Tag: fried rice

  • ಪ್ರೀತಿಯ ಅಪ್ಪುಗೆ ಫ್ರೈಡ್ ರೈಸ್, ಗೋಬಿ ಮಂಚೂರಿ ತಂದ ಅಭಿಮಾನಿ

    ಪ್ರೀತಿಯ ಅಪ್ಪುಗೆ ಫ್ರೈಡ್ ರೈಸ್, ಗೋಬಿ ಮಂಚೂರಿ ತಂದ ಅಭಿಮಾನಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಯೊಬ್ಬರು ಫ್ರೈಡ್ ರೈಸ್, ಗೋಬಿ ಮಂಚೂರಿಯನ್ನು ಬದುಕಿದ್ದಾಗ ಕೊಡಲಾಗಲಿಲ್ಲ, ಈಗ ತೆಗೆದುಕೊಂಡು ಬಂದಿದ್ದೇನೆ ಎಂದು ಅಭಿಮಾನವನ್ನು ತೋರಿಸಿದ್ದಾರೆ.

    PUNEET RAJKUMAR

    ಯಲಹಂಕದಿಂದ ಬಂದಿರುವ ಅಭಿಮಾನಿ, ಪುನೀತ್ ಅವರ ಅಂಗ ರಕ್ಷಕ ಚಿಕ್ಕಣ್ಣಗೆ ಆನಂದ್ ಪರಿಚಯಸ್ಥರಾಗಿದ್ದಾರೆ. ಇವರಿಗೆ ಪುನೀತ್ ಅವರನ್ನು ಭೇಟಿಯಾಗುವ ಆಸೆ ಇತ್ತು. ಅದು ಈಡೇರಿರಲಿಲ್ಲ. ಹೀಗಾಗಿ ಅವರ ಸಾವಿನ ಸುದ್ದಿ ಕೇಳಿ ಫ್ರೈಡ್ ರೈಸ್, ಗೋಬಿ ಮಂಚೂರಿಯನ್ನು ತಂದಿದ್ದರು. ಇದನ್ನೂ ಓದಿ:   ಚಿಕ್ಕಮಗಳೂರಿನ ನೇಚರ್, ಕಾಫಿ ಅಂದ್ರೆ ಪುನೀತ್‍ಗೆ ತುಂಬಾ ಇಷ್ಟ: ಭರತ್

    PUNEET

    ಆನಂದ್ ಫ್ರೈಡ್ ರೈಸ್, ಗೋಬಿ ವ್ಯಾಪಾರಿಯಾಗಿದ್ದಾರೆ. ಚಿಕ್ಕಣ್ಣನಿಗೆ, ಆನಂದ್ ಕೇಳಿದ್ದರು ಪುನೀತ್ ರನ್ನ ಪರಿಚಯ ಮಾಡಿಸಬೇಕು ಎಂದು. ಪುನೀತ್‍ಗೆ ಫ್ರೈಡ್ ರೈಸ್, ಗೋಬಿ ಮಂಚೂರಿ ಇಷ್ಟ ಅಂದಿದ್ದರು. ಬದುಕಿದ್ದಾಗ ಕೊಡಲಾಗಾಲಿಲ್ಲ. ಈಗ ತೆಗದುಕೊಂಡು ಬಂದಿದ್ದೇನೆ ಎಂದು ಹೇಳುತ್ತಾ ಆನಂದ್ ಭಾವುಕರಾಗಿದ್ದಾರೆ. ಇದನ್ನೂ ಓದಿ: ಅಪ್ಪು ಅಗಲಿಕೆಗೆ ಮಂತ್ರಾಲಯ ಶ್ರೀಗಳಿಂದ ಸಂತಾಪ

    ಜನ ಮೆಚ್ಚುವ ಸಿನಿಮಾ ಹಾಗೂ ಯುವಕರಿಗೆ ಅಡ್ವೈಸ್ ಮಾಡುವಂತಹಾ ಸಿನಿಮಾ ಮಾಡಬೇಕು ಎಂಬುದು ಪುನೀತ್ ರಾಜ್‍ಕುಮಾರ್ ಅವರ ಕನಸಾಗಿತ್ತು. ಅವರಿಗೆ ಚಿಕ್ಕಮಗಳೂರಿನ ನೇಚರ್, ಕಾಫಿ ಎಂದರೆ ತುಂಬಾ ಇಷ್ಟ ಎಂದು ಅವರ ಸ್ನೇಹಿತ ಹಾಗೂ ಸಂಬಂಧಿ ಭರತ್ ಪಬ್ಲಿಕ್ ಟಿವಿ ಜೊತೆ ಪುನೀತ್ ಜೊತೆಗಿನ ಆತ್ಮೀಯತೆಯನ್ನು ಮೆಲುಕು ಹಾಕಿದ್ದಾರೆ.

  • ಫ್ರೈಡ್ ರೈಸ್ ಪಾರ್ಸೆಲ್ ತಗೊಂಡ್ರೆ ಬ್ಯಾಂಡೇಜ್ ಬಂತು!

    ಫ್ರೈಡ್ ರೈಸ್ ಪಾರ್ಸೆಲ್ ತಗೊಂಡ್ರೆ ಬ್ಯಾಂಡೇಜ್ ಬಂತು!

    ಬೆಂಗಳೂರು: ಹೊಟೇಲ್‍ಗಳಲ್ಲಿ ಪಾರ್ಸೆಲ್ ತಗೊಳ್ಳೋ ಮುನ್ನ ಸ್ವಲ್ಪ ಎಚ್ಚರವಾಗಿರಿ. ಯಾಕಂದ್ರೆ ಹಲ್ಲಿ, ಜಿರಲೆ ಬರೋದನ್ನು ಇಲ್ಲಿವರೆಗೂ ನೋಡಿದ್ವಿ. ಆದ್ರೆ, ಈಗ ಫ್ರೈಡ್ ರೈಸ್ ಪಾರ್ಸೆಲ್ ತಗೆದುಕೊಂಡರೆ ಅದರ ಜೊತೆ ಬ್ಯಾಂಡೇಜ್ ಪಾರ್ಸೆಲ್ ಬಂದಿದೆ.

    ಕೆಲ ವಿದ್ಯಾರ್ಥಿನಿಯರು ರಾಮಯ್ಯ ಕಾಲೇಜ್ ಬಸ್‍ಸ್ಟಾಪ್ ಬಳಿ ಇರುವ ಉಡುಪಿ ಗಾರ್ಡನ್ ಹೊಟೇಲ್‍ನಲ್ಲಿ ಫ್ರೈಡ್ ರೈಸ್ ಪಾರ್ಸೆಲ್ ತಗೊಂಡಿದ್ದಾರೆ. ಮನೆಗೆ ಹೋಗಿ ಪಾರ್ಸೆಲ್ ಓಪನ್ ಮಾಡಿ ತಿನ್ನಲು ಮುಂದಾಗಿದ್ದಾರೆ.

    ಎರಡ್ಮೂರು ತುತ್ತು ತಿಂದ ಮೇಲೆ ರೈಸ್ ಜೊತೆಗೆ ಬಳಕೆಯಾಗಿರುವ ಬ್ಯಾಂಡೇಜ್ ಕೂಡ ಸಿಕ್ಕಿದೆ. ಬ್ಯಾಂಡೇಜ್ ನೋಡಿದ ಕೂಡಲೇ ವಿದ್ಯಾರ್ಥಿನಿ ವಾಂತಿ ಮಾಡಿಕೊಂಡಿದ್ದಾಳೆ.

    ಬ್ಯಾಂಡೇಜ್ ಪಾರ್ಸೆಲ್ ಅನ್ನು ಹೊಟೇಲ್‍ನವರಿಗೆ ತೋರಿಸಿದರೆ ಬೈ ಮಿಸ್ಟೇಕ್ ಆಗಿದೆ. ಆಡುಗೆ ಮಾಡುವ ವ್ಯಕ್ತಿ ಹೊಸಬ. ಇನ್ನು ಮುಂದೆ ಈ ರೀತಿ ಆಗುವುದಿಲ್ಲ ಎಂದು ಸಮಜಾಯಿಸಿ ನೀಡಿದ್ದಾರೆ.