Tag: Friendship

  • ನಿವೃತ್ತ ನೌಕರನ ಸ್ನೇಹ ಬೆಳೆಸಿದ ಕಾಗೆ- ಮನೆಯ ಸದಸ್ಯನಾದ ಕಥೆ!

    ನಿವೃತ್ತ ನೌಕರನ ಸ್ನೇಹ ಬೆಳೆಸಿದ ಕಾಗೆ- ಮನೆಯ ಸದಸ್ಯನಾದ ಕಥೆ!

    ಕಾರವಾರ: ಕಾಗೆ ಎಂದರೆ ಸಾಕು ಎಲ್ಲರೂ ಅದನ್ನು ಓಡಿಸುತ್ತಾರೆ. ಕಾಗೆ ಮನೆಯಲ್ಲಿ ಕೂಗಿದರೆ ಸಾವು ಸಂಭವಿಸುತ್ತದೆ, ನೆಂಟರು ಬರುತ್ತಾರೆ ಎಂದೆಲ್ಲಾ ನಂಬಿಕೆ ಇಂದಿಗೂ ನಮ್ಮ ಗ್ರಾಮಗಳಲ್ಲಿವೆ. ಮಹಾಲಯ ಅಮವ್ಯಾಸೆ ದಿನ ಪೂರ್ವಜರನ್ನು ಸ್ಮರಿಸಿ ಕಾಗೆಗೆ ಎಡೆ ನೀಡುವ ಸಂಪ್ರದಾಯ ಸಹ ಇದೆ. ಆದರೆ ಇಲ್ಲೊಂದು ಕಥೆ ವಿಭಿನ್ನವಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಅಂಕೋಲ ನಗರದ ಮಾಧವನಗರದ ನಿವೃತ್ತ ಸರ್ಕಾರಿ ನೌಕರ ವಿಠಲ್ ಶಟ್ಟಿ ಅವರು, ಕಳೆದ ಹತ್ತು ವರ್ಷದಿಂದ ಕಾಗೆಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಾರೆ. ಇದೀಗ ಈ ಕಾಗೆ ಮನೆಯ ಸದಸ್ಯನಂತಾಗಿದ್ದು, ಪ್ರತಿ ದಿನ ಇವರ ಮನೆಯಲ್ಲಿ ಆಹಾರ ಸೇವಿಸಲು ಬರುತ್ತಿದೆ. ಇದನ್ನೂ ಓದಿ: ರಾಷ್ಟ್ರೀಯತೆಯ ಚಿಂತನೆಯನ್ನು ಬೆಳೆಸಿಕೊಂಡರೆ ಎಚ್‍ಡಿಕೆಗೆ ಹೊಟ್ಟೆ ಉರಿ ಯಾಕೆ: ಸೂಲಿಬೆಲೆ ಪ್ರಶ್ನೆ

    Crow Friendship Karwar publictv

    ಬಾಂಧವ್ಯ ಬೆಳೆದಿದ್ದು ಹೇಗೆ?

    ಕಳೆದ ಹತ್ತು ವರ್ಷದ ಹಿಂದೆ ಒಂದು ಕಾಲು ತುಂಡಾದ ಕಾಗೆ ತನ್ನ ಮರಿಗಳೊಂದಿಗೆ ಇವರ ಮನೆಯ ಬಳಿ ಹಾರಾಡುತಿತ್ತು. ಈವೇಳೆ ಅದರೊಂದಿಗಿದ್ದ ಮರಿ ಕಾಗೆ ಅಸ್ವಸ್ಥವಾಗಿ ಇವರ ಮನೆಯ ಬಳಿ ಕುಳಿತಿದೆ. ಇದನ್ನು ಗಮನಿಸಿದ ಅವರು ಕಾಗೆಗೆ ಉಪಚರಿಸಿದ್ದಾರೆ. ಉಪಚಾರದಿಂದ ಚೇತರಿಸಿಕೊಂಡಿದ್ದ ಕಾಗೆ ಮರಿ ಪ್ರತಿ ದಿನ ಇವರ ಮನೆಗೆ ಬರುತಿತ್ತು. ಹೀಗಾಗಿ ಮನೆಯಲ್ಲಿ ಇವರು ತಾವು ತಿನ್ನುವ ರೊಟ್ಟಿ ,ಅನ್ನವನ್ನು ನೀಡುತಿದ್ದರು. ಹೀಗೆ ಕಾಗೆಯೊಂದಿಗೆ ಸ್ನೇಹ ಬೆಳೆಸಿಕೊಂಡ ಅವರು ಪ್ರತಿ ದಿನ ಮನೆಯ ಜನರೊಂದಿಗೆ ಇದಕ್ಕೂ ಸಹ ಉಪಹಾರ ನೀಡುವುದನ್ನು ಬೆಳಸಿಕೊಂಡಿದ್ದು, ಇದೀಗ ಗೆಳೆತನ ಆಪ್ತವಾಗಿದೆ. ಸಲುಗೆಯಲ್ಲಿ ಇವರ ಕೈಮೇಲೆ ಕುಳಿತು ಆಹಾರ ಸೇವಿಸಿ ತೆರಳುತ್ತದೆ. ಇದನ್ನೂ ಓದಿ: RSS ನ 4 ಸಾವಿರ ಐಎಎಸ್, ಐಪಿಎಸ್ ಅಧಿಕಾರಿಗಳಿದ್ದಾರೆ- ಬಿಜೆಪಿ ವಿರುದ್ಧ ಎಚ್‍ಡಿಕೆ ವಾಗ್ದಾಳಿ

     Crow Friendship Karwar publictv

    ಮನುಷ್ಯ ಹಾಗೂ ಪ್ರಾಣಿ-ಪಕ್ಷಿಗಳು ಈ ಜೀವ ಸಂಕುಲಗಳ ಸರಪಳಿ, ಅವುಗಳನ್ನು ಪ್ರೀತಿಯಿಂದ ನೋಡಿಕೊಂಡರೆ, ಪ್ರೀತಿ ಸಂಪಾದಿಸುವುದು ಸುಲಭವಾಗಿದೆ. ಈ ಕಾಗೆಯನ್ನು ಒಂದು ದಿನ ನೋಡದಿದ್ದರೂ ಮನಸ್ಸು ಪರಿತಪ್ಪಿಸುತ್ತದೆ. ಇದರೊಂದಿಗೆ ಬೆರೆತ ಬಾಂಧವ್ಯ ಅಂತದ್ದು ಎಂದು ವಿಠಲ್ ಶಟ್ಟಿಯವರು ವಿವರಿಸುವಾಗ ಅವರ ಪ್ರೀತಿ ಎದ್ದು ಕಾಣುತ್ತದೆ. ಬಾಂಧವ್ಯಗಳನ್ನೇ ಮರೆತಿರುವ ಇಂದಿನ ದಿನಗಳಲ್ಲಿ ಇವರ ಈ ಪ್ರೀತಿ ಮಾದರಿಯಾಗಿದೆ.  ಇದನ್ನೂ ಓದಿ: ಸಂಜನಾ ಕ್ಯಾಬ್ ಕಿರಿಕ್- ಸ್ಪಷ್ಟನೆ ಕೊಟ್ಟ ನಟಿ

  • ಮಗಳ ಮುಂದೆಯೇ ಮಹಿಳೆಗೆ ಕತ್ತರಿಯಿಂದ ಇರಿದು ಕೊಂದ ಪ್ರಿಯಕರ!

    ಮಗಳ ಮುಂದೆಯೇ ಮಹಿಳೆಗೆ ಕತ್ತರಿಯಿಂದ ಇರಿದು ಕೊಂದ ಪ್ರಿಯಕರ!

    – ಪ್ರಿಯಕರನನ್ನು ಭೇಟಿಯಾಗಲು ಬಂದಿದ್ದ ಮಹಿಳೆ
    – ತೀವ್ರ ರಕ್ತಸ್ರಾವವಾಗಿ ಮಗಳ ಎದುರೇ ಉಸಿರು ನಿಲ್ಲಿಸಿದ್ಳು

    ಇಂದೋರ್: ಇಂದಿನ ಕಾಲದ ಯುವಕ-ಯುವತಿಯರು ಸೋಶಿಯಲ್ ಮೀಡಿಯಾಗೆ ಫುಲ್ ಅಡಿಕ್ಟ್ ಆಗಿ ಹೋಗಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರ ಕೈನಲ್ಲೂ ಒಂದಲ್ಲ ಒಂದು ಮೊಬೈಲ್ ಇದ್ದೇ ಇರುತ್ತದೆ. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗುವ ಅಪರಿಚಿತರೊಂದಿಗೆ ಚಾಟಿಂಗ್, ಡೇಟಿಂಗ್ ಎಂದು ಲೋಕವನ್ನೇ ಮರೆತು ಹೋಗಿರುತ್ತಾರೆ. ಹೀಗೆ ಆನ್‍ಲೈನ್ ನಲ್ಲಿ ಶುರುವಾದ ಪ್ರೀತಿಯೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಪ್ರಿಯಾ ಅಗರ್‍ವಾಲ್(26) ಎಂಬ ಮಹಿಳೆಯೊಬ್ಬಳು ಪತಿ ಮತ್ತು ಮುದ್ದಾದ ಮಗಳೊಂದಿಗೆ ಇಂದೋರ್ ನಲ್ಲಿ ನೆಲೆಸಿದ್ದಳು. ಆದರೆ ಪ್ರಿಯಾ ಅಗರ್‍ವಾಲ್‍ಗೆ ಆನ್‍ಲೈನ್ ಮೂಲಕ ಕಳೆದ ವರ್ಷ ಸೌರಭ್ ಎಂಬ ವ್ಯಕ್ತಿ ಪರಿಚಯವಾಗಿದ್ದಾನೆ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆಯಿತು. ಹೀಗೆ ಚಾಟ್ ಮಾಡುತ್ತಾ, ಮಾಡುತ್ತಾ ಒಬ್ಬರಿಗೊಬ್ಬರು ಬಹಳ ಆತ್ಮೀಯರಾದರು. ಇತ್ತೀಚೆಗೆ ಪ್ರಿಯಾ ಸೌರಭ್ ಜೊತೆ ಮಾತನಾಡುವುದನ್ನು ಕಡಿಮೆ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಸೌರಭ್, ಆಕೆಯನ್ನು ಭೇಟಿ ಮಾಡುವಂತೆ ಕರೆಸಿಕೊಂಡಿದ್ದಾನೆ.

    ಅಂತೆಯೇ ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಪ್ರಿಯಾ, ಆತನನ್ನು ಭೇಟಿ ಮಾಡಲು ಮಗಳೊಂದಿಗೆ ಗ್ಯಾನಶೀಲ ಸೂಪರ್ ಸಿಟಿ ಬಳಿ ಇರುವ ಖಾಲಿ ಜಾಗಕ್ಕೆ ಬಂದಿದ್ದಾಳೆ. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ಮಾಡುತ್ತಾ ವಿಕೋಪಕ್ಕೆ ತಿರುಗಿ ಸೌರಭ್ ತನ್ನ ಬಳಿ ಇದ್ದ ಕತ್ತರಿಯಿಂದ ಆಕೆಯ ಮೇಲೆ ಎರಡು ಬಾರಿ ಚುಚ್ಚಿದ್ದಾನೆ. ಪರಿಣಾಮ ಮುಖ ಮತ್ತು ಕತ್ತಿಗೆ ಇರಿದ ಪರಿಣಾಮ ತೀವ್ರವಾಗಿ ಗಾಯಗೊಂಡ ಪ್ರಿಯಾಗೆ ರಕ್ತ ಹರಿಯಲು ಆರಂಭಿಸಿದೆ. ಮಗಳ ಮುಂದೆ ಉಸಿರಾಡಲು ಕೂಡ ಆಗದೇ ಪ್ರಿಯಾ ಸಮೀಪದಲ್ಲಿದ್ದ ಅಂಗಡಿ ಮುಂದೆ ಕುಸಿದಿದ್ದಾಳೆ. ಆದರೂ ಸೌರಭ್ ಇದಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಸ್ಕೂಟರ್ ಹತ್ತಿ ಆರಾಮವಾಗಿ ಸ್ಥಳದಿಂದ ಹೋಗುತ್ತಾನೆ. ಇನ್ನೂ ಈ ವೀಡಿಯೋ ರಸ್ತೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • ಧೋನಿ ಜೀವನದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದ್ರೂ ನಮ್ಮ ಸ್ನೇಹ ಮರೆತಿಲ್ಲ: ಆರ್‌ಪಿ ಸಿಂಗ್

    ಧೋನಿ ಜೀವನದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದ್ರೂ ನಮ್ಮ ಸ್ನೇಹ ಮರೆತಿಲ್ಲ: ಆರ್‌ಪಿ ಸಿಂಗ್

    – ತನ್ನ ಕ್ರಿಕೆಟ್ ಜೀವನದ ದುರಂತ ಕಥೆ ಬಿಚ್ಚಿಟ್ಟ ಸಿಂಗ್

    ನವದೆಹಲಿ: ಧೋನಿ ಜೀವನದಲ್ಲಿ ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದರೂ ನಮ್ಮ ಸ್ನೇಹವನ್ನು ಮರೆತಿಲ್ಲ ಎಂದು ಭಾರತದ ಮಾಜಿ ವೇಗಿ ಆರ್‌ಪಿ ಸಿಂಗ್ ಅವರು ಮಾಜಿ ನಾಯಕನನ್ನು ಹಾಡಿ ಹೊಗಳಿದ್ದಾರೆ.

    ಒಂದು ಕಾಲದಲ್ಲಿ ಭಾರತ ಕ್ರಿಕೆಟ್ ತಂಡದ ಪ್ರಮುಖ ವೇಗಿಯಾಗಿದ್ದ ಆರ್‌ಪಿ ಸಿಂಗ್ ಅವರು, ನಂತರ ಉತ್ತಮ ಪ್ರದರ್ಶನ ತೋರಿದರೂ ತಂಡದಿಂದ ಹೊರಗೆ ಉಳಿದರು. ಆದರೆ ಧೋನಿ ಅವರು ಭಾರತ ತಂಡದ ನಾಯಕನಾಗಿ ಯಶಸ್ಸು ಕಂಡರು ಆತ ನಮ್ಮ ಸ್ನೇಹವನ್ನು ಮರೆತಿಲ್ಲ. ಇಂದು ಕೂಡ ನಮ್ಮ ಜೊತೆ ಬಂದು ಸಮಯ ಕಳೆಯುತ್ತಾರೆ ಎಂದು ಸಿಂಗ್ ಹೇಳಿದ್ದಾರೆ.

    ಇನ್‍ಸ್ಟಾಗ್ರಾಮ್‍ನಲ್ಲಿ ಆಕಾಶ್ ಚೋಪ್ರಾ ಅವರ ಜೊತೆ ಲೈವ್ ಚಾಟ್‍ಗೆ ಬಂದಿದ್ದ ಆರ್‌ಪಿ ಸಿಂಗ್, ನಾನು ಮತ್ತು ಧೋನಿ ಒಟ್ಟಿಗೆ ಹೆಚ್ಚು ಸಮಯ ಕಳೆಯುತ್ತಿದ್ದೇವು. ನಂತರ ಆತ ಟೀಂ ಇಂಡಿಯಾದ ನಾಯಕನಾದ, ನಾನೂ ತಂಡದಿಂದ ಹೊರಗೆ ಉಳಿದೆ. ಆದರೆ ನಮ್ಮಿಬ್ಬರ ಗೆಳೆತನ ಮಾತ್ರ ಹಾಗೇ ಉಳಿದಿದೆ. ಈಗಲೂ ಕೂಡ ನಾವು ಜೊತೆಯಲ್ಲೇ ಹೊರಗೆ ಹೋಗುತ್ತೇವೆ. ಆದರೆ ನಮಗೆ ಕ್ರಿಕೆಟ್ ವಿಚಾರದಲ್ಲಿ ವಿಭಿನ್ನ ಅಭಿಪ್ರಾಯಗಳಿವೆ ಎಂದು ಆರ್‌ಪಿ ಸಿಂಗ್ ತಿಳಿಸಿದ್ದಾರೆ.

    ಇದೇ ವೇಳೆ ಸಿಂಗ್ ನಾನು ಧೋನಿ ಬಳಿ ನಾನು ಭಾರತ ತಂಡದಲ್ಲಿ ಸತತವಾಗಿ ಆಡಲು ಏನೂ ಮಾಡಬೇಕು ಎಂದು ಕೇಳಿದ್ದೇನೆ. ಆದರೆ ಧೋನಿ ಸೂಕ್ತವಾದ ಉತ್ತರವನ್ನು ನೀಡಿಲ್ಲ. ನಾನು ಕೇಳಿದಾಗ ಧೋನಿ, ನೀನು ಕಷ್ಟಪಡುತ್ತಿದ್ದೀಯಾ ಆದರೆ ನಿನ್ನ ಬಳಿ ಲಕ್ ಇಲ್ಲ ಅಷ್ಟೇ ಎಂದು ಹೇಳುತ್ತಿದ್ದರು. ನನಗೂ ಕೂಡ ಧೋನಿ ಅವರ ಮಾತು ಸರಿ ಎನಿಸುತ್ತಿತ್ತು ಎಂದು ಆರ್‌ಪಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಆರ್‌ಪಿ ಸಿಂಗ್ ಅವರು 2005ರಲ್ಲಿ ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್ ಪಾದಾರ್ಪಣೆ ಮಾಡಿದರು. ನಂತರ ಧೋನಿ ನಾಯಕತ್ವದಲ್ಲಿ 2007ರ ಟಿ-20 ವಿಶ್ವಕಪ್‍ನಲ್ಲಿ ಭಾರತದ ಪರವಾಗಿ ಅತೀ ಹೆಚ್ಚು ವಿಕೆಟ್ ಪಡೆದಿದ್ದರು. ಜೊತೆಗೆ ನಂತರ 2009ರಲ್ಲಿ ಐಪಿಎಲ್ ಗೆದ್ದ ಡೆಕ್ಕನ್ ಚಾರ್ಜಸ್ ತಂಡದಲ್ಲಿ ಆಡಿದ್ದರು. ಅಲ್ಲಿಯೂ ಕೂಡ ಐಪಿಎಲ್‍ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದು ಮಿಂಚಿದ್ದರು. ಇಷ್ಟಾದರೂ ಅಂತಾರಾಷ್ಟ್ರೀಯ ತಂಡದಲ್ಲಿ ಸ್ಥಾನಗಳಿಸಲು ಆರ್‌ಪಿ ವಿಫಲರಾಗಿದ್ದರು.

    ಈ ವಿಚಾರವಾಗಿಯೂ ಲೈವ್‍ನಲ್ಲಿ ಮಾತನಾಡಿರುವ ಆರ್‌ಪಿ ಸಿಂಗ್, ನಾನು ಐಪಿಎಲ್ ಮತ್ತು ಟಿ-10 ವಿಶ್ವಕಪ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆಯಲಿಲ್ಲ. ಐಪಿಎಲ್‍ನ ಮೂರು ಅವೃತ್ತಿಯಲ್ಲಿ ನಾನು ಬೆಸ್ಟ್ ಬೌಲರ್ ಆಗಿದ್ದೆ. ಅದರೂ ನನಗೆ ಚಾನ್ಸ್ ಸಿಗಲಿಲ್ಲ. ಬಹುಶಃ ಆಯ್ಕೆಗಾರರಿಗೆ ಮತ್ತು ತಂಡದ ನಾಯಕನಿಗೆ ನನ್ನ ಮೇಲೆ ನಂಬಿಕೆ ಇರಲಿಲ್ಲ ಅನಿಸುತ್ತದೆ ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

    ಭಾರತದ ಪರ 14 ಟೆಸ್ಟ್ ಮತ್ತು 58 ಏಕದಿನ ಪಂದ್ಯಗಳನ್ನು ಆಡಿದ್ದ ಆರ್‌ಪಿ ಸಿಂಗ್ ಟೆಸ್ಟ್ ನಲ್ಲಿ 40 ಮತ್ತು ಏಕದಿನದಲ್ಲಿ 69 ವಿಕೆಟ್ ಪಡೆದಿದ್ದರು. ಅಂತಯೇ 10 ಟಿ-20 ಪಂದ್ಯಗಳನ್ನು ಆಡಿದ್ದ ಸಿಂಗ್ ಅಲ್ಲಿಯೂ ಕೂಡ 15 ವಿಕೆಟ್ ಪಡೆದಿದ್ದರು. ಭಾರತ ಪರ 2011ರಲ್ಲಿ ಕೊನೆಯ ಪಂದ್ಯವನ್ನು ಆಡಿದ್ದ ಆರ್‌ಪಿ ಸಿಂಗ್ ಅವರು 2018ರಲ್ಲಿ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು.

  • ಪ್ರಭಾಸ್ ನನ್ನ 3AM ಫ್ರೆಂಡ್ ಎಂದ ಅನುಷ್ಕಾ ಶೆಟ್ಟಿ

    ಪ್ರಭಾಸ್ ನನ್ನ 3AM ಫ್ರೆಂಡ್ ಎಂದ ಅನುಷ್ಕಾ ಶೆಟ್ಟಿ

    ಹೈದರಾಬಾದ್: ತಮಿಳು- ತೆಲುಗು ಚಿತ್ರರಂಗದ ಬಹುಬೇಡಿಕೆಯ ನಟಿ, ಬಾಹುಬಲಿ ಬೆಡಗಿ ಅನುಷ್ಕಾ ಶೆಟ್ಟಿ ಚಿತ್ರರಂಗಕ್ಕೆ ಕಾಲಿಟ್ಟು 15 ವರ್ಷ ಕಳೆದಿದೆ. ಇದೇ ಖುಷಿಯಲ್ಲಿದ್ದ ಸ್ವೀಟಿ ಖಾಸಗಿ ಸಂದರ್ಶನವೊಂದರಲ್ಲಿ ನಟ ಪ್ರಭಾಸ್ ನನ್ನ 3 ಎಎಂ ಫ್ರೆಂಡ್ ಎಂದು ಹೇಳಿಕೊಂಡಿದ್ದಾರೆ.

    ಸಂದರ್ಶನದಲ್ಲಿ ಅನುಷ್ಕಾ ತಮ್ಮ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಸಿನಿ ಪಯಣದ ಹಾದಿಯನ್ನು ನೆನೆದಿದ್ದಾರೆ. ಅದರಲ್ಲೂ ಪ್ರಭಾಸ್ ಬಗ್ಗೆ ಮನಬಿಚ್ಚಿ ಅನುಷ್ಕಾ ಮಾತನಾಡಿದ್ದಾರೆ.

    ‘ಕಳೆದ 15 ವರ್ಷಗಳಿಂದ ನನಗೆ ಪ್ರಭಾಸ್ ಗೊತ್ತು. ಪ್ರಭಾಸ್ ನನ್ನ 3 ಎಎಂ ಫ್ರೆಂಡ್. ನಮ್ಮಿಬ್ಬರ ನಡುವೆ ಅದ್ಭುತವಾದ ಗೆಳತನವಿದೆ. ನಮ್ಮಿಬ್ಬರ ಬಗ್ಗೆ ಸಾಕಷ್ಟು ಗಾಸಿಪ್‍ಗಳು ಹರಿದಾಡುತ್ತಿರುತ್ತೆ. ನಮ್ಮಿಬ್ಬರಿಗೂ ಮದುವೆ ಆಗಿಲ್ಲ ಎಂದು ನಮ್ಮ ಬಗ್ಗೆ ಗಾಸಿಪ್‍ಗಳು ಹರಿದಾಡುತ್ತಲೇ ಇರುತ್ತೆ. ನಮ್ಮ ಆನ್‍ಸ್ಕ್ರೀನ್ ಕೆಮಿಸ್ಟ್ರೀ ತುಂಬಾ ಚನ್ನಾಗಿದೆ, ಅದಕ್ಕೆ ಹೀಗೆ ಕೆಲ ಗಾಸಿಪ್‍ಗಳು ಮಾಡಲಾಗುತ್ತೆ. ನಾವಿಬ್ಬರು ಒಳ್ಳೆಯ ಸ್ನೇಹಿತರು. ಇಬ್ಬರೂ ಒಂದೇ ತರಹದ ವ್ಯಕ್ತಿತ್ವ ಹೊಂದಿದ್ದೇವೆ, ನಮ್ಮ ಭಾವನೆಗಳನ್ನು ನಾವು ಮುಚ್ಚಿಡುವುದಿಲ್ಲ’ ಎಂದು ಹೇಳಿದ್ದಾರೆ.

    ಜೀವನದಲ್ಲಿ ಯಾರು ಅತಿ ಹೆಚ್ಚು ಮನಸ್ಸಿಗೆ ಇಷ್ಟವಾಗಿರುತ್ತಾರೋ, ನಮ್ಮಗೆ ಹೆಚ್ಚು ಹತ್ತಿರವಾಗಿರುತ್ತಾರೋ ಅವರನ್ನ 3 ಎಎಂ ಫ್ರೆಂಡ್ ಎಂದು ಹೇಳುತ್ತಾರೆ. ಒಬ್ಬರಿಗೊಬ್ಬರು ಅವಲಂಭಿಸಿರುತ್ತಾರೆ, ಏನೇ ವಿಚಾರವಿದ್ದರೂ ಒಬ್ಬರ ಬಳಿ ಇನ್ನೊಬ್ಬರು ಹಂಚಿಕೊಳ್ಳುತ್ತಾರೆ. ಈ ರೀತಿ ಗೆಳೆತನ ಪ್ರಭಾಸ್ ಹಾಗೂ ಅನುಷ್ಕಾ ನಡುವೆ ಇದೆ. ಹೀಗಾಗಿ ಅನುಷ್ಕಾ ಪ್ರಭಾಸ್ ನನ್ನ 3 ಎಎಂ ಫ್ರೆಂಡ್ ಎಂದು ಖುಷಿಯಿಂದ ಸ್ನೇಹದ ಬಗ್ಗೆ ತಿಳಿಸಿದ್ದಾರೆ.

    ಇತ್ತೀಚೆಗೆ ಅನುಷ್ಕಾ ಅವರು ಸಿನಿಮಾ ರಂಗದಲ್ಲಿ 15 ವರ್ಷ ಪೂರೈಸಿದ ಸಂಭ್ರಮವನ್ನು ಆಚರಿಸಲು ಅದ್ದೂರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಎಸ್.ಎಸ್ ರಾಜಮೌಳಿ, ಪುರಿ ಜಗನ್ನಾಥ್, ಸುರೇಶ್ ಬಾಬು, ನಟಿ ಮತ್ತು ನಿರ್ಮಾಪಕಿ ಚಾರ್ಮಿ ಕೌರ್ ಸೇರಿದಂತೆ ಸಾಕಷ್ಟು ಗಣ್ಯರು ಭಾಗಿಯಾಗಿ, ಅನುಷ್ಕಾಗೆ ಶುಭಕೋರಿದ್ದರು. ಈ ವೇಳೆ ಅನುಷ್ಕಾ ಸಂತಸ ವ್ಯಕ್ತಪಡಿಸಿದ್ದರು. ಅಭಿಮಾನಿಗಳು ಇಷ್ಟು ವರ್ಷಗಳಿಂದ ತಮ್ಮ ಮೇಲೆ ತೋರಿದ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದ ತಿಳಿಸಿದ್ದರು.

    ಸದ್ಯ ಅನುಷ್ಕಾ ಶೆಟ್ಟಿ ‘ನಿಶಬ್ದಂ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಸದ್ಯದಲ್ಲೇ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಹೇಮಂತ್ ಮಧುಕರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಈಗಾಗಲೆ ಟೀಸರ್ ಮತ್ತು ಪೋಸ್ಟರ್‍ಗಳ ಮೂಲಕ ಸಿನಿಮಾ ಬಹಳಷ್ಟು ನಿರೀಕ್ಷೆ ಹೆಚ್ಚಿಸಿದೆ. ಸ್ವೀಟಿ ಹೊಸ ಚಿತ್ರದಲ್ಲಿ ಹೇಗೆ ಮೋಡಿ ಮಾಡಲಿದ್ದಾರೆ ಎಂದು ನೋಡಲು ಅಭಿಮಾನಿಗಳು ಕಾತುರದಿಂದ ಕಾದ ಕುಳಿತಿದ್ದಾರೆ.

  • ‘ಫ್ರೆಂಡ್ ಶಿಪ್’ಗಾಗಿ ತಮಿಳು ಚಿತ್ರರಂಗಕ್ಕೆ ಬಂದ ಹರ್ಭಜನ್ ಸಿಂಗ್

    ‘ಫ್ರೆಂಡ್ ಶಿಪ್’ಗಾಗಿ ತಮಿಳು ಚಿತ್ರರಂಗಕ್ಕೆ ಬಂದ ಹರ್ಭಜನ್ ಸಿಂಗ್

    ಬೆಂಗಳೂರು: ಭಾರತದ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಅವರು ತಮಿಳು ಚಿತ್ರವೊಂದರಲ್ಲಿ ನಟಿಸಲು ಕಾಲಿವುಡ್‍ಗೆ ಬಂದಿದ್ದಾರೆ.

    ಸದ್ಯ ಕ್ರಿಕೆಟ್ ಪಂದ್ಯಗಳಲ್ಲಿ ಸಕ್ರಿಯವಾಗಿ ಇಲ್ಲದ ಹರ್ಭಜನ್ ಸಿಂಗ್ ಅವರು ತಮಿಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಹೌದು ಭಾರತದ ದೂಸ್ರಾ ಸ್ಪೆಶಲಿಸ್ಟ್ ಬಜ್ಜಿ ಈಗ ತಮಿಳಿನಲ್ಲಿ ಸಿದ್ಧವಾಗುತ್ತಿರುವ ‘ಫ್ರೆಂಡ್ ಶಿಪ್’ ಚಿತ್ರದಲ್ಲಿ ನಟಿಸಲಿದ್ದಾರೆ.

    ಕ್ರಿಕೆಟ್‍ಗೆ ಅಲ್ಪ ವಿರಾಮವಿಟ್ಟಿರುವ ಹರ್ಭಜನ್ ಸಿಂಗ್ ಅವರು ಸದ್ಯ ಹಲವಾರು ಟಿವಿ ಶೋನಲ್ಲಿ ಗೆಸ್ಟ್ ರೋಲ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಪತ್ನಿ ಗೀತಾ ಬಸ್ರಾ ಅಭಿನಯದ ಸೆಕೆಂಡ್ ಹ್ಯಾಂಡ್ ಹಸ್ಬೆಂಡ್ ಚಿತ್ರದಲ್ಲಿ ಸ್ಪೆಶಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈಗ ಫ್ರೆಂಡ್ ಶಿಪ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಜ್ಜಿ ಚಿತ್ರದ ಮೊದಲ ಪೋಸ್ಟರ್ ಅನ್ನು ಹಾಕಿ ತಮಿಳಿನಲ್ಲೇ ತಮಿಳುಚಿತ್ರರಂಗಕ್ಕೆ ಧನ್ಯವಾದ ತಿಳಿಸಿದ್ದಾರೆ.

    ಫ್ರೆಂಡ್ ಶಿಪ್ ಸಿನಿಮಾವನ್ನು ಜಾನ್ ಪೌಲ್ ಮತ್ತು ಶ್ಯಾಮ್ ಸೂರ್ಯ ನಿರ್ದೇಶನ ಮಾಡುತ್ತಿದ್ದು, ಬಿಡುಗಡೆಯಾಗಿರುವ ಮೊದಲ ಪೋಸ್ಟರ್ ಸಖತ್ ಟ್ರೆಂಡಿಯಾಗಿದೆ. ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ಪೋಸ್ಟರ್ ಅಲ್ಲಿ ಇಬ್ಬರು ವ್ಯಕ್ತಿಗಳ ಕೈಗೆ ಒಂದೇ ಬೇಡಿಯನ್ನು ಹಾಕಿದ್ದಾರೆ. ಬಜ್ಜಿ ನಟನೆಯ ಮೊದಲ ತಮಿಳು ಸಿನಿಮಾದ ಪೋಸ್ಟರ್ ಗೆ ಪ್ರೇಕ್ಷಕನಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

    ಫ್ರೆಂಡ್ ಶಿಪ್ ಚಿತ್ರದ ಪೋಸ್ಟರ್ ಅನ್ನು ಸಿನಿ ಮಾರುಕಟ್ಟೆ ವಿಶ್ಲೇಷಕ ರಮೇಶ್ ಬಾಲಾ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಮೊದಲ ಬಾರಿಗೆ ಭಾರತದ ಚಿತ್ರರಂಗದಲ್ಲಿ ಭಾರತೀಯ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್ ಫ್ರೆಂಡ್ ಶಿಪ್ ಎಂಬ ಚಿತ್ರದಲ್ಲಿ ಲೀಡ್ ರೋಲ್‍ನಲ್ಲಿ ಅಭಿನಯಿಸಲಿದ್ದಾರೆ. ಇದೇ 2020 ಕ್ಕೆ ಈ ಸಿನಿಮಾ ದೇಶಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಬರೆದುಕೊಂಡಿದ್ದಾರೆ.

    ಹರ್ಭಜನ್ ಸಿಂಗ್ ಅವರು ಜೊತೆಗೆ ಭಾರತದ ಮಾಜಿ ವೇಗಿ ಇರ್ಫಾನ್ ಪಠಾಣ್ ಕೂಡ ಮೊದಲ ಬಾರಿಗೆ ಇದೇ ವರ್ಷ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಇರ್ಫಾನ್ ಪಠಾಣ್ ಅವರು ವಿಕ್ರಮ್ ನಟನೆಯ ‘ವಿಕ್ರಮ್ 58’ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಬಗ್ಗೆ ಸ್ವತಃ ಸಿನಿಮಾದ ನಿರ್ದೇಶಕ ಅಜಯ್ ಜ್ಞಾನಮುತ್ತು ಅವರು ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ.

  • ಟಿಕ್‍ಟಾಕ್‍ನಲ್ಲಿ ಪರಿಚಯ ಮಾಡ್ಕೊಂಡು ವಂಚನೆ- ಆಂಟಿಯ ಬಂಧನ, ಬಿಡುಗಡೆ

    ಟಿಕ್‍ಟಾಕ್‍ನಲ್ಲಿ ಪರಿಚಯ ಮಾಡ್ಕೊಂಡು ವಂಚನೆ- ಆಂಟಿಯ ಬಂಧನ, ಬಿಡುಗಡೆ

    ಬೆಂಗಳೂರು: ಟಿಕ್ ಟಾಕ್ ಮೂಲಕ ಯುವಕರನ್ನು ಪರಿಚಯ ಮಾಡಿಕೊಂಡು ವಂಚಿಸುತ್ತಿದ್ದ ಮಹಿಳೆಯನ್ನು ಬೆಂಗಳೂರಿನ ಡಿಜೆ ಹಳ್ಳಿ ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ

    ವಿಜಯ ಲಕ್ಷ್ಮಿ ಅಲಿಯಾಸ್ ಲಯನ್ ಲಕ್ಷ್ಮಿ ಬಂಧಿತ ಮಹಿಳೆ. ಈಕೆ ದೊಮ್ಮಲೂರು ನಿವಾಸಿ ಶಿವಕುಮಾರ್ ಗೆ ವಂಚಿಸಿದ್ದಳು. ಸದ್ಯ ಪೊಲೀಸರು ಆಕೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

    ವಿಜಯಲಕ್ಷ್ಮಿ ಟಿಕ್ ಟಾಕ್ ಮೂಲಕ ಶಿವಕುಮಾರ್ ನನ್ನು ಪರಿಚಯ ಮಾಡಿಕೊಂಡು ಮದುವೆ ಆಗೋದಾಗಿ ನಂಬಿಸಿದ್ದಾಳೆ. ಅಲ್ಲದೆ ಹಣ ಪಡೆದು ವಂಚಿಸಿದ್ದಾಳೆ. ಈ ಸಂಬಂಧ ಶಿವಕುಮಾರ್ ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದನು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಜಯ ಲಕ್ಷ್ಮಿಯನ್ನು ಬಂಧಿಸಿ, ನಂತ ಬಿಡುಗಡೆ ಮಾಡಿದ್ದಾರೆ.

    ನಡೆದಿದ್ದೇನು?:
    ಶಿವಕುಮಾರ್ ಟಿಕ್ ಟಾಕ್‍ನಲ್ಲಿ ವಿಜಯಲಕ್ಷ್ಮಿಯ ಅನೇಕ ವಿಡಿಯೋಗಳಿಗೆ ಲೈಕ್ ಮಾಡಿದ್ದ. ಅಷ್ಟೇ ಅಲ್ಲದೆ ಫೇಸ್‍ಬುಕ್ ನಲ್ಲಿ ಇಬ್ಬರು ಫ್ರೆಂಡ್ ಆಗಿದ್ದರು. ಈ ಮೂಲಕ ಪರಸ್ಪರ ಪರಿಚಯ ಮಾಡಿಕೊಂಡಿದ್ದರು. ಕೆಲ ದಿನಗಳ ಬಳಿಕ ಶಿವಕುಮಾರ್ ಮೊಬೈಲ್ ನಂಬರ್ ಪಡೆದ ವಿಜಯಲಕ್ಷ್ಮಿ ಚಾಟಿಂಗ್ ಮಾಡಲು ಆರಂಭಿಸಿದ್ದಳು. ಸ್ನೇಹ, ಪ್ರೀತಿಗೆ ತಿರುಗಿ ಶಿವಕುಮಾರ್ ಹಾಗೂ ವಿಜಯಲಕ್ಷ್ಮಿ ಪರಸ್ಪರ ಒಪ್ಪಿ ಒಂದೇ ಮನೆಯಲ್ಲಿ ವಾಸವಿದ್ದರು.

    ನಿನ್ನನ್ನು ಮದುವೆಯಾಗುತ್ತೇನೆ ಎಂದು ವಿಜಯಲಕ್ಷ್ಮಿ ಶಿವಕುಮಾರ್ ನನ್ನು ನಂಬಿಸಿದ್ದಳು. ಜೊತೆಗೆ ಆತನಿಂದ ಶಾಪಿಂಗ್, ಬಾಡಿಗೆ ಸೇರಿದಂತೆ ಇತರೆ ಖರ್ಚಿಗೆ ಅಂತ 4 ಲಕ್ಷ ರೂ. ಪಡೆದಿದ್ದಳು. ಹೀಗಾಗಿ ಶಿವಕುಮಾರ್ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ ವಿಜಯಲಕ್ಷ್ಮಿ ಮದುವೆಗೆ ನಿರಾಕರಿಸಿ, ಆತನ ಸಹವಾಸ ಬಿಟ್ಟಿದ್ದಳು. ಇದಾದ ಬಳಿಕವೂ ವಿಜಯಲಕ್ಷ್ಮಿಯು ಶಿವಕುಮಾರ್ ಗೆ ಕರೆ ಮಾಡಿ, ಹಣ ನೀಡುವಂತೆ ಒತ್ತಾಯಿಸಿದ್ದಳು. ಆ ಬಳಿಕ ಕೆಲವು ದಿನಗಳಿಂದ ವಿಜಯಲಕ್ಷ್ಮಿಗೆ ಹಣ ನೀಡುವುದನ್ನು ನಿಲ್ಲಿಸಿದ್ದ. ಇದರಿಂದಾಗಿ ಆರೋಪಿಯು ತನ್ನ ಸ್ನೇಹಿತ ಮಧು ಕೊಲ್ಯಾನ್‍ನಿಂದ ಕರೆ ಮಾಡಿಸಿ ಕೊಲೆ ಬೆದರಿಕೆ ಹಾಕಿಸಿದ್ದಳು. ಈ ಎಲ್ಲ ಬೆಳವಣಿಗೆಯಿಂದ ಬೇಸತ್ತ ಶಿವಕುಮಾರ್ ದೇವರ ಜೀವನ ಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದನು.

  • ಟಿಕ್ ಟಾಕ್‍ನಲ್ಲಿ ಪರಿಚಯ: ಮದುವೆಯಾಗ್ತೀನಿ ಎಂದು 4 ಲಕ್ಷ ರೂ. ಪೀಕಿದ ಆಂಟಿ

    ಟಿಕ್ ಟಾಕ್‍ನಲ್ಲಿ ಪರಿಚಯ: ಮದುವೆಯಾಗ್ತೀನಿ ಎಂದು 4 ಲಕ್ಷ ರೂ. ಪೀಕಿದ ಆಂಟಿ

    ಬೆಂಗಳೂರು: ಟಿಕ್ ಟಾಕ್‍ನಲ್ಲಿ ಪರಿಚಯವಾದ ಮಹಿಳೆಯೊಬ್ಬಳು ಮದುವೆಯಾಗುತ್ತೇನೆ ಎಂದು ನಂಬಿಸಿ ವ್ಯಕ್ತಿಯೊಬ್ಬನಿಂದ 4 ಲಕ್ಷ ರೂ. ಪೀಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಬೆಂಗಳೂರು ನಿವಾಸಿ ವಿಜಯಲಕ್ಷ್ಮಿ ಹಣ ಪೀಕಿದ ಮಹಿಳೆ. ದೊಮ್ಮಲೂರು ನಿವಾಸಿ ಶಿವಕುಮಾರ್ ವಂಚನೆಗೆ ಒಳಗಾದ ವ್ಯಕ್ತಿ. ಈ ಪ್ರಕರಣದ ಮತ್ತೋರ್ವ ಆರೋಪಿ ಮಧು ಕೊಲ್ಯಾನ್, ಶಿವಕುಮಾರ್ ಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ಫೇಸ್‍ಬುಕ್‍ನಲ್ಲಿ ಪರಿಚಯ- ನಂತ್ರ ಚಾಟಿಂಗ್, ಮೀಟಿಂಗ್, ಚೀಟಿಂಗ್

    ಶಿವಕುಮಾರ್ ಟಿಕ್ ಟಾಕ್‍ನಲ್ಲಿ ವಿಜಯಲಕ್ಷ್ಮಿಯ ಅನೇಕ ವಿಡಿಯೋಗಳಿಗೆ ಲೈಕ್ ಮಾಡಿದ್ದ. ಅಷ್ಟೇ ಅಲ್ಲದೆ ಫೇಸ್‍ಬುಕ್ ನಲ್ಲಿ ಇಬ್ಬರು ಫ್ರೆಂಡ್ ಆಗಿದ್ದರು. ಈ ಮೂಲಕ ಪರಸ್ಪರ ಪರಿಚಯ ಮಾಡಿಕೊಂಡಿದ್ದರು. ಕೆಲ ದಿನಗಳ ಬಳಿಕ ಶಿವಕುಮಾರ್ ಮೊಬೈಲ್ ನಂಬರ್ ಪಡೆದ ವಿಜಯಲಕ್ಷ್ಮಿ ಚಾಟಿಂಗ್ ಮಾಡಲು ಆರಂಭಿಸಿದ್ದಳು. ಸ್ನೇಹ, ಪ್ರೀತಿಗೆ ತಿರುಗಿ ಶಿವಕುಮಾರ್ ಹಾಗೂ ವಿಜಯಲಕ್ಷ್ಮಿ ಪರಸ್ಪರ ಒಪ್ಪಿ ಒಂದೇ ಮನೆಯಲ್ಲಿ ವಾಸವಿದ್ದರು.

    ನಿನ್ನನ್ನು ಮದುವೆಯಾಗುತ್ತೇನೆ ಎಂದು ವಿಜಯಲಕ್ಷ್ಮಿ ಶಿವಕುಮಾರ್‍ನನ್ನು ನಂಬಿಸಿದ್ದಳು. ಜೊತೆಗೆ ಆತನಿಂದ ಶಾಪಿಂಗ್, ಬಾಡಿಗೆ ಸೇರಿದಂತೆ ಇತರೆ ಖರ್ಚಿಗೆ ಅಂತ 4 ಲಕ್ಷ ರೂ. ಪಡೆದಿದ್ದಳು. ಹೀಗಾಗಿ ಶಿವಕುಮಾರ್ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ ವಿಜಯಲಕ್ಷ್ಮಿ ಮದುವೆಗೆ ನಿರಾಕರಿಸಿ, ಆತನ ಸಹವಾಸ ಬಿಟ್ಟಿದ್ದಳು. ಇದಾದ ಬಳಿಕವೂ ವಿಜಯಲಕ್ಷ್ಮಿಯು ಶಿವಕುಮಾರ್ ಗೆ ಕರೆ ಮಾಡಿ, ಹಣ ನೀಡುವಂತೆ ಒತ್ತಾಯಿಸಿದ್ದಳು.

    ಶಿವಕುಮಾರ್ ಕಳೆದ ಕೆಲವು ದಿನಗಳಿಂದ ವಿಜಯಲಕ್ಷ್ಮಿಗೆ ಹಣ ನೀಡುವುದನ್ನು ನಿಲ್ಲಿಸಿದ್ದ. ಇದರಿಂದಾಗಿ ಆರೋಪಿಯು ತನ್ನ ಸ್ನೇಹಿತ ಮಧು ಕೊಲ್ಯಾನ್‍ನಿಂದ ಕರೆ ಮಾಡಿಸಿ ಕೊಲೆ ಬೆದರಿಕೆ ಹಾಕಿಸಿದ್ದಾಳೆ. ಈ ಎಲ್ಲ ಬೆಳವಣಿಗೆಯಿಂದ ಬೇಸತ್ತ ಶಿವಕುಮಾರ್ ದೇವರ ಜೀವನ ಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

    ಈ ಸಂಬಂಧ ಶಿವಕುಮಾರ್ ಡಿಜೆ ಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಆರೋಪಿ ವಿಜಯಲಕ್ಷ್ಮಿ ಹಾಗೂ ಮಧು ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಆರಂಭಿಸಿದ್ದಾರೆ.

  • ಲಿಂಕ್ಡ್‌ಇನ್‌ ಸ್ನೇಹಿತನಿಂದ ಮಹಿಳೆಗೆ 1 ಕೋಟಿ ರೂ. ಪಂಗನಾಮ

    ಲಿಂಕ್ಡ್‌ಇನ್‌ ಸ್ನೇಹಿತನಿಂದ ಮಹಿಳೆಗೆ 1 ಕೋಟಿ ರೂ. ಪಂಗನಾಮ

    ಹೈದರಾಬಾದ್: ಉದ್ಯೋಗಿಗಳ ಸಾಮಾಜಿಕ ಜಾಲತಾಣ ಲಿಂಕ್ಡ್‌ಇನ್‌ ಮೂಲಕ ಸ್ನೇಹಿತನಾಗಿದ್ದ ವ್ಯಕ್ತಿಯೋರ್ವ ಹೈದರಾಬಾದಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯಿಂದ 1 ಕೋಟಿ ರೂಪಾಯಿಗೂ ಅಧಿಕ ಹಣ ಪಡೆದು ಪಂಗನಾಮ ಹಾಕಿದ್ದಾನೆ.

    ಕಳೆದ ಮೇ ತಿಂಗಳಲ್ಲಿ ಲಿಂಕ್ಡ್‌ಇನ್‌ ಮೂಲಕ ಅನಾಮಿಕ ವ್ಯಕ್ತಿಯೊಂದಿಗೆ ವಂಚನೆಗೊಳಗಾದ ಮಹಿಳೆ ಸ್ನೇಹ ಬೆಳೆಸಿಕೊಂಡಿದ್ದರು. ಮೊದಲು ಲಿಂಕ್ಡ್‌ಇನ್‌ ಮೂಲಕ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಅದನ್ನು ಮಹಿಳೆ ಸ್ವೀಕರಿಸಿದರು. ತಾನು ಪೈಲಟ್, ಬ್ರಿಟಿಷ್ ಏರ್‌ವೇಸ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಆರೋಪಿ ಮಹಿಳೆ ಜೊತೆ ಸ್ನೇಹ ಬೆಳೆಸಿದ್ದನು. ಕೆಲ ದಿನಗಳವರೆಗೆ ಚಾಟಿಂಗ್ ಮಾಡಿದ ಬಳಿಕ ಇಬ್ಬರು ತಮ್ಮ ಫೋನ್ ನಂಬರ್ ಹಂಚಿಕೊಂಡಿದ್ದರು. ಹೀಗೆ ಇಬ್ಬರ ನಡುವೆ ಸ್ನೇಹ ಗಟ್ಟಿಯಾಯ್ತು, ಚಾಂಟಿಂಗ್ ಕೂಡ ಹೆಚ್ಚಾಯಿತು.

    ಹೀಗೆ ಒಂದು ದಿನ ಆಕೆಗೆ ಐಫೋನ್, ರೊಲೆಕ್ಸ್ ವಾಚ್, ದುಬಾರಿ ಪರ್ಫ್ಯೂಮ್ ಗಳು ಮತ್ತು ಕೆಲ ಬ್ರಿಟನ್ ಕರೆನ್ಸಿಗಳನ್ನು ಗಿಫ್ಟ್ ಆಗಿ ಪಾರ್ಸೆಲ್ ಕಳುಹಿಸುತ್ತೇನೆ. ಅದಕ್ಕೆ ಮೊದಲು ಹಣ ಬೇಕು ಎಂದು ಸುಳ್ಳು ಹೇಳಿ ಆರೋಪಿ ಮಹಿಳೆಯಿಂದ 7 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದನು. ನಂತರ ಮತ್ತೆ ವಾಟ್ಸಾಪ್‍ನಲ್ಲಿ ಆರೋಪಿ ನನ್ನ ತಂದೆಗೆ ಕ್ಯಾನ್ಸರ್ ಇದೆ ಆಸ್ಪತ್ರೆಯಲ್ಲಿದ್ದಾರೆ, ತುರ್ತಾಗಿ ಹಣ ಬೇಕಿತ್ತು ಎಂದು ಮಹಿಳೆ ಬಳಿ ಸಹಾಯ ಕೋರಿದ್ದ. ಆತನ ಮಾತನ್ನು ನಂಬಿ ಮಹಿಳೆ 11 ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 94 ಲಕ್ಷ ರೂಪಾಯಿ ವರ್ಗಾಯಿಸಿದ್ದರು.

    ಬಳಿಕ ಆರೋಪಿ ಮಹಿಳೆಗೆ ಸಂಪರ್ಕಿಸಿಲ್ಲ. ಅಷ್ಟೇ ಅಲ್ಲದೆ ಹಲವು ದಿನಗಳು ಕಳೆದರೂ ಮಹಿಳೆಗೆ ಯಾವುದೇ ಪಾರ್ಸೆಲ್ ಬಂದಿರಲಿಲ್ಲ. ಆಗ ಆಕೆಗೆ ತಾನು ಮೋಸ ಹೋಗಿರುವುದು ಅರಿವಾಗಿ, ಸೈಬರ್ ಕ್ರೈಂ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಸದ್ಯ ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ಹಿಂದೂ ಯುವಕ ಮುಸ್ಲಿಂ ಯುವತಿಯರ ಜೊತೆ ಇದ್ದಿದ್ದಕ್ಕೆ ಥಳಿತ!

    ಹಿಂದೂ ಯುವಕ ಮುಸ್ಲಿಂ ಯುವತಿಯರ ಜೊತೆ ಇದ್ದಿದ್ದಕ್ಕೆ ಥಳಿತ!

    – ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್ ಗೂಂಡಾಗಿರಿ
    – 20 ಮುಸ್ಲಿಂ ಯುವಕರ ವಿರುದ್ಧ ಎಫ್‍ಐಆರ್ ದಾಖಲು

    ಮಂಡ್ಯ: ಹಿಂದೂ ಯುವಕ ತನ್ನ ಕಾಲೇಜಿನ ಮುಸ್ಲಿಂ ಸ್ನೇಹಿತೆಯರ ಜೊತೆ ಇದ್ದ ಎಂಬ ಕಾರಣಕ್ಕೆ ಮುಸ್ಲಿಂ ಯುವಕರು ನೈತಿಕ ಪೊಲೀಸ್‍ಗಿರಿ ಪ್ರದರ್ಶಿಸಿದ್ದಾರೆ. ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.

    ಮಂಡ್ಯದ ನಾಗಮಂಗಲ ತಾಲೂಕಿನ ನೆಲ್ಲಿಗೆರೆ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಅ. 9ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಾಗಮಂಗಲದ ಪದವಿ ಕಾಲೇಜುವೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪ್ರಶಾಂತ್ ಮೇಲೆ 20 ಮಂದಿ ಮುಸ್ಲಿಂ ಯುವಕರು ಹಲ್ಲೆ ನಡೆಸಿ, ನೈತಿಕ ಪೊಲೀಸ್‍ಗಿರಿ ಪ್ರದರ್ಶಿಸಿದ್ದಾರೆ. ತನ್ನ ಕಾಲೇಜಿನ ಮುಸ್ಲಿಂ ಯುವಕ-ಯುವತಿಯರ ಜೊತೆ ಪ್ರಶಾಂತ್ ಸ್ನೇಹ ಬೆಳೆಸಿದ್ದನು. ಹೀಗೆ ಅ. 9ರಂದು ಪ್ರಶಾಂತ್ ಓರ್ವ ಹಿಂದೂ ಯುವತಿ ಸೇರಿ ಮೂವರು ಗೆಳತಿಯರ ಜೊತೆ ಒಂದೇ ಕಾರಿನಲ್ಲಿ ತೆರಳುತ್ತಿದ್ದನು. ಅವರಲ್ಲಿ ಇಬ್ಬರು ಮುಸ್ಲಿಂ ಯುವತಿಯರೂ ಇದ್ದರು. ಇದನ್ನು ಕಂಡ ಆರೋಪಿ ಇದ್ರಿಷ್ ಮತ್ತು 20 ಮಂದಿ ಮುಸ್ಲಿಂ ಯುವಕರು ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ.

    ಮುಸ್ಲಿಂ ಯುವತಿಯೊಂದಿಗೆ ಯಾಕೆ ಇದ್ದೀಯಾ ಎಂದು ಪ್ರಶಾಂತ್‍ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಂತರ ಎಲ್ಲರೂ ಸೇರಿಕೊಂಡು ಪ್ರಶಾಂತ್ ಮತ್ತು ಮುಸ್ಲಿಂ ಯವತಿ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಹಲ್ಲೆ ಮಾಡುವ ದೃಶ್ಯವನ್ನು ವಿಡಿಯೋ ಕೂಡ ಮಾಡಿಕೊಂಡಿದ್ದಾರೆ. ಬಳಿಕ ಹಿಂದೂ ಯುವಕನಿಗೆ ಹೊಡೆದಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹರಿಬಿಟ್ಟಿದ್ದಾರೆ.

    ವಿಡಿಯೋದಲ್ಲಿ ನಾವೆಲ್ಲ ಸ್ನೇಹಿತರು ನಮ್ಮನ್ನ ಬಿಟ್ಟುಬಿಡಿ ಎಂದು ಪ್ರಶಾಂತ್ ಹಾಗೂ ಯುವತಿ ಬೇಡಿಕೊಳ್ಳುತ್ತಿರುವ ದೃಶ್ಯ ಸೆರೆಯಾಗಿದೆ. ವಿದ್ಯಾರ್ಥಿಗಳು ಎಷ್ಟೇ ಬೇಡಿಕೊಂಡರೂ ಬಿಡದೇ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಹೀಗೆ ನೈತಿಕ ಪೋಲಿಸ್ ಗೂಂಡಾಗಿರಿ ನಡೆಸಿರುವ ವಿಡಿಯೋ ವೈರಲ್ ಆದ ಬಳಿಕ ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣೆ ವೇಳೆ ತಮ್ಮ ಕಾಲೇಜಿನ ಮುಸ್ಲಿಂ ಪ್ರೇಮಿಗಳಿಗೆ ಸಹಾಯ ಮಾಡಲು ಕಾರಿನಲ್ಲಿ ಸ್ನೇಹಿತರೆಲ್ಲ ತೆರಳುತ್ತಿದ್ದೆವು ಈ ವೇಳೆ ಘಟನೆ ನಡೆದಿದೆ ಎಂದು ಪ್ರಶಾಂತ್ ಹಾಗೂ ಮುಸ್ಲಿಂ ಯುವತಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಈ ಸಂಬಂಧ ಎಸ್‍ಎಸ್‍ಪಿ ಶೋಭರಾಣಿ ತನಿಖೆ ಕೈಗೊಂಡಿದ್ದು, ಆರೋಪಿ ಇದ್ರಿಷ್ ಸೇರಿ 20 ಜನರ ವಿರುದ್ಧ ಎಫ್‍ಐಆರ್ ದಾಖಲು ಮಾಡಿ, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

    https://www.youtube.com/watch?v=awDAVE6wU1Y

  • ಸ್ನೇಹಕ್ಕಾಗಿ ಯುವತಿಗೆ ಪೋರ್ನ್ ವಿಡಿಯೋ ಸೆಂಡ್ ಮಾಡಿದ ಭೂಪ

    ಸ್ನೇಹಕ್ಕಾಗಿ ಯುವತಿಗೆ ಪೋರ್ನ್ ವಿಡಿಯೋ ಸೆಂಡ್ ಮಾಡಿದ ಭೂಪ

    ಚಂಡೀಗಢ್: ಸ್ನೇಹಿತರಾಗಲು ನಿರಾಕರಿಸಿದ್ದಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಯುವತಿಗೆ ಪೋರ್ನ್ ವಿಡಿಯೋವನ್ನು ವಾಟ್ಸಪ್‍ಗೆ ಕಳುಹಿಸುವ ಮೂಲಕ ಕಿರುಕುಳ ನೀಡಿರುವ ಘಟನೆ ಹರಿಯಾಣದ ಗುರುಗ್ರಾಮ್‍ನಲ್ಲಿ ನಡೆದಿದೆ.

    25 ವರ್ಷದ ಯುವತಿ ತನಗೆ ಕಿರುಕುಳ ನೀಡುತ್ತಿದ್ದಾನೆಂದು ಆರೋಪಿಸಿ ಅಪರಿಚಿತ ಆರೋಪಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಯುವತಿ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಅಪರಿಚಿತ ವ್ಯಕ್ತಿಯಿಂದ ಫೋನ್ ಬಂದಿದ್ದು. ಯುವತಿ ರಿಸೀವ್ ಮಾಡಿ ಮಾತನಾಡಿದ್ದಾರೆ. ಆಗ ಆರೋಪಿ ನಿಮ್ಮೊಂದಿಗೆ ಸ್ನೇಹ ಬೆಳೆಸಬೇಕೆಂದು ತಿಳಿಸಿದ್ದಾನೆ. ಇದಕ್ಕೆ ಯುವತಿ ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಆರೋಪಿ ಆಕೆಗೆ ಕಿರುಕುಳ ನೀಡಲು ಶುರುಮಾಡಿದ್ದಾನೆ.

    ಅಷ್ಟಕ್ಕೆ ಸುಮ್ಮನಾದ ಆರೋಪಿ ಯುವತಿ ಸ್ನೇಹ ಬೆಳೆಸಬೇಕು ಎಂದು ಎಲ್ಲಾ ರೀತಿಯಲ್ಲಿ ಪ್ರಯತ್ನ ಮಾಡಿದ್ದಾನೆ. ಆದರೂ ಯುವತಿ ಯಾವುದಕ್ಕೂ ಪ್ರತಿಕ್ರಿಯಿಸಲಿಲ್ಲ. ನಂತರ ಬೇರೆ ಬೇರೆ ನಂಬರ್ ಗಳಿಂದ ಫೋನ್ ಮಾಡಿದ್ದಾನೆ. ಜೊತೆಗೆ ಯುವತಿಯ ವಾಟ್ಸಪ್‍ಗೆ ಪೋರ್ನ್ ಮತ್ತು ಅಶ್ಲೀಲ ವಿಡಿತಯೋವನ್ನು ಕಳುಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೊದಲಿಗೆ ನಾನು ಆತನ ಕರೆಗಳನ್ನು ನಿರ್ಲಕ್ಷಿಸಿದೆ. ಆದರೆ ವ್ಯಕ್ತಿಯು ಬೇರೆ ಬೇರೆ ನಂಬರ್‌ಗಳನ್ನು ಬಳಸಿ ನನಗೆ ಕಿರುಕುಳ ನೀಡಲು ಪ್ರಾರಂಭಿಸಿದನು. ಕೊನೆಗೆ ಬೇರೆ ನಂಬರ್‌ನಿಂದ ಫೋನ್ ಬಂದರೆ ರಿಸೀವ್ ಮಾಡಲು ಹೆದರುತ್ತಿದ್ದೇನೆ. ಇದರಿಂದ ನನ್ನ ಕೆಲಸ ಮತ್ತು ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಯುವತಿಯ ದೂರಿನ ಆಧಾರದ ಮೇಲೆ ಅಪರಿಚಿತ ಆರೋಪಿ ವಿರುದ್ಧ ಸದರ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯಕ್ಕೆ ಆತನ ಮೊಬೈಲ್ ನಂಬರ್ ಮೂಲಕ ಆರೋಪಿಯನ್ನು ಪತ್ತೆ ಹಚ್ಚಲು ಪ್ರಯತ್ನ ಮಾಡಲಾಗುತ್ತಿದೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಅಪರಿಚಿತರು ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.