Tag: Funeral Pyre

  • ಮೃತ ಸ್ನೇಹಿತನ ಚಿತೆಗೆ ಜಿಗಿದು ಪ್ರಾಣ ಬಿಟ್ಟ ಆಪ್ತಮಿತ್ರ

    ಮೃತ ಸ್ನೇಹಿತನ ಚಿತೆಗೆ ಜಿಗಿದು ಪ್ರಾಣ ಬಿಟ್ಟ ಆಪ್ತಮಿತ್ರ

    ಲಕ್ನೋ: ಸ್ನೇಹಿತನ (Friend) ಸಾವಿನಿಂದ ಬೇಸತ್ತ ವ್ಯಕ್ತಿಯೊಬ್ಬ ಅಂತ್ಯ ಸಂಸ್ಕಾರದ ವೇಳೆ ಚಿತೆಗೆ (Funeral Pyre) ಜಿಗಿದು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದಲ್ಲಿ (UttarPradesh) ನಡೆದಿದೆ.

    ನಾಗ್ಲಾ ಖಂಗರ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಅಶೋಕ್ (42) ಎಂಬವರು ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ಶನಿವಾರ ಬೆಳಗ್ಗೆ ಮೃತಪಟ್ಟಿದ್ದರು. ಅವರ ಅಂತ್ಯಸಂಸ್ಕಾರ ಯಮುನಾ ನದಿಯ (Yamuna River) ದಡದಲ್ಲಿ ನಡೆಯುತ್ತಿತ್ತು. ಈ ವೇಳೆ ಮೃತನ ಸ್ನೇಹಿತ ಚಿತೆಗೆ ಹಾರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ RJD ವಿರುದ್ಧ ಓವೈಸಿ ವಾಗ್ದಾಳಿ

    ಚಿತೆಗೆ ಜಿಗಿದ ವ್ಯಕ್ತಿಯನ್ನು ಆನಂದ್ (40) ಎಂದು ಗುರುತಿಸಲಾಗಿದೆ. ಕೂಡಲೇ ಅಲ್ಲಿದ್ದ ಜನರು ಆತನನ್ನು ಬೆಂಕಿಯಿಂದ ಹೊರಗೆಳೆದು ಆಗ್ರಾದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಾರ್ಗ ಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆನಂದ್ ಅವರ ಕುಟುಂಬದ ಸದಸ್ಯರನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನೂತನ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್‌ಜೆಡಿ – ಕಾನೂನು ಸಮರಕ್ಕೆ ಮುಂದಾದ ಬಿಜೆಪಿ

  • ಸಂಬಂಧಿ ಸಾವಿನಿಂದ ಮನನೊಂದು ಚಿತೆಗೆ ಹಾರಿ ಪ್ರಾಣ ಕಳ್ಕೊಂಡ

    ಸಂಬಂಧಿ ಸಾವಿನಿಂದ ಮನನೊಂದು ಚಿತೆಗೆ ಹಾರಿ ಪ್ರಾಣ ಕಳ್ಕೊಂಡ

    ಭೋಪಾಲ್: ತನ್ನ ಸೋದರ ಸಂಬಂಧಿಯ ಸಾವಿನಿಂದ ಮನನೊಂದ ವ್ಯಕ್ತಿಯೋರ್ವ ಉರಿಯುತ್ತಿರುವ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಶುಕ್ರವಾರ ಸಾಗರ ಜಿಲ್ಲೆಯ ಮಜ್ಗವಾನ್ ಗ್ರಾಮದಲ್ಲಿ ಜ್ಯೋತಿ ದಾಗಾ ಎಂಬ ಮಹಿಳೆ ಬಾವಿಗೆ ಜಾರಿ ಸಾವನ್ನಪ್ಪಿದ್ದಾರೆ. ಆಕೆಯ ಅಂತ್ಯಕ್ರಿಯೆಯನ್ನು ಶನಿವಾರ ನೆರವೇರಿಸಲಾಯಿತು. ಚಿತೆಗೆ ಬೆಂಕಿ ಹಚ್ಚಿದ ನಂತರ ಸಂಬಂಧಿಕರು ತಮ್ಮ, ತಮ್ಮ ಮನೆಗಳಿಗೆ ತೆರಳಿದರು. ಸ್ವಲ್ಪ ಸಮಯದ ನಂತರ ಸ್ಮಶಾನಕ್ಕೆ ಸೋದರಸಂಬಂಧಿ ಕರಣ್(21) ಆಗಮಿಸಿದರು. ಇದನ್ನು ಕಂಡ ಕೂಡಲೇ ಗ್ರಾಮಸ್ಥರು ಆತನ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಆದರೆ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಕರಣ್ ಚಿತೆಗೆ ಹಾರಿ ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: UP ಸಿಎಂ ಅಲಹಾಬಾದ್ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ: ಓವೈಸಿ ಕಿಡಿ

    ಭಾನುವಾರ ಬೆಳಗ್ಗೆ ಕರಣ್ ಅಂತ್ಯ ಸಂಸ್ಕಾರವನ್ನು ಜ್ಯೋತಿ ಚಿತಾಗಾರದ ಬಳಿ ನೆರವೇರಿಸಲಾಯಿತು. ಇದೀಗ ಪೊಲೀಸರು ಈ ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಬಹೇರಿಯಾ ಪೊಲೀಸ್ ಠಾಣೆಯ ಇನ್‍ಚಾರ್ಜ್ ದಿವ್ಯಾ ಪ್ರಕಾಶ್ ತ್ರಿಪಾಠಿ ತಿಳಿದ್ದಾರೆ. ಇದನ್ನೂ ಓದಿ:  ಡ್ರಗ್ಸ್ ಕೇಸ್: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಸಹೋದರ, ನಟ ಸಿದ್ಧಾಂತ್ ಕಪೂರ್ ಬಂಧನ