Tag: Fuel Prices Hike

  • ಪಾಕಿಸ್ತಾನದಲ್ಲಿ ರಾತ್ರೋ ರಾತ್ರಿ ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಏರಿಕೆ!

    ಪಾಕಿಸ್ತಾನದಲ್ಲಿ ರಾತ್ರೋ ರಾತ್ರಿ ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಏರಿಕೆ!

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಆರ್ಥಿಕ ಸ್ಥಿತಿ ದಿನಕಳೆದಂತೆ ದಿವಾಳಿ ಸ್ಥಿತಿಗೆ ತಲುಪುತ್ತಿದ್ದು, ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಷರತ್ತುಗಳಂತೆ ಭಾರೀ ಪ್ರಮಾಣದಲ್ಲಿ ತೈಲಬೆಲೆ ಹೆಚ್ಚಿಸಿದೆ (Fuel Prices Hike).

    ಬುಧವಾರ ರಾತ್ರೋ ರಾತ್ರಿ ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆ ಅತ್ಯಂತ ಗರಿಷ್ಠ ಮಟ್ಟಕ್ಕೆ ಹೆಚ್ಚಿಸಿದೆ. ಪೆಟ್ರೋಲ್ ಬೆಲೆ 22.20 ರೂ. ದಿಢೀರ್ ಏರಿಕೆ ಮಾಡಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಗರಿಷ್ಠ 272 ರೂ.ಗಳಿಗೆ ತಲುಪಿದೆ. ಡಾಲರ್ ಎದುರು ಪಾಕಿಸ್ತಾನದ ರೂಪಾಯಿ ಅಪಮೌಲ್ಯದಿಂದಾಗಿ ಬೆಲೆ ಏರಿಕೆ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಕೂಡಲೇ ವಿದ್ಯುತ್‌ ದರ ಏರಿಸಿ – ಪಾಕ್‌ಗೆ ಐಎಂಎಫ್‌ ಶಾಕ್‌: PoK ಜನತೆಗೆ ನೀಡಿದ್ದ ಸಬ್ಸಿಡಿ ಬಂದ್‌

    ಇದೇ ರೀತಿ ಹೈಸ್ಪೀಡ್ ಡೀಸೆಲ್ (Diesel) ಬೆಲೆ 17.20 ರೂ. ಹೆಚ್ಚಿಸಿದ್ದು, ಪ್ರತಿ ಲೀಟರ್ ಡೀಸೆಲ್ ಬೆಲೆ 280 ರೂ.ಗೆ ಹೆಚ್ಚಳವಾಗಿದೆ. ಸೀಮೆ ಎಣ್ಣೆ ಬೆಲೆ 12.90 ರೂ. ಹೆಚ್ಚಿಸಿದ್ದು ಪ್ರತಿ ಲೀಟರ್‌ಗೆ 202.73 ರೂ.ಗಳಿಗೆ ಮಾರಾಟವಾಗುತ್ತಿದೆ. ಜೊತೆಗೆ ಲಘು ಡೀಸೆಲ್ ಬೆಲೆ 9.68 ರೂ. ಹೆಚ್ಚಿಸಿದ್ದು, ಪ್ರತಿ ಲೀಟರ್ 196.68 ರೂ.ಗಳಿಗೆ ಮಾರಾಟವಾಗುತ್ತಿದೆ. ಇದನ್ನೂ ಓದಿ: ಮತ್ತೆ ಪಾಕ್‌ನಿಂದ ದುರ್ಬುದ್ಧಿ – ಟರ್ಕಿಗೆ ಹೊರಟಿದ್ದ NDRF ವಿಮಾನಕ್ಕೆ ನಿರ್ಬಂಧ

    ಬುಧವಾರ ಮಧ್ಯರಾತ್ರಿ 12 ಗಂಟೆಯಿಂದಲೇ ಈ ನಿಯಮ ಜಾರಿಗೆ ಬಂದಿವೆ. ಸದ್ಯ ಎಎಂಎಫ್ ಕಠಿಣ ನಿಯಮಗಳ ನಡುವೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮತ್ತಷ್ಟು ಹಣದುಬ್ಬರಕ್ಕೆ ಕಾರಣವಾಗಬಹುದು ಎಂದು ಅರ್ಥಶಾಸ್ತ್ರಜ್ಞರು ಆತಂಕಪಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡೀಸೆಲ್ ಮೇಲಿನ VAT ಹೆಚ್ಚಿಸಿದ ಹಿಮಾಚಲ ಪ್ರದೇಶ ಸರ್ಕಾರ – ಡೀಸೆಲ್ ಬೆಲೆ 3 ರೂ. ಏರಿಕೆ

    ಡೀಸೆಲ್ ಮೇಲಿನ VAT ಹೆಚ್ಚಿಸಿದ ಹಿಮಾಚಲ ಪ್ರದೇಶ ಸರ್ಕಾರ – ಡೀಸೆಲ್ ಬೆಲೆ 3 ರೂ. ಏರಿಕೆ

    ಶಿಮ್ಲಾ: ಹಿಮಾಚಲ ಪ್ರದೇಶ ಸರ್ಕಾರವು (Himachal Pradesh Government) ಭಾನುವಾರ ಡಿಸೇಲ್ ಮೇಲಿನ ವ್ಯಾಟ್ (ಮೌಲ್ಯವರ್ಧಿತ ತೆರಿಗೆ) (VAT) ಅನ್ನು ಪ್ರತಿ ಲೀಟರ್‌ಗೆ ಶೇ.6.40 ರಿಂದ ಶೇ.9.96ಕ್ಕೆ ಹೆಚ್ಚಿಸಿದ್ದು, ಡೀಸೆಲ್ (Diesel) ಬೆಲೆ ಲೀಟರ್‌ಗೆ 3 ರೂ. ಹೆಚ್ಚಳವಾಗಿದೆ.

    ಡೀಸೆಲ್ (Diesel) ಮೇಲಿನ ವ್ಯಾಟ್ (VAT) ಪ್ರತಿ ಲೀಟರ್‌ಗೆ 4.40 ರೂ. ನಿಂದ 7.40 ರೂ.ಗೆ ಏರಿಕೆಯಾಗಿದೆ. ಹಾಗಾಗಿ 83 ರೂ. ಇದ್ದ ಡೀಸೆಲ್ ಬೆಲೆ 86 ರೂ.ಗಳಿಗೆ ತಲುಪಿದೆ. ಆದ್ರೆ ಪೆಟ್ರೋಲ್ (Petrol) ಮೇಲಿನ ವ್ಯಾಟ್ ಅನ್ನು 0.55 ಪೈಸೆಗಳಷ್ಟು ಕಡಿಮೆ ಮಾಡಿದೆ. ಈ ಕಡಿತವು ವಿವಿಧ ಇಂಧನ ಕೇಂದ್ರಗಳಿಗೆ ಅನುಗುಣವಾಗಿ ಬದಲಾಗುತ್ತದೆ.

    ಹಿಮಾಚಲ ಪ್ರದೇಶ ಸರ್ಕಾರವು ಸಚಿವ ಸಂಪುಟ ವಿಸ್ತರಿಸಿದ ಅದೇ ದಿನ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ಸೇರಿ ಒಟ್ಟು 7 ಶಾಸಕರು ಹಿಮಾಚಲ ಪ್ರದೇಶದಲ್ಲಿ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು (Sukhvinder Singh Sukhu) ಅವರ ಸಮ್ಮುಖದಲ್ಲಿ ಕ್ಯಾಬಿನೆಟ್ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k