Tag: Friend Arif

  • ನೀವು ಊರಿಗೆ ಹಿರಿಯರು, ಕೋಳಿ ಅಂಗಡಿ ಉದ್ಘಾಟನೆಗೆ ತಂದೆಯನ್ನು ಆಹ್ವಾನಿಸಿದ್ದರು: ಪ್ರವೀಣ್ ಬಗ್ಗೆ ಆರೀಫ್ ಮಾತು

    ನೀವು ಊರಿಗೆ ಹಿರಿಯರು, ಕೋಳಿ ಅಂಗಡಿ ಉದ್ಘಾಟನೆಗೆ ತಂದೆಯನ್ನು ಆಹ್ವಾನಿಸಿದ್ದರು: ಪ್ರವೀಣ್ ಬಗ್ಗೆ ಆರೀಫ್ ಮಾತು

    ಮಂಗಳೂರು: ಪ್ರವೀಣ್ ಯಾರ ಜೊತೆಯೂ ಜಗಳ ಮಾಡುವ ಸ್ವಭಾವದವರಲ್ಲ. ನೀವು ಊರಿನ ಹಿರಿಯರು ಎಂದು ನನ್ನ ತಂದೆಯನ್ನು ಅವರ ಕೋಳಿ ಅಂಗಡಿ ಉದ್ಘಾಟನೆಗೆ ಆಹ್ವಾನಿಸಿದ್ದರು ಎಂದು ಬಿಜೆಪಿ ಯುವಮುಖಂಡ ಪ್ರವೀಣ್ ಆತ್ಮೀಯ ಸ್ನೇಹಿತ ಆರೀಫ್ ಹೇಳಿದ್ದಾರೆ.

    ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಕುರಿತಂತೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಆರೀಫ್ ಅವರು, ಪ್ರವೀಣ್ ನನ್ನ ಮನೆಯ ಗೃಹ ಪ್ರವೇಶಕ್ಕೆ ಬಂದಿದ್ದರು. ನನ್ನ ಬಹಳ ಆತ್ಮೀಯ ಮಿತ್ರರಾಗಿದ್ದರು. ಮನೆಗೆ ಬಂದಾಗ ಜ್ಯೂಸ್ ಕೊಟ್ಟು ಉಪಚರಿಸಿದ್ದೆವು. ಮನೆ ನೋಡಿ ಪ್ರವೀಣ್ ತುಂಬಾ ಖುಷಿ ಪಟ್ಟಿದ್ದರು. ನನಗೂ ಇದೇ ರೀತಿ ಮನೆ ಕಟ್ಟಬೇಕು ಅಂತಾ ಹೇಳಿದ್ದರು. ಕುಟುಂಬ ಸಮೇತ ಮನೆಗೆ ಊಟಕ್ಕೆ ಬರುವುದಾಗಿ ಪ್ರವೀಣ್ ಹೇಳಿದ್ದರು. ಪ್ರವೀಣ್ ಯಾರ ಜೊತೆಯೂ ಜಗಳ ಮಾಡುವ ಸ್ವಭಾವದವರಲ್ಲ. ಎಲ್ಲರ ಜೊತೆಯೂ ಅಣ್ಣ, ಅಣ್ಣ ಅಂತಾನೇ ಮಾತನಾಡುತ್ತಿದ್ದರು ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆ

    ಕೋಳಿ ಅಂಗಡಿ ಉದ್ಘಾಟನೆಗೆ ನನ್ನ ತಂದೆಯವರನ್ನು ಅಹ್ವಾನಿಸಿದ್ದರು. ಊರಿಗೆ ಹಿರಿಯರು ನೀವು ಬರಲೇಬೇಕು ಅಂತಾ ಹೇಳಿದ್ದರು. ಆದರೆ ಪ್ರವೀಣ್ ಹತ್ಯೆಯಾದ ಸುದ್ದಿ ಕೇಳಿ ಶಾಕ್ ಆಯಿತು. ಆ ದಿನ ನನಗೆ ನಿದ್ದೆ ಬಂದಿಲ್ಲ. ರಾತ್ರಿ ಊಟ ಮಾಡುವುದಕ್ಕೆ ಸಾಧ್ಯ ಆಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಪ್ರವೀಣ್ ಕುಮಾರ್‌ ನೆಟ್ಟಾರು ಹತ್ಯೆ ಪ್ರಕರಣ – 7 ಮಂದಿ SDPI ಕಾರ್ಯಕರ್ತರು ವಶಕ್ಕೆ

    Live Tv
    [brid partner=56869869 player=32851 video=960834 autoplay=true]