Tag: FSSAI

  • ಆಹಾರ ಸುರಕ್ಷತಾ ಇಲಾಖೆಯಿಂದ ರಾಜ್ಯದ 127 ಪಿಜಿಗಳಿಗೆ ನೋಟಿಸ್ – 4 ಪಿಜಿಗಳಿಗೆ ದಂಡ

    ಆಹಾರ ಸುರಕ್ಷತಾ ಇಲಾಖೆಯಿಂದ ರಾಜ್ಯದ 127 ಪಿಜಿಗಳಿಗೆ ನೋಟಿಸ್ – 4 ಪಿಜಿಗಳಿಗೆ ದಂಡ

    ಬೆಂಗಳೂರು: ಪಿಜಿಗಳಲ್ಲಿ (PG) ಆಹಾರ ಸುರಕ್ಷತೆ ಕಾಪಾಡಿಕೊಳ್ಳದ ಹಿನ್ನೆಲೆ ರಾಜ್ಯದ 127 ಪಿಜಿಗಳಿಗೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ (FSSAI) ಇಲಾಖೆ ನೋಟಿಸ್ ನೀಡಿದೆ.

    ರಾಜ್ಯದ 305 ಪಿಜಿಗಳಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 127 ಪಿಜಿಗಳಲ್ಲಿ ಆಹಾರ ಪದಾರ್ಥಗಳನ್ನು ಸಂಗ್ರಹ ಮಾಡಲಾಗಿದೆ. ಇದನ್ನೂ ಓದಿ: ಸರ್ಕಾರಿ ಶಾಲೆಗೆ ಮಂಜೂರಾದ ಜಾಗದಲ್ಲಿ ದೇಗುಲ – ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವು

    ಸಂಗ್ರಹಿಸಿದ ಆಹಾರ ಪದಾರ್ಥಗಳನ್ನು ಪರೀಕ್ಷಿಸಿದ ವೇಳೆ ಸುರಕ್ಷತೆ ಕಾಪಾಡದೇ ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆ 127 ಪಿಜಿಗಳಿಗೆ ನೋಟಿಸ್ ನೀಡಲಾಗಿದೆ. ಅದರಲ್ಲಿ ನಾಲ್ಕು ಪಿಜಿಗಳಿಗೆ ಸೇರಿ ಒಟ್ಟು 21,000 ರೂ. ದಂಡ ಹಾಕಲಾಗಿದೆ. ಇದನ್ನೂ ಓದಿ: Kolar| ಚೆಂಡು ಹೂವು ಬೆಲೆ ಕುಸಿತ – ರಸ್ತೆಬದಿ ಸುರಿದು ರೈತ ಆಕ್ರೋಶ

  • ಗಣೇಶೋತ್ಸವ: ಆಹಾರ ಪದಾರ್ಥ, ಪ್ರಸಾದ ಸೇವೆಗೆ ಕಟ್ಟೆಚ್ಚರ – FSSAI ಅನುಮತಿ ಇಲ್ಲದಿದ್ರೆ ಕ್ರಮ

    ಗಣೇಶೋತ್ಸವ: ಆಹಾರ ಪದಾರ್ಥ, ಪ್ರಸಾದ ಸೇವೆಗೆ ಕಟ್ಟೆಚ್ಚರ – FSSAI ಅನುಮತಿ ಇಲ್ಲದಿದ್ರೆ ಕ್ರಮ

    ಬೆಂಗಳೂರು: ಗಣೇಶೋತ್ಸವದ ವೇಳೆ ಆಹಾರ ಪದಾರ್ಥ ಹಾಗೂ ಪ್ರಸಾದ ಸೇವೆಯ ಮೇಲೆ ಕಟ್ಟೆಚ್ಚರವಹಿಸಲಾಗಿದ್ದು, ಎಫ್‌ಎಸ್‌ಎಸ್‌ಎಐ (Food Safety And Standards Authority Of India)ನಿಂದ ಅನುಮತಿ ಪಡೆಯದೇ ಆಹಾರ ನೀಡಿದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಎಚ್ಚರಿಸಿದೆ.

    ಗಣಪತಿ ಉತ್ಸವಕ್ಕೆ ಮೂರೇ ದಿನ ಬಾಕಿ ಇರುವಾಗ, ಗಣಪತಿ ಉತ್ಸವದ ಆಯೋಜಕರಿಗೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯಿಂದ (FSSAI) ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂದು ಸೂಚಿಸಿದೆ.ಇದನ್ನೂ ಓದಿ: ನಿಮ್ಮನ್ನು ತಾಯಿಯಾಗಿ ಪಡೆದಿರುವುದು ನನ್ನ ಪುಣ್ಯ- ಜೈಲಿನಲ್ಲಿರುವ ಪವಿತ್ರಾರನ್ನು ನೆನೆದು ಮಗಳು ಭಾವುಕ ಪೋಸ್ಟ್

    ಈ ಬಗ್ಗೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯು ಬಿಬಿಎಂಪಿಗೆ (BBMP) ಪತ್ರ ಬರೆದು, ಎಫ್‌ಎಸ್‌ಎಸ್‌ಎಐ ಇಲಾಖೆಯಿಂದ ಅನುಮತಿ ಪತ್ರ ಪಡೆದವರು ಮಾತ್ರ ಆಹಾರ ವಿತರಿಸಲು ಸೂಚನೆ ನೀಡಿದೆ.

    ನಗರದ ಯಾವುದೇ ಜಾಗದಲ್ಲಿ ಗಣಪತಿ ಉತ್ಸವ ಮಾಡಿದರೂ ಎಫ್‌ಎಸ್‌ಎಸ್‌ಎಐನಿಂದ ಕಡ್ಡಾಯವಾಗಿ ಪರವಾನಿಗೆ ಪಡೆಯಲೇಬೇಕು. ಗಣೇಶೋತ್ಸವ ವೇಳೆ ಪ್ರಸಾದ ವಿನಿಯೋಗ ಇದ್ದರೆ ಅಲ್ಲಿ ಶುಚಿತ್ವ ಮತ್ತು ಗುಣಮಟ್ಟ ಸುರಕ್ಷತೆ ಪತ್ರ ಕಡ್ಡಾಯವಾಗಿದೆ. ಬಿಬಿಎಂಪಿ ಅನುಮತಿ ಜೊತೆಗೆ ಆಹಾರ ವಿತರಣೆಗೂ ಅನುಮತಿ ಪತ್ರ ಇರಲೇಬೇಕಿದೆ.ಇದನ್ನೂ ಓದಿ: ʻಕೈʼ ಹಿಡಿಯುತ್ತಾರಾ ಕುಸ್ತಿಪಟು ವಿನೇಶ್, ಬಜರಂಗ್ ಪುನಿಯಾ – ತೀವ್ರ ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ಭೇಟಿ

    ಜನರ ಆರೋಗ್ಯ ದೃಷ್ಟಿಯಿಂದ ಪಾಲಿಕೆಗೆ ಪತ್ರದ ಮೂಲಕ ಸಂದೇಶ ರವಾನಿಸಲಾಗಿದೆ. ಗಣಪತಿ ಉತ್ಸವದ ವೇಳೆ ಪ್ರಸಾದ, ಆಹಾರ ಪದಾರ್ಥಗಳು ವಿತರಣೆ ಮಾಡುವವರು ಎಫ್‌ಎಸ್‌ಎಸ್‌ಎಐ ಪರವಾನಗಿ ಪಡೆದಿದ್ದಾರೆಯೇ ಎಂಬುದನ್ನ ಪರಿಶೀಲಿನೆ ಮಾಡಲು ಆದೇಶಿಸಿದೆ.

  • 100 ಮಿಲಿ 500 ರೂ.ಗೆ ಸೇಲ್‌ – ತಾಯಿ ಎದೆಹಾಲು ಮಾರಾಟ ಮಾಡ್ತಿದ್ದ ಮಳಿಗೆಗೆ ಸೀಲ್‌!

    100 ಮಿಲಿ 500 ರೂ.ಗೆ ಸೇಲ್‌ – ತಾಯಿ ಎದೆಹಾಲು ಮಾರಾಟ ಮಾಡ್ತಿದ್ದ ಮಳಿಗೆಗೆ ಸೀಲ್‌!

    – ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ – 2006 ಏನು ಹೇಳುತ್ತದೆ?

    ಚೆನ್ನೈ: ವಾಣಿಜ್ಯ ಉದ್ದೇಶಗಳಿಗಾಗಿ ತಾಯಿಯ ಎದೆಹಾಲು ಮಾರಾಟ ಮಾಡುವುದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ – 2006ರ (FSS Act 2006) ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಹೀಗಿದ್ದೂ ಚೆನ್ನೈನಲ್ಲಿ ತಾಯಿಯ ಎದೆಹಾಲು (Human Breast Milk) ಮಾರಾಟ ಮಾಡುತ್ತಿದ್ದ ಜಾಲವೊಂದು ಪತ್ತೆಯಾಗಿದೆ.

    ಪ್ರತಿ 100 ಮಿಲಿ ತಾಯಿಯ ಎದೆಹಾಲನ್ನು 500 ರೂ.ಗೆ ಮಾರಾಟ ಮಾಡುತ್ತಿದ್ದ ಮಳಿಗೆಯೊಂದನ್ನು ಚೆನ್ನೈನಲ್ಲಿ (Chennai) ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಗಳು ಸೀಲ್‌ ಮಾಡಿದ್ದು, ವೈಜ್ಞಾನಿಕ ತನಿಖೆಗಾಗಿ ಮಾದರಿಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಜ್ವಲ್‌ ಮೊಬೈಲ್ ಕಳೆದಿದೆ, ಸಾಕ್ಷ್ಯ ನಾಶ ಮಾಡಿದ್ದಾರೆ ಅನ್ನೋದನ್ನ ಎಸ್ಐಟಿಯವರು ಹೇಳಿದ್ರೆ ಒಪ್ಪಿಕೊಳ್ತೇನೆ: ಪರಮೇಶ್ವರ್

    ತಾಯಂದಿರ ಎದೆಹಾಲನ್ನು ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ 10 ದಿನಗಳಿಂದ ತೀವ್ರ ನಿಗಾ ವಹಿಸಿದ್ದ ಅಧಿಕಾರಿಗಳು ಶುಕ್ರವಾರ (ಇಂದು) ಮಳಿಗೆ ಮೇಲೆ ದಾಳಿ ನಡೆಸಿದ್ದಾರೆ. ತಿರುವಳ್ಳೂರಿನ ಆಹಾರ ಸುರಕ್ಷತಾ ಇಲಾಖೆಯ ನಿಯೋಜಿತ ಅಧಿಕಾರಿ ಡಾ ಎಂ ಜಗದೀಶ್ ಚಂದ್ರ ಬೋಸ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ 100 ಮಿಲಿ ಬಾಟಲಿಗಳಲ್ಲಿ ಸಂಗ್ರಹಿಸಿದ್ದ ಮಾನವರ ಎದೆಹಾಲು ಹಾಗೂ ದಾನಿ ತಾಯಂದಿರಿಂದ ಪಡೆದ ಹಾಲನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

    ಹಾಲನ್ನು ಪ್ಯಾಕಿಂಗ್‌ ಮಾಡುವುದಕ್ಕೆ ಅವರು ಯಾವ ವಿಧಾನಗಳನ್ನು ಅನುಸರಿಸಿದ್ದಾರೋ ನಮಗೆ ತಿಳಿದಿಲ್ಲ. ಈ ಬಗ್ಗೆ ವೈಜ್ಞಾನಿಕವಾಗಿ ತನಿಖೆ ನಡೆಸಿ, ವರದಿ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಇದನ್ನೂ ಓದಿ: ದೇವರಲ್ಲಿ ನಂಬಿಕೆ ಇದ್ರೆ ಮನೆಯಲ್ಲೇ ಧ್ಯಾನ ಮಾಡಿ- ಮೋದಿ ವಿರುದ್ಧ ಖರ್ಗೆ ವಾಗ್ದಾಳಿ

    ಹಾಲನ್ನು ಪಾಶ್ಚಾತ್ಯೀಕರಿಸಲು ಅವರು ಯಾವ ವಿಧಾನವನ್ನು ಅನುಸರಿಸಿದ್ದಾರೆ ಎಂಬುದು ನಮಗೆ ತಿಳಿದಿಲ್ಲ, ತನಿಖೆಯ ನಂತರ ನಾವು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

    ಸದ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅಡಿಯಲ್ಲಿ ತಾಯಿಯ ಎದೆಹಾಲು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ನವಜಾತ ಶಿಶುಗಳಿಗೆ ತಾಯಿಯ ಎದೆಹಾಲು ಅಗತ್ಯವಿದ್ದರೆ, ಅದನ್ನು ಸಂಗ್ರಹಿಸಿ ವೈದ್ಯರ ಸಲಹೆ ಮತ್ತು ಮೇಲ್ವಿಚಾರಣೆ ಮೇರೆಗೆ ಶಿಶುಗಳಿಗೆ ನೀಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಶತ್ರು ಸಂಹಾರ ಯಾಗ ನಡೆದಿಲ್ಲ – ದೇವಸ್ಥಾನದ ಹೇಳಿಕೆ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಡಿಕೆಶಿ 

  • `ಹೆಲ್ತ್ ಡ್ರಿಂಕ್ಸ್’ ವರ್ಗದಿಂದ ಬೋರ್ನ್‍ವಿಟಾವನ್ನು ತೆಗೆದುಹಾಕಿ: ಕೇಂದ್ರದಿಂದ ಮಹತ್ವದ ಆದೇಶ

    `ಹೆಲ್ತ್ ಡ್ರಿಂಕ್ಸ್’ ವರ್ಗದಿಂದ ಬೋರ್ನ್‍ವಿಟಾವನ್ನು ತೆಗೆದುಹಾಕಿ: ಕೇಂದ್ರದಿಂದ ಮಹತ್ವದ ಆದೇಶ

    ನವದೆಹಲಿ: ಆರೋಗ್ಯಕರ ಪಾನಿಯ (Health Drinks) ವರ್ಗದಿಂದ ಬೋರ್ನ್‍ವಿಟಾವನ್ನು (Bournvita) ತೆಗೆದು ಹಾಕುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇ-ಕಾಮರ್ಸ್ ಕಂಪನಿಗಳಿಗೆ ಸಲಹೆ ನೀಡಿದೆ. ಪೋರ್ಟಲ್ ಮತ್ತು ಪ್ಲಾಟ್‍ಫಾರ್ಮ್‍ಗಳಲ್ಲಿ ಬೋರ್ನ್‍ವಿಟಾ ಸೇರಿದಂತೆ ಎಲ್ಲಾ ಪಾನೀಯಗಳು ಈ ವರ್ಗದಿಂದ ಕೈಬಿಡುವಂತೆ ಆದೇಶ ನೀಡಲಾಗಿದೆ.

    ನ್ಯಾಷನಲ್ ಕಮಿಷನ್ ಫಾರ್ ಪ್ರೊಟೆಕ್ಷನ್ ಆಫ್ ಚೈಲ್ಡ್ ರೈಟ್ಸ್‌ನ (NCPCR) ತನಿಖೆಯಯಲ್ಲಿ ಬೋರ್ನ್‍ವಿಟಾ ಹೆಚ್ಚಿನ ಸಕ್ಕರೆ ಮಟ್ಟವನ್ನು ಹೊಂದಿದೆ ಎಂದು ತಿಳಿದುಬಂದಿದೆ. ಇದು ಸ್ವೀಕಾರಾರ್ಹ ಮಿತಿಗಳಿಗಿಂತ ಹೆಚ್ಚು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಂಪನಿಗಳು ಸುರಕ್ಷತಾ ಮಾನದಂಡಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಲು ವಿಫಲವಾಗಿವೆ. ಅಲ್ಲದೇ ಆರೋಗ್ಯಕರ ಪಾನೀಯಗಳು ಎಂದು ಬಿಂಬಿಸುತ್ತಿರುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಎನ್‍ಸಿಪಿಸಿಆರ್, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (FSSAI) ಸೂಚಿಸಿತ್ತು. ಇದನ್ನೂ ಓದಿ: 2009, 2014, 2019ರ ಲೋಕಸಭಾ ಚುನಾವಣೆಯಲ್ಲಿ ಏನಾಗಿತ್ತು? ಗೆದ್ದ ಕಲಿಗಳು ಯಾರು? – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌!

    ಬೋರ್ನ್‍ವಿಟಾದ ಅನಾರೋಗ್ಯಕರ ಅಂಶಗಳ ಬಗ್ಗೆ ಮೊದಲು ಯೂಟ್ಯೂಬರ್ ಒಬ್ಬ ವಿಡಿಯೋದಲ್ಲಿ ಚರ್ಚೆ ಹುಟ್ಟುಹಾಕಿದ್ದರು. ವಿಡಿಯೊದಲ್ಲಿ ಪೌಡರ್ ಸೆಪ್ಲಿಮೆಂಟ್ ಕುರಿತು ಚರ್ಚಿಸಿದ್ದ. ಆತ ತನ್ನ ಪ್ರಯೋಗದಲ್ಲಿ ಬೋರ್ನ್‍ವಿಟಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಅಂಶ ಇದೆ ಎಂದು ಹೇಳಿದ್ದ. ಅಲ್ಲದೇ ಅದರಲ್ಲಿರುವ ಅತಿಯಾದ ಸಕ್ಕರೆ, ಕೋಕೋ ಮತ್ತು ಹಾನಿಕಾರಕ ಕೃತಕ ಬಣ್ಣಗಳು ಕ್ಯಾನ್ಸರ್ ಸೇರಿದಂತೆ ಮಕ್ಕಳಲ್ಲಿ ಗಂಭೀರವಾದ ಆರೋಗ್ಯದ ಅಪಾಯಗಳಿಗೆ ಕಾರಣವಾಗಬಹುದು ಎಂದು ಸೂಚಿಸಿದ್ದ.

    ಈ ವಿಡಿಯೋ ವ್ಯಾಪಕ ವೈರಲ್ ಆಗಿ ಸಂಸ್ಥೆಯ ವಿರುದ್ಧ ತನಿಖೆ ನಡೆಸುವಂತೆ ಒತ್ತಾಯ ಹೆಚ್ಚಾಗಿತ್ತು. ಇದೀಗ ಬೋರ್ನ್‍ವಿಟಾ ಪೇಯವನ್ನು `ಆರೋಗ್ಯ ಪಾನೀಯ’ ಪಟ್ಟಿಯಿಂದ ಕೈ ಬಿಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಇದನ್ನೂ ಓದಿ: ಮೋದಿ ವಿರುದ್ಧ ಮಾತನಾಡಲು ಏನಿಲ್ಲವೆಂದು ಸಂವಿಧಾನ ಬದಲಾವಣೆಯ ಭಯ ಹುಟ್ಟಿಸುತ್ತಾರೆ: ಬೊಮ್ಮಾಯಿ

  • ಮಾದಪ್ಪನ ಪ್ರಸಾದ ಲಾಡುಗೆ FSSAIನಿಂದ ಗುಣಮಟ್ಟದ ಸರ್ಟಿಫಿಕೇಟ್

    ಮಾದಪ್ಪನ ಪ್ರಸಾದ ಲಾಡುಗೆ FSSAIನಿಂದ ಗುಣಮಟ್ಟದ ಸರ್ಟಿಫಿಕೇಟ್

    ಚಾಮರಾಜನಗರ: ಜಿಲ್ಲೆಯ ಮಾದಪ್ಪನ ಬೆಟ್ಟದ ದಾಸೋಹ, ಲಾಡುಗೆ ಈಗ ಅಧಿಕೃತ ಮುದ್ರೆ ದೊರೆತಿದ್ದು, ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್‍ಎಸ್‍ಎಸ್‍ಎಐ) ಗುಣಮಟ್ಟದ ಸರ್ಟಿಫಿಕೇಟ್ ನೀಡಿದೆ.

    ಲೈಸೆನ್ಸ್ ಗಾಗಿ ದೇಗುಲದ ಪ್ರಾಧಿಕಾರ ಕಳೆದ 6 ತಿಂಗಳ ಹಿಂದೆ ಅರ್ಜಿ ಸಲ್ಲಿಸಿ, ಆಹಾರದ ವಿಚಾರದಲ್ಲಿ ತೆಗೆದುಕೊಂಡ ಸುರಕ್ಷತಾ ಕ್ರಮಗಳ ಬಗ್ಗೆ ಲಿಖಿತ ರೂಪದಲ್ಲಿ ತಿಳಿಸಿತ್ತು. ಇದನ್ನು ಆಧರಿಸಿ ಎಫ್‍ಎಸ್‍ಎಸ್‍ಎಐ ಲೈಸೆನ್ಸ್ ನೀಡಿದೆ. ತಿರುಪತಿ ಲಾಡು ಪ್ರಸಾದ, ಧರ್ಮಸ್ಥಳದ ಅನ್ನ ದಾಸೋಹದಷ್ಟೇ ಪ್ರಸಿದ್ಧಿಯಾಗಿರುವ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ದೇಗುಲಕ್ಕೆ ಎಫ್‍ಎಸ್‍ಎಸ್‍ಎಐ ಪರವಾನಗಿ ದೊರೆತಿದೆ.

    ಆಹಾರದ ಗುಣಮಟ್ಟದ ಖಾತ್ರಿಗಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಅಧೀನಕ್ಕೊಳಪಟ್ಟ ಸಂಸ್ಥೆಯಾಗಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಮಾನದಂಡಗಳಿಗೆ ಅನುಗುಣವಾಗಿ ಕ್ಷೇತ್ರದಲ್ಲಿ ದಾಸೋಹ ಮತ್ತು ಲಾಡು ಪ್ರಸಾದ ತಯಾರಿಕೆ, ಹಂಚಿಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಲೈಸೆನ್ಸ್ ದೊರೆತಿದ್ದು, ಪ್ರತಿ ವರ್ಷವೂ ನವೀಕರಿಸಿಕೊಳ್ಳಬೇಕಿದೆ.

    ಲೈಸೆನ್ಸ್ ಗಾಗಿ ದೇಗುಲದ ಪ್ರಾಧಿಕಾರ ಕಳೆದ 6 ತಿಂಗಳ ಹಿಂದೆ ಅರ್ಜಿ ಸಲ್ಲಿಸಿ ಸುರಕ್ಷತಾ ಕ್ರಮಗಳ ಬಗ್ಗೆ ಲಿಖಿತ ರೂಪದಲ್ಲಿ ವಿವರಿಸಿತ್ತು. ಅದಾದ ಬಳಿಕ ಎಫ್‍ಎಸ್‍ಎಸ್‍ಎಐ ಅಧಿಕಾರಿಯೊಬ್ಬರು ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸುರಕ್ಷತೆ, ಶುದ್ಧತೆಯನ್ನು ಪರೀಕ್ಷಿಸಿದ ಬಳಿಕ ಈ ಪರವಾನಗಿ ನೀಡಲಾಗಿದೆ. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಸಹ ಗುಣಮಟ್ಟದ ಸರ್ಟಿಫಿಕೇಟ್ ನೀಡಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ.

    ಪುಣ್ಯ ಕ್ಷೇತ್ರ ಮಲೆ ಮಹದೇಶ್ವರಸ್ವಾಮಿ ಬೆಟ್ಟದ ಕುರಿತು ಈ ಹರುಷದ…

    Posted by Suresh Kumar S on Sunday, November 8, 2020