Tag: friends

  • ಒಂದೇ ಟೇಬಲಿನಲ್ಲಿ ಎಣ್ಣೆ, ಚಿಕನ್ ಸೇವಿಸಿ ನಂತರ ಸ್ನೇಹಿತನನ್ನೆ ಹೊಡೆದು ಕೊಂದ ಗೆಳೆಯರು

    ಒಂದೇ ಟೇಬಲಿನಲ್ಲಿ ಎಣ್ಣೆ, ಚಿಕನ್ ಸೇವಿಸಿ ನಂತರ ಸ್ನೇಹಿತನನ್ನೆ ಹೊಡೆದು ಕೊಂದ ಗೆಳೆಯರು

    ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಗೆಳೆಯರಿಬ್ಬರು ಸೇರಿ ಸ್ನೇಹಿತನನ್ನೇ ಬಡಿಗೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    30 ವರ್ಷದ ಇರ್ಫಾನ್ ಕೊಲೆಯಾದ ಯುವಕ. ಇರ್ಫಾನ್ ಕಮರ್ಷಿಯಲ್ ಸ್ಟ್ರೀಟ್ ನಿವಾಸಿಯಾಗಿದ್ದು, ಹೂವಿನ ವ್ಯಾಪಾರ ಮಾಡಿಕೊಂಡಿದ್ದ. ಆರೋಪಿಗಳಾದ ಶಕ್ತಿವೇಲು, ಮಲೈ ಹಾಗೂ ಸಂತ್ರಸ್ತ ಇರ್ಫಾನ್ ಒಂದೇ ಟೆಬಲ್ ನಲ್ಲಿ ನಿತ್ಯ ಮದ್ಯಪಾನ ಮಾಡಿ ಅರ್ಧ ಪ್ಲೇಟ್ ಕಬಾಬ್ ಹಂಚಿಕೊಂಡು ತಿನ್ನುತ್ತಿದ್ದ ಗೆಳೆಯರು. ಎಂದಿನಂತೆ ನಿನ್ನೆಯೂ ಕೂಡ ಬಾರ್ ನಲ್ಲಿ ಕುಡಿದು ಹೋಗುತ್ತಿರುವಾಗ ಮೂವರ ನಡುವೆ ಗಲಾಟೆ ಆಗಿದೆ.

    ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ಆರೋಪಿಗಳಾದ ಶಕ್ತಿವೇಲು, ಮಲೈ ಮೋರಿ ಪಕ್ಕದಲ್ಲಿ ಬಿದ್ದಿದ್ದ ಬಡಿಗೆಯಿಂದ ಇರ್ಫಾನ್ ತಲೆಗೆ ಹೊಡೆದಿದ್ದಾರೆ. ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದರಿಂದ ಇರ್ಫಾನ್ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಇರ್ಫಾನ್ ಸತ್ತಿದ್ದಾನೆ ಎಂದು ತಿಳಿಯುತ್ತಿದ್ದಂತೆ ಇಬ್ಬರೂ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಘಟನೆ ಸಂಬಂಧ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಬಂಧಿಕರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಶಕ್ತಿವೇಲು ಹಾಗೂ ಮಲೈ ಇಬ್ಬರನ್ನೂ ಬಂಧಿಸಿದ್ದು, ತನಿಖೆ ಪ್ರಾರಂಭಿಸಿದ್ದಾರೆ.

  • ಹೆತ್ತವರನ್ನು ನೋಡ್ಬೇಕೆಂದು ಪತಿಗೆ ಹೇಳಿ ಹೋಗಿ ಲವ್ವರ್ ಜೊತೆ ಸಿಕ್ಕಿಬಿದ್ಳು!

    ಹೆತ್ತವರನ್ನು ನೋಡ್ಬೇಕೆಂದು ಪತಿಗೆ ಹೇಳಿ ಹೋಗಿ ಲವ್ವರ್ ಜೊತೆ ಸಿಕ್ಕಿಬಿದ್ಳು!

    ಮುಂಬೈ: ಜೋಡಿಯೊಂದಕ್ಕೆ ಥಳಿಸಿದ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿ ಹಾಗೂ ಆತನ ಗೆಳೆಯರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ.

    ತನ್ನ ಪತ್ನಿ ಆಕೆಯ ಲವ್ವರ್ ಜೊತೆಗಿರುವುದನ್ನು ಕಂಡ ಪತಿ ಹಾಗೂ ಆತನ ಗೆಳೆಯರು ಇಬ್ಬರಿಗೂ ಥಳಿಸಿದ್ದಾರೆ. ಹೀಗಾಗಿ ಥಳಿತಕ್ಕೊಳಗಾದವರು ನೀಡಿದ ದೂರಿನಂತೆ ಇಬ್ಬರನ್ನು ಬಂಧಿಸಿ ನಂತರ ರಿಲೀಸ್ ಮಾಡಲಾಗಿದೆ ಎಂದು ಇಂದು ಪೊಲೀಸರು ತಿಳಿಸಿದ್ದಾರೆ.

    ಘಟನೆಯೇನು..?
    ಮೊದಲೇ ಪ್ಲಾನ್ ಮಾಡಿಕೊಂಡಿದ್ದ ಪತ್ನಿ ಒಂದು ದಿನ ತನ್ನ ಹೆತ್ತವರನ್ನು ನೋಡಬೇಕೆಂದು ಹೇಳಿ ಬೊರಿವಾಲಿ ಈಸ್ಟ್ ನಲ್ಲಿರುವ ಪತಿ ಮನೆಯಿಂದ ಹೊರಬಂದಿದ್ದಾಳೆ. ಈ ಮೂಲಕ 26 ವರ್ಷದಾಕೆ ತನ್ನ ಪತಿಗೆ ಸುಳ್ಳು ಹೇಳಿ ಪ್ರಿಯಕರನ ಮನೆಗೆ ತೆರಳಿದ್ದಾಳೆ.

    ಹೀಗೆ ಮನೆಯಿಂದ ಹೊರ ನಡೆದ ನಂತರ ಆಕೆ ತನ್ನ ಗಂಡನ ಫೋನ್ ಕಾಲ್ ಗಳನ್ನು ರಿಸೀವ್ ಮಾಡುತ್ತಿರಲಿಲ್ಲ. ಇದರಿಂದ ಆತಂಕಗೊಂಡ ಪತಿ ತನ್ನ ಸಂಬಂಧಿಕರಲ್ಲಿ ಪತ್ನಿಯ ಬಗ್ಗೆ ವಿಚಾರಿಸಿದ್ದಾನೆ. ಈ ವೇಳೆ ಅವರು ತಮ್ಮ ಮನೆಗೆ ಬಂದಿಲ್ಲ ಎಂದು ಹೇಳಿದ್ದಾರೆ. ಕೂಡಲೇ ಆತ ಪೊಲೀಸರ ಬಳಿ ತನ್ನ ಪತ್ನಿಯನ್ನು ಹುಡುಕಿಕೊಡುವಂತೆ ಕೇಳಿಕೊಂಡಿದ್ದಾನೆ. ಅಲ್ಲದೆ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ದೂರು ಕೂಡ ದಾಖಲು ಮಾಡುತ್ತಾನೆ.

    ಪತಿ ನೀಡಿದ ದೂರು ಸ್ವೀಕರಿಸಿದ ಪೊಲೀಸರು ಮಹಿಳೆಯ ಹುಡುಕಾಟ ಆರಂಭಿಸಿದ್ದಾರೆ. ಅಲ್ಲದೆ ಆಕೆಯ ಫೋನ್ ಟ್ರ್ಯಾಕ್ ಮಾಡಿದ್ದಾರೆ. ಈ ವೇಳೆ ಮಹಿಳೆ ಥಾಕೂರ್ ಗ್ರಾಮದಲ್ಲಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ತನಿಖೆ ಆರಂಭಿಸಿದಾಗ ಮಹಿಳೆ ಮತ್ತೊಬ್ಬ ವ್ಯಕ್ತಿ ಜೊತೆ ಇರುವುದು ಗೊತ್ತಾಗಿದೆ. ಈ ವಿಚಾರ ತಿಳಿದ ಕೂಡಲೇ ಸಿಟ್ಟಿಗೆದ್ದ ಪತಿರಾಯ, ತನ್ನ ಗೆಳೆಯರಿಗೆ ಕಾಲ್ ಮಾಡಿ ಅವರನ್ನು ಕರೆದುಕೊಂಡು ನೇರವಾಗಿ ಥಾಕೂರ್ ಗ್ರಾಮಕ್ಕೆ ತೆರಳಿದ್ದಾನೆ.

    ಹೀಗೆ ಹೋದವರು ಪತ್ನಿ ಹಾಗೂ ಆಕೆಯ ಲವ್ವರ್ ಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಪರಿಣಾಮ ಮಹಿಳೆಯ ಪ್ರಿಯಕರನ ತಲೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇತ್ತ ಹಲ್ಲೆಗೈದ ಆರೋಪಿ ವಿರುದ್ಧವೂ ಪೊಲೀಸರು ದಾಖಲಿಸಿದ್ದಾರೆ.

    ಮಹಿಳೆಯನ್ನು ತನಿಖೆ ನಡೆಸಿದಾಗ, ನನಗೆ ನನ್ನ ಗಂಡನ ಜೊತೆ ಸಂಸಾರ ಮಾಡಲು ಇಷ್ಟವಿಲ್ಲ. ಬದಲಾಗಿ ತನ್ನ ನನ್ನ ಲವ್ವರ್ ಜೊತೆ ಜೀವನ ನಡೆಸುವ ಇಂಗಿತ ವ್ಯಕ್ತಪಡಿಸಿದ್ದಾಳೆ.

  • ಸ್ನೇಹಿತರಿಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ – ಕುಟುಂಬಸ್ಥರಿಂದ ಕೊಲೆ ಆರೋಪ

    ಸ್ನೇಹಿತರಿಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ – ಕುಟುಂಬಸ್ಥರಿಂದ ಕೊಲೆ ಆರೋಪ

    ಕೋಲಾರ: ಜಿಲ್ಲೆಯಲ್ಲಿ ಅನುಮಾನಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಯುವಕರ ಶವ ಪತ್ತೆಯಾಗಿದೆ.

    ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಅಣ್ಣಹಳ್ಳಿ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ಪ್ರವೀಣ್ (20) ಹಾಗೂ ಶ್ರೀನಾಥ್ (20) ಒಂದೇ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಸ್ನೇಹಿತರು. ಪ್ರವೀಣ್ ಕೆ.ಆರ್ ಪುರಂ ಮಾರ್ಕೆಟ್‍ನಲ್ಲಿ ತನ್ನ ಚಿಕ್ಕಪ್ಪನ ಜೊತೆಗೆ ಕೆಲಸ ಮಾಡುತ್ತಿದ್ದರೆ, ಶ್ರೀನಾಥ್ ಅಣ್ಣಿಹಳ್ಳಿಯಲ್ಲಿ ತನ್ನ ಬಾವನ ಜೊತೆಗೆ ವ್ಯವಸಾಯ ಮಾಡುತ್ತಿದ್ದ.

    ಎರಡೂ ಕುಟುಂಬದವರಿಗೂ ಇವರಿಬ್ಬರ ಸ್ನೇಹದ ಬಗ್ಗೆ ಗೊತ್ತಿತ್ತು. ಮೊನ್ನೆಯಷ್ಟೇ ಕೆಆರ್ ಪುರಂನಿಂದ ಬಂದಿದ್ದ ಪ್ರವೀಣ್, ಶ್ರೀನಾಥ್ ಜೊತೆ ನಿನ್ನೆವರೆಗೂ ಜೊತೆಯಲ್ಲೇ ಇದ್ದ. ಇಬ್ಬರು ಮನೆಗೆ ಹೋಗಿರಲಿಲ್ಲ. ಅವರ ಮನೆಯವರು ಕೂಡಾ ಅವನ ಮನೆಯಲ್ಲಿದ್ದಾರೆಂದು ಇವರು ಇವರ ಮನೆಯಲ್ಲಿದ್ದಾರೆಂದು ಅವರು ಸುಮ್ಮನಿದ್ದರು. ಬುಧವಾರ ಸಂಜೆ ಕೂಡಾ ಫೋನ್ ಮಾಡಿ ಮಾತನಾಡಿಸಿದ್ದಾಗ ಇಬ್ಬರು ಒಟ್ಟಿಗೆ ಇರೋದಾಗಿ ತಿಳಿಸಿದ್ದರು.

    ಆದರೆ ಇಂದು ಬೆಳಗ್ಗೆ 11 ಗಂಟೆಗೆ ಇಬ್ಬರು ಒಂದೇ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಮೃತ ಪ್ರವೀಣ್ ಹಾಗೂ ಶ್ರೀನಾಥ್ ಕುಟುಂಬಸ್ಥರು ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳುವಂತ ಹುಡುಗರಲ್ಲ. ಜೊತೆಗೆ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿ ಏನೂ ಬಂದಿಲ್ಲ. ಇಬ್ಬರನ್ನು ಯಾರೋ ಕೊಲೆ ಮಾಡಿ ನೇಣು ಹಾಕಿದ್ದಾರೆಂದು ಅನುಮಾನ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಎರಡು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿ ಪ್ರಕರಣ ದಾಖಲಿಸಿಕೊಂಡಿರುವ ನಂಗಲಿ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ಮೂವರು ಸ್ನೇಹಿತರಿಂದ್ಲೇ ಪತ್ನಿಯ ರೇಪ್ ಮಾಡಿಸಿ ವಿಡಿಯೋ ಮಾಡಿದ್ದ ಪತಿ ಅರೆಸ್ಟ್

    ಮೂವರು ಸ್ನೇಹಿತರಿಂದ್ಲೇ ಪತ್ನಿಯ ರೇಪ್ ಮಾಡಿಸಿ ವಿಡಿಯೋ ಮಾಡಿದ್ದ ಪತಿ ಅರೆಸ್ಟ್

    – ಪತ್ನಿಯನ್ನು ಸ್ನೇಹಿತನಿಗೆ ಕೊಟ್ಟು ಆತನ ಪತ್ನಿಯ ಜೊತೆ ಲವ್ವಿಡವ್ವಿ
    – ಸ್ನೇಹಿತನ ಕೃತ್ಯದ ಬಗ್ಗೆ ತಿಳಿಸಿದಕ್ಕೆ ಏನೂ ಆಗಲ್ಲ ಎಂದ ಪತಿರಾಯ

    ಮುಂಬೈ: ಸ್ನೇಹಿತರಿಂದಲೇ ಪತ್ನಿಯ ರೇಪ್ ಮಾಡಿಸಿ ವಿಡಿಯೋ ಮಾಡಿದ್ದ ಪತಿಯನ್ನು ಪೊಲೀಸರು ಬಂಧಿಸಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

    ಪತಿಯ ಮೂವರು ಸ್ನೇಹಿತರು ಬೇರೆ ಬೇರೆ ಸಂದರ್ಭಗಳಲ್ಲಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ. 2017ರಿಂದ ನಾನು ಅತ್ಯಾಚಾರಕ್ಕೆ ಒಳಗಾಗಿದ್ದೇನೆ ಎಂದು ಸಂತ್ರಸ್ತ ಮಹಿಳೆ ಪೊಲೀಸರ ಬಳಿ ತಿಳಿಸಿದ್ದಾರೆ. ಆರೋಪಿ ಪತಿಯನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಡಿಸೆಂಬರ್ 23ರವರೆಗೂ ಪೊಲೀಸ್ ಕಸ್ಟಡಿಗೆ ನೀಡಿದೆ.

    2003ರಲ್ಲಿ ನನ್ನ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ನಂತರ ನಾನು ವಿಚ್ಛೇದನ ಅರ್ಜಿ ಸಲ್ಲಿಸಿದ್ದೇನೆ. ಈ ಬಗ್ಗೆ ನಾನು ನನ್ನ ಮಾವನ ಬಳಿ ಹೇಳಿಕೊಂಡಿದ್ದೇನೆ. ಆದರೆ ಅವರು ನನಗೆ ಸಹಾಯ ಮಾಡಲಿಲ್ಲ. ಅಲ್ಲದೆ ನನ್ನ ಪತ್ನಿ ನನಗೆ ಬೆದರಿಕೆ ಹಾಕುತ್ತಿದ್ದನು. 2017, ಜೂನ್ 15ರಂದು ನಾನು ಮೊದಲ ಬಾರಿಗೆ ಅತ್ಯಾಚಾರಕ್ಕೊಳಗಾಗಿದೆ. ಅದಾದ ಬಳಿಕ ಅಗಸ್ಟ್ ತಿಂಗಳಿನಲ್ಲಿ ನಾನು ನನ್ನ ತಾಯಿ ಬೇರೆ ಕಡೆ ಶಿಫ್ಟ್ ಆದೆವು ಎಂದು ಸಂತ್ರಸ್ತೆ ತಿಳಿಸಿದ್ದಾಳೆ.

    2017, ಜೂನ್ 15ರಂದು ನಾವು ಡಿನ್ನರ್ ಗೆ ಹೋಗಿದ್ದಾಗ ನನ್ನ ಪತಿ ಅವರ ಸ್ನೇಹಿತರಿಗೆ ಪರಿಚಯ ಮಾಡಿಸಿದ್ದರು. ಬಳಿಕ ಕಾರಿನಲ್ಲಿ ನನ್ನ ಪತಿ ನನಗೆ ಬಲವಂತ ಮಾಡಿ ಮುಂದಿನ ಸೀಟ್‍ನಲ್ಲಿ ಕೂರಿಸಿದ್ದರು. ಅವರು ತಮ್ಮ ಸ್ನೇಹಿತನ ಪತ್ನಿ ಜೊತೆ ಹಿಂಬದಿಯ ಸೀಟಿನಲ್ಲಿ ಕುಳಿತ್ತಿದ್ದರು. ನಿಮ್ಮ ಸ್ನೇಹಿತ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ನಾನು ನನ್ನ ಪತಿಯ ಬಳಿ ಹೇಳಿದೆ. ಆದರೆ ಅವರು ಏನು ಆಗಲ್ಲ ಎಂದು ಸುಮ್ಮನಾದರು. ಇದೇ ವೇಳೆ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಅವರು ತಮ್ಮ ಸ್ನೇಹಿತನ ಪತ್ನಿಯನ್ನು ಅಶ್ಲೀಲವಾಗಿ ಮುಟ್ಟುತ್ತಿದ್ದರು ಎಂದು ಮಹಿಳೆ ಹೇಳಿದ್ದಾಳೆ.

    ಅಂದು ರಾತ್ರಿ ಸುಮಾರು 11.30ಗೆ ನಾನು, ನನ್ನ ಪತಿ ಹಾಗೂ ಅವರ ಸ್ನೇಹಿತ ಹಾಗೂ ಆತನ ಪತ್ನಿಯ ಫ್ಲ್ಯಾಟ್‍ಗೆ ಹೋದೆವು. ಈ ವೇಳೆ ನನ್ನ ಪತಿಯ ಸ್ನೇಹಿತ ನನ್ನ ಮೇಲೆ ಅತ್ಯಾಚಾರವೆಸಗಿದ್ದನು. ಈ ಸಂದರ್ಭದಲ್ಲಿ ನನ್ನ ಪತಿ ತನ್ನ ಸ್ನೇಹಿತನ ಪತ್ನಿ ಜೊತೆ ಇನ್ನೊಂದು ರೂಮಿನಲ್ಲಿದ್ದನು. ನಾನು ಅತ್ಯಾಚಾರದ ಬಗ್ಗೆ ನನ್ನ ಪತಿ ಬಳಿ ಹೇಳಿದಾಗ ಈ ರೀತಿ ಮತ್ತೆ ಆಗುವುದಿಲ್ಲ ಎಂದು ನನಗೆ ಮಾತು ನೀಡಿದ್ದರು. ಈ ಘಟನೆ ನಡೆದ ನಂತರ ನಮ್ಮಿಬ್ಬರ ನಡುವೆ ಜಗಳ ನಡೆದಿದ್ದು, ಪತಿ ನನ್ನ ಬಳಿ ಕ್ಷಮೆ ಕೇಳಿದ್ದನು ಎಂದು ದೂರಿನಲ್ಲಿ ತಿಳಿಸಿದ್ದಾಳೆ.

    2017, ಅಕ್ಟೋಬರ್ ತಿಂಗಳಿನಲ್ಲಿ ಸ್ನೇಹಿತ ಊಟಕ್ಕೆ ಆಹ್ವಾನಿಸಿದ ಎಂದು ನನ್ನ ಪತಿ ಅವನ ಮನೆಗೆ ಕರೆದುಕೊಂಡು ಹೋಗಿದ್ದನು. ಈ ವೇಳೆ ಪತಿಯ ಮತ್ತೊಬ್ಬ ಸ್ನೇಹಿತ ನನ್ನ ಮೇಲೆ ಅತ್ಯಾಚಾರವೆಸಗಿದ್ದನು. ಈ ವಿಷಯವನ್ನು ಬೇರೆಯವರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ನನ್ನ ಪತಿ ಬೆದರಿಕೆ ಹಾಕಿದ್ದನು. ಈ ಘಟನೆ ನಡೆದ 2 ದಿನಗಳ ನಂತರ ನನ್ನ ಪತಿ ತನ್ನ ಸ್ನೇಹಿತನನ್ನು ಮನೆಗೆ ಕರೆದುಕೊಂಡು ಬಂದಿದ್ದನು. ಆತ ನನ್ನ ಪತಿಯ ಮುಂದೆಯೇ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ. ಈ ವೇಳೆ ನನ್ನ ಪತಿ ಮೊಬೈಲಿನಲ್ಲಿ ವಿಡಿಯೋ ಸೆರೆ ಹಿಡಿಯುತ್ತಿದ್ದನು. ನನ್ನ ಪತಿ ವಿಡಿಯೋ ಮಾಡುತ್ತಿರುವುದನ್ನು ನೋಡಿ ಸ್ನೇಹಿತ ಅದೇ ವಾರದಲ್ಲಿ ಮತ್ತೆ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಉಲ್ಲೇಖಿಸಿದ್ದಾಳೆ.

    ಫೆಬ್ರವರಿವರೆಗೂ ಮಹಿಳೆ ಎರಡು ಬಾರಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ. ಸದ್ಯ ಆರೋಪಿ ವಿರುದ್ಧ ಅತ್ಯಾಚಾರ, ಹಲ್ಲೆ ಪ್ರಕರಣ ದಾಖಲಾಗಿದೆ.

  • ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು

    ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು

    ಚಿಕ್ಕಮಗಳೂರು: ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಮೃತನನ್ನು 22 ವರ್ಷದ ಅವಿನಾಶ್ ಎಂದು ಗುರುತಿಸಲಾಗಿದೆ. ಅವಿನಾಶ್ ಮೂಲತಃ ಮೂಡಿಗೆರೆ ತಾಲೂಕಿನ ಮಾಳಿಗನಾಡು ಗ್ರಾಮದವನಾಗಿದ್ದು, ಬಿ. ಹೊಸಳ್ಳಿ ಕೆರೆಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದಾಗ ಈ ಅವಘಡ ಸಂಭವಿಸಿದೆ.

    ಯುವಕನ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕನ ಮೃತದೇಹಕ್ಕಾಗಿ ಪೊಲೀಸ್ ಹಾಗೂ ಸ್ಥಳಿಯರು ಹುಡುಕಾಟ ನಡೆಸಿದ್ದಾರೆ.

  • ಸ್ನೇಹಿತನ ಸಹೋದರಿಯ ಕಿಡ್ನಿ ಕಸಿ ಚಿಕಿತ್ಸೆಗಾಗಿ ವಿದ್ಯಾರ್ಥಿಗಳಿಂದ ರಸ್ತೆಬದಿಯಲ್ಲಿ ಉಪಹಾರ ಮಾರಾಟ

    ಸ್ನೇಹಿತನ ಸಹೋದರಿಯ ಕಿಡ್ನಿ ಕಸಿ ಚಿಕಿತ್ಸೆಗಾಗಿ ವಿದ್ಯಾರ್ಥಿಗಳಿಂದ ರಸ್ತೆಬದಿಯಲ್ಲಿ ಉಪಹಾರ ಮಾರಾಟ

    ತಿರುವನಂತಪುರಂ: ಸ್ನೇಹಿತನ ಸಹೋದರಿಯ ಕಿಡ್ನಿ ಕಸಿ ಚಿಕಿತ್ಸೆಗಾಗಿ ವಿದ್ಯಾರ್ಥಿಗಳು ರಸ್ತೆಬದಿಯಲ್ಲಿ ಉಪಹಾರವನ್ನು ಮಾರಾಟ ಮಾಡುತ್ತಿರುವ ಅಪರೂಪದ ದೃಶ್ಯ ಕೇರಳದ ತುರಾವೂರ್ ನಲ್ಲಿ ಕಂಡು ಬಂದಿದೆ.

    ತುರಾವೂರ್ ನ ಶ್ರೀ ಗೋಕುಲಂ ಎಸ್‍ಎನ್‍ಜಿಎಂ ಕ್ಯಾಟರಿಂಗ್ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ತಮ್ಮ ಸ್ನೇಹಿತನ ಸಹೋದರಿಯ ಕಿಡ್ನಿ ಕಸಿ ಚಿಕಿತ್ಸೆಗಾಗಿ ರಸ್ತೆಬದಿಯಲ್ಲಿ ಉಪಹಾರ ಮಾರಾಟ ಮಾಡುತ್ತಿದ್ದಾರೆ. ಸಹೋದರಿಯ ಕುಟುಂಬಸ್ಥರ ಬಳಿ ಚಿಕಿತ್ಸೆಗಾಗಿ ಕಡಿಮೆ ಹಣವಿದೆ. ಹಾಗಾಗಿ ವಿದ್ಯಾರ್ಥಿಗಳು ಎಲ್ಲರೂ ರಸ್ತೆಬದಿಯಲ್ಲಿ ಉಪಹಾರ ಮಾರಾಟ ಮಾಡುವ ಮೂಲಕ ಸ್ನೇಹಿತನಿಗೆ ಸಹಾಯ ಮಾಡುತ್ತಿದ್ದಾರೆ.

    ಕೆ.ಎಸ್ ಅರೋಮಲ್ ಅವರ ಸಹೋದರಿ ಐಶ್ವರ್ಯಾ ಕಿಡ್ನಿ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಐಶ್ವರ್ಯಾ ಅವರ ಚಿಕಿತ್ಸೆಗಾಗಿ ಕುಟುಂಬಸ್ಥರು ಜಮೀನು ಮಾರಾಟ ಮಾಡಿದ್ದರು. ವೈದ್ಯರ ಪ್ರಕಾರ, ಐಶ್ವರ್ಯಾಳಿಗೆ ಕಿಡ್ನಿ ಕಸಿ ಮಾಡಬೇಕಾಗುತ್ತದೆ. ಇದರಿಂದ ಅವರ ಪ್ರಾಣ ಉಳಿಯುತ್ತೆ ಎಂದು ಹೇಳಿದ್ದಾರೆ.

    ಐಶ್ವರ್ಯಾಳ ಆರೋಗ್ಯದ ಸ್ಥಿತಿ ಬಗ್ಗೆ ಐದನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ತಿಳಿಯಿತು. ಆಗ ಅವರು ಚಿಕಿತ್ಸೆಗಾಗಿ ಅರೋಮಲ್‍ಗೆ ಸಹಾಯ ಮಾಡಲು ನಿರ್ಧರಿಸಿದ್ದರು. ಈ ಬಗ್ಗೆ ಅಶ್ವಿನ್ ಎಂಬವರು ಮಾತನಾಡಿ, ಸ್ನೇಹಿತರ ಜೊತೆ ಸೇರಿ ರಸ್ತೆಬದಿಯಲ್ಲಿ ಆಹಾರ ಮಾರಾಟ ಮಾಡುತ್ತಿದ್ದೇವೆ. ಇದರಿಂದ ಪ್ರತಿದಿನ 4 ಸಾವಿರದಿಂದ 5 ಸಾವಿರ ರೂ.ವರೆಗೂ ಸಂಪಾದಿಸುತ್ತಿದ್ದೇವೆ. ಗ್ರಾಮದ ಜನರು ಕೂಡ ಸಹಾಯ ಮಾಡಲು ಮುಂದಾಗಿದ್ದಾರೆ ಎಂದರು.

    ಐಶ್ವರ್ಯಾ ತಂದೆ ಕೂಡ ಪ್ರತಿಕ್ರಿಯಿಸಿ, ಚಿಕಿತ್ಸೆಗಾಗಿ 20 ಲಕ್ಷಕ್ಕಿಂತ ಹೆಚ್ಚು ಖರ್ಚು ಆಗಲಿದೆ. ಮೊದಲು ಐಶ್ವರ್ಯಾಳಿಗೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ.

  • ಆತ್ಮಹತ್ಯೆ ಮಾಡಿಕೊಳ್ಳಲು ಬೆಂಗ್ಳೂರಿನಿಂದ ಉಡುಪಿಗೆ ಬಂದ- ಸಂಬಂಧಿಕರ ಬರುವಿಕೆಗೆ ಕಾಯುತ್ತಿದ್ದಾನೆ ಯುವಕ

    ಆತ್ಮಹತ್ಯೆ ಮಾಡಿಕೊಳ್ಳಲು ಬೆಂಗ್ಳೂರಿನಿಂದ ಉಡುಪಿಗೆ ಬಂದ- ಸಂಬಂಧಿಕರ ಬರುವಿಕೆಗೆ ಕಾಯುತ್ತಿದ್ದಾನೆ ಯುವಕ

    ಉಡುಪಿ: ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡು ಓಡಾಡುತ್ತಿದ್ದ, ಅಪರಿಚಿತ ಯುವಕನನ್ನು ಉಡುಪಿಯಲ್ಲಿ ರಕ್ಷಣೆ ಮಾಡಲಾಗಿದೆ. ನಗರದ ಕುಕ್ಕಿಕಟ್ಟೆ ರೈಲ್ವೆ ಸೇತುವೆ ಬಳಿ ಕಾರ್ಯಾಚರಣೆ ನಡೆಸಲಾಗಿದ್ದು, ಸಂಬಂಧಿಕರ ಬರುವಿಕೆಗಾಗಿ ಸಾಮಾಜಿಕ ಕಾರ್ಯಕರ್ತರು ಕಾಯುತ್ತಿದ್ದಾರೆ.

    ಶುಕ್ರವಾರ ಸಂಜೆ ರೈಲು ಸೇತುವೆ ಬಳಿ ಅನುಮಾನಸ್ಪದವಾಗಿ ಸುತ್ತಾಡುತ್ತಿದ್ದ ಯುವಕನನ್ನು ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು ಕರ್ವಾಲು ಅವರು ಗಮನಿಸಿದ್ದಾರೆ. ಯುವಕನನ್ನು ವಿಚಾರಿಸಿದಾಗ, ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಬಂದಿರುವುದಾಗಿ ಹೇಳಿಕೊಂಡಿದ್ದಾನೆ. ತಕ್ಷಣ ರಾಘವೇಂದ್ರ ಪ್ರಭು ಕರ್ವಾಲು ಅವರು ಯುವಕನ ನಡವಳಿಕೆಯಲ್ಲಿ ಅನುಮಾನಪಟ್ಟು, ಉಡುಪಿಯ ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರಿಗೆ ವಿಷಯ ಮುಟ್ಟಿಸಿದ್ದಾರೆ.

    ಫೋನ್ ಕರೆಗೆ ಸ್ಪಂದಿಸಿದ ಸಮಾಜ ಸೇವಕ ಗೆಳೆಯರು ಯುವಕನನ್ನು ಕುಕ್ಕಿಕಟ್ಟೆ ರೈಲ್ವೆ ಸೇತುವೆ ಬಳಿ ರಕ್ಷಿಸಿದ್ದಾರೆ. ಕೆಲವು ದಿನಗಳಿಂದ ಅನ್ನ ಇಲ್ಲದೆ ಹಸಿದಿರುವ ಯುವಕನಿಗೆ ಆಹಾರದ ವ್ಯವಸ್ಥೆಗೊಳಿಸಿದ್ದಾರೆ. ನಂತರ ಕಟಪಾಡಿಯಲ್ಲಿರುವ ಕಾರುಣ್ಯ ಅನಾಥರ ಆಶ್ರಮದಲ್ಲಿ ನೆಲೆ ಕಲ್ಪಿಸಿದ್ದಾರೆ. ಆಶ್ರಮ ಸಂಚಾಲಕ ಕುಮಾರ್ ಅವರು ಮನನೊಂದ ಯುವಕನಿಗೆ ಆಶ್ರಯ ಒದಗಿಸಿ ಮಾನವಿಯತೆ ಮೆರೆದಿದ್ದಾರೆ.

    ಯುವಕ ಮಾನಸಿಕ ಖಿನ್ನತೆಗೆ ಒಳಪಟ್ಟಂತೆ ಕಂಡು ಬಂದಿದ್ದು, ಕೊಂಕಣಿ ಹಾಗೂ ಕನ್ನಡ ಬಾಷೆ ಮಾತನಾಡುತ್ತಾನೆ. ಗೌಡ ಸಾರಸ್ವತ ಸಮಾಜದ ವ್ಯಕ್ತಿ ಎಂದು ಹೇಳಿಕೊಂಡಿದ್ದಾನೆ. ರಾಘವೇಂದ್ರ ಕಾಮತ್ (40) ತಂದೆ ಹನುಮಂತ ಕಾಮತ್, ಪಿ.ಆರ್.ಲೇಔಟ್, ಶೇಷಾದ್ರಿಪುರಂ- ಬೆಂಗಳೂರು ವಿಳಾಸ ಇರುವ ಆಧಾರ್ ಕಾರ್ಡ್ ಯುವಕನಲ್ಲಿ ಇರುವುದು ಕಂಡು ಬಂದಿದೆ.

    ಯುವಕನಿಗೆ ಮಾನಸಿಕ ಚಿಕಿತ್ಸೆ ಒದಗಿಸಬೇಕಾಗಿದ್ದು ಸಮಾಜದ ಸಂಘ-ಸಂಸ್ಥೆಗಳು ನೆರವಿಗೆ ಮುಂದೆ ಬರಬೇಕಾಗಿದೆ. ವಾರಸುದಾರರು ತುರ್ತಾಗಿ ಉಡುಪಿ ಕಟಪಾಡಿಯ ಕಾರುಣ್ಯ ಆಶ್ರಮವನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಸಂಬಂಧಿಕರು ಸಮಾಜಸೇವಕ ನಿತ್ಯಾನಂದ ಒಳಕಾಡು- ತಾರನಾಥ ಮೇಸ್ತರನ್ನು ಸಂಪರ್ಕಿಸಬಹುದು.

  • ಕೆನಡಾದಲ್ಲಿ ಯುವತಿಯನ್ನು ಕೊಲೆ ಮಾಡಿ ಯುವಕ ಆತ್ಮಹತ್ಯೆ

    ಕೆನಡಾದಲ್ಲಿ ಯುವತಿಯನ್ನು ಕೊಲೆ ಮಾಡಿ ಯುವಕ ಆತ್ಮಹತ್ಯೆ

    ಒಟ್ಟಾವಾ: ಯುವಕನೊಬ್ಬ ಯುವತಿಯನ್ನು ಕೊಲೆ ಮಾಡಿದ ನಂತರ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಕೆನಡಾದಲ್ಲಿ ನಡೆದಿದೆ.

    ಶರಣ್‍ಜೀತ್ ಕೌರ್ (27) ಹಾಗೂ ನವ್‍ದೀಪ್ ಸಿಂಗ್(35) ಮೃತದೇಹ ಸೋಮವಾರ ಅಪಾರ್ಟ್‌ಮಂಟ್ ನ ಬೇಸ್‍ಮೆಂಟ್‍ನಲ್ಲಿ ಪತ್ತೆಯಾಗಿದೆ. ಇಬ್ಬರು ಪರಸ್ಪರ ಸ್ನೇಹಿತರಾಗಿದ್ದು, ಯುವಕ ಕೊಲೆ ಮಾಡಿದ್ದು ಏಕೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.

    ಸೋಮವಾರ ಸುಮಾರು 2 ಗಂಟೆಗೆ ಅಪಾರ್ಟ್ ಮೆಂಟ್‍ನ ಬೇಸ್‍ಮೆಂಟ್‍ನಲ್ಲಿ ಶರಣ್‍ಜೀತ್ ಹಾಗೂ ನವ್‍ದೀಪ್ ಶವ ಪೊಲೀಸರಿಗೆ ಸಿಕ್ಕಿತ್ತು. ಇಬ್ಬರ ಪರಿಚಯ ಪಂಜಾಬ್‍ನ ಜಲಂದರ್ ಜಿಲ್ಲೆಯಲ್ಲಿ ಆಗಿತ್ತು. ಕೆನಡಾದಲ್ಲಿ ನವ್‍ದೀಪ್ ವಾಸಿಸುತ್ತಿದ್ದ ಅಪಾರ್ಟ್‍ಮೆಂಟ್‍ನಲ್ಲೇ ಇಬ್ಬರ ಮೃತದೇಹ ಪತ್ತೆಯಾಗಿದೆ.

    ಕೆನಡಾದ ಮಾಧ್ಯಮಗಳ ಪ್ರಕಾರ, ಶರಣ್‍ಜೀತ್ ಹಾಗೂ ನವ್‍ದೀಪ್ ಆತ್ಮೀಯ ಸ್ನೇಹಿತರಾಗಿದ್ದರು. ಆದರೆ ಇಬ್ಬರ ಸಾವಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಈ ಘಟನೆಯ ಕಾರಣ ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಈ ಘಟನೆ ಬಗ್ಗೆ ಶರಣ್‍ಜೀತ್ ತಂದೆ ಪ್ರತಿಕ್ರಿಯಿಸಿ, ಕೆನಡಾ ಪೊಲೀಸರು ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕು ಎಂದು ಹೇಳಿದರು. ಅಲ್ಲದೆ ಅವರು ತಮ್ಮ ಮಗಳ ಅಂತಿಮ ಸಂಸ್ಕಾರವನ್ನು ಗ್ರಾಮದಲ್ಲಿಯೇ ಮಾಡಬೇಕು ಎಂದು ಬಯಸಿದ್ದಾರೆ.

  • ಸಾವಿನಲ್ಲೂ ಒಂದಾದ ಸ್ನೇಹಿತರನ್ನು ಕಂಡು ಕಣ್ಣೀರಿಟ್ಟ ಪೊಲೀಸರು

    ಸಾವಿನಲ್ಲೂ ಒಂದಾದ ಸ್ನೇಹಿತರನ್ನು ಕಂಡು ಕಣ್ಣೀರಿಟ್ಟ ಪೊಲೀಸರು

    ಕೊಪ್ಪಳ: ಶ್ವಾನ ದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶ್ವಾನವೊಂದು ಸಾವನ್ನಪ್ಪಿದ ರಾತ್ರಿಯೇ ಅದರ ಸ್ನೇಹಿತನಾಗಿದ್ದ ಇನ್ನೊಂದು ಶ್ವಾನ ಕೂಡ ಕೊನೆಯುಸಿರೆಳೆದಿದ್ದು, ಈ ಮೂಲಕ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಹೌದು. ಕೊಪ್ಪಳ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚೇತಕ್ ಹಾಗೂ ಟೆರರ್ ಹೆಸರಿನ ಎರಡು ಶ್ವಾನಗಳು ಶನಿವಾರ ಅಸುನೀಗಿವೆ. ಈ ಎರಡು ಶ್ವಾನಗಳು ಹಲವು ಅಪರಾಧ ಪ್ರಕರಣಗಳನ್ನು ಬೇಧಿಸುವಲ್ಲಿ ಪೊಲೀಸರಿಗೆ ಸಹಾಯ ಮಾಡಿದ್ದವು. ಕಳೆದ ಎರಡು ತಿಂಗಳಿಂದ ಚೇತಕ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಶನಿವಾರ ಮಧ್ಯಾಹ್ನ ಸಾವನ್ನಪ್ಪಿತ್ತು. ಈ ವೇಳೆ ಪೊಲೀಸರು ಸರ್ಕಾರಿ ಗೌರವಗಳೊಂದಿಗೆ ಶ್ವಾನದ ಅಂತ್ಯಕ್ರಿಯೆ ಮಾಡಿದ್ದರು.

    ಸ್ನೇಹಿತನನ್ನು ಕಳೆದುಕೊಂಡ ನೋವಿನಲ್ಲಿ ಶನಿವಾರ ರಾತ್ರಿ ಶ್ವಾನ ಟೆರರ್ ಕೂಡ ಸಾವನ್ನಪ್ಪಿದೆ. ಹಲವಾರು ಅಪರಾಧ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಎರಡೂ ಶ್ವಾನಗಳನ್ನ ಕಳೆದುಕೊಂಡ ಕೊಪ್ಪಳ ಪೊಲೀಸ್ ಸಿಬ್ಬಂದಿಯ ಕಣ್ಣಲ್ಲಿ ನೀರು ಜಿನುಗುತ್ತಿತ್ತು. ಒಟ್ಟಿನಲ್ಲಿ ಒಂದೇ ದಿನ ಎರಡೂ ಶ್ವಾನಗಳು ಮೃತಪಟ್ಟು ಸಾವಿನಲ್ಲೂ ಒಂದಾಗಿವೆ.

  • ಅಪಘಾತದಲ್ಲಿ ಮಗನ ಸಾವಿನಿಂದ ಮನನೊಂದು ತಂದೆಯಿಂದ ಯುವಕರಿಗೆ ಹೆಲ್ಮೆಟ್ ವಿತರಣೆ

    ಅಪಘಾತದಲ್ಲಿ ಮಗನ ಸಾವಿನಿಂದ ಮನನೊಂದು ತಂದೆಯಿಂದ ಯುವಕರಿಗೆ ಹೆಲ್ಮೆಟ್ ವಿತರಣೆ

    ಭೋಪಾಲ್: ಅಪಘಾತದಲ್ಲಿ ಮೃತಪಟ್ಟ ಮಗನ ಸಾವಿನಿಂದ ಮನನೊಂದು ತಂದೆಯೊಬ್ಬರು ಮಧ್ಯಪ್ರದೇಶದ ದಾಮೋಹದಲ್ಲಿ ಯುವಕರಿಗೆ ಹೆಲ್ಮೆಟ್ ವಿತರಿಸಿ ರಸ್ತೆ ಜಾಗೃತಿ ಮೂಡಿಸುತ್ತಿದ್ದಾರೆ.

    25 ವರ್ಷದ ಲಕ್ಕಿ ದೀಕ್ಷಿತ್ ನವೆಂಬರ್ 20ರಂದು ಅಪಘಾತಕ್ಕೊಳಗಾಗಿದ್ದರು. ಲಕ್ಕಿ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ್ದಾರೆ. ಪರಿಣಾಮ ಅಪಘಾತದಿಂದ ಲಕ್ಕಿ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಲಕ್ಕಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ಈ ಬಗ್ಗೆ ಲಕ್ಕಿ ಅವರ ತಂದೆ ಮಹೇಂದ್ರ ದೀಕ್ಷಿತ್ ಮಾತನಾಡಿ, ನನ್ನ ರೀತಿ ಬೇರೆ ತಂದೆ-ತಾಯಿಯಂದಿರು ತನ್ನ ಮಕ್ಕಳನ್ನು ಕಳೆದುಕೊಂಡು ದುಃಖ ಅನುಭವಿಸುವುದು ಇಷ್ಟವಿಲ್ಲ. ನನ್ನ ಮಗ ಹೆಲ್ಮೆಟ್ ಧರಿಸದ ಕಾರಣ ಅಪಘಾತದಲ್ಲಿ ಮೃತಪಟ್ಟಿದ್ದನು. ಅಪಘಾತದಲ್ಲಿ ಆತನಿಗೆ ಗಂಭೀರ ಗಾಯಗಳಾಗಿತ್ತು. ಹಾಗಾಗಿ ನಾನು 18 ವರ್ಷ ಮೇಲ್ಪಟ್ಟ ಯುವಕರಿಗೆ ಹೆಲ್ಮೆಟ್ ನೀಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದೇನೆ ಎಂದಿದ್ದಾರೆ.

    ಇದೇ ವೇಳೆ ರಸ್ತೆ ಸುರಕ್ಷತೆ ಬಗ್ಗೆ ಮಾತನಾಡಿದ ಮಹೇಂದ್ರ ಅವರು, ನಮ್ಮ ರಕ್ಷಣೆಗಾಗಿ ನಾವು ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕು ಎಂದು ಎಲ್ಲರಿಗೂ ಸಲಹೆ ನೀಡಿದ್ದಾರೆ. ಜೊತೆಗೆ ಹೆಲ್ಮೆಟ್ ಇಲ್ಲದೆ ನಿಮ್ಮ ಮಕ್ಕಳನ್ನು ಹೊರಗೆ ಕಳುಹಿಸಬೇಡಿ ಎಂದು ನಾನು ಎಲ್ಲಾ ತಂದೆ-ತಾಯಿಗಳಿಗೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

    ಮಹೇಂದ್ರ ಅವರ ಈ ನಿರ್ಧಾರಕ್ಕೆ ಅವರ ಸಂಬಂಧಿಕರೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ ಕುಟುಂಬಸ್ಥರು ತಾವು ಅನುಭವಿಸುತ್ತಿರುವ ನೋವಿನಿಂದ ಹೊರಬರಲು ಸಾಧ್ಯವಾಗದಿರುವ ಸಮಯದಲ್ಲಿ ಟ್ರಾಫಿಕ್ ನಿಯಮ ಹಾಗೂ ರಸ್ತೆ ಸುರಕ್ಷಿತೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ನಿರ್ಧರಿಸಿದ್ದಾರೆ. ಬೇರೆ ಮಕ್ಕಳು ಕೂಡ ಇಂತಹ ಸ್ಥಿತಿ ಎದುರಿಸಬಾರದು ಎಂದು ಈ ರೀತಿ ಮಾಡುತ್ತಿದ್ದಾರೆ. ಈ ಘಟನೆಯಿಂದ ಲಕ್ಕಿ ಸ್ನೇಹಿತರು ಟ್ರಾಫಿಕ್ ನಿಯಮಗಳನ್ನು ಪಾಲಿಸುವುದಾಗಿ ಹೇಳಿದ್ದಾರೆ. ಅಲ್ಲದೆ ಬೈಕಿನಲ್ಲಿ ಹೆಲ್ಮೆಟ್ ಇಲ್ಲದೆ ಸಂಚರಿಸುವುದಿಲ್ಲ ಎಂದು ಮಾತು ನೀಡಿದ್ದಾರೆ ಎಂದು ಮಹೇಂದ್ರ ಸಂಬಂಧಿಯೊಬ್ಬರು ತಿಳಿಸಿದ್ದಾರೆ.