಾತಿ ಪ್ರದೇಶ ಆಧಾರದ ಮೇಲೆ ಸಚಿವ ಸ್ಥಾನ ಹಂಚಿಕೆ ಆಗಬಹುದು ಎಂದರು.

    ಶಿಸ್ತು ಎಂಬುವುದು ಬಿಜೆಪಿ ಪಕ್ಷದಲ್ಲಿದೆ. ಶಿಸ್ತು ಇಲ್ಲದ ಕಾರಣ ಕಾಂಗ್ರೆಸ್‍ನಲ್ಲಿ ಸಚಿವ ಸ್ಥಾನಕ್ಕಾಗಿ ಕಿತ್ತಾಟ ನಡೆದಿದೆ. ಬಿಜೆಪಿಯಲ್ಲಿ ಎಲ್ಲರು ಮೆಚ್ಚಿಕೊಳ್ಳುವಂತೆ ಶಿಸ್ತುಬದ್ಧವಾಗಿ ಕೆಲಸ ಮಾಡುತ್ತಾರೆ. ಇಲ್ಲಿ ಯಾವುದೇ ಒತ್ತಡ ಇಲ್ಲದೆ ಅವರಿಗೆ ಹೇಗೆ ಬೇಕೋ ಹಾಗೆ ಕೆಲಸ ಮಾಡಬಹುದು. ಸೇವೆ ಮಾಡುವುದಕ್ಕೆ ಯಾವ ಸ್ಥಳವಾದರು ಏನು ಎಂದರು.

  • ಕಲ್ಪತರು ‘ಲೋಕ’ದ ನಾಡಲ್ಲಿ ರಾಜಕೀಯ ವರ ಯಾರಿಗೆ? ದೋಸ್ತಿ, ಬಿಜೆಪಿ ಲೆಕ್ಕ ಬಹಿರಂಗ

    ಕಲ್ಪತರು ‘ಲೋಕ’ದ ನಾಡಲ್ಲಿ ರಾಜಕೀಯ ವರ ಯಾರಿಗೆ? ದೋಸ್ತಿ, ಬಿಜೆಪಿ ಲೆಕ್ಕ ಬಹಿರಂಗ

    ಬೆಂಗಳೂರು: ರಾಜ್ಯದಲ್ಲಿ ಲೋಕ ಸಮರದ ಮತದಾನದ ಹಂತ ಪೂರ್ಣಗೊಂಡಿದ್ದು, ಮತ ಏಣಿಕೆಗೆ ದಿನ ಗಣನೆ ಆರಂಭವಾಗಿದೆ. ಈ ಬೆನ್ನಲ್ಲೇ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಖಾಸಗಿ ಏಜೆನ್ಸಿಗಳಿಂದ ಸಮೀಕ್ಷೆ ನಡೆಸಿದ್ದು, ಎಲ್ಲೆಲ್ಲಿ ಮುನ್ನಡೆ ಸಾಧ್ಯತೆ ಇದೆ ಎಂದು ಲೆಕ್ಕಾಚಾರ ಹಾಕಿವೆ.

    ಮೊಮ್ಮಗನಿಗಾಗಿ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ವಲಸೆ ಬಂದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಗೆಲುತ್ತಾರಾ? ಇಲ್ಲವೇ ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡ ಹಾಗೂ ಕೆ.ಎನ್.ರಾಜಣ್ಣ ಅವರ ಅತೃಪ್ತಿಗೆ ಒಳಗಾಗುತ್ತಾರಾ? ಅಥವಾ ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ಜಿ.ಎಸ್.ಬಸವರಾಜು ಗೆದ್ದು ಬರುತ್ತರಾ ಎನ್ನುವ ಪ್ರಶ್ನೆಗಳು ಶುರುವಾಗಿವೆ.

    ದೋಸ್ತಿ ಲೆಕ್ಕ: ತುಮಕೂರು ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಎಚ್.ಡಿ.ದೇವೇಗೌಡ ಅವರು ಮುನ್ನಡೆ ಕಾಯ್ದುಕೊಳ್ಳಲಿದ್ದಾರೆ. ತುಮಕೂರು ಗ್ರಾಮಾಂತರ, ತುರುವೇಕೆರೆ ಹಾಗೂ ಕೊರಟಗೆರೆ ಕ್ಷೇತ್ರಗಳಲ್ಲಿ ಭಾರೀ ಪ್ರಮಾಣದಲ್ಲಿ ಮುನ್ನಡೆ ಸಿಗಲಿದೆ ಎಂದು ದೋಸ್ತಿ ನಾಯಕರು ನಡೆಸಿರುವ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

    ತುಮಕೂರು ನಗರದಲ್ಲಿ 5 ಸಾವಿರ, ತುಮಕೂರು ಗ್ರಾಮಾಂತರ 20 ಸಾವಿರ, ಚಿಕ್ಕನಾಯಕನಹಳ್ಳಿ, 10 ಸಾವಿರ, ತಿಪಟೂರು 15 ಸಾವಿರ, ತುರುವೇಕೆರೆ 20 ಸಾವಿರ, ಕೊರಟಗೆರೆ 20 ಸಾವಿರ, ಗುಬ್ಬಿ 10 ಸಾವಿರ, ಮಧುಗಿರಿ 15 ಸಾವಿರ ಮತಗಳ ಮುನ್ನಡೆ ಸಿಗಲಿದೆ. ಈ ಮೂಲಕ ಎಚ್.ಡಿ.ದೇವೇಗೌಡ ಅವರು 1.10 ಲಕ್ಷ ಮತಗಳ ಲೀಡ್ ನಿಂದ ಗೆಲ್ಲುತ್ತಾರೆ ಎಂದು ದೋಸ್ತಿ ಸಮೀಕ್ಷೆ ಹೇಳಿದೆ.

    ಬಿಜೆಪಿ ಲೆಕ್ಕ: ಕಮಲ ಪಡೆಯ ಲೆಕ್ಕಾಚಾರದ ಪ್ರಕಾರ ತುಮಕೂರು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿಗೆ ಮುನ್ನಡೆ ಸಿಗಲಿದೆ. ಅಷ್ಟೇ ಅಲ್ಲದೆ ತಿಪಟೂರು, ತುರುವೇಕೆರೆ, ಕೊರಟಗೆರೆ ಹಾಗೂ ಗುಬ್ಬಿ ಕ್ಷೇತ್ರಗಳ ಮತದಾರರ ಮೇಲೆ ಭಾರೀ ನಿರೀಕ್ಷೆ ಇಟ್ಟಿರುವುದನ್ನು ಬಿಜೆಪಿ ಸಮೀಕ್ಷೆಯು ತಿಳಿಸುತ್ತದೆ.

    ಕೇಸರಿ ನಾಯಕರ ಸಮೀಕ್ಷೆ ಪ್ರಕಾರ ತುಮಕೂರು ನಗರ 10 ಸಾವಿರ, ತುಮಕೂರು ಗ್ರಾಮಾಂತರ 5 ಸಾವಿರ, ಚಿಕ್ಕನಾಯಕನಹಳ್ಳಿ 5 ಸಾವಿರ, ತಿಪಟೂರು 30 ಸಾವಿರ, ತುರುವೇಕೆರೆ 20 ಸಾವಿರ, ಕೊರಟಗೆರೆ 15 ಸಾವಿರ, ಗುಬ್ಬಿ 15 ಸಾವಿರ, ಮಧುಗಿರಿ 10 ಸಾವಿರ ಮತಗಳ ಲೀಡ್ ಸಿಗಲಿದೆ. ಈ ಮೂಲಕ ಜಿ.ಎಸ್.ಬಸವರಾಜು ಅವರು 1.10 ಲಕ್ಷ ಮತಗಳ ಅಂತರದಿಂದ ಜಯಶೀಲರಾಗಲಿದ್ದಾರೆ ಎಂದು ಬಿಜೆಪಿ ವರದಿ ಹೇಳಿದೆ.

  • ಮಕ್ಕಳಿಗೋಸ್ಕರ ಬೇರೆಯವ್ರ ಕುತ್ತಿಗೆ ಕೊಯ್ತಾರೆ, ಎಷ್ಟೋ ಜನ್ರನ್ನ ಕೊಂದಿದ್ದಾರೆ: ನಾಲಗೆ ಹರಿಬಿಟ್ಟ ಬಿಜೆಪಿ ಅಭ್ಯರ್ಥಿ

    ಮಕ್ಕಳಿಗೋಸ್ಕರ ಬೇರೆಯವ್ರ ಕುತ್ತಿಗೆ ಕೊಯ್ತಾರೆ, ಎಷ್ಟೋ ಜನ್ರನ್ನ ಕೊಂದಿದ್ದಾರೆ: ನಾಲಗೆ ಹರಿಬಿಟ್ಟ ಬಿಜೆಪಿ ಅಭ್ಯರ್ಥಿ

    ತುಮಕೂರು: ಮಕ್ಕಳಿಗೋಸ್ಕರ ಬೇರೆಯವರ ಕುತ್ತಿಗೆ ಕೊಯ್ತಾರೆ. ಇವರು ಎಷ್ಟೋ ಜನರನ್ನು ಕೊಂದಾಕವ್ರೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ಅಭ್ಯರ್ಥಿ ದೇವೇಗೌಡರ ಬಗ್ಗೆ ಬಿಜೆಪಿ ಅಭ್ಯರ್ಥಿ ಜಿ. ಎಸ್ ಬಸವರಾಜು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ತುಮಕೂರಿನಲ್ಲಿ ದೇವರ ದರ್ಶನದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವರು ಎಷ್ಟು ಜನರನ್ನು ಕೊಂದು ಹಾಕಿದ್ದಾರೆ. ಅವರ ಜಾತಿಯವರನ್ನು ಕೊಂದು ಹಾಕಿದ್ದಾರೆ. ಅವರಿಗೆ ಬೇರೆ ಜಾತಿಗೆ ಕೈ ಹಾಕುವುದಕ್ಕೆ ಆಗಲ್ಲ. ದೇವೇಗೌಡರು ತಮ್ಮ ಮಕ್ಕಳಿಗೋಸ್ಕರ ಬೇರೆಯವರ ಕುತ್ತಿಗೆ ಕೊಯ್ತಾರೆ. ಅವರ ಜಿಲ್ಲೆಯಲ್ಲಿ ಮರ್ಡರ್ ಗಳು ಆಗಿದ್ದು ಲೆಕ್ಕ ಹಾಕಿಕೊಂಡು ಬರಲಿ ಎಂದರು.

    ಕುಮ್ಮಕ್ಕು ಇಲ್ಲದೆ ಊರಲ್ಲಿ ಮರ್ಡರ್ ಆಗುತ್ತಾ. ರಾಜಕಾರಣಿ ಹೋಗಿ ಮರ್ಡರ್ ಮಾಡ್ತಾನಾ?. ಅವರ ಜನಾಂಗದ ಮೇಲೆ ಯಾರನ್ನು ಬಿಟ್ಟು ಕೊಟ್ಟಿಲ್ಲ. ದೇವೇಗೌಡರು ಒಂದು ರೀತಿಯಲ್ಲಿ ಹೆಗಲ ಮೇಲೆ ಕೈ ಇಟ್ಟರೆ 7 ವರ್ಷ ಭವಿಷ್ಯ ಇರಲ್ಲ, ಬಹಳ ಕಷ್ಟ. ಹುಷಾರಾಗಿರಬೇಕು ಅಷ್ಟೇ ಎಂದು ದೇವೇಗೌಡರ ವಿರುದ್ಧ ಬಿಜೆಪಿ ಅಭ್ಯರ್ಥಿ ಗುಡುಗಿದ್ದಾರೆ.

    ತುಮಕೂರು ಲೋಕಸಭಾ ಕ್ಷೇತ ಚುನಾವಣೆಯಲ್ಲಿ ಮೈತ್ರಿ ಪಕ್ಷ- ಬಿಜೆಪಿ ನಡುವೆ ಟಾಕ್ ಫೈಟ್ ಹೆಚ್ಚಾಗಿದೆ. ವಿರೋಧ ಪಕ್ಷದವರು ಪರಸ್ಪರ ಏಕವಚನದಲ್ಲಿ ಬೈದಾಡಿಕೊಂಡಿದ್ದಾರೆ.

  • ಡಿಸಿಎಂ ಪರಮೇಶ್ವರ್ ಅಮೂಲ್ ಬೇಬಿ: ಮಾಜಿ ಸಂಸದ ಜಿ.ಎಸ್.ಬಸವರಾಜು

    ಡಿಸಿಎಂ ಪರಮೇಶ್ವರ್ ಅಮೂಲ್ ಬೇಬಿ: ಮಾಜಿ ಸಂಸದ ಜಿ.ಎಸ್.ಬಸವರಾಜು

    ತುಮಕೂರು: ಡಿಕೆ ಬ್ರದರ್ಸ್ ಹಾಗೂ ದೇವೇಗೌಡ ಕುಟುಂಬ ಎರಡೂ ಸೇರಿ ತುಮಕೂರಿಗೆ ಬರುವ ಹೇಮಾವತಿಗೆ ನೀರಿಗೆ ಅಡ್ಡ ಹಾಕುವ ಕೆಲಸ ಮಾಡ್ತಿದ್ದಾರೆ. ಆದ್ರೆ ಈ ವಿಷಯದಲ್ಲಿ ಡಿಸಿಎಂ ಜಿ. ಪರಮೇಶ್ವರ್ ಅವರು ಅಮೂಲ್ ಬೇಬಿ ತರಹ ಆಗಿದ್ದಾರೆ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ಟೀಕಿಸಿದ್ದಾರೆ.

    ಜಿಲ್ಲೆಗೆ ಬರುವ ನೀರನ್ನು ರಾಮನಗರ ತಾಲೂಕಿಗೆ ತೆಗೆದುಕೊಂಡ ಹೋಗಲಾಗುತ್ತಿದೆ. ತುಮಕೂರು ಜಿಲ್ಲೆಗೆ ಇದು ಮರಣ ಶಾಸನವಾಗಲಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾದ ಜಿಲ್ಲೆಯ ರಾಜಕಾರಣಿಗಳು ನಿದ್ದೆ ಮಾಡ್ತಿದ್ದಾರೆ. ಸಂಸದ ಮುದ್ದಹನುಮೇಗೌಡ ಜಿಲ್ಲೆಯಿಂದ ನೀರು ಬಿಟ್ಟು ಕೊಡಲ್ಲ ಅಂತ ಕಳೆದ ವಾರ ಹೇಳಿದ್ದಾರೆ. ಈಗ ಈ ವಿಚಾರವಾಗಿ ಕ್ರಮ ತೆಗೆದುಕೊಂಡು ಪುರುಷತ್ವ ತೋರಿಸಬೇಕು. ಈ ಕುರಿತು ಹೋರಾಟ ಮಾಡಬೇಕಿದ್ದ ಡಿಸಿಎಂ ಸುಮ್ಮನಿದ್ದಾರೆ. ಪರಮೇಶ್ವರ್ ಅವರು ನಮ್ಮ ದೃಷ್ಟಿಯಲ್ಲಿ ಅಮೂಲ್ ಬೇಬಿ. ಡಿಸಿಎಂಗೆ ಸಮ್ಮಿಶ್ರ ಸರ್ಕಾರದಲ್ಲಿ ಹಾಯಲ್ಲ, ಒದೆಯಲ್ಲ, ಒಳ್ಳೆಯದು ಮಾಡೋಕೆ ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

    ಜಿಲ್ಲೆಯಲ್ಲಿ ಮೂವರು ಸಚಿವರಿದ್ದಾರೆ. ಇವರು ಕ್ಯಾಬಿನೇಟ್‍ನಲ್ಲಿ ಈ ಯೋಜನೆ ವಿರೋಧ ವ್ಯಕ್ತಪಡಿಸಬೇಕಾದವರ್ರು ಸುಮ್ಮನ್ನಿದ್ದಾರೆ. ಈಗಿನ ಸರ್ಕಾರಕ್ಕೆ ಮೂರು ಜಿಲ್ಲೆಗಳು ಮಾತ್ರ ಗೊತ್ತು ಬೇರೆ ಜಿಲ್ಲೆಗಳು ಗೊತ್ತಿಲ್ಲ. ರೇವಣ್ಣ ಅವರಿಗಂತೂ ಹೊಳೆನರಸೀಪುರ ಕರ್ನಾಟಕ ಇದ್ದಹಾಗೆ, ಹಾಸನ ಜಿಲ್ಲೆ ಇಂಡಿಯಾ ಇದ್ದಹಾಗೆ. ಅವರಿಗೆ ಅವರ ಜಿಲ್ಲೆ ಮಾತ್ರ ಗೊತ್ತಿರುವುದು. ಹಾಸನ ಜಿಲ್ಲೆಯ ಪಕ್ಕದವರ ನೋವು ಗೊತ್ತಿಲ್ಲ. ಕುಮಾರಸ್ವಾಮಿಯವರು ಸಿಎಂ ಸ್ಥಾನದಲ್ಲಿದ್ದಾರೆ. ಎಲ್ಲರನ್ನು ಕರೆದು ನೀರಿನ ವಿಚಾರವಾಗಿ ತೀರ್ಮಾನ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಜಿ.ಎಸ್ ಬಸವರಾಜು ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv