Tag: G Paramesgwar

  • ದೇಶದಲ್ಲಿ ಯುದ್ಧ ಭೀತಿ – ಕರ್ನಾಟಕದ ಪೊಲೀಸರಿಗೆ ರಜೆ ರದ್ದು: ಪರಮೇಶ್ವರ್‌

    ದೇಶದಲ್ಲಿ ಯುದ್ಧ ಭೀತಿ – ಕರ್ನಾಟಕದ ಪೊಲೀಸರಿಗೆ ರಜೆ ರದ್ದು: ಪರಮೇಶ್ವರ್‌

    ಬೆಂಗಳೂರು: ಭಾರತ-ಪಾಕಿಸ್ತಾನ (India – Pakistan) ನಡುವೆ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವ ಕಾರಣ, ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದ ಪೊಲೀಸರಿಗೆ ರಜೆ ಕೊಡುವುದಿಲ್ಲ ಎಂದು ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್‌ (G Parameshwar) ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಯುದ್ದ ಭೀತಿ ಇದೆ. ಗಡಿ ಭಾಗದಲಲ್ಲಿ ಚಟುವಟಿಕೆಗಳು ನಡೆಯುತ್ತಿದೆ. ಉಗ್ರರನ್ನು ನಮ್ಮ ಸೇನೆ ಸದೆಬಡಿಯುತ್ತಿದೆ. ಇಂದಿನ ಪರಿಸ್ಥಿತಿ ತೀವ್ರ ಆದ್ರೆ, ಯುದ್ಧ ಆಗಬಹುದು. ಹೀಗಾಗಿ ಕೇಂದ್ರ ಎಲ್ಲಾ ರಾಜ್ಯಗಳಿಗೆ ಎಚ್ಚರ ವಹಿಸುವಂತೆ ಸೂಚನೆ ಕೊಟ್ಟಿದೆ. ಈ ಹಿನ್ನೆಲೆ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಿದ್ದೇವೆ. ಬೇರೆ ಯಾವುದೇ ರೀತಿಯ ಚಟುವಟಿಕೆಗಳ ಬಗ್ಗೆ ಎಚ್ಚರ ವಹಿಸುವಂತೆ ಪೊಲೀಸ್‌ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.

    ಒಂದು ವೇಳೆ ಯುದ್ಧದ ಸಮಯ ಬಂದರೆ ನೀರು, ಆಹಾರ ಪದಾರ್ಥ, ಅಗತ್ಯ ವಸ್ತುಗಳ ಸಂಗ್ರಹದ ಬಗ್ಗೆ ಕ್ರಮಕ್ಕೆ ತಯಾರಿ ಮಡೆಯುತ್ತದೆ. ಈ ಬಗ್ಗೆ ಸಿಎಂ ಜೊತೆಗೆ ಸಭೆ ನಡೆಸಿ ಚರ್ಚಿಸುತ್ತೇವೆ. ಮುಂದೆ ಕೇಂದ್ರದಿಂದ ಬರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುತ್ತೇವೆ. ದೇಶದಲ್ಲಿ ಈ ಪರಿಸ್ಥಿತಿ ಇರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯದ ಪೊಲೀಸರಿಗೆ ರಜೆಗಳನ್ನು ಮಂಜೂರು ಮಾಡುವುದಿಲ್ಲ. ಕೇಂದ್ರ ಸರ್ಕಾರ ಎಲ್ಲವೂ ಸರಿಯಿದೆ ಎಂದು ಸೂಚನೆ ಕೊಡುವರೆಗೂ ನಮ್ಮ ಪೊಲೀಸರಿಗೆ ರಜೆ ಕೊಡಲ್ಲ ಎಂದು ಮಾಹಿತಿ ನೀಡಿದರು.

    ಅಲ್ಲದೇ ಕರಾವಳಿ ಭಾಗದಲ್ಲಿ ಪೊಲೀಸರು ಮತ್ತಷ್ಟು ಪರಿಣಾಮವಾಗಿ ಕೆಲಸ ಮಾಡಬೇಕು. ಅಲ್ಲಿ ಕೂಡ ಭದ್ರತೆ ನೀಡಲಾಗಿದೆ. ಕೋಸ್ಟಲ್ ಭಾಗದಲ್ಲಿ ನಮ್ಮ ಅಧಿಕಾರದಲ್ಲಿರೋ ಕಡೆ ಭದ್ರತೆ ಕೊಡ್ತೀವಿ, ನೌಕಾಪಡೆ, ಅಂತಾರಾಷ್ಟ್ರೀಯ ಗಡಿಯಲ್ಲಿ ಎಲ್ಲ ಕಡೆಯೂ ಭದ್ರತೆ ಹೆಚ್ಚಿಸಲಾಗಿದೆ. ಕೇಂದ್ರ ಏನಾದ್ರು ಬಾರ್ಡರ್ ನಲ್ಲಿ ಸೆಕ್ಯುರಿಟಿ ಕೊಡೋದಾದರೆ ಕೇಂದ್ರ ನಮಗೆ ಸೂಚನೆ ಕೊಡುತ್ತದೆ. ಅದನ್ನ ನಾವು ಪಾಲನೆ ಮಾಡ್ತೀವಿ ಎಂದು ಹೇಳಿದರು.

  • ಮೈಸೂರು ಪೊಲೀಸರೇ ದಂಧೆ ನಡೆಸುತ್ತಿದ್ದಾರೆ, ಇದಕ್ಕೆ ಕಡಿವಾಣ ಹಾಕಿ: ಗೃಹ ಇಲಾಖೆಗೆ ಹೆಚ್.ವಿಶ್ವನಾಥ್ ಒತ್ತಾಯ

    ಮೈಸೂರು ಪೊಲೀಸರೇ ದಂಧೆ ನಡೆಸುತ್ತಿದ್ದಾರೆ, ಇದಕ್ಕೆ ಕಡಿವಾಣ ಹಾಕಿ: ಗೃಹ ಇಲಾಖೆಗೆ ಹೆಚ್.ವಿಶ್ವನಾಥ್ ಒತ್ತಾಯ

    ಬೆಂಗಳೂರು: ಮೈಸೂರು ಪೊಲೀಸರು (Mysuru Police) ಕಲ್ಯಾಣ ಮಂಟಪ ನಿರ್ಮಾಣ ಮಾಡಿಕೊಂಡು ದಂಧೆ ಮಾಡುತ್ತಿದ್ದಾರೆ. ಈ ದಂಧೆಗೆ ಗೃಹ ಇಲಾಖೆ ಕಡಿವಾಣ ಹಾಕಬೇಕು ಎಂದು ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ (H Vishwanath) ಸರ್ಕಾರಕ್ಕೆ ಆಗ್ರಹಿಸಿದರು.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಹೆಚ್.ವಿಶ್ವನಾಥ್ ಮೈಸೂರು ಪೊಲೀಸರ ಬಗ್ಗೆ ಪ್ರಶ್ನೆ ಮಾಡಿದರು. ಮೈಸೂರು ಮಹಾರಾಜರು ಹಿಂದೆ ಪೊಲೀಸ್ ಇಲಾಖೆಗೆ ಜಾಗ ಕೊಟ್ಟಿದ್ದರು. ಆ ಜಾಗದಲ್ಲಿ ಮೈಸೂರು ಪೊಲೀಸರು ಒಂದು ಕಲ್ಯಾಣ ಮಂಟಪ ಕಟ್ಟಿದ್ದಾರೆ. ಅದರ ಅಧ್ಯಕ್ಷರು ಕಮೀಷನರ್. ಪೊಲೀಸರಿಗೆ ಕಲ್ಯಾಣ ಮಂಟಪದ ಬಾಡಿಗೆ 25 ಸಾವಿರ,ಬೇರೆಯವರಿಗೆ 2 ಲಕ್ಷ ಜಾರ್ಜ್ ಮಾಡುತ್ತಾರೆ. ಪೊಲೀಸರೇ ತಮ್ಮ ಹೆಸರಿನಲ್ಲಿ ಮಂಟಪ ಕೊಟ್ಟು ಬೇರೆಯವರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಪೊಲೀಸರಿಂದಲೇ ದಂಧೆ ಆಗುತ್ತಿದೆ. ಮೈಸೂರು ಪೊಲೀಸರ ಮೇಲೆ ಕೇಸ್ ಇದೆ. ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಇದೊಂದು ದೊಡ್ಡ ಕರ್ಮಕಾಂಡ. ಪೊಲೀಸರು ಪೊಲೀಸ್ ಕೆಲಸ ಮಾಡಿ ಅಂದರೆ ಕಲ್ಯಾಣ ಮಂಟಪ, ಸ್ಕೂಲ್, ಕ್ಲಬ್, ರಿಯಲ್ ಎಸ್ಟೇಟ್ ಮಾಫಿಯಾ ಮಾಡುತ್ತಿದ್ದಾರೆ. ಈ ಕಲ್ಯಾಣ ಮಂಟಪವನ್ನು ಸರ್ಕಾರ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಐಪಿಎಲ್ 2025: ಮೊದಲ 3 ಪಂದ್ಯಗಳಿಗೆ ರಾಜಸ್ಥಾನ ರಾಯಲ್ಸ್‌ಗೆ ರಿಯಾನ್ ಪರಾಗ್ ಕ್ಯಾಪ್ಟನ್

    ಇದಕ್ಕೆ ಸಚಿವ ಪರಮೇಶ್ವರ್ (G Parameshwar) ಉತ್ತರ ನೀಡಿ, ಪ್ರತಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಗೆ ಒಂದು ವಿಶೇಷ ನಿಧಿ ಇದೆ. ಅದರ ಹಣದಲ್ಲಿ ಅವರು ಸಮುದಾಯ ಭವನ, ಶಾಲೆ ಎಲ್ಲಾ ಕಟ್ಟಿಕೊಂಡಿರುತ್ತಾರೆ. ಎಲ್ಲಾ ಜಿಲ್ಲೆಯಲ್ಲೂ ಇಂತಹ ವ್ಯವಸ್ಥೆ ಆಗಿದೆ. ಮೈಸೂರಿನಲ್ಲಿ ಪೊಲೀಸರು ಉತ್ತಮವಾಗಿ ಮಾಡಿಕೊಂಡಿದ್ದಾರೆ. ಪೊಲೀಸರು ಕೆಲಸದ ಜೊತೆ ಹೆಚ್ಚುವರಿಯಾಗಿ ಇದನ್ನ ನಿರ್ವಹಣೆ ಮಾಡುತ್ತಿದ್ದಾರೆ. ಪೊಲೀಸರು ರಿಯಲ್ ಎಸ್ಟೇಟ್ ದಂಧೆ ಮಾಡುತ್ತಿದ್ದಾರೆ ಅಂದರೆ ನಾನು ಸಹಿಸಲ್ಲ. ಇದಕೋಸ್ಕರ ಇಡೀ ರಾಜ್ಯಕ್ಕೆ ಆದೇಶ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸಚಿವರ ಮೇಲೆ 2 ಸಲ ಹನಿಟ್ರ್ಯಾಪ್ ಯತ್ನ – ಸತೀಶ್ ಜಾರಕಿಹೊಳಿ ಬಾಂಬ್

    ಮೈಸೂರಿನಲ್ಲಿ 2001ರಲ್ಲಿ ಸಮುದಾಯ ಭವನ ಕಟ್ಟಿದ್ದಾರೆ. ಕಮೀಷನರ್ ಅವರೇ ಅಧ್ಯಕ್ಷ ಆಗಿದ್ದಾರೆ. 2001ರಿಂದ 2017ರಿಂದ ಇವರು ತೆರಿಗೆ ಪಾವತಿ ಮಾಡಿಲ್ಲ. 11 ಕೋಟಿ ತೆರಿಗೆ ಹಣ ಕಟ್ಟಿಲ್ಲ. 9 ಬಾರಿ ತೆರಿಗೆ ಇಲಾಖೆ ನೊಟೀಸ್ ಕೊಟ್ಟಿದೆ. ಆದರೆ ತೆರಿಗೆ ಕೇಸ್ ಆಗಿರೋದ್ರಿಂದ 2017ರಿಂದ ಈಚೆಗೆ ತೆರಿಗೆ ಪಾವತಿ ಮಾಡಿದ್ದಾರೆ. ಅಕ್ರಮದ ಆರೋಪ ಮಾಡಿರೋದ್ರಿಂದ ಮೂರನೇ ವ್ಯಕ್ತಿಯಿಂದ ತನಿಖೆ ಮಾಡಿಸುತ್ತೇನೆ. ತನಿಖಾ ವರದಿ ಬಂದ ಬಳಿಕ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ಕೊಟ್ಟರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಪಬ್‌ಗಳಿಗೆ ಮಧ್ಯರಾತ್ರಿ 1 ಗಂಟೆವರೆಗೂ ಅವಕಾಶ? – ಡಿಕೆಶಿ ಸುಳಿವು