Tag: funding

  • ಬುರುಡೆ ಗ್ಯಾಂಗ್‌ಗೆ ಫಂಡಿಂಗ್ – 11 ಮಂದಿಗೆ ಎಸ್‌ಐಟಿ ನೋಟಿಸ್

    ಬುರುಡೆ ಗ್ಯಾಂಗ್‌ಗೆ ಫಂಡಿಂಗ್ – 11 ಮಂದಿಗೆ ಎಸ್‌ಐಟಿ ನೋಟಿಸ್

    – ಗಿರೀಶ್ ಮಟ್ಟಣ್ಣವರ್ ಪತ್ನಿಯ ಖಾತೆಯಿಂದಲೂ ಹಣ ವರ್ಗಾವಣೆ

    ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದ (Dharmasthala Case) ತನಿಖೆಯನ್ನು ವಿಶೇಷ ತನಿಖಾ ತಂಡದ ಪೊಲೀಸರು ಚುರುಕುಗೊಳಿಸಿದ್ದಾರೆ. ಇದೀಗ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು ಬುರುಡೆ ಗ್ಯಾಂಗ್‌ಗೆ ಫಂಡಿಂಗ್ ಮಾಡಿದ್ದ 11 ಮಂದಿಗೆ ಎಸ್‌ಐಟಿ (SIT) ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

    ಹೌದು, ಷಡ್ಯಂತ್ರದ ಹಿಂದಿನ ಕಾಣದ ಕೈಗಳ ಬೆನ್ನುಬಿದ್ದ ಎಸ್‌ಐಟಿ, ಚಿನ್ನಯ್ಯ ಹಾಗೂ ಪತ್ನಿಯ ಅಕೌಂಟ್‌ಗೆ ಹಣ ವರ್ಗಾವಣೆ ಮಾಡಿದವರ ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲದೇ ಎಸ್‌ಐಟಿ ಅಧಿಕಾರಿಗಳು ಚಿನ್ನಯ್ಯನ ಕುಟುಂಬದ ಪ್ರತಿಯೊಬ್ಬರ ಖಾತೆಯ ಡಿಟೇಲ್ ಪಡೆದು ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಪ್ರಕರಣ – ಇಂದು ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾನೆ ಚಿನ್ನಯ್ಯ

    ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarody) ಬೆಂಬಲಿಗರು ಸೇರಿದಂತೆ 11 ಜನರಿಗೆ ಎಸ್‌ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು, ಈಗಾಗಲೇ 6 ಮಂದಿಯನ್ನು ವಿಚಾರಣೆ ನಡೆಸಿದ್ದಾರೆ. ಗಿರೀಶ್ ಮಟ್ಟಣ್ಣವರ್ ಪತ್ನಿಯ ಖಾತೆಯಿಂದಲೂ ಚಿನ್ನಯ್ಯನಿಗೆ ಹಣ ವರ್ಗಾವಣೆಯಾಗಿರುವುದು ತನಿಖೆಯಲ್ಲಿ ಬಯಲಾಗಿದೆ.

    ಎಸ್‌ಐಟಿ ಅಧಿಕಾರಿಗಳು 6 ತಿಂಗಳ ಹಿಂದೆ ಹಣ ವರ್ಗಾವಣೆ ಆಗಿರುವ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಇನ್ನಷ್ಟು ಮಂದಿ ಫಂಡಿಂಗ್ ಮಾಡಿರುವ ಬಗ್ಗೆಯೂ ಮಾಹಿತಿ ಪಡೆದಿದ್ದು, ಅವರಿಗೂ ಎಸ್‌ಐಟಿ ನೋಟಿಸ್ ನೀಡುವ ಸಾಧ್ಯತೆಗಳಿವೆ.

  • ಶಿವಮೊಗ್ಗ ಈದ್‌ ಮಿಲಾದ್‌ ಹಬ್ಬಕ್ಕೆ 5 ಕೋಟಿ ಸಂಗ್ರಹ – ಫಂಡಿಂಗ್‌ ಮಾಡಿದವರ ಹಿಂದೆ ಬಿದ್ದ ಖಾಕಿ

    ಶಿವಮೊಗ್ಗ ಈದ್‌ ಮಿಲಾದ್‌ ಹಬ್ಬಕ್ಕೆ 5 ಕೋಟಿ ಸಂಗ್ರಹ – ಫಂಡಿಂಗ್‌ ಮಾಡಿದವರ ಹಿಂದೆ ಬಿದ್ದ ಖಾಕಿ

    ಶಿವಮೊಗ್ಗ: ಈ ಬಾರಿ ಈದ್ ಮಿಲಾದ್ (Eid Milad) ಹಬ್ಬವನ್ನು ಶಿವಮೊಗ್ಗದಲ್ಲಿ (Shivamogga) ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಹಬ್ಬದ ಮೆರವಣಿಗೆ ವೇಳೆ ಕಪ್ಪು ಚುಕ್ಕೆ ಎಂಬಂತೆ ಕಲ್ಲು ತೂರಾಟ ನಡೆದು, ಕೋಮು ಗಲಭೆ ಸಹ ಉಂಟಾಗಿದೆ. ಅಷ್ಟಕ್ಕೂ ಅದ್ದೂರಿ ಹಬ್ಬ ಆಚರಣೆಗೆ 5 ಕೋಟ ರೂ.ಗೂ ಅಧಿಕ ಹಣ ಸಂಗ್ರಹವಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

    ಮಲೆನಾಡಿನ ಹಿಂದೂಗಳ (Hindu) ಹಬ್ಬ ಆಗಿರಬಹುದು, ಮುಸ್ಲಿಮರ (Muslims) ಹಬ್ಬ ಆಗಿರಬಹುದು ಬಹಳ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಶಿವಮೊಗ್ಗ ನಗರದಲ್ಲಿ ಈದ್ ಮಿಲಾದ್ ಹಬ್ಬವನ್ನುಬಹಳ ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಶಿವಮೊಗ್ಗ ನಗರದ ಪ್ರಮುಖ ಬಡಾವಣೆ, ವೃತ್ತಗಳಲ್ಲಿ  ಹಿಂದೆಂದೂ ಕಾಣದ ರೀತಿಯಲ್ಲಿ ಭರ್ಜರಿ ಅಲಂಕಾರ ಮಾಡಲಾಗಿತ್ತು. ಅಲಂಕಾರಕ್ಕಾಗಿಯೇ ಸಾಕಷ್ಟು ಹಣ ಖರ್ಚು ಮಾಡಲಾಗಿತ್ತು.  ಇದನ್ನೂ ಓದಿ: ಹುಬ್ಬಳ್ಳಿ, ಉತ್ತರ ಕನ್ನಡ, ಬೆಳಗಾವಿ ಅರಣ್ಯದಲ್ಲಿ ತರಬೇತಿ: ಉಗ್ರರಿಂದ ಸ್ಫೋಟಕ ಮಾಹಿತಿ

     

    ಸ್ಥಳೀಯ ಮುಸ್ಲಿಂ ಮುಖಂಡರು, ಯುವಕರು ಮನೆ ಮನೆಗೆ ತೆರಳಿ ಹಣ ವಸೂಲಿ ಮಾಡಿದ್ದಾರೆ. ಕೆಲವೆಡೆಗಳಲ್ಲಿ ಬಲವಂತವಾಗಿ ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪವೂ ಸಹ ಕೇಳಿ ಬಂದಿದೆ. ಅದರಂತೆ ಹೊರಗಡೆಯಿಂದಲೂ ಈದ್ ಮಿಲಾದ್ ಹಬ್ಬ ಆಚರಣೆಗೆ ಈ ಬಾರಿ ಧನ ಸಂಗ್ರಹವಾಗಿದೆ (Funding) ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಅಧಿಕ ಹಣ ಸಂಗ್ರಹವಾಗಿದ್ದರಿಂದಲೇ ಎಲ್ಲೆಂದರಲ್ಲಿ ಕಟೌಟ್, ಬ್ಯಾನರ್ , ಖಡ್ಗ ಹಾಕಿದ್ದರು ಎನ್ನಲಾಗಿದೆ. ಈಗ ಭಾರೀ ಪ್ರಮಾಣದಲ್ಲಿ ಹಣ ಸಂಗ್ರಹ ಹೇಗಾಯ್ತು? ಹೊರಗಿನಿಂದ ಸಹಾಯ ಧನ ಮಾಡಿದವರು ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

     

    ಈದ್ ಮಿಲಾದ್ ಹಬ್ಬ ಇಷ್ಟೊಂದು ಅದ್ದೂರಿಯಾಗಿ ಮಾಡಲು ಮತ್ತೊಂದು ಕಾರಣ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ. ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ (Hindu Mahasabha Ganapathi Visarjan) ವೇಳೆ ನಗರದಲ್ಲೆಡೆ ಅದ್ದೂರಿಯಾಗಿ ಅಲಂಕಾರ ಮಾಡಲಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಹಿಂದೂಗಳು ನೆರೆದಿದ್ದರು. ಇದಕ್ಕೆ ಪ್ರತಿಯಾಗಿಯೇ ಈದ್ ಮಿಲಾದ್ ಹಬ್ಬಕ್ಕೆ ಅಲಂಕಾರ, ಮೆರವಣಿಗೆ ನಡೆಸಲಾಗಿತ್ತು ಎಂಬ ವಿಚಾರ ಹೊರ ಬಿದ್ದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಂಕಷ್ಟದಲ್ಲಿರುವ ಗೊರವಯ್ಯನಿಗೆ ದೇವರಗುಡ್ಡ ಗ್ರಾಮಸ್ಥರಿಂದ ಧನ ಸಹಾಯ

    ಸಂಕಷ್ಟದಲ್ಲಿರುವ ಗೊರವಯ್ಯನಿಗೆ ದೇವರಗುಡ್ಡ ಗ್ರಾಮಸ್ಥರಿಂದ ಧನ ಸಹಾಯ

    ಹಾವೇರಿ: ಸಂಕಷ್ಟದಲ್ಲಿರುವ ಮೈಲಾರದ ಕಾರ್ಣಿಕದ ಗೊರವಯ್ಯ ಮಾಲತೇಶಪ್ಪನವರಿಗೆ ರಾಣೆಬೆನ್ನೂರು ತಾಲೂಕು ಸುಕ್ಷೇತ್ರ ದೇವರಗುಡ್ಡದ ಗ್ರಾಮಸ್ಥರು ಧನ ಸಹಾಯ ಮಾಡಿದ್ದಾರೆ.

    ಶ್ರೀಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಸಂತೋಷ ಭಟ್ ನೇತೃತ್ವದಲ್ಲಿ ಗ್ರಾಮದ ಮುಖ್ಯಸ್ಥರು ಭೇಟಿ ನೀಡಿ, ನೊಂದ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿ ದೇವರಗುಡ್ಡ ಗ್ರಾಮದ ವತಿಯಿಂದ 50 ಸಾವಿರ ರೂ. ಧನ ಸಹಾಯ ನೀಡುವ ಮೂಲಕ ಧನ್ಯತೆ ಮೆರೆದರು. ಶ್ರೀಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ ಮಾತನಾಡಿ, ಅತ್ಯಂತ ಶಿಸ್ತು ಹಾಗೂ ನಿಷ್ಠೆಯಿಂದ ಸ್ಪಷ್ಟವಾಗಿ ಶ್ರೀಮೈಲಾರಲಿಂಗೇಶ್ವರ ಸ್ವಾಮಿಯ ದೈವವಾಣಿ ನುಡಿಯುವ ಮೂಲಕ ಮಾಲತೇಶ್ ಗೊರವಯ್ಯನವರು ನಾಡಿನ ಸಿರಿ, ಸಂಪತ್ತು ಸಂಮೃದ್ಧಿಗೆ ಕಾರಣಿಭೂತರಾಗಿದ್ದಾರೆ ಎಂದರು.

    ಕಳೆದ 9 ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವುದು ಬಹಳ ದು:ಖದ ವಿಚಾರ. ಇಂತಹ ಸಮಯದಲ್ಲಿ ಅವರ ಸಂಕಷ್ಟಕ್ಕೆ ಸ್ಪಂದಿಸಿ ನಮ್ಮ ದೇವರಗುಡ್ಡ ಗ್ರಾಮದ ವತಿಯಿಂದ 50 ಸಾವಿರ ಸಹಾಯ ಧನವನ್ನು ನೀಡುತ್ತಿದ್ದೇವೆ. ಅವರು ಬೇಗನೆ ಗುಣಮುಖರಾಗಿ ಮತ್ತೆ ಕಾರ್ಯಪ್ರವೃತ್ತರಾಗಲಿ ಎಂದು ಆ ಭಗವಂತ ಮೈಲಾರಲಿಂಗೇಶ್ವರ ಹಾಗೂ ಮಾಲತೇಶನಲ್ಲಿ ಬೇಡಿಕೊಳ್ಳುವೆ. ಕೂಡಲೇ ಸರ್ಕಾರ ಹಾಗೂ ಕ್ಷೇತ್ರದ ಶಾಸಕರು ಮತ್ತು ಸಂಸದರು ಇವರಿಗೆ ಗೃಹ ನಿರ್ಮಾಣ ಮಾಡಿಕೊಡುವ ಮೂಲಕ ಧನ್ಯತೆ ಮೆರೆಯಬೇಕಾಗಿದೆ ಎಂದು ಆಗ್ರಹಿಸಿದರು.

    ಈ ಸಂದರ್ಭದಲ್ಲಿ ದೇವರಗುಡ್ಡ ಗ್ರಾಮದ ಮುಖಂಡರಾದ ಮಲ್ಲಯ್ಯ ಒಡೆಯರ್, ಹನುಮಂತಪ್ಪ ನಾಯರ್, ಡಿಳ್ಳೆಪ್ಪ ಐಗೂಳ, ರುದ್ರಪ್ಪ ಜಜ್ಜೂರಿ, ಪಕ್ಕೀರಪ್ಪ ಐಗೂಳ, ನಿಂಗಪ್ಪ ದ್ಯಾಮಣ್ಣನವರ, ದೇವಪ್ಪ ವಾಸರದ, ಚಿಕ್ಕಪ್ಪ ಬಡಿಗೇರ ಹಾಗೂ ನಿಂಗಪ್ಪ ಹುಲ್ಲಾಳ ಹಾಜರಿದ್ದರು.

  • ರೈನಾ ಫಿಫ್ಟಿಗೆ ಪ್ರಧಾನಿ ಮೋದಿ ಫಿದಾ

    ರೈನಾ ಫಿಫ್ಟಿಗೆ ಪ್ರಧಾನಿ ಮೋದಿ ಫಿದಾ

    ನವದೆಹಲಿ: ಕೊರೊನಾ ವೈರಸ್ ವಿರುದ್ಧ ಹೋರಾಡಲು ಭಾರತ ತಂಡದ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಅವರು, 52 ಲಕ್ಷವನ್ನು ದೇಣಿಗೆ ನೀಡಿದ್ದು, ಟ್ವೀಟ್ ಮೂಲಕ ಪ್ರಧಾನಿ ಮೋದಿ ಮೆಚ್ಚುಗೆ ಸೂಚಿಸಿದ್ದಾರೆ.

    ಕೊರೊನಾ ವೈರಸ್‍ನಿಂದ ದೇಶ ಅರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ. ಈಗಾಗಲೇ 21 ದಿನ ಲಾಕ್‍ಡೌನ್ ಆಗಿರುವ ಭಾರತಕ್ಕೆ ಚಿತ್ರನಟರು ಮತ್ತು ಕ್ರೀಡಾಪಟುಗಳು ಕೊರೊನಾ ವಿರುದ್ಧ ಹೋರಾಡಲು ಶಕ್ತಿ ತುಂಬುತ್ತಿದ್ದಾರೆ. ಅದಕ್ಕಾಗಿಯೇ ಸುರೇಶ್ ರೈನಾ ಅವರು ಪ್ರಧಾನ ಮಂತ್ರಿ ನಿಧಿಗೆ ಮತ್ತು ಉತ್ತರ ಪ್ರದೇಶ ಸಿಎಂ ವಿಪತ್ತು ಪರಿಹಾರ ನಿಧಿಗೆ 52 ಲಕ್ಷ ದೇಣಿಗೆ ನೀಡಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ರೈನಾ ಅವರು, ಕೊರೊನಾ ವೈರಸ್ ಅನ್ನು ತಡೆಗಟ್ಟಲು ನಮ್ಮ ಕೈಯಲ್ಲಿ ಆದ ಸಹಾಯವನ್ನು ದೇಶಕ್ಕೆ ಮಾಡಬೇಕಿದೆ. ನಾನು ಕೂಡ 52 ಲಕ್ಷ ರೂ. ಗಳನ್ನು ಕೊರೊನಾ ವಿರುದ್ಧ ಹೋರಾಟಕ್ಕೆ ನೀಡುತ್ತಿದ್ದೇನೆ. ಅದರಲ್ಲಿ 31 ಲಕ್ಷವನ್ನು ಪ್ರಧಾನಿ ಅವರ ನಿಧಿಗೆ ಮತ್ತು ಉಳಿದ 21 ಲಕ್ಷವನ್ನು ಉತ್ತರ ಪ್ರದೇಶದ ಸಿಎಂ ವಿಪತ್ತು ಪರಿಹಾರ ನಿಧಿಗೆ ನೀಡುತ್ತಿದ್ದೇನೆ. ನಿಮ್ಮ ಕೈಯಲ್ಲಿ ಆದ ಸಹಾಯವನ್ನು ನೀವು ಮಾಡಿ ಎಂದು ಟ್ವೀಟ್ ಮಾಡಿದ್ದಾರೆ.

    ರೈನಾ ಅವರು ದೇಶಕ್ಕಾಗಿ ಮಾಡಿದ ಸೇವೆಗೂ ಮತ್ತು ದೇಶದ ಮೇಲಿರುವ ಅವರ ಪ್ರೀತಿಗೂ ಮೆಚ್ಚಿದ ಪ್ರಧಾನಿ ಮೋದಿ ಅವರು, ರೈನಾ ಅವರ ಟ್ವೀಟ್‍ಗೆ ರೀಟ್ವೀಟ್ ಮಾಡಿದ್ದಾರೆ. ಇದರಲ್ಲಿ ಇದು ಅದ್ಭುತವಾದ ಫಿಫ್ಟಿ ಎಂದು ಬರೆದುಕೊಂಡಿದ್ದಾರೆ. ರೈನಾ ಅವರ ದೇಶಪ್ರೇಮವನ್ನು ಕಂಡ ಅವರ ಅಭಿಮಾನಿಗಳು ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ ಸಹೋದರ ಜೈಹಿಂದ್ ಎಂದು ಕಮೆಂಟ್ ಮಾಡಿದ್ದಾರೆ.

    ಕೊರೊನಾ ವೈರಸ್‍ನಿಂದ ದೇಶ ಸಂಕಷ್ಟಕ್ಕೆ ಸಿಲುಕಿದೆ. ಹಾಗಾಗಿ ದೇಶದ ಸಹಾಯಕ್ಕೆ ಬಂದಿರುವ ಸೆಲೆಬ್ರಿಟಿಗಳು ದೇಶಕ್ಕಾಗಿ ಧನ ಸಹಾಯ ಮಾಡುತ್ತಿದ್ದಾರೆ. ಇನ್ನೂ ಕೆಲವರು ಅವರೇ ಹಸಿದವರಿಗೆ ಊಟದ ವ್ಯವಸ್ಥೆ, ನೀರು ಮಾಸ್ಕ್ ಗಳನ್ನು ನೀಡುತ್ತಿದ್ದಾರೆ. ದಕ್ಷಿಣ ಭಾರತದ ನಟರಾದ ಪವನ್ ಕಲ್ಯಾಣ್, ಪ್ರಭಾಸ್, ಮಹೇಶ್ ಬಾಬು, ರಾಮ್ ಚರಣ್ ಎಲ್ಲರೂ ದೇಶಕ್ಕಾಗಿ ಧನಸಹಾಯ ಮಾಡುತ್ತಿದ್ದಾರೆ.

    ಇಂದು ಕೂಡ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು, ಕೊರೊನಾ ವಿರುದ್ಧ ದೇಶ ಹೋರಾಡಲು ಬರೋಬ್ಬರಿ 25 ಕೋಟಿ ಧನಸಹಾಯ ಮಾಡಿದ್ದಾರೆ. ಈ ಸಮಯದಲ್ಲಿ ಜನರ ಪ್ರಾಣವೇ ಎಲ್ಲಕ್ಕಿಂತ ಮುಖ್ಯ. ಅದಕ್ಕಾಗಿ ಏನೆಲ್ಲ ಸಾಧ್ಯವೋ ಅದೆಲ್ಲವನ್ನು ನಾವು ಮಾಡಬೇಕು. ನಾನು ನನ್ನ ಉಳಿತಾಯದ ಹಣದಲ್ಲಿ 25 ಕೋಟಿ ರೂ. ಗಳನ್ನು ನರೇಂದ್ರ ಮೋದಿಯವರ ಪರಿಹಾರ ನಿಧಿಗೆ ನೀಡುವುದಾಗಿ ಪ್ರಮಾಣಿಸುತ್ತಿದ್ದೇನೆ. ನಾವೆಲ್ಲ ಒಂದಾಗಿ ಜೀವ ಉಳಿಸೋಣ. ಜೀವ ಇದ್ದರೆ ಜಗತ್ತು ಎಂದು ಟ್ವೀಟ್ ಮಾಡಿದ್ದಾರೆ.

  • ರಾಜ್ಯದಲ್ಲಿ ಕೊರೊನಾ ಅಟ್ಟಹಾಸ – ಧನಸಹಾಯಕ್ಕೆ ಸಿಎಂ ಮನವಿ

    ರಾಜ್ಯದಲ್ಲಿ ಕೊರೊನಾ ಅಟ್ಟಹಾಸ – ಧನಸಹಾಯಕ್ಕೆ ಸಿಎಂ ಮನವಿ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ದಿನೇ ದಿನೇ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಧನಸಹಾಯ ಮಾಡುವಂತೆ ದಾನಿಗಳಿಗೆ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.

    ಕೊರೊನಾ ವೈರಸ್ ಹರಡುವುದನ್ನ ತಡೆಗಟ್ಟಲು ಸರ್ಕಾರದ ಜೊತೆ ಕೈಜೋಡಿಸಿ ಎಂದು ದಾನಿಗಳಿಗೆ ಸಿಎಂ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಪರಿಹಾರನಿಧಿ ಕೊವಿಡ್-19 ಹೆಸರಿನ ಖಾತೆಗೆ ಧನಸಹಾಯಕ್ಕೆ ಮನವಿ ಮಾಡಲಾಗಿದೆ. ಧನಸಹಾಯ ಮಾಡಲಿ ಇಚ್ಛಿಸುವವರು ಖಾತೆ ಸಂಖ್ಯೆ-39234923151 ಹಾಗೂ ಐಎಫ್‍ಎಸ್‍ಸಿ ಕೋಡ್ – ಎಸ್‍ಬಿಐಎನ್0040277 ಹಣ ಹಾಕಬಹುದು ಎಂದು ಕೇಳಿಕೊಳ್ಳಲಾಗಿದೆ.

    ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೇ ರಾಜ್ಯದಲ್ಲಿ ಜಾಸ್ತಿಯಾಗುತ್ತಿದೆ. ಇಂದು ಈ ವಿಚಾರವಾಗಿ ಮಾತನಾಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಇಂದು ಒಂದೇ ದಿನ ಹತ್ತು ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಮಂಗಳವಾರ 41 ಇದ್ದ ಸಂಖ್ಯೆ ಇಂದು 51ಕ್ಕೆ ಏರಿಕೆಯಾಗಿದೆ. ಹಾಗಾಗಿ ಕೊರೊನಾ ವೈರಸ್ ತಡೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ತೆಗದುಕೊಳ್ಳುತ್ತಿದೆ. ಇದಕ್ಕೆ ಜನರು ಸಹಕರಿಸಬೇಕು ಎಂದು ಕೇಳಿಕೊಂಡಿದ್ದರು.

  • ನಿಮ್ಮ ದಾನಿಗಳ ಮಾಹಿತಿ ನೀಡಿ: ರಾಜಕೀಯ ಪಕ್ಷಗಳಿಗೆ ಸುಪ್ರೀಂ ಆದೇಶ

    ನಿಮ್ಮ ದಾನಿಗಳ ಮಾಹಿತಿ ನೀಡಿ: ರಾಜಕೀಯ ಪಕ್ಷಗಳಿಗೆ ಸುಪ್ರೀಂ ಆದೇಶ

    ನವದೆಹಲಿ: ರಾಜಕೀಯ ಪಕ್ಷಗಳು ತಮ್ಮ ದಾನಿಗಳ ಮಾಹಿತಿಯನ್ನು ಬಹಿರಂಗಪಡಿಸಬೇಕೆಂದು ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ಮಧ್ಯಂತರ ಆದೇಶ ಹೊರಡಿಸಿದೆ.

    ರಾಜಕೀಯ ಪಕ್ಷಗಳು ಚುನಾವಣೆ ವೇಳೆ ಕರಾರುಪತ್ರಗಳ (ಬಾಂಡ್) ಮೂಲಕ ಸಿಕ್ಕಂತಹ ದಾನಗಳ ಬಗ್ಗೆ ಮಾಹಿತಿಯನ್ನು ನೀಡಬೇಕು. ಯಾರು ದಾನ ನೀಡಿದ್ದಾರೆ ಹಾಗೂ ಎಷ್ಟು ಹಣವನ್ನು ದಾನವಾಗಿ ಪಡಯಲಾಗಿದೆ ಎನ್ನುವ ಸಂಪೂರ್ಣ ದಾಖಲೆಗಳನ್ನು ಮೇ 15ರ ಒಳಗಾಗಿ ಮುಚ್ಚಿದ ಲಕೋಟಿಯಲ್ಲಿ ಚುನಾವಣಾ ಆಯೋಗಕ್ಕೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಆದೇಶ ನೀಡಿದ್ದಾರೆ.

    ಚುನಾವಣಾ ಬಾಂಡ್ ಯೋಜನೆಯನ್ನು ಪ್ರಶ್ನಿಸಿ ಎನ್‍ಜಿಒ ಒಂದು ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ಗುರುವಾರ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಚುನಾವಣಾ ಬಾಂಡ್ ಖರೀದಿಸುವವರ ಗುರುತು ಬಹಿರಂಗ ಆಗುವುದಿಲ್ಲ ಎಂದಾದರೆ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿಕೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದ ಈ ವ್ಯವಸ್ಥೆಯೇ ವ್ಯರ್ಥ. ಚುನಾವಣೆಯಲ್ಲಿ ಕಪ್ಪು ಹಣ ಬಳಕೆಯನ್ನು ತಡೆಯುವುದಕ್ಕಾಗಿ ಜಾರಿಗೆ ತಂದಿರುವ ವ್ಯವಸ್ಥೆ ಉದ್ದೇಶವೇ ಈಡೇರದು ಎಂದು ಅಭಿಪ್ರಾಯಪಟ್ಟಿತ್ತು. ಅಷ್ಟೇ ಅಲ್ಲದೆ ಆದೇಶವನ್ನು ಗುರುವಾರಕ್ಕೆ ಕಾಯ್ದಿರಿಸಿತ್ತು.

    ಏನಿದು ಎಲೆಕ್ಟೋರಲ್ ಬಾಂಡ್?:
    ರಾಜಕೀಯ ಪಕ್ಷಗಳಿಗೆ ಹರಿದು ಬರುವ ಚುನಾವಣಾ ದೇಣಿಗೆಯನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿತ್ತು. 2017ರ ಬಜೆಟ್ ಭಾಷಣದಲ್ಲಿ ಚುನಾವಣಾ ಬಾಂಡ್ ಪರಿಚಯಿಸಿತ್ತು. ಎಲೆಕ್ಟೋರಲ್ ಬಾಂಡ್‍ಗೆ ಕೇಂದ್ರ ಸರ್ಕಾರವು ಅಂತಿಮ ರೂಪ ನೀಡಿದ್ದು, ಅಧಿಸೂಚನೆ ಹೊರಡಿಸಿತ್ತು.

    ಯಾವುದೇ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಇಚ್ಛಿಸುವವರು ಆಯ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ಬ್ರ್ಯಾಂಚ್ ಮೂಲಕ ನಿರ್ದಿಷ್ಟ ಮೊತ್ತದ ಎಲೆಕ್ಟೋರಲ್ ಬಾಂಡ್ ಖರೀದಿಸಬೇಕು. ಬಳಿಕ ಅದನ್ನು ರಾಜಕೀಯ ಪಕ್ಷಗಳಿಗೆ ನೀಡಬಹುದು. ಈ ಮೂಲಕ ದಾನಿ ಗಳು ನೀಡಿದ ಬಾಂಡ್ ಪಡೆದ ರಾಜಕೀಯ ಪಕ್ಷವು ಬ್ಯಾಂಕ್ ಖಾತೆಗೆ ಬಾಂಡ್ ಸಲ್ಲಿಸಿ, ಹಣವನ್ನು ಖಾತೆಗೆ ವರ್ಗಾವಣೆ ಮಾಡಿಕೊಳ್ಳಬಹುದು.

    1 ಸಾವಿರ ರೂ., 10 ಸಾವಿರ ರೂ., 1 ಲಕ್ಷ ರೂ., 10 ಲಕ್ಷ ರೂ., 1 ಕೋಟಿ ರೂ. ಮೌಲ್ಯದ ಬಾಂಡ್‍ಗಳನ್ನು ಪರಿಚಯಿಸಲಾಗಿತ್ತು. ಈ ಎಲೆಕ್ಟೋರಲ್ ಬಾಂಡ್‍ಗೆ ಬ್ಯಾಂಕ್‍ನಿಂದ ಯಾವುದೇ ರೀತಿಯ ಬಡ್ಡಿ ದೊರೆಯುವುದಿಲ್ಲ. ರಾಜಕೀಯ ಪಕ್ಷಗಳು ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳುವವರೆಗೂ ಆ ಹಣವು ದಾನ ಮಾಡಿದವರ ಖಾತೆಯಲ್ಲೇ ಇರುತ್ತದೆ. ಆದರೆ ಈ ಬಾಂಡ್ ಅನ್ನು 15 ದಿನಗಳ ಒಳಗಾಗಿ ಖಾತೆಗೆ ವರ್ಗಾವಣೆ ಮಾಡಿಕೊಳ್ಳಬೇಕು.

    ನಿಮ್ಮ ಗ್ರಾಹಕರನ್ನು ಅರಿಯಿರಿ(ಕೆವೈಸಿ) ಪ್ರಕಾರ ಬ್ಯಾಂಕ್ ಗ್ರಾಹಕರ ಮಾಹಿತಿಯನ್ನು ಪಡೆದರೂ ಅದನ್ನು ಗೌಪ್ಯವಾಗಿ ಇಡಬೇಕು ಎನ್ನುವ ನಿಯಮವಿದೆ.

  • ಮಗಳ ನಿಶ್ಚಿತಾರ್ಥ ನಿಲ್ಲಿಸಿ ಪ್ರವಾಹ ಪೀಡಿತರಿಗೆ ಹಣ ನೀಡಿದ ಪತ್ರಕರ್ತ

    ಮಗಳ ನಿಶ್ಚಿತಾರ್ಥ ನಿಲ್ಲಿಸಿ ಪ್ರವಾಹ ಪೀಡಿತರಿಗೆ ಹಣ ನೀಡಿದ ಪತ್ರಕರ್ತ

    ತಿರುವನಂತಪುರ: ಕಳೆದ 15 ದಿನಗಳಿಂದ ಕೇರಳದಲ್ಲಿ ಅತಿವೃಷ್ಟಿಯಿಂದಾಗಿ ಜನಜೀವನ ನರಕದಂತಾಗಿದ್ದು, ದೇಶಾದ್ಯಂತ ಕೇರಳದ ಸಹಾಯಕಕ್ಕೆ ಮುಂದಾಗುತ್ತಿದ್ದಾರೆ. ಕೇರಳದಲ್ಲಿ ಖಾಸಗಿ ಪತ್ರಿಕೆಯ ಪತ್ರಕರ್ತರೊಬ್ಬರು ತಮ್ಮ ಮಗಳ ನಿಶ್ಚಿತಾರ್ಥವನ್ನು ನಿಲ್ಲಿಸಿ, ಕಾರ್ಯಕ್ರಮಕ್ಕೆ ಖರ್ಚು ಮಾಡಲು ಇರಿಸಿದ್ದ ಎಲ್ಲ ಹಣವನ್ನು ಕೇರಳದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಮನೋಜ್ ಎಂಬವರೇ ಮಗಳ ನಿಶ್ಚಿತಾರ್ಥ ನಿಲ್ಲಿಸಿದ ಪತ್ರಕರ್ತ. ಇದೇ ಭಾನುವಾರ ಕನ್ನೂರಿನಲ್ಲಿ ಮಗಳು ದೇವಿ ಮತ್ತು ಗೋಕುಲ್ ಜೊತೆ ನಿಶ್ಚಿ ತಾರ್ಥವನ್ನು ಗುರು ಹಿರಿಯರ ಸಮ್ಮುಖದಲ್ಲಿ ನಿಶ್ಚಯಿಸಲಾಗಿತ್ತು. ಹಲವು ದಿನಗಳಿಂದ ನಮ್ಮ ರಾಜ್ಯದಲ್ಲಿಯೇ ಪ್ರವಾಹ ಉಂಟಾಗಿ ಜನರು ತೊಂದರೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ನಾವು ಸಂತೋಷದಿಂದ ಕಾರ್ಯಕ್ರಮ ಮಾಡೋದು ಸರಿ ಅಲ್ಲ. ಹಾಗಾಗಿ ಅಳಿಯನ ಕುಟುಂಬಸ್ಥರ ಜೊತೆ ಮಾತನಾಡಿ ಅದ್ಧೂರಿ ನಿಶ್ಚಿತಾರ್ಥವನ್ನು ಕ್ಯಾನ್ಸಲ್ ಮಾಡಿದ್ದೇವೆ. ಭಾನುವಾರ ಕೇವಲ ಉಂಗುರವನ್ನು ಬದಲಾಯಿಸಲಾಗುವುದು ಎಂದು ಮನೋಜ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

    ಎರಡು ಕುಟುಂಬಸ್ಥರು ಚರ್ಚಿಸಿ ಈ ನಿರ್ಣಯ ತೆಗೆದುಕೊಂಡಿದ್ದು, ನಿಶ್ಚಿತಾರ್ಥಕ್ಕೆ ಮೀಸಲಿರಿಸಿದ್ದ ಹಣವನ್ನ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಿದ್ದೇವೆ ಎಂದು ಮಂಜು ಸ್ಪಷ್ಟಪಡಿಸಿದ್ದಾರೆ.

    ಕೇರಳ ದುರಂತ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಈಗಾಗಲೇ ಮೃತಪಟ್ಟವರ ಸಂಖ್ಯೆ 167 ಕ್ಕೆ ಏರಿಕೆಯಾಗಿದೆ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. ಪರಿಸ್ಥಿತಿಯನ್ನು ಸುಧಾರಿಸಲು ಭಾರತೀಯ ಕೋಸ್ಟ್ ಗಾರ್ಡ್ ನ ನಾಲ್ಕು ಹಡಗುಗಳನ್ನು ಕೊಚ್ಚಿನ್ ಗೆ ಕಳುಹಿಸಲಾಗಿದ್ದು, ಈಗಾಗಲೇ ಪ್ರವಾಹ ಪೀಡಿತ ಹಳ್ಳಿಗಳಿಗೆ 24 ತಂಡಗಳು ಕಾರ್ಯಚರಣೆ ಮಾಡುತ್ತಿವೆ. ಐಸಿಜಿ 1,764 ಜನರನ್ನು ರಕ್ಷಿಸಿದ್ದು, 4,688 ಜನರಿಗೆ ಸುರಕ್ಷಿತ ಸ್ಥಳಕ್ಕೆ ತಲುಪಿಸಿದೆ.

    ಶನಿವಾರ ಕಾಸರಗೋಡು ಎರ್ನಾಕುಲಂ ಮತ್ತು ಇಡುಕ್ಕಿ ಒಳಗೊಂಡಂತೆ ಇತರ 13 ಜಿಲ್ಲೆಗಳಿಗೂ ಎಚ್ಚರಿಕೆಯನ್ನು ಸೂಚಿಸಲಾಗಿದೆ. ಶುಕ್ರವಾರ ಬೆಳಗ್ಗೆ 5 ಘಟಕದ ರಾಷ್ಟ್ರೀಯ ವಿಪತ್ತು ಪಡೆ ತಿರುವನಂತಪುರಂ ತಲುಪಿದ್ದು, ಕಾರ್ಯಾಚರಣೆಯಲ್ಲಿ ತೊಡಗಿದೆ. ಇಂದು ಕೂಡ 35 ಸದಸ್ಯರ ತಂಡ ತಲುಪುವ ನೀರಿಕ್ಷೆ ಇದೆ. ಇದೀಗ ಐಸಿಜಿ ಪಡೆಯನ್ನು ವಂಡಿಪೆರಿಯರ್ ನಿಂದ ಮಂಜುಮಾಲಾ ಹಳ್ಳಿಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ 16 ಮಂದಿಯನ್ನು ರಕ್ಷಿಸಲಾಗಿದೆ. ಹಾಗೂ ಅವರಿಗೆ ಸೇವಿಸಲು ಆಹಾರ ಪದಾರ್ಥಗಳನ್ನು ನೀಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv