Tag: friends

  • ಸೆಕ್ಸ್‌ಗೆ ನಿರಾಕರಿಸಿದ್ದ ವ್ಯಕ್ತಿ ಸ್ನೇಹಿತರಿಂದಲೇ ಹತ್ಯೆ – 9 ದಿನಗಳ ನಂತ್ರ ನೀರಿಲ್ಲದ ಕೊಳದಲ್ಲಿ ಶವ ಪತ್ತೆ

    ಸೆಕ್ಸ್‌ಗೆ ನಿರಾಕರಿಸಿದ್ದ ವ್ಯಕ್ತಿ ಸ್ನೇಹಿತರಿಂದಲೇ ಹತ್ಯೆ – 9 ದಿನಗಳ ನಂತ್ರ ನೀರಿಲ್ಲದ ಕೊಳದಲ್ಲಿ ಶವ ಪತ್ತೆ

    ಜೈಪುರ: ಓರಲ್‌ ಸೆಕ್ಸ್‌ಗೆ ನಿರಾಕರಿಸಿದ 40 ವರ್ಷದ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿ 9 ದಿನಗಳ ಹಿಂದೆಯೇ ಶವವನ್ನ ನೀರಿಲ್ಲದ ಕೊಳದಲ್ಲಿ (Dry Pond) ಬಿಸಾಡಿರುವ ಘಟನೆ ರಾಜಸ್ಥಾನದ (Rajasthan) ಬರಾನ್‌ ಜಿಲ್ಲೆಯಲ್ಲಿ ನಡೆದಿದೆ.

    ಸೆಕ್ಸ್‌ಗೆ ನಿರಾಕರಿಸಿದ್ದ ವ್ಯಕ್ತಿಯನ್ನು ಆತನ ಇಬ್ಬರು ಸ್ನೇಹಿತರೇ ಸೇರಿ ಹತ್ಯೆ ಮಾಡಿದ್ದಾರೆ. ನಂತರ ಶವವನ್ನು ನೀರಿಲ್ಲದ ಕೊಳದಲ್ಲಿ ಎಸೆದು ಹೋಗಿದ್ದಾರೆ ಎಂದು ಬರಾನ್‌ ಜಿಲ್ಲಾ ಪೊಲೀಸರು (Baran Police) ತಿಳಿಸಿದ್ದಾರೆ. ಬರಾನ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓಂ ಪ್ರಕಾಶ್ ಬೈರ್ವ ಶವವಾಗಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: ಹಸೆಮಣೆ ಏರಬೇಕಿದ್ದ ಮದುಮಗ ಮಸಣಕ್ಕೆ – ಜಿಮ್‌ ಮಾಲೀಕನನ್ನು ಇರಿದು ಕೊಂದ ತಂದೆ

    ಬಂಧಿತ ಆರೋಪಿಗಳನ್ನು ಮುರಳೀಧರ್ ಪ್ರಜಾಪತಿ (32) ಮತ್ತು ಸುರೇಂದ್ರ ಯಾದವ್ ಎಂದು ಗುರುತಿಸಲಾಗಿದೆ. ಹತ್ಯೆಗೈದ ಇಬ್ಬರು ಆರೋಪಿಗಳ ಪೈಕಿ ಪ್ರಜಾಪತಿಯನ್ನು ಬಂಧಿಸಲಾಗಿದೆ. ಬಂಧನದ ಭೀತಿಯಿಂದ ಯಾದವ್‌ ವಿಷ ಸೇವಿಸಿದ್ದು, ಆತನನ್ನ ಆಸ್ಪತ್ರೆಗೆ (Rajasthan Hospital) ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜ್‌ಕುಮಾರ್‌ ಚೌಧರಿ ತಿಳಿಸಿದ್ದಾರೆ. ಇದನ್ನೂ ಓದಿ: ಬಾಂಬ್ ಸ್ಫೋಟ ಕೇಸ್; ಬಂಡೆಗಳನ್ನು ಸಿಡಿಸಲು ಬಳಸುವ ಪೌಡರ್ ಬಳಸಿದ್ದ ಶಂಕಿತ ಉಗ್ರ!

    ಕೊಲೆ ನಡೆದಿದ್ದು ಹೇಗೆ?
    ಅಂದು ಯಾದವ್‌ ಮತ್ತು ಬೈರ್ವಾ ಒಟ್ಟಿಗೆ ಮದ್ಯ ಸೇವಿಸಿದ್ದರು. ನಂತರ ಪ್ರಜಾಪತಿಯ ಸಹೋದರಿಯನ್ನು ಭೇಟಿ ಮಾಡಲು ಹತ್ತಿರದ ಹಳ್ಳಿಗೆ ಹೋಗಿದ್ದಾರೆ. ಹಿಂದಿರುಗುವಾಗ ತಮ್ಮೊಂದಿಗೆ ಓರಲ್‌ ಸೆಕ್ಸ್‌ ಮಾಡುವಂತೆ ಪ್ರಜಾಪತಿ ಮತ್ತು ಸುರೇಂದ್ರ ಯಾದವ್‌ ಬೈರ್ವನನ್ನ ಕೇಳಿಕೊಂಡಿದ್ದಾರೆ. ಅದಕ್ಕೆ ನಿರಾಕರಿಸಿದ್ದರಿಂದ ಬೈರ್ವಾನನ್ನ ಹೊಡೆದು ಕೊಂದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಬರಾನ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಸ್ವಾಭಾವಿಕ ಲೈಂಗಿಕ ಬೇಡಿಕೆ ನಿರಾಕರಿಸಿದ್ದಕ್ಕೆ ಸ್ನೇಹಿತನನ್ನೇ ಕೊಲೆಗೈದ 20ರ ಯುವಕ

    ಅಸ್ವಾಭಾವಿಕ ಲೈಂಗಿಕ ಬೇಡಿಕೆ ನಿರಾಕರಿಸಿದ್ದಕ್ಕೆ ಸ್ನೇಹಿತನನ್ನೇ ಕೊಲೆಗೈದ 20ರ ಯುವಕ

    ನವದೆಹಲಿ: 20 ವರ್ಷದ ಯುವಕ ತನ್ನೊಂದಿಗೆ ಅಸ್ವಾಭಾವಿಕ ಲೈಂಗಿಕತೆಗೆ ತಿರಸ್ಕರಿಸಿದ್ದಕ್ಕೆ ಸ್ನೇಹಿತನನ್ನೇ (Friend) ಕೊಲೆ ಮಾಡಿರುವ ಘಟನೆ ದೆಹಲಿಯ (Delhi)  ಡಿಡಿಎ ಪಾರ್ಕ್ ಮೋರಿ ಗೇಟ್ ಬಳಿ ನಡೆದಿದೆ.

    ಮೃತ ವ್ಯಕ್ತಿಯನ್ನು ಉತ್ತರ ಪ್ರದೇಶ (Uttar Pradesh)  ಜಲೋನ್ ಜಿಲ್ಲೆಯ ರುದೂರಪುರ ಗ್ರಾಮದ ಪ್ರಮೋದ್ ಕುಮಾರ್ ಶುಕ್ಲಾ ಎಂದು ಗುರುತಿಸಲಾಗಿದೆ. ರಾಕೇಶ್ ತೋಮರ್ ಅವರ ಅಂಗಡಿಯಲ್ಲಿರುವ ಖೋಯಾ ಮಂಡಿಯಲ್ಲಿ ಪ್ರಮೋದ್ ಕೆಲಸ ಮಾಡುತ್ತಿದ್ದು, ಅಲ್ಲೇ ಪಕ್ಕದಲ್ಲಿದ್ದ ಮೋರಿ ಗೇಟ್‌ನಲ್ಲಿರುವ ರೈನ್ ಬಸೇರಾದಲ್ಲಿ ಗೆಳೆಯ ರಾಜೇಶ್ ಜೊತೆಗೆ ವಾಸಿಸುತ್ತಿದ್ದ. ಇದನ್ನೂ ಓದಿ: ನಮ್ಮ ಮಕ್ಕಳು ಲೆಹೆಂಗಾ ಧರಿಸಿ ಶಾಲೆಗೆ ಹೋಗ್ತಾರೆ: ಹಿಜಬ್‌ ವಿರುದ್ಧ ಬಿಜೆಪಿ ಶಾಸಕ ಹೇಳಿಕೆ

    ಪ್ರಮೋದ್ ಕೊಲೆಯ ಹಿಂದಿನ ದಿನ ಗೆಳೆಯರಿಬ್ಬರು ಜೊತೆಗೆ ಇದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಬಳಿಕ ಕಾಣೆಯಾಗಿದ್ದ ಆರೋಪಿ ರಾಜೇಶ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣದ ಬಗ್ಗೆ ಬಾಯಿಬಿಟ್ಟಿದ್ದಾನೆ. ಸ್ನೇಹಿತನೊಂದಿಗೆ ಅಸ್ವಾಭಾವಿಕ ಸಂಭೋಗ ನಡೆಸುವಂತೆ ಒತ್ತಡ ನೀಡಿದ್ದ. ಆದರೆ ಅಸ್ವಾಭಾವಿಕ ಲೈಂಗಿಕತೆಯನ್ನು ಪ್ರಮೋದ್ ನಿರಾಕರಿಸಿದ್ದಾನೆ. ಇದಕ್ಕೆ ಮತ್ತಷ್ಟು ಕೋಪಗೊಂಡ ರಾಜೇಶ್ ಜಗಳ ಮಾಡಿದ್ದಾನೆ. ನಂತರ ದಾರುಣವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಮಾಡಿದ ನಂತರ ಪ್ರಮೋದ್ ಬಳಿ ಇದ್ದ 18,500 ರೂಪಾಯಿ ಮತ್ತು ಮೊಬೈಲ್ ಫೋನ್ ತೆಗೆದುಕೊಂಡು ಆರೋಪಿ ಪರಾರಿಯಾಗಿದ್ದ. ಇದನ್ನೂ ಓದಿ: ವಿಷ್ಣುವಿನ 11ನೇ ಅವತಾರವಾಗಲು ಮೋದಿ ಪ್ರಯತ್ನಿಸ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

    ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಜೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬ್ಯಾಂಕ್ ಅಕೌಂಟ್, ಇನ್ಶುರೆನ್ಸ್‌ಗೆ ನಾಮಿನಿ ಮಾಡದ್ದಕ್ಕೆ ಮ್ಯಾಜಿಸ್ಟ್ರೇಟ್ ಪತ್ನಿಯನ್ನೇ ಕೊಂದ ಪತಿ!

  • ಸ್ನೇಹಿತನ ಮೇಲೆ ಹಲ್ಲೆ – ಪ್ರಶ್ನೆ ಮಾಡಿದಕ್ಕೆ ಕುಚಿಕುಗಳಿಂದಲ್ಲೇ ಕೊಲೆ

    ಸ್ನೇಹಿತನ ಮೇಲೆ ಹಲ್ಲೆ – ಪ್ರಶ್ನೆ ಮಾಡಿದಕ್ಕೆ ಕುಚಿಕುಗಳಿಂದಲ್ಲೇ ಕೊಲೆ

    -ಪಾರ್ಟಿ ಮಾಡಲೇಂದು ಬಂದವನಿಗೆ ಚಟ್ಟ ಕಟ್ಟಿದ ಸ್ನೇಹಿತರು

    ಬೆಂಗಳೂರು: ಜಗಳವಾಡುತ್ತಿದ್ದ ಸ್ನೇಹಿತನನ್ನು ಪ್ರಶ್ನೆ ಮಾಡಿದಕ್ಕೆ ಇಟ್ಟಿಗೆಯಿಂದ ಹೊಡೆದು ಕುಚಿಕುಗಳೇ (Friends) ಕೊಲೆ (Murder) ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

    ದರ್ಶನ್ ಕೊಲೆಯಾದ ದುರ್ದೈವಿ. ಬಾರ್‌ನಲ್ಲಿ ಪಾರ್ಟಿ ಮಾಡುವ ವೇಳೆ ಸ್ನೇಹಿತರ ಮಧ್ಯೆ ಕಿರಿಕ್ ನಡೆದಿದೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಚಂದ್ರಶೇಖರ್ ಅಲಿಯಾಸ್ ಪ್ರೀತಂ, ಯಶವಂತ,  ದರ್ಶನ್,  ಪ್ರಶಾಂತ್ ಮತ್ತು ಲಂಕೇಶ್ ಸೇರಿ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.  ಇದನ್ನೂ ಓದಿ: ಕಲ್ಕಾಜಿ ದೇಗುಲದಲ್ಲಿ ವೇದಿಕೆ ಕುಸಿದುಬಿದ್ದು ಮಹಿಳೆ ಸಾವು – 17 ಮಂದಿಗೆ ಗಾಯ

    ನಡೆದಿದ್ದೇನು?
    ಕೊಲೆಯಾದ ದರ್ಶನ್ ದೊಡ್ಡಮ್ಮ ತನ್ನ ತಾಯಿಗೆ ಹಣ ನೀಡುವಂತೆ 3,000 ರೂ.ಗಳನ್ನ ಕೊಟ್ಟಿದ್ದರು. ಆದ್ರೆ ದರ್ಶನ್ ಆ ಹಣವನ್ನ ತಾಯಿಗೆ ಕೊಡದೇ ಗೆಳೆಯರಾದ ನಿತಿನ್ ಹಾಗೂ ರಮೇಶ್ ಜೊತೆ ದರ್ಶನ್ ಪಾರ್ಟಿ ಮಾಡಲು ತೆಗೆದುಕೊಂಡು ಹೋಗಿದ್ದ. ಇದನ್ನೂ ಓದಿ: ಹನುಮಧ್ವಜ ಕೆಳಗಿಳಿಸಿದ ಪೊಲೀಸರು – ಸ್ಥಳೀಯರ ಮೇಲೆ ಲಾಠಿ ಚಾರ್ಜ್‌, ಕೆರಗೋಡು ಗ್ರಾಮ ಉದ್ವಿಗ್ನ

    ಜೊತೆಗೆ ಆರೋಪಿಗಳಾದ ಪ್ರೀತಂ, ಯಶವಂತ, ದರ್ಶನ್, ಪ್ರಶಾಂತ್, ಮತ್ತು ಲಂಕೇಶ್ ಕೂಡ ಪಾರ್ಟಿಗೆ ಬಂದಿದ್ದರು. ಆರೋಪಿಗಳು ಮತ್ತು ದರ್ಶನ್ ಟೀಂ ಎಲ್ಲರು ಸಹ ಸ್ನೇಹಿತರು. ಬಾರ್‌ನಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ ನಿತಿನ್ ಹಾಗೂ ಪ್ರೀತಂ ನಡುವೆ ಜಗಳವಾಗಿದೆ. ಇದ್ದಾದ ಬಳಿಕ ದರ್ಶನ್ ಹಾಗೂ ಸ್ನೇಹಿತರು ರಮೇಶ್ ಅವರ ಮನೆ ಬಳಿ ಹೋಗಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆಗೆ ಕಿರುಕುಳ; ಅನ್ಯಕೋಮಿನ ಯುವಕ ಅರೆಸ್ಟ್ – ಹಿಂದೂ ಕಾರ್ಯಕರ್ತರಿಂದ ಪೊಲೀಸ್ ಠಾಣೆಗೆ ಮುತ್ತಿಗೆ

    ನಂತರ ರಮೇಶ್ ಮನೆ ಬಳಿ ಪ್ರೀತಂ ಅಂಡ್ ಗ್ಯಾಂಗ್ ಕೂಡ ಹೋಗಿದೆ. ಈ ವೇಳೆ ನಿತಿನ್ ಮತ್ತು ಪ್ರೀತಂ ನಡುವೆ ಜಗಳ ಶುರುವಾಗಿದೆ. ಜಗಳದಲ್ಲಿ ಪ್ರೀತಂ, ನಿತಿನ್‌ಗೆ ಹೊಡೆದಿದ್ದಾನೆ. ಇದನ್ನು ಕಂಡ ದರ್ಶನ್ ಮಧ್ಯಪ್ರವೇಶಿಸಿ, ನಿತಿನ್‌ಗೆ ಹೊಡೆದಿದ್ದನ್ನು ಪ್ರಶ್ನೆ ಮಾಡಿದ್ದಾನೆ. ಇದರಿಂದ ಇನ್ನಷ್ಟು ಕೋಪಗೊಂಡ ಪ್ರೀತಂ ಅಲ್ಲೇ ಇದ್ದ ಹಾಲೋಬ್ಲಾಕ್ ಇಟ್ಟಿಗೆಯಿಂದ ದರ್ಶನ್‌ಗೆ ಹೊಡೆದಿದ್ದಾನೆ. ಇದರಿಂದ ದರ್ಶನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಧ್ಯರಾತ್ರಿ ಸುಮಾರು 2.30ರ ವೇಳೆಗೆ ಘಟನೆ ನಡೆದಿದೆ. ಇದನ್ನೂ ಓದಿ: Breaking: ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್‌ ಕುಮಾರ್‌ ರಾಜೀನಾಮೆ – ಮೈತ್ರಿ ಸರ್ಕಾರ ಪತನ

    ಈ ಕುರಿತು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಪಕ್ಷಕ್ಕೆ ದುಡಿದ ಎಲ್ಲಾ ಶಾಸಕರು, ಕಾರ್ಯಕರ್ತರಿಗೂ ಅಧಿಕಾರ – ಡಿಕೆ ಶಿವಕುಮಾರ್

  • ಸಾವಿನಲ್ಲೂ ಒಂದಾದ ಸ್ನೇಹಿತರು

    ಸಾವಿನಲ್ಲೂ ಒಂದಾದ ಸ್ನೇಹಿತರು

    ಶಿವಮೊಗ್ಗ: ರಸ್ತೆ ಅಪಘಾತದಲ್ಲಿ (Accident) ಯುವಕನೋರ್ವ ಮೃತಪಟ್ಟಿದ್ದು, ಅಪಘಾತದ ಸುದ್ದಿ ತಿಳಿದ ಇನ್ನೋರ್ವ ಸ್ನೇಹಿತ (Friend) ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ ಘಟನೆ ಶಿವಮೊಗ್ಗದಲ್ಲಿ (Shivamogga) ನಡೆದಿದೆ.

    ಮೃತರನ್ನು ಆನಂದ್ (30) ಹಾಗೂ ಸಾಗರ್ (35) ಎಂದು ಗುರುತಿಸಲಾಗಿದೆ. ಶಿಕಾರಿಪುರ (Shikaripura) ತಾಲೂಕಿನ ಪುಣೇದಹಳ್ಳಿಯ ಆನಂದ್ ಹಾಗೂ ನವರಾಜ್, ಸ್ನೇಹಿತನ ಹುಟ್ಟುಹಬ್ಬಕ್ಕೆ (Birthday) ಕೇಕ್ ತರುವ ಸಲುವಾಗಿ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಶಿಕಾರಿಪುರ ಮತ್ತು ಶಿರಾಳಕೊಪ್ಪದ ನಡುವೆ ಇರುವ ಕೆಎಸ್‌ಆರ್‌ಟಿಸಿ (KSRTC) ಬಸ್ ಡಿಪೋ ಬಳಿ ಎರಡು ಬೈಕ್‌ಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಆನಂದ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇನ್ನೋರ್ವ ಯುವಕ ಅದೃಷ್ಟವಶಾತ್ ಬದುಕುಳಿದಿದ್ದಾನೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ – ವಾಣಿಜ್ಯ ತೆರಿಗೆಯ ಇಲಾಖೆಯ ಚಾಲಕ ಸಾವು

    ಬೈಕ್ ಅಪಘಾತದಲ್ಲಿ ಮೃತಪಟ್ಟ ಯುವಕನ ಸುದ್ದಿ ತಿಳಿದ ಆತನ ಸ್ನೇಹಿತ ಸಾಗರ್ ಕೂಡಾ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಈ ಕುರಿತು ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ದಾವಣಗೆರೆ ದಂಪತಿ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್- ಪತ್ನಿ, ಮಗುವಿಗೆ ಗುಂಡು ಹಾರಿಸಿ ತಾನು ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ರಿಕೆಟ್‌ ಕಿತ್ತಾಟ – ಸ್ನೇಹಿತ, ಸಹೋದರನ ಮೇಲೆ ಗೆಳೆಯರಿಂದ ಮಾರಣಾಂತಿಕ ಹಲ್ಲೆ

    ಕ್ರಿಕೆಟ್‌ ಕಿತ್ತಾಟ – ಸ್ನೇಹಿತ, ಸಹೋದರನ ಮೇಲೆ ಗೆಳೆಯರಿಂದ ಮಾರಣಾಂತಿಕ ಹಲ್ಲೆ

    ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ವೈಷಮ್ಯ ಬೆಳೆದು ತಲ್ವಾರ್‌ನಿಂದ ಸ್ನೇಹಿತ ಹಾಗೂ ಆತನ ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಬಾಗಲಕೋಟೆಯ ವಿದ್ಯಾಗಿರಿಯಲ್ಲಿ (Bagalkot Vidyagiri) ನಡೆದಿದೆ.

    ಗುರುವಾರ ರಾತ್ರಿ ಶರಣಪ್ಪ ಹಾಗೂ ವಿಜಯ್ ವಿದ್ಯಾಗಿರಿಯ ಎಂಬಿಎ ಕಾಲೇಜ್ ಬಳಿ ನಿಂತಿದ್ದಾಗ ಬೈಕ್ ಮೇಲೆ ಬಂದ ಕೆಲವು ದುಷ್ಕರ್ಮಿಗಳು ಸಹೋದರರ ಮೇಲೆ‌ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಇಬ್ಬರ ತಲೆ ಹಾಗೂ ಕೈಗಳಿಗೆ ತಲ್ವಾರ್‌ನಿಂದ ಹಲ್ಲೆ ಮಾಡಲಾಗಿತ್ತು. ಇದನ್ನೂ ಓದಿ: ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಬೆಂಕಿ – ಪಾಲಿಕೆ ಸಿಬ್ಬಂದಿ ಸೇರಿ 9 ಮಂದಿಗೆ ಗಾಯ

    ಸ್ಥಳಿಯರು ಇವರಿಬ್ಬರನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದರು. ವಿಜಯ್ ಎರಡೂ ಕೈಗಳಿಂದ ತೀವ್ರ ರಕ್ತಸ್ರಾವ ಆಗಿದ್ದರಿಂದ ಅವರನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ.

     

    ನವನಗರ ಪೊಲೀಸರು ತನಿಖೆ ಆರಂಭಿಸಿದಾಗ ಸ್ನೇಹಿತರಿಂದಲೇ ಈ ಹಲ್ಲೆ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ. ವಿಜಯ್ ಬೇವೂರ್ ಸ್ನೇಹಿತರಾದ ವಿಠ್ಠಲ ಬಂಟನೂರು, ವಿಲಾಸ ಜಾಧವ್‌, ಬಳಿಗೇರ ಹಾಗೂ ಸಮೀರ್ ಮುಲ್ಲಾ ಎಂಬುವರು ಕ್ರಿಕೆಟ್‌ (Cricket) ವಿಚಾರಕ್ಕೆ ನಡೆದ ಜಗಳಕ್ಕೆ ಸಿಟ್ಟಾಗಿ ಹಲ್ಲೆ ನಡೆಸಿರುವ ವಿಚಾರ ಗೊತ್ತಾಗಿದೆ.

    ಶರಣಪ್ಪ ಬೇವೂರ್ ಹುಬ್ಬಳ್ಳಿಯಲ್ಲಿ ಮೆಡಿಕಲ್‌ ಓದುತ್ತಿದ್ದ. ಗುರುವಾರ ಅಣ್ಣ ವಿಜಯ ಅವರನ್ನು ಭೇಟಿ ಆಗಲು ಬಂದಿದ್ದ. ಈ ವೇಳೆ ನಾಲ್ವರು ಆರೋಪಿಗಳು ವಿಜಯ್ ಮೇಲೆ ಹಲ್ಲೆ ಮಾಡಲು ಬಂದಿದ್ದಾರೆ. ಆಗ ಸಹೋದರ ಶರಣಪ್ಪ ತಡೆಯಲು ಮುಂದಾದಾಗ ಆತನ ಮೇಲೂ ತಲ್ವಾರ್‌ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

     

    ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿಠ್ಠಲ್‌ನನ್ನು ವಶಕ್ಕೆ ಪಡೆಯಲಾಗಿದ್ದು, ಮೂವರ ವಶಕ್ಕಾಗಿ ಬಲೆ ಬೀಸಲಾಗಿದೆ. ಆರೋಪಿಗಳೆಲ್ಲರೂ ಸಿಕ್ಕಿದ ನಂತರವೇ ಹಲ್ಲೆಗೆ ಸ್ಪಷ್ಟ ಕಾರಣ ತಿಳಿಯಲಿದೆ ಎಂದು ಬಾಗಲಕೋಟೆ ಎಸ್.ಪಿ ಜಯಪ್ರಕಾಶ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಂಡು ಮಗುವಾಯ್ತು ಅಂತ ಪಾರ್ಟಿ ಕೊಡಿಸಿದವನ ತಲೆ ಬುರುಡೆ ಓಪನ್ ಮಾಡಿದ ಸ್ನೇಹಿತರು!

    ಗಂಡು ಮಗುವಾಯ್ತು ಅಂತ ಪಾರ್ಟಿ ಕೊಡಿಸಿದವನ ತಲೆ ಬುರುಡೆ ಓಪನ್ ಮಾಡಿದ ಸ್ನೇಹಿತರು!

    ಬೆಂಗಳೂರು: ವ್ಯಕ್ತಿಯೊಬ್ಬ ತನಗೆ ಗಂಡು (Boy Baby) ಮಗುವಾಯಿತು ಎಂದು ಸ್ನೇಹಿತರಿಗೆ ಪಾರ್ಟಿ ಕೊಡಿಸಿದ. ಆದರೆ ಆ ಸ್ನೇಹಿತರು ಆತನ ತಲೆ ಬರುಡೆಯನ್ನೇ ಓಪನ್ ಮಾಡಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿ (Bengaluru) ನಲ್ಲಿ ನಡೆದಿದೆ.

    ರಂಗನಾಥ್ ಹಲ್ಲೆಗೊಳಗಾದ ವ್ಯಕ್ತಿ. ತನಗೆ ಗಂಡು ಮಗು ಆದ ಎಂಬ ಖುಷಿಯಲ್ಲಿ ಸ್ನೇಹಿತರಾದ ಮನೋಜ್, ಮಧುಸೂದ್, ಪ್ರಸಾದ್‍ಗೆ ಪಾರ್ಟಿ ಕೊಡಿಸಿದ್ದನು. ಈ ಪಾರ್ಟಿಯಲ್ಲಿ ರಾಜಕೀಯ ಪಕ್ಷದ ವಿಚಾರವಾಗಿ ಭಾರೀ ಚರ್ಚೆ ನಡೆದಿದೆ.

    ಪಾರ್ಟಿ ವೇಳೆ ರಂಗನಾಥ್ ಹಾಗೂ ಸ್ನೇಹಿತರ ನಡುವೆ ರಾಜಕೀಯ ಮಾತನಾಡುವಾಗ ಗಲಾಟೆ ಆಗಿದೆ. ಕಾಂಗ್ರೆಸ್ (Congress) ಪರ ಮಾತನಾಡುತ್ತಿದ್ದ ರಂಗನಾಥ್‍ಗೆ ಸ್ನೇಹಿತರು ಬಿಜೆಪಿ (BJP) ಪರ ಮಾತನಾಡಿಕೊಂಡು ಕಿಚಾಯಿಸಿದ್ದಾರೆ. ಆಗ ರಂಗನಾಥ್ ಹಾಗೂ ಸ್ನೇಹಿತರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿದೆ. ಜಗಳ ತಾರಕಕ್ಕೇರಿ ಪಕ್ಕದಲ್ಲಿದ್ದ ಬಿಯರ್ ಬಾಟ್ಲಿಯಿಂದ ರಂಗನಾಥ್ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆಯಿಂದ ತೀವ್ರ ರಕ್ತಸ್ರಾವ ಹಿನ್ನೆಲೆ ರಂಗನಾಥ್‍ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ರಂಗನಾಥ್ ಹಾಗೂ ಸ್ನೇಹಿತರು ಸ್ವಿಗ್ಗಿ ಡೆಲಿವರಿ ಬಾಯ್ (Swiggy Deliver Boy) ಆಗಿ ಕೆಲಸ ಮಾಡಿಕೊಂಡಿದ್ದು, ಅಮೃತಹಳ್ಳಿ ಬಳಿ ಇರುವ ಈಶ್ವರ ದೇವಸ್ಥಾನದ ಬಳಿ ರೂಂ ಮಾಡಿಕೊಂಡಿದ್ದರು. ಸದ್ಯ ಹಲ್ಲೆ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಾಯ್ ಫ್ರೆಂಡ್ ಬಗ್ಗೆ ಮೌನ ಮುರಿದ ಕೀರ್ತಿ ಸುರೇಶ್

    ಬಾಯ್ ಫ್ರೆಂಡ್ ಬಗ್ಗೆ ಮೌನ ಮುರಿದ ಕೀರ್ತಿ ಸುರೇಶ್

    ಕೆಲ ದಿನಗಳ ಹಿಂದೆಯಷ್ಟೇ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ (Keerthi Suresh) ಅವರು ಯುವ ಉದ್ಯಮಿಯೊಬ್ಬರ ಜೊತೆಗಿನ ಫೋಟೋ ಹಂಚಿಕೊಂಡಿದ್ದರು. ಇಬ್ಬರೂ ಒಂದೇ ಕಲರ್ ಬಟ್ಟೆ ಹಾಕುವುದರ ಜೊತೆಗೆ ತುಂಬಾ ಆತ್ಮೀಯವಾಗಿ ಫೋಟೋಗೆ ಪೋಸ್ ನೀಡಿದ್ದರು. ಹಾಗಾಗಿ ಯುವ ಉದ್ಯಮಿಯನ್ನು ಕೀರ್ತಿ ಮದುವೆಯಾಗಲಿದ್ದಾರಾ ಎನ್ನುವ ಅನುಮಾನ ಮೂಡಿತ್ತು. ಹಲವು ಈ ರೀತಿಯ ಪ್ರಶ್ನೆಗಳನ್ನು ಅವರಿಗೆ ಕೇಳಿದ್ದರು. ಇದೀಗ ನಟಿ ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ.

    ಕೀರ್ತಿ ಸುರೇಶ್ (Keerthy Suresh) ಮಹಾನಟಿಯಾಗಿ ಸಕ್ಸಸ್ ಕಂಡಿರುವ ನಟಿ. ಸೌತ್ ಸಿನಿಮಾರಂಗದಲ್ಲಿ ಗಟ್ಟಿ ನಾಯಕಿಯಾಗಿ ನೆಲೆ ಗಿಟ್ಟಿಸಿಕೊಂಡಿದ್ದಾರೆ. ಹಾಗಾಗಿ ಅವರ ಮದುವೆ (Wedding) ವಿಷ್ಯವಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಇದೀಗ ಮತ್ತೆ ಮದುವೆ ವಿಚಾರ ಚಾಲ್ತಿಯಲ್ಲಿತ್ತು. ಕಾರಣ ಯುವ ಉದ್ಯಮಿಯ ಜೊತೆಗಿನ ಫೋಟೋ ವೈರಲ್ ಆಗಿತ್ತು.

    ದಳಪತಿ ವಿಜಯ್ (Thalapathy Vijay) ಜೊತೆ ಕೀರ್ತಿ ಸುರೇಶ್ ಮದುವೆ ಎಂದು ಹೇಳಲಾಗಿತ್ತು. ಈ ಎಲ್ಲಾ ಊಹಾಪೋಹಗಳಿಗೂ ಕೀರ್ತಿ ತಾಯಿ ಬ್ರೇಕ್ ಹಾಕಿದ್ದರು. ಇತ್ತೀಚೆಗಷ್ಟೇ ಉದ್ಯಮಿಯೊಬ್ಬರ ಜೊತೆ ಕೀರ್ತಿ ಸುರೇಶ್ ಇರುವ ಫೋಟೋ ಎಲ್ಲೆಡೆ ಸದ್ದು ಮಾಡಿತ್ತು. ಬಾಯ್‌ಫ್ರೆಂಡ್‌ನ ಪರಿಚಯಿಸಿದ್ರಾ? ಎಂಬ ಅನುಮಾನ ಅಭಿಮಾನಿಗಳಿಗೆ ಕಾಡಿತ್ತು. ಇದನ್ನೂ ಓದಿ:ಕನ್ನಡದ ‘ಅಮೃತವರ್ಷಿಣಿ’ ಖ್ಯಾತಿಯ ನಟ ಶರತ್ ಬಾಬು ನಿಧನ

    ಕೀರ್ತಿ ಸುರೇಶ್ ಪ್ರೀತಿಲಿ ಬಿದ್ದಿದ್ದಾರೆ ಅನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ, ಆತ ತನ್ನ ಸ್ನೇಹಿತನೆಂದು ಕೀರ್ತಿ ಹೇಳಿಕೊಂಡಿದ್ದಾರೆ. ಈ ವಿಚಾರದಲ್ಲಿ ಸ್ನೇಹಿತರನ್ನು (Friends) ಎಳೆತರಬೇಡಿ ಎಂದು ಮನವಿ ಮಾಡಿದ್ದಾರೆ.  ಸ್ನೇಹಿತನ ಬರ್ತ್‌ಡೇ ಪಾರ್ಟಿಯಲ್ಲಿ ಆತನೊಟ್ಟಿಗೆ ಇರುವ ಫೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಗಿ ತಿಳಿಸಿದ್ದಾರೆ. ಅಂದಹಾಗೆ ಆತನ ಹೆಸರು ಫರ್ಹಾನ್ ಬಿನ್ ಲೈತ್ (Farhan Bin Laith). ರಿಯಲ್ ಎಸ್ಟೇಟ್ ಉದ್ಯಮಿ. ರೆಸ್ಟೋರೆಂಟ್ ಒಡೆಯ.

  • ರಿಷಬ್ ಶೆಟ್ಟಿ ಸ್ನೇಹ ತೀರಾ ಹಳೆದು: ಅಚ್ಚರಿ ಹೇಳಿಕೆ ನೀಡಿದ ನವಾಜುದ್ದೀನ್ ಸಿದ್ದಿಕಿ

    ರಿಷಬ್ ಶೆಟ್ಟಿ ಸ್ನೇಹ ತೀರಾ ಹಳೆದು: ಅಚ್ಚರಿ ಹೇಳಿಕೆ ನೀಡಿದ ನವಾಜುದ್ದೀನ್ ಸಿದ್ದಿಕಿ

    ಬಾಲಿವುಡ್ (Bollywood) ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಹಾಗೂ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ (Rishabh Shetty) ಜೊತೆಗಿನ ಸ್ನೇಹ ತೀರಾ ಹಳೆಯದು ಎನ್ನುವ ಮೂಲಕ ನವಾಜುದ್ದೀನ್ ಸಿದ್ಧಿಕಿ ಅಚ್ಚರಿಯ ಸಂದೇಶವೊಂದನ್ನು ರವಾಣಿಸಿದ್ದಾರೆ. ಕಾಂತಾರ (Kantara) ಸಿನಿಮಾದ ಯಶಸ್ಸಿನ ನಂತರ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ಹಾಗೂ ನವಾಜುದ್ದೀನ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅದೊಂದು ಆಕಸ್ಮಿಕ ಭೇಟಿ ಎಂದು ಹೇಳಲಾಗಿತ್ತು.

    ಕಾಂತಾರ ಯಶಸ್ಸಿನ ಬೆನ್ನಲ್ಲೇ ತಮ್ಮ ಮನೆಗೆ ರಿಷಬ್ ಮತ್ತು ಟೀಮ್ ಕರೆಯಿಸಿಕೊಂಡಿದ್ದ ನವಾಜುದ್ದೀನ್ ಕಾಂತಾರ ಟೀಮ್ ಗೆ ಗೌರವ ಸೂಚಿಸಿದ್ದರು. ರಜನಿಕಾಂತ್ ಸೇರಿದಂತೆ ಹಲವರು ಇದೇ ರೀತಿಯಲ್ಲೇ ಗೌರವ ನೀಡಿದ್ದರಿಂದ, ನವಾಜುದ್ದೀನ್ ಭೇಟಿ ಕೂಡ ಹಾಗೆಯೇ ಎಂದು ನಂಬಲಾಗಿತ್ತು. ಆದರೆ, ನವಾಜುದ್ದೀನ್ ಮತ್ತು ರಿಷಬ್ ಹಲವು ವರ್ಷಗಳ ಸ್ನೇಹಿತರು (Friends) ಎನ್ನುವುದನ್ನು ಸ್ವತಃ ನವಾಜುದ್ದೀನ್ ಬಹಿರಂಗ ಪಡಿಸಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಹುಟ್ಟು ಹಬ್ಬಕ್ಕೆ ‘ಖುಷಿ’ಯ ಹಾಡು ರಿಲೀಸ್

    ಕಾಂತಾರ 2 RISHAB SHETTY

    ರಿಷಬ್ ಮತ್ತು ನಾನು ಹಳೆಯ ಸ್ನೇಹಿತರು. ರಂಗಭೂಮಿಯಲ್ಲಿ ನಮ್ಮಿಬ್ಬರಿಗೂ ಒಬ್ಬರೇ ಗುರುಗಳು. ಅವರು ರಂಗಭೂಮಿಯಲ್ಲಿ ಸಾಕಷ್ಟು ಸಕ್ರೀಯರಾಗಿದ್ದಾರೆ. ಆದರೆ, ನಾನು ಅಲ್ಲಿಂದ ಬಂದು ಸಿನಿಮಾ ರಂಗದಲ್ಲಿ ತೊಡಗಿಕೊಂಡು ಬಿಟ್ಟೆ. ನನಗೂ ಮತ್ತು ರಿಷಬ್ ಯೋಜನೆಗಳಿಗೂ ಸಾಕಷ್ಟು ಸಾಮಿಪ್ಯವಿದೆ. ಹಾಗಾಗಿ ಒಟ್ಟಿಗೆ ಕೂತು ಕೆಲ ಹೊತ್ತು ಹರಟೆ ಹೊಡೆದೆವು ಎಂದು ನವಾಜುದ್ದೀನ್ ಹೇಳಿಕೊಂಡಿದ್ದಾರೆ.

    ಕಾಂತಾರ 2 ಸಿನಿಮಾದಲ್ಲಿ ನವಾಜುದ್ದೀನ್ ನಟಿಸಲಿದ್ದಾರೆ ಎನ್ನುವ ಸುದ್ದಿಯಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಸಿನಿಮಾ ಶುರುವಾಗಲು ಇನ್ನೂ ಟೈಮ್ ಇದೆ. ನನಗೆ ಅದರಲ್ಲಿ ಪಾತ್ರವಿದೆಯೋ ಇಲ್ಲವೋ ಗೊತ್ತಿಲ್ಲ. ಇದ್ದರೆ, ಅವರು ಕರೆದರೆ ಕಂಡಿತಾ ಹೋಗಿ ನಟಿಸುತ್ತೇನೆ ಎಂದು ತಿಳಿಸಿದ್ದಾರೆ.

  • ಹಣಕ್ಕಾಗಿ ಪೀಡಿಸುತ್ತಿದ್ದ ಪ್ರಾಣ ಸ್ನೇಹಿತನನ್ನೇ ಹತ್ಯೆಗೈದ

    ಹಣಕ್ಕಾಗಿ ಪೀಡಿಸುತ್ತಿದ್ದ ಪ್ರಾಣ ಸ್ನೇಹಿತನನ್ನೇ ಹತ್ಯೆಗೈದ

    ಯಾದಗಿರಿ: ಹಣಕ್ಕಾಗಿ (Cash) ಪೀಡಿಸುತ್ತಿದ್ದ ಪ್ರಾಣ ಸ್ನೇಹಿತನನ್ನೇ (Friend) ವ್ಯಕ್ತಿಯೊಬ್ಬ ಹತ್ಯೆಗೈದ ಘಟನೆ ಯಾದಗಿರಿ (Yadgir) ಜಿಲ್ಲೆಯ ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ ಗ್ರಾಮದಲ್ಲಿ ನಡೆದಿದೆ.

    ಮೃತನನ್ನು ರಾಜೇಸಾಬ್ ಎಂದು ಹಾಗೂ ಆರೋಪಿಯನ್ನು ವೀರೇಶ್‌ ಎಂದು ಗುರುತಿಸಲಾಗಿದೆ. ಬಲಶೆಟ್ಟಿಹಾಳ ಗ್ರಾಮದ ರಾಜೇಸಾಬ್ ಹಾಗೂ ವೀರೇಶ್‌ ಇಬ್ಬರು ಕುಚುಕು ಗೆಳೆಯರಾಗಿದ್ದರು. ರಾಜೇಸಾಬ್ ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ. ಜೊತೆಗೆ ಈತನಿಗೆ ಕುಡಿತದ ಚಟವೂ ಇತ್ತು. ಈ ಹಿನ್ನೆಲೆಯಲ್ಲಿ ರಾಜೇಸಾಬ್‌ ತನ್ನ ಸ್ನೇಹಿತರಿಗೆ ಹಣ ನೀಡುವಂತೆ ಪೀಡಿಸುತ್ತಿದ್ದ. ಸ್ನೇಹಿತರು ಹಣ ನೀಡದಿದ್ದರೇ ಕಿರುಕುಳ ಕೊಡುತ್ತಿದ್ದ.

    ಇತ್ತೀಚೆಗೆ ಕೇಸ್ ಒಂದರಲ್ಲಿ ಜೈಲು ಪಾಲಾಗಿದ್ದ ರಾಜೇಸಾಬ್ ಕಳೆದ 3 ದಿನಗಳ ಹಿಂದೆ ಬೇಲ್ ಮೇಲೆ ಬಿಡುಗಡೆಗೊಂಡು ಊರಿಗೆ ಬಂದಿದ್ದ. ಜೈಲಿನಿಂದ ಹೊರಬಂದ ಮೇಲೆ ರಾಜೇಸಾಬ್, ಸ್ನೇಹಿತ ವೀರೇಶ್‌ನನ್ನು 15 ಸಾವಿರ ರೂ. ಹಣ ಕೊಡುವಂತೆ ಪೀಡಿಸುತ್ತಿದ್ದ. ವೀರೇಶ್‌ ಸ್ನೇಹಿತನಿಗೆ ಸಾಕಷ್ಟು ಬಾರಿ ಹಣ ನೀಡಿ ಸಹಾಯವನ್ನೂ ಮಾಡಿದ್ದ. ಇದನ್ನೂ ಓದಿ: ಮದುವೆಯೊಂದರಲ್ಲಿ 500 ರೂ. ನೋಟುಗಳ ಸುರಿಮಳೆ – ಹಣಕ್ಕಾಗಿ ಮುಗಿಬಿದ್ದ ಜನರು

    ರಾಜೇಸಾಬ್ ಹಾಗೂ ವೀರೇಶ್‌ ಶನಿವಾರ ಬಲಶೆಟ್ಟಿಹಾಳ ಗ್ರಾಮದ ಹೊರಹೊಲಯದ ಜಮೀನಿಗೆ ಮದ್ಯಪಾನ ಮಾಡಲು ಹೋಗಿದ್ದರು. ಈ ವೇಳೆ ಹಣದ ವಿಚಾರವಾಗಿ ಇಬ್ಬರ ನಡುವೆ ಹಣಕಾಸಿನ ವಿಚಾರವಾಗಿ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗಿದೆ. ಗಲಾಟೆಯ ಕೋಪದಲ್ಲಿ ಪಕ್ಕದಲ್ಲೇ ಇದ್ದ ಕೊಡಲಿಯಿಂದ ರಾಜಾಸಾಬ್‌ನ ಕುತ್ತಿಗೆ ಮತ್ತು ತಲೆಗೆ ಹೊಡೆದ ವೀರೇಶ್‌ ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ಘಟನೆ ನಡೆದ 12 ಗಂಟೆಗಳಲ್ಲಿ ಹುಣಸಗಿ ಪೊಲೀಸರು ಆರೋಪಿ ವೀರೇಶ್‌ನನ್ನು ಬಂಧಿಸಿದ್ದು, ಹಣಕಾಸಿನ ವಿಚಾರಕ್ಕೆ ಕುಡಿದ ನಶೆಯಲ್ಲಿ ಕೊಲೆ ಮಾಡಿರೋದಾಗಿ ಪೊಲೀಸರಿಂದ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ:  ನನ್ನ ಮೇಲೆ ಹಬ್ಬಿಸ್ತಿರೊ ಸುಳ್ಳು ಆಪಾದನೆಗಳೆಲ್ಲ ವ್ಯವಸ್ಥಿತ ಪಿತೂರಿ: ರೂಪಾಗೆ ರೋಹಿಣಿ ತಿರುಗೇಟು

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗೆಳೆಯನ ಶವವನ್ನು ರಸ್ತೆ ಬದಿಯಲ್ಲೇ ಬಿಟ್ಟು ಹೋದ ವ್ಯಾಪಾರಿಗಳು

    ಗೆಳೆಯನ ಶವವನ್ನು ರಸ್ತೆ ಬದಿಯಲ್ಲೇ ಬಿಟ್ಟು ಹೋದ ವ್ಯಾಪಾರಿಗಳು

    ಉಡುಪಿ: ಸಂಗಡಿಗರು ತನ್ನ ಗೆಳೆಯನ ಶವವನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋದ ಘಟನೆ ನಡೆದಿದೆ. ಮಾನವೀಯತೆಯನ್ನೇ ಮರೆತು ಹಣ್ಣಿನ ವ್ಯಾಪಾರಿಗಳು ಹೇಗೆ ವರ್ತಿಸಿದ್ದಾರೆ ಎಂದು ಜನ ದೂರಿದ್ದಾರೆ.

    ಮಲ್ಪೆ ಪೊಲೀಸ್ ಠಾಣಾ (Malpe Police Station Limit) ವ್ಯಾಪ್ತಿಯ ಕೆಮ್ಮಣ್ಣು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಮಾನವೀಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಡುಪಿಯಲ್ಲಿ ಕಲ್ಲಂಗಡಿ ಮಾರುವ ವ್ಯಾಪಾರಿಗಳು ತಮ್ಮ ಸಂಗಡಿಗರೊಂದಿಗೆ ಟೆಂಪೋದಲ್ಲಿ ತೆರಳುತ್ತಿದ್ದಾಗ 45 ವರ್ಷದ ಕಾರ್ಮಿಕ ಹನುಮಂತ ಮಾರ್ಗ ಮಧ್ಯೆಯೇ ಅನಾರೋಗ್ಯದಿಂದ ಮೃತಪಟ್ಟಿರುವ ಸಾಧ್ಯತೆಯಿದೆ. ಇದನ್ನೂ ಓದಿ: ಪುಲ್ವಾಮಾ ದಾಳಿ ಒಂದು ವ್ಯವಸ್ಥಿತ ಪಿತೂರಿ – ವಾಟ್ಸಪ್‌ ಸ್ಟೇಟಸ್‌ ಹಾಕಿದ ಸರ್ಕಾರಿ ಶಾಲಾ ಶಿಕ್ಷಕ

    ಸಾವನ್ನಪ್ಪಿದಕ್ಕೆ ದಾರಿ ಮಧ್ಯೆಯೇ ಮೃತದೇಹ ಬಿಟ್ಟು ವ್ಯಾಪಾರಿಗಳು ಹೋಗಿದ್ದಾರೆ. ಹನುಮಂತ ವಿಪರೀತವಾಗಿ ಕುಡಿದಿದ್ದ ಹಾಗಾಗಿ ಆತನನ್ನು ವಾಹನದಲ್ಲಿ ಕರೆದುಕೊಂಡು ಹೋಗದೆ ರಸ್ತೆ ಬದಿಯಲ್ಲಿ ಮಲಗಿಸಿದೆವು ಎಂದು ಜೊತೆಗಿದ್ದವರು ಪೊಲೀಸರ ಬಳಿ ಹೇಳಿದ್ದಾರೆ. ಆದರೆ ಇದೊಂದು ಅನುಮಾನಾಸ್ಪದ ಸಾವಾಗಿದ್ದು, ಮಲ್ಪೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k