Tag: Fruit Salad

  • ಕನ್ನಡ ಸಿನಿಮಾ ಹಾಡಿನಲ್ಲಿ ಹೀರೋಯಿನ್ ಹೊಕ್ಕಳಿನ ಮೇಲೆ ಹಣ್ಣಿನ ಸಲಾಡ್ ಮಾಡಲಾಗುತ್ತಿತ್ತು: `ಆ’ ನಟಿಯ ಹೇಳಿದ್ಯಾರಿಗೆ?

    ಕನ್ನಡ ಸಿನಿಮಾ ಹಾಡಿನಲ್ಲಿ ಹೀರೋಯಿನ್ ಹೊಕ್ಕಳಿನ ಮೇಲೆ ಹಣ್ಣಿನ ಸಲಾಡ್ ಮಾಡಲಾಗುತ್ತಿತ್ತು: `ಆ’ ನಟಿಯ ಹೇಳಿದ್ಯಾರಿಗೆ?

    ನ್ನಡ ಚಿತ್ರ ಸೇರಿದಂತೆ ಸಲ್ಮಾನ್ ಖಾನ್ ಜೊತೆ ನಟಿಸಿದ್ದ ಬಹುಭಾಷಾ ನಟಿ ವಿವಾದಾತ್ಮಕ ಹೇಳಿಕೆಯೊಂದನ್ನ ಕೊಟ್ಟಿದ್ದಾರೆ. ಕನ್ನಡ ಚಿತ್ರಗಳ ಮೂಲಕವೇ ನಾಯಕಿಯಾಗಿ ಎಂಟ್ರಿ ಕೊಟ್ಟ ಈ ನಟಿ ಬಳಿಕ ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸಿದ್ದರು. ಅವರೇ ನಟಿ ಡೈಸಿ ಶಾ. ಇದೀಗ ಡೈಸಿ ಶಾ ದಕ್ಷಿಣ ಭಾರತದ ಚಿತ್ರರಂಗ ಹಾಗೂ ಕನ್ನಡ ಸಿನಿಮಾಗಳಲ್ಲಿ ನಾಯಕಿಯನ್ನ ಹೇಗೆ ಫೋಕಸ್ ಮಾಡಲಾಗುತ್ತದೆ ಅನ್ನೋದ್ರ ಕುರಿತು ವಿವಾದಾತ್ಮಕವಾಗಿ ಮಾತನಾಡಿದ್ದಾರೆ.

    ಖಾಸಗಿ ಯೂಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಡೈಸಿ ಶಾ ಸಂದರ್ಶಕರ ಜೊತೆ ಬಾಲಿವುಡ್ ಹಾಗೂ ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕಿಯನ್ನ ತೋರಿಸುವ ವಿಧಾನದ ಕುರಿತು ಮಾತನಾಡುವ ವೇಳೆ ವಿಚಿತ್ರ ವಿಕ್ಷಿಪ್ತ ಹೇಳಿಕೆಯನ್ನ ಕೊಟ್ಟಿದ್ದಾರೆ. ಒಂದೆರಡು ಹಾಡನ್ನ ನೋಡಿರುವ ಮಾತ್ರಕ್ಕೆ ಇಡೀ ಕನ್ನಡ ಸಿನಿಮಾ ಇಂಡಸ್ಟ್ರಿಯ ಇತಿಹಾಸವನ್ನೇ ತಿರುಚುವ ಪ್ರಯತ್ನ ಮಾಡಿದ್ದಾರೆ ಈ ನಟಿ. ಬಹುಶಃ ಈ ವಿಚಾರ ಮುಂದಿನ ದಿನ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಚರ್ಚೆಯಾಗೋದ್ರಲ್ಲಿ ಅನುಮಾನವಿಲ್ಲ.

    ಡೈಸಿ ಶಾ ಹೇಳಿದ್ದೇನು..?
    ಕನ್ನಡ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾಗ, ಪುರುಷ ನಟರಿಗೆ ಸರಿಯಾದ ಹಿನ್ನೆಲೆ ಮತ್ತು ಉಪಪಠ್ಯದೊಂದಿಗೆ ನಿರ್ದೇಶನ ನೀಡಲಾಗುತ್ತಿತ್ತು. ಆದರೆ ನಾಯಕಿಯರಾದ ನಮಗೆ ಇಲ್ಲಿ ನಗಬೇಕು, ಇಲ್ಲಿ ಅಳಬೇಕು, ಇಲ್ಲಿ ಹೀಗಿರಬೇಕು ಎಂದಷ್ಟೇ ಹೇಳಲಾಗುತ್ತಿತ್ತು. ಭಾಷೆಯಲ್ಲಿ ಚೆನ್ನಾಗಿ ಪರಿಣತಿ ಇಲ್ಲದಿರುವುದು ಇದಕ್ಕೆ ಕಾರಣ ಇರಬಹುದು.

    ನಟಿ ಹೇಳಿದ ವಿವಾದಾತ್ಮಕ ಮಾತೇನು..?
    ‘ನಾನು ಕನ್ನಡ ಸಿನಿಮಾದಲ್ಲಿ ಕೆಲಸ ಮಾಡುವಾಗ, ನನ್ನ ಬಿಡುವಿನ ಸಮಯದಲ್ಲಿ ನಾನು ಟಿವಿ ನೋಡುತ್ತಿದ್ದೆ. ಮತ್ತು ನಾನು ನೋಡಿದ ಎಲ್ಲಾ ಕನ್ನಡ ಹಾಡುಗಳಲ್ಲಿ… ಒಬ್ಬ ನಿರ್ದಿಷ್ಟ ನಟನಿದ್ದರು. ಅವರ ಎಲ್ಲಾ ಹಾಡುಗಳಲ್ಲಿ, ನಾಯಕಿಯ ಹೊಕ್ಕುಳಿನ ಮೇಲೆ ಹಣ್ಣಿನ ಸಲಾಡ್ ಅಥವಾ ತರಕಾರಿ ಸಲಾಡ್‌ನ್ನು ಕ್ಲೋಸ್-ಅಪ್ ಶಾಟ್‌ಗಳೊಂದಿಗೆ ಚಿತ್ರೀಕರಣ ಮಾಡಲಾಗುತ್ತಿತ್ತು. ಕೆಲವೊಮ್ಮೆ ಹೊಕ್ಕುಳಿನ ಮೇಲೆ ಐಸ್ ಅಥವಾ ನೀರನ್ನು ಸುರಿಯಲಾಗುತ್ತಿತ್ತು.’

    ಹೀಗೆ ನಟಿ ಡೈಸಿ ಶಾ ಕನ್ನಡದ ಕೆಲವೇ ಹಾಡುಗಳನ್ನ ನೋಡಿ ಇಡೀ ಇಂಡಸ್ಟ್ರಿ ಮೇಲಿರುವ ಅಭಿಪ್ರಾಯವನ್ನ ಬೇರೆ ರೀತಿಯಲ್ಲಿ ಕೊಂಡೊಯ್ಯುವ ಪ್ರಯತ್ನ ಮಾಡಿರುವುದು ಕಾಣುತ್ತದೆ. ಕನ್ನಡ ಸಿನಿಮಾ ಇಂಡಸ್ಟ್ರಿಯ ಹಿರಿಮೆ ಪ್ರೌಢಿಮೆ ಇತಿಹಾಸವನ್ನ ಪ್ರಶ್ನೆ ಮಾಡುವಂತಿದೆ ಡೈಸಿ ಮಾತು. ಹಾಟರ್‌ಫ್ಲೈ ಯೂಟ್ಯೂಬ್ ವಾಹಿನಿಗೆ ಡೈಸಿ ಶಾ ನೀಡಿರುವ ಸಂದರ್ಶನದಲ್ಲಿ ವಿವಾದಾತ್ಮಕ ಮಾತನಾಡಿದ್ದಾರೆ.

    ಅಂದಹಾಗೆ ಈ ಡೈಸಿ ಶಾ ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರ ಸಹಾಯಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಟನೆಗೆ ಕಾಲಿಡುವ ಮೊದಲು ಹಲವಾರು ಬಾಲಿವುಡ್ ಹಾಡುಗಳಲ್ಲಿ ಹಿನ್ನೆಲೆ ನರ್ತಕಿಯಾಗಿ ಕಾಣಿಸಿಕೊಂಡರು. ಬಳಿಕ ಮಹೇಶ್ ರಾವ್ ನಿರ್ದೇಶನದಲ್ಲಿ ಪ್ರಜ್ವಲ್ ದೇವರಾಜ್ ನಟನೆಯ ಭದ್ರ ಚಿತ್ರದ ಮೂಲಕ ನಟಿಯಾಗಿ ಭಡ್ತಿ ಪಡೆದವರು. ಬಳಿಕ ಜಗ್ಗೇಶ್ ಅಭಿನಯದ ಬಾಡಿಗಾರ್ಡ್ ಚಿತ್ರದಲ್ಲಿ ನಟಿಸಿದ್ದರು. ಬಳಿಕ ಸಲ್ಮಾನ್ ಖಾನ್ ಅವರ ಜೈ ಹೋ ಚಿತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್ ನಟಿಯಾಗಿ ಖ್ಯಾತಿ ಪಡೆದಿದ್ರು. ಇದೀಗ ರಿಯಾಲಿಟಿ ಶೋ ಹೇಟ್‌ಸ್ಟೋರಿ ಸೇರಿದಂತೆ ಅಲ್ಲಿ ಇಲ್ಲಿ ಪಾತ್ರ ಮಾಡ್ತಿರುವ ಈ ಅವಕಾಶ ವಂಚಿತ ನಟಿ ತಮ್ಮ ಅಪ್ರಬುದ್ಧ ಹೇಳಿಕೆಯಿಂದ ಸುದ್ದಿಗೆ ಬಂದಿದ್ದಾರೆ.

  • ಶಿವರಾತ್ರಿ ಸ್ಪೆಷಲ್- ಫ್ರೂಟ್ ಸಲಾಡ್ ಮಾಡುವ ಸರಳ ವಿಧಾನ

    ಶಿವರಾತ್ರಿ ಸ್ಪೆಷಲ್- ಫ್ರೂಟ್ ಸಲಾಡ್ ಮಾಡುವ ಸರಳ ವಿಧಾನ

    ಶುಕ್ರವಾರ ಶಿವರಾತ್ರಿ ಆಚರಣೆಗೆ ಸಿದ್ಧತೆಗಳು ಮನೆಯಲ್ಲಿ ಆರಂಭಗೊಂಡಿರುತ್ತವೆ. ಶಿವರಾತ್ರಿ ಅಂದ್ರೆ ಉಪವಾಸ ವ್ರತ ಆಚರಣೆ ಇದ್ದೇ ಇರುತ್ತದೆ. ಕಳೆದ ಕೆಲ ದಿನಗಳಿಂದಲೂ ಬಿಸಿಲು ಹೆಚ್ಚಾಗ್ತಾನೆ ಇದೆ. ಹಾಗಾಗಿ ಉಪವಾಸ ವ್ರತ ಆಚರಣೆ ಸ್ವಲ್ಪ ಕಷ್ಟವಾಗಬಹುದು. ಶಿವನ ಭಕ್ತರಿಗೆ ಈ ಉಪವಾಸ ವ್ರತ ಆಚರಣೆಯಲ್ಲಿ ನೆಮ್ಮದಿಯ ಭಾವ ಇರುತ್ತದೆ. ಆದ್ರೂ ಉಪವಾಸದ ಬಳಿಕ ಪೌಷ್ಠಿಕಾಂಶವುಳ್ಳ ಆಹಾರ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಶಿವರಾತ್ರಿಗಾಗಿ ವಿಶೇಷ ಫ್ರೂಟ್ ಸಲಾಡ್ ಮಾಡಿ ಹಬ್ಬವನ್ನು ಆರೋಗ್ಯಕರವಾಗಿ ಆಚರಿಸಿ.

    ಬೇಕಾಗುವ ಪದಾರ್ಥಗಳು
    * ಸೀಬೆ ಹಣ್ಣು
    * ಅನಾನಸ್
    * ದಾಳಿಂಬೆ
    * ಸ್ವೀಟ್ ಕಾರ್ನ್
    * ಆಪಲ್
    * ಪೆಪ್ಪರ್ ಪೌಡರ್
    * ಉಪ್ಪು
    * ನಿಂಬೆ ಹಣ್ಣಿನ ರಸ
    * ಕಾಯಿ ತುರಿ

    ಮಾಡುವ ವಿಧಾನ
    * ಮೊದಲಿಗೆ ಒಂದು ಮಿಕ್ಸಿಂಗ್ ಬೌಲ್‍ಗೆ ಸಣ್ಣಗೆ ಹೆಚ್ಚಿದ ಸೀಬೆಹಣ್ಣು, ಸಣ್ಣಗೆ ಹೆಚ್ಚಿದ ಅನಾನಸ್(ಪೈನಾಪಲ್), ಸಣ್ಣಗೆ ಹೆಚ್ಚಿದ ಆಪಲ್, ಸ್ವೀಟ್ ಕಾರ್ನ್, ದಾಳಿಂಬೆಯನ್ನು ಸೇರಿಸಿ ಮಿಕ್ಸ್ ಮಾಡಿ.
    * ಈಗ ಮಿಶ್ರಣಕ್ಕೆ ಪೆಪ್ಪರ್ ಪೌಡರ್, ಉಪ್ಪು, ನಿಂಬೆ ಹಣ್ಣಿನ ರಸ ಸೇರಿಸಿ ಸಮ ಪ್ರಮಾಣದಲ್ಲಿ ಮಿಕ್ಸ್ ಮಾಡಿ.
    * ಬಳಿಕ ಸರ್ವ್ ಮಾಡುವಾಗ ಕಾಯಿ ತುರಿ ಸೇರಿಸಿ ಸರ್ವ್ ಮಾಡಿ..
    (ಬೇಕಿದ್ದಲ್ಲಿ ಇದಕ್ಕೆ ಕ್ಯಾರೆಟ್ ತುರಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಬಹುದು)

  • 5 ನಿಮಿಷದಲ್ಲಿ ಮಾಡಿ ಸ್ವೀಟ್ ಫ್ರುಟ್ಸ್ ಸಲಾಡ್

    5 ನಿಮಿಷದಲ್ಲಿ ಮಾಡಿ ಸ್ವೀಟ್ ಫ್ರುಟ್ಸ್ ಸಲಾಡ್

    ಣ್ಣುಗಳು ಆರೋಗ್ಯಕ್ಕೆ ಉತ್ತಮ. ಹೀಗಾಗಿ ಮನೆಯಲ್ಲಿ ಹಣ್ಣುಗಳು ಇದ್ದೇ ಇರುತ್ತವೆ. ಆದರೆ ಮಕ್ಕಳು ಸೇರಿದಂತೆ ಮನೆಯವರು ಕೂಡ ಒಂದೊಂದೆ ಹಣ್ಣುಗಳನ್ನು ತಿನ್ನಲು ಇಷ್ಟ ಪಡುವುದಿಲ್ಲ. ಆದ್ದರಿಂದ ಅವರಿಗಾಗಿ ಸಿಂಪಲ್ ಆಗಿ 5 ನಿಮಿಷದಲ್ಲೇ ಫ್ರುಟ್ಸ್ ಸಲಾಡ್ ಮಾಡುವ ವಿಧಾನ ಇಲ್ಲಿದೆ..

    ಬೇಕಾಗುವ ಸಾಮಾಗ್ರಿಗಳು
    1. ಬನಾನಾ – 1
    2. ಸೇಬು – 1
    3. ಕಿತ್ತಳೆ – 1
    4. ಕಿವಿ ಫ್ರುಟ್ – 1
    5. ಸಕ್ಕರೆ – 100 ಗ್ರಾಂ
    6. ದ್ರಾಕ್ಷಿ ಮತ್ತು ಕಪ್ಪು ದ್ರಾಕ್ಷಿ- ಅರ್ಧ ಬೌಲ್
    7. ಚೆರ್ರಿ – 4-5

    ಮಾಡುವ ವಿಧಾನ
    * ಕಾಲ್ ಲೋಟ ನೀರಿಗೆ 100 ಗ್ರಾಂ ಸಕ್ಕರೆ ಹಾಕಿ ಕಲಸಿ.
    * ಸಕ್ಕರೆ ಕರಗಿದ ನಂತರ ಅದಕ್ಕೆ ದ್ರಾಕ್ಷಿಯನ್ನು ಸಣ್ಣಗೆ ಕಟ್ ಮಾಡಿ ಹಾಕಿ.
    * ನಂತರ ಸೇಬು, ಚೆರ್ರಿ, ಬನಾನಾವನ್ನು ಸಣ್ಣಗೆ ಕಟ್ ಮಾಡಿ ಹಾಕಿ.
    * ಈಗ ಕಿತ್ತಳೆ ಮತ್ತು ಕಿವಿ ಫ್ರುಟ್ ನ ಸಿಪ್ಪೆಯನ್ನು ತೆಗೆದು ಸಣ್ಣಗೆ ಕತ್ತರಿಸಿ ಹಾಕಿ.
    * ಎಲ್ಲ ಹಣ್ಣನ್ನು ಸಕ್ಕರೆ ನೀರಿನಲ್ಲಿ ಮಿಕ್ಸ್ ಮಾಡಿದರೆ ಸ್ವೀಟ್ ಫ್ರುಟ್ಸ್ ಸಲಾಡ್ ಸವಿಯಲು ಸಿದ್ಧ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv