Tag: friends

  • ಗೆಳೆಯನ ಬರ್ತ್ ಡೇ ಪಾರ್ಟಿ ಮುಗಿಸಿ ಬರ್ತಿದ್ದ ಯುವಕರಿಬ್ಬರು ದುರ್ಮರಣ

    ಗೆಳೆಯನ ಬರ್ತ್ ಡೇ ಪಾರ್ಟಿ ಮುಗಿಸಿ ಬರ್ತಿದ್ದ ಯುವಕರಿಬ್ಬರು ದುರ್ಮರಣ

    ತುಮಕೂರು: ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರಿನ ಕೊರಟಗೆರೆ ತಾಲೂಕಿನ ಕತ್ತಿನಾಗೇನಹಳ್ಳಿ ಬಳಿ ನಡೆದಿದೆ.

    ಈ ಘಟನೆ ತಡರಾತ್ರಿ ನಡೆದಿದ್ದು, ಕಾರಿನಲ್ಲಿದ್ದ ಮಂಜು (20), ಹರ್ಷ(20) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಕಾರಿನಲ್ಲಿದ್ದ ಇನ್ನೂ ಮೂವರಿಗೆ ಗಂಭೀರವಾಗಿ ಗಾಯವಾಗಿದ್ದು, ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಐವರು ಸ್ನೇಹಿತರು ಸೇರಿ ಗೆಳೆಯನ ಹುಟ್ಟುಹಬ್ಬದ ಪಾರ್ಟಿ ಮುಗಿಸಿ ವಾಪಸ್ ಬರುತ್ತಿರುವಾಗ ಈ ಘಟನೆ ಸಂಭವಿಸಿದೆ. ಮುಂದೆ ಬರುತ್ತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನುಜ್ಜಾಗಿದ್ದು, ಮುಂಭಾಗದಲ್ಲಿ ಕುಳಿತಿದ್ದ ಮಂಜು ಮತ್ತು ಹರ್ಷ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಿಂಬದಿಯಲ್ಲಿ ಕುಳಿತ ಉಳಿದ ಮೂವರಿಗೆ ಗಂಭೀರವಾಗಿ ಗಾಯವಾಗಿದೆ.

    ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಜೂಜಾಟದಲ್ಲಿ ಸೋತ ಪತಿ – ಪತ್ನಿಯ ಬಟ್ಟೆ ಹರಿದ ಸ್ನೇಹಿತರು

    ಜೂಜಾಟದಲ್ಲಿ ಸೋತ ಪತಿ – ಪತ್ನಿಯ ಬಟ್ಟೆ ಹರಿದ ಸ್ನೇಹಿತರು

    ಲಕ್ನೋ: ವ್ಯಕ್ತಿಯೋರ್ವ ಜೂಜಾಟದಲ್ಲಿ ತನ್ನ ಪತ್ನಿಯನ್ನೇ ಪಣಕ್ಕಿಟ್ಟು ಸೋತಿದಕ್ಕೆ ಆತನ ಸ್ನೇಹಿತರು ಆಕೆಯ ಬಟ್ಟೆ ಹರಿದು, ಅತ್ಯಾಚಾರಕ್ಕೆ ಯತ್ನಿಸಿ ದುಷ್ಟತನ ಮರೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಸೆ. 15ರಂದು ಕಾನ್ಪುರದಲ್ಲಿ ಈ ಘಟನೆ ನಡೆದಿದೆ. ನಶೆಯಲ್ಲಿದ್ದ ಪತಿ ಮನೆಯಲ್ಲೇ ನಾಲ್ವರು ಸ್ನೇಹಿತರ ಜೊತೆ ಜೂಜಾಟ ಆಡುತ್ತಿದ್ದನು. ಈ ವೇಳೆ ಹಣ ಖಾಲಿಯಾದ ಮೇಲೆ ಪತ್ನಿಯನ್ನು ಆಟದಲ್ಲಿ ಪಣಕಿಟ್ಟಿದ್ದನು. ಆದರೆ ಆಟದಲ್ಲಿ ಸೋತ ಮೇಲೆ ಪತ್ನಿಯನ್ನು ಸ್ನೇಹಿತರಿಗೆ ಬಿಟ್ಟುಕೊಟ್ಟಿದ್ದನು. ಆಗ ಆತನ ಸ್ನೇಹಿತರು ಪತಿಯ ಮುಂದೆಯೇ ಮಹಿಳೆಯ ಬಟ್ಟೆ ಹರಿದು, ಅತ್ಯಾಚಾರ ಎಸಗಲು ಯತ್ನಿಸಿದಾಗ ಅವರಿಂದ ಮಹಿಳೆ ತಪ್ಪಿಸಿಕೊಂಡು ಅಡಿಗೆ ಕೋಣೆಗೆ ಹೋಗಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ.

    ಮಾಹಿತಿ ತಿಳಿದ ಬಳಿಕ ಮನೆಗೆ ಬಂದ ಪೊಲೀಸರು ಪತಿಯ ಜೊತೆಗೆ ನಾಲ್ವರು ಸ್ನೇಹಿತರನ್ನು ಹಾಗೂ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಆದರೆ ಠಾಣೆಯಲ್ಲಿ ಆರೋಪಿಗಳಿಂದ ಹಣ ಪಡೆದು ಅವರನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ಅಲ್ಲದೆ ಇದು ಪತಿ-ಪತ್ನಿ ಜಗಳವೆಂದು ಎಫ್‍ಐಆರ್ ದಾಖಲಿಸಿಕೊಂಡು ಆರೋಪಿಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಸಂತ್ರಸ್ತೆ ಆರೋಪ ಮಾಡಿದ್ದಾಳೆ.

    ಈ ಬಗ್ಗೆ ಮಹಿಳೆ ಹಿರಿಯ ಅಧಿಕಾರಿಗಳ ಬಳಿ ದೂರು ನೀಡಿದಾಗ ಎಚ್ಚೆತ್ತುಕೊಂಡ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಲಾಗುತ್ತದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

  • ಸ್ನೇಹಿತನ ಜೊತೆ ಪತ್ನಿಯ ಪೋರ್ನ್ ವಿಡಿಯೋ – ಗುಂಡಿಕ್ಕಿ ಕೊಲೆಗೆ ಯತ್ನಿಸಿದ ಪತಿ

    ಸ್ನೇಹಿತನ ಜೊತೆ ಪತ್ನಿಯ ಪೋರ್ನ್ ವಿಡಿಯೋ – ಗುಂಡಿಕ್ಕಿ ಕೊಲೆಗೆ ಯತ್ನಿಸಿದ ಪತಿ

    ಚಂಡೀಗಢ: ತನ್ನ ಸ್ನೇಹಿತನ ಜೊತೆ ಪತ್ನಿಯ ಪೋರ್ನ್ ವಿಡಿಯೋ ನೋಡಿದ ಪತಿಯೊಬ್ಬ ಕೋಪದಿಂದ ಆಕೆಯನ್ನು ಗುಂಡಿಕ್ಕಿ ಕೊಲೆ ಮಾಡಲು ಯತ್ನಿಸಿದ ಘಟನೆ ಸೆಪ್ಟೆಂಬರ್ 15ರಂದು ಹರಿಯಾಣದ ಯಮುನನಗರದಲ್ಲಿ ನಡೆದಿದೆ.

    ನರೇಶ್ ಕೊಲೆ ಮಾಡಲು ಯತ್ನಿಸಿದ ಪತಿ. ಪತ್ನಿ ಸೋನಿಯಾ ತನ್ನ ಪತಿ ನರೇಶ್ ಜೊತೆ ವಾಸಿಸುತ್ತಿರಲಿಲ್ಲ. ಅಲ್ಲದೆ ನ್ಯಾಯಾಲಯದಲ್ಲಿ ಇವರಿಬ್ಬರ ಡಿವೋರ್ಸ್ ಪ್ರಕರಣ ಕೂಡ ನಡೆಯುತ್ತಿತ್ತು. ಕೆಲವು ದಿನಗಳ ಹಿಂದೆ ನರೇಶ್ ಸ್ನೇಹಿತರು ಸೋನಿಯಾ ಪೋರ್ನ್ ವಿಡಿಯೋವನ್ನು ಆತನಿಗೆ ತೋರಿಸಿದ್ದಾರೆ. ಅಲ್ಲದೆ ಇಂತಹ ಪತ್ನಿ ಇರುವ ಬದಲು ಪತ್ನಿ ಇಲ್ಲದಿರುವುದೇ ಉತ್ತಮ ಎಂದು ಆತನನ್ನು ಪ್ರಚೋದಿಸಿದ್ದಾರೆ. ಇದನ್ನೂ ಓದಿ:  ಪತ್ನಿಗೆ ಸ್ನೇಹಿತರೊಟ್ಟಿಗೂ ಮಲಗು ಎಂದ ವಿಕೃತ ಪತಿ – ಸೆಕ್ಸ್ ವಿಡಿಯೋ ಇಟ್ಟುಕೊಂಡು ಬ್ಲಾಕ್‍ಮೇಲ್

    ಈ ವಿಡಿಯೋ ನೋಡಿದ ನರೇಶ್ ಈ ಬಗ್ಗೆ ಸೋನಿಯಾಳನ್ನು ಪ್ರಶ್ನಿಸಲು ಯಮುನನಗರಕ್ಕೆ ತೆರಳಿದ್ದನು. ನರೇಶ್ ಮೊದಲು ವಿಡಿಯೋ ಬಗ್ಗೆ ಸೋನಿಯಾಳನ್ನು ಪ್ರಶ್ನಿಸಿದ್ದಾನೆ. ಆದರೆ ಸೋನಿಯಾ ಇದಕ್ಕೆ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ನರೇಶ್ ಸೋನಿಯಾಗೆ ಗುಂಡಿಕ್ಕಿ ಕೊಲೆ ಮಾಡಲು ಯತ್ನಿಸಿದ್ದಾನೆ. ನರೇಶ್ ಕೊಲೆಗೆ ಯತ್ನಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಅದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಈ ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸೋನಿಯಾಳನ್ನು ಆಕೆಯ ಸ್ನೇಹಿತರು ಚಂಡಿಗಢ್ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಇತ್ತ ಪೊಲೀಸರು ಆರೋಪಿ ನರೇಶ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ನರೇಶ್, “ನನ್ನ ಪತ್ನಿ ನನ್ನನ್ನು ಬಿಟ್ಟು ಯಮುನನಗರದಲ್ಲಿ ತನ್ನ ಸ್ನೇಹಿತರ ಜೊತೆ ವಾಸಿಸುತ್ತಿದ್ದಾಳೆ. ನಾನು ಸೋನಿಯಾಳನ್ನು ತುಂಬಾ ಪ್ರೀತಿಸುತ್ತೇನೆ. ಆದರೆ ಆಕೆಯ ನಡುವಳಿಕೆ ನನಗೆ ಇಷ್ಟವಾಗುತ್ತಿರಲಿಲ್ಲ. ಹಾಗಾಗಿ ನಾನು ಕೊಲೆ ಮಾಡಲು ಯತ್ನಿಸಿದೆ” ಎಂದು ಹೇಳಿದ್ದಾನೆ.

  • ಪತ್ನಿಗೆ ಸ್ನೇಹಿತರೊಟ್ಟಿಗೂ ಮಲಗು ಎಂದ ವಿಕೃತ ಪತಿ – ಸೆಕ್ಸ್ ವಿಡಿಯೋ ಇಟ್ಟುಕೊಂಡು ಬ್ಲಾಕ್‍ಮೇಲ್

    ಪತ್ನಿಗೆ ಸ್ನೇಹಿತರೊಟ್ಟಿಗೂ ಮಲಗು ಎಂದ ವಿಕೃತ ಪತಿ – ಸೆಕ್ಸ್ ವಿಡಿಯೋ ಇಟ್ಟುಕೊಂಡು ಬ್ಲಾಕ್‍ಮೇಲ್

    ನವದೆಹಲಿ: ಪತಿಯೊಬ್ಬ ತನ್ನ ಪತ್ನಿ ಜೊತೆಗೆ ಸೆಕ್ಸ್ ಮಾಡಿದ ವಿಡಿಯೋ ರೆಕಾರ್ಡ್ ಮಾಡಿಕೊಂಡು, ತನ್ನ ಸ್ನೇಹಿತರೊಟ್ಟಿಗೂ ಮಲಗು ಇಲ್ಲವಾದರೆ ವಿಡಿಯೋ ವೈರಲ್ ಮಾಡುತ್ತೇನೆ ಎಂದು ಹೆದರಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.

    ದೆಹಲಿಯ ಗೀತಾ ಕಾಲೋನಿಯ ನಿವಾಸಿ ಅತುಲ್ ಅಗರ್ವಾಲ್ ಪತ್ನಿಗೆ ಬ್ಲಾಕ್‍ಮೇಲ್ ಮಾಡಿದ ಪತಿ. ಅತುಲ್ ತನ್ನ ಪತ್ನಿ ಜೊತಗಿನ ಸೆಕ್ಸ್ ವಿಡಿಯೋ ರೆಕಾರ್ಡ್ ಮಾಡಿ ಇಟ್ಟುಕೊಂಡು ತನ್ನ ಮಾತು ಕೇಳದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ ವಿಡಿಯೋವನ್ನು ಇಟ್ಟುಕೊಂಡು, ಮನಗೆ ಸ್ನೇಹಿತರನ್ನು ಕರೆದುಕೊಂಡು ಬಂದು ಪತ್ನಿಗೆ ಅವರ ಜೊತೆಗೂ ಮಲಗು ಎಂದು ಒತ್ತಾಯಿಸಿದ್ದನು ಎಂದು ಸ್ವತಃ ಪತ್ನಿಯೇ ಪೊಲೀಸರಿಗೆ ದೂರು ಕೊಟ್ಟಿದ್ದಾಳೆ.

    ಜನವರಿಯಲ್ಲಿ ಅತುಲ್ ಮನೆಗೆ ಕುಡಿದು ಬಂದು ಗಲಾಟೆ ಮಾಡಿದ್ದನು. ಸ್ನೇಹಿತ ಸಂಜಯ್ ಕೌಷಿಕ್‍ನನ್ನು ಮನೆಗೆ ಕರೆದುಕೊಂಡು ಬಂದು ನನಗೆ ಆತನ ಜೊತೆ ಸೆಕ್ಸ್ ಮಾಡು ಎಂದು ಒತ್ತಾಯಿಸಿದ್ದನು. ಆದರೆ ಇದಕ್ಕೆ ನಾನು ನಿರಾಕರಿಸಿದಾಗ ಸಿಟ್ಟಿಗೆದ್ದ ಅತುಲ್ ನನಗೆ ಹೊಡೆದು, ಚಿತ್ರಹಿಂಸೆ ಕೊಟ್ಟು ಸ್ನೇಹಿತನೊಂದಿಗೆ ರೂಂನಲ್ಲಿ ಕೂಡ ಹಾಕಿದ್ದನು. ಅಲ್ಲಿ ಸಂಜಯ್ ನನ್ನನ್ನು ಅತ್ಯಾಚಾರ ಮಾಡಿದನು ಎಂದು ಆರೋಪಿ ಪತ್ನಿ ಪೊಲೀಸರಿಗೆ ತಿಳಿಸಿದ್ದಾರೆ.

    ಅಲ್ಲದೆ ಸಂಜಯ್ ಮನೆಯಿಂದ ಹೋದ ಬಳಿಕ ಇನ್ನೋರ್ವ ಸ್ನೇಹಿತ ಪುಷ್ಪೇಂದ್ರ ಮಿಶ್ರಾನನ್ನು ಅತುಲ್ ಮನೆಗೆ ಕರೆದುಕೊಂಡು ಬಂದಿದ್ದಾನೆ. ಆತನ ಜೊತೆ ಕೂಡ ನನಗೆ ಮಲಗುವಂತೆ ಒತ್ತಾಯಿಸಿದನು. ಆಗಲೂ ನಾನು ನಿರಾಕರಿಸಿದ್ದೆ. ಆದರೆ ಪುಷ್ಪೇಂದ್ರ ನನ್ನ ಮೇಲೆ ಅತ್ಯಾಚಾರ ಎಸಗಿ ಮನೆಯಿಂದ ಹೋದ. ನಂತರ ಅತುಲ್ ಕೂಡ ನನ್ನನ್ನು ಅಸಹಜ ಲೈಂಗಿಕತೆಗೆ ಬಳಸಿಕೊಂಡು ಕಿರುಕುಳ ನೀಡಿದ, ಹಿಂಸೆಕೊಟ್ಟು ದೌರ್ಜನ್ಯ ನಡೆಸಿದ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಈ ಸಂಬಂಧ ಸೆ. 17ರಂದು ಮಹಿಳೆ ಪತಿ ಹಾಗೂ ಆತನ ಇಬ್ಬರು ಸ್ನೇಹಿತರ ವಿರುದ್ಧ ದೂರು ನೀಡಿದ್ದು, ಪೊಲೀಸರು ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 376/377/34 ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

  • ಮಚ್ಚಿನಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ

    ಮಚ್ಚಿನಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ

    ಕಲಬುರಗಿ: ಮಚ್ಚಿನಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಕಲಬುರಗಿ ಹೊರವಲಯದ ಅಫಜಲಪುರ ರಸ್ತೆಯ ಖರ್ಗೆ ಕಾಲೋನಿಯಲ್ಲಿ ನಡೆದಿದೆ.

    ಕೊಲೆಯಾದ ಯುವಕನನ್ನು 28 ವರ್ಷದ ಪ್ರಶಾಂತ್ ಕೊಟರಗಿ ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಮನೆಯವರ ಜೊತೆ ಜಗಳಮಾಡಿಕೊಂಡು ಸ್ನೇಹಿತರೊಡೆನೆ ಪಾರ್ಟಿಗೆ ತೆರಳಿದ್ದ ಯುವಕ ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.

    ಕೌಟುಂಬಿಕ ಕಾರಣದ ಹಿನ್ನಲೆ ಮನೆಯಲ್ಲಿ ಜಗಳ ಮಾಡಿಕೊಂಡ ಪ್ರಶಾಂತ್ ಕೊಟರಗಿ ತನ್ನ ಸ್ನೇಹಿತರಿಗೆ ಕರೆ ಮಾಡಿ ಪಾರ್ಟಿ ಮಾಡಲು ಹೋಗಿದ್ದಾನೆ. ನಂತರ ಸ್ನೇಹಿತರೆಲ್ಲ ಸೇರಿ ಕಂಠ ಪೂರ್ತಿ ಮದ್ಯಸೇವನೆ ಮಾಡಿದ್ದಾರೆ. ಈ ವೇಳೆ ಸ್ನೇಹಿತರು ಯಾವುದೋ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾರೆ. ಈ ಜಗಳದಲ್ಲಿ ಅಲ್ಲೇ ಇದ್ದ ಮಚ್ಚಿನಿಂದ ಕೊಚ್ಚಿ ಪ್ರಶಾಂತ್ ಕೊಟರಗಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.

    ಈ ಸಂಬಂಧ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಿ ತನಿಖೆ ಮಾಡುತ್ತಿದ್ದಾರೆ.

  • ಕ್ರೂಸರ್, ಬೈಕ್ ಡಿಕ್ಕಿ- ಬರ್ತ್ ಡೇ ಮುಗಿಸಿ ಬರ್ತಿದ್ದ ಮೂವರ ಸಾವು

    ಕ್ರೂಸರ್, ಬೈಕ್ ಡಿಕ್ಕಿ- ಬರ್ತ್ ಡೇ ಮುಗಿಸಿ ಬರ್ತಿದ್ದ ಮೂವರ ಸಾವು

    ಧಾರವಾಡ: ಕ್ರೂಸರ್ ವಾಹನ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದ ಬಳಿ ನಡೆದಿದೆ.

    ಜಿಲ್ಲೆಯ ಹನಸಿ ಗ್ರಾಮದ ಮಹಾಂತೇಶ ನಿಂಗಪ್ಪ ಗುಜ್ಜಳ (26), ಚಂದ್ರಗೌಡ ಶಿವನಗೌಡ ರಾಯನಗೌಡ (28) ಹಾಗೂ ಹೆಬ್ಬಾಳ ಗ್ರಾಮದ ಆನಂದ ನಿಂಗಪ್ಪ ಜೆಟ್ಟೆನವರ (26) ಎಂಬವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

    ರಾತ್ರಿ ಈ ಮೂವರು ಗೆಳೆಯನ ಬರ್ತ್ ಡೇ ಪಾರ್ಟಿಗೆಂದು ನವಲಗುಂದಕ್ಕೆ ಹೋಗಿದ್ದಾರೆ. ಅಲ್ಲಿಯ ಒಂದು ಡಾಬಾದಲ್ಲಿ ಪಾರ್ಟಿ ಮುಗಿಸಿ ಗ್ರಾಮಕ್ಕೆ ವಾಪಸ್ಸಾಗುತ್ತಿದ್ದರು. ಈ ವೇಳೆ ಎದುರಿಗೆ ಬರುತ್ತಿದ್ದ ಕ್ರೂಸರ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಈ ಸಂಬಂಧ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಿಂದೂ ಮುಸ್ಲಿಂ ಗೆಳೆಯರಿಂದ ಅದ್ಧೂರಿಯಾಗಿ ಗಣೇಶ ಪ್ರತಿಷ್ಠಾಪನೆ

    ಹಿಂದೂ ಮುಸ್ಲಿಂ ಗೆಳೆಯರಿಂದ ಅದ್ಧೂರಿಯಾಗಿ ಗಣೇಶ ಪ್ರತಿಷ್ಠಾಪನೆ

    ದಾವಣಗೆರೆ: ಇಂದು ದೇಶದೆಲ್ಲಡೆ ಗಣೇಶ ಪ್ರತಿಷ್ಠಾಪನೆ ಮಾಡಿ ಅದ್ಧೂರಿಯಾಗಿ ಪೂಜೆ ಮಾಡುತ್ತಿದ್ದು, ಆದರಲ್ಲೂ ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಹಿಂದೂ ಮುಸ್ಲಿಂ ಭಾಂದವರು ಕೂಡಿ ಭಾವೈಕ್ಯತೆಯಿಂದ ಗಣೇಶ ಪ್ರತಿಷ್ಠಾಪನೆ ಮಾಡಿದ್ದಾರೆ.

    ದಾವಣಗೆರೆಯ ವಿನೋಭಾನಗರದ 7ನೇ ಕ್ರಾಸ್ ನಲ್ಲಿ ಹ್ಯಾಪಿ ಫ್ರೆಂಡ್ಸ್ ಗ್ರೂಪ್ ವತಿಯಿಂದ ಸರ್ವಧರ್ಮ ಗಣೇಶ ಪ್ರತಿಷ್ಠಾಪನೆ ಮಾಡಲಾಯಿತು. ಕೇವಲ ಹಿಂದೂಗಳೇ ಆರಾಧಿಸುವ ಗಣೇಶೋತ್ಸವವನ್ನು ಹಿಂದೂ-ಮುಸ್ಲಿಂಮರು ಸೇರಿ ಅದ್ಧೂರಿಯಾಗಿ ಪ್ರತಿಷ್ಠಾಪನೆ ಮಾಡಿದರು.

    ಪ್ರತಿ ವರ್ಷವೂ ಕೂಡ ಹಿಂದೂ ಮುಸ್ಲಿಂ ಬಾಂಧವರು ಸೇರಿ ಭಾವೈಕ್ಯತೆಯಿಂದ ಗಣೇಶ ಚತುರ್ಥಿಯನ್ನು ಆಚರಣೆ ಮಾಡುತ್ತಿದ್ದು, ಇದು ಇತರರಿಗೂ ಮಾರ್ಗದರ್ಶನವಾಗಲಿ ಎನ್ನುವುದು ನಮ್ಮ ಕಳಕಳಿಯಾಗಿದೆ ಎನ್ನುತ್ತಾರೆ ಹಿಂದೂ ಮುಸ್ಲಿಂ ಗೆಳಯರು. ಅಲ್ಲದೇ ಡೊಳ್ಳು ಬಾರಿಸುತ್ತ ಹಿಂದೂ ಮುಸ್ಲಿಂ ಬಾಂಧವರು ಸೇರಿ ಹೆಜ್ಜೆ ಹಾಕುತ್ತ ಗಣೇಶ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಿದರು.

  • ಸೋದೆ ವಾಧಿರಾಜ ಮಠಕ್ಕೆ ಅಣ್ಣಾಮಲೈ ಭೇಟಿ

    ಸೋದೆ ವಾಧಿರಾಜ ಮಠಕ್ಕೆ ಅಣ್ಣಾಮಲೈ ಭೇಟಿ

    ಕಾರವಾರ: ಇಂದು ಉತ್ತರ ಕರ್ನಾಟಕದ ಸೋದೆ ವಾಧಿರಾಜ ಮಠಕ್ಕೆ ಮಾಜಿ ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಭೇಟಿ ನೀಡಿದ್ದರು.

    ಉತ್ತರ ಕನ್ನಡ ಜಿಲ್ಲೆ ಶಿರಸಿಯ ಸೋಂದಾ ಊರಿನಲ್ಲಿರುವ ವಾಧಿರಾಜ ಮಠಕ್ಕೆ ತಮ್ಮ ಸ್ನೇಹಿತರೊಂದಿಗೆ ಆಗಮಿಸಿದ ಅಣ್ಣಾಮಲೈ ಸೋದೆ ಮಠದ ಶ್ರೀಗಳೊಂದಿಗೆ ಆಧ್ಯಾತ್ಮದ ಬಗ್ಗೆ ಚರ್ಚೆ ಮಾಡಿದರು.

    ತಮ್ಮ ಏಳು ಜನ ಗೆಳಯರ ಜೊತೆ ಬಂದಿದ್ದ ಅಣ್ಣಾಮಲೈ ಅವರು ಶ್ರೀ ವಿಶ್ವ ವಲ್ಲಭತೀರ್ಥ ಶ್ರೀಪಾದರಿಂದ ಮಂತ್ರಾಕ್ಷತೆ ಪಡೆದರು. ಈ ವೇಳೆ ಮಠವೆಲ್ಲವನ್ನು ಸುತ್ತಾಡಿ ನೋಡಿದ ಅವರು ಮಠದಲ್ಲಿರುವ ಪುಟ್ಟ ಮಕ್ಕಳ ಜೊತೆ ಕೆಲ ಕಾಲ ಮಾತನಾಡಿದರು. ದೇವರ ಕಡೆ ಜಾಸ್ತಿ ಒಲವು ಇರುವ ಅಣ್ಣಾಮಲೈ ಇತ್ತೀಚಿಗೆ ಶಬರಿಮಲೆಗೆ ಹೋಗಿ ಬಂದಿದ್ದರು.

    ಕರ್ನಾಟಕ ಸಿಂಗಂ ಎಂದೇ ಖ್ಯಾತಿಯಾಗಿದ್ದ ಅಣ್ಣಾಮಲೈ ಅವರು ತಮ್ಮ 9 ವರ್ಷದ ಐಪಿಎಸ್ ಹುದ್ದೆಗೆ ಇದೇ ವರ್ಷ ಜೂನ್ ತಿಂಗಳಿನಲ್ಲಿ ರಾಜೀನಾಮೆ ನೀಡಿದ್ದರು. ತಮಿಳುನಾಡಿನ ಕೊಯಮತ್ತೂರಿನವಾರದ ಅವರು, 2011ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದರು. ನಂತರ 2013ರಲ್ಲಿ ಕಾರ್ಕಳ ಎಎಸ್‍ಪಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದ ಅವರು, ಬಳಿಕ 2015ರಲ್ಲಿ ಉಡುಪಿ ಜಿಲ್ಲಾ ಎಸ್‍ಪಿ, ಚಿಕ್ಕಮಗಳೂರು ಎಸ್‍ಪಿಯಾಗಿ ದಕ್ಷ ಸೇವೆ ಮಾಡಿದ್ದಾರೆ.

  • ವಿದೇಶಿ ಪ್ರಜೆಯೊಂದಿಗೆ ಕರ್ನಾಟಕದಲ್ಲಿ ಸಪ್ತಪದಿ ತುಳಿದ ಆಂಧ್ರ ಯುವಕ

    ವಿದೇಶಿ ಪ್ರಜೆಯೊಂದಿಗೆ ಕರ್ನಾಟಕದಲ್ಲಿ ಸಪ್ತಪದಿ ತುಳಿದ ಆಂಧ್ರ ಯುವಕ

    ಕೋಲಾರ: ಜಿಲ್ಲೆಯ ಮುಳಬಾಗಲು ಪಟ್ಟಣದ ಸೋಮೇಶ್ವರಸ್ವಾಮಿ ದೇವಸ್ಥಾನದಲ್ಲಿ ಇಂದು ಹಿಂದೂ ಸಂಪ್ರದಾಯದಂತೆ ವಿದೇಶಿ ಪ್ರಜೆಯೊಂದಿಗೆ ಆಂಧ್ರ ಪ್ರದೇಶದ ಯುವಕ ಸಪ್ತಪದಿ ತುಳಿದಿದ್ದಾನೆ.

    ಜರ್ಮನ್ ಮೂಲದ ಆರೋಗ್ಯ ಸಹಾಯಕಿ ಸ್ವಟ್ಲೋನಾ ಹಾಗೂ ಆಂಧ್ರ ಮೂಲದ ಎಂಜಿನಿಯರ್ ಜಸ್ಸಿ ಜೀವನ್ ವಿವಾಹವಾಗಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಸ್ವಟ್ಲೋನಾ ಅವರು ಒಂದು ಪುಸ್ತಕ ಬರೆಯುವ ಸಲುವಾಗಿ ಕರ್ನಾಟಕಕ್ಕೆ ಬಂದಿದ್ದರು. ಈ ವೇಳೆ ಜೀವನ್ ಪರಿಚಯವಾಗಿತ್ತು. ಮೊದಲು ಇಬ್ಬರು ಸ್ನೇಹಿತರಾಗಿದ್ದರು, ಕೆಲ ದಿನಗಳ ಬಳಿಕ ಸ್ನೇಹ ಪ್ರೀತಿಗೆ ತಿರುಗಿ, ಇಬ್ಬರು ಮದುವೆಯಾಗಲು ನಿರ್ಧರಿಸಿದರು.

    ಈ ಜೋಡಿಗೆ ಹಿಂದೂ ಸಂಪ್ರದಾಯದಂತೆ ಮದುವೆ ಆಗಬೇಕೆಂದು ಆಸೆ ಇದ್ದ ಕಾರಣಕ್ಕೆ ಸೋಮೇಶ್ವರಸ್ವಾಮಿ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದಿದ್ದಾರೆ. ಈ ಅಪರೂಪದ ಪ್ರೀತಿಗೆ ಕರ್ನಾಟಕದಲ್ಲಿದ್ದ ಜೀವನ್ ಸ್ನೇಹಿತರು ಸಹಾಯ ಮಾಡಿದ್ದು, ಅವರೇ ಮುಂದೆ ನಿಂತು ಇಬ್ಬರ ಮದುವೆಯನ್ನು ಮಾಡಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ನವಜೋಡಿ, ಒಂದು ವರ್ಷದಿಂದ ಪ್ರೀತಿಸುತ್ತಿದ್ದೆವು. ಸ್ನೇಹಿತರ ಸಹಾಯದಿಂದ ಇಂದು ಇಬ್ಬರೂ ಒಂದಾಗಿದ್ದೇವೆ. ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದೇವೆ ಎಂದು ಖುಷಿಯನ್ನು ಹಂಚಿಕೊಂಡರು.

  • ವೀಕೆಂಡ್ ಮಸ್ತಿಯಲ್ಲಿ ದಚ್ಚು- ಕುದುರೆ ಏರಿ ಸವಾರಿ ಮಾಡಿದ ಸುಯೋಧನ

    ವೀಕೆಂಡ್ ಮಸ್ತಿಯಲ್ಲಿ ದಚ್ಚು- ಕುದುರೆ ಏರಿ ಸವಾರಿ ಮಾಡಿದ ಸುಯೋಧನ

    ಮೈಸೂರು: ವೀಕೆಂಡ್‍ನಲ್ಲಿ ಸ್ನೇಹಿತರ ಜೊತೆ ಮಸ್ತಿ ಮಾಡುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮಗೆ ಇಷ್ಟವಾದ ಕುದುರೆ  ಏರಿ ಸವಾರಿ ಮಾಡಿದ್ದಾರೆ.

    ತಮ್ಮ ನಟನೆಯ ಕರುಕ್ಷೇತ್ರ ಸಿನಿಮಾದ ಭರ್ಜರಿ ಯಶಸ್ಸಿನಲ್ಲಿರುವ ಸುಯೋಧನ ದರ್ಶನ್, ಮೈಸೂರಿನ ತಮ್ಮ ಫಾರ್ಮ್ ಹೌಸಿನಲ್ಲಿ ವೀಕೆಂಡ್ ಮಸ್ತಿ ಮಾಡುತ್ತಿದ್ದಾರೆ. ಗೆಳೆಯರ ಜೊತೆ ಕುದುರೆ ಏರಿ ರಸ್ತೆಯಲ್ಲಿ ಓಡಾಡಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಅಗಿದೆ.

    ವಿಡಿಯೋದಲ್ಲಿ ದಾಸ, ತಮಗೆ ಇಷ್ಟವಾದ ಬಿಳಿ ಕುದುರೆಯನ್ನು ರೈಡ್ ಮಾಡುತ್ತಿದ್ದಾರೆ. ಕುದುರೆಯ ಹಿಂದಕ್ಕೆ ಇನ್ನೊಂದು ಕಪ್ಪು ಬಣ್ಣದ ಕುದುರೆಯನ್ನು ಕಟ್ಟಿಕೊಂಡು ಸವಾರಿ ಮಾಡಿದ್ದಾರೆ. ದರ್ಶನ್ ಅವರ ಜೊತೆ ಅವರ ಇನ್ನಿಬ್ಬರು ಸ್ನೇಹಿತರು ಕೂಡ ಕುದುರೆ ಸವಾರಿ ಮಾಡುತ್ತಿರುವುದು ಕಂಡು ಬಂದಿದೆ. ಇದನ್ನು ರಸ್ತೆಯಲ್ಲಿ ನಿಂತ ಅಭಿಮಾನಿಗಳು ತಮ್ಮ ಮೊಬೈಲ್ ಫೋನ್‍ನಲ್ಲಿ ಸೆರೆಹಿಡಿದ್ದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಮುಂಚೆಯಿಂದಲೂ ಪ್ರಾಣಿ ಪ್ರಿಯ ಆಗಿರುವ ದರ್ಶನ್ ಅವರಿಗೆ ಕುದುರೆ ಎಂದರೆ ಅಚ್ಚುಮೆಚ್ಚು. ಆ ಕಾರಣದಿಂದಲೇ ಅವರು ಮೈಸೂರಿನ ಟಿ ನರಸೀಪುರದ ಬಳಿ ಇರುವ ಅವರ ಫಾರ್ಮ್ ಹೌಸ್‍ನಲ್ಲಿ ಕುದುರೆಗಳು, ಹಸುಗಳು ಮತ್ತು ಕೋಳಿ ಸೇರಿದಂತೆ ವಿವಿಧ ರೀತಿಯ ಪಕ್ಷಿಗಳನ್ನು ಸಾಕಿದ್ದಾರೆ.

    ಇದರ ಜೊತೆ ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ದರ್ಶನ್ ಕಾಡಿನ ಪರಿಸರದ ಮೇಲೆ ಅತೀ ಹೆಚ್ಚು ಪ್ರೀತಿ ಹೊಂದಿದ್ದು, ಶೂಟಿಂಗ್‍ನಲ್ಲಿ ಬಿಡುವು ಸಿಕ್ಕ ಸಮಯದಲ್ಲಿ ಕಾಡಿನಲ್ಲಿ ಸಫಾರಿ ಹೋಗುವುದು, ಕಾಡಿನ ಫೋಟೋ ತೆಗೆಯುವ ಹವ್ಯಾಸವನ್ನು ಇಟ್ಟುಕೊಂಡಿದ್ದಾರೆ. ಈ ಹಿಂದೆ ತಾವು ಸೆರೆ ಹಿಡಿದಿದ್ದ ಪ್ರಕೃತಿಯ ಅದ್ಭುತ ದೃಶ್ಯಗಳ ಫೋಟೋಗಳನ್ನು ಹರಾಜು ಹಾಕಿದ್ದರು. ಮಾರ್ಚ್ 3 ರಂದು ನಡೆದ ಈ ಹರಾಜಿನಲ್ಲಿ 3.75 ಲಕ್ಷ ರೂ. ಸಂಗ್ರಹಣೆಯಾಗಿತ್ತು. ಇದರಲ್ಲಿ ಬಂದ ಹಣವನ್ನು ದರ್ಶನ್ ಅರಣ್ಯ ಸಂರಕ್ಷಣೆಗೆ ಖರ್ಚು ಮಾಡುತ್ತೇನೆ ಎಂದು ಹೇಳಿದ್ದರು.