Tag: G C Chandrashekar

  • ನನ್ನ ನಾಯಕತ್ವದಲ್ಲೇ ಮುಂದಿನ ಚುನಾವಣೆ, ಡಿಕೆಶಿ ಹೇಳಿಕೆ ತಪ್ಪಲ್ಲ: ಚಂದ್ರಶೇಖರ್

    ನನ್ನ ನಾಯಕತ್ವದಲ್ಲೇ ಮುಂದಿನ ಚುನಾವಣೆ, ಡಿಕೆಶಿ ಹೇಳಿಕೆ ತಪ್ಪಲ್ಲ: ಚಂದ್ರಶೇಖರ್

    ಬೆಂಗಳೂರು: ನನ್ನ ನಾಯಕತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಅವರ ಹೇಳಿಕೆ ತಪ್ಪೇನು ಅಲ್ಲ ಎಂದು ಕಾರ್ಯಾಧ್ಯಕ್ಷ ಚಂದ್ರಶೇಖರ್ ಡಿಕೆಶಿ ಪರ ಬ್ಯಾಟ್‌ ಬೀಸಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಇನ್ನೂ ಮೂರೂವರೆ ವರ್ಷದಲ್ಲಿ ಚುನಾವಣೆ ಇದೆ.‌ ಈಗಲೇ ಯಾಕೆ ಇವೆಲ್ಲ. ಕೆಪಿಸಿಸಿ ಅಧ್ಯಕ್ಷರು ಹಾಗೆ ಹೇಳೋದು ತಪ್ಪಲ್ಲ. ರಾಜ್ಯದಲ್ಲಿ ಪಕ್ಷಕ್ಕೆ (Congress) ಸುಪ್ರೀಂ ಅಂದರೆ ಕೆಪಿಸಿಸಿ ಅಧ್ಯಕ್ಷರು. ಅವರು ಹೇಳೋದು ತಪ್ಪಿಲ್ಲ. ಮುಂದಿನ ಚುನಾವಣೆ ಅಂದರೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಹೇಳಿರಬೇಕು ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಯೂಟ್ಯೂಬರ್ ರಣವೀರ್‌ ಅಲಹಬಾದಿಯಾ ಕೀಳು ಹೇಳಿಕೆ ಕೇಸ್‌ – ರಾಖಿ ಸಾವಂತ್‌ಗೆ ಸಮನ್ಸ್

    ಸಿದ್ದರಾಮಯ್ಯ,‌ ಡಿ.ಕೆ ಶಿವಕುಮಾರ್ ನಾಯಕತ್ವ ನಮಗೆ ಶಾಶ್ವತವಾಗಿ ಬೇಕು. ಈ ದೃಷ್ಟಿಯಲ್ಲಿ ಡಿಕೆಶಿ ಹೇಳಿರಬಹುದು. ಅವರು ಹೇಳಿರೋದ್ರಲ್ಲಿ ತಪ್ಪಿಲ್ಲ. ಅವರು 20-25 ವರ್ಷ ರಾಜಕೀಯ ಮಾಡ್ತಾರೆ ಎಂದು ಹೇಳಿದ್ದಾರೆ.

    ರಾಜಣ್ಣ ನಡುವಿನ ಗಲಾಟೆ ವಿಚಾರವಾಗಿ, ನಾನು ರಾಜಣ್ಣ ವಿರುದ್ಧ ಮಾತಾಡಿಲ್ಲ. ನಾನು ರಾಜಣ್ಣರನ್ನ ಕೆಣಕಿಲ್ಲ. ನನಗೆ ಪಕ್ಷ ಮುಖ್ಯ‌. ಅದರ ದೃಷ್ಟಿಯಿಂದ ನಾನು ಮಾತಾಡಿದ್ದೆ. ಅವತ್ತು ನಾನು ಮಾತಾಡಿದ್ದು ಪಕ್ಷದ ದೃಷ್ಟಿಯಿಂದ. ಅದನ್ನ ರಾಜಣ್ಣ ತಪ್ಪು ತಿಳಿದುಕೊಂಡು ಮಾತಾಡಿದ್ದಾರೆ. ನನಗೆ ಪಕ್ಷ ಮುಖ್ಯ. ಹೀಗಾಗಿ ನಾನು ಈಗ ಅದನ್ನ ಅಲ್ಲಿಗೆ ಬಿಟ್ಟಿದ್ದೇನೆ ಎಂದಿದ್ದಾರೆ.

    ಪತ್ರಕರ್ತರ ಪ್ರಶ್ನೆಯೊಂದಕ್ಕೆ, ನೀವು ಕಾಂಗ್ರೆಸ್ ಬಗ್ಗೆ ಯಾಕೆ ಮಾತಾಡ್ತೀರಾ‌‌? ಬಿಜೆಪಿಯಲ್ಲಿ ದೊಡ್ಡ ಗಲಾಟೆ ಇದೆ. ಅದನ್ನ ತೋರಿಸಿ. ಈಗ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇದೆ. ಯಾವ ನಾಯಕರು ಮಾತಾಡ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಅಭಿವೃದ್ಧಿ ಹೊಂದಿದ ಭಾರತಕ್ಕೆ ಪ್ರತಿ ವಲಯದಲ್ಲೂ ಅತ್ಯುತ್ತಮ ನಾಯಕತ್ವದ ಅಗತ್ಯವಿದೆ – ಮೋದಿ

  • ಸಚಿವ ರಾಜಣ್ಣ ಹೇಳಿಕೆ ಸರಿಯಿದೆ, ನನಗೆ ಕೊಂಬು ಇಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್

    ಸಚಿವ ರಾಜಣ್ಣ ಹೇಳಿಕೆ ಸರಿಯಿದೆ, ನನಗೆ ಕೊಂಬು ಇಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್

    ಬೆಂಗಳೂರು: ರಾಜಣ್ಣ ಅವರ ಹೇಳಿಕೆ ಸರಿ ಇದೆ. ನನಗೆ ಕೊಂಬು ಇಲ್ಲ. ನಾನು ಒಬ್ಬ ಕಾರ್ಯಕರ್ತ ಅಷ್ಟೇ ಎಂದು ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್ (G C Chandrashekar) ಹೇಳಿದರು.

    ಬೆಂಗಳೂರಿನಲ್ಲಿ ಸಚಿವ ರಾಜಣ್ಣ (K N Rajanna) ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಕಾರ್ಯಾಧ್ಯಕ್ಷನಾಗಿ ನಾನು ಇದನ್ನು ಬೆಳೆಸಿಕೊಂಡು ಹೋಗುವುದಿಲ್ಲ. ಆದರೆ ನಾನು ಏನು ಹೇಳಬೇಕೋ ಹೇಳಿದ್ದೇನೆ. ನಾನು ಯಾರದೋ ಹೆಸರು ಹೇಳಿಲ್ಲ. ರಾಜಣ್ಣ ಅವರು ಹಿರಿಯ ನಾಯಕರು ಅವರ ಹೇಳಿಕೆಯನ್ನು ಗೌರವಿಸುತ್ತೇನೆ ಎಂದರು. ಇದನ್ನೂ ಓದಿ : ನ್ಯಾಟ್ ಸ್ಕೀವರ್ ಸ್ಫೋಟಕ ಫಿಫ್ಟಿ – ಗುಜರಾತ್ ವಿರುದ್ಧ ಮುಂಬೈಗೆ 5 ವಿಕೆಟ್‌ಗಳ ಭರ್ಜರಿ ಜಯ

    ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡಲ್ಲ. ಪಕ್ಷದಲ್ಲಿ ಶಿಸ್ತು ಇದೆಯಾ ಅಂದರೆ ಪಕ್ಷದಲ್ಲಿ ಇವೆಲ್ಲಾ ಸರ್ವೇಸಾಮಾನ್ಯ. ನಾವು ಮಿಲಿಟರಿಯಲ್ಲಿ ಇಲ್ಲ, ಮಿಲಿಟರಿ ಆಡಳಿತ ಇಲ್ಲ. ಅವರ ಮಾತನ್ನು ಗೌರವಿಸುತ್ತೇನೆ. 25 ವರ್ಷದ ಹಿಂದೆ ನನ್ನ 25ನೇ ವಯಸ್ಸಿನಲ್ಲಿ ಕಾರ್ಪೊರೇಷನ್‌ಗೆ ನಿಂತಿದ್ದೇನೆ. ಆ ನಂತರ ಸಾಕಷ್ಟು ಬೆಳವಣಿಗೆ ಆಗಿದೆ. ಅವರ ಹೇಳಿಕೆಯನ್ನು ನಾನು ಪಾಸಿಟಿವ್ ಆಗಿ ತೆಗೆದುಕೊಂಡಿದ್ದೇನೆ. ಹಿರಿಯರು 50 ವರ್ಷ ಸೇವೆ ಸಲ್ಲಿಸಿದ್ದಾರೆ. ಹಿರಿಯರು ಹೇಳಿದ್ದಾರೆ ಎಂದುಕೊಳ್ಳುತ್ತೇನೆ ಎಂದು ಹೇಳಿದರು. ಇದನ್ನೂ ಓದಿ : ಮುಂದಿನ 5-6 ತಿಂಗಳಲ್ಲಿ ಮಹಿಳೆರಿಗೆ ಕ್ಯಾನ್ಸರ್‌ ಲಸಿಕೆ ಲಭ್ಯ: ಕೇಂದ್ರ ಸಚಿವ ಜಾಧವ್‌

    ಕ್ರಿಯೆಗೆ ಪ್ರತಿಕ್ರಿಯೆ ಕೊಡೋದು ಪಕ್ಷದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆ ಕಾರಣಕ್ಕೆ ಅವರ ಹಿರಿತನಕ್ಕೆ ನಾನು ಬೆಲೆ ಕೊಡುತ್ತೇನೆ. ಅವರು ಏನು ಹೇಳಿದರೂ ನನ್ನ ಒಳ್ಳೆಯದಕ್ಕೆ ಹೇಳಿದ್ದಾರೆ ಎಂದು ತಿಳಿದುಕೊಳ್ಳುತ್ತೇನೆ. ನಾನು ಯಾರನ್ನು ಉದ್ದೇಶಿಸಿ ಹೇಳಿಕೆ ನೀಡಿದ್ದಲ್ಲ. ರಾಜಣ್ಣ ಹೇಳಿಕೆಯನ್ನು ನಾನು ಮುಂದುವರಿಸಲು ಹೋಗಲ್ಲ ಎಂದು ತಿಳಿಸಿದರು. ಇದನ್ನೂ ಓದಿ : ಪಿಜಿ ಮೆಡಿಕಲ್: ಸ್ಟ್ರೇ ವೇಕೆನ್ಸಿ ಸುತ್ತಿಗೆ ಅರ್ಜಿ ಸಲ್ಲಿಸಲು ಫೆ.19ರವರೆಗೆ ಅವಕಾಶ: ಕೆಇಎ

    ಈ ಸ್ಥಾನಕ್ಕೆ ಘನತೆ ತರಬೇಕು ಅನ್ನುವ ಕಾರಣಕ್ಕೆ ಏನು ಮಾತನಾಡಲ್ಲ. ರಾಜಣ್ಣ ಅವರ ಹೇಳಿಕೆಯನ್ನು ನಾನು ಗೌರವಿಸುತ್ತೇನೆ. ದೊಡ್ಡವರು ಒಂದು ಮಾತು ಹೇಳ್ತಾರೆ ಅದನ್ನು ನೋಡಿಕೊಂಡು ಅನುಸರಿಸಿಕೊಂಡು ಹೋಗಬೇಕು. ನನ್ನಿಂದ ಪಕ್ಷಕ್ಕಾಗಲೀ, ನಾಯಕರಿಗಾಗಲೀ, ಪಕ್ಷದ ಕಾರ್ಯಕರ್ತರಿಗಾಗಲೀ ಚಂದ್ರಶೇಖರ್ ಈ ರೀತಿ ಮಾಡಬಾರದಿತ್ತು ಎನ್ನುವ ಭಾವನೆ ಬರಬಾರದು. ಪಕ್ಷದ ಶಿಸ್ತಿನ ಸಿಪಾಯಿಯಾಗಿ ನಾನು ಇದನ್ನು ಗೌರವಿಸುತ್ತೇನೆ ಎಂದು ನುಡಿದರು. ಇದನ್ನೂ ಓದಿ : ಡಿ.ಕೆ ಶಿವಕುಮಾರ್‌ಗೆ ನೋವಾಗುವಂತೆ ಮಾತನಾಡಬಾರದು: ಕುಣಿಗಲ್ ಶಾಸಕ ರಂಗನಾಥ್

    ನನ್ನನ್ನು ರಾಜ್ಯಸಭಾ ಸದಸ್ಯನನ್ನಾಗಿ ಮಾಡಿರೋದು ಕಾಂಗ್ರೆಸ್ ಪಕ್ಷ. ಯಾರಿಗೆಲ್ಲ ಟಿಕೆಟ್ ಕೊಟ್ಟಿರುವುದು, ಯಾರನ್ನೆಲ್ಲ ಮಂತ್ರಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಇದು ಸರಿ ಅಂದಮೇಲೆ ಅದೂ ಸರಿ ಅಲ್ಲವೇ. ನಮ್ಮನ್ನ ಎಲ್ಲಿ ಗುರುತಿಸಬೇಕು ಅಲ್ಲಿ ಗುರುತಿಸಿರುತ್ತಾರೆ. ಸರಿ ಇಲ್ಲ ಅಂತ ಅನಿಸಿದರೆ ನೀವು ಆ ರೀತಿ ಅಂದುಕೊಳ್ಳಬಹುದು. ನನ್ನ ಸಾಮರ್ಥ್ಯ ಏನು ಅಂತ ನಿಮಗೆ ಗೊತ್ತಿದೆ. ನನಗೆ ಏನು ಜವಾಬ್ದಾರಿ ಕೊಟ್ಟಿದ್ದಾರೆ. ಏನು ನಿರ್ವಹಣೆ ಮಾಡಿದ್ದೇನೆ ಅದನ್ನು ನೀವು ಬರೆಯಬಹುದು. ಅವರ ಹೇಳಿಕೆಯಿಂದ ನನ್ನ ಮಾನದಂಡ ನಿರ್ಣಯ ಆಗಲ್ಲ ಎಂದರು.