Tag: Full

  • ಮತ್ತೊಮ್ಮೆ ಬಸವಸಾಗರ ಡ್ಯಾಂ ಭರ್ತಿ- ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು

    ಮತ್ತೊಮ್ಮೆ ಬಸವಸಾಗರ ಡ್ಯಾಂ ಭರ್ತಿ- ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು

    ಯಾದಗಿರಿ: ಮತ್ತೊಮ್ಮೆ ಬಸವಸಾಗರ ಡ್ಯಾಂ ಸಂಪೂರ್ಣ ಭರ್ತಿಯಾದ ಹಿನ್ನೆಲೆ ಡ್ಯಾಂನಿಂದ ಕೃಷ್ಣಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ.

    ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಸಮೀಪದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 10 ಕ್ರಸ್ಟ್ ಗೇಟ್‍ಗಳ ಮೂಲಕ 1.1 ಲಕ್ಷ ಕ್ಯೂಸೆಕ್ ನಷ್ಟು ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಕೃಷ್ಣಾ ನದಿ ತೀರದಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಇದನ್ನೂ ಓದಿ: ಎರಡೂವರೆ ತಿಂಗಳಿಂದ ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ- ಆರೋಪಿ ಬಂಧನ

    ಸದ್ಯದ ಡ್ಯಾಂಗೆ 85 ಸಾವಿರ ಕ್ಯೂಸೆಕ್ ನೀರು ಇದೆ. 492.25 ಮೀ. ಎತ್ತರದ ಜಲಾಶಯದಲ್ಲಿ ಸದ್ಯ 492.01 ಮೀಟರ್ ಅಂದರೆ 31 ಟಿಎಂಸಿ ಸದ್ಯ ನೀರು ಸಂಗ್ರಹವಾಗಿದೆ. ಹೀಗಾಗಿ ನೀರನ್ನು ಹೊರಬಿಡಲಾಗಿದೆ. ನದಿ ಪಾತ್ರದ ಜನರಲ್ಲಿ ಇದೀಗ ಮತ್ತೆ ಭಯ ಶುರುವಾಗಿದೆ.

  • ಕೊಪ್ಪಳದಲ್ಲಿ ಮಕ್ಕಳ ಆಸ್ಪತ್ರೆಗಳು ಬಹುತೇಕ ಫುಲ್

    ಕೊಪ್ಪಳದಲ್ಲಿ ಮಕ್ಕಳ ಆಸ್ಪತ್ರೆಗಳು ಬಹುತೇಕ ಫುಲ್

    ಕೊಪ್ಪಳ: ಕೊರೊನಾ ಮೂರನೇ ಅಲೆ ಮಕ್ಕಳಿಗೆ ಬಾಧಿಸಲಿದೆ ಎಂದು ಹೇಳಲಾಗುತ್ತಿದೆ. ಆದರೆ ಮೂರನೇ ಅಲೆಗೂ ಮುನ್ನವೇ ಜಿಲ್ಲೆಯಲ್ಲಿ ಮಕ್ಕಳ ಆಸ್ಪತ್ರೆಗಳು ಬಹುತೇಕ ಫುಲ್ ಆಗಿವೆ. ಈಗಾಗಲೇ ಬಹುತೇಕ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ ಎಂಬ ಬೋರ್ಡ್ ನೇತಾಡುತ್ತಿವೆ. ವೈರಲ್ ನ್ಯುಮೊನಿಯಾ ಕಾಯಿಲೆಯಿಂದ ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

    ಜಿಲ್ಲಾಸ್ಪತ್ರೆಯಲ್ಲಿನ ಮಕ್ಕಳ ವಾರ್ಡ್, ಎನ್‍ಆರ್ ಸಿ ವಾರ್ಡ್ ಹಾಗೂ ನವಜಾತ ಶಿಶುಗಳ ವಾರ್ಡಿನಲ್ಲಿ ಬಹುತೇಕ ಫುಲ್ ಆಗಿವೆ. ಮಕ್ಕಳ ವಾರ್ಡಿನಲ್ಲಿ 32, ಎನ್ ಆರ್ ಸಿ 6 ಹಾಗೂ ನವಜಾತ ಶಿಶುಗಳ ವಾರ್ಡಿನಲ್ಲಿ 27 ಮಕ್ಕಳು ದಾಖಲಾಗಿದ್ದಾರೆ. ಇದನ್ನೂ ಓದಿ: ಸರ್ಕಾರದಿಂದ ಆದೇಶ ಹೊರಡಿಸಿ ಪುಣ್ಯ ಕಟ್ಟಿಕೊಳ್ಳಿ- ಮಾಜಿ ಸ್ಪೀಕರ್ ವಿರುದ್ಧ ಪೊಲೀಸರ ಆಕ್ರೋಶ

    ಕೊಪ್ಪಳ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿಯೂ ನೋ ಬೆಡ್ ಎಂಬ ಬೋರ್ಡ್ ನೇತಾಡುತ್ತಿವೆ. ಮಕ್ಕಳು ನೆಗಡಿ, ಕೆಮ್ಮು, ಜ್ವರದಿಂದ ಬಳಲಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಸಮಾಧಾನಕರ ಸಂಗತಿ ಎಂದರೆ ಕೊವಿಡ್ ಟೆಸ್ಟ್ ಮಾಡಿಸಿದಾಗ ಮಕ್ಕಳಲ್ಲಿ ಪಾಸಿಟಿವ್ ಬಂದಿಲ್ಲ. ವೈರಲ್ ನ್ಯುಮೊನಿಯಾಕ್ಕೆ ತುತ್ತಾಗಿ ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

    ಮಕ್ಕಳಲ್ಲಿ ವಿಪರೀತ ಜ್ವರ ಕಾಣಿಸಿಕೊಳ್ಳುತ್ತಿದೆ. ಒಂದು ವಾರ ಆಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳಲ್ಲಿ ವೈರಲ್ ನ್ಯುಮೋನಿಯಾ ಕಾಣಿಸಿಕೊಳ್ಳಲು ಮುಖ್ಯ ಕಾರಣ ಈ ವರ್ಷ ಅಧಿಕ ಮಳೆಯಾಗಿರುವುದು. ಮಳೆಯಿಂದಾಗಿ ಮಕ್ಕಳಲ್ಲಿ ಶೀತ ಕಾಣಿಸಿಕೊಳ್ಳುತ್ತಿದೆ, ಲಾಕ್‍ಡೌನ್ ನಂತರ ಮಕ್ಕಳು ಹೊರಗಡೆ ಮಣ್ಣಿನಲ್ಲಿ ಆಟವಾಡುತ್ತಿದ್ದಾರೆ. ಬೀದಿ ಬದಿಯ ತಿಂಡಿಯನ್ನು ಸೇವಿಸುತ್ತಿದ್ದಾರೆ. ಇದರಿಂದಾಗಿ ವೈರಲ್ ನ್ಯೂಮೋನಿಯಾ ಕಾಣಿಸಿಕೊಳ್ಳುತ್ತಿದೆ ಎನ್ನುತ್ತಾರೆ ವೈದ್ಯರು.

    ವೈರಲ್ ನ್ಯೂಮೋನಿಯಾದಿಂದ ದೂರವಿರಲು ಮಕ್ಕಳು ಸಾಧ್ಯವಾದಷ್ಟು ಮನೆಯಲ್ಲೇ ಬೆಚ್ಚಗಿರುವಂತೆ, ಹೊರಗಡೆ ಮಣ್ಣಿನಲ್ಲಿ ಆಟವಾಡದಂತೆ ಹಾಗೂ ಹೊರಗಡೆ ತಿಂಡಿಗಳನ್ನು ತಿನ್ನದಂತೆ ನೋಡಿಕೊಳ್ಳಬೇಕು, ಭಯ ಪಡುವ ಅವಶ್ಯಕತೆ ಇಲ್ಲ ಎಂದು ಮಕ್ಕಳ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

  • ನಾಲ್ಕನೇ ಬಾರಿ ಭರ್ತಿಯಾದ ಶಿವಮೊಗ್ಗದ ಮಾಣಿ ಜಲಾಶಯ

    ನಾಲ್ಕನೇ ಬಾರಿ ಭರ್ತಿಯಾದ ಶಿವಮೊಗ್ಗದ ಮಾಣಿ ಜಲಾಶಯ

    ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನಲ್ಲಿರುವ ಮಾಣಿ ಡ್ಯಾಂ ನಾಲ್ಕನೇ ಬಾರಿ ಭರ್ತಿಯಾಗಿದೆ. ಡ್ಯಾಂನ ಮೂರು ಗೇಟ್ ತೆರೆದು 1,000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

    ವರಾಹಿ ನದಿಗೆ 1988ರಲ್ಲಿ ನಿರ್ಮಾಣವಾದ ಈ ಡ್ಯಾಂ ಇದಕ್ಕೂ ಮುಂಚೆ 1994, 2006 ಹಾಗೂ 2007ರಲ್ಲಿ ಭರ್ತಿಯಾಗಿತ್ತು. ಇದೀಗ ಹನ್ನೆರಡು ವರ್ಷಗಳ ನಂತರ ಮತ್ತೊಮ್ಮೆ ಭರ್ತಿಯಾಗಿದೆ. ಕೆಪಿಸಿ ಅಸ್ತಿತ್ವಕ್ಕೆ ಬಂದ ಮೇಲೆ ನಿರ್ಮಾಣಗೊಂಡ ಮೊದಲ ಅಣೆಕಟ್ಟು ಇದಾಗಿದ್ದು, 31 ಟಿಎಂಸಿ ಸಾಮರ್ಥ್ಯದ ಈ ಅಣೆಕಟ್ಟು ವಿಶಿಷ್ಟ ವಿನ್ಯಾಸದಿಂದ ಗಮನ ಸೆಳೆಯುತ್ತಿದೆ.

    ಇಲ್ಲಿರುವ ಹನ್ನೊಂದು ಗುಡ್ಡಗಳಿಗೆ ಅಡ್ಡಕಟ್ಟೆ ನಿರ್ಮಿಸಿರುವ ಈ ಅಣೆಕಟ್ಟನ್ನು `ಬೆಟ್ಟದ ಮೇಲಿನ ಬಟ್ಟಲು’ ಎಂದು ಕರೆಯಲಾಗುತ್ತಿದೆ. ವಿದ್ಯುತ್ ಉತ್ಪಾದನೆಗೆ ಮಾತ್ರ ಮೀಸಲಾಗಿರುವ ಈ ಅಣೆಕಟ್ಟಿನ ಬಳಿಯೇ ಪವರ್ ಹೌಸ್ ಇದೆ. ಇಲ್ಲಿ ವಿದ್ಯುತ್ ಉತ್ಪಾದನೆಯಾದ ನಂತರ ಇದೇ ನೀರನ್ನು ಬಳಸಿ ಭೂಗರ್ಭ ವಿದ್ಯುದಾಗಾರದಲ್ಲೂ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ.

    ಹನ್ನೆರಡು ವರ್ಷಗಳ ನಂತರ ತುಂಬಿರುವ ಈ ಜಲಾಶಯದ ಮನಮೋಹಕ ದೃಶ್ಯ ನೋಡಲು ಪ್ರವಾಸಿಗರಿಗೆ ಮುಕ್ತ ಅವಕಾಶ ಇಲ್ಲ. ಹೊಸಂಗಡಿಯಲ್ಲಿರುವ ಕೆಪಿಸಿ ಕಚೇರಿಯಲ್ಲಿ ಪಾಸ್ ಪಡೆದ ನಂತರವಷ್ಟೇ ಈ ಅಣೆಕಟ್ಟೆಯ ಮೇಲೆ ನಿಂತು ಇಲ್ಲಿನ ಸೌಂದರ್ಯ ಸವಿಯಲು ಸಾಧ್ಯ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಿಲ್ಲೆಯಲ್ಲಿ ತಗ್ಗಿದ ವರುಣ: ಕೆಆರ್‌ಎಸ್ ಸಂಪೂರ್ಣ ಭರ್ತಿ

    ಜಿಲ್ಲೆಯಲ್ಲಿ ತಗ್ಗಿದ ವರುಣ: ಕೆಆರ್‌ಎಸ್ ಸಂಪೂರ್ಣ ಭರ್ತಿ

    ಮಂಡ್ಯ: ಜಿಲ್ಲೆಯಲ್ಲಿ ಮಳೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು,ಕೆಆರ್‌ಎಸ್ ಜಲಾಶಯದಿಂದ ಹೊರ ಬಿಡಲಾಗುತ್ತಿದ್ದ ಹೆಚ್ಚುವರಿ ನೀರಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ನದಿ ಪಾತ್ರದ ಪ್ರದೇಶಗಳಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

    ಜಿಲ್ಲೆಯಾದ್ಯಂತ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ಕಾವೇರಿ ನದಿ ಸೇರಿದಂತೆ ಹಲವು ನದಿಗಳು ಮೈದುಂಬಿ ಹರಿಯುತ್ತಿದ್ದವು. ಹೀಗಾಗಿ ಕೆಆರ್‌ಎಸ್ ಜಲಾಶಯಕ್ಕೆ 1 ಲಕ್ಷ ಕ್ಯೂಸೆಕ್‍ಗೂ ಹೆಚ್ಚಿನ ನೀರು ಹರಿದು ಬರುತ್ತಿದ್ದರಿಂದ ಜಲಾಶಯ ಸಂಪೂರ್ಣವಾಗಿ ತುಂಬಿತ್ತು. ಇದರಿಂದಾಗಿ ಅಷ್ಟೇ ಪ್ರಮಾಣದ ನೀರನ್ನು  ಕಾವೇರಿ ನದಿಗೆ ಬಿಡಲಾಗಿತ್ತು. ಅಧಿಕ ಪ್ರಮಾಣದ ನೀರನ್ನು ಬಿಡುಗಡೆ ಮಾಡಿದ್ದರಿಂದ ನದಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ಅಧಿಕಾರಿಗಳು ಸಹ ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದ ನೀರಿನ ಮಟ್ಟವನ್ನು 121 ಅಡಿಗೆ ಕಾಯ್ದುಕೊಂಡಿದ್ದರು.

    ಸದ್ಯ ಜಿಲ್ಲೆಯಾದ್ಯಂತ ವರುಣನ ಆರ್ಭಟ ಕಡಿಮೆಯಾಗಿದ್ದರಿಂದ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಭಾರೀ ಇಳಿಕೆ ಕಂಡಿದೆ. ಜಲಾಶಯಕ್ಕೆ ಶುಕ್ರವಾರದಿಂದ 21,170 ಕ್ಯೂಸೆಕ್ ಒಳಹರಿವು ಬರುತ್ತಿದ್ದು, ಇದಕ್ಕೆ ಸಮಾಂತರವಾಗಿ 21,202 ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಬಿಡುಗಡೆಮಾಡಲಾಗುತ್ತಿದೆ.

    ಮಳೆ ಕಡಿಮೆಯಾಗಿದ್ದರಿಂದ ಜಲಾಶಯವನ್ನು ಮತ್ತೆ ಸಂಪೂರ್ಣವಾಗಿ ಭರ್ತಿ ಮಾಡಲಾಗಿದ್ದು, ಶನಿವಾರದ ಮಾಹಿತಿಯಂತೆ ಕೆಆರ್‌ಎಸ್ ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳಾಗಿದ್ದರೆ, ಸಂಗ್ರಹವಾದ ನೀರಿನ ಮಟ್ಟ 124.70 ಅಡಿಗಳಷ್ಟಾಗಿದೆ ಎಂದು ತಿಳಿದುಬಂದಿದೆ.

    ಕ್ಯೂಸೆಕ್ ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು cubic foot per second ಹೃಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಳಗಾವಿ, ಬಾಗಲಕೋಟೆ ಜೀವನಾಡಿ ಹಿಡಕಲ್ ಜಲಾಶಯ ಸಂಪೂರ್ಣ ಭರ್ತಿ

    ಬೆಳಗಾವಿ, ಬಾಗಲಕೋಟೆ ಜೀವನಾಡಿ ಹಿಡಕಲ್ ಜಲಾಶಯ ಸಂಪೂರ್ಣ ಭರ್ತಿ

    ಚಿಕ್ಕೋಡಿ: ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಜೀವನಾಡಿ ರಾಜಾ ಲಖಮಗೌಡ ಜಲಾಶಯ(ಹಿಡಕಲ್ ಡ್ಯಾಂ) ಸಂಪೂರ್ಣ ಭರ್ತಿಯಾಗಿದ್ದು, ಎರಡು ಜಿಲ್ಲೆಯ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ

    ಘಟಪ್ರಭಾ ನದಿಗೆ ಅಡ್ಡಲಾಗಿ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹಿಡಕಲ್ ಗ್ರಾಮದ ಬಳಿ ನಿರ್ಮಿಸಿರುವ ಈ ಡ್ಯಾಮ್ ಕಳೆದ 3 ವರ್ಷಗಳಿಂದ ಸಂಪೂರ್ಣವಾಗಿ ಭರ್ತಿಯಾಗಿರಲಿಲ್ಲ. ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಲ್ಲಿ ಭರ್ತಿ ಆಗುತ್ತಿದ್ದ ಜಲಾಶಯ ಎರಡು ತಿಂಗಳು ಅವಧಿಗೂ ಮುನ್ನವೇ ತನ್ನ ಒಡಲನ್ನು ತುಂಬಿಕೊಂಡಿದೆ.

    ರಾಜಾ ಲಖಮಗೌಡ ಜಲಾಶಯ 51 ಟಿಎಂಸಿ ನೀರು ಸಂಗ್ರಹ ಹೊಂದಿದ್ದು, ಈಗ 50.70 ಟಿಎಂಸಿ ನೀರು ಸಂಗ್ರಹವಾಗಿದೆ. ಹೀಗಾಗಿ ಬುಧವಾರ ಸಂಜೆ 4 ಗಂಟೆಗೆ ಜಲಾಶಯದ 10 ಗೇಟ್‍ಗಳ ಮೂಲಕ ನೀರನ್ನು ಹರಿಬಿಡಲಾಗುತ್ತದೆ ಎಂದು ಅಧಿಕಾರಿಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಈಗಾಗಲೇ ಘಟಪ್ರಭಾ ನದಿ ಪಾತ್ರದ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರವಾಗುವಂತೆ ಸೂಚನೆ ನೀಡಲಾಗಿದೆ. ಜೊತೆಗೆ ಘಟಪ್ರಭಾ ನದಿ ಪಾತ್ರದಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಕಾರಣ 10 ಸಾವಿರ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರ ಬೀಡುವ ಸಾಧ್ಯತೆಯಿದೆ. ಅಲ್ಲದೇ ಮುಖ್ಯ ಕಾಲುವೆ ಮೂಲಕ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಈಗಾಗಲೇ ನೀರು ಬೀಡಲಾಗಿದೆ. ಈ ವರ್ಷ ಹಿಡಕಲ್ ಜಲಾಶಯ ಭರ್ತಿ ಆಗಿರುವ ಹಿನ್ನೆಯಲ್ಲಿ ಕುಡಿಯುವ ನೀರು, ವಿದ್ಯುತ್ ಉತ್ಪಾದನೆ ಹಾಗೂ ನೀರಾವರಿಗೆ ಬೇಸಿಗೆ ಕಾಲದವರೆಗೂ ಯಾವುದೇ ವ್ಯತ್ಯಯ ಆಗುವುದಿಲ್ಲ ಎನ್ನುವುದು ಸಂತಸ ತಂದಿದೆ.