Tag: fuel

  • ಅವಧಿ ಮುಗಿದ ವಾಹನಗಳಿಗೆ ಇಂದಿನಿಂದ ಪೆಟ್ರೋಲ್, ಡಿಸೇಲ್ ಇಲ್ಲ

    ಅವಧಿ ಮುಗಿದ ವಾಹನಗಳಿಗೆ ಇಂದಿನಿಂದ ಪೆಟ್ರೋಲ್, ಡಿಸೇಲ್ ಇಲ್ಲ

    – ವಾಯು ಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರದಿಂದ ಹೊಸ ನಿಯಮ ಜಾರಿ
    – 350 ಪೆಟ್ರೋಲ್ ಪಂಪ್‌ನಲ್ಲಿ ಟ್ರಾಫಿಕ್ ಪೊಲೀಸ್ ನಿಯೋಜನೆ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (New Delhi) ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಳೆಯ ವಾಹನಗಳ (Old Vehicle) ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ದೆಹಲಿ ಸರ್ಕಾರವು ಇಂದಿನಿಂದ 15 ವರ್ಷಗಳಿಗಿಂತ ಹಳೆಯದಾದ ಪೆಟ್ರೋಲ್ ವಾಹನಗಳು ಮತ್ತು 10 ವರ್ಷಗಳಿಗಿಂತ ಹಳೆಯದಾದ ಡೀಸೆಲ್ ವಾಹನಗಳನ್ನು ರಸ್ತೆಯಲ್ಲಿ ಓಡಿಸುವುದನ್ನು ನಿಷೇಧಿಸಿದೆ.

    ಇದರ ಭಾಗವಾಗಿ ದೆಹಲಿಯಲ್ಲಿ ಅವಧಿ ಮೀರಿದ ವಾಹನಗಳಿಗೆ ಪೆಟ್ರೋಲ್ ಅಥವಾ ಡೀಸೆಲ್ ಹಾಕದಿರಲು ನಿಯಮ ರೂಪಿಸಿದೆ. ಈ ನಿಯಮಗಳ ಕಟ್ಟುನಿಟ್ಟಿನ ಜಾರಿಯನ್ನು ಖಚಿತಪಡಿಸಿಕೊಳ್ಳಲು ದೆಹಲಿ ಸಾರಿಗೆ ಇಲಾಖೆ, ದೆಹಲಿ ಪೊಲೀಸ್ ಮತ್ತು ಸಂಚಾರ ಸಿಬ್ಬಂದಿಯೊಂದಿಗೆ (Traffic Police) ಸಮನ್ವಯದೊಂದಿಗೆ, ಜೀವಿತಾವಧಿಯ ವಾಹನಗಳಿಗೆ ಇಂಧನ ಪೂರೈಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ತಡೆಯಲು ಸಮಗ್ರ ಕಾರ್ಯತಂತ್ರವನ್ನು ಜಾರಿಗೆ ತಂದಿದೆ. ಇದನ್ನೂ ಓದಿ: ಮೈಸೂರು| ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ ಮದ್ಯ ಮಾರಾಟ

     

    ಈಗಾಗಲೇ ದೆಹಲಿಯ ಪೆಟ್ರೋಲ್ ಪಂಪ್‌ಗಳಲ್ಲಿ (Petrol Pump) ಜುಲೈ 1ರಿಂದ ಜೀವಿತಾವಧಿ ಮುಗಿದ ವಾಹನಗಳಿಗೆ ಇಂಧನವನ್ನು ವಿತರಿಸಲಾಗುವುದಿಲ್ಲ. 15 ವರ್ಷ ಹಳೆಯ ಪೆಟ್ರೋಲ್ ಮತ್ತು 10 ವರ್ಷ ಹಳೆಯ ಡೀಸೆಲ್ ವಾಹನಗಳು ಎಂದು ಹೇಳುವ ಸೂಚನೆಯನ್ನು ಹಾಕಲಾಗಿದೆ. ಇದರ ಜೊತೆಗೆ, ಅನುಸರಣೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಜಾರಿಗೊಳಿಸಲು ಸಿಸಿಟಿವಿ ಕ್ಯಾಮೆರಾಗಳು ಮತ್ತು ಸಾರ್ವಜನಿಕ ವಿಳಾಸ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದೆ. ಇದನ್ನೂ ಓದಿ: ಲಾರಿ ಓವರ್ ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ – ನಾಲ್ವರು ದುರ್ಮರಣ

    ನಿಗದಿತ ಜೀವಿತಾವಧಿ ಮೀರಿದ ವಾಹನಗಳ ಇಂಧನ ತುಂಬುವಿಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ತಡೆಯಲು ಗುರುತಿಸಲಾದ 350 ಪೆಟ್ರೋಲ್ ಪಂಪ್‌ಗಳಲ್ಲಿ ತಲಾ ಒಬ್ಬ ಸಂಚಾರ ಪೊಲೀಸ್ ಅಧಿಕಾರಿಯನ್ನು ನಿಯೋಜಿಸಲಾಗುವುದು. ಯೋಜನೆಯ ಪ್ರಕಾರ, ದೆಹಲಿ ಪೊಲೀಸರು 1 ರಿಂದ 100 ಸಂಖ್ಯೆಯ ಇಂಧನ ಕೇಂದ್ರಗಳಲ್ಲಿ ನಿಯೋಜಿಸಲ್ಪಡುತ್ತಾರೆ. ಸಾರಿಗೆ ಇಲಾಖೆಯು 101 ರಿಂದ 159 ಸಂಖ್ಯೆಯ ಇಂಧನ ಕೇಂದ್ರಗಳಲ್ಲಿ ಮತ್ತು 59 ಎಮ್‌ಸಿಡಿ ತಂಡಗಳು ವಿವಿಧ ಇಂಧನ ಮಳಿಗೆಗಳಲ್ಲಿಯೂ ಇರುತ್ತವೆ. ಇದನ್ನೂ ಓದಿ: ಎತ್ತಿನಭುಜ ಚಾರಣಕ್ಕೆ ಪ್ರವಾಸಿಗರಿಗೆ ಬ್ರೇಕ್ – ಇಂದಿನಿಂದ 1 ತಿಂಗಳು ಸಂಪೂರ್ಣ ಬಂದ್

    ಸಂಚಾರ ಸಿಬ್ಬಂದಿಗೆ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಥವಾ ಅವಧಿ ಮುಗಿದ ವಾಹನದ ಮಾಲೀಕರಿಗೆ ಚಲನ್ ನೀಡುವ ಅಧಿಕಾರವಿರುತ್ತದೆ. ಇದಲ್ಲದೆ, ಜಾರಿ ಕಾರ್ಯಾಚರಣೆಯ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪ್ರತಿ ಪೆಟ್ರೋಲ್ ಪಂಪ್‌ನಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ದೆಹಲಿಯಾದ್ಯಂತ ಇಂಧನ ಕೇಂದ್ರಗಳಲ್ಲಿ ಸ್ವಯಂಚಾಲಿತ ಕ್ಯಾಮೆರಾ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದ್ದು, ಇಂಧನ ಕೇಂದ್ರದ ಆವರಣಕ್ಕೆ ಪ್ರವೇಶಿಸುವ ಎಲ್ಲಾ ವಾಹನಗಳ ನೋಂದಣಿ ವಿವರಗಳನ್ನು ಸೆರೆಹಿಡಿಯಲಿದೆ. ಇದನ್ನೂ ಓದಿ: ಬಾಸ್ ಜೊತೆ ಅಕ್ರಮ ಸಂಬಂಧದ ಶಂಕೆ – ಲಿವ್ ಇನ್ ಗೆಳತಿಯ ಹತ್ಯೆಗೈದು ಶವದೊಂದಿಗೆ ಮಲಗಿದ್ದ 2 ಮಕ್ಕಳ ತಂದೆ

  • ಪಾಕ್‌ ತತ್ತರ – ಇಸ್ಲಾಮಾಬಾದ್‌ನಲ್ಲಿ 48 ಗಂಟೆಗಳವರೆಗೆ ಪೆಟ್ರೋಲ್ ಪಂಪ್‌ಗಳು ಬಂದ್‌

    ಪಾಕ್‌ ತತ್ತರ – ಇಸ್ಲಾಮಾಬಾದ್‌ನಲ್ಲಿ 48 ಗಂಟೆಗಳವರೆಗೆ ಪೆಟ್ರೋಲ್ ಪಂಪ್‌ಗಳು ಬಂದ್‌

    ಇಸ್ಲಾಮಾಬಾದ್‌: ಭಾರತದ ದಾಳಿಯಿಂದ (India’s Strike) ದಿವಾಳಿಯತ್ತ ಸಾಗುತ್ತಿರುವ ಪಾಕಿಸ್ತಾನದಲ್ಲೀಗ ( ಇಂಧನ ಕೊರತೆ ಎದುರಾಗಿದೆ. ರಾಜಧಾನಿ ಇಸ್ಲಾಮಾಬಾದ್‌ ಆಡಳಿತ ಮುಂದಿನ 48 ಗಂಟೆಗಳ ಕಾಲ ಎಲ್ಲಾ ಪೆಟ್ರೋಲ್‌ ಪಂಪ್‌ಗಳನ್ನು ಸಂಪೂರ್ಣವಾಗಿ ಬಂದ್‌ (Petrol Pumps Shut) ಮಾಡುವಂತೆ ಆದೇಶ ಹೊರಡಿಸಿದೆ.

    ಇಸ್ಲಾಮಾಬಾದ್‌ (Islamabad) ಆಡಳಿತ ಹೊರಡಿಸಿದ ಅಧಿಕೃತ ಸೂಚನೆಯಲ್ಲಿ ನಿಖರ ಕಾರಣ ಉಲ್ಲೇಖಿಸದೇ, ಎಲ್ಲಾ ಪೆಟ್ರೋಲ್‌ ಪಂಪ್‌ಗಳನ್ನು ಕೂಡಲೇ ಮುಚ್ಚಬೇಕೆಂದು ಕಟ್ಟಾಜ್ಞೆ ಮಾಡಿದೆ. ಈ ಆದೇಶ ಶನಿವಾರ ಮುಂಜಾನೆ ಹೊರಡಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ ಎಂದು ಪಾಕ್‌ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಶಕ್ತಿಶಾಲಿ ಅಸ್ತ್ರಗಳಿಂದಲೇ ಪಾಕ್‌ಗೆ ಶತಕೋಟಿ ಲಾಸ್‌ – ದಿವಾಳಿಯತ್ತ ʻಭಿಕಾರಿಸ್ತಾನʼ

    ಇದರಿಂದ 48 ಗಂಟೆ ವರೆಗೆ ಇಸ್ಲಾಮಾಬಾದ್‌ನಲ್ಲಿ ಖಾಸಗಿ ವಾಹನಗಳು, ಸಾರ್ವಜನಿಕ ಸಾರಿಗೆ ಹಾಗೂ ವಾಣಿಜ್ಯ ವಾಹನಗಳಿಗೆ ಇಂಧನ ಲಭ್ಯವಾಗದೇ ಎಲ್ಲಾ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದೆ. ಜೊತೆಗೆ ಈ ಬೆಳವಣಿಗೆ ಪಾಕ್‌ ಸರ್ಕಾರಕ್ಕೆ ಭಾರೀ ನಷ್ಟ ತಂದೊಡ್ಡುತ್ತಿದೆ ಎಂದು ವರದಿಗಳು ಉಲ್ಲೇಖಿಸಿವೆ. ಇದನ್ನೂ ಓದಿ: ದೆಹಲಿಗೆ ಬರುತ್ತಿದ್ದ ಪಾಕ್‌ ಬ್ಯಾಲಿಸ್ಟಿಕ್‌ ಮಿಸೈಲ್‌ ಹರ್ಯಾಣದಲ್ಲೇ ಛಿದ್ರ!

    ಭಾರತದ ʻಆಪರೇಷನ್‌ ಸಿಂಧೂರʼ (Operation Sindoor) ಎಫೆಕ್ಟ್‌ ಪಾಕಿಸ್ತಾನದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಭಾರತ ನಡೆಸಿದ ವಾಯುದಾಳಿಗೆ ಪತರುಗುಟ್ಟಿಹೋಗಿರುವ ಪಾಕ್‌ ತಾನು ನಂಬಿದ್ದ ಶಕ್ತಿಶಾಲಿ ಅಸ್ತ್ರಗಳಿಂದಲೇ ಶತಕೋಟಿ ನಷ್ಟ ಅನುಭವಿಸಿದೆ. ಇದರಿಂದ ಪಾಕಿಸ್ತಾನದ ಆರ್ಥಿಕ ಸ್ಥಿತಿ ಈಗಾಗಲೇ ಅಧೋಗತಿ ತಲುಪಿದ್ದು, ದಿವಾಳಿಯ ಆಗುವ ಹಂತಕ್ಕೆ ತಲುಪಿದೆ. ಇದನ್ನೂ ಓದಿ: ವಾಯುನೆಲೆಯ ಮೇಲೆ ಭಾರತ ದಾಳಿ – ಇಸ್ಲಾಮಾಬಾದ್‌, ರಾವಲ್ಪಿಂಡಿಯಲ್ಲಿ ಅಲ್ಲೋಲ ಕಲ್ಲೋಲ

    ಭಾರತದ ವಿರುದ್ಧದ ಹೋರಾಟಕ್ಕೂ ಭಿಕ್ಷೆ ಬೇಡುವ ಪರಿಸ್ಥಿತಿಗೆ ತಲುಪಿದೆ. ಭಾರತದ ದಾಳಿಯಿಂದ ತನಗೆ ಭಾರೀ ನಷ್ಟವಾಗವಾಗಿದ್ದು ಸಾಲ ನೀಡುವಂತೆ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಬೇಡಿಕೆ ಇಟ್ಟಿದೆ. ಪಾಕಿಸ್ತಾನದ ಆರ್ಥಿಕ ಇಲಾಖೆಯ ಆರ್ಥಿಕ ವ್ಯವಹಾರಗಳ ವಿಭಾಗದ ಸಾಮಾಜಿಕ ಜಾಲತಾಣ ʻxʼ ಖಾತೆಯಲ್ಲಿ ಸಾಲಕ್ಕಾಗಿ ಅಧಿಕೃತ ಮನವಿ ಮಾಡಿಕೊಂಡಿದೆ. ಇದು ವಿಶ್ವಮಟ್ಟದಲ್ಲಿ ಟೀಕೆಗೆ ಒಳಗಾಗುತ್ತಿದ್ದಂತೆ ವರಸೆ ಬದಲಿಸಿದ ಪಾಕ್‌ ʻತನ್ನ ಎಕ್ಸ್‌ ಖಾತೆ ಹ್ಯಾಕ್‌ ಆಗಿದೆʼ ಎಂದು ಹೇಳಿಕೊಂಡಿದೆ. ಇದಾದ ಬಳಿಕ ಭಾರತದ ಆಕ್ಷೇಪದ ನಡುವೆಯೂ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) 2 ಕಂತುಗಳಲ್ಲಿ 19 ಸಾವಿರ ಕೋಟಿ ಸಾಲ ಮಂಜೂರು ಮಾಡಿದೆ.

  • ಪೆಟ್ರೋಲ್ ಬೇಕಿಲ್ಲ – ಬಿಯರ್ ಹಾಕಿದ್ರೆ ಓಡುತ್ತೆ ಈ ಬೈಕ್!

    ಪೆಟ್ರೋಲ್ ಬೇಕಿಲ್ಲ – ಬಿಯರ್ ಹಾಕಿದ್ರೆ ಓಡುತ್ತೆ ಈ ಬೈಕ್!

    ವಾಷಿಂಗ್ಟನ್: ಇಂಧನದ ಕೊರತೆ ಒಂದು ದೊಡ್ಡ ಸಮಸ್ಯೆ ಎನಿಸಿಕೊಂಡರೂ ದಿನೇ ದಿನೇ ಮಾನವನ ಹೊಸ ಹೊಸ ಆವಿಷ್ಕಾರ ಒಂದಷ್ಟು ಸಮಸ್ಯೆಗಳಿಗೆ ಪರಿಹಾರವನ್ನೂ ತಂದುಕೊಡುತ್ತಿದೆ. ಇಲ್ಲೊಬ್ಬ ವ್ಯಕ್ತಿ ಇಂಧನದ ಬದಲು ಬಿಯರ್‌ನಿಂದ (Beer) ಓಡುವ ಬೈಕ್ (Motorcycle) ಅನ್ನು ಕಂಡುಹಿಡಿದು ಅಚ್ಚರಿ ಮೂಡಿಸಿದ್ದಾರೆ.

    ಅಮೆರಿಕದ ಮೈಕೆಲ್ಸನ್ ಎಂಬ ವ್ಯಕ್ತಿ ಇಂತಹದ್ದೊಂದು ವಿಶೇಷ ಬೈಕ್ (Bike) ಅನ್ನು ಕಂಡುಹಿಡಿದಿದ್ದಾರೆ. ಈ ಬೈಕ್‌ಗೆ ಪೆಟ್ರೋಲ್ ಬೇಕಿಲ್ಲ. ಬದಲಿಗೆ ಇದು ಬಿಯರ್‌ನಿಂದ ಚಲಿಸುತ್ತದೆ. ಯಾವುದೇ ಇಂಧನ ಚಾಲಿತ ವಾಹನಗಳಿಗೆ ಕಮ್ಮಿ ಇಲ್ಲ ಎಂಬಂತೆ ಈ ಬೈಕ್ ಗಂಟೆಗೆ 240 ಕಿ.ಮೀ ವೇಗದಲ್ಲಿ ಚಲಿಸುತ್ತದೆ ಎಂದು ಮೈಕೆಲ್ಸನ್ ತಿಳಿಸಿದ್ದಾರೆ.

    ಈ ಬೈಕ್‌ಗೆ ಅನಿಲ ಚಾಲಿತ ಎಂಜಿನ್ ಬದಲು ಹೀಟಿಂಗ್ ಕಾಯಿಲ್ ಅನ್ನು ಬಳಸಲಾಗಿದೆ. ಈ ಕಾಯಿಲ್ ಬಿಯರ್ ಅನ್ನು 300 ಡಿಗ್ರಿಗಳ ವರೆಗೆ ಬಿಸಿ ಮಾಡಿ ಬೈಕ್ ಮುಂದೆ ಚಲಿಸುವಂತೆ ಮಾಡುತ್ತದೆ ಎನ್ನಲಾಗಿದೆ. ಇದನ್ನೂ ಓದಿ: 1,000 ಬಾಯ್‍ಫ್ರೆಂಡ್‍ಗಳ ಜೊತೆ ಡೇಟಿಂಗ್ – 1 ಗಂಟೆ ಡೇಟ್‍ಗೆ ಈಕೆಗೆ ಕೊಡ್ಬೇಕು 5 ಸಾವಿರ!

    ಮೈಕೆಲ್ಸನ್ ಈ ಬೈಕ್ ಅನ್ನು ಬ್ಲೂಮಿಂಗ್ಟನ್‌ನಲ್ಲಿರುವ ತನ್ನ ಗ್ಯಾರೇಜ್‌ನಲ್ಲಿ ನಿರ್ಮಿಸಿದ್ದಾರೆ. ಅತ್ತ ಇಂಧನದ ಬೆಲೆ ಏರಿಕೆಯಾಗುತ್ತಿದೆ. ನಾನು ಮದ್ಯಪಾನ ಮಾಡಲ್ಲ. ಹೀಗಾಗಿ ಬೈಕ್ ಚಲಿಸುವಂತೆ ಮಾಡಲು ಇಂಧನದ ಬದಲು ಬಿಯರ್ ಅನ್ನು ಬಳಸಿದರೆ ಹೇಗೆ ಎಂದು ನಾನು ಯೋಚಿಸಿದ್ದೆ ಎಂದು ಮೈಕೆಲ್ಸನ್ ಹೇಳಿದ್ದಾರೆ.

    ಮೈಕೆಲ್ಸನ್ ತಯಾರಿಸಿರುವ ಬಿಯರ್ ಚಾಲಿತ ಬೈಕ್ ಇನ್ನೂ ರಸ್ತೆಗೆ ಇಳಿದಿಲ್ಲ. ಆದರೆ ಇದು ಸ್ಥಳೀಯ ಪ್ರದರ್ಶನವೊಂದರಲ್ಲಿ ಮೊದಲ ಸ್ಥಾನವನ್ನು ಗಳಿಸಿದೆ. ಈ ಬೈಕ್‌ನ ಸಾಮರ್ಥ್ಯ ಪರೀಕ್ಷೆಯ ಬಳಿಕ ದೊಡ್ಡ ಮಟ್ಟದಲ್ಲಿ ಪ್ರದರ್ಶನಕ್ಕೆ ಕೊಂಡೊಯ್ಯುವ ಆಶಯವನ್ನು ಮೈಕೆಲ್ಸನ್ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತಿಂಗಳಿಗೆ ಪಡೆಯುತ್ತಿದ್ದ ಸಂಬಳ 30,000 ರೂ.; ರೇಡ್‌ ಮಾಡಿದ ಪೊಲೀಸರಿಗೆ ಸಿಕ್ತು 10 ಕಾರು, 50 ವಿದೇಶಿ ನಾಯಿ, 30 ಲಕ್ಷ ರೂ. ಟಿವಿ!

  • ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ 108 ಅಂಬುಲೆನ್ಸ್‌ನಲ್ಲಿ ಡೀಸೆಲ್‌ ಖಾಲಿ – ದಾರಿ ಮಧ್ಯೆ ಅಸುನೀಗಿದ ಬಡ ಜೀವ

    ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ 108 ಅಂಬುಲೆನ್ಸ್‌ನಲ್ಲಿ ಡೀಸೆಲ್‌ ಖಾಲಿ – ದಾರಿ ಮಧ್ಯೆ ಅಸುನೀಗಿದ ಬಡ ಜೀವ

    ಜೈಪುರ: ರೋಗಿಯನ್ನು (Patient)  ಆಸ್ಪತ್ರೆಗೆ (Hospital) ಕರೆದೊಯ್ಯುತ್ತಿದ್ದ ವೇಳೆ ಸರ್ಕಾರದ 108 ಅಂಬುಲೆನ್ಸ್‌ನಲ್ಲಿ (108 Ambulance) ಇಂಧನ (Fuel) ಖಾಲಿಯಾಗಿ ದಾರಿ ಮಧ್ಯೆ ರೋಗಿ ಮೃತಪಟ್ಟ ಘಟನೆ ರಾಜಸ್ಥಾನದ (Rajasthan) ಬಾನಸ್‌ವಾರದಲ್ಲಿ ನಡೆದಿದೆ.

    ಬಾನಸ್‌ವಾರ ಜಿಲ್ಲೆಯ ದಾನಪುರ್‌ನಲ್ಲಿ ರೋಗಿಯೊಬ್ಬರು ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದರು. ಈ ವೇಳೆ ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗಲು 108ಕ್ಕೆ ಕರೆ ಮಾಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ 108 ರೋಗಿಯನ್ನು ಕರೆದುಕೊಂಡು ಹೊರಟಿದ್ದು, ನಂತರ ದಾರಿ ಮಧ್ಯೆ ಡೀಸೆಲ್ ಖಾಲಿಯಾಗಿ ನಿಂತಿದೆ. ತಕ್ಷಣ ರೋಗಿಯ ಸಂಬಂಧಿಕರು ಅಂಬುಲೆನ್ಸ್ ಅನ್ನು ತಳ್ಳಿಕೊಂಡು ಹೊರಟಿದ್ದಾರೆ. ಈ ಮಧ್ಯೆ ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದ ರೋಗಿ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದಕ್ಕೆ ಜನ ನನ್ನ ಸೋಲಿಸಿಬಿಟ್ರು: ಎಂಟಿಬಿ ನಾಗರಾಜ್

    ಇದೀಗ ಡೀಸೆಲ್ ಖಾಲಿಯಾಗಿ ಸಾರ್ವಜನಿಕರು ತಳ್ಳಿಕೊಂಡು ಹೋಗುತ್ತಿರುವ 108 ಅಂಬುಲೆನ್ಸ್‌ನ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಘಟನೆ ಕುರಿತಾಗಿ ಆರೋಗ್ಯ ಅಧಿಕಾರಿ ಜೊತೆ ಕೇಳಿದಾಗ, ಘಟನೆಯ ಬಗ್ಗೆ ನಮಗೆ ತಿಳಿದುಬಂದಿದ್ದು, ವಿಚಾರಣೆ ಆರಂಭಿಸಿದ್ದೇವೆ. ನಾವು ಮೃತಪಟ್ಟ ರೋಗಿಯ ಸಂಬಂಧಿಕರನ್ನು ಭೇಟಿ ಮಾಡುತ್ತೇವೆ. 108 ಅಂಬುಲೆನ್ಸ್ ಅನ್ನು ಖಾಸಗಿ ಏಜೆನ್ಸಿ ನಡೆಸುತ್ತಿದೆ. ಅಂಬುಲೆನ್ಸ್‌ಗಳ ನಿರ್ವಹಣೆಯ ಜವಾಬ್ದಾರಿ ಅವರ ಮೇಲಿದೆ ನಮ್ಮ ಕೈಯಲ್ಲಿ ಏನು ಇಲ್ಲ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಜ್ಯೋತಿಷಿ ಮಾತು ಕೇಳಿ ರೈತನೊಬ್ಬ ನಾಲಿಗೆಗೆ ಹಾವಿನಿಂದ ಕಚ್ಚಿಸಿಕೊಂಡ

    Live Tv
    [brid partner=56869869 player=32851 video=960834 autoplay=true]

  • ಭಾರತಕ್ಕೆ ನೀಡಿದ ದರದಲ್ಲೇ ರಷ್ಯಾದಿಂದ ಇಂಧನ ಖರೀದಿಗೆ ಪಾಕ್‌ ಸಿದ್ಧ – ಹಣಕಾಸು ಸಚಿವ

    ಭಾರತಕ್ಕೆ ನೀಡಿದ ದರದಲ್ಲೇ ರಷ್ಯಾದಿಂದ ಇಂಧನ ಖರೀದಿಗೆ ಪಾಕ್‌ ಸಿದ್ಧ – ಹಣಕಾಸು ಸಚಿವ

    ವಾಷಿಂಗ್ಟನ್‌: ನೆರೆಯ ಭಾರತಕ್ಕೆ (India) ಒದಗಿಸುವ ದರದಲ್ಲಿ ರಷ್ಯಾದಿಂದ (Russia) ಇಂಧನವನ್ನು (Fuel) ಖರೀದಿಸಲು ತಮ್ಮ ದೇಶ ಸಿದ್ಧವಾಗಿದೆ ಎಂದು ಪಾಕಿಸ್ತಾನದ (Pakistan) ಹಣಕಾಸು ಸಚಿವ ಇಶಾಕ್ ದಾರ್ (Ishaq Dar) ಹೇಳಿದ್ದಾರೆ.

    ದೇಶದ ನೂತನ ಹಣಕಾಸು ಸಚಿವರಾಗಿರುವ ಇಶಾಕ್ ದಾರ್ ಅವರು ಅಮೆರಿಕಗೆ ಅಧಿಕೃತ ಭೇಟಿಯ ಸಂದರ್ಭದಲ್ಲಿ ಈ ಹೇಳಿಕೆಗಳನ್ನು ನೀಡಿದ್ದಾರೆ. ಪಾಕಿಸ್ತಾನದಲ್ಲಿ ವಿನಾಶಕಾರಿ ಪ್ರವಾಹದಿಂದ ಸಂಕಷ್ಟ ಎದುರಾಗಿದ್ದರೂ ಪಾಶ್ಚಿಮಾತ್ಯ ದೇಶಗಳಿಂದ ರಿಯಾಯಿತಿ ದರದಲ್ಲಿ ಇಂಧನ ಆಮದು ಮಾಡಿಕೊಳ್ಳಲು ಯಾವುದೇ ತೊಂದರೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಲ್ತುಳಿತಕ್ಕೆ 130 ಮಂದಿಯ ಸಾವಾಗಿದ್ದ ಇಂಡೋನೇಷ್ಯಾದ ಸ್ಟೇಡಿಯಂ ನೆಲೆಸಮಕ್ಕೆ ನಿರ್ಧಾರ

    ನಾನು ವಾಷಿಂಗ್ಟನ್‌ನಲ್ಲಿ 4 ದಿನಗಳ ವಾಸ್ತವ್ಯದ ಅವಧಿಯಲ್ಲಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಮುಖ್ಯಸ್ಥರು, ಯುಎಸ್, ಸೌದಿ ಅರೇಬಿಯಾ ಮತ್ತು ಇತರ ದೇಶಗಳ ಅಧಿಕಾರಿಗಳೊಂದಿಗೆ 58 ಸಭೆಗಳನ್ನು ನಡೆಸಿದ್ದೇನೆ ಇಶಾಕ್‌ ಮಾಹಿತಿ ನೀಡಿದ್ದಾರೆ.

    ಪಾಕಿಸ್ತಾನದಲ್ಲಿನ ಪ್ರವಾಹದ ಕುರಿತು ಚರ್ಚಿಸಲು ಆಯೋಜಿಸಲಾದ ದುಂಡುಮೇಜಿನ ಸಮ್ಮೇಳನದಲ್ಲಿ, ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಮತ್ತು ವಿಶ್ವಬ್ಯಾಂಕ್ ಅಧಿಕಾರಿಗಳು ಜಂಟಿ ವರದಿಯನ್ನು ಅಲ್ಲಿ ಮಂಡಿಸಿದರು ಎಂದು ಪಾಕಿಸ್ತಾನದ ಹಣಕಾಸು ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ಮತ್ತೆ ಡೆಡ್ಲಿ ಡ್ರೋನ್ ದಾಳಿ – ಉಕ್ರೇನ್‌ನಲ್ಲಿ ಅಲ್ಲೋಲ ಕಲ್ಲೋಲ

    ಪ್ರವಾಹದಿಂದಾಗಿ ಪಾಕಿಸ್ತಾನವು 32.40 ಶತಕೋಟಿ ಡಾಲರ್‌ ನಷ್ಟ ಅನುಭವಿಸಿದೆ. 16 ಶತಕೋಟಿ ಡಾಲರ್‌ಗೂ ಹೆಚ್ಚು ಹಣ ಪುನರ್ವಸತಿ ಕಾರ್ಯಕ್ಕೆ ಪಾಕಿಸ್ತಾನಕ್ಕೆ ಅಗತ್ಯವಿದೆ ಎಂದು ಸಚಿವರು ಇದೇ ವೇಳೆ ಉಲ್ಲೇಖಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇಂಧನಕ್ಕಾಗಿ ತಿರುವನಂತಪುರಂನಲ್ಲಿ ಶ್ರೀಲಂಕಾದ 4 ವಿಮಾನಗಳು ಲ್ಯಾಂಡಿಂಗ್

    ಇಂಧನಕ್ಕಾಗಿ ತಿರುವನಂತಪುರಂನಲ್ಲಿ ಶ್ರೀಲಂಕಾದ 4 ವಿಮಾನಗಳು ಲ್ಯಾಂಡಿಂಗ್

    ತಿರುವನಂತಪುರಂ: ಇಂಧನ ತುಂಬಿಸಿಕೊಳ್ಳಲು ಶ್ರೀಲಂಕಾದಿಂದ ಬಂದ ನಾಲ್ಕು ಅಂತರಾಷ್ಟ್ರೀಯ ವಿಮಾನಗಳು ಶನಿವಾರ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಿದೆ.

    ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾ ತೀವ್ರ ಇಂಧನ ಕೊರತೆ ಸಮಸ್ಯೆಯನ್ನು ಕೂಡ ಎದುರಿಸುತ್ತಿದೆ. ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ತಲುಪಿದ ಒಟ್ಟು 208 ವಿಮಾನಗಳಲ್ಲಿ, ಹೆಚ್ಚಿನ ವಿಮಾನಗಳು ಶ್ರೀಲಂಕನ್ ಏರ್‌ಲೈನ್ಸ್‌ನ ವಿಮಾನಗಳಾಗಿವೆ. ಇಲ್ಲಿಯವರೆಗೆ ಇಂಧನ ತುಂಬಿಸಿಕೊಳ್ಳುವುದಕ್ಕಾಗಿ ಶ್ರೀಲಂಕಾ ಏರ್‌ಲೈನ್ಸ್‌ನ 130 ವಿಮಾನಗಳು ತಿರುವನಂತಪುರದಲ್ಲಿ ನಿಲ್ಲಿಸಿದೆ. ಇದನ್ನೂ ಓದಿ: ಟೊಮೆಟೋ ಜ್ವರ ಎಂದರೇನು? ರೋಗಲಕ್ಷಣ ಹಾಗೂ ಚಿಕಿತ್ಸೆ ಹೇಗೆ?

    ಇತರ ವಿಮಾನಯಾನ ಸಂಸ್ಥೆಗಳ ವಿಮಾನಗಳು ದುಬೈ, ಓಮನ್ ಏರ್, ಗಲ್ಫ್ ಏರ್, ಏರ್ ಅರೇಬಿಯಾ, ಎಮಿರೇಟ್ಸ್ ಮತ್ತು ಫಿಟ್ಸ್ ವಾಯೇಜ್ ಹೀಗೆ ವಿವಿಧ ಸ್ಥಳಗಳಿಗೆ ಹಾರಾಟ ನಡೆಸುತ್ತದೆ. ವಿಮಾನ ನಿಲ್ದಾಣದಲ್ಲಿ ವಿಮಾನಗಳು ಲ್ಯಾಂಡಿಂಗ್ ಆಗುವುದರಿಂದ ಸುಮಾರು 1.5 ಕೋಟಿ ರೂಪಾಯಿ ತೆರಿಗೆಯನ್ನು ಗಳಿಸಲು ಸಹಾಯಕರವಾಗಿದೆ. ಇದು ಇಂಧನ ತುಂಬುವ ಆದಾಯವನ್ನು ಹೊರತುಪಡಿ ಬರುವ ಹಣವಾಗಿದೆ.

    ಮೇ 27 ರಿಂದ ಶ್ರೀಲಂಕಾದ ವಿಮಾನಗಳು ತಿರುವನಂತಪುರಂ ವಿಮಾನನಿಲ್ದಾಣದಿಂದ ಇಂಧನ ತುಂಬಿಸಿಕೊಳ್ಳು ಪ್ರಾರಂಭಿಸಿವೆ. ಅಂದಿನಿಂದ ರಾಷ್ಟ್ರದಲ್ಲಿ ಇಂಧನ ಕೊರತೆ ನಿಯಂತ್ರಣ ಮೀರಿದೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್‌ಗೆ ಜೀವ ಬೆದರಿಕೆ- ಶಿರಚ್ಛೇದನ ಮಾಡುವುದಾಗಿ ಫೇಸ್‍ಬುಕ್‍ನಲ್ಲಿ ಪೋಸ್ಟ್

    Live Tv
    [brid partner=56869869 player=32851 video=960834 autoplay=true]

  • ಶ್ರೀಲಂಕಾದಲ್ಲಿ 50 ಪೆಟ್ರೋಲ್‌ ಬಂಕ್‌ ತೆರೆಯಲಿದೆ ಐಒಸಿ

    ಶ್ರೀಲಂಕಾದಲ್ಲಿ 50 ಪೆಟ್ರೋಲ್‌ ಬಂಕ್‌ ತೆರೆಯಲಿದೆ ಐಒಸಿ

    ಕೊಲಂಬೋ: ದೇಶದಲ್ಲಿ 50 ಬಂಕ್‌ಗಳನ್ನು ತೆರೆಯಲು ಇಂಡಿಯನ್‌ ಆಯಿಲ್‌ ಕಂಪನಿಗೆ  ಶ್ರೀಲಂಕಾ ಸರ್ಕಾರ ಅನುಮತಿ ನೀಡಿದೆ.

    ಇಂಧನ ಸಮಸ್ಯೆಯನ್ನು ಪರಿಹರಿಸಲು ಲಂಕಾ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ಗೆ (LIOC) 50 ಹೊಸ ಇಂಧನ ಕೇಂದ್ರಗಳನ್ನು ತೆರೆಯಲು ಶ್ರೀಲಂಕಾ ಅನುಮೋದನೆ ನೀಡಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ಸೋಮವಾರ ಹೇಳಿದ್ದಾರೆ.

    LIOC ಭಾರತದ ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ಅಂಗ ಸಂಸ್ಥೆಯಾಗಿದೆ ಮತ್ತು ಕೊಲಂಬೋ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಲಿಸ್ಟ್‌ ಮಾಡಲಾಗಿದೆ.

    ಶ್ರೀಲಂಕಾದ ಅತಿ ದೊಡ್ಡ ಸರ್ಕಾರಿ ನಿಯಂತ್ರಣದಲ್ಲಿರುವ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ (CPC) ದೇಶದಲ್ಲಿ ಸುಮಾರು 1,190 ಇಂಧನ ಕೇಂದ್ರಗಳನ್ನು ನಿರ್ವಹಿಸುತ್ತದೆ.  ಇದನ್ನೂ ಓದಿ: ಸಿಬಲ್‌ ವಿರುದ್ದ ನ್ಯಾಯಾಂಗ ನಿಂದನೆ ಕೇಸ್‌: ಅಟಾರ್ನಿ ಜನರಲ್‌ಗೆ ಮನವಿ

    ಎಲ್‌ಐಒಸಿ ಶ್ರೀಲಂಕಾದಲ್ಲಿರುವ ಸಣ್ಣ ಕಂಪನಿಯಾಗಿದ್ದು 216 ಇಂಧನ ಕೇಂದ್ರಗಳನ್ನು ಹೊಂದಿದೆ. ಮುಂದೆ 2 ಶತಕೋಟಿ ರೂ. ಬಂಡವಾಳವನ್ನು ಹೂಡಲಿದೆ ಎಂದು ಕಂಪನಿಯ ನಿರ್ದೇಶಕ ಮನೋಜ್‌ ಗುಪ್ತಾ ಹೇಳಿದ್ದಾರೆ. ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾದ ಬಳಿಕ ಸಿಪಿಸಿಗೆ ಎಲ್‌ಐಒಸಿ ಇಂಧನವನ್ನು ಸರಬರಾಜು ಮಾಡಿತ್ತು.

    ಇಂಧನ, ಆಹಾರ, ರಸಗೊಬ್ಬರ ಖರೀದಿ ಸಂಬಂಧ ಭಾರತ ಶ್ರೀಲಂಕಾಗೆ  ಈ ವರ್ಷ  ಒಟ್ಟು 4 ಶತಕೋಟಿ ಡಾಲರ್‌ ಹಣವನ್ನು ನೀಡಿದೆ. ಆರ್ಥಿಕ ಸಮಸ್ಯೆಯಿಂದ ಪಾರಾಗಲು 3 ಶತಕೋಟಿ ಡಾಲರ್‌ ಪ್ಯಾಕೇಜ್‌ ನೀಡುವಂತೆ ಅಂತರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌) ಬಳಿ ಶ್ರೀಲಂಕಾ ಮನವಿ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ದ್ವೀಪರಾಷ್ಟ್ರದಲ್ಲಿ ಇಂಧನ ಬಿಕ್ಕಟ್ಟು- ಶಾಲೆಗಳಿಗೆ ರಜೆ ಘೋಷಣೆ

    ದ್ವೀಪರಾಷ್ಟ್ರದಲ್ಲಿ ಇಂಧನ ಬಿಕ್ಕಟ್ಟು- ಶಾಲೆಗಳಿಗೆ ರಜೆ ಘೋಷಣೆ

    ಕೊಲೊಂಬೊ: ಶ್ರೀಲಂಕಾದಲ್ಲಿ ಇಂಧನ ಬಿಕ್ಕಟ್ಟಿನಿಂದಾಗಿ ಶಿಕ್ಷಣ ಸಚಿವಾಲಯವು ಇಂದಿನಿಂದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿದೆ.

    ಈ ಬಗ್ಗೆ ಶ್ರೀಲಂಕಾ ಶಿಕ್ಷಣ ಸಚಿವರು ಮಾಹಿತಿ ನೀಡಿದ್ದು, ಮುಂದಿನ ರಜೆಯ ಅವಧಿಯಲ್ಲಿ ಶಾಲೆಯು ಪಠ್ಯಕ್ರಮವನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪ್ರಾಂಶುಪಾಲರ ಮೇಲೆ ಸಾರಿಗೆ ತೊಂದರೆಯ ಪರಿಣಾಮ ಬೀರದ ಪರಿಸ್ಥಿತಿಗಳಲ್ಲಿ ವಿಭಾಗೀಯ ಮಟ್ಟದಲ್ಲಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳೊಂದಿಗೆ ತರಗತಿಗಳನ್ನು ನಡೆಸಲು ಅನುಮತಿಸಲಾಗುವುದು ಎಂದು ಹೇಳಿದರು.

    ಕೊಲಂಬೊ ನಗರದ ಆಸುಪಾಸಿನಲ್ಲಿರುವ ಎಲ್ಲಾ ಸರ್ಕಾರಿ ಮತ್ತು ಸರ್ಕಾರಿ-ಅನುಮೋದಿತ, ಖಾಸಗಿ ಶಾಲೆಗಳಲ್ಲಿ ದೀರ್ಘಾವಧಿಯ ವಿದ್ಯುತ್ ಕಡಿತ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರದವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಲಿಬಿಯಾದಲ್ಲಿ ಸಂಸತ್ ಭವನಕ್ಕೆ ಬೆಂಕಿ

    ಇದೇ ವೇಳೆ ಮುಂದಿನ ವಾರದಲ್ಲಿ ಆನ್‍ಲೈನ್ ಬೋಧನೆಗೆ ಅನುಕೂಲವಾಗುವಂತೆ ಶ್ರೀಲಂಕಾದ ಲೋಕೋಪಯೋಗಿ ಆಯೋಗವು ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ಕಡಿತಗೊಳಿಸದಿರಲು ಒಪ್ಪಿಕೊಂಡಿದೆ ಎಂದು ಮಾಹಿತಿ ನೀಡಿದರು.

    ಈ ಹಿಂದೆಯೂ ಜೂನ್ 18ರಂದು ಶ್ರೀಲಂಕಾ ಸರ್ಕಾರವು ಎಲ್ಲಾ ಶಾಲೆಗಳನ್ನು ಒಂದು ವಾರಗಳ ಕಾಲ ಬಂದ್ ಮಾಡುವುದಾಗಿ ಘೋಷಿಸಿತ್ತು. ಇದನ್ನೂ ಓದಿ: ಮಹಾ ಬಿಕ್ಕಟ್ಟಿಗೆ ಇಂದು ಕ್ಲೈಮ್ಯಾಕ್ಸ್‌ – ಶಿಂಧೆಗೆ ಇಂದು ವಿಶ್ವಾಸ ಪರೀಕ್ಷೆ

    Live Tv
    [brid partner=56869869 player=32851 video=960834 autoplay=true]

  • ವಿದ್ಯುತ್ ದರ ಹೆಚ್ಚಳ ಇಲ್ಲ: ಸುನಿಲ್ ಕುಮಾರ್ ಸ್ಪಷ್ಟನೆ

    ವಿದ್ಯುತ್ ದರ ಹೆಚ್ಚಳ ಇಲ್ಲ: ಸುನಿಲ್ ಕುಮಾರ್ ಸ್ಪಷ್ಟನೆ

    ಬೆಂಗಳೂರು: ವಿದ್ಯುತ್ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಯಾವುದೇ ಸೂಚನೆ ನೀಡಿಲ್ಲ. ಕಲ್ಲಿದ್ದಲು ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಮಾರುಕಟ್ಟೆ ದರ ಆಧಾರಿತ ಹೊಂದಾಣಿಕೆ ವೆಚ್ಚದಲ್ಲಿ ಮಾತ್ರ ವ್ಯತ್ಯಾಸವಾಗಿದೆ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

    ವಿದ್ಯುತ್ ದರ ಪರಿಷ್ಕರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ ಎಂಬ ಬಗ್ಗೆ ಕೆಲವೆಡೆ ತಪ್ಪು ಸಂದೇಶ ರವಾನೆಯಾಗಿದೆ. ಆದರೆ ರಾಜ್ಯ ಸರ್ಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾಪವಿಲ್ಲ. ವಿದ್ಯುತ್ ದರವನ್ನು ವರ್ಷದಲ್ಲಿ ಒಮ್ಮೆ ಮಾತ್ರ ಪರಿಷ್ಕರಿಸುವ ವಾಡಿಕೆಯಿದೆ. ಹೀಗಾಗಿ ದರ ಹೆಚ್ಚಳದ ವದಂತಿ ಬಗ್ಗೆ ಸಾರ್ವಜನಿಕರು ಆತಂಕಗೊಳ್ಳಬೇಕಾದ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮತ್ತೆ ಮಹದಾಯಿ ಹೋರಾಟಕ್ಕೆ ನಾಂದಿ – ರಾಜ್ಯ ಸರ್ಕಾರಕ್ಕೆ ಕಾನೂನಾಸ್ತ್ರದ ಬಿಸಿ ಮುಟ್ಟಿಸಿದ ರೈತರು

    ರಾಜ್ಯದಲ್ಲಿ 13 ಉಷ್ಣ ವಿದ್ಯುತ್ ಸ್ಥಾವರಗಳಿವೆ. ಇವುಗಳ ಕಾರ್ಯ ನಿರ್ವಹಣೆಗೆ ಅಗತ್ಯವಾದ ಕಲ್ಲಿದ್ದಲು ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಅಗತ್ಯವಿರುತ್ತದೆ. ಇವುಗಳ ಮಾರುಕಟ್ಟೆ ದರದ ಏರಿಳಿತ ಆಧರಿಸಿ ಎಲ್ಲಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಪ್ರತಿ 3 ತಿಂಗಳಿಗೊಮ್ಮೆ ಹೊಂದಾಣಿಕೆ ವೆಚ್ಚ ಪರಿಷ್ಕರಣೆ ನಡೆಸುವುದು ನಿರಂತರ ಪ್ರಕ್ರಿಯೆ ಆಗಿರುತ್ತದೆ. ಈ ಸಂಬಂಧ ಎಸ್ಕಾಂಗಳು ಸಲ್ಲಿಸಿದ ಹೊಂದಾಣಿಕೆ ವೆಚ್ಚ (fuel cost adjustment charges) ಪ್ರಸ್ತಾಪ ಹಿನ್ನೆಲೆಯಲ್ಲಿ ಕೆಇಆರ್‌ಸಿ ಈ ದರ ಪರಿಷ್ಕರಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪೈಥಾನ್ ಬಳಸಿ ಗುಂಡಿ ಮುಚ್ಚದ ಬಿಬಿಎಂಪಿಗೆ ಹೈಕೋರ್ಟ್ ಫುಲ್ ಕ್ಲಾಸ್

    ಹೊಂದಾಣಿಕೆ ವೆಚ್ಚ ಪರಿಷ್ಕರಣೆ ಕೆಇಆರ್‌ಸಿ ವಿವೇಚನಾಧಿಕಾರವಾಗಿದ್ದು, ಕಲ್ಲಿದ್ದಲು ದರ ಆಧರಿಸಿ ಈ ಹೊಂದಾಣಿಕೆ ವೆಚ್ಚ ಹೆಚ್ಚೂ ಆಗಬಹುದು, ಕಡಿಮೆಯೂ ಆಗಬಹುದು. ಹೀಗಾಗಿ ಈ ಪ್ರಕ್ರಿಯೆಯನ್ನು ವಾರ್ಷಿಕ ದರ ಪರಿಷ್ಕರಣೆ ಜೊತೆಗೆ ಥಳುಕು ಹಾಕುವ ಅಗತ್ಯವಿಲ್ಲ ಎಂದು ಸುನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

    Live Tv

  • ಶ್ರೀಲಂಕಾದಲ್ಲಿ ಇಂಧನ ಕೊರತೆ – ಪರಿಹಾರಕ್ಕೆ ಸೈಕಲ್ ಸೇವೆ ಅನಾವರಣ

    ಶ್ರೀಲಂಕಾದಲ್ಲಿ ಇಂಧನ ಕೊರತೆ – ಪರಿಹಾರಕ್ಕೆ ಸೈಕಲ್ ಸೇವೆ ಅನಾವರಣ

    ಕೊಲಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾ ತೀವ್ರಗತಿಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಇಂಧನ ಕೊರತೆಯೊಂದಿಗೂ ಹೋರಾಡುತ್ತಿದೆ. ಇದೀಗ ನಾಗರಿಕರಿಗೆ ಸಹಾಯ ಮಾಡಲು ಶ್ರೀಲಂಕಾದ ಮುಖ್ಯ ಬಂದರು ಪ್ರದೇಶದಲ್ಲಿ ಉಚಿತ ಬೈಸಿಕಲ್ ಸೇವೆಯನ್ನು ಅನಾವರಣಗೊಳಿಸಲಾಗಿದೆ.

    ಶ್ರೀಲಂಕಾದಲ್ಲಿ ನಗದು ಕೊರತೆಯಿರುವ ಕಾರಣ ಇತರ ದೇಶಗಳಿಂದ ತೈಲವನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣ ಇಂಧನ ಚಾಲಿತ ವಾಹನಗಳನ್ನೂ ಜನರಿಂದ ಬಳಸಲು ಸಾಧ್ಯವಾಗುತ್ತಿಲ್ಲ. ಇದೀಗ ದ್ವೀಪ ರಾಷ್ಟ್ರ ಇಂಧನದ ಅವಶ್ಯಕತೆ ಇಲ್ಲದ ಸೈಕಲ್‌ಗಳನ್ನು ಜನರಿಗೆ ಬಳಸಲು ಉತ್ತೇಜಿಸುತ್ತಿದೆ. ಇದನ್ನೂ ಓದಿ: ದೇಶದ 10 ಕೋಟಿ ರೈತರಿಗೆ ಪ್ರಧಾನಿ ಮೋದಿ ಭರ್ಜರಿ ಗಿಫ್ಟ್

    ಡಾಲರ್ ಕೊರತೆಯಿರುವ ಕಾರಣ ಶ್ರೀಲಂಕಾದಲ್ಲಿ ಇಂಧನ ಹಾಗೂ ಇತರ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲಿನ ವಾಹನ ಚಾಲಕರು ಗ್ಯಾಸ್ ಸ್ಟೇಶನ್‌ಗಳಲ್ಲಿ ಪಡಿತರ ಇಂಧನ ಪಡೆಯಲು ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲುವ ಪರಿಸ್ಥಿತಿ ಉಂಟಾಗಿದೆ. ಇದೀಗ ಶ್ರೀಲಂಕಾ ಇಂಧನವನ್ನು ಉಳಿಸುವ ಸಲುವಾಗಿ ಜನರಿಗೆ ಸೈಕಲ್ ಬಳಸಲು ಉತ್ತೇಜಿಸುತ್ತಿದೆ. ಇದನ್ನೂ ಓದಿ: ಯುರೋಪಿಯನ್ ಒಕ್ಕೂಟದ ಒಂದು ನಿರ್ಧಾರದಿಂದ ತೈಲ ಬೆಲೆ ಭಾರೀ ಏರಿಕೆ

    ಬಂದರಿನ ಕಡೆ ಬರುವ ಜನರಿಗೆ ಸದ್ಯ ಬಳಕೆಯಾಗದೇ ಇರುವ ರೈಲು ಮಾರ್ಗಗಳನ್ನು ಸೈಕಲ್ ಟ್ರ್ಯಾಕ್ ಆಗಿ ನಿರ್ಮಿಸಲಾಗಿದೆ ಎಂದು ವರದಿಯಾಗಿದೆ. ಬಂದರು, ಹಡಗು ಹಾಗೂ ಕಡಲ ತೀರದ ಜನನಿಬಿಡ ವ್ಯಾಪಾರ ಮಾರ್ಗಗಳಲ್ಲಿ ಜನರಿಗೆ ಹಾಗೂ ಮುಖ್ಯವಾಗಿ ಕಾರ್ಮಿಕರಿಗೆ ಸಾಯವಾಗುವಂತೆ 100 ಸೈಕಲ್‌ಗಳನ್ನು ಕೊಡುಗೆಯಾಗಿ ನೀಡಲಾಗಿದೆ ಎಂದು ಶ್ರೀಲಂಕಾ ಬಂದರು ಪ್ರಾಧಿಕಾರದ ಅಧ್ಯಕ್ಷ ಪ್ರಶಾಂತ್ ಜಯಮಣ್ಣ ಹೇಳಿದ್ದಾರೆ.