Tag: G-20 Summit

  • ಜಿ 20 ನಾಯಕರಿಗೆ ಪ್ರಧಾನಿ ಮೋದಿ ನೀಡಿದ ಉಡುಗೊರೆಗಳೇನು?, ಅದರ ವಿಶೇಷತೆಗಳೇನು..?

    ಜಿ 20 ನಾಯಕರಿಗೆ ಪ್ರಧಾನಿ ಮೋದಿ ನೀಡಿದ ಉಡುಗೊರೆಗಳೇನು?, ಅದರ ವಿಶೇಷತೆಗಳೇನು..?

    ತ್ತೀಚೆಗಷ್ಟೇ ಭಾರತದ ಅಧ್ಯಕ್ಷತೆಯಲ್ಲಿ ಎರಡು ದಿನಗಳ ಕಾಲ ಜಿ 20 ಶೃಂಗಸಭೆ (G 20 Summit) ನಡೆದಿದೆ. ಈ ಸಭೆಯಲ್ಲಿ 20 ದೇಶದ ನಾಯಕರು ಭಾಗಿಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಹೀಗೆ ಆಗಮಿಸಿದ ಗಣ್ಯರಿಗೆ ಪ್ರಧಾನಿ ಉಡುಗೊರೆಗಳನ್ನು ನೀಡಿ ಕಳುಹಿಸಿದ್ದಾರೆ. ಈ ಮೂಲಕ ಒಂದು ಉತ್ತಮ ನೆನಪುಗಳೊಂದಿಗೆ ಎಲ್ಲಾ ದೇಶದ ನಾಯಕರು ಮರಳಿದ್ದಾರೆ ಎಂದರೆ ತಪ್ಪಾಗಲಾರದು.

    ಹೌದು. ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖರಿಗೆ ಮೋದಿ (Narendra Modi) ಅತ್ಯದ್ಭುತ ಉಡುಗೊರೆಗಳನ್ನು ನೀಡಿದ್ದಾರೆ. ಅಂತೆಯೇ ಗಣ್ಯರು ಕೂಡ ಅಷ್ಟೇ ಪ್ರತಿಯಿಂದ ಉಡುಗೊರೆಗಳನ್ನು ಪಡೆದು ಸಂತಸ ವ್ಯಕ್ತಪಡಿಸಿದ್ದಾರೆ. ಈ ವಸ್ತುಗಳ ಪೈಕಿ ಶತಮಾನಗಳಷ್ಟು ಹಳೆಯದಾದ ಸಾಂಪ್ರದಾಯಿಕ ಸೃಷ್ಟಿಗಳು, ಸಾಟಿಯಿಲ್ಲದ ಕರಕುಶಲತೆ ಮತ್ತು ಗುಣಮಟ್ಟಕ್ಕಾಗಿ ಜಾಗತಿಕವಾಗಿ ಪ್ರಸಿದ್ಧವಾಗಿವೆ. ನುರಿತ ಕುಶಲಕರ್ಮಿಗಳ ಕೈಚಳಕದಿಂದ ರಚಿಸಲಾಗಿದೆ. ಹಾಗಾದರೆ ಮೋದಿಯವರು ಯಾರಿಗೆ, ಯಾವ ಗಿಫ್ಟ್ (Modi Gift)  ನೀಡಿದ್ದಾರೆ ಎಂಬುದನ್ನು ನೋಡೋಣ.

    * ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ 10 ವಸ್ತುಗಳನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Baiden) ದಂಪತಿಗೆ ಉಡುಗೊರೆಯಾಗಿ ನೀಡಿದ್ದಾರೆ. ಬೈಡೆನ್ ಪತ್ನಿ ಜಿಲ್ ಬೈಡೆನ್‍ಗೆ ಪ್ರಯೋಗಾಲಯದಲ್ಲಿ ತಯಾರಿಸಿದ 7.5 ಕ್ಯಾರೆಟ್‍ನ ಹಸಿರು ವಜ್ರವನ್ನು ನೀಡಿದ್ದಾರೆ. ಜೊತೆಗೆ ‘ಉಪನಿಷತ್ತಿನ ಹತ್ತು ತತ್ವಗಳು’ ಪುಸ್ತಕದ ಮೊದಲ ಆವೃತ್ತಿ ಹಾಗೂ ಗಣೇಶನ ವಿಗ್ರಹವನ್ನು ಮೋದಿ ಗಿಫ್ಟ್ ಆಗಿ ನೀಡಿರುವುದು ಗಮನ ಸೆಳೆದಿದೆ.

    ಪ್ರಮುಖವಾಗಿ ಮೈಸೂರಿನಿಂದ ತಂದ ಶ್ರೀಗಂಧದ ಮರದ ಕಟ್ಟಿಗೆಯಲ್ಲಿ ರಾಜಸ್ಥಾನದ ಜೈಪುರದ ಕುಶಲಕರ್ಮಿಯೊಬ್ಬರು ತಯಾರಿಸಿದ ಶ್ರೀಗಂಧದ ಪೆಟ್ಟಿಗೆಯನ್ನು ಜೋ ಬೈಡೆನ್ ದಂಪತಿಗೆ ಉಡುಗೊರೆಯಾಗಿ ನೀಡಲಾಗಿದೆ. ಈ ಶ್ರೀಗಂಧದ ಪೆಟ್ಟಿಗೆಯಲ್ಲಿ ಕೋಲ್ಕತ್ತಾದ ಐದನೇ ತಲೆಮಾರಿನ ಅಕ್ಕಸಾಲಿಗರ ಕುಟುಂಬವು ತಯಾರಿಸಿದ ಬೆಳ್ಳಿ ಗಣೇಶನ ವಿಗ್ರಹ ಹಾಗೂ ದೀಪ ಇದ್ದು, ಅದರ ಜೊತೆ 10 ವಸ್ತುಗಳಿರುವ ದಶದಾನವನ್ನು ಮೋದಿ ಮಾಡಿದ್ದಾರೆ.

    * ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ (Rishi Sunak) ಅವರ ಪತ್ನಿ ಅಕ್ಷತಾ ಮೂರ್ತಿಗೆ (Akshata Murthy) ಬನಾರಸ್‍ನಲ್ಲಿ ತಯಾರಿಸಲಾಗುವ ಶಾಲುಗಳನ್ನು ನೀಡಿದ್ದಾರೆ. ಇವುಗಳನ್ನು ಕೈಯಲ್ಲೇ ಮೃದುವಾದ ರೇಷ್ಮೆಯ ದಾರಗಳಿಂದ ನೇಯಲಾಗಿದೆ. ಈ ಶಾಲುಗಳು ವಿಶ್ವಮಾನ್ಯ ಪಡೆದಿದೆ. ಇದನ್ನೂ ಓದಿ: 2024ರ ಜಿ20 ಶೃಂಗಸಭೆ ಬ್ರೆಜಿಲ್‌ ದೇಶಕ್ಕೆ ಶಿಫ್ಟ್‌ – ಬ್ರೆಜಿಲ್‌ ಅಧ್ಯಕ್ಷರಿಗೆ ಜವಾಬ್ದಾರಿ ಹಸ್ತಾಂತರಿಸಿದ ಮೋದಿ

    * ಇಂಡೋನೇಷ್ಯಾದ ಅಧ್ಯಕ್ಷರ ಪತ್ನಿಗೆ ಅಸ್ಸೋಂನಲ್ಲಿ ತಯಾರಿಸಲಾಗುವ ನೇಯ್ದ ಶಾಲುಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ನುರಿತ ಕುಶಲಕರ್ಮಿಗಳು ಇವನ್ನು ತಯಾರಿಸಿದ್ದಾರೆ. ಇವುಗಳನ್ನು ಕೂಡ ರೇಷ್ಮೆಯಿಂದ ತಯಾರಿಸಲಾಗಿದ್ದು, ಈ ಶಾಲನ್ನು ಕದಮ್ ಮರದ ಪೆಟ್ಟಿಗೆಯಲ್ಲಿ ನೀಡಲಾಗಿದೆ. ಇದನ್ನೂ ಓದಿ: BRICS ಶೃಂಗಸಭೆ: ನೆಲದ ಮೇಲಿದ್ದ ತ್ರಿವರ್ಣ ಧ್ವಜವನ್ನು ಕೈಗೆತ್ತಿಕೊಂಡು ಗೌರವ ತೋರಿದ ಮೋದಿ

    * ಫ್ರಾನ್ಸ್, ಜರ್ಮನಿ ಮತ್ತು ಸಿಂಗಾಪುರದ ನಾಯಕರು ಕಚ್‍ನ ‘ಅಗೇಟ್ ಬೌಲ್’ ಅನ್ನು ಸ್ವೀಕರಿಸಿದರು. ಚಾಲ್ಸೆಡೋನಿಕ್-ಸಿಲಿಕಾದಿಂದ ರೂಪುಗೊಂಡ ಅಮೂಲ್ಯವಾದ ಕಲ್ಲು ಇದಾಗಿದೆ. ರಾಜ್ಪಿಪ್ಲಾ ಮತ್ತು ರತನ್ಪುರದ ಭೂಗತ ಗಣಿಗಳಲ್ಲಿ ನದಿಪಾತ್ರಗಳಲ್ಲಿ ಇದು ಕಂಡುಬರುತ್ತದೆ. ಇದನ್ನು ವಿವಿಧ ಅಲಂಕಾರಿಕ ವಸ್ತುಗಳನ್ನು ಉತ್ಪಾದಿಸಲು ಹೊರತೆಗೆಯಲಾಗುತ್ತದೆ.

    * ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಝ್ ಅವರಿಗೆ ಹಿಮಾಚಲದ ಮಂಡಿ ಮತ್ತು ಕುಲು ಜಿಲ್ಲೆಗಳಿಂದ ಕನಾಲ್ ಹಿತ್ತಾಳೆಯ ಸೆಟ್ ಅನ್ನು ಉಡುಗೊರೆಯಾಗಿ ನೀಡಲಾಯಿತು. ಕನಾಲ್ ಹಿತ್ತಾಳೆಯ ಸೆಟ್ ದೊಡ್ಡದಾದ ಹಾಗೂ ನೇರವಾದ ಹಿತ್ತಾಳೆಯ ತುತ್ತೂರಿಯಾಗಿದ್ದು, ಒಂದು ಮೀಟರ್‍ಗಿಂತಲೂ ಹೆಚ್ಚು ಉದ್ದವನ್ನು ಹೊಂದಿದೆ. ಗ್ರಾಮ ದೇವತೆಗಳ ಮೆರವಣಿಗೆಗಳಂತಹ ವಿಧ್ಯುಕ್ತ ಸಂದರ್ಭಗಳಲ್ಲಿ ಇದನ್ನು ಬಳಸಲಾಗುತ್ತದೆ. ಹಿಮಾಚಲ ಪ್ರದೇಶದ ಮಂಡಿ ಮತ್ತು ಕುಲು ಜಿಲ್ಲೆಗಳಲ್ಲಿ ನುರಿತ ಲೋಹದ ಕುಶಲಕರ್ಮಿಗಳಿಂದ ಇವುಗಳನ್ನು ತಯಾರಿಸಲಾಗುತ್ತದೆ.

    * ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರಿಗೆ ಪಟಾನ್ ಪಟೋಲಾ (ಸ್ಕಾರ್ಫ್), ವರ್ಣರಂಜಿತ ದುಪಟ್ಟಾವನ್ನು ನೀಡಲಾಯಿತು. ಉತ್ತರ ಗುಜರಾತ್‍ನ ಪಟಾನ್ ಪ್ರದೇಶದಲ್ಲಿ ಸಾಲ್ವಿ ಕುಟುಂಬವು ನೇಯ್ದ ಸ್ಕಾರ್ಫ್ ಅನ್ನು ಎಷ್ಟು ಚೆನ್ನಾಗಿ ರಚಿಸಲಾಗಿದೆ ಎಂದರೆ ಅದರ ಮುಂಭಾಗ ಮತ್ತು ಹಿಮ್ಮುಖವನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಸ್ಕಾರ್ಫ್ ಅನ್ನು ಅಲಂಕಾರಿಕ ‘ಸಡೇಲಿ’ ಪೆಟ್ಟಿಗೆಯಲ್ಲಿ ಪ್ಯಾಕ್ ಮಾಡಲಾಗಿದೆ.

    * ಗುಜರಾತ್‍ನ ಛೋಟಾ ಉದಯ್‍ಪುರದ ರಾಥ್ವಾ ಕುಶಲಕರ್ಮಿಗಳು ತಯಾರಿಸಿದ ಪಿಥೋರಾ ವಾಲ್ ಪೇಂಟಿಂಗ್ ಅನ್ನು ಪ್ರಧಾನಿಯವರು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರಿಗೆ ಉಡುಗೊರೆಯಾಗಿ ನೀಡಿದರು. ಈ ವರ್ಣಚಿತ್ರಗಳು ಬುಡಕಟ್ಟು ಜನಾಂಗದವರ ಸಾಮಾಜಿಕ, ಸಾಂಸ್ಕೃತಿಕ ಮತ್ತು ಪೌರಾಣಿಕ ಜೀವನ ಮತ್ತು ನಂಬಿಕೆಗಳನ್ನು ಪ್ರತಿಬಿಂಬಿಸುವ ಗುಹೆಯ ವರ್ಣಚಿತ್ರಗಳಾಗಿವೆ. ವರ್ಣಚಿತ್ರಗಳು ಆಸ್ಟ್ರೇಲಿಯಾದ ಸ್ಥಳೀಯ ಸಮುದಾಯಗಳ ಮೂಲನಿವಾಸಿಗಳ ಡಾಟ್ ಪೇಂಟಿಂಗ್‍ಗಳಿಗೆ ಗಮನಾರ್ಹವಾದ ಹೋಲಿಕೆಯನ್ನು ಹೊಂದಿವೆ.

    * ನೀಲಗಿರಿ ಟೀ ಭಾರತದ ಚಹಾದಲ್ಲಿ ವಿಶಿಷ್ಟವಾದುದು. ಡಾರ್ಜಿಲಿಂಗ್ ಚಹಾವು ವಿಶ್ವದ ಅತ್ಯಂತ ಮೌಲ್ಯಯುತವಾಗಿದೆ. 5 ಸಾವಿರ ಅಡಿ ಎತ್ತರದಲ್ಲಿರುವ ಪಶ್ಚಿಮ ಬಂಗಾಳದ ಮಂಜಿನ ಬೆಟ್ಟಗಳ ಮೇಲೆ ಇರುವ ನೀಲಗಿರಿ ಗಿಡಗಳ ಚಿಗುರನ್ನು ಬಳಸಿ ಇದನ್ನು ತಯಾರು ಮಾಡಲಾಗುತ್ತದೆ. ಅತ್ಯಂತ ಪರಿಮಳ ಮತ್ತು ರುಚಿಕರ ಟೀ ಇದಾಗಿದೆ. ಇದರ ಜೊತೆಗೆ, ಆಂಧ್ರಪ್ರದೇಶದ ಅರಕು ಕಾಫಿ, ಮ್ಯಾಂಗ್ರೋವ್ ಜೇನುತುಪ್ಪ, ಕಾಶ್ಮೀರಿ ಪಶ್ಮಿನಾ(ಶಾಲು), ಉತ್ತರಪ್ರದೇಶದ ವಿಶೇಷವಾದ ಇತ್ತರ್ (ಸುಗಂಧ ದ್ರವ್ಯ) ಅನ್ನು ಕೂಡ ನೀಡಲಾಗಿದೆ.

    * ವಿಶ್ವದ ಅತ್ಯಂತ ವಿಶಿಷ್ಟ ಮತ್ತು ದುಬಾರಿ ಆಹಾರ ಪದಾರ್ಥ ಕೇಸರಿ. ಇದು ಪಾಕಶಾಲೆಯಲ್ಲಿ ತನ್ನದೇ ಆದ ಸ್ಥಾನ ಹೊಂದಿದ್ದರೆ ಔಷಧೀಯ ಗುಣವೂ ಇದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಔತಣಕೂಟಕ್ಕೆ ದೀದಿ ಹೋಗಿದ್ದಕ್ಕೆ ಕಾಂಗ್ರೆಸ್ ತಗಾದೆ

    ಔತಣಕೂಟಕ್ಕೆ ದೀದಿ ಹೋಗಿದ್ದಕ್ಕೆ ಕಾಂಗ್ರೆಸ್ ತಗಾದೆ

    ನವದೆಹಲಿ: ಜಿ-20 ಶೃಂಗಸಭೆ (G-20 Summit) ಪ್ರಯುಕ್ತ ರಾಷ್ಟ್ರಪತಿಗಳು ಆಯೋಜಿಸಿದ್ದ ಔತಣಕೂಟದಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ( Mamta Banarjee) ಭಾಗಿ ಆಗಿದ್ದನ್ನು ಕಾಂಗ್ರೆಸ್‌ಗೆ ಅರಗಿಸಿಕೊಳ್ಳಲು ಆಗ್ತಿಲ್ಲ.

    ಡಿನ್ನರ್ ಟೇಬಲ್‌ನಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ (Yogi Adityanath), ಕೇಂದ್ರ ಮಂತ್ರಿ ಅಮಿತ್ ಶಾ (Amitshah) ಪಕ್ಕದಲ್ಲಿ ಮಮತಾ ಬ್ಯಾನರ್ಜಿ ಕುಳಿತಿದ್ರು. ಈ ಬಗ್ಗೆ ಲೋಕಸಭೆ ವಿಪಕ್ಷ ನಾಯಕ ಅಧೀರ್ ಚೌಧರಿ ಪ್ರತಿಕ್ರಿಯಿಸಿ, ಜಿ-20 ಔತಣ ಕೂಟಕ್ಕೆ ನೀವು ಹೋಗದೇ ಇದ್ದಿದ್ರೆ ಆಕಾಶವೇನು ಉದುರಿಬೀಳ್ತಿತ್ತಾ, ಇಲ್ವಲ್ಲಾ ಎಂದು ಪ್ರಶ್ನಿಸಿದ್ದಾರೆ.

    ಔತಣಕೂಟದಲ್ಲಿ ಮಮತಾ ಬ್ಯಾನರ್ಜಿ ಪಾಲ್ಗೊಳ್ಳಲು ಬೇರೆ ಏನಾದ್ರೂ ಕಾರಣ ಇತ್ತಾ?. ಶನಿವಾರದ ಬದಲು ಶುಕ್ರವಾರವೇ ದೆಹಲಿಗೆ ಏಕೆ ಬಂದ್ರು ಅಂತೆಲ್ಲಾ ಕೇಳಿದ್ದಾರೆ. ಕಾಂಗ್ರೆಸ್‌ನ ಈ ಪ್ರಶ್ನೆಗಳಿಗೆ ಟಿಎಂಸಿ ಗರಂ ಆಗಿದ್ದು, ತೀಕ್ಷ್ಣವಾಗಿಯೇ ತಿರುಗೇಟು ನೀಡಿದೆ. ಬಂಗಾಳದ ಮುಖ್ಯಮಂತ್ರಿಗಳು ಯಾವಾಗ ಎಲ್ಲಿಗೆ ಹೋಗ್ಬೇಕು ಅನ್ನೋದನ್ನು ನೀವು ನಿರ್ಣಯಿಸಲು ಆಗಲ್ಲ. ಮಮತಾ ಐಎನ್‌ಡಿಐಎ ಕೂಟದ ಭಾಗವಾಗಿದ್ದಾರೆ. ಹಾಗಂತಾ ದೀದಿಗೆ ನೀವ್ಯಾರು ಉಪನ್ಯಾಸ ನೀಡಬೇಕಾದ ಅಗತ್ಯವಿಲ್ಲ. ಆಕೆಯ ಬದ್ಧತೆಯನ್ನು ಯಾರಿಗೂ ಪ್ರಶ್ನಿಸಲಾಗಲ್ಲ ಎಂದು ಕೌಂಟರ್ ನೀಡಿದೆ. ಇದನ್ನೂ ಓದಿ: ಮಳೆಯಿಂದ ಭಾರತ ಮಂಟಪದಲ್ಲಿ ನಿಂತಿದ್ದ ನೀರನ್ನು ಕೂಡಲೇ ತೆರವುಗೊಳಿಸಲಾಗಿತ್ತು: PIB

    ರಾಷ್ಟ್ರಪತಿಗಳ ಔತಣಕೂಟಕ್ಕೆ ಸಿಎಂಗಳಾದ ನಿತೀಶ್, ಹೇಮಂತ್ ಸೋರೆನ್ ಕೂಡ ಹೋಗಿದ್ರು. ಆದ್ರೆ, ಕರ್ನಾಟಕ, ದೆಹಲಿ, ಛತ್ತೀಸ್‌ಘಡ, ರಾಜಸ್ಥಾನ, ಒಡಿಶಾ ಸಿಎಂಗಳು ಪಾಲ್ಗೊಂಡಿರಲಿಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2 ದಿನಗಳ ಜಿ-20 ಶೃಂಗಸಭೆ ಯಶಸ್ವಿ- ಗಾಂಧೀಜಿ ಸ್ಮಾರಕಕ್ಕೆ ವಿಶ್ವನಾಯಕರ ನಮನ

    2 ದಿನಗಳ ಜಿ-20 ಶೃಂಗಸಭೆ ಯಶಸ್ವಿ- ಗಾಂಧೀಜಿ ಸ್ಮಾರಕಕ್ಕೆ ವಿಶ್ವನಾಯಕರ ನಮನ

    ನವದೆಹಲಿ: ಭಾರತದ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಎರಡು ದಿನ ನಡೆದ ಜಿ-20 ಶೃಂಗಸಭೆ (G-20 Summit) ಯಶಸ್ವಿಯಾಗಿ ಮುಗಿದಿದೆ. ಜಿ20 ಗುಂಪಿನ ಮುಂದಿನ ಜವಬ್ದಾರಿಯನ್ನು ಬ್ರೆಜಿಲ್ ಅಧ್ಯಕ್ಷರಿಗೆ ಭಾರತದ ಪ್ರಧಾನಿ ಮೋದಿ (Narendra Modi) ಹಸ್ತಾಂತರಿಸಿದ್ದಾರೆ.

    ಶೃಂಗಸಭೆ ಫಲಪ್ರದವಾಗಿದ್ದಕ್ಕೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. (United Nations )ಸೇರಿ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಸುಧಾರಣೆ ಆಗಬೇಕಿದೆ ಎಂದು ಮೋದಿ ಉದ್ಘರಿಸಿದ್ದಾರೆ. 51 ದೇಶಗಳೊಂದಿಗೆ ವಿಶ್ವಸಂಸ್ಥೆ ಆರಂಭವಾದ ಕ್ಷಣಕ್ಕೂ ಈಗಿನ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ. ಕಾಲಕ್ಕೆ ತಕ್ಕಂತೆ ವಿಶ್ವಸಂಸ್ಥೆ ಬದಲಾಗಬೇಕಿದೆ ಎಂದಿದ್ದಾರೆ. ಇದನ್ನೂ ಓದಿ: 2024ರ ಜಿ20 ಶೃಂಗಸಭೆ ಬ್ರೆಜಿಲ್‌ ದೇಶಕ್ಕೆ ಶಿಫ್ಟ್‌ – ಬ್ರೆಜಿಲ್‌ ಅಧ್ಯಕ್ಷರಿಗೆ ಜವಾಬ್ದಾರಿ ಹಸ್ತಾಂತರಿಸಿದ ಮೋದಿ

    ಈ ಮೂಲಕ ವಿಶ್ವಸಂಸ್ಥೆ ಭದ್ರತಾಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸ್ಥಾನ ಸಿಗಬೇಕು ಎಂದು ಪರೋಕ್ಷವಾಗಿ ಮೋದಿ ಹೇಳಿದ್ದಾರೆ. ಜಿ-20ಶೃಂಗಸಭೆಯ ಭಾಗವಾಗಿ ವಿಶ್ವನಾಯಕರು ಇಂದು ರಾಜಘಾಟ್‌ಗೆ ತೆರಳಿ ಮಹಾತ್ಮಾ ಗಾಂಧೀಜಿ ಸ್ಮಾರಕಕ್ಕೆ ನಮನ ಸಲ್ಲಿಸಿದ್ರು. ತುಂತುರು ಮಳೆ ನಡ್ವೆಯೂ ಪ್ರಧಾನಿ ಮೋದಿ, ಜೋ ಬೈಡನ್, ರಿಷಿ ಸುನಾಕ್ ಸೇರಿ ಜಿ-20 ನಾಯಕರು ಹೂಗುಚ್ಚ ಇರಿಸಿ ವಿಶ್ವಶಾಂತಿಗೆ ಪ್ರಾರ್ಥಿಸಿದ್ರು. ಅಮೆರಿಕಾ ಅಧ್ಯಕ್ಷರು ಇಲ್ಲಿಂದ ನೇರವಾಗಿ ವಿಯೇಟ್ನಾಂ ಪ್ರವಾಸ ಕೈಗೊಂಡರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • G20 ಸಭೆ- ವಿದೇಶಿ ಗಣ್ಯರಿಗೆ ವಿಶೇಷ ಭದ್ರತೆ

    G20 ಸಭೆ- ವಿದೇಶಿ ಗಣ್ಯರಿಗೆ ವಿಶೇಷ ಭದ್ರತೆ

    ನವದೆಹಲಿ: ಸೆ.9ರಿಂದ ಎರಡು ದಿನಗಳ ಕಾಲ ದೆಹಲಿಯಲ್ಲಿ ನಡೆಯುತ್ತಿರುವ ಜಿ20 ನಾಯಕರ ಶೃಂಗಸಭೆಯಲ್ಲಿ 30 ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು ಮತ್ತು ಯುರೋಪಿಯನ್ ಒಕ್ಕೂಟದ ಉನ್ನತ ಅಧಿಕಾರಿಗಳು ಮತ್ತು ವಿಶೇಷ ಆಹ್ವಾನಿತ ಅತಿಥಿ ರಾಷ್ಟ್ರಗಳು ಮತ್ತು 14 ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸುತ್ತಿದ್ದು ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

    ರಾಷ್ಟ್ರ ರಾಜಧಾನಿಯಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪೊಲೀಸ್, ಅರೆಸೇನಾ ಪಡೆಗಳು ಮತ್ತು ಇತರ ಏಜೆನ್ಸಿಗಳು ನಗರದಲ್ಲಿ ಹಾಕ್-ಐ ಜಾಗರೂಕತೆಯನ್ನು ನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ದೆಹಲಿ ಪೊಲೀಸರಿಗೆ 50,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ, ಕೆ9 ಶ್ವಾನದಳ ಮತ್ತು ಮೌಂಟೆಡ್ ಪೊಲೀಸರು ಸಹಾಯ ಮಾಡುತ್ತಿದ್ದಾರೆ. ಇದನ್ನೂ ಓದಿ: ಜಿ20 ಸಭೆಗೆ ವಿದೇಶಿ ಗಣ್ಯರ ಆಗಮನ – ಹಿಂಡನ್ ಏರ್ ಬೇಸ್‍ನಲ್ಲಿ ಭಾರೀ ಭದ್ರತೆ

    ವಿಮಾನ ನಿಲ್ದಾಣದಿಂದ ಹೋಟೆಲ್‍ಗಳು ಮತ್ತು ಹೋಟೆಲ್‍ಗಳಿಂದ ಜಿ20 ಶೃಂಗಸಭೆ ನಡೆಯುವ ಸ್ಥಳಗಳವರೆಗೆ ವಿದೇಶಿ ಪ್ರತಿನಿಧಿಗಳಿಗೆ ದೆಹಲಿ ಪೊಲೀಸರು ಫೂಲ್‍ಪ್ರೂಫ್ ಭದ್ರತೆಯನ್ನು ಒದಗಿಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಜಿ20ಯಲ್ಲಿ ಭಾಗಿಯಾಗುವ ಗಣ್ಯರಿಗೆ ಭವ್ಯ ಭೋಜನ – ಚಿನ್ನ, ಬೆಳ್ಳಿ ಲೇಪಿತ ತಟ್ಟೆಯಲ್ಲಿ ಊಟದ ವ್ಯವಸ್ಥೆ

    ವ್ಯವಸ್ಥೆಗಳನ್ನು ಬಲಪಡಿಸುವ ಸಲುವಾಗಿ ದೆಹಲಿ ಪೊಲೀಸರಿಗೆ ಭಾರತೀಯ ವಾಯುಪಡೆ (IAF) ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (NSG) ಮತ್ತು ಕೆಲವು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು (CAPF) ನಂತಹ ವಿಶೇಷ ಕೇಂದ್ರೀಯ ಸಂಸ್ಥೆಗಳು ಸಹ ಸಹಾಯ ಮಾಡುತ್ತಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಿ20 ಶೃಂಗಸಭೆಯಲ್ಲಿ ಭಗವದ್ಗೀತೆಯ ನೀತಿಗಳನ್ನು ಹರಡಲಿರುವ ಗೀತಾ ಅಪ್ಲಿಕೇಷನ್!

    ಜಿ20 ಶೃಂಗಸಭೆಯಲ್ಲಿ ಭಗವದ್ಗೀತೆಯ ನೀತಿಗಳನ್ನು ಹರಡಲಿರುವ ಗೀತಾ ಅಪ್ಲಿಕೇಷನ್!

    ನವದೆಹಲಿ: ಡಿಜಿಟಲ್ ಇಂಡಿಯಾ (India) ಮೂಲಕ ಜಿ20 (G-20 Summit) ಪ್ರತಿನಿಧಿಗಳಿಗೆ ಭಗವದ್ಗೀತೆಯ ಸಾರವನ್ನು ನೀಡಲು ಎಐ ಚಾಲಿತ ಗೀತಾ ಅಪ್ಲಿಕೇಷನ್ ಸಿದ್ಧಪಡಿಸಲಾಗಿದೆ.

    ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಅಪ್ಲಿಕೇಷನ್ ಮೂಲಕ ಹಿಂದೂ ಧರ್ಮದ ಪ್ರಮುಖ ಧಾರ್ಮಿಕ ಗ್ರಂಥಗಳಲ್ಲಿ ಒಂದಾದ ಭಗವದ್ಗೀತೆಯಲ್ಲಿ ಉಲ್ಲೇಖಿಸಿರುವಂತೆ ಸೂಕ್ತವಾದ ಅಂಶಗಳನ್ನು ಇದು ಒದಗಿಸಲಿದೆ. ಇದರಲ್ಲಿ ಯಾವುದೇ ಸಮಸ್ಯೆಗಳಿಗೆ ಹುಡುಕಾಟ ನಡೆಸಿದರೆ ಭಗವದ್ಗೀತೆಯಲ್ಲಿ (Bhagawad Gita) ಉಲ್ಲೇಖಿಸಲಾದ ಅಂಶಗಳ ಆಧಾರದ ಮೇಲೆ ಉತ್ತರ ದೊರೆಯಲಿದೆ. ಇದರ ಉದ್ದೇಶ ಮಾರ್ಗದರ್ಶನ, ಸ್ಫೂರ್ತಿ ಮತ್ತು ಪರಿವರ್ತನೆಯಾಗಿದೆ. ಇದನ್ನೂ ಓದಿ: ವಜ್ರಕವಚ ಅಲಂಕಾರದಲ್ಲಿ ಭಕ್ತರಿಗೆ ದರ್ಶನ ಕೊಟ್ಟ ಉಡುಪಿ ಕೃಷ್ಣ

    ಅಪ್ಲಿಕೇಷನ್ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿದೆ. ಇದರ ಬಳಕೆ ಸಹ ಸರಳವಾಗಿದೆ. ಹೆಸರು, ಲಿಂಗ ಮತ್ತು ವಯಸ್ಸಿನಂತಹ ಸರಳ ಅಂಶಗಳನ್ನು ಅಪ್‍ಲೋಡ್ ಮಾಡುವ ಮೂಲಕ ಇದನ್ನು ಬಳಸಬಹುದಾಗಿದೆ.

    ಈಗಾಗಲೇ ಇದರಲ್ಲಿ ಪ್ರಶ್ನೆಗಳನ್ನು ಅಪ್‍ಲೋಡ್ ಮಾಡಲಾಗಿದೆ. ಇದನ್ನೇ ಬಳಸಿ ಬಳಕೆದಾರರು ಆ ಪ್ರಶ್ನೆಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಂಡು ಉತ್ತರ ಕಂಡುಕೊಳ್ಳಬಹುದು. ಇಲ್ಲವೇ ತಮ್ಮದೇ ಆದ ಪ್ರಶ್ನೆಗಳನ್ನು ಇದರಲ್ಲಿ ಕೇಳಬಹುದು. ಧ್ವನಿಯನ್ನು ಸಹ ಇದು ಗ್ರಹಿಸಲಿದೆ. ಇದನ್ನೂ ಓದಿ: ಇಂಡಿಯಾ, ಭಾರತದ ನಡುವಿನ ವ್ಯತ್ಯಾಸ ವಿವರಿಸಿದ್ದ ಲಾಲೂ ಹಳೆಯ ವೀಡಿಯೋ ವೈರಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • G20 ಸಭೆಗೆ ಆಗಮಿಸುತ್ತಿರೋ ಜೋ ಬೈಡನ್‌ಗಾಗಿ ಮೂರು ಹಂತದ ಭದ್ರತೆ

    G20 ಸಭೆಗೆ ಆಗಮಿಸುತ್ತಿರೋ ಜೋ ಬೈಡನ್‌ಗಾಗಿ ಮೂರು ಹಂತದ ಭದ್ರತೆ

    ನವದೆಹಲಿ: ಭಾರತದಲ್ಲಿ ಜಿ20 ಶೃಂಗಸಭೆ (G20 summit 2023) ಹಿನ್ನೆಲೆ ಅಮೆರಿಕಾದ (America) ಅಧ್ಯಕ್ಷರು ದೆಹಲಿಗೆ ಆಗಮಿಸುತ್ತಿದ್ದು ಜೋ ಬೈಡನ್‍ಗಾಗಿ (Joe Baiden) ಮೂರು ಹಂತದ ಭದ್ರತೆ ಒದಗಿಸಲಾಗುತ್ತಿದೆ. ಶುಕ್ರವಾರ ಸಂಜೆ 7 ಗಂಟೆಗೆ ಬೋಯಿಂಗ್ ಸಿ -17 ಗ್ಲೋಬ್ ಮಾಸ್ಟರ್ III ನಲ್ಲಿ ಯುಎಸ್ ಮೂಲಕ ಆಗಮಿಸುತ್ತಿದ್ದು, ಐಟಿಸಿ ಮೌರ್ಯ ಹೋಟೆಲ್‍ನಲ್ಲಿ ತಂಗಲಿದ್ದಾರೆ.

    ಅಮೆರಿಕಾದ ಅಧ್ಯಕ್ಷರ ವಾಸ್ತವ್ಯಕ್ಕೆ 400 ಕೊಠಡಿಗಳ ಇಡೀ ಹೋಟೆಲ್ ಬುಕ್ ಮಾಡಲಾಗಿದ್ದು, 14 ಮಹಡಿಯಲ್ಲಿರುವ ವಿಶೇಷ ಕೊಠಡಿಯಲ್ಲಿ ಅವರು ತಂಗಲಿದ್ದಾರೆ. ದೆಹಲಿಯಲ್ಲಿ ಸಂಚರಿಸಲು ಬುಲೆಟ್ ಪ್ರೂಫ್ ದಿ ಬೀಸ್ಟ್ ಕಾರನ್ನು ಬಳಕೆ ಮಾಡಲಾಗುತ್ತಿದೆ.

    ಇನ್ನು ಅವರ ಸಂಚಾರ ಸಮಯದಲ್ಲಿ ಭದ್ರತೆಗೆ ಹೊರ ಅಥವಾ ಮೂರನೇ ಪದರದಲ್ಲಿ ಅರೆಸೇನಾ ಪಡೆಯ ಸಿಬ್ಬಂದಿಯನ್ನು, ಎರಡನೇ ಪದರವು ಭಾರತದ ವಿಶೇಷ ರಕ್ಷಣಾ ಗುಂಪಿನ ಕಮಾಂಡೋಗಳನ್ನು ಮತ್ತು ಒಳಗಿನ ವಲಯವು ರಹಸ್ಯ ಸೇವಾ ಏಜೆಂಟ್‍ಗಳನ್ನು ಹೊಂದಿರುತ್ತದೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ಅಸಮಾನತೆ ಇರೋವರೆಗೂ ಮೀಸಲಾತಿ ಮುಂದುವರಿಯಬೇಕು, ಅದಕ್ಕೆ RSS ಸಹಕಾರವಿದೆ: ಮೋಹನ್‌ ಭಾಗವತ್‌

    ಜೋ ಬೈಡನ್ ತಂಗಿರುವ ವೇಳೆ ಹೋಟೆಲ್ ಮೇಲೆ ಕಣ್ಣಿಡಲು ವಾಯುಸೇನೆ ಮತ್ತು ಭಾರತೀಯ ಸೇನೆಯ ಹೆಲಿಕಾಪ್ಟರ್‍ಗಳು ನಿರಂತರವಾಗಿ ಆಕಾಶದಲ್ಲಿ ಸುತ್ತಲಿವೆ. ಈ ಹೆಲಿಕಾಪ್ಟರ್ ಗಳಲ್ಲಿ ಸೇನೆ ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‍ಎಸ್‍ಜಿ) ಕಮಾಂಡೋಗಳು ಇರಲಿದ್ದಾರೆ. ಬಹುಮಹಡಿ ಕಟ್ಟಡಗಳ ಮೇಲೆ ಎನ್‍ಎಸ್‍ಜಿ ಮತ್ತು ಸೇನಾ ಸ್ನೈಪರ್ ಗಳನ್ನು ನಿಯೋಜಿಸಲಾಗಿದೆ. ಹಲವೆಡೆ ಆ್ಯಂಟಿ ಡ್ರೋನ್ ವ್ಯವಸ್ಥೆ ಅಳವಡಿಸಲಾಗಿದೆ.

    ಸೆಪ್ಟೆಂಬರ್ 8 ರಂದು ಅವರು ಪ್ರಧಾನಿ ನರೇಂದ್ರ ಮೋದಿ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಬಳಿಕ ಸೆ. 9-10 ರಂದು ಜಿ20 ಶೃಂಗಸಭೆ ಸಭೆಯಲ್ಲಿ ಭಾಗಿಯಾಗಿ ಅಮೆರಿಕಾಕ್ಕೆ ವಾಪಸ್ ಆಗಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಐತಿಹಾಸಿಕ ಹಂಪಿಯಲ್ಲಿ ಇಂದಿನಿಂದ ಜಿ-20 ಶೃಂಗಸಭೆ

    ಐತಿಹಾಸಿಕ ಹಂಪಿಯಲ್ಲಿ ಇಂದಿನಿಂದ ಜಿ-20 ಶೃಂಗಸಭೆ

    ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿಯಲ್ಲಿ (Hampi) ಇದೇ ಮೊದಲ ಬಾರಿಗೆ ಜಿ-20 ಶೃಂಗಸಭೆ (G-20 Summit) ನಡೆಯುತ್ತಿದೆ. ಜುಲೈ 9ರಿಂದ 16 ರವರೆಗೆ ನಡೆಯಲಿರುವ ಜಿ-20 ಶೃಂಗಸಭೆಗೆ ಹಂಪಿ ನವವಧುವಿನಂತೆ ಶೃಂಗಾರಗೊಂಡಿದೆ. ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕಾರ್ಯಗಳನ್ನು ಜಿ-20 ಸಲುವಾಗಿ ಹಂಪಿಯಲ್ಲಿ ಕೈಗೊಳ್ಳಲಾಗಿದೆ.

    ಜಿ-20 ಶೃಂಗಸಭೆಗೆ ಈ ಬಾರಿಯ ಅಧ್ಯಕ್ಷೀಯ ರಾಷ್ಟ್ರ ಭಾರತವಾಗಿದೆ. ಅದಕ್ಕಾಗಿಯೇ ಅತಿ ಮುಖ್ಯವಾದ ಜಿ-20 ಶೃಂಗಸಭೆಯ 3ನೇ ಪ್ರಮುಖ ಸಭೆ ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ಇಂದಿನಿಂದ 16 ರವರೆಗೆ ನಡೆಯಲಿದೆ. 3 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 3 ದಿನಗಳ ಕಾಲ ಅಂತಾರಾಷ್ಟ್ರೀಯ ಮಟ್ಟದ ಹಲವಾರು ಉನ್ನತ ಸಭೆಗಳು ಹಂಪಿಯಲ್ಲಿ ನಡೆಯಲಿದೆ.

    ಜಿ-20 ಶೃಂಗಸಭೆ ಹಿನ್ನೆಲೆಯಲ್ಲಿ ಹಂಪಿ ಪ್ರದೇಶದ ಸುತ್ತಮುತ್ತಲಿನ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿದೆ. ಸ್ಮಾರಕಗಳ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ನಡೆದಿದೆ. 43 ರಾಷ್ಟ್ರಗಳ 20 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಲಿರುವುದರಿಂದ ಹಂಪಿಯ ಸುತ್ತಮುತ್ತ ಎಲ್ಲೆಡೆ ಸಿಸಿ ಕ್ಯಾಮೆರಾಗಳ ಅಳವಡಿಕೆ ಮಾಡಲಾಗಿದೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಮೇಘಸ್ಫೋಟ – ಸಂಕಷ್ಟದಲ್ಲಿ ರಾಜ್ಯದ 83 ಅಮರನಾಥ ಯಾತ್ರಿಕರು

    ಶೃಂಗಸಭೆಗೆ 20 ದೇಶಗಳ ಪೈಕಿ 19 ದೇಶಗಳ 30 ಪ್ರತಿನಿಧಿಗಳು, 9 ಆಹ್ವಾನಿತ ದೇಶಗಳ 16 ಪ್ರತಿನಿಧಿಗಳು ಸೇರಿದಂತೆ ಒಟ್ಟು 52 ಗಣ್ಯರು ಜಿ-20 ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಮಹಿ ಗ್ರೌಂಡ್ ಹೊರಗೂ ಲೆಜೆಂಡ್ – ಸಾವಿರ ಕೋಟಿ ದಾಟಿತು ಆಸ್ತಿ ಮೌಲ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]