Tag: friends

  • 800 ರೂ.ಗಾಗಿ ಗೆಳೆಯನನ್ನೇ ಕೊಂದ ಪಾಪಿ

    800 ರೂ.ಗಾಗಿ ಗೆಳೆಯನನ್ನೇ ಕೊಂದ ಪಾಪಿ

    ಹಾಸನ: ಕೇವಲ 800 ರೂಪಾಯಿಗಾಗಿ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾರಗೊಂಡನಹಳ್ಳಿಯಲ್ಲಿ ನಡೆದಿದೆ.

    ಸ್ನೇಹಿತ ಎಂ.ಎನ್.ಮೂರ್ತಿ(50)ಯನ್ನು ಕೊಲೆ ಮಾಡಿ, ಬೆನ್ನಿಗೆ ಕಲ್ಲು ಕಟ್ಟಿ ಬಾವಿಗೆ ಎಸೆಯಲಾಗಿತ್ತು. ಆರಂಭದಲ್ಲಿ ರಾಜಕೀಯ ದ್ವೇಷದಿಂದ ಕೊಲೆ ಮಾಡಿರಬಹುದು ಎಂಬ ಆರೋಪವೂ ಕೇಳಿಬಂದಿತ್ತು. ಆದರೆ ಇಸ್ಪೀಟ್ ಆಟದಲ್ಲಿ ಹಣ ನೀಡದ್ದಕ್ಕೆ ಮೂರ್ತಿಯನ್ನು ಆರೋಪಿ ನಾಗರಾಜ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಅದೀಗ ಪೊಲೀಸರ ಅತಿಥಿಯಾಗಿದ್ದಾನೆ.

    ಜ.18 ರಂದು ನಾಗರಾಜ ಇಸ್ಪೀಟ್ ಆಟದಲ್ಲಿ ಮೂರ್ತಿ ವಿರುದ್ಧ 800 ರೂ. ಗೆದ್ದಿದ್ದ. ಆದರೆ ಹಣ ನೀಡದೆ ಮೂರ್ತಿ ಆಟ ಮುಂದುವರಿಸುವಂತೆ ಒತ್ತಾಯ ಮಾಡುತ್ತಿದ್ದ. ಮಾತಿಗೆ ಮಾತು ಬೆಳೆದು ಮೂರ್ತಿ ಹಾಗೂ ನಾಗರಾಜ ಕೈ ಕೈ ಮಿಲಾಯಿಸಿದ್ದರು. ಈ ವೇಳೆ ಸಿಟ್ಟಿನಿಂದ ನಾಗರಾಜ ತನ್ನ ಗೆಳೆಯ ಮೂರ್ತಿಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ, ನಂತರ ಶವಕ್ಕೆ ಕಲ್ಲುಕಟ್ಟಿ ಬಾವಿಗೆ ಎಸೆದಿದ್ದ. ಇದೀಗ ಪ್ರಕರಣ ಬೇಧಿಸಿರುವ ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

  • ಕಾಲುಗಳನ್ನ ಕಟ್ಟಿ ಸ್ನೇಹಿತರ ಜೊತೆ ಸೇರಿ ಪತ್ನಿಯನ್ನ ಅತ್ಯಾಚಾರಗೈದ

    ಕಾಲುಗಳನ್ನ ಕಟ್ಟಿ ಸ್ನೇಹಿತರ ಜೊತೆ ಸೇರಿ ಪತ್ನಿಯನ್ನ ಅತ್ಯಾಚಾರಗೈದ

    – ಗೆಳೆಯರ ಬಳಿ ಪತ್ನಿಯನ್ನ ಕರೆದೊಯ್ದ ನೀಚ
    –  ಗ್ಯಾಂಗ್‍ರೇಪ್, ದೂರು ದಾಖಲಿಸಿದ ಸಂತ್ರಸ್ತೆ ತಾಯಿ

    ಜೈಪುರ: ಪತಿಯೇ ಗೆಳೆಯರ ಜೊತೆ ಸೇರಿ ಪತ್ನಿಯನ್ನ ಅತ್ಯಾಚಾರಗೈದಿರುವ ಆಘಾತಕಾರಿ ಘಟನೆ ರಾಜಸ್ಥಾನದ ಜಲೌರ್ ನಲ್ಲಿ ನಡೆದಿದೆ. ಘಟನೆ ಸಂಬಂಧ ಸಂತ್ರಸ್ತೆ ತಾಯಿ ಅಳಿಯ ಮತ್ತು ಆತನ ಗೆಳೆಯರ ವಿರುದ್ಧ ದೂರು ದಾಖಲಿಸಿದ್ದಾರೆ.

    ಮಹಿಳೆಯ ಪತಿ ಸಿರೋಹಿಯ ಮಣ್ದಾರ್ ಗ್ರಾಮದಲ್ಲಿ ಕೆಲಸ ಮಾಡಿಕೊಂಡು ಪತ್ನಿ ಮತ್ತು ಮೂರು ಮಕ್ಕಳ ಜೊತೆ ವಾಸವಾಗಿದ್ದನು. ಜನವರಿ 12ರಂದು ಪತ್ನಿಯನ್ನ ಬೈಕ್ ನಲ್ಲಿ ಗೆಳೆಯರು ಇರುವಲ್ಲಿಗೆ ಕರೆದುಕೊಂಡು ಬಂದಿದ್ದಾನೆ. ಅದಾಗಲೇ ಕಾಮುಕನ ಗೆಳೆಯರಾದ ಅರ್ಜುನ್ ಸಿಂಗ್, ಸಿ.ರಾಮ್, ನಾರಾಯಣ್ ಪಾನಮತ್ತರಾಗಿದ್ದರು.

    ಮಹಿಳೆಯನ್ನ ಬಲವಂತವಾಗಿ ಕೋಣೆಗೊಳಗೆ ಎಳೆದೊಯ್ದ ಕಾಮುಕರು ಬಾಗಿಲಿಗೆ ಕಾಲುಗಳನ್ನ ಕಟ್ಟಿ ಹಾಕಿ ಪತಿಯ ಸಮ್ಮುಖದಲ್ಲಿಯೇ ಒಬ್ಬರ ನಂತರ ಒಬ್ಬರು ಎರಗಿ ಅತ್ಯಾಚಾರಗೈದಿದ್ದಾರೆ. ಗೆಳೆಯರ ನಂತರ ಪತಿ ಸಹ ಒಪತ್ನಿಯನ್ನ ಅತ್ಯಾಚಾರಗೈದಿದ್ದಾನೆ.

    ಘಟನೆ ನಡೆದ ಮರುದಿನ ತವರಿಗೆ ಬಂದ ಮಹಿಳೆ ತಾಯಿ ಮುಂದೆ ನಡೆದ ಘಟನೆಯನ್ನ ಹೇಳಿದ್ದಾರೆ. ವಿಷಯ ತಿಳಿದ ಸಂತ್ರಸ್ತೆ ತಾಯಿ ತಡಮಾಡದೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ.

    ಸಂತ್ರಸ್ತೆ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಂತ್ರಸ್ತೆಯ ಹೇಳಿಕೆನ್ನ ದಾಖಲಿಸಿಕೊಳ್ಳಲಾಗಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಘಟನೆ ಬಳಿಕ ನಾಲ್ವರು ನಾಪತ್ತೆಯಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಜಲೌರ್ ಡಿವೈಎಸ್‍ಪಿ ಕೈಲಾಶ್ ಕುಮಾರ್ ಹೇಳಿದ್ದಾರೆ.

  • ಗೆಳೆಯ, ಆತನ ಸ್ನೇಹಿತರಿಂದಲೇ ಅಪ್ರಾಪ್ತೆಯ ಅತ್ಯಾಚಾರ

    ಗೆಳೆಯ, ಆತನ ಸ್ನೇಹಿತರಿಂದಲೇ ಅಪ್ರಾಪ್ತೆಯ ಅತ್ಯಾಚಾರ

    – ಆನ್‍ಲೈನ್‍ನಲ್ಲಿ ವಿಡಿಯೋ ಅಪ್ಲೋಡ್
    – ವಿಡಿಯೋ ತೋರಿಸಿ ಒಂದು ವರ್ಷದಿಂದ ರೇಪ್

    ಲಕ್ನೋ: ತನ್ನ ಪ್ರಿಯಕರ ಮತ್ತು ಆತನ ನಾಲ್ವರು ಸ್ನೇಹಿತರಿಂದ ಅಪ್ರಾಪ್ತೆ ಅತ್ಯಾಚಾರಕ್ಕೊಳಗಾಗಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಆರೋಪಿಗಳು ಆಶ್ಲೀಲ ವಿಡಿಯೋವನ್ನು ಚಿತ್ರೀಕರಿಸಿ ಆನ್‍ಲೈನ್ ನಲ್ಲಿ ಹರಿಬಿಟ್ಟಿದ್ದಾರೆ.

    ಗೆಳೆಯ ನನ್ನನ್ನು ಮದುವೆಯಾಗುವುದಾಗಿ ಮಾತು ನೀಡಿ ಒಂದು ವರ್ಷದಿಂದ ತನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದನು ಎಂದು ಹೇಳಿಕೆ ನೀಡಿದ್ದಾಳೆ. ಈ ಹಿಂದೆ ಆಶ್ಲೀಲ ವಿಡಿಯೋವನ್ನು ಎಲ್ಲರಿಗೂ ಕಳುಹಿಸುವುದಾಗಿ ಆಕೆಗೆ ಬ್ಲಾಕ್ ಮೇಲ್ ಮಾಡುತ್ತಿದ್ದನು. ಅಲ್ಲದೆ ಆತನ ನಾಲ್ವರು ಸ್ನೇಹಿತರು ಕೂಡ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

    ಜನವರಿ 1 ರಂದು ಆರೋಪಿ ಅಪ್ರಾಪ್ತೆಯ ಆಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಆನ್‍ಲೈನ್‍ನಲ್ಲಿ ಶೇರ್ ಮಾಡಿಕೊಂಡಿದ್ದಾನೆ. ಆರೋಪಿ ಮಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದಂತೆಯೇ ವಿಷಯ ತಿಳಿದ ಸಂತ್ರಸ್ತೆ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಈ ಕುರಿತಂತೆ ಮಾತನಾಡಿದ ಬರೇಲಿಯ ಎಎಸ್‍ಪಿ ಸತ್ಯನಾರಾಯಣ್ ಪ್ರಜಾಪತ್, ಸಂತ್ರಸ್ತೆಯ ಗೆಳೆಯ ಮತ್ತು ಆತನ ನ್ವಾರು ಸ್ನೇಹಿತರ ವಿರುದ್ಧ ಎಫ್‍ಐಆರ್ ದಾಖಲಿಸಕೊಳ್ಳಲಾಗಿದೆ ಮತ್ತು ವಿಡಿಯೋ ಹಂಚಿಕೊಂಡವರನ್ನು ಕೂಡ ಬಂಧಿಸುವ ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ.

  • ಕಲ್ಲಿನಿಂದ ಜಜ್ಜಿ ಯುವಕನ ಕೊಂದು ಸೂಟ್‍ಕೇಸ್‍ನಲ್ಲಿ ತುಂಬಿ ಬಿಸಾಕಿದ ಗೆಳೆಯರು..!

    ಕಲ್ಲಿನಿಂದ ಜಜ್ಜಿ ಯುವಕನ ಕೊಂದು ಸೂಟ್‍ಕೇಸ್‍ನಲ್ಲಿ ತುಂಬಿ ಬಿಸಾಕಿದ ಗೆಳೆಯರು..!

    ಹೈದರಾಬಾದ್: ಕಳೆದ ಶುಕ್ರವಾರ ನಾಪತ್ತೆಯಾಗಿದ್ದ ಆಟೋ ಚಾಲಕನ ಮೃತದೇಹ ರಾಜೇಂದ್ರ ನಗರದಲ್ಲಿ ರಸ್ತೆ ಬದಿಯಲಿದ್ದ ಸೂಟ್ ಕೇಸ್ ನಲ್ಲಿ ಪತ್ತೆಯಾಗಿದೆ.

    ಮೃತ ದುರ್ದೈವಿಯನ್ನು ಮೊಹಮ್ಮದ್ ಇಲಿಯಾಜ್ ಅಲಿಯಾಸ್ ರಿಯಾಜ್(24) ಎಂದು ಗುರುತಿಸಲಾಗಿದೆ. ಈತ ಶುಕ್ರವಾರ ಚಂದ್ರಯನಗುತ್ತದಲ್ಲಿರುವ ತನ್ನ ನಿವಾಸದಿಂದ ಹೊರ ಬಂದವನು ಮತ್ತೆ ಮನೆಗೆ ಹಿಂದಿರುಗಲಿಲ್ಲ. ಈ ಹಿನ್ನೆಲೆಯಲ್ಲಿ ಆತನ ಕುಟುಂಬಸ್ಥರು ಶನಿವಾರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

    ಕ್ರಿಮಿನಲ್ ಬ್ಯಾಗ್ರೌಂಡ್ ಇರುವ ರಿಯಾಜ್ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಟಾಸ್ಕ್ ಫೋರ್ಸ್ ಪೊಲೀಸರು ಸ್ಥಳೀಯ ಪೊಲೀಸರೊಂದಿಗೆ ತನಿಖೆ ನಡೆಸಲು ಆರಂಭಿಸಿದ್ದಾರೆ.

    ಇತ್ತ ರಿಯಾಜ್ ಕುಟುಂಬಸ್ಥರು ಕೂಡ ಮಗನಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ರಾಜೇಂದ್ರನಗರ ವ್ಯಾಪ್ತಿಯಲ್ಲಿ ರಿಯಾಜ್ ಆಟೋ ಸಿಕ್ಕಿದೆ. ಹೀಗಾಗಿ ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಯಿತು. ಈ ವೇಳೆ ಶುಕ್ರವಾರ ರಾತ್ರಿ ಇಬ್ಬರೊಂದಿಗೆ ರಿಯಾಜ್ ಹೋಗುತ್ತಿರುವುದು ಬೆಳಕಿಗೆ ಬಂದಿದೆ. ಆ ಇಬ್ಬರನ್ನು ಸೈಯದ್ ಹಾಗೂ ಫಿರೋಜ್ ಎಂದು ಕುಟುಂಬಸ್ಥರು ಗುರುತು ಹಿಡಿದಿದ್ದಾರೆ.

    ಈ ಇಬ್ಬರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಆಗ ಇಬ್ಬರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ರಿಯಾಜ್ ನನ್ನು ಕೊಲೆ ಮಾಡಿ ನಂತರ ಮೃತದೇಹವನ್ನು ಸೂಟ್ ಕೇಸ್ ನಲ್ಲಿ ತುಂಬಿಸಿ ರಸ್ತೆ ಬದಿ ಎಸೆದು ಹೋಗಿರುವುದಾಗಿ ಆರೋಪಿಗಳು ಪೊಲೀಸರ ಬಳಿ ತಿಳಿಸಿದ್ದಾರೆ.

    ಆರೋಪಿಗಳ ಹೇಳಿಕೆ ಆಧರಿಸಿ ಅವರೊಂದಿಗೆ ಪೊಲೀಸರು ಕೂಡ ಸೂಟ್ ಕೇಸ್ ಇದ್ದ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲದೆ ಸೂಟ್ ಕೇಸ್ ತೆರೆದು ನೋಡಿದಾಗ ರಿಯಾಜ್ ಮೃತದೇಹ ಪೀಸ್ ಪೀಸ್ ಆಗಿತ್ತು. ಆರೋಪಿಗಳು ರಿಯಾಜ್ ನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಗಳು ಕೂಡ ರಿಕ್ಷಾ ಓಡಿಸುತ್ತಾ ಜೀವನ ಸಾಗಿಸುತ್ತಿದ್ದು, ರಿಯಾಜ್ ಮನೆಯ ಆಸು-ಪಾಸು ಮನೆಯವರಾಗಿದ್ದಾರೆ. ಸೈಯದ್ ಸಹೋದರಿಗೆ ರಿಯಾಜ್ ತಮಾಷೆ ಮಾಡುತ್ತಿದ್ದನು. ಇದೇ ವಿಚಾರ ಕೊಲೆ ಕಾರಣ ಎಂಬುದಾಗಿ ಆರೋಪಿಗಳು ಬಾಯಿಬಿಟ್ಟಿದ್ದಾರೆ.

    ಶುಕ್ರವಾರ ರಿಯಾಜ್ ಹಾಗೂ ಆರೋಪಿಗಳು ಕಂಠಪೂರ್ತಿ ಕುಡಿದಿದ್ದರು. ಬಳಿಕ ಮೂವರು ಕೂಡ ರಿಕ್ಷಾದಲ್ಲಿ ತೆರಳಿದ್ದಾರೆ. ಹೀಗೆ ಹೋಗುತ್ತಿದ್ದಾಗ ಮೂವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಪರಿಣಾಮ ಸೈಯದ್ ಹಾಗೂ ಫಿರೋಜ್, ರಿಯಾಜ್ ನನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ನಂತರ ಮೃತದೇಹವನ್ನು ಸೂಟ್ ಕೇಸ್ ನಲ್ಲಿ ತುಂಬಿ ರಸ್ತೆ ಬಿಸಾಕಿ ಹೋಗಿದ್ದಾರೆ.

  • ಇನ್ನೊಂದು ಪೆಗ್ ಬೇಡ ಎಂದಿದ್ದಕ್ಕೆ ಕೊಂದೇ ಬಿಟ್ಟ ಪಾಪಿ ಸ್ನೇಹಿತ

    ಇನ್ನೊಂದು ಪೆಗ್ ಬೇಡ ಎಂದಿದ್ದಕ್ಕೆ ಕೊಂದೇ ಬಿಟ್ಟ ಪಾಪಿ ಸ್ನೇಹಿತ

    – ಎಣ್ಣೆ ಹಂಚಿಕೊಳ್ಳುವ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ

    ಲಕ್ನೋ: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಪೀರ್ಖೇಡಾ ಪ್ರದೇಶದಲ್ಲಿ ನಡೆದ ಕೊಲೆ ಪ್ರಕರಣವೊಂದನ್ನು ಪೊಲೀಸರು ಶುಕ್ರವಾರ ಬೇಧಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

    ಐದು ದಿನಗಳ ಹಿಂದೆ ಜಸ್ಬೀರ್‍ನನ್ನು ಹರಿತವಾದ ಆಯುಧದಿಂದ ಚುಚ್ಚಿ ಕೊಲೆ ಮಾಡಲಾಗಿತ್ತು. ಮದ್ಯ ಹಂಚಿಕೊಳ್ಳುವ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾಗಿತ್ತು. 60 ವರ್ಷದ ಜಸ್ಬೀರ್‍ನನ್ನು ಆತನ ಸ್ನೇಹಿತ ಮದ್ಯ ಹಂಚಿಕೊಳ್ಳಲು ನಿರಾಕರಿಸಿದ್ದಕ್ಕೆ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಯನ್ನು 55 ವರ್ಷದ ಕೃಷ್ಣಪಾಲ್ ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಅನುಮಾನದ ಮೇರೆಗೆ ಆರೋಪಿಯನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಜಸ್ಬೀರ್‍ಗೆ ಪೆಗ್ ತೆಗೆದುಕೊಳ್ಳಲು ನಿರಾಕರಿಸಿದ್ದಕ್ಕೆ ಕೊಲೆ ಮಾಡಿದೆ ಎಂದು ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ.

  • ವಿವಾಹ ಸಮಾರಂಭದಲ್ಲಿ ಡ್ಯಾನ್ಸ್ ಮಾಡಲು ಎಳೆದಾಟ- ಮದುವೆ ಕ್ಯಾನ್ಸಲ್ ಮಾಡಿದ ವಧು

    ವಿವಾಹ ಸಮಾರಂಭದಲ್ಲಿ ಡ್ಯಾನ್ಸ್ ಮಾಡಲು ಎಳೆದಾಟ- ಮದುವೆ ಕ್ಯಾನ್ಸಲ್ ಮಾಡಿದ ವಧು

    ಲಕ್ನೋ: ವಿವಾಹ ಸಮಾರಂಭದ ವೇಳೆ ಡ್ಯಾನ್ಸ್ ಮಾಡಲು ವಧುವನ್ನು ಎಳೆದಾಡಿದ್ದಕ್ಕೆ ಗಲಾಟೆಯಾಗಿದ್ದು, ಸಿಟ್ಟಿಗೆದ್ದ ಯುವತಿ ವಿವಾಹವನ್ನೇ ಕ್ಯಾನ್ಸಲ್ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

    ಉತ್ತರ ಪ್ರದೇಶದ ಬರೇಲಿ ಬಳಿ ಘಟನೆ ನಡೆದಿದ್ದು, ಅದ್ಧೂರಿಯಾಗಿ ನಡೆಯುತ್ತಿದ್ದ ವಿವಾಹ ಸಮಾರಂಭದಲ್ಲಿ ವರನ ಕೆಲಸ ಸ್ನೇಹಿತರು ಡ್ಯಾನ್ಸ್ ಮಾಡುವಂತೆ ವಧುವನ್ನು ಎಳೆದಿದ್ದಕ್ಕೆ ಯುವತಿ ಕೋಪಗೊಂಡಿದ್ದಾಳೆ ಈ ವೇಳೆ ವಧು ಹಾಗೂ ವರರ ಸಂಬಂಧಿಕರ ಮಧ್ಯೆ ಗಲಾಟೆ ಉಂಟಾಗಿದ್ದು, ಮದುವೆ ಕ್ಯಾನ್ಸಲ್ ಮಾಡುವ ಹಂತವನ್ನು ತಲುಪಿದೆ.

    ಶುಕ್ರವಾರ ವಧು ಹಾಗೂ ಆಕೆಯ ಕುಟುಂಸ್ಥರು ಅದ್ಧೂರಿ ವಿವಾಹ ಸಮಾರಂಭಕ್ಕೆ ಆಗಮಿಸಿದ್ದಾರೆ. ವಧು-ವರ ಇಬ್ಬರೂ ಪದವಿಧರರಾಗಿದ್ದು, ಕಣ್ಣುಜ್ ಹಾಗೂ ಬರೇಲಿಯವರು. ವಿವಾಹ ಸಮಾರಂಭ ಅದ್ಧೂರಿಯಾಗಿ ಹಾಗೂ ಸರಾಗವಾಗಿಯೇ ನಡೆದಿತ್ತು. ಆದರೆ ವರನ ಕೆಲಸ ಸ್ನೇಹಿತರು ಡ್ಯಾನ್ಸ್ ಮಾಡುವಂತೆ ವಧುವನ್ನು ಎಳೆದಿದ್ದಾರೆ. ಬಳಿಕ ಎರಡೂ ಕಡೆಯವರ ಮಧ್ಯೆ ವಾಗ್ವಾದ ನಡೆದಿದೆ.

    ವಾಗ್ವಾದ ತಾರಕಕ್ಕೇರಿದ್ದರಿಂದ ವಿವಾಹವನ್ನು ಕ್ಯಾನ್ಸಲ್ ಮಾಡಲಾಗಿದೆ. ಅಲ್ಲದೆ ವಧು ಮರಳಿ ಮನೆಗೆ ತೆರಳಿದ್ದಾರೆ. ಬಳಿಕ ವಧುವಿನ ಕುಟುಂಬದ್ಥರು ವರನ ಕುಟುಂಬದವರ ವಿರುದ್ಧ ವರದಕ್ಷಿಣೆ ದೂರು ದಾಖಲಿಸಿದ್ದಾರೆ. ಬಳಿಕ ಎರಡೂ ಕಡೆಯವರು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ನಿರ್ಧರಿಸಿದ್ದು, ಬಳಿಕ ವರನ ಕುಟುಂಬದ್ಥರು 6.5 ಲಕ್ಷ ನೀಡಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಎಫ್‍ಐಆರ್ ದಾಖಲಾಗದ್ದರಿಂದ ಮಾತುಕತೆ ಮೂಲಕ ಬಗೆಹರಿಸಿಕೊಂಡಿದ್ದಾರೆ.

    ಭಾನುವಾರ ವರನ ಕುಟುಂಬಸ್ಥರು ವಧುವಿನ ಕುಟುಂಬದವರನ್ನು ಮನವೊಲಿಸಲು ಯತ್ನಿಸಿದ್ದು, ಮತ್ತೆ ಸರಳ ವಿವಾಹವನ್ನು ಏರ್ಪಡಿಸುವಂತೆ ಮನವಿ ಮಾಡಿದ್ದಾರೆ. ಆದರೆ ವಧು ಇದಕ್ಕೆ ಒಪ್ಪಿಲ್ಲ. ದುರ್ವರ್ತನೆ ತೋರಿದ್ದಾರೆ ಹೀಗಾಗಿ ನಾನು ವಿವಾಹವಾಗಲ್ಲ ಎಂದಿದ್ದಾಳೆ.

  • ಉಪ್ಪಿನ ಪಾಕೆಟ್‍ನಲ್ಲಿ ಕಲ್ಲು- ಔತಣಕೂಟದಲ್ಲಿ ಊಟಕ್ಕೆ ಕೂತವರು ಕಂಗಾಲು

    ಉಪ್ಪಿನ ಪಾಕೆಟ್‍ನಲ್ಲಿ ಕಲ್ಲು- ಔತಣಕೂಟದಲ್ಲಿ ಊಟಕ್ಕೆ ಕೂತವರು ಕಂಗಾಲು

    ಚಿಕ್ಕಮಗಳೂರು: ವಿವಾಹದ ಔತಣಕೂಟದಲ್ಲಿ ಭಾಗವಹಿಸಿದವರ ಹಲ್ಲುಗಳು ಜುಮ್ ಎನ್ನುವಂತಾಗಿದ್ದು, ಉಪ್ಪಿನ ಪಾಕೆಟ್‍ನಲ್ಲಿನ ಭಾರೀ ಪ್ರಮಾಣದ ಕಲ್ಲಿನಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೌಡಹಳ್ಳಿ ಬಳಿಯ ಹೆಮ್ಮದಿ ಗ್ರಾಮದಲ್ಲಿ ಮದುವೆ ನಡೆದಿತ್ತು. ಸರದಿ ಸಾಲಲ್ಲಿ ಊಟಕ್ಕೆ ಕೂತವರು ಕಲ್ಲು ಅನ್ನದಲ್ಲೋ, ಮಟನ್‍ನಲ್ಲೋ ಎಂದು ಗೊಂದಲಕ್ಕೀಡಾಗಿದ್ದರು. ಹೆಮ್ಮದಿ ಗ್ರಾಮದ ರತನ್ ಅವರು ಸ್ನೇಹಿತರು ಹಾಗೂ ನವದಂಪತಿಗಳಿಗೆ ಔತಣಕೂಟ ಏರ್ಪಡಿಸಿದ್ದರು. ಆದರೆ ಊಟಕ್ಕೆ ಕೂತಾಗ ಊಟದಲ್ಲಿ ಬರೀ ಕಲ್ಲು ಸಿಕ್ಕಿತ್ತು.

    ಊಟಕ್ಕೆ ಕೂತವರು ಕಲ್ಲು ಅನ್ನದ್ದೋ, ಮಟನ್ನದ್ದೋ ಎಂದು ಹುಡುಕಾಟ ನಡೆಸಿದ್ದರು. ಎಲ್ಲ ಕಡೆ ಹುಡುಕಾಡಿದ ಬಳಿಕ ಕೊನೆಯಲ್ಲಿ ಉಪ್ಪಿನ ಪಾಕೆಟ್ ತೆರದು ನೋಡಿದರೆ ಅದರಲ್ಲಿ ಅರ್ಧ ಕಲ್ಲು. ಇನ್ನರ್ಧ ಉಪ್ಪು. ಕಲ್ಲೆಂದರೆ ನೋಡುವವರ ಕಣ್ಣಿಗೆ ಉಪ್ಪೇ ಎಂದು ಗೋಚರಿಸುತ್ತದೆ. ಆದರೆ ಕಲ್ಲುಗಳನ್ನು ಉಪ್ಪಿನ ಪಾಕೆಟ್‍ನಲ್ಲಿ ತುಂಬಲಾಗಿದೆ. ಉಪ್ಪನ್ನು ನೀರಿನ ಪಾತ್ರೆಗೆ ಹಾಕಿ ಕರಗಿಸಿದರೆ ಅರ್ಧ ಮಾತ್ರ ಕರಗಿದ್ದು ಇನ್ನರ್ಧ ಕರಗಿಲ್ಲ.

    ಕಲ್ಲಿನಿಂದಾಗಿ ಸರದಿ ಸಾಲಲ್ಲಿ ಊಟಕ್ಕೆ ಕೂತವರು ಸರಿಯಾಗಿ ಊಟ ಮಾಡದಂತಾಗಿದೆ. ಸ್ನೇಹಿತರು, ನವದಂಪತಿಗಳನ್ನ ಊಟಕ್ಕೆ ಕರೆದು ಹೀಗಾಯ್ತಲ್ಲ ಎಂದು ಅಂಗಡಿ ಮಾಲೀಕನಿಗೆ ಫೋನ್ ಮಾಡಿದರೆ ಆತ ನಾನು ವ್ಯಾಪಾರಸ್ಥ ಎಂದು ಹೇಳಿದ್ದಾರೆ. ಬಳಿಕ ಆತನಿಂದ ನಂಬರ್ ಪಡೆದು ಮೇನ್ ಡೀಲರ್‍ಗೆ ಕರೆ ಮಾಡಿದರೆ ಆತ ಹಾರಿಕೆ ಉತ್ತರ ನೀಡಿದ್ದಾರೆ. ಚಿಕ್ಕಮಗಳೂರಿನ ಸಬ್ ಡೀಲರ್‍ಗೆ ಕರೆ ಮಾಡಿದರೆ ಆತ ಬೇಕಾಬಿಟ್ಟಿ ಉತ್ತರಿಸಿದ್ದಾರೆಂದು ಔತಣಕೂಟ ಏರ್ಪಡಿಸಿದ್ದ ರತನ್ ಮಾಲೀಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜನ ಉಪ್ಪಿನ ಬಗ್ಗೆ ಸಂಶಯ ಪಡುವುದಿಲ್ಲ. ಅದನ್ನೇ ಕೆಲವರು ಬಂಡವಾಳ ಮಾಡಿಕೊಂಡಿದ್ದಾರೆ. ಅಕ್ಕಿ, ರಾಗಿ, ಗೋಧಿಯಲ್ಲಿ ಕಲ್ಲು ಬಂದಿದ್ದಾಯಿತು. ಈಗ ಉಪ್ಪಿನಲ್ಲೂ ಕಲ್ಲು ಬರುವ ಕಾಲ ಬಂದಿದೆ. ಜನ ಮನೆಯಲ್ಲಿ ಉಪ್ಪನ್ನ ಬಳಸುವ ಮುನ್ನ ಎಚ್ಚರದಿಂದ ಇರಬೇಕೆಂದು ಘಟನೆಯಿಂದ ನೊಂದ ರತನ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ದೊಡ್ಡವರು ಕಲ್ಲು ಸಿಕ್ಕರೆ ತೆಗೆದು ಹಾಕುತ್ತಾರೆ. ಆದರೆ ಮಕ್ಕಳು ಅವುಗಳನ್ನ ತಿಂದರೆ ಅನಾರೋಗ್ಯ ಗ್ಯಾರಂಟಿ. ಆದ್ದರಿಂದ ಜನ ಮನೆಯಲ್ಲಿ ಉಪ್ಪನ್ನ ಬಳಸುವ ಮುನ್ನ ಎಚ್ಚರದಿಂದಿರಬೇಕೆಂದು ಮನವಿ ಮಾಡಿದ್ದಾರೆ.

  • ತನ್ನ ಅಪಹರಣಕ್ಕೆ ವ್ಯೂಹ ರಚಿಸಿ ಪೊಲೀಸ್ ಬಲೆಗೆ ಬಿದ್ದ ಯುವಕ

    ತನ್ನ ಅಪಹರಣಕ್ಕೆ ವ್ಯೂಹ ರಚಿಸಿ ಪೊಲೀಸ್ ಬಲೆಗೆ ಬಿದ್ದ ಯುವಕ

    – ಯುವಕನ ಜೊತೆ ಆತನ ಗೆಳೆಯರು ಅಂದರ್

    ಜೈಪುರ: ತನ್ನದೇ ಅಪಹರಣಕ್ಕೆ ವ್ಯೂಹ ರಚಿಸಿದ್ದ ಯುವಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ತನ್ನ ಕಿಡ್ನ್ಯಾಪ್ ಗೆ ಗೆಳೆಯರ ಸಹಾಯ ಪಡೆದು ತಂದೆಯ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದನು.

    ವಿಕಾಸ್ ತನ್ನ ಕಿಡ್ನ್ಯಾಪ್ ಗೆ ಪ್ಲಾನ್ ಮಾಡಿದ್ದ ಯುವಕ. ರಾಜಸ್ಥಾನದ ಅಜ್ಮೇರ್ ಜಿಲ್ಲೆಯ ಕೇಕಡಾ ಗ್ರಾಮದ ನಿವಾಸಿಯಾಗಿದ್ದ ವಿಕಾಸ್ ಕ್ರೆಡಿಟ್ ಕಾರ್ಡ್ ಏಜೆಂಟ್ ಆಗಿ ಕೆಲಸ ಮಾಡಿಕೊಂಡಿದ್ದನು. ಹಣಕ್ಕಾಗಿ ತನ್ನ ಅಪಹರಣ ಮಾಡುವಂತೆ ಗೆಳೆಯರಾದ ಯಾದರಾಮ್ ಮತ್ತು ಲೋಕೇಂದ್ರ ಸಿಂಗ್ ಗೆ ಸೂಚಿಸಿದ್ದನು. ವಿಕಾಸ್ ಸಲಹೆಯಂತೆ ಇಬ್ಬರು ಗೆಳೆಯರು ಸಿನಿಮಾ ಶೈಲಿಯಲ್ಲಿ ಆತನನ್ನು ಕುರ್ಚಿಗೆ ಕಟ್ಟಿ ಹಾಕಿ ಥಳಿಸುತ್ತಿರುವ ವೀಡಿಯೋ ಮಾಡಿದ್ದರು. ನಂತರ ಆ ವೀಡಿಯೋವನ್ನ ವಿಕಾಸ್ ತಂದೆ ಪ್ರೇಮ್ ಸಿಂಗ್ ಮೊಬೈಲ್ ಗೆ ಕಳುಹಿಸಿ, ಎರಡೂವರೆ ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದರು.

    ವೀಡಿಯೋ ನೋಡಿದ ಪ್ರೇಮ್ ಸಿಂಗ್ ಆತಂಕಕ್ಕೊಳಗಾಗಿ ಮಗನ ಉಳಿಸಿಕೊಳ್ಳಲು ಪೊಲೀಸರ ಮೊರೆ ಹೋಗಿದ್ದಾರೆ. ಅಖಾಡಕ್ಕಿಳಿದ ಪೊಲೀಸರು ಕೆಲವೇ ಗಂಟೆಯಲ್ಲಿ ವಿಕಾಸ್ ಮತ್ತು ಆತನ ಇಬ್ಬರು ಗೆಳೆಯರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ವ್ಯಕ್ತಿಯ ಅಪಹರಣ- ಕೇವಲ 7 ನಿಮಿಷದಲ್ಲಿ ಆರೋಪಿಯನ್ನ ಬಂಧಿಸಿದ ಪೊಲೀಸರು

    ಕೆಲ ದಿನಗಳ ಹಿಂದೆ ಮಗ ನನ್ನ ಬಳಿ ಹಣ ಕೇಳಿದ್ದನು. ಈಗ ಎರಡು ದಿನಗಳಿಂದ ನಾಪತ್ತೆಯಾಗಿದ್ದು, ಇಂದು ಈ ವೀಡಿಯೋ ಬಂದಿದೆ ಎಂದು ನಮಗೆ ತೋರಿಸಿದರು. ಅಪಹರಣಕಾರರನ್ನು ಬಂಧಿಸಿದಾಗ ವಿಕಾಸ್ ಸೂಚನೆಯಂತೆಯೇ ಕಿಡ್ನ್ಯಾಪ್ ಮಾಡಲಾಗಿತ್ತು ಎಂದು ಬಾಯಿ ಬಿಟ್ಟಿದ್ದಾರೆ. ಕೊನೆಗೆ ವಿಕಾಸ್ ಸಹ 70 ಸಾವಿರ ರೂಪಾಯಿ ಸಾಲ ಹಿಂದಿರುಗಿಸಲು ಈ ಪ್ಲಾನ್ ಮಾಡಿರೋದು ಅಂತ ಹೇಳಿದ್ದಾರೆ. ಸದ್ಯ ಮೂವರನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಡಿಸಿಪಿ ರಾಹುಲ್ ಜೈನ್ ಹೇಳಿದ್ದಾರೆ. ಇದನ್ನೂ ಓದಿ: ಶಾಲೆಗೆ ನುಗ್ಗಿ ಬಾಲಕಿಯ ಅಪಹರಣಕ್ಕೆ ಯತ್ನ- ಆರೋಪಿಗಳನ್ನು ಕೊಂದ ಗ್ರಾಮಸ್ಥರು

  • ಚಿಕ್ಕಣ್ಣ ಬ್ಯಾಟಿಂಗ್, ಡಿ ಬಾಸ್ ಫೀಲ್ಡಿಂಗ್ – ಜಾಲಿ ಮೂಡ್‍ನಲ್ಲಿ ‘ಗಜಪಡೆ’

    ಚಿಕ್ಕಣ್ಣ ಬ್ಯಾಟಿಂಗ್, ಡಿ ಬಾಸ್ ಫೀಲ್ಡಿಂಗ್ – ಜಾಲಿ ಮೂಡ್‍ನಲ್ಲಿ ‘ಗಜಪಡೆ’

    ಬೆಂಗಳೂರು: ಸ್ನೇಹಿತರ ಜೊತೆ ಮೂರು ದಿನಗಳ ಕಾಲ ಪ್ರವಾಸಕ್ಕೆ ಹೋಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ಕ್ರಿಕೆಟ್ ಆಡುತ್ತಿರುವ ವಿಡಿಯೋವನ್ನು ಡಿಬಾಸ್ ಅಭಿಮಾನಿಗಳು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ.

    ಮಂಗಳವಾರ ಡಿಬಾಸ್ ದರ್ಶನ್ ಅವರು ತಮ್ಮ ಚಿತ್ರರಂಗದ ಕೆಲ ಸ್ನೇಹಿತರು ಮತ್ತು ಬಾಲ್ಯದ ಗೆಳೆಯರ ಜೊತೆ ಮಡಿಕೇರಿಗೆ ಮೂರು ದಿನಗಳ ಪ್ರವಾಸಕ್ಕೆ ಹೋಗಿದ್ದರು. ಬೆಂಗಳೂರಿನ ಆರ್.ಆರ್ ನಗರದ ನಿವಾಸದಿಂದ ಹೊರಟ್ಟಿದ್ದ ದರ್ಶನ್ ಮತ್ತು ಸ್ನೇಹಿತರು, ಟಿ ನರಸೀಪುರದ ತೂಗದೀಪ ಫಾರ್ಮ್ ಹೌಸ್‍ಗೆ ಹೋಗಿ ಅಲ್ಲಿಂದ ಮಡಿಕೇರಿಗೆ ಪ್ರಯಾಣ ಬೆಳೆಸಿದ್ದರು.

    ಇಂದು ಬೆಳಗ್ಗೆ ಸ್ನೇಹಿತರ ಜೊತೆ ಜಾಲಿಯಾಗಿ ಕ್ರಿಕೆಟ್ ಆಡಿರುವ ದರ್ಶನ್, ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡಿ ಸಂತೋಷ ಪಟ್ಟಿದ್ದಾರೆ. ಸದ್ಯ ಡಿಬಾಸ್ ಅಭಿಮಾನಿಗಳು ಹಂಚಿಕೊಂಡಿರುವ ವಿಡಿಯೋದಲ್ಲಿ ದರ್ಶನ್ ಅವರು ಫೀಲ್ಡಿಂಗ್ ಮಾಡುತ್ತಿದ್ದು, ಧರ್ಮ ಕೀರ್ತಿ ರಾಜ್ ಅವರು ಬೌಲಿಂಗ್ ಮಾಡುತ್ತಿದ್ದಾರೆ. ಈ ವೇಳೆ ಹಾಸ್ಯ ನಟ ಚಿಕ್ಕಣ್ಣ ಅವರು ಬ್ಯಾಟಿಂಗ್ ಮಾಡುತ್ತಿರುವುದು ಕಂಡುಬಂದಿದೆ. ತಾವು ತಂಗಿರುವ ರೆಸಾರ್ಟ್ ಮುಂದೆ ಡಿ ಬಾಸ್ ಸ್ನೇಹಿತರು ಕ್ರಿಕೆಟ್ ಆಡಿದ್ದಾರೆ.

    ಮಂಗಳವಾರ ಆರ್.ಆರ್ ನಗರದ ನಿವಾಸದಿಂದ ಸಾರಥಿಯ ನೇತೃತ್ವದಲ್ಲೇ ನಟ ಚಿಕ್ಕಣ್ಣ, ನಿರ್ಮಾಪಕ ಉಮಾಪತಿ, ಪ್ರಜ್ವಲ್ ದೇವರಾಜ್, ಪ್ರಣಮ್ ದೇವರಾಜ್ ಮತ್ತು ಚಿಂಗಾರಿಯ ಬಾಲ್ಯದ ಗೆಳೆಯರು ಮಡಿಕೇರಿ ಕಡೆ ಹೋಗಿದ್ದರು. ಮೂರು ದಿನಗಳ ಕಾಲ ಡಿಬಾಸ್ ಮತ್ತವರ ಸ್ನೇಹಿತರು ಅಲ್ಲೇ ತಂಗಲಿದ್ದಾರೆ. ದರ್ಶನ್ ಅವರು ಟ್ರಿಪ್ ಹೊರಟಿರುವ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದವು.

    ದರ್ಶನ್ ಅವರ ನಿವಾಸದ ಮುಂದೆ ಸುಮಾರು 15ಕ್ಕೂ ಹೆಚ್ಚಿನ ಬೈಕ್‍ಗಳು ನಿಂತಿರುವ ಫೋಟೋಗಳು ಮತ್ತು ಅವರು ಮನೆಯಿಂದ ಸೂಪರ್ ಬೈಕಿನಲ್ಲಿ ಹೋಗುತ್ತಿರುವ ವಿಡಿಯೋಗಳನ್ನು ಅವರ ಅಭಿಮಾನಿಗಳು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಡಿ ಬಾಸ್ ತಮ್ಮ ನೀಲಿ ಬಣ್ಣದ ಬೈಕಿನಲ್ಲಿ ಕಪ್ಪು ಜಾಕೆಟ್ ತೊಟ್ಟು ರೈಡ್‍ಗೆ ಹೋಗಿದ್ದರು. ಇದರ ಜೊತೆಗೆ ಪ್ರಜ್ವಲ್ ದೇವರಾಜ್ ಅವರು ತಾವು ರೈಡಿಗೆ ಸಿದ್ಧವಾಗಿರುವ ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು.

  • ಏರಿಯಾದಲ್ಲಿ ನನ್ನ ಹವಾನೇ ಜಾಸ್ತಿ ಇರಬೇಕು ಅಂತ ಸ್ನೇಹಿತನನ್ನೇ ಕೊಂದ!

    ಏರಿಯಾದಲ್ಲಿ ನನ್ನ ಹವಾನೇ ಜಾಸ್ತಿ ಇರಬೇಕು ಅಂತ ಸ್ನೇಹಿತನನ್ನೇ ಕೊಂದ!

    ಬೆಂಗಳೂರು: ಏರಿಯಾದಲ್ಲಿ ಹವಾ ಮೆಂಟೈನ್ ಮಾಡಬೇಕೆಂದು ಯುವಕನೋರ್ವ ತನ್ನ ಸ್ನೇಹಿತನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಗಂಗಮ್ಮನಗುಡಿಯಲ್ಲಿ ನಡೆದಿದೆ.

    ಕೊಲೆಯಾದ ಯುವಕನನ್ನು ಕಾರ್ತಿಕ್ ಎಂದು ಗುರುತಿಸಲಾಗಿದೆ. ಕಾರ್ತಿಕ್ ಸ್ನೇಹಿತರೇ ಆದ ಅಶೋಕ್ ಮತ್ತು ಅವನ ಸಹಚರರು ಹತ್ಯೆ ಮಾಡಿದ್ದಾರೆ. ಹತ್ಯೆಯಾದ ಕಾರ್ತಿಕ್ ಹಾಗೂ ಹಂತಕ ಅಶೋಕ್ ಒಂದೇ ಗ್ಯಾಂಗ್‍ನ ಸದಸ್ಯರಾಗಿದ್ದು, ಏರಿಯಾದಲ್ಲಿ ನಾನೇ ಜಾಸ್ತಿ ಹವಾ ಮಾಡಬೇಕೆಂದು ಆಶೋಕ್ ಸ್ನೇಹಿತ ಕಾರ್ತಿಕ್ ಅನ್ನೇ ಕೊಲೆ ಮಾಡಿದ್ದಾನೆ.

    ಕಾರ್ತಿಕ್ ಮತ್ತು ಅಶೋಕ್ ತಮ್ಮ ಸ್ನೇಹಿತರ ಜೊತೆ ಸೇರಿಕೊಂಡು ನಿನ್ನೆ ಮಧ್ಯಾಹ್ನ ಎಣ್ಣೆ ಪಾರ್ಟಿ ಮಾಡಿದ್ದಾರೆ. ಪಾರ್ಟಿ ವೇಳೆ ಅವರವರ ಮಧ್ಯೆಯೇ ಜಗಳ ಶುರುವಾಗಿದೆ. ಈ ವೇಳೆ ಅಶೋಕ್ ಮತ್ತು ಅವರ ಸಹಚರರು ಏರಿಯಾದಲ್ಲಿ ನಮ್ಮ ಹವಾನೇ ಜಾಸ್ತಿ ಇರಬೇಕು ಎಂದು ಚಾಕುವಿನಿಂದ ಕಾರ್ತಿಕ್‍ನನ್ನು ರಸ್ತೆ ಪಕ್ಕದಲ್ಲೇ ಬರ್ಬರವಾಗಿ ಹತ್ಯೆ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

    ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಹುಡುಕುತ್ತಿದ್ದಾರೆ. ಈ ಸಂಬಂಧ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.