Tag: FSL Report

  • ದರ್ಶನ್ ಹೊಡೆತದಿಂದಲೇ ರೇಣುಕಾಸ್ವಾಮಿ ಸಾವು? – ಆ 3 ಹೊಡೆತಗಳ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

    ದರ್ಶನ್ ಹೊಡೆತದಿಂದಲೇ ರೇಣುಕಾಸ್ವಾಮಿ ಸಾವು? – ಆ 3 ಹೊಡೆತಗಳ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

    ಬೆಂಗಳೂರು: ನಟ ದರ್ಶನ್ (Actor Darshan) ಹೊಡೆತದಿಂದಲೇ ರೇಣುಕಾಸ್ವಾಮಿ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿಯು ಚಾರ್ಜ್‌ಶೀಟ್‌ನಿಂದ (Chargesheet)  ಬಯಲಾಗಿದೆ.

    ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukswamy Murder Case) ಹಿನ್ನೆಲೆ ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್‌ನಿಂದ ಒಂದೊಂದಾಗಿ ವಿಷಯಗಳು ಹೊರಬರುತ್ತಿವೆ. ಇದೀಗ ರೇಣುಕಾಸ್ವಾಮಿ ಸಾವಿಗೆ ದರ್ಶನ್ ಅವರ ಹೊಡೆತವೇ ಕಾರಣವಾಯಿತು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.ಇದನ್ನೂ ಓದಿ: ಇವ್ನನ್ನು ಉಳಿಸಬೇಡಿ, ಕೊಂದು ಎಸೆದು ಬಿಡಿ – ಶೆಡ್‌ನಲ್ಲಿ ಪವಿತ್ರಾ ಹೇಳಿದ್ದೇನು?

    ರೇಣುಕಾಸ್ವಾಮಿ ಸಾಯುವ ಮುನ್ನ ದರ್ಶನ್, ಆತನಿಗೆ ಮೂರು ಹೊಡೆತಗಳನ್ನು ಕೊಟ್ಟಿದ್ದರು ಎಂದು ಮಾಹಿತಿ ಹೊರ ಬಿದ್ದಿದೆ. ರೇಣುಕಾಸ್ವಾಮಿ ಹತ್ಯೆಯಾದ ದಿನ ದರ್ಶನ್ 45 ನಿಮಿಷಗಳ ಕಾಲ ಪಟ್ಟಣಗೆರೆ ಶೆಡ್‌ನಲ್ಲಿದ್ದರು. ದರ್ಶನ್ ಆ ಮೂರು ಹೊದೆತದಿಂದಲೇ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆ ಎಂದಿದೆ.

    ಮೊದಲ ಬಾರಿ 110 ಕೆಜಿಯ ದರ್ಶನ್ ನರಪೇತಲನಂತಿದ್ದ ರೇಣುಕಾಸ್ವಾಮಿ ಎದೆಗೆ ಶೂ ಕಾಲಿನಿಂದ ಒಂದೇ ಸಮನೆ ಒದ್ದಿದ್ದಾರೆ. ದರ್ಶನ್ ಮೊದಲ ಹೊಡೆತಕ್ಕೆ ರೇಣುಕಾಸ್ವಾಮಿಯ ಎದೆಯಲ್ಲಿನ ಮೂಳೆಗಳ ಮುರಿತವಾಗಿದೆ. ಎರಡನೇ ಬಾರಿ ದರ್ಶನ್, ರೇಣುಕಾಸ್ವಾಮಿಯನ್ನು ಸಿನಿಮೀಯ ಶೈಲಿಯಲ್ಲಿ ಎತ್ತಿ ಲಾರಿಗೆ ಬಿಸಾಕಿದ್ದಾರೆ. ಬಿಸಾಕಿದ ರಭಸಕ್ಕೆ ರೇಣುಕಾಸ್ವಾಮಿ ತಲೆಗೆ ಗಂಭೀರ ಗಾಯವಾಗಿದೆ. ತಲೆ ಬುರುಡೆಗೆ ಏಟು ಬಿದ್ದು ರಕ್ತ ಹೆಪ್ಪುಗಟ್ಟಿದೆ.ಇದನ್ನೂ ಓದಿ: ಮಂತ್ರಾಲಯ ಗುರುರಾಯರ ಮೊರೆ ಹೋದ ನಟ ದರ್ಶನ್‌ ಪತ್ನಿ

    ಮೂರನೇ ಬಾರಿ ದರ್ಶನ್, ರೇಣುಕಾಸ್ವಾಮಿಗೆ ಅವನು ಪವಿತ್ರಾ ಗೌಡಗೆ ಕಳಿಸಿದ್ದ ಫೋಟೊವನ್ನು ತೋರಿಸಿದ್ದಾರೆ. ಇದೇ ಫೋಟೊ ಅಲ್ವೇನೊ ನೀನು ಕಳಿಸಿದ್ದು ನಿನ್ನ…..! ಎಂದು ರೇಣುಕಾಸ್ವಾಮಿ ಮರ್ಮಾಂಗಕ್ಕೆ ಒದ್ದಿದ್ದಾರೆ. ಮರ್ಮಾಂಗಕ್ಕೆ ಒದೆಯುತ್ತಿದ್ದಂತೆ ರೇಣುಕಾಸ್ವಾಮಿಗೆ ಪ್ರಜ್ಞೆ ತಪ್ಪಿಬಿದ್ದಿದ್ದಾನೆ. ಈ ಮೂರು ಹೊಡೆತಗಳೇ ರೇಣುಕಾಸ್ವಾಮಿ ಸಾವಿಗೆ ಕಾರಣ ಎಂದು ಮಾಹಿತಿ ಹೊರಬಿದ್ದಿದ್ದು, ಎಫ್‌ಎಸ್‌ಎಲ್ (FSL) ರಿಪೋರ್ಟ್‌ನಲ್ಲಿ ಸಾವಿನ ರಹಸ್ಯ ಬಯಲಾಗಿದೆ.

  • ಡಿಲೀಟ್‌ ಮಾಡಿದ್ರೂ ಸಿಕ್ತು ವಿಡಿಯೋ – ಸ್ಫೋಟಕ FSL ವರದಿಯಲ್ಲಿ ಏನಿದೆ?

    ಡಿಲೀಟ್‌ ಮಾಡಿದ್ರೂ ಸಿಕ್ತು ವಿಡಿಯೋ – ಸ್ಫೋಟಕ FSL ವರದಿಯಲ್ಲಿ ಏನಿದೆ?

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ಹೈದರಾಬಾದ್‌ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ (FSL Report) ದರ್ಶನ್‌ ಗ್ಯಾಂಗ್‌ ಡಿಲೀಟ್‌ ಮಾಡಿದ್ದ ದೃಶ್ಯ ಸಿಕ್ಕಿದೆ.

    ದರ್ಶನ್ ಮತ್ತು ಇತರರಿಂದ ಸ್ವಾಧೀನಪಡಿಸಿಕೊಂಡ ರಕ್ತದ ಕಲೆಗಳಿದ್ದ ಬಟ್ಟೆ, ಚಪ್ಪಲಿಗಳನ್ನು, ಹಲ್ಲೆಗೆ ಬಳಸಿದ್ದ ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

    ಇಷ್ಟೇ ಅಲ್ಲದೇ ಡಿಲೀಟ್ ಮಾಡಿದ್ದ ಮೊಬೈಲ್, ಸಿಸಿಟಿವಿ ಡಿವಿಆರ್‌ಗಳನ್ನು ರಿಟ್ರೀವ್‌ ಮಾಡಲು ಕಳುಹಿಸಲಾಗಿತ್ತು. ಇದಕ್ಕೆ ಸಂಬಂಧಿಸಿ ಎಫ್‌ಎಸ್‌ಎಲ್ ವರದಿ ನೀಡಿತ್ತು. ಈ ಬಗ್ಗೆಯೂ ಪ್ರಾಥಮಿಕ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.

     

    ಎಫ್‌ಎಸ್‌ಎಲ್ ವರದಿಯಲ್ಲಿ ಏನಿದೆ?
    ದರ್ಶನ್ ಮನೆಯಲ್ಲಿದ್ದ ಲಾಠಿ, ರಿಪೀಸ್ ಪಟ್ಟಿ, ದೊಣ್ಣೆ, ಬೆಲ್ಟ್ ಮೇಲೆ ರಕ್ತದ ಕಲೆ ಪತ್ತೆಯಾಗಿತ್ತು. ನಟಿ ಪವಿತ್ರಾಗೌಡ ಚಪ್ಪಲಿ ಮೇಲೆಯೂ ರಕ್ತದ ಕಲೆ ಸಿಕ್ಕಿತ್ತು. ಡಿಎನ್‌ಎ ಪರೀಕ್ಷೆಯಿಂದ ಪತ್ತೆಯಾದ ರಕ್ತ ಮಾದರಿ ರೇಣುಕಾಸ್ವಾಮಿಯದ್ದೇ ಎನ್ನುವುದು ದೃಢಪಟ್ಟಿದೆ. ಇದನ್ನೂ ಓದಿ: ದರ್ಶನ್ ಸೇರಿ 14 ಮಂದಿ ವಿರುದ್ಧ ಕೊಲೆ ಕೇಸ್ – ಅಂಕಿಗಳಲ್ಲಿ ಚಾರ್ಜ್‌ಶೀಟ್‌

    ರೇಣುಕಾ ಕೊಲೆ ಬಳಿಕ ದರ್ಶನ್, ಪವಿತ್ರಾಗೌಡ ಮಾತನಾಡಿದ್ದರು. ಆದರೆ ಸಿಕ್ಕಿಬೀಳುವ ಭಯದಲ್ಲಿ ಸಿಸಿಟಿವಿ ವಿಡಿಯೋವನ್ನು ದರ್ಶನ್ ಗ್ಯಾಂಗ್‌ ಡಿಲೀಟ್‌ ಮಾಡಿತ್ತು. ಸಿಸಿಟಿವಿ ಡಿವಿಆರ್‌ಗಳ ರಿಟ್ರೀವ್‌ ಮಾಡಿದಾಗ ದರ್ಶನ್ ಡಿಲೀಟ್ ಮಾಡಿಸಿದ ದೃಶ್ಯಗಳು ಪತ್ತೆಯಾಗಿದೆ. ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಲ್ಲಿ ಆರೋಪಿ ದೀಪಕ್ ಕೂದಲು ಪತ್ತೆಯಾಗಿದೆ.

    ಇಡೀ ಪ್ರಕರಣ ತನಿಖೆಯಲ್ಲಿ ಹೈದರಾಬಾದ್ ಎಫ್‌ಎಸ್‌ಎಲ್‌ ವರದಿ ಅತ್ಯಂತ ಮಹತ್ವ ಪಡೆದುಕೊಂಡಿದೆ.

  • ದರ್ಶನ್ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ – ಎಫ್‌ಎಸ್‌ಎಲ್ ವರದಿಯಲ್ಲಿ ಸ್ಫೋಟಕ ಸತ್ಯ

    ದರ್ಶನ್ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ – ಎಫ್‌ಎಸ್‌ಎಲ್ ವರದಿಯಲ್ಲಿ ಸ್ಫೋಟಕ ಸತ್ಯ

    ಬೆಂಗಳೂರು: ರೇಣುಕಾಸ್ವಾಮಿ (Renukaswamy) ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ದರ್ಶನ್ (Darshan) ವಿರುದ್ಧ ಅತಿ ದೊಡ್ಡ ಸಾಕ್ಷ್ಯ ಬಯಲಾಗಿದೆ. ದರ್ಶನ್, ರೇಣುಕಾಸ್ವಾಮಿ ಹತ್ಯೆಯಾದ ಸಮಯದಲ್ಲಿ ಧರಿಸಿದ್ದ ಬಟ್ಟೆಗಳ ಮೇಲೆ ರೇಣುಕಾಸ್ವಾಮಿಯ ರಕ್ತದ ಕಲೆಗಳಿರುವುದು ಸಾಬೀತಾಗಿದೆ.

    ಈ ಸಾಕ್ಷ್ಯ ದರ್ಶನ್ ವಿರುದ್ಧದ ಅರೋಪವನ್ನು ಸಾಬೀತುಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಲಾಗಿದೆ. ಇನ್ನು ದರ್ಶನ್ ಗ್ಯಾಂಗ್‌ನಿಂದ 66ಕ್ಕೂ ಹೆಚ್ಚು ವಸ್ತುಗಳನ್ನು ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ರವಾನಿಸಲಾಗಿತ್ತು. ಇದನ್ನೂ ಓದಿ: ಮೃತ ಪಿಎಸ್ಐ ಮನೆಗೆ ಗೃಹ ಸಚಿವರ ಭೇಟಿ – ಪತ್ನಿಗೆ ಉದ್ಯೋಗ, 50 ಲಕ್ಷ ಪರಿಹಾರ ಘೋಷಣೆ

    ಇದೀಗ ಒಂದೊಂದೆ ವರದಿಗಳು ತನಿಖಾಧಿಕಾರಿಗಳ ಕೈಸೇರುತ್ತಿವೆ. ಈ ಬೆಳವಣಿಗೆ ‘ಡಿ’ ಗ್ಯಾಂಗ್‌ಗೆ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ. ಆದರೆ ರೇಣುಕಾಸ್ವಾಮಿಯ ಮೊಬೈಲ್ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಜೊತೆಗೆ ಪ್ರಕರಣದ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ ಅಥವಾ ಸ್ಪೆಷಲ್ ಕೋರ್ಟ್ ಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

    ಜೂನ್ 8ರ ಮಧ್ಯಾಹ್ನ ಬೆಂಗಳೂರಿನಲ್ಲಿ ಸ್ವೀಚ್ ಆಫ್ ಆಗಿದ್ದ ರೇಣುಕಾಸ್ವಾಮಿ ಮೊಬೈಲ್ ಪತ್ತೆಯಾಗಿಲ್ಲ. ಸ್ವಾಮಿ ಕೊಲೆ ಬಳಿಕ ಸುಮನಹಳ್ಳಿ ರಾಜಕಾಲುವೆಗೆ ಮೊಬೈಲ್ ಎಸೆದಿರುವುದಾಗಿ ಪೊಲೀಸ್ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದರು. ಅಶ್ಲೀಲ ಸಂದೇಶ ರವಾನಿಸಿರುವುದೇ ಕೊಲೆಗೆ ಕಾರಣ ಎಂದು ಪೊಲೀಸ್ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದರು. ಅದರ ಅನ್ವಯ ಆರೋಪಿಗಳ ಮೊಬೈಲ್ ರಿಟ್ರೀವ್‌ಗೆ ಪೊಲೀಸರು ಕಳುಹಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ವೀಡಿಯೋ ತೋರಿಸಿದ ಡಿಸಿಎಂ ಡಿಕೆಶಿಗೆ ಟಾಂಗ್ ಕೊಟ್ಟ ಹೆಚ್‌ಡಿಕೆ

  • ಬೆಂಗ್ಳೂರಿಗೆ ಮಾರಾಟಕ್ಕೆಂದು ತಂದಿದ್ದು ನಾಯಿ ಮಾಂಸ ಅಲ್ಲ, ಕುರಿ ಮಾಂಸ; ಸರ್ಕಾರದ ಕೈ ಸೇರಿದ ರಿಪೋರ್ಟ್

    ಬೆಂಗ್ಳೂರಿಗೆ ಮಾರಾಟಕ್ಕೆಂದು ತಂದಿದ್ದು ನಾಯಿ ಮಾಂಸ ಅಲ್ಲ, ಕುರಿ ಮಾಂಸ; ಸರ್ಕಾರದ ಕೈ ಸೇರಿದ ರಿಪೋರ್ಟ್

    – ನಾಯಿ ಮಾಂಸ ದಂಧೆ ಆರೋಪ; ವರದಿಯಲ್ಲಿ ಏನಿದೆ?

    ಬೆಂಗಳೂರು: ನಾಯಿ ಮಾಂಸ (Dog Meat) ಮಾರಾಟ ದಂಧೆ ಪ್ರಕರಣಕ್ಕೆ ಸಂಬಂಧಿಸಿದ ಅಧಿಕೃತ ರಿಪೋರ್ಟ್ ಸರ್ಕಾರದ ಕೈ ಸೇರಿದೆ. ಮಾಂಸ ಸಂಬಂಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (FSL) ಆಯುಕ್ತ ಕೆ ಶ್ರೀನಿವಾಸ್, ಆಹಾರ ಇಲಾಖೆ ಕಾರ್ಯದರ್ಶಿ ಹರ್ಷ ಗುಪ್ತಾ ಅವರಿಗೆ ವರದಿ ಸಲ್ಲಿಸಿದ್ದಾರೆ.

    ರಾಜಸ್ಥಾನದಿಂದ (Rajasthan) ಬೆಂಗಳೂರಿಗೆ (Bengaluru) ಮಾರಟಕ್ಕೆಂದು ತಂದಿದ್ದು ನಾಯಿ ಮಾಂಸ ಅಲ್ಲ, ಕುರಿ ಮಾಂಸ ಎಂದು ಆಹಾರ ಮತ್ತು ಗುಣಮಟ್ಟ ಆಯುಕ್ತಾಲಯ ವರದಿ ನೀಡಿದೆ. ಹೈದ್ರಾಬಾದ್ ಐಸಿಎಆರ್ ರಿಪೋರ್ಟ್ ಗುಣಮಟ್ಟ ಇಲಾಖೆ ಈ ವರದಿ ನೀಡಿದೆ. ಐಸಿಎಆರ್ ರಿಪೋರ್ಟ್‌ಲ್ಲಿ ನಾಯಿ ಮಾಂಸ ಅಲ್ಲ, ಕುರಿ ಮಾಂಸ ಎಂದು ವರದಿಯಾಗಿದೆ. ಸ್ಯಾಂಪಲ್ ಪರಿಶೀಲಿಸಿ ಐಸಿಎಆರ್ ವರದಿ ನೀಡಿದೆ. ಇದನ್ನೂ ಓದಿ: ಪ್ರಧಾನಿ ಮೋದಿಯನ್ನು ಭೇಟಿಯಾದ ಡಿಕೆಶಿ – ಬೆಂಗಳೂರು, ನೀರಾವರಿ ಅಭಿವೃದ್ಧಿಗೆ ಹೆಚ್ಚಿನ ಅನುದಾನಕ್ಕೆ ಮನವಿ

    ಈ ಕುರಿತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಮಾತನಾಡಿ, ಕುರಿ ಮಾಂಸ ಎಂದು ವರದಿ ಬಂದಿದೆ. ಪ್ರಾಥಮಿಕ ಹಂತದಲ್ಲಿ 9 ಜನರಿಗೆ ಲೈಸೆನ್ಸ್ ಪಡೆದಿದ್ದರು ಎಂಬ ಹಿನ್ನೆಲೆ ನೋಟಿಸ್ ನೀಡಿ ವಿಚಾರಣೆ ಮಾಡಲಾಯಿತು. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಲೈಸೆನ್ಸ್ ಇದೆ. ಹೀಗಾಗಿ ರಾಜಸ್ಥಾನದಿಂದ ಕುರಿ ತಂದು ಮಾರಾಟ ಮಾಡುತ್ತಿದ್ದರು. ರಾಜಸ್ಥಾನದಿಂದ ಬಂದಿದ್ದು ನಾಯಿ ಮಾಂಸ ಅಲ್ಲ, ಕುರಿ ಮಾಂಸ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ದೇವೇಗೌಡರ ಕುಟುಂಬಕ್ಕೆ ವಿಷ ಇಟ್ಟವನ ಜತೆ ವೇದಿಕೆ ಹಂಚಿಕೊಳ್ಳಲು ಸಾಧ್ಯವೇ?: ಕುಮಾರಸ್ವಾಮಿ ಕಿಡಿ

    ಇನ್ನು ನಾಯಿ ಮಾಂಸ ಎಂದು ವದಂತಿ ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಇಲಾಖೆ ಅವರ ಮೇಲೆ ಕ್ರಮ ಕೈಗೊಳ್ಳುತ್ತದೆ. ನಾವು ಪೊಲೀಸರಿಗೆ ವರದಿ ನೀಡುತ್ತೇವೆ. ವದಂತಿ ಮಾಡುವವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದರು. ಇದನ್ನೂ ಓದಿ: Wayanad Landslide |ಮೃತಪಟ್ಟ ಕನ್ನಡಿಗರಿಗೆ ತಲಾ 5 ಲಕ್ಷ ರೂ. ಪರಿಹಾರ : ಸಿಎಂ ಘೋಷಣೆ

  • ಮೂವರನ್ನು ಯಾಕೆ ಅರೆಸ್ಟ್ ಮಾಡಿದ್ದಾರೆ ಗೊತ್ತಿಲ್ಲ: ಪ್ರಿಯಾಂಕ್‌ ಖರ್ಗೆ

    ಮೂವರನ್ನು ಯಾಕೆ ಅರೆಸ್ಟ್ ಮಾಡಿದ್ದಾರೆ ಗೊತ್ತಿಲ್ಲ: ಪ್ರಿಯಾಂಕ್‌ ಖರ್ಗೆ

    ಬೆಂಗಳೂರು: ಮೂವರನ್ನು ಪೊಲೀಸರು ಯಾಕೆ ಬಂಧನ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

    ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲೆ ಪೊಲೀಸರು ಇಂದು ಮೂವರನ್ನು ಬಂಧನ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮದವರು ಪ್ರಿಯಾಂಕ್‌ ಖರ್ಗೆಯವರನ್ನು ಕೇಳಿದಾಗ, ಇವಾಗಲೂ FSL ರಿಪೋರ್ಟ್ ನಲ್ಲಿ‌ ಏನು ಬಂದಿದೆಯೋ ಗೊತ್ತಿಲ್ಲ. ಗೃಹ ಸಚಿವರು ಬಂದ ಮೇಲೆ‌ ಗೊತ್ತಾಗುತ್ತೆ. ವಿಚಾರಣೆ ಆಗಲಿ ಯಾಕೆ ಆತಂಕ ಎಂದಿದ್ದಾರೆ.

    ಮಾಧ್ಯಮಗಳ ಮೇಲೆ ಎಫ್ ಐಆರ್ ಹಾಕಲಿ ಅಂತ ಯಾರು ಹೇಳಿದ್ದಾರೆ. ಎಫ್ ಎಸ್ ಎಲ್ ರಿಪೋರ್ಟ್ ನಲ್ಲೂ ಕೂಗಿ‌ದ್ದಾರೆ ಅಂತ ಇದೆಯಾ..?, ಖಾಸಗಿ ರಿಪೋರ್ಟ್ ನ ಅಧಿಕೃತ ಅಂತ ನಾನು ಬಹಿರಂಗ ಪಡಿಸಿದ್ನಾ?. ಸರ್ಕಾರದ ಎಫ್ ಎಸ್ ಎಲ್ ವರದಿಯನ್ನು ನಾನು ನೋಡಿಲ್ಲ. ನಾಳೆ ಸರ್ಕಾರದ ಎಫ್ ಎಸ್ ಎಲ್ ರಿಪೋರ್ಟ್ ಬರಲಿ ಎಂದು ತಿಳಿಸಿದ್ದಾರೆ.

    ಮೂರು ಜನರನ್ನು ಯಾಕೆ ಆರೆಸ್ಟ್ ಮಾಡಿದ್ದಾರೆ ಗೊತ್ತಿಲ್ಲ. ಎಫ್ ಎಸ್ ಎಲ್ ಬಂದಿದೆಯಾ ವಾಯ್ಸ್ ಮ್ಯಾಚ್ ಆಗಿದೆಯಾ ಗೊತ್ತಿಲ್ಲ. ಸರ್ಕಾರದ ವರದಿಯೇ ಅಂತಿಮ. ಇವಾಗ್ಲೆ ಕಂಕ್ಲೂಶನ್ ಗೆ ಬರೋದು ಬೇಡ. ಅವರನ್ನ ಕರೆದುಕೊಂಡು ಹೋಗಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲದೆ ನಾನು ಮಾತನಾಡಲ್ಲ. ಹಕ್ಕು ಚ್ಯುತಿ ಮಂಡನೆ ಬಗ್ಗೆ ಮಾತನಾಡಿದ್ದು ನನಗೆ ಗೊತ್ತಿಲ್ಲ ಎಂದು ಸಚಿವರು ಹೇಳಿದ್ದಾರೆ. ಇದನ್ನೂ ಓದಿ: ಖಾಸಗಿ ಫೋರೆನ್ಸಿಕ್ ವರದಿ ತರಿಸಿ ಬಹಿರಂಗಪಡಿಸಿದ ಬಿಜೆಪಿ ನಡೆ ದೇಶದ್ರೋಹದ ಕೆಲಸ: ಪ್ರಿಯಾಂಕ್‌ ಖರ್ಗೆ

    ಡಿಸಿಪಿ ಸ್ಪಷ್ಟನೆ: ವಿಧಾನಸೌಧದಲ್ಲಿ ನಡೆದ ರಾಜ್ಯಸಭಾ ಚುನಾವಣೆಯ ಫಲಿತಾಂಶದ ಸಂದರ್ಭದಲ್ಲಿ’ಪಾಕಿಸ್ತಾನ ಜಿಂದಾಬಾದ್’ ಎಂಬ ಘೋಷಣೆ ಕೂಗಿದ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಈSಐ ವರದಿ, ಸಾಂದರ್ಭಿಕ ಸಾಕ್ಷ್ಯಾಧಾರಗಳು, ಸಾಕ್ಷಿಗಳ ಹೇಳಿಕೆ ಮತ್ತು ಲಭ್ಯ ಸಾಕ್ಷಾಧಾರಗಳ ಮೇರೆಗೆ ಮೂವರನ್ನು ಬಂಧಿಸಿದ್ದು, ಇವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗಿರುತ್ತದೆ ಎಂದು ಈ ಸಂಬಂಧ ಸೆಂಟ್ರಲ್ ಡಿಸಿಪಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

  • ಪಾಕಿಸ್ತಾನ ಪರ ಘೋಷಣೆ – ಎಫ್‍ಎಸ್‍ಎಲ್ ವರದಿ ಬಹಿರಂಗಕ್ಕೆ ಬಿಜೆಪಿ ನಿಯೋಗ ಮನವಿ

    ಪಾಕಿಸ್ತಾನ ಪರ ಘೋಷಣೆ – ಎಫ್‍ಎಸ್‍ಎಲ್ ವರದಿ ಬಹಿರಂಗಕ್ಕೆ ಬಿಜೆಪಿ ನಿಯೋಗ ಮನವಿ

    ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಕುರಿತ ಎಫ್‍ಎಸ್‍ಎಲ್ ವರದಿ (FSL Report) ಬಹಿರಂಗ ಪಡಿಸುವಂತೆ ಬಿಜೆಪಿ (BJP) ನಿಯೋಗ ಐಜಿಪಿಗೆ ಮನವಿ ಸಲ್ಲಿಸಿದೆ.

    ಶಾಸಕ ಎಲ್.ಎ ರವಿಸುಬ್ರಹ್ಮಣ್ಯ, ಸಿ.ಕೆ. ರಾಮಮೂರ್ತಿ, ಉದಯ ಬಿ. ಗರುಡಾಚಾರ್ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಅವರು ನೃಪತುಂಗ ರಸ್ತೆಯಲ್ಲಿರುವ ಐಜಿಪಿ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದ್ದಾರೆ.

    ಫೆಬ್ರವರಿ 27ರಂದು ವಿಧಾನಸೌಧದ ಕಾರಿಡಾರ್‌ನಲ್ಲಿ ರಾಜ್ಯಸಭಾ ಸಂಸದ ಸೈಯದ್ ನಾಸೀರ್ ಹುಸೇನ್ ಅವರ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದರು. ನಂತರ ಗೃಹ ಸಚಿವ ಡಾ. ಪರಮೇಶ್ವರ್ ಅವರು ಎಫ್‍ಎಸ್‍ಎಲ್ ವರದಿಯನ್ನು ಶೀಘ್ರವೇ ಬಹಿರಂಗ ಮಾಡುವ ಭರವಸೆ ನೀಡಿದ್ದರು. ಘಟನೆ ನಡೆದು ಒಂದು ವಾರ ಕಳೆದರೂ ವರದಿಯ ಮಾಹಿತಿ ಇಲ್ಲದ ಬೆನ್ನಲ್ಲಿ ಮನವಿ ಸಲ್ಲಿಸಲಾಗಿದೆ.

    ಸತ್ಯ ತಿಳಿಸಲು ವಿಳಂಬವೇಕೆ? ವಾಸ್ತವ ಸಂಗತಿ ಮರೆಮಾಚಲು ಮತ್ತು ತನಿಖೆಯ ದಿಕ್ಕನ್ನು ಹಳಿ ತಪ್ಪಿಸಲು ನಿಮ್ಮ ಮೇಲೆ ಯಾವುದಾದರೂ ಒತ್ತಡವಿದೆಯೇ ಎಂದು ಪ್ರಶ್ನಿಸಲಾಗಿದೆ. ಇಂತಹ ವಿಳಂಬದಿಂದ ಮುಂದಿನ ದಿನಗಳಲ್ಲಿ ಈ ರೀತಿ ದೇಶವಿರೋಧಿ ಮತ್ತು ಸಮಾಜಘಾತುಕ ಕೆಲಸ ಮಾಡುವ ಜನರಿಗೆ ಮತ್ತಷ್ಟು ಬಲ ಬಂದಂತಾಗುತ್ತದೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. ಎಫ್‍ಎಸ್‍ಎಲ್ ವರದಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅನೇಕ ಪೋಸ್ಟ್‌ಗಳಿವೆ. ಆದ್ದರಿಂದ ಈ ತನಿಖೆಯ ವಾಸ್ತವಾಂಶವನ್ನು ತಿಳಿಯಲು ಬಯಸುತ್ತೇವೆ. ರಾಜ್ಯದ ಜವಾಬ್ದಾರಿಯುತ ವಿಪಕ್ಷವಾಗಿ, ನಾವು ಈ ಪತ್ರಕ್ಕೆ ನಿಮ್ಮಿಂದ ಪ್ರಾಮಾಣಿಕ ಮತ್ತು ತ್ವರಿತ ಪ್ರತ್ಯುತ್ತರದ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಲಾಗಿದೆ.

  • ಪಾಕ್‌ ಪರ ಘೋಷಣೆ – ಎಫ್‌ಎಸ್‌ಎಲ್‌ ವರದಿ ಇನ್ನೂ ಬಂದಿಲ್ಲ : ಪರಮೇಶ್ವರ್

    ಪಾಕ್‌ ಪರ ಘೋಷಣೆ – ಎಫ್‌ಎಸ್‌ಎಲ್‌ ವರದಿ ಇನ್ನೂ ಬಂದಿಲ್ಲ : ಪರಮೇಶ್ವರ್

    ಬೆಂಗಳೂರು: ವಿಧಾನಸೌಧದಲ್ಲಿ ಪಾಕ್‌ ಘೋಷಣೆ (Pakistan Zindabad Slogan) ಪ್ರಕರಣದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿ (FSL Report) ಇನ್ನೂ ಬಂದಿಲ್ಲ ವರದಿ ಇನ್ನೂ ವರದಿ ಬರಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (Dr Parmeshwar) ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು ವರದಿ ಬಂದ ಮೇಲೆ‌ ಕೂಡಲೇ ಕ್ರಮ ತೆಗೆದುಕೊಳ್ಳುತ್ತೇವೆ. ಈಗಾಗಲೇ 7 ಮಂದಿಯನ್ನು ಕರೆದು ತನಿಖೆ ಮಾಡಿ ವಾಯ್ಸ್ ರೆಕಾರ್ಡ್ ಸಹಾ ಮಾಡಿದ್ದೇವೆ. ಧ್ವನಿ (Voice) ತಾಳೆಯಾಗಬೇಕು.ಒಂದು ವಾಹಿನಿಯದ್ದು ಅಲ್ಲ ಸಾಕಷ್ಟು ಕ್ಲಿಪ್ ಇದೆ. ಎಲ್ಲವನ್ನೂ ಪರೀಕ್ಷೆ ಮಾಡಬೇಕಾಗುತ್ತದೆ ಎಂದರು.  ಇದನ್ನೂ ಓದಿ: ರಾಮೇಶ್ವರ ಕೆಫೆಯಲ್ಲಿ ಬಾಂಬ್‌ ಸ್ಫೋಟ: ತೇಜಸ್ವಿ ಸೂರ್ಯ ಅನುಮಾನ

     

    ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಕೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ವರದಿಯಲ್ಲಿ ಏನಿದೆ ಗೊತ್ತಿಲ್ಲ. ಕ್ಯಾಬಿನೆಟ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಅದರಂತೆ ಮುಂದುವರಿಯೋಣ ಎಂದು ಸಿಎಂ ಹೇಳಿದ್ದಾರೆ. ಡೇಟಾ ಹೊರಗೆ ಬರುವವರೆಗೂ ಏನೂ ಹೇಳಲಾಗದು ಎಂದು ಹೇಳಿದರು. ಇದನ್ನೂ ಓದಿ: ಮೈಸೂರು-ಕುಶಾಲನಗರ ರೈಲ್ವೇ ಯೋಜನಾ ವೆಚ್ಚ 3168.77 ಕೋಟಿ ರೂ.ಗೆ ಏರಿಕೆ!

    ಜಾತಿ ಗಣತಿ ವರದಿಗೆ ಲಿಂಗಾಯತ, ಒಕ್ಕಲಿಗ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರಿಗೆ ಸಂಖ್ಯೆ ಕಡಿಮೆ ಇರಬಹುದು ಎಂಬ ಆತಂಕ ಇರಬಹುದು. ಈಗ ನೀಡಿರುವ ವರದಿ ಆಯೋಗದ ವರದಿ ಅಂತ ರಿಪೋರ್ಟ್ ಅಂತ ಆಗುತ್ತದೆ. ಕಾಂತರಾಜ್ ವರದಿ, ಜಯಪ್ರಕಾಶ್ ಹೆಗಡೆ ವರದಿ ಅಂತ ಬರುವುದಿಲ್ಲ ಎಂದಿದ್ದಾರೆ.

     

  • FSL ವರದಿಯಲ್ಲಿ ಚಂದ್ರು ಸಾವಿನ ಸ್ಫೋಟಕ ಸತ್ಯ

    FSL ವರದಿಯಲ್ಲಿ ಚಂದ್ರು ಸಾವಿನ ಸ್ಫೋಟಕ ಸತ್ಯ

    ದಾವಣಗೆರೆ: ಹಾಲಿ ಶಾಸಕ ರೇಣುಕಾಚಾರ್ಯ (Renukacharya) ಸಹೋದರನ ಮಗ ಚಂದ್ರಶೇಖರ್‌ (Chandru) ಸಾವು ಪ್ರಕರಣ ಅಂತಿಮ ಹಂತಕ್ಕೆ ಬಂದಿದೆ. ಈಗಾಗಲೇ ಮರಣೋತ್ತರ ಪರೀಕ್ಷೆ ವರದಿ ಪೊಲೀಸರ ಕೈ ಸೇರಿದೆ. ಮರಣೋತ್ತರ ಪರೀಕ್ಷೆಯ ಪ್ರಕಾರ ಶ್ವಾಸಕೋಶದ ಒಳಗೆ ನೀರು ನುಗ್ಗಿ ಸಾವನ್ನಪ್ಪಿದ್ದಾರೆ ಎಂದು ವರದಿಯನ್ನು ಕೊಟ್ಟಿದ್ದಾರೆ. ಇದನ್ನೂ ಓದಿ: ನನ್ನ ತೆಗೆಯಲು ನಿಖಿಲ್‍ರನ್ನು ಬಲಿ ಕೊಟ್ರು: ಎಲ್.ಆರ್.ಶಿವರಾಮೇಗೌಡ

    ಆದರೆ ಆಕ್ಸಿಡೆಂಟ್ ಸಂಭವಿಸಿದ್ಯಾ ಎಂಬುದನ್ನು ತಿಳಿಯಲು ವಿಧಿ ವಿಜ್ಞಾನ ಪ್ರಯೋಗಾಲಯದ (FSL) ವರದಿಗೆ ಪೊಲೀಸರು ಕಾಯುತ್ತಾ ಇದ್ರು. ಈಗ ಎಫ್‍ಎಸ್‍ಎಲ್ ಅಧಿಕಾರಿಗಳು ಕೂಡ ವರದಿ ನೀಡಿದ್ದಾರೆ. ಈಗಾಗಲೇ ಸರ್ಕಾರಿ ಎಫ್‍ಎಸ್‍ಎಲ್ ಕೂಡ ವರದಿ ನೀಡಿದೆ. ಇದರ ಪ್ರಕಾರ ಕಾರು ಅತಿಯಾದ ಸ್ಪೀಡ್‍ನಿಂದ ಡಿಕ್ಕಿ ಹೊಡೆದು ನೀರಿಗೆ ಬಿದ್ದಿದೆ ಎಂದಿದ್ದಾರೆ. ಪ್ರಕರಣದ ಮರುಸೃಷ್ಟಿಗೆ ತೆರಳಿದ್ದ ಖಾಸಗಿ ವಿಧಿ ವಿಜ್ಞಾನ ತಜ್ಞ ಫಣೀಂದ್ರ ಕೂಡ 40 ಪುಟಗಳ ವರದಿಯನ್ನು ನೀಡಿದ್ದಾರೆ. ವರದಿಯ ಪ್ರಕಾರ ಅಪಘಾತ ಸಂಭವಿಸಿದೆ ಎಂದು ವರದಿ ನೀಡಿದ್ದಾರೆ. ಇನ್ನು ಒಂದು ಹಂತದ ಪರೀಕ್ಷೆ ಬಾಕಿ ಇದೆ ಎಂದು ಫಣೀಂದ್ರ ಸ್ಪಷ್ಟಪಡಿಸಿದ್ದಾರೆ.

    ಏನಿದು ಪ್ರಕರಣ?
    ಅ.30ರ ಭಾನುವಾರ ಸಂಜೆ ಚಿಕ್ಕಮಗಳೂರು ಜಿಲ್ಲೆಯ ಗೌರಿಗದ್ದೆಗೆ ಹೋಗಿ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದ ಚಂದ್ರು ರಾತ್ರಿ ಊರಿಗೆ ಮರಳಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ದೆಹಲಿಯ ಸ್ನೇಹಿತರ ಜೊತೆ ಕೊನೆಯದಾಗಿ ಮಾತಾಡಿ ಬಳಿಕ ರಾತ್ರಿ 11:30ಕ್ಕೆ ಹೊನ್ನಾಳಿ ಪಟ್ಟಣದಲ್ಲಿ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಅಲ್ಲಿಂದ ಸಿಗ್ನಲ್ ಪತ್ತೆಯಾಗಿರಲಿಲ್ಲ. ಶಿವಮೊಗ್ಗದಿಂದ ನ್ಯಾಮತಿ ತಾಲೂಕಿನ ಸುರಹೊನ್ನೆಗೆ ಬಂದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಲಭ್ಯವಾಗಿತ್ತು. ಆದಾದ ಬಳಿಕ ನ.3 ರಂದು ಚಂದ್ರಶೇಖರ್ ಅವರ ಕ್ರೇಟಾ ಕಾರು ಸೊರಟೂರು ಬಳಿ ಇರುವ ತುಂಗಾಭದ್ರ ಕಾಲುವೆಯಲ್ಲಿ ಪತ್ತೆಯಾಗಿತ್ತು. ಹೊನ್ನಾಳಿ ಹಾಗೂ ನ್ಯಾಮತಿ ಮಾರ್ಗ ಮಧ್ಯೆ ಇರುವ ಕಾಲುವೆಯಲ್ಲಿ ಪತ್ತೆಯಾದ ಕಾರನ್ನು ಮೇಲಕ್ಕೆತ್ತಿದಾಗ ಕಾರಿನಲ್ಲೇ ಚಂದ್ರು ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆ ಬಳಿಕ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಇದನ್ನೂ ಓದಿ: ಚಂದ್ರು ದೇಹದಲ್ಲಿ ಒಳ ಉಡುಪು ಇರಲಿಲ್ಲ – ಸ್ನೇಹಿತರ ಸಲಿಂಗಕಾಮಕ್ಕೆ ಬಲಿಯಾದ್ರಾ ಯುವ ನಾಯಕ?

    Live Tv
    [brid partner=56869869 player=32851 video=960834 autoplay=true]

  • ಅನುಮಾನಸ್ಪದವಾಗಿ ಮಗಳು ಸಾವು- 1 ಲಕ್ಷ ಪಡೆದು ಮರಣೋತ್ತರ ವರದಿ ಕೊಟ್ಟ ಪೊಲೀಸ್

    ಅನುಮಾನಸ್ಪದವಾಗಿ ಮಗಳು ಸಾವು- 1 ಲಕ್ಷ ಪಡೆದು ಮರಣೋತ್ತರ ವರದಿ ಕೊಟ್ಟ ಪೊಲೀಸ್

    – ಎಫ್‍ಎಸ್‍ಎಲ್ ವರದಿಗಾಗಿ 1 ವರ್ಷದಿಂದ ಪೋಷಕರು ಅಲೆದಾಟ

    ಚಿಕ್ಕಬಳ್ಳಾಪುರ: ಅನುಮಾನಸ್ಪದವಾಗಿ ಸಾವನ್ನಪ್ಪಿದ್ದ ಮಗಳ ಸಾವಿನ ಸತ್ಯ ತಿಳಿಸಿ, ಮಗಳ ಸಾವಿನ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‍ಎಸ್‍ಎಲ್) ವರದಿಯಾದರೂ ಕೊಡಿ ಅಂತ ಪ್ರತಿದಿನ ತಾಯಿ ಪೊಲೀಸ್ ಠಾಣೆಗೆ ಬಂದು ಅಂಗಲಾಚಿದರೂ ಪೊಲೀಸರು ಸ್ಪಂದಿಸಿಲ್ಲವಂತೆ. ಎಫ್‍ಎಸ್‍ಎಲ್ ವರದಿ ಕೊಡುತ್ತೀನಿ ಎಂದ ಪೊಲೀಸಪ್ಪ ಒಂದು ಲಕ್ಷ ರೂಪಾಯಿ ಪಡೆದು ಮರಣೋತ್ತರ ಪರೀಕ್ಷೆ ವರದಿ ಕೊಟ್ಟಿದ್ದಾನೆ ಅಂತ ತಾಯಿಯೊಬ್ಬರು ಪೊಲೀಸ್ ಠಾಣೆಯೊಳಗೆ ರಂಪಾಟ ಮಾಡಿ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಬೆಸಲಪಲ್ಲಿ ಗ್ರಾಮದ ನಿವಾಸಿ ರಾಧಾ ಪೊಲೀಸ್ ಠಾಣೆಯೊಳಗೆ ರಂಪಾಟ ಮಾಡಿದ ಮಹಿಳೆ. ಇವರ ಮಗಳು ಸರಿತಾ ಚಿಕ್ಕಬಳ್ಳಾಪುರ ನಗರ ಹೊರವಲಯದ ಆದಿಚುಂಚನಗಿರಿ ಶಾಖಾ ಮಠದ ಬಿಜಿಎಸ್ ಕಾಲೇಜಿನಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದು, ಬಿಜಿಎಸ್ ವಸತಿ ನಿಲಯದಲ್ಲೇ 2017 ರ ಸೆಪ್ಟೆಂಬರ್ 9 ರಂದು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಳು. ಹೀಗಾಗಿ ತನ್ನ ಮಗಳ ಸಾವಿಗೆ ನ್ಯಾಯ ಕೊಡಿಸಿ ಸ್ವಾಮಿ ಅಂತ ಸರಿತಾ ತಂದೆ ಶ್ರೀನಿವಾಸ್ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇರೆಗೆ ತನಿಖೆ ಕೈಗೊಂಡ ಪೊಲೀಸರಿಗೆ 2018ರ ಏಪ್ರಿಲ್ ನಲ್ಲೇ ಎಫ್‍ಎಸ್‍ಎಲ್ ರಿಪೋರ್ಟ್ ಲಭಿಸಿದ್ದು, ಎಫ್‍ಎಸ್‍ಎಲ್ ವರದಿ ಪ್ರಕಾರ ಸರಿತಾ ಆರ್ಗಾನ್ ಫಾಸ್ಪರಸ್ ಕ್ರೀಮಿನಾಶಕ ಸೇವಿಸಿ ಸಾವನ್ನಪ್ಪಿರುವುದು ಧೃಡವಾಗಿದೆ.

    ಮಗಳ ಸಾವಿನ ಸತ್ಯ ತಿಳಿಸಿ ಅಂತ ಅಂದಿನಿಂದ ಇಂದಿನವರೆಗೂ ಅಲೆದರೂ ಪೊಲೀಸರು ಸತ್ಯ ಮಾತ್ರ ತಿಳಿಸುತ್ತಿಲ್ಲ. ಆದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪೇದೆ ರಂಗನಾಥ್ ಹಾಗೂ ಪಿಎಸ್‍ಐ ವೆಂಕಟೇಶ್ ಎಫ್‍ಎಸ್‍ಎಲ್ ವರದಿ ಕೊಡುತ್ತೀವಿ ಅಂತ ಒಂದು ಲಕ್ಷ ರೂಪಾಯಿ ಲಂಚ ಪಡೆದುಕೊಂಡಿದ್ದು, ಮರಣೋತ್ತರ ಪರೀಕ್ಷಾ ವರದಿ ಕೊಟ್ಟಿದ್ದಾರೆ ಅಂತ ಮೃತ ಸರಿತಾ ತಾಯಿ ರಾಧಾ ಗಂಭೀರ ಆರೋಪ ಮಾಡಿದ್ದಾರೆ.

    ಎಫ್‍ಎಸ್‍ಎಲ್ ವರದಿ ಸಿಗುತ್ತೆ ಅಂತ ಪೊಲೀಸರಿಗೆ ಒಂದು ಲಕ್ಷ ಕೊಟ್ಟು ಸರಿತಾ ತಂದೆ ತಾಯಿಗೆ ಪೊಲೀಸರು ಕೊಟ್ಟ ವರದಿ ಎಫ್‍ಎಸ್‍ಎಲ್ ಅಲ್ಲ ಅದು ಮರಣೋತ್ತರ ಪರೀಕ್ಷೆ ಮಾತ್ರ ಅಂತ ಗೊತ್ತಾದ ಕೂಡಲೇ ಪೋಷಕರು ಪೊಲೀಸರ ವಿರುದ್ಧ ತಿರುಗಿಬಿದ್ದಿದ್ದಾರೆ. ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ವೃತ್ತದಲ್ಲಿ ಕರ್ತವ್ಯನಿರತನಾಗಿದ್ದ ಪಿಎಸ್‍ಐ ವೆಂಕಟೇಶ್ ವಿರುದ್ಧ ಮುಗಿಬಿದ್ದು ನಡುರಸ್ತೆಯ್ಲಲೇ ಹಾದಿ ಬೀದಿ ರಂಪಾಟ ಮಾಡಿದ್ದಾರೆ. ಇದಲ್ಲದೇ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯೊಳಗೆ ನುಗ್ಗಿ ಪಿಎಸ್‍ಐ ವೆಂಕಟೇಶ್ ಹಾಗೂ ಪೇದೆ ರಂಗನಾಥ್ ವಿರುದ್ಧ ಕೆಂಡಕಾರಿದ್ದಾರೆ.

    ಪೋಷಕರ ಆರೋಪ:
    ಆದಿಚುಂಚನಗಿರಿ ಶಾಖಾಮಠದ ಬಿಜಿಎಸ್ ವಸತಿ ನಿಲಯದಲ್ಲೇ ವಿದ್ಯಾರ್ಥಿ ಸರಿತಾ ಸಾವನ್ನಪ್ಪಿರುವುದರಿಂದ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತೆ ಅನ್ನೋ ಉದ್ದೇಶದಿಂದ ಸಂಸ್ಥೆಯವರು ಪ್ರಕರಣದ ಮಾಹಿತಿಯನ್ನ ಬಹಿರಂಗಪಡಿದಂತೆ ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ. ಹೀಗಾಗಿ ನಮಗೆ ಕದ್ದು ಮುಚ್ಚಿ ಎಫ್‍ಎಸ್‍ಎಲ್ ವರದಿ ಕೊಡುತ್ತೀನಿ ಅಂತ ಅಪೂರ್ಣವಾದ ಮರಣೋತ್ತರ ವರದಿ ಕೊಟ್ಟು ಲಕ್ಷ ಕೊಳ್ಳೆ ಹೊಡೆದಿದ್ದಾರೆ ಅನ್ನೋದು ಪೋಷಕರ ಗಂಭೀರ ಆರೋಪವಾಗಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಚಿಕ್ಕಬಳ್ಳಾಪುರ ಎಸ್ಪಿ ಕಾರ್ತಿಕ್ ರೆಡ್ಡಿ ಮಹಿಳೆ ಮಾಡಿದ ಆರೋಪ ಗಮನಕ್ಕೆ ಬಂದಿದೆ. ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕೊನೆಗೂ ಪ್ರಸಾದದಲ್ಲಿ ಬೆರೆಸಿದ್ದ ವಿಷ ಯಾವುದು ಅನ್ನೋದು ಪತ್ತೆಯಾಯ್ತು!

    ಕೊನೆಗೂ ಪ್ರಸಾದದಲ್ಲಿ ಬೆರೆಸಿದ್ದ ವಿಷ ಯಾವುದು ಅನ್ನೋದು ಪತ್ತೆಯಾಯ್ತು!

    ಮೈಸೂರು: ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ದೇವಾಲಯದ ದುರಂತಕ್ಕೆ ಈಗಾಗಲೇ 14 ಮಂದಿ ಮೃತಪಟ್ಟಿದ್ದು, ಪ್ರಸಾದದಲ್ಲಿ ಬೆರೆಸಿದ್ದ ವಿಷ ಯಾವುದು ಎನ್ನುವುದು ವಿಧಿವಿಜ್ಞಾನ ಪ್ರಯೋಗಾಲಯ(ಎಫ್‍ಎಸ್‍ಎಲ್) ವರದಿ ಮೂಲಕ ತಿಳಿದು ಬಂದಿದೆ.

    ಭಕ್ತರು ಸೇವಿಸಿದ್ದ ವಿಷ ಪ್ರಸಾದದಲ್ಲಿ ಕ್ರಿಮಿನಾಶಕವನ್ನು ಮಿಶ್ರಣ ಮಾಡಿರುವುದು ದೃಢಪಟ್ಟಿದೆ. ದುಷ್ಕರ್ಮಿಗಳು ಮೊದಲಿಗೆ ನೀರಿನಲ್ಲಿ ಕ್ರಿಮಿನಾಶಕವನ್ನು ಮಿಶ್ರಣ ಮಾಡಿಕೊಂಡು ಬಳಿಕ ಪ್ರಸಾದಕ್ಕೆ ಬೆರೆಸಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಖಚಿತವಾಗಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಐಜಿಪಿ ಶರತ್ ಚಂದ್ರ ಅವರು, ಪ್ರಸಾದದಲ್ಲಿ ಆರ್ಗಾನ್ ಪಾಸ್ಪಾರಸ್ ಕಾಂಪೌಂಡ್ ಮೊನೊ ಕ್ರೋಟೋ ಫೋಸ್ ಮಿಶ್ರಣ ಆಗಿದೆ ಎನ್ನುವ ವರದಿ ಬಂದಿದೆ. ಇದನ್ನು ಕೀಟನಾಶಕ್ಕೆ ಬಳಸುತ್ತಾರೆ. ಗಿಡಕ್ಕೆ ಹುಳು ಮತ್ತು ರೋಗ ಬಂದಾಗ ಈ ಕೀಟನಾಶವನ್ನು ಸಿಂಪಡಿಸಲಾಗುತ್ತದೆ. ಇದೇ ಕ್ರಿಮಿನಾಶಕವನ್ನು ಬೆರೆಸಿರುವುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.

    ಈ ಕುರಿತು ಸದ್ಯಕ್ಕೆ ಅನುಮಾನ ಬಂದಂತಹ ವ್ಯಕ್ತಿಗಳನ್ನು ಕರೆದುಕೊಂಡು ಪ್ರಶ್ನೆ ಮಾಡಿ ವಿಚಾರಣೆ ಮಾಡುತ್ತಿದ್ದೇವೆ. ಶೀಘ್ರವಾಗಿಯೇ ತನಿಖೆ ನಡೆಯುತ್ತಿದೆ ಎಂದು ಶರತ್ ಚಂದ್ರ ಅವರು ಹೇಳಿದ್ದಾರೆ. ಈಗಾಗಲೇ ಮಾರಮ್ಮ ದೇವಾಲಯದ ವಿಷಪ್ರಸಾದಕ್ಕೆ 14 ಮಂದಿ ಮೃತಪಟ್ಟಿದ್ದು, ಮೃತಪಟ್ಟ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

    ಕೀಟನಾಶಕ ಶಂಕೆಯಿತ್ತು:
    ದೇವರ ಪ್ರಸಾದದಲ್ಲಿ ವಿಷ ಬೆರತಿರುವುದರಿಂದ ಈ ದುರಂತ ಸಂಭವಿಸಿರಬಹುದು ಎಂದು ಕೆ.ಆರ್.ಆಸ್ಪತ್ರೆಯ ವೈದ್ಯರಾದ ರಾಜೇಶ್ ಕುಮಾರ್ ಶುಕ್ರವಾರವೇ ಶಂಕೆ ವ್ಯಕ್ತಪಡಿಸಿದ್ದರು. ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದ ಅವರು, ಇದೂವರೆಗೂ ಕೆಆರ್ ಆಸ್ಪತ್ರೆಯಲ್ಲಿ ಒಟ್ಟು 25 ಮಂದಿ ದಾಖಲಾಗಿದ್ದಾರೆ. ಅಸ್ವಸ್ಥರಾಗಿರುವವರೆಲ್ಲಾ ಉಸಿರಾಡಲೂ ಸಹ ಕಷ್ಟ ಪಡುತ್ತಿದ್ದಾರೆ. ಅಸ್ವಸ್ಥರ ಗುಣಲಕ್ಷಣಗಳನ್ನು ನೋಡಿದರೇ, ಆಹಾರದಲ್ಲಿ ಕೀಟನಾಶಕ ಬೆರೆತಿರುವ ಸಂಶಯ ವ್ಯಕ್ತವಾಗುತ್ತಿದೆ. ಜಮೀನುಗಳಲ್ಲಿ ಬೆಳೆಗಳಿಗೆ ಸಿಂಪಡಿಸುವ ಕೀಟನಾಶಕ ಇರಬಹುದೆಂದು ಅಂದಾಜಿಸಲಾಗಿದೆ. ಆದರೆ ಈ ಬಗ್ಗೆ ನಿಖರವಾಗಿ ಈಗ ಹೇಳಲು ಸಾಧ್ಯವಾಗುವುದಿಲ್ಲ. ರೋಗಿಗಳ ರಕ್ತ, ವಾಂತಿ ಹಾಗೂ ಆಹಾರದ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟು ವರದಿ ಬಂದ ಬಳಿಕ ಘಟನೆಗೆ ನಿಖರ ಕಾರಣವನ್ನು ಹೇಳಬಹುದೆಂದು ತಿಳಿಸಿದ್ದರು.

    ನಡೆದಿದ್ದು ಏನು?
    ಸುಲ್ವಾಡಿ ಗ್ರಾಮದ ಕಿಚ್ಚುಕುತ್ತಿ ಮಾರಮ್ಮ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ಗೋಪುರದ ಶಂಕುಸ್ಥಾಪನೆ ನಡೆದಿತ್ತು. ಈ ಕಾರ್ಯಕ್ರಮದ ನಿಮಿತ್ತ ಭಕ್ತರಿಗೆ ಹಾಗೂ ಸ್ಥಳೀಯರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಭಕ್ತರು ಪ್ರಸಾದದ ರೂಪದಲ್ಲಿ ರೈಸ್‍ಬಾತ್ ಸೇವಿಸಿದ್ದಾರೆ. ಸ್ವಲ್ಪ ಸಮಯದ ನಂತರ ರೈಸ್‍ಬಾತ್ ಸೇವಿಸಿದ್ದ 80ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿ ಬಿದ್ದಿದ್ದಾರೆ. ಇದನ್ನು ನೋಡಿದ ಸ್ಥಳೀಯರೊಬ್ಬರು 108ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ದುರಂತದಲ್ಲಿ ಈವರೆಗೂ 14 ಮಂದಿ ಮೃತಪಟ್ಟಿದ್ದಾರೆ.

    https://www.youtube.com/watch?v=EBJ_QLJGny8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv