Tag: G-7 Summit

  • ಇರಾನ್‌ ಜೊತೆ ಸಂಘರ್ಷ; ಇಸ್ರೇಲ್‌ ಬೆಂಬಲಕ್ಕೆ ನಿಂತ G-7 ನಾಯಕರು

    ಇರಾನ್‌ ಜೊತೆ ಸಂಘರ್ಷ; ಇಸ್ರೇಲ್‌ ಬೆಂಬಲಕ್ಕೆ ನಿಂತ G-7 ನಾಯಕರು

    ಒಟ್ಟಾವಾ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟಿನಲ್ಲಿ ಇಸ್ರೇಲ್‌ಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ ಎಂದು G-7 ಶೃಂಗಸಭೆಯಲ್ಲಿ (G-7 Summit) ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಆ ಮೂಲಕ ಇರಾನ್‌ (Iran) ಜೊತೆಗಿನ ಸಂಘರ್ಷದಲ್ಲಿ ಇಸ್ರೇಲ್‌ಗೆ (Israel) ಬೆಂಬಲ ವ್ಯಕ್ತಪಡಿಸಿದ್ದಾರೆ.

    ಜಿ-7 ನಾಯಕರಾದ ನಾವು ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಬದ್ಧರಾಗಿದ್ದೇವೆ. ಈ ಸಂದರ್ಭದಲ್ಲಿ ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ ಎಂಬುದು ನಮ್ಮ ಅಭಿಪ್ರಾಯ. ಇಸ್ರೇಲ್‌ನ ಸುರಕ್ಷತೆಗಾಗಿ ನಾವು ನಮ್ಮ ಬೆಂಬಲವನ್ನು ಪುನರುಚ್ಚರಿಸುತ್ತೇವೆ. ನಾಗರಿಕರ ರಕ್ಷಣೆಯ ಮಹತ್ವವನ್ನು ದೃಢೀಕರಿಸುತ್ತೇವೆ ಎಂದು ಕೆನಡಾದ ಪ್ರಧಾನ ಮಂತ್ರಿಯ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಇದನ್ನೂ ಓದಿ: ತಾರಕಕ್ಕೇರಿದ ಇರಾನ್-ಇಸ್ರೇಲ್ ಸಂಘರ್ಷ: ಭಾರತದ ನಿಲುವು ಮಾತ್ರ ತಟಸ್ಥ

    ಇರಾನ್ ದೇಶವು ಪ್ರಾದೇಶಿಕ ಅಸ್ಥಿರತೆ ಮತ್ತು ಭಯೋತ್ಪಾದನೆಯ ಪ್ರಮುಖ ಮೂಲವಾಗಿದೆ. ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಸಾಧ್ಯವಿಲ್ಲ ಎಂದು ನಾವು ನಿರಂತರವಾಗಿ ಸ್ಪಷ್ಟಪಡಿಸಿದ್ದೇವೆ. ಇರಾನಿನ ಬಿಕ್ಕಟ್ಟಿನ ನಿರ್ಣಯವು ಮಧ್ಯಪ್ರಾಚ್ಯದಲ್ಲಿ ವ್ಯಾಪಕವಾದ ಹಗೆತನಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದೆ.

    ನಾವು ಅಂತರರಾಷ್ಟ್ರೀಯ ಇಂಧನ ಮಾರುಕಟ್ಟೆಗಳ ಪರಿಣಾಮಗಳಿಗೆ ಜಾಗರೂಕರಾಗಿರುತ್ತೇವೆ. ಮಾರುಕಟ್ಟೆಯ ಸ್ಥಿರತೆಯನ್ನು ಕಾಪಾಡಲು ಸಮಾನ ಮನಸ್ಕ ಪಾಲುದಾರರನ್ನು ಒಳಗೊಂಡಂತೆ ಸಮನ್ವಯಗೊಳಿಸಲು ಸಿದ್ಧರಾಗಿರುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: Iran-Israel Conflict | ಕರ್ನಾಟಕಕ್ಕೆ ಬರುತ್ತಿದ್ದ ಮಸಾಲೆ, ಡ್ರೈಫ್ರೂಟ್ಸ್‌ ಸಪ್ಲೈ ಬಂದ್

    ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುನೈಟೆಡ್ ಸ್ಟೇಟ್ಸ್‌ನಿಂದ ರಾಷ್ಟ್ರದ ಮುಖ್ಯಸ್ಥರು ಮತ್ತು ಯುರೋಪಿಯನ್ ಒಕ್ಕೂಟದ ಪ್ರತಿನಿಧಿಗಳು ಮಂಗಳವಾರ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅರ್ಧಕ್ಕೆ ಮೊಟಕು ಗೊಳಿಸಿ ಹೊರಟರು. ಇಸ್ರೇಲ್‌ ಮತ್ತು ಇರಾನ್‌ ನಡುವಿನ ಸಂಘರ್ಷದ ಕಾರಣಕ್ಕೆ ಟ್ರಂಪ್‌ ಅರ್ಧದಲ್ಲೇ ಎದ್ದು ಹೊರನಡೆದರು.

  • ಪ್ರಧಾನಿ ಮೋದಿಗೆ ಡೊನಾಲ್ಡ್ ಟ್ರಂಪ್ ಕರೆ – ಮಹತ್ವದ ಮಾತುಕತೆ

    ಪ್ರಧಾನಿ ಮೋದಿಗೆ ಡೊನಾಲ್ಡ್ ಟ್ರಂಪ್ ಕರೆ – ಮಹತ್ವದ ಮಾತುಕತೆ

    ನವದೆಹಲಿ: ಅಮೆರಿಕಾದಲ್ಲಿ ನಡೆಯಲಿರುವ ಜಿ-7 ಶೃಂಗ ಸಭೆಯಲ್ಲಿ ಭಾಗವಹಿಸುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿದ್ದ ಟ್ರಂಪ್ ಜಿ-7 ದೇಶಗಳ ಗುಂಪನ್ನು ವಿಸ್ತರಿಸಲು ನಿರ್ಧರಿಸಿದ್ದು ಭಾರತವೂ ಸೇರಿದಂತೆ ಹಲವು ದೇಶಗಳಿಗೆ ಸದಸ್ಯತ್ವ ನೀಡುವುದಾಗಿ ತಿಳಿಸಿದ್ದಾರೆ.

    ಟ್ರಂಪ್ ಆಹ್ವಾನವನ್ನು ಪ್ರಧಾನಿ ನರೇಂದ್ರ ಮೋದಿ ಒಪ್ಪಿಕೊಂಡಿದ್ದು, ಅಮೆರಿಕ ನೇತೃತ್ವದಲ್ಲಿ ಜಿ-7 ದೇಶಗಳ ಜೊತೆಗೆ ಕಾರ್ಯನಿರ್ವಹಿಸಲು ಭಾರತ ಉತ್ಸುಕವಾಗಿದೆ ಎಂದಿದ್ದಾರೆ. ಉಭಯ ನಾಯಕರ ಮಾತುಕತೆ ವೇಳೆ ಅಮರಿಕಾದಲ್ಲಿ ನಡೆಯುತ್ತಿರುವ ಜನಾಂಗೀಯ ಘರ್ಷಣೆ, ಅಮೆರಿಕಾ-ಭಾರತದಲ್ಲಿ ಹರಡುತ್ತಿರುವ ಕೊರೊನಾ ವೈರಸ್ ನಿಯಂತ್ರಣ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಸುಧಾರಣೆಗಳ ಬಗ್ಗೆ ಚರ್ಚಿಸಿದ್ದಾರೆ.

    ಇದೇ ವೇಳೆ ಲಡಾಕ್ ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗಳ ಬಗ್ಗೆಯೂ ಮಹತ್ವದ ಮಾತುಕತೆ ನಡೆದಿದೆ. ಈ ಬೆಳವಣಿಗೆ ಭಾರತ ಮತ್ತು ಅಮೆರಿಕದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.