Tag: G Kumar Naik

  • ಸಿಎಂ ವಿರುದ್ಧದ ಮುಡಾ ಹಗರಣ – ಆಗಿನ ಮೈಸೂರು ಡಿಸಿ, ಹಾಲಿ ಸಂಸದ ಕುಮಾರ್ ನಾಯಕ್ ಲೋಪ

    ಸಿಎಂ ವಿರುದ್ಧದ ಮುಡಾ ಹಗರಣ – ಆಗಿನ ಮೈಸೂರು ಡಿಸಿ, ಹಾಲಿ ಸಂಸದ ಕುಮಾರ್ ನಾಯಕ್ ಲೋಪ

    – ಲೋಕಾಯುಕ್ತ ವರದಿಯಲ್ಲಿ ಕರ್ತವ್ಯ ಲೋಪದ ಬಗ್ಗೆ ಉಲ್ಲೇಖ

    ಬೆಂಗಳೂರು/ಮೈಸೂರು: ಸಿಎಂ ಸಿದ್ದರಾಮಯ್ಯ (Siddaramaiah) ಪತ್ನಿ ಪಾರ್ವತಿ ಅವರಿಗೆ ನಿವೇಶನಗಳನ್ನು ಹಂಚಿಕೆ ಮಾಡಿದ ಪ್ರಕರಣದಲ್ಲಿ, ಅಂದಿನ ಮೈಸೂರು ಜಿಲ್ಲಾಧಿಕಾರಿ, ಈಗಿನ ರಾಯಚೂರು ಕ್ಷೇತ್ರದ ಕಾಂಗ್ರೆಸ್ ಸಂಸದ ಜಿ.ಕುಮಾರ ನಾಯಕ (G.Kumar Naik) ಅವರು ಕರ್ತವ್ಯಲೋಪ ಎಸಗಿದ್ದಾರೆ ಎಂದು ಲೋಕಾಯುಕ್ತ ವರದಿಯಲ್ಲಿ ಬಹಿರಂಗಗೊಂಡಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ವರದಿಯಲ್ಲಿ, ಕುಮಾರ ನಾಯಕ್ ಅವರೇ ಲೋಪ ಎಸಗಿದ್ದಾರೆ. ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕು ಎಂದೂ ಹೇಳಿದೆ. ಎ1 ಆರೋಪಿಯಾಗಿದ್ದ ಸಿದ್ದರಾಮಯ್ಯ, ಎ2 ಪಾರ್ವತಿ, ಎ3 ಮಲ್ಲಿಕಾರ್ಜುನಸ್ವಾಮಿ, ಜಮೀನಿನ ಮಾಲೀಕ ಎ4 ದೇವರಾಜು ವಿರುದ್ಧದ ಯಾವ ಆರೋಪಗಳೂ ಸಾಬೀತಾಗಿಲ್ಲ. ಅಧಿಕಾರಿಗಳಿಂದಲೇ ಎಲ್ಲ ತಪ್ಪುಗಳಾಗಿವೆ ಎಂದು ಲೋಕಾಯುಕ್ತ ಆರೋಪಿಸಿದೆ.

    ಕೆಸರೆ ಗ್ರಾಮ ವಿವಾದಿತ ಸರ್ವೆ ಸಂಖ್ಯೆ: 464ರ 3 ಎಕರೆ 16 ಗುಂಟೆ ಜಮೀನಿನ ಭೂಬಳಕೆ ಪರಿವರ್ತನೆಗೆ 2004-05ರಲ್ಲಿ ಮಲ್ಲಿಕಾರ್ಜುನಸ್ವಾಮಿ ಅರ್ಜಿ ಸಲ್ಲಿಸಿದಾಗ, ಕುಮಾರ ನಾಯಕ ಅವರು ಮೈಸೂರು ಜಿಲ್ಲಾಧಿಕಾರಿ ಆಗಿದ್ದರು. ಆ ಅವಧಿಯಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆಯೇ ವರದಿ ಸಲ್ಲಿಸಿದ್ದಾರೆ. ಕುಮಾರ್ ನಾಯಕ್ ಅವರು, ಜಮೀನಿನ ಸ್ಥಳ ಪರಿಶೀಲನೆ ನಡೆಸಬೇಕಿತ್ತು. ಬದಲಿಗೆ ಅಧಿಕಾರಿಗಳು ಕೆಸರೆ ಗ್ರಾಮದ ನಕ್ಷೆ, ಭೂಸ್ವಾಧೀನ ಸಂಬಂಧಿ ನಕ್ಷೆ, ಬಡಾವಣೆ ಅಭಿವೃದ್ಧಿ ನಕ್ಷೆಗಳನ್ನು ಬಳಸಿಕೊಂಡು ಸ್ಥಳ ಪರಿಶೀಲನೆ ವರದಿ ಸಿದ್ಧಪಡಿಸಿದ್ದಾರೆ. ಈ ನಕ್ಷೆಗಳಲ್ಲಿ ಸರ್ವೆ ಸಂಖ್ಯೆ 464ರ ಜಮೀನು ಖಾಲಿ ಎಂದೇ ನಮೂದಾಗಿದೆ. ಹೀಗಾಗಿ ಜಮೀನಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎಂದು ವರದಿ ನೀಡಿದ್ದಾರೆ ಎಂದು ಉಲ್ಲೇಖಿಸಿದೆ.

    ಅಧೀನ ಅಧಿಕಾರಿಗಳು ನೀಡಿದ ಸ್ಥಳ ಪರಿಶೀಲನಾ ವರದಿಯನ್ನು ಕುಮಾರ ನಾಯಕ ಅನುಮೋದಿಸಿದ್ದಾರೆ. ವರದಿ ಖಾತರಿಪಡಿಸಿಕೊಳ್ಳದೇ ಭೂಪರಿವರ್ತನೆಗೆ ಆದೇಶಿಸಿದ್ದಾರೆ. ಇದು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪಕ್ಕೆ ಹಿಡಿದ ಕೈಗನ್ನಡಿ. ಆದರೆ, ಅವರು ಭೂಮಾಲೀಕರ ಜತೆ ಸೇರಿಕೊಂಡು ಅಕ್ರಮ ಎಸಗಿದ್ದಾರೆ ಎಂದೂ, ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಲೋಕಾಯುಕ್ತ ಶಿಫಾರಸು ಮಾಡಿದೆ.

    ಅಧಿಕಾರಿಗಳು
    1. ಜಿ.ಕುಮಾರ ನಾಯಕ್, ಹಿಂದಿನ ಮೈಸೂರು ಜಿಲ್ಲಾಧಿಕಾರಿ (ನಿವೃತ್ತ)
    2. ಮಾಳಿಗೆಶಂಕರ್, ಮೈಸೂರು ತಾಲ್ಲೂಕು ಹಿಂದಿನ ತಹಶೀಲ್ದಾರ್ (ನಿವೃತ್ತ)
    3. ಸಿದ್ದಪ್ಪಾಜಿ, ಮೈಸೂರು ತಾಲ್ಲೂಕು ಕಚೇರಿ ಹಿಂದಿನ ರೆವಿನ್ಯೂ ಇನ್‌ಸ್ಪೆರ್ಕ್ಟ (ನಿವೃತ್ತ)
    4. ಶಂಕರಪ್ಪ ಭೂಮಾಪಕ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಮೈಸೂರು ತಾಲ್ಲೂಕು

    ಸಿಎಂ ಪತ್ನಿ ಪಾರ್ವತಿ ಅವರ ಸೈಟ್ ಸೇರಿ 1055 ನಿವೇಶನಗಳ ಮರುಹಂಚಿಕೆ ಆಗಿದೆ. ಇದರಿಂದ ಮುಡಾದ ಬೊಕ್ಕಸಕ್ಕೆ ಆರ್ಥಿಕ ನಷ್ಟ ಉಂಟಾಗಿದೆ. ಇದರಿಂದ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಲೋಕಾಯುಕ್ತ ಸಲ್ಲಿಕೆ ಮಾಡಿರುವ ಅಂತಿಮ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

  • ನಬಾರ್ಡ್ ನೆರವು ಕಡಿತದಿಂದ ರೈತರಿಗೆ ಸಂಕಷ್ಟ – ಜಿ.ಕುಮಾರ್ ನಾಯಕ್ ಕಳವಳ

    ನಬಾರ್ಡ್ ನೆರವು ಕಡಿತದಿಂದ ರೈತರಿಗೆ ಸಂಕಷ್ಟ – ಜಿ.ಕುಮಾರ್ ನಾಯಕ್ ಕಳವಳ

    ನವದೆಹಲಿ: ಅಲ್ಪಾವಧಿ ಬೆಳೆ ಸಾಲ ವಿತರಣೆಗೆ ಸಾಧ್ಯವಾಗುವಂತೆ ಪ್ರಸಕ್ತ ಸಾಲಿನಲ್ಲಿ ಕರ್ನಾಟಕಕ್ಕೆ ಒದಗಿಸಿರುವ ನಬಾರ್ಡ್ (NABARD) ನೆರವು ಕಡಿತಗೊಳಿಸಿರುವುದರಿಂದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ತುರ್ತು ಗಮನ ಹರಿಸಬೇಕು ಎಂದು ರಾಯಚೂರು (Raichuru) ಸಂಸದ ಜಿ.ಕುಮಾರ್ ನಾಯಕ್ (G Kumar Naik) ಕಳವಳ ವ್ಯಕ್ತಪಡಿಸಿದರು.

    ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಹಣಕಾಸು ಸಚಿವರಿಗೆ ಸೋಮವಾರ ಪ್ರಶ್ನೆ ಕೇಳಿದ ಅವರು, ರಾಷ್ಟ್ರೀಕೃತ ಬ್ಯಾಂಕ್‌ಗಳು ನಗರ ಪ್ರದೇಶದ ಜನರಿಗೆ ಹೆಚ್ಚು ಸಾಲ ಕೊಡುತ್ತವೆ. ಅವುಗಳ ಬಡ್ಡಿ ದರ ಹೆಚ್ಚು ಇರುತ್ತವೆ. ಆದರೆ, ಕೃಷಿಕರಿಗೆ ಸಾಲ ನೀಡಲು ಹಿಂದೇಟು ಹಾಕುತ್ತವೆ. ನಬಾರ್ಡ್ ನೆರವು ಕಡಿತದಿಂದ ಕಲ್ಯಾಣ ಕರ್ನಾಟಕ, ಅಭಿವೃದ್ಧಿ ಆಕಾಂಕ್ಷಿ ಹಾಗೂ ಹಿಂದುಳಿದ ಜಿಲ್ಲೆಗಳ ರೈತರಿಗೆ ಭಾರಿ ತೊಂದರೆ ಆಗಿದೆ ಎಂದು ಗಮನಸೆಳೆದರು.ಇದನ್ನೂ ಓದಿ: PUBLiC TV Impact | ಬಾಣಂತಿಯರ ಸಾವಿನ ವರದಿ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ – ಆಸ್ಪತ್ರೆಗೆ ಅಧಿಕಾರಿಗಳು ಭೇಟಿ

    2024-25ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರವು 35 ಲಕ್ಷ ರೈತರಿಗೆ 25 ಸಾವಿರ ಕೋಟಿ ರೂ. ಅಲ್ಪಾವಧಿ ಕೃಷಿ ಸಾಲ ವಿತರಿಸುವ ಗುರಿ ಹೊಂದಿದೆ. 2023-24ರಲ್ಲಿ ರಾಜ್ಯಕ್ಕೆ ನಬಾರ್ಡ್ 5,600 ಕೋಟಿ ರೂ. ಸಾಲ ಕೊಟ್ಟಿತ್ತು. ಈ ವರ್ಷ ಅದನ್ನು 2400 ಕೋಟಿ ರೂ.ಗೆ ಇಳಿಸಲಾಗಿದೆ. ಸಣ್ಣ ರೈತರಿಗೆ ಸಾಲ ಸಿಗದ ಸ್ಥಿತಿ ನಿರ್ಮಾಣವಾಗಿದೆ ಎಂದರು.

    ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಉತ್ತರಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಈ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದೆ. ಸಣ್ಣ ರೈತರ ಉನ್ನತಿಗೆ ಸರ್ಕಾರ ಗಮನ ಹರಿಸಿದೆ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ‘ಯುಐ’ ಚಿತ್ರದ ಭಾಗವಾಗಿರೋದು ನನ್ನ ಅದೃಷ್ಟ: ನಿಧಿ ಸುಬ್ಬಯ್ಯ

  • ಆಲಮಟ್ಟಿ – ಯಾದಗಿರಿ ರೈಲು ಮಾರ್ಗ ಯೋಜನೆ ಅನುಮೋದನೆಗೆ ಮನವಿ

    ಆಲಮಟ್ಟಿ – ಯಾದಗಿರಿ ರೈಲು ಮಾರ್ಗ ಯೋಜನೆ ಅನುಮೋದನೆಗೆ ಮನವಿ

    ನವದೆಹಲಿ: ಆಲಮಟ್ಟಿ – ಯಾದಗಿರಿ ರೈಲು (Almatti- Yadagiri Train Project) ಮಾರ್ಗ ಯೋಜನೆಗೆ ಅನುಮೋದನೆ ನೀಡುವಂತೆ ರಾಯಚೂರು ಸಂಸದ ಜಿ.ಕುಮಾರ್ ನಾಯಕ್ (G Kumar Naik) ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

    ನವದೆಹಲಿಯಲ್ಲಿ (Newdelhi) ಗುರುವಾರ (ಡಿ.12) ಭೇಟಿ ಮಾಡಿ ಆಲಮಟ್ಟಿ – ಯಾದಗಿರಿ ರೈಲು ಮಾರ್ಗ ಯೋಜನೆಗೆ ಅನುಮೋದನೆ ನೀಡುವಂತೆ ಪ್ರಸ್ತಾಪಿಸಿದರು.ಇದನ್ನೂ ಓದಿ: ರಷ್ಯನ್ ಭಾಷೆಯಲ್ಲಿ ಆರ್‌ಬಿಐಗೆ ಬಾಂಬ್ ಬೆದರಿಕೆ

    ಯೋಜನೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ, ತೆಲಂಗಾಣ ಹಾಗೂ ಒಡಿಶಾದಲ್ಲಿ ರೈಲ್ವೆ ಸಂಪರ್ಕ ಜಾಲ ಕಡಿಮೆ ಇದೆ. ಈ ಲೋಪವನ್ನು ಸರಿಪಡಿಸಲು ರಾಜ್ಯದಲ್ಲಿ ರೈಲು ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಆಲಮಟ್ಟಿ-ಯಾದಗಿರಿ ರೈಲು ಮಾರ್ಗದ ಬೇಡಿಕೆಯು ದಶಕಗಳಷ್ಟು ಹಳೆಯದು ಎಂದು ಸಚಿವರ ಗಮನಕ್ಕೆ ತಂದರು.

    ಉದ್ದೇಶಿತ ರೈಲು ಮಾರ್ಗವು ವಿಜಯಪುರ ಮತ್ತು ಯಾದಗಿರಿ ನಡುವಣ ಪ್ರಯಾಣದ ಅಂತರ ಗಣನೀಯವಾಗಿ ಕಡಿಮೆ ಮಾಡುತ್ತದೆ. ಪ್ರಸ್ತುತ ಪ್ರಯಾಣವನ್ನು 328 ಕಿ.ಮೀನಿಂದ 165 ಕಿ.ಮೀಗೆ ಕಡಿತಗೊಳಿಸುತ್ತದೆ. ಈ ಪ್ರದೇಶದಲ್ಲಿ ಬೆಳೆಯುವ ಆರು ಲಕ್ಷ ಟನ್‌ಗಳಷ್ಟು ಭತ್ತ ಹಾಗೂ ಇನ್ನಿತರ ಕೃಷಿ ಉತ್ಪನ್ನಗಳ ಸಾಗಣೆಗೆ ಈ ರೈಲು ಮಾರ್ಗದಿಂದ ಅನುಕೂಲವಾಗುತ್ತದೆ. ಈ ಪ್ರದೇಶದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಈ ಯೋಜನೆ ಪೂರಕವಾಗಲಿದೆ. ಮುಂಬರುವ ಬಜೆಟ್‌ನಲ್ಲಿ ಈ ಯೋಜನೆಯನ್ನು ಸೇರಿಸಿ ಶೀಘ್ರ ಅನುಷ್ಠಾನ ಮಾಡಬೇಕು ಎಂದು ಕೋರಿದರು.

    ಈ ಪ್ರಸ್ತಾವನೆಗೆ ಸೂಕ್ತ ಆದ್ಯತೆ ನೀಡಿ, ಪರಿಗಣಿಸುವುದಾಗಿ ಸಚಿವ ಅಶ್ವಿನಿ ವೈಷ್ಣವ್ ಭರವಸೆ ನೀಡಿದರು.ಇದನ್ನೂ ಓದಿ: ವಾಯುಭಾರ ಕುಸಿತದ ಎಫೆಕ್ಟ್; ತಮಿಳುನಾಡಿನಾದ್ಯಂತ ಭಾರೀ ಮಳೆ, ಪ್ರವಾಹ ಮುನ್ಸೂಚನೆ!

  • ಮುಡಾ ಪ್ರಕರಣದಲ್ಲಿ ರಾಯಚೂರು ಸಂಸದ ಜಿ.ಕುಮಾರ ನಾಯಕ್ ಹೆಸರು – ಅಕ್ರಮವಾಗಿ ಭೂಪರಿವರ್ತನೆ ಆರೋಪ

    ಮುಡಾ ಪ್ರಕರಣದಲ್ಲಿ ರಾಯಚೂರು ಸಂಸದ ಜಿ.ಕುಮಾರ ನಾಯಕ್ ಹೆಸರು – ಅಕ್ರಮವಾಗಿ ಭೂಪರಿವರ್ತನೆ ಆರೋಪ

    – ನಿವೃತ್ತ ಐಎಎಸ್‌ ಅಧಿಕಾರಿ ಅಧಿಕಾರಲ್ಲಿದ್ದಾಗ ತಪ್ಪು ಎಸಗಿದ್ರಾ?

    ರಾಯಚೂರು: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವ ಪ್ರಕರಣ ವಿಚಾರಣೆ ಹೈಕೋರ್ಟ್ ಮುಂದೂಡಿರುವುದರಿಂದ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಆದರೆ, ನ್ಯಾಯಾಲಯದಲ್ಲಿ ವಾದ-ಪ್ರತಿವಾದದ ವೇಳೆ ಹಗರಣದಲ್ಲಿ ರಾಯಚೂರಿನ ಹಾಲಿ ಸಂಸದ ನಿವೃತ್ತ ಐಎಎಸ್ ಅಧಿಕಾರಿ ಜಿ.ಕುಮಾರ್ ನಾಯಕ್ ಹೆಸರು ಕೇಳಿಬಂದಿದೆ. ಇದರಿಂದ ಜಿ.ಕುಮಾರ್ ನಾಯಕ್‌ಗೆ ಸಂಕಷ್ಟ ಎದುರಾಗುವ ಲಕ್ಷಣಗಳು ಇವೆ.

    ಜಿ.ಕುಮಾರ ನಾಯಕ್ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ, ಇಲ್ಲದೇ ಇರೋ ಜಾಗಕ್ಕೆ ಬದಲಿ ಜಾಗ ನೀಡಿರುವ ಆರೋಪದಲ್ಲಿ ಭೂಪರಿವರ್ತನೆ ಮಾಡಿರುವ ಆರೋಪ ಕೇಳಿಬಂದಿದೆ. ಸಿಎಂ ಮೈದುನ ಮಲ್ಲಿಕಾರ್ಜುನ ಸ್ವಾಮಿ ಭೂ ಪರಿವರ್ತನೆಗೆ 2004 ರಲ್ಲಿ ಅರ್ಜಿ ಹಾಕುತ್ತಾರೆ. ಅಸ್ತಿತ್ವವೇ ಇಲ್ಲದ ಕೃಷಿ ಭೂಮಿಗೆ ಭೂ ಪರಿವರ್ತನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

    ಜಿ.ಕುಮಾರ್ ನಾಯಕ್ ಆರೋಪವನ್ನ ತಳ್ಳಿ ಹಾಕಿದ್ದು, 20-25 ವರ್ಷಗಳ ಕೆಳಗೆ ನಡೆದಿದೆ ಅಂತಾ ಆರೋಪಿಸಿದ್ದಾರೆ. ಅದರ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಎಕ್ಸಿಸ್ಟ್ ಇಲ್ಲದ ಭೂಮಿಗೆ ಪರಿವರ್ತನೆ, ಅನುಮೋದನೆ ಹೇಗೆ ಸಾಧ್ಯ? ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ. ಸಿದ್ದರಾಮಯ್ಯ ಸಂಬಂಧಿಕರು ಯಾರೂ ನನ್ನ ಬಳಿ ಈ ವಿಚಾರಗಳಿಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಭೂಪರಿವರ್ತನೆ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾಧಿಕಾರಿಗಳು ಮಾಡುವ ಸಾಮಾನ್ಯ ಪ್ರಕ್ರಿಯೆ. ನಾನು ಕೂಡ ಮಾಡಿರಬಹುದು. ಇದು ಇಂಥವರ ಜಮೀನು ಅಂತಲೂ ಆ ಸಂದರ್ಭದಲ್ಲಿ ನಮಗೆ ತಿಳಿದೂ ಇರುವುದಿಲ್ಲ. ನೋಟಿಫೈ ಮಾಡಿರುವ ಭೂಮಿಯನ್ನ ಅಕ್ವೈರ್ ಮಾಡಿ ಡಿನೋಟಿಫೈ ಮಾಡಿರುವಂತದ್ದು ಇದೆ. ಡಿನೋಟಿಫೈ ಆದರೆ ಭೂಮಿ ಎಲ್ಲಿ ಹೋಗುತ್ತೆ? ಅಲ್ಲೆ ಇರುತ್ತೆ. ಆ ಭೂಮಿಗೆ ಕನ್ವರ್ಷನ್ ಆಗಿರುವ ಸಾಧ್ಯತೆಗಳು ಇರಬಹುದು. ಅದರ ಪೂರ್ಣ ವಿವರ ನನಗಿಲ್ಲ ಎಂದಿದ್ದಾರೆ.

    ಮೂರು ವರ್ಷ ಮೈಸೂರಿನಲ್ಲಿ ಡಿಸಿ ಯಾಗಿದ್ದೆ. ರೂಲ್ಸ್ ಪ್ರಕಾರ ಇದ್ದಿದ್ದರೆ ಮಾಡಿಕೊಡುತ್ತಿದ್ದೆ. ಇವರೊಬ್ಬರದ್ದೆ ಅಲ್ಲಾ ತುಂಬಾ ಜನರದ್ದು ಎನ್‌ಎ ಮಾಡಿದ್ದೇನೆ. ಮಲ್ಲಿಕಾರ್ಜುನ ಸ್ವಾಮಿ ಅನ್ನೋರು ನನಗೆ ಖಂಡಿತ ನೆನಪಿಲ್ಲ. ಇಲ್ಲದೆ ಇರುವ ಭೂಮಿಗೆ ಪರಿವರ್ತನೆ ಯಾರೂ ಕೊಡಲು ಸಾಧ್ಯವಿಲ್ಲ ಎಂದು ಕುಮಾರ್ ನಾಯಕ್ ಹೇಳಿದ್ದಾರೆ.

    ನನ್ನ 35 ವರ್ಷದ ಸೇವಾವಧಿಯಲ್ಲಿ ಕಂಡ ಅತ್ಯಂತ ನಿಷ್ಠುರವಾದಿ ರಾಜಕಾರಣಿ ಎಂದು ಸಿದ್ದರಾಮಯ್ಯ ಅವರನ್ನು ಕುಮಾರ್‌ ನಾಯಕ್‌ ಬಣ್ಣಿಸಿದರು. ಆರೋಪವನ್ನು ಎದುರಿಸಲು ನಾವೂ ತಯಾರಿದ್ದೇವೆ. ಆದರೆ ಈಗ ಬಂದಿರುವ ಆರೋಪ ಖಂಡಿತಾ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.

  • ರಾಯಚೂರಿನಲ್ಲಿ ‘ಕೈ’ ಹಿಡಿದ ಮತದಾರ- ಜಿ.ಕುಮಾರ್ ನಾಯ್ಕ್‌ಗೆ ಗೆಲುವಿನ ಮಾಲೆ

    ರಾಯಚೂರಿನಲ್ಲಿ ‘ಕೈ’ ಹಿಡಿದ ಮತದಾರ- ಜಿ.ಕುಮಾರ್ ನಾಯ್ಕ್‌ಗೆ ಗೆಲುವಿನ ಮಾಲೆ

    ರಾಯಚೂರು: ಬಿಸಿಲ ನಾಡು ರಾಯಚೂರಿನಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ (Loksabha Election Result 024) ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಐಎಎಸ್ ಅಧಿಕಾರಿ ಜಿ.ಕುಮಾರ್ ನಾಯ್ಕ್ (G Kumar Naik) ಭರ್ಜರಿ ಜಯಗಳಿಸಿದ್ದಾರೆ.

    ಜಿ. ಕುಮಾರ್ ಅವರು ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ್ ನಾಯ್ಕ್ ವಿರುದ್ಧ 79,781 ಮತಗಳ ಅಂತರದಲ್ಲಿ ಗೆಲುವು ಕಂಡಿದ್ದಾರೆ. ಕುಮಾರ್ ನಾಯ್ಕ್ ಅವರು 6,70,966 ಮತಗಳನ್ನು ಪಡೆದರೆ, ರಾಜಾ ಅಮರೇಶ್ವರ್ ನಾಯ್ಕ್ (Raja Amareshwar Naik) ಅವರು 5,91,185 ಮತಗಳನ್ನು ಗಳಿಸಿದ್ದಾರೆ.

    ಕಳೆದ ಬಾರಿ ಇದೇ ಕ್ಷೇತ್ರದಲ್ಲಿ ರಾಜಾ ಅಮರೇಶ್ವರ್ ನಾಯ್ಕ್ ಅವರು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಭಾರೀ ಗೆಲುವು ಕಂಡಿದ್ದರು. ಹೀಗಾಗಿ ಈ ಬಾರಿಯೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಆದರೆ ಸೋಲು ಕಂಡಿದ್ದಾರೆ.‌ ಇದನ್ನೂ ಓದಿ: ಕೋಟೆನಾಡಿನಲ್ಲಿ ಗೋವಿಂದ ಕಾರಜೋಳಗೆ ಜೈಕಾರ ಹಾಕಿದ ಮತದಾರ

    ಗೆಲುವಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಕುಮಾರ್ ನಾಯ್ಕ್, ದೇಶದಲ್ಲಿನ ಬಿಜೆಪಿ ವಿರೋಧಿ ಅಲೆ ನನ್ನ ಗೆಲುವಿಗೆ ಕಾರಣವಾಗಿದೆ. ಬಿಜೆಪಿಯವರು ಪ್ರಚಾರದ ಭರಾಟೆಯಲ್ಲಿ ತಮ್ಮ ವಿರೋಧಿ ಅಲೆಯನ್ನು ಕಡೆಗಣಿಸಿದ್ದರು. 400 ಸೀಟು ಗೆಲ್ಲುತ್ತೇವೆ ಎನ್ನುತ್ತಿದ್ದ ಬಿಜೆಪಿಯವರ ನಿರೀಕ್ಷೆ ಸುಳ್ಳಾಗಿದೆ. ಮೋದಿ ಸರ್ಕಾರದ ವಿರುದ್ಧದ ಅಸಮಧಾನ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದೆ. ರಾಯಚೂರು ಕ್ಷೇತ್ರದ ಮತದಾರರಿಗೆ ಧನ್ಯವಾದಗಳನ್ನ ಹೇಳುತ್ತೇನೆ. ರಾಜಕೀಯ ರಂಗದಲ್ಲಿ ನಾನಿನ್ನೂ ಅಂಬೆಗಾಲು ಇಡುತ್ತಿದ್ದೇನೆ. ರಾಯಚೂರು ನನಗೆ ಹೊಸದಲ್ಲಾ ಇದು ನನ್ನ ಕರ್ಮಭೂಮಿ ಹೀಗಾಗಿ ಜನ ಕೈ ಹಿಡಿದಿದ್ದಾರೆ.ಪ್ರಣಾಳಿಕೆಯಲ್ಲಿ ಹೇಳಿದ ಭರವಸೆಗಳನ್ನ ಈಡೇರಿಸುವ ಪ್ರಯತ್ನ ಮಾಡುತ್ತೇವೆ ಅಂತ ಕುಮಾರ್ ನಾಯಕ್ ಹೇಳಿದ್ದಾರೆ.

  • ರಾಯಚೂರು ʻಕೈʼ ಅಭ್ಯರ್ಥಿ 4.12 ಕೋಟಿ ಆಸ್ತಿ ಒಡೆಯ, ಪತ್ನಿ 29 ಕೋಟಿ ಆಸ್ತಿಯ ಒಡತಿ!

    ರಾಯಚೂರು ʻಕೈʼ ಅಭ್ಯರ್ಥಿ 4.12 ಕೋಟಿ ಆಸ್ತಿ ಒಡೆಯ, ಪತ್ನಿ 29 ಕೋಟಿ ಆಸ್ತಿಯ ಒಡತಿ!

    – ಅಭ್ಯರ್ಥಿ ಕುಮಾರ್ ನಾಯಕ್‌ಗಿಂತ ಪತ್ನಿಯೇ ಹೆಚ್ಚು ಶ್ರೀಮಂತೆ!

    ರಾಯಚೂರು: ಇಲ್ಲಿನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ್ (G Kumar Naik) ಅವರಿಂದು ಸಾಂಕೇತಿಕವಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಗುರುವಾರ ಬೃಹತ್‌ ರ‍್ಯಾಲಿಯೊಂದಿಗೆ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ.

    ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಹಾಗೂ ತಮ್ಮ ಕುಟುಂಬಸ್ಥರ ಆಸ್ತಿವಿವರ (Candidates Assets) ಘೋಷಿಸಿದ್ದು ಅಭ್ಯರ್ಥಿಗಿಂತ ಅವರ ಪತ್ನಿಯೇ ಹೆಚ್ಚು ಶ್ರೀಮಂತರಿದ್ದಾರೆ. ಅಭ್ಯರ್ಥಿ ಜಿ.ಕುಮಾರ ನಾಯಕ್ ಒಟ್ಟು ಆಸ್ತಿ ಮೌಲ್ಯ 4,12,85,429 ರೂ. (4.12 ಕೋಟಿ ರೂ.) ಇದ್ದರೆ ಅವರ ಪತ್ನಿಯ ಹೆಸರಲ್ಲಿ ಒಟ್ಟು 29,28,43,075 ರೂ. (29. ಕೋಟಿ ರೂ.) ಮೌಲ್ಯದ ಆಸ್ತಿಯಿದೆ. ಇದನ್ನೂ ಓದಿ: ಪಾಕ್‌ನಲ್ಲಿ ನನ್ನ ಮಕ್ಕಳ ಜೀವಕ್ಕೆ ಅಪಾಯವಿದೆ.. ಅವರನ್ನು ಬಿಟ್ಟು ತವರಿಗೆ ಹೋಗಲ್ಲ: ಭಾರತದ ಮಹಿಳೆ ಅಳಲು

    ಅಭ್ಯರ್ಥಿಯ (Congress Candidate) ಒಟ್ಟು ಚರಾಸ್ತಿ ಮೌಲ್ಯ 1,72,22,929 ರೂ. ಇದ್ದರೆ, ಪತ್ನಿಯ ಒಟ್ಟು ಚರಾಸ್ತಿ ಮೌಲ್ಯ 2,57,80,575 ರೂ. ಇದೆ. 2,58,533 ರೂ ಮೌಲ್ಯದ ರಾಯಲ್ ಎನ್‌ಫೀಲ್ಡ್‌ ಬೈಕ್ಸ್‌ ಹೊಂದಿರುವ ಅಭ್ಯರ್ಥಿ ಸ್ವಂತ ಕಾರು ಹೊಂದಿಲ್ಲ. ಇದನ್ನೂ ಓದಿ: ಸಿಎಎ ರದ್ದು, ಎಲ್ಲಾ ವಿದ್ಯಾರ್ಥಿಗಳಿಗೆ ಮಾಸಿಕ ವಿದ್ಯಾರ್ಥಿ ವೇತನ, 10 ಉಚಿತ ಎಲ್‌ಪಿಜಿ ಸಿಲಿಂಡರ್‌ – ಟಿಎಂಸಿ ಪ್ರಣಾಳಿಕೆಯಲ್ಲಿ ಘೋಷಣೆ

    ಅಭ್ಯರ್ಥಿಯ ಬಳಿ 14,07,400 ರೂ. ಮೌಲ್ಯದ 207 ಗ್ರಾಂ ಚಿನ್ನ ಇದೆ. ಅವರ ಪತ್ನಿ ಬಳಿ 49,30,000 ರೂ. ಮೌಲ್ಯದ 725 ಗ್ರಾಂ ಚಿನ್ನ ಇದೆ. ಇನ್ನೂ ಅಭ್ಯರ್ಥಿಯ ಒಟ್ಟು ಸ್ಥಿರಾಸ್ಥಿ ಮೌಲ್ಯ 2,40,62,500 ರೂ. ಇದ್ರೆ ಅವರ ಪತ್ನಿಯ ಒಟ್ಟು ಸ್ಥಿರಾಸ್ತಿ ಮೌಲ್ಯ 26,70,62,500 ರೂ.ಇದೆ. ಅಭ್ಯರ್ಥಿ ಹೆಸರಲ್ಲಿ ಯಾವುದೇ ಸಾಲ ಇಲ್ಲಾ.‌ ಪತ್ನಿ ಹೆಸರಲ್ಲಿ 5,04,02,455 ರೂ. ಸಾಲವಿದೆ ಎಂದು ಘೋಷಿಸಿಕೊಂಡಿದ್ದಾರೆ.