Tag: fuel rate

  • ಕರ್ನಾಟಕದಲ್ಲಿ ತುಘಲಕ್ ದರ್ಬಾರ್ ನಡೆದಿದೆ: ಬಿಎಸ್‍ವೈ ಕಿಡಿ

    ಕರ್ನಾಟಕದಲ್ಲಿ ತುಘಲಕ್ ದರ್ಬಾರ್ ನಡೆದಿದೆ: ಬಿಎಸ್‍ವೈ ಕಿಡಿ

    ಧಾರವಾಡ: ಸಮ್ಮಿಶ್ರ ಸರ್ಕಾರದಿಂದ ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆದಿದೆ, ಭಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕಿಡಿಕಾರಿದ್ದಾರೆ.

    ಜಿಲ್ಲೆಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಎಂ ತಾವು ಹೇಳಿದಂತೆ ನಡೆದುಕೊಂಡಿಲ್ಲ. ಪ್ರತಿಯೊಂದು ವಿಷಯದಲ್ಲೂ ಗೊಂದಲ ಉಂಟುಮಾಡಿಕೊಳ್ತಾರೆ. ರಾಜ್ಯದಲ್ಲಿ ಬಹುತೇಕ ತಾಲೂಕಿನಲ್ಲಿ ಜನ ಬರಗಾಲದಿಂದ ತತ್ತರಿಸಿ ಸಂಕಷ್ಟದಲ್ಲಿದ್ದಾರೆ. ಈ ವೇಳೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ. ಇದರಿಂದ ಸಾರ್ವಜನಿಕರ ಮೇಲೆ ಭಾರ ಬೀಳೋದಿಲ್ವ? ಈ ರೀತಿ ತೆರಿಗೆ ಹೆಚ್ಚಳ ಮಾಡಿ ಎಲ್ಲದಕ್ಕೂ ಸಾಲಮನ್ನಾ ಅಂತ ಕುಂಟು ನೆಪ ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಂದು ಸಚಿವರೊಬ್ಬರ ಇಲಾಖೆಯಲ್ಲೇ ಸುಮರು 76 ಲಕ್ಷ ರೂ. ಸಿಕ್ಕಿದೆ, ಇದು ಎಷ್ಟರ ಮಟ್ಟಿಗೆ ಸರಿ. ಈ ವಿಚಾರವಾಗಿ ತಕ್ಷಣ ಕ್ರಮ ತೆಗೆದುಕೊಳ್ಳೋದನ್ನ ಬಿಟ್ಟು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಬೇರೆ ಉತ್ತರ ನೀಡುತ್ತಾರೆ. ಸರ್ಕಾರದಲ್ಲಿ ಭಷ್ಟಾಚಾರ ತುಂಬಿ ತುಳುಕುತ್ತಿದೆ, ಅಭಿವೃದ್ಧಿ ಕಾರ್ಯ ಸ್ಥಗಿತವಾಗ್ತಿದೆ. ರಾಜ್ಯದಲ್ಲಿ ಒಂದು ರೀತಿ ತುಘಲಕ್ ದರ್ಬಾರ್ ನಡೆದಿದ್ದು, ಇದನ್ನ ನಾನು ಖಂಡಿಸುತ್ತೇನೆ. ಬರಗಾಲದಿಂದ ಜನ ಉದ್ಯೋಗವಿಲ್ಲದೆ ವಲಸೆ ಹೋಗ್ತಿದ್ದಾರೆ. ಈ ಬಗ್ಗೆ ಅನುದಾನ ಬಿಡುಗಡೆ ಮಾಡುವ ಯಾವುದೇ ಕೆಲಸವನ್ನು ಸರ್ಕಾರ ಮಾಡ್ತಿಲ್ಲ ಎಂದು ಬಿಎಸ್‍ವೈ ಹರಿಹಾಯ್ದಿದ್ದಾರೆ.

    ಧಾರವಾಡದಲ್ಲಿ ಸಮ್ಮೇಳನ ಅದ್ಧೂರಿಯಾಗಿ ನಡೆಯುತ್ತಿದೆ. ಸನ್ಮಾನ ಕಾರ್ಯಕ್ರಮ ಇದೆ, ನನನ್ನು ಆಹ್ವಾನಿಸಿದ್ದಾರೆ ಅದಕ್ಕೆ ಬಂದಿದ್ದೇನೆ. ಮಾಧ್ಯಮದವರು ಕಳೆದ ಮೂರು ದಿನಗಳಿಂದ ಈ ಕಾರ್ಯಕ್ರಮಕ್ಕೆ ಸಹಕಾರ ಕೊಡುತ್ತಿರೋದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ಸ್ಯಾಂಡಲ್‍ವುಡ್ ಸ್ಟಾರ್ ನಟರ ಮೇಲೆ ಐಟಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ತೆರಿಗೆ ಅಧಿಕಾರಿಗಳಿಗೆ ಯಾವುದು ಸೂಕ್ತ ಅನಿಸುತ್ತದೆಯೋ ಅದನ್ನ ಮಾಡ್ತಾರೆ. ಈ ಬಗ್ಗೆ ಕೇಂದ್ರವನ್ನು ಮಧ್ಯ ತರೋದು ಸರಿಯಲ್ಲ. ಈ ವಿಚಾರವಾಗಿ ತನಿಖೆ ಆಗುತ್ತಿದೆ. ಇದಕ್ಕೆ ಯಾವ ನಟರು ವಿರೋಧ ಮಾಡ್ತಿಲ್ಲ, ಅಧಿಕಾರಿಗಳಿಗೆ ಸಹಕರಿಸುತ್ತಿದ್ದಾರೆ. ಇದರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೆಟ್ರೋಲ್‍ಗಿಂತ ವೈಮಾನಿಕ ಇಂಧನ ಬೆಲೆ ಈಗ ಅಗ್ಗ!

    ಪೆಟ್ರೋಲ್‍ಗಿಂತ ವೈಮಾನಿಕ ಇಂಧನ ಬೆಲೆ ಈಗ ಅಗ್ಗ!

    ನವದೆಹಲಿ: ಸಾಧಾರಣವಾಗಿ ವಿಮಾನಗಳಲ್ಲಿ ಬಳಸುವ ಇಂಧನ ದರ ಜಾಸ್ತಿ ಎನ್ನುವ ಅಭಿಪ್ರಾಯವಿದೆ. ಆದರೆ ಈಗ ಪೆಟ್ರೋಲ್ ಬೆಲೆಗೆ ಹೋಲಿಸಿದರೆ ವೈಮಾನಿಕ ಇಂಧನದ ದರ ಕಡಿಮೆಯಿದೆ.

    ಹೌದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ವೈಮಾನಿಕ ಇಂಧನ ದರವನ್ನು ಶೇ.14.7 ರಷ್ಟು ಕಡಿತಗೊಳಿಸಿವೆ.

    9,990 ರೂ. ಕಡಿತಗೊಂಡ ಪರಿಣಾಮ ಒಂದು ಸಾವಿರ ಲೀಟರ್(1 ಕಿಲೋ ಲೀಟರ್) ಏವಿಯೇಷನ್ ಟರ್ಬೈನ್ ಫ್ಯುಯೆಲ್(ಎಟಿಎಫ್) ಬೆಲೆ ಈಗ 58,060.97 ರೂ.ಗೆ ಇಳಿಕೆಯಾಗಿದೆ. ಅಂದರೆ ಒಂದು ಲೀಟರ್ ಗೆ 58.6 ರೂ. ಆಗಿದೆ.

    ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿನಿತ್ಯ ಪರಿಷ್ಕರಿಸುತ್ತಿದ್ದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಮತ್ತು ಡಾಲರ್, ರೂಪಾಯಿ ಮೌಲ್ಯವನ್ನು ಪರಿಗಣಿಸಿ ಪ್ರತಿ ತಿಂಗಳ ಮೊದಲ ದಿನದಂದು ಎಟಿಎಫ್ ಬೆಲೆ ಪರಿಷ್ಕರಿಸಲಾಗುತ್ತದೆ.

    ಡಿಸೆಂಬರ್ 1 ರಂದು ವೈಮಾನಿಕ ಇಂಧನ ದರ ಶೇ.10.9 ರಷ್ಟು ಕಡಿಮೆಯಾದ ಪರಿಣಾಮ ಒಂದು ಕಿಲೋಲೀಟರ್ ಎಟಿಎಫ್ ಬೆಲೆ 8,327.83 ರೂ. ಇಳಿಕೆಯಾಗಿತ್ತು.

    ಪ್ರಸ್ತುತ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 69.21 ರೂ. ಇದ್ದರೆ ಡೀಸೆಲ್ ಬೆಲೆ 63.01 ರೂ. ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗ್ರಾಹಕರಿಗೆ ಸಿಹಿಸುದ್ದಿ: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ

    ಗ್ರಾಹಕರಿಗೆ ಸಿಹಿಸುದ್ದಿ: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ

    ಬೆಂಗಳೂರು: ತೈಲ ಗ್ರಾಹಕರಿಗೆ ಸಿಹಿಸುದ್ದಿ. ಸೋಮವಾರ ಮಧ್ಯರಾತ್ರಿಯಿಂದಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದೆ.

    ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 2.16 ರೂಪಾಯಿ ಕಡಿಮೆಯಾಗಿದೆ. ಹಾಗೂ ಪ್ರತಿ ಲೀಟರ್ ಡೀಸೆಲ್ ಬೆಲೆಯಲ್ಲಿ 2.10 ರೂಪಾಯಿ ಇಳಿಕೆಯಾಗಿದೆ. ಆದರೂ ಆಯಾ ರಾಜ್ಯಗಳ ಸ್ಥಳೀಯ ತೆರಿಗೆಗಳ ಆಧಾರದ ಮೇಲೆ ಪೆಟ್ರೋಲ್ ಬೆಲೆ ಇಳಿಕೆಯಲ್ಲಿ 2.46 ರೂ. ನಿಂದ 3.22 ರೂ.ವರೆಗೆ ವ್ಯತ್ಯಯವಿದೆ ಎಂದು ವರದಿಯಾಗಿದೆ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರದಲ್ಲಿನ ಬದಲಾವಣೆ ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯದ ಆಧಾರದ ಮೇಲೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದೆ. ಈ ಹಿಂದೆ ಮೇ 1ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡಿತ್ತು. ಪ್ರತಿ ಲೀಟರ್ ಪೆಟ್ರೋಲ್‍ಗೆ 2 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್‍ಗೆ 52 ಪೈಸೆ ಏರಿಕೆಯಾಗಿತ್ತು.

    ಇದನ್ನೂ ಓದಿ: ಪೆಟ್ರೋಲ್ ಬಂಕ್‍ಗಳಲ್ಲಿ ಹೀಗೂ ಮೋಸ ಮಾಡ್ತಾರೆ ಗೊತ್ತಾ!

    ಪ್ರತಿ ಭಾನುವಾರ ಬಂಕ್ ಮುಚ್ಚುವ ನಿರ್ಧಾರದಿಂದ ಮಾಲೀಕರು ತಾತ್ಕಾಲಿಕವಾಗಿ ಹಿಂದೆ ಸರಿದಿದ್ದರು. ಮೇ 17ರಂದು ಮುಂಬೈನಲ್ಲಿ ತೈಲ ಕಂಪನಿಗಳ ಜೊತೆಗೆ ಮಾತುಕತೆ ನಡೆಯಲಿದ್ದು, ಕಮಿಷನ್ ಹೆಚ್ಚಳ, ಡೀಲರ್ಗಳಿಗೆ ಹೆಚ್ಚಿನ ಸೌಲಭ್ಯ ಸೇರಿದಂತೆ ಪ್ರಮುಖ ಬೇಡಿಕೆಗಳ ಜಾರಿಗೆ ಬಂಕ್ ಮಾಲೀಕರು ಆಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ರಜೆ ಘೋಷಿಸಿ ಸೋಮವಾರ ಬೆಳಗ್ಗೆ 9ರಿಂದ 6 ಗಂಟೆವರೆಗೆ ಮಾತ್ರ ಬಂಕ್ ಓಪನ್ ಮಾಡಲು ತೀರ್ಮಾನಿಸಿದ್ದರು. ಆದ್ರೆ ಬುಧವಾರ ಮುಂಬೈನಲ್ಲಿ ಸಂಧಾನ ಸಭೆ ನಡೆಯೋ ಕಾರಣ ತಾತ್ಕಾಲಿಕವಾಗಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿರೋದಾಗಿ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರನಾಥ್ ಹೇಳಿದ್ದಾರೆ.

    ಪೆಟ್ರೋಲ್ ಬಂಕ್ ಮಾಲೀಕರ ಬೇಡಿಕೆಗಳೇನು?
    * ಅಪೂರ್ವ ಚಂದ್ರ ಕಮಿಟಿ ಜಾರಿ ಮಾಡಬೇಕು.
    * ಜನವರಿ-ಜುಲೈ ಒಳಗೆ ಆರು ತಿಂಗಳೊಳಗೆ ಎಲ್ಲಾ ಬಿಲ್ಲುಗಳ ಪರಿಷ್ಕರಣೆಯಾಗಬೇಕು
    * ಈಗ ಇರುವ ಕಮಿಷನ್ ಹೆಚ್ಚಳ ಮಾಡಬೇಕು
    * ಪೆಟ್ರೋಲ್‍ಗೆ 15, ಡೀಸೆಲ್‍ಗೆ 10 ಪೈಸೆ ಕಮಿಷನ್ ಮಾಲೀಕರಿಗೆ ನೀಡಲು ಒತ್ತಾಯ.
    * ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ವಾರದ ರಜೆ ಮಾಡಲು ತೀರ್ಮಾನಿಸಲಾಗಿದೆ

    ಅಪೂರ್ವ ಚಂದ್ರ ಕಮಿಟಿ ಶಿಫಾರಸ್ಸುಗಳೇನು?
    * ಪ್ರತಿ ಆರು ತಿಂಗಳಿಗೆ ಸಿಬ್ಬಂದಿ, ಮೂಲ ಸೌಕರ್ಯಗಳ ವೇತನ ಪರಿಷ್ಕರಣೆ ಮಾಡಬೇಕು
    * ಡೀಲರ್ಗಳಿಗೆ ಹೆಚ್ಚಿನ ಸೌಲಭ್ಯ ನೀಡಬೇಕು.
    * ಈಗ ಇರುವ ಕಮಿಷನ್ ಅನ್ನು ಹೆಚ್ಚಳ ಮಾಡಬೇಕು.