Tag: Fund

  • `ಆಪರೇಷನ್ ಸಿಂಧೂರ’ಕ್ಕೆ ತತ್ತರಿಸಿ ಮಿತ್ರರಾಷ್ಟ್ರಗಳ ಬಳಿ ಸಾಲಕ್ಕಾಗಿ ಅಂಗಲಾಚಿದ ಪಾಕ್ – ಟ್ರೋಲ್

    `ಆಪರೇಷನ್ ಸಿಂಧೂರ’ಕ್ಕೆ ತತ್ತರಿಸಿ ಮಿತ್ರರಾಷ್ಟ್ರಗಳ ಬಳಿ ಸಾಲಕ್ಕಾಗಿ ಅಂಗಲಾಚಿದ ಪಾಕ್ – ಟ್ರೋಲ್

    ಇಸ್ಲಾಮಾಬಾದ್: ಭಾರತದ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಪಾಕಿಸ್ತಾನ ಅಕ್ಷರಶಃ ತತ್ತರಿಸಿ ಹೋಗಿದ್ದು, ಇದೀಗ ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದು ನಿಂತಿದೆ.ಇದನ್ನೂ ಓದಿ:ಭಾರತ-ಪಾಕ್‌ ಉದ್ವಿಗ್ನತೆ ತೀವ್ರ ಬೆನ್ನಲ್ಲೇ 3 ಸೇನಾ ಮುಖ್ಯಸ್ಥರೊಂದಿಗೆ ಮೋದಿ ಸಭೆ

    ಈ ಮೊದಲೇ ಆರ್ಥಿಕವಾಗಿ ಪಾತಾಳಕ್ಕೆ ಕುಸಿದಿದ್ದ ಪಾಕ್, ಆಪರೇಷನ್ ಸಿಂಧೂರದ ಬಳಿಕ ಸಾಲಕ್ಕಾಗಿ ಭಿಕ್ಷೆ ಬೇಡುವಂತಾಗಿದೆ. ಇದೀಗ ತನ್ನ ಮಿತ್ರರಾಷ್ಟ್ರಗಳ ಬಳಿ ಹಣಕಾಸಿನ ನೆರವು ನೀಡುವಂತೆ ಅಂಗಲಾಚಿದೆ. ಜೊತೆಗೆ ಅಧಿಕೃತ ಎಕ್ಸ್ ಖಾತೆಯಲ್ಲಿ ಬಹಿರಂಗವಾಗಿ ಫಂಡ್‌ಗಾಗಿ ಬೇಡಿಕೊಂಡಿದೆ. ಇನ್ನೊಂದು ಕಡೆ ಸೇನಾ ಸಂಘರ್ಷ ನಡೆಯುತ್ತಿರುವಾಗ ಪಾಕ್ ಆರ್ಥಿಕ ಸಚಿವಾಲಯ ಎಟಿಎಂ ವಿತ್‌ಡ್ರಾ ಮಿತಿಯನ್ನು ಕೇವಲ 3 ಸಾವಿರ ರೂ.ಗೆ ಇಳಿಸಿದೆ. ಪಾಕಿಸ್ತಾನದಲ್ಲಿ ಪರಿಸ್ಥಿತಿ ಸುಧಾರಿಸುವವರೆಗೂ ಬ್ಯಾಂಕ್‌ಗಳಿಂದ ಹಣ ವಿತ್ ಡ್ರಾ ಮಾಡದಂತೆ ಮನವಿ ಮಾಡುತ್ತಿದೆ.

    ಆರ್ಥಿಕ ಸಂಕಷ್ಟದ ಜೊತೆಗೆ ಈಗ ಜಲಕಂಟಕವೂ ಶುರುವಾಗಿದೆ. ಭಾರಿ ಮಳೆಯಿಂದಾಗಿ ಭಾರತ ಸಲಾಲ್, ಬಗ್ಲಿಹಾರ್ ಡ್ಯಾಂನ ಹಲವು ಗೇಟ್‌ಗಳಿಂದ ನೀರು ರಿಲೀಸ್ ಮಾಡಿದೆ. ಈ ಮೂಲಕ ಚೆನಾಬ್ ನೀರು ಪಾಕಿಸ್ತಾನಕ್ಕೆ ಹರಿಯುವಂತೆ ಮಾಡಿದ್ದು, ಪಾಕಿಸ್ತಾನಕ್ಕೆ ಪ್ರವಾಹ ಭೀತಿ ಶುರುವಾಗಿದೆ.ಇದನ್ನೂ ಓದಿ: ಭಾರತ-ಪಾಕ್ ಗಡಿಯಲ್ಲಿರುವ 24 ವಿಮಾನ ನಿಲ್ದಾಣಗಳು ಮೇ 15ರವರೆಗೆ ಬಂದ್

  • ಎನ್‌ಡಿಎ ಅವಧಿಯಲ್ಲೇ ತಮಿಳುನಾಡಿಗೆ 3 ಪಟ್ಟು ಹೆಚ್ಚಿನ ಅನುದಾನ ಸಿಕ್ಕಿದೆ – ಮೋದಿ

    ಎನ್‌ಡಿಎ ಅವಧಿಯಲ್ಲೇ ತಮಿಳುನಾಡಿಗೆ 3 ಪಟ್ಟು ಹೆಚ್ಚಿನ ಅನುದಾನ ಸಿಕ್ಕಿದೆ – ಮೋದಿ

    – ತಮಿಳುನಾಡಿನ ಮೂಲಸೌಕರ್ಯ ಕೇಂದ್ರದ ಪ್ರಮುಖ ಆದ್ಯತೆ
    – ರಾಜ್ಯದಾದ್ಯಂತ 77 ರೈಲು ನಿಲ್ದಾಣ ಆಧುನೀಕರಿಸಲು ಒತ್ತು

    ಚೆನ್ನೈ: 2014ರ ನಂತರ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ತಮಿಳುನಾಡಿಗೆ (Tamil Nadu) ಮೂರು ಪಟ್ಟು ಹೆಚ್ಚಿನ ಅನುದಾನ ಸಿಕ್ಕಿದೆ. ಆದರೂ ಕೆಲವರು ಸಮರ್ಥನೆಯಿಲ್ಲದೇ ಕೇಂದ್ರ ಸರ್ಕಾರವನ್ನು ದೂರುತ್ತಿದ್ದಾರೆ ಎಂದು ಡಿಎಂಕೆ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ (Narendra Modi) ಕಿಡಿ ಕಾರಿದರು.

    ತಮಿಳುನಾಡಿನ ರಾಮೇಶ್ವರಂನಲ್ಲಿ ʻಪಂಬನ್ʼ ದೇಶದ ಮೊದಲ ವರ್ಟಿಕಲ್‌ ರೈಲ್ವೆ ಬ್ರಿಡ್ಜ್‌ ಲೋಕಾರ್ಪಣೆಗೊಳಿಸಿದ್ರು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ರಾಜ್ಯದ ಇತರೇ ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ರು. ಈ ವೇಳೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಾ, ಎಂ.ಕೆ ಸ್ಟಾಲಿನ್‌ (MK Stalin) ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. 2014ರಿಂದ ತಮಿಳುನಾಡಿಗೆ ಕೇಂದ್ರದ ಅನುದಾನ 3 ಪಟ್ಟು ಹೆಚ್ಚಾಗಿ ಸಿಕ್ಕಿದೆ. ಆದರೂ ಕೆಲವರಿಗೆ ಯಾವಾಗಲೂ ಅಳುವ ಅಭ್ಯಾಸ ಇರುತ್ತದೆ ಎಂದು ಕುಟುಕಿದರು. ಇದನ್ನೂ ಓದಿ: PublicTV Explainer: ‘ಕೆಜಿಎಫ್‌’ಗೆ ಕಂಟಕ – ಸರ್ಕಾರ V/S ವಿದ್ಯಾರ್ಥಿಗಳು; ಏನಿದು ವಿವಾದ?

    ತಮಿಳುನಾಡಿನ ಮೂಲಸೌಕರ್ಯವು (Infrastructure of Tamil Nadu )ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಕಳೆದ ದಶಕಗಳಲ್ಲಿ ರಾಜ್ಯದ ರೈಲ್ವೆ ಬಜೆಟ್‌ 7 ಪಟ್ಟು ಹೆಚ್ಚಾಗಿದೆ. ಇಂತಹ ಗಮನಾರ್ಹ ಬೆಳವಣಿಗೆ ಆಗಿದ್ದರೂ ಕೆಲವರು ಸಮರ್ಥನೆಗಳಿಲ್ಲದೇ ದೂರುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಟೀಕಿಸಿದರು. ಇದನ್ನೂ ಓದಿ: ಸಮುದ್ರದಲ್ಲಿ ಪಾಕ್‌ ವ್ಯಕ್ತಿಗೆ ಎದುರಾದ ಸಂಕಷ್ಟ – 3 ಗಂಟೆ ಕಾಲ ಶಸ್ತ್ರಚಿಕಿತ್ಸೆ ನೀಡಿ ಜೀವ ಉಳಿಸಿದ ಭಾರತೀಯ ನೌಕಾಪಡೆ ಸಿಬ್ಬಂದಿ

    ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಭಾರತದ ಪ್ರಯಾಣದಲ್ಲಿ ತಮಿಳುನಾಡು ನಿರ್ಣಾಯಕ ಸ್ಥಾನವನ್ನು ಹೊಂದಿದೆ. ರಾಜ್ಯವು ಸಂಪೂರ್ಣ ಸಾಮರ್ಥ್ಯವನ್ನು ಸಾಬೀತುಪಡಿಸಿದಂತೆ ದೇಶದ ಒಟ್ಟಾರೆ ಅಭಿವೃದ್ಧಿಯ ಪ್ರಗತಿ ಮತ್ತಷ್ಟು ವೇಗವಾಗುತ್ತದೆ. ಅದಕ್ಕಾಗಿ ಕೇಂದ್ರ ಸರ್ಕಾರ ತಮಿಳುನಾಡಿಗೆ ಆದ್ಯತೆ ನೀಡುತ್ತದೆ. 2014ಕ್ಕಿಂತ ಹಿಂದಿನ ಅವಧಿಗೆ ಹೋಲಿಸಿದ್ರೆ ತಮಿಳುನಾಡಿಗೆ ಮೂರು ಪಟ್ಟು ಹೆಚ್ಚು ಅನುದಾನ ಎನ್‌ಡಿಎ ಅವಧಿಯಲ್ಲಿ ಹಂಚಿಕೆಯಾಗಿದೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ದೇಶದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಲೋಕಾರ್ಪಣೆ ಮಾಡಿದ ಮೋದಿ – ಈ ಸೇತುವೆ ವಿಶೇಷತೆ ಏನು?

    2014ಕ್ಕಿಂತ ಮೊದಲು ತಮಿಳುನಾಡಿಗೆ ವಾರ್ಷಿಕ ಕೇವಲ 900 ಕೋಟಿ ರೂ.ಗಳ ಹಂಚಿಕೆಯಾಗಿತ್ತು, ಆದರೆ ಈ ವರ್ಷ ರಾಜ್ಯದ ರೈಲ್ವೆ ಬಜೆಟ್ 6,000 ಕೋಟಿ ರೂ.ಗಳನ್ನು ಮೀರಿದೆ. ಕೇಂದ್ರ ಸರ್ಕಾರವು ರಾಮೇಶ್ವರಂ ವರ್ಟಿಕಲ್‌ ರೈಲ್ವೆ ಬ್ರಿಡ್ಜ್‌ ಸೇರಿದಂತೆ ತಮಿಳುನಾಡಿನಾದ್ಯಂತ 77 ರೈಲು ನಿಲ್ದಾಣಗಳನ್ನು ಆಧುನೀಕರಿಸಲು ಆದ್ಯತೆ ನೀಡಿದೆ ಎಂದು ವಿವರಿಸಿದರು. ಇದನ್ನೂ ಓದಿ: ರಾಮನವಮಿ | 50 ಲಕ್ಷ ಭಕ್ತರಿಂದ ಅಯೋಧ್ಯೆ ಶ್ರೀರಾಮನ ದರ್ಶನ ಸಾಧ್ಯತೆ

  • ಗ್ಯಾರಂಟಿ ಯೋಜನೆಗಾಗಿ ವಿಕಲಚೇತನರಿಗೆ ನೀಡಿದ್ದ ಅನುದಾನ ಕಡಿತ: ಜೋಷಿ, ಕರಂದ್ಲಾಜೆ ಕಿಡಿ

    ಗ್ಯಾರಂಟಿ ಯೋಜನೆಗಾಗಿ ವಿಕಲಚೇತನರಿಗೆ ನೀಡಿದ್ದ ಅನುದಾನ ಕಡಿತ: ಜೋಷಿ, ಕರಂದ್ಲಾಜೆ ಕಿಡಿ

    ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗೆ (Congress Guarantee) ಹಣ ಹೊಂದಿಸುವ ಭರದಲ್ಲಿ ರಾಜ್ಯ ಸರ್ಕಾರ ವಿಕಲಚೇತನರಿಗೆ ಅನುದಾನ (Fund) ಕಡಿತ ಮಾಡಿದ ಆರೋಪಕ್ಕೆ ಒಳಗಾಗಿದೆ.

    ಕಲಚೇತನರ ಅನುದಾನ ಕಡಿತ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಆಕ್ರೋಶ ಹೊರಹಾಕಿದೆ. ಕಳೆದ ವರ್ಷಕ್ಕಿಂತ ವಿಕಲಚೇತರ ಅನುದಾನದಲ್ಲಿ 80% ರಷ್ಟು ಹಣ ಕಡಿತ ಮಾಡಲಾಗಿದೆ ಎಂದು ಬಿಜೆಪಿ ಆಪಾದಿಸಿದೆ.  ಇದನ್ನೂ ಓದಿ: ಸಭೆಗಳನ್ನು ರದ್ದು ಮಾಡಿ ದಿಢೀರ್‌ ಸ್ವಗ್ರಾಮಕ್ಕೆ ತೆರಳಿದ ಏಕನಾಥ್‌ ಶಿಂಧೆ


    ಈ ವಿಚಾರವಾಗಿ ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ (Pralhad Joshi), ಶೋಭಾ ಕರಂದ್ಲಾಜೆ (Shobha Karandlaje) ಎಕ್ಸ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಕಳೆದ ವರ್ಷ ಸರ್ಕಾರ ವಿಕಲಚೇನರ ವಿವಿಧ ಯೋಜನೆಗಳಿಗೆ 53 ಕೋಟಿ ರೂ. ಅನುದಾನ ಮೀಸಲು ಇಡಲಾಗಿತ್ತು. ಆದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಬರೀ 10 ಕೋಟಿ ರೂ. ಅನುದಾನ ಮಾತ್ರ ಹಂಚಿಕೆ ಮಾಡಲಾಗಿದೆ. ಇದು ನಿಜಕ್ಕೂ ದುರದೃಷ್ಟಕರ. ಇದು ದಿವ್ಯಾಂಗರಿಗೆ ಆಗುತ್ತಿರುವ ಅನ್ಯಾಯ. ಇದರಿಂದ ಅವರ ಅಗತ್ಯ ಸೇವೆಗಳಿಗೆ ಧಕ್ಕೆ ಆಗಲಿದೆ. ಮೀಸಲಿಟ್ಟ ನಿಧಿಯನ್ನು ಅವರಿಗಾಗಿ, ಅವರ ಸೇವೆಗಾಗಿ ಉಪಯೋಗಿಸಬೇಕು ಎಂದು ಜೋಶಿ ಆಗ್ರಹಿಸಿದ್ದಾರೆ.

     

  • ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ವಿರುದ್ಧ FIR ದಾಖಲು

    ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ವಿರುದ್ಧ FIR ದಾಖಲು

    ಭೋಪಾಲ್: ವಿದ್ಯಾರ್ಥಿಗಳ ಶೈಕ್ಷಣಿಕ ಸೌಲಭ್ಯಗಳ ನಿರ್ವಹಣೆಗಾಗಿ ಸಂಗ್ರಹಿಸಿದ ಹಣವನ್ನು ದುರುಪಯೋಗವಾಗಿದೆ ಎಂದು ಆರೋಪಿಸಿ ಮೇಧಾ ಪಾಟ್ಕರ್ ಸೇರಿದಂತೆ 11 ಜನರ ವಿರುದ್ಧ ಎಫ್‍ಐಆರ್ ದಾಖಲಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಬುಡಕಟ್ಟು ಜನರ ಶೈಕ್ಷಣಿಕ ಸೌಲಭ್ಯಗಳ ನಿರ್ವಹಣೆಗಾಗಿ ಸಂಗ್ರಹಿಸಿದ ಹಣವನ್ನು ನರ್ಮದಾ ಬಚಾವೊ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಸೇರಿದಂತೆ 11 ಜನರು ರಾಜಕೀಯ ಹಾಗೂ ದೇಶ ವಿರೋಧಿ ಕಾರ್ಯಕ್ಕಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ.

    ಮುಂಬೈನಲ್ಲಿ ನೋಂದಣಿಯಾಗಿರುವ ನರ್ಮದಾ ನವನಿರ್ಮಾಣ ಅಭಿಯಾನ (ಎನ್‍ಎನ್‍ಎ) ಟ್ರಸ್ಟ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ನರ್ಮದಾ ಕಣಿವೆಯ ಬುಡಕಟ್ಟು ವಿದ್ಯಾರ್ಥಿಗಳಿಗೆ ವಸತಿ ಶೈಕ್ಷಣಿಕ ಸೌಲಭ್ಯಗಳನ್ನು ನಡೆಸಲು ಸಂಗ್ರಹಿಸಿದ ಹಣವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಎಫ್‍ಐಆರ್‌ನಲ್ಲಿ ತಿಳಿಸಿಲಾಗಿದೆ. ಇದನ್ನೂ ಓದಿ: ಪೌರ ಕಾರ್ಮಿಕರು ರಜೆ ಹಾಕಿದ್ರೆ ಸಂಬಳವೇ ಕಟ್- ರೆಸ್ಟ್‌ಲೆಸ್ ವರ್ಕರ್ಸ್‍ಗೆ ಇದೆಂಥಾ ಅನ್ಯಾಯ..?

    ಖಾಸಗಿ ದೂರಿನ ಮೇರೆಗೆ ಮೇಧಾ ಪಾಟ್ಕರ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದ್ದು, ದೂರುದಾರರು ಕೆಲವು ದಾಖಲೆಗಳನ್ನು ಒದಗಿಸಿದ್ದಾರೆ. ಹಳೆಯ ವಹಿವಾಟಿಗೆ ಸಂಬಂಧಿಸಿದ ಪ್ರಕರಣವಾಗಿರುವುದರಿಂದ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಬರ್ವಾನಿ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಕುಮಾರ್ ಶುಕ್ಲಾ ತಿಳಿಸಿದ್ದಾರೆ. ಇದನ್ನೂ ಓದಿ: ಮೇಘಸ್ಫೋಟದಿಂದ ತಾತ್ಕಾಲಿಕ ಬಂದ್ ಆಗಿದ್ದ ಅಮರನಾಥ ಯಾತ್ರೆ ಪುನಾರಂಭ

    ನರ್ಮದಾ ಬಚಾವೊ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಈ ಬಗ್ಗೆ ಮಾತನಾಡಿ, ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಈ ಆರೋಪಗಳ ಹಿಂದೆ ರಾಜಕೀಯವಿದೆ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • 550 ಕೋಟಿ ಅನುದಾನ ವಿಚಾರದಲ್ಲಿ ಜಿ.ಎಸ್ ಬಸವರಾಜು, ಎಸ್ ಆರ್ ಶ್ರೀನಿವಾಸ್ ನಡುವೆ ಕಿತ್ತಾಟ

    550 ಕೋಟಿ ಅನುದಾನ ವಿಚಾರದಲ್ಲಿ ಜಿ.ಎಸ್ ಬಸವರಾಜು, ಎಸ್ ಆರ್ ಶ್ರೀನಿವಾಸ್ ನಡುವೆ ಕಿತ್ತಾಟ

    ತುಮಕೂರು: ಜಿಲ್ಲೆಗೆ 550 ಕೋಟಿ ಅನುದಾನದ ವಿಚಾರದಲ್ಲಿ ತುಮಕೂರು ಸಂಸದ ಜಿ.ಎಸ್ ಬಸವರಾಜು ಅವರಿಗೆ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಅವಾಜ್ ಹಾಕಿರುವ ಪ್ರಸಂಗ ನಡೆದಿದೆ.

    ಗುಬ್ಬಿ ತಾಲೂಕಿನ ಚೇಳೂರು ಸಮೀಪದ ಸಿ. ನಂದಿಹಳ್ಳಿ ಗ್ರಾಮದಲ್ಲಿ ನಡೆದ ಬೆಸ್ಕಾಂ ವಿದ್ಯುತ್ ಎಂಎಸ್‍ಎಸ್ ಸ್ಟೇಷನ್ ಉದ್ಘಾಟನೆಯ ವೇಳೆ ಇಬ್ಬರು ನಾಯಕರು ಕೈಕೈ ಮಿಲಾಯಿಸಿಕೊಂಡು ಜಗಳಕ್ಕಿಳಿದ್ದಾರೆ. ಇದನ್ನೂ ಓದಿ: ವಾಜಪೇಯಿ ಹೆವೀ ಡ್ರಿಂಕರ್ – ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ

    ಚೇಳೂರು ಹೋಬಳಿಯಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಕೇಂದ್ರ ಸರ್ಕಾರ 500 ಕೋಟಿ ಮೀಸಲಿಟ್ಟಿದೆ ಎಂದು ಸಭೆಯಲ್ಲಿ ಜಿಎಸ್ ಬಸವರಾಜು ಹೇಳಿದರು. ಈ ವೇಳೆ ರೊಚ್ಚಿಗೆದ್ದ ಗುಬ್ಬಿ ಶ್ರೀನಿವಾಸ್, ರೈತರಿಗೆ ಸುಳ್ಳು ಹೇಳ್ತಿಯಾ, ನಿಮ್ ಯೋಗ್ಯತೆಗೆ ಇಷ್ಟು ಬೆಂಕಿ ಹಾಕ.. ಸುಳ್ಳು ಯಾಕೆ ಬೊಗಳುತ್ತೀಯಾ..? ವಯಸ್ಸಾಗಿದೆ ಈಗಲಾದ್ರೂ ಸುಳ್ಳು ಹೇಳೋದನ್ನ ನಿಲ್ಲಿಸು ಎಂದು ಏಕವಚನದಲ್ಲಿಯೇ ಮಾತಿಗಿಳಿದರು.

    ಇಲ್ಲದ ವಿಚಾರವನ್ನು ಮಾತಾಡಬೇಡ ನೀನು. ನೀನು ಅಯೋಗ್ಯ ನನ್ಮಗ ಎಂದು ಇಬ್ಬರೂ ನಾಯಕರು ಪರಸ್ಪರ ಬೈದಾಡಿಕೊಂಡರು. 550 ಕೋಟಿ ತಂದಿದ್ದೀವಿ ಎಂದ ಬಸವರಾಜುಗೆ 550 ಕೋಟಿ ನಿಮ್ ತಾತ ತಂದಿದ್ನಾ..? 550 ಕೋಟಿ ಎಲ್ ತಂದಿದ್ದೀರಿ ತೋರಿಸ್ರಿ ಎಂದು ಎಸ್ ಆರ್ ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದಾರೆ.

  • ಕುಮಾರಸ್ವಾಮಿ ಅತ್ತೆ ಸಿಟ್ಟನ್ನು ಬೆಕ್ಕಿನ ಮೇಲೆ ತೋರಿಸುತ್ತಿದ್ದಾರೆ: ಸಿ.ಟಿ.ರವಿ

    ಕುಮಾರಸ್ವಾಮಿ ಅತ್ತೆ ಸಿಟ್ಟನ್ನು ಬೆಕ್ಕಿನ ಮೇಲೆ ತೋರಿಸುತ್ತಿದ್ದಾರೆ: ಸಿ.ಟಿ.ರವಿ

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅತ್ತೆ ಸಿಟ್ಟನ್ನು ಕೊತ್ತಿ ಮೇಲೆ ತೋರಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಅಧಿಕಾರ ಬಿಟ್ಟು ಪಕ್ಷದ ಕೆಲಸಕ್ಕೆ ಹೋಗಿದ್ದೇನೆ. ಅಧಿಕಾರದ ಸ್ವಾರ್ಥ ಇದ್ದಿದ್ದರೆ ಮಂತ್ರಿಯಾಗಿಯೇ ಇರುತ್ತಿದ್ದೆ. ಅವರು ಅನುದಾನ ಕೊಟ್ಟಿಲ್ಲ ಎಂದು ಹೇಳುತ್ತಿದ್ದಾರೆ. ಅನುದಾನವನ್ನು ಮುಖ್ಯಮಂತ್ರಿ ಬಳಿ ಕೇಳಲಿ. ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಕೇಳಲಿ. ಆದರೆ ಅವರು ನನ್ನ ಹೆಸರನ್ನು ಏಕೆ ಬಳಸುತ್ತಿದ್ದಾರೆ ನನಗೆ ಅರ್ಥ ಆಗುತ್ತಿಲ್ಲ ಎಂದಿದ್ದಾರೆ.

    ಅವರ ಗೆಲುವಿಗೆ ನಮ್ಮ ಶ್ರಮವೂ ಸ್ವಲ್ಪ ಇದೆ. ನನ್ನ ಕುಟುಂಬದ ವೋಟು ಇರುವುದು ಮೂಡಿಗೆರೆ ಕ್ಷೇತ್ರದಲ್ಲಿಯೇ. ನಾವು ಬಿಜೆಪಿ ಬಿಟ್ಟು ಬೇರೆಯವರಿಗೆ ವೋಟು ಹಾಕಿಲ್ಲ. ಅವರು ಅಂಕಿ-ಅಂಶ ತೆಗೆಸಿ ನೋಡಲಿ. ನಾವು ಮತ್ರಿಯಾಗಿದ್ದಾಗ ಅತೀ ಹೆಚ್ಚು ಅತಿವೃಷ್ಠಿಯ ಅನುದಾನ ಅವರಿಗೆ ನೀಡಿದ್ದು. ನಾನೇ ಅಂಕಿ-ಅಂಶ ತೆಗೆಸಿ ಕೊಡಿಸುತ್ತೇನೆ. ಅತೀ ಹೆಚ್ಚು ಅನುದಾನ ಮೂಡಿಗೆರೆ ಹಾಗೂ ಶೃಂಗೇರಿಗೆ ನೀಡಲಾಗಿದ್ದು, ನಂತರ ಚಿಕ್ಕಮಗಳೂರಿಗೆ ನೀಡಲಾಗಿದೆ. ನಾನು ಹೇಳಿದ್ದು ಸುಳ್ಳಾದರೆ ಆಮೇಲೆ ಪ್ರಶ್ನೆ ಮಾಡಲಿ. ಇತ್ತೀಚೆಗೆ ಆರ್.ಡಿ.ಪಿ.ಆರ್.ನಲ್ಲೂ ಅತೀ ಹೆಚ್ಚು ಗ್ರ್ಯಾಂಟ್ ಕೊಟ್ಟಿದ್ದು ಮೂಡಿಗೆರೆಗೆ. ಅದು ಅಧಿಕೃತವಾಗಿರುವ ಅಂಶ. ಅವರು ಮನಸಲ್ಲಿ ಬೇರೆ ಏನೋ ಇಟ್ಟುಕೊಂಡು ಈಗ ಇಲ್ಲಿ ಏನೋ ಮಾತನಾಡುತ್ತಿದ್ದಾರೆ ಎಂದು ಅನ್ನಿಸುತ್ತಿದೆ ಎಂದು ಹೇಳಿದ್ದಾರೆ.

    ಚಿಕ್ಕಮಗಳೂರಿಗಿಂತ ಹೆಚ್ಚು ಫ್ಲಡ್, ಆರ್.ಡಿ.ಪಿ.ಆರ್. ಹಾಗೂ ಲೋಕೋಪಯೋಗಿಯಲ್ಲಿ ಹೆಚ್ಚು ಫಂಡ್ ಹೋಗಿದ್ದರೆ ಅವರು ಎಂಎಲ್‍ಎ ಗಿರಿಗೆ ಏನು ಮಾಡುತ್ತಾರೆ ಎಂದು ಪ್ರಶ್ನಿಸುತ್ತಾರೆ. ನನಗೆ ಸಣ್ಣತನದ ರಾಜಕಾರಣ ಮಾಡಿ ಗೊತ್ತಿಲ್ಲ. ಅವರಿಗೆ ಕ್ಷೇತ್ರದ ವ್ಯಾಪ್ತಿಯೇ ಗೊತ್ತಿಲ್ಲ. ತಿಳಿದುಕೊಳ್ಳಲಿ. ನನಗಿದ್ದ ಸಣ್ಣ ಖಾತೆಯಲ್ಲಿ ನನ್ನ ಶಕ್ತಿ ಮೀರಿ ಅವರಿಗೆ ಎಲ್ಲಾ ಕಡೆ ಕೊಡುವ ಕೆಲಸ ಮಾಡಿದ್ದೇನೆ. ಅತಿವೃಷ್ಟಿ ಮೂಡಿಗೆರೆ ಕ್ಷೇತ್ರಕ್ಕೆ ಹೆಚ್ಚು ಹೋಗದಿದ್ದರೆ ನಾನು ರಾಜೀನಾಮೆ ಕೊಡುತ್ತೇನೆ. ಹೋಗಿದರೆ ಅವರು ನೀಡುತ್ತಾರಾ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ:ಹೊಟ್ಟೆಗೆ ಊಟವಿಲ್ಲದೆ ಗಂಟೆಗಟ್ಲೆ ಶಾಸಕರ ಮನೆ ಬಳಿ ಕಾದ್ವಿ – ಕಾರುಗಳಿಗೆ ಬೆಂಕಿಯಿಟ್ಟ ಪ್ರಕರಣಕ್ಕೆ ಟ್ವಿಸ್ಟ್

  • ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರು ಇಟ್ಟಿದ್ದಾರೆ 20,700 ಕೋಟಿ ರೂ. ಹಣ

    ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರು ಇಟ್ಟಿದ್ದಾರೆ 20,700 ಕೋಟಿ ರೂ. ಹಣ

    – 13 ವರ್ಷದಲ್ಲೇ ಗರಿಷ್ಠ
    – ವೈಯಕ್ತಿಕ ಹಣ ಠೇವಣಿಯಲ್ಲಿ ಇಳಿಕೆ

    ನವದೆಹಲಿ/ಜ್ಯೂರಿಚ್: ಭಾರತೀಯರು ವೈಯಕ್ತಿಕವಾಗಿ ಮತ್ತು ಬೇರೆ ಬೇರೆ ಹಣಕಾಸು ಸಂಸ್ಥೆಗಳ ಮೂಲಕ ಸ್ವಿಸ್ ಬ್ಯಾಂಕ್ ಗಳನ್ನು ಇಟ್ಟಿರುವ ಹಣದ ಮೊತ್ತ 20,700 ಕೋಟಿ ರೂ.ಗೆ ಜಿಗಿದಿದೆ.

    13 ವರ್ಷಗಳಲ್ಲೇ ಇದು ಗರಿಷ್ಠ ಮೊತ್ತವಾಗಿದ್ದರೂ ವೈಯಕ್ತಿಕ ಹಣ ಠೇವಣಿಯಲ್ಲಿ ಇಳಿಕೆಯಾಗಿದೆ ಎಂದು ಸ್ವಿಜರ್ಲೆಂಡ್ ಕೇಂದ್ರೀಯ ಬ್ಯಾಂಕ್ ಹೇಳಿದೆ.

    ಬ್ಯಾಂಕ್ 2020ರ ವಾರ್ಷಿಕ ವರದಿಯಲ್ಲಿ ಮಾಹಿತಿ ನೀಡಿದ್ದು, ಸೆಕ್ಯೂರೀಟಿಸ್ ಮತ್ತು ಅದೇ ರೀತಿಯ ಇತರ ಮಾದರಿಯ ಹೂಡಿಕೆಯಿಂದಾಗಿ ಮೊತ್ತ ಏರಿಕೆಯಾಗಿದೆ. ಭಾರತದಲ್ಲಿನ ಸ್ವಿಜರ್ಲೆಂಡ್ ಬ್ಯಾಂಕಿನಲ್ಲಿರುವ ಹಣವು ಇದರಲ್ಲಿ ಸೇರಿದೆ ಎಂದು ತಿಳಿಸಿದೆ. ಈ ಹಣದಲ್ಲಿ ಭಾರತೀಯರು, ಅನಿವಾಸಿ ಭಾರತೀಯರು ಬೇರೆ ದೇಶಗಳ ಸಂಸ್ಥೆಗಳ ಹೆಸರಿನಲ್ಲಿ ಇಡಲಾಗಿರುವ ಹಣವನ್ನು ಸೇರಿಸಿಲ್ಲ. ಇದನ್ನೂ ಓದಿ: ಭಾರತದ ಕೈ ಸೇರಿದ ಸ್ವಿಸ್ ಬ್ಯಾಂಕ್ ಖಾತೆದಾರರ ಮೊದಲ ಪಟ್ಟಿ

    2006ರಲ್ಲಿ ಸ್ವಿಸ್ ಬ್ಯಾಂಕ್‍ಗಳಲ್ಲಿ ಒಟ್ಟು 23,000 ಕೋಟಿ ರೂ. ಹಣವನ್ನು ಇಡಲಾಗಿತ್ತು. ಇದು ಇಲ್ಲಿಯವರೆಗೆ ಭಾರತೀಯರು ಇರಿಸಿದ್ದ ಗರಿಷ್ಠ ಮೊತ್ತವಾಗಿತ್ತು. 2010, 2013, 2017 ಹೊರತು ಪಡಿಸಿ ನಂತರದ ವರ್ಷಗಳಲ್ಲಿ ಠೇವಣಿ ಇಳಿಕೆಯಾಗಿತ್ತು. ಆದರೆ 2020ರಲ್ಲಿ ಈ ಮೊತ್ತ 20,700 ಕೋಟಿ ರೂ.ಗೆ ಜಿಗಿದಿದೆ.

    ವೈಯಕ್ತಿಕ ಹಣ ಇಳಿಕೆ:
    2019ರಲ್ಲಿ ಭಾರತೀಯರು ವೈಯಕ್ತಿಕವಾಗಿ 4,500 ಕೋಟಿ ರೂ. ಇಟ್ಟಿದ್ದರು. ಆದರೆ ಈಗ ಇದು 4,000 ಕೋಟಿ ರೂ.ಗೆ ಇಳಿಕೆಯಾಗಿದೆ. ಇದನ್ನೂ ಓದಿ: ಪಿಎಂಜಿಕೆವೈ ಅಡಿಯಲ್ಲಿ ಎಷ್ಟು ಕೋಟಿ ಕಪ್ಪು ಹಣ ಘೋಷಣೆಯಾಗಿದೆ ಗೊತ್ತಾ?

    ಟಾಪ್ 10 ದೇಶಗಳು:
    ವೆಸ್ಟ್ ಇಂಡೀಸ್, ಫ್ರಾನ್ಸ್, ಹಾಂಕಾಂಗ್, ಜರ್ಮನಿ, ಸಿಂಗಾಪುರ, ಲಕ್ಸೆಂಬರ್ಗ್, ಕೇಮನ್ ದ್ವೀಪಗಳು ಮತ್ತು ಬಹಾಮಾಸ್ ಅನುಕ್ರಮವಾಗಿ ಟಾಪ್ 10 ಸ್ಥಾನವನ್ನು ಪಡೆದಿವೆ. ಪಟ್ಟಿಯಲ್ಲಿ ಭಾರತ 51ನೇ ಸ್ಥಾನ ಪಡೆದಿದೆ.

    ಕಪ್ಪುಹಣವೇ?
    ಕಪ್ಪು ಹಣವನ್ನು ಸ್ವಿಸ್ ಬ್ಯಾಂಕ್‍ಗಳು ಇಡಲಾಗುತ್ತದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಇಲ್ಲಿ ಠೇವಣಿ ಇರಿಸಿದ್ದ ಹಣಗಳು ಎಲ್ಲವೂ ಕಪ್ಪು ಹಣ ಎಂದೇ ಗುರುತಿಸಲಾಗುತ್ತಿತ್ತು. ಆದರೆ ಈಗ ವ್ಯವಸ್ಥೆ ಬದಲಾಗಿದ್ದು ತನ್ನ ಬ್ಯಾಂಕ್‍ಗಳಲ್ಲಿ ಹಣ ಇಟ್ಟ ವಿವರವನ್ನು ಸರ್ಕಾರಗಳಿಗೆ ನೀಡುತ್ತದೆ.  ಹೀಗಾಗಿ ಇಲ್ಲಿ ಠೇವಣಿ ಇಟ್ಟ ಎಲ್ಲ ಹಣವೂ ಕಪ್ಪು ಹಣ ಎಂದು ಕರೆಯಲು ಬರುವುದಿಲ್ಲ. ಈಗ ‘ಕಪ್ಪು ಕುಳಗಳು’ಸ್ವಿಸ್ ಬ್ಯಾಂಕುಗಳಲ್ಲಿ ಹೆಚ್ಚಿನ ಹಣವನ್ನು ಇಡುತ್ತಿಲ್ಲ.

  • ರಾಮಮಂದಿರ ನಿಧಿ ಸಂಗ್ರಹ – ಪೇಜಾವರ ಶ್ರೀಗಳ ನೇತೃತ್ವದಲ್ಲಿ ಭಾರೀ ದೇಣಿಗೆ ಸಂಗ್ರಹ

    ರಾಮಮಂದಿರ ನಿಧಿ ಸಂಗ್ರಹ – ಪೇಜಾವರ ಶ್ರೀಗಳ ನೇತೃತ್ವದಲ್ಲಿ ಭಾರೀ ದೇಣಿಗೆ ಸಂಗ್ರಹ

    ಉಡುಪಿ: ರಾಮ ರಾಮ ರಾಮ.. ದೇಶಾದ್ಯಂತ ಒಂದು ತಿಂಗಳು ಮರ್ಯಾದಾ ಪುರುಷೋತ್ತಮನ ನಾಮ ಮನೆ ಮನೆಗಳಿಗೆ ತಲುಪುತ್ತಿದೆ. ವಿಶ್ವದ ಅತೀ ದೊಡ್ಡ ಧನ ಸಂಗ್ರಹ ಅಭಿಯಾನ ಭಾರತದಲ್ಲಿ ನಡೆಯುತ್ತಿದೆ. ಕೇವಲ 15 ದಿನದಲ್ಲಿ ಜನ ರಾಮಲಲ್ಲಾನಿಗಾಗಿ ಜನ ಕೊಟ್ಟ ದೇಣಿಗೆ ಕೇಳಿದ್ರೆ ನಿಮಗೆ ಆಶ್ಚರ್ಯ ಆಗಬಹುದು.

    ಸಾಮಾನ್ಯ ಜನರೇ ಸೇರಿ ರಾಮಮಂದಿರ ನಿರ್ಮಾಣಕ್ಕೆ ತಗಲುವ ಧನ ಸಂಗ್ರಹಕ್ಕೆ ಮುಂದಾಗಿದ್ದಾರೆ. ಸರ್ಕಾರದ ನೆರವನ್ನೇ ಪಡೆಯದೇ ಸುಮಾರು ಒಂದೂವರೆ ಸಾವಿರ ಕೋಟಿ ವೆಚ್ಚದಲ್ಲಿ ರಾಮಲಲ್ಲಾನ ಮಂದಿರ ನಿರ್ಮಾಣವಾಗುತ್ತಿದೆ. ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ಕೈಗೊಂಡ ದೇಶದ ಅಭಿಯಾನದ ನೇತೃತ್ವವನ್ನು ದಕ್ಷಿಣ ಭಾರತದಲ್ಲಿ ಪೇಜಾವರ ಸ್ವಾಮೀಜಿ ವಹಿಸಿಕೊಂಡಿದ್ದಾರೆ. ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ದಕ್ಷಿಣ ಭಾರತದ ಏಕೈಕ ವಿಶ್ವಸ್ಥರಾಗಿರುವ ಸ್ವಾಮೀಜಿ ದಕ್ಷಿಣದ ರಾಜ್ಯಗಳಲ್ಲಿ ಅಭಿಯಾನ ಮಾಡುತ್ತಾ, ಪ್ರಮುಖ ಕೇಂದ್ರಗಳನ್ನು ಭೇಟಿಯಾಗಿ ಧನ ಸಂಗ್ರಹ ಮಾಡುತ್ತಿದ್ದಾರೆ. 15 ದಿನಗಳಲ್ಲಿ 525 ಕೋಟಿ ರೂಪಾಯಿ ಸಂಗ್ರಹವಾಗಿದೆ.

    ಪೇಜಾವರ ಮಠದ ವಿಶ್ವೇಶ ತೀರ್ಥರ ಕಾಲದಲ್ಲಿ ಕೋರ್ಟ್ ಕಟ್ಟಳೆಗಳು ಮುಗಿದು ವಿವಾದಿತ ಭೂಮಿ ಹಿಂದೂಗಳ ಪಾಲಾಗಿತ್ತು. ಗುರುಗಳು ವೃಂದಾವನಸ್ಥರಾದ ನಂತರ ಟ್ರಸ್ಟ್ ನ ವಿಶ್ವಸ್ಥ ಸ್ಥಾನವನ್ನು ವಿಶ್ವಪ್ರಸನ್ನ ತೀರ್ಥರಿಗೆ ಒಲಿದಿದ್ದು, ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮಕರ ಸಂಕ್ರಾಂತಿಯ ದಿನ ತಿರುಗಾಟ ಆರಂಭಿಸಿರುವ ಶ್ರೀಗಳು ಕೇರಳ, ತಮಿಳ್ನಾಡು, ಆಂಧ್ರಪ್ರದೇಶಗಳಲ್ಲಿ ಅಭಿಯಾನ ನಡೆಸಿ ಧನ ಸಂಗ್ರಹ ಪೂರೈಸಿದ್ದಾರೆ. ಗ್ರಾಮದಿಂದ ರಾಜಭವನದವರೆಗೆ, ಧಾರ್ಮಿಕ ಕೇಂದ್ರ, ಶಿಕ್ಷಣ ಸಂಸ್ಥೆಗಳಿಗೆ ಭೇಟಿ ಮಾಡಿದ್ದಾರೆ.

    ಭಜನಾ ಮಂದಿರ, ಹಿಂದೂಪರ ಸಂಘಟನೆಗಳು ಮನೆ ಮನೆ ಭೇಟಿ ನೀಡುತ್ತಿದ್ದು ಧನ ಸಂಗ್ರಹಿಸುತ್ತಿವೆ. ಫೆಬ್ರವರಿ 27 ಮಾಘ ಪೂರ್ಣಿಮೆವರೆಗೆ ನಿಧಿ ಸಂಗ್ರಹ ಅಭಿಯಾನ ದೇಶದಲ್ಲಿ ನಡೆಯಲಿದೆ. ಸಾವಿರ ಕೋಟಿಗೂ ಅಧಿಕ ಹಣ ಸಂಗ್ರಹವಾಗುವ ನಿರೀಕ್ಷೆಯಿದೆ.

  • ಕನ್ನಡದ ಚಿತ್ರರಂಗ ಕಲಾವಿದರಿಂದ ಅಯೋಧ್ಯೆ ರಾಮ ಮಂದಿರಕ್ಕೆ ನಿಧಿ ಸಮರ್ಪಣೆ

    ಕನ್ನಡದ ಚಿತ್ರರಂಗ ಕಲಾವಿದರಿಂದ ಅಯೋಧ್ಯೆ ರಾಮ ಮಂದಿರಕ್ಕೆ ನಿಧಿ ಸಮರ್ಪಣೆ

    ಬೆಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರಕ್ಕೆ ದೇಶದ್ಯಾಂತ ಹಣ ಸಂಗ್ರಹಿಸಲಾಗುತ್ತಿದೆ. ಈ ಮಧ್ಯೆ ಕನ್ನಡ ಚಿತ್ರರಂಗ ಕಲಾವಿದರು ಭಕ್ತಿಯಿಂದ ತಮ್ಮ ತಮ್ಮ ನಿಧಿಯನ್ನು ಶ್ರೀರಾಮನಿಗೆ ಸಮರ್ಪಿಸಿದ್ದಾರೆ.

    ನಿಧಿ ಸ್ವೀಕರಿಸಿ ಮಾತನಾಡಿದ ಸಂಘದ ಹಿರಿಯರು ಮತ್ತು ಅಭಿಯಾನದ ಪ್ರಮುಖರಾದ ನಾ. ತಿಪ್ಪೇಸ್ವಾಮಿ ಜಿ, ಶ್ರೀರಾಮ ಪ್ರತಿಯೊಬ್ಬರ ಆದರ್ಶ ಪುರುಷ. ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಇಡೀ ದೇಶಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಬಡವ, ಶ್ರೀಮಂತ ಎನ್ನುವ ಭೇದ, ಭಾವ ಇಲ್ಲದೆ ಪ್ರತಿಯೊಬ್ಬರೂ ಇದು ನಮಗೆ ಸಿಕ್ಕಿದ ಆಜನ್ಮ ಪುಣ್ಯ ಎಂದು ತಿಳಿದು ತಮ್ಮ ಪಾಲಿನ ನಿಧಿ ಸಮರ್ಪಿಸುತ್ತಿದ್ದಾರೆ ಎಂದು ಹೇಳಿದರು.

    ನಿಧಿ ಸಮರ್ಪಣೆ ಬಗ್ಗೆ ಮಾತನಾಡಿದ ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷರಾದ ಸುನಿಲ್ ಪುರಣಿಕ್, ಕಲಾವಿದರು ಮುಕ್ತ ಮನಸ್ಸಿನಿಂದ ಶ್ರೀರಾಮ ಕಾರ್ಯ ಮಾಡಲು ಸಿದ್ಧರಾಗಿದ್ದಾರೆ. ಇದು ಮೊದಲ ಸುತ್ತು ಇನ್ನು ಬಹಳಷ್ಟು ಜನ ಕೊಡುವವರಿದ್ದಾರೆ ಎಂದರು.

    ಕಾರ್ಯಕ್ರಮದಲ್ಲಿ ಖ್ಯಾತ ನಿರ್ದೇಶಕ ಪವನ್ ಒಡೆಯರ್, ರೂಪ ಐಯ್ಯರ್, ಪ್ರಮೀಳಾ ಸುಬ್ರಹ್ಮಣ್ಯ, ಅನಿರುದ್ಧ ಬಾಲಾಜಿ, ಮಾಲತಿ ದೇಶಪಾಂಡೆ, ಸ್ವಾತಿ, ಯಮುನಾ, ಭಾಸ್ಕರ್, ಬಿರಾದಾರ್, ಶಿವಕುಮಾರ್ ಆರಾಧ್ಯ ಎಲ್ಲರೂ ನಿಧಿ ಸಮರ್ಪಣೆ ಮಾಡಿದರು.

  • ತುರ್ತು 100 ಕೋಟಿ ರೂ. ಬಿಡುಗಡೆ – ಯಾವ ಜಿಲ್ಲೆಗೆ ಎಷ್ಟು ಕೋಟಿ?

    ತುರ್ತು 100 ಕೋಟಿ ರೂ. ಬಿಡುಗಡೆ – ಯಾವ ಜಿಲ್ಲೆಗೆ ಎಷ್ಟು ಕೋಟಿ?

    ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಬಂದ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಗಳಿಗೆ ನೆರವಾಗಲು ಸರ್ಕಾರ 15 ಜಿಲ್ಲೆಗಳಿಗೆ ಒಟ್ಟಾಗಿ ತುರ್ತು 100 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ.

    ಅತಿ ಹೆಚ್ಚು ಹಾನಿಯಾಗಿರುವ ಬೆಳಗಾವಿಗೆ 25 ಕೋಟಿ ರೂ. ಬಿಡುಗಡೆ ಮಾಡಿದ್ದರೆ ಬಾಗಲಕೋಟೆ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ತಲಾ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ನಿಧಿಯಡಿ ಅನುದಾನ ಬಿಡುಗಡೆಗೊಳಿಸಿ ಸರ್ಕಾರದ ಆದೇಶ ಹೊರಡಿಸಿದೆ.

    ಪರಿಹಾರ ಕಾಮಗಾರಿಗೆ ಪ್ರಸಕ್ತ ವರ್ಷದ ಎನ್‌ಡಿಆರ್‌ಎಫ್‌ ನಿಧಿಯ ಎರಡನೇ ಕಂತು 126 ಕೋಟಿ ರೂ. ಹಣವನ್ನು ಬಿಡುಗಡೆ ಮಾಡುವಂತೆ ಸರ್ಕಾರ ಕೇಂದ್ರದಲ್ಲಿ ಮನವಿ ಮಾಡಿದೆ. ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಸಂಜೀವ್ ಕುಮಾರ್ ಜಿಂದಾಲ್ ಅವರಿಗೆ ರಾಜ್ಯ ಕಂದಾಯ ಇಲಾಖೆ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್ ಪತ್ರ ಬರೆದಿದ್ದಾರೆ.

    ಯಾವ ಜಿಲ್ಲೆಗೆ ಎಷ್ಟು ಕೋಟಿ ರೂ?
    ಬೆಳಗಾವಿ 25 ಕೋಟಿ ರೂ., ಬಾಗಲಕೋಟೆ ಮತ್ತು ಉತ್ತರ ಕನ್ನಡ 10 ಕೋಟಿ ರೂ., ವಿಜಯಪುರ, ಯಾದಗಿರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ, ಕೊಡಗು, ಚಿಕ್ಕಮಗಳೂರು, ಹಾಸನ, ಧಾರವಾಡ, ಗದಗ, ಕಲಬುರಗಿಗೆ ತಲಾ 5 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಾಗಿದೆ.