Tag: Future

  • ಮೋದಿ ಆರಿಸಿ ತಂದರೆ ಉಳಿತೀರಿ, ಇಲ್ಲ ಅಂದ್ರೆ ಉಳಿಯಲ್ಲ: ಮಹಾಲಿಂಗೇಶ್ವರ ಶ್ರೀ

    ಮೋದಿ ಆರಿಸಿ ತಂದರೆ ಉಳಿತೀರಿ, ಇಲ್ಲ ಅಂದ್ರೆ ಉಳಿಯಲ್ಲ: ಮಹಾಲಿಂಗೇಶ್ವರ ಶ್ರೀ

    ಬಾಗಲಕೋಟೆ: ಮೋದಿಯನ್ನು (Narendra Modi) ಮತ್ತೆ ಆರಿಸಿ ತಂದರೆ (ಲೋಕಸಭೆ ಚುನಾವಣೆ) ನೀವು ಉಳಿತೀರಿ, ಇಲ್ಲ ನೀವ್ಯಾರೂ ಉಳಿಯಲ್ಲ ಎಂದು ಬಾಗಲಕೋಟೆ (Bagalkote) ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗೇಶ್ವರ ಸ್ವಾಮೀಜಿ (Mahalingeshwara Swamiji) ಹೇಳಿಕೆ ನೀಡಿದ್ದಾರೆ.

    ಮಹಾಲಿಂಗಪುರ ಪಟ್ಟಣದವರಾದ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾ ಸ್ವಾಮೀಜಿ ರಾಜಕೀಯ ವಿದ್ಯಮಾನದ ಬಗ್ಗೆ ಹೇಳಿಕೆ ನೀಡಿ ಭಾರೀ ಸುದ್ದಿಯಾಗಿದ್ದಾರೆ. ಸ್ವಾಮೀಜಿ ಹೇಳಿದ ವಿಡಿಯೋ ತುಣುಕು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಬಿಜೆಪಿ ಜೊತೆ ಜೆಡಿಎಸ್ ಹೋಗಲ್ಲ.. ನನ್ನದು ಒರಿಜಿನಲ್ ಜೆಡಿಎಸ್: ಸಿಎಂ ಇಬ್ರಾಹಿಂ

    ನವರಾತ್ರಿ ದೀಪೋತ್ಸವದ ವೇಳೆ ಸ್ವಾಮೀಜಿ ಆಡಿದ ಜಟ ಭವಿಷ್ಯ ಇದಾಗಿದ್ದು, ಕೈಯಲ್ಲಿ ಜಟ ಹಿಡಿದು ಜಟವಾಣಿ ನುಡಿದಿದ್ದಾರೆ. ಮೂಲ ಮಹಾಲಿಂಗೇಶ್ವರ ಸ್ವಾಮೀಜಿ ಅವರ ಜಟ (ಕೂದಲು) ಪ್ರತಿ ವರ್ಷ ಬೆಳೆಯುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಸ್ವಾಮೀಜಿ ಜಟ ಹಿಡಿದು ಹೇಳುವ ಭವಿಷ್ಯ ನಿಜ ಎಂಬುದು ಇಲ್ಲಿಯ ಭಕ್ತರ ನಂಬಿಕೆಯಾಗಿದೆ. ಇದನ್ನೂ ಓದಿ: ಮದ್ಯದಂಗಡಿ ಲೈಸೆನ್ಸ್ ವಿವಾದ- ವೇದಿಕೆ ಮೇಲೆಯೇ ಶಿವಲಿಂಗೇಗೌಡ, ಸುರೇಶ್ ಕಿತ್ತಾಟ

     ಅದರಂತೆ ಭಾನುವಾರ ದೀಪೋತ್ಸವದ ವೇಳೆ ಸ್ವಾಮೀಜಿ ಜಟ ಹಿಡಿದು, ಇದರ ಮೇಲೆ ಏನಾದರೂ ವ್ಯತ್ಯಾಸ ಮಾಡಿದರೆ ಹಾಳಾಗುವ ಕಾಲ ಬರುತ್ತದೆ. ಮೋದಿಯನ್ನು ಮತ್ತೆ ಆರಿಸಿ ತಂದರೆ ನೀವು ಉಳಿತೀರಿ, ಇಲ್ಲ ನೀವ್ಯಾರೂ ಉಳಿಯಲ್ಲ ಎಂದು ಆಡಿದ ಮಾತು ಸದ್ಯ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಸ್ವಾಮೀಜಿಯ ಈ ಹೇಳಿಕೆ ಬಗ್ಗೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಐಟಿ ದಾಳಿಯಲ್ಲಿ SST ಟ್ಯಾಕ್ಸ್, ಸಂತೋಷ್ ಮನೆಯಲ್ಲಿ ಸಿಕ್ಕಿದ್ದು YST ಕಲೆಕ್ಷನ್: ಹೆಚ್‍ಡಿಕೆ ಹೊಸ ಬಾಂಬ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಮುನ್ಸೂಚನೆ ನೀಡಿದ ಬೊಂಬೆ ಭವಿಷ್ಯ

    ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಮುನ್ಸೂಚನೆ ನೀಡಿದ ಬೊಂಬೆ ಭವಿಷ್ಯ

    ಧಾರವಾಡ: ರಾಜ್ಯ ರಾಜಕಾರಣದಲ್ಲಿ ನಾಯಕತ್ವದ ಬದಲಾವಣೆಯಾಗಲಿದೆ ಎಂಬ ಭವಿಷ್ಯವನ್ನು (Future) ಮಣ್ಣಿನ ಬೊಂಬೆ (Puppet) ತೋರಿಸಿಕೊಟ್ಟಿದೆ.

    ಧಾರವಾಡ (Dharwad) ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಹೊಂದಿಕೊಂಡಿರುವ ಹನುಮನಕೊಪ್ಪ ಗ್ರಾಮಸ್ಥರು ಪ್ರತಿವರ್ಷ ಯುಗಾದಿಯಂದು (Ugadi) ಒಂದು ಸಂಪ್ರದಾಯ ನಡೆಸಿಕೊಂಡು ಬಂದಿದ್ದಾರೆ. ಅಮವಾಸ್ಯೆಯಂದು ತಮ್ಮ ಗ್ರಾಮದ ಹಳ್ಳದ ದಂಡೆಯ ಮೇಲೆ ಒಂದು ಸಮತಟ್ಟಾದ ಕಲಾಕೃತಿ ಮಾಡಿ ಅದರ ನಾಲ್ಕೂ ದಿಕ್ಕಿಗೆ ರಾಜಕಾರಣದ ಬೊಂಬೆಗಳನ್ನು ಮಾಡಿಡುತ್ತಾರೆ. ಒಳಗಡೆ ರೈತರು, ಸೈನಿಕರು, ಕಾಳುಗಳನ್ನು ಇಡುತ್ತಾರೆ.

    ಅಮವಾಸ್ಯೆ ದಿನ ಈ ಆಕೃತಿ ಮಾಡಿಟ್ಟು, ಮಾರನೆ ದಿನ ಅದನ್ನು ನೋಡಲು ಹೋಗುತ್ತಾರೆ. ಈ ಆಕೃತಿಯ ಯಾವ್ಯಾವ ಭಾಗಕ್ಕೆ ಪೆಟ್ಟಾಗಿದೆ ಎಂಬುದನ್ನು ನೋಡಿ ಅದರ ಮೇಲೆ ಆ ಭಾಗದ ಭವಿಷ್ಯವನ್ನು ಇವರು ನಿರ್ಧರಿಸುತ್ತಾರೆ. ಮಳೆ ಹೇಗಿದೆ ಹಾಗೂ ಯಾವ ಬೆಲೆ ಸಿಗುತ್ತದೆ ಎಂಬುದನ್ನೂ ಇವರು ನಿರ್ಧರಿಸುತ್ತಾರೆ.

    ಪ್ರಸಕ್ತ ವರ್ಷ ಕರ್ನಾಟಕ ದಿಕ್ಕಿನ ರಾಜಕೀಯ ಬೊಂಬೆಯ ಬಲಗಾಲಿಗೆ ಪೆಟ್ಟಾಗಿದ್ದು, ನಮ್ಮ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಬಹುದು ಎಂದು ಊಹಿಸಲಾಗಿದೆ. ಸದ್ಯ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಈ ಬಾರಿ ನಾಯಕತ್ವ ಬದಲಾಗಬಹುದು ಎಂದು ಬೊಂಬೆ ಭವಿಷ್ಯ ನುಡಿದಿದೆ.

    ಯಡಿಯೂರಪ್ಪನವರು ಸಿಎಂ ಆಗಿದ್ದ ಸಂದರ್ಭದಲ್ಲಿ ನಮ್ಮ ರಾಜ್ಯದ ನಾಯಕತ್ವ ಬದಲಾಗಬಹುದು ಎಂಬುದನ್ನು ಈ ಬೊಂಬೆ ಹಿಂದೆ ಭವಿಷ್ಯ ನುಡಿದಿತ್ತು. ಆ ಪ್ರಕಾರ ಯಡಿಯೂರಪ್ಪನವರು ಕೆಳಗಿಳಿದ ಪ್ರಸಂಗ ಎಲ್ಲರಿಗೂ ಗೊತ್ತೇ ಇದೆ. ಇದನ್ನೂ ಓದಿ: ಮೀಮ್ಸ್ ರಚನಾಕಾರರಿಗೆ ತಿಂಗಳಿಗೆ ಒಂದು ಲಕ್ಷ ಸಂಬಳ – ಬೆಂಗ್ಳೂರು ಕಂಪನಿಯಿಂದ ಆಫರ್

    ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ, ಹನುಮನಕೊಪ್ಪ ಗ್ರಾಮಸ್ಥರು ಮಾಡಿದ್ದ ಈ ಆಚರಣೆಯಲ್ಲಿ ರಾಷ್ಟ್ರನಾಯಕರ ಬೊಂಬೆಯೊಂದು ಉರುಳಿ ಬಿದ್ದಿತ್ತು. ರಾಷ್ಟ್ರನಾಯಕರಿಗೆ ಆಪತ್ತು ಎದುರಾಗಬಹದು ಎಂಬುದನ್ನು ಆ ಮೂಲಕ ಬೊಂಬೆ ಹೇಳಿತ್ತು. ಅದರ ತರುವಾಯ ಇಂದಿರಾ ಗಾಂಧಿ ಹತ್ಯೆ ಕೂಡಾ ಆಯಿತು.

    ಸದ್ಯ ರಾಜ್ಯ ರಾಜಕಾರಣದ ಬೊಂಬೆಯ ಬಲಗಾಲಿಗೆ ಪೆಟ್ಟಾಗಿದ್ದು, ಇದು ನಾಯಕತ್ವ ಬದಲಾವಣೆಯ ಮುನ್ಸೂಚನೆಯನ್ನು ನೀಡಿದೆ. ಈ ಗ್ರಾಮಸ್ಥರು ಅನೇಕ ವರ್ಷಗಳಿಂದ ಈ ಆಚರಣೆ ಮಾಡುತ್ತ ಬಂದಿದ್ದು, ಅನೇಕ ಸಂಗತಿಗಳು ನಿಜ ಕೂಡಾ ಆಗಿವೆ. ಇದನ್ನೂ ಓದಿ: ಮಾರ್ಚ್ 26ಕ್ಕೆ ಜೆಡಿಎಸ್ 2ನೇ ಪಟ್ಟಿ ರಿಲೀಸ್: ಹೆಚ್‌ಡಿ ಕುಮಾರಸ್ವಾಮಿ

  • ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ – ಕಾರ್ಣಿಕ ನುಡಿದ ಗೊರವಯ್ಯ

    ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ – ಕಾರ್ಣಿಕ ನುಡಿದ ಗೊರವಯ್ಯ

    ಹಾವೇರಿ: ಮಾಲತೇಶ ದೇವರ (Malatesh Temple) ಕಾರ್ಣಿಕ ಎಂದರೆ ವರ್ಷದ ಭವಿಷ್ಯವಾಣಿ ಅಂತಲೆ ಫೇಮಸ್. ದಸರಾ (Dasara) ಹಬ್ಬದ ಸಮಯದಲ್ಲಿ ನಡೆಯುವ ಕಾರ್ಣಿಕವಾಣಿಯ ಆಧಾರದ ಮೇಲೆ ರೈತರ ಮಳೆ, ಬೆಳೆ ನಿರ್ಧರಿಸುತ್ತಾರೆ. ರಾಜಕೀಯವಾಗಿಯೂ ಕಾರ್ಣಿಕವನ್ನು ವಿಶ್ಲೇಷಿಸಲಾಗುತ್ತದೆ. ಈ ವರ್ಷದ ಭವಿಷ್ಯವಾಣಿ ಕೇಳಿ, ನೆರೆದಿದ್ದ ಸಾವಿರಾರು ಸಂಖ್ಯೆಯ ಜನರು ಖುಷಿ ಖುಷಿಯಿಂದಲೇ ಮನೆಯತ್ತ ಹೆಜ್ಜೆ ಹಾಕಿದ್ದಾರೆ.

    ಹೌದು, ಹಾವೇರಿ (Haveri) ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಇಂದು ಕಂಡುಬಂದ ದೃಶ್ಯಗಳಿವು. ಈ ಬಾರಿ ಸಣ್ಣ ಸಣ್ಣ ರೈತರಿಗೂ ಒಳ್ಳೆಯದಾಗಲಿದೆ, ರಾಜಕೀಯವಾಗಿ ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಯುವಕನಿಗೆ ರಾಜ್ಯದ ಮುಖ್ಯಮಂತ್ರಿಸ್ಥಾನ ದೊರೆಯಲಿದೆ ಎಂದು ಗೊರವಯ್ಯ (Goravayya) ಕಾರ್ಣಿಕ ನುಡಿದಿದ್ದಾರೆ.

    ದೇವರಗುಡ್ಡದ ಮಾಲತೇಶ ದೇವಸ್ಥಾನ ಸುಮಾರು ವರ್ಷಗಳ ಇತಿಹಾಸ ಹೊಂದಿದೆ. ದಸರಾ ಹಬ್ಬದ ಸಮಯದಲ್ಲಿ ದೇವರಗುಡ್ಡದ ಕರಿಯಾಲ ಪ್ರದೇಶದಲ್ಲಿ ನಡೆಯೋ ಮಾಲತೇಶ ದೇವರ ಕಾರ್ಣಿಕ ಕೇಳಲು ಜನರ ದಂಡೆ ನೆರೆದಿರುತ್ತೆ. 9 ದಿನಗಳ ಕಾಲ ಕಠಿಣ ಉಪವಾಸ ವೃತ ಮಾಡಿ ಗೊರವಪ್ಪ ನಾಗಪ್ಪ ಉರ್ಮಿ ಕಾರ್ಣಿಕ ನುಡಿಯುತ್ತಾರೆ. ಇದನ್ನೂ ಓದಿ: ದಸರಾ ಪೆಂಡಾಲ್ ಸೌಂಡ್ ಸಿಸ್ಟಮ್ ವಯರ್ ಕಿತ್ತು ದರ್ಪ ಮೆರೆದ KAS ಅಧಿಕಾರಿ

    ಪ್ರತಿ ಬಾರಿ ಕರಿಯಾಲ ಪ್ರದೇಶಕ್ಕೆ ಡಮರುಗ, ಚಾಟಿ ಏಟಿನ ಸದ್ದಿನ ಮೂಲಕ ಗೊರವಪ್ಪಗಳು ಕಾರ್ಣಿಕದ ಗೊರವಪ್ಪನನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಬರುತ್ತಾರೆ. ಸರಿಯಾಗಿ 6 ಗಂಟೆ ಆಗುತ್ತಿದ್ದಂತೆ ಕಾರ್ಣಿಕ ಸ್ಥಳಕ್ಕೆ ಬರುವ ಗೊರವಯ್ಯ 21 ಅಡಿ ಎತ್ತರದ ಬಿಲ್ಲನ್ನೇರಿ ಸದ್ದಲೆ ಎನ್ನುತ್ತಲೆ ಕಿಕ್ಕಿರಿದು ಸೇರಿದ ಜನರ ನಡುವೆ ಕಾರ್ಣಿಕ ನುಡಿಯುತ್ತಾರೆ. ವರ್ಷದ ಭವಿಷ್ಯವಾಣಿ ನುಡಿದ ಬಳಿಕ ಬಿಲ್ಲಿನಿಂದ ಕೆಳಕ್ಕೆ ಬೀಳುತ್ತಾರೆ.

    ಈ ವರ್ಷ ಬಿಲ್ಲನ್ನೇರಿದ ಗೊರವಪ್ಪ ನಾಗಪ್ಪ ಉರ್ಮಿ “ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್” ಎಂದು ಕಾರ್ಣಿಕ ನುಡಿದಿದ್ದಾರೆ. ಬಳಿಕ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಭಟ್ ಕಾರ್ಣಿಕ ವಾಣಿಯ ವಿಶ್ಲೇಷಣೆ ಮಾಡಿದ್ದಾರೆ. ಸಣ್ಣಸಣ್ಣ ರೈತರಿಗೂ ಈ ವರ್ಷ ಉತ್ತಮ ಆಗಲಿದೆ. ರಾಜಕೀಯವಾಗಿ ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ ಎಂದು ಅವರು ವಿಶ್ಲೇಷಿಸಿದ್ದಾರೆ. ಇದನ್ನೂ ಓದಿ: ನೈಜೀರಿಯಾದಿಂದ ತಂದ ಚೀತಾಗಳಿಂದ ದೇಶಾದ್ಯಂತ ಲಂಪಿ ವೈರಸ್‌ ಹರಡುತ್ತಿದೆ: ನಾಲಿಗೆ ಹರಿಬಿಟ್ಟ ಕೈ ನಾಯಕ ನಾನಾ ಪಾಟೋಲೆ

    ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಮಾಲತೇಶ ದೇವರ ಕಾರ್ಣಿಕ ವರ್ಷದ ಭವಿಷ್ಯವಾಣಿ ಎಂತಲೇ ಪ್ರಸಿದ್ಧಿ ಪಡೆದಿದೆ. ಸಾಕ್ಷಾತ್ ಮಾಲತೇಶ ದೇವರೆ ಗೊರವಪ್ಪನ ಮೈಮೇಲೆ ಅವತರಿಸಿ, ವರ್ಷದ ಭವಿಷ್ಯವಾಣಿ ನುಡಿಸುತ್ತಾನೆ ಎನ್ನುವುದು ಕಾರ್ಣಿಕವಾಣಿಯ ವಿಶಿಷ್ಟತೆಗೆ ಸಾಕ್ಷಿಯಾಗಿದೆ. ಒಟ್ಟಿನಲ್ಲಿ ಈ ವರ್ಷದ ಕಾರ್ಣಿಕವಾಣಿ ಆಲಿಸಿದ ಜನರು ಸಣ್ಣ ಸಣ್ಣ ರೈತರಿಗೆ ಉತ್ತಮವಾಗಲಿದೆ ಎನ್ನುವ ಸಂದೇಶ ಕೇಳಿ ತಮ್ಮ ತಮ್ಮ ಊರುಗಳತ್ತ ಖುಷಿಯಿಂದ ಹೆಜ್ಜೆ ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆರ್‌ಸಿಬಿ ಐಪಿಎಲ್ ಗೆಲ್ಲಲ್ಲ, ಸಿಎಸ್‍ಕೆ ಪ್ಲೇ ಆಫ್‍ಗೆ ಹೋಗಲ್ಲ: ನಿಖರ ಭವಿಷ್ಯ ಹೇಳಿದ್ದ ಅಭಿಮಾನಿ

    ಆರ್‌ಸಿಬಿ ಐಪಿಎಲ್ ಗೆಲ್ಲಲ್ಲ, ಸಿಎಸ್‍ಕೆ ಪ್ಲೇ ಆಫ್‍ಗೆ ಹೋಗಲ್ಲ: ನಿಖರ ಭವಿಷ್ಯ ಹೇಳಿದ್ದ ಅಭಿಮಾನಿ

    – ವೈರಲ್ ಆಯ್ತು ಕ್ರಿಕೆಟ್ ಅಭಿಮಾನಿಯ ಹಳೆ ಟ್ವೀಟ್

    ಅಬುಧಾಬಿ: ಕ್ರಿಕೆಟ್ ಅಭಿಮಾನಿಯೋರ್ವ ಐಪಿಎಲ್ ಆರಂಭಕ್ಕೂ ಮುನ್ನವೇ ಮಾಡಿರುವ ಟ್ವೀಟ್‍ವೊಂದು ಈಗ ಸಖತ್ ವೈರಲ್ ಆಗಿದೆ.

    ಜುಲೈ 27ರಂದು ಕ್ರಿಕೆಟ್ ಅಭಿಮಾನಿ ಮಿತುಲ್ ಮಾಡಿರುವ ಟ್ವೀಟ್ ಇಂದು ಸಖತ್ ಚರ್ಚೆಗೆ ಗ್ರಾಸವಾಗಿದೆ. ಇನ್ನೂ ಐಪಿಎಲ್ ಆರಂಭ ಆಗವುದಕ್ಕಿಂತ ಮುನ್ನವೇ ಮಿತುಲ್ ಈ ಟ್ವೀಟ್ ಮಾಡಿದ್ದು, ಅವರು ಟ್ವೀಟ್‍ನಲ್ಲಿ ಹೇಳಿದ್ದ ತಂಡಗಳೇ ಐಪಿಎಲ್ ಪ್ಲೇ ಆಫ್‍ಗೆ ಸೆಲೆಕ್ಟ್ ಆಗಿವೆ. ಜೊತೆಗೆ ಆತ ಹೇಳಿರುವ ತಂಡಗಳೇ ಪ್ಲೇ ಆಫ್‍ನಿಂದ ಹೊರಗೆ ಬಿದ್ದಿರುವುದು ಈಗ ಅಶ್ಚರ್ಯಕ್ಕೆ ಕಾರಣವಾಗಿದೆ.

    https://twitter.com/R3Mitul/status/1287794625831489539

    ಈ ಹಿಂದೆ ಟ್ವೀಟ್ ಮಾಡಿರುವ ಮಿತುಲ್, ಕೊಹ್ಲಿ ಈ ಬಾರಿಯ ಐಪಿಎಲ್‍ನಲ್ಲಿ ಸಾಮಾನ್ಯವಾಗಿ ಆಡುತ್ತಾರೆ. ಈ ಬಾರಿಯ ಐಪಿಎಲ್‍ನಲ್ಲಿ ಸಿಎಸ್‍ಕೆ ಪ್ಲೇ ಆಫ್ ತಲುಪುವುದಿಲ್ಲ. ರಾಜಸ್ಥಾನ್ ರಾಯಲ್ಸ್ ತಂಡ ಕೊನೆಯ ಸ್ಥಾನದಲ್ಲಿ ಉಳಿಯಲಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪ್ಲೇ ಆಫ್ ತಲುಪುವುದಿಲ್ಲ. ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಗೆಲ್ಲುತ್ತದೆ. ಆರ್‌ಸಿಬಿ ತಂಡ ಮುಂಬೈ ಮತ್ತು ಡೆಲ್ಲಿ ತಂಡದ ಜೊತೆ ಪ್ಲೇ ಆಫ್ ಹೋಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಸದ್ಯ ಮಿತುಲ್ ಟ್ವೀಟ್ ಮಾಡಿದಂತೆ ನಡೆದಿದ್ದು, ಸಿಎಸ್‍ಕೆ ಮೊದಲ ಬಾರಿಗೆ ಪ್ಲೇ ಆಫ್ ಪ್ರವೇಶ ಮಾಡದೇ ಟೂರ್ನಿಯಿಂದ ಹೊರ ಬಿದ್ದಿದೆ. ಮೊದಲ ಮೂರು ತಂಡಗಳಾಗಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಪ್ರವೇಶ ಮಾಡಿವೆ. ಇದರ ಜೊತೆಗೆ ಕೊನೆ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆದ್ದು, ಹೈದರಾಬಾದ್ ತಂಡ ಪ್ಲೇ ಆಫ್ ಪ್ರವೇಶ್ ಮಾಡಿದ್ದು, ಮಿತುಲ್ ಟ್ವೀಟ್ ವೈರಲ್ ಆಗುವಂತೆ ಮಾಡಿದೆ.

    26 ವರ್ಷದ ಮಿತುಲ್ ಅಹಮದಾಬಾದ್‍ನಲ್ಲಿ ವಾಸವಿದ್ದಾರೆ. ಜೊತೆಗೆ ಅವರು ತನ್ನನ್ನು ತಾನು ಜ್ಯೋತಿಷ್ಯತಜ್ಞ ಎಂದು ಕರೆದುಕೊಳ್ಳುತ್ತಾರೆ. ಇವರು ಟ್ವೀಟ್‍ನಲ್ಲಿ ಹೇಳಿದಂತೆಯೇ ಐಪಿಎಲ್‍ನಲ್ಲಿ ನಡೆದಿದ್ದು, ಮಿತುಲ್ ಟ್ವೀಟ್ ಸಖತ್ ವೈರಲ್ ಆಗಿದೆ. ಜೊತೆಗೆ ಇವರ ಟ್ವೀಟ್ ಅನ್ನು ಸುಮಾರು 6 ಸಾವಿರ ಜನ ಲೈಕ್ ಮಾಡಿ ಮೂರು ಸಾವಿರ ಜನ ರೀಟ್ವೀಟ್ ಮಾಡಿದ್ದಾರೆ. ಸದ್ಯ ಮಿತುಲ್ ಹೇಳಿದಂತೆ ಹೈದರಾಬಾದ್ ತಂಡ ಕಪ್ ಗೆಲ್ಲಲಿದ್ಯಾ ಎಂಬುದು ಮುಂದೆ ತಿಳಿಯಲಿದೆ.

  • ಕೊರೊನಾ ಅಧಿಕಾರಸ್ತರನ್ನು, ಮಂತ್ರಿಗಳನ್ನು ಬಲಿ ತೆಗೆದುಕೊಳ್ಳಲಿದೆ: ಕೋಡಿಶ್ರೀ ಭವಿಷ್ಯ

    ಕೊರೊನಾ ಅಧಿಕಾರಸ್ತರನ್ನು, ಮಂತ್ರಿಗಳನ್ನು ಬಲಿ ತೆಗೆದುಕೊಳ್ಳಲಿದೆ: ಕೋಡಿಶ್ರೀ ಭವಿಷ್ಯ

    – ರಾಜರಿಗೆ ತೊಂದರೆ, ರಾಜಭೀತಿ ಉಂಟಾಗಲಿದೆ

    ಹಾಸನ: ಕೊರೊನಾದಿಂದಾಗಿ ಜಾಗತಿಕ ಮಟ್ಟದಲ್ಲಿ ರಾಜರಿಗೆ ರಾಜೀಕ ಭೀತಿ ಉಂಟಾಗಲಿದ್ದು, ರಾಜರಿಗೆ ತೊಂದರೆ, ನೋವು ಕಾಯಿಲೆ, ಅಪಮಾನ, ರಾಜಭೀತಿ ಉಂಟಾಗಲಿದೆ ಎಂದು ಕೋಡಿಶ್ರೀ ಭವಿಷ್ಯ ನುಡಿದಿದ್ದಾರೆ.

    ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ, ಕೋಡಿಮಠದಲ್ಲಿ ಮಾತನಾಡಿದ ಶಿವಯೋಗಿ ರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ರಾಜಭೀತಿ ಉಂಟಾಗಲಿದೆ. ಬರುವ ದಿನಗಳು ಹೆಚ್ಚು ಅಗೋಚರವಾಗಲಿದೆ ಭೂಮಿ ನಡುಗಲಿದೆ, ವಿಪರೀತ ಮಳೆಯಾಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಳ್ಳಿಗಳಲ್ಲಿ ಕೊರೊನಾ ಮರಣ ಮೃದಂಗ ಭಾರಿಸಲಿದೆ: ಕೋಡಿಶ್ರೀ ಭವಿಷ್ಯ

    ಈ ಕೊರೊನಾ ದೊಡ್ಡದೊಡ್ಡ ಜನರನ್ನು ಅಧಿಕಾರಸ್ತರನ್ನು ಮತ್ತು ಮಂತ್ರಿಗಳನ್ನು ಬಲಿ ತೆಗೆದುಕೊಳ್ಳಲಿದೆ. ಕೊರೊನಾನಾದಿಂದ ರಾಜರು ಮಾಡುವ ಶಾಸನಗಳು ಪ್ರಜೆಗಳ ವಿರೋಧಿಯಾಗಲಿದೆ. ದಟ್ಟವಾದ ಮೋಡ ಕವಿದು ಕತ್ತಲಾಗಲಿದೆ ಈ ಮಧ್ಯೆ ಒಂದು ಮಿಂಚು ಬಂದು ಮೋಡ ದೂರ ಸರಿಸಲಿದೆ. ಕಾರ್ಮೋಡವಾಗಿ ಬಂದಿರುವ ಈ ಕೊರೊನಾ ಮುಂದೆ ಒಳ್ಳೆಯ ಚಿಂತನೆ ಕೊಡಲಿದೆ. ಎರಡು ಮೂರು ತಿಂಗಳಲ್ಲಿ ಕೊರೊನಾ ಕಡಿಮೆಯಾಗಲಿದೆ ಎಂದು ಕೋಡಿಶ್ರೀ ಭವಿಷ್ಯ ನುಡಿದಿದ್ದಾರೆ.

  • ಮುಂದೆ ಯುದ್ಧ ಜರುಗಲ್ಲ, ಗಾಬರಿಯಾಗುವ ಅವಶ್ಯಕತೆ ಇಲ್ಲ: ಕೋಡಿ ಶ್ರೀ ಭವಿಷ್ಯ

    ಮುಂದೆ ಯುದ್ಧ ಜರುಗಲ್ಲ, ಗಾಬರಿಯಾಗುವ ಅವಶ್ಯಕತೆ ಇಲ್ಲ: ಕೋಡಿ ಶ್ರೀ ಭವಿಷ್ಯ

    ಹಾಸನ: ಮುಂದೆ ಯುದ್ಧ ಅಂತಹದ್ದೇನು ಜರುಗಲ್ಲ, ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದು ಕೋಡಿ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

    ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಲ್ಲಿರುವ ಕೋಡಿಮಠದಲ್ಲಿ ಮಾತನಾಡಿದ ಶ್ರೀಗಳು, ಜಗತ್ತಿನಾದ್ಯಂತ ಪ್ರಸಾರವಾಗಿರುವ ಈ ಮಾರಕ ರೋಗ ಮನುಕುಲಕ್ಕೆ ಕಂಟಕ ಪ್ರಾಯವಾಗಿದೆ. ಇದು ದಿನ ದಿನಕ್ಕೆ ಹೆಚ್ಚುತ್ತಿರುವುದು ಶೋಚನೀಯ ಪ್ರಸಂಗ ಎಂದು ಆತಂಕ ಹೊರಹಾಕಿದರು.

    ಮನುಷ್ಯ ಸ್ವಾರ್ಥದಿಂದ ತಂದುಕೊಳ್ಳುತ್ತಿರುವ ಈ ರೋಗ ಕೇವಲ ಮನುಕುಲ ಅಲ್ಲದೆ ಪ್ರಾಣಿ, ಪಕ್ಷಿ, ವೃಕ್ಷಗಳ ಮೇಲೆ ಬರುವ ಅವಕಾಶವಿದೆ. ಆದರೂ ಇದು ವಿಶಾಲಬುದ್ಧಿಯಿಂದ ಹೋಗಿ ಮನುಷ್ಯರಿಂದಲೇ ಹುಷಾರಾಗುವ ಲಕ್ಷಣ ಇದೆ. ಈ ರೋಗ ತಡೆಯಲು ಸ್ವಚ್ಛತೆ ಬಹಳ ಮುಖ್ಯ. ನಮ್ಮಲ್ಲಿ ಅನೇಕ ಮದ್ದು, ಅನೇಕ ವೈದ್ಯರಿದ್ದಾರೆ. ಇದು ಯಾವುದೇ ಮಟ್ಟಕ್ಕೆ ಹೋದರೂ ಹೆದರುವ ಅವಶ್ಯಕತೆ ಇಲ್ಲ ಎಂದು ಶ್ರೀಗಳು ಧೈರ್ಯದ ಮಾತುಗಳನ್ನು ಹೇಳಿದ್ದಾರೆ.

    ಇತ್ತೀಚೆಗೆ ಕೋಡಿಮಠದ ಒಬ್ಬ ಯುವಕನಿಗೆ ರೋಗ ಹರಡಿದೆ ಎಂಬ ಸುದ್ದಿ ನಾವು ಕೇಳಿದ್ದೇವೆ. ಆ ಯುವಕನ ಹೆಸರು ಶಾಸ್ತ್ರಿ ನಮ್ಮ ಮಠದ ಶಿಷ್ಯನೇ. ಇಲ್ಲೇ ಪಕ್ಕದ ಜಾವಗಲ್ ಗ್ರಾಮದವನು. ಆತ ಮಠದಲ್ಲಿ ಇಲ್ಲ. ಬೆಂಗಳೂರಿನಲ್ಲಿ ಇದ್ದು, ಹೋಮ, ಪೂಜೆ ಮಾಡುತ್ತಿದ್ದಾನೆ ಎಂದು ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.

    ಹಿಂದೆ ಕೊರೊನಾ ರೋಗದ ಬಗ್ಗೆ ಎಲ್ಲ ಹೇಳಿದ್ದೇವೆ. ಬರುವ ಹುಣ್ಣಿಮೆ ಕಳೆದ ತಕ್ಷಣ ಇದರ ಬಗ್ಗೆ ವಿಸ್ತಾರವಾಗಿ ಹೇಳುತ್ತೇನೆ ಎಂದು ತಿಳಿಸಿದರು.

  • ಧೋನಿ ಭವಿಷ್ಯ ಈಗಾಗಲೇ ನಿರ್ಧರವಾಗಿದೆ- ಎಂಎಸ್‍ಕೆ ಪ್ರಸಾದ್

    ಧೋನಿ ಭವಿಷ್ಯ ಈಗಾಗಲೇ ನಿರ್ಧರವಾಗಿದೆ- ಎಂಎಸ್‍ಕೆ ಪ್ರಸಾದ್

    ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ, ಮಹೇಂದ್ರ ಸಿಂಗ್ ಧೋನಿ ಅವರ ಭವಿಷ್ಯ ಈಗಾಗಲೇ ನಿರ್ಧರವಾಗಿದೆ ಎಂದು ಟೀಂ ಇಂಡಿಯಾದ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ಹೇಳಿದ್ದಾರೆ.

    2019ರ ವಿಶ್ವಕಪ್ ಸೆಮಿಫೈನಲ್ ನಂತರ ಎಂ.ಎಸ್.ಧೋನಿ ಯಾವುದೇ ಅಂತರರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಅವರ ನಿವೃತ್ತಿಯ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಂಎಸ್‍ಕೆ ಪ್ರಸಾದ್, ಧೋನಿ ಹಾಗೂ ನಾವೇಲ್ಲ ಸೇರಿ ನಿವೃತ್ತಿಯ ವಿಚಾರವಾಗಿ ಚೆರ್ಚೆ ಮಾಡಿದ್ದೇವೆ. ಈ ವೇಳೆ ಅವರ ಮುಂದಿನ ಭವಿಷ್ಯ ನಿರ್ಧಾರವಾಗಿದೆ ಎಂದು ಹೇಳಿದರು.

    ಮಾಧ್ಯಮಗಳ ಜೊತೆ ಇಂದು ಮಾತನಾಡಿರುವ ಎಂಎಸ್‍ಕೆ, ಎಂಎಸ್ ಧೋನಿ ಅವರು ನನಗೆ ಮತ್ತು ಆಡಳಿತ ಮಂಡಳಿಗೆ ತಿಳಿಸಿರುವ ಹಾಗೇ ತಮ್ಮ ಭವಿಷ್ಯದ ಬಗ್ಗೆ ಸ್ಪಷ್ಟವಾಗಿದ್ದಾರೆ. ಇದು ಗೌಪ್ಯವಾಗಿರು ವಿಷಯವಾದ ಕಾರಣ ನಾನು ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ನಮ್ಮ ನಡುವೆ ಧೋನಿ ಅವರು ಚರ್ಚಿಸಿದ ಮತ್ತು ಹಂಚಿಕೊಂಡ ಯಾವುದೇ ವಿಷಯಗಳು ಗೌಪ್ಯವಾಗಿರುವುದು ಉತ್ತಮ. ಅದು ಅಲಿಖಿತ ಕೋಡ್ ಎಂದು ತಿಳಿಸಿದರು.

    ಈ ತಿಂಗಳ ಕೊನೆಯಲ್ಲಿ ಆರಂಭವಾಗಲಿರುವ ಐಪಿಎಲ್‍ಗೆ ಧೋನಿ ಸಿದ್ಧತೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಾಗಲೇ ಭರ್ಜರಿ ಅಭ್ಯಾಸ ನಡೆಸಿದೆ. ಅದರಲ್ಲೂ ಮಹೇಂದ್ರ ಸಿಂಗ್ ಧೋನಿ ಸ್ಫೋಟಕ ಬ್ಯಾಟಿಂಗ್ ಮಾಡಿ ಕಠಿಣ ಅಭ್ಯಾಸ ನಡೆಸಿದ್ದಾರೆ. ಅಭ್ಯಾಸದ ವೇಳೆ ಎಂ.ಎಸ್.ಧೋನಿ ಸತತ ಐದು ಸಿಕ್ಸರ್ ಸಿಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಸಿಎಸ್‍ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮಾರ್ಚ್ 3ರಂದು ಚೆನ್ನೈಗೆ ಆಗಮಿಸಿ, ಅಭ್ಯಾಸ ಆರಂಭಿಸಿದ್ದಾರೆ. ಜೊತೆಗೆ ತಂಡದ ಅನುಭವಿ ಆಟಗಾರ ಸುರೇಶ್ ರೈನಾ ಸೇರಿದಂತೆ ಕೆಲ ಆಟಗಾರರು ಈಗಾಗಲೇ ಚೆನ್ನೈನ ಚಿದಂಬರಂ ಮೈದಾನದಲ್ಲಿ ಕ್ರಿಕೆಟ್ ಅಭ್ಯಾಸ ನಡೆಸಿದ್ದಾರೆ. ಈ ಹಿಂದೆ ರಾಂಚಿಯಲ್ಲೂ ಕೂಡ ಧೋನಿ ಅವರು ರಣಜಿ ಆಟಗಾರರ ಜೊತೆ ಅಭ್ಯಾಸ ಮಾಡಿದ್ದರು.

  • ಬಿಎಸ್‍ವೈ ಕಷ್ಟಕಾಲ ನೀರಾಯ್ತು, ಹೆಚ್‍ಡಿಕೆ ಸೈಲೆಂಟಾದ್ರೆ ಒಳ್ಳೆದು: ಪ್ರಕಾಶ್ ಅಮ್ಮಣ್ಣಾಯ

    ಬಿಎಸ್‍ವೈ ಕಷ್ಟಕಾಲ ನೀರಾಯ್ತು, ಹೆಚ್‍ಡಿಕೆ ಸೈಲೆಂಟಾದ್ರೆ ಒಳ್ಳೆದು: ಪ್ರಕಾಶ್ ಅಮ್ಮಣ್ಣಾಯ

    – ಸಿದ್ದರಾಮಯ್ಯ ಜವಾಬ್ದಾರಿ ಬಿಟ್ಟು ಮನೆಗೆ ಹೋಗ್ತಾರೆ

    ಉಡುಪಿ: ಅಮಾವಾಸ್ಯೆ ಶುಕ್ರವಾರ ಮಧ್ಯಾಹ್ನ ಮೂರು ಗಂಟೆಗೆ ಶನಿ ಗ್ರಹದ ಮಕರ ರಾಶಿಯ ಪ್ರವೇಶವಾಗಿದೆ. ದೇಶದಲ್ಲಿ ರಾಜ್ಯದಲ್ಲಿ ಹಲವಾರು ಬಂಧನಗಳನ್ನು ಈ ಬೆಳವಣಿಗೆ ಸೂಚಿಸುತ್ತದೆ ಎಂದು ಉಡುಪಿಯ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾಯಕರ, ಹೋರಾಟಗಾರರ, ಆರೋಪ ಹೊತ್ತವರ ಬಂಧನ ಕಾಲ ಇದು. ಜಾಗರೂಕತೆಯೇ ಎಲ್ಲದಕ್ಕೂ ಮದ್ದು, ಎಲ್ಲದರ ಪರಿಹಾರ ಎಂದು ಕಿವಿಮಾತು ಹೇಳಿದರು. ಮಾಜಿ ಸಚಿವ ಡಿಕೆ ಶಿವಕುಮಾರ್ ಸಂಕಷ್ಟ ಪರಿಹಾರವಾಗುತ್ತೆ. ಕಷ್ಟ ಕಾಲಗಳೆಲ್ಲ ದೂರವಾಗಿ ಬಿಎಸ್‍ವೈ ಅಧಿಕಾರ ತ್ಯಜಿಸಿ ವಿಶ್ರಾಂತಿ ಪಡೆಯುವ ಯೋಗವಿದೆ ಎಂದರು.

    ಮಾಜಿ ಸಿಎಂ ಸಿದ್ದರಾಮಯ್ಯನಿಗೆ ಕೆಲಸವಿಲ್ಲದೆ ನೆಮ್ಮದಿ ಎಂದ ಅವರು, ವಿರೋಧ ಪಕ್ಷಕ್ಕೆ ಕೆಲಸವಿಲ್ಲದೆ ಸಿದ್ದರಾಮಯ್ಯಗೆ ಫುಲ್ ರೆಸ್ಟ್ ಮಾಡುತ್ತಾರೆ. ಸಿದ್ದರಾಮಯ್ಯನ ಅಧಿಕಾರಗಳೆಲ್ಲ ದೂರವಾಗಿ ನೆಮ್ಮದಿಗೆ ಜಾರುತ್ತಾರೆ ಎಂದು ಭವಿಷ್ಯ ಹೇಳಿದರು. ಮಾಜಿ ಸಿಎಂ ಕುಮಾರಸ್ವಾಮಿಗೆ ಕೂಲಾಗಿದ್ದರೆ ಒಳ್ಳೆದು. ಅವರ ಹೇಳಿಕೆಗಳಿಂದಲೇ ಅವರ ವರ್ಚಸ್ಸು ಹಾಳಾಗುತ್ತದೆ ಎಂದು ಹೇಳಿದರು.

    ಕುಮಾರಸ್ವಾಮಿ ಆರೋಗ್ಯದಲ್ಲಿ ದುಷ್ಪರಿಣಾಮದ ಆತಂಕವಿದೆ. ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಿ. ಮನಸ್ಥಿತಿಯನ್ನು ಸರಿಯಾಗಿಟ್ಟುಕೊಳ್ಳಿ. ನಿಮ್ಮ ಬಿಪಿ ಹತೋಟಿಗೆ ತಂದುಕೊಳ್ಳಿ ಎಂದರು. ಪ್ರಧಾನಿ ಮೋದಿಯ ವಿಮಾನ ಟೇಕಾಫ್ ಆಗುವ ಕಾಲ ಕಳೆಯಿತು. ಅಲ್ಲೋಲ ಕಲ್ಲೋಲ ಆಗುತ್ತಿದೆ. ಮೋದಿಗೆ ಇನ್ಮುಂದೆ ಶುಭಕಾಲ ಇರುತ್ತದೆ. ವಿಮಾನ ಆಕಾಶ ಸೇರುವ ಕಾಲ ಇದು ಎಂದರು.

    ಬಾಂಬರ್ ಆದಿತ್ಯನ ಬಗ್ಗೆ ಅಮ್ಮಣ್ಣಾಯ ಭವಿಷ್ಯ ನುಡಿದಿದ್ದಾರೆ. ಆತನ ಮೈಂಡ್ ಪ್ರೋಗ್ರಾಮಿಂಗ್ ಆತನಿಗೆ ಕುತ್ತು ತಂದಿದೆ. ತಂತ್ರಜ್ಞಾನ ಸದ್ಬಳಕೆ ಮಾಡದೆ ತನ್ನನ್ನು ತಾನೇ ಬಾವಿಗೆ ತಳ್ಳಿಕೊಂಡ ಎಂದರು.

  • ಶನಿಪಥ ಬದಲಾವಣೆ – ರಾಜಕೀಯ ನಾಯಕರ ಮೇಲೆ ಶನಿಕಾಟ ಶುರು

    ಶನಿಪಥ ಬದಲಾವಣೆ – ರಾಜಕೀಯ ನಾಯಕರ ಮೇಲೆ ಶನಿಕಾಟ ಶುರು

    ಬೆಂಗಳೂರು: ಮೂವತ್ತು ವರ್ಷದ ಬಳಿಕ ಶನಿ ತನ್ನ ಪಥವನ್ನ ಬದಲಾವಣೆ ಮಾಡುತ್ತಿದ್ದಾನೆ. ಧನಸ್ಸು ರಾಶಿಯಿಂದ ಮಕರ ರಾಶಿಗೆ ಬದಲಾವಣೆ ಮಾಡುತ್ತಿದ್ದು, ಧನಸ್ಸು, ಮಕರ ಮತ್ತು ಕುಂಭ ರಾಶಿಗಳ ಮೇಲೆ ಗಾಢ ಪರಿಣಾಮ ಬೀರಲಿದೆ.

    ಜೊತೆಗೆ ರಾಜಕೀಯ ನಾಯಕರಾದ ನರೇಂದ್ರ ಮೋದಿ, ಯಡಿಯೂರಪ್ಪ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಡಿ.ಕೆ ಶಿವಕುಮಾರ್ ಮತ್ತು ಕುಮಾರಸ್ವಾಮಿ ಸೇರಿದಂತೆ ಈ ನಾಯಕರ ಶನಿಪಥ ಬದಲಾವಣೆ ಸಂದರ್ಭದಲ್ಲಿ ಇವರ ರಾಶಿಗಳಿಗೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ರೇಣುಕಾರಾಧ್ಯ ಅವರು ರಾಶಿ ಫಲಾಫಲವನ್ನ ತಿಳಿಸಿದ್ದಾರೆ. ಇದನ್ನೂ ಓದಿ: ಮಕರ, ಕುಂಭ, ಧನಸ್ಸು ರಾಶಿ ಮೇಲೆ ಶನಿಯ ಗಾಢ ಪ್ರಭಾವ- ರೇಣುಕಾರಾಧ್ಯ ಗುರೂಜಿ ಭವಿಷ್ಯ

    ನರೇಂದ್ರ ಮೋದಿ, ಯಡಿಯೂರಪ್ಪ, ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ, ಡಿ.ಕೆ ಶಿವಕುಮಾರ್ ಮತ್ತು ಕುಮಾರಸ್ವಾಮಿಯವರ ರಾಶಿಗಳ ಮೇಲೆ ಶನಿಕಾಟ ಯಾವ ರೀತಿ ಇದೆ ಅನ್ನೋದನ್ನ ಇಲ್ಲಿ ತಿಳಿಸಲಾಗಿದೆ.

    * ದೇವೇಗೌಡ: ಮಾಜಿ ಪ್ರಧಾನಿ ದೇವೇಗೌಡರಿಗೆ ಏಳೂವರೆ ವರ್ಷಗಳ ಕಾಲ ಶನಿ ಕಾಟ ಇರಲಿದೆ. ದೇವೇಗೌಡರದ್ದು ಕುಂಭ ರಾಶಿ. ಈ ಹಿನ್ನೆಲೆಯಲ್ಲಿ ಕುಂಭ ರಾಶಿಯ ಮೇಲೆ ಶನಿ ಕಾಟ ಗಾಢವಾಗಿ ಬೀರಲಿದೆ. ಶನಿಕಾಟದಿಂದ ಪ್ರಮುಖ, ಮುಖ್ಯವಾದದನ್ನ ದೇವೇಗೌಡರು ಕಳೆದುಕೊಳ್ಳಲಿದ್ದಾರೆ. ಆರೋಗ್ಯ ಸಮಸ್ಯೆ ಮತ್ತು ಜನವಿರೋಧಿ ಆಗಲಿದೆ. ಪಕ್ಷದಲ್ಲಿ ಸಮಸ್ಯೆ, ಹೊಂದಾಣಿಕೆ ಇರಲ್ಲ. ವೈಯಕ್ತಿಕ ಜಾತಕ ಚೆನ್ನಾಗಿದ್ದರೆ ಶನಿಕಾಟದಿಂದ ಪಾರಾಗಬಹುದು. ಪರಿಹಾರಕ್ಕಾಗಿ ಕಾಲ ಭೈರವೇಶ್ವರ, ಶನೇಶ್ವರ ಆರಾಧನೆ ಮತ್ತು ಹನುಮನ ಆರಾಧನೆ ಮಾಡಬೇಕು. ವೃದ್ಧರಿಗೆ ಮತ್ತು ಅನಾಥರಿಗೆ ಸಹಾಯ ಮಾಡಬೇಕು.

    * ಪ್ರಧಾನಿ ನರೇಂದ್ರ ಮೋದಿ ಭವಿಷ್ಯ: ಮೋದಿ ಅವರದ್ದು ವೃಶ್ಚಿಕ ರಾಶಿ. ಶನಿಬಲ ಚೆನ್ನಾಗಿದ್ದು, ಗ್ರಹಗತಿಗಳು ಚೆನ್ನಾಗಿವೆ. ಕಠಿಣ ಕ್ರಮ ತೆಗೆದುಕೊಳ್ಳಲು ಸಾಧ್ಯ. ಯಾವುದೇ ಹಿನ್ನಡೆ ಇಲ್ಲ.

    * ಸಿಎಂ ಯಡಿಯೂರಪ್ಪ: ಯಡಿಯೂರಪ್ಪನವರದ್ದು ವೃಶ್ಚಿಕ ರಾಶಿ. ಶನಿ ಬಲ ಇದೆ, ಸುಭದ್ರವಾದ ಸರ್ಕಾರ ಕೊಡುತ್ತಾರೆ. ಅಭಿವೃದ್ಧಿ ಕಾರ್ಯ ಮಾಡುವುದಕ್ಕೆ ಆಗಲ್ಲ.

    * ಕುಮಾರಸ್ವಾಮಿ: ಮಿಥುನ ರಾಶಿ ಇರುವುದರಿಂದ ಕುಮಾರಸ್ವಾಮಿಗೆ ಅಷ್ಟಮ ಶನಿ ಕಾಟ ಇದೆ. ಅಷ್ಟಮ ಶನಿಕಾಟದಿಂದ ಆರೋಗ್ಯದ ಸಮಸ್ಯೆ, ಸೋಲು, ನಷ್ಟ, ನಿರಾಸೆ, ಅನಗತ್ಯ ಮಾತುಗಳಿಂದ ಹಿನ್ನಡೆ. ಶನಿಕಾಟದಿಂದ ಜನವಿರೋಧಿ ಇದೆ. ಪರಿಹಾರಕ್ಕಾಗಿ ಮಾತನ್ನ ಹಿಡಿತದಲ್ಲಿ ಇಟ್ಟುಕೊಂಡು ಮಾತಾಡಬೇಕು ಹಾಗೂ ಗಣಪತಿ ಹೋಮ ಮಾಡಬೇಕು.

    * ಡಿ.ಕೆ ಶಿವಕುಮಾರ್: ಡಿಕೆ ಶಿವಕುಮಾರ್ ಅವರದ್ದು ಮೇಷ ರಾಶಿ, ಅವರಿಗೆ ದಶಮ ಶನಿ ಇದೆ. ಅನುಕೂಲಕರ ವಾತಾವರಣ ಇರಲಿದೆ. ಮೂಲಜಾತಕದ ಸಮಸ್ಯೆ, ಮೂಲನಜಾತಕದಲ್ಲಿ ವಿಘ್ನ, ಕಾನೂನು ಸಮಸ್ಯೆಗಳು ತೊಡಕುಗಳು ಎದುರಾಗಲಿದೆ. ಹಿತ ಶತ್ರುಕಾಟವಾಗಲಿದೆ. ಪರಿಹಾರಕ್ಕಾಗಿ ಮೂಲ ಜಾತಕದ ಪರಿಣಾಮ ಸರಿ ಮಾಡಿಕೋಬೇಕು.

    * ಸಿದ್ದರಾಮಯ್ಯನ ಭವಿಷ್ಯ: ತುಲಾ ರಾಶಿ ಮೂಲ ಜಾತಕದ ಬಲ ಇದೆ. ನಂಬಿದವರು ಕೈ ಬಿಟ್ಟು ಹೋಗುತ್ತಾರೆ. ಪಕ್ಷ ವಿರೋಧಿ ಚಟುವಟಿಕೆಗಳು ಎದುರಾಗಲಿವೆ. ಪರಿಹಾರಕ್ಕಾಗಿ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಮಾಡಿದರೆ ಉತ್ತಮ.

  • 18 ತಿಂಗಳ ನಂತರ ಮತ ಭಿಕ್ಷೆ: ಕೋಡಿಹಳ್ಳಿ ಶ್ರೀ ಭವಿಷ್ಯ

    18 ತಿಂಗಳ ನಂತರ ಮತ ಭಿಕ್ಷೆ: ಕೋಡಿಹಳ್ಳಿ ಶ್ರೀ ಭವಿಷ್ಯ

    ಹಾವೇರಿ: 18 ತಿಂಗಳ ನಂತರ ಮತ ಭಿಕ್ಷೆ ಎಂದು ನಾನು ಚುನಾವಣೆ ಪೂರ್ವದಲ್ಲಿ ಹೇಳಿದ್ದೆ. ಈಗ 14, 15 ತಿಂಗಳು ಮುಗಿದಿದೆ, ಇನ್ನೂ ಮೂರು ನಾಲ್ಕು ತಿಂಗಳು ಕಾದು ನೋಡಿ ಎಂದು ಕೋಡಿಹಳ್ಳಿ ಮಠದ ಶ್ರೀ ಭವಿಷ್ಯ ಹೇಳಿದ್ದಾರೆ.

    ಹಾವೇರಿಯಲ್ಲಿ ಮಾತನಾಡಿದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಬಿಎಸ್‍ವೈ ಸರ್ಕಾರದ ಪತನದ ಮುನ್ಸೂಚನೆ ನೀಡಿದ್ದಾರೆ. ಮಧ್ಯಂತರ ಚುನಾವಣೆ ಸನಿಹ ಬಂದಿದೆ ಎಂಬ ವಿಚಾರ ಕೇಳಿದಾಗ ಮೈತ್ರಿ ಸರ್ಕಾರ 14 ತಿಂಗಳಿಗೆ ಪತನವಾಗಿದೆ. ಇನ್ನೂ ಕಾಲಾವಕಾಶ ಇದೆ ಕಾದು ನೋಡಿ ಎಂದರು.

    ಇದೇ ವೇಳೆ ಅನರ್ಹ ಶಾಸಕರ ಬಗ್ಗೆ ಕೇಳಿದಾಗ, ಆದರ ಬಗ್ಗೆ ಹೇಳಿದರೆ ದೈವತ್ವದ ಬೆಲೆ ಇಲ್ಲದಾಗುತ್ತೆ. ದೇವರು, ಧರ್ಮ ಹೇಳಬಹುದು. ರಾಜಕೀಯ ಏನು ಮಾಡೋಕೆ ಹೇಳೋದು ಎಂದರು. ದೇಶದಲ್ಲಿ ದಾಯಾದಿಗಳ ಕಲಹ ಮೊದಲಿನಿಂದಲೂ ನಡೆಯುತ್ತಲೇ ಬಂದಿದೆ. ಅದರಂತೆ ಭಾರತ-ಪಾಕ್ ಯುದ್ಧೋನ್ಮಾದ, ಯುದ್ಧ ಮುಂದುವರಿಯುತ್ತದೆ ಎಂದು ಶ್ರೀಗಳು ಭವಿಷ್ಯ ಹೇಳಿದ್ದಾರೆ.