Tag: Friendship Day

  • ಸಸಿಗಳನ್ನು ನೆಟ್ಟು ಬ್ಯಾಂಡ್ ಕಟ್ಟಿ ಕಲಬುರಗಿಯಲ್ಲಿ ಫ್ರೆಂಡ್‍ಶಿಪ್ ಡೇ ಆಚರಣೆ

    ಸಸಿಗಳನ್ನು ನೆಟ್ಟು ಬ್ಯಾಂಡ್ ಕಟ್ಟಿ ಕಲಬುರಗಿಯಲ್ಲಿ ಫ್ರೆಂಡ್‍ಶಿಪ್ ಡೇ ಆಚರಣೆ

    ಕಲಬುರಗಿ: ಫ್ರೆಂಡ್‍ಶಿಪ್ ಡೇ ಹಿನ್ನೆಲೆಯಲ್ಲಿ ‘ನಮ್ಮ ಸಂಕಲ್ಪ ಫೌಂಡೇಶನ್’ ಈ ದಿನವನ್ನು ಪರಿಸರ ದಿನವನ್ನಾಗಿ ಆಚರಿಸಿ, ಸಸಿಗಳನ್ನು ನೆಟ್ಟು, ಪರಿಸರ ಕಾಳಜಿ ಮೆರೆದಿದೆ.

    ಇಂದು ದೇಶದ ಎಲ್ಲೆಡೆ ಫ್ರೆಂಡ್‍ಶಿಪ್ ಡೇ ಯನ್ನು ಆಚರಿಸಲಾಗುತ್ತಿದೆ. ಹೀಗಾಗಿ ಸ್ನೇಹಿತರಿಬ್ಬರು ಪರಸ್ಪರ ಬ್ಯಾಂಡ್‍ಗಳನ್ನು ಕಟ್ಟಿ, ಸಿಹಿ ಕೊಟ್ಟು ಶುಭಾಶಯ ವಿನಿಮಯ ಮಾಡಿಕೊಳ್ಳೊದು ಕಾಮನ್. ಇದನ್ನು ಮೀರಿ ನಮ್ಮ ಸಂಕಲ್ಪ ಫೌಂಡೇಶನ್ ಸದಸ್ಯರು ಸಸಿಗಳನ್ನು ನೆಟ್ಟು ಫ್ರೆಂಡ್‍ಶಿಪ್ ಬ್ಯಾಂಡ್‍ಗಳನ್ನು ಕಟ್ಟಿ ಪರಿಸರ ಸ್ನೇಹವನ್ನು ವ್ಯಕ್ತಪಡಿಸಿದ್ದಾರೆ.

    ಇಲ್ಲಿನ ವಿಠಲ ನಗರದ ಹನುಮಾನ ದೇವಸ್ಥಾನದ ಮಹಾನಗರ ಪಾಲಿಕೆ ಉದ್ಯಾನದಲ್ಲಿ ‘ನಮ್ಮ ಸಂಕಲ್ಪ ಫೌಂಡೇಶನ್’ ಸ್ನೇಹಿತರ ದಿನಾಚರಣೆ ಆಯೋಜಿಸಿತ್ತು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ಸಸಿಗಳನ್ನು ನೆಟ್ಟು ಅವುಗಳಿಗೆ ನೀರು ಉಣಿಸುವುದರ ಮೂಲಕ ಗಿಡ ಮರಗಳನ್ನ ತಮ್ಮ ಸ್ನೇಹಿತರಂತೆ ನೋಡಿ ಅವುಗಳನ್ನ ಪ್ರತಿಯೊಬ್ಬರ ಪೋಷಿಸುವಂತೆ ಕರೆ ನೀಡಿದರು.

    ಇತ್ತೀಚಿನ ದಿನಗಳಲ್ಲಿ ಪರಿಸರದ ಬಗ್ಗೆ ಬಹುತೇಕರು ಕಾಳಜಿ ವಹಿಸುತ್ತಿಲ್ಲ. ಹೀಗಾಗಿ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದೆ. ಸ್ವಚ್ಛಂದವಾಗಿ ಉಸಿರಾಡಲು ಕಷ್ಟವಾಗುತ್ತಿರುವ ದಿನಗಳಲ್ಲಿ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ‘ನಮ್ಮ ಸಂಕಲ್ಪ ಫೌಂಡೇಶನ್’ ರಕ್ತ ದಾನಿಗಳ ಗುಂಪಾಗಿದ್ದು, ಕಲಬುರಗಿ ಸೇರಿದಂತೆ ವಿವಿಧೆಡೆ ಉಚಿತವಾಗಿ ರಕ್ತವನ್ನು ದಾನ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಕಾರ್ಯಕ್ರಮದ ಬಳಿಕ ಪಾಲಿಕೆ ವ್ಯಾಪ್ತಿಯ ಉದ್ಯಾನದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಟ್ಟು ಅವುಗಳಿಗೆ ಬ್ಯಾಂಡ್‍ಗಳನ್ನು ಕಟ್ಟಲಾಯಿತು.

  • 25ನೇ ವರ್ಷದ ಸಂಭ್ರಮದಲ್ಲಿ ಪ್ರಿಯಾ ಸುದೀಪ್

    25ನೇ ವರ್ಷದ ಸಂಭ್ರಮದಲ್ಲಿ ಪ್ರಿಯಾ ಸುದೀಪ್

    ಬೆಂಗಳೂರು: ಇಂದು ಸ್ನೇಹಿತರ ದಿನಾಚರಣೆ. ಸ್ನೇಹಿತರೆಲ್ಲರೂ ತಮ್ಮ ತಮ್ಮ ಗೆಳೆಯ-ಗೆಳತಿಯರಿಗೆ ಸ್ನೇಹ ದಿನದ ಶುಭಾಶಯವನ್ನು ತಿಳಿಸುತ್ತಿದ್ದಾರೆ. ಪ್ರಿಯಾ ಸುದೀಪ್ ಕೂಡ ತಮ್ಮ ಪತಿ ಸುದೀಪ್ ಅವರಿಗೆ ಶುಭಾಶಯವನ್ನು ತಿಳಿಸಿದ್ದಾರೆ.

    ನಟ ಸುದೀಪ್ ಅವರ ಪತ್ನಿ ಪ್ರಿಯಾ ಅವರು ತಮ್ಮಿಬ್ಬರ 25ನೇ ವರ್ಷದ ಸ್ನೇಹದ ಸಂಭ್ರಮದಲ್ಲಿದ್ದು, ಟ್ವೀಟ್ ಮಾಡುವುದರ ಮೂಲಕ ಸುದೀಪ್ ಅವರಿಗೆ ಶುಭಾಶಯವನ್ನು ತಿಳಿಸಿದ್ದಾರೆ. ಸುದೀಪ್ ಮತ್ತು ಪ್ರಿಯಾ ಅವರು ಸ್ನೇಹಿತರಾಗಿದ್ದು, ನಂತರ ಸ್ನೇಹ ಪ್ರೀತಿಯಾಗಿ ಇಬ್ಬರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದರು. ಆದರೆ ಇಂದಿಗೂ ಅವರಿಬ್ಬರ ಸ್ನೇಹ ಹಾಗೆಯೇ ಇದೆ. ಇಂದು ತಮ್ಮ ಸ್ನೇಹ – ಪ್ರೀತಿಯನ್ನು ನೆನಪಿಸಿಕೊಂಡು ತಮ್ಮ ಸಂತಸವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

    ಪ್ರಿಯಾ ಸುದೀಪ್ ಅವರು ಸುದೀಪ್ ಜೊತೆಗಿನ ಫೋಟೋ ಹಾಕಿ “ಗೆಳೆಯ ಸುದೀಪ್ ಮತ್ತು ನನ್ನ ಸ್ನೇಹ ಇಂದಿಗೆ 25 ವರ್ಷವನ್ನು ಪೂರೈಸಿದೆ. ನಾವಿಬ್ಬರು ಮದುವೆಯಾಗಿದ್ದರು ಕೂಡ ನಮ್ಮ ಸ್ನೇಹ ಹಾಗೇಯೆ ಇದೆ. ಮದುವೆ ನಮ್ಮ ಸ್ನೇಹವನ್ನು ಹಾಳು ಮಾಡಿಲ್ಲ. ತುಂಬಾ ಸಂತೊಷವಾಗುತ್ತಿದೆ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಪ್ರಿಯಾ ಸುದೀಪ್ ಮಾಡಿದ ಟ್ವೀಟಿಗೆ ಅಭಿಮಾನಿಗಳು ಸಂತಸದಿಂದ ನಿಮ್ಮ ಸ್ನೇಹ ಹೀಗೆ ಇರಲಿ ಎಂದು ಶುಭ ಹಾರೈಸಿದ್ದಾರೆ. ಸುದೀಪ್ ಮತ್ತು ಪ್ರಿಯಾ ಅವರು 2001ರಲ್ಲಿ ಮದುವೆಯಾಗಿದ್ದಾರೆ.