Tag: Function

  • ವೇದಿಕೆ ಮೇಲೆ ಕಣ್ಣೀರು ಹಾಕಿದ ಸ್ಪೀಕರ್ ರಮೇಶ್ ಕುಮಾರ್ – ವಿಡಿಯೋ ನೋಡಿ

    ವೇದಿಕೆ ಮೇಲೆ ಕಣ್ಣೀರು ಹಾಕಿದ ಸ್ಪೀಕರ್ ರಮೇಶ್ ಕುಮಾರ್ – ವಿಡಿಯೋ ನೋಡಿ

    ಕೋಲಾರ: ನಗರದಲ್ಲಿ ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ವೇಳೆ ವೇದಿಕೆ ಮೇಲೆಯೇ ಸ್ಪೀಕರ್ ರಮೇಶ್ ಕುಮಾರ್ ಕಣ್ಣೀರು ಹಾಕಿದ್ದಾರೆ.

    ಕೋಲಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಕುರುಬರ ಸಂಘದ ವತಿಯಿಂದ ನಗರದ ಜಿಲ್ಲಾಸ್ಪತ್ರೆ ವೃತ್ತದಲ್ಲಿ ಅದ್ಧೂರಿ ಕನಕ ಜಯಂತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ರಮೇಶ್ ಕುಮಾರ್ ಅವರು ಭಾವುಕರಾದರು. ಅಲ್ಲದೇ ಸಿದ್ದರಾಮಯ್ಯನವರ ಸೋಲು ನನ್ನ ಸಾವಿಗಿಂತ ಹೆಚ್ಚು ನೋವುಂಟು ಮಾಡಿದೆ ಎಂದು ಹೇಳಿ ಕಣ್ಣೀರು ಹಾಕಿದರು.

    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರಕ್ಕೆ ಬರುವಂತೆ ಮನವಿ ಮಾಡಿದ್ದೆ. ಆದರೆ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಸೋಲು ಅನುಭವಿಸಿದರು. ಸಿದ್ದರಾಮಯ್ಯ ಅವರು ಸೋತಿದ್ದು ತುಂಬಾ ದು:ಖವಾಯಿತು. ಒಬ್ಬ ಕುರಿಕಾಯೋ ಸಮಾಜದಲ್ಲಿ ಹುಟ್ಟಿ 13 ಬಾರಿ ಬಜೆಟ್ ಮಂಡಿಸಿದ ಧೀಮಂತ ನಾಯಕ ಸಿದ್ದರಾಮಯ್ಯ. ಅವರನ್ನ ಏಕವಚನದಲ್ಲಿ ಮಾತನಾಡಿಸುವವರಿಗೆ ತಕ್ಕ ಪಾಠ ಕಲಿಸಿ ಎಂದು ಹೇಳುವ ಮೂಲಕ ಕೋಲಾರದ ಮಾಜಿ ಶಾಸಕ ವರ್ತೂರು ಪ್ರಕಾಶ್ ಅವರಿಗೆ ರಮೇಶ್ ಕುಮಾರ್ ಟಾಂಗ್ ನೀಡಿದರು.

    ಸಮಾಜದಲ್ಲಿ ಎಲ್ಲಾ ವರ್ಗದವರ ಒಳಿತಿಗಾಗಿ ಸಿದ್ದರಾಮಯ್ಯ ಅವರು ಶ್ರಮಿಸಿದ್ದಾರೆ. ಅವರ ಆಡಳಿತದಲ್ಲಿ ಯಾರಿಗೂ ಅನ್ಯಾಯ ಮಾಡದೇ ಯಶಸ್ವಿಯಾಗಿ ಸರ್ಕಾರ ನಡೆಸಿದ್ದಾರೆ. ಇಂತಹ ಧೀಮಂತ ನಾಯಕನನ್ನು ಕೆಳಗೆ ಬೀಳಲು ಬಿಡಬಾರದು ಎಂದು ಮನವಿ ಮಾಡಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಂಗೆ ಕಹಿ ಘಟನೆ ಆಗಿಲ್ಲ, ಮೀಟೂ ಬಂದಿರೋದು ಬೇಜಾರಾಗಿದೆ- ನಟಿ ಶುಭಾ ಪುಂಜಾ

    ನಂಗೆ ಕಹಿ ಘಟನೆ ಆಗಿಲ್ಲ, ಮೀಟೂ ಬಂದಿರೋದು ಬೇಜಾರಾಗಿದೆ- ನಟಿ ಶುಭಾ ಪುಂಜಾ

    ಹುಬ್ಬಳ್ಳಿ: ಮೀಟೂ ಬಂದಿರೋದು ನನಗೂ ಒಂದು ಕಡೆ ಬೇಜಾರಾಗಿದೆ ಎಂದು ನಟಿ ಶುಭ ಪೂಂಜಾ ಬೇಸರ ವ್ಯಕ್ತಪಡಿಸಿದ್ದಾರೆ.

    ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟಿ ಶುಭಾ ಪುಂಜಾ ಮಾಧ್ಯಮಗಳೊಂದಿಗೆ ಮಾತನಾಡಿ, ಕನ್ನಡ ಚಿತ್ರರಂಗ ಹೆಣ್ಣು ಮಕ್ಕಳಿಗೆ ಬಹಳ ಗೌರವ ನೀಡುತ್ತೆ. ಈಗ ಮೀಟೂ ಬಂದಿರೋದು ನನಗೆ ಬೇಜಾರಾಗಿದೆ. ಮೀಟೂ ಬಗ್ಗೆ ಇರುವ ಆರೋಪ ಪ್ರತ್ಯಾರೋಪವನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಬಗೆಹರಿಸುತ್ತದೆ. ಕನ್ನಡ ಚಿತ್ರರಂಗದಲ್ಲಿ ನಾನು 10-12 ವರ್ಷಗಳಿಂದ ಇದ್ದೇನೆ. ನಿರ್ದೇಶಕರು, ನಿರ್ಮಾಪಕರು ಹಾಗೂ ಅಭಿಮಾನಿಗಳ ಪ್ರೀತಿ, ಗೌರವ ನನಗೆ ಸಿಕ್ಕಿದೆ. ಹೀಗಾಗಿ ಕನ್ನಡ ಇಂಡಸ್ಟ್ರಿಯಲ್ಲಿ ನನಗೆ ಯಾವುದೇ ಕಹಿ ಅನುಭವಗಳು ಆಗಿಲ್ಲ ಎಂದು ತಿಳಿಸಿದರು.

    ಎಲ್ಲಾ ರಂಗಗಳಲ್ಲೂ ಮೀಟೂ ಅಂತಹ ಕಹಿ ಅನುಭವದ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಕಹಿ ಅನುಭವಗಳಿಂದ ನೋವಾಗಿರುವವರು ಧ್ವನಿ ಎತ್ತುತ್ತಿದ್ದಾರೆ. ಸಿನಿ ರಂಗದಲ್ಲಿ ಈ ಪ್ರಕರಣಗಳನ್ನು ನೋಡಿಕೊಳ್ಳಲು ಹಿರಿಯರು ಇದ್ದಾರೆ. ಅವರು ಈ ಪ್ರಕರಣಗಳನ್ನು ಬಗೆಹರಿಸಿ ಅನ್ಯಾಯ ಆದವರಿಗೆ ನ್ಯಾಯ ಕೊಡಿಸ್ತಾರೆ ಎಂದು ಹೇಳಿದರು.

    ನಟಿ ಸಂಜನಾ ಕ್ಷಮೆ ಕೇಳಿದ ವಿಚಾರವಾಗಿ ಪ್ರತಿಕ್ರಿಯಿಸಿದ ಶುಭಾ, ಸಂಜನಾ ಕ್ಷಮೆ ಕೇಳಿರೋದು ಅವರ ವೈಯಕ್ತಿಕ ವಿಚಾರ, ಅದರ ಬಗ್ಗೆ ಅವರನ್ನೇ ಕೇಳಬೇಕು. ನಾನು ಬೇರೆಯವರ ವೈಯಕ್ತಿಕ ವಿಚಾರವನ್ನು ಮಾತನಾಡೋದು ತಪ್ಪಾಗುತ್ತದೆ. ಬೇರೆ ಅವರಿಗೆ ಚಿತ್ರರಂಗದಲ್ಲಿ ಕಹಿ ಅನುಭವಗಳು ಆಗಿರಬಹುದು ಅದು ನನಗೆ ಗೊತ್ತಿಲ್ಲ. ಆದ್ರೆ ನನಗೆ ಈ ರೀತಿಯ ಯಾವುದೇ ಅನುಭವ ಆಗಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಬ್ರಾಹ್ಮಣರನ್ನು ಹೀಯಾಳಿಸಿ ಕ್ಷಮೆ ಕೇಳಿದ ಶಾಸಕ ಆನಂದ್ ನ್ಯಾಮಗೌಡ

    ಬ್ರಾಹ್ಮಣರನ್ನು ಹೀಯಾಳಿಸಿ ಕ್ಷಮೆ ಕೇಳಿದ ಶಾಸಕ ಆನಂದ್ ನ್ಯಾಮಗೌಡ

    ಬಾಗಲಕೋಟೆ: ಜಮಖಂಡಿ ಕ್ಷೇತ್ರದ ನೂತನ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದ ಆನಂದ್ ನ್ಯಾಮಗೌಡ ಅವರು ಅಲ್ಪಸಂಖ್ಯಾತರನ್ನು ಒಲೈಸಲು ಹೋಗಿ ಬ್ರ್ರಾಹ್ಮಣರನ್ನು ಹೀಯಾಳಿಸಿ ಬಳಿಕ ಕ್ಷಮೆಯಾಚಿಸಿದ ಘಟನೆ ಇಂದು ನಡೆದಿದೆ.

    ಜಮಖಂಡಿಯಲ್ಲಿ ಇಂದು ನಡೆದ ಅಲ್ಪಸಂಖ್ಯಾತ ಸಮುದಾಯದ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಆನಂದ್ ನ್ಯಾಮಗೌಡ, 1990 ರಲ್ಲಿ ನಮ್ಮ ತಂದೆ ಸಿದ್ದು ನ್ಯಾಮಗೌಡ ಬ್ರಾಹ್ಮಣ ಸಮುದಾಯದ ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿ ದೇಶಕ್ಕೆ ಚಿರಪರಿಚಿತರಾಗಿದ್ರು. ಸದ್ಯ ನಾನು ಬ್ರಾಹ್ಮಣ ವ್ಯಕ್ತಿಯನ್ನು ಸೋಲಿಸಿ ಶಾಸಕನಾಗಿದ್ದೇನೆ. ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಅವರನ್ನು ಸೋಲಿಸಿ ಇಂದು ಅಧಿಕಾರದಲ್ಲಿದ್ದೇನೆ ಎಂದು ವ್ಯಂಗ್ಯವಾಡಿದ್ದರು.

    ಆನಂದ್ ನ್ಯಾಮಗೌಡರ ಹೇಳಿಕೆಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬ್ರಾಹ್ಮಣ ಸಮಾಜದವರಿಂದ ಆನಂದ್ ನ್ಯಾಮಗೌಡರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿತ್ತು. ಈ ವಿಡಿಯೋ ಪಬ್ಲಿಕ್ ಟಿವಿಗೆ ಲಭಿಸಿದ್ದು, ಪ್ರಸಾರವಾದ ಬೆನ್ನಲ್ಲೇ ಶಾಸಕರು ಕ್ಷಮೆ ಕೋರಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕರು, `ಬ್ರಾಹ್ಮಣ ಸಮುದಾಯವನ್ನು ಹೀಯಾಳಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನನಗಿಂತ ಮೊದಲು ಭಾಷಣ ಮಾಡಿದವರು ಹೇಳಿದ ಮಾತನ್ನು ನಾನು ಮತ್ತೊಮ್ಮೆ ಹೇಳಿದ್ದೆ ಅಷ್ಟೆ. ಬ್ರಾಹ್ಮಣರನ್ನ ಸೋಲಿಸೋದು ನನ್ನ ಉದ್ದೇಶವಲ್ಲ ಚುನಾವಣೆ ಗೆಲ್ಲೋದು ನನಗೆ ಮುಖ್ಯವಾಗಿತ್ತು ಎಂದು ಸ್ಪಷ್ಟ ಪಡೆಸಲು ಆ ಮಾತು ಹೇಳಿದ್ದೆ. ಎಲ್ಲ ಸಮುದಾಯವನ್ನು ನಾವು ಸಮನಾಗಿ ನೋಡುತ್ತೇವೆ. ನನ್ನ ಹೇಳಿಕೆಯಿಂದ ಬ್ರಾಹ್ಮಣ ಸಮಾಜದವರಿಗೆ ನೋವಾಗಿದ್ದರೆ ಕ್ಷಮೆ ಕೇಳಲು ನಾನು ಸಿದ್ಧ ಎಂದು ಆನಂದ್ ನ್ಯಾಮಗೌಡ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಮದ್ವೆ ಸಮಾರಂಭಕ್ಕೆ ತಂದಿದ್ದ ಮಿನರಲ್ ವಾಟರ್ ಬಾಟಲಿಯಲ್ಲಿ ಕಸಕಡ್ಡಿ, ಹುಳು

    ಮದ್ವೆ ಸಮಾರಂಭಕ್ಕೆ ತಂದಿದ್ದ ಮಿನರಲ್ ವಾಟರ್ ಬಾಟಲಿಯಲ್ಲಿ ಕಸಕಡ್ಡಿ, ಹುಳು

    ತುಮಕೂರು: ಮದುವೆ ಸಮಾರಂಭಕ್ಕೆ ತಂದಿದ್ದ ಮಿನರಲ್ ವಾಟರ್ ಬಾಟಲಿಯಲ್ಲಿ ಕಸಕಡ್ಡಿ, ಹುಳು ಕಂಡು ಬಂದಿದ್ದರಿಂದ ಮದುವೆ ಬಂದ ಅತಿಥಿಗಳು ಹೌಹಾರಿದ ಘಟನೆ ನಡೆದಿದೆ.

    ತುಮಕೂರು ನಗರದ ತಿರುಮಲ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ನಡೆಯುತಿತ್ತು. ಇಲ್ಲಿ ಬ್ಲೂ ಬ್ರೀಜ್ ಹೆಸರಿನ ನೀರಿನ ಬಾಟಲನ್ನು ತರಿಸಲಾಗಿತ್ತು. ಅದರಲ್ಲಿ 7 ಬಾಕ್ಸನಲ್ಲಿರುವ ಬಾಟಲ್ ಗಳಲ್ಲಿ ಕಸಕಡ್ಡಿಗಳು ಕಂಡು ಬಂದಿದೆ.

    ನೂರಾರು ಅಥಿತಿಗಳು ಅರಿವಿಗೆ ಬಾರದೇ ಈ ನೀರನ್ನು ಕುಡಿದಿದ್ದು ಕಾಯಿಲೆ ಬರುವ ಆತಂಕದಲ್ಲಿದ್ದಾರೆ. ಶೈಲಾ ಇಂಡಸ್ಟ್ರೀಸ್ ಗೆ ಸೇರಿದ ನೀರಿನ ಬಾಟಲ್ ಇದಾಗಿದ್ದು ತುಮಕೂರಿನ ರಂಗಾಪುರ ಕೈಗಾರಿಕಾ ಪ್ರದೇಶದಲ್ಲಿ ತಯಾರು ಮಾಡಲಾಗುತ್ತಿದೆ. ತಯಾರಿಕಾ ಘಟಕದಲ್ಲಿ ಮುಂಜಾಗೃತೆ ವಹಿಸದೇ ಜನರ ಆರೋಗ್ಯದ ಜೊತೆ ಚೆಲ್ಲಾಟ ಆಡುತ್ತಿರುವ ಕಂಪೆನಿ ವಿರುದ್ಧ ದೂರು ನೀಡಲು ಗ್ರಾಹಕರು ಮುಂದಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಿರಣ್ ಬೇಡಿ ಭಾಷಾಂತರ ಪರೀಕ್ಷೆಯಲ್ಲಿ ಪುದುಚೇರಿ ಸಿಎಂ ಪಾಸ್- ವಿಡಿಯೋ ನೋಡಿ

    ಕಿರಣ್ ಬೇಡಿ ಭಾಷಾಂತರ ಪರೀಕ್ಷೆಯಲ್ಲಿ ಪುದುಚೇರಿ ಸಿಎಂ ಪಾಸ್- ವಿಡಿಯೋ ನೋಡಿ

    ಪುದುಚೆರಿ: ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ ಅವರು ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರ ಭಾಷಣವನ್ನು ಭಾಷಾಂತರಿಸುವ ಮೂಲಕ ಈಗ ಸುದ್ದಿಯಾಗಿದ್ದಾರೆ.

    ಕಿರಣ್ ಬೇಡಿ ಮತ್ತು ಪುದುಚೇರಿ ಸಿಎಂ ಸ್ವಾಮಿ ತಮ್ಮಿಬ್ಬರ ನಡುವಿನ ಕಚ್ಚಾಟದಿಂದ ಹಿಂದೆ ಸುದ್ದಿಯಾಗಿದ್ದರು. ಆದರೆ ಇವರಿಬ್ಬರು ಪರಸ್ಪರ ಕಾಲೆಳೆದುಕೊಂಡು ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರಿಗೆ ಮನರಂಜನೆ ನೀಡಿದ್ದಾರೆ.

    53ನೇ ಸಾಹಿತ್ಯ ಹಬ್ಬ ‘ಕಂಬನ್ ವಿಳಾ’ದ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಿರಣ್ ಬೇಡಿ ಭಾಗವಹಿಸಿದ್ದರು. ತಮ್ಮ ಭಾಷಣದ ವೇಳೆ, ಇಲ್ಲಿ ಎಷ್ಟು ಜನರಿಗೆ ಇಂಗ್ಲಿಷ್ ಬರುತ್ತದೆ ಎಂದು ಪ್ರಶ್ನಿಸಿದರು. ಈ ವೇಳೆ ಕೆಲವರು ಮಾತ್ರ ಕೈ ಎತ್ತಿದರು. ಆಗ ಶಿಕ್ಷಣ ಸಚಿವ ಕಮಲಾಕಣ್ಣನ್ ಮುಂದೆ ಬಂದು ತಮಿಳಿಗೆ ನಾನು ಭಾಷಾಂತರ ಮಾಡುವುದಾಗಿ ತಿಳಿಸಿದರು.

    ಸಚಿವರ ಮಾತಿಗೆ ಕಿರಣ್ ಬೇಡಿ, ನನ್ನ ಇಂಗ್ಲಿಷ್ ಭಾಷಣವನ್ನು ಮುಖ್ಯಮಂತ್ರಿಗಳು ಅನುವಾದ ಮಾಡಬೇಕು. ಇದು ನನ್ನ ಆಸೆ ಎಂದು ಹೇಳಿದರು. ಬೇಡಿ ಮಾತು ಕೇಳಿ ವೇದಿಕೆಯಲ್ಲಿ ಕುಳಿತುಕೊಂಡಿದ್ದ ಸ್ವಾಮಿ ಅವರು ಮುಂಭಾಗಕ್ಕೆ ಆಗಮಿಸಿ, ಜನ ಬಯಸಿದ್ದಾರೆ. ನಾನು ಭಾಷಾಂತರ ಮಾಡುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ, ನಾನು ಏನು ಭಾಷಣ ಮಾಡುತ್ತೇನೋ ಅದನ್ನು ಮಾತ್ರ ಹೇಳಬೇಕು ಎಂದು ಬೇಡಿ ಷರತ್ತು ವಿಧಿಸಿದರು.

    ಈ ಷರತ್ತಿಗೆ ಸಿಎಂ, ಹಾಗೆಲ್ಲ ಖಾತ್ರಿ ಕೊಡಲು ಸಾಧ್ಯವಿಲ್ಲ ಎಂದು ಚಟಾಕಿ ಹಾರಿಸಿದಾಗ ಬೇಡಿ, ನಾನು ನಿಮ್ಮನ್ನು 10 ನಿಮಿಷಗಳ ಕಾಲ ನಂಬುತ್ತೇನೆ. ಇದೊಂದು ತಾತ್ಕಾಲಿಕ ಸ್ನೇಹ ಎಂದು ಹೇಳಿದರು. ಇದಕ್ಕೆ ನಾರಾಯಣ ಸ್ವಾಮಿ ನಾನು ಸ್ನೇಹ ಶಾಶ್ವತವಾಗಿರಲಿ ಎಂದು ಹೇಳಿ ಭಾಷಾಂತರಕ್ಕೆ ಸಿದ್ಧರಾದರು.

    ತನ್ನ ಎಲ್ಲ ಮಾತುಗಳನ್ನು ನಾರಾಯಣ ಸ್ವಾಮಿ ಸಮರ್ಥವಾಗಿ ಭಾಷಾಂತರಿಸಿದ್ದು ಬೇಡಿ ಅವರಿಗೆ ಖುಷಿ ನೀಡಿತು. ನಂತರ, ಸ್ವಾಮಿ ಅವರಿಗೆ ತಮಿಳು, ಇಂಗ್ಲಿಷ್ ಅಲ್ಲದೇ ಹಿಂದಿ ಮತ್ತು ಫ್ರೆಂಚ್ ಭಾಷೆಯೂ ಬರುತ್ತದೆ. ನನ್ನ ಭಾಷಣವನ್ನು ಅನುವಾದ ಮಾಡಲು ಬಂದಿದ್ದು ನನಗೆ ಬಹಳ ಸಂತಸ ನೀಡಿದೆ ಎಂದು ಶ್ಲಾಘಿಸಿದರು.

    ಕಾರ್ಯಕ್ರಮ ಮುಗಿದ ಬಳಿಕ ಪ್ರತಕರ್ತರು ಸಿಎಂ ಮತ್ತು ನಿಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಬಿಟ್ಟಿದ್ದೀರಾ ಎಂದು ಕೇಳಿದ್ದಕ್ಕೆ, ಪುದುಚೇರಿ ಅಭಿವೃದ್ಧಿಯ ಕಾಳಜಿಯನ್ನು ನಾನು ಹೊಂದಿದ್ದೇನೆ. ನಾನು ಒಂದು ಉದ್ದೇಶಕ್ಕಾಗಿ ಇಲ್ಲಿಗೆ ಆಗಮಿಸಿದ್ದು, ಅದು ಬಿಟ್ಟು ಬೇರೇನೂ ಇಲ್ಲ ಎಂದು ಉತ್ತರಿಸಿ ತೆರಳಿದರು.

    ಬುಧವಾರ ನೈತಿಕ ಹೊಣೆಯನ್ನು ಹೊತ್ತು ಕಿರಣ್ ಬೇಡಿ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಸಿಎಂ ನಾರಾಯಣ ಸ್ವಾಮಿ ಆಗ್ರಹಿಸಿದ್ದರು.

  • ಮದ್ವೆ ಬಳಿಕ ಹನಿಮೂನ್ ಯಾವಾಗ: ಅಭಿಮಾನಿಗಳ ಪ್ರಶ್ನೆಗೆ ಮೇಘನಾ ಉತ್ತರಿಸಿದ್ದು ಹೀಗೆ!

    ಮದ್ವೆ ಬಳಿಕ ಹನಿಮೂನ್ ಯಾವಾಗ: ಅಭಿಮಾನಿಗಳ ಪ್ರಶ್ನೆಗೆ ಮೇಘನಾ ಉತ್ತರಿಸಿದ್ದು ಹೀಗೆ!

    ಬೆಂಗಳೂರು: ಸ್ಯಾಂಡಲ್‍ವುಡ್ ಮತ್ತೊಂದು ಮದುವೆ ಸಂಭ್ರಮಕ್ಕೆ ಸಜ್ಜಾಗುತ್ತಿದ್ದು, ಮೇ 2 ರಂದು ನಟಿ ಮೇಘನಾ ರಾಜ್ ನಟ ಚಿರಂಜೀವಿ ಸರ್ಜಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

    ಸೆಲೆಬ್ರಿಟಿಗಳು ಮದುವೆಯಾಗುತ್ತಿರುವ ಬೆನ್ನಲ್ಲೆ ಹನಿಮೂನ್ ಗೆ ಹೋಗುವುದು ಸಾಮಾನ್ಯ. ಹೀಗಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಈ ತಾರಾ ಜೋಡಿಗಳು ಹನಿಮೂನ್‍ಗಾಗಿ ಯಾವ ಕಡೆ ಹೋಗುತ್ತಾರೆ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಹುಟ್ಟದೇ ಇರಲಾರದು. ಆದರೆ ಮೇಘನಾ ಮತ್ತು ಚಿರು ಮದುವೆಯಾದ ತಕ್ಷಣವೇ ಹನಿಮೂನಿಗೆ ಹೋಗುತ್ತಿಲ್ಲ.

    ಮದುವೆಯ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಮೇಘನಾ ರಾಜ್ ಅವರಿಗೆ ಹನಿಮೂನ್ ಗಾಗಿ ಯಾವ ದೇಶಕ್ಕೆ ಹೋಗುತ್ತಿರಿ ಎಂದು ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಗೆ ಮೇಘನಾ, ನಾವು ಮದುವೆಯಾದ ಮೇಲೆ ಎಲ್ಲೂ ಹನಿಮೂನ್‍ಗೆ ಹೋಗುತ್ತಿಲ್ಲ. ಚಿರುಗೆ ‘ರಾಜಮಾರ್ತಾಂಡ’ ಚಿತ್ರದ ಶೂಟಿಂಗ್ ಇದ್ದು, ಚಿತ್ರೀಕರಣ ಮುಗಿದು ಒಂದು ತಿಂಗಳ ನಂತರ ಹನಿಮೂನ್‍ಗೆ ಹೋಗುವ ಪ್ಲಾನ್ ನಿರ್ಧಾರವಾಗಲಿದೆ ಎಂದು ಉತ್ತರಿಸಿದ್ದಾರೆ.

    ಚಿರು ಹಾಗೂ ಮೇಘನಾ ಮದುವೆ ಅರಮನೆ ಮೈದಾನದ ವೈಟ್ ಪೆಟಲ್ಸ್ ಹಾಲ್‍ನಲ್ಲಿ ನಡೆಯಲಿದ್ದು, ಮದುವೆ ಸಂಭ್ರಮಕ್ಕೆ ಸ್ಯಾಂಡಲ್‍ವುಡ್‍ನ ಗಣ್ಯಾತಿಗಣ್ಯರು ಸಾಕ್ಷಿಯಾಗಲಿದ್ದಾರೆ. ನಾಳೆಯಿಂದ ಚಪ್ಪರ ಶಾಸ್ತ್ರ, ಅರಿಶಿಣ ಶಾಸ್ತ್ರ ಶುರುವಾಗಲಿದೆ. ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆ ನಡೆಯಲಿದ್ದು, ಇದೇ ತಿಂಗಳು 29ಕ್ಕೆ ಕೋರಮಂಗಲದ ಚರ್ಚ್‍ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ವಿವಾಹ ನಡೆಯಲಿದೆ.

    ಮೇ 2ರ ಬೆಳಗ್ಗೆ 10.30ರಿಂದ 11 ಗಂಟೆಗೆ ಮದುವೆ ಮುಹೂರ್ತವಿದ್ದು, ಸಂಜೆ 7 ಗಂಟೆಗೆ ಆರತಕ್ಷತೆ ನಡೆಯಲಿದೆ. ಮೊದಲು ಎಂದರೆ ನಾಳೆ ಚಪ್ಪರ ಪೂಜೆ ನಡೆಯಲಿದೆ. ನಂತರ ಹಳದಿ ಶಾಸ್ತ್ರ, ಬಳೆ ಶಾಸ್ತ್ರ ನಡೆಯಲಿದೆ. ಹಳದಿ ಶಾಸ್ತ್ರಕ್ಕೆ ಇಂಡೋ ವೆಸ್ಟ್ರನ್ ಲುಕ್, ಮೆಹೆಂದಿಗೆ ನಾರ್ಥ್ ಇಂಡಿಯನ್ ಲುಕ್‍ನಲ್ಲಿ ಮೇಘನಾ ರಾಜ್ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಮದುವೆಯ ಎಲ್ಲ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಮೇಘನಾ ರಾಜ್

    ಸ್ಯಾಂಡಲ್‍ವುಡ್‍ನಲ್ಲಿ ಮೊದಲ ಬಾರಿಗೆ ರೋಮನ್ ಕ್ಯಾಥೋಲಿಕ್ ಸಂಪ್ರದಾಯದಂತೆ ಮದುವೆ ಬೆಂಗಳೂರಿನ ಸೇಂಟ್ ಆಂಟೋನಿಸ್ ಚರ್ಚ್‍ನಲ್ಲಿ ನಡೆಯಲಿದೆ. ಇದಾದ ಬಳಿಕ ಮೆಹಂದಿ ಶಾಸ್ತ್ರ ಮನೆಯಲೇ ನಡೆಯಲಿದೆ. ಇದೆಲ್ಲಾ ಮುಗಿದ ಮೇಲೆ ಮುಹೂರ್ತ ಹಾಗೂ ಆರತಕ್ಷತೆ ನಡೆಯಲಿದೆ.

    ಕನ್ನಡ, ತಮಿಳು, ತೆಲುಗು, ಮಲೆಯಾಳಂ ಚಿತ್ರರಂಗದ ಖ್ಯಾತ ಕಲಾವಿದರನ್ನು ಮದುವೆಗೆ ಆಹ್ವಾನಿಸಲಾಗಿದೆ.

  • ಮದುವೆಯ ಎಲ್ಲ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಮೇಘನಾ ರಾಜ್

    ಮದುವೆಯ ಎಲ್ಲ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಮೇಘನಾ ರಾಜ್

    ಬೆಂಗಳೂರು: ಸ್ಯಾಂಡಲ್‍ವುಡ್ ಮತ್ತೊಂದು ಮದುವೆ ಸಂಭ್ರಮಕ್ಕೆ ಸಜ್ಜಾಗುತ್ತಿದೆ. ಮೇ2 ರಂದು ನಟಿ ಮೇಘನಾ ರಾಜ್ ನಟ ಚಿರಂಜೀವಿ ಸರ್ಜಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

    ಅರಮನೆ ಮೈದಾನದ ವೈಟ್ ಪೆಟಲ್ಸ್ ಹಾಲ್‍ನಲ್ಲಿ ನಡೆಯುವ ಮದುವೆ ಸಂಭ್ರಮಕ್ಕೆ ಸ್ಯಾಂಡಲ್‍ವುಡ್‍ನ ಗಣ್ಯಾತಿಗಣ್ಯರು ಸಾಕ್ಷಿಯಾಗಲಿದ್ದಾರೆ. ನಾಳೆಯಿಂದ ಚಪ್ಪರ ಶಾಸ್ತ್ರ, ಅರಿಶಿಣ ಶಾಸ್ತ್ರ ಶುರುವಾಗಲಿದೆ. ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆ ನಡೆಯಲಿದ್ದು, ಇದೇ ತಿಂಗಳು 29ಕ್ಕೆ ಕೋರಮಂಗಲದ ಚರ್ಚ್‍ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ವಿವಾಹ ನಡೆಯಲಿದೆ.

    ಮೇ 2ರ ಬೆಳಗ್ಗೆ 10.30ರಿಂದ 11 ಗಂಟೆಗೆ ಮದುವೆ ಮುಹೂರ್ತವಿದ್ದು, ಸಂಜೆ 7 ಗಂಟೆಗೆ ಆರತಕ್ಷತೆ ನಡೆಯಲಿದೆ. ನಾಳೆಯಿಂದ ಎಲ್ಲ ಕಾರ್ಯಕ್ರಮಗಳು ಶುರುವಾಗುತ್ತಿದ್ದು, ನಾಳೆಯಿಂದ ನಾನು ಮನೆಯಲ್ಲೇ ಬಂಧಿ ಆಗಿರುತ್ತೇನೆ. ನಿಮ್ಮ ಪ್ರಶ್ನೆಗಳಿಗೆ ನಾನು ಉತ್ತರಿಸಲು ಆಗುವುದಿಲ್ಲ. ಫೋನಿನಲ್ಲೂ ಮಾತನಾಡುವುದ್ದಕ್ಕೆ ಸಾಧ್ಯವಾಗುವುದ್ದಿಲ್ಲ. ಹಾಗಾಗಿ ಇಂದೇ ಎಲ್ಲ ಕಾರ್ಯಕ್ರಮಗಳ ಬಗ್ಗೆ ತಿಳಿಸುತ್ತಿದ್ದೇನೆ ಎಂದು ಮೇಘನಾ ಮಾಧ್ಯಮಗಳಿಗೆ ತಿಳಿಸಿದರು.

    ಮೊದಲು ಎಂದರೆ ನಾಳೆ ಚಪ್ಪರ ಪೂಜೆ ನಡೆಯಲಿದೆ. ನಂತರ ಹಳದಿ ಶಾಸ್ತ್ರ, ಬಳೆ ಶಾಸ್ತ್ರ ನಡೆಯಲಿದೆ. ಹಳದಿ ಶಾಸ್ತ್ರಕ್ಕೆ ಇಂಡೋ ವೆಸ್ಟ್ರನ್ ಲುಕ್, ಮೆಹೆಂದಿಗೆ ನಾರ್ಥ್ ಇಂಡಿಯನ್ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತೇನೆ. ಸ್ಯಾಂಡಲ್‍ವುಡ್‍ನಲ್ಲಿ ಮೊದಲ ಬಾರಿಗೆ ರೋಮನ್ ಕ್ಯಾಥೋಲಿಕ್ ಸಂಪ್ರದಾಯದಂತೆ ನಮ್ಮ ಮದುವೆ ಬೆಂಗಳೂರಿನ ಸೇಂಟ್ ಆಂಟೋನಿಸ್ ಚರ್ಚ್‍ನಲ್ಲಿ ನಡೆಯಲಿದೆ. ಇದಾದ ಬಳಿಕ ಮೆಹಂದಿ ಶಾಸ್ತ್ರ ಮನೆಯಲೇ ನಡೆಯಲಿದೆ. ಇದೆಲ್ಲಾ ಮುಗಿದ ಮೇಲೆ ಮುಹೂರ್ತ ಹಾಗೂ ಆರತಕ್ಷತೆ ನಡೆಯಲಿದೆ.

    ಒಂದು ವಾರದಿಂದ ಕಾರ್ಯಕ್ರಮಗಳೆಲ್ಲ ನಡೆಯಲಿದ್ದು, ಕೆಲವು ಕಾರ್ಯಕ್ರಮ ಪ್ರೈವೆಟ್ ಆಗಿ ನಡೆಯಲಿದೆ. ಚರ್ಚ್‍ಯೊಳಗೆ ನಡೆಯುವ ಎಲ್ಲಾ ಕಾರ್ಯಕ್ರಮಗಳು ಪ್ರೈವೆಟ್ ಆಗಿ ನಡೆಯಲಿದೆ. ಹೀಗೆ ಒಂದರ ಮೇಲೊಂದು ಕಾರ್ಯಕ್ರಮಗಳು ನಡೆಯಲಿವೆ. ಮೇ 2ರಂದು ಮಾಧ್ಯಮದವರಿಗೆ ಚಿತ್ರೀಕರಿಸಲು ಅವಕಾಶವಿದ್ದು, ಚರ್ಚ್‍ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಅವಕಾಶವಿರುವುದಿಲ್ಲ. ಏಕೆಂದರೆ ಅಲ್ಲಿ ಮಾಧ್ಯಮದವರಿಗೆ ಪ್ರವೇಶವಿರುವುದ್ದಿಲ್ಲ. ನಾವೇ ನಮ್ಮ ಮದುವೆಯ ಫೂಟೇಜ್ ಕೋಡುತ್ತೇವೆ ಎಂದು ತಿಳಿಸಿದರು.

    ಏ. 26ರಂದು ಕೋರಮಂಗಲದಲ್ಲಿರುವ ಸೆಂಟ್ ಆಂಟೋನಿಸ್ ಚರ್ಚ್‍ನಲ್ಲಿ 3-4 ಗಂಟೆ ಕಾರ್ಯಕ್ರಮ ನಡೆಯಲಿದೆ. ನಾನು ಹಿಂದೂ ಆಗಿದ್ದು, ನನ್ನ ಪತ್ನಿ ಪ್ರಮೀಳಾ ಜೋಷಾಯ್ ಕ್ರಿಶ್ಚಿಯನ್ ಆಗಿದ್ದಕ್ಕೆ ಈ ಮದುವೆ ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆಯಲಿದೆ ಎಂದು ಹಿರಿಯ ನಟ ಸುಂದರ್ ರಾಜ್ ತಿಳಿಸಿದ್ದಾರೆ.

    ಕನ್ನಡ, ತಮಿಳು, ತೆಲುಗು, ಮಲೆಯಾಳಂ ಚಿತ್ರ ರಂಗದ ಖ್ಯಾತ ಕಲಾವಿದರನ್ನು ಮದುವೆಗೆ ಆಹ್ವಾನಿಸಲಾಗಿದೆ.