Tag: Future

  • ಸಿಎಂ ನೇರವಾಗಿ ಧಾರವಾಡಕ್ಕೆ ಬಂದ್ರೆ 3 ದಿನಗಳಲ್ಲಿ ಸರ್ಕಾರ ಉಳಿಯುತ್ತೆ: ಸ್ವಾಮೀಜಿ ಭವಿಷ್ಯ

    ಸಿಎಂ ನೇರವಾಗಿ ಧಾರವಾಡಕ್ಕೆ ಬಂದ್ರೆ 3 ದಿನಗಳಲ್ಲಿ ಸರ್ಕಾರ ಉಳಿಯುತ್ತೆ: ಸ್ವಾಮೀಜಿ ಭವಿಷ್ಯ

    ಧಾರವಾಡ: ಶಾಸಕರ ರಾಜೀನಾಮೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಮೈತ್ರಿ ಸರ್ಕಾರ ಉಳಿಯಬೇಕು ಎಂದರೆ ಮುಖ್ಯಮಂತ್ರಿಗಳು ಅಮೆರಿಕಾದಿಂದ ನೇರವಾಗಿ ಧಾರವಾಡಕ್ಕೆ ಬಂದರೆ ಮೂರು ದಿನಗಳಲ್ಲಿ ಸರ್ಕಾರ ಉಳಿಯುತ್ತೆ ಎಂದು ಸ್ವಾಮೀಜಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

    ಧಾರವಾಡದ ಮೈಲಾರ ಸ್ವಾಮೀಜಿಯವರು ಈ ರೀತಿಯ ಭವಿಷ್ಯವೊಂದನ್ನು ನುಡಿದಿದ್ದಾರೆ. ಜಿಲ್ಲೆಯ ರಾಜೀವಗಾಂಧಿ ನಗರದಲ್ಲಿರುವ ತಮ್ಮ ದೇವಸ್ಥಾನದಲ್ಲಿ ಭವಿಷ್ಯವನ್ನು ಸ್ವಾಮೀಜಿ ಹೇಳಿದ್ದು, ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಕತ್ತಿನ ಮಧ್ಯೆ ತ್ರಿಶೂಲದ ಅಂಚು ಸಿಕ್ಕಿಸಿಕೊಂಡು ನಂತರ ಅದನ್ನು ಕಣ್ಣಿನ ಮೇಲಿಟ್ಟುಕೊಂಡು ಸ್ವಾಮೀಜಿ ಭವಿಷ್ಯ ಹೇಳಿದ್ದಾರೆ. ಮೈತ್ರಿ ಸರ್ಕಾರ ಸಂಕಷ್ಟದಲ್ಲಿರುವ ಸಮಯದಲ್ಲಿ ಅಮೆರಿಕ ಪ್ರವಾಸಕ್ಕೆ ಹೋಗಿರುವ ಮುಖ್ಯಮಂತ್ರಿಗಳು ನೇರವಾಗಿ ಧಾರವಾಡಕ್ಕೆ ಬಂದು ಆದಿಶಕ್ತಿ ಹೊಳೆಮ್ಮನ ದರ್ಶನ ಪಡೆದು ನಂತರ ವಿಧಾನಸೌಧ ಪ್ರವೇಶಿಸಿದರೆ ಮೂರು ದಿನದಲ್ಲಿ ಸರ್ಕಾರ ಉಳಿಯುತ್ತೆ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

  • ಡಿಸೆಂಬರ್‌ವರೆಗೂ ಡಿಕೆಶಿ ಮೌನ – ದೇವಮಾನವನಿಂದ ಟ್ರಬಲ್ ಶೂಟರ್ ಭವಿಷ್ಯ

    ಡಿಸೆಂಬರ್‌ವರೆಗೂ ಡಿಕೆಶಿ ಮೌನ – ದೇವಮಾನವನಿಂದ ಟ್ರಬಲ್ ಶೂಟರ್ ಭವಿಷ್ಯ

    ಬೆಂಗಳೂರು: ಲೋಕಸಭಾ ಚುನಾಚಣೆ ಪ್ರಚಾರದಲ್ಲಿ ತೊಡಗಿದ್ದ ರಾಜ್ಯ ರಾಜಕಾರಣದ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್, ಫಲಿತಾಂಶದ ನಂತರ ಸರ್ಕಾರದ ಉಳಿವಿಗೆ ಸರ್ಕಸ್ ನಡೆಯುತ್ತಿದ್ದರೂ ಮೌನಕ್ಕೆ ಶರಣಾಗಿದ್ದಾರೆ.

    ಕಳೆದ ನಾಲ್ಕು ದಿನದಲ್ಲಿ ಮೂರು ಬಾರಿ ಡಿ.ಕೆ ಶಿವಕುಮಾರ್ ಅವರು ಬಾಯಿಗೆ ಬಟ್ಟೆ ಕಟ್ಟಿಕೊಂಡಿದ್ದೇನೆ, ಕಣ್ಣು ಮುಚ್ಚಿಕೊಂಡಿದ್ದೇನೆ ಮತ್ತು ಕಿವಿಗೆ ಕಾಟನ್ ಹಾಕಿಕೊಂಡಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಆದರೆ ಇದಕ್ಕೆ ಬೇರೆಯದೆ ಕಾರಣ ಇದೆ ಎಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

    ಕುಂದಗೋಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಡೆದ ಘಟನೆಯಿಂದ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ. ಡಿ.ಕೆ ಶಿವಕುಮಾರ್ ಕುಂದಗೋಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹೋಟೆಲ್‍ನಲ್ಲಿ ತಂಗಿದ್ದರು. ಆಗ ದೈವ ಮಾನವರೊಬ್ಬರ ಬಳಿ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಜ್ಯೋತಿಷ್ಯ ಕೇಳಿಸಿದ್ದರು.

    ಡಿ.ಕೆ. ಶಿವಕುಮಾರ್ ಜಾತಕ ನೋಡಿ ಭವಿಷ್ಯ ನುಡಿದ ದೈವ ಮಾನವ, ಡಿಸೆಂಬರ್ ನಂತರ ನಿಮಗೆ ರಾಜಯೋಗ ಇದೆ ಎಂದು ಭವಿಷ್ಯ ನುಡಿದಿದ್ದರು. ಈ ಹಿನ್ನೆಲೆಯಲ್ಲಿ ಡಿಸೆಂಬರ್ ವರೆಗೆ ಸುಮ್ಮನಿರುವಂತೆ ಸೂಚಿಸಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.

    ಐಟಿ, ಇಡಿ, ಸಿಬಿಐ, ಸಮ್ಮಿಶ್ರ ಸರ್ಕಾರದ ಗೊಂದಲ ಹೀಗೆ ಸಾಕಷ್ಟು ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗಳಿಂದ ಸಮಸ್ಯೆ ಎದುರಿಸುತ್ತಿರುವ ಡಿ.ಕೆ.ಶಿವಕುಮಾರ್ ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಬಹುತೇಕ ಮೌನಕ್ಕೆ ಶರಣಾಗಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

  • ಮಗನ ಜೊತೆ ರಾಜಗುರು ಮನೆಗೆ ಸಿಎಂ – ದ್ವಾರಕನಾಥ್ ಸ್ಪಷ್ಟನೆ

    ಮಗನ ಜೊತೆ ರಾಜಗುರು ಮನೆಗೆ ಸಿಎಂ – ದ್ವಾರಕನಾಥ್ ಸ್ಪಷ್ಟನೆ

    ಬೆಂಗಳೂರು: ಲೋಕಸಭಾ ಚುನಾವಣೆಯ ಬೆನ್ನಲ್ಲೆ ಸಿಎಂ ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕರೆದುಕೊಂಡು ರಾಜಗುರು ದ್ವಾರಕನಾಥ್ ಅವರನ್ನ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.

    ರಾತ್ರೋರಾತ್ರಿ ಭೇಟಿ ಮಾಡಿದ್ದು ಸತತ 4 ಗಂಟೆಗಳ ಕಾಲ ಚರ್ಚೆ ಮಾಡಿದ್ದಾರೆ. ಜ್ಯೋತಿಷಿ ಮಾತು ಕೇಳಿ ಅಪ್ಪ ಕುಮಾರಸ್ವಾಮಿ, ಮಗ ನಿಖಿಲ್ ಟೆನ್ಶನ್ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಮಾರ್ಚ್ 29ರ ಬಳಿಕ ನಿಖಿಲ್ ಜಾತಕದಲ್ಲಿ ಗುರು ಸ್ಥಾನ ಬದಲಾವಣೆ ಮಾಡುತ್ತಾರೆ. ಒಳ್ಳೆಯ ಗಳಿಗೆಯಲ್ಲಿ ಮಂಡ್ಯದಿಂದ ನಾಮಪತ್ರ ಸಲ್ಲಿಸಿ, ಸದ್ಯಕ್ಕೆ ರಾಜಕೀಯ ಜೀವನದಲ್ಲಿ ಕಷ್ಟ ಇದೆ ಎಂದು ಜ್ಯೋತಿಷಿ ದ್ವಾರಕನಾಥ್ ಹೇಳಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಾಜಗುರು ದ್ವಾರಕನಾಥ್ ಅವರು, ಇದು ಕುಮಾರಸ್ವಾಮಿ ಅವರದ್ದು ಸೌಹಾರ್ಧ ಭೇಟಿ ಅಷ್ಟೇ. 2107ರಲ್ಲೆ ನಾನು ಕುಮಾರಸ್ವಾಮಿ ಸಿಎಂ ಆಗುತ್ತಾರೆ ಎಂದು ಹೇಳಿದ್ದೆ, ಅದರಂತೆ ಆಗಿದ್ದಾರೆ. ಅವರಿಗೆ ಶೃಂಗೇರಿ ಶಾರದಾಂಬೆ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವರ ಆಶೀರ್ವಾದ ಇದೆ ಎಂದರು.

    ಸಿಎಂ ಪುತ್ರ ಕೂಡ ಸ್ಪರ್ಧೆ ಮಾಡುತ್ತಾ ಇದ್ದೀನಿ ಅಂದ್ರು. ಅದನ್ನು ಬೇಡಾ ಅನ್ನೋದಕ್ಕೆ ಆಗಲ್ಲ. ಹೀಗಾಗಿ ಚುನಾವಣೆಗೆ ನಿಲ್ಲು ಎಂದು ಆಶೀರ್ವಾದ ಮಾಡಿದ್ದೇನೆ. ನೀವು ಗೆಲ್ಲುವುದಕ್ಕೆ ಶಾರದಾಂಬೆ, ಕುಕ್ಕೆ ಸುಬ್ರಹ್ಮಣ್ಯ ದೇವರ ಅನುಗ್ರಹ ಇದೆ. ಯುದ್ಧನೇ ಶುರುವಾಗದೆ, ಯಾರು ಗೆಲ್ಲುತ್ತಾರೆ ಎಂದು ಹೇಳುವುದಕ್ಕೆ ಆಗಲ್ಲ. ಯಾರು ನಾಮಪತ್ರ ಸಲ್ಲಿಸುತ್ತಾರೆ ಎಂದು ನೋಡಿ ಹೇಳಬಹದು ಎಂದು ರಾಜಗುರು ದ್ವಾರಕನಾಥ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀಗಳ ಬಗ್ಗೆ ಬಾಲ್ಯದಲ್ಲಿಯೇ ಇಂಟರೆಸ್ಟಿಂಗ್ ಭವಿಷ್ಯ ನುಡಿದಿದ್ದ ಹಸ್ತಸಾಮುದ್ರಿಕ ಸನ್ಯಾಸಿ!

    ಶ್ರೀಗಳ ಬಗ್ಗೆ ಬಾಲ್ಯದಲ್ಲಿಯೇ ಇಂಟರೆಸ್ಟಿಂಗ್ ಭವಿಷ್ಯ ನುಡಿದಿದ್ದ ಹಸ್ತಸಾಮುದ್ರಿಕ ಸನ್ಯಾಸಿ!

    ಶ್ರೀಗಳಿಗೆ ನಾಲ್ಕು ವರ್ಷವಿರುವಾಗಲೇ ಅವರ ಮನೆಗೆ ಹಸ್ತ ಸಾಮುದ್ರಿಕ ಸನ್ಯಾಸಿಯೊಬ್ಬರು ಆಗಮಿಸಿದ್ದರಂತೆ. ಇವರ ಮನೆಯ ಕಟ್ಟೆಯಲ್ಲಿ ಕೂತಿದ್ದ ಸನ್ಯಾಸಿಗೆ ಶಿವಣ್ಣದ ಬಾಲ್ಯದ ತೇಜೋ ವಿಶೇಷತೆಯನ್ನು ಕಂಡು ಸಂತೋಷಗೊಂಡಿದ್ದರು.

    ಬಳಿಕ ಶಿವಣ್ಣನ ಕೈಯನ್ನು ನೋಡಿ, “ಸ್ವಾಮಿ ಇಷ್ಟೊಂದು ಶುಭಲಕ್ಷಣದ ಕೈಯನ್ನು ನಾನು ನೋಡೇ ಇಲ್ಲ”, ಇವನೊಬ್ಬ ಮಹಾಭಾಗ್ಯವಂತ, ಅನ್ನದಾನಿ, ನಾಡೆಲ್ಲ ಇವರಿಂದಲೇ ಬೆಳಗುವುದು, ಇವರು ಕಾಲಜ್ಞಾನಿ. ನಿಮ್ಮ ಕೈಗೆ ಸಿಗುವವನಲ್ಲ, ಲೋಕದ ಸ್ವತ್ತು” ಎಂದು ಭವಿಷ್ಯ ನುಡಿದಿದ್ದರು. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳಿಗಾಗಿ ವಿಮಾನದಲ್ಲಿಯೇ ಕುಳಿತು ಕವನ ಬರೆದ ಅಬ್ದುಲ್ ಕಲಾಂ!

    ಸನ್ಯಾಸಿಯ ಭವಿಷ್ಯವನ್ನು ಮನೆ ಅವರು ಯಾರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ದಿನದಿಂದ ದಿನಕ್ಕೆ ಬಾಲಕ ಶಿವಯೋಗಿಯಾಗಿ ಬದಲಾಗುತ್ತಾ ಕೊನೆಗೆ ಶಿವಕುಮಾರ ಸ್ವಾಮೀಜಿಯಾಗಿ ಸಿದ್ದಗಂಗಾ ಮಠದ ಅಧಿಕಾರ ಸ್ವೀಕರಿಸಿ ನಡೆದಾಡುವ ದೇವರಾಗಿದ್ದು ಇತಿಹಾಸ.

    ಕುದುರೆ ಸವಾರಿ: ಕುದುರೆ ಸವಾರಿಯನ್ನು ಅತ್ಯಂತ ಪ್ರೀತಿಸುತ್ತಿದ್ದ ಸಿದ್ದಗಂಗಾ ಶ್ರೀ ಅವರ ಬಾಲ್ಯದ ಬದುಕು ಎಲ್ಲರಂತೆ ತುಂಟಾಟದಿಂದಲೇ ಕೂಡಿತ್ತು. ತಂದೆ ಇಲ್ಲದ ವೇಳೆಯಂತೂ ಕುದುರೆಯನ್ನು ಬಿಚ್ಚಿಕೊಂಡು ಹೋಗಿ ಧೂಳೆಬ್ಬಿಸುವಂತೆ ಕುದುರೆ ಸವಾರಿ ಮಾಡುತ್ತಿದ್ದರಂತೆ. ಸಿದ್ದಗಂಗಾ ಅಧಿಕಾರ ಸ್ವೀಕರಿಸಿದ ಆರಂಭದಲ್ಲಿ ಶಿವಕುಮಾರ ಸ್ವಾಮೀಜಿಗಳು ಭಕ್ತರ ಮನೆಗೆ ಕುದುರೆ ಮೂಲಕ ಸಂಚರಿಸಿ ಭೇಟಿ ನೀಡುತ್ತಿದ್ದರು. ಇದನ್ನೂ ಓದಿ: ಶ್ರೀಗಳ 50 ಶ್ರೀವಾಣಿಗಳು – ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ

    ಹಲಸಿನ ಹಣ್ಣನ್ನು ಇಷ್ಟಪಡುತ್ತಿದ್ದ ಶ್ರೀಗಳು ಯಾವಾಗಲೂ ಹಣ್ಣಿನ ಮರವೇರಿ ಹಣ್ಣನ್ನು ಕೊಯ್ದು ತಿನ್ನುತ್ತಿದ್ದರಂತೆ. ವೀರಾಪುರದ ಊರಿನಲ್ಲಿ ಯಾವ ಮರದಲ್ಲಿ ಹಣ್ಣು ಬಿಟ್ರೂ ಮೊದಲ ಪಾಲು ಶ್ರೀಗಳಿಗೆ ಮೀಸಲಾಗಿತ್ತು. ಬಾಲ್ಯದಲ್ಲಿಯೇ ದಾಸೋಹದ ಬಗ್ಗೆ ಅಪರಿಮಿತ ಆಸ್ಥೆ ಇಟ್ಟುಕೊಂಡಿದ್ದ ಶ್ರೀಗಳು ಹಣ್ಣನ್ನು ಇಡೀ ಊರಿನ ಹುಡುಗರಿಗೆ ಹಂಚಿಯೇ ತಿನ್ನುತ್ತಿದ್ದರು.

    ಬಾಲ್ಯದಲ್ಲಿ ತಾಯಿ ನಿಧನ: ನಾಲ್ಕನೇ ತರಗತಿ ಓದುತ್ತಿದ್ದ ಶ್ರೀಗಳ ಬದುಕಿಗೆ ದೊಡ್ಡ ಅಘಾತವಾಗಿದ್ದು, ಎದೆಗವುಚಿಕೊಂಡು ಬದುಕಿನ ಅಷ್ಟು ಸಂಸ್ಕಾರ ಧಾರೆಯೆರೆದ ತಾಯಿಯನ್ನು ಕಳೆದುಕೊಂಡಾಗ. ಸಣ್ಣ ವಯಸಿನಲ್ಲಿ ತಾಯಿಯನ್ನು ಕಳೆದುಕೊಂಡು ತೀರಾ ಅಘಾತ ಅನುಭವಿಸಿದ್ದ ಶ್ರೀಗಳು ತಮ್ಮನ್ನೇ ತಾವೇ ಸಮಾಧಾನ ಪಡಿಸಿಕೊಂಡು ಅಕ್ಕನಲ್ಲಿಯೇ ತಾಯಿಯ ಪ್ರೀತಿಯನ್ನು ಕಂಡ್ರು. ಮುಂದೆ ಬದುಕಿನಲ್ಲಿ ಅದೆಷ್ಟೋ ಅನಾಥ ಜೀವಗಳಿಗೆ ಗುರುಗಳು ತಾಯಿ ಪ್ರೀತಿಯನ್ನು ಮೊಗೆ ಮೊಗೆದು ಕೊಟ್ಟರು. ಹಸಿದ ಹೊಟ್ಟೆಗೆ ಅಮ್ಮನಂತೆ ಊಟ ಬಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಬಿಯ ಅಪಾಯದ ಭವಿಷ್ಯ ನುಡಿದಿದ್ದ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ

    ಅಂಬಿಯ ಅಪಾಯದ ಭವಿಷ್ಯ ನುಡಿದಿದ್ದ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ

    ಉಡುಪಿ: ಜಿಲ್ಲೆಯ ಕಾಪುವಿನ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ನಟ ಅಂಬರೀಶ್ ಗೆ ಮೃತ್ಯುಂಜಯ ಹೋಮ ನಡೆಸಲು ಸೂಚನೆ ನೀಡಿದ್ದರು. ಈಗ ಸ್ವತಃ ಅವರೇ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಅತಂತ್ರ ಸರ್ಕಾರ ನಿರ್ಮಾಣ- ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ

    ಫೇಸ್ ಬುಕ್ ಪೋಸ್ಟ್:
    ಇದಕ್ಕೇ ಹೇಳುವುದು ನಾವು ನಿಮಿತ್ತ ಮಾತ್ರ ಎಂದು. ಅಕ್ಟೋಬರ್ 10ರಂದು ಅಂಬರೀಶ್ ಅವರೊಡನೆ ಪ್ರಥಮ ಬಾರಿ ಫೋನಿನಲ್ಲಿ ಸಂಭಾಷಣೆ ಮಾಡಿದ್ದೆ. ದೊಡ್ಡಣ್ಣ ಅವರ ಮೂಲಕ ಪರಿಚಯವಾಯಿತು. ಜಾತಕ ನೋಡಿ, ಲಗ್ನಾಷ್ಟಮದಲ್ಲಿ ಶನಿಸಂಚಾರ ಕಾಲ, ದಶಾಧಿಪತಿ ಬುಧನಿಗೆ ಚತುರ್ಥದಲ್ಲಿ ಕೇತು ಇರುವುದು ಅಪಾಯ ಎಂದು ತಿಳಿದು ಅವರಿಗೆ ಮೃತ್ಯುಂಜಯ ಹೋಮ ಮತ್ತು ಆಶ್ಲೇಷಬಲಿ ಮಾಡಲು ಸೂಚಿಸಿದ್ದೆ. ಆ ಪ್ರಕಾರ ದಿನಾಂಕ 12ರಂದು ನನ್ನ ಮೂಲಕವೇ ಮಾಡುವುದೆಂದೂ ದಿನ ನಿಗದಿಯೂ ಆಯಿತು. ಆದರೆ ಆ ದಿನ ಬೆಂಗಳೂರಲ್ಲಿ ನನಗೆ ಜ್ವರ ಬಂದು ಆರೋಗ್ಯವೂ ಕೈ ಕೊಟ್ಟಿತು. ಆದರೂ ಮಾಡೇ ಬಿಡೋಣ ಅಂತ ನನ್ನ ಜತೆ ಬಂದಿದ್ದ ಪುರೋಹಿತರು ಹೇಳಿಯೂ ಇದ್ದರು. ಇದನ್ನೂ ಓದಿ: ಕರ್ನಾಟಕ ಚುನಾವಣೆಯಲ್ಲಿ ಯಾರಿಗೂ ಬಹುಮತ ಸಿಗಲ್ಲ, ಸಮ್ಮಿಶ್ರ ಸರ್ಕಾರ ವರ್ಷದೊಳಗೆ ಬಿದ್ದೋಗುತ್ತೆ: ಉಡುಪಿ ಜ್ಯೋತಿಷಿ

    ಈ ಸಮಯದಲ್ಲಿ ಮಾನ್ಯ ಕೇಂದ್ರ ಸಚಿವ ಅನಂತಕುಮಾರ್ ಅವರ ಅಂತ್ಯಕ್ರಿಯೆಯ ಕಾರಣ ಮುಂದಿನ ಸಲ ಮಾಡೋಣ ಎಂದು ಅಂಬರೀಶ್ ಹೇಳಿದರು. ನಾನೂ ಇದೂ ಹೌದು ಎಂದು ಸುಮ್ಮನಾದೆ. ಈ ನಂತರ ಯಾವಾಗ ಮಾಡೋಣ ಎಂದು ಮತ್ತೆ ಕೇಳಿದ್ದರು. ನಾನು ಇನ್ನೂ ದಿನಾಂಕ ಕೊಡದೆ ಮುಂದೆ ಹಾಕಿದ್ದೆ. ಇದನ್ನೂ ಓದಿ: ಗುಜರಾತ್ ಭವಿಷ್ಯ 20 ಗಂಟೆ ಮೊದಲೇ ಬರೆದಿದ್ದ ಉಡುಪಿ ಜ್ಯೋತಿಷಿ

    ಈಗ ನಮ್ಮ ನೆಚ್ಚಿನ ಅಂಬರೀಶ್ ಇನ್ನಿಲ್ಲ. ಇದನ್ನೇ ದೈವ ಚಿತ್ತ ಎನ್ನುವುದು. ನಾನೇನೂ ಜೀವ ಉಳಿಸುವವನಲ್ಲ. ಆದರೆ ಭಕ್ತಿಶ್ರದ್ಧೆಯಿಂದ ಮಾಡುವ ಆ ಹೋಮ ಪೂಜೆಗಳಿಗೆ ಆ ಶಕ್ತಿ ಇತ್ತು. ಹಾಗಾಗಿ ಆಯುಷ್ಯ ಮುಗಿದಿದ್ದಾಗ ಪೂಜೆ ಮಾಡುವ ಯೋಗ ಬರಲಿಲ್ಲ. ಅಂತೂ ಸಜ್ಜನರೊಬ್ಬರನ್ನು ಕಳೆದುಕೊಂಡ ದುಃಖವು ನನಗಿದೆ. ಹಾಗಾಗಿ ಇದನ್ನು ಬರೆಯಬೇಕೆಂದೆನಿಸಿತು. ಸಜ್ಜನರನ್ನು ಉಳಿಸಿಕೊಳ್ಳುವ ಯೋಗಭಾಗ್ಯವು ನಮಗೂ ಬೇಕು. ಅದು ಇಲ್ಲದಂತಾಯಿತು. ಅವರ ದಿವ್ಯಾತ್ಮಕ್ಕೆ ಅಕ್ಷಯ ಪುಣ್ಯಲೋಕ ಸಿಗಲಿ ಎಂದು ದೇವರಲ್ಲಿ ನನ್ನ ಪ್ರಾರ್ಥನೆ ಎಂದು ಬರೆದುಕೊಂಡಿದ್ದಾರೆ.

    ಅನಾರೋಗ್ಯದ ಕಾರಣ ಅಂಬರೀಶ್ ದಿನಾಂಕ 24ರಂದು ರಾತ್ರಿ ವಿಧಿವಶರಾಗಿದ್ದಾರೆ. ಇಂದು ಮಧ್ಯಾಹ್ನದ ನಂತರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಿಂದ ಮೆರವಣಿಗೆಯ ಮೂಲಕ ಕಂಠೀರವ ಸ್ಟುಡಿಯೋಗೆ ತಂದು ಪಾರ್ಥಿವ ಶರೀರರದ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುಖ್ಯಮಂತ್ರಿ ಆಗ್ತೀನಾ: ಕಾಲಜ್ಞಾನಿ ತಾತಯ್ಯನ ಬಳಿ ಭವಿಷ್ಯ ಕೇಳಿ ಡಿಕೆಶಿ ಕನ್‍ಫ್ಯೂಸ್!

    ಮುಖ್ಯಮಂತ್ರಿ ಆಗ್ತೀನಾ: ಕಾಲಜ್ಞಾನಿ ತಾತಯ್ಯನ ಬಳಿ ಭವಿಷ್ಯ ಕೇಳಿ ಡಿಕೆಶಿ ಕನ್‍ಫ್ಯೂಸ್!

    ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಗಣಿನಾಡಿನ ಸಂಡೂರಿನ ಕಾಡಿನ ಮಧ್ಯದಲ್ಲಿರುವ ಅನ್ನಪೂಣೇಶ್ವರಿ ಮಠಕ್ಕೆ ಭೇಟಿ ನೀಡಿ ಭವಿಷ್ಯ ಕೇಳಿದ್ದಾರೆ.

    ಅನ್ನಪೂರ್ಣೇಶ್ವರಿ ಮಠದ ದಿಗಂಬರ ರಾಜಭಾರತಿ ತಾತಯ್ಯನ ದರ್ಶನವನ್ನು ಶಿವಕುಮಾರ್ ಅವರು ಪಡೆದಿದ್ದು, ಈ ವೇಳೆ ಕಾಡಿನ ಮಧ್ಯೆ ಕುಳಿತಿರುವ ಆ ಪವಾಡ ಪುರುಷನ ಮಾತು ಕೇಳಿ ಡಿ.ಕೆ. ಶಿವಕುಮಾರ್ ಅವರೇ ಗೊಂದಲಕ್ಕೀಡಾಗಿದ್ದಾರೆ.

    ಡಿಕೆಶಿ ಅವರು ತಾತಯ್ಯನ ಬಳಿ ಮೊದಲಿಗೆ ಬಳ್ಳಾರಿ ಉಪ ಚುನಾವಣೆಯಲ್ಲಿ ಗೆಲ್ಲುವವರು ಯಾರು? ನಾವೋ ಇಲ್ಲ ರಾಮುಲೋ ಎಂದು ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ತಾತಯ್ಯ ಗೆಲುವು ನಿಮ್ಮದೇ ಎಂದು ಭವಿಷ್ಯ ಹೇಳಿದ್ದಾರೆ ಎನ್ನಲಾಗುತ್ತಿದೆ.

    ನಾನು ಸಿಎಂ ಆಗುತ್ತೀನೋ? ಇಲ್ಲವೋ ಎನ್ನುವ ಎರಡನೇ ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ಪವಾಡ ಪುರುಷ ತಾತಯ್ಯ ಅವರು 3, 4, 5 ಎಂದು ಉತ್ತರ ಕೊಟ್ಟಿದ್ದಾರೆ. ಅವರು ಕೊಟ್ಟ ಉತ್ತರಕ್ಕೆ ಡಿಕೆಶಿ ಅವರೇ ತುಂಬಾ ಗೊಂದಲಕ್ಕೀಡಾಗಿದ್ದಾರೆ ಎಂದು ತಿಳಿದು ಬಂದಿದೆ.

    345 ಉತ್ತರದಿಂದ ಮತ್ತೆ ಎರಡು ಪ್ರಶ್ನೆಗಳು ಎದ್ದಿದೆ. `345′ ದಿನ ಅಂದರೆ ಒಂದು ವರ್ಷದ ಒಳಗಡೆ ಡಿಕೆಶಿ ಮುಖ್ಯಮಂತ್ರಿ ಆಗುತ್ತಾರಾ ಎನ್ನುವ ಮೊದಲ ಪ್ರಶ್ನೆ ಎದ್ದಿದೆ. 345 ಅಂದರೆ ಹೊಸ ಕೇಸ್‍ಗಳಲ್ಲಿ ಡಿಕೆಶಿ ಸಿಕ್ಕಿಹಾಕಿಕೊಳ್ತಾರ ಎನ್ನುವ ಎರಡನೇ ಪ್ರಶ್ನೆ ಹುಟ್ಟಿಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಾಣಗಾಪುರಕ್ಕೆ ಸಿಎಂ ಎಚ್‍ಡಿಕೆ, ಡಿಕೆಶಿ ಭೇಟಿ ಹಿಂದಿನ ರಹಸ್ಯವೇನು? – ಇಲ್ಲಿದೆ ಇನ್‍ಸೈಡ್ ಸ್ಟೋರಿ

    ಗಾಣಗಾಪುರಕ್ಕೆ ಸಿಎಂ ಎಚ್‍ಡಿಕೆ, ಡಿಕೆಶಿ ಭೇಟಿ ಹಿಂದಿನ ರಹಸ್ಯವೇನು? – ಇಲ್ಲಿದೆ ಇನ್‍ಸೈಡ್ ಸ್ಟೋರಿ

    ಬೆಂಗಳೂರು: ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಜ್ಯೋತಿಷಿಯೊಬ್ಬರ ಸಲಹೆಯ ಮೇರೆಗೆ ಕಲಬುರಗಿ ಸಮೀಪ ಗಾಣಗಾಪುರ ದತ್ತಾತ್ರೇಯ ಪೀಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಹೌದು, ಡಿಕೆಶಿ ಅವರ ಆಪ್ತ ಗುರೂಜಿ ಆಗಿರುವ ದ್ವಾರಕನಾಥ ಗುರೂಜಿ ಸಲಹೆಯ ಮೇರೆಗೆ ಕುಮಾರಸ್ವಾಮಿ ದತ್ತಾತ್ರೇಯ ಪೀಠದಲ್ಲಿ ವಿಶೇಷ ಪೂಜೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ದ್ವಾರಕನಾಥ ಗುರೂಜಿ, ಇವತ್ತು ಕನ್ಯಾ ಸಂಕ್ರಮಣ. ಇದು ಅತ್ಯಂತ ಶೇಷ್ಠವಾದ ದಿವಸ. ಮುಂದಿನ 15 ದಿವಸ ದೇವರುಗಳಿಗೆ ಉಳಿದ 15 ದಿವಸ ಪಿತೃ ದೇವರುಗಳಿಗೆ ಇರುವುದು. ನಾನು ಯಾರ ಪರವಾಗಿಯೂ ಇಲ್ಲ. ನಾವು ಕೂಡ ಈ ರಾಷ್ಟ್ರದ ಪ್ರಜೆಗಳು. ನಮ್ಮದು ಒಂದು ಕೊಡುಗೆ ಇರಬೇಕು. ರಾಜ್ಯವನ್ನು ರಾಷ್ಟ್ರವನ್ನು ಆಳುವುದಕ್ಕಾಗಿ ಅವತ್ತಿನ ದಿನದಲ್ಲಿ ಶ್ರೀ ಪಾದ ಶ್ರೀ ದತ್ತಾತ್ರೇಯ ಕ್ಷೇತ್ರ ಗಾಣಗಾಪುರಕ್ಕೆ ಹೋಗಿ ದೇವರನ್ನು ಕೇಳಿಕೊಂಡು ಬರಲಿ ಎಂದು ಕುಮಾರಸ್ವಾಮಿ ಅವರಿಗೆ ಒಳ್ಳೆದು ಮಾಡುತ್ತಾರೆ ಅಂತ ಹೇಳಿದ್ದೆ. ಕಾಲಜ್ಞಾನದಲ್ಲಿ ಈ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆಯುವುದು ಅಸಂಭವನೀಯ ಎಂದರು. ಇದನ್ನು ಓದಿ: Exclusive: ಡಿಕೆಶಿ ಗುರು, ಜ್ಯೋತಿಷಿ ದ್ವಾರಕಾನಾಥ್ ಯಾರು? ರಾಜ್ಯದಲ್ಲಿ ಅಷ್ಟೊಂದು ಪ್ರಭಾವಿಯೇ?

    ಈಗಾಗಲೇ ಸದ್ಯಕ್ಕೆ ಸಿಎಂ ಕುಮಾರಸ್ವಾಮಿ ಬದಲಾವಣೆ ಸಾಧ್ಯವಿಲ್ಲ. ಅಕ್ಟೋಬರ್ 11 ರವರೆಗೆ ಕುಮಾರಸ್ವಾಮಿಗೆ ಗುರುಬಲ ಚೆನ್ನಾಗಿದೆ. ರವಿ ಬುಧ ಪ್ರವೇಶವಾಗಿದೆ. ರವಿ ಬುಧ ಒಂದೇ ಮನೆಯಲ್ಲಿದ್ದಾರೆ. ಈಗ ರವಿಯದ್ದು ಆದಿತ್ಯ ಬುಧಯೋಗ. ಈ ರೀತಿ ಇದ್ದಾಗ ರಾಜನನ್ನು ಕದಡಿಸುವುದು ಅಷ್ಟು ಸುಲಭವಲ್ಲ ಎಂದು ಹೇಳಿದರು.

    ಈ ಹಿಂದೆ ಧರ್ಮಸ್ಥಳ ದೇವಾಲಯಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅರ್ಧಗಂಟೆಯ ಕಾರ್ಯಕ್ರಮಕ್ಕೆ ನನ್ನನ್ನು ಕರೆದಿದ್ದರು. ಆಗ ಕೂಡ ವಾತಾವರಣ ಚೆನ್ನಾಗಿರಲಿಲ್ಲ. ಆಗಲೇ ನಾನು ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದ್ದೆ. ಆದರೆ ಮೋದಿ ಧರ್ಮಸ್ಥಳ ಕ್ಷೇತ್ರದ ಮಂಜುನಾಥನ ದರ್ಶನ ಪಡೆದು ದೇವರ ಸ್ವರೂಪಿಯಾದ ವೀರೇಂದ್ರ ಹೆಗಡೆಯವರ ಆರ್ಶೀವಾದ ಪಡೆದರೋ ಎಲ್ಲಾ ಕಡೆ ಗೆಲ್ತಾರೆ ಎಂದು ಹೇಳಿದ್ದೆ. ಹಾಗೆಯೇ ಉತ್ತರ ಭಾರತದ ಎಲ್ಲ ಕಡೆ ಗೆದ್ದಿದ್ದಾರೆ. ಮಹಾ ಪುಣ್ಯಕಾಲ ಇಂತ ಯೋಗದಲ್ಲಿ ದೇವರ ದರ್ಶನ ಮಾಡಿದರೆ ಭಂಗವಂತ ಖಂಡಿತವಾಗಿಯೂ ಕಾಪಾಡುತ್ತಾನೆ ಎಂದರು. ಇದನ್ನು ಓದಿ: ಐಟಿ ದಾಳಿ ಬಳಿಕ ಡಿಕೆಶಿ ಗುರೂಜಿ ದ್ವಾರಕನಾಥ್ ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಹೇಳಿದ್ದೇನು?

    ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ಬಗ್ಗೆ ಕೇಳಲಾದ ಪ್ರಶ್ನೆಗೆ, ಯಡಿಯೂರಪ್ಪನವರು ಆತುರ ಮಾಡಬಾರದು. ಯಡಿಯೂರಪ್ಪ ಕಾರ್ಯಕರ್ತರಿಗೆ, ಬೆಂಬಲಿಗರಿಗೆ ಜಾಸ್ತಿ ಆತುರ ಇದೆ. ಡಿಕೆಶಿಗೆ ಎದುರಾಗಿರುವ ಸಂಕಷ್ಟ ಬಗೆಹರಿಯಲು ದತ್ತಾತ್ರೇಯ ದೇಗುಲಕ್ಕೆ ಭೇಟಿ ನೀಡಲು ಹೇಳಿದ್ದೆ. ಇದರಿಂದಾಗಿ ಡಿಕೆಶಿಗೆ ಒಂದೊಂದೆ ಸಮಸ್ಯೆ ಬಗೆಹರಿಯುತ್ತಾ ಇದೆ. ಡಿಕೆಶಿ ಮುಂದೊಂದು ದಿನ ಸಿಎಂ ಆಗ್ತಾರೆ ಎಂದು ಈ ವೇಳೆ ಭವಿಷ್ಯ ನುಡಿದರು.

    ಹೈದ್ರಾಬಾದ್ ಕರ್ನಾಟಕದಲ್ಲಿ ಈ ಗಾಣಗಪುರ ಕ್ಷೇತ್ರ ಕಲಬುರಗಿಯಲ್ಲಿ ತುಂಬ ಹಿಂದುಳಿದ ಪ್ರದೇಶದಲ್ಲಿದೆ. ತಿಂಗಳುಗಟ್ಟಲೆ ಇಲ್ಲಿರುವ ಅಷ್ಟ ತೀರ್ಥಗಳಲ್ಲಿ ಸ್ನಾನಮಾಡುತ್ತಾರೆ. ಕುಡಿಯುವುದಕ್ಕೂ ನೀರಿಲ್ಲದೇ ಸರಿಯಾದ ವ್ಯವಸ್ಥೆ ಇಲ್ಲ ಎಂದು ಈ ವೇಳೆ ದ್ವಾರಕನಾಥ ಗುರೂಜಿ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗ್ರಹಣದಿಂದಾಗಿ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಕೋಡಿ ಶ್ರೀ ಭವಿಷ್ಯ

    ಗ್ರಹಣದಿಂದಾಗಿ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಕೋಡಿ ಶ್ರೀ ಭವಿಷ್ಯ

    ಹಾಸನ: ಶುಕ್ರವಾರ ಸಂಭವಿಸಲಿರುವ ಚಂದ್ರ ಗ್ರಹಣದಿಂದಾಗಿ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವಾಗಲಿದ್ದು, ಎಚ್.ಡಿ.ರೇವಣ್ಣನವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಅರ್ಥವಿರುವ ಭವಿಷ್ಯವನ್ನು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನುಡಿದಿದ್ದಾರೆ.

    ತಾಳೆಗರಿ ನೋಡಿ ಭವಿಷ್ಯ ಹೇಳುವ ಶ್ರೀಗಳು `ಅರಸನ ಆಯಸ್ಸು ಉಸಿರಲ್ಲಿ ನಿಂತೀತು, ಪರಸಕ್ಕೆ ಭಂಗ ಪ್ರಸಂಗಕ್ಕೆ ಹಾನಿ, ಭಾತೃ ಬೆಂಕಿ ಹಿಡಿದಾನು’ ಎಂದು ಒಗಟಾಗಿ ತಿಳಿಸಿದ್ದಾರೆ. ಅಂದರೆ `ಸಹೋದರ ಬೆಂಕಿ ಹಿಡಿದಾನು ಎಂದರೆ ಸಿಎಂ ಎಚ್.ಡಿ.ಕುಮಾರಸ್ವಾಮಿಯವರ ಸಹೋದರ ಎಚ್.ಡಿ.ರೇವಣ್ಣ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಈ ಭವಿಷ್ಯ ಅರ್ಥ ಮೂಡಿಸುತ್ತದೆ.

    ಪ್ರಾಕೃತಿಕ ಸಂಪನ್ಮೂಲಗಳು ನಾಶವಾಗಲಿದ್ದು, ಮುಂದಿನ ದಿನಗಳಲ್ಲಿ ಭೂಕಂಪನವಾಗಲಿದೆ. ಇನ್ನೂ ಹೆಚ್ಚು ಮಳೆಯಾಗಲಿದ್ದು, ಬರುವ ವಿಶೇಷ ದಿನಗಳು ಕಷ್ಟಕರವಾಗಲಿದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದ್ದಾರೆ.

    ವಿಧಾನಸಭಾ ಚುನಾವಣೆಗೂ ಮುನ್ನ “ಬಿತ್ತಿದ ಬೆಳಸು ಪೈರು ಕುಯ್ದಾರು, ಬಿತ್ತಿದ ಬೀಜ ಒಂದು ಬೆಳೆದ ಪೈರೋಂದು” ಎಂದು ಭವಿಷ್ಯ ನುಡಿದಿದ್ದರು. ಅಂದರೆ ಮುಂದಿನ ಚುನಾವಣೆ ಫಲಿತಾಂಶದಲ್ಲಿ ಅನಿರೀಕ್ಷಿತ ಬದಲಾವಣೆಗಳಾಗುವ ಸಾಧ್ಯತೆ ಇದೆ. ಯಾರೋ ಹಾಕಿದ ಶ್ರಮದ ಫಲವನ್ನ ಇನ್ನೊಬರು ಅನುಭವಿಸಲಿದ್ದಾರೆ. ಹಾಗೇ ಅನಿರೀಕ್ಷಿತ ಅಧಿಕಾರ ಚುಕ್ಕಾಣಿ ಹಿಡಿಯುವ ಸನ್ನಿವೇಶಗಳಿವೆ ಅನ್ನೊದನ್ನ ಹೇಳಿದ್ದಾರೆ.

  • ರಂಭಾಪುರಿ ಶ್ರೀಗಳ ಭವಿಷ್ಯಕ್ಕೆ ಟಾಂಗ್ ನೀಡಿದ ಸಚಿವ ಶ್ರೀನಿವಾಸ್

    ರಂಭಾಪುರಿ ಶ್ರೀಗಳ ಭವಿಷ್ಯಕ್ಕೆ ಟಾಂಗ್ ನೀಡಿದ ಸಚಿವ ಶ್ರೀನಿವಾಸ್

    ತುಮಕೂರು: ಮಠಾದೀಶರುಗಳು ಒಂದು ವ್ಯಕ್ತಿ, ಸರ್ಕಾರದ ಹಣೆಬರಹ ಬರೆಯು ಹಾಗಿದ್ದರೆ ಅವರೇ ಎಲ್ಲರನ್ನೂ ಗೆಲ್ಲಿಸುತ್ತಿದ್ದರು. ರಾಜಕಾರಣಿಗಳು ಹಳ್ಳಿ ಹಳ್ಳಿ ಸುತ್ತಿ ಜನರ ಕಾಲಿಗೆ ಬೀಳುವ ಪ್ರಮೇಯ ಬರುತ್ತಿರಲಿಲ್ಲ ಎಂದು ರಂಭಾಪುರಿ ಶ್ರೀಗಳಿಗೆ ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ಟಾಂಗ್ ಕೊಟ್ಟಿದ್ದಾರೆ.

    ಜಿಲ್ಲೆ ಗುಬ್ಬಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಸ್ವಾಮೀಜಿಗಳು ಭವಿಷ್ಯ ನುಡಿದಂತೆ ಆಗಿದ್ದರೆ, ಅವರು ನೇರವಾಗಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುತ್ತಿದ್ದರು. ನನಗೆ ಜಾತಕ, ಭವಿಷ್ಯದ ಬಗ್ಗೆ ನಂಬಿಕೆ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ರಂಭಾಪುರಿ ಶ್ರೀಗಳು ನುಡಿದಿದ್ದ ಭವಿಷ್ಯವೇನು?

    ನಾವು ಐದು ವರ್ಷ ಪೂರೈಸಲು ಪ್ರಯತ್ನ ಪಡುತ್ತಿದ್ದೇವೆ. ಕೊನೆ ತನಕ ತಲುಪುತ್ತೇವೆ ಎನ್ನುವುದು ಯಾರಿಗೆ ಗೊತ್ತು. ಸರ್ಕಾರದ ಭವಿಷ್ಯ ಮುಂದಿನ ದಿನದಲ್ಲಿ ಗೊತ್ತಾಗುತ್ತದೆ. ನಾವೆಲ್ಲರೂ ದಡ ಸೇರುತ್ತೇವೆ ಎಂಬ ಭರವಸೆಯಿಂದ ಹೊರಟಿದ್ದೇವೆ, ಮೇಲೆ ಭಗವಂತ ಹೇಗೆ ಬರೆದಿದ್ದಾನೋ ಹಾಗಾಗುತ್ತದೆ ಎನ್ನುವ ಮೂಲಕ ಸರ್ಕಾರದ ಸ್ಥಿರತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

  • ಅಕ್ಟೋಬರ್ 2ನೇ ವಾರದಲ್ಲಿ ಯಡಿಯೂರಪ್ಪಗೆ ಮಹಾಯೋಗ -ಭವಿಷ್ಯ ನುಡಿದ ರಂಭಾಪುರಿ ಶ್ರೀಗಳು

    ಅಕ್ಟೋಬರ್ 2ನೇ ವಾರದಲ್ಲಿ ಯಡಿಯೂರಪ್ಪಗೆ ಮಹಾಯೋಗ -ಭವಿಷ್ಯ ನುಡಿದ ರಂಭಾಪುರಿ ಶ್ರೀಗಳು

    ತುಮಕೂರು: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪರ ಜಾತಕದಲ್ಲಿ ಅಕ್ಟೋಬರ್ ಎರಡನೇ ವಾರದಲ್ಲಿ ಮಹಾಯೋಗ ಇದೆ ಅಂತ ರಂಭಾಪುರಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

    ನೊಣವಿನಕೆರೆಯ ಕಾಡುಸಿದ್ದೇಶ್ವರ ಮಠದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶ್ರೀಗಳು ಈ ಭವಿಷ್ಯವಾಣಿ ನುಡಿದಿದ್ದಾರೆ. ಅಕ್ಟೋಬರ್ ಎರಡನೇ ವಾರದಲ್ಲಿ ಯಡಿಯೂರಪ್ಪರ ಜಾತಕದಲ್ಲಿ ಮಹಾಯೋಗ ಇದೆ. ಈ ಮಹಾಯೋಗದ ಪ್ರಕಾರ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಿ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

    ಅಕ್ಟೋಬರ್ ಎರಡನೇ ವಾರದ ಅಪೂರ್ವ ಘಟ್ಟದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವ ಯೋಗ ಇದೆ ಎಂದರು. ಶ್ರೀಗಳಿಂದ ಹಿತನುಡಿ ಹೊರಬರುತಿದ್ದಂತೆ ಸಮಾರಂಭದಲ್ಲಿ ನೆರೆದವರು ಚಪ್ಪಾಳೆ ಸುರಿಮಳೆಗೈದಿದ್ದಾರೆ.