Tag: friends

  • ಸ್ನೇಹಿತರ ಮುಂದೆ ಜಲಸಮಾಧಿಯಾದ ಬೆಂಗಳೂರಿನ ಯುವಕ

    ಸ್ನೇಹಿತರ ಮುಂದೆ ಜಲಸಮಾಧಿಯಾದ ಬೆಂಗಳೂರಿನ ಯುವಕ

    ಚಾಮರಾಜನಗರ: ಸ್ನೇಹಿತರ ದಿನದೊಂದು ಗೆಳಯರ ಜೊತೆಗೆ ಮಲೆಮಾದಪ್ಪನ ದರ್ಶನಕ್ಕೆ ಬಂದಿದ್ದ ಯುವಕನೊರ್ವ ನೀರಿನಲ್ಲಿ ಮುಳುಗಿ ಜಲ ಸಮಾಧಿಯಾದ ಘಟನೆ ನಡೆದಿದೆ.

    ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿನ ಅಂತರಗಂಗೆಯಲ್ಲಿ ಸ್ನಾನ ಮಾಡಲು ಹೋದಾಗ ಬೆಂಗಳೂರಿನ ನಿವಾಸಿಯಾದ ಪ್ರಭು (28) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

    ಬೆಂಗಳೂರಿನಿಂದ 9 ಜನ ಸ್ನೇಹಿತರು ಪ್ರವಾಸಕ್ಕೆಂದು ಆಗಮಿಸಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಪ್ರವಾಸಕ್ಕೆ ಹೋಗಿದ್ದವರ ಪೈಕಿ ಪ್ರಭುವಿಗೆ ಮಾತ್ರ ಈಜು ಬರುತಿತ್ತು ಎಂದು ತಿಳಿದುಬಂದಿದೆ. ಅಲ್ಲಿದ್ದ ಬೇರೆ ಯಾವ ಗೆಳೆಯರಿಗೂ ಈಜು ಬಾರದ ಹಿನ್ನೆಲೆಯಲ್ಲಿ ಮುಳುಗುತ್ತಿದ್ದ ಸ್ನೇಹಿತನನ್ನು ರಕ್ಷಿಸಲಾಗದೇ ಕೂಗಾಡಿ ಕೊನೆಗೆ ಪೋಲಿಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಯುವಕನ ಶೋಧಕಾರ್ಯವನ್ನು ಮಲೆಮಹದೇಶ್ವರ ಬೆಟ್ಟದ ಪೊಲೀಸರು ಮುಂದುವರಿಸಿದ್ದಾರೆ.

  • ಹುಟ್ಟುಹಬ್ಬದ ದಿನದಂದೇ ನಾಲ್ವರು ಸ್ನೇಹಿತರಿಂದ ಗ್ಯಾಂಗ್‍ರೇಪ್

    ಹುಟ್ಟುಹಬ್ಬದ ದಿನದಂದೇ ನಾಲ್ವರು ಸ್ನೇಹಿತರಿಂದ ಗ್ಯಾಂಗ್‍ರೇಪ್

    ಮುಂಬೈ: ಯುವತಿಯ ಹುಟ್ಟುಹಬ್ಬದ ದಿನದಂದೇ ಆಕೆಯ ನಾಲ್ವರು ಸ್ನೇಹಿತರು ಸೇರಿ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಜುಲೈ 7ರಂದು ಮಹಾರಾಷ್ಟ್ರದ ಮುಂಬೈನಲ್ಲಿರುವ ಚುನಬುಟ್ಟಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    19 ವರ್ಷದ ಸಂತ್ರಸ್ತೆ ಜುಲೈ 7ರಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಔರಂಗಬಾದ್‍ನಿಂದ ಮುಂಬೈಗೆ ಬಂದಿದ್ದಳು. ಈ ವೇಳೆ ಆಕೆಯ ಸ್ನೇಹಿತರು ತಮ್ಮ ಮನೆಯಲ್ಲಿಯೇ ಹುಟ್ಟುಹಬ್ಬ ಆಚರಿಸೋಣ ಎಂದು ನಿರ್ಧರಿಸಿದ್ದಾರೆ. ಸಂತ್ರಸ್ತೆ ಕೇಕ್ ಕತ್ತರಿಸಿದ ಬಳಿಕ ನಾಲ್ವರು ಸ್ನೇಹಿತರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಈ ಘಟನೆ ನಡೆದ ನಂತರ ಸಂತ್ರಸ್ತೆ ಔರಂಗಬಾದ್‍ನಲ್ಲಿ ಇರುವ ತನ್ನ ಮನೆಗೆ ಹೋಗಿದ್ದಾಳೆ. ಆದರೆ ಈ ಬಗ್ಗೆ ಸಂತ್ರಸ್ತೆ ಪೊಲೀಸರಿಗಾಗಲಿ ತನ್ನ ಪೋಷಕರಿಗಾಗಲಿ ವಿಷಯವನ್ನು ತಿಳಿಸಲಿಲ್ಲ.

    ಜುಲೈ 24ರಂದು ಸಂತ್ರಸ್ತೆ ತನ್ನ ಖಾಸಗಿ ಅಂಗದಲ್ಲಿ ನೋವಾಗುತ್ತಿದೆ ಎಂದು ಪೋಷಕರ ಬಳಿ ಹೇಳಿಕೊಂಡಳು. ಆಗ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಆಕೆ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ. ಜುಲೈ 30ರಂದು ಸಂತ್ರಸ್ತೆ ನಡೆದ ಘಟನೆಯನ್ನು ತನ್ನ ತಂದೆಯ ಬಳಿ ಹಂಚಿಕೊಂಡಿದ್ದಾಳೆ. ಈ ವಿಷಯ ತಿಳಿದ ತಕ್ಷಣ ಯುವತಿಯ ತಂದೆ ಪೊಲೀಸ್ ಠಾಣೆಗೆ ತೆರಳಿ ನಾಲ್ವರು ಯುವಕರ ವಿರುದ್ಧ ಬೇಗಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ದೂರು ದಾಖಲಿಸಿಕೊಂಡ ಬೇಗಂಪುರ ಪೊಲೀಸರು ಈ ಪ್ರಕರಣವನ್ನು ಮುಂಬೈನ ಚುನಬುಟ್ಟಿ ಪೊಲೀಸ್ ಠಾಣೆಗೆ ಈ ಹಸ್ತಾಂತರಿಸಿದರು. ಚುನಬುಟ್ಟಿ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪೊಲೀಸರು, ಸಂತ್ರಸ್ತೆ ದೇಹದ ಮೇಲೆ ಹಲವಾರು ಗಾಯಗಳಾಗಿದ್ದು, ಈಗ ಆಕೆ ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಸದ್ಯ ಔರಂಗಬಾದ್‍ನ ಆಸ್ಪತ್ರೆಯಲ್ಲಿ ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ತಿಳಿಸಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಹೇಳಲಾಗುತ್ತಿದೆ.

  • ಕಾರಿನಲ್ಲಿ ಹೋಗ್ತಿದ್ದಾಗ ಸ್ನೇಹಿತರಿಗೆಲ್ಲಾ SORRY ಕೇಳಿದ ಸಿದ್ಧಾರ್ಥ್

    ಕಾರಿನಲ್ಲಿ ಹೋಗ್ತಿದ್ದಾಗ ಸ್ನೇಹಿತರಿಗೆಲ್ಲಾ SORRY ಕೇಳಿದ ಸಿದ್ಧಾರ್ಥ್

    ಮಂಗಳೂರು: ಕೆಫೆ ಕಾಫಿ ಡೇ ಮಾಲೀಕ, ಉದ್ಯಮಿ ಸಿದ್ಧಾರ್ಥ್ ನಾಪತ್ತೆಯಾಗುವ ಮೊದಲು ತನ್ನ ಸ್ನೇಹಿತರಿಗೆಲ್ಲಾ ಕರೆ ಮಾಡಿ ನನ್ನನ್ನು ಕ್ಷಮಿಸಿಬಿಡಿ ಎಂದು ಹೇಳಿದ್ದಾರೆ.

    ಏಕಾಏಕಿ ಸಿದ್ದಾರ್ಥ್ ನಾಪತ್ತೆಯಾಗಿದ್ದರಿಂದ ಕಂಕನಾಡಿ ಪೊಲೀಸರು ಕಾರಿನ ಡ್ರೈವರ್ ಬಸವರಾಜ್ ನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ, ಸಾಹೇಬ್ರು ದಾರಿಯುದ್ಧಕ್ಕೂ ಸ್ನೇಹಿತರಿಗೆಲ್ಲಾ ಕರೆ ಮಾಡಿ ನನ್ನನ್ನು ಕ್ಷಮಿಸಿಬಿಡಿ ಎಂದು ಕೇಳಿಕೊಳ್ಳುತ್ತಿದ್ದರು. ಮಂಗಳೂರು ಸರ್ಕಲ್‍ಗೆ ಹೋಗುವವರೆಗೂ ಸ್ನೇಹಿತರ ಬಳಿ ಕ್ಷಮೆ ಕೇಳಿದ್ದಾರೆ ಎಂದು ವಿವರಿಸಿದ್ದಾರೆ.

    ಸೇತುವೆಗೆ ಬಂದ ಬಳಿಕ ಕಾರು ನಿಲ್ಲಿಸಿ ನೀನು ಹೋಗು, ನಾನು ವಾಕಿಂಗ್‍ಗೆ ಹೋಗಬೇಕು ಎಂದು ಹೇಳಿದ್ದರು. ಹೀಗಾಗಿ ನಾನು ಕಾರು ನಿಲ್ಲಿಸಿದ್ದೇನೆ. ಹೀಗೆ ಕಾರಿನಿಂದ ಇಳಿದ ಅವರು ವಾಕ್ ಮಾಡಿದವರು ಮತ್ತೆ ವಾಪಸ್ ಕಾರು ಬಳಿ ಬಂದಿಲ್ಲ ಎಂದು ಬಸವರಾಜ್ ಹೇಳಿದ್ದಾರೆ.

    ಅಲ್ಲದೆ ವಿಚಾರಣೆಯ ವೇಳೆ ಬಸವರಾಜ್, `ಸಾಹೇಬ್ರು ಇಂಗ್ಲೀಷ್ ನಲ್ಲಿ ನಾತನಾಡುತ್ತಿದ್ದರು. ಹೀಗಾಗಿ ನನಗೆ ಅದು ಅರ್ಥವಾಗಲಿಲ್ಲ’ ಎಂದು ಹೇಳಿದ್ದಾರೆ.

    ಸಿದ್ದಾರ್ಥ್ ಅವರು ತಮ್ಮ ಪರ್ಸ್ ಹಾಗೂ ಇನ್ನಿತರ ವಸ್ತುಗಳನ್ನು ಕಾರಿನಲ್ಲೇ ಬಿಟ್ಟು ಮೊಬೈಲ್ ನಲ್ಲಿ ಮಾತನಾಡಿಕೊಂಡು ಸೇತುವೆಯ ಮೇಲೆ ಏಕಾಂಗಿಯಾಗಿ ಹೋಗಿದ್ದಾರೆ. ಹೀಗೆ ಹೋದವರು ಕೆಲ ಹೊತ್ತು ಬರದಿದ್ದರಿಂದ ಅವರನ್ನು ಬಸವರಾಜ್ ಅವರು ಕಾರಿನಲ್ಲೇ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಈ ವೇಳೆ ಸಿದ್ದಾರ್ಥ್ ಅವರು `ನೀನು ಬರಬೇಡ ಇಲ್ಲೇ ಇರು’ ಎಂದು ಹೇಳಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ತಮ್ಮ ಡ್ರೈವರ್ ಗೆ ಬರಬೇಡ ಎಂದು ತಿಳಿಸಿ ಹೋದ ಸಿದ್ದಾರ್ಥ್ ಮತ್ತೆ ಬರದೇ ಇದ್ದಾಗ ಆತಂಕಗೊಂಡ ಬಸವರಾಜ್, ಸಿದ್ದಾರ್ಥ್ ಅವರ ಕುಟುಂಬಸ್ಥರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

  • ಸ್ನೇಹಿತರಿಂದ ಗುದದ್ವಾರದ ಮೂಲಕ ಏರ್ ಪಂಪ್- 6 ವರ್ಷದ ಬಾಲಕ ಸಾವು

    ಸ್ನೇಹಿತರಿಂದ ಗುದದ್ವಾರದ ಮೂಲಕ ಏರ್ ಪಂಪ್- 6 ವರ್ಷದ ಬಾಲಕ ಸಾವು

    ಇಂದೋರ್: ಆಟವಾಡುತ್ತಿದ್ದಾಗ 6 ವರ್ಷದ ವಿದ್ಯಾರ್ಥಿಗೆ ಅದೇ ವಯಸ್ಸಿನ ಆತನ ಸ್ನೇಹಿತರು ಗುದದ್ವಾರದ ಮೂಲಕ ಏರ್ ಪಂಪ್ ಮಾಡಿದ್ದರಿಂದ ವಿದ್ಯಾರ್ಥಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

    ಘಟನೆ ಕುರಿತು ಭನ್ವಾರ್ ಕುವಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂಜಯ್ ಶುಕ್ಲಾ ಮಾಹಿತಿ ನೀಡಿದ್ದು, ಮೃತ ವಿದ್ಯಾರ್ಥಿಯನ್ನು ಕನ್ಹಾ ಯಾದವ್ ಎಂದು ಗುರುತಿಸಲಾಗಿದೆ. ಮೃತ ಬಾಲಕನ ತಂದೆ ಪಾಲ್ಡಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಅದೇ ಪ್ರದೇಶದಲ್ಲಿ ಬಾಲಕನ ಕುಟುಂಬ ವಾಸವಾಗಿದೆ ಎಂದು ತಿಳಿಸಿದರು.

    ಆರಂಭಿಕ ತನಿಖೆ ಪ್ರಕಾರ, ಆಟವಾಡುವಾಗ ಬಾಲಕನ ಸ್ನೇಹಿತರು ಗುದದ್ವಾರಕ್ಕೆ ಏರ್ ಕಂಪ್ರೆಸ್ಸರ್ ನಳಿಕೆಯನ್ನು ಇಟ್ಟು ಗಾಳಿ ತುಂಬಿಸಿದ್ದಾರೆ. ಬಾಲಕನ ಹೊಟ್ಟೆ ಪೂರ್ತಿ ಗಾಳಿ ತುಂಬಿದ್ದರಿಂದ ಬಾಲಕ ಸಾವನ್ನಪ್ಪಿರುವ ಕುರಿತು ತಿಳಿದು ಬಂದಿದೆ ಎಂದು ಸಂಜಯ್ ಶುಕ್ಲಾ ತಿಳಿಸಿದ್ದಾರೆ.

    ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ವಿದ್ಯಾರ್ಥಿಯನ್ನು ಮಹಾರಾಜ ಯಶವಂತರಾವ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆಗೆ ವಿದ್ಯಾರ್ಥಿ ಸ್ಪಂದಿಸದ್ದರಿಂದ ಮೃತಪಟ್ಟಿದ್ದಾನೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪರೀಕ್ಷೆ ನಂತರ ವಿದ್ಯಾರ್ಥಿಯ ಸಾವಿಗೆ ನಿರ್ಧಿಷ್ಟ ಕಾರಣ ಏನೆಂಬುದು ತಿಳಿಯುತ್ತದೆ ಎಂದು ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

    ಬಾಲಕನ ತಂದೆ ರಾಮಚಂದ್ರ ಯಾದವ್ ಅವರು ಈ ಕುರಿತು ಮಾಹಿತಿ ನೀಡಿ, ಘಟನೆ ನಂತರ ನನ್ನ ಮಗನ ಸ್ನೇಹಿತರಿಬ್ಬರು ಆತನನ್ನು ಮನೆಗೆ ಕರೆ ತಂದಿದ್ದರು. ಮನೆಗೆ ಬಂದಾಗ ಅವನ ಹೊಟ್ಟೆ ತುಂಬಾ ಊದಿಕೊಂಡಿತ್ತು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದೆ. ನಂತರ ಸ್ನೇಹಿತರು ಏರ್ ಕಂಪ್ರೆಸರ್ ಮೂಲಕ ಅವನ ಹೊಟ್ಟೆಗೆ ಗಾಳಿ ತುಂಬಿದ್ದ ವಿಚಾರ ತಿಳಿಯಿತು ಎಂದು ತಿಳಿಸಿದರು.

  • ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ಬಿಎಸ್‍ವೈ ಫ್ರೆಂಡ್ಸ್

    ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ಬಿಎಸ್‍ವೈ ಫ್ರೆಂಡ್ಸ್

    ಮಂಡ್ಯ: ಮುಖ್ಯಮಂತ್ರಿ ಯಡಿಯೂರಪ್ಪ ಚಿಕ್ಕಂದಿನಿಂದಲೇ ಆಟ-ಪಾಠದಲ್ಲಿ ಮುಂದಿದ್ದರು. ಆದರೆ ಆಗಿನಿಂದಲೇ ಅವರಿಗೆ ಮುಂಗೋಪ ಹೆಚ್ಚು ಎಂದು ಅವರ ಬಾಲ್ಯದ ಗೆಳೆಯರು ಹಳೆಯ ದಿನಗಳನ್ನು ಮೆಲುಕು ಹಾಕುತ್ತಿದ್ದಾರೆ.

    ಬಿಎಸ್‍ವೈ ಅವರು ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದವರಾಗಿದ್ದಾರೆ. ಬೂಕನಕೆರೆ ಗ್ರಾಮದಲ್ಲಿ ಚಿಕ್ಕಂದಿನಿಂದ ಯಡಿಯೂರಪ್ಪ ಜೊತೆ ಆಟವಾಡುತ್ತಾ ಬೆಳೆದ ಅವರ ಸ್ನೇಹಿತರು ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಅವರ ಜೊತೆಗಿನ ಒಡನಾಟಗಳನ್ನು ಮೆಲುಕು ಹಾಕುತ್ತಿದ್ದಾರೆ.

    ಯಡಿಯೂರಪ್ಪ ಅವರಿಗೆ ಚಿಕ್ಕಂದಿನಿಂದಲೇ ಮುಂಗೋಪ, ಯಾವಾಗಲೂ ನಾನು ಮುಂದು ಅಂತಿದ್ದರು. ಅವರ ಜೊತೆ ಒಡನಾಟ ಚೆನ್ನಾಗಿತ್ತು. ಅವರು ಮುಂದೆ ಬೆಳೆದರು. ಆದರೆ ನಾವು ಊರಲ್ಲೇ ಇದ್ದೇವೆ. ಅವರು ಬಂದು ಮಾತನಾಡಿಸಿದಾಗ ಸಂತೋಷ ಆಗುತ್ತದೆ. ಅವರು ಚೆನ್ನಾಗಿರಲಿ ಎಂದು ಏಳನೇ ತರಗತಿವರೆಗೆ ಜೊತೆಯಲ್ಲೇ ಓದಿದ ಕಿಟ್ಟಪ್ಪ ನೆನಪಿಸಿಕೊಳ್ಳುತ್ತಾರೆ.

    ಅವರ ಮತ್ತೊಬ್ಬ ಗೆಳೆಯರಾದ ರಾಮಸ್ವಾಮಿ ಮಾತನಾಡಿ, ಸ್ಕೂಲ್ ಸಮಯದಲ್ಲೇ ಬಿಎಸ್‍ವೈ ಎಲ್ಲದರಲ್ಲೂ ಮುಂದಿದ್ದರು. ಅವರು ನನ್ನ ಜೊತೆ ಕೊಬ್ಬರಿ ಬೆಲ್ಲ ತಿನ್ನುತ್ತಿದ್ದರು. ಜೊತೆಯಲ್ಲೇ ಆಟ ಆಡುತ್ತಿದ್ದೆವು. ಓದುವುದರಲ್ಲೂ ಮುಂದಿದ್ದರು. ಬಂದಾಗೆಲ್ಲ ಸಿಗುತ್ತಾರೆ, ಮಾತನಾಡಿಸುತ್ತಾರೆ. ಅವರು ಸಿಎಂ ಆಗಿರೋದು ತುಂಬಾ ಖುಷಿ ಅಂತ ಸಂಭ್ರಮಿಸಿದರು.

  • ಮತ್ತೆ ಜೈಲಿಗೆ ಹೋಗೋ ಆಸೆಯಿಂದ ಸಿಸಿಟಿವಿಯಲ್ಲಿ ಮುಖ ಕಾಣುವಂತೆ ಬೈಕ್ ಕದ್ದ

    ಮತ್ತೆ ಜೈಲಿಗೆ ಹೋಗೋ ಆಸೆಯಿಂದ ಸಿಸಿಟಿವಿಯಲ್ಲಿ ಮುಖ ಕಾಣುವಂತೆ ಬೈಕ್ ಕದ್ದ

    ಚೆನ್ನೈ: ಸಾಮಾನ್ಯವಾಗಿ ಒಮ್ಮೆ ಜೈಲಿಗೆ ಹೋಗಿ ಶಿಕ್ಷೆಗೆ ಒಳಪಟ್ಟು ಬಂದ ಮೇಲೆ ಮತ್ತೆ ಆರೋಪಿ ಅಪರಾಧ ಮಾಡಲು ಇಷ್ಟಪಡುವುದಿಲ್ಲ. ಆದರೆ ಇಲ್ಲೊಬ್ಬ ಆರೋಪಿ ಜೈಲಿನಿಂದ ಹೊರ ಬಂದ ಬಳಿಕ ಮತ್ತೆ ಜೈಲಿಗೆ ಹೋಗಬೇಕೆಂದು ಬೈಕ್ ಕದ್ದಿದ್ದಾನೆ.

    ಚೆನ್ನೈನ ಜ್ಞಾನಪ್ರಕಾಶಂ ಎಂಬಾತ ಮತ್ತೆ ಜೈಲಿಗೆ ಹೋಗಬೇಕೆಂಬ ಆಸೆಯಿಂದ ಮುಖ ಕಾಣುವಂತೆ ಬೈಕ್ ಕದ್ದಿದ್ದಾನೆ. ಈ ಮೂಲಕ ಮತ್ತೆ ಜೈಲುವಾಸ ಅನುಭವಿಸಲು ರೆಡಿಯಾಗಿದ್ದಾನೆ.

    ಕಳ್ಳತನ ಕೇಸ್ ನಲ್ಲಿ ಜೈಲು ಸೇರಿದ್ದ ಈತ ಜಾಮೀನಿನ ಮೇಲೆ ಹೊರ ಬಂದಿದ್ದನು. ಜೈಲಿನಲ್ಲಿ ಸಿಗುತ್ತಿದ್ದ ಊಟ, ಸ್ನೇಹಿತರು, ಆರಾಮದಾಯಕ ಜೀವನವನ್ನು ಮತ್ತೆ ಅನುಭವಿಸಬೇಕೆಂದು ಕೈಲಾಸಪುರಂನ ರಸ್ತೆಯಲ್ಲಿದ್ದ ಬೈಕೊಂದನ್ನು ಕಳ್ಳತನ ಮಾಡಿದ್ದಾನೆ. ಅಷ್ಟೇ ಅಲ್ಲದೆ ಆರೋಪಿ ಸಿಸಿಟಿವಿ ಕ್ಯಾಮೆರಾದಲ್ಲಿ ತನ್ನ ಮುಖ ಸರಿಯಾಗಿ ಕಾಣುವಂತೆ ಬೈಕ್ ಕದ್ದಿದ್ದನು.

    ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ ಆರೋಪಿ ಜೈಲು ಜೀವನವನ್ನು ಎಂಜಾಯ್ ಮಾಡಲು ಬೈಕ್ ಕಳ್ಳತನ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಜೈಲಿನಲ್ಲಿ ಇದ್ದರೆ ಸರಿಯಾದ ಸಮಯಕ್ಕೆ ಊಟ-ತಿಂಡಿ ಸಿಗುತ್ತದೆ. ಜೊತೆಗೆ ಮನೆಯಲ್ಲಿ ಸೋಮಾರಿ ಎಂದು ಬೈಯುವ ರೀತಿ ಜೈಲಿನಲ್ಲಿ ಯಾರೂ ಬೈಯುವುದಿಲ್ಲ. ಸಮಯ ಕಳೆಯಲು ತನ್ನ ಹಳೆಯ ಸ್ನೇಹಿತರು ಸಿಗುತ್ತಾರೆ. ಅವರೊಂದಿಗೆ ಮಾತನಾಡಿಕೊಂಡು ಎಂಜಾಯ್ ಮಾಡಬಹುದು. ಅದಕ್ಕಾಗಿ ಬೈಕ್ ಕಳ್ಳತನ ಮಾಡಿದೆ ಎಂದು ಜ್ಞಾನಪ್ರಕಾಶಂ ಹೇಳಿದ್ದಾನೆ ಎಂದು ಎಸಿಪಿ ಪಿ.ಅಶೋಕನ್ ಹೇಳಿದರು.

    ಆರೋಪಿ ಜ್ಞಾನಪ್ರಕಾಶಂ ಪೆರುಂಗಲತ್ತೂರು ನಿವಾಸಿಯಾಗಿದ್ದು, ಕಳೆದ ಮಾರ್ಚ್ ತಿಂಗಳಲ್ಲಿ ಕಳ್ಳತನ ಮಾಡಿ ಬಂಧಿತನಾಗಿದ್ದನು. ಈ ಪ್ರಕರಣದಲ್ಲಿ ಆತ ಮೂರು ತಿಂಗಳು ವಿಚಾರಣಾಧೀನ ಕೈದಿಯಾಗಿ ಪುಝಲ್ ಜೈಲಿನಲಿದ್ದನು. ನಂತರ ಜೂನ್ 29ರಂದು ಬಿಡುಗಡೆಯಾಗಿದ್ದನು. ಆದರೆ ಈತ ಜೈಲಿನಿಂದ ಹೊರಬಂದ ಬಳಿಕ ಮನೆಯಲ್ಲಿ ಈತನ ಪತ್ನಿ ಮತ್ತು ಮಕ್ಕಳು ಪ್ರತಿದಿನ ನಿಂದಿಸುತ್ತಿದ್ದರು.

    ಹೀಗಾಗಿ ಮನೆಯಲ್ಲಿ ನಿಂದಿಸುತ್ತಾರೆ ಎಂದು ಮತ್ತೆ ಜೈಲಿಗೆ ಹೋಗಿ ಆರಾಮದಾಯಕ ಜೀವನ ನಡೆಸಬಹುದೆಂದು ಬೈಕ್ ಕದ್ದು ನಗರದಲ್ಲೆಲ್ಲಾ ಸುತ್ತಾಡಿದ್ದಾನೆ. ಜೊತೆಗೆ ತಂಬರಂನಲ್ಲಿ ಮತ್ತೊಂದು ಬೈಕ್‍ನಿಂದ ಪೆಟ್ರೋಲ್ ಕದ್ದಿದ್ದಾನೆ. ಆಗ ಜನರ ಕೈಗೆ ಸಿಕ್ಕಿಹಾಕಿಕೊಂಡಿದ್ದು, ಅವರು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಕೂಡ ಬೈಕ್ ಕದ್ದು ತಂದಿದ್ದು ಎಂದು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

  • ಕುಡಿದು ಡ್ಯಾನ್ಸ್ ಮಾಡಲು ಹೋಗಿ ಜೀವ ಕಳೆದುಕೊಂಡ

    ಕುಡಿದು ಡ್ಯಾನ್ಸ್ ಮಾಡಲು ಹೋಗಿ ಜೀವ ಕಳೆದುಕೊಂಡ

    ಹುಬ್ಬಳ್ಳಿ: ಮದ್ಯಪಾನ ಸೇವಿಸಿ ಡ್ಯಾನ್ಸ್ ಮಾಡಲು ಹೋಗಿ ಯುವಕನೊಬ್ಬ ಜೀವ ಕಳೆದುಕೊಂಡ ಘಟನೆ ಹುಬ್ಬಳ್ಳಿಯ ಕೋರ್ಟ್ ವೃತ್ತದಲ್ಲಿ ಇರುವ ತೃಪ್ತಿ ಇಂಟರ್ ನ್ಯಾಷನಲ್ ಹೋಟೆಲ್‍ನಲ್ಲಿ ನಡೆದಿದೆ.

    ಅರುಣ್ ಕುಮಾರ್ ನವಲೆ (30) ಪ್ರಾಣ ಕಳೆದುಕೊಂಡ ಯುವಕ. ಅರುಣ್ ಕುಮಾರ್ ನವಲೆ ಮೂಲತಃ ಪುಣೆಯವನಾಗಿದ್ದು, ಗೆಳೆಯರೊಂದಿಗೆ ಕೆಲಸದ ನಿಮಿತ್ತ ಹುಬ್ಬಳ್ಳಿಗೆ ಬಂದಿದ್ದನು. ಇದೀಗ ಕುಡಿದು ಡ್ಯಾನ್ಸ್ ಮಾಡಲು ಹೋಗಿ ಜೀವ ಕಳೆದುಕೊಂಡಿದ್ದಾನೆ.

    ಅರುಣ್ ಕುಮಾರ್ ತನ್ನ ಸ್ನೇಹಿತರ ಜೊತೆ ನಾಲ್ಕನೇ ಮಹಡಿಯಲ್ಲಿ ಇದ್ದ ತನ್ನ ರೂಮಿನಲ್ಲಿ ಕುಡಿದು ಡ್ಯಾನ್ಸ್ ಮಾಡುತ್ತಿದ್ದನು. ಡ್ಯಾನ್ಸ್ ಮಾಡುವ ವೇಳೆ ಅರುಣ್ ಕುಮಾರ್ ರೂಮಿನ ಕಿಟಕಿಯಿಂದ ಆಯತಪ್ಪಿ ಕೆಳಗೆ ಬಿದಿದ್ದಾನೆ. ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಈ ವಿಷಯ ತಿಳಿದು ಸ್ಥಳಕ್ಕೆ ಉಪನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಟವಾಡುತ್ತಾ ಗೆಳೆಯನ ತಲೆಗೇ ಚಾಕು ಇರಿದ- ಚರ್ಮ ಸೀಳ್ತಿದ್ದಂತೆ ಪರಾರಿ

    ಆಟವಾಡುತ್ತಾ ಗೆಳೆಯನ ತಲೆಗೇ ಚಾಕು ಇರಿದ- ಚರ್ಮ ಸೀಳ್ತಿದ್ದಂತೆ ಪರಾರಿ

    ಬೆಂಗಳೂರು: ಸ್ನೇಹಿತರೆಲ್ಲರೂ ಕುಳಿತು ಮೊಬೈಲಿನಲ್ಲಿ ಗೇಮ್ ಆಡುತ್ತಿದ್ದಾಗ ಜಗಳ ಶುರುವಾಗಿದ್ದು, ಕೊನೆಗೆ ಗೆಳೆಯನನ್ನೇ ಕೊಲೆ ಮಾಡುವ ಮೂಲಕ ಅಂತ್ಯವಾದ ಘಟನೆ ನಗರದಲ್ಲಿ ನಡೆದಿದೆ.

    ಷೇಕ್ ಮಿಲನ್(32) ಕೊಲೆಯಾದವ. ಈತ ಕುಮಾರಸ್ವಾಮಿ ಲೇಔಟ್‍ನ ಇಲಿಯಾಸ್‍ನಗರದಲ್ಲಿ ಪತ್ನಿ ಜೊತೆ ವಾಸವಾಗಿದ್ದನು. ಖಾಸಗಿ ಫುಡ್ ಆಪ್‍ನಲ್ಲಿ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದನು. ಈತ ಶುಕ್ರವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದು ಊಟ ಮುಗಿಸಿ ಹೊರಗೆ ಬಂದು ಒಂದು ಜಾಗದಲ್ಲಿ ಕುಳಿತಿದ್ದನು.

    ಮಿಲನ್ ದಿನನಿತ್ಯ ಬಂದು ಸ್ನೇಹಿತರೊಟ್ಟಿಗೆ ಕೂರೋ ಜಾಗ ಇದಾಗಿದ್ದು, ಶುಕ್ರವಾರ ಕೂಡ ಮಿಲನ್ ತನ್ನ ಸ್ನೇಹಿತರಾದ ಷಾಯಿಬ್, ಸಾದತ್, ನಯಾಜ್, ಅಸು ಮುಂತಾದವರು ಇಲ್ಲೇ ಕುಳಿತು ಮೊಬೈಲ್‍ನಲ್ಲಿ ಲೂಡೋ ಗೇಮ್ ಆಡುತ್ತಿದ್ದರು.

    ಹಾವು ಏಣಿ ಆಟವನ್ನೇ ಹೋಲುವ ಲೂಡೋ ಗೇಮ್ ಆಡುತ್ತಿದ್ದರು. ಸೋಲು ಗೆಲುವಿನ ಬಗ್ಗೆ ಬೆಟ್ಟಿಂಗ್ ಕಟ್ಟಿದ್ದ ಇವರ ನಡುವೆ ಜಗಳ ಶುರುವಾಗಿದೆ. ಆಟ ಮಧ್ಯೆಯೇ ಮಿಲನ್, ಷಾಯಿಬ್ ಅನ್ನೋನಿಗೆ ಹೊಡೆದಿದ್ದನು. ಈ ವೇಳೆ ಜೇಬಿನಲ್ಲಿದ್ದ ಹರಿತವಾದ ಚಾಕುವನ್ನ ತೆಗೆದು ಷಾಯಿಬ್, ಮಿಲನ್ ತಲೆಗೆ ಇರಿದಿದ್ದನು. ಪರಿಣಾಮ, ಕಿವಿಯ ಹಿಂಭಾಗದಿಂದ ತಲೆಯ ಮಧ್ಯದವರೆಗೂ ಚರ್ಮ ಸೀಳಿ ಹೋಗಿತ್ತು. ಇದರಿಂದ ಬೆಚ್ಚಿಬಿದ್ದ ಎಲ್ಲರು ಅಲ್ಲಿಂದ ಪರಾರಿಯಾಗಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಕೆ.ಎಸ್ ಲೇಔಟ್ ಪೊಲೀಸರು ಕೂಡಲೇ ಷೇಕ್ ಮಿಲನನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಾರ್ಗ ಮಧ್ಯದಲ್ಲೇ ಆತ ಪ್ರಾಣಬಿಟ್ಟಿದ್ದನು. ಅದಹಾಗೆ ಕುಮಾರಸ್ವಾಮಿ ಲೇಔಟ್, ಇಲಿಯಾಸ್ ನಗರ ಹಾಗೂ ಸುತ್ತ-ಮುತ್ತ ಗಾಂಜಾ ಸೇದುವ ಹುಡುಗರ ಸಂಖ್ಯೆ ಜಾಸ್ತಿಯಿದ್ದು, ಈ ಕೊಲೆ ಪ್ರಕರಣದ ಆರೋಪಿ ಷಾಯಿಬ್ ಕೂಡ ಗಾಂಜಾ ವ್ಯಸನಿ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಸದ್ಯ ಕುಮಾರಸ್ವಾಮಿ ಲೇಔಟ್ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ಟೀ ಕುಡಿದು ಕೆಲವೇ ಕ್ಷಣಗಳಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸ್ನೇಹಿತರು

    ಟೀ ಕುಡಿದು ಕೆಲವೇ ಕ್ಷಣಗಳಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸ್ನೇಹಿತರು

    ದಾವಣಗೆರೆ: ಸ್ನೇಹಿತನ ಅಂಗಡಿಯಲ್ಲಿ ಟೀ ಕುಡಿಯಲಲು ಬಂದಿದ್ದ ಇಬ್ಬರು ಸ್ನೇಹಿತರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆಯ ದೇವಿಕೆರೆ ಗ್ರಾಮದಲ್ಲಿ ನಡೆದಿದೆ.

    ಕಲ್ಲಪ್ಪ (38) ಹಾಗೂ ಶಂಕರ್ ನಾಯ್ಕ (45) ಸಾವನ್ನಪ್ಪಿದ ಸ್ನೇಹಿತರಾಗಿದ್ದು, ಶುಕ್ರವಾರ ಸಂಜೆ ಗ್ರಾಮದ ಶಂಕರ್ ನಾಯ್ಕ ಹಾಗೂ ಟೀ ಅಂಗಡಿಯಲ್ಲಿ ಕಲ್ಲಪ್ಪ ಟೀ ಸೇವಿಸಿದ್ದು, ಕೆಲ ಹೊತ್ತಿನಲ್ಲಿ ಅಂಗಡಿ ಮುಂದೆ ಕುಸಿದು ಬಿದ್ದಾರೆ. ಕೂಡಲೇ ಅವರನ್ನು ಜಗಳೂರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

    ಇತ್ತ ಕಲ್ಲಪ್ಪರನ್ನ ಆಸ್ಪತ್ರೆಗೆ ದಾಖಲಿಸುತ್ತಿದಂತೆ ಶಂಕರ್ ನಾಯ್ಕ ಕೂಡ ಕುಸಿದು ಬಿದ್ದು ಸಾವನ್ನಪ್ಪಿದಾರೆ. ಆಪ್ತ ಸ್ನೇಹಿತರಾಗಿದ್ದ ಗೆಳೆಯರು ಕೆಲವೇ ಕ್ಷಣಗಳ ಅಂತರದಲ್ಲಿಯೇ ಸಾವನ್ನಪ್ಪಿದ್ದು ಗ್ರಾಮದಲ್ಲಿ ಸಂಶಯಕ್ಕೆ ಕಾರಣವಾಗಿದೆ.

    ಘಟನೆ ಬಗ್ಗೆ ಬಿಳಿಚೋಡು ಪೊಲೀಸ್ ಠಾಣೆ ದೂರು ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಗೆ ವರದಿ ಬಳಿಕ ಇಬ್ಬರ ಸಾವಿನ ಬಗ್ಗೆ ನಿಖರ ಕಾರಣ ತಿಳಿಯುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • ಗೆಳೆಯರ ಮಧ್ಯೆ ಚಪ್ಪಲಿ ಹೊಡೆದಾಟಕ್ಕೆ ಕಾರಣಯ್ತು ರಾಜಕೀಯ ಚರ್ಚೆ

    ಗೆಳೆಯರ ಮಧ್ಯೆ ಚಪ್ಪಲಿ ಹೊಡೆದಾಟಕ್ಕೆ ಕಾರಣಯ್ತು ರಾಜಕೀಯ ಚರ್ಚೆ

    ಧಾರವಾಡ: ರಾಜಕೀಯ ಚರ್ಚೆಯಿಂದಾಗಿ ಗೆಳೆಯರು ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಘಟನೆ ಜಿಲ್ಲೆಯ ಅಣ್ಣಿಗೇರಿಯಲ್ಲಿ ನಡೆದಿದೆ.

    ಅಣ್ಣಿಗೇರಿಯ ನಿವಾಸಿಗಳಾದ ನಾಗಪ್ಪ ಮತ್ತು ಅಶೋಕ ಹೊಡೆದಾಡಿಕೊಂಡ ಗೆಳೆಯರು. ಪಕ್ಷವೊಂದರ ಪ್ರಚಾರಕ್ಕೆ ಹೋದರೂ ಹಣ ಕೊಟ್ಟಿಲ್ಲ ಎಂಬ ವಿಷಯವಾಗಿ ಇಬ್ಬರು ನಡುವೆ ಜಗಳವಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಆಗಿದ್ದೇನು?:
    ಪಕ್ಷವೊಂದರ ಪ್ರಚಾರಕ್ಕೆ ಹೋದರೂ ಹಣ ಕೊಟ್ಟಿಲ್ಲ ಎಂದು ಇಬ್ಬರು ಮಾತನಾಡುತ್ತಿದ್ದರು. ಈ ವೇಳೆ ನನಗೂ ಹಣ ಕೊಟ್ಟಿಲ್ಲ ಅಂತ ಅಶೋಕ ಬೈಯಲು ಆರಂಭಿಸಿದ್ದ. ಇದನ್ನು ವಿರೋಧಿಸಿದ ನಾಗಪ್ಪ, ಹಣ ಕೊಟ್ಟಿಲ್ಲವೆಂದು ಯಾಕೆ ಬೈತಿಯಾ? ಇದು ಸರಿಯಲ್ಲ ಎಂದು ಹೇಳಿದ್ದ. ಈ ವಿಚಾರವಾಗಿ ಇಬ್ಬರ ಮಧ್ಯೆ ಚರ್ಚೆ ನಡೆದಿದ್ದು, ವಿಕೋಪಕ್ಕೆ ಹೋಗಿದೆ.

    ಚರ್ಚೆ ವಿಕೋಪಕ್ಕೆ ಹೋಗಿ, ಚಪ್ಪಲಿ ಹಿಡಿದುಕೊಂಡು ಹೊಡೆದಾಡಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಸ್ಥಳೀಯರು ಜಗಳವನ್ನ ಬಿಡಿಸಿದ್ದಾರೆ. ಸ್ಥಳದಲ್ಲಿದ್ದ ಕೆಲವರು ಈ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.