Tag: friends

  • ಒಂದೇ ಹುಡ್ಗಿಯನ್ನ ಪ್ರೀತಿಸಿದ ಇಬ್ಬರು ಶಿಕ್ಷಕರು – ಇಬ್ಬರ ಸಾವಿನಲ್ಲಿ ತ್ರಿಕೋನ ಪ್ರೇಮ ಕಥೆ ಅಂತ್ಯ

    ಒಂದೇ ಹುಡ್ಗಿಯನ್ನ ಪ್ರೀತಿಸಿದ ಇಬ್ಬರು ಶಿಕ್ಷಕರು – ಇಬ್ಬರ ಸಾವಿನಲ್ಲಿ ತ್ರಿಕೋನ ಪ್ರೇಮ ಕಥೆ ಅಂತ್ಯ

    – 3 ವರ್ಷದಿಂದ ಒಬ್ಬ, 2 ತಿಂಗಳಿಂದ ಇನ್ನೊಬ್ಬ
    – ಶಿಕ್ಷಕನನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡ್ಕೊಂಡ

    ಲಕ್ನೋ: ಒಂದೇ ಹುಡುಗಿಯ ಹಿಂದೆ ಇಬ್ಬರು ಶಿಕ್ಷಕರು ಬಿದ್ದು, ಇಬ್ಬರೂ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ.

    ಸೂರಜ್ ಪಾಂಡೆ ಮತ್ತು ಅನೂಜ್ ಮೃತ ಶಿಕ್ಷಕರು. ಒಂದೇ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಈ ವಿಚಾರದಲ್ಲಿ ಇಬ್ಬರ ಮಧ್ಯೆ ಗಲಾಟೆಯಾಗಿ ಅನೂಜ್, ಪಾಂಡೆಯನ್ನು ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಏನಿದು ಪ್ರಕರಣ?
    ಮಿರ್ಜಾಪುರದ ವಿಂಧ್ಯಾಚಲ್ ಪೊಲೀಸ್ ಠಾಣೆ ಪ್ರದೇಶದ ರಾಪುರಿ ಗ್ರಾಮದ ಬಾವಿಯೊಂದರಲ್ಲಿ ಶಿಕ್ಷಕ ಸೂರಜ್ ಪಾಂಡೆ ಮೃತದೇಹ ಪೊಲೀಸರಿಗೆ ಸಿಕ್ಕಿತ್ತು. ಪೊಲೀಸರು ತನಿಖೆ ಕೈಗೊಂಡಿದ್ದು, ಕೊಲೆಯ ರಹಸ್ಯವನ್ನು ಭೇದಿಸಿದ್ದಾರೆ. ಪಾಂಡೆ ಜೊತೆ ಶಾಲೆಯಲ್ಲಿ ಶಿಕ್ಷಕರಾಗಿದ್ದ ಇಬ್ಬರು ಸಹ ಶಿಕ್ಷಕರು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ಸೂರಜ್ ಪಾಂಡೆ, ಅನೂಜ್ ಮತ್ತು ರತ್ನೇಶ್ ಮೂವರು ಖುರೈತಿ ಎಂಬ ಸಾರ್ವಜನಿಕ ಶಾಲೆಯಲ್ಲಿ ಖಾಸಗಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಪಾಂಡೆ ಮತ್ತು ಅನೂಜ್ ಒಳ್ಳೆಯ ಸ್ನೇಹಿತರಾಗಿದ್ದರು. ಅನೂಜ್ ಮೂರು ವರ್ಷಗಳಿಂದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಕಳೆದ ಎರಡು ತಿಂಗಳಿನಿಂದ ಅದೇ ಹುಡುಗಿ ಮೃತ ಪಾಂಡೆ ಜೊತೆ ಫೋನ್‍ನಲ್ಲಿ ಮಾತನಾಡಲು ಪ್ರಾರಂಭಿಸಿದ್ದಳು. ಈ ವಿಚಾರ ಅನೂಜ್‍ಗೆ ಗೊತ್ತಾಗಿ ಆಕೆಯ ಜೊತೆ ಫೋನಿನಲ್ಲಿ ಮಾತಾಡಬೇಡ ಎಂದು ಪಾಂಡೆಗೆ ಬುದ್ಧಿವಾದ ಹೇಳಿದ್ದಾನೆ. ಆದರೆ ಸೂರಜ್ ಪಾಂಡೆ ಆತನ ಮಾತನ್ನು ಕಡೆಗಣಿಸಿದ್ದಾನೆ.

    ಕೊನೆಗೆ ಅನೂಜ್ ತನ್ನ ಗೆಳೆಯ ರತ್ನೇಶ್ ಜೊತೆ ಸೇರಿ ಫೆ. 11ರಂದು ಮಫ್ಲರ್ ನಿಂದ ಪಾಂಡೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅಲ್ಲದೇ ಪಾಂಡೆಯ ಬೈಕನ್ನು ಸುಮಾರು 2 ಕಿ.ಮೀ ದೂರಕ್ಕೆ ಎಸೆದಿದ್ದಾನೆ. ಇತ್ತ ಕೊಲೆ ಮಾಡಿದ ಮರುದಿನ ಅನೂಜ್ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಘಟನೆಯನ್ನು ವಿವರಿಸಿದ್ದಾರೆ.

    ಸೂರಜ್ ಪಾಂಡೆ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದೆವು. ಸೂರಜ್ ಪಾಂಡೆ ಕುಟುಂಬದವರು ಮತ್ತು ಸ್ಥಳೀಯರು ಅನೂಜ್ ಮತ್ತು ಸೂರಜ್ ಬೈಕಿನಲ್ಲಿ ಹೋಗಿದ್ದನ್ನು ನೋಡಿದ್ದರು. ಹೀಗಾಗಿ ಪೊಲೀಸರು ಕೂಡ ಆರೋಪಿ ಅನೂಜ್‍ನನ್ನು ಹುಡುಕುತ್ತಿದ್ದರು. ಆದರೆ ಅನೂಜ್ ತಾನೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸದ್ಯಕ್ಕೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸ್ನೇಹಿತ ರತ್ನೇಶ್‍ನನ್ನು ಬಂಧಿಸಿದ್ದು, ತಪ್ಪನ್ನು ಒಪ್ಪಿಕೊಂಡಿದ್ದಾನೆ. ಮೃತ ಸೂರಜ್ ಪಾಂಡೆಯ ಬೈಕನ್ನು ಸಹ ವಶಪಡಿಸಿಕೊಂಡಿದ್ದೇವೆ. ಒಂದೇ ಹುಡುಗಿಯನ್ನು ಇಬ್ಬರು ಪ್ರೀತಿ ಮಾಡಿದ್ದಕ್ಕೆ ಈ ಕೃತ್ಯ ನಡೆದಿದೆ ಎಂದು ಎಸ್‍ಪಿ ಧರ್ಮವೀರ್ ಸಿಂಗ್ ತಿಳಿಸಿದ್ದಾರೆ.

  • ಲಿಫ್ಟ್ ಕೊಡುವ ನೆಪದಲ್ಲಿ ಸ್ನೇಹಿತೆಯನ್ನ ಅಪಹರಿಸಿ ಗ್ಯಾಂಗ್‍ರೇಪ್

    ಲಿಫ್ಟ್ ಕೊಡುವ ನೆಪದಲ್ಲಿ ಸ್ನೇಹಿತೆಯನ್ನ ಅಪಹರಿಸಿ ಗ್ಯಾಂಗ್‍ರೇಪ್

    – ಅತ್ಯಾಚಾರ ಎಸಗಿ, ತಲೆಗೆ ರಾಡ್‍ನಿಂದ ಹೊಡೆದ ಪಾಪಿಗಳು
    – ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಂತ್ರಸ್ತೆಯನ್ನ ಎಸೆದು ಹೋದ್ರು

    ಲಕ್ನೋ: ಎಂಬಿಎ ವಿದ್ಯಾರ್ಥಿನಿಯನ್ನು ಸ್ನೇಹಿತರೇ ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿ, ಮಾರಣಾಂತಿಕ ಹಲ್ಲೆ ಮಾಡಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಮೀರತ್‍ನಲ್ಲಿ ನಡೆದಿದೆ.

    ಮೀರತ್‍ನ ಚೌಧರಿ ಚರಣ್‍ಸಿಂಗ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಅತ್ಯಾಚಾರಕ್ಕೆ ಒಳಗಾದ ಯುವತಿ. ಆರೋಪಿಗಳು ಲಿಫ್ಟ್ ನೀಡುವ ನೆಪದಲ್ಲಿ ಅಪಹರಿಸಿ, ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಕ್ರೂರಿಗಳು ವಿದ್ಯಾರ್ಥಿನಿಯ ಮೇಲೆ ಹಲ್ಲೆಗೈದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಂತ್ರಸ್ತೆಯನ್ನು ಗ್ರಾಮವೊಂದರ ಬಳಿ ಎಸೆದು ಹೋಗಿದ್ದರು. ವಿದ್ಯಾರ್ಥಿನಿ ಈಗ ಗಂಭೀರ ಸ್ಥಿತಿಯಲ್ಲಿದ್ದು, ಆಕೆಯನ್ನು ಮೀರತ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ವಿದ್ಯಾರ್ಥಿನಿ ಫೆಬ್ರವರಿ 13ರಂದು ಮೀರತ್‍ನಿಂದ ಮನೆಗೆ ಹೋಗುತ್ತಿದ್ದಳು. ಈ ವೇಳೆ ವಿದ್ಯಾರ್ಥಿನಿಗೆ ಬಸ್ ಮಿಸ್ ಆಗಿತ್ತು. ಆಗ ಕೆಲ ಪರಿಚಿತ ವಿದ್ಯಾರ್ಥಿಗಳು ಲಿಫ್ಟ್ ಕೊಡುವುದಾಗಿ ಹೇಳಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ನಂತರ ಆಕೆಯನ್ನು ಅಪಹರಿಸಿ ಬುಲಂದ್‍ಶಹರ್ ನ ಸೈನಾ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಳಿಕ ರಾಡ್‍ನಿಂದ ವಿದ್ಯಾರ್ಥಿನಿಯ ಮೇಲೆ ಹಲ್ಲೆ ಮಾಡಿದ್ದಾರೆ.

    ಇತ್ತ ಕತ್ತಲಾದರೂ ಮನೆಗೆ ಬರಲಿಲ್ಲ ಎಂದು ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ ಬಸ್ ನಿಲ್ದಾಣದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ವಿದ್ಯಾರ್ಥಿನಿ ಕಾರಿನಲ್ಲಿ ಹೋಗಿರುವುದು ಖಚಿತವಾಗಿತ್ತು. ಬಳಿಕ ಕಾರು ಹೋದ ಮಾರ್ಗದಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದರು. ಈ ವೇಳೆ ಸೈನಾ ಪೊಲೀಸ್ ಠಾಣೆ ಪ್ರದೇಶದ ಹಳ್ಳಿಯೊಂದರ ಬಳಿ ವಿದ್ಯಾರ್ಥಿನಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣ ಆಕೆಯನ್ನು ಮೀರತ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.

    ಚಿಕಿತ್ಸೆ ಬಳಿಕ ಸ್ವಲ್ಪ ಚೇತರಿಸಿಕೊಂಡಿರುವ ಸಂತ್ರಸ್ತೆ, ನಾಲ್ವರು ಆರೋಪಿಗಳು ನನಗೆ ಪರಿಚಯವಿದ್ದರು. ಆದ್ದರಿಂದ ವಿದ್ಯಾರ್ಥಿಗಳು ಲಿಫ್ಟ್ ಕೊಡುವುದಾಗಿ ಕೇಳಿದಾಗ, ನಾನು ಒಪ್ಪಿ ಅವರೊಂದಿಗೆ ಹೋದೆ. ಆದರೆ ಅವರು ನನ್ನ ಮುಖಕ್ಕೆ ರಾಡ್‍ನಿಂದ ಹಲ್ಲೆ ಮಾಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

    ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು. ಸಂತ್ರಸ್ತೆ ಪರಿಯಚವಿದ್ದ ಕಾರಣಕ್ಕೆ ಆರೋಪಿಗಳ ಜೊತೆ ಹೋಗಿದ್ದಾಳೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ವಿದ್ಯಾರ್ಥಿನಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ಪ್ರವೀಣ್ ಕುಮಾರ್ ಹೇಳಿದ್ದಾರೆ.

  • ಹಣಕ್ಕಾಗಿ ಸ್ನೇಹಿತನನ್ನೇ ಮಚ್ಚಿನಿಂದ ಕೊಚ್ಚಿ ಕೊಂದ ಕಿರಾತಕ

    ಹಣಕ್ಕಾಗಿ ಸ್ನೇಹಿತನನ್ನೇ ಮಚ್ಚಿನಿಂದ ಕೊಚ್ಚಿ ಕೊಂದ ಕಿರಾತಕ

    ತುಮಕೂರು: ನಗರದ ಹೊರವಲಯ ಮಾರನಾಯಕನಹಳ್ಳಿಯಲ್ಲಿ ವ್ಯಕ್ತಿಯೋರ್ವನನ್ನು ಸ್ನೇಹಿತನೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಹಣಕಾಸಿನ ವಿಚಾರಕ್ಕೆ ಪ್ರಾರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

    ಸಿದ್ಧಗಂಗಾ ಮಠದಲ್ಲಿ ಕ್ಲರ್ಕ್ ಕೆಲಸ ಮಾಡುತ್ತಾ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದ ಪಾಲನೇತ್ರಯ್ಯ(32) ಕೊಲೆಯಾದ ವ್ಯಕ್ತಿ. ಪಾಲನೇತ್ರಯ್ಯ ಬುಧವಾರ ರಾತ್ರಿ ಊರಿನ ಮುಂಭಾಗದಲ್ಲಿ ಸ್ನೇಹಿತರೊಂದಿಗೆ ಕುಳಿತು ಮಾತನಾಡುವ ವೇಳೆ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿದೆ. ಆಟೋದಲ್ಲಿ ಬಂದ ಮೂವರು, ಮಚ್ಚು ಲಾಂಗುಗಳಿಂದ ಪಾಲನೇತ್ರಯ್ಯ ತಲೆಗೆ ಬಲವಾಗಿ ಹೊಡೆದು, ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಇತ್ತ ಪಾಲನೇತ್ರಯ್ಯನ ಹಣ ಕಾಸಿನ ವ್ಯವಹಾರ ಸೇರಿದ್ದಂತೆ ಸಂಬಂಧಿಕರ ನಡುವೆ ಇದ್ದ ಹಳೇ ದ್ವೇಷವೇ ಕೊಲೆಗೆ ಕಾರಣ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

    ಮಾರನಾಯಕನಹಳ್ಳಿ ಪಾಳ್ಯದ ನಿವಾಸಿ ಭರತ ಕೊಲೆ ಮಾಡಿದ ಆರೋಪಿಯಾಗಿದ್ದು, ನಾನೇ ಕೊಲೆ ಮಾಡಿದ್ದೇನೆ ಎಂದು ಭರತ್ ಘಟನೆ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಈತನಿಂದ ಪಾಲನೇತ್ರಯ್ಯ 6 ತಿಂಗಳ ಹಿಂದೆ 5 ಸಾವಿರ ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಂಡಿದ್ದನು. ಕೊಟ್ಟ ಸಾಲದ ಹಣವನ್ನು ವಾಪಸ್ ಕೊಡುವಂತೆ ಭರತ ಪಾಲನೇತ್ರಯ್ಯನ ಬಳಿ ಕೇಳಿದಾಗ, ನಿನಗೆ ಸಾಲ ವಾಪಸ್ ಕೊಡುವುದಿಲ್ಲ ಎಂದು ಹೇಳಿದ್ದನು. ಇದರಿಂದ ಕಂಗಲಾದ ಭರತ ಪಾಲನೇತ್ರಯ್ಯನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಭರತ ನೇರವಾಗಿ ಕ್ಯಾತಸಂದ್ರ ಪೊಲೀಸ್ ಠಾಣೆಗೆ ಹೋಗಿ ನಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

    ಮಾರನಾಯಕನಹಳ್ಳಿ ಗ್ರಾಮದ ನಿವಾಸಿಗಳು ಹಾಗೂ ಸಂಬಂಧಿಕಾರಾದ ರುದ್ರೇಶ್, ಜಗದೀಶ್, ಎಂ.ಎಸ್ ಕುಮಾರ್, ಮಂಗಳಮ್ಮ, ಜಯಲಕ್ಷ್ಮಿ ಅವರೊಂದಿಗೂ ಪಾಲನೇತ್ರಯ್ಯ ಈ ಹಿಂದೆ ಜಗಳವಾಡಿಕೊಂಡಿದ್ದನು. ಇದೇ ದ್ವೇಷಕ್ಕೆ ಭರತನ ಸಹಾಯ ಪಡೆದ ಸಂಬಂಧಿಕರು ಪಾಲನೇತ್ರಯ್ಯನ ಕೊಲೆಗೆ ಸಂಚು ರೂಪಿಸಿ, ಬುಧವಾರ ರಾತ್ರಿ ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಆದರೆ ಭರತ ಇದೀಗ ಪೊಲೀಸರ ವಶದಲ್ಲಿದ್ದು, ಕ್ಯಾತಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಭರತನೊಬ್ಬನೆ ಕೊಲೆ ಮಾಡಿದ್ದಾನಾ ಅಥವಾ ಭರತನಿಗೆ ಪಾಲನೇತ್ರಯ್ಯನ ಸಂಬಂಧಿಕರು ಸಹಕಾರ ನೀಡಿದ್ದಾರಾ ಎನ್ನುವುದು ತನಿಖೆ ಬಳಿಕ ಬಯಲಾಗಲಿದೆ.

    ಇತ್ತ ರಾತ್ರಿ ಕೊಲೆ ವಿಚಾರ ತಿಳಿದ ತಕ್ಷಣ ಪಾಲನೇತ್ರಯ್ಯನ ಸಂಬಂಧಿಕರಾದ ರುದ್ರೇಶ, ಜಗದೀಶ, ಗಂಗಣ್ಣ, ಮಂಗಳಮ್ಮ, ಜಯಲಕ್ಷ್ಮಿ ಮನೆ ಖಾಲಿ ಮಾಡಿ ಊರಿನಿಂದ ಕಾಲ್ಕಿತ್ತಿದ್ದಾರೆ. ಸಂಬಂಧಿಕರು ನಾಪತ್ತೆಯಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು, ಕ್ಯಾತಸಂದ್ರ ಪೊಲೀಸರು ಭರತನನ್ನು ಇಟ್ಟುಕೊಂಡು ನಾಪತ್ತೆಯಾಗಿರುವ ಸಂಬಂಧಿಕರನ್ನು ಪತ್ತೆ ಹಚ್ಚಲು ಹುಡುಕಾಟ ಪ್ರಾರಂಭಿಸಿದ್ದಾರೆ.

  • ಸ್ನೇಹಿತರಿಗೆ ಕರೆ ಮಾಡಿ ಹೊಂಡಕ್ಕೆ ಧುಮುಕಿ ಯುವಕ ಆತ್ಮಹತ್ಯೆ

    ಸ್ನೇಹಿತರಿಗೆ ಕರೆ ಮಾಡಿ ಹೊಂಡಕ್ಕೆ ಧುಮುಕಿ ಯುವಕ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಕಲ್ಲಂತರಾಯನಗುಟ್ಟದ ಹೊಂಡಕ್ಕೆ ಧುಮುಕಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಲ್ಲಂತರಾಯನಗುಟ್ಟದಲ್ಲಿ ನಡೆದಿದೆ.

    ಗಂಗರಾಜು(21) ಆತ್ಮಹತ್ಯೆ ಮಾಡಿಕೊಂಡ ಯುವಕ. ಚನ್ನಭೈರೇನಹಳ್ಳಿ ಗ್ರಾಮದವನಾಗಿರುವ ಗಂಗರಾಜು ಅನಾರೋಗ್ಯದಿಂದ ಬಳಲುತ್ತಿದ್ದು, ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಓಳಗಾಗಿದ್ದನು ಎನ್ನಲಾಗಿದೆ. ಕಳೆದ ರಾತ್ರಿ ತನ್ನ ಸ್ನೇಹಿತರಿಗೆ ಕರೆ ಮಾಡಿದ ಗಂಗರಾಜು ತಾನು ಕಲ್ಲಂತರಾಯನಗುಟ್ಟದಲ್ಲಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ ಎಂದು ಹೇಳಲಾಗುತ್ತಿದೆ.

    ಸ್ನೇಹಿತರು ಕಲ್ಲಂತರಾಯನಗುಟ್ಟದ ಬಳಿ ಹೋಗಿ ನೋಡಿದಾಗ ಗಂಗರಾಜುವಿನ ಮೊಬೈಲ್ ಹಾಗೂ ಚಪ್ಪಲಿ ಪತ್ತೆಯಾಗಿದೆ. ಗೌರಿಬಿದನೂರು ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ತೆಪ್ಪಗಳ ಮೂಲಕ ತೀವ್ರ ಹುಡುಕಾಟ ನಡೆಸಿ ಗಂಗರಾಜು ಮೃತದೇಹ ಹೊರತೆಗೆದಿದ್ದಾರೆ.

    ಈ ಬಗ್ಗೆ ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಭಿಮಾನಿಗಳಿಗೆ ಬಿಗ್ ಮನೆಯಿಂದ್ಲೇ ಶೈನ್ ಶೆಟ್ಟಿ ಪತ್ರ

    ಅಭಿಮಾನಿಗಳಿಗೆ ಬಿಗ್ ಮನೆಯಿಂದ್ಲೇ ಶೈನ್ ಶೆಟ್ಟಿ ಪತ್ರ

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಕೊನೆಯ ಹಂತ ತಲುಪಿದ್ದು, ಇನ್ನೂ ಒಂದು ವಾರದಲ್ಲಿ ಫಿನಾಲೆ ತಲುಪಲಿದೆ. ಇದೀಗ ಬಿಗ್‍ಮನೆಯಿಂದಲೇ ಶೈನ್ ಶೆಟ್ಟಿ ತಮ್ಮ ಅಭಿಮಾನಿಗಳಿಗೆ ಪತ್ರವನ್ನು ಬರೆದಿದ್ದಾರೆ.

    ಶುಕ್ರವಾರ ಬಿಗ್ ಮನೆಗೆ ಅತಿಥಿಯಾಗಿ ‘ಪುಟ್ಟಗೌರಿ ಮದುವೆ’ ಸೀರಿಯಲ್ ಖ್ಯಾತಿಯ ನಟಿ ರಂಜನಿ ಹೋಗಿದ್ದರು. ಅವರು ಬರುವ ಮುನ್ನ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳಿಗೆ ಒಂದು ಪತ್ರ ಬರೆಯುವಂತೆ ಹೇಳಿದ್ದರು. ಅಂದರೆ 100 ದಿನಗಳನ್ನು ಮುಗಿಸಿದ್ದೀರಿ. ಅಲ್ಲದೇ ಈ ಬಿಗ್‍ಬಾಸ್ ಮನೆಯಲ್ಲಿ ನಿಮ್ಮ ಪಯಣದ ಬಗ್ಗೆ ತಮ್ಮ ಅಭಿಮಾನಿಗಳಿಗೆ ಏನಾದರೂ ಹೇಳಲು ಇಚ್ಛಿಸುವವರು ಈ ಪತ್ರದಲ್ಲಿ ನಿಮ್ಮ ಅನಿಸಿಕೆಯನ್ನು ಬರೆದುಕೊಡಿ. ಅದನ್ನು ನಿಮ್ಮ ಫೇಸ್‍ಬುಕ್, ಇನ್‍ಸ್ಟಾಗ್ರಾಂ ಇತ್ಯಾದಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ತಿಳಿಸಿದ್ದರು.

    ಅದರಂತೆಯೇ ಸ್ಪರ್ಧಿಗಳು ತಮಗೆ ಅನಿಸಿಕೆಯನ್ನು ಪತ್ರದ ಮೂಲಕ ಬರೆದು ತಿಳಿಸಿದ್ದಾರೆ.

    ಶೈನ್ ಪತ್ರದಲ್ಲಿ ಏನಿದೆ?
    “103 ದಿನಗಳ ಕಳೆದು, 112 ದಿನದತ್ತ ಸಾಗುತ್ತಿದ್ದೇನೆ. ಜೀವನದಲ್ಲಿ ಕಳೆದುಕೊಂಡಿದ್ದು, ಪಡೆದುಕೊಂಡಿದ್ದು ಎರಡು ಇದೆ. ಆದರೆ ಈ ಹೊಸ ತಿರುವಿನಲ್ಲಿ ನಾನು ಕೇವಲ ಗಳಿಸಿದ್ದೇನೆ. ಸ್ನೇಹಿತರು, ಜೀವದ ಗೆಳೆಯ, ಸುಂದರ ನೆನಪುಗಳನ್ನು ಗಳಿಸಿದ್ದೇನೆ. ಬರೀ ಪಾತ್ರವಾಗಿ ಪರಿಚಿತನಾಗಿದ್ದ ನನ್ನನ್ನು ಎಲ್ಲಾ ಕಲಾಭಿಮಾನಿಗಳಿಗೆ ಶೈನ್ ಶೆಟ್ಟಿಯಾಗಿ ಪರಿಚಿತನಾಗಲು ಅವಕಾಶವಾಗಿದ್ದೇ ಈ ‘ಬಿಗ್‍ಬಾಸ್’ ವೇದಿಕೆಯಿಂದ”

    “ಈ ಸುಂದರವಾದ ಅನುಭವವನ್ನು ಅನುಭವಿಸಿ, ನನ್ನ ಪಯಣವನ್ನು ಸಾಧನೆಯತ್ತ ಕೊಂಡ್ಯೊಯಲು ಸಾಧ್ಯವಾಗಿದೆ ಎಂದರೆ ಅದಕ್ಕೆ ಕಾರಣ ನೀವು, ನಿಮ್ಮ ಪ್ರೀತಿ, ನಿಮ್ಮ ಬೆಂಬಲ, ನಿನ್ನ ವೋಟುಗಳು. ಉಸಿರಿರುವವರೆಗೂ ನಿಮ್ಮನ್ನೆಲ್ಲಾ ಕಲಾ ಸೇವೆಯ ಮೂಲಕ ರಂಜಿಸುತ್ತೇನೆ. ನಿಮ್ಮ ಅಗಾಧವಾದ ಪ್ರೀತಿ, ಹಾರೈಕೆ ಹಾಗೂ ಅಭಿಮಾನಕ್ಕೆ ಸದಾ ಚಿರಋಣಿಯಾಗಿರುವ ನಿಮ್ಮ ನಲ್ಮೆಯ ಶೈನ್ ಶೆಟ್ಟಿ” ಎಂದು ಪತ್ರದಲ್ಲಿ ಬರೆದುಕೊಂಡಿದ್ದಾರೆ.

  • ಗೆಳತಿಯನ್ನ ಬೆಡ್ ರೂಮಿನಲ್ಲಿ ಮಲಗಿಸಿದ್ರು-ನಂತ್ರ ಒಬ್ಬೊಬ್ಬರಂತೆ ಮೇಲೆರಗಿದ್ರು

    ಗೆಳತಿಯನ್ನ ಬೆಡ್ ರೂಮಿನಲ್ಲಿ ಮಲಗಿಸಿದ್ರು-ನಂತ್ರ ಒಬ್ಬೊಬ್ಬರಂತೆ ಮೇಲೆರಗಿದ್ರು

    – ಪಕ್ಕದಲ್ಲಿ ಮಲಗಿದ್ದ ಗೆಳೆಯನನ್ನ ನೋಡಿ ಪೊಲೀಸರಿಗೆ ದೂರು

    ಬೆಂಗಳೂರು: ಮದ್ಯದ ಅಮಲಿನಲ್ಲಿ ಮಲಗಿದ್ದ ಯುವತಿಯ ಮೇಲೆ ಗೆಳೆಯರಿಬ್ಬರು ಸರದಿಯಲ್ಲಿ ಅತ್ಯಾಚಾರ ಎಸಗಿರುವ ಘಟನೆ ಲೋಟ್ಟೆಗೊಲ್ಲಹಳ್ಳಿಯಲ್ಲಿ ನಡೆದಿದೆ.

    ನಿಖಿಲ್(19) ಅಭಿನವ್ ಎಂಬ ಇಬ್ಬರು ಗೆಳೆಯರು ಯುವತಿ ಬೆಡ್ ರೂಂನಲ್ಲಿ ಮಲಗಿರುವಾಗ ಅತ್ಯಾಚಾರ ಎಸಗಿದ್ದಾರೆ. ಜನವರಿ 15 ರಂದು ಕೋರಮಂಗಲ ಲೇಔಟ್ ನಲ್ಲಿರುವ ಇಂಡಿಗೋ ಪಬ್ ನಲ್ಲಿ ಪಾರ್ಟಿ ಮಾಡಿದ್ದಾರೆ. ಪಾರ್ಟಿಯಲ್ಲಿ ಕಂಠಪೂರ್ತಿ ಕುಡಿದು ಯುವತಿ ಪಿಜಿಗೆ ಹೋಗುವ ಸ್ಥಿತಿಯಲ್ಲಿ ಇರಲಿಲ್ಲ. ಯುವತಿ ಅಮಲಿನ ಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡ ಗೆಳೆಯ ನಿಖಿಲ್ ಮನೆಗೆ ಕರೆದುಕೊಂಡು ಹೋಗಿ ಬೆಡ್ ರೂಂ ನಲ್ಲಿ ಮಲಗಿಸಿದ್ದಾನೆ.

    ಯುವತಿ ಗಾಢ ನಿದ್ರೆಗೆ ಜಾರಿದಾಗ ನಿಖಿಲ್, ಯುವತಿ ಮೇಲೆ ಎರಗಿದ್ದಾನೆ. ನಂತರ ಗೆಳೆಯ ಅಭಿನವ್ ಹೋಗಿ ಅತ್ಯಾಚಾರ ಎಸಗಿ ಬಂದಿದ್ದಾನೆ. ಯುವತಿ ಬೆಳಗ್ಗೆ ಎದ್ದು ನೋಡಿದಾಗ ಅಭಿನವ್ ಯುವತಿ ಪಕ್ಕದಲ್ಲಿ ಮಲಗಿದ್ದನು. ಇದರಿಂದ ಗಾಬರಿಗೊಂಡ ಯುವತಿ ಕೋಡಿಗೆಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ.

    ನಿಖಿಲ್ ಹಾಗೂ ಅಭಿವನ್ ಎಣ್ಣೆಯಲ್ಲಿ ಮತ್ತು ಬರುವ ಮಾತ್ರೆ ಹಾಕಿ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿದ್ದಾರೆಂದು ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಘಟನೆ ಸಂಬಂಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿ ತನಿಖೆ ಮಾಡುತ್ತಿದ್ದಾರೆ.

  • ಹೆಚ್ಚು ಲೈಕ್ಸಿಗೆ ಹುಚ್ಚು ಸಾಹಸ – ಸ್ನೇಹಿತರೆದುರೇ ಜೀವಬಿಟ್ಟ ಟಿಕ್‍ಟಾಕ್ ಸ್ಟಾರ್

    ಹೆಚ್ಚು ಲೈಕ್ಸಿಗೆ ಹುಚ್ಚು ಸಾಹಸ – ಸ್ನೇಹಿತರೆದುರೇ ಜೀವಬಿಟ್ಟ ಟಿಕ್‍ಟಾಕ್ ಸ್ಟಾರ್

    ಕೋಲ್ಕತ್ತಾ: ಇತ್ತೀಚೆಗೆ ಟಿಕ್‍ಟಾಕ್ ಅನ್ನು ಹೆಚ್ಚಾಗಿ ಎಲ್ಲರೂ ಬಳಸುತ್ತಾರೆ. ಚಿಕ್ಕ ಮಕ್ಕಳಿಂದ ಹಿಡಿದು ಯುವಕ, ಯುವತಿಯರು, ವೃದ್ಧರು ಕೂಡ ಟಿಕ್‍ಟಾಕ್‍ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗೆ ಟಿಕ್‍ಟಾಕ್ ವಿಡಿಯೋ ಮೂಲಕ ಹೆಚ್ಚು ಲೈಕ್ಸ್ ಪಡೆಯಲು ಹುಚ್ಚು ಸಾಹಸ ಮಾಡಲು ಹೋಗಿ ಸ್ನೇಹಿತರೆದುರೇ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.

    ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಪೀಗಂಜ್ ಪ್ರದೇಶದ ಕರೀಮ್ ಶೇಖ್(17) ಮೃತ ಯುವಕ. ಮಂಗಳವಾರ ಈತ ತನ್ನ ಸ್ನೇಹಿರೊಂದಿಗೆ ಸೇರಿ ಟಿಕ್‍ಟಾಕ್ ವಿಡಿಯೋ ಮಾಡುತ್ತಿದ್ದ ವೇಳೆ ಮೃತಪಟ್ಟಿದ್ದಾನೆ. ಟಿಕ್‍ಟಾಕ್‍ನಲ್ಲಿ ಸದಾ ಮುಳುಗಿರುತ್ತಿದ್ದ ಶೇಖ್ ಯಾವಾಗಲೂ ವಿಡಿಯೋ ಮಾಡುವುದರಲ್ಲೇ ಬ್ಯುಸಿಯಾಗಿರುತ್ತಿದ್ದನು. ಎಂದಿನಂತೆ ಮಂಗಳವಾರ ಕೂಡ ಸ್ನೇಹಿತರೊಂದಿಗೆ ಸೇರಿ ವಿಡಿಯೋ ಮಾಡಲು ಮುಂದಾಗಿದ್ದನು. ಆದರೆ ಟಿಕ್‍ಟಾಕ್‍ನಲ್ಲಿ ಹೆಚ್ಚು ಲೈಕ್ಸ್ ಪಡೆಯಲು ಶೇಖ್ ಹುಚ್ಚು ಸಾಹಸಕ್ಕೆ ಕೈಹಾಕಿದನು. ಇದಕ್ಕೆ ಆತನ ಮೂವರು ಅಪ್ರಾಪ್ತ ಸ್ನೇಹಿತರು ಕೂಡ ಸಾಥ್ ಕೊಟ್ಟಿದ್ದರು.

    ಗ್ರಾಮದಲ್ಲಿದ್ದ ಒಂದು ವಿದ್ಯುತ್ ಕಂಬಕ್ಕೆ ನನ್ನನ್ನು ಹಗ್ಗದಿಂದ ಕಟ್ಟಿ ಹಾಕಿ, ಮುಖಕ್ಕೆ ಪ್ಲಾಸ್ಟಿಕ್ ಕವರ್ ಕಟ್ಟಿ. ಅದನ್ನು ನಾನು ಬಿಚ್ಚುತ್ತೇನೆ. ಈ ದೃಶ್ಯವನ್ನು ವಿಡಿಯೋ ಮಾಡಿ ಎಂದು ಶೇಖ್ ಸ್ನೇಹಿತರಿಗೆ ತಿಳಿಸಿದ್ದನು. ಆದ್ದರಿಂದ ಸ್ನೇಹಿತರು ಶೇಖ್ ಹೇಳಿದಂತೆ ಆತನನ್ನು ಕಟ್ಟಿ ಹಾಕಿ ವಿಡಿಯೋ ಮಾಡುತ್ತಿದ್ದರು. ಈ ವೇಳೆ ಮುಖಕ್ಕೆ ಪ್ಲಾಸ್ಟಿಕ್ ಕಟ್ಟಿದ್ದ ಪರಿಣಾಮ ಶೇಖ್‍ಗೆ ಉಸಿರಾಡಲು ಆಗದೆ ನರಳಾಡುತ್ತಿದ್ದನು. ಆದರೆ ಆತನ ಸ್ನೇಹಿತರು ವಿಡಿಯೋ ಚೆನ್ನಾಗಿ ಆಗಲೆಂದು ಶೇಖ್ ನಟನೆ ಮಾಡುತ್ತಿದ್ದಾನೆ ಅಂದುಕೊಂಡರು. ಹೀಗೆ ವಿಡಿಯೋ ಮಾಡುತ್ತಿದ್ದ ವೇಳೆಯೇ ಶೇಖ್ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಎಷ್ಟೇ ಹೊತ್ತು ವಿಡಿಯೋ ಮಾಡಿದರೂ ಶೇಖ್ ಯಾಕೆ ಹಗ್ಗ ಕಟ್ಟಿದ್ದನ್ನ ಬಿಡಿಸಿಕೊಳ್ಳುತ್ತಿಲ್ಲ ಎಂದು ಸ್ನೇಹಿತರು ಹತ್ತಿರ ಹೋಗಿ ನೋಡಿದಾಗ ಆತ ಮೃತಪಟ್ಟಿರುವುದು ತಿಳಿದಿದೆ. ಇದರಿಂದ ಗಾಬರಿಗೊಂಡ ಮೂವರು ಸ್ನೇಹಿತರು ಮೃತದೇಹವನ್ನ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳೀಯರು ಶೇಖ್‍ನನ್ನು ಗಮನಿಸಿ ತಕ್ಷಣ ಆತನನ್ನು ಆಸ್ಪತ್ರೆಗೆ ರವಾನಿಸಿದರು. ಆದರೆ ಶೇಖ್ ಸಾವನ್ನಪ್ಪಿದ್ದಾನೆ ಎಂದು ವೈದರು ತಿಳಿಸಿದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

  • ವೀಕೆಂಡ್ ಟ್ರಿಪ್‍ಗೆ ಬಂದ ಮೂವರಲ್ಲಿ ಸ್ನೇಹಿತನನ್ನ ಒಬ್ಬಂಟಿ ಮಾಡಿ ಹೋದ್ರು

    ವೀಕೆಂಡ್ ಟ್ರಿಪ್‍ಗೆ ಬಂದ ಮೂವರಲ್ಲಿ ಸ್ನೇಹಿತನನ್ನ ಒಬ್ಬಂಟಿ ಮಾಡಿ ಹೋದ್ರು

    – ಜಾಲಿ ರೈಡ್ ಮೂಡ್‍ನಲ್ಲಿದ್ದ ಇಬ್ಬರು ಅಪಘಾತಕ್ಕೆ ಬಲಿ

    ಮಡಿಕೇರಿ: ಕೆಎಸ್ಆರ್‌ಟಿಸಿ ಬಸ್‍ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ವೀಕೆಂಡ್ ಟ್ರಿಪ್‍ಗೆ ಬಂದಿದ್ದ ಮೂವರಲ್ಲಿ ಇಬ್ಬರು ಸ್ನೇಹಿತರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಮಡಿಕೇರಿ ತಾಲೂಕಿನ ಕೊಯಿನಾಡು ಸಮೀಪದ ದೇವರ ಕೊಲ್ಲಿಯಲ್ಲಿ ನಡೆದಿದೆ.

    ರಾಜಸ್ಥಾನ ಮೂಲದ ಹರ್ನಾಬ್ (30) ಹಾಗೂ ಪಶ್ಚಿಮ ಬಂಗಾಳ ಮೂಲದ ನವೀನ್ (29) ಮೃತ ಸ್ನೇಹಿತರು. ಮೂವರು ಸ್ನೇಹಿತರು ವೀಕೆಂಡ್‍ನಲ್ಲಿ ಟ್ರಿಪ್‍ಗೆಂದು ಬಂದಿದ್ದರು. ಶುಕ್ರವಾರ ತುಮಕೂರಿನಿಂದ ಕೂಡಗಿಗೆ ಗೂಗಲ್ ಮ್ಯಾಪ್ ಹಾಕಿಕೊಂಡು ಪ್ರಯಾಣ ಬೆಳೆಸಿದ್ದರು.

    ಪ್ರವಾಸಕ್ಕೆಂದು ಬಂದಿದ್ದ ಮೂವರಲ್ಲಿ ಇಬ್ಬರು ಒಂದು ಬೈಕಿನಲ್ಲಿ ಮತ್ತೊಬ್ಬ ಸ್ನೇಹಿತ ಮತ್ತೊಂದು ಬೈಕಿನಲ್ಲಿ ಅವರನ್ನು ಪಾಲೋ ಮಾಡುತ್ತಿದ್ದನು. ಆದರೆ ಇಬ್ಬರು ಸ್ನೇಹಿತರಿದ್ದ ಬೈಕ್ ಮಡಿಕೇರಿ ಕಡೆಯಿಂದ ಸಿದ್ದಾಪುರ-ಮಂಗಳೂರು ಕಡೆಗೆ ಬರುತ್ತಿದ್ದ ಬಸ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಕೊಯಿನಾಡು ಸಮೀಪದ ದೇವರ ಕೊಲ್ಲಿನಲ್ಲಿ ತಿರುವಿನಲ್ಲಿ ವೇಗವಾಗಿ ಬಂದ ಬಸ್ ರಸ್ತೆ ಪಕ್ಕದಲ್ಲೇ ಬಿದ್ದಿದ್ದ ಮರವನ್ನು ತಪ್ಪಿಸಲು ಬಲಕ್ಕೆ ಬಂದಿದೆ. ಹೀಗಾಗಿ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಅರಣ್ಯ ಮತ್ತು ಲೋಕೋಪಯೋಗಿ ಇಲಾಖೆಗಳ ತನಿಖೆ ನಂತರ ತಪ್ಪು ಯಾರದ್ದು ಎಂದು ಗೊತ್ತಾಗಬೇಕಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಮನೆಗೆ ಕಲ್ಲು ತೂರಿ ಕಾಲ್ಕಿತ್ತ ಸ್ನೇಹಿತರು!

    ಮನೆಗೆ ಕಲ್ಲು ತೂರಿ ಕಾಲ್ಕಿತ್ತ ಸ್ನೇಹಿತರು!

    – ಸಿಸಿಟಿವಿಯಲ್ಲಿ ವಿಡಿಯೋ ಸೆರೆ

    ಮಡಿಕೇರಿ: ಹಳೆ ದ್ವೇಷದ ಹಿನ್ನೆಲೆಯಲ್ಲಿ ರವೀಂದ್ರ ಎಂಬವರ ಮನೆಯ ಕಿಟಕಿ ಗಾಜುಗಳನ್ನು ಪುಡಿ ಮಾಡಿ ದುಷ್ಕರ್ಮಿಗಳು ಕಾಲ್ಕಿತ್ತಿರುವ ಘಟನೆ ಮಡಿಕೇರಿ ನಗರದ ಪುಟಾಣಿ ನಗರದಲ್ಲಿ ರಾತ್ರಿ ನಡೆದಿದೆ.

    ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ರವೀಂದ್ರರ ಮಗ ಕೀರ್ತನ್ ಸ್ನೇಹಿತರಾದ ಯಶವಂತ್ ಎಂಬಾತನನ್ನು ಮಡಿಕೇರಿ ನಗರ ಪೋಲಿಸ್ ಠಾಣೆಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

    ರಾತ್ರಿ ಸುಮಾರು 12 ಗಂಟೆ ಸುಮಾರಿಗೆ ಇಬ್ಬರು ರವೀಂದ್ರ ಅವರ ಮನೆಗೆ ಕಲ್ಲುಗಳನ್ನು ತೂರಿ ಸ್ಥಳದಿಂದ ಓಡಿದ್ದಾರೆ. ರೂಮ್‍ನಲ್ಲಿ ಮಲಗಿದ್ದ ರವೀಂದ್ರರ ಮಗ ಕೀರ್ತನ್ ಮೇಲೆ ಗಾಜುಗಳು ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

    ವ್ಯಾನ್ ಚಾಲಕ ವೃತ್ತಿ ನಿರ್ವಹಿಸುತ್ತಿರುವ ರವೀಂದ್ರ ಅವರ ಮಗ ಕೀರ್ತನ್ ಮೇಲೆ ಸ್ನೇಹಿತರು ಸಾಕಷ್ಟು ಬಾರಿ ಹಲ್ಲೆ ನಡೆಸಿದ್ದರು ಎನ್ನುವ ಆರೋಪಗಳು ಕೇಳಿ ಬಂದಿವೆ.

    ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಾಟ ಮಂತ್ರ ಎಂಬ ಮೌಢ್ಯದ ಅನುಮಾನಕ್ಕೆ ಆಪ್ತ ಸ್ನೇಹಿತನನ್ನೇ ಕೊಂದ

    ಮಾಟ ಮಂತ್ರ ಎಂಬ ಮೌಢ್ಯದ ಅನುಮಾನಕ್ಕೆ ಆಪ್ತ ಸ್ನೇಹಿತನನ್ನೇ ಕೊಂದ

    ಚಿತ್ರದುರ್ಗ: ಮಾಟ ಮಂತ್ರ ಎಂಬ ಮೌಢ್ಯದ ಅನುಮಾನಕ್ಕೆ ವ್ಯಕ್ತಿಯೋರ್ವ ತನ್ನ ಅಪ್ತ ಸ್ನೇಹಿತನನ್ನೇ ಕೊಂದು ಹಾಕಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

    ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹಡವಿಗೊಂಡನಹಳ್ಳಿಯ ಚಂದ್ರಣ್ಣ (55) ಹಾಗೂ ಮಂಜುನಾಥ್ (37) ಇಬ್ಬರು ಅಪ್ತ ಸ್ನೇಹಿತರಾಗಿದ್ದರು. ಅವರಿಬ್ಬರ ವಯಸ್ಸಿನಲ್ಲಿ ವ್ಯತ್ಯಾಸವಿದ್ದರೂ ಸಹ ಸುಮಾರು ವರ್ಷಗಳಿಂದ ಆಪ್ತ ಮಿತ್ರರಾಗಿದ್ದ ಗೆಳೆಯರ ನಡುವೇ ಮಾಟ ಮಂತ್ರ ಎಂಬ ಮೌಢ್ಯದ ಅನುಮಾನ ಮೂಡಿ ಅವರಿಬ್ಬರ ಮಧ್ಯೆ ದ್ವೇಷ ಹುಟ್ಟಿಸಿತ್ತು. ಈಗ ಆ ದ್ವೇಷ ಗೆಳೆಯನ ಜೀವವನ್ನೇ ಬಲಿ ಪಡೆದಿದೆ.

    ಸದಾ ಚಂದ್ರಣ್ಣನ ಎಲ್ಲಾ ಕೆಲಸ ಕಾರ್ಯಗಳಲ್ಲೂ ಹೆಗಲು ಕೊಡುತ್ತಿದ್ದ ಮಂಜುನಾಥ್ ಚಂದ್ರಣ್ಣ ಹಿರಿಯನಾದರೂ ತುಂಬ ಸಲಿಗೆಯಿಂದ ಇರುತ್ತಿದ್ದರು. ಆದರೆ ಅವರಿಬ್ಬರ ಸ್ನೇಹ ಸಹಿಸಲಾಗದ ಯಾರೋ ಮಹಾನುಭಾವರು ಇಬ್ಬರ ನಡುವೇ ಮಾಟ, ಮಂತ್ರ ಎಂಬ ಮೌಢ್ಯದ ಬೀಜವನ್ನು ಬಿತ್ತಿದ್ದರು. ಹೀಗಾಗಿ ಪರಸ್ಪರ ದ್ವೇಷ ಹಾಗೂ ಅಸೂಯೆ ಶುರುವಾಗಿತ್ತು. ದಿನಬೆಳಗಾದರೆ ಹಗೆತನ ಸಾಧಿಸುತ್ತಾ ಊರಲ್ಲಿ ಓಡಾಡುತ್ತಿದ್ದರು.

    ಹೀಗಿರುವಾಗ ಡಿಸೆಂಬರ್ 4 ರಂದು ಕಟ್ಟಿಗೆ ಕಡಿದು ಇದ್ದಲು ಮಾಡುವ ಕಾಯಕಕ್ಕೆ ಚಂದ್ರಣ್ಣ ತೆರಳಿದ್ದು, ರಾತ್ರಿ ವೇಳೆ ಅದೇ ಜಮೀನಿನಲ್ಲಿ ಮಲಗಲು ನಿರ್ಧರಿಸಿದ್ದರು. ಆಗ ಅವರನ್ನು ಹಿಂಬಾಲಿಸಿದ್ದ ಆತನ ಗೆಳೆಯ ಮಂಜುನಾಥ್ ಚಂದ್ರಣ್ಣ ನಿದ್ರೆಗೆ ಜಾರುತ್ತಿದ್ದಂತೆ ದೊಣ್ಣೆಯಿಂದ ತಲೆಗೆ ಹೊಡೆದಿದ್ದಾನೆ. ಬಳಿಕ ಬಲವಾದ ಕೋಲಿನಿಂದ ಕತ್ತಿಗೆ ಇರಿದು ಉಸಿರುಗಟ್ಟಿಸಿದ್ದಾನೆ. ಕೊನೆಗೆ ತಲೆಮೇಲೆ ಕಲ್ಲು ಎತ್ತಿಹಾಕಿ ಚಂದ್ರಣ್ಣನನ್ನು ಹತ್ಯೆ ಮಾಡಿದ್ದಾನೆ.

    ಈ ವಿಷಯ ತಿಳಿದ ಚಂದ್ರಣ್ಣನ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸುಮಾರು ವರ್ಷಗಳಿಂದ ಚಂದ್ರಣ್ಣನಿಗೆ ಆಪ್ತ ಸ್ನೇಹಿತನಂತಿದ್ದ ಮಂಜುನಾಥ್ ಇತ್ತೀಚೆಗೆ ಚಂದ್ರಣ್ಣನು ನಮ್ಮ ಕುಟುಂಬದ ಮೇಲೆ ಮಾಟ ಮಂತ್ರ ಮಾಡಿಸಿ ನಮ್ಮ ಸಂಸಾರ ಹಾಳು ಮಾಡಿದ್ದಾನೆ. ಆತನನ್ನು ಬಿಡುವುದಿಲ್ಲ ಎಂದು ಹೇಳಿಕೊಂಡು ಓಡಾಡುತ್ತಿದ್ದ ಎಂದು ಹೇಳಿದ್ದಾರೆ.

    ಈ ವಿಷಯವನ್ನು ಬೆನ್ನತ್ತಿದ ಪೊಲೀಸರು ಮಂಜುನಾಥ್ ಅನ್ನು ವಿಚಾರಣೆ ನಡೆಸಿದಾಗ, ನಾನು ಕೊಲೆ ಮಾಡಿಲ್ಲ ಎಂದು ಹೇಳಿದ್ದಾನೆ. ಆದರೆ ನಂತರ ಮಾಟ ಮಂತ್ರ ಎಂಬ ಮೌಢ್ಯದ ಅನುಮಾದಿಂದ ನಾನೇ ಕೊಲೆ ಮಾಡಿದ್ದು, ಎಂದು ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.