Tag: Friendship

  • ಒಟ್ಟಿಗೆ ಕಾಣಿಸುತ್ತೆ, ಒಟ್ಟಿಗೆ ಮಲಗುತ್ತೆ- ಕಪ್ಪೆಯ ಜೊತೆಗೆ ಹಾವಿನ ಗೆಳೆತನ – ವಿಡಿಯೋ ನೋಡಿ

    ಒಟ್ಟಿಗೆ ಕಾಣಿಸುತ್ತೆ, ಒಟ್ಟಿಗೆ ಮಲಗುತ್ತೆ- ಕಪ್ಪೆಯ ಜೊತೆಗೆ ಹಾವಿನ ಗೆಳೆತನ – ವಿಡಿಯೋ ನೋಡಿ

    ಕಾರವಾರ: ಹಾವಿಗೆ ಕಪ್ಪೆ ಆಹಾರ, ಕಪ್ಪೆಯನ್ನು ಹಾವು ನುಂಗುವುದು ನೈಸರ್ಗಿಕ. ಕೆಲವು ಕಡೆ ಕಪ್ಪೆ ಕೂಡ ಹಾವನ್ನು ನುಂಗಿದ ಘಟನೆಗಳು ಕೂಡ ನಡೆದಿದೆ. ಆದರೆ ಹಾವು ಮತ್ತು ಕಪ್ಪೆ ಒಟ್ಟಿಗೆ ಜೀವನ ನಡೆಸುತ್ತೆ ಎಂದರೆ ನೀವು ನಂಬುವುದು ಕಷ್ಟ. ಆದರೆ ನೀವು ಈಗ ನಂಬಲೇಬೇಕು.

    ಕಾರವಾರದಲ್ಲಿ ಕಪ್ಪೆಯೊಂದು ಹಾವಿನ ಜೊತೆ ಜೀವನ ನಡೆಸುತ್ತಿದೆ. ಕಪ್ಪೆಯ ಜೊತೆ ಬಾವಿಯಲ್ಲಿ ಈಜುತ್ತಾ ಅದರೊಂದಿಗೆ ಕುಳಿತಿರೋದನ್ನು ನೋಡಿದ್ರೆ ಈ ಕಪ್ಪೆಯನ್ನು ಹಾವು ನುಂಗಲು ಸಿದ್ಧತೆ ನಡೆಸಿದ್ಯಾ ಎಂದು ನಿಮಗೆ ಅನುಮಾನ ಹುಟ್ಟಬಹುದು. ಆದ್ರೆ ಈ ಹಾವು ಕಪ್ಪೆ ಜೊತೆ ಗೆಳೆತನ ಬೆಳೆಸಿದೆ.

    ನಗರದ ಕೆ.ಹೆಚ್.ಬಿ ಕಾಲೋನಿಯ ಚಾರ್ಟೆಡ್ ಅಕೌಂಟೆಂಟ್ ಆಗಿರೋ ಗಣಪತಿ ಹೆಗಡೆ ಎಂಬವರ ಮನೆಯ ಬಾವಿಯಲ್ಲಿ ಈ ವಿಸ್ಮಯ ಕಂಡು ಬಂದಿದೆ. ಕಳೆದ ಒಂದು ತಿಂಗಳುಗಳಿಂದ ಈ ಕಪ್ಪೆ ಹಾಗೂ ಕೆರೆಹಾವು(ನೀರ್ ಹಾವು)ಒಟ್ಟಿಗೇ ಇವೆ. ಮನೆಯ ಮಾಲೀಕ ಬಾವಿಯ ಪಂಪಸೆಟ್ ರಿಪೇರಿ ಮಾಡಿಸುವಾಗ ಈ ಹಾವು ಕಪ್ಪೆ ಒಟ್ಟಿಗೆ ಇರೋದು ಪತ್ತೆಯಾಗಿದೆ.

    ಮೊದಲು ಇದನ್ನು ತಿನ್ನಬಹುದು ಎಂದು ಎಲ್ಲರೂ ಊಹಿಸಿದ್ರು, ಆದ್ರೆ ಹಾವು ಕಪ್ಪೆಜೊತೆ ಸದಾ ಇರುವುದನ್ನು ಮನೆಯ ಮಾಲೀಕರು ಗಮನಿಸಿದ್ರು. ಇನ್ನು ಹಾವು ಆಹಾರ ಹುಡುಕಲು ಬಾವಿಯ ಒಳಗೆ ಓಡಾಡಿದ್ರೆ ಕಪ್ಪೆ ಬಾವಿಯಲ್ಲಿ ಚಿಕ್ಕ ಪುಟ್ಟ ಹುಳಗಳನ್ನು ತಿಂದು ಬದುಕುತ್ತಿದೆ.

    ವಿಶ್ರಾಂತಿ ಪಡೆಯಬೇಕೆಂದಾಗ ಬಾವಿಯ ಚಿಕ್ಕ ಕಟ್ಟೆಯ ಮೇಲೆ ಹಾವು ಮಲಗಿದ್ರೆ ಅದರ ಮೇಲೆ ಕಪ್ಪೆ ಮಲಗುತ್ತೆ. ಹೀಗೆ ಅನೋನ್ಯವಾಗಿ ಬದ್ದ ವೈರಿಗಳು ಜೊತೆಯಾಗಿ ಜೀವನ ನಡೆಸುತಿದ್ದು ಪ್ರಕೃತಿಯ ವಿಸ್ಮಯಕ್ಕೆ ಸಾಕ್ಷಿಯಾಗಿದ್ದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.

    https://www.youtube.com/watch?v=BPONcL3yRzc

  • ಮನೆಗೆ ಬಂದಿಲ್ಲ ಅಂದ್ರೆ ಸಾಯಿಸಿ ಬಿಡ್ತೀನಿ ಅಂದಿದ್ದ: ರಜನಿಕಾಂತ್

    ಮನೆಗೆ ಬಂದಿಲ್ಲ ಅಂದ್ರೆ ಸಾಯಿಸಿ ಬಿಡ್ತೀನಿ ಅಂದಿದ್ದ: ರಜನಿಕಾಂತ್

    ಬೆಂಗಳೂರು: ಅಂಬರೀಶ್ ನನ್ನ ಆತ್ಮೀಯ ಗೆಳೆಯ ಅವನ ಅಗಲಿಕೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಸೂಪರ್ ಸ್ಟಾರ್ ರಜನಿಕಾಂತ್ ದು:ಖವನ್ನು ಹೊರಹಾಕಿದ್ದಾರೆ.

    ಕಂಠೀರವ ಸ್ಟೇಡಿಯಂನಲ್ಲಿ ಅಂಬರೀಶ್ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿ ಪ್ರತಿಕ್ರಿಯಿಸಿದ ಅವರು, ಬೆಂಗಳೂರಿಗೆ ಯಾವಾಗಲೂ ಬಂದರೂ ನಾನು ಅಂಬರೀಶ್ ಮನೆಯಲ್ಲಿ ಊಟಮಾಡಿಯೇ ಹೋಗುತ್ತಿದ್ದೆ. ಇತ್ತೀಚೆಗೆ ನಾಲ್ಕೈದು ಬಾರಿ ಬೆಂಗಳೂರಿಗೆ ಬಂದಾಗ ಅವನ ಮನೆಗೆ ಹೋಗಲು ಆಗಿರಲಿಲ್ಲ ಎಂದು ತಿಳಿಸಿದರು.

    ಒಂದು ವಾರದ ಹಿಂದೆ ನನ್ನ ಅಣ್ಣನ ಮಗಳ ಮದುವೆಗೆ ಬೆಂಗಳೂರಿಗೆ ಬಂದಿದ್ದೆ. ಆಗ ಅಂಬರೀಶ್‍ಗೆ ಫೋನ್ ಮಾಡಿದಾಗ ಈ ಬಾರಿ ನಿನ್ನ ಮನೆಗೆ ಬರಲು ಆಗೋದಿಲ್ಲ ಮತ್ತೊಮ್ಮೆ ಬೆಂಗಳೂರಿಗೆ ಬಂದಾಗ ಬರುತ್ತೇನೆ ಎಂದು ಹೇಳಿದ್ದಕ್ಕೆ ಮತ್ತೆ ಬಂದಾಗ ಮನೆಗೆ ಬರಲಿಲ್ಲ ಅಂದ್ರೆ ಸಾಯಿಸಿ ಬಿಡ್ತೀನಿ ಅಂತಾ ಅಂಬಿ ಹೇಳಿದ್ದ ಎಂದು ತಿಳಿಸಿದರು.

    ನಾವಿಬ್ಬರು ಆತ್ಮೀಯ ಸ್ನೇಹಿತರು. ನನಗೂ ಅಂಬರೀಶ್‍ಗೂ ಅವಿನಾಭಾವ ಸಂಬಂಧವಿದೆ. ಅಂಬರೀಶ್ ನಮ್ಮನ್ನೆಲ್ಲಾ ಬಿಟ್ಟು ಹೋಗಿರುವುದು ಬಹಳ ದು:ಖವಾಗುತ್ತಿದೆ ಎಂದು ರಜನಿಕಾಂತ್ ಸಂತಾಪ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ನೇಹಿತೆಯ ತಂದೆಯನ್ನೇ ವರಿಸಿದ 27ರ ವಧು

    ಸ್ನೇಹಿತೆಯ ತಂದೆಯನ್ನೇ ವರಿಸಿದ 27ರ ವಧು

    ವಾಷಿಂಗ್ಟನ್: ಪ್ರೀತಿ-ಪ್ರೇಮಕ್ಕೆ ಕಣ್ಣಿಲ್ಲ, ವಯಸ್ಸಿನ ಮಿತಿಯಿಲ್ಲ ಎಂದು ಹೇಳುತ್ತಾರೆ. ಅದೇ ರೀತಿ 27 ವಯಸ್ಸಿನ ವಧು ತನ್ನ ಸ್ನೇಹಿತೆಯ 54 ವಯಸ್ಸಿನ ತಂದೆಯ ಜೊತೆ ಮದುವೆಯಾಗಿದ್ದಾರೆ.

    ಈ ಘಟನೆ ಅಮೆರಿಕಾದ ಅರಿಜೋನಾದಲ್ಲಿ ನಡೆದಿದೆ. ಕರ್ನ್ ಲೆಹಮಾನ್ ಎಂಬ ವ್ಯಕ್ತಿಯೊಂದಿಗೆ 27ರ ಟೇಲರ್ ಎಂಬವರು ಒಂದು ವರ್ಷದ ಹಿಂದೆಯೇ ಮದುವೆಯಾಗಿದ್ದಾರೆ.

    ಪ್ರೀತಿಯಾಗಿದ್ದು ಹೇಗೆ?
    ಐದು ವರ್ಷದ ಹಿಂದೆ ಬಾರ್ ಒಂದರಲ್ಲಿ ಕರ್ನ್ ಲೆಹಮಾನ್ ಮತ್ತು ಟೇಲರ್ ಇಬ್ಬರಿಗೂ ಪರಿಚಯವಾಗಿತ್ತು. ಸ್ನೇಹ ಪ್ರೀತಿಯಾಗಿ ತಿರುಗಿ ಬಳಿಕ ಈ ಜೋಡಿ ಪಾರ್ಟಿ, ಸಿನಿಮಾ, ಪ್ರವಾಸಕ್ಕೆ ಹೋಗಿ ಸುತ್ತಾಡುತ್ತಿದ್ದರು. ನಂತರ ಒಂದು ವರ್ಷದ ಹಿಂದೆ ಈ ಜೋಡಿ ವಿವಾಹವಾಗಿದ್ದಾರೆ.

    ಈ ದಂಪತಿಯ ಪ್ರೀತಿ ಬಗ್ಗೆ ತಿಳಿದ ಕುಟುಂಬದವರು ಶಾಕ್ ಆಗಿದ್ದರು. ಬಳಿಕ ಎರಡು ಕುಟುಂಬದವರು ಒಪ್ಪಿಕೊಂಡಿದ್ದಾರೆ. ಆದರೆ ಮದುವೆಯಾದ ಮೇಲೆ ಒಂದು ದಿನ ಸ್ನೇಹಿತೆ ಕರ್ನ್ ಗೆ 30 ವರ್ಷದ ಅಮಾಂಡ ಎನ್ನುವ ಮಗಳಿದ್ದಾರೆ ಎಂದು ತಿಳಿದಿದೆ. ಈ ವೇಳೆ ಆಕೆ ಟೇಲರ್ ನ ಆಪ್ತ ಸ್ನೇಹಿತೆ ಎಂಬ ವಿಷಯ ಬಹಿರಂಗವಾಗಿದೆ.

    ಮದುವೆಯ ಆರಂಭದಲ್ಲಿ ಈ ಸಂಬಂಧ ಉಳಿಯುವುದಿಲ್ಲ ಎಂದುಕೊಂಡಿದ್ದೆ. ಆದರೆ ನಮ್ಮಬ್ಬಿರ ಆಸಕ್ತಿ ಒಂದೇ ಆಗಿರುವುದರಿಂದ ಯಾವುದೇ ಸಮಸ್ಯೆಯಾಗಿಲ್ಲ. ಸದ್ಯಕ್ಕೆ ಮಗಳು ಮತ್ತು ಪತ್ನಿಯೊಂದಿಗೆ ಪ್ರವಾಸ ಮಾಡಿಕೊಂಡು ಮೂವರು ಸಂತಸವಾಗಿದ್ದೇವೆ ಎಂದಿದ್ದಾನೆ ಎಂದು ಕರ್ನ್ ಹೇಳಿದ್ದಾರೆ.

    ಮದ್ವೆ ವಿರೋಧಿಸಿದ್ದ ಸ್ನೇಹಿತೆ:
    ಮೊದಲಿಗೆ ಟೇಲರ್ ಸ್ನೇಹಿತೆ ನನ್ನ ಮಗಳು ಈ ಮದುವೆಯನ್ನು ಒಪ್ಪಲಿಲ್ಲ. ಬಳಿಕ ತನ್ನ ಸ್ನೇಹಿತೆ ಸದಾ ತನ್ನ ಸಮಸ್ಯೆ ಮತ್ತು ಕಷ್ಟದಲ್ಲಿ ಭಾಗಿಯಾಗಿದ್ದನ್ನು ನೆನೆದಿದ್ದಾಳೆ. ಈಗ ತನ್ನ ಸ್ನೇಹಿತೆ ತಾಯಿ ಸ್ಥಾನದಲ್ಲಿರುತ್ತಾಳೆಂದು ಖುಷಿಯಿಂದ ಒಪ್ಪಿಕೊಂಡಿದ್ದಾಳೆ ಎಂದು ಕರ್ನ್ ಹೇಳಿದ್ದಾರೆ.

    ನಾನು ಇವರನ್ನು ಮದುವೆಯಾಗುತ್ತೇನೆ ಎಂದು ಭಾವಿಸಿರಲಿಲ್ಲ. ಮೊದಲಿಗೆ ನಮ್ಮಿಬ್ಬರ ನಡುವೆ ಸ್ನೇಹವಿತ್ತು. ಆದರೆ ದಿನ ಕಳೆದಂತೆ ನನಗೆ ಗೊತ್ತಿಲ್ಲದೇ ಅವರನ್ನು ಪ್ರೀತಿಸಿದೆ. ಇಬ್ಬರ ಯೋಚನೆ ಒಂದೇ ರೀತಿ ಇತ್ತು. ಆದ್ದರಿಂದ ನಾವಿಬ್ಬರು ಮದುವೆಯಾಗಿದ್ದೇವೆ. ನನ್ನ ಜೀವನವನ್ನು ನಾನು ಇಷ್ಟ ಪಡುತ್ತೇನೆ. ನಾನು ಅವರೊಂದಿಗೆ ಸ್ವತಂತ್ರವಾಗಿ ಖುಷಿಯಾಗಿ ಇದ್ದೇನೆ ಎಂದು ಟೇಲರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಿರುತೆರೆ ನಟಿ ಕಾವ್ಯ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ

    ಕಿರುತೆರೆ ನಟಿ ಕಾವ್ಯ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ

    ಬೆಂಗಳೂರು: ಇತ್ತೀಚೆಗೆ ಕಿರುತೆರೆ ಮತ್ತು ಬೆಳ್ಳಿತೆರೆಯ ನಟಿಯರು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಇದೇ ಸಾಲಿಗೆ ಕಿರುತೆರೆಯ ಮೊತ್ತೊಬ್ಬ ನಟಿ ಸೇರಿದ್ದಾರೆ.

    ಕಿರುತೆರೆ ನಟಿ ಕಾವ್ಯ ಕೆಲ ದಿನಗಳ ಹಿಂದೆ ತಮ್ಮ ಗೆಳೆಯ ಮಹದೇವ್ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ. ತನ್ನ ಮದುವೆ ಫೋಟೋಗಳನ್ನು ತನ್ನ ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದು, ಈಗ ಆ ಫೋಟೋಗಳು ಎಲ್ಲೆಲ್ಲೂ ಹರಿದಾಡುತ್ತಿವೆ.

    ಕಾವ್ಯ ಮತ್ತು ಮಹದೇವ್ ಏಳು ವರ್ಷದಿಂದ ಸ್ನೇಹಿತರಾಗಿದ್ದು, ಬಳಿಕ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ತಮ್ಮ ಪ್ರೀತಿಯ ಬಗ್ಗೆ ಇಬ್ಬರ ಮನೆಯಲ್ಲಿ ತಿಳಿಸಿದ್ದಾರೆ. ಎರಡು ಕುಟುಂಬದವರು ಒಪ್ಪಿ ಆಗಸ್ಟ್ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿದ್ದರು. ಇದೀಗ ಗುರು ಹಿರಿಯರು ನಿಶ್ಚಯದಂತೆ ಈ ಜೋಡಿ ದಾಪಂತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದೆ.

    ಈ ಬಗ್ಗೆ ನಟಿ ಕಾವ್ಯ ಅವರು ಫೋಟೋವನ್ನು ಹಾಕಿ “ಏಳು ವರ್ಷದ ಸ್ನೇಹ, ಪ್ರೀತಿಗೆ ಬಾಂದವ್ಯ ಈಗ ಇನ್ನಷ್ಟು ಬಲಶಾಲಿಯಾಗಿದ್ದು, ಮುಂದುವರಿಯುತ್ತಿದೆ” ಎಂದು ತಮ್ಮ ಸಂತಸವವನ್ನು ಹಂಚಿಕೊಂಡಿದ್ದಾರೆ. ಕಾವ್ಯ ಅವರು ಫೋಟೋ ಪೋಸ್ಟ್ ಮಾಡಿದ ಬಳಿಕ ಅವರ ಸ್ನೇಹಿತರು ಹಾಗೂ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

    ಕಾವ್ಯ ಖಾಸಗಿ ವಾಹಿಯಲ್ಲಿ ಪ್ರಸಾರ ಆಗುತ್ತಿದ್ದ ‘ಚರಣದಾಸಿ’ ಧಾರಾವಾಹಿಯಲ್ಲಿ ಲೀಡ್ ರೋಲ್ ನಲ್ಲಿ ಅಭಿನಯಿಸಿದ್ದರು. ಬಳಿಕ ‘ನಾ ನಿನ್ನ ಬಿಡಲಾರೆ’ ಧಾರಾವಾಹಿನಿಯಲ್ಲೂ ಅಭಿನಯಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.instagram.com/p/BnjMSLphy-v/?hl=en&taken-by=kavyamahadev92

  • ದೋಸ್ತಿ ಬಗ್ಗೆ ಮಾಸ್ತಿ ಮಾತು!

    ದೋಸ್ತಿ ಬಗ್ಗೆ ಮಾಸ್ತಿ ಮಾತು!

    ಬೆಂಗಳೂರು: ಬೆಳೆದು ದೊಡ್ಡವರಾದಮೇಲೆ ಯಾರು ಏನೇ ಆಗಲಿ, ಆದರೆ ಬಾಲ್ಯವನ್ನು ನೆನಪಿಸಿಕೊಂಡರೂ ಕೆಲವರು ಮಗುವಾಗಿಬಿಡುತ್ತಾರೆ. ಯಾವೂರ ರಾಜನಾಗಲಿ, ಮಂತ್ರಿ, ಮಹೋದಯರೇ ಆದರೂ ಎಲ್ಲರೂ ಬಾಲ್ವನ್ನು ದಾಟಿಯೇ ಬಂದಿಬೇಕು. ‘ಟಗರು’ ಚಿತ್ರದ ನಂತರ ಆ ಸಿನಿಮಾಕ್ಕೆ ಡೈಲಾಗು ಬರೆದಿದ್ದ ಮಂಜು ಮಾಸ್ತಿ ಸ್ಟಾರ್ ರೈಟರ್ ಆಗಿ ಕಂಗೊಳಿಸುತ್ತಿದ್ದಾರೆ. ಇಂತಾ ಮಾಸ್ತಿ ಮಂಜು ತಮ್ಮ ಬಾಲ್ಯದ ಕುರಿತು ಮೆಲುಕು ಹಾಕಿದ್ದಾರೆ. ಇದು ಗಣೇಶ ಹಬ್ಬದ ಸ್ಪೆಷಲ್ಲು. ಒಂದು ಸಲ ನೀವೂ ಓದಿಕೊಳ್ಳಿ; ಇದು ಮಾಸ್ತಿ ಮಾತು!

    ‘ಬಾಲ್ಯ …..ಎಷ್ಟು ಚೆನ್ನಾಗಿತ್ತು, ಮನೆಯಲ್ಲಿ ದೊಡ್ಡವರು, ನೆಂಟರಿಷ್ಟರು ಬಂದಾಗ ಯಾವ ಸ್ಕೂಲು? ಏನ್ ಓದ್ತಾ ಇದೀಯಾ? ನಿನಗೆ ಅಪ್ಪ ಇಷ್ಟಾನೊ ಅಮ್ಮ ಇಷ್ಟಾನೊ? ನಿನ್ನ ಬೆಸ್ಟ್ ಫ್ರೆಂಡ್ ಯಾರು ? ಮುಂದೆ ನೀನೇನಾಗ್ಬೇಕು ಅಂತಿದೀಯಾ ? ಈ ಥರ ನೂರಾರು ಪ್ರಶ್ನೆಗಳು ಅವುಗಳಿಗೆ ನಮ್ಮ ತೊದಲುತ್ತರಗಳು …..ನಮಗೆ ತುಂಬಾ ಜನ ಫ್ರೆಂಡ್ಸ್ ಇರ್ತಿದ್ರು ಅದರಲ್ಲೊಬ್ಬ ಬೆಸ್ಟ್ ಫ್ರೆಂಡ್, ಅವನ ಜೊತೇನೆ ಕೂತ್ಕೋಬೇಕು, ಅವನ ಜೊತೇನೆ ಊಟ ಮಾಡಬೇಕು, ಬರ್ಕೊಬೇಕು, ಹೋಂ ವರ್ಕ್ ಮಾಡ್ಬೇಕು, ಟೀಚರ್ ಎಷ್ಟು ಮಾತಾಡ್ತಿರೋ ನೀವಿಬ್ಬರು? ಅನ್ನೋ ಅಷ್ಟು ಮಾತು, ರಜೆ ಇದ್ದಾಗ ಅವನನ್ನ ಮನೆಗೆ ಕರೀಬೇಕು ನಾವು ಅವರ ಮನೇಗೊಗ್ಬೇಕು, ಆಟ ಆಡಬೇಕು, ಸೈಕಲ್ ಹೊಡೀಬೇಕು, ಕೋಪ ಬಂದಾಗ ‘ಟೂ’ ಬಿಡೊದು ಸರಿಹೋದಾಗ ‘ಸೇ’ ಬಿಡೋದು, ಒಮ್ಮೊಮ್ಮೆ ವಾರಗಟ್ಟಲೆ ತಿಂಗಳುಗಟ್ಟಲೆ ಮಾತು ಬಿಟ್ಟುಬಿಡೋದು ….. ಸ್ಪೋರ್ಟ್ಸ್ ಪೀರಿಯಡ್ ನಲ್ಲಿ ಸ್ಕೂಲ್ ಗ್ರೌಂಡಲ್ಲಿ ನನ್ನನ್ನೊಂದಿಷ್ಟ್ ಹುಡುಗರು ಅವನನ್ನೊಂದಿಷ್ಟು ಹುಡುಗರು ಹಿಡಿದುಕೊಂಡು ‘ಸೇ’ ಬಿಡಿಸುವುದು ಕಾಂಪ್ರಮೈಜ್ ಮಾಡಿಸುವುದು, ಸ್ನೇಹ ಪುನರ್ ನಿರ್ಮಾಣವಾಗೋದು, ಎಲ್ಲಾ ಹಿತವಾದ ನೆನಪುಗಳು …… ಈಗ fb friend requestಗಳು ಬರೋದು ಅವುಗಳನ್ನ ನಾವು accept ಮಾಡೋದು, now u r friends ಅಂತ ನೊಟಿಫಿಕೇಷನ್ ಬರೋದು , ಇವನ್ನೆಲ್ಲ ನೋಡಿ ನಮ್ಮ ಬಾಲ್ಯದ ಸ್ನೇಹ ಮತ್ತು ಸ್ನೇಹಿತರು ನೆನಪಾದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ನೇಹಿತರ ದಿನವಾದ ಇಂದು ಪಬ್ಲಿಕ್ ಟಿವಿ ಓದುಗರಿಗೆ ಪುಟಾಣಿ ಕಥೆ

    ಸ್ನೇಹಿತರ ದಿನವಾದ ಇಂದು ಪಬ್ಲಿಕ್ ಟಿವಿ ಓದುಗರಿಗೆ ಪುಟಾಣಿ ಕಥೆ

    ಗಸ್ಟ್ 05 ಬಂದರೆ ಸಾಕು ಸ್ನೇಹ ಬಳಗದಲ್ಲೊಂದು ಸಂಭ್ರಮದ ವಾತಾವರಣ. ಎಲ್ಲ ಸ್ನೇಹಿತರು ಪರಸ್ಪರ ಒಬ್ಬರಿಗೊಬ್ಬರು ಸ್ನೇಹಿತರ ದಿನದ ಶುಭಕೋರುತ್ತಾರೆ. ಮತ್ತೆ ಕೆಲವರು ತಮ್ಮ ನೆಚ್ಚಿನ ಗೆಳೆಯ/ಗೆಳತಿಯರಿಗೆ ಉಡುಗೊರೆಯನ್ನು ನೀಡುತ್ತಾರೆ. ಇಂದು ಸ್ನೇಹಿತರಿಗಾಗಿ ಸ್ನೇಹತನ ಹೇಳುವ ಕಥೆ ನಿಮಗಾಗಿ ಇಲ್ಲಿದೆ

    ಕೆಲವು ವರ್ಷಗಳ ಹಿಂದೆ ಅಂಕಿತ್ ಮತ್ತು ಸೂರಜ್ ಎಂಬ ಗೆಳೆಯರಿದ್ದರು. ಬಾಲ್ಯದಿಂದ ಒಟ್ಟಾಗಿಯೇ ಶಿಕ್ಷಣ ಮುಗಿಸಿದ ಗೆಳೆಯರಿಗೆ, ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶವೂ ಸಿಗುತ್ತದೆ. ಆದ್ರೆ ಇಲ್ಲಿ ಇಬ್ಬರು ಉದ್ಯೋಗಕ್ಕಾಗಿ ಬೇರೆ ಬೇರೆ ದೇಶಕ್ಕೆ ಹೋಗುತ್ತಾರೆ. ಇಬ್ಬರು ಗೆಳೆಯರು ಹೋಗುವ ಮುನ್ನ ಮುಂದಿನ 10 ವರ್ಷಗಳ ನಂತರ ನಾವಿಬ್ಬರು ಇದೇ ಸ್ಥಳ, ಇದೇ ಸಮಯಕ್ಕೆ ಭೇಟಿ ಆಗೋಣ. ಅಂದು ಯಾರು ಎಷ್ಟು ಯಶಸ್ಸು ಹೊಂದಿರುತ್ತಾರೆ ಎಂಬುದನ್ನು ಲೆಕ್ಕ ಹಾಕೋಣ ಎಂದು ಹೇಳಿ ಹೊರಡುತ್ತಾರೆ.

    10 ವರ್ಷಗಳ ಬಳಿಕ ಇಬ್ಬರು ಭೇಟಿಯಾಗುವ ಸಮಯ ಬರುತ್ತದೆ. ತಮ್ಮ ಯೋಚನೆಯಂತೆಯೇ ಇಬ್ಬರೂ 10 ವರ್ಷಗಳ ಹಿಂದೆ ತೀರ್ಮಾನಿಸಿದ ರೀತಿಯಲ್ಲಿ ಅದೇ ಸ್ಥಳ ಮತ್ತು ಸಮಯಕ್ಕೆ ಭೇಟಿಯಾಗಲು ಬರುತ್ತಾರೆ. ಮೊದಲಿಗೆ ಬಂದ ಅಂಕಿತ್, ಹೋಟೆಲೊಂದರ ಬಾಗಿಲ ಬಳಿಯೇ ಗೆಳೆಯ ಸೂರಜ್ ಗಾಗಿ ಕಾಯುತ್ತಿರುತ್ತಾನೆ. ಅಂಕಿತ್ ಒಳ್ಳೆಯ ಬಟ್ಟೆ ತೊಟ್ಟು ಗೆಳೆಯನ ನಿರೀಕ್ಷೆಯಲ್ಲಿ ಇರುತ್ತಾನೆ. ಅದೇ ವೇಳೆ ಹೋಟೆಲ್‍ಗೆ ಬಂದ ಪೊಲೀಸ್ ಅಧಿಕಾರಿಯೊಬ್ಬ ಅಂಕಿತ್‍ನನ್ನು ಪ್ರಶ್ನಿಸುತ್ತಾರೆ.

    ಪೊಲೀಸ್ ಅಧಿಕಾರಿ: ಯಾರು ನೀವು? ರಾತ್ರಿ 10ಗಂಟೆಗೆ ಏನು ಮಾಡುತ್ತಿದ್ರಿ?
    ಅಂಕಿತ್: ನಾನೊಬ್ಬ ವ್ಯಾಪಾರಸ್ಥ, ನನ್ನ ಗೆಳೆಯನಿಗಾಗಿ ಕಾಯುತ್ತಿದ್ದೇನೆ.
    ಪೊಲೀಸ್ ಅಧಿಕಾರಿ: ಈ ವೇಳೆ ಇಲ್ಲಿ ನೀವು ನಿಲ್ಲೋದು ಸೂಕ್ತವಲ್ಲ ಬೇಗ ಹೊರಡಿ (ಪೊಲೀಸ್ ಅಧಿಕಾರಿ ಹಿಂದಿರುಗುತ್ತಾರೆ)

    (ಕೆಲ ಸಮಯದ ನಂತರ) ದೂರದಲ್ಲಿ ಓರ್ವ ವ್ಯಕ್ತಿ ಬರೋದನ್ನು ಅಂಕಿತ್ ಕಾಣುತ್ತಾನೆ. ಆತ ಹತ್ತಿರ ಬರುತ್ತಲೇ ನೀನು ಸೂರಜ್ ಅಲ್ವ ಎಂದು ಅನುಮಾನದ ರೀತಿಯಲ್ಲಿ ಕೇಳುತ್ತಾನೆ. ಆ ವ್ಯಕ್ತಿ ಹೌದು ಎಂದು ತಲೆ ಅಲ್ಲಾಡಿಸುತ್ತಾನೆ. ಇಬ್ಬರು ಹಲವು ಮಾತುಗಳನ್ನಾಡುತ್ತಾರೆ. ಒಳ್ಳೆಯ ಊಟವನ್ನು ಮಾಡುತ್ತಾರೆ.

    ಅಂಕಿತ್: ಸೂರಜ್, ಜೀವನಕ್ಕೆ ಏನು ಮಾಡಿಕೊಂಡಿದ್ದೀಯಾ?
    ವ್ಯಕ್ತಿ: ಕಂಪೆನಿಯೊಂದರಲ್ಲಿ ಮ್ಯಾನೇಜರ್ ಆಗಿದ್ದೇನೆ. ನೀನು ಏನ್ ಮಾಡುತ್ತೀದ್ದಿಯಾ?
    ಅಂಕಿತ್: ಬಂಗಾರ ವ್ಯಾಪಾರಿ (ಈ ಮಧ್ಯೆ ಅಂಕಿತ್‍ಗೆ ಇವನು ನನ್ನ ಗೆಳೆಯನಲ್ಲ ಎಂಬ ಅನುಮಾನ ಮೂಡುತ್ತದೆ)
    ಅಂಕಿತ್: (ಸಿಟ್ಟಿನಿಂದ) ಯಾರು ನೀನು? ನೀವು ನನ್ನ ಗೆಳೆಯ ಸೂರಜ್ ಅಲ್ಲ ಎಂದು ಕಿರುಚುತ್ತಾನೆ.

    ಆ ವ್ಯಕ್ತಿ ಅಂಕಿತ್ ಕೈಗೆ ಪತ್ರವೊಂದನ್ನು ನೀಡುತ್ತಾರೆ. ಈ ಮೊದಲು ಮಾತನಾಡಿಸಿದ್ದ ಪೊಲೀಸ್ ಅಧಿಕಾರಿಯೇ ಸೂರಜ್ ಎಂದು ಆ ವ್ಯಕ್ತಿ ಎಂದು ಹೇಳುತ್ತಾರೆ. ಇಂದು ಸೂರಜ್, ಕಳ್ಳ ಸಾಗಾಟಗಾರನನ್ನು ಹಿಡಿಯಲು ಹೋಟೆಲ್‍ಗೆ ಬಂದಿದ್ದರು. ಆದ್ರೆ ಆ ಸ್ಮಗಲರ್ ತನ್ನ ಆಪ್ತ ಗೆಳೆಯ ಅಂಕಿತ್ ಎಂದು ತಿಳಿದ ಕೂಡಲೇ ಕೇವಲ ಮಾತನಾಡಿಸಿ ನನ್ನ ಬಳಿ ಬಂದರು. ಅಲ್ಲದೇ ನನ್ನ ಗೆಳೆಯನನ್ನು ಬಂಧಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಇದೇ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿದ್ರು. ಹಾಗಾಗಿ ನಿಮ್ಮನ್ನು ಬಂಧಿಸಲು ನಾನು ಬಂದಿದ್ದೇನೆ ಎಂದು ಅಲ್ಲಿದ್ದ ಪೊಲೀಸ್ ಅಧಿಕಾರಿ ಹೇಳುತ್ತಾರೆ.

    ತನಗಾಗಿ ಸಾವನ್ನಪ್ಪಿದ ಗೆಳೆಯನಿಗಾಗಿ ಅಂಕಿತ್ ತನ್ನ ಎಲ್ಲ ತಪ್ಪುಗಳನ್ನು ಒಪ್ಪಿಕೊಂಡು ಪೊಲೀಸರಿಗೆ ಶರಣಾಗುತ್ತಾನೆ.

  • ಇದೊಂದು ಅಪರೂಪದ ಮೂಕ ಪ್ರಾಣಿಗಳ ಬಾಂಧವ್ಯ- ಹಸು ಜೊತೆ ನಾಯಿ ಮರಿಯ ಚೆಲ್ಲಾಟ

    ಇದೊಂದು ಅಪರೂಪದ ಮೂಕ ಪ್ರಾಣಿಗಳ ಬಾಂಧವ್ಯ- ಹಸು ಜೊತೆ ನಾಯಿ ಮರಿಯ ಚೆಲ್ಲಾಟ

    ಬೆಂಗಳೂರು: ನೆಲಮಂಗಲ ಸಮೀಪದ ಮೋಟಗಾನಹಳ್ಳಿಯಲ್ಲಿ ಮೂಕ ಪ್ರಾಣಿಗಳಾದ ಹಸು ಹಾಗೂ ನಾಯಿಮರಿಯ ಫ್ರೆಂಡ್‍ಶಿಪ್ ದೃಶ್ಯ ಹಳ್ಳಿಯ ರೈತ ಮಗನ ಮೊಬೈಲ್ ನಲ್ಲಿ ಸೆರೆಯಾಗಿದೆ.

    ಮೋಟಗಾನಹಳ್ಳಿಯ ಜಯಸಿಂಹ ಎಂಬವರ ತೋಟದ ಬಳಿ ಎರಡು ನಾಯಿ ಮರಿಗಳಿವೆ. ಅಲ್ಲಿಯೇ ಜಯಸಿಂಹರವರು ನಿತ್ಯವೂ ತಮ್ಮ ಒಂದು ಹಸುವನ್ನು ಕಟ್ಟಿ ಹಾಕುತ್ತಾರೆ. ಹಸುವನ್ನು ಕಟ್ಟಿ ಹಾಕಿ ಮಾಲೀಕ ಜಯಸಿಂಹ ಹಿಂದಿರುಗುತ್ತಿದ್ದಂತೆಯೇ, ನಾಯಿಮರಿಗಳು ಹಸು ಜೊತೆ ಸಖತ್ ಎಂಜಾಯ್ ಮಾಡ್ತೀವೆ.

    ಇದೀಗ ಈ ಹಸು ಹಾಗೂ ನಾಯಿಗಳ ಮಧ್ಯೆ ಗಟ್ಟಿ ಸ್ನೇಹ ಮೂಡಿದೆ. ನಿತ್ಯವೂ ಚಿಕ್ಕ ಮಕ್ಕಳಂತೆ ಚೆಲ್ಲಾಟವಾಡುವ ಮೂಕಪ್ರಾಣಿಗಳು ಸಖತ್ ಎಂಜಾಯ್ ಮಾಡ್ತೀವೆ. ಅಲ್ಲದೆ ಈ ಹಸು ಜೊತೆ ಅಪರಿಚಿತರು ಹಾಗೂ ಯಾವುದೇ ಪ್ರಾಣಿಗಳು ಬರದಂತೆ ನೋಡಿಕೊಳ್ಳುವುದರ ಜೊತೆಗೆ ಕಾವಲು ಕಾಯುತ್ತವೆ.

    https://www.youtube.com/watch?v=CDmy0lHiYPs

  • ಎಫ್‍ಬಿಯಲ್ಲಿ ಆದ ಫ್ರೆಂಡ್‍ಶಿಪ್ ಕೊಲೆಯಲ್ಲಿ ಅಂತ್ಯ!

    ಎಫ್‍ಬಿಯಲ್ಲಿ ಆದ ಫ್ರೆಂಡ್‍ಶಿಪ್ ಕೊಲೆಯಲ್ಲಿ ಅಂತ್ಯ!

    ಶಿವಮೊಗ್ಗ: ಫೇಸ್‍ ಬುಕ್ ನಲ್ಲಿ ಆದ ಫ್ರೆಂಡ್‍ಶಿಪ್ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕು ಜಕ್ಕಿನಕೊಪ್ಪದಲ್ಲಿ ನಡೆದಿದೆ.

    ಸಂಜಯ್ ಕುಮಾರ್ ಮೃತ ದುರ್ದೈವಿ. ಈತ ಕಾಳೇನಹಳ್ಳಿ ಗ್ರಾಮದಲ್ಲಿ ಕೇಬಲ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದನು. ಸಂಜಯ್ ಅದೇ ಗ್ರಾಮದಲ್ಲಿ ಕಲ್ಲು ಕ್ವಾರಿ ನಡೆಸುತ್ತಿದ್ದ ಹರೀಶ್ ಬಾಬು ಹೆಂಡತಿ ಜೊತೆ ಸ್ನೇಹ ಬೆಳೆಸಿದ್ದನು. ಇದು ಗಂಡ ಹರೀಶ್ ಗೆ ಇಷ್ಟವಾಗಿರಲಿಲ್ಲ. ಈ ಬಗ್ಗೆ ಗಂಡ ಹೆಂಡತಿ ನಡುವೆ ಹಲವು ಬಾರಿ ಜಗಳ ಸಹ ಆಗಿತ್ತು.

    ಇತ್ತೀಚೆಗೆ ಹರೀಶ್ ಸಂಜಯ್ ನನ್ನು ತನ್ನ ಕ್ವಾರಿಗೆ ಕರೆಸಿದ್ದಾನೆ. ಬಳಿಕ ತನ್ನ ಗೆಳೆಯರ ಜೊತೆ ಸೇರಿ ಆತನನ್ನು ಕೊಂದು ಹಾಕಿದ್ದಾನೆ. ಆದರೆ ಸಂಜಯ್ ನಾಪತ್ತೆ ಆಗಿದ್ದ ಹಿನ್ನೆಲೆಯಲ್ಲಿ ಶಿಕಾರಿಪುರ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಾಗ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

    ಇಂದು ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಸಂಜಯ್ ಶವವನ್ನು ಹೊರ ತೆಗೆದಿದ್ದು, ಆರೋಪಿ ಹರೀಶ್ ಬಾಬು ಜೊತೆಗೆ ಆತನ ಸ್ನೇಹಿತರಾದ ಸುರೇಶ್ ಮತ್ತು ನರಸಿಂಹನನ್ನು ಪೊಲೀಸರು ಬಂಧಿಸಿದ್ದಾರೆ.

  • ಹೂವಿನ ಅಂಗಿ ತೊಟ್ಟರು ದರ್ಶನ್

    ಹೂವಿನ ಅಂಗಿ ತೊಟ್ಟರು ದರ್ಶನ್

    ಬೆಂಗಳೂರು: ಯಜಮಾನ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿರುವ ದರ್ಶನ್ ಅದರ ನಡುವೆಯೂ ಮೈಸೂರಿನ ಹಳೆಯ ಸ್ನೇಹಿತರೊಂದಿಗೆ ಒಂದಿಷ್ಟು ಕಾಲ ಕಳೆದರು. ಬೆಳೆದು ದೊಡ್ಡವರಾಗುತ್ತಲೇ ಜೊತೆಗಿದ್ದವರನ್ನು ಮರೆತುಬಿಡುವ ಕಾಲಿವಿದೆ. ಆದರೆ ಅಂಥಾ ಕೆಟ್ಟ ಮರೆವು ನಮಗೆ ಬೇಡ ಅಂತಾ ತೀರ್ಮಾನಿಸಿರುವವರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಒಬ್ಬರು.

    ಇವತ್ತಿಗೆ ನಾವೆಲ್ಲಾ ಏನೇ ಆಗಿರಬಹುದು ಆದರೆ ಹಳೆಯದನ್ನು ಮರೆಯಬಾರದು. ಕಡೇ ಪಕ್ಷ ವರ್ಷಕ್ಕೊಮ್ಮೆಯಾದರೂ ಜೊತೆ ಸೇರಿ ಹಳೆಯ ನೆನಪುಗಳನ್ನು ಮೆಲುಕು ಹಾಕಬೇಕು. ಒಬ್ಬರಿಗೊಬ್ಬರು ಕಷ್ಟ ಸುಖ ಹಂಚಿಕೊಳ್ಳಬೇಕು. ಭವಿಷ್ಯದ ಪ್ಲಾನುಗಳನ್ನು ಚರ್ಚಿಸಬೇಕು ಅನ್ನೋದು ದರ್ಶನ್ ಅವರ ಅಭಿಪ್ರಾಯ. ಈ ಕಾರಣದಿಂದಲೇ ಸುಮಾರು ವರ್ಷಗಳಿಂದ ಸ್ಕೂಲ್ ಮತ್ತು ಕಾಲೇಜಲ್ಲಿ ಜೊತೆಗೆ ಬೆಳೆದ ಸ್ನೇಹಿತರೊಂದಿಗೆ ಒಂದು ಔತಣಕೂಟವನ್ನು ಏರ್ಪಡಿಸಲಾಗುತ್ತಿದೆ. ದರ್ಶನ್ ಅವರ ಜೊತಗೆ ಸಂಪರ್ಕದಲ್ಲಿರುವ ಎಲ್ಲ ಗೆಳೆಯ-ಗೆಳತಿಯರೂ ಒಂದೆಡೆ ಸೇರುತ್ತಾರೆ.

    ಹಾಗೆ ನಿನ್ನೆ ಕೂಡಾ ರೀಯೂನಿಯನ್ ಸಭೆ ಏರ್ಪಾಡಾಗಿತ್ತು. ಅಲ್ಲಿಗೆ ಬಂದ ದರ್ಶನ್ ಗೆಳೆಯರು ಹೂವಿನಿಂದ ಸಿಂಗರಿಸಿದ ಅಂಗಿಯೊಂದನ್ನು ತೊಡಿಸಿದ್ದು ವಿಶೇಷವಾಗಿತ್ತು. ಮಲ್ಲಿಗೆ ಗುಲಾಬಿಗಳಿಂದ ತಯಾರಿಸಿದ್ದ ಆ ಅಂಗಿ ದರ್ಶನ್ ಅವರನ್ನು ಪೂರ್ತಿಯಾಗಿ ಆವರಿಸಿತ್ತು.

    ಈ ಸಂದರ್ಭದಲ್ಲಿ ದರ್ಶನ್ ಅವರ ಚಿತ್ರರಂಗದ ಗೆಳೆಯರಾದ ಸೃಜನ್, ಧರ್ಮ ಕೀರ್ತಿ ಮತ್ತು ಯಶಸ್ ಸೂರ್ಯ ಸೇರಿದಂತೆ ಹಲವಾರು ಮಂದಿ ಹಾಜರಿದ್ದರು.

  • ಸ್ನೇಹಿತೆಯ ಆತ್ಮಹತ್ಯೆಗೆ ಮನನೊಂದು ಯುವತಿ ಆತ್ಮಹತ್ಯೆ

    ಸ್ನೇಹಿತೆಯ ಆತ್ಮಹತ್ಯೆಗೆ ಮನನೊಂದು ಯುವತಿ ಆತ್ಮಹತ್ಯೆ

    ಬೆಂಗಳೂರು: ಸ್ನೇಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಆಕೆಯ ಗೆಳತಿ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ನಗರದ ಶ್ರೀರಾಂಪುರ ಬಳಿ ಇರುವ ಎಲ್ ಎನ್ ಪುರದಲ್ಲಿ ನಡೆದಿದೆ.

    21 ವರ್ಷದ ಭುವನೇಶ್ವರಿ ಆತ್ಮಹತ್ಯೆಗೆ ಶರಣಾದ ಯುವತಿ. ಮೂರು ತಿಂಗಳ ಹಿಂದೆ ಭುವನೇಶ್ವರಿಯ ಆಪ್ತ ಸ್ನೇಹಿತೆ ಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿದ್ದರು. ಇಬ್ಬರೂ ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದರು. ಲಕ್ಷ್ಮೀ ಸಾವಿನ ಬಳಿಕ ನಿದ್ದೆಯಲ್ಲೂ ಸ್ನೇಹಿತೆಯ ಆತ್ಮಹತ್ಯೆ ಬಗ್ಗೆ ಭುವನೇಶ್ವರಿ ಕನವರಿಸುತ್ತಿದ್ದರು ಎಂದು ಹೇಳಲಾಗಿದೆ.

    ಗೆಳತಿಯ ಸಾವಿನಿಂದ ಖಿನ್ನತೆಗೊಳಗಾಗಿದ್ದ ಭುವನೇಶ್ವರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಭುವನೇಶ್ವರಿಯವರ ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.