Tag: fuel

  • ಅಮೆರಿಕದ ಒತ್ತಡಕ್ಕೆ ಭಾರತ ಮಣಿಯುವುದಿಲ್ಲ- ಇಂಧನ ಬೆಲೆ ಕಡಿತಕ್ಕೆ ಇಮ್ರಾನ್ ಖಾನ್ ಪ್ರಶಂಸೆ

    ಅಮೆರಿಕದ ಒತ್ತಡಕ್ಕೆ ಭಾರತ ಮಣಿಯುವುದಿಲ್ಲ- ಇಂಧನ ಬೆಲೆ ಕಡಿತಕ್ಕೆ ಇಮ್ರಾನ್ ಖಾನ್ ಪ್ರಶಂಸೆ

    ಇಸ್ಲಾಮಾಬಾದ್: ಕೇಂದ್ರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಹಿನ್ನೆಲೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾರತವನ್ನು ಹೊಗಳಿದ್ದಾರೆ.

    ರಷ್ಯಾದ ತೈಲವನ್ನು ಭಾರತ ರಿಯಾಯಿತಿ ದರದಲ್ಲಿ ಖರೀದಿಸಿದೆ. ಅಮೆರಿಕದ ಒತ್ತಡದ ನಡುವೆಯೂ ಜನಸಾಮಾನ್ಯರಿಗೆ ಪರಿಹಾರ ನೀಡಲು ಭಾರತ ರಿಯಾಯಿತಿ ದರದಲ್ಲಿ ರಷ್ಯಾದ ತೈಲವನ್ನು ಖರೀದಿಸಿದೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ನಾಯಿ ಕಚ್ಚಿದಕ್ಕೆ 4 ಲಕ್ಷ ರೂ. ದಂಡ ವಿಧಿಸಿದ ಗ್ರಾಹಕರ ವೇದಿಕೆ

    ಭಾರತ ಕ್ವಾಡ್ ರಾಷ್ಟ್ರಗಳಲ್ಲಿ(ಅಮೆರಿಕ, ಆಸ್ಟ್ರೇಲಿಯಾ, ಜಪಾನ್, ಭಾರತ) ಒಂದಾಗಿದ್ದರೂ ಅಮೆರಿಕದ ಒತ್ತಡವನ್ನು ಎದುರಿಸಿ, ಜನಸಾಮಾನ್ಯರಿಗೆ ಪರಿಹಾರ ಒದಗಿಸಲು ರಿಯಾಯಿತಿ ದರದಲ್ಲಿ ರಷ್ಯಾದ ತೈಲವನ್ನು ಖರೀದಿಸಿತು. ಪಾಕಿಸ್ತಾನದಲ್ಲಿ ನಮ್ಮ ಸರ್ಕಾರವಿದ್ದಾಗ ನಾವು ಕೂಡಾ ಸ್ವತಂತ್ರ್ಯ ವಿದೇಶಾಂಗ ನೀತಿಯ ಸಹಾಯದಿಂದ ಇದೇ ರೀತಿಯಾಗಿ ಕೆಲಸ ಮಾಡುತ್ತಿದ್ದೆವು ಎಂದು ಖಾನ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

    ಪಾಕಿಸ್ತಾನದಲ್ಲಿ ಇದೀಗ ಮುಸ್ಲಿಂ ಲೀಗ್ ನೇತೃತ್ವದ ಸರ್ಕಾರ ಆರ್ಥಿಕತೆಯಲ್ಲಿ ತಲೆಯಿಲ್ಲದ ಕೋಳಿಯಂತೆ ಓಡಾಡುತ್ತಿದೆ. ಪಾಕಿಸ್ತಾನದ ಆಡಳಿತ ಬದಲಾವಣೆಯಾಗುವಂತೆ ಬಾಹ್ಯ ದೇಶಗಳ ಒತ್ತಡಕ್ಕೆ ಮಣಿಯುತ್ತಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಪಂದ್ಯ ಗೆದ್ದು IPL ಸೀಸನ್‌ಗೆ ಗುಡ್‌ಬೈ ಹೇಳಿದ ಮುಂಬೈ- ಸೋಲಿಗೆ ಕಾರಣ ಬಿಚ್ಚಿಟ್ಟ ರಿಷಭ್ ಪಂತ್

    ಶನಿವಾರ ಕೇಂದ್ರ ಅಬಕಾರಿ ಸುಂಕವನ್ನು ಲೀಟರ್ ಪೆಟ್ರೋಲ್‌ಗೆ 9.50 ರೂ. ಹಾಗೂ ಪ್ರತೀ ಲೀಟರ್ ಡೀಸೆಲ್‌ಗೆ 6 ರೂ. ಕಡಿತಗೊಳಿಸಿದೆ.

  • ಶ್ರೀಲಂಕಾದಲ್ಲಿ ಸರ್ಕಾರಿ ಕಚೇರಿ, ಶಾಲೆ – ಕಾಲೇಜುಗಳು ಬಂದ್‌

    ಶ್ರೀಲಂಕಾದಲ್ಲಿ ಸರ್ಕಾರಿ ಕಚೇರಿ, ಶಾಲೆ – ಕಾಲೇಜುಗಳು ಬಂದ್‌

    ಕೊಲಂಬೋ: ತೀವ್ರ ಸಂಕಷ್ಟದಲ್ಲಿರುವ ಶ್ರೀಲಂಕಾದ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಮುಖ್ಯವಾಗಿ ಇಂಧನ ಕೊರತೆ ಆ ದೇಶವನ್ನು ಇನ್ನಿಲ್ಲದಂತೆ ಬಾಧಿಸುತ್ತಿದೆ.

    ಪೆಟ್ರೋಲ್ ಖಾಲಿಯಾದ ಪರಿಣಾಮ ದ್ವೀಪ ರಾಷ್ಟ್ರದಲ್ಲಿ ಇದೀಗ ಶಾಲೆ ಕಾಲೇಜು ಬಂದ್ ಆಗಿದೆ. ತುರ್ತು ಸೇವೆಗಳ ಕಚೇರಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸರ್ಕಾರಿ ಕಚೇರಿಗೆ ರಜೆ ನೀಡಲಾಗಿದೆ. ಈ ಪರಿಸ್ಥಿತಿ ಎಷ್ಟು ದಿನ ಮುಂದುವರೆಯಲಿದೆ ಎಂಬುದು ಗೊತ್ತಿಲ್ಲ. ಇದನ್ನೂ ಓದಿ: ದೂರದರ್ಶನ ನಿರೂಪಕಿಯರೇ, ಮುಖ ಮುಚ್ಚಿ ನಿರೂಪಣೆ ಮಾಡಿ: ತಾಲಿಬಾನ್

    ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾ ತನ್ನ 70 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಸಾಲಕಟ್ಟಲು ಆಗದೇ ಕೈ ಎತ್ತಿದೆ. 78 ಮಿಲಿಯನ್ ಡಾಲರ್ ಸಾಲಪಾವತಿಸಲು ನೀಡಲಾಗಿದ್ದ ಗ್ರೇಸ್ ಅವಧಿ ಶುಕ್ರವಾರಕ್ಕೆ ಕೊನೆಯಾಗಿದೆ. ಈ ಮೂಲಕ ಲಂಕಾ ಅಧಿಕೃತವಾಗಿ ಡಿಫಾಲ್ಟ್ ದೇಶಗಳ ಬಗ್ಗೆ ಪಟ್ಟಿ ಸೇರಿದೆ. ಎರಡು ಕ್ರೆಡಿಟ್ ಏಜೆನ್ಸಿಗಳು ಡಿಫಾಲ್ಟ್ ದೇಶ ಎಂದು ದೃಢೀಕರಿಸಿವೆ.

  • ಇಂಧನ ಬೆಲೆ ಏರಿಕೆ ವಿರೋಧಿಸಿ ಸೈಕಲ್ ಏರಿ ಬಂದ ವರ

    ಇಂಧನ ಬೆಲೆ ಏರಿಕೆ ವಿರೋಧಿಸಿ ಸೈಕಲ್ ಏರಿ ಬಂದ ವರ

    ಭುವನೇಶ್ವರ್: ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆಗಳ ವಿರುದ್ಧ ಪ್ರತಿಭಟನೆಗಾಗಿ ವರನೊಬ್ಬ ಮದುವೆಗೆ ಸೈಕಲ್‍ನಲ್ಲಿ ಬಂದ ಘಟನೆ ಒಡಿಶಾದ ಭುವನೇಶ್ವರ್‌ದಲ್ಲಿ ನಡೆದಿದೆ.

    ಸುಭ್ರಾಂಶು ಸಮಲ್ ಸೈಕಲ್ ಮೇಲೆ ಬಂದ ವರ. ಈತನ ಕುಟುಂಬವು ಮದುವೆ ಮರವಣಿಗೆಗೆ ಭಾರೀ ವ್ಯವಸ್ಥೆ ಮಾಡಿತ್ತು. ಆದರೆ ದೇಶದಲ್ಲಿ ಹೆಚ್ಚುತ್ತಿರವ ಇಂಧನ ಬೆಲೆ ಏರಿಕೆಯನ್ನು ವಿರೋಧಿಸಿ ಪ್ರತಿಭಟಿಸಲು ಸುಭ್ರಾಂಶು ಸೈಕಲ್‍ನ್ನು ಬಳಸುವ ನಿರ್ಧಾರವನ್ನು ಮಾಡಿದ್ದಾನೆ.

    ಇದರಂತೆ ಮದುವೆ ಬಟ್ಟೆಯನ್ನು ಧರಿಸಿ ಸೈಕಲ್‍ನಲ್ಲಿ ಸುಮಾರು ಒಂದು ಕಿ.ಮೀ ವರೆಗೆ ಸೈಕಲ್‍ನ್ನು ತುಳಿದು ಮಂಟಪಕ್ಕೆ ಬಂದಿದ್ದಾನೆ. ಅವನ ಜೊತೆಗೆ ಮದುವೆಗೆ ಆಗಮಿಸಿದ್ದ ಆತನ ಕುಟುಂಬ ಮತ್ತು ಸ್ನೇಹಿತರು ಕಾಲ್ನಡಿಗೆಯಲ್ಲೇ ಮದುವೆ ಮಂಟಪಕ್ಕೆ ತಲುಪಿದರು. ಇದನ್ನೂ ಓದಿ: ಸ್ಪಷ್ಟವಾಗಿ ಹೇಳ್ತೇನೆ ನಾರಾಯಣಗುರು ಪಠ್ಯ ಕೈಬಿಡುವ ಪ್ರಶ್ನೆಯೇ ಇಲ್ಲ: ಶ್ರೀನಿವಾಸ್ ಪೂಜಾರಿ

    petrol

    ನಿರಂತರವಾಗಿ ಪೆಟ್ರೋಲ್ ಹಾಗೂ ಡಿಸೇಲ್‍ಗಳ ಬೆಲೆ ಏರಿಕೆ ಆಗುತ್ತಿರುವುದರಿಂದ ಹಲವಾರು ಜನರು ಹತಾಶರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅನೇಕ ಕಡೆ ಪ್ರತಿಭಟನೆ ನಡೆಯುತ್ತಿರುವುದು ಸಾಮಾನ್ಯ ಪ್ರತಿಕ್ರಿಯೆ ಆಗಿದೆ. ಆದರೆ ವಿಭಿನ್ನವಾಗಿ ಪ್ರತಿಭಟನೆ ಮಾಡುವ ಮೂಲಕ ಸರ್ಕಾರವನ್ನು ಗಮನ ಸೆಳೆಯುವುದು ಉದ್ದೇಶವಾಗಿದೆ ಎಂದು ಸುಭ್ರಾಂಶು ತಿಳಿಸಿದರು. ಇದನ್ನೂ ಓದಿ: ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮೇಲಕ್ಕೆ ಹಾರಿದ ಪಾದಚಾರಿಗಳು – ಓರ್ವ ಸಾವು, ನಿರ್ದೇಶಕ ವಶಕ್ಕೆ

  • ಇಂಧನಕ್ಕಾಗಿ ಸರದಿಯಲ್ಲಿ ನಿಲ್ಲಬೇಡಿ – ಲಂಕಾ ಸರ್ಕಾರ ನಾಗರಿಕರಲ್ಲಿ ಮನವಿ

    ಇಂಧನಕ್ಕಾಗಿ ಸರದಿಯಲ್ಲಿ ನಿಲ್ಲಬೇಡಿ – ಲಂಕಾ ಸರ್ಕಾರ ನಾಗರಿಕರಲ್ಲಿ ಮನವಿ

    ಕೊಲಂಬೋ: ಶ್ರೀಲಂಕಾ ತನ್ನ ಸ್ವತಂತ್ರ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಇದೀಗ ಎದುರಿಸುತ್ತಿದೆ. ಆಹಾರದಿಂದ ಹಿಡಿದು ಅಡುಗೆ ಅನಿಲದವರೆಗಿನ ತೀವ್ರವಾದ ಕೊರತೆಯನ್ನು ದ್ವೀಪರಾಷ್ಟ್ರ ಅನುಭವಿಸುತ್ತಿದೆ. ಅಗತ್ಯ ವಸ್ತುಗಳ ಬೆಲೆ ಶೇ.30 ರಷ್ಟು ಏರಿಕೆಯಾಗಿದ್ದು, ಸಾಮಾಜಿಕವಾಗಿ ಅಶಾಂತಿ, ರಾಜಕೀಯ ಪ್ರಕ್ಷುಬ್ಧತೆ ಉಂಟಾಗಿದೆ.

    ಇದೀಗ ಕೈಗೆಟಕುವಷ್ಟು ದೂರದಲ್ಲಿ ಇಂಧನ ಹೊತ್ತ ಹಡಗುಗಳು ಪಾವತಿಗಾಗಿ ಕಾಯುತ್ತಿದ್ದರೂ ಶ್ರೀಲಂಕಾದ ಬಳಿ ಡಾಲರ್‌ಗಳಿಲ್ಲದ ಕಾರಣ ಖರೀದಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶ್ರೀಲಂಕಾ ಸರ್ಕಾರ ತನ್ನ ನಾಗರಿಕರಲ್ಲಿ ಇಂಧನ ಕೊಳ್ಳಲು ಸರದಿ ಸಾಲಿನಲ್ಲಿ ನಿಲ್ಲದಂತೆ ಕೇಳಿಕೊಂಡಿದೆ. ಇದನ್ನೂ ಓದಿ: ಹಾಲಿ ಓಬಿಸಿ ನೀತಿಯಡಿ ಬಿಬಿಎಂಪಿ ಚುನಾವಣೆ ನಡೆಸಿ – ಸುಪ್ರೀಂ ಮರು ಆದೇಶ

    SRILANKA

    ನಮ್ಮ ನೀರಿನಲ್ಲಿ ಪೆಟ್ರೋಲ್ ಹಡಗು ಇದೆ. ಆದರೆ ಹಡಗಿಗೆ ಪಾವತಿಸಲು ವಿದೇಶೀ ವಿನಿಮಯ ಹೊಂದಿಲ್ಲ ಎಂದು ಇಂಧನ ಸಚಿವ ಕಾಂಚನಾ ವಿಜೆಶೇಖರ್ ಬುಧವಾರ ಸಂಸತ್ತಿನಲ್ಲಿ ತಿಳಿಸಿದ್ದಾರೆ.

    ನಮ್ಮಲ್ಲಿ ಸದ್ಯ ಡೀಸೆಲ್‌ನಲ್ಲಿ ಯಾವುದೇ ಸಮಸ್ಯೆಯಿಲ್ಲ. ಆದರೆ ಪೆಟ್ರೋಲ್‌ನ ಸೀಮಿತ ದಾಸ್ತಾನು ಇದೆ. ಮಾರ್ಚ್ 28ರಿಂದ ಪೆಟ್ರೋಲ್ ಹೊತ್ತಿರುವ ಹಡಗು ಇಲ್ಲಿನ ಸಮುದ್ರದಲ್ಲಿ ವಿನಿಮಯಕ್ಕೆ ಕಾದು ಕುಳಿತಿದೆ. ಆದರೆ ಪೆಟ್ರೋಲ್ ಪಡೆಯುವುದಕ್ಕಾಗಿ ಹಡಗಿಗೆ ಪಾವತಿಸಲು ನಮ್ಮಲ್ಲಿ ಅಮೇರಿಕನ್ ಡಾಲರ್‌ಗಳಿಲ್ಲ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ 122 ಕೇಸ್ – ಇಂದು ದಾಖಲಾಯಿತು ಏಕೈಕ ಮರಣ ಪ್ರಕರಣ

    ಈ ಹಿನ್ನೆಲೆಯಲ್ಲಿ ವಿಜೆಶೇಖರ್, ನಾವು ಪೆಟ್ರೋಲ್‌ನ ಸೀಮಿತ ದಾಸ್ತಾನು ಹೊಂದಿದ್ದೇವೆ. ಅದನ್ನು ಅಗತ್ಯ ಸೇವೆಗಳಿಗೆ, ವಿಶೇಷವಾಗಿ ಅಂಬುಲೆನ್ಸ್ಗಳಿಗೆ ಉಪಯೋಗಕ್ಕೆ ವಿತರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

  • ಚಂದ್ರನ ಮಣ್ಣಿನಿಂದ ಆಮ್ಲಜನಕ, ಇಂಧನ ಉತ್ಪಾದಿಸಬಹುದು: ಚೀನಾ

    ಚಂದ್ರನ ಮಣ್ಣಿನಿಂದ ಆಮ್ಲಜನಕ, ಇಂಧನ ಉತ್ಪಾದಿಸಬಹುದು: ಚೀನಾ

    ಬೀಜಿಂಗ್: ಚಂದ್ರನ ಮೇಲೆ ಮನುಷ್ಯರಿಗೆ ವಾಸಯೋಗ್ಯ ಪರಿಸ್ಥಿತಿಯನ್ನು ಸೃಷ್ಟಿಸಲು ತೀವ್ರ ಶೋಧನೆ ನಡೆಯುತ್ತಿದೆ. ಬಾಹ್ಯಾಕಾಶದಲ್ಲಿ ಮಾನವನಿಗೆ ಜೀವಿಸಲು ಅಗತ್ಯವಾದ ನೀರು, ಗಾಳಿ, ಶಕ್ತಿಯ ಮೂಲಗಳನ್ನು ಹುಡುಕುವ, ಉತ್ಪಾದಿಸುವ, ಸೃಷ್ಟಿಸುವ ಬಗ್ಗೆ ಹಲವು ದೇಶಗಳು ತಾಮುಂದು-ನಾಮುಂದು ಎನ್ನುತ್ತಲೇ ಇವೆ. ಇದೀಗ ಚೀನಾ ಚಂದ್ರನ ಮಣ್ಣಿನಲ್ಲಿ ಆಮ್ಲಜನಕ ಹಾಗೂ ಇಂಧನ ಉತ್ಪಾದನೆ ಸಾಧ್ಯವಿದೆ ಎಂದಿದೆ.

    ಕಳೆದ ವರ್ಷ ಚೀನಾ ತನ್ನ ಮಾನವ ರಹಿತ ಮಿಷನ್‌ನಲ್ಲಿ ಚಂದ್ರನಿಂದ ಭೂಮಿಗೆ ತರಲಾದ ಮಣ್ಣಿನ ಮಾದರಿಗಳ ತನಿಖೆಯಲ್ಲಿ ಹೊಸ ಫಲಿತಾಂಶ ಹೊರ ಬಿದ್ದಿದೆ. ಇಂಗಾಲದ ಡೈಆಕ್ಸೈಡ್ ಬಳಸಿ, ಚಂದ್ರನ ಮಣ್ಣಿನಲ್ಲಿ ಆಮ್ಲಜನಕ ಹಾಗೂ ಇಂಧನವನ್ನು ಉತ್ಪಾದಿಸುವ ಅಂಶಗಳಿವೆ ಎಂದು ಚೀನಾದ ವಿಜ್ಞಾನಿಗಳು ತಮ್ಮ ಅಧ್ಯಯನದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಬೀಚ್‍ನಲ್ಲಿ ಬೇಬಿ ಡೈನೋಸಾರ್?- ವೀಡಿಯೋ ವೈರಲ್

    ಚೀನಾ ವಿಜ್ಞಾನಿಗಳ ಈ ವರದಿಯನ್ನು ಜೂಲ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಇದೀಗ ಸಂಶೋಧಕರು ಚಂದ್ರ ಮಾನವ ಅನ್ವೇಷಣೆಗೆ ಉಪಯುಕ್ತವಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಚಂದ್ರನಿಂದ ಭೂಮಿಗೆ ತರಲಾದ ಮಣ್ಣಿನಲ್ಲಿ ಕಬ್ಬಿಣ ಹಾಗೂ ಟೈಟಾನಿಯಂ ಸಮೃದ್ಧವಾಗಿದೆ ಎಂದು ಕಂಡುಹಿಡಿಯಲಾಗಿದೆ. ಇವು ಸೂರ್ಯನ ಬೆಳಕು ಹಾಗೂ ಇಂಗಾಲದ ಡೈಆಕ್ಸೈಡ್‌ನಿಂದ ಆಮ್ಲಜನಕ ಬಿಡುಗಡೆ ಮಾಡುವ ಶಕ್ತಿ ಹೊಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪತಿ ಆಸೆ ಈಡೇರಿಸಿದ ಮಡದಿ: ಹುತಾತ್ಮ ಯೋಧನ ಪತ್ನಿ ಈಗ ಲೆಫ್ಟಿನೆಂಟ್

    ಈ ತಂತ್ರದಲ್ಲಿ ಸೂರ್ಯನ ಬೆಳಕನ್ನು ಹೊರತುಪಡಿಸಿ ಬೇರೆ ಯಾವುದೇ ಬಾಹ್ಯ ಶಕ್ತಿಯನ್ನು ಬಳಸಲಾಗುವುದಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ. ಇದು ನೀರು, ಆಮ್ಲಜನಕ ಹಾಗೂ ಇಂಧನದಂತಹ ವಿವಿಧ ಉತ್ಪನ್ನಗಳನ್ನು ನೀಡುತ್ತದೆ. ಚಂದ್ರನ ಮೇಲೆ ಮಾನವನ ವಾಸಕ್ಕೆ ಇದೊಂದು ಉಪಯುಕ್ತ ಸಂಶೋಧನೆ ಎಂದು ಚೀನಾ ಹೇಳಿದೆ.

  • ಶ್ರೀಲಂಕಾದಲ್ಲಿ ಒಂದೇ ದಿನ ಪೆಟ್ರೋಲ್ ಬೆಲೆ 84 ರೂ. ಏರಿಕೆ – ಪ್ರತಿಭಟನಾಕಾರರ ಮೇಲೆ ಫೈರಿಂಗ್

    ಕೊಲಂಬೋ: ದ್ವೀಪ ದೇಶ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ದಿನೇ ದಿನೇ ಪರಿಸ್ಥಿತಿ ಹದಗೆಡುತ್ತಿದೆ. ದಿನನಿತ್ಯದ ಅಗತ್ಯ ವಸ್ತುಗಳ ಕೊರತೆಯನ್ನು ಒಂದೆಡೆ ಜನರು ಎದುರಿಸುತ್ತಿದ್ದರೆ, ವಿದ್ಯುತ್, ಇಂಧನ ಬೆಲೆ ಏರಿಕೆಯೂ ಅಲ್ಲಿನ ಆರ್ಥಿಕತೆಯ ಪರಿಸ್ಥಿತಿಯನ್ನು ಹಿಂಡಿ ಹಿಪ್ಪೆಯನ್ನಾಗಿಸುತ್ತಿದೆ.

    ಪೆಟ್ರೊಲ್ ಬೆಲೆ 84 ರೂ.ಏರಿಕೆ ಮಾಡಲಾಗಿದೆ. ಇದರಿಂದಾಗಿ ಒಂದು ಲೀಟರ್ ಪೆಟ್ರೋಲ್ ಬೆಲೆ 338 ರೂ.ಗೆ ಏರಿಕೆ ಮಾಡಲಾಗಿದೆ. ಮಂಗಳವಾರ ರುಂಬಕ್ಕನ ಪ್ರದೇಶದಲ್ಲಿ ಇಂಧನ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆದಿದೆ. ಪೊಲೀಸರ ಹಾಗೂ ಜನರ ನಡುವೆ ಸಂಘರ್ಷ ಏರ್ಪಟ್ಟು, ಪರಿಸ್ಥಿತಿಯನ್ನು ಪೊಲೀಸರಿಂದ ನಿಯಂತ್ರಣಕ್ಕೆ ತರಲು ಸಾಧ್ಯವಾಗದೇ, ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರ ಗುಂಡಿನ ದಾಳಿಗೆ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, 12 ಮಂದಿಗೆ ಗಾಯಗಳಾಗಿವೆ. ಇದನ್ನೂ ಓದಿ: ಚೀನಾ ಮೀರಿಸಿದ ಭಾರತ – ವಿಶ್ವದಲ್ಲೇ ಅತೀ ವೇಗದ ಅಭಿವೃದ್ಧಿ

    ಮಂಗಳವಾರ ಪ್ರತಿಭಟನಾಕಾರರು ರಂಬುಕ್ಕನದಲ್ಲಿ ರೈಲು ಮಾರ್ಗದ ಬಳಿ ಪ್ರತಿಭಟನೆ ನಡೆಸಿದ್ದರು. ಭದ್ರತಾ ಸಿಬ್ಬಂದಿ ರೈಲು ಮಾರ್ಗವನ್ನು ತೆರವುಗೊಳಿಸುವಂತೆ ಕೇಳಿದಾಗ, ಭದ್ರತಾ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ಅಲ್ಲಿಂದ ಚದುರಿಸಲು ಪ್ರಯತ್ನಪಟ್ಟರೂ ವಾಹನಗಳಿಗೆ ಬೆಂಕಿ ಹಚ್ಚಲು ಮುಂದಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಈ ವೇಳೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಸಾಧ್ಯವಾಗದೇ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಈ ವೇಳೆ ಗುಂಡು ತಗುಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, 12 ಮಂದಿಗೆ ಗಾಯಗಳಾಗಿವೆ. 12 ಜನರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಮಲಾ ಹ್ಯಾರಿಸ್ ರಕ್ಷಣಾ ಸಲಹೆಗಾರರಾಗಿ ಭಾರತೀಯ ಮೂಲದ ಶಾಂತಿ ಸೇಠಿ ನೇಮಕ

    ಇತ್ತೀಚಿನ ಬೆಳವಣಿಗೆಯಲ್ಲಿ ಶ್ರೀಲಂಕಾದಲ್ಲಿ ನಡೆಯುತ್ತಿರುವ ಸರ್ಕಾರೀ ವಿರೋಧಿ ಪ್ರತಿಭಟನೆಯಲ್ಲಿ ಇದೇ ಮೊದಲ ಬಾರಿಗೆ ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಅಡುಗೆ ಎಣ್ಣೆಯಿಂದ ತಯಾರಿಸಿದ ಇಂಧನದಲ್ಲಿ 3 ಗಂಟೆ ಹಾರಾಡಿತು ವಿಮಾನ

    ಅಡುಗೆ ಎಣ್ಣೆಯಿಂದ ತಯಾರಿಸಿದ ಇಂಧನದಲ್ಲಿ 3 ಗಂಟೆ ಹಾರಾಡಿತು ವಿಮಾನ

    ಪ್ಯಾರಿಸ್: ಇತ್ತೀಚೆಗೆ ಅಡುಗೆ ಎಣ್ಣೆಯಿಂದ ತಯಾರಿಸಲಾದ ಇಂಧನದಿಂದ ವಿಮಾನವೊಂದನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಈ ಇಂಧನದಿಂದ ವಿಮಾನ 3 ಗಂಟೆಗಳ ಕಾಲ ಪ್ರಾಯೋಗಿಕ ಹಾರಾಟ ನಡೆಸಿದೆ.

    ಎ380 ಏರ್‌ಬಸ್ ವಿಮಾನ ಇತ್ತೀಚೆಗೆ ಫ್ರಾನ್ಸ್ ದೇಶದ ಬ್ಲಾಗ್ನಾಕ್ ವಿಮಾನ ನಿಲ್ದಾಣದಿಂದ ಪ್ರಾಯೋಗಿಕ ಹಾರಾಟವನ್ನು ನಡೆಸಿತು. ವಿಶೇಷವೆಂದರೆ ವಿಮಾನದಲ್ಲಿ ಅಡುಗೆ ಎಣ್ಣೆಯನ್ನು ಹೊರತುಪಡಿಸಿ ಬೇರೇನೂ ಬಳಸಲಾಗಿಲ್ಲ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಧ್ಯೆ ವಿದ್ಯುತ್ ಶಾಕ್ – ಯೂನಿಟ್‍ಗೆ 35 ಪೈಸೆ ಹೆಚ್ಚಳ

    ಸಸ್ಟೆನೆಬಲ್ ಏವಿಯೇಷನ್ ಫ್ಯೂಯೆಲ್(ಎಸ್‌ಎಎಫ್) ಎಂದು ಕರೆಯಲಾಗುವ ಇಂಧನವನ್ನು ಈ ವಿಮಾನದಲ್ಲಿ ಬಳಸಲಾಗಿದ್ದು, ಇದು ಅಡುಗೆ ಎಣ್ಣೆ ಹಾಗೂ ತ್ಯಾಜ್ಯದಿಂದ ಮಾಡಲ್ಪಟ್ಟಿದೆ. ಕೇವಲ ಒಂದು ರೋಲ್ಸ್ ರಾಯ್ಸ್ ಟ್ರೆಂಟ್ 900 ಎಂಜಿನ್ ಮೂಲಕ ಈ ವಿಮಾನವನ್ನು ಹಾರಿಸಲಾಗಿದೆ.

    ಏನಿದು ಎಸ್‌ಎಎಫ್:
    ಎಸ್‌ಎಎಫ್ ಒಂದು ರೀತಿಯ ಇಂಧನವಾಗಿದ್ದು ಇದನ್ನು ಮುಖ್ಯವಾಗಿ ಅಡುಗೆ ಎಣ್ಣೆ ಹಾಗೂ ತ್ಯಾಜ್ಯದಿಂದ ಮಾಡಲಾಗಿದೆ. ಪರೀಕ್ಷೆಯಲ್ಲಿ ಬಳಸಲಾದ ಇಂಧನವನ್ನು ಹೈಡ್ರೊ ಪ್ರೊಸೆಸ್ಡ್ ಎಸ್ರ‍್ಸ್ ಹಾಗೂ ಫ್ಯಾಟಿ ಆಸಿಡ್(ಹೆಚ್‌ಇಎಫ್‌ಎ)ಗಳಿಂದ ತಯಾರಿಸಲಾಗಿದೆ. ಇದು ಸುಗಂಧ ಹಾಗೂ ಸಲ್ಫರ್ ಮುಕ್ತವಾಗಿದ್ದು, ಫ್ರಾನ್ಸ್‌ನ ನಾರ್ಮಂಡಿ ಪ್ರದೇಶದ ಟೋಟಲ್ ಎನರ್ಜಿಸ್ ಕಂಪನಿ ಪೂರೈಸಿದೆ. ಇದನ್ನೂ ಓದಿ: ಎಡಿಟ್ ಫೀಚರ್ ತರಲಿದ್ದೇವೆ ಎಂದ ಟ್ವಿಟ್ಟರ್ – ಇದು ಏಪ್ರಿಲ್ ಫೂಲ್ ಅಂದ್ರು ನೆಟ್ಟಿಗರು

    ಎಸ್‌ಎಎಫ್ ಇಂಧನವನ್ನು ಬಳಸಿ ಹಾರುವ ವಿಮಾನಗಳು ಶೇ.53 ರಿಂದ ಶೇ.71ರ ವರೆಗೆ ಹೊರ ಹಾಕುವ ಇಂಗಾಲವನ್ನು ಕಡಿತಗೊಳಿಸಬಹುದು ಎಂದು ಕಂಪನಿ ತಿಳಿಸಿದೆ.

  • ವಿಮಾನ ಇಂಧನ ದರ ಹೆಚ್ಚಳ- ಪ್ರಯಾಣ ವೆಚ್ಚ ಕೂಡಾ ದುಬಾರಿ

    ವಿಮಾನ ಇಂಧನ ದರ ಹೆಚ್ಚಳ- ಪ್ರಯಾಣ ವೆಚ್ಚ ಕೂಡಾ ದುಬಾರಿ

    ನವದೆಹಲಿ: ಜೆಟ್ ಇಂಧನ ದರ ಶೇ.2ರಷ್ಟು ಹೆಚ್ಚಿಸಲಾಗಿದೆ. ವಿಮಾನ ಇಂಧನ ದರ ಹೆಚ್ಚಳವಾಗಿರುವ ಕಾರಣ ಪ್ರಯಾಣದ ಟಿಕೆಟ್ ದರ ಕೂಡಾ ದುಬಾರಿ ಆಗಿದೆ.

    ಏವಿಯೇಷನ್ ಟರ್ಬೈನ್ ಇಂಧನ (ಎಟಿಎಫ್) ವಿಮಾಗಳಿಗೆ ಬಳಸಲಾಗುತ್ತದೆ. ಈ ಇಂಧನಕ್ಕೆ ಪ್ರತಿ ಕಿಲೋ ಲೀಟರ್‌ಗೆ ರೂ. 2,258.54 ಅಥವಾ ಶೇ. 2 ರಷ್ಟು ಹೆಚ್ಚಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಕಿಲೋ ಲೀಟರ್‍ಗೆ ರೂ. 1,12,924.83 ಕ್ಕೆ ಏರಿಸಲಾಗಿದೆ.

    ವಿಮಾನಯಾನ ಸಂಸ್ಥೆಯ ನಿರ್ವಹಣಾ ವೆಚ್ಚದ ಶೇ.40 ರಷ್ಟನ್ನು ಹೊಂದಿರುವ ಜೆಟ್ ಇಂಧನವು ಈ ವರ್ಷ ಗರಿಷ್ಠ ಮಟ್ಟಕ್ಕೆ ಏರಿದೆ. ಇಂದು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆಟೋ ಇಂಧನ ದರಗಳು ಲೀಟರ್‌ಗೆ 6.40 ರೂ. ಏರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ದರ ಅಧಿಸೂಚನೆಯ ಪ್ರಕಾರ ಬೆಲೆಗಳು ನಿಗದಿಯಾಗಿವೆ. ಇದನ್ನೂ ಓದಿ: ಮಗ ಅಳುತ್ತಿದ್ದರೂ ನನ್ನ ಮೇಲೆ ಅತ್ಯಾಚಾರ ಮಾಡಿದ್ರು- ಉಕ್ರೇನ್ ಮಹಿಳೆ

    ವಿಮಾನ ಇಂಧನ ದರವು 2022ರ ಆರಂಭದಿಂದಲೇ ಹದಿನೈದು ದಿನಕ್ಕೊಮ್ಮೆ ಏರಿಕೆ ಕಾಣುತ್ತಿದೆ. ಜನವರಿ 1ರಂದು ಏಳನೇ ಬಾರಿಗೆ ದರ ಏರಿಕೆ ಕಂಡಿತ್ತು.

  • ಮೋದಿಯ ನಿತ್ಯದ ಕಾರ್ಯದಲ್ಲಿ ಇಂಧನ ಏರಿಕೆಯೂ ಒಂದು: ರಾಹುಲ್ ಗಾಂಧಿ

    ಮೋದಿಯ ನಿತ್ಯದ ಕಾರ್ಯದಲ್ಲಿ ಇಂಧನ ಏರಿಕೆಯೂ ಒಂದು: ರಾಹುಲ್ ಗಾಂಧಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿದಿನದ ಕಾರ್ಯದಲ್ಲಿ ಇಂಧನ ಬೆಲೆಯ ಹೆಚ್ಚಳವು ಇದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದರು.

    ಸತತ 9 ದಿನಗಳಲ್ಲಿ 8ನೇ ಬಾರಿ ಇಂಧನ ಏರಿಕೆಯಾಗಿರುವುದರ ಕುರಿತು ವಾಗ್ದಾಳಿ ನಡೆಸಿದ ಅವರು, ಮೋದಿ ಅವರ ಮನ್ ಕಿ ಬಾತ್‍ನ್ನು ರೋಜ್ ಸುಬಾ ಕಿ ಬಾತ್ ಎಂದು ಲೇವಡಿ ಮಾಡಿ ಟ್ವೀಟ್ ಮಾಡಿದ್ದಾರೆ.

    NARENDRA MODI

    ಟ್ವೀಟ್‍ನಲ್ಲಿ ಏನಿದೆ?: ಪೆಟ್ರೋಲ್, ಡೀಸೆಲ್, ಗ್ಯಾಸ್ ದರವನ್ನು ಎಷ್ಟು ಹೆಚ್ಚಿಸಬೇಕು, ಯುವಕರಿಗೆ ಉದ್ಯೋಗದ ಕನಸುಗಳನ್ನು ಹೇಗೆ ತೋರಿಸುವುದು,  ಇಂದು ಯಾವ ಸರ್ಕಾರಿ ಕಂಪನಿಯನ್ನು ಮಾರಾಟ ಮಾಡಬೇಕು?, ರೈತರನ್ನು ಹೆಚ್ಚು ಅಸಹಾಯಕರನ್ನಾಗಿ ಮಾಡುವುದು ಹೇಗೆ, ಇವು ಪ್ರಧಾನ ಮಂತ್ರಿ ಅವರು ಪ್ರತಿನಿತ್ಯ ಮಾಡುವ ಕೆಲಸವಾಗಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಇಂಧನ ಬೆಲೆ ಏರಿಕೆ ನಡುವೆಯೇ ಹಸಿರು ಹೈಡ್ರೋಜನ್‌ ಕಾರಿನಲ್ಲಿ ಪಾರ್ಲಿಮೆಂಟ್‌ಗೆ ಬಂದ ನಿತಿನ್‌ ಗಡ್ಕರಿ

    ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಚಾರವನ್ನು ಕಾಂಗ್ರೆಸ್ ನಿರಂತರವಾಗಿ ಪ್ರಸ್ತಾಪಿಸುತ್ತಿದ್ದು, ನಾಳೆಯಿಂದ ದೇಶಾದ್ಯಂತ ಪ್ರತಿಭಟನೆ ನಡೆಸಲಿದೆ. ಮೂರು ಹಂತದ ಪ್ರತಿಭಟನಾ ಅಭಿಯಾನದಲ್ಲಿ ಮೊದಲನೆಯದು ಮಾರ್ಚ್ 31ರಂದು, ಎರಡನೆಯದು ಏಪ್ರಿಲ್ 2 ಮತ್ತು ಏಪ್ರಿಲ್ 4ರ ನಡುವೆ ಮತ್ತು ಮೂರನೆಯದು ಏಪ್ರಿಲ್ 7ರಂದು ನಡೆಯಲಿದೆ. ಇದನ್ನೂ ಓದಿ: ಉಚಿತ ಊಟ ನೀಡಲು ಮುಂದಾದ ಯೋಗಿ ಸರ್ಕಾರ

    ಪೆಟ್ರೋಲ್, ಡೀಸೆಲ್ ದರವು ಕಳೆದ 9 ದಿನಗಳಲ್ಲಿ 8ನೇ ಬಾರಿ ಏರಿಕೆಯಾಗಿದ್ದು, ಬುಧವಾರವೂ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್‌ಗೆ 80 ಪೈಸೆ ಏರಿಕೆಯಾಗಿದೆ. ಒಟ್ಟಾರೆಯಾಗಿ ಒಂದೇ ವಾರದಲ್ಲಿ ಲೀಟರ್‌ಗೆ 5.60ರೂ. ಏರಿಕೆಯಾಗಿದೆ.

  • ದಿ ಕಾಶ್ಮೀರ್ ಫೈಲ್ಸ್‌ಗೆ ಫ್ರೀ ಟಿಕೆಟ್ ನೀಡಿದಂತೆ ಇಂಧನಕ್ಕೂ ಕೂಪನ್ ನೀಡಿ: ರಾಜಸ್ಥಾನ ಸಚಿವ

    ದಿ ಕಾಶ್ಮೀರ್ ಫೈಲ್ಸ್‌ಗೆ ಫ್ರೀ ಟಿಕೆಟ್ ನೀಡಿದಂತೆ ಇಂಧನಕ್ಕೂ ಕೂಪನ್ ನೀಡಿ: ರಾಜಸ್ಥಾನ ಸಚಿವ

    ಜೈಪುರ: ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಟಿಕೆಟ್‍ನ್ನು ವಿತರಿಸಿದ ರೀತಿಯಲ್ಲೇ ಕೇಂದ್ರ ಸರ್ಕಾರ ಇಂಧನಕ್ಕೂ ಕೂಪನ್ ನೀಡಬೇಕು ಎಂದು ರಾಜಸ್ಥಾನ ಸಚಿವ ಪ್ರತಾಪ್ ಖಚರಿಯಾವಾಸ್ ಒತ್ತಾಯಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ಎರಡರ ಬೆಲೆ ಲೀಟರ್‌ಗೆ ಸುಮಾರು 5 ರೂ.ಗಳಷ್ಟು ಏರಿಕೆಯಾಗುತ್ತಿದೆ. ಚುನಾವಣೆಯ ನಂತರ ಬಿಜೆಪಿ ಪೆಟ್ರೋಲ್ ಹಾಗೂ ಡೀಸೆಲ್ ಏರಿಕೆ ಮಾಡಿದೆ ಎಂದು ಕಿಡಿಕಾರಿದರು.

    ಪಂಚರಾಜ್ಯಗಳ ಚುನಾವಣೆ ನಡೆಯುವಾಗ ಇಂಧನ ಬೆಲೆ ಏರಿಕೆ ಆಗಿರಲಿಲ್ಲ. ಆದರೆ ಕಳೆದ ಮಂಗಳವಾರದಿಂದ ಏಳು ಬಾರಿ ಏರಿಕೆ ಮಾಡಿದ್ದಾರೆ ಇದರಿಂದಲೇ ಗೋತತಾಗುತ್ತದೆ ಬಿಜೆಪಿ ಅವರು ರಾಮಭಕ್ತರು ಅಲ್ಲ, ರಾವಣ ಭಕ್ತರು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸತತ 7ನೇ ದಿನವೂ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ

    ಮಂಗಳವಾರ ಪೆಟ್ರೋಲ್, ಡೀಸೆಲ್ ದರ ಸತತ 7ನೇ ದಿನವೂ ಏರಿಕೆಯಾಗಿದ್ದು, ಮಂಗಳವಾರವೂ ಪ್ರತಿ ಲೀಟರ್ ಪೆಟ್ರೋಲ್‍ಗೆ 80 ಪೈಸೆ, ಡೀಸೆಲ್ 70 ಪೈಸೆ ಏರಿಕೆಯಾಗಿದೆ. ಒಟ್ಟಾರೆಯಾಗಿ ಒಂದೇ ವಾರದಲ್ಲಿ ಲೀಟರ್‌ಗೆ 4.80ರೂ. ಏರಿಕೆಯಾಗಿದೆ. ಇದನ್ನೂ ಓದಿ: ಧರ್ಮ ಯುದ್ಧ ಅಂತ್ಯಕ್ಕೆ ಬುದ್ಧಿಜೀವಿಗಳ ಮನವಿ- 61 ಸಾಹಿತಿಗಳಿಂದ ಸಿಎಂಗೆ ಪತ್ರ