Tag: friends

  • ಹತ್ಯೆ ಮಾಡಲು ಬಂದವನೇ ಭೀಕರವಾಗಿ ಕೊಲೆಯಾದ

    ಹತ್ಯೆ ಮಾಡಲು ಬಂದವನೇ ಭೀಕರವಾಗಿ ಕೊಲೆಯಾದ

    ಬೆಂಗಳೂರು: ಕೊಲೆ ಮಾಡಲು ಬಂದವನೇ ಭೀಕರವಾಗಿ ಕೊಲೆಯಾದ ಘಟನೆ ಬೆಂಗಳೂರಿನ (Bengaluru) ಕುಮಾರಸ್ವಾಮಿ ಲೇಔಟ್‌ನ ಕೋಣನಕುಂಟೆಯಲ್ಲಿ ನಡೆದಿದೆ.

    ಶರತ್‌ ಕೊಲೆಯಾದ ಯುವಕನಾಗಿದ್ದು, ಲೋಕೇಶ್‌ ಎಂಬಾತ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಶರತ್‌ ಹಾಗೂ ಲೋಕೇಶ್‌ ಒಂದು ಕಾಲದ ಆತ್ಮೀಯ ಸ್ನೇಹಿತರಾಗಿದ್ದವರು. (Friend) ಆದರೆ ಹಣಕಾಸಿನ (Money) ವಿಚಾರಕ್ಕೆ ಇಬ್ಬರ ನಡುವೆ ವೈಮನಸ್ಸು ಮೂಡಿದೆ. ಇದರಿಂದಾಗಿ ಇಬ್ಬರು ಬೇರೆ ಬೇರೆಯಾಗಿದ್ದರು.

    crime

    ಬೇರೆಯಾಗಿದ್ದರೂ ಕೂಡ ಇಬ್ಬರ ನಡುವೆ ಕೋಲ್ಡ್‌ ವಾರ್‌ ನಡೆಯುತ್ತಿತ್ತು. ಇದೇ ವೇಳೆ ನಿನ್ನೆ (ಶುಕ್ರವಾರ) ರಾತ್ರಿ ಶರತ್‌ ಕುಮಾರ್‌ ಹಾಗೂ ಲೋಕೇಶ್‌ ಪರಸ್ಪರ ಎದುರಾಗಿದ್ದರು. ಮೊದಲಿಗೆ ಸಣ್ಣದಾಗಿ ಶುರುವಾದ ಗಲಾಟೆ ನಂತರ ಜೋರಾಗಿದೆ. ಈ ವೇಳೆ ಗಲಾಟೆ ಅತಿರೇಕಕ್ಕೆ ಹೋಗಿ ಶರತ್‌ ಹಾಗೂ ಲೋಕೇಶ್‌ ಪರಸ್ಪರ ಹೊಡೆದಾಟಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಹೆಚ್‍ಡಿಕೆ ಲಾಕ್ ಮಾಡಲು ಸಿದ್ದರಾಮಯ್ಯ ದಾಳ- ಚನ್ನಪಟ್ಟಣದಿಂದ ರಮ್ಯಾ ಕಣಕ್ಕಿಳಿಸಲು ಚಿಂತನೆ

    ಈ ವೇಳೆ ಶರತ್ ಕುಮಾರ್ ಚಾಕು ತಗೊಂಡು ಲೋಕೇಶ್ ಹತ್ಯೆಗೆ ಮುಂದಾಗಿದ್ದ. ಆದರೆ ಈ ಗಲಾಟೆಯಲ್ಲಿ ಲೋಕೇಶ್‌ನೇ ಶರತ್‌ನ ಕೈಯಲ್ಲಿದ್ದ ಚಾಕು ಕಸಿದುಕೊಂಡು ಶರತ್ ಕುಮಾರ್‌ಗೆ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ‌. ಸದ್ಯ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಡಿವೈಡರ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರ ದುರ್ಮರಣ- 8 ಮೊಬೈಲ್‍ಗಳು ಪತ್ತೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಾಲಗಾರರ ಕಿರುಕುಳ – ಸೆಲ್ಫಿ ವೀಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ

    ಸಾಲಗಾರರ ಕಿರುಕುಳ – ಸೆಲ್ಫಿ ವೀಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ

    ರಾಮನಗರ: ಸಾಲಗಾರರ ಕಿರುಕುಳ ತಾಳಲಾರದೆ ಸೆಲ್ಫಿ ವೀಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಬೆಂಗಳೂರಿನ (Bengaluru) ವಾಸುದೇವನಪುರದಲ್ಲಿ ಹೇರ್ ಸಲೂನ್ ನಡೆಸುತ್ತಿದ್ದ ಶಿವರಾಜ್ (33) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಫೆ.3ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸ್ನೇಹಿತರಿಗೆ (Friends) ಸಾಲಕ್ಕೆ ಜಾಮೀನು (Land) ನೀಡಿದ್ದ ಶಿವರಾಜ್‌ಗೆ ಪ್ರತಿ ವಾರ ಬಡ್ಡಿ ನೀಡುವಂತೆ ಸಾಲಗಾರರು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಕಂಡವರ ಎಂಜಲು ಚಪ್ಪರಿಸುವ ಜಮೀರ್‌ಗೆ ಮುಸ್ಲಿಂ ಸಮುದಾಯದ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ?: JDS

    crime

    ಸ್ನೇಹಿತರಿಗೆ ಮಧ್ಯಸ್ಥಿಕೆ ವಹಿಸಿ ಹಣ ಕೊಡಿಸಿದ್ದ ಶಿವರಾಜ್‌ಗೆ ರೇಣುಕಾರಾಧ್ಯ‌, ಧನು, ವೆಂಕಟೇಶ್ ಎಂಬುವವರು ಮೀಟರ್ ಬಡ್ಡಿ ಕಟ್ಟಿಲ್ಲವೆಂದು ಬೈಕ್ (Bike) ಕಸಿದುಕೊಂಡಿದ್ದರು. ಇದರಿಂದ ಮಾನಸಿಕ ಹಿಂಸೆ ಆಗುತ್ತಿದೆ ಎಂದು ಸೆಲ್ಫಿ ವೀಡಿಯೋ ಮಾಡಿ ಶಿವರಾಜ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಮೃತ ಶಿವರಾಜ್ ಪತ್ನಿ ಕಗ್ಗಲೀಪುರ ಪೊಲೀಸ್‌ ಠಾಣೆಗೆ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: 8 ರಿಂದ 10 ಬಿಜೆಪಿ ಸಂಸದರು ಚುನಾವಣೆಗೆ ನಿಲ್ಲಲ್ಲ ಎನ್ನುತ್ತಿದ್ದಾರೆ: ಡಿಕೆಶಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸ್ನೇಹಿತರಿಗೆ 1 ಲಕ್ಷ ರೂ. ಸಾಲ ಕೊಡಿಸಲು ಮಧ್ಯಸ್ಥಿಕೆ- ಕಿರುಕುಳದಿಂದ ಮಹಿಳೆ ಆತ್ಮಹತ್ಯೆ

    ಸ್ನೇಹಿತರಿಗೆ 1 ಲಕ್ಷ ರೂ. ಸಾಲ ಕೊಡಿಸಲು ಮಧ್ಯಸ್ಥಿಕೆ- ಕಿರುಕುಳದಿಂದ ಮಹಿಳೆ ಆತ್ಮಹತ್ಯೆ

    ಕೋಲಾರ: ಸ್ನೇಹಿತ (Friends) ರಿಗೆ 1 ಲಕ್ಷ ರೂಪಾಯಿ ಸಾಲ ಕೊಡಿಸಲು ಮಧ್ಯಸ್ಥಿಕೆ ವಹಿಸಲು ಹೋಗಿ ಸಾಲಗಾರರ ಕಿರುಕುಳದಿಂದ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಅತ್ತಿಗಿರಿಕೊಪ್ಪ ಗ್ರಾಮದಲ್ಲಿ ನಡೆದಿದೆ.

    ಪದ್ಮಾ (35) ಆತ್ಮಹತ್ಯೆಗೆ ಶರಣಾದ ಗೃಹಿಣಿ. ನನ್ನ ಸಾವಿಗೆ ಸ್ನೇಹಿತರೇ ಕಾರಣ ಎಂದು ವೀಡಿಯೋ ಮಾಡಿಟ್ಟು ಮಹಿಳೆ ವಿಷ ಸೇವನೆ ಮಾಡಿದ್ದಾರೆ.

    ಘಟನೆ ವಿವರ: ಪದ್ಮಾ ಅವರು ದೇಶಿಹಳ್ಳಿಯ ವರಲಕ್ಷ್ಮಿ ಎಂಬವರಿಂದ ಸಾಲವನ್ನು ಪಡೆದು ತನ್ನ ಸ್ನೇಹಿತರಾದ ಅತ್ತಿಗಿರಿ ಗ್ರಾಮದ ಭಾಗ್ಯ ಮತ್ತು ಸಮ್ರತಿಗೆ ಸಾಲವಾಗಿ ಹಣ ಕೊಡಿಸಿದ್ದರು. ಆದರೆ ಇತ್ತೀಚೆಗೆ ಸಾಲದ ಹಣ ಹಾಗೂ ಬಡ್ಡಿ ವಾಪಸ್ ಮಾಡದ ಹಿನ್ನೆಲೆ ಕಿರುಕುಳ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಪದ್ಮಾ ಸಾವಿನ ದಾರಿ ಹಿಡಿದಿದ್ದಾರೆ.

    ವಿಷ ಸೇವಿಸಿ ಆತ್ಮಹತ್ಯೆಗೂ ಮುನ್ನ ವೀಡಿಯೋ ಮಾಡಿರುವ ಪದ್ಮಾ, ನನ್ನ ಸಾವಿಗೆ ಸ್ನೇಹಿತರಾದ ಭಾಗ್ಯ, ಸಮ್ರತಿ, ಪ್ರೇಮ ಇವರು ಮೂರು ಜನರೇ ಕಾರಣ. ಸ್ನೇಹಿತರೆಂದು ನಂಬಿಕೆಯಿಟ್ಟು ಸಾಲ ಕೊಡಿಸಿದ್ದಕ್ಕೆ ನನ್ನ ತಲೆ ಮೇಲೆ ಹಾಕಿದ್ರು. ಪಾಪ ನನ್ನ ಮಕ್ಕಳು, ಗಂಡ ಅಮಾಯಕರು. ನಾನು ಸತ್ರೆ ನನ್ನ ಸ್ನೇಹಿತರೇ ಕಾರಣ ಎಂದು ವೀಡಿಯೋದಲ್ಲಿ ಪದ್ಮಾ ತಿಳಿಸಿದ್ದಾರೆ.

    ಇದೀಗ ಸಾಲ ಪಡೆದಿದ್ದ ಭಾಗ್ಯ, ಸಮ್ರತಿ, ಪ್ರೇಮಾ ತಲೆ ಮರೆಸಿಕೊಂಡಿದ್ದಾರೆ. ಕಳೆದ 6 ತಿಂಗಳಲ್ಲಿ ಅತ್ತಿಗಿರಿಕೊಪ್ಪ ಗ್ರಾಮದಲ್ಲಿ ಇದು 2 ನೇ ಪ್ರಕರಣವಗಿದೆ. ಸಾಲ ಪಡೆದಿದ್ದವರು ಹಾಗೂ ಕೊಟ್ಟವರ ವಿರುದ್ಧ ಪ್ರಕರಣ ದಾಖಲಾಗಿದೆ.

    ಬೂದಿಕೋಟೆ ಪೊಲೀಸ್ ಠಾಣೆ (Budikote Police Station) ಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸ್ನೇಹಿತರನ್ನು ಮೆಚ್ಚಿಸಲು ಪಾರ್ಟಿಗೆ ಗನ್ ತೆಗೆದುಕೊಂಡು ಹೋದ ವ್ಯಕ್ತಿ ಪೊಲೀಸರಿಗೆ ಅತಿಥಿಯಾದ

    ಸ್ನೇಹಿತರನ್ನು ಮೆಚ್ಚಿಸಲು ಪಾರ್ಟಿಗೆ ಗನ್ ತೆಗೆದುಕೊಂಡು ಹೋದ ವ್ಯಕ್ತಿ ಪೊಲೀಸರಿಗೆ ಅತಿಥಿಯಾದ

    ನವದೆಹಲಿ: ಸ್ನೇಹಿತರನ್ನು (Friends) ಮೆಚ್ಚಿಸಲು ವ್ಯಕ್ತಿಯೊಬ್ಬ ತನ್ನ ತಂದೆಯ (Father) ಲೋಡ್ ಮಾಡಿದ್ದ ಗನ್ ಅನ್ನು ಪಾರ್ಟಿಗೆ (Party) ತೆಗೆದುಕೊಂಡು ಹೋಗಿ ಪೊಲೀಸರಿಗೆ ಅತಿಥಿಯಾದ ಘಟನೆ ಉತ್ತರ ದೆಹಲಿಯ ರೂಪ್ ನಗರ ಪ್ರದೇಶದಲ್ಲಿ ನಡೆದಿದೆ.

    ಆರೋಪಿಯನ್ನು ಮೌಜ್‍ಪುರ ನಿವಾಸಿ ಹರ್ಷ (22) ಎಂದು ಗುರುತಿಸಲಾಗಿದೆ. ಹರ್ಷ ತನ್ನ ತಂದೆಯ ಬಳಿ ಇದ್ದ ಗನ್ ಅನ್ನು ಕದ್ದು ತನ್ನ ಸ್ನೇಹಿತರನ್ನು ಮೆಚ್ಚಿಸಲು ಅದರೊಂದಿಗೆ ಪಾರ್ಟಿಗೆ ಹೋಗಿದ್ದ. ಈ ವೇಳೆ ಹರ್ಷ ಗನ್ ಅನ್ನು ಹಿಡಿದುಕೊಂಡು ಓಡಾಡುತ್ತಿರುವುದನ್ನು ಕೆಲವರು ಗಮನಿಸಿ, ಪೊಲೀಸರಿಗೆ ತಿಳಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹರ್ಷನನ್ನು ಬಂಧಿಸಿದ್ದಾರೆ. ಆತನ ಬಳಿಯಿದ್ದ ಗನ್ ಅನ್ನು ವಶಪಡಿಸಿಕೊಂಡಿದ್ದಾರೆ. ಹರ್ಷ ತನ್ನ ಮನೆಯಲ್ಲಿದ್ದ ಗನ್ ಕದ್ದು ತನ್ನ ಸ್ನೇಹಿತರೊಂದಿಗೆ ಶಕ್ತಿ ನಗರದಲ್ಲಿ ಪಾರ್ಟಿಗೆ ಬಂದಿದ್ದ. ಅದಾದ ಬಳಿಕ ಅವರು ಮನೆಗೆ ತೆರಳುತ್ತಿದ್ದಾಗ ಕೆಲವರು ಗಮನಿಸಿ ತಿಳಿಸಿದ್ದಾರೆ ಎಂದು ಎಂದು ಡಿಸಿಪಿ ಹೇಳಿದರು. ಇದನ್ನೂ ಓದಿ: ಇನ್ಮುಂದೆ ಅಫ್ಘಾನ್‌ ವಿದ್ಯಾರ್ಥಿನಿಯರಿಗೆ ವಿಶ್ವವಿದ್ಯಾನಿಲಯ ಶಿಕ್ಷಣಕ್ಕೂ ಅವಕಾಶವಿಲ್ಲ

    ಹರ್ಷನ ತಂದೆ ಸಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಆತ ಗನ್ ಅನ್ನು ಇಟ್ಟುಕೊಂಡಿದ್ದ. ಘಟನೆಗೆ ಸಂಬಂಧಿಸಿ ಹರ್ಷನ ವಿರುದ್ಧ ಜಾಫ್ರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. (Arrest) ಇದನ್ನೂ ಓದಿ: ಆಸ್ಪತ್ರೆಗೆ ಹೋಗೋ ದಾರಿಯಲ್ಲಿ ಗಾಯಾಳುಗೆ ಮದ್ಯ ನೀಡಿ, ತಾನೂ ಕುಡಿದ ಅಂಬುಲೆನ್ಸ್ ಚಾಲಕ

    Live Tv
    [brid partner=56869869 player=32851 video=960834 autoplay=true]

  • ಸ್ನೇಹಿತರ ಜೊತೆ ಹೊರಗಡೆ ಹೋದ ಯುವಕ ಶವವಾಗಿ ಪತ್ತೆ

    ಸ್ನೇಹಿತರ ಜೊತೆ ಹೊರಗಡೆ ಹೋದ ಯುವಕ ಶವವಾಗಿ ಪತ್ತೆ

    ರಾಯಚೂರು: ಯುವಕನನ್ನು (Young Man) ಕೊಲೆ ಮಾಡಿ ನಡುರಸ್ತೆಯಲ್ಲಿ ಬೀಸಾಡಿ ಆರೋಪಿಗಳು ಪರಾರಿಯಾಗಿರುವ ಘಟನೆ ರಾಯಚೂರು (Raichur) ತಾಲೂಕಿನ ಮಲಿಯಾಬಾದ್ ಬಳಿ ನಡೆದಿದೆ.

    ಹೊಸಮಲಿಯಾಬಾದ್ ಗ್ರಾಮದ ತಿಮ್ಮಪ್ಪ (32) ಕೊಲೆಯಾದ ವ್ಯಕ್ತಿ. ಹಮಾಲಿ ಕೆಲಸ ಮಾಡಿಕೊಂಡಿದ್ದ ತಿಮ್ಮಪ್ಪ ರಾಯಚೂರಿನಿಂದ ಮಲಿಯಾಬಾದ್‌ಗೆ ತೆರಳುವ ರಸ್ತೆ ಮಧ್ಯೆದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ರಾತ್ರಿ ಸ್ನೇಹಿತರ (Friends) ಜೊತೆ ಹೊರಗಡೆ ಹೋದವನು ಬೆಳಗ್ಗೆ ಹೆಣವಾಗಿ ಪತ್ತೆಯಾಗಿದ್ದಾನೆ. ಕೊಲೆ ಮಾಡಿದವರೇ ಮೃತ ದೇಹವನ್ನು ರಸ್ತೆಯಲ್ಲಿ ಬೀಸಾಡಿ ಹೋಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ ಮೃತನ ಮೈಮೇಲೆ ಯಾವುದೇ ಹಲ್ಲೆ, ಗಾಯದ ಗುರುತುಗಳು ಕಂಡುಬಂದಿಲ್ಲ. ಇದನ್ನೂ ಓದಿ: ಸಿದ್ರಾಮುಲ್ಲಾ ಖಾನ್ ಸಿಎಂ ಆದ್ರೆ ಹಿಂದೂಗಳ ಹತ್ಯೆ ಆಗುತ್ತೆ: ಸಿ.ಟಿ ರವಿ

    ಘಟನೆಗೆ ಸಂಬಂಧಿಸಿ ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಕೊಲೆ ಆರೋಪಿಗಳ ಪತ್ತೆಗೆ ಪೊಲೀಸರ ವಿಶೇಷ ತಂಡ ರಚಿಸಲಾಗಿದ್ದು, ತನಿಖೆ ನಡೆದಿದೆ. ಇದನ್ನೂ ಓದಿ: 2023ಕ್ಕೆ 15 ವರ್ಷ ಪೂರೈಸಿದ ವಾಹನಗಳು ಗುಜರಿಗೆ: ನಿತಿನ್ ಗಡ್ಕರಿ

    Live Tv
    [brid partner=56869869 player=32851 video=960834 autoplay=true]

  • ಆರ್ಕೇಸ್ಟ್ರಾದಲ್ಲಿ ಫ್ಲೆಕ್ಸ್ ಹಾಕಿಸೋ ವಿಚಾರಕ್ಕೆ ಜಗಳ ಕೊಲೆಯಲ್ಲಿ ಅಂತ್ಯ

    ಆರ್ಕೇಸ್ಟ್ರಾದಲ್ಲಿ ಫ್ಲೆಕ್ಸ್ ಹಾಕಿಸೋ ವಿಚಾರಕ್ಕೆ ಜಗಳ ಕೊಲೆಯಲ್ಲಿ ಅಂತ್ಯ

    ಮಂಡ್ಯ: ಆರ್ಕೇಸ್ಟ್ರಾದಲ್ಲಿ ಫ್ಲೆಕ್ಸ್ ಹಾಕಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ನಡೆದ ಜಗಳದಲ್ಲಿ ಯುವಕನನ್ನು ಆತನ ಸ್ನೇಹಿತರೇ ಹೊಡೆದು ಕೊಲೆ ಮಾಡಿರುವ ಘಟನೆ ಮಂಡ್ಯದಲ್ಲಿ (Mandya) ನಡೆದಿದೆ.

    ಮೃತ ಯುವಕನನ್ನು ಅರುಣ್(22) ಎಂದು ಗುರುತಿಸಲಾಗಿದ್ದು, ಈತ ತನ್ನ 18ನೇ ವಯಸ್ಸಿನಲ್ಲೇ ಪೊಲೀಸ್‍ರ ರೌಡಿಶೀಟರ್‌ನ ಲಸ್ಟ್‌ನಲ್ಲಿ ಸೇರಿಕೊಂಡಿದ್ದ. ಆಗಾಗ ಊರಿನಲ್ಲಿ ನಡೆಯುತ್ತಿದ್ದ ಸಣ್ಣ-ಪುಟ್ಟ ಗಲಾಟೆಯಲ್ಲಿ ಭಾಗಿಯಾಗುತ್ತಿದ್ದ. ಇದೀಗ ಜೊತೆಯಲ್ಲಿ ಇದ್ದವರೇ ಆತನನ್ನು ಹೊಡೆದು ಕೊಲೆ ಗೈದಿದ್ದಾರೆ. ಇದನ್ನೂ ಓದಿ: ಮಹಾನಗರ ಪಾಲಿಕೆ ಚುನಾವಣೆ ಟಿಕೆಟ್ ಮಾರಾಟ – ಆಪ್ ವಿರುದ್ಧ ಬಿಜೆಪಿ ಗಂಭೀರ ಆರೋಪ

    ಅರುಣ್ ಕೊಲೆಗೆ ಇದೇ ತಿಂಗಳ 19 ರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆದ ಆರ್ಕೇಸ್ಟ್ರಾವೇ ಕಾರಣ. ಅರುಣ್ ಹಾಗೂ ಆತನ ಸ್ನೇಹಿತರು ಈ ಹಿಂದೆ ಶಾಸಕ ಡಿಸಿ ತಮ್ಮಣ್ಣ ಅವರ ಬೆಂಬಲಿಗರಾಗಿದ್ದರು. ಆದರೆ ಕನ್ನಡ ರಾಜ್ಯೋತ್ಸವದ ಆರ್ಕೇಸ್ಟ್ರಾದಲ್ಲಿ ದೊಡ್ಡರಸಿನಕೆರೆ ಗ್ರಾಮದಲ್ಲಿ ಸಮಾಜ ಸೇವಕ ಕದಲೂರು ಉದಯ್ ಅವರ ಫ್ಲೆಕ್ಸ್ ಮಾತ್ರ ಹಾಕಿದ್ದಾರೆ. ಈ ಬಗ್ಗೆ ಅರುಣ್ ಸ್ನೇಹಿತರೊಂದಿಗೆ ಇಷ್ಟು ದಿನ ನೀವು ತಮ್ಮಣ್ಣ ಜೊತೆಗೆ ಇದ್ದು ಈಗ ಉದಯ್ ಫೋಟೋ ಹಾಕಿಸಿದ್ದೀರಾ ಎಂದು ಮಾತನಾಡಿದ್ದಾನೆ. ಇದೇ ಜಗಳ ನಡೆದು ಅರುಣ್‍ನನ್ನು ದೊಡ್ಡರಸಿನಕೆರೆ ಗ್ರಾಮದ ದೊಡ್ಡಯ್ಯ, ದೇವರಾಜು, ಅಭಿ, ಗಜ, ಬೆಳ್ಳಾ ರಾಘುಳಿ ಸೇರಿದಂತೆ 8 ಮಂದಿ ನನ್ನ ಮಗನನ್ನು ಹೊಡೆದು ಕೊಲೆ ಮಾಡಿದ್ದಾರೆ ಎಂದು ಅರಣ್ ತಂದೆ ರಮೇಶ್ ಆರೋಪಿಸಿದ್ದಾರೆ.

    ಭಾನುವಾರ ಸಂಜೆ ಅರುಣ್ ಮೇಲೆ ದೊಡ್ಡರಸಿನಕೆರೆ ಗ್ರಾಮದ ಸರ್ಕಲ್‍ನಲ್ಲಿ ನಾಲ್ವರು ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಬಳಿಕ ಗ್ರಾಮಸ್ಥರು ಗಲಾಟೆ ಬಿಡಿಸಿ ಕಳುಹಿಸಿದ್ದಾರೆ. ನಂತರ ಅರುಣ್‍ನನ್ನು ಕೆ.ಎಂ.ದೊಡ್ಡಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ದೇವರಹಳ್ಳಿ ಬಳಿಕ ಮತ್ತೆ ಅಡ್ಡಗಟ್ಟಿ ಹಲ್ಲೆ ಮಾಡಲಾಗಿದೆ. ದೊಣ್ಣೆ, ಕಲ್ಲಿನಿಂದ ಹಲ್ಲೆ ಮಾಡಿರುವ ಕಾರಣ ಅರುಣ್ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾನೆ. ನಂತರ ಅರುಣ್‍ನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅರುಣ್ ಸಾವನ್ನಪ್ಪಿದ್ದಾನೆ. ಸದ್ಯ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆಎಂ ದೊಡ್ಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇನ್ನೂ ಅರುಣ್ ಮೇಲೆ ಹಲ್ಲೆ ಮಾಡಿದವರ ಮನೆ ಮೇಲೆ ಅರುಣ್ ಸ್ನೇಹಿತರು ಕಲ್ಲು ಎಸೆದು ಕಿಟಕಿ ಗಾಜುಗಳನ್ನು ಪುಡಿಗೊಳಿಸಿದ್ದಾರೆ.

    ಒಟ್ಟಾರೆ ಮೀಸೆ ಚಿಗುರೋ ವಯಸ್ಸಿನಲ್ಲಿ ರೌಡಿಶೀಟರ್ ಆಗಿದ್ದವ, ಇದೀಗ ಆರ್ಕೇಸ್ಟ್ರಾದ ಫ್ಲೆಕ್ಸ್‌ ವಿಚಾರಕ್ಕೆ ಬಾಳಿ ಬದುಕಬೇಕಾದವ ಹೆಣವಾಗಿ ಮಲಗಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಬ್ಲಾಸ್ಟ್- ಜಾಗತಿಕ ಉಗ್ರ ಸಂಘಟನೆಯಿಂದ ಪ್ರಭಾವಿತನಾಗಿದ್ದ ಶಾರೀಕ್: ADGP

    Live Tv
    [brid partner=56869869 player=32851 video=960834 autoplay=true]

  • ಮನೆಯಲ್ಲಿ ಮಲಗಿದ್ದವನನ್ನ ಕರೆತಂದು ಕೊಂದ ಗೆಳೆಯರು!

    ಮನೆಯಲ್ಲಿ ಮಲಗಿದ್ದವನನ್ನ ಕರೆತಂದು ಕೊಂದ ಗೆಳೆಯರು!

    ಚಿಕ್ಕಮಗಳೂರು: ಹಣಕಾಸಿನ ವಿಚಾರ (Financial Issue0 ಕ್ಕೆ ಸ್ನೇಹಿತರೇ ಸ್ನೇಹಿತನನ್ನ ಕೊಲೆ ಮಾಡಿರುವ ಘಟನೆ ಜಿಲ್ಲೆಯ ತರೀಕೆರೆ ಪಟ್ಟಣದ ಎಪಿಎಂಸಿ ಯಾರ್ಡ್ (APMC Yard) ನಲ್ಲಿ ನಡೆದಿದೆ.

    ಮೃತನನ್ನ 30 ವರ್ಷದ ಓಂಕಾರ್ ಎಂದು ಗುರುತಿಸಲಾಗಿದೆ. ಕೊಲೆ ಸಂಬಂಧ ಧನರಾಜ್, ವಿಜಯ್ ಹಾಗೂ ಸುನಿಲ್ ಎಂಬ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಹೇಳದೇ ಎಲ್ಲೋ ಹೋಗಿದ್ದಾಳೆ – ಮಗಳನ್ನೇ ಕೊಂದು ಟ್ರಾಲಿ ಬ್ಯಾಗ್‍ನಲ್ಲಿ ಶವ ತುಂಬಿ ಎಸೆದ ತಂದೆ

    ತಲೆಮರೆಸಿಕೊಂಡಿರುವ ಮತ್ತೊಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ನಿನ್ನೆ ರಾತ್ರಿ 10.30ರ ಸುಮಾರಿಗೆ ಮನೆಯಲ್ಲಿದ್ದ ಓಂಕಾರನನ್ನು ಸ್ನೇಹಿತರೇ ಕರೆದುಕೊಂಡು ಬಂದಿದ್ದರು. ಎಪಿಎಂಸಿ ಯಾರ್ಡ್ ನಲ್ಲಿ ಮಾತುಕತೆ ಮಾಡುವ ವೇಳೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

    ಆರೋಪಿಗಳು ಹಾಗೂ ಕೊಲೆಯಾದ ಓಂಕಾರ ಎಲ್ಲರೂ ಸ್ನೇಹಿತರಾಗಿದ್ದು ಫೈನಾನ್ಸ್ ವ್ಯವಹಾರ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಹಣಕಾಸಿನ ವಿಚಾರದಲ್ಲಿ ಈ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ. ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಜೊತೆಯಲ್ಲೇ ಪಾರ್ಟಿ – ಸ್ನೇಹಿತರಿಂದಲೇ ಯುವಕನ ಬರ್ಬರ ಹತ್ಯೆ?

    ಜೊತೆಯಲ್ಲೇ ಪಾರ್ಟಿ – ಸ್ನೇಹಿತರಿಂದಲೇ ಯುವಕನ ಬರ್ಬರ ಹತ್ಯೆ?

    ಬೆಂಗಳೂರು/ನೆಲಮಂಗಲ: ಜೊತೆಯಲ್ಲಿಯೇ ಪಾರ್ಟಿ ಮಾಡಿ ಯುವಕನೋರ್ವನನ್ನು ಸ್ನೇಹಿತರೇ ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರು (Bengaluru) ಹೊರವಲಯ ಉತ್ತರ ತಾಲೂಕಿನ ಮಾಗಡಿ (Magadi) ರಸ್ತೆಯ ಮಾಚೋಹಳ್ಳಿಯಲ್ಲಿ (Machohalli) ನಡೆದಿದೆ.

    ಮೃತ ದುರ್ದೈವಿಯನ್ನು ತಮಿಳುನಾಡು (Tamilnadu) ಮೂಲದ ನಟರಾಜು (35) ಎಂದು ಗುರುತಿಸಲಾಗಿದೆ. ಮಹದೇವ್ ಎಂಬವರ ಬಿಲ್ಡಿಂಗ್ ಮೇಲೆ ನಟರಾಜು ಹತ್ಯೆಗೈಯಲಾಗಿದೆ. ಮೃತ ನಟರಾಜು ಇತ್ತೀಚಿಗೆ ಅಷ್ಟೇ ತಮಿಳುನಾಡಿನಿಂದ ಬೆಂಗಳೂರಿಗೆ ಉದ್ಯೋಗ ಹರಸಿ ಬಂದಿದ್ದರು ಎನ್ನಲಾಗುತ್ತಿದೆ. ಲಾರಿ ಪಾರ್ಕಿಂಗ್‍ನಲ್ಲಿ ಕ್ಯಾರಿಯರ್ ಕೆಲಸ ಮಾಡಿಕೊಂಡಿದ್ದು ರಾತ್ರಿ ಸ್ನೇಹಿತರೊಂದಿಗೆ ನಟರಾಜು ಪಾರ್ಟಿ ಮಾಡಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿ ಅವರನ್ನು ಸ್ನೇಹಿತರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಕೇಸರಿ ರಾಜಕೀಯ ಬಣ್ಣವಾಗೋದು ಬೇಡ – ಸರ್ಕಾರಕ್ಕೆ ಶ್ರೀನಿವಾಸ್ ಪ್ರಸಾದ್ ಸಲಹೆ

    ಮೃತದೇಹವನ್ನು ಕಂಡ ಜನ ಮಾದನಾಯಕನಹಳ್ಳಿ (Madanayakanahalli) ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ಕೂಡಲೇ ನೆಲಮಂಗಲ ಉಪವಿಭಾಗ ಡಿವೈಎಸ್‍ಪಿ. ಕೆ.ಸಿ.ಗೌತಮ್ ಹಾಗೂ ಮಾದನಾಯಕನಹಳ್ಳಿ ಇನ್ಸ್‌ಪೆಕ್ಟರ್ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಟಿಕೆಟ್‍ಗಾಗಿ ಕಾಂಗ್ರೆಸ್‍ನಲ್ಲಿ ಬಣ ಬಡಿದಾಟ – ಪ್ರಮುಖ ಕ್ಷೇತ್ರಗಳಿಗೆ ಸಿದ್ದು, ಡಿಕೆ ಬೆಂಬಲಿಗರ ಅರ್ಜಿ

    Live Tv
    [brid partner=56869869 player=32851 video=960834 autoplay=true]

  • ಭಾರತೀಯ ವರನ ಮದುವೆಗೆ ಸೀರೆಯುಟ್ಟು ಮಿಂಚಿದ ಇಬ್ಬರು ಪುರುಷ ಸ್ನೇಹಿತರು

    ಭಾರತೀಯ ವರನ ಮದುವೆಗೆ ಸೀರೆಯುಟ್ಟು ಮಿಂಚಿದ ಇಬ್ಬರು ಪುರುಷ ಸ್ನೇಹಿತರು

    ಚಿಕಾಗೋ: ಭಾರತೀಯ (India) ಸ್ನೇಹಿತನ ಮದುವೆಗೆ ವಿದೇಶಿ ಸ್ನೇಹಿತರು (Friends) ಸೀರೆಯುಟ್ಟು (Saree) ಮದುವೆಗೆ (Wedding) ಬಂದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಸಾಮಾನ್ಯವಾಗಿ ಪುರುಷರ ಉಡುಪುಗಳನ್ನು ಮಹಿಳೆಯರು ಹಾಕಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿದೆ. ಆದರೆ ಮಹಿಳೆಯರ ಉಡುಗೆಯಾದ ಅದರಲ್ಲೂ ಸೀರೆ, ಲೆಹಂಗಾದಂತಹ ಉಡುಗೆಗಳನ್ನು ಪುರುಷರು ಧರಿಸುವುದಿಲ್ಲ. ಆದರೆ ಅಮೆರಿಕದ ಚಿಕಾಗೊದಲ್ಲಿ ನಡೆದ ಭಾರತೀಯ ಜೋಡಿಗಳ ಮದುವೆಯಲ್ಲಿ ವರನ (Groom) ಇಬ್ಬರು ವಿದೇಶಿ ಪುರುಷ ಸ್ನೇಹಿತರು ಸೀರೆ ಧರಿಸಿ ಬಂದಿದ್ದಾರೆ.

    ಇದೀಗ ಈ ವೀಡಿಯೋವನ್ನು ಚಿಕಾಗೋ ಮೂಲದ ವೆಡ್ಡಿಂಗ್ ವೀಡಿಯೋಗ್ರಾಫರ್‌ಗಳಾದ ಪ್ಯಾರಾಗಾನ್‍ಫಿಲ್ಮ್ಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಇಬ್ಬರು ಸ್ನೇಹಿತರು ತಮ್ಮ ಸ್ನೇಹಿತನ ಮದುವೆಗೆ ಸೀರೆಯುಟ್ಟು ಸಿದ್ಧರಾಗುತ್ತಿರುತ್ತಾರೆ. ಇದಕ್ಕೆ ಮಹಿಳೆಯೊಬ್ಬರು ಸಹಾಯ ಮಾಡುತ್ತಾರೆ. ಸೀರೆಯನ್ನುಟ್ಟು ಸಿದ್ಧರಾದ ನಂತರ ಅವರು ಹಣೆಗೂ ಬಿಂದಿಯನ್ನು ಇಡುತ್ತಾರೆ. ಅದಾದ ನಂತರ ಅವರು ಸೀರೆಯಲ್ಲೇ ವರನಿರುವ ಬಳಿಗೆ ಬರುತ್ತಾರೆ. ಜುಬ್ಬಾ ಧರಿಸಿಕೊಂಡಿರುವ ವರನು ಆ ಇಬ್ಬರು ಸ್ನೇಹಿತರನ್ನು ನೋಡಿ ನಗುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಮುಲ್ ಬಟರ್‌ಗೆ ಕೊರತೆ

    ಈ ವೀಡಿಯೋಕ್ಕೆ ಅನೇಕರು ಕಾಮೆಂಟ್ ಮಾಡಿದ್ದು, ಅನೇಕ ನೆಟ್ಟಿಗರು ಸಕಾರಾತ್ಮಕವಾಗಿ ಕಾಮೆಂಟ್ ಮಾಡಿದ್ದಾರೆ. ಅದರಲ್ಲಿ ಒಬ್ಬರು, ವರನ ಸಂಸ್ಕೃತಿಯನ್ನು ಗೌರವಿಸಿದ್ದಕ್ಕಾಗಿ ಇಬ್ಬರು ಸ್ನೇಹಿತರನ್ನು ಶ್ಲಾಘಿಸಿದ್ದಾರೆ. ಮತ್ತೊಬ್ಬರು ಇದಕ್ಕೆ ಪರಮಾಶ್ಚರ್ಯ ಎಂದು ಬರೆದಿದ್ದಾರೆ. ಇದನ್ನೂ ಓದಿ: ಬಾವಿಗೆ ಬಿದ್ದ ಒಂಟಿ ಸಲಗ – ಮೇಲಕ್ಕೆತ್ತಲು ಅರಣ್ಯಾಧಿಕಾರಿಗಳಿಂದ ಬಿಗ್ ಸರ್ಕಸ್

    Live Tv
    [brid partner=56869869 player=32851 video=960834 autoplay=true]

  • ಗಂಗೆ ಮುಟ್ಟಿ ಆಣೆ ಮಾಡಲು ಹೋದವರು ನೀರುಪಾಲು

    ಗಂಗೆ ಮುಟ್ಟಿ ಆಣೆ ಮಾಡಲು ಹೋದವರು ನೀರುಪಾಲು

    ಹಾಸನ: ಹಣಕಾಸಿನ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದ ಸ್ನೇಹಿತರಿಬ್ಬರು ಆಣೆ-ಪ್ರಮಾಣ ಮಾಡಲು ಹೋಗಿ ನೀರುಪಾಲಾದ ದುರಂತ ಹಾಸನದಲ್ಲಿ (Hassan) ನಡೆದಿದೆ. ನೀರಿನಲ್ಲಿ ಮುಳುಗಿ ಇಬ್ಬರು ಜಲಸಮಾಧಿಯಾಗಿದ್ದಾರೆ.

    ಹಾಸನ ತಾಲೂಕಿನ ತೇಜೂರು ಗ್ರಾಮದ ಆನಂದ್ ಮತ್ತು ಚಂದ್ರು ಇಬ್ಬರು ಹಾಸನದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೇ ಸಮಾರಂಭಗಳಲ್ಲಿ ಸಿಹಿ ತಯಾರಿಸುವ ಕಂಟ್ರ್ಯಾಕ್ಟ್ ಕೂಡ ತೆಗೆದುಕೊಳ್ಳುತ್ತಿದ್ದರು. ಗುರುವಾರ ಎಂದಿನಂತೆ ಕೆಲಸ ಮುಗಿಸಿ ಮನೆಗೆ ವಾಪಸ್ ಆಗುವ ಮುನ್ನ, ರಿಂಗ್ ರಸ್ತೆಯ ಬಾರ್ ಒಂದರಲ್ಲಿ ಮದ್ಯಪಾನ ಮಾಡಿದ್ದಾರೆ. ತಮ್ಮ ಬ್ಯುಸಿನೆಸ್‍ನ ಆರ್ಡರ್ ಒಪ್ಪಿಕೊಳ್ಳುವ ವಿಚಾರದಲ್ಲಿ ಇಬ್ಬರ ನಡುವೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು, ಬಾ.. ಗಂಗೆ ಮುಟ್ಟಿ ಸತ್ಯ ಮಾಡೋಣ ಎಂದು ಕುಡಿದ ಮತ್ತಿನಲ್ಲೇ ಇಬ್ಬರು ಕೆರೆಗೆ ಇಳಿದಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ನೀರು ಪಾಲಾಗಿದ್ದಾರೆ. ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ ಹೊಡೆದು ಬೈಕ್‌ ಸವಾರ ಸಾವು – ಅಪಘಾತ ಜಾಗದಲ್ಲಿ ಬಿದ್ದಿತ್ತು ಮದ್ಯದ ಬಾಟಲಿಗಳು

    ಸಿಹಿ ತಿಂಡಿ ತಯಾರಿಸುವ ಕೆಲಸ ಮಾಡಲೆಂದು ಬೇರೆಯವರಿಂದ ಹಣ ಪಡೆದಿದ್ದರು. ನಂತರ ಕೆಲಸಕ್ಕೆ ಹೋಗಿರಲಿಲ್ಲ. ಈ ಸಂಬಂಧ ಇಬ್ಬರ ನಡುವೆ ಆಗಾಗ ಮಾತುಕತೆ ನಡೆಯುತಿತ್ತು. ಹಲವು ದಿನ ಕಳೆದರು ಹಣ ಪಡೆದಿದ್ದ ಮನಸ್ತಾಪ ತಿಳಿಯಾಗಿರಲಿಲ್ಲ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಆಣೆ-ಪ್ರಮಾಣ ಮಾಡಲು ಹೋಗಿ ನೀರು ಪಾಲಾಗಿದ್ದಾರೆ. ಇದನ್ನೂ ಓದಿ: ಟ್ಯಾಟೂ ಹಾಕಿಸಿಕೊಂಡವರು 6 ತಿಂಗಳು ರಕ್ತದಾನ ಮಾಡ್ಬೇಡಿ – ವೈದ್ಯರ ಎಚ್ಚರಿಕೆ

    ಒಟ್ಟಾರೆ ಸ್ನೇಹಿತರ ಮಧ್ಯೆ ಹಣಕಾಸಿನ ವಿಚಾರ ಅತಿರೇಕಕ್ಕೆ ಹೋಗಿ ದುರಂತ ಸಾವಿನಲ್ಲಿ ಅಂತ್ಯವಾಗಿದೆ. ಚಂದ್ರುವಿಗೆ ಮದುವೆಯಾಗಿದ್ದು, ಈತನನ್ನೇ ನಂಬಿದ್ದ ಕುಟುಂಬ ಈಗ ಕಣ್ಣೀರಿಡುವಂತಾಗಿದೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]