Tag: Fund Release

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಹುತಾತ್ಮ ಯೋಧ ಗುರು ಸ್ಮಾರಕ ನಿರ್ಮಾಣಕ್ಕೆ 25 ಲಕ್ಷ ಬಿಡುಗಡೆ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಹುತಾತ್ಮ ಯೋಧ ಗುರು ಸ್ಮಾರಕ ನಿರ್ಮಾಣಕ್ಕೆ 25 ಲಕ್ಷ ಬಿಡುಗಡೆ

    ಮಂಡ್ಯ: ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ಸ್ಮಾರಕ ನಿರ್ಮಾಣ ಮಾಡಲು ರಾಜ್ಯ ಸರ್ಕಾರ 25 ಲಕ್ಷ ರೂ. ಹಣವನ್ನು ಬಿಡುಗಡೆ ಮಾಡಿದೆ.

    ಇದೇ ತಿಂಗಳ 14 ರಂದು ಯೋಧ ಹುತಾತ್ಮನಾಗಿ ಒಂದು ವರ್ಷವಾದರೂ ಸ್ಮಾರಕ ನಿರ್ಮಾಣ ಮಾಡದ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಮಾಡಿತ್ತು. ಈ ವರದಿಯ ನಂತರ 25 ಲಕ್ಷ ರೂ. ಹಣ ಬಿಡುಗಡೆ ಮಾಡಿ ಸಿಎಂ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

    ಹುತಾತ್ಮ ಯೋಧ ಅವರ ಬಲಿದಾನ ಮುಂದಿನ ಪೀಳಿಗೆಗೆ ಆದರ್ಶವಾಗಬೇಕಿದ್ದು, ಸ್ಮಾರಕ ನಿರ್ಮಾಣ ಮಾಡಬೇಕಿರುವುದು ಅವಶ್ಯಕವಾಗಿದೆ. ಹೀಗಾಗಿ ಸ್ಮಾರಕ ನಿರ್ಮಾಣಕ್ಕಾಗಿ ಮಂಡ್ಯ ಜಿಲ್ಲಾಧಿಕಾರಿಗಳ ಹೆಸರಿಗೆ 25 ಲಕ್ಷ ರೂ. ಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಸಿಎಂ ಯಡಿಯೂರಪ್ಪ ಅವರು ಆದೇಶ ಮಾಡಿದ್ದಾರೆ.

    ಈ ವಿಚಾರವಾಗಿ ಸಂತದ ವ್ಯಕ್ತಪಡಿಸಿರುವ ಗುರು ಪತ್ನಿ ಕಲಾವತಿ ಹಾಗೂ ತಾಯಿ ಚಿಕ್ಕತಾಯಮ್ಮ, ಸ್ಮಾರಕ ನಿರ್ಮಾಣಕ್ಕೆ ಹಣ ಬಿಡುಗಡೆಗೆ ಸಿಎಂ ಆದೇಶ ಮಾಡಿರುವುದು ಸಂತಸ ತರಿಸಿದೆ. ಮಾಧ್ಯಮದವರಿಗೂ ಹಾಗೂ ಅಧಿಕಾರಿಗಳಿಗೆ ಧನ್ಯವಾದಗಳು ಎಂದು ಪ್ರತಿಕ್ರಿಯೆ ನೀಡಿದ್ದಾರೆ.