Tag: friends

  • ಅವ್ಳು ನನ್ನ ಹುಡ್ಗಿ ಎಂದ ಗೆಳೆಯನನ್ನ ಕೊಂದ ಸ್ನೇಹಿತ

    ಅವ್ಳು ನನ್ನ ಹುಡ್ಗಿ ಎಂದ ಗೆಳೆಯನನ್ನ ಕೊಂದ ಸ್ನೇಹಿತ

    -ರಾತ್ರಿ ಗೆಳೆಯರಿಬ್ಬರ ಎಣ್ಣೆ ಪಾರ್ಟಿ

    ಬೆಂಗಳೂರು: ಇದೊಂದು ತ್ರಿಕೋನ ಪ್ರೇಮಕಥೆಯಾಗಿದ್ದು, ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದ ಇಬ್ಬರು ಯುವಕರು ತಡರಾತ್ರಿವರೆಗೆ ಒಟ್ಟಿಗೆ ಪಾರ್ಟಿ ಮಾಡಿದ್ದಾರೆ. ಕುಡಿದ ಮತ್ತಿನಲ್ಲಿ ಗಲಾಟೆ ಶುರುವಾಗಿ, ಕೊಲೆಯಲ್ಲಿ ಅಂತ್ಯವಾಗಿದೆ.

    ಹೆಣ್ಣೂರಿನ ಜಾನಕಿರಾಮ ಲೇಔಟ್ ನಲ್ಲಿ ಘಟನೆ ನಡೆದಿದ್ದು, ಮೊರೋಡೆ (29) ಕೊಲೆಯಾದ ನೈಜೀರಿಯನ್ ಪ್ರಜೆ, ಸ್ಯಾಮ್ಯೂಯಲ್ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಆರೋಪಿ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ನೈಜೀರಿಯಾದಿಂದ ವಿದ್ಯಾಭ್ಯಾಸಕ್ಕೆಂದು ಬೆಂಗಳೂರಿಗೆ ಬಂದ ವೆರೋಡೆ ಮತ್ತು ಸ್ಯಾಮ್ಯೂಯಲ್, ಕೆಲ ವರ್ಷಗಳಿಂದ ಜೊತೆಯಲ್ಲಿಯೇ ವಾಸವಾಗಿದ್ದರು. ವೀಕ್ ಎಂಡ್ ಬಂದರೆ ಸಾಕು ಭರ್ಜರಿ ಪಾರ್ಟಿ ಮಾಡುತ್ತಿದ್ದರು. ಶನಿವಾರ ಸಹ ತಡರಾತ್ರಿವರೆಗೆ ಪಾರ್ಟಿ ಮಾಡಿದ್ದು, ಇದೇ ವೇಳೆ ಇಬ್ಬರ ಮಧ್ಯೆ ಹುಡುಗಿ ವಿಚಾರ ಹೊರಬಂದಿತ್ತು.

    ಅವಳು ನನ್ನ ಹುಡುಗಿ, ಎಂದು ವೆರೂಡೆ ಅಂದ್ರೆ, ಇಲ್ಲ ಅವಳು ನನ್ನ ಹುಡುಗಿ ಎಂದು ಸ್ಯಾಮ್ಯೂಯಲ್ ಅಂತಿದ್ದ. ಇದೇ ವಿಚಾರ ಸಂಬAಧ ಇಬ್ಬರ ಮಧ್ಯೆ ಜೋರು ಗಲಾಟೆ ಆಗಿದೆ. ಎಣ್ಣೆ ಏಟಲ್ಲಿ ಒಂದೇ ಯುವತಿಗಾಗಿ ನಡೆದ ಈ ಗಲಾಟೆ ಮುಂಜಾನೆವರೆಗೂ ಮುಂದುವರಿದಿದೆ. ಕೊನೆಗೆ ಬೆಳಗಿನ ಜಾವ ಸುಮಾರು ನಾಲ್ಕು ಗಂಟೆ ಮತ್ತೆ ಜಗಳ ಶುರುಮಾಡಿದ ಸ್ಯಾಮ್ಯೂಯಲ್, ವೆರೋಡೆಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾದ ಕಾರಣ, ವೆರೋಡೆ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾನೆ.

    ವಿಚಾರ ತಿಳಿದ ಹೆಣ್ಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಸ್ಯಾಮ್ಯೂಯಲ್ ನನ್ನು ಬಂಧಿಸಿದ್ದಾರೆ. ಒಂದೇ ಹುಡುಗಾಗಿ ಇಬ್ಬರ ನಡುವಿನ ಗಲಾಟೆಯಲ್ಲಿ ಜೊತೆಗಿದ್ದ ಸ್ನೇಹಿತನನ್ನೇ ಕೊಲೆ ಮಾಡಿದ್ದಾನೆ.

  • ವಾಟ್ಸಪ್ ಗೆಳೆಯರಿಂದ ನೆರೆ ಪೀಡಿತ ಪ್ರದೇಶದ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ

    ವಾಟ್ಸಪ್ ಗೆಳೆಯರಿಂದ ನೆರೆ ಪೀಡಿತ ಪ್ರದೇಶದ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ

    ಹಾವೇರಿ: ಸಾಮಾಜಿಕ ಜಾಲತಾಣದಲ್ಲಿ ಒಂದಾದ ಗೆಳೆಯರ ತಂಡವೊAದು ಸಮಾಜಕ್ಕೆ ಹೇಗೆ ಸ್ಪಂದಿಸಬಹುದು ಎಂದು ನಿರೂಪಿಸಿದೆ. ಹೊಳೆನರಸೀಪುರ ಪಟ್ಟಣದ ಪ್ರೈಂ ಕ್ಲಬ್ ಮತ್ತು ಗೆಳೆಯರ ಬಳಗ ಈ ಶ್ಲಾಘನೀಯ ಕೆಲಸವನ್ನು ಮಾಡಿದೆ.

    ತಮ್ಮ ತಮ್ಮ ವಾಟ್ಸಪ್ ಗ್ರೂಪ್‌ನ ಸ್ನೇಹಿತರೆಲ್ಲ ಒಂದಾಗಿ ನೆರೆಪೀಡಿತ ಪ್ರದೇಶಗಳಾದ ಹಾವೇರಿಯ ಕೂಡಲ ಗ್ರಾಮ ಮತ್ತು ಬೆಳಗಾವಿಯ ರಾಮದುರ್ಗ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸ್ಕೂಲ್ ಬ್ಯಾಗ್‌ಗಳನ್ನು ವಿತರಿಸಿದ್ದಾರೆ. ಎರಡು ಜಿಲ್ಲೆಗಳ ಒಟ್ಟು ಮೂರು ಸರ್ಕಾರಿ ಶಾಲೆಗಳ 350ಕ್ಕೂ ಹೆಚ್ಚು ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ಪಠ್ಯಪುಸ್ತಕಗಳನ್ನು ವಿತರಿಸಿದ್ದಾರೆ.

    ಸ್ನೇಹಿತರೆಲ್ಲ ತಮ್ಮ ಶಕ್ತಿಯಾನುಸಾರ ಹಣ ಸಂಗ್ರಹಿಸಿ ನಂತರ ಹೋಲ್ ಸೇಲ್ ದರದಲ್ಲಿ ವಿತರಣಾ ವಸ್ತುಗಳನ್ನು ಖರೀದಿಸಿದ್ದಾರೆ. ನಂತರ ಒಂದು ತಂಡ ನೆರೆಪೀಡಿತ ಜಿಲ್ಲೆಗೆ ತಲುಪಿದ್ದಾರೆ. ಮೊದಲಿಗೆ ಹಾವೇರಿಯ ಕೂಡಲ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗಿದ್ದು, ಸೋಮುವಾರ ಬೆಳಗಾವಿ ಜಿಲ್ಲೆಯಲ್ಲಿ ವಿತರಣೆ ಮಾಡುತ್ತೇವೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ಒಂದು ವಿದ್ಯಾರ್ಥಿಗೆ ಒಂದು ಬ್ಯಾಗ್, ನೀರಿನ ಬಾಟೆಲ್ ಮತ್ತು ಜಾಮೆಟ್ರಿ ಬಾಕ್ಸ್ ಸೇರಿ ತಲಾ ಎಂಟುನೂರು ರೂಪಾಯಿಯಂತೆ ಒಟ್ಟು ಮುನ್ನೂರು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುತ್ತಿದೆ.

    ಪ್ರೈಂ ಕ್ಲಬ್ ಮತ್ತು ಗೆಳೆಯರ ಸಂಯುಕ್ತ ಆಶ್ರಯದಲ್ಲಿ ಮಾಡುತ್ತಿರುವ ಕೆಲಸಕ್ಕೆ ಶಾಲಾ ಮುಖ್ಯಶಿಕ್ಷಕ ಶಿವಪ್ಪ ಕೂಡ ಸಂತಸ ವ್ಯಕ್ತಪಡಿಸಿದ್ದು, ಯುವಕರ ತಂಡದ ಸಮಾಜಸೇವೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಹಾನಗಲ್ ತಾಲೂಕಿನ ಕೂಡಲ ಗ್ರಾಮದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಮಾಡಲಾಯಿತು ಸರ್ಕಾರಿ ಶಾಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಶಿವಪ್ಪ, ಪ್ರೈಂ ಕ್ಲಬ್ ಸದಸ್ಯರಾದ ಅಶೋಕ್ ಗೌಡ, ಜಾಯ್ ಬ್ರಿಗಾಂಝ, ಮೋಹನ್ ಮತ್ತು ಮಹಮದ್ ಶಫಿ ಸೇರಿದಂತೆ ಇತರರು ಹಾಜರಿದ್ದರು.

  • ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಸ್ಥಳದಲ್ಲೇ ಇಬ್ಬರ ಸಾವು

    ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಸ್ಥಳದಲ್ಲೇ ಇಬ್ಬರ ಸಾವು

    ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದ್ದು, ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಕಣಗಲಾ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ.

    ವೈಭವ ವಾಡ್ಕರ್(21) ಹಾಗೂ ದಿಗ್ವಿಜಯ ಪಾಟೀಲ್(30) ಮೃತಪಟ್ಟ ದುರ್ದೈವಿಗಳು. ವೈಭವ್ ಹಾಗೂ ದಿಗ್ವಿಜಯ್ ತಮ್ಮ ಸ್ನೇಹಿತರ ಜೊತೆ ಮಹಾರಾಷ್ಟ್ರದ ಕೊಲ್ಹಾಪುರದಿಂದ ಬೆಳಗಾವಿ ಮಾರ್ಗವಾಗಿ ಗೋವಾ ಪ್ರವಾಸ ತೆರಳುತ್ತಿದ್ದರು.

    ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಉಳಿದಂತೆ ಕಾರಿನಲ್ಲಿದ್ದ 9 ಮಂದಿಗೆ ಗಂಭೀರ ಗಾಯಗಳಾಗಿದೆ. ಸದ್ಯ ಗಾಯಾಳುಗಳನ್ನು ಕೊಲ್ಹಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮುಂಬರುವ ವರ್ಷಗಳಲ್ಲಿ ನಮ್ಮ ಮನೆ ಡೈಪರ್‌ನಿಂದ ತುಂಬಿರುತ್ತೆ: ನಟಿ ರಾಧಿಕಾ

    ಮುಂಬರುವ ವರ್ಷಗಳಲ್ಲಿ ನಮ್ಮ ಮನೆ ಡೈಪರ್‌ನಿಂದ ತುಂಬಿರುತ್ತೆ: ನಟಿ ರಾಧಿಕಾ

    ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲಾ ನಾನು ಈಗ ಎರಡನೇ ಮಗುವಿಗೆ ಜನ್ಮ ನೀಡಲು ರೆಡಿ ಆಗಿದ್ದೇನೆ ಎಂದು ಹೇಳಿದ್ದಾರೆ.

    ರಾಧಿಕಾ ಪಂಡಿತ್ ಭಾನುವಾರ ತಮ್ಮ ಸ್ನೇಹಿತರ ಜೊತೆ ಸೀಮಂತ ಕಾರ್ಯಕ್ರಮ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮವನ್ನು ರಾಧಿಕಾ ಸ್ನೇಹಿತರು ಆಯೋಜಿಸಿ ಅವರಿಗೆ ಸರ್ಪ್ರೈಸ್ ನೀಡಿದ್ದರು. ಮಂಗಳವಾರ ರಾಧಿಕಾ ಕಾರ್ಯಕ್ರಮದ ಫೋಟೋವೊಂದನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಆದರೆ ಇಂದು ಕಾರ್ಯಕ್ರಮದ ಹಲವು ಫೋಟೋಗಳನ್ನು ಶೇರ್ ಮಾಡಿ, ನನ್ನ ಸ್ನೇಹಿತರು ನನಗೆ ಸೀಮಂತ ಪಾರ್ಟಿ ನೀಡಿದ್ದರು. ಈ ಪಾರ್ಟಿ ನೀಡಿದ ಎಲ್ಲ ಆಂಟಿಗಳಿಗೆ ಧನ್ಯವಾದಗಳು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಮಾಧ್ಯಮವೊಂದರ ಜೊತೆ ಮಾತನಾಡಿದ ರಾಧಿಕಾ, ನಾನು ಈಗ ಎರಡನೇ ಮಗುವಿಗೆ ಜನ್ಮ ನೀಡಲು ರೆಡಿಯಾಗಿದ್ದೇನೆ. ಈಗಾಗಲೇ ನಾವು ಟೇಬಲ್‍ಗಳನ್ನು ಬದಲಾಯಿಸುತ್ತಿದ್ದೇವೆ ಹಾಗೂ ಸಾಕಷ್ಟು ಬಟ್ಟೆಗಳನ್ನು ಕೂಡ ತೆಗೆದುಕೊಳ್ಳುತ್ತಿದ್ದೇವೆ. ಐರಾ ಹುಟ್ಟಿದ ಸಮಯದಲ್ಲಿ ನಾವು ಈಗಾಗಲೇ ಎಲ್ಲವನ್ನು ನೋಡಿದ್ದೇವೆ. ಮುಂಬರುವ ವರ್ಷಗಳಲ್ಲಿ ನಮ್ಮ ಮನೆ ಡೈಪರ್ ನಿಂದ ತುಂಬಿರುತ್ತೆ. ಅಲ್ಲದೆ ನಾನು ಈಗ ಹೆಚ್ಚು ಸಮಯ ಎಚ್ಚರವಾಗಿರುವುದನ್ನು ಕಲಿತಿದ್ದೇನೆ ಎಂದು ಹೇಳಿದ್ದಾರೆ.

    ಭಾನುವಾರ ಬೆಳಗ್ಗೆ ನನ್ನ ಸೇಹಿತರು ಸೀಮಂತ ಕಾರ್ಯಕ್ರಮವನ್ನು ‘ಬೀ'(ಜೋನುನೊಣ) ಥೀಮ್‍ನಲ್ಲಿ ಆಯೋಜಿಸಿದ್ದರು. ಈ ಬಾರಿ ಸುತ್ತಮುತ್ತ ಆಗುತ್ತಿರುವುದು ನನಗೆ ಹೆಚ್ಚು ಪರಿಚಿತ ಭಾವನೆ ತರಿಸುತ್ತಿದೆ. ಏಕೆಂದರೆ ನಾನು ಈಗಾಗಲೇ ಈ ಅನುಭವವನ್ನು ಪಡೆದಿದ್ದೇನೆ. ನಾನು ಏನನ್ನು ನಿರೀಕ್ಷಿಸಬೇಕೆಂದು ತಿಳಿದಿದ್ದರಿಂದ ನಾನು ಅದನ್ನು ಸುಲಭವಾಗಿ ಕಂಡುಕೊಂಡೆ ಮತ್ತು ನನ್ನ ಗಮನವನ್ನು ಬೇರೆಡೆಗೆ ಇರಿಸಲು ನನ್ನ ಮಗಳು ಐರಾ ಇದ್ದಳು ಎಂದು ಹೇಳಿದ್ದಾರೆ.

    ಭಾನುವಾರದ ಸೀಮಂತ ಕಾರ್ಯಕ್ರಮ ನನಗೆ ಸರ್ಪ್ರೈಸ್ ಆಗಿತ್ತು. ಮೊದಲ ಬಾರಿ ಗರ್ಭಿಣಿಯಾದಾಗ ಮಾತ್ರ ಸಾಂಪ್ರದಾಯಿಕವಾಗಿ ಸೀಮಂತ ಕಾರ್ಯಕ್ರಮ ಮಾಡುತ್ತಾರೆ. ಎರಡನೇ ಬಾರಿಗೆ ಗರ್ಭಿಣಿ ಆಗಿದ್ದಾಗ ನಾನು ಇದನ್ನು ಮಿಸ್ ಮಾಡಿಕೊಳ್ಳಬಾರದೆಂದು ನನ್ನ ಸ್ನೇಹಿತರೇ ಈ ಸರ್ಪ್ರೈಸ್ ಪ್ಲಾನ್ ಮಾಡಿದ್ದರು. ಈ ಕಾರ್ಯಕ್ರಮಕ್ಕೆ ‘ಮಮ್ಮಿ ಟು ಬೀ’ ಎಂದು ಹೆಸರಿಡಲಾಗಿದ್ದು, ಹಳದಿ ಮತ್ತು ಕಪ್ಪು ಬಣ್ಣವನ್ನು ಥೀಮ್ ಮಾಡಲಾಗಿತ್ತು ಎಂದು ರಾಧಿಕಾ ತಿಳಿಸಿದ್ದಾರೆ.

    ನನ್ನ ಸ್ನೇಹಿತರೇ ನನಗೆ ನಿಗದಿಪಡಿಸಿದ ಸ್ಥಳಕ್ಕೆ ಕರೆದುಕೊಂಡು ಹೋಗಿ ಹೊಸ ಗೌನ್ ನೀಡಿದ್ದರು. ಅವರೇ ನನಗೆ ಹೇರ್ ಸ್ಟೈಲ್ ಮಾಡಿ ಮೇಕಪ್ ಮಾಡಿದ್ದರು. ಇದೇ ವೇಳೆ ಈ ಕಾರ್ಯಕ್ರಮದಲ್ಲಿ ಹಲವು ವಿಭಿನ್ನ ಆಟಗಳನ್ನು ಆಯೋಜಿಸಲಾಗಿತ್ತು. ಮೊದಲು ಪಿಂಗ್‍ಪಾಂಗ್ ಚೆಂಡನ್ನು ನೇತು ಹಾಕಿದ್ದ ಡೈಪರೊಳಗೆ ಹಾಕಬೇಕಿತ್ತು. ಅಲ್ಲದೆ ಕಣ್ಣಿಗೆ ಬಟ್ಟೆ ಕಟ್ಟಿ ಗೊಂಬೆಗೆ ಡೈಪರ್ ಹಾಕಬೇಕಿತ್ತು. ಈ ಕಾರ್ಯಕ್ರಮದಲ್ಲಿ ನನ್ನ ಎಲ್ಲ ಸ್ನೇಹಿತೆಯರು ಇದ್ದರು. ಅಲ್ಲದೆ ಎಲ್ಲರಗಿಂತ ಕಿರಿಯ ವ್ಯಕ್ತಿ ನನ್ನ ಮಗಳು ಐರಾ ಕೂಡ ಇದ್ದಳು ಎಂದರು.

  • 2,500 ರೂಪಾಯಿಗಾಗಿ ಸ್ನೇಹಿತನ ಎದೆಗೆ ಚಾಕು ಇರಿದ ಯುವಕರು

    2,500 ರೂಪಾಯಿಗಾಗಿ ಸ್ನೇಹಿತನ ಎದೆಗೆ ಚಾಕು ಇರಿದ ಯುವಕರು

    ಬೆಂಗಳೂರು: 2,500 ರೂಪಾಯಿಗಾಗಿ ಕೆಲ ಯುವಕರು ಸ್ನೇಹಿತನ ಎದೆಗೆ ಚಾಕು ಇರಿದ ಘಟನೆ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಬಳಿಯ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

    ದಿಲೀಪ್ ಕುಮಾರ್ (21) ಚಾಕು ಇರಿತಕ್ಕೊಳಗಾದ ಯುವಕ. ಚೇತನ್ ಅಂಡ್ ಟೀಂ ಹಲ್ಲೆ ಮಾಡಿದ ಯುವಕರು. ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಅದೃಷ್ಟವಶಾತ್ ದಿಲೀಪ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆರೋಪಿಗಳಿಗೆ ಸಂಬಂಧಿಸಿದ ಸ್ವಿಫ್ಟ್ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ದಿಲೀಪ್ ಕುಮಾರ್, ಚೇತನ್ ಸೇರಿದಂತೆ ಕೆಲ ಯುವಕರು ಸ್ವಿಫ್ಟ್ ಕಾರಿನಲ್ಲಿ ಗೋರಗುಂಟೇಪಾಳ್ಯದಿಂದ ಹೊರಟಿದ್ದರು. ಮಾರ್ಗ ಮಧ್ಯದಲ್ಲಿ 2,500 ರೂಪಾಯಿಗೆ ಜಗಳವಾಡಿಕೊಂಡಿದ್ದರು. ಈ ವೇಳೆ ಚೇತನ್ ತನ್ನ ಟೀಂ ಜೊತೆಗೆ ಸೇರಿ ದಿಲೀಪ್ ಮೇಲೆ ಹಲ್ಲೆ ಮಾಡಿದ್ದಾನೆ. ಅಷ್ಟೇ ಅಲ್ಲದೆ ಚಾಕು ಇರಿದು ಸ್ಥಳದಲ್ಲಿ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ.

    ಗಂಭೀರವಾಗಿ ಗಾಯಗೊಂಡಿದ್ದ ದಿಲೀಪ್‍ನನ್ನು ಕೆಲ ಯುವಕರು ತಕ್ಷಣವೇ ಡಾಬಸ್ ಪೇಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

  • ಪ್ರೀತ್ಸೆ ಎಂದು ಬೆನ್ನುಬಿದ್ದ ಪಾಗಲ್ ಪ್ರೇಮಿ – ನಿರಾಕರಿಸಿದ್ದಕ್ಕೆ ರೇಪ್ ಮಾಡ್ತೀನೆಂದು ಅವಾಜ್

    ಪ್ರೀತ್ಸೆ ಎಂದು ಬೆನ್ನುಬಿದ್ದ ಪಾಗಲ್ ಪ್ರೇಮಿ – ನಿರಾಕರಿಸಿದ್ದಕ್ಕೆ ರೇಪ್ ಮಾಡ್ತೀನೆಂದು ಅವಾಜ್

    ಬೆಂಗಳೂರು: ಪ್ರೀತ್ಸೆ ಎಂದು ಬೆನ್ನು ಬಿದ್ದ ಪಾಗಲ್ ಪ್ರೇಮಿಯ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಯುವತಿಗೆ ರೇಪ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ ಘಟನೆ ಬೆಂಗಳೂರಿನ ಸಂಪಂಗಿರಾಮನಗರದಲ್ಲಿ ನಡೆದಿದೆ.

    ರಕ್ಷಿತಾ(ಹೆಸರು ಬದಲಾಯಿಸಲಾಗಿದೆ) ಸಂಪಂಗಿರಾಮನಗರ ನಿವಾಸಿಯಾಗಿದ್ದು, ಈಗ ತಾನೇ ಆಕೆಯ ಕಾಲೇಜು ಮುಗಿದಿದೆ. ಆದರೆ ಅಷ್ಟರಲ್ಲಿ ಪಾಗಲ್ ಪ್ರೇಮಿಯೊಬ್ಬ ಆಕೆಗೆ ಪ್ರಪೋಸ್ ಮಾಡಿದ್ದು, ರಕ್ಷಿತಾ ಆತನ ಪ್ರೀತಿಯನ್ನು ನಿರಾಕರಿಸಿದ್ದಾಳೆ. ಇದರಿಂದ ಬೇಸರಗೊಂಡ ಪಾಗಲ್ ಪ್ರೇಮಿ, ಇವಳಿಲ್ಲದೇ ನಾನು ಬದುಕಲ್ಲ ಎಂದು ಮನೆಯಲ್ಲಿ ರಂಪಾಟ ಮಾಡಿದ್ದಾನೆ. ಆತನ ಸ್ನೇಹಿತರು, ಕುಟುಂಬಸ್ಥರು, ಪಾಗಲ್ ಪ್ರೇಮಿಗೆ ಬುದ್ಧಿ ಹೇಳುವ ಬದಲು ಆಕೆಗೆ ಟಾರ್ಚರ್ ನೀಡಲು ಶುರು ಮಾಡಿದ್ದಾರೆ.

    ಪಾಗಲ್ ಪ್ರೇಮಿಯ ಸ್ನೇಹಿತರು ಯುವತಿ ಮನೆಯ ರೋಡಿನಲ್ಲಿ ನಿಂತು ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೆ ರೇಪ್ ಮಾಡುತ್ತೀನಿ ಎಂದು ಬೆದರಿಕೆ ಹಾಕಲು ಶುರು ಮಾಡಿದ್ದಾರೆ. ಈ ಯುವಕರಿಗೆ ಪಾಗಲ್ ಪ್ರೇಮಿಯ ಚಿಕ್ಕಮ್ಮ ಕೂಡ ಸಾಥ್ ನೀಡಿದ್ದು, ಅವರು ಕೂಡ ಅಸಭ್ಯವಾಗಿ ಮಾತಾನಾಡ್ತಾರೆ ಎಂದು ರಕ್ಷಿತಾ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.

    ಈ ಬಗ್ಗೆ ರಕ್ಷಿತಾ ಪೊಲೀಸ್ ಠಾಣೆಗೆ ದೂರು ನೀಡಿದ್ದರೆ, ಇದೆಲ್ಲ ಜಗಳ ಯಾಕೆ ಸುಮ್ಮನಿರಿ. ವಿದ್ಯಾಭ್ಯಾಸ ಹಾಳು ಮಾಡಿಕೊಳ್ಳಬೇಡಿ ಎಂದು ಪೊಲೀಸರು ಹೇಳುತ್ತಿದ್ದಾರೆ. ತುಂಬಾ ಒತ್ತಡ ಹೇರಿದ ಮೇಲೆ ಪೊಲೀಸರು ಈ ಯುವಕರನ್ನು ಅರೆಸ್ಟ್ ಮಾಡಿ ಒಂದು ಬಾರಿ ಎರಡು ಮೂರು ದಿನ ಅರೆಸ್ಟ್ ಮಾಡುತ್ತಾರೆ. ನಂತರ ಮತ್ತೆ ಅದೇ ಕಾಟ ಶುರುವಾಗುತ್ತದೆ ಎಂದು ರಕ್ಷಿತಾ ದೂರಿದ್ದಾಳೆ.

    ಯುವಕರ ಕಾಟದಿಂದ ನೊಂದ ರಕ್ಷಿತಾ ಸಂಪಗಿರಾಮನಗರ ಠಾಣೆಯಲ್ಲಿಯೇ ಆತ್ಮಹತ್ಯೆಗೂ ಯತ್ನಿದ್ದಾಳೆ. ಪೊಲೀಸರು ನ್ಯಾಯ ಕೊಡಿಸುತ್ತಿಲ್ಲ. ಈ ಯುವಕರ ಕಾಟಕ್ಕೆ ನೊಂದು ಹೋಗಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾಳೆ. ಈ ಬಗ್ಗೆ ಪ್ರತಿಕ್ರಿಯಿಸಿದ ರಕ್ಷಿತಾ ತಾಯಿ, ಅಂದು ರಾತ್ರಿ ಅರೆಸ್ಟ್ ಆಗಿ ರಿಲೀಸ್ ಆಗಿ ಅವರೆಲ್ಲ ಮನೆಗೆ ಬಂದು ಇವಳಿಗೆ ರೇಪ್ ಮಾಡುತ್ತೀನಿ ಎಂದು ಹೇಳಿದ್ದಾರೆ. ಪೊಲೀಸರಿಗೂ ಹೇಳಿದ್ದೀವಿ. ಆದರೆ ಅವರು ಕ್ಯಾರೆ ಎಂದಿಲ್ಲ. ಈಗ ನನ್ನ ಮಗಳು ವಿಷ ಕುಡಿದಿದ್ದಾಳೆ ಎಂದು ತಿಳಿಸಿದ್ದಾರೆ.

  • ಐ ಫೋನ್ ವಿಚಾರಕ್ಕಾಗಿ ಯುವಕನ ಮೇಲೆ ಸ್ನೇಹಿತರಿಂದಲೇ ಮಾರಣಾಂತಿಕ ಹಲ್ಲೆ

    ಐ ಫೋನ್ ವಿಚಾರಕ್ಕಾಗಿ ಯುವಕನ ಮೇಲೆ ಸ್ನೇಹಿತರಿಂದಲೇ ಮಾರಣಾಂತಿಕ ಹಲ್ಲೆ

    ಬೆಂಗಳೂರು: ಐ ಫೋನ್ ಹಾಗೂ ಹಣದ ವಿಚಾರಕ್ಕಾಗಿ ಯುವಕನ ಮೇಲೆ ಸ್ನೇಹಿತರೇ ಲಾಂಗ್ ಮತ್ತು ಡ್ರಾಗರ್ ನಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬೆಂಗಳೂರು ಹೊರವಲಯ ಬನ್ನೇರುಘಟ್ಟದಲ್ಲಿ ನಡೆದಿದೆ.

    ಆನೇಕಲ್‍ನ ಮುತ್ತಗಟ್ಟಿ ನಿವಾಸಿ ಸಂತೋಷ್ ಹಲ್ಲೆಗೆ ಒಳಗಾದ ಯುವಕ. ಬನ್ನೇರುಘಟ್ಟದ ಚಂಪಕಧಾಮಸ್ವಾಮಿ ದೇವಾಲಯದ ರಸ್ತೆಯಲ್ಲಿ ಘಟನೆ ನಡೆದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂತೋಷ್‍ನನ್ನು ಸಮೀಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಸಂತೋಷ್ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.

    ಸಂತೋಷ್ ಇಂದು ಸ್ನೇಹಿತರ ಜೊತೆ ಹುಳಿಮಾವು ಬಳಿ ಸಿನಿಮಾ ನೋಡಲು ಹೋಗುತ್ತಿದ್ದ. ಈ ವೇಳೆ ಹಾರಗದ್ದೆ ಸಮೀಪ ಐ ಫೋನ್ ಹಾಗೂ ಹಣದ ವಿಚಾರಕ್ಕಾಗಿ ಗಲಾಟೆಯಾಗಿದೆ. ಇದರಿಂದಾಗಿ ಅಲ್ಲಿಂದ ಸಂತೋಷ್ ಪರಾರಿಯಾಗಿದ್ದ. ಆದರೆ ಕಾರಿನಲ್ಲಿ ಬಂದ ಆರು ಜನ ಯುವಕರು ಬನ್ನೇರುಘಟ್ಟದ ಚಂಪಕಧಾಮಸ್ವಾಮಿ ದೇವಾಲಯದ ರಸ್ತೆಯಲ್ಲಿ ಸಂತೋಷ್‍ನನ್ನು ಹಿಡಿದು ಮತ್ತೆ ಜಗಳ ಮಾಡಿದ್ದಾರೆ.

    ಮಾತಿಗೆ ಮಾತು ಬೆಳೆದು ಗಲಾಟೆ ಜೋರಾಗುತ್ತಿದ್ದಂತೆ ಯುವಕರ ತಂಡವು ಲಾಂಗ್ ಮತ್ತು ಡ್ರಾಗರ್ ನಿಂದ ಸಂತೋಷ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಸಂತೋಷ್‍ನನ್ನು ಸ್ಥಳೀಯರು ಚಂದಾಪುರ ಬಳಿಯ ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

  • ಮುಸ್ಲಿಂ ಪುರುಷ, ಹಿಂದೂ ಮಹಿಳೆಗೆ ಪ್ರವೇಶ ನಿರಾಕರಿಸಿದ ಹೋಟೆಲ್

    ಮುಸ್ಲಿಂ ಪುರುಷ, ಹಿಂದೂ ಮಹಿಳೆಗೆ ಪ್ರವೇಶ ನಿರಾಕರಿಸಿದ ಹೋಟೆಲ್

    ಜೈಪುರ: ಮುಸ್ಲಿಂ ಪುರುಷ ಹಾಗೂ ಹಿಂದೂ ಮಹಿಳೆ ಇಬ್ಬರೂ ಬೇರೆ ಬೇರೆ ಧರ್ಮದವರು ಎಂಬ ಕಾರಣಕ್ಕೆ ಜೈಪುರದ ಹೋಟೆಲ್ ಒಂದು ಪ್ರವೇಶ ನೀಡಲು ನಿರಾಕರಿಸಿದೆ.

    ಜೈಪುರದಲ್ಲಿ ಶನಿವಾರ ಸಹಾಯಕ ಪ್ರಾಧ್ಯಾಪಕರು ಓಯೋದ ಸಿಲ್ವರ್‍ಕೆ ಹೋಟೆಲ್‍ಗೆ ಚೆಕ್ ಇನ್ ಮಾಡಲು ಹೋದಾಗ ಪ್ರವೇಶ ನಿರಾಕರಿಸಲಾಗಿದೆ. ನನ್ನ ಸ್ನೇಹಿತರೊಬ್ಬರು ದೆಹಲಿಯಿಂದ ಜೈಪುರಕ್ಕೆ ಆಗಮಿಸುತ್ತಿದ್ದರು ಹೀಗಾಗಿ ಹೋಟೆಲ್‍ಗೆ ತೆರಳಿದ್ದೇವು ಎಂದು ಪ್ರಾಧ್ಯಾಪಕರು ತಿಳಿಸಿದ್ದಾರೆ.

    ವರದಿಯ ಪ್ರಕಾರ 31 ವರ್ಷದ ಪ್ರಾಧ್ಯಾಪಕ ಟ್ರಾವೆಲ್ ಆ್ಯಪ್ ಮೂಲಕ ಇಬ್ಬರಿಗೆ ರೂಂ ಬುಕ್ ಮಾಡಿದ್ದಾರೆ. ನಂತರ ಚೆಕ್ ಇನ್ ಆಗಲು ಹೋದಾಗ ಹೋಟೆಲ್ ಸಿಬ್ಬಂದಿ ಇನ್ನೊಬ್ಬರ ಹೆಸರನ್ನು ಕೇಳಿದ್ದಾರೆ. ಈ ವೇಳೆ ಅಧ್ಯಾಪಕರು ಹಿಂದೂ ಸ್ನೇಹಿತೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಇಬ್ಬರೂ ಬೇರೆ ಬೇರೆ ಧರ್ಮದವರಾಗಿದ್ದರಿಂದ ಸಮಸ್ಯೆ ಇದೆ. ಹೀಗಾಗಿ ಹೋಟೆಲ್ ನೀಡಲು ಸಾಧ್ಯವಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

    ಈ ಬಗ್ಗೆ ಪ್ರಾಧ್ಯಾಪಕ ಪ್ರತಿಕ್ರಿಯಿಸಿ, ಆ್ಯಪ್‍ನಲ್ಲಿ ಹಾಗೂ ಹೋಟೆಲ್ ವೆಬ್‍ಸೈಟ್‍ನಲ್ಲಿ ಇಂತಹ ಯಾವುದೇ ಷರತ್ತುಗಳಿಲ್ಲ. ನೀವು ಹೇಳುತ್ತಿರುವುದು ಸಮಾನತೆಯನ್ನು ಸಾರುವ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ.

    ಇದಕ್ಕೆ ಸಿಬ್ಬಂದಿ ಪೊಲೀಸರ ಸೂಚನೆಯ ಮೇರೆಗೆ ಈ ನಿಯಮ ಜಾರಿಗೆ ತಂದಿದ್ದೇವೆ ಎಂದು ಹೇಳಿದ್ದಾರೆ. ಆದರೆ ಈ ಕುರಿತು ಲಿಖಿತ ದಾಖಲೆಯನ್ನು ತೋರಿಸಲು ನಿರಾಕರಿಸಿದ್ದಾರೆ. ಎಲ್ಲಿಯೂ ಅಂತಹ ನಿಯಮ ಅಥವಾ ಕಾನೂನು ಇಲ್ಲ ಎಂದು ನಾನು ವಾದಿಸಿದೆ. ಇಲ್ಲಿ ವಿವಿಧ ಧರ್ಮಗಳು ಮತ್ತು ಲಿಂಗದ ಜನರು ಒಟ್ಟಿಗೆ ಇರುವುದನ್ನು ನಿಷೇಧಿಸಲಾಗಿದೆ ಎಂದು ತಿರಸ್ಕಾರದ ಮಾತುಗಳನ್ನಾಡಿದ್ದಾರೆ. ಈ ಕುರಿತು ಆ್ಯಪ್‍ನಲ್ಲಿ ದೂರು ನೀಡಿದ್ದು, ಬುಕ್ಕಿಂಗ್ ಹಣವನ್ನು ವಾಪಸ್ ಪಡೆದಿದ್ದಾರೆ. ನಂತರ ಬೇರೆ ಹೋಟೆಲ್‍ನ್ನು ಕಾಯ್ದಿರಿಸಿದೆ ಎಂದು ಪ್ರೊಫೆಸರ್ ತಿಳಿಸಿದ್ದಾರೆ.

    ಹೋಟೆಲ್‍ನವರ ನಡವಳಿಕೆಯನ್ನು ಕಂಡು ಆಘಾತವಾಯಿತು. ಇನ್ನೂ 21ನೇ ಶತಮಾನದಲ್ಲಿದ್ದೇವೆಯೇ ಎಂದು ಪ್ರಶ್ನಿಸಿದ್ದಾರೆ. ನಾವಿಬ್ಬರೂ ವರ್ಷಗಳಿಂದ ಸ್ನೇಹಿತರಾಗಿದ್ದೇವೆ. ನಮ್ಮಿಬ್ಬರ ನಡುವೆ ಧರ್ಮವೂ ಎಂದು ಅಡ್ಡಿಬಂದಿಲ್ಲ ಎಂದು ಮಹಿಳೆ ತಿಳಿಸಿದ್ದಾರೆ.

    ಈ ಕುರಿತು ಹೋಟೆಲ್ ವ್ಯವಸ್ಥಾಪಕ ಗೋವರ್ಧನ್ ಸಿಂಗ್ ಪ್ರತಿಕ್ರಿಯಿಸಿ, ಹೋಟೆಲ್ ನೀತಿ ಹಾಗೂ ಪೊಲೀಸ್ ಸೂಚನೆಗಳ ಪ್ರಕಾರ ಬೇರೆ ಬೇರೆ ಧರ್ಮದ ಮಹಿಳೆ ಹಾಗೂ ಪುರುಷರನ್ನು ಒಟ್ಟಿಗೆ ಚೆಕ್-ಇನ್ ಮಾಡಲು ಅನುಮತಿ ಇಲ್ಲ ಎಂದು ತಿಳಿಸಿದ್ದಾರೆ.

    ಜೈಪುರ ಪೊಲೀಸ್ ಆಯುಕ್ತ ಆನಂದ್ ಶ್ರೀವಾಸ್ತವ್ ಈ ಕುರಿತು ಪ್ರತಿಕ್ರಿಯಿಸಿ, ಪೊಲೀಸರಿಂದ ಯಾವುದೇ ರೀತಿಯ ಲಿಖಿತ ಅಥವಾ ಮೌಖಿಕ ಸೂಚನೆಗಳಿಲ್ಲ. ಹೋಟೆಲ್‍ಗಳು ಪೊಲೀಸರ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ದೂರಿದರು. ಓಯೋ ಟ್ರಾವೆಲ್ ಆ್ಯಪ್ ಈ ಕುರಿತು ಸ್ಪಷ್ಟಪಡಿಸಿದ್ದು, ಹೋಟೆಲ್ ವ್ಯವಸ್ಥಾಪಕರ ವಿರುದ್ಧ ತನಿಖೆ ನಡೆಸಲಾಗುವುದು ಎಂದು ತಿಳಿಸಿದೆ.

  • ಕೊಡಚಾದ್ರಿ ಬೆಟ್ಟಕ್ಕೆ ಪ್ರವಾಸಕ್ಕೆ ಬಂದಿದ್ದ ಕೇರಳದ ಯುವಕ ನಾಪತ್ತೆ

    ಕೊಡಚಾದ್ರಿ ಬೆಟ್ಟಕ್ಕೆ ಪ್ರವಾಸಕ್ಕೆ ಬಂದಿದ್ದ ಕೇರಳದ ಯುವಕ ನಾಪತ್ತೆ

    ಶಿವಮೊಗ್ಗ: ಮಲೆನಾಡ ಸುಂದರ ಪ್ರವಾಸಿ ತಾಣ ಕೊಡಚಾದ್ರಿ ಬೆಟ್ಟಕ್ಕೆ ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದ ಕೇರಳ ಮೂಲದ ಯುವಕ ನಾಪತ್ತೆಯಾಗಿದ್ದಾನೆ.

    ಕೇರಳದ ಕಣ್ಣೂರು ಜಿಲ್ಲೆಯ ತಲಚ್ಚೇರಿಯ ಲಿವಿಲ್ ರಾಜ್(27) ನಾಪತ್ತೆಯಾಗಿದ್ದಾನೆ. ಕಳೆದ 3 ದಿನಗಳ ಹಿಂದೆ ಮಲೆನಾಡ ಸುತ್ತಮುತ್ತಲ ಪ್ರದೇಶಕ್ಕೆ ಪ್ರವಾಸಕ್ಕೆಂದು 7 ಮಂದಿ ಸ್ನೇಹಿತರ ಜೊತೆ ಲಿವಿಲ್ ಬಂದಿದ್ದನು. ಆದರೆ ಭಾನುವಾರ ಕೊಡಚಾದ್ರಿ ಬೆಟ್ಟಕ್ಕೆ ಸ್ನೇಹಿತರ ಜೊತೆ ಲಿವಿಲ್ ಹೋಗಿದ್ದ ವೇಳೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ. ಸ್ನೇಹಿತ ನಾಪತ್ತೆ ಹಿನ್ನೆಲೆಯಲ್ಲಿ ಇತರೆ ಸ್ನೇಹಿತರು ಕೆಲ ಕಾಲ ಆತ ನಾಪತ್ತೆಯಾದ ಸ್ಥಳದಲ್ಲೇ ಹುಡುಕಾಟ ನಡೆಸಿದ್ದಾರೆ. ಆದರೆ ಯಾರಿಗೂ ಕೂಡ ಲಿವಿಲ್ ಸಿಕ್ಕಿಲ್ಲ. ತಮ್ಮ ಜೊತೆಗೇ ಇದ್ದವನು ಎಲ್ಲಿಗೆ ಹೋದ, ಏನಾದ ಎಂದು ಸ್ನೇಹಿತರಿಗೆ ತಿಳಿಯಲಿಲ್ಲ.

    ಈ ಘಟನೆಯಿಂದ ಗಾಬರಿಗೊಂಡ ಸ್ನೇಹಿತರು ಲಿವಿಲ್ ಬಗ್ಗೆ ಆತನ ಪೋಷಕರಿಗೆ ವಿಷಯ ತಿಳಿಸಿ, ಕೇರಳಕ್ಕೆ ವಾಪಾಸ್ಸಾಗಿದ್ದಾರೆ. ಇತ್ತ ಮಗ ನಾಪತ್ತೆಯಾಗಿದ್ದಕ್ಕೆ ಸ್ವತಃ ಲಿವಿಲ್ ಪೋಷಕರು ಹಾಗು ಕೇರಳ ಪೊಲೀಸರು ಕೊಡಚಾದ್ರಿ ಬೆಟ್ಟಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ. ಅವರಿಗೆ ಸ್ಥಳೀಯ ಪೊಲೀಸರು ಕೂಡ ಸಾಥ್ ಕೊಟ್ಟಿದ್ದಾರೆ. ಆದರೆ ಈವರೆಗೂ ಲಿವಿಲ್ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.

    ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ಕುಮಾರ ಪರ್ವತದಲ್ಲಿ ಚಾರಣಕ್ಕೆ ತೆರಳಿದ್ದ ಬೆಂಗಳೂರಿನ ಯುವಕನೊಬ್ಬ ನಾಪತ್ತೆಯಾಗಿದ್ದನು. ಬಿಕ ಆತನ ಪತ್ತೆಗೆ ಸಾಕಷ್ಟು ಹುಡುಕಾಟ ನಡೆದಿತ್ತು. ಆದರೆ ಎರಡು ದಿನಗಳ ಬಳಿಕ ಯುವಕ ತೀರ್ಥದ ಪೈಪ್ ಗುರುತಿನ ಮೂಲಕ ಸುಬ್ರಹ್ಮಣ್ಯಕ್ಕೆ ವಾಪಸ್ಸಾಗುವ ಮೂಲಕ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿತ್ತು.

  • ಬಿಯರ್ ಕೊಡದಿದ್ದಕ್ಕೆ ಬಾಟಲಿಯಿಂದಲೇ ಯುವಕನ ಹತ್ಯೆಗೈದ ಗೆಳೆಯರು

    ಬಿಯರ್ ಕೊಡದಿದ್ದಕ್ಕೆ ಬಾಟಲಿಯಿಂದಲೇ ಯುವಕನ ಹತ್ಯೆಗೈದ ಗೆಳೆಯರು

    ಬೆಳಗಾವಿ: ಎಣ್ಣೆ ಪಾರ್ಟಿ ಮಾಡುತ್ತಿದ್ದ ವೇಳೆ ಯುವಕ ಬಿಯರ್ ಕೇಳಿದಾಗ ಕೊಡಲಿಲ್ಲ ಎಂದು ಗೆಳೆಯರೇ ಆತನನ್ನು ಬಾಟಲಿಯಿಂದ ಹೊಡೆದು ಕೊಲೆ ಮಾಡಿದ ಅಮಾನುಷ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿ ನಗರದ ಆರ್.ಟಿ.ಒ ವೃತ್ತದ ಬಳಿ ಸಾಯಿ ಲಾಡ್ಜ್ ನಲ್ಲಿ ಈ ಘಟನೆ ನಡೆದಿದೆ. ಸಾಯಿ ಲಾಡ್ಜ್ ನಲ್ಲಿ ವೇಟರ್‍ ಗಳಾಗಿ ಕೆಲಸ ಮಾಡುತ್ತಿದ್ದ ಅಮಿತ್, ಶಶಿಕುಮಾರ್, ನವೀನ್ ಕೊಲೆ ಮಾಡಿದ ಆರೋಪಿಗಳು ಎಂದು ಗುರುತಿಸಲಾಗಿದ್ದು, ರೂಮ್ ಬಾಯ್ ವಿನಾಯಕ ಕಲಾಲ್ ಈ ಮೂವರು ಸೇರಿಕೊಂಡು ಕೊಲೆ ಮಾಡಿದ್ದಾರೆ. ಸಾಯಿ ಲಾಡ್ಜ್ ಮಾಲೀಕ ತಿಮ್ಮಪ್ಪ ಶೆಟ್ಟಿ ಭಾನುವಾರ ರಾತ್ರಿ ತಿರುಪತಿಗೆ ಹೋಗಿ ಬರುತ್ತೇನೆಂದು ಹೋಗಿದ್ದರು. ಹೀಗಾಗಿ ಮಾಲೀಕ ಹೋಗುತ್ತಿದ್ದ ಹಾಗೆ ಇತ್ತ ಫುಲ್ ಖುಷಿಯಲ್ಲಿ ಇಲ್ಲಿನ ಸಿಬ್ಬಂದಿ ಎಲ್ಲಾ ಸೇರಿಕೊಂಡು ಎಣ್ಣೆ ಪಾರ್ಟಿ ಶುರುಮಾಡಿದ್ದರು. ವಿನಾಯಕ, ಅಮಿತ್, ಶಶಿಕುಮಾರ್, ನವೀನ್ ನಾಲ್ಕು ಜನ ಸೇರಿಕೊಂಡು ಫುಲ್ ಟೈಟ್ ಆಗಿದ್ದರು.

    ಈ ವೇಳೆ ವಿನಾಯಕ ಬಿಟ್ಟರೆ ಉಳಿದವರ ಮದ್ಯ ಖಾಲಿಯಾಯ್ತು. ಆಗ ವಿನಾಯಕನ ಬಳಿ ಶಶಿಕುಮಾರ್ ಬಿಯರ್‍ನ ಕೇಳಿದ್ದಾನೆ. ಆದರೆ ವಿನಾಯಕ ಕೊಡಲ್ಲ ಎಂದಿದ್ದೇ ತಡ ಮೂವರು ಸೇರಿ ಅವನ ಮೇಲೆ ಹಲ್ಲೆ ಮಾಡಿದ್ದಾರೆ. ನಶೆಯಲ್ಲಿ ಮದ್ಯದ ಬಾಟಲಿಯಿಂದಲೇ ಅವನನ್ನ ಹೊಡೆದು ಕೊಲೆ ಮಾಡಿದ್ದಾರೆ.

    ಹತ್ಯೆ ಬಳಿಕ ರಾತ್ರಿ ಪೂರ್ತಿ ಲಾಡ್ಜ್ ನಲ್ಲಿಯೇ ಆರೋಪಿಗಳು ಮಲಗಿದ್ದು, ಸೋಮವಾರ ಬೆಳಗ್ಗೆ ನಶೆ ಇಳಿದ ಮೇಲೆ ತಮ್ಮ ತಪ್ಪಿನ ಅರಿವಾಗಿ ಅಮಿತ್ ಹಾಗೂ ನವೀನ್ ಪೊಲೀಸರಿಗೆ ಶರಣಾಗಿದ್ದಾರೆ. ಆದರೆ ಶಶಿಕುಮಾರ್ ಮಾತ್ರ ಎಸ್ಕೇಪ್ ಆಗಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಶಶಿಕುಮಾರ್‌ನನ್ನು ಬಂಧಿಸಲು ಬಲೆ ಬೀಸಿದ್ದಾರೆ.