Tag: friends

  • ‘ವೆಲ್’ಕಂ 2019- ಆರೋಗ್ಯಕರ ರೀತಿಯಲ್ಲಿ ವರ್ಷಾಚರಣೆ

    ‘ವೆಲ್’ಕಂ 2019- ಆರೋಗ್ಯಕರ ರೀತಿಯಲ್ಲಿ ವರ್ಷಾಚರಣೆ

    – ಹ್ಯಾವ್ ಎ ಹ್ಯಾಪಿ ಅಂಡ್ ಸೇಫ್ ನ್ಯೂ ಇಯರ್ ಸೆಲಬ್ರೆಷನ್

    -ಸುನಿತಾ ಎ.ಎನ್.

    ನ್ನೇನು 2018ಕ್ಕೆ ಬೈ ಬೈ ಹೇಳಿ.. 2019ಕ್ಕೆ ಹಾಯ್.. ಹಲೋ ಹೇಳೋ ಕಾಲ ಬಂದೇ ಬಿಡ್ತು.. ನ್ಯೂ ಇಯರ್ ನ ಗ್ರ್ಯಾಂಡ್ ಆಗಿ ವೆಲ್‍ಕಂ ಮಾಡಲು ಈಗಾಗಲೇ ಸಾಕಷ್ಟು ತಯಾರಿ ನಡೆಸಿದ್ದೀರಿ ಅಲ್ವಾ. ಈ ಬಾರಿ ಹಲವು ಪಬ್, ರೆಸ್ಟೋರೆಂಟ್, ಹೋಟೆಲ್‍ಗಳು ಪ್ರೋಗ್ರಾಂ ಅರೆಂಜ್ ಮಾಡಿವೆ. ಸಾವಿರಾರು ರೂಪಾಯಿಗೆ ಎಂಟ್ರಿ ಟಿಕೆಟ್ ಅನ್ನು ನೀಡ್ತಿದೆ. ಆನ್‍ಲೈನ್ ಬುಕ್ಕಿಂಗ್‍ನಲ್ಲೂ ಟಿಕೆಟ್‍ಗಳು ಸೇಲ್ ಆಗ್ತಿವಿ. ನೀವು ನ್ಯೂ ಇಯರ್ ಆಚರಣೆ ಮಾಡ್ಬೇಡಿ ಅಂತ ನಾವ್ ಹೇಳ್ತಿಲ್ಲ. ಬದಲಿಗೆ ಆರೋಗ್ಯಕರ ರೀತಿಯಲ್ಲಿ ಆಚರಣೆ ಮಾಡಿ ಎನ್ನುವುದೇ ನಮ್ಮ ಕಳಕಳಿ.

    ನ್ಯೂ ಇಯರ್ ಆಚರಿಸಿ ರಾತ್ರಿ ನಿದ್ದೆಗೆಟ್ಟು ಹಗಲು ಮನೆಗೆ ಹೋಗೋಕೆ ಆಗದೇ ವೆಹಿಕಲ್‍ಗಳು ಅಪಘಾತವಾಗಿ ಸಾವು-ನೋವು ಸಂಭವಿಸುತ್ತಲೇ ಇರುತ್ತದೆ. ಇದರಿಂದ ಆಚರಣೆ ಇನ್ನೊಂದು ಸಲ ಬೇಕಾದರೆ ಮಾಡಬಹುದು. ನಿಮ್ಮ ಜೀವ ಎಲ್ಲಕ್ಕಿಂತಲೂ ಅತ್ಯಮೂಲ್ಯವಾಗಿದ್ದು, ಬೆಲೆ ಕಟ್ಟಲು ಸಾಧ್ಯವಿಲ್ಲದ ರತ್ನ. ಎಲ್ಲಕ್ಕೂ ಮಿಗಿಲಾಗಿ ಒಮ್ಮೆ ಕಳೆದುಕೊಂಡರೆ ಮತ್ತೆಂದೂ ಸಿಗಲ್ಲ. ವರ್ಷದ ಕೊನೆ ದಿನ. ಹೊಸ ವರ್ಷದ ಆರಂಭದ ದಿನ ನೆನಪಿನಲ್ಲಿ ಉಳಿಯಬೇಕು ಅಂದುಕೊಳ್ಳುವುದು ನಿಜ. ಅದೇ ಆಚರಣೆಯಿಂದ ಜೀವ, ಜೀವನ ಅಂತ್ಯವಾಗದಿರಲಿ. ಆರೋಗ್ಯಕರ ಆಚರಣೆಯಿಂದ ಜೀವನದಲ್ಲಿ ನಗು ತುಂಬಿರಲಿ. ಹೀಗಾಗಿ ನ್ಯೂ ಇಯರ್ ಈವ್. ಹೊಸ ವರ್ಷಾಚರಣೆ ಮಾಡುವ ಮುನ್ನ ಒಂದಲ್ಲ ನೂರು ಬಾರಿ ಯೋಚಿಸಿ ನೋಡಿ.

    ಬೆಂಗಳೂರಿನ ಬಿಗ್ರೇಡ್ ರೋಡ್. ಎಂ. ಜಿ ರೋಡ್‍ನಲ್ಲಿ ರಾತ್ರಿ ವೇಳೆ ಕತ್ತಲೆ ಬೆಳಕಿನ ಆಟದಲ್ಲಿ ಮೈ ಮರೆತು ಕುಣಿದು ಕುಪ್ಪಳಿಸುವುದು. ಮದ್ಯ, ಕೂಲ್ ಡ್ರಿಂಕ್ಸ್ ಕುಡಿದು ಮಜಾ ಮಾಡೋದು. ಪರಸ್ಪರ ವಿಶ್ ಮಾಡೋದು.. ಓ.. ಎಂದು ಕೂಗೋದು ನೋಡ್ತೀರಿ, ಕೇಳ್ತೀರಿ.. ಮಿಗಿಲಾಗಿ ಹಲವರು ಭಾಗಿ ಆಗಿ ಎಂಜಾಯ್ ಮಾಡಿರ್ತೀರಿ. ಈ ರೀತಿ ಮಾಡಿದ್ರೆನೇ ಮಾತ್ರ ನ್ಯೂ ಇಯರ್ ಸೆಲೆಬ್ರಿಷನ್ ಅಲ್ಲ. ನಾವು ಹೇಳುವ ರೀತಿಯಲ್ಲಿ ಮಾಡಿನೋಡಿ.. ಡಬಲ್ ಖುಷಿ ನಿಮ್ಮದಾಗುತ್ತೆ.. ಅದಕ್ಕೂ ಮುನ್ನ ನಾವ್ ಯಾಕೆ ಈ ರೀತಿ ಹೇಳ್ತೀದ್ದಿವಿ ಅಂತಾ ನೋಡ್ಬಿಡಿ..

    ಮೈ ಮರೆತರೆ ಅನಾಹುತ ಕಟ್ಟಿಟ್ಟ ಬುತ್ತಿ..!
    * ಈಗಿನ ಕಾಲದ ಯುವಕ ಯುವತಿಯರಿಗೆ ಲೇಟ್ ನೈಟ್ ಪಾರ್ಟಿ ಅಂದ್ರೆ ಫುಲ್ ಕ್ರೇಜ್. ಅದೇ ಲೇಟ್ ನೈಟ್‍ನಲ್ಲಿ ಮೈ ಮರೆತರೆ ನೀವು `ಲೇಟ್’ ಆಗ್ಬಹುದು.. ಎಚ್ಚರ ಇರಲಿ..
    * ಮಬ್ಬು ಬೆಳಕು.. ಕಲರ್ ಕಲರ್ ಲೈಟಿಂಗ್ಸ್.. ಮೈ ಮನ ಕುಣಿಸುವ ಮ್ಯೂಸಿಕ್ ನಡುವೆ ನಾವೂ ಹುಚ್ಚೆದ್ದು ಕುಣಿಯಬೇಕು ಅನ್ನಿಸುತ್ತೆ. ನಿಮಗೆ ನಿಮ್ಮ ಮೇಲೆ ಎಚ್ಚರ ಇರಲಿ. ಕಂಟ್ರೋಲ್ ಇರಲಿ
    * ಯುವತಿಯರು ಪಾರ್ಟಿಗೆ ಹೋಗುವ ಮುನ್ನ ತಮ್ಮ ಉಡುಗೆ- ತೊಡುಗೆಯ ಬಗ್ಗೆ ಎಚ್ಚರಿಕೆ ವಹಿಸಬೇಕು. ನಿಮಗೆ ಯಾವುದು ಕಂಫರ್ಟ್ ಆಗಿರೊತ್ತೋ ಅಂತಹ ಡ್ರೆಸ್ ಧರಿಸಿ. ಇಲ್ಲವಾದಲ್ಲಿ ಪಾರ್ಟಿ ತುಂಬೆಲ್ಲಾ ಇರಿಸು ಮುರಿಸು ಖಚಿತ. ಹೀಗಾಗಿ ಡ್ರೆಸ್ ಸೆನ್ಸ್ ಬಗ್ಗೆ ಎಚ್ಚರ ಇರಲಿ.

    * ಪಾರ್ಟಿಯಲ್ಲಿ ಪರಸ್ಪರ ವಿಶ್ ಎಕ್ಸ್ ಚೇಂಜ್ ಮಾಡಿಕೊಳ್ಳುವಾಗ, ಮಾತಾಡುವಾಗ, ಖುಷಿ ವ್ಯಕ್ತಪಡಿಸುವ ವೇಳೆ ನಿಮ್ಮ ಮಾತಿನ ಮೇಲೆ ಎಚ್ಚರ ಇರಲಿ.
    * ತಡರಾತ್ರಿಯ ಪಾರ್ಟಿಯಲ್ಲಿ ಡ್ರಿಂಕ್ಸ್ ಕಾಮನ್. ನೀವು ಡ್ರಿಂಕ್ಸ್ ಮಾಡುವಾಗ ಎಚ್ಚರದಿಂದಿರಿ. ನಿಮ್ಮ ಡ್ರಿಂಕ್ಸ್ ಲಿಮಿಟ್ ಮೀರಿದ್ರೇ ನಿಮಗೆ ಅಪಾಯ.
    * ನ್ಯೂ ಇಯರ್ ಪಾರ್ಟಿ ಮಧ್ಯರಾತ್ರಿ 12 ಗಂಟೆಗೆ ಶುರುವಾದರೂ 12 ಗಂಟೆ ದಾಟಿದ ಮೇಲೆ ಪಾರ್ಟಿ ಡಲ್ ಹೊಡೆಯುತ್ತೆ. ಹೀಗಾಗಿ ಮಧ್ಯರಾತ್ರಿ 1, 2, 3 ಅಂತ ತಡರಾತ್ರಿವರೆಗೂ ಇರಲೇಬೇಡಿ.

    * ಪಾರ್ಟಿ ಅಂದ ಮೇಲೆ ಪರಿಚಯ ಇರೋರು, ಇಲ್ಲದೇ ಇರೋರು, ಫ್ರೆಂಡ್ಸ್ ಸೇರಿದಂತೆ ಎಲ್ಲರೂ ಬರ್ತಾರೆ. ಹಾಗಂತ ಎಲ್ಲರನ್ನೂ ಮಾತಾಡಿಸಿ. ಫ್ರೆಂಡ್ಸ್ ಮಾಡಿಕೊಳ್ಳೋಕೆ ಹೋಗಬೇಡಿ. ಅಪರಿಚಿತರೊಂದಿಗೆ ಮಾತಾಡುವಾಗ ಎಚ್ಚರ ಇರಲಿ.
    * ಪಾರ್ಟಿ ಮುಗಿಸಿಕೊಂಡು ಹೋಗುವಾಗ ತಡ ಆಗೋದು ಗ್ಯಾರಂಟಿ. ಹಾಗಂತ ಫ್ರೆಂಡ್ಸ್ ಡ್ರಾಪ್ ಮಾಡ್ತಾರೆ. ನನ್ನ್ ಫ್ರೆಂಡ್‍ನ ಫ್ರೆಂಡ್ ಬಿಡ್ತಾರೆ.. ನನ್ನ ಮನೆ ಬಳಿಯೇ ಈತ/ಈಕೆ ಇರೋದು ಅಂತೆಲ್ಲಾ ಹೋಗಲೇಬೇಡಿ.
    * ನೀವು ಡ್ರಿಂಕ್ಸ್ ಮಾಡಿ ವಾಹನ ಚಲಾಯಿಸಲು ಯೋಗ್ಯರಿದ್ದರೇ ಮಾತ್ರ ನಿಮ್ಮ ವಾಹನವನ್ನು ಚಲಾಯಿಸಿಕೊಂಡು ಹೋಗಿ. ಇಲ್ಲವಾದಲ್ಲಿ ಸುರಕ್ಷೆಗಾಗಿ ಸಾರ್ವಜನಿಕ ವಾಹನ ಬಳಸಿ.

    * ಈ ಲೇಟ್ ನೈಟ್ ಪಾರ್ಟಿಗೆ ಸ್ಟಾರ್ಟ್ ಅನ್ನೋದು ಇರಲ್ಲ. ಎಂಡ್ ಅನ್ನೋದು ಇರಲ್ಲ. ಆವರೆಡನ್ನೂ ನಾವೇ ಪ್ಲಾನ್ ಮಾಡಬೇಕು. ಹೀಗಾಗಿ ಮಧ್ಯರಾತ್ರಿಯಿಂದ ತಡರಾತ್ರಿ ಅಥವಾ ತಡರಾತ್ರಿಯಿಂದ ಮುಂಜಾನವರೆಗೂ ಅಂತಾ ಪಾರ್ಟಿಯಲ್ಲಿರಬೇಡಿ. ನಿಮ್ಮ ಸುರಕ್ಷೆಗಾಗಿ ಆದಷ್ಟೂ ಬೇಗ ಮನೆ ಸೇರಿಕೊಳ್ಳಿ.
    * ಯಾವುದೇ ಅನಾಹುತ ಆಗುವ ಮುನ್ನ ಎಚ್ಚೆತ್ತುಕೊಂಡರೆ ಲೈಫ್ ಇಸ್ ಸೇಫ್. ಅದೇ ವೈಸ್.

    ಹಾಗಾದ್ರೆ, ಯಾವೆಲ್ಲಾ ರೀತಿಯಲ್ಲಿ ಹೊಸ ವರ್ಷವನ್ನು ಸ್ವಾಗತಿಸಬಹುದು..
    * ಸಿಂಪಲ್ ಆಗಿ ಮನೆಯಲ್ಲೇ ಕೇಕ್ ಕಟ್ ಮಾಡಿ.. ಮನೆ ಮಂದಿ ಎಲ್ಲಾ ಸಂಭ್ರಮಿಸಿ.
    * ಕುಟುಂಬಸ್ಥರೊಂದಿಗೆ ಸಂತೋಷದಿಂದ ಕಾಲ ಕಳೆಯಿರಿ.
    * ಕಲ್ಚರಲ್ ಪ್ರೋಗ್ರಾಂನಲ್ಲಿ ಆಸಕ್ತಿ ಇರೋರು ಮ್ಯೂಸಿಕ್ ಕೇಳಿ, ಡ್ಯಾನ್ಸ್ ಮಾಡಿ ಸಂಭ್ರಮಿಸಿ.
    * ರಾತ್ರಿ ನೀವು ವಾಸ ಇರುವ ಕಡೆ ಕೇಕ್ ಕಟ್ ಮಾಡಿ. ಬೆಳಗ್ಗೆ ಎದ್ದು ದೇಗುಲಗಳಿಗೆ ಭೇಟಿ ನೀಡಿ. ಇದ್ರಿಂದ ಮನಃಶಾಂತಿ ಸಿಗುತ್ತೆ. ದೇವರ ಆಶೀರ್ವಾದವೂ ಸಿಗುತ್ತದೆ.


    * ಹೋಟೆಲ್‍ನಲ್ಲಿ ಕ್ಯಾಂಡಲ್‍ಲೈಟ್ ಡಿನ್ನರ್ ಮಾಡಿ.
    * ಫ್ರೆಂಡ್ಸ್ ಜೊತೆ ಮನೆಯಲ್ಲಿ ಗೆಟ್ ಟು ಗೆದರ್ ಮಾಡಿ ಸಂತಸ ಹಂಚಿಕೊಳ್ಳಿ.
    * ಒಂದೆಡೆ ಸೇರಿ ನಿಮ್ಮ ಜೀವನದ ಖುಷಿ ಕ್ಷಣಗಳನ್ನು ಶೇರ್ ಮಾಡಿ ಸಂಭ್ರಮಿಸಿ.

    ಟೋಟಲಿ.. ನಾವ್ ಹೇಳೋದು ಇಷ್ಟೇ.. ಹ್ಯಾವ್ ಎ ಹ್ಯಾಪಿ ಅಂಡ್ ಸೇಫ್ ನ್ಯೂ ಇಯರ್ ಸೆಲಬ್ರೆಷನ್. ಅಂಡ್ ಹ್ಯಾಪಿ ನ್ಯೂ ಇಯರ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಟ, ರಾಜಕಾರಣಿ, ಉದ್ಯಮಿಯೂ ಅಲ್ಲ -ಸ್ನೇಹಿತರಿಂದ ಸಿಕ್ತು ಸರ್ಪ್ರೈಸ್

    ನಟ, ರಾಜಕಾರಣಿ, ಉದ್ಯಮಿಯೂ ಅಲ್ಲ -ಸ್ನೇಹಿತರಿಂದ ಸಿಕ್ತು ಸರ್ಪ್ರೈಸ್

    ಬೆಂಗಳೂರು: ಆತ ನಟನೂ ಅಲ್ಲ ರಾಜಕಾರಣಿಯೂ ಅಲ್ಲ, ಇತ್ತ ಹೆಸರಾಂತ ಉದ್ಯಮಿಯೂ ಅಲ್ಲ. ಕೇವಲ ಸಣ್ಣ ಹಾಲು ವ್ಯಾಪಾರಿ ಅಷ್ಟೇ. ಆದರೆ ನೂತನ ವಧು ವರನಿಗೆ ತನ್ನ ಸ್ನೇಹಿತರು ಸರ್ಪ್ರೈಸ್ ಗಿಫ್ಟ್ ಕೊಡುವ ಉದ್ದೇಶದಿಂದ ಭರ್ಜರಿಯಾಗಿ ಡ್ಯಾನ್ಸ್ ಮಾಡಿ ಬೆಂಕಿಯ ಫೈರಿಂಗ್ ಮೂಲಕ ವಧುವರರನ್ನ ವೇದಿಕೆಗೆ ಬರಮಾಡಿಕೊಂಡಿದ್ದಾರೆ.

    ಇಂತಹ ಅಪರೂಪದ ಮದುವೆ ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದಲ್ಲಿ ನಡೆದಿದೆ. ವರ ಜಗದೀಶ್ ಹಾಗೂ ವಧು ಕಾವ್ಯ ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಮನೆಯವರ ಒಪ್ಪಿಗೆ ಪಡೆದ ಪ್ರೇಮಿಗಳು ಸಂಪ್ರದಾಯದಂತೆ ಮನೆಯವರ ಮೆಚ್ಚುಯಂತೆ ಮದುವೆ ಮಾಡಿಕೊಂಡಿದ್ದಾರೆ.

    ಅಷ್ಟೇ ಅಲ್ಲದೇ ವರ ಜಗದೀಶ್ ಹುಟ್ಟು ಹಬ್ಬದಂದೇ ಮದುವೆ ಇದ್ದುದ್ದರಿಂದ ನೂತನ ದಂಪತಿಗಳಿಗೆ ಆತನ ಸ್ನೇಹಿತರು, ಡಿಫರೆಂಟ್ ಆಗಿರುವ ಉಡುಗೊರೆ ನೀಡಿದ್ದಾರೆ. ವಧು-ವರ ಸ್ನೇಹಿತರು ಹಾಗೂ ಸಂಬಂಧಿಗಳು ಭರ್ಜರಿಯಾಗಿ ಡ್ಯಾನ್ಸ್ ಮಾಡುವ ಮೂಲಕ ವಧುವರರನ್ನ ವೇದಿಕೆಗೆ ಬರಮಾಡಿಕೊಂಡಿದ್ದಾರೆ. ಸ್ನೇಹಿತರ ಈ ಸರ್ಪ್ರೈಸ್ ಕಂಡ ವಧು-ವರರ ಕುಟುಂಬಸ್ಥರು ಹಾಗೂ ನೆರೆದವರು ದಿಲ್ ಖುಷ್ ಆಗಿದ್ದರು.

    ಹೊರ ರಾಜ್ಯದ ದಾಂಡಿಯ ನೃತ್ಯ ಕೋಲಾಟ, ಇನ್ನಿತರ ಡ್ಯಾನ್ಯ್ ಮಾಡಿದ್ದು, ಯಾವ ನಟ ನಟಿ, ರಾಜಕಾರಣಿ ಹಾಗೂ ಉದ್ಯಮಿಗಳ ಕುಟುಂಬದ ಮದುವೆಗಿಂತ ಹಾಲು ವ್ಯಾಪಾರಿ ಮನೆಯ ಮದುವೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಇನ್ನೂ ಈ ವೇಳೆ ವರನ ತಾಯಿ ಹಾಗೂ ಕುಟುಂಬಸ್ಥರು ಕುಣಿದು ಕುಪ್ಪಳಿಸಿ ಸಂಭ್ರಮದಲ್ಲಿ ವಿವಾಹವನ್ನ ನಡೆಸಿದ್ದಾರೆ.

    ನಮ್ಮ ಮದುವೆ ಕಾರ್ಯಕ್ರಮದಲ್ಲಿ ಸ್ನೇಹಿತರೆಲ್ಲಾ ಸೇರಿ ದೊಡ್ಡ ಸರ್ಪ್ರೈಸ್ ಕೊಟ್ಟಿದ್ದಾರೆ. ಇದೆಲ್ಲಾ ಮಾಡುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ. ನನ್ನ ಹುಟ್ಟುಹಬ್ಬ ದಿನದಂದೇ ಮದುವೆ ನಡೆಯುತ್ತಿರುವುದಕ್ಕೆ ತುಂಬಾ ಖುಷಿಯಾಗಿದೆ ಎಂದು ವರ ಜಗದೀಶ್ ಮತ್ತು ವಧು ಕಾವ್ಯ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಕ್ಸರ್, ಬೌಂಡರಿ ಸಿಡಿಸಿ ಮಿಂಚಿದ ಪ್ರಜ್ವಲ್ ರೇವಣ್ಣ!

    ಸಿಕ್ಸರ್, ಬೌಂಡರಿ ಸಿಡಿಸಿ ಮಿಂಚಿದ ಪ್ರಜ್ವಲ್ ರೇವಣ್ಣ!

    ಹಾಸನ: ಲೋಕೋಪಯೋಗಿ ಸಚಿವ ರೇವಣ್ಣ ಅವವರ ಪುತ್ರ, ಜೆಡಿಎಸ್ ಯುವ ನಾಯಕ ಪ್ರಜ್ವಲ್ ರೇವಣ್ಣ ಭಾನುವಾರದಂದು ಜಿಲ್ಲೆಯ ಹೊಳೆನರಸೀಪುರದ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಸ್ನೇಹಿತರೊಂದಿಗೆ ಕ್ರಿಕೆಟ್ ಮ್ಯಾಚ್ ಆಡಿ ಖುಷಿ ಪಟ್ಟಿದ್ದಾರೆ.

    ಪ್ರಜ್ವಲ್ ಅವರು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗು ಮಾಜಿ ಪ್ರದಾನಿ ದೇವೇಗೌಡರ ಮೊಮ್ಮಗ. ಒಟ್ಟು ಆರು ಓವರ್ ಮ್ಯಾಚ್ ಆಡಲಾಗಿತ್ತು. ಅದರಲ್ಲಿ ಎದುರಾಳಿ ತಂಡ 63 ರನ್ ಗಳಿಸಿತ್ತು. ಆದರೆ ಪ್ರಜ್ವಲ್ ಟೀಂ ಕೂಡ ಪಂದ್ಯಾವಳಿಯಲ್ಲಿ 63 ರನ್ ಹೊಡೆದಿದ್ದರು ಮ್ಯಾಚ್ ಟೈ ಆಗಿತ್ತು.

    ಪ್ರಜ್ವಲ್ ಅವರು ಮೂರು ಸಿಕ್ಸರ್ ಹಾಗು ಎರಡು ಬೌಂಡರಿಯೊಂದಿಗೆ 30 ರನ್ ಸಿಡಿಸಿ ಎಲ್ಲರ ಗಮನ ಸೆಳೆದರು. ಕಳೆದ ಐದಾರು ವರ್ಷಗಳಿಂದ ರಾಜಕೀಯದಲ್ಲಿ ಕ್ರಿಯಾಶೀಲರಾಗಿರುವ ಪ್ರಜ್ವಲ್ ಎಲ್ಲವನ್ನೂ ಮರೆತು ಭಾನುವಾರದಂದು ಗೆಳೆಯರೊಂದಿಗೆ ಸಾಮಾನ್ಯನಂತೆ ಕ್ರಿಕೆಟ್ ಆಡಿ ಎಂಜಾಯ್ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕದಿಯುವಾಗ ಶಬ್ದ ಓಡಿ ಹೋಗಿ ತಿರುಗಿದ್ರೆ ಹಂದಿ – ಕಾಡುತ್ತಿರುವ ಕಾಲೇಜಿನ ತುಂಟತನ

    ಕದಿಯುವಾಗ ಶಬ್ದ ಓಡಿ ಹೋಗಿ ತಿರುಗಿದ್ರೆ ಹಂದಿ – ಕಾಡುತ್ತಿರುವ ಕಾಲೇಜಿನ ತುಂಟತನ

    ನೆನಪುಗಳನ್ನು ಹಿಡಿಯುವ ಹಂಬಲ. ಆದರೆ ಕೈ ಸಿಗದೇ ಓಡಿ ಹೋಗುತ್ತವೆ. ಪ್ರತಿಯೊಬ್ಬರ ಜೀವನದಲ್ಲೂ ನೆನಪುಗಳು ಸದಾ ಇರುತ್ತವೆ. ಕೆಲವರಿಗೆ ಸಿಹಿ ನೆನಪುಗಳಾದ್ರೆ ಇನ್ನೂ ಕೆಲವರಿಗೆ ಕಹಿ ನೆನಪುಗಳು ಅಚ್ಚಳಿಯದೇ ಉಳಿದಿವೆ. ಆದರೆ ಮನುಷ್ಯನ ಜೀವನ ಮಾತ್ರ ನೆನಪು ಮತ್ತು ಕನಸಿನ ಮಧ್ಯೆ ಸಾಗುತ್ತದೆ.

    ನನ್ನ ಬದುಕಿನಲ್ಲಿ ಸದಾ ಹಸಿರಾಗಿ ಉಳಿದುಕೊಂಡಿರುವ ಒಂದು ಸಿಹಿ ನೆನಪಿನ ಪುಟ್ಟ ಕಥೆ ನಿಮಗಾಗಿ….

    ನಾನು ಹಳ್ಳಿಯ ಹೊಲ-ಗದ್ದೆ, ಸ್ನೇಹಿತರು, ಜಾತ್ರೆ, ಹಬ್ಬ-ಹರಿದಿನಗಳ ಮಧ್ಯೆ ಅಲೆದಾಡಿ ಬೆಳೆದಿದ್ದೆ. ಆದರೆ ಹುಟ್ಟೂರಿನಿಂದ ಉನ್ನತ ವಿದ್ಯಾಭ್ಯಾಸಕ್ಕಾಗಿ ಪಟ್ಟಣಕ್ಕೆ ಕಾಲಿಟ್ಟಿದ್ದೆ. ಪಟ್ಟಣಕ್ಕಿಂತ ನಮಗೆ ಪಟ್ಟಣದ ಹಾಸ್ಟೆಲ್ ಒಂದು ಜೈಲು ಎಂದು ಅನ್ನಿಸುತ್ತಿತ್ತು. ಆದರೆ ಮೊದ ಮೊದಲು ಹೊಸ ಹಾಸ್ಟೆಲ್ ಜೀವನಕ್ಕೆ ಹೊಂದಿಕೊಳ್ಳುವಾಗ ದಿನಗಳು ವರ್ಷಗಳೇ ಕಳೆದಂತೆ ಭಾಸವಾಗುತ್ತಿತ್ತು. ಕಾಲಕ್ರಮೇಣ ದಿನ ಕಳೆದಂತೆ ತರಗತಿಯಲ್ಲಿನ ಸಹಪಾಠಿಗಳು ಮತ್ತು ಹಾಸ್ಟೆಲ್ ನ ಸ್ನೇಹಿತರು ಹತ್ತಿರವಾದರು. ಬಳಿಕ ನಮ್ಮದೇ ಆದ ಗುಂಪು ಮಾಡಿಕೊಂಡು ಕಾಲೇಜ್, ಸುತ್ತಾಟ, ತರಲೆ ಮತ್ತು ಆಟವಾಡಿಕೊಂಡು ದಿನಗಳನ್ನು ಕಳೆಯುತ್ತಿದ್ದವು.

    ಆರಂಭದಲ್ಲಿ ಹಾಸ್ಟೆಲ್ ಗೆ ಬಂದಾಗ ಭಾನುವಾರ ಬಂದರೆ ಸಾಕು ಊರಿಗೆ ಹೊರಡಲು ಸಿದ್ಧರಾಗುತ್ತಿದ್ದೆವು. ಆದರೆ ಕೆಲವು ದಿನಗಳ ನಂತರ ಯಾಕಾದರೂ ರಜೆ ಬರುತ್ತದೋ ಎಂದು ಹೇಳುವಂತಾಯಿತು. ಅಷ್ಟರ ಮಟ್ಟಿಗೆ ಸ್ನೇಹಿತರೆಲ್ಲರೂ ಹತ್ತಿರವಾಗಿದ್ದೆವು.

    ಕದ್ದ ಹಣ್ಣು ತುಂಬಾ ರುಚಿ:
    ರಜೆಯ ಒಂದು ದಿನ ಹಾಸ್ಟೆಲ್ ನಲ್ಲಿ ಕ್ರಿಕೆಟ್ ಆಡಿ ಮುಗಿದ ಬಳಿಕ ವರಾಂಡದಲ್ಲಿ ಕುಳಿತು ಸ್ನೇಹಿತರೆಲ್ಲರೂ ಹರಟೆ ಹೊಡೆಯುತ್ತಿದ್ದೆವು. ಈ ಸಮಯದಲ್ಲಿ ನಮ್ಮಲ್ಲೊಬ್ಬ ಗೆಳೆಯ ಹಾಸ್ಟೆಲ್ ಹಿಂದಿನ ತೋಟದಲ್ಲಿರುವ ಹಲಸಿನ ಹಣ್ಣಿನ ಬಗ್ಗೆ ಹೇಳಿದ್ದ. ಮೊದಲೇ ಕಾಲೇಜ್- ಹಾಸ್ಟೆಲ್ ನ ಜೀವನ. ನಮಗೆ ಆ ರಾತ್ರಿಯೇ ಹಲಸಿನ ಹಣ್ಣನ್ನು ಕದಿಯುವ ಯೋಚನೆಯಾಯಿತು.

    ಕೊನೆಗೆ ತಡರಾತ್ರಿಯೇ ಹಣ್ಣು ಕದಿಯಲು ನಿಪುಣ ಕಳ್ಳರಂತೆ ಯೋಜನೆ ರೂಪಿಸಿದೆವು. ಯಾರು ಮರ ಹತ್ತುವರು? ಹಣ್ಣನ್ನು ನೆಲಕ್ಕೆ ಬೀಳದಂತೆ ಕ್ಯಾಚ್ ಹಿಡಿಯುವುದು ಯಾರು? ಹಾಗೂ ತೋಟದ ಮಾಲೀಕ ಬರುವುದೊಳಗೆ ಹಿಂದಿರುಗಬೇಕು ಎಂದು ಪಿಸುಗುಟ್ಟುತ್ತಾ ತೋಟಕ್ಕೆ ನುಗ್ಗಿದೆವು. ಶಬ್ದ ಬರದಂತೆ ಹಣ್ಣನ್ನು ಕೀಳಲು ಪ್ರಯತ್ನಿಸುತ್ತಿದ್ದೆವು. ಆದರೆ ಕೆಲ ಹೊತ್ತಿನಲ್ಲಿ ತೋಟದೊಳಗೆ ಜೋರಾದ ಶಬ್ದ ಕೇಳಿಸಿತು. ಎಲ್ಲರು ತೋಟದ ಮಾಲೀಕ ಬಂದನೆಂದು ಹೆದರಿ ತೋಟದಿಂದ ಕಾಲ್ಕಿತ್ತೆವು.

    ನಾವು ಓಡಿ ಹೋಗುತ್ತಿದ್ದಂತೆ ನಮ್ಮ ಹಿಂದೆಯೇ ಯಾರೋ ಇದ್ದಾರೆಂದು ಭಾಸವಾಯಿತು. ಒಮ್ಮೆ ಎಲ್ಲರೂ ಧೈರ್ಯ ಮಾಡಿ ಹಿಂದೆ ತಿರುಗಿ ನೋಡಿದರೆ ಗುಟುರಾಕುತ್ತಿದ್ದ ಹಂದಿಗಳು. ನಕ್ಕರೇ ತೋಟದ ಮಾಲೀಕ ಬರುತ್ತಾರೆ ಎಂದು ಮನಸಿನಲ್ಲೇ ನಕ್ಕು ಅವುಗಳನ್ನು ಓಡಿಸಿದೆವು. ಬಳಿಕ ಹಲಸಿನ ಹಣ್ಣಿನ ಜೊತೆ ಸಪೋಟ ಹಣ್ಣನ್ನು ಕಿತ್ತು ತೋಟದಿಂದ ಬಂದೆವು. ‘ಕದ್ದು ತಿನ್ನುವ ರುಚಿಯೇ ಬೇರೆ’ ಎಂಬ ಗಾದೆಯಂತೆ ತಂದಿಟ್ಟ ಹಣ್ಣುಗಳು ಕೇವಲ ಮೂರು ದಿನಗಳಲ್ಲಿ ಖಾಲಿಯಾಗುತ್ತಿದ್ದವು. ಯಾರನ್ನು ಕೇಳಿದರು ‘ತಿಂದವರ್ಯಾರು’ ಎಂಬ ಮರು ಪ್ರಶ್ನೆ ಹುಟ್ಟಿಕೊಳ್ಳುತ್ತಿತ್ತು.

    ಹಾಸ್ಟೆಲ್ ನ ಸಪ್ಪೆ ಊಟ ತಿಂದು ಮರಗಟ್ಟಿದ್ದ ನಾಲಗೆಗೆ ರುಚಿ ಬೇಕೆನಿಸಿದಾಗ ಕೋಳಿ ಸುಟ್ಟು ತಿನ್ನುವ ಖಯಾಲಿ. ಉಪ್ಪು-ಖಾರ ಸರಿಯಾಗಿಲ್ಲ ಎಂದರೂ ಹಾಸ್ಟೆಲ್ ಊಟಕ್ಕಿನ್ನ ಮೋಸವಿಲ್ಲ ಎಂದು ಬಾಯಿ ಚಪ್ಪರಿಸಿಕೊಂಡು ತಿನ್ನುವಾಗ ಬಿಸಿ ಕೋಳಿ ತುಟಿ ಸುಟ್ಟ ನೆನಪು. ಆದರೆ ಹಳ್ಳಿಯಿಂದ ಕಾಲೇಜಿಗೆ ಈಗ ಬಂದಂತೆ ಭಾವನೆ, ನೋಡಿದರೆ ಕಾಲೇಜು ಜೀವನವೇ ಮುಗಿದು ಹೋಯಿತು.

    ಕದ್ದು ತಿಂದ ಹಣ್ಣು, ತುಟಿ ಸುಟ್ಟ ಕೋಳಿ, ಕಾಲೇಜಿನಲ್ಲಿ ಸ್ನೇಹಿತರ ಕೋಳಿ ಜಗಳ, ಸೆಂಡಾಫ್ ದಿನದ ಹುಚ್ಚು ಕುಣಿತ, ಪಕ್ಕದ ಡಿಪಾರ್ಟ್ ಮೆಂಟಿನ ಊಟ, ಜೂನಿಯರ್ ಗಳ ಹರಟೆ… ಇವೆಲ್ಲವೂ ಈಗ ಬರೀ ನೆನಪು ಮಾತ್ರ…

     – ಪವನ್ 

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv 

  • ಗರ್ಭಿಣಿ ರಾಧಿಕೆಗೆ ಸರ್ಪ್ರೈಸ್ ನೀಡಿದ ಗೆಳತಿಯರು

    ಗರ್ಭಿಣಿ ರಾಧಿಕೆಗೆ ಸರ್ಪ್ರೈಸ್ ನೀಡಿದ ಗೆಳತಿಯರು

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮಡದಿ, ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ರಾಧಿಕಾ ಅವರಿಗೆ ಗೆಳತಿಯರಾದ ಪ್ರತಿಭಾ ಸುರೇಶ್, ಸಾನಿಯಾ ಸರ್ದರಿಯಾ ಮತ್ತು ವನಿತಾ ಉಮೇಶ್ ಮೂವರು ಸರ್ಪ್ರೈಸ್ ನೀಡಿದ್ದಾರೆ.

    ಗರ್ಭಿಣಿಗೆ ಸಾಮಾನ್ಯವಾಗಿ ಬಗೆ ಬಗೆಯ ತಿನಿಸುಗಳನ್ನು ತಿನ್ನಬೇಕೆಂಬ ಬಯಕೆ ಉಂಟಾಗುತ್ತದೆ. ಗರ್ಭಿಣಿ ರಾಧಿಕೆಯ ಬಯಕೆಯನ್ನ ಅರಿತ ಗೆಳತಿಯರು ವಿವಿಧ ಭಕ್ಷ್ಯ, ಭೋಜನ ಸಿದ್ಧಪಡಿಸಿ ರಾಮಾಚಾರಿ ಮಡದಿಗೆ ನೀಡಿದ್ದಾರೆ. ಗೆಳತಿಯರು ತನಗಾಗಿ ಸಿದ್ಧಪಡಿಸಿ ತಂದ ಆಹಾರ ಪದಾರ್ಥ ನೋಡಿದ ಮೊಗ್ಗಿನ ಚೆಲುವೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಫೋಟೋದಲ್ಲಿ ಮೂವರು ಗೆಳತಿಯರೊಂದಿಗೆ ರಾಧಿಕಾರ ತಾಯಿ ಮತ್ತು ಬಗೆಗೆ ತಿಂಡಿ, ಸಿಹಿ ಪದಾರ್ಥಗಳನ್ನು ಕಾಣಬಹುದಾಗಿದೆ. ನನ್ನ ಆಪ್ತ ಗೆಳತಿಯರು ನನಗಾಗಿ ಪ್ರೀತಿಯಿಂದ ಮಾಡಿಕೊಂಡ ಬಂದ ಅಡುಗೆ ಎಂಬ ಸಾಲುಗಳನ್ನು ಬರೆದು, ಮೂವರಿಗೂ ಟ್ಯಾಗ್ ಮಾಡಿದ್ದಾರೆ.

    ಈ ಹಿಂದೆ ರಾಧಿಕಾ ಖುದ್ದು ತಾವೇ ಆಹಾರ ಸೇವಿಸುತ್ತಿರುವ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದರು. ನಂತರ ಬೇಬಿ ಮೂನ್ ಫೋಟೋಗಳನ್ನು ಅಪ್ಲೋಡ್ ಮಾಡಿಕೊಳ್ಳುತ್ತಾ ಬಂದಿದ್ದಾರೆ. ತಾವು ಗರ್ಭಿಣಿಯಾಗಿದ್ದರೂ, ‘ಆದಿ ಲಕ್ಷ್ಮಿ ಪುರಾಣ’ ಸಿನಿಮಾಗೆ ಡಬ್ಬಿಂಗ್ ಮಾಡುವ ಮೂಲಕ ಅಭಿಮಾನಿಗಳಿಂದ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ನೇಹಿತನ ಮನೆಗೆ ಬಂದು ಎಣ್ಣೆಪಾರ್ಟಿ ಮಾಡಿ ಬೆಳಗಾಗೋವಷ್ಟರಲ್ಲಿ ಹೆಣವುರುಳಿಸಿ ಎಸ್ಕೇಪ್!

    ಸ್ನೇಹಿತನ ಮನೆಗೆ ಬಂದು ಎಣ್ಣೆಪಾರ್ಟಿ ಮಾಡಿ ಬೆಳಗಾಗೋವಷ್ಟರಲ್ಲಿ ಹೆಣವುರುಳಿಸಿ ಎಸ್ಕೇಪ್!

    ಬೆಂಗಳೂರು: ಪತಿ-ಪತ್ನಿ ಇದ್ದ ಮನೆಗೆ ಸೋಮವಾರ ಸ್ನೇಹಿತರು ಮನೆಗೆ ಬಂದು ಎಣ್ಣೆಪಾರ್ಟಿ ಮಾಡಿ ಮಲಗಿ ಬೆಳಗಾಗೋವಷ್ಟರಲ್ಲಿ ಹೆಣವುರುಳಿಸಿ, ಎಸ್ಕೇಪ್ ಆದ ಪ್ರಕರಣವೊಂದು ಬೆಂಗಳೂರಿನ ಬಂಡೇಪಾಳ್ಯದ ಬಳಿಯಿರುವ ಐಟಿಐ ಲೇಔಟ್‍ನಲ್ಲಿ ನಡೆದಿದೆ.

    ಯಶವಂತ್(28) ಕೊಲೆಯಾದ ಯುವಕ. ಮಂಡ್ಯ ಮೂಲದ ಯಶವಂತ್ ಮನೆಗೆ ತನ್ನ ಸ್ನೇಹಿತ ಸುನೀಲ್ ಸೋಮವಾರ ತಡರಾತ್ರಿ ಊಟಕ್ಕೆಂದು ಬಂದಿದ್ದ. ಇದೇ ವೇಳೆ ಸುನೀಲ್‍ನ ಸ್ನೇಹಿತ ಸ್ವಾಮಿ ಕೂಡ ಬಂದಿದ್ದನು.

    ಊಟಕ್ಕೆ ಕೂತಿದ್ದ ಯಶವಂತ್ ಹಾಗೂ ಸ್ವಾಮಿ ನಡುವೆ ಸಣ್ಣದೊಂದು ಗಲಾಟೆ ನಡೆದಿತ್ತು. ಮಾತಿಗೆ ಮಾತು ಬೆಳೆದು ಸ್ವಾಮಿ ಮನೆಯಲ್ಲೇ ಇದ್ದ ಚಾಕುವಿನಿಂದ ಯಶವಂತನ ಕತ್ತಿನ ಭಾಗಕ್ಕೆ ಇರಿದು ಪರಾರಿಯಾಗಲು ಮುಂದಾಗಿದ್ದ. ಸ್ವಾಮಿಯನ್ನು ತಡೆಯೋಕೆ ಬಂದ ಸುನೀಲ್‍ಗೂ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಯಶವಂತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಈ ಮನೆಯಲ್ಲಿ ಐದಾರು ಹೆಣ್ಣು ಮಕ್ಕಳಿದ್ದರು. ಆಗಾಗ ಸುನೀಲ್ ಈ ಮನೆಗೆ ಬಂದು ಪಾರ್ಟಿ ಮಾಡುತ್ತಿದ್ದ. ಹೀಗೆ ವಾರಕ್ಕೋ ಹದಿನೈದು ದಿನಕ್ಕೊಮ್ಮೆ ಸುನೀಲ್‍ನ ಜೊತೆ ಹತ್ತಾರು ಮಂದಿ ಯುವಕರೂ ಈ ಮನೆಯಲ್ಲೇ ಠಿಕಾಣಿ ಹೂಡುತ್ತಿದ್ದರು. ಅದೇ ರೀತಿ ಸೋಮವಾರ ಕೂಡ ಯಶವಂತ್ ಹಾಗೂ ಸ್ವಾಮಿ ಸುನೀಲ್‍ನ ಜೊತೆ ಬಂದಿದ್ದರು. ಹೀಗೆ ಬಂದವರು ಹುಡುಗಿಯರ ವಿಚಾರಕ್ಕೆ ತಗಾದೆ ತೆಗ್ದು ಸ್ವಾಮಿ, ಯಶವಂತ್ ನನ್ನು ಕೊಲೆ ಮಾಡಿದ್ದಾರೆ ಎಂದು ಸ್ಥಳೀಯ ನಿವಾಸಿ ರಮೇಶ್ ಹೇಳಿದ್ದಾರೆ.

    ಈ ಭಾಗದಲ್ಲಿ ವೇಶ್ಯಾವಾಟಿಕೆ ಅಡ್ಡೆಗಳು ಪೊಲೀಸರ ಗಮನಕ್ಕೆ ಬಾರದಂತೆ ನಡೀತಿದೆ. ಲೇಡಿಸ್ ಬಾರ್ ನಲ್ಲಿ ಕೆಲಸ ಮಾಡುವ ಯುವತಿಯರು ಇಲ್ಲೇ ವಾಸ್ತವ್ಯವಿದ್ದು ಬೆಳಗ್ಗೆಯಾಯ್ತು ಅಂದರೆ ವೇಶ್ಯಾವಾಟಿಕೆ ಶುರು ಹಚ್ಚಿಕೊಳ್ಳುತ್ತಾರೆ. ಇದೇ ಕಾರಣದಿಂದ ಕೊಲೆ ನಡೆದಿರಬಹುದೆಂದು ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಇತ್ತೀಚೆಗೆ ಯುವತಿಯರನ್ನು ಬಲವಂತವಾಗಿ ವೇಶ್ಯಾವಾಟಿಕೆ ತಳ್ಳಿ ಕಾಸು ಮಾಡಲು ಕೆಲ ವ್ಯಕ್ತಿಗಳು ಮುಂದಾಗುತ್ತಿದ್ದಾರೆ. ಇದರಿಂದ ಕೊಲೆ, ಸುಲಿಗೆಯಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಶುರುವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರು ಇಂತಹ ವೇಶ್ಯಾವಾಟಿಕೆ ಮಧ್ಯವರ್ತಿಗಳನ್ನ ಹೆಡೆಮುರಿ ಕಟ್ಟಿದರೆ ಖಂಡಿತಾ ಮುಂದಾಗುವ ಅಪರಾಧವನ್ನು ತಡೆಯಬಹುದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ನೇಹಿತರಿಂದ ನವದಂಪತಿಗೆ 5 ಲೀ. ಪೆಟ್ರೋಲ್ ಗಿಫ್ಟ್

    ಸ್ನೇಹಿತರಿಂದ ನವದಂಪತಿಗೆ 5 ಲೀ. ಪೆಟ್ರೋಲ್ ಗಿಫ್ಟ್

    ಚೆನ್ನೈ: ಮದುವೆಯಾದ ದಂಪತಿಗೆ ಸ್ನೇಹಿತರು ಉಡುಗೊರೆಯಾಗಿ ವಿವಿಧ ರೀತಿಯ ಗಿಫ್ಟ್ ಗಳನ್ನು ಕೊಡುತ್ತಾರೆ. ಆದರೆ ತಮಿಳುನಾಡಿನ ಕಡಲೂರು ಜಿಲ್ಲೆಯ ಕುಮರಚಿಯಲ್ಲಿ ನವದಂಪತಿಗೆ ಪೆಟ್ರೋಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಎಲ್ಲೆಂಜಿಯನ್ ಮತ್ತು ಕಣಿಮೊಝಿ ಇವರು ಭಾನುವಾರ ಜಿಲ್ಲೆಯ ಕುಮರಚಿಯಲ್ಲಿ ಮದುವೆಯಾಗಿದ್ದಾರೆ. ಇವರ ಮದುವೆಗೆ ಆಗಮಿಸಿದ್ದ ವರನ ಗೆಳೆಯರು 5 ಲೀಟರ್ ಪೆಟ್ರೋಲ್ ಅನ್ನು ದಂಪತಿಗೆ ಉಡುಗೊರೆಯಾಗಿ ನೀಡಿ ಶುಭಾಶಯವನ್ನು ಕೋರಿದ್ದಾರೆ. ದೇಶದಾದ್ಯಂತ ಪೆಟ್ರೋಲ್ ಡೀಸೆಲ್ ಬೆಲೆ ಅಧಿಕವಾಗಿದ್ದರಿಂದ ಸ್ನೇಹಿತರು ನವದಂಪತಿಗೆ ಉಡುಗೊರೆಯಾಗಿ ಪೆಟ್ರೋಲ್ ನೀಡಿದ್ದಾರೆ ಎನ್ನಲಾಗಿದೆ.

    ವೇದಿಕೆಯ ಮೇಲೆ ನಿಂತಿದ್ದ ವಧು-ವರಿಗೆ ಅತಿಥಿಗಳು ಶುಭಾಶಯವನ್ನು ತಿಳಿಸುತ್ತಿದ್ದರು. ಈ ವೇಳೆ ಅವರ ಸ್ನೇಹಿತರು ಒಟ್ಟಾಗಿ ಬಂದು 5 ಲೀಟರ್ ನ ಪೆಟ್ರೋಲ್ ಕ್ಯಾನೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಸ್ನೇಹಿತರು ಗಿಫ್ಟ್ ಕೊಟ್ಟಾಗ ನಗುತ್ತಲೇ ವಧು-ವರ ಸ್ವೀಕರಿಸಿದ್ದಾರೆ. ಈ ವೇಳೆ ವೇದಿಕೆ ಮೇಲಿದ್ದರೆಲ್ಲರು ನಕ್ಕಿದ್ದಾರೆ. ಅಲ್ಲದೇ ಕೆಲವರು ಗಿಫ್ಟ್ ಕೊಡುತ್ತಿರುವುದನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಕ್ಲಿಪ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಆಗಿದ್ದು, ಸದ್ಯ ಎಲ್ಲೆಲ್ಲೂ ಹರಿದಾಡುತ್ತಿದೆ.

    ವಿದ್ಯಾರ್ಥಿ ಪ್ರಭು ಮೊದಲಿಗೆ ಉಡುಗೊರೆಯಾಗಿ ಪೆಟ್ರೋಲ್ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ದೇಶದಾದ್ಯಂತ ಇಂಧನ ಬೆಲೆ ಏರಿಕೆ ಕುರಿತು ಜಾಗೃತಿ ಮೂಡಿಸಲು ಇದೊಂದು ಪ್ರಯತ್ನವಾಗಿದೆ. ಇಂಧನ ಬೆಲೆಗಳು ದೇಶಾದ್ಯಂತ ತೀವ್ರವಾಗಿ ಏರುತ್ತಿವೆ. ಹಾಗಾಗಿ ವರನ ಸ್ನೇಹಿತರಲ್ಲಿ ಕೆಲವರು ಪೆಟ್ರೋಲ್ ನನ್ನು ದಂಪತಿಗೆ ಉಡುಗೊರೆಯಾಗಿ ನೀಡಲು ನಿರ್ಧರಿಸಿದರು. ಜೊತೆಗೆ ಈ ಮೂಲಕ ಬೆಲೆಬಾಳುವ ಉತ್ಪನ್ನದ ಕುರಿತು ಜನರನ್ನು ಎಚ್ಚರಿಸುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎಂದು ಹೇಳಿದ್ದಾರೆ.

    ತಮಿಳುನಾಡಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 85.15 ರೂ. ತಲುಪಿದೆ. ಇದು ರಾಜ್ಯದಲ್ಲಿಯೇ ಅಧಿಕವಾಗಿದೆ. ಪೆಟ್ರೋಲ್ ವೆಚ್ಚದಲ್ಲಿ ತೀವ್ರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ಸರ್ಕಾರ ಈ ವಿಚಾರದಲ್ಲಿ ಗಮನಹರಿಸಬೇಕು ಮತ್ತು ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ನೇಹಿತರ ಜೊತೆ ಮಲಗಿ ಕೆನಡಾ ಟೂರ್ ಹೋಗಲು ಹಣ ಕೊಡು ಅಂದ ಪ್ರಿಯಕರ!

    ಸ್ನೇಹಿತರ ಜೊತೆ ಮಲಗಿ ಕೆನಡಾ ಟೂರ್ ಹೋಗಲು ಹಣ ಕೊಡು ಅಂದ ಪ್ರಿಯಕರ!

    ಮುಂಬೈ: ಕೆನಡಾ ಪ್ರವಾಸಕ್ಕೆ ತೆರಳಲು ನನ್ನ ಸ್ನೇಹಿತರ ಜೊತೆ ಮಲಗಿ ಹಣ ಕೊಡು ಅಂತ ಪ್ರಿಯಕರನೊಬ್ಬ ಯುವತಿಗೆ ಬೆದರಿಕೆ ಹಾಕಿದ ಪ್ರಕರಣವೊಂದು ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಯುವತಿ ನೀಡಿದ ದೂರಿನಂತೆ ಸದ್ಯ ಪೊಲೀಸರು ಆರೋಪಿ ಪ್ರಿಯಕರನನ್ನು ಬಂಧಿಸಿದ್ದಾರೆ. ಅಲ್ಲದೇ ಆತನ ವಿರುದ್ಧ ಎಲ್ ಟಿ ಮಾರ್ಗ್ ಹಾಗೂ ವಾಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಅಂತ ವರದಿಯಾಗಿದೆ.

    ದೂರಿನಲ್ಲೇನಿತ್ತು?:
    ಯುವತಿಯ ದೂರಿನಂತೆ ಸದ್ಯ ಪೊಲೀಸರು ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ಸೆಪ್ಟೆಂಬರ್ 9ರಂದು ತಾನು ವಿರೋಧಿಸಿದ್ರೂ ಪ್ರಿಯತಮ ಧರಣ್ ಶಾ, ನನ್ನ ಬಟ್ಟೆ ಬಿಚ್ಚಿ ಅತ್ಯಾಚಾರ ಮಾಡಿದ್ದಾನೆ. ಪ್ರಿಯತಮ ಶಾ ತನ್ನ 4 ಮಂದಿ ಸಹಪಾಠಿಗಳ ಜೊತೆ ಸೇರಿ ಹರಿತವಾದ ಆಯುಧದೊಂದಿಗೆ ತನ್ನ ಮನೆಗೆ ಏಕಾಏಕಿ ಬಂದು ನುಗ್ಗಿದ್ದ. ಅಲ್ಲದೇ ವಿರೋಧ ವ್ಯಕ್ತಪಡಿಸುತ್ತಿದ್ದಂತೆಯೇ ನನ್ನ ಬಟ್ಟೆ ಬಿಚ್ಚಿದ್ದಾರೆ. ಇದರಿಂದ ಗಾಬರಿಗೊಂಡಿದ್ದರಿಂದ ಜ್ಞಾನ ತಪ್ಪಿ ಬಿದ್ದಿದ್ದೆ ಅಂತ ತಿಳಿಸಿದ್ದಾಳೆ.

    ಕೆಲ ಸಮಯದ ಬಳಿಕ ಎಚ್ಚೆತ್ತ ನಂತ್ರ ನೇರವಾಗಿ ಠಾಣೆಗೆ ತೆರಳಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾಳೆ. ಅಲ್ಲಿಂದ ವೈದ್ಯಕೀಯ ಪರೀಕ್ಷೆಗೆ ತೆರಳಿದಾಗ ಆಕೆಯ ಎದೆ ಹಾಗೂ ಕುತ್ತಿಗೆ ಭಾಗದಲ್ಲಿ ಗಾಯಗಳಾಗಿರುವುದು ಬೆಳಕಿಗೆ ಬಂದಿದೆ.

    ಸ್ನೇಹಿತರೊಂದಿಗೆ ಮಲಗಿ ಹಣ ನೀಡು!
    ಸೆಪ್ಟೆಂಬರ್ 3 ರಂದು ಕೂಡ ಪ್ರಿಯಕರ ಸಂತ್ರಸ್ತೆಯ ಮೇಲೆ ದಾಳಿ ಮಾಡಿದ್ದಾನೆ. ಅಲ್ಲದೇ ಅತ್ಯಾಚಾರ ಕೂಡ ಮಾಡಿದ್ದನು. ಈ ಬಗ್ಗೆಯೂ ಆಕೆ ದೂರು ದಾಖಲಿಸಿದ್ದಳು. ಇದೀಗ ಮತ್ತೆ ದೂರು ದಾಖಲಿಸಿರೋ ಸಂತ್ರಸ್ತೆ, ಈಗಾಗಲೇ ದಾಖಲಿಸಿದ್ದ ದೂರನ್ನು ಹಿಂಪಡೆಯುವಂತೆ ಬೇಡಿಕೆ ಇಟ್ಟಿದ್ದಾನೆ. ಅಲ್ಲದೇ ಈ ಕುರಿತು ಬೆದರಿಕೆ ಕೂಡ ಹಾಕಿದ್ದಾನೆ ಆತ ಎರಡನೇ ಬಾರಿ ದೂರು ದಾಖಲಿಸಲು ಹೋದಾಗ ಸಂತ್ರಸ್ತೆ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ.

    ತನ್ನನ್ನು ಮದುವೆ ಮಾಡಿಕೊಳ್ಳುವುದಾಗಿ ಮಾತು ಕೊಟ್ಟಿದ್ದ ಆರೋಪಿ ಪ್ರಿಯತಮ ಈ ಮೊದಲೇ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ. ಆದ್ರೆ ಮದುವೆ ಬಗ್ಗೆ ಮಾತೆತ್ತಿದ್ರೆ, ತನ್ನ ವರಸೆ ಬದಲಿಸುತ್ತಾನೆ. ಅಲ್ಲದೇ ಬ್ಲ್ಯಾಕ್ ಮೇಲ್ ಮಾಡುತ್ತಾನೆ. ಪ್ರಿಯತಮನ ಕಾಟದಿಂದ ಬೇಸತ್ತ ಸಂತ್ರಸ್ತೆ ಸೌತ್ ಮುಂಬೈನಲ್ಲಿರುವ ತನ್ನ ಮನೆ ತೊರೆದು ನವಿ ಮುಂಬೈಗೆ ತೆರಳಿದ್ದು, ಸೆಪೆಟಂಬರ್ 3ರಂದು ಪ್ರಿಯತಮನ ವಿರುದ್ಧ ದೂರು ದಾಖಲಿಸಿದ್ದಳು.

    ಸೆ.3ರಂದೇ ಸಂತ್ರಸ್ತೆಗೆ ಕರೆ ಮಾಡಿದ ಆರೋಪಿ ಪ್ರಿಯತಮ, ತನಗೆ ಕೆನಡಾ ಪ್ರವಾಸ ತೆರಳಲು ಹಣ ಕೇಳಿದ್ದಾನೆ. ಆದ್ರೆ ಪ್ರಿಯತಮನ ಮಾತನ್ನು ಈಕೆ ನಿರಾಕರಿಸಿದ್ದಾಳೆ. ಈ ವೇಳೆ ಆತನ ತನ್ನ ಸ್ನೇಹಿತರ ಜೊತೆ ಮಲಗಬೇಕು. ಆಗ ಅವರು ಕೊಟ್ಟ ಹಣವನ್ನು ನನಗೆ ಪ್ರವಾಸ ಹೋಗಲು ಕೊಡಬೇಕು ಅಂತ ಹೇಳಿದ್ದಾನೆ. ಒಂದು ವೇಳೆ ನೀನು ಇದನ್ನು ನಿರಾಕರಸಿದ್ರೆ ನನ್ನ ಬಳಿಯಿರುವ ನಿನ್ನ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾನೆ. ಈ ಹಿಂದೆ ಆರೋಪಿ ಸಂತ್ರಸ್ತೆಯ ಜೊತೆ ಒತ್ತಾಯಪೂರ್ವಕವಾಗಿ ಫೋಟೋ ಹಾಗೂ ವಿಡಿಯೋ ಮಾಡಿಸಿಕೊಂಡಿದ್ದನು. ಇಷ್ಟು ಮಾತ್ರವಲ್ಲದೇ ಆಕೆಯ ಬಳಿಯಿದ್ದ 3 ಲಕ್ಷ ನಗದು, 1.13ರೂ ಮೌಲ್ಯದ ಚಿನ್ನಾಭರಣ, ಲ್ಯಾಪ್ ಟಾಪ್, ಐಪ್ಯಾಡ್ ಹಾಗೂ ಹೆಡ್‍ಫೋನ್ಸ್ ಕೂಡ ತೆಗೆದುಕೊಂಡಿದ್ದನು.

    ಸದ್ಯ ಸಂತ್ರಸ್ತೆಯ ದೂರಿನಂತೆ ಆರೋಪಿ ವಿರುದ್ಧ ಎಲ್ ಟಿ ಮಾರ್ಗ್ ಠಾಣೆಯಲ್ಲಿ ಅತ್ಯಾಚಾರ, ಬ್ಲ್ಯಾಕ್ ಮೇಲ್ ಹಾಗೂ ವಂಚನೆ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದ್ದು, ವಾಶಿ ಠಾಣೆಯಲ್ಲಿ ಸಂತ್ರಸ್ತೆಯ ಮೇಲೆ ದಾಳಿ ಹಾಗೂ ಬಟ್ಟೆ ಬಿಚ್ಚಿದ ಪ್ರಕರಣದ ಕುರಿತು ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂಬುದಾಗಿ ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಡಿಯೋ: ಬೈಕಿನಲ್ಲೇ 76 ದಿನ, 21 ದೇಶ, 23 ಸಾವಿರ ಕಿ.ಮೀ ಪ್ರಯಾಣ ಬೆಳೆಸಿದ ಕನ್ನಡಿಗರು!

    ವಿಡಿಯೋ: ಬೈಕಿನಲ್ಲೇ 76 ದಿನ, 21 ದೇಶ, 23 ಸಾವಿರ ಕಿ.ಮೀ ಪ್ರಯಾಣ ಬೆಳೆಸಿದ ಕನ್ನಡಿಗರು!

    ಕಲಬುರಗಿ: ಸಾಮಾನ್ಯವಾಗಿ ಬೈಕ್ ರೈಡಿಂಗ್ ಅಂದ್ರೆ ಎಲ್ಲರಿಗೂ ಇಷ್ಟ. ಅದರಲ್ಲೂ ಬೈಕ್ ನಲ್ಲೆ ಲಾಂಗ್ ಡ್ರೈವ್ ಹೋಗಬೇಕು ಅಂತಾ ಸುಮಾರು ಜನ ಅಂದುಕೊಳ್ಳತ್ತಾರೆ. ಅದರಲ್ಲಿ ಕೆಲವರು ಬೈಕ್ ನಲ್ಲಿ ಇಡಿ ದೇಶವನ್ನೆ ಸುತ್ತಾಡುತ್ತಾರೆ. ಆದರೆ ಸ್ನೇಹಿತರಿಬ್ಬರು ಬೈಕಿನಲ್ಲೇ ಬರೊಬ್ಬರಿ 76 ದಿನಗಳಲ್ಲಿ 21 ದೇಶವನ್ನ ಸುತ್ತಾಡಿ ಬಂದಿದ್ದಾರೆ.

    ಬೈಕ್ ರೈಡಿಂಗ್ ನಲ್ಲಿ ಭಾರತ ಸುತ್ತಾಡಿರೋದನ್ನ ನೋಡಿದ್ದೇವೆ. ಆದರೆ ಇಬ್ಬರು ಸ್ನೇಹಿತರು ವಿದೇಶಗಳಿಗೂ ಬೈಕಿನಲ್ಲೇ ತೆರಳಿ ಸುತ್ತಾಡಿ ಬಂದಿದ್ದಾರೆ. ಕಲಬುರಗಿಯ ಮಂಜುನಾಥ್ ಚಿಕ್ಕಯ್ಯ ಮತ್ತು ರಿಚರ್ಡ್ ಎಂಬವರು ಬೈಕಿನಲ್ಲೇ 76 ದಿನಗಳಲ್ಲಿ 21 ದೇಶವನ್ನು ಸುತ್ತಾಡಿದ್ದಾರೆ.

    ಭೂತಾನ್, ಮೈನ್ಮಾರ್, ಥೈಲ್ಯಾಂಡ್, ಲೋಯಸ್, ಚೀನಾ, ಕಿರ್ಗಿಸ್ಥಾನ್, ಉಜ್ಬೇಕಿಸ್ಥಾನ್, ಕಝಾಕ್‍ಸ್ಥಾನ್, ರಷ್ಯಾ, ಎಸ್ಟೋನಿಯಾ, ಲಿಟ್ವಿಯಾ, ಲಿಥುವೇನಿಯಾ, ಪೋಲೆಂಡ್, ಜೆಕ್ ರಿಪಬ್ಲಿಕ್, ಆಸ್ಟ್ರಿಯಾ, ಇಟಲಿ, ಸ್ವಿಜರ್ ಲ್ಯಾಂಡ್, ಫ್ರಾನ್ಸ್, ಬೆಲ್ಜಿಯಂ, ನೆದರ್ ಲ್ಯಾಂಡ್ ಹಾಗೂ ಇಂಗ್ಲೆಂಡ್ ದೇಶಗಳನ್ನು ಸುತ್ತಿ ಬಂದಿದ್ದಾರೆ.

     

    ಮಂಜುನಾಥ್ ಕೆಲಸದಲ್ಲಿ ಪ್ರತಿನಿತ್ಯ 18 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ಕೆಲಸ ಮಧ್ಯೆ ಬಿಡುವು ಮಾಡಿಕೊಂಡು ಬೇರೆ ಏನಾದರೂ ಮಾಡಬೇಕು ಅಂತಾ ಡಿಸೈಡ್ ಮಾಡಿ ಈ ಹಿಂದೆ ಕನ್ಯಾಕುಮಾರಿಗೆ ಬೈಕಿನಲ್ಲೇ ಪ್ರಯಾಣ ಮಾಡಿದ್ದರಂತೆ. ಆಗ ದಂಪತಿಗಳಿಬ್ಬರು ಬೈಕಿನಲ್ಲೇ ದೇಶ ಸುತ್ತಾಡ್ತಿರೋದನ್ನು ಕಂಡು ಅವರಿಂದ ಪ್ರೇರಣೆಗೊಂಡು ಬೈಕಿನಲ್ಲೇ ವಿದೇಶ ಸುತ್ತಾಡೋಕ್ಕೆ ಪ್ಲ್ಯಾನ್ ಮಾಡಿದ್ದರಂತೆ.

    ಅದರಂತೆ ಮಂಜುನಾಥ್ ಮತ್ತು ಸ್ನೇಹಿತ ರಿಚರ್ಡ್ ಇಬ್ಬರು ಕೂಡ ಎರಡು ವರ್ಷಗಳಿಂದ ಯಾವ್ಯಾವ ದೇಶಕ್ಕೆ ಹೋಗಬೇಕು ಮತ್ತೆ ಹೇಗೆ ಹೋಗಬೇಕು ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದಾರೆ. ಬಳಿಕ ವಿದೇಶದಲ್ಲಿ ಸ್ಥಳೀಯ ಬೈಕ್ ವರ್ಕೌಟ್ ಆಗೋದಿಲ್ಲ ಅನ್ನೋ ಮಾಹಿತಿ ಮೇರೆಗೆ ಅಮೆರಿಕಾದ ಎರಡು ಬೈಕ್ ಖರೀದಿಸಿ ಕಳೆದ ಎರಡು ತಿಂಗಳ ಹಿಂದೆ ಕಲಬುರಗಿಯಿಂದ ಪ್ರಯಾಣ ಆರಂಭಿಸಿ ಅಮೆರಿಕದವರೆಗೂ ಬೈಕಿನಲ್ಲೇ ಸುತ್ತಾಡಿಕೊಂಡು ಬಂದಿದ್ದಾರೆ.

     

    ಮೊದ ಮೊದಲು ಮಂಜುನಾಥ್ ಕೆಲಸದ ಒತ್ತಡದಿಂದ ಹೊರ ಬರಲು ಬೈಕ್ ಸವಾರಿ ಮಾಡೋದನ್ನ ಆರಂಭಿಸಿದ್ದರಂತೆ. ಬಳಿಕ ವಾರಗಟ್ಟಲೆ ನಂತ್ರ ತಿಂಗಳುಗಟ್ಟಲೆ ಕೆಲಸ ನಿಮಿತ್ತ ಬೈಕಿನಲ್ಲಿ ಹೊರ ಹೋಗಿ ಬರುತ್ತಿದ್ದರಂತೆ. ಅಷ್ಟೇ ಅಲ್ಲದೇ ಮಂಜುನಾಥ್ ಬೈಕಿನಲ್ಲಿ ವಿದೇಶ ಪ್ರಯಾಣ ಮಾಡೋ ಇಚ್ಚೆ ಪತ್ನಿ ಬಳಿ ಹೇಳಿದ್ದಾಗ ಪತ್ನಿ ರೇಖಾ ಅದಕ್ಕೆ ನಿರಾಕರಿಸಿದ್ದರಂತೆ. ಆದರೆ ಮಂಜುನಾಥ್ ಅವರ ಪತ್ನಿಗೆ ಒಪ್ಪಿಸಿದ್ದ ಬಳಿಕ ಸ್ನೇಹಿತ ರಿಚರ್ಡ್ ಜೊತೆ ಅವರ ಬೈಕ್ ಮೇಲಿನ ಲಾಂಗ್ ಜರ್ನಿ ಆರಂಭಿಸಿದ್ದರು. ಬೈಕಿನಲ್ಲಿ 21 ದೇಶ ಸುತ್ತಿದ್ದಕ್ಕೆ ರಿಚರ್ಡ್ ಸಹ ಹರ್ಷ ವ್ಯಕ್ತಪಡಿಸಿದ್ದಾರೆ.

    ಮಂಜುನಾಥ್ ವಿದೇಶ ಪ್ರಯಾಣದಲ್ಲಿ ಹಲವಾರು ತೊಂದರೆ ತಾಪತ್ರಯಗಳನ್ನು ಅನುಭವಿಸಿರೋದು ನೆನಪಿಸಿಕೊಂಡಿದ್ದಾರೆ. ತೊಂದರೆ ತಾಪತ್ರಯಗಳ ಮಧ್ಯೆ ವಿದೇಶ ಪ್ರಯಾಣದ ಅನುಭವ ಸಖತ್ತಾಗಿತ್ತು ಅಂತಾರೆ. ಚೀನಾದಲ್ಲಿಯು ಕೂಡ ಭಾರತಿಯರನ್ನು ಕಂಡರೆ ಒಳ್ಳೆ ಗೌರವ ಕೊಟ್ಟು ಸ್ಪಂದಿಸಿರೋ ಬಗ್ಗೆ ಕೂಡ ಹಂಚಿಕೊಂಡಿದ್ದಾರೆ. ಭಾರತೀಯ ಸಂಸ್ಕೃತಿಯ ಬಗ್ಗೆ ವಿದೇಶದಲ್ಲಿ ಹೇಳಿ ವಿದೇಶಿ ಸಂಸ್ಕೃತಿಗಳನ್ನು ನೋಡಿದರೆ ನಮ್ಮೂರೆ ನಮಗೆ ಚೆಂದ ಅನ್ನೋ ಹಾಗೆ ಇಂಡಿಯಾ ಇಸ್ ಗ್ರೆಟ್ ಎಂದು ಮಂಜುನಾಥ್ ಮತ್ತು ಆತನ ಸ್ನೇಹಿತ ರಿಚರ್ಡ್ ಹೇಳಿದ್ದಾರೆ.

    https://www.youtube.com/watch?v=Bcr-mU8vwJs&feature=youtu.be

  • ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಕೆಲಸ ಕಳೆದುಕೊಂಡು ಟೆಕ್ಕಿಗಳಿಬ್ಬರು ಕಂಗಾಲು!

    ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಕೆಲಸ ಕಳೆದುಕೊಂಡು ಟೆಕ್ಕಿಗಳಿಬ್ಬರು ಕಂಗಾಲು!

    ಬೆಂಗಳೂರು: ತಾನು ಲವ್ ಮಾಡಿದ ಹುಡುಗಿ ಸಿಕ್ಕಿಲ್ಲ ಅಂತಾ ಟೆಕ್ಕಿಯೊಬ್ಬ, ಫ್ಲೆಕ್ಸ್ ಗಳ ಮೂಲಕ ಯುವಕ- ಯುವತಿ ಬಗ್ಗೆ ಅವಹೇಳನಕಾರಿ ಬರೆದು ಅವರು ಕೆಲಸ ಕಳೆದುಕೊಳ್ಳುವಂತೆ ಮಾಡಿದ ಘಟನೆಯೊಂದು ನಡೆದಿದೆ.

    ಈ ಘಟನೆ  ನಗರದ ಹೆಚ್‍ಎಸ್‍ಆರ್ ಲೇಔಟ್‍ನ ಉದಾನ್ ಕಂಪೆನಿಯಲ್ಲಿ ನಡೆದಿದ್ದು, ಯುವತಿ ಹಾಗೂ ಯುವಕನ ಸ್ನೇಹವನ್ನೇ ತಪ್ಪಾಗಿ ತಿಳಿದ ಟೆಕ್ಕಿ ಆಕೆಯ ಮಾನ ಹರಾಜ್ ಹಾಕಿದ್ದಾನೆ. ತನಗೆ ಈ ಯುವತಿಯ ಪ್ರೀತಿ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಈ ಹುಡುಗಿಯ ಮಾನ ಹರಾಜು ಹಾಕಿದ್ದಾನೆ. ಅಷ್ಟೇ ಅಲ್ಲ ಆ ಯುವತಿಯನ್ನು ಕೆಲಸದಿಂದ ಕಿತ್ತು ಹಾಕಿಸೋದ್ರಲ್ಲೂ ಯಶಸ್ವಿಯಾಗಿದ್ದಾನೆ.

    ಏನಿದು ಘಟನೆ?: ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನ ಹೆಚ್‍ಎಸ್‍ಆರ್ ಲೇಔಟ್‍ನ ಉದಾನ್ ಕಂಪೆನಿಯಲ್ಲಿ ಯುವತಿ ಟೆಕ್ಕಿಯಾಗಿ ಕೆಲಸ ಮಾಡಿಕೊಂಡಿದ್ದಳು. ಅದೇ ಕಂಪೆನಿಯಲ್ಲಿ ವೆಂಕಟೇಶ್ ಕೂಡ ಕೆಲಸ ಮಾಡ್ತಿದ್ದ. ಒಂದೇ ಕಂಪನಿ ಆದ್ದರಿಂದ ಇಬ್ಬರೂ ಸ್ನೇಹಿತರಾಗಿದ್ರು. ಆದ್ರೆ ಇವರಿಬ್ಬರ ಸ್ನೇಹ ಸಹಿಸಿಕೊಳ್ಳದ ಅದೇ ಕಂಪನಿಯ ಯಾರೋ ಕಿಡಿಗೇಡಿ, ಆಫೀಸ್ ಗೋಡೆ ಮೇಲೆ ಯುವಕನ ಹೆಸರಲ್ಲಿ ಯುವತಿ ವಿರುದ್ಧ ಇಲ್ಲಸಲ್ಲದ ಆರೋಪ ಹಾಕಿ ಪೋಸ್ಟ್ ಹಾಕಿದ್ದಾನೆ.

    ಈ ಪೋಸ್ಟ್ ನ್ನು ನೋಡಿದ ಕಂಪೆನಿ ಆಡಳಿತ ಮಂಡಳಿ ಯಾವುದೇ ವಿಚಾರಣೆ ಮಾಡದೆ ಇಬ್ಬರನ್ನೂ ಕೆಲಸದಿಂದ ಕಿತ್ತು ಹಾಕಿದೆ. ಪೋಸ್ಟ್ ಹಾಕಿರೋ ಬಗ್ಗೆ ಸಿಸಿಟಿವಿ ಫೂಟೇಜ್ ನ್ನು ಕೂಡ ನೀಡದೆ ಸತಾಯಿಸ್ತಾ ಇದೆ. ಇಬ್ಬರು ಟೆಕ್ಕಿಗಳು ಮಾಡದ ತಪ್ಪಿಗೆ ಇದೀಗ ಕೆಲಸ ಕಳೆದುಕೊಂಡು ಕಂಗಾಲಾಗಿದ್ದಾರೆ.

    ಈ ಹಿಂದೆ ಕೂಡ ಇದೇ ರೀತಿಯ ಘಟನೆ ಸಂಭವಿಸಿದೆ ಅನ್ನೋ ಮಾತುಗಳೂ ಕೇಳಿ ಬಂದಿದೆ. ಅಲ್ಲದೆ ಕಂಪೆನಿಯ ಆಡಳಿತ ಮಂಡಳಿ ಕೂಡ ಈ ಘಟನೆಯಲ್ಲಿ ಭಾಗಿಯಾಗಿದ್ಯಾ ಅನ್ನೋ ಅನುಮಾನ ಕೂಡ ವ್ಯಕ್ತವಾಗಿದೆ.