ಚಿಕ್ಕಬಳ್ಳಾಪುರ: ಸ್ನೇಹಿತರ ದಿನದ ಹಿನ್ನೆಲೆ ಬೈಕಿನಲ್ಲಿ ನಂದಿಬೆಟ್ಟಕ್ಕೆ ತೆರಳಿದ್ದ ಇಬ್ಬರು ಫ್ರೆಂಡ್ಸ್ ಅಪಘಾತಕ್ಕೆ ಬಲಿಯಾಗಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲ್ಲೂಕಿನ ನಂದಿಬೆಟ್ಟದ ರಸ್ತೆಯ 15ನೇ ತಿರುವಿನ ಬಳಿ ಸಂಭವಿಸಿದೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ಕಣಿತಹಳ್ಳಿ ಗ್ರಾಮದ ಅರವಿಂದ್ (21) ಹಾಗೂ ಶ್ರೀಕಾಂತ್ (21) ಮೃತರು. ಇಬ್ಬರು ಸ್ನೇಹಿತರಾಗಿದ್ದು Friendship Day ಅಂಗವಾಗಿ ಪ್ಲ್ಯಾನ್ ಮಾಡಿಕೊಂಡು ಒಂದೇ ಬೈಕಿನಲ್ಲಿ ಬೆಟ್ಟಕ್ಕೆ ಹೋಗಿ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಕಲಬುರಗಿ ಕೇಂದ್ರಿಯ ವಿವಿ ಆವರಣದಲ್ಲಿ ಗೋರಿ – ರಾತ್ರೋರಾತ್ರಿ ಕಾಂಪೌಂಡ್ ನಿರ್ಮಾಣ
ರಸ್ತೆ ಬದಿಯ ದೊಡ್ಡ ಬಂಡೆಗಲ್ಲಿಗೆ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗಳಿಗೆ ಗಂಭೀರ ಗಾಯಗಾಳಾಗಿ ಇಬ್ಬರೂ ಮೃತಪಟ್ಟಿದ್ದಾರೆ. ಮೃತದೇಹಗಳನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಕೊಪ್ಪಳ| ನಡುರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಯುವಕನ ಭೀಕರ ಕೊಲೆ
ಬಿಗ್‍ಬಾಸ್ ಮನೆಯ ಸ್ಪರ್ಧಿಗಳಿಗೆ ಮನೆಯಲ್ಲಿ ಈಡೇರದ ಒಂದೊಂದು ಕೋರಿಕೆಯನ್ನು ತಿಳಿಸುವಂತೆ ಬಿಗ್‍ಬಾಸ್ ಸೂಚಿಸಿದ್ದರು. ಹಾಗಾಗಿ ಮನೆಯ ಸ್ಪರ್ಧಿಗಳು ತಮ್ಮ ಚಿಕ್ಕ ಚಿಕ್ಕ ಬಯಕೆಗಳನ್ನು ಬಿಗ್‍ಬಾಸ್ ಬಳಿ ತೊಡಿಕೊಂಡಿದ್ದರು. ಸದ್ಯ ಮಂಜು ಪಾವಗಡಗೆ ಸ್ಪೆಷಲ್ ಆಗಿ ಫ್ರೆಂಡ್ ಶಿಪ್ ಡೇಗೆ ವಿಶ್ ಮಾಡಬೇಕೆಂದು ಕೇಳಿಕೊಂಡಿದ್ದ ದಿವ್ಯಾ ಸುರೇಶ್ ಆಸೆಯನ್ನು ಬಿಗ್‍ಬಾಸ್ ಈಡೇರಿಸಿದ್ದಾರೆ.
ಅದರಂತೆ ಗಾರ್ಡನ್ ಏರಿಯಾದಲ್ಲಿ ಒಂದು ಟೇಬಲ್ ಮೇಲೆ ಕೇಕ್, ಬಲೂನ್‍ಗಳ ರಾಶಿ, ಮಂಜು ಹಾಗೂ ದಿವ್ಯಾ ಸುರೇಶ್ ಫೋಟೋವೊಂದನ್ನು ಇರಿಸಿ ಸಿಂಗಾರಿಸಲಾಗಿತ್ತು. ಈ ಅರೆಂಜ್ ಮೆಂಟ್ಸ್ ನೋಡಿ ಮಂಜು ಶಾಕ್ ಆದರೆ, ಮನೆಮಂದಿಯೆಲ್ಲಾ ಫುಲ್ ಖುಷ್ ಆಗಿದ್ದಾರೆ.
ನಂತರ ದಿವ್ಯಾ ಸುರೇಶ್ ಹಾಗೂ ಮಂಜು ಏಕಾಂತದಲ್ಲಿ ಕುಳಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ನಿನ್ನನ್ನು ನೋಡಿದಾಗ ನನಗೆ ಗೌರವ ನೀಡಬೇಕು ಅನಿಸುತ್ತದೆ. ನೀವು ಹೋಗಿ ಬನ್ನಿ ಎಂದು ಕರೆಯಬೇಕು ಎನಿಸುತ್ತದೆ. ಫಸ್ಟ್ ಇನ್ನಿಂಗ್ಸ್‌ನಲ್ಲಿ ನಾನು ನಿನಗೆ ಬಹಳ ಹರ್ಟ್ ಮಾಡಿದ್ದೇನೆ. ಬಹಳ ಡೊಮಿನೇಟ್ ಆಗಿಬಿಟ್ಟೆ, ಕೊನೆ ಕೊನೆಯಲ್ಲಿ ನನ್ನಿಂದ ನಿನ್ನ ಆಟಕ್ಕೆ ತೊಂದರೆ ಆಯ್ತು ಎಂಬುವುದು ಅರ್ಥವಾಯಿತು. ನಾನು ನಿನ್ನ ಬಗ್ಗೆ ಬಹಳ ಪೊಸೆಸಿವ್ ಆಗಿಬಿಟ್ಟೆ ಜೊತೆಗೆ ನಿನ್ನ ಫ್ರೀಡಂನ ಕಂಟ್ರೋಲ್ ಕೂಡ ಮಾಡಾತ್ತಿದೆ. ಮನೆಯಿಂದ ಹೊರಗೆ ಹೋದ ನಂತರ ನಾನು ನಿನಗೆ ಕ್ಷಮೆ ಕೇಳಲು ಆಗಲಿಲ್ಲ. ನನಗೆ ನೀನು ಅಂದರೆ ತುಂಬಾ ಇಷ್ಟ. ಥ್ಯಾಂಕ್ಯು ನೀನು ನನಗೆ ಫ್ರೆಂಡ್ ಆಗಿದ್ದಕ್ಕೆ. ಹೀಗೆ ನನ್ನ ಜೊತೆ ಯಾವಾಗಲೂ ಇರು, ನೀನು ನನ್ನ ಬೆಸ್ಟ್ ಫ್ರೆಂಡ್ ಎನ್ನುತ್ತಾರೆ.
ಇದಕ್ಕೆ ಮಂಜು, ಗೊತ್ತೊ, ಗೊತ್ತಿಲ್ಲದೇ ಮಾಡುವ ತಪ್ಪನ್ನು ತಿದ್ದುಕೊಳ್ಳಬೇಕು ಎಂಬುವುದು ನಿನಗೆ ಅರ್ಥವಾಯಿತಲ್ಲಾ ನನಗೆ ಖುಷಿಯಾಯಿತು. ಇದು ದೊಡ್ಡ ವೇದಿಕೆ ಇಲ್ಲಿಂದ ಆಚೆ ಹೋದ ಬಳಿಕ ಎಲ್ಲರೂ ಒಳ್ಳೆದನ್ನು ಮಾತನಾಡಬೇಕು, ಒಳ್ಳೆ ಅವಕಾಶಗಳು ಸಿಗಬೇಕು. ಚೆನ್ನಾಗಿ ಹಾಗೂ ಖುಷಿಯಾಗಿರು ಎಂದು ವಿಶ್ ಮಾಡುತ್ತಾರೆ. ಅಲ್ಲದೇ ಇದನ್ನೆಲ್ಲಾ ನಾನು ಸಿನಿಮಾದಲ್ಲಿ ನೋಡಿದ್ದೆ. ಇದು ಯಾವುದು ನನಗೆ ಗೊತ್ತಿಲ್ಲ ಎಂದು ಹೇಳುತ್ತಾರೆ.
ನಂತರ ಇಬ್ಬರೂ ಕೇಕ್ ಕತ್ತರಿಸಿ ಫ್ರೆಂಡ್ ಶಿಪ್ ಡೇ ಸೆಲೆಬ್ರೆಟ್ ಮಾಡುತ್ತಾರೆ. ನಂತರ ಕೇಕ್ ತಿನ್ನುವ ವೇಳೆ ಮಂಜು ನಮ್ಮ ಹುಡುಗ್ರು ಇದನ್ನೆಲ್ಲಾ ನೋಡಿದರೆ ಫುಲ್ ಶಾಕ್ ಆಗುತ್ತಾರೆ. ಏನಪ್ಪಾ ಇದು ವೈಭೋಗ, ನನ್ನ ಜಾತಕದಲ್ಲಿ ಇದೆಲ್ಲಾ ಇರುತ್ತದೆ ಎಂದು ಗೊತ್ತಿರಲಿಲ್ಲ ಎಂದು ಹೇಳುತ್ತಾರೆ. ಇದನ್ನೂ ಓದಿ:BB ಮನೆಯಿಂದ ರಾತ್ರೋರಾತ್ರಿ ಹೊರಗೆ ಬಂದ DS
ನೆಲಮಂಗಲ: ವಿಶ್ವ ಸ್ನೇಹಿತರ ದಿನಾಚರಣೆಯ ಅಂಗವಾಗಿ ವೈದ್ಯರಾದ ಡಾಕ್ಟರ್ ದಿವಾಕರ್ ಅವರು, ಬೆಂಗಳೂರು ಹೊರವಲಯದ ನೆಲಮಂಗಲ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಊಟದ ವ್ಯವಸ್ಥೆಯನ್ನು ಆಯೋಜಿಸುವ ಮೂಲಕವಾಗಿ ವಿಭಿನ್ನವಾಗಿ ಆಚರಿಸಿದ್ದಾರೆ.
ದೇಶದಲ್ಲಿ ಸ್ನೇಹಿತರ ದಿನಾಚರಣೆಯನ್ನು ಹಲವಾರು ರೀತಿಗಳಿಂದ ಆಚರಣೆ ಮಾಡುವ ಈ ಸಮಾಜದಲ್ಲಿ, ಡಾಕ್ಟರ್ ದಿವಾಕರ್ ವಿಭಿನ್ನವಾಗಿ ವೈದ್ಯ ಮಿತ್ರರು ಹಾಗೂ ಸಿಬ್ಬಂದಿ ವರ್ಗದವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಜೊತೆಯಲ್ಲಿ ಸ್ನೇಹಿತರ ದಿನಾಚರಣೆಯನ್ನು ನೆರವೇರಿಸಿ ಕೊಂಡಿದ್ದಾರೆ.
ಈ ಒಂದು ಕಾರ್ಯಕ್ರಮದ ಭೋಜನವನ್ನು ಸ್ವೀಕರಿಸಿದ ವೈದ್ಯರಾದ ಡಾ.ಸೋನಿಯಾ ಮಾತನಾಡಿ ಡಾಕ್ಟರ್ ದಿವಾಕರ್ ಅವರು ತುಂಬಾ ಉತ್ತಮವಾದ ಹಾಗೂ ವಿಭಿನ್ನವಾದ ಸ್ನೇಹಿತರ ದಿನಾಚರಣೆಯನ್ನು ನಮ್ಮ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಅವರ ಜೊತೆಯಲ್ಲಿ ಹಂಚಿಕೊಳ್ಳುತ್ತಿರುವುದು ತುಂಬಾ ಸಂತೋಷವಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ವಲಯದಲ್ಲಿ ಉತ್ತಮ ಸೇವೆ ಸಲ್ಲಿಸಿ ಉನ್ನತ ಸ್ಥಾನಕ್ಕೆ ಏರಲಿ ಎಂದು ಹರಸಿದರು. ಇದನ್ನೂ ಓದಿ: ಮೋದಿಗೆ ಸ್ನೇಹಿತರ ದಿನಾಚರಣೆಯ ಶುಭಕೋರಿ ಕಾಲೆಳೆದ ರಾಹುಲ್
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸರ್ಕಾರಿ ಆಸ್ಪತ್ರೆಯ ಸಿಇಓ. ನರಸಿಂಹಯ್ಯ ಅವರು ಊಟದ ವ್ಯವಸ್ಥೆ ಮಾಡಿಕೊಟ್ಟಂತಹ ಡಾಕ್ಟರ್ ದಿವಾಕರ್ ಅವರ ಸ್ನೇಹ ಬಾಂಧವ್ಯ ನಮ್ಮೆಲ್ಲರ ಜೊತೆ ಸದಾಕಾಲ ಇರಲಿ. ಮುಂದಿನ ದಿನಗಳಲ್ಲಿ ಅವರು ಮಾಡುವ ಎಲ್ಲಾ ಒಳ್ಳೆಯ ಕೆಲಸಗಳಲ್ಲಿ ನಾವು ಅವರ ಜೊತೆಯಲ್ಲಿ ಇರುತ್ತೇವೆ ಹಾಗೂ ನಮ್ಮ ಸರ್ಕಾರಿ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗ ಹಾಗೂ ರೋಗಿಗಳ ಪರವಾಗಿ ನಾನು ದಿವಾಕರ್ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು. ಸ್ನೇಹಿತ ಸಹಪಾಠಿಗಳ ಜೊತೆಗೆ ತಾವೇ ಊಟ ಬಡಿಸಿ, ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ನೇಹಿತರ ದಿನಾಚರಣೆಯನ್ನ ಅರ್ಥಪೂರ್ಣವಾಗಿ ಆಚರಿಸಿದರು.
ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ತಮ್ಮ ಪತಿ ಚಿರುವನ್ನು ನೆನೆದು ಫ್ರೆಂಡ್‍ಶಿಪ್ ಡೇಗೆ ವಿಶೇಷ ಫೋಟೋವನ್ನು ಶೇರ್ ಮಾಡಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಚಿರಂಜೀವಿ ಸರ್ಜಾ ಜತೆ ಇರುವ ಫೋಟೋವನ್ನು ಮೇಘನಾ ಪೋಸ್ಟ್ ಮಾಡಿದ್ದಾರೆ. ನೀನು ಯಾವಾಗಲೂ ನನ್ನ ಉತ್ತಮ ಗೆಳೆಯ. ಹ್ಯಾಪಿ ಫ್ರೆಂಡ್‍ಶಿಪ್ ಡೇ ಎಂದು ಮೇಘನಾ ಕ್ಯಾಪ್ಶನ್ ನೀಡಿದ್ದಾರೆ. ಈ ಫೋಟೋ ನೋಡಿದ ಅನೇಕ ಅಭಿಮಾನಿಗಳು ಭಾವುಕರಾಗಿ ಕಮೆಂಟ್ ಮಾಡಿದ್ದಾರೆ. ಕೆಲವರು ಚಿರು ಯಾವಾಗಲೂ ನಿಮ್ಮ ಜತೆ ಇರುತ್ತಾರೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಂದಿಬೆಟ್ಟದ ತಪ್ಪಲಲ್ಲಿ ರಾಜಾರೋಷವಾಗಿ ಪ್ರವಾಸಿಗರಿಂದ ಹುಕ್ಕಾ ಸೇವನೆ
ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಆರಂಭದಲ್ಲಿ ಗೆಳೆಯರಾಗಿದ್ದರು. ನಂತರ ಇವರ ಮಧ್ಯೆ ಪ್ರೀತಿ ಮೊಳೆತಿತ್ತು. ಮದುವೆ ಆಗುವ ಮೂಲಕ ತಮ್ಮ ಪ್ರೀತಿಗೆ ಹೊಸ ಅರ್ಥ ಕೊಟ್ಟರು. ‘ಚಿರು ನನಗೆ ಪತಿ ಎನ್ನುವುದಕ್ಕಿಂತ ಅತ್ಯುತ್ತಮ ಗೆಳೆಯ’ ಎಂದು ಮೇಘನಾ ರಾಜ್ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಹೀಗಾಗಿ, ಪತಿ-ಪತ್ನಿ ಸಂಬಂಧದ ಜತೆಗೆ ಇವರ ನಡುವೆ ಒಳ್ಳೆಯ ಗೆಳೆತನವಿತ್ತು. ಚಿರು ಅವರಲ್ಲಿ ಓರ್ವ ಗೆಳೆಯನನ್ನು ಮೇಘನಾ ಕಂಡಿದ್ದರು. ಈ ಕಾರಣಕ್ಕೆ ಮೇಘನಾ ರಾಜ್ ಇಂದು ಪತಿಗೆ ಫ್ರೆಂಡ್‍ಶಿಪ್ ಡೇ ಶುಭಾಶಯ ಕೋರಿದ್ದಾರೆ.
ಚಿರು ಇಹಲೋಕ ತ್ಯಜಿಸಿದ್ದರೂ ಮೇಘನಾ ರಾಜ್ ಅವರು ಒಂದಲ್ಲಾ ಒಂದು ರೀತಿಯಲ್ಲಿ ಪತಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಇಂದು ಫ್ರೆಂಡ್‍ಶಿಪ್ ಡೇ. ಈ ವಿಶೇಷ ದಿನದಂದು ಮೇಘನಾ ಪತಿ ಚಿರಂಜೀವಿಯನ್ನು ನೆನಪಿಸಿಕೊಂಡಿದ್ದಾರೆ. ಮೇಘನಾ ಕೆಲವು ದಿನಗಳ ಹಿಂದೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಒಂದನ್ನು ನೀಡಿದ್ದರು. ವರ್ಷಗಳ ನಂತರ ಕ್ಯಾಮೆರಾ ಎದುರಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಇದನ್ನು ನೋಡಿದ ಅಭಿಮಾನಿಗಳು ಸಾಕಷ್ಟು ಖುಷಿಪಟ್ಟಿದ್ದಾರೆ.
ಗೆಳೆತನ ಅನ್ನೋದು ಎಲ್ಲ ಬಂಧಕ್ಕಿಂತಲೂ ಎತ್ತರದಲ್ಲಿ ನಿಲ್ಲುತ್ತೆ. ಈ ಸುಂದರ ಸಂಬಂಧಕ್ಕೆ ಧರ್ಮ, ಜಾತಿ ಯಾವುದೂ ಅಡ್ಡಿ ಬರಲ್ಲ. ಇಂತಹ ಗೆಳೆತನದ ಉದಾಹರಣೆಗಳು ನಮ್ಮ ಸುತ್ತಮುತ್ತಲೇ ಸಿಗುತ್ತವೆ. ಯಾವುದೇ ಷರತ್ತುಗಳಿಲ್ಲದೇ ಒಬ್ಬರು ಮತ್ತೊಬ್ಬರಿಗಾಗಿ ಬದುಕೋದು ಗೆಳೆತನ. ಇಂದು ಇಡೀ ವಿಶ್ವದಾದ್ಯಂತ ಗೆಳೆತನದ ಹಬ್ಬವನ್ನು ಆಚರಿಸಲಾಗುತ್ತಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಜುಲೈ 30ರಂದು ಗೆಳೆತನದ ದಿನವನ್ನು ಆಚರಿಸಲಾಗುತ್ತದೆ. ಭಾರತ ಮತ್ತು ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳಲ್ಲಿ ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಗೆಳೆಯರ ಹಬ್ಬವನ್ನು ಆಚರಿಸಲಾಗುತ್ತದೆ. ಆದ್ರೆ ಫ್ರೆಂಡ್‍ಶಿಪ್ ಡೇ ಆಚರಣೆ ಹೇಗೆ ಆರಂಭವಾಯ್ತು ಅನ್ನೋದರ ಬಗ್ಗೆ ಹಲವರು ಹಲವು ಕಥೆಗಳನ್ನು ಹೇಳುತ್ತಾರೆ. ಇದನ್ನೂ ಓದಿ: ಮೋದಿ ಫೋಟೋ ಹಾಕಿ “ಯೇ ದೋಸ್ತಿ ಹಮ್ ನಹೀ ತೋಡೆಂಗೆ” ಎಂದ ಇಸ್ರೇಲ್
ಫ್ರೆಂಡ್‍ಶಿಪ್ ಡೇ ಇತಿಹಾಸ:
1958ರಲ್ಲಿ ಮೊದಲ ಬಾರಿಗೆ ಫ್ರೆಂಡ್‍ಶಿಪ್ ಡೇ ಆಚರಣೆ ಆರಂಭವಾಯ್ತು. 1958ರ ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಅಮೆರಿಕದಲ್ಲಿ ಯುವಕನನೋರ್ವನ ಕೊಲೆ ಆಗುತ್ತೆ. ಈ ವಿಷಯ ತಿಳಿದ ಆತನ ಗೆಳೆಯ ದುಃಖದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಾನೆ. ಈ ಈ ವಿಷಯ ತಿಳಿದ ಅಮೆರಿಕಾ ಸರ್ಕಾರ ಆಗಸ್ಟ್ ಮೊದಲ ಭಾನುವಾರದಂದು ಫ್ರೆಂಡ್‍ಶಿಪ್ ಡೇ ಆಚರಣೆಗೆ ಕರೆ ನೀಡಿತು ಎಂದು ಹೇಳಲಾಗುತ್ತದೆ.
ಮತ್ತೊಂದು ಕಥೆ:
ಇತಿಹಾಸದ ಪುಟಗಳಲ್ಲಿ ಫ್ರೆಂಡ್‍ಶಿಪ್ ಡೇ ಆಚರಣೆ ಬಗ್ಗೆ ಮತ್ತೊಂದು ಕಥೆಯ ಕುರಿತು ಹೇಳಲಾಗಿದೆ. ಪೆರುಗ್ವೆಯ ವೈದ್ಯ ರಮನ್ ಆರ್ಟೊಮಿಯಾ ಜುಲೈ 20, 1958ರಂದು ಒಂದು ಡಿನ್ನರ್ ಪಾರ್ಟಿ ಆಯೋಜನೆ ಮಾಡುತ್ತಾರೆ. ಅಂದು ತಮ್ಮ ಎಲ್ಲ ಗೆಳೆಯರನ್ನ ಆಹ್ವಾನಿಸಿ ಗೆಳೆತನದ ದಿನ ಆಚರಿಸಲು ನಿರ್ಧರಿಸುತ್ತಾರೆ. ಅಂದು ಈ ಫ್ರೆಂಡ್‍ಶಿಪ್ ಡೇ ಆಚರಣೆಗೆ ಬಂದಿದೆ ಎಂಬುದರ ಬಗ್ಗೆ ಹೇಳುತ್ತಾರೆ.
ಮುಂಬೈ: ಸ್ನೇಹಿತರ ದಿನದ ಅಂಗವಾಗಿ ಅನುಷ್ಕಾ ಶರ್ಮಾ ತಮ್ಮ ಬಾಲ್ಯದ ಸ್ನೇಹಿತರನ್ನು ನೆನೆದು, ಪೋಸ್ಟ್ ಹಾಕಿದ್ದು, ಅಪರೂಪದ ಫೋಟೋ ಪರಿಚಯಿಸಿದ್ದಾರೆ. ಇದಕ್ಕೆ ಅದ್ಭುತ ಸಾಲುಗಳನ್ನು ಬರೆದಿದ್ದಾರೆ.
ತಮ್ಮ ಬಾಲ್ಯದ ಫೋಟೋ ಹಂಚಿಕೊಂಡಿದ್ದು, ಚಿತ್ರದಲ್ಲಿ ಅನುಷ್ಕಾ ಮಧ್ಯದಲ್ಲಿ ನಿಂತಿದ್ದು, ಸುತ್ತಲೂ ಸ್ನೇಹಿತೆಯರು ನಿಂತಿದ್ದಾರೆ. ನಗುತ್ತ ನಿಂತಿರುವ ಅನುಷ್ಕಾ ಕ್ಯೂಟ್ ಆಗಿ ಕಾಣುತ್ತಿದ್ದಾರೆ. ಅವರ ಪೋನಿ ಹೇರ್ ಸ್ಟೈಲ್ ಸಹ ಗಮನ ಸೆಳೆಯುತ್ತದೆ.
ಪೋಸ್ಟ್ ಗೆ ಸಾಲುಗಳನ್ನು ಬರೆದಿರುವ ಅನುಷ್ಕಾ, ನಿಮ್ಮ ಜೀವನದಲ್ಲಿ ಹಲವರನ್ನು ಸ್ನೇಹಿತರನ್ನಾಗಿಸಿಕೊಂಡಿರುತ್ತೀರಿ. ಪ್ರತಿಯೊಬ್ಬರೂ ಪ್ರಮುಖ ಪಾತ್ರ ವಹಿಸಿಉತ್ತಾರೆ. ತಿಳಿದೋ, ತಿಳಿಯದೆಯೋ ನಮ್ಮಲ್ಲಿ ಅವರು ಪ್ರಭಾವ ಬೀರಿರುತ್ತಾರೆ. ಕೆಲವರು ಸಂಪರ್ಕದಲ್ಲಿರುತ್ತಾರೆ. ಇನ್ನೂ ಕೆಲವರು ಕೇವಲ ನೆನಪಿನಲ್ಲಿ ಉಳಿದಿರುತ್ತಾರೆ. ಆಗಾಗ ನಮ್ಮ ಮುಖದಲ್ಲಿ ನಗು ತರಿಸುತ್ತಿರುತ್ತಾರೆ. ಆರ್ಮಿ ಕುಟುಂಬ ಹಿನ್ನೆಲೆಯಾದವಳಾದ ನನಗೆ ತುಂಬಾ ಜನ ಸ್ನೇಹಿತರಿದ್ದರು. ಆದರೆ ಪೋಷಕರಿಗೆ ಬೇರೆ ಸ್ಥಳಗಳಿಗೆ ಪೋಸ್ಟಿಂಗ್ ಆದರೆ ನಾವು ಅವರ ಸಂಪರ್ಕವನ್ನು ಕಳೆದುಕೊಳ್ಳುತ್ತಿದ್ದೆವು ಎಂದು ಬರೆದಿದ್ದಾರೆ.
ಇದು ನನ್ನೆಲ್ಲ ಸ್ನೇಹಿತರಿಗಾಗಿ. ನನ್ನೊಂದಿಗೆ ಬೆಳೆದವರಿಗೆ, ಇಂದು ನಮ್ಮೊಂದಿಗೆ ಇರುವವರಿಗೆ ಎಲ್ಲರಿಗೂ ಸ್ನೇತರ ದಿನದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‍ಗೆ 9 ಲಕ್ಷಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಅನುಷ್ಕಾ ಸ್ನೇಹಿತರ ದಿನವನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ಬೆಂಗಳೂರು: ಆಗಸ್ಟ್ ಮೊದಲ ಭಾನುವಾರ ವಿಶ್ವದೆಲ್ಲೆಡೆ ಗೆಳೆಯರ ದಿನ ಆಚರಿಸಲಾಗಿತ್ತು. ಫ್ರೆಂಡ್ ಶಿಪ್ ಡೇ ಆಚರಣೆಗೆ ತೆರಳಿದ್ದ ಎರಡು ಜಿಮ್ ಟ್ರೈನರ್ ಗಳ ಗುಂಪಿನ ನಡುವೆ ಬಿಗ್ ಫೈಟ್ ನಡೆದಿದೆ. ಹಲ್ಲೆಗೊಳಗಾದ ಜಿಮ್ ಟ್ರೈನರ್ ಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆತಯುತ್ತಿದ್ದಾರೆ.
ನಗರದ ಕೋರ್ಟ್ ಯಾರ್ಡ್ ಬೈ ಮ್ಯಾರೆಯೇಟ್ ಹೋಟೆಲಿನ ‘ನಝಾರಾ’ ಪಬ್‍ನಲ್ಲಿ ಈ ಗಲಾಟೆ ನಡೆದಿದೆ. ಫ್ರೆಂಡ್ ಶಿಪ್ ಡೇ ಆಚರಣೆಗಾಗಿ ಜಿಮ್ ಟ್ರೈನರ್ ನವೀನ್ ಆ್ಯಂಡ್ ಟೀಂ ಮತ್ತು ಪ್ರಶಾಂತ್ ಗೌಡ ಆ್ಯಂಡ್ ಗ್ಯಾಂಗ್ ಪ್ರತ್ಯೇಕವಾಗಿ ತೆರಳಿತ್ತು. ಪಾರ್ಟಿ ಮೂಡ್ ನಲ್ಲಿದ್ದ ಪ್ರಶಾಂತ್ ಒಳಗಡೆ ಧೂಮಪಾನ ಮಾಡಲಾರಂಭಿಸಿದ್ದಾನೆ. ಪಕ್ಕದ ಟೇಬಲ್ ನಲ್ಲಿದ್ದ ನವೀನ್, ಹೊರಗಡೆ ಹೋಗಿ ಸಿಗರೇಟ್ ಸೇದುವಂತೆ ಸೂಚಿಸಿದ್ದಾರೆ. ಇದೇ ವಿಚಾರಕ್ಕೆ ಎರಡು ಟೀಂಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಎರಡೂ ತಂಡದ ಸದಸ್ಯರು ಹೊಡೆದಾಡಿಕೊಂಡಿದ್ದಾರೆ.
ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಪ್ರಶಾಂತ್ ಮತ್ತು ಆತನ ಸಹಚರರು ಕೈಗೆ ಸಿಕ್ಕ ವಸ್ತುಗಳಿಂದ ನವೀನ್ ಆ್ಯಂಡ್ ಟೀಂ ಮೇಲೆ ಹಲ್ಲೆ ನಡೆಸಿದ್ದಾರೆ. ಗಲಾಟೆ ವೇಳೆ ಎರಡೂ ತಂಡದ ಸದಸ್ಯರು ಮದ್ಯ ಸೇವಿಸಿದ್ದರು ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ನವೀನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಘಟನೆ ಬಳಿಕ ನವೀನ್ ಆ್ಯಂಡ್ ಟೀಂ ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅಮೃತಹಳ್ಳಿ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಸ್ಕೇಪ್ ಆಗಿರುವ ಪ್ರಶಾಂತ್ ಗೌಡ ಆ್ಯಂಡ್ ಗ್ಯಾಂಗ್ ಬಂಧನಕ್ಕೆ ವಿಶೇಷ ಬಲೆ ಬೀಸಿದ್ದಾರೆ.
ನವದೆಹಲಿ: ಅಂತಾರಾಷ್ಟ್ರೀಯ ಸ್ನೇಹ ದಿನವಾದ ಇದು ಇಸ್ರೇಲ್ ಭಾರತಕ್ಕೆ ವಿನೂತನ ರೀತಿಯಲ್ಲಿ ವಿಶ್ ಮಾಡಿದ್ದು, ಪ್ರಧಾನಿ ಮೋದಿ ಮತ್ತು ಅ ದೇಶದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಫೋಟೋ ಇರುವ ವಿಡಿಯೋ ಟ್ವೀಟ್ ಮಾಡಿದೆ.
ಮೋದಿ ಮತ್ತು ಬೆಂಜಮಿನ್ ನೆತನ್ಯಾಹು ಅವರು ಪರಸ್ಪರ ಕೈಕುಲುಕುತ್ತಿರುವ ಫೋಟೋಗಳನ್ನು ಜೋಡಿಸಿ ವಿಡಿಯೋ ಮಾಡಿ, ಅ ವಿಡಿಯೋಗೆ ಬಾಲಿವುಡ್‍ನ ಪ್ರಸಿದ್ಧ ಗೀತೆ ಅಮಿತಾಭ್ ಬಚ್ಚನ್ ಅಭಿನಯದ ಶೋಲೆ ಚಿತ್ರದ,”ಹೇ ದೋಸ್ತಿ ಹಮ್ ನಹೀ ತೋಡೆಂಗೆ” ಹಾಡನ್ನು ಹಿನ್ನೆಲೆಗೆ ಬಳಸಿಕೊಂಡಿದೆ.
ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಇಸ್ರೇಲ್ ರಾಯಭಾರ ಕಚೇರಿ ಹ್ಯಾಪಿ ಫ್ರೆಂಡ್‍ಶಿಪ್ ಡೇ-2019 ಇಂಡಿಯಾ. ನಮ್ಮದು ಸದಾ ತುಂಬ ಬಲಿಷ್ಠವಾದ ಸ್ನೇಹ ಮತ್ತು ನಮ್ಮ ಸ್ನೇಹ ತುಂಬ ಎತ್ತರಕ್ಕೆ ಬೆಳೆಯಲಿ ಎಂದು ಬರೆದು ಟ್ವೀಟ್ ಮಾಡಿದೆ. ಭಾರತ ಮತ್ತು ಇಸ್ರೇಲ್ ಇತ್ತೀಚಿನ ವರ್ಷಗಳಲ್ಲಿ ಆರ್ಥಿಕತೆ ಮತ್ತು ಮಿಲಿಟರಿ ಹಾಗೂ ಕಾರ್ಯತಂತ್ರದಂತಹ ವಿಚಾರಗಳಲ್ಲಿ ತುಂಬ ಒಳ್ಳೆಯ ಸಂಬಂಧ ಹೊಂದಿದೆ.
תודה לך מאחל יום חברות שמח לאזרחי ישראל הנהדרים ולידידי הטוב @netanyahu
הודו וישראל הוכיחו את ידידותם לאורך הזמן. הקשר שלנו הוא חזק ונצחי. מאחל שהידידות בין המדינות שלנו תצמח ותפרח אף יותר בעתיד https://t.co/PsZTgMoXMU
ಇದಕ್ಕೆ ಇಸ್ರೇಲ್ ಭಾಷೆಯಲ್ಲೇ ರೀಟ್ವೀಟ್ ಮಾಡಿರುವ ಮೋದಿ ಅವರು ನಮಗೆ ವಿಶ್ ಮಾಡಿದ ಇಸ್ರೇಲ್ ದೇಶದ ನಾಗರಿಕರಿಗೂ ಹಾಗೂ ನನ್ನ ಉತ್ತಮ ಸ್ನೇಹಿತ ಬೆಂಜಮಿನ್ ನೆತನ್ಯಾಹು ಅವರಿಗೆ ಧನ್ಯವಾದಗಳು. ಭಾರತ ಮತ್ತು ಇಸ್ರೇಲ್ ತಮ್ಮ ಸ್ನೇಹವನ್ನು ಸಾಬೀತುಪಡಿಸಿವೆ. ನಮ್ಮ ಸಂಬಂಧ ಬಲವಾದ ಮತ್ತು ಶಾಶ್ವತವಾಗಿದೆ. ನಮ್ಮ ದೇಶಗಳ ನಡುವಿನ ಸ್ನೇಹವು ಭವಿಷ್ಯದಲ್ಲಿ ಇನ್ನಷ್ಟು ಬೆಳೆಯುತ್ತದೆ ಮತ್ತು ಅರಳುತ್ತದೆ ಎಂದು ಹಾರೈಸುತ್ತೇನೆ ಎಂದು ಬರೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇಸ್ರೇಲ್‍ನ ಚುನಾವಣಾ ಜಾಹೀರಾತುಗಳ ಬ್ಯಾನರ್‍ನಲ್ಲಿ ಮೋದಿ ಮತ್ತು ಬೆಂಜಮಿನ್ ನೆತನ್ಯಾಹು ಅವರ ಫೋಟೋಗಳು ಕೂಡ ಕಂಡುಬಂದಿತ್ತು. ನನ್ನ ಅವಧಿಯಲ್ಲಿ ವಿದೇಶಗಳ ಜೊತೆ ಇಸ್ರೇಲ್ ಸಂಬಂಧ ಹೇಗೆ ಬದಲಾಗಿದೆ ಎನ್ನುವುದನ್ನು ಅಲ್ಲಿನ ಜನತೆಗೆ ತಿಳಿಸಲು ಮೋದಿ ಅವರ ಕಟೌಟ್ ಹಾಕಲಾಗಿತ್ತು.
2019ರ ಲೋಕಸಭಾ ಚುನಾವಣೆಯಲ್ಲಿ ಜಯ ಸಾಧಿಸಿ ಸತತ ಎರಡನೇ ಬಾರಿಗೆ ಮೋದಿ ಭಾರತದ ಪ್ರಧಾನಿಯದಾಗ ನೆತನ್ಯಾಹು ಅವರು ವಿಶ್ವ ನಾಯಕನಾಗಿ ಮೊದಲು ಮೋದಿ ಅವರಿಗೆ ಅಭಿನಂದನೆ ಹೇಳಿದ್ದರು. ಸತತ ಐದು ಬಾರಿ ಇಸ್ರೇಲಿನ ಪ್ರಧಾನ ಮಂತ್ರಿಯಾಗಿರುವ ಬೆಂಜಮಿನ್ ನೆತನ್ಯಾಹು ಅವರು ಮತ್ತು ಮೋದಿ ಅವರು ಆತ್ಮೀಯ ಗೆಳೆಯರಾಗಿದ್ದಾರೆ.
ಚಾಮರಾಜನಗರ: ಸ್ನೇಹಿತರ ದಿನದೊಂದು ಗೆಳಯರ ಜೊತೆಗೆ ಮಲೆಮಾದಪ್ಪನ ದರ್ಶನಕ್ಕೆ ಬಂದಿದ್ದ ಯುವಕನೊರ್ವ ನೀರಿನಲ್ಲಿ ಮುಳುಗಿ ಜಲ ಸಮಾಧಿಯಾದ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿನ ಅಂತರಗಂಗೆಯಲ್ಲಿ ಸ್ನಾನ ಮಾಡಲು ಹೋದಾಗ ಬೆಂಗಳೂರಿನ ನಿವಾಸಿಯಾದ ಪ್ರಭು (28) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಬೆಂಗಳೂರಿನಿಂದ 9 ಜನ ಸ್ನೇಹಿತರು ಪ್ರವಾಸಕ್ಕೆಂದು ಆಗಮಿಸಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಪ್ರವಾಸಕ್ಕೆ ಹೋಗಿದ್ದವರ ಪೈಕಿ ಪ್ರಭುವಿಗೆ ಮಾತ್ರ ಈಜು ಬರುತಿತ್ತು ಎಂದು ತಿಳಿದುಬಂದಿದೆ. ಅಲ್ಲಿದ್ದ ಬೇರೆ ಯಾವ ಗೆಳೆಯರಿಗೂ ಈಜು ಬಾರದ ಹಿನ್ನೆಲೆಯಲ್ಲಿ ಮುಳುಗುತ್ತಿದ್ದ ಸ್ನೇಹಿತನನ್ನು ರಕ್ಷಿಸಲಾಗದೇ ಕೂಗಾಡಿ ಕೊನೆಗೆ ಪೋಲಿಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಯುವಕನ ಶೋಧಕಾರ್ಯವನ್ನು ಮಲೆಮಹದೇಶ್ವರ ಬೆಟ್ಟದ ಪೊಲೀಸರು ಮುಂದುವರಿಸಿದ್ದಾರೆ.
ದಾವಣಗೆರೆ: ದೇಶಾದ್ಯಂತ ಇಂದು ಸ್ನೇಹಿತರ ದಿನಾಚರಣೆ ಆಚರಣೆ ಮಾಡಿಕೊಳ್ಳುತ್ತಿದ್ದು, ಸ್ನೇಹಿತರು ಪರಸ್ಪರ ಬ್ಯಾಂಡ್ ಕಟ್ಟಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ.
ದಾವಣಗೆರೆಯ ಕೆಲ ಪುಟ್ಟ ಮಕ್ಕಳು ವಿನೂತನವಾಗಿ ಸ್ನೇಹಿತರ ದಿನಾಚರಣೆ ಆಚರಿಸಿದ್ದು, ದಾವಣಗೆರೆಯ ಕೆಬಿ ಬಡಾವಣೆಯ ಸೋನಿ ಎನ್ನುವ ಸಾಕು ನಾಯಿಗೆ ಫ್ರೆಂಡ್‍ಶಿಪ್ ಬ್ಯಾಂಡ್ ಕಟ್ಟಿ ಶುಭಾಶಯ ಹೇಳಿದ್ದಾರೆ.
ಸೋನು ಕೆಬಿ ಬಡಾವಣೆಯಲ್ಲಿ ಪ್ರತಿಯೊಬ್ಬರಿಗೂ ಪ್ರೀತಿ ಪಾತ್ರವಾದ ನಾಯಿಯಾಗಿದ್ದು, ಪ್ರತಿಯೊಬ್ಬರ ಬಳಿ ಸ್ನೇಹಮಯವಾಗಿ ಇರುತ್ತದೆ. ಆದ್ದರಿಂದ ಕೇವಲ ಮನುಷ್ಯರ ಜೊತೆ ಅಷ್ಟೇ ಅಲ್ಲ ಪ್ರಾಣಿಗಳ ಜೊತೆಯೂ ಸ್ನೇಹಿ ದಿನಾಚರಣೆಯನ್ನು ಆಚರಣೆ ಮಾಡಿಕೊಳ್ಳಬೇಕು ಎಂದು ವಿನೂತನವಾಗಿ ಮಕ್ಕಳು ಹಾಗೂ ನಾಯಿ ಮಾಲೀಕ ನಾಗಭೂಷಣ್ ಸೇರಿಕೊಂಡು ಸೋನು ನಾಯಿಯ ಕೈಗೆ ಫ್ರೆಂಡ್‍ಶಿಪ್ ಬ್ಯಾಂಡ್ ಕಟ್ಟಿ ಸ್ನೇಹಿತರ ದಿನಾಚರಣೆಯನ್ನು ಆಚರಣೆ ಮಾಡಿ ಸಂಭ್ರಮಿಸಿದರು.