Tag: g m siddeshwara

  • ಮಾತನಾಡಲು ಬಾರದ ಇವರು ಅಡುಗೆ ಮಾಡೋದಕ್ಕೆ ಲಾಯಕ್ಕು: ಸಿದ್ದೇಶ್ವರ್ ಪತ್ನಿ ವಿರುದ್ಧ ಶಾಮನೂರು ಹೇಳಿಕೆ

    ಮಾತನಾಡಲು ಬಾರದ ಇವರು ಅಡುಗೆ ಮಾಡೋದಕ್ಕೆ ಲಾಯಕ್ಕು: ಸಿದ್ದೇಶ್ವರ್ ಪತ್ನಿ ವಿರುದ್ಧ ಶಾಮನೂರು ಹೇಳಿಕೆ

    ದಾವಣಗೆರೆ: ಮಾತನಾಡಲು ಬಾರದ ಇವರು ಅಡುಗೆ ಮಾಡೋದಕ್ಕೆ ಲಾಯಕ್ಕು. ಅವರಿಗೆ ಮಾತನಾಡುವ ಶಕ್ತಿ ಇಲ್ಲ ಎಂದು ಸಂಸದ ಸಿದ್ದೇಶ್ವರ್‌ ಪತ್ನಿ ವಿರುದ್ಧ ಶಾಸಕ ಶಾಮನೂರು ಶಿವಶಂಕರಪ್ಪ ನಾಲಿಗೆ ಹರಿಬಿಟ್ಟಿದ್ದಾರೆ.

    ದಾವಣಗೆರೆ ಬಂಟರ ಭವನದಲ್ಲಿ ನಡೆದ ಕಾಂಗ್ರೆಸ್‌ ಜನಪ್ರತಿನಿಧಿಗಳು, ಮುಖಂಡರ ಸಭೆಯಲ್ಲಿ ಶಾಮನೂರು ಶಿವಶಂಕರಪ್ಪ ಮಾತನಾಡಿ ಈ ಹೇಳಿಕೆ ನೀಡಿದ್ದಾರೆ.

    ದಾವಣಗೆರೆ ಬಿಜೆಪಿ ಮಹಿಳಾ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ ಅವರನ್ನು ಟೀಕಿಸುವ ಭರದಲ್ಲಿ ಶಾಮನೂರು ಈ ಹೇಳಿಕೆ ನೀಡಿದ್ದಾರೆ. ದಾವಣಗೆರೆ ಬಿಜೆಪಿ ಅಭ್ಯರ್ಥಿ ದಾವಣಗೆರೆಯಿಂದ ಗೆದ್ದು ಮೋದಿಗೆ ಕಮಲದ ಹೂ ಅರ್ಪಿಸುತ್ತೇನೆ ಅಂತಾರೆ. ಮೊದಲು ದಾವಣಗೆರೆ ಜಿಲ್ಲೆಯ ಸಮಸ್ಯೆ ತಿಳಿಯಲಿ ಎಂದು ಶಾಮನೂರು ಟಾಂಗ್‌ ಕೊಟ್ಟಿದ್ದಾರೆ.

    ಮಾತನಾಡಲು ಬಾರದ ಇವರು ಅಡುಗೆ ಮಾಡೋದಕ್ಕೆ ಲಾಯಕ್ಕು. ಸಾರ್ವಜನಿಕ ಸಭೆಗಳಲ್ಲಿ ಮಾತನಾಡುವ ಶಕ್ತಿ ಅವರಿಗಿಲ್ಲ. ಹೀಗಾಗಿ ನಮ್ಮ ‘ಕೈ’ ಮೇಲಿದೆ ಎಂಬುದನ್ನು ನಾವು ತೋರಿಸಬೇಕು ಎಂದು ಬಿಜೆಪಿ ಅಭ್ಯರ್ಥಿಯನ್ನು ಟೀಕಿಸುವ ಭರದಲ್ಲಿ ಶಾಮನೂರು ಈ ಹೇಳಿಕೆ ನೀಡಿದ್ದಾರೆ.

    ವಿರೋಧ ಪಕ್ಷದವರು ಮೋದಿ.. ಮೋದಿ ಅಂತಾರೆ. ಆದರೆ ಮೋದಿ ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ? ನಮ್ಮ ರಾಜ್ಯಕ್ಕೆ ಬರಬೇಕಾದ ಹಣ ನೀಡದೇ ಅನ್ಯಾಯ ಮಾಡಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಕಣಕ್ಕೆ ಇಳಿದ ತಂದೆ!

    ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಕಣಕ್ಕೆ ಇಳಿದ ತಂದೆ!

    ದಾವಣಗೆರೆ: ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಲೋಕ ಕಣಕ್ಕೆ ಧುಮುಕಲು ತಂದೆ ಸಿದ್ಧರಾಗಿದ್ದು, ಲೋಕಸಭಾ ಅಖಾಡಕ್ಕೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಫೈನಲ್ ಆಗಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ದಕ್ಷಿಣ ಕ್ಷೇತ್ರವನ್ನ ಪುತ್ರನಿಗೆ ಬಿಟ್ಟುಕೊಡಲು ಶಾಮನೂರು ಸಂಕಲ್ಪ ತೊಟ್ಟಿದ್ದಾರೆ ಎನ್ನಲಾಗುತ್ತಿದೆ. ಶಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ಈಗಾಗಲೇ ಮೂರು ಬಾರಿ ಜಿ.ಎಂ.ಸಿದ್ದೇಶ್ವರ್ ವಿರುದ್ಧ ಸೋಲು ಕಂಡಿದ್ದಾರೆ. ಆದ್ರೆ ಈ ಬಾರಿ ಸ್ವತಃ ಶಾಮನೂರು ಅವರೇ ಕಣಕ್ಕೆ ಇಳಿದು ಜಿ.ಎಂ.ಸಿದ್ದೇಶ್ವರ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಈ ಹಿಂದೆ ಸೋತಿರುವ ಭಯದಿಂದ ಈ ಬಾರಿ ಲೋಕಸಮರಕ್ಕೆ ಎಸ್.ಎಸ್.ಮಲ್ಲಿಕಾರ್ಜುನ್ ಹಿಂದೇಟು ಹಾಕಿದ್ದಾರೆ.

    ಸದ್ಯ ಬೀಗರ ಜಿದ್ದಾಜಿದ್ದಿಗೆ ದಾವಣಗೆರೆ ಲೋಕಸಭಾ ಕ್ಷೇತ್ರ ಸಾಕ್ಷಿಯಾಗಲಿದೆ. ಯಾಕೆಂದರೆ ಶಾಮನೂರು ಹಾಗೂ ಸಿದ್ದೇಶ್ವರ್ ಇಬ್ಬರೂ ಸಂಬಂಧದಲ್ಲಿ ಮಾವ-ಅಳಿಯ ಆಗುತ್ತಾರೆ. ಆದ್ರೆ ಅಳಿಯನ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕ್ತಾರಾ ಮಾವ ಅನ್ನೋದನ್ನ ಕಾದು ನೋಡಬೇಕಾಗಿದೆ.

  • ಬಿಜೆಪಿ ಕಾರ್ಯಕರ್ತರು ಮೈ ಮರೆತರೆ ವಾಜಪೇಯಿ ಅವರಿಗೆ ಆದ ಗತಿಯೇ ಮೋದಿಗೂ ಬರಲಿದೆ – ಬಿಜೆಪಿ ಸಂಸದ

    ಬಿಜೆಪಿ ಕಾರ್ಯಕರ್ತರು ಮೈ ಮರೆತರೆ ವಾಜಪೇಯಿ ಅವರಿಗೆ ಆದ ಗತಿಯೇ ಮೋದಿಗೂ ಬರಲಿದೆ – ಬಿಜೆಪಿ ಸಂಸದ

    ದಾವಣಗೆರೆ: ಮಾಜಿ ಪ್ರಧಾನಿ ವಾಜಪೇಯಿ ಅವರು ಹಲವು ಅಭಿವೃದ್ಧಿಪರ ಕಾರ್ಯಗಳನ್ನು ಕೈಗೊಂಡರು ಬಳಿಕ ನಡೆದ ಚುನಾವಣೆಯಲ್ಲಿ ಬಿಜೆಪಿ ಸೋಲುಂಡಿತು. ಸದ್ಯ ಬಿಜೆಪಿ ಕಾರ್ಯಕರ್ತರು ಮೈ ಮರೆತರೆ ವಾಜಪೇಯಿ ಅವರಿಗೆ ಆದ ಗತಿಯೇ ಮೋದಿಗೂ ಬರಲಿದೆ ಎಂದು ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ ಹೇಳಿದ್ದಾರೆ.

     

    ನಗರದ ಜಿಎಂಐಟಿ ಕಾಲೇಜ್ ನಲ್ಲಿ ನಡೆದ ರಾಜ್ಯ ಮಹಿಳಾ ಮೋರ್ಚಾದ ಪ್ರಶಿಕ್ಷಣ ಶಿಬಿರದಲ್ಲಿ ಮಾತನಾಡಿದ ಅವರು, ವಾಜಪೇಯಿ ಅವರು ದೇಶದ ಜನತೆಗೆ ಸರ್ವ ಶಿಕ್ಷಣ ಅಭಿಯಾನ, ಗ್ರಾಮ ಸಡಕ್ ಯೋಜನೆಯಂತಹ ಅನೇಕ ಉತ್ತಮ ಯೋಜನೆಗಳನ್ನು ನೀಡಿದ್ದರು. ಆದರೆ ಮುಂದೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸೋಲುಂಡಿತು. ಸದ್ಯ ಬಿಜೆಪಿ ಕಾರ್ಯಕರ್ತರು ಮೈ ಮರೆತರೆ ವಾಜಪೇಯಿ ಅವರಿಗೆ ಆದ ಗತಿಯೇ ಮೋದಿಗೂ ಬರಲಿದೆ ಎಂದರು.

    ಮೋದಿ ಅವರು ದಿನದ 15 ಗಂಟೆ ಕಾರ್ಯನಿರ್ವಹಿಸುತ್ತಾರೆ. ಇದುವರೆಗೂ ಒಂದು ರಜೆಯನ್ನು ತೆಗೆದುಕೊಂಡಿಲ್ಲ. ಪ್ರಧಾನಿಗಳು ಘೋಷಣೆ ಮಾಡಿದ ಎಲ್ಲಾ ಕಾರ್ಯಗಳನ್ನು ಜಾರಿಗೆ ತಂದಿದ್ದಾರೆ. ಅಂತಹ ನಾಯಕರು ನಮಗೇ ಸಿಕ್ಕಿದ್ದಾರೆ. ಆದರೆ ಮೋದಿ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಇನ್ನು ಮಾಹಿತಿ ತಲುಪಿಲ್ಲ. ಈಗಲೂ ಮೋದಿ ಅವರು ಮಾಡಿದ ಕಾರ್ಯಗಳ ಬಗ್ಗೆ ಜನತೆ ಮಾಹಿತಿ ನೀಡದಿದ್ದರೆ ವಾಜಪೇಯಿ ಅವರಿಗೆ ಆದ ಗತಿಯೇ ಮೋದಿಯವರಿಗೂ ಆಗಲಿದೆ. ಅದ್ದರಿಂದ ಮೋದಿ ಸರ್ಕಾರದ ಸಾಧನೆ ಬಗ್ಗೆ ಜನತೆಗೆ ತಿಳಿಸಿ ಎಂದು ಸಲಹೆ ನೀಡಿದರು.

  • ಅವರು ಜಿಲ್ಲೆಗೆ ಶಕುನಿಯಾಗಿದ್ದಾರೆ- ಸಂಸದ ಜಿ.ಎಂ.ಸಿದ್ದೇಶ್ವರ್‍ಗೆ ಎಸ್‍ಎಸ್ ಮಲ್ಲಿಕಾರ್ಜುನ್ ಪರೋಕ್ಷ ಟಾಂಗ್

    ಅವರು ಜಿಲ್ಲೆಗೆ ಶಕುನಿಯಾಗಿದ್ದಾರೆ- ಸಂಸದ ಜಿ.ಎಂ.ಸಿದ್ದೇಶ್ವರ್‍ಗೆ ಎಸ್‍ಎಸ್ ಮಲ್ಲಿಕಾರ್ಜುನ್ ಪರೋಕ್ಷ ಟಾಂಗ್

    ದಾವಣಗೆರೆ: ಹೊರಗಿನಿಂದ ಬಂದವರು ದಾವಣಗೆರೆ ಜಿಲ್ಲೆ ಅಭಿವೃದ್ಧಿಗೆ ಅಡ್ಡಿಯಾಗಿದ್ದಾರೆ. ಮೊದಲು ಅವರನ್ನು ಜಿಲ್ಲೆಯಿಂದ ಹೊರ ಓಡಿಸಬೇಕು ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಅವರಿಗೆ ಸಚಿವ ಎಸ್‍ಎಸ್ ಮಲ್ಲಿಕಾರ್ಜುನ್ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಅಭಿವೃದ್ಧಿಯಾಗಬೇಕು ಅಂದ್ರೆ ಅರ್ಜುನನ ರೀತಿ ಕೆಲಸ ಮಾಡಬೇಕು. ಅವರು ಜಿಲ್ಲೆಗೆ ಶಕುನಿಯಾಗಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ದಾಖಲೆ ಸಹಿತ ಚರ್ಚೆಗೆ ನಾನು ಸಿದ್ಧ ಎಂದು ಸಂಸದ ಸಿದ್ದೇಶ್ವರ್ ಅವರನ್ನ ಚರ್ಚೆಗೆ ಬರುವಂತೆ ಆಹ್ವಾನಿಸಿದ್ರು.

    ಮುಂದಿನ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ. ನಾಲ್ಕುವರೆ ವರ್ಷದಲ್ಲಿ ದಾವಣಗೆರೆ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ 2,499 ಕೋಟಿ ರೂ. ಅನುದಾನ ತಂದಿದ್ದು, ಇದರಲ್ಲಿ 1036 ಕೋಟಿ ರೂ. ಕೆಲಸವಾಗಿದೆ. 1462 ಕೋಟಿ ರೂ. ಕೆಲಸ ಬಾಕಿ ಇದೆ. ದಾವಣಗೆರೆ ಸ್ಮಾರ್ಟ್ ಸಿಟಿಯಾಗಿ ಘೋಷಣೆಯಾಗಿ ಮೂರು ವರ್ಷವಾದರೂ ಕೇಂದ್ರದಿಂದ ಅನುದಾನ ಬಂದಿಲ್ಲ. ರಾಜ್ಯ ಸರ್ಕಾರ ಮಾತ್ರ ಅನುದಾನ ಬಿಡುಗಡೆ ಮಾಡಿದೆ ಅಷ್ಟೇ ಅಂದ್ರು.