Tag: friends

  • ಒಂದೇ ಚಾರ್ಜರ್ ಎರಡು ಮೊಬೈಲ್- ಚಾರ್ಜ್‍ಗಾಗಿ ಬಡಿದಾಟ, ಕೊಲೆ

    ಒಂದೇ ಚಾರ್ಜರ್ ಎರಡು ಮೊಬೈಲ್- ಚಾರ್ಜ್‍ಗಾಗಿ ಬಡಿದಾಟ, ಕೊಲೆ

    ಬೆಂಗಳೂರು: ಮೊಬೈಲ್ ಚಾರ್ಜ್ ಹಾಕುವ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದ್ದು, ಯುವಕನ ಕೊಲೆ ಮಾಡಿರುವ ಘಟನೆ ರಾಜಾಜಿನಗರದಲ್ಲಿ ನಡೆದಿದೆ.

    ಕೂಲಿ ಕೆಲಸ ಮಾಡುತ್ತಿದ್ದ ಅನಿಲ್ ನನ್ನು ಆಕಾಶ್ ಕೊಲೆ ಮಾಡಿದ್ದಾನೆ. ಕೂಲಿ ಕೆಲಸ ಮಾಡುತ್ತಿದ್ದ ಯುವಕರ ಮಧ್ಯೆ ಈ ಗಲಾಟೆ ನಡೆದಿದೆ. ಮೃತ ಅನಿಲ್ ಹಾಗೂ ಅರೋಪಿ ಆಕಾಶ್ ಇಬ್ಬರೂ ಮಧ್ಯಪ್ರದೇಶದವರಾಗಿದ್ದು, ಇಬ್ಬರೂ ಮೊಬೈಲ್ ಚಾರ್ಜ್ ಹಾಕೋಕೆ ಒಂದೇ ಸ್ವಿಚ್ ಬಳಕೆ ಮಾಡುತ್ತಿದ್ದರು. ಈ ವೇಳೆ ಚಾರ್ಜ್ ಹಾಕುವ ಸಂಬಂಧ ಜಗಳ ಮಾಡಿಕೊಂಡಿದ್ದಾರೆ.

    ಜಗಳ ವಿಕೋಪಕ್ಕೆ ತಿರುಗಿದ್ದು, ಆಕಾಶ್, ಅನಿಲ್ ನನ್ನು ಕೋಲಿನಿಂದ ಹೊಡೆದಿದ್ದಾನೆ. ಇಬ್ಬರ ಜಗಳ ಅತಿರೇಕಕ್ಕೆ ಹೋಗಿದ್ದು, ಬಳಿಕ ಅನಿಲ್‍ಗೆ ಗಂಭೀರಗಾಯಗಳಾಗಿವೆ. ಆಸ್ಪತ್ರೆಗೆ ಕರೆದೊಯ್ಯುವಾಗ ಯುವಕ ಸಾವನಪ್ಪಿದ್ದಾನೆ. ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

  • ಇಂದು Friendship Day- ಗೆಳೆತನದ ಹಬ್ಬ ಆಚರಿಸೋದು ಏಕೆ?

    ಇಂದು Friendship Day- ಗೆಳೆತನದ ಹಬ್ಬ ಆಚರಿಸೋದು ಏಕೆ?

    ಗೆಳೆತನ ಅನ್ನೋದು ಎಲ್ಲ ಬಂಧಕ್ಕಿಂತಲೂ ಎತ್ತರದಲ್ಲಿ ನಿಲ್ಲುತ್ತೆ. ಈ ಸುಂದರ ಸಂಬಂಧಕ್ಕೆ ಧರ್ಮ, ಜಾತಿ ಯಾವುದೂ ಅಡ್ಡಿ ಬರಲ್ಲ. ಇಂತಹ ಗೆಳೆತನದ ಉದಾಹರಣೆಗಳು ನಮ್ಮ ಸುತ್ತಮುತ್ತಲೇ ಸಿಗುತ್ತವೆ. ಯಾವುದೇ ಷರತ್ತುಗಳಿಲ್ಲದೇ ಒಬ್ಬರು ಮತ್ತೊಬ್ಬರಿಗಾಗಿ ಬದುಕೋದು ಗೆಳೆತನ. ಇಂದು ಇಡೀ ವಿಶ್ವದಾದ್ಯಂತ ಗೆಳೆತನದ ಹಬ್ಬವನ್ನು ಆಚರಿಸಲಾಗುತ್ತಿದೆ.

    ಅಂತರಾಷ್ಟ್ರೀಯ ಮಟ್ಟದಲ್ಲಿ ಜುಲೈ 30ರಂದು ಗೆಳೆತನದ ದಿನವನ್ನು ಆಚರಿಸಲಾಗುತ್ತದೆ. ಭಾರತ ಮತ್ತು ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳಲ್ಲಿ ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಗೆಳೆಯರ ಹಬ್ಬವನ್ನು ಆಚರಿಸಲಾಗುತ್ತದೆ. ಆದ್ರೆ ಫ್ರೆಂಡ್‍ಶಿಪ್ ಡೇ ಆಚರಣೆ ಹೇಗೆ ಆರಂಭವಾಯ್ತು ಅನ್ನೋದರ ಬಗ್ಗೆ ಹಲವರು ಹಲವು ಕಥೆಗಳನ್ನು ಹೇಳುತ್ತಾರೆ. ಇದನ್ನೂ ಓದಿ: ಮೋದಿ ಫೋಟೋ ಹಾಕಿ “ಯೇ ದೋಸ್ತಿ ಹಮ್ ನಹೀ ತೋಡೆಂಗೆ” ಎಂದ ಇಸ್ರೇಲ್

    ಫ್ರೆಂಡ್‍ಶಿಪ್ ಡೇ ಇತಿಹಾಸ:
    1958ರಲ್ಲಿ ಮೊದಲ ಬಾರಿಗೆ ಫ್ರೆಂಡ್‍ಶಿಪ್ ಡೇ ಆಚರಣೆ ಆರಂಭವಾಯ್ತು. 1958ರ ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಅಮೆರಿಕದಲ್ಲಿ ಯುವಕನನೋರ್ವನ ಕೊಲೆ ಆಗುತ್ತೆ. ಈ ವಿಷಯ ತಿಳಿದ ಆತನ ಗೆಳೆಯ ದುಃಖದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಾನೆ. ಈ ಈ ವಿಷಯ ತಿಳಿದ ಅಮೆರಿಕಾ ಸರ್ಕಾರ ಆಗಸ್ಟ್ ಮೊದಲ ಭಾನುವಾರದಂದು ಫ್ರೆಂಡ್‍ಶಿಪ್ ಡೇ ಆಚರಣೆಗೆ ಕರೆ ನೀಡಿತು ಎಂದು ಹೇಳಲಾಗುತ್ತದೆ.

    ಮತ್ತೊಂದು ಕಥೆ:
    ಇತಿಹಾಸದ ಪುಟಗಳಲ್ಲಿ ಫ್ರೆಂಡ್‍ಶಿಪ್ ಡೇ ಆಚರಣೆ ಬಗ್ಗೆ ಮತ್ತೊಂದು ಕಥೆಯ ಕುರಿತು ಹೇಳಲಾಗಿದೆ. ಪೆರುಗ್ವೆಯ ವೈದ್ಯ ರಮನ್ ಆರ್ಟೊಮಿಯಾ ಜುಲೈ 20, 1958ರಂದು ಒಂದು ಡಿನ್ನರ್ ಪಾರ್ಟಿ ಆಯೋಜನೆ ಮಾಡುತ್ತಾರೆ. ಅಂದು ತಮ್ಮ ಎಲ್ಲ ಗೆಳೆಯರನ್ನ ಆಹ್ವಾನಿಸಿ ಗೆಳೆತನದ ದಿನ ಆಚರಿಸಲು ನಿರ್ಧರಿಸುತ್ತಾರೆ. ಅಂದು ಈ ಫ್ರೆಂಡ್‍ಶಿಪ್ ಡೇ ಆಚರಣೆಗೆ ಬಂದಿದೆ ಎಂಬುದರ ಬಗ್ಗೆ ಹೇಳುತ್ತಾರೆ.

  • ಸ್ನೇಹಿತರ ಜೊತೆಗೆ ತೆರಳಿದ್ದ ಯುವಕ ಸಾವು

    ಸ್ನೇಹಿತರ ಜೊತೆಗೆ ತೆರಳಿದ್ದ ಯುವಕ ಸಾವು

    – ಆಸ್ಪತ್ರೆಗೆ ದಾಖಲಿಸಿ ಸ್ನೇಹಿತರು ಎಸ್ಕೇಪ್

    ಹಾಸನ: ಜಿಲ್ಲೆಯಲ್ಲಿ ಬಂದೂಕು ಸದ್ದು ಮಾಡಿದ್ದು, ಗುಂಡಿನ ದಾಳಿಗೆ ಯುವಕನೋರ್ವ ಬಲಿಯಾಗಿದ್ದಾನೆ.

    ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕಲ್ಲಹಳ್ಳಿ ಫಾರೆಸ್ಟ್ ನಲ್ಲಿ ಈ ಘಟನೆ ನಡೆದಿದೆ. ಬೇಲೂರು ತಾಲೂಕಿನ ಮಧು (24) ಮೃತ ಯುವಕ. ಈತ ನಿನ್ನೆ ಸಂಜೆ ತನ್ನ ಸ್ನೇಹಿತರ ಜೊತೆಗೆ ತೆರಳಿದ್ದು, ಗುಂಡಿನ ದಾಳಿಗೊಳಗಾಗಿದ್ದಾನೆ.

    ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಮಧುವನ್ನು ಕೂಡಲೇ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಸ್ನೇಹಿತರು ಎಸ್ಕೇಪ್ ಆಗಿದ್ದಾರೆ. ಇತ್ತ ಚಿಕಿತ್ಸೆ ಫಲಿಕಾರಿಯಾಗದೆ ಮೃತಪಟ್ಟಿರುವ ಮಧು ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಎರಡೂವರೆ ತಿಂಗಳ ಬಳಿಕ ಅನ್‍ಲಾಕ್ – ಮಾಲ್, ಶಾಪಿಂಗ್ ಕಾಂಪ್ಲೆಕ್ಸ್‌ಗಳು ಓಪನ್

    ಸಾವಿನ ಬಗ್ಗೆ ಹಲವು ಅನುಮಾನಗಳು ಎದ್ದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗಿಳಿದಿದ್ದಾರೆ. ಅರಣ್ಯಕ್ಕೆ ಭೇಟೆಗೆ ತೆರಳಿದಾಗ ಮಿಸ್ ಫೈರ್ ಆಗಿದೆಯಾ ಅಥವಾ ಕೊಲೆಯಾ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಣಕ್ಕಾಗಿ ಸ್ನೇಹಿತರ ಮಧ್ಯೆ ಕಿರಿಕ್- ಬಂದೂಕಿನಿಂದ ಮನಸೋ ಇಚ್ಛೆ ಗುಂಡು ಹಾರಿಸಿದ

    ಹಣಕ್ಕಾಗಿ ಸ್ನೇಹಿತರ ಮಧ್ಯೆ ಕಿರಿಕ್- ಬಂದೂಕಿನಿಂದ ಮನಸೋ ಇಚ್ಛೆ ಗುಂಡು ಹಾರಿಸಿದ

    ಚಿಕ್ಕಮಗಳೂರು: ಜಮೀನು ವಿವಾದ ಹಾಗೂ ಹಣಕಾಸಿನ ಬಗ್ಗೆ ಸ್ನೇಹಿತರ ಮಧ್ಯೆ ಗಲಾಟೆ ನಡೆದಿದ್ದು, ಸ್ನೇಹಿತನ ಮನೆ ಮೇಲೆ ವ್ಯಕ್ತಿ ಮನಸೋ ಇಚ್ಛೆ ಗುಂಡು ಹಾರಿಸಿರುವ ಘಟನೆ ತಾಲೂಕಿನ ಮಲ್ಲಂದೂರು ಸಮೀಪದ ಯಡದಾಳು ಗ್ರಾಮದಲ್ಲಿ ನಡೆದಿದೆ.

    ಎಡದಾಳು ಗ್ರಾಮದ ಚೇತನ್ ಹಾಗೂ ಕಿರಣ್ ಇಬ್ಬರೂ ಸ್ನೇಹಿತರು. ಇಬ್ಬರ ಮಧ್ಯೆ ಹಲವು ರೀತಿಯ ವ್ಯವಹಾರ ಇತ್ತು. ಇತ್ತೀಚೆಗೆ ಜಮೀನು ವಿಚಾರವಾಗಿ ವಾದ-ವಿವಾದವೂ ನಡೆದಿತ್ತು. ಇಬ್ಬರ ನಡುವೆ ಹಣಕಾಸಿನ ವ್ಯವಹಾರವೂ ಬಾಕಿ ಇತ್ತು. ಆದರೆ ಇತ್ತೀಚೆಗೆ ಗ್ರಾಮದಲ್ಲಿ ಕಿರಣ್ ಬಗ್ಗೆ ಚೇತನ್ ವೈಯಕ್ತಿಕವಾಗಿ ಕೆಟ್ಟದಾಗಿ ಮಾತನಾಡಿದ್ದಾನೆಂದು ಚೇತನ್ ಮನೆ ಮೇಲೆ ಕಿರಣ್ ಗುಂಡಿನ ದಾಳಿ ನಡೆಸಿದ್ದಾನೆ.

    ಕಿರಣ್ ಮಾವ ನಾಗೇಶ್ ಗೌಡರ ಮನೆಯಲ್ಲಿ ಬಂದೂಕು ಇತ್ತು. ಗ್ರಾಮೀಣ ಭಾಗದಲ್ಲಿ ಜೀವ ಹಾಗೂ ಬೆಳೆಗಳ ರಕ್ಷಣೆಗೆ ಪೊಲೀಸ್ ಇಲಾಖೆಯೇ ನೀಡಿದ್ದ ಅನುಮತಿಯುಳ್ಳ ಗನ್ ಇತ್ತು. ಅದನ್ನೇ ತಂದ ಕಿರಣ್, ಚೇತನ್ ಮನೆ ಬಳಿ ಬಂದು ಕೂಗಾಡಿದ್ದಾನೆ. ಆಗ ಚೇತನ್ ತಾಯಿ ಕಿಟಕಿ ತೆಗೆದು ವಿಚಾರಿಸಿದಾಗ ಮನಸೋ ಇಚ್ಛೆ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಚೇತನ್ ಮನೆಯವರಾಗಲಿ, ತಾಯಿಯಾಗಲಿ ಅಥವಾ ಚೇತನ್ ಕೂಡ ಮನೆಯಿಂದ ಹೊರಬಂದಿಲ್ಲ.

    ಒಂದು ವೇಳೆ ಮನೆಯಿಂದ ಹೊರ ಬಂದಿದ್ದರೆ ಎಷ್ಟು ಜನ ಸಾಯುತ್ತಿದ್ದರೋ ಎಂಬ ಪ್ರಶ್ನೆ ಕಾಡತೊಡಗಿದ್ದು, ಸುಮಾರು ಮೂರ್ನಾಲ್ಕು ಗುಂಡು ಹಾರಿಸಿರುವುದರಿಂದ ಮನೆಯ ಬಾಗಿಲು, ಗೋಡೆ ಹಾಗೂ ಹೆಂಚಿಗೆ ಹೊಡೆದಿರುವ ಪಟ್ಟಿಯಲ್ಲೂ ಗುಂಡಿನ ಮಾರ್ಕ್ ಬಿದ್ದಿದೆ. ಈ ಕುರಿತು ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾನೂನುಬಾಹಿರವಾಗಿ ಬಂದೂಕು ಉಪಯೋಗಿಸಿದ್ದಕ್ಕೆ ಕಿರಣ್ ಮೇಲೆ ಹಾಗೂ ಬಂದೂಕು ಪರವಾನಗಿ ಪಡೆದಿದ್ದ ಅತನ ಮಾವ ನಾಗೇಶ್ ಗೌಡ ಮೇಲೆ ಎಫ್‍ಐಆರ್ ದಾಖಲಾಗಿದೆ. ಪ್ರಕರಣ ಸಂಬಂಧ ಗುಂಡಿನ ದಾಳಿ ನಡೆಸಿದ ಕಿರಣ್ ಹಾಗೂ ಘಟನೆಯ ಬಳಿಕ ಆತನಿಗೆ ಉಳಿಯಲು ಸಹಕಾರ ಮಾಡಿದ ಆರೋಪದ ಮೇಲೆ ಮೂಡಿಗೆರೆ ತಾಲೂಕಿನ ಕಳಸ ಠಾಣಾ ವ್ಯಾಪ್ತಿಯ ಲೋಹಿತ್ ಇಬ್ಬರನ್ನೂ ಅರೆಸ್ಟ್ ಮಾಡಿದ್ದಾರೆ. ಘಟನೆ ಬಳಿಕ ತಲೆಮರೆಸಿಕೊಂಡಿರುವ ನಾಗೇಶ್ ಗೌಡ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಮಾರಾಮಾರಿ – ಓರ್ವನಿಗೆ ಗಾಯ

    ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಮಾರಾಮಾರಿ – ಓರ್ವನಿಗೆ ಗಾಯ

    ಹಾಸನ: ಕುಡಿದ ಮತ್ತಿನಲ್ಲಿ ಯುವಕರ ಗುಂಪೊಂದು ಲಾಂಗು, ಮಚ್ಚಿನಿಂದ ಬಡಿದಾಡಿಕೊಂಡಿರುವ ಘಟನೆ ಹಾಸನದ ರಿಂಗ್ ರಸ್ತೆಯಲ್ಲಿ ನಡೆದಿದೆ. ಡೈರಿಯಿಂದ ಉದ್ದೂರು ಮೂಲಕ ಬೇಲೂರಿಗೆ ಸಂಪರ್ಕ ಕಲ್ಪಿಸುವ ರಿಂಗ್ ರಸ್ತೆಯಲ್ಲಿ ನಾಲ್ಕರು ಯುವಕರು ಗಾಂಜಾ ಸೇವಿಸಿ, ಮದ್ಯಪಾನ ಮಾಡಿ ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

    ಕುಡಿದ ಅಮಲಿನಲ್ಲಿದ್ದ ಸ್ನೇಹಿತರ ನಡುವೆ ಕ್ಲುಲಕ ಕಾರಣಕ್ಕೆ ಜಗಳ ಶುರುವಾಗಿದ್ದು, ಪರಸ್ಪರ ಲಾಂಗ್, ಮಚ್ಚುಗಳಿಂದ ಹಲ್ಲೆ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ ಹಾಸನದ ದ್ಯಾವಪ್ಪನ ಕೊಪ್ಪಲಿನ ತೇಜಸ್(23) ಎಂಬ ಯುವಕನ ಕೈ, ಕಣ್ಣುಗಳ ಭಾಗಕ್ಕೆ ಗಾಯಗಳಾಗಿವೆ. ಇದನ್ನೂ ಓದಿ:ಮನೆಯ ಸಮೀಪದ ಟ್ಯಾಂಕ್‍ನಿಂದ ನೀರು ಕುಡಿದ ಕಾಡಾನೆಗಳು

    ಘಟನೆಯ ಬಳಿಕ ರಾಜೇನಹಳ್ಳಿ ಗ್ರಾಮದ ಪುಟ್ಟ ಹಾಗೂ ಸ್ನೇಹಿತರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೆನ್‍ಷನ್ ಮೊಹಲ್ಲಾ ಪೊಲೀಸ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಒಂದು ಲಾಂಗ್ ಹಾಗೂ ಒಂದು ಬೈಕ್ ನ್ನು ವಶಪಡಿಸಿಕೊಂಡಿದ್ದಾರೆ. ಕಳೆದ ಹದಿನೈದು ದಿನದ ಹಿಂದೆ 80 ಅಡಿ ರಸ್ತೆಯಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪದೇ ಪದೇ ಪುಡಿ ರೌಡಿಗಳ ಹಾವಳಿಯಿಂದ ಹಾಸನ ನಗರದ ಜನತೆ ಬೆಚ್ಚಿ ಬಿದ್ದಿದ್ದು, ಪೊಲೀಸರು ಅವರ ಹೆಡೆಮುರಿ ಕಟ್ಟಬೇಕೆಂದು ಒತ್ತಾಯಿಸಿದ್ದಾರೆ.

  • ಕೊಲೆಗೈದು ಅಪಘಾತವೆಂದು ಬಿಂಬಿಸಿದ್ದ ಹಂತಕ ಕೊನೆಗೂ ಪೊಲೀಸ್ ಬಲೆಗೆ

    ಕೊಲೆಗೈದು ಅಪಘಾತವೆಂದು ಬಿಂಬಿಸಿದ್ದ ಹಂತಕ ಕೊನೆಗೂ ಪೊಲೀಸ್ ಬಲೆಗೆ

    – ಕಷ್ಟ ಕಾಲದಲ್ಲಿ ಸಾಲ ಕೊಟ್ಟಿದ್ದ ಸ್ನೇಹಿತನ್ನೇ ಕೊಂದಿದ್ದ ಪಾಪಿ
    – ಹೆಂಡತಿ ಜೊತೆ ಅನೈತಿಕ ಸಂಬಂಧದ ಗುಮ್ಮ

    ಮಂಡ್ಯ: ಕಷ್ಟ ಕಾಲದಲ್ಲಿ ಸಾಲ ಕೊಟ್ಟಿದ್ದ ಗೆಳೆಯ ಬಡ್ಡಿ ಕೇಳಲು ಪದೇ ಪದೇ ಮನೆ ಬಳಿ ಬರುತ್ತಾನೆ. ನನ್ನ ಪತ್ನಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿರಬಹುದು ಎಂದು ಅನುಮಾನಿಸಿ ಸಿನಿಮೀಯ ರೀತಿಯಲ್ಲಿ ಸ್ನೇಹಿತನನ್ನೇ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

    ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹೊಂಗಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಪೊಲೀಸರ ತನಿಖೆಯ ಬಳಿಕ ಸತ್ಯಾಂಶ ಹೊರ ಬಿದ್ದಿದೆ. ಮೇ 22ರಂದು ಹೊಂಗಳ್ಳಿ ಸಮೀಪದ ರಸ್ತೆ ಪಕ್ಕದ ಹಳ್ಳದಲ್ಲಿ ವ್ಯಕ್ತಿಯೊಬ್ಬನ ಶವ ಹಾಗೂ ಆತನ ಬೈಕ್ ಪತ್ತೆಯಾಗಿತ್ತು. ನೋಡಿದವರಿಗೆ ಅಪಘಾತವೆಂಬಂತೆ ಕಾಣುತ್ತಿತ್ತಾದರೂ, ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಆರ್.ಎಸ್ ಠಾಣೆ ಪೊಲೀಸರಿಗೆ ರಸ್ತೆ ಮೇಲಿದ್ದ ರಕ್ತದ ಕಲೆ ಹಾಗೂ ಶವ ಬಿದ್ದಿದ್ದ ಸ್ಥಿತಿ ನೋಡುತ್ತಿದ್ದಂತೆ ಅಪಘಾತವಲ್ಲ, ಕೊಲೆ ಎಂಬ ಅನುಮಾನ ಬಂದಿತ್ತು.

    ಮೃತಪಟ್ಟ ವ್ಯಕ್ತಿ ಹೊಂಗಳ್ಳಿ ಗ್ರಾಮದ ಅಶೋಕ್ ಎಂಬುದು ತಿಳಿಯುತ್ತಿದ್ದಂತೆ ತನಿಖೆ ಆರಂಭಿಸಿದ ಪೊಲೀಸರು, ಚಂದ್ರ (ಭೀಮ) ಹಾಗೂ ಶ್ರೀಧರ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರು. ಆರಂಭದಲ್ಲಿ ಕೊಲೆಗೂ ತಮಗೂ ಸಂಬಂಧವಿಲ್ಲ ಎನ್ನುತ್ತಿದ್ದ ಆರೋಪಿಗಳು, ಕೊನೆಗೆ ತಪ್ಪು ಒಪ್ಪಿಕೊಂಡು ತಾವೇ ಕೊಲೆ ಮಾಡಿದ್ದಾಗಿ ಹೇಳಿದ್ದಾರೆ.

    ಆರೋಪಿಗಳು ಹಾಗೂ ಕೊಲೆಯಾದ ಅಶೋಕ್ ಮೂವರೂ ಹೊಂಗಳ್ಳಿ ಗ್ರಾಮದವರು. ಕಷ್ಟ ಸುಖದಲ್ಲಿ ಒಬ್ಬರಿಗೊಬ್ಬರು ನೆರವಿಗೆ ಬರುತ್ತಿದ್ದ ಸ್ನೇಹಿತರು. ಮೃತ ಅಶೋಕ್ ಬಳಿ ಚಂದ್ರ ಭೀಮ 50 ಸಾವಿರ ರೂ. ಸಾಲ ಪಡೆದಿದ್ದ. ಸರಿಯಾಗಿ ಬಡ್ಡಿ ಕಟ್ಟದಿದ್ದಾಗ ಪದೇ ಪದೇ ಮನೆಗೆ ಹೋಗಿ ತನ್ನ ಹಣ ಹಿಂದಿರುಗಿಸುವಂತೆ ಒತ್ತಡ ಹಾಕುತ್ತಿದ್ದ. ಅಶೋಕ ಮನೆಗೆ ಬರುವುದರಿಂದ ತನ್ನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿರಬಹುದು ಎಂದು ಆರೋಪಿ ಚಂದ್ರು ಶಂಕಿಸಿದ್ದ. ಅದೇ ಕಾರಣಕ್ಕೆ ತನ್ನ ಸ್ನೇಹಿತ ಶ್ರೀಧರ್ ಜೊತೆ ಸೇರಿ ಮೇ 21ರ ರಾತ್ರಿ ಕೊಲೆ ಮಾಡಿದ್ದಾನೆ.

    ಕೊಲೆಗೂ ಮುನ್ನ ಮೃತ ಅಶೋಕ್, ಆರೋಪಿಗಳಾದ ಚಂದ್ರ ಹಾಗೂ ಶ್ರೀಧರ್ ಕೆಲವು ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ಮಾಡಿದ್ದರು. ಬಳಿಕ ಅಲ್ಲಿಂದ ಹೊರಟ್ಟಿದ್ದ ಅಶೋಕ ಪಂಪ್ ಹೌಸ್ ನಲ್ಲಿ ಇನ್ನೊಬ್ಬ ಸ್ನೇಹಿತ ಉಮೇಶ್ ಜೊತೆ ಮಲಗಿದ್ದಾಗ ಅಲ್ಲಿಗೆ ಬಂದ ಆರೋಪಿಗಳು, ಜಗಳ ತೆಗೆದು ಹಲ್ಲೆ ನಡೆಸಿ, ಕೊನೆಗೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದರು. ಬಳಿಕ ಬೈಕ್ ಜೊತೆ ಶವವನ್ನು ರಸ್ತೆ ಪಕ್ಕದ ಹಳ್ಳಕ್ಕೆ ತಳ್ಳಿ ಅಪಘಾತದಿಂದ ಮೃತಪಟ್ಟಿದ್ದಾನೆ ಎಂದು ಬಿಂಬಿಸಲು ಯತ್ನಿಸಿದ್ದರು. ಆದರೆ ಪೊಲೀಸರು ಪ್ರಕರಣ ಬೇಧಿಸಿದ್ದು, ಕೊನೆಗೂ ಸಿಕ್ಕಿಬಿದ್ದಿದ್ದಾರೆ.

  • ವೆಂಟಿಲೇಟರ್ ಸಿಗದೆ 31 ವರ್ಷದ ಯುವಕ ಕೊರೊನಾಗೆ ಬಲಿ

    ವೆಂಟಿಲೇಟರ್ ಸಿಗದೆ 31 ವರ್ಷದ ಯುವಕ ಕೊರೊನಾಗೆ ಬಲಿ

    – ಐಸಿಯುಗೆ ಶಿಫ್ಟ್ ಮಾಡಿದ್ದೇವೆಂದು ಸುಳ್ಳು ಹೇಳಿತಾ ಆಸ್ಪತ್ರೆ

    ಚಿಕ್ಕಮಗಳೂರು: ವೆಂಟಿಲೇಟರ್ ಸಿಗದ 31 ವರ್ಷದ ಯುವಕ ಕೊರೊನಾಗೆ ಬಲಿಯಾಗಿರುವ ಘಟನೆ ಚಿಕ್ಕಮಗಳೂರು ನಗರದ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ನಡೆದಿದೆ.

    31 ವರ್ಷದ ಮೇಘರಾಜ್ ಮೃತ ದುರ್ದೈವಿ. ಮೃತ ಮೇಘರಾಜ್ ಮೂಲತಃ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮತ್ತಿಕಟ್ಟೆ ಸಮೀಪದ ಬಸನಿ ಗ್ರಾಮದ ನಿವಾಸಿ. ಕೊರೊನಾ ಸೋಂಕಿಗೆ ತುತ್ತಾಗಿದ್ದ ಮೇಘರಾಜ್ ಕಳೆದೊಂದು ವಾರದ ಹಿಂದೆ ನಗರದ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದೊಂದು ವಾರದಿಂದ ಚಿಕಿತ್ಸೆಯಲ್ಲಿದ್ದ ಮೇಘರಾಜ್ ಕಳೆದ ರಾತ್ರಿ 1.30ರವರೆಗೂ ಚೆನ್ನಾಗಿದ್ದರು. ಆದರೆ, ಇಂದು ಬೆಳಗ್ಗೆ ಮೇಘರಾಜ್ ಮೊಬೈಲ್‍ಗೆ ಕರೆ ಮಾಡಿದಾಗ ಆಸ್ಪತ್ರೆಯವರು ಅವರು ಸಾವನ್ನಪ್ಪಿರುವುದಾಗಿ ತಿಳಿದ್ದಾರೆ.

    ವಿಷಯ ಕೇಳಿ ಕುಟುಂಬಸ್ಥರು, ಸ್ನೇಹಿತರಿಗೆ ಬರಸಿಡಿಲು ಬಡಿದಂತಾಗಿದೆ. ಅಯ್ಯೋ… ದೇವ್ರೆ, ರಾತ್ರಿ 1.30ರ ತನಕ ಚೆನ್ನಾಗಿದ್ದವನು ದಿಢೀರ್ ಎಂದು ಹೇಗೆ ಸತ್ತ ಎಂದು ಕಂಗಾಲಾಗಿದ್ದಾರೆ. ಮೃತ ಮೇಘರಾಜ್ ರಾತ್ರಿ 1:30ರವರೆಗೆ ಚಾಟ್ ಮಾಡಿದ್ದಾನೆ. ನಾನು ಜನರಲ್ ವಾರ್ಡಿನಲ್ಲಿ ಇದ್ದೇನೆ. ನನಗೆ ಉಸಿರಾಟದ ಸಮಸ್ಯೆ ಇದೆ. ಐಸಿಯು ಬೆಡ್ ಬೇಕಿದೆ ಎಂದು ಸ್ನೇಹಿತರಿಗೆ ಮೆಸೇಜ್ ಮಾಡಿದ್ದಾನೆ.

    ಉಸಿರಾಟದ ಸಮಸ್ಯೆ ಇದೆ ಎಂದು ವೆಂಟಿಲೇಟರ್‍ಗಾಗಿ ಆಸ್ಪತ್ರೆಯವರಿಗೆ ಕೇಳಿಕೊಂಡಿದ್ದನಂತೆ. ಇಂದು ಬೆಳಗ್ಗೆ ಮೃತ ಮೇಘರಾಜ್ ಕುಟುಂಬಸ್ಥರು ಬೆಳಗ್ಗೆ ಆಸ್ಪತ್ರೆಯವರಿಗೆ ಕೇಳಿದಾಗ ರಾತ್ರಿ 12 ಗಂಟೆಗೆ ಐಸಿಯುಗೆ ಶಿಫ್ಟ್ ಮಾಡಿದ್ದೆವು, ಬೆಳಗ್ಗೆ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರಂತೆ. ಮೇಘರಾಜ್ 1.30ರವರೆಗೆ ಜನರಲ್ ವಾರ್ಡಿನಲ್ಲಿ ಇದ್ದೇನೆ ಎಂದು ಮೆಸೇಜ್ ಮಾಡಿದ್ದಾನೆ. ಆಸ್ಪತ್ರೆಯವರು ರಾತ್ರಿ 12 ಗಂಟೆಗೆ ಐಸಿಯುಗೆ ಶಿಫ್ಟ್ ಮಾಡಿದ್ದೇವೆ ಎಂದು ಹೇಳಿದ್ದಾರೆ. ಮೇಘರಾಜ್ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದರೂ ಆಸ್ಪತ್ರೆಯವರು ಜನರಲ್ ವಾರ್ಡಿನಲ್ಲೇ ಇಟ್ಟು ಚಿಕಿತ್ಸೆ ನೀಡಿ ಆತನ ಸಾವಿಗೆ ಕಾರಣರಾಗಿದ್ದಾರೆ ಎಂದು ಮೇಘರಾಜ್ ಸಂಬಂಧಿಕರು ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಆಸ್ಪತ್ರೆಯವರು ಆಗಲ್ಲ ಎಂದು ಹೇಳಿದ್ದರೆ, ನಾವು ಬೇರೆ ಕಡೆ ಶಿಫ್ಟ್ ಮಾಡುತ್ತಿದ್ದೆವು. ಆದರೆ, ಆಸ್ಪತ್ರೆಯವರು ಜನರಲ್ ವಾರ್ಡಿನಲ್ಲಿ ಇಟ್ಟು ನಿಗಾ ವಹಿಸಿ ಸೂಕ್ತ ಚಿಕಿತ್ಸೆ ನೀಡದಿರುವುದರಿಂದ ನಮ್ಮ ಹುಡುಗ ಸಾವನ್ನಪ್ಪಿದ್ದಾನೆ ಎಂದು ಮೃತನ ಪೋಷಕರು ಆಸ್ಪತ್ರೆ ಮುಂದೆ ಕಣ್ಣೀರಿಟ್ಟಿದ್ದಾರೆ. ಇತ್ತೀಚೆಗಷ್ಟೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಯುವಕ ಹಳ್ಳಿಯ ಅಭಿವೃದ್ಧಿ ಬಗ್ಗೆಯೂ ತೀವ್ರ ಕನಸು ಕಂಡಿದ್ದು, ಗ್ರಾಮದ ಯುವಕರ ಜೊತೆ ಅಭಿವೃದ್ಧಿಯ ಕುರಿತು ಚರ್ಚೆ ನಡೆಸುತ್ತಿದ್ದ. ಇದನ್ನೆಲ್ಲಾ ನೆನೆದ ಸ್ನೇಹಿತರು ಕೂಡ ಆತನ ಸಾವಿಗೆ ಕಣ್ಣೀರಿಟ್ಟಿದ್ದಾರೆ. ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ಹಾಗೂ ಶಿವಗಿರಿ ಸೇವಾ ಯುವಕರ ತಂಡ ಮೇಘರಾಜ್ ಸ್ವಗ್ರಾಮ ಬಸನಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

  • ಶೌಚಾಲಯದಲ್ಲಿ ಪಾರ್ಟಿ ಡ್ರಿಂಕ್ ತಯಾರಿಸಿ ಸ್ನೇಹಿತರಿಗೆ ಕೊಟ್ಟ ಮಹಿಳೆ

    ಶೌಚಾಲಯದಲ್ಲಿ ಪಾರ್ಟಿ ಡ್ರಿಂಕ್ ತಯಾರಿಸಿ ಸ್ನೇಹಿತರಿಗೆ ಕೊಟ್ಟ ಮಹಿಳೆ

    ಹಿಳೆಯೊಬ್ಬಳು ಟಾಯ್ಲೆಟ್ ಬೌಲ್‍ನಲ್ಲಿ ಪಾರ್ಟಿ ಡ್ರಿಂಕ್ ತಯಾರಿಸಿ ತನ್ನ ಸ್ನೇಹಿತರಿಗೆ ನೀಡಿರುವ ವೀಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ವೀಡಿಯೋದಲ್ಲಿ ಮಹಿಳೆ ಟಾಯ್ಲೆಟ್ ಬೌಲ್‍ಗೆ ಡ್ರೈ ಫ್ರೂಟ್ಸ್, ಕ್ಯಾಂಡಿ ಮತ್ತು ಐಸ್ ಕ್ರೀಂನನ್ನು ಹಾಕುತ್ತಾಳೆ. ಬಳಿಕ ಫ್ಲಾಶ್‍ನನ್ನು ತೆರೆದು ಸೋಡಾ ಮತ್ತು ಫಂಟಾ, ಸ್ಪ್ರೈಟ್ ಹಾಗೂ ಹಣ್ಣಿನ ರಸವನ್ನು ಬೆರೆಸುತ್ತಾಳೆ. ನಂತರ ಫ್ಲಶ್‍ನನ್ನು ಪ್ರೆಸ್ ಮಾಡಿದಾಗ ಪಾರ್ಟಿ ಡ್ರಿಂಕ್ ಟಾಯ್ಲಟ್ ಬೌಲ್‍ನಲ್ಲಿದ್ದ ಪದಾರ್ಥಗಳ ಜೊತೆ ಮಿಶ್ರಿತವಾಗುತ್ತದೆ. ನಂತರ ಆ ಪಾನೀಯವನ್ನು ಗ್ಲಾಸ್‍ಗೆ ಹಾಕಿ ತನ್ನ ಸ್ನೇಹಿತರಿಗೆ ನೀಡಲು ಮುಂದಾಗುತ್ತಾಳೆ.

    ಮಹಿಳೆ ತನ್ನ ಸ್ನೇಹಿತರಿಗೆ ಇದನ್ನು ತಯಾರಿಸುವ ಮುನ್ನ ತಾನು ಟಾಯ್ಲೆಟ್‍ನನ್ನು ಕ್ಲೀನ್ ಮಾಡಿದ ಬಗ್ಗೆ ಕೂಡ ವಿವರಿಸಿದ್ದಾಳೆ. ಇದನ್ನು ಕೇಳಿದ ಎಲ್ಲರೂ ಗ್ಲಾಸ್‍ನನ್ನು ತ್ಯಜಿಸುತ್ತಾರೆ. ಆದರೆ ಒಬ್ಬರು ಅದನ್ನು ತೆಗೆದುಕೊಂಡು ಹೋಗಿ ಟಾಯ್ಲೆಟ್ ಬೌಲ್ ಒಳಗೆ ಸುರಿಯುತ್ತಾರೆ.

    ಎರಡೂವರೆ ನಿಮಿಷವಿರುವ ಈ ವೀಡಿಯೋವನ್ನು ‘ದಿ ಅನ್ನಾ ಶೋ’ ಎಂಬ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇತರ ಸಾಮಾಜಿಕ ಮಾಧ್ಯಮ ವೈರಲ್ ಆಗುತ್ತಿದೆ. ಈವರೆಗೂ ಈ ವೀಡಿಯೋಗೆ 6.7 ಮಿಲಿಯನ್ ವಿವ್ಸ್ ಬಂದಿದ್ದು, ಸಾವಿರಕ್ಕೂ ರೀಟ್ವೀಟ್ ಹಾಗೂ ಕಾಮೆಂಟ್‍ಗಳು ಬಂದಿವೆ.

  • ಶ್ವಾನ ತರಲು ಹೋದವನು ಕೊಲೆಯಾದ

    ಶ್ವಾನ ತರಲು ಹೋದವನು ಕೊಲೆಯಾದ

    ಹಾಸನ: ಶ್ವಾನ ತರಲು ಹೋದ ಯುವಕನನ್ನು ಡ್ರ್ಯಾಗರ್ ನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ದೊಡ್ಡಮಂಡಿಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮನೋಜ್ (20) ಸ್ನೇಹಿತರಿಂದಲೇ ಕೊಲೆಯಾದ ಯುವಕ. ಎರಡು ಮೂರು ಕಡೆ ಚುಚ್ಚಿ ಕೊಲೆ ಮಾಡಿ ಮೋರಿ ಕೆಳಗೆ ಬಿಸಾಡಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಹಾಸನದ ವಿಜಯ ನಗರದಲ್ಲಿ ಈ ಘಟನೆ ಜರುಗಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಭಾನುವಾರ ಮನೆಯವರಿಗೆ ಶ್ವಾನ ತರಲೆಂದು ಹೋಗುತ್ತಿದ್ದೇನೆ ಎಂದು ಹೊರ ಹೋಗಿದ್ದ ಮನೋಜ್, ಇಂದು ಹಾಸನದ ಹೊರವಲಯ ವಿಜಯನಗರ ಬಡಾವಣೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

    ಪೆನ್ಷನ್ ಮೊಹಲ್ಲಾ ಪೊಲೀಸರು ಸದ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಪಾತಕರಿಗಾಗಿ ವಿಶೇಷ ತಂಡ ರಚನೆ ಮಾಡಿದ್ದಾರೆ.

  • ಸ್ನೇಹಿತನ ಸಾವಿನಿಂದ ನೊಂದು ಪ್ರಾಣ ಕಳೆದುಕೊಂಡ ಮೂವರು

    ಸ್ನೇಹಿತನ ಸಾವಿನಿಂದ ನೊಂದು ಪ್ರಾಣ ಕಳೆದುಕೊಂಡ ಮೂವರು

    ಡೆಹ್ರಾಡೂನ್: ಬೇಟೆಗೆಂದು ಕಾಡಿಗೆ ಹೋದ ವೇಳೆ ಗುಂಡಿಗೆ ಸ್ನೇಹಿತ ಬಿಲಿಯಾಗಿದ್ದನು. ಈ ವಿಚಾರವಾಗಿ ಮನನನೊಂದ ಮೂವರು ಸ್ನೇಹಿತರು ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರಾಖಂಡದ ನ್ಯೂತೆಹ್ರಿಯಲ್ಲಿ ನಡೆದಿದೆ.

    ಮೃತ ಯುವಕರನ್ನು ಸಂತೋಷ್, ಸೋಬನ್, ಪಂಕಜ್, ಅರ್ಜುನ್ ಎಂದು ಗುರುತಿಸಲಾಗಿದೆ. ಬೇಟೆಗೆ ಹೋದ ವೇಳೆ ಸಂತೋಷ್ ಗುಂಡು ತಾಗಿ ಮೃತಪಟ್ಟಿದ್ದನು. ಸ್ನೇಹಿತನ ಸಾವಿಗೆ ನಾವು ಕಾರಣ ಎಂದು ಈ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    7 ಮಂದಿ ಯುವಕರು ಸೇರಿ ಬೇಟೆಗೆ ಹೋಗಿದ್ದರು. ಅರಣ್ಯದಲ್ಲಿ ಗನ್ ಹಿಡಿದು ಓಡಾಡುತ್ತಿದ್ದರು. ರಾಜೀವ್ ಕಾಲು ಜಾರಿ ಬಿದ್ದಿದ್ದಾನೆ. ಈ ವೇಳೆ ಗನ್ ಟ್ರಿಗರ್ ಅದುಮಿ ಸಂತೋಷ್‍ನಿಗೆ ಗುಂಡು ತಾಗಿ ಸಾವನ್ನಪ್ಪಿದ್ದಾನೆ. ಈ ವೇಳೆ ಭಯಗೊಂಡ ರಾಜೀವ್ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ ಸಂತೋಷ್ ಜೊತೆಯಲ್ಲೇ ಇದ್ದ ಸ್ನೇಹಿತರು ಇವನ ಸಾವಿಗೆ ನಾವು ಕಾರಣ ಎಂದು ಮನನನೊಂದು ಸೋಬನ್, ಪಂಕಜ್, ಅರ್ಜುನ್ ಗ್ರಾಮಕ್ಕೆ ಮರಳಿದ ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಬೇಟೆಯಲ್ಲಿ ಸಂತೋಷ್ ಸಾವನ್ನಪ್ಪಿದ ವಿಚಾರವನ್ನು ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಹೋಗಿ ನೋಡಿದಾಗ ಸಂತೋಷ್ ಮೃತಪಟ್ಟರೆ, ಈತನ ಸ್ನೇಹಿತರು ವಿಷಸೇವಿಸಿದ್ದರು. ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸುತ್ತಿರುವಾಗಲೇ ಮೂವರು ಪ್ರಾಣ ಬಿಟ್ಟಿದ್ದಾರೆ.