Tag: fridge

  • ದೇವರು ದೊಡ್ಡವನು ಫ್ರಿಡ್ಜ್ ನಲ್ಲಿ ಹೆಣವಾಗಲಿಲ್ಲ : ನಟಿ ರಾಖಿ ಸಾವಂತ್

    ದೇವರು ದೊಡ್ಡವನು ಫ್ರಿಡ್ಜ್ ನಲ್ಲಿ ಹೆಣವಾಗಲಿಲ್ಲ : ನಟಿ ರಾಖಿ ಸಾವಂತ್

    ಮೈಸೂರು ಹುಡುಗ ಆದಿಲ್ ಮದುವೆ ವಿಚಾರವನ್ನು ಮತ್ತೆ ನೆನಪಿಸಿಕೊಂಡಿದ್ದಾರೆ ಬಾಲಿವುಡ್ ನಟಿ ರಾಖಿ ಸಾವಂತ್. ಕೋರ್ಟ್ ನಲ್ಲಿ ಆದಿಲ್ ಮುಖಾಮುಖಿ ಆಗಿರುವ ವಿಚಾರವನ್ನೂ ಅವರು ಹಂಚಿಕೊಂಡಿದ್ದು, ಕೋರ್ಟ್ ಹಾಲ್ ನಲ್ಲೇ ತಮಗೆ ಆದಿಲ್ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ. ಜೈಲಿನಲ್ಲಿ ರೌಡಿಗಳನ್ನು ಭೇಟಿ ಮಾಡಿದ್ದೇನೆ. ಅದು ಹೇಗೆ ಬದುಕುತ್ತೀಯಾ ನೋಡುತ್ತೇನೆ ಎಂದಿದ್ದಾನೆ ಎಂದು ಹೇಳಿಕೊಂಡಿದ್ದಾರೆ.

    ಆದಿಲ್ ನನ್ನು ಪ್ರೇಮಿಸಿದ ವಿಚಾರವನ್ನೂ ಅವರು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದು, ‘ನನಗೆ ಈಗ ಅನಿಸುತ್ತಿದೆ. ಆದಿಲ್ ನನ್ನು ನಾನು ಯಾಕೆ ಪ್ರೀತಿಸಿದೆ ಎಂದು. ಅವನ ಉದ್ದೇಶವು ನನ್ನನ್ನು ಫ್ರಿಡ್ಜ್ ನಲ್ಲಿ ಹೆಣವಾಗಿ ತುಂಬುವುದು ಆಗಿತ್ತಾ? ದೇವರು ದೊಡ್ಡವನು ನನ್ನನ್ನು ಹಾಗೆ ಮಾಡಲು ಬಿಡಲಿಲ್ಲ. ಹಾಗಾಗಿ ನಾನು ದೇವರಿಗೆ ಥ್ಯಾಂಕ್ಸ್ ಹೇಳುತ್ತೇನೆ’ ಎಂದು ಅವರು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ್‌ನಲ್ಲಿ `ಬಿಗ್ ಬಾಸ್’ ಖ್ಯಾತಿಯ ದೀಪಿಕಾ ದಾಸ್

    ಆದಿಲ್ ಮತ್ತು ತಮ್ಮ ನಡುವಿನ ಸಂಬಂಧದ ಕುರಿತು ರಾಖಿ ಮಾತನಾಡಿದ್ದಾರೆ. ‘ಮೊದ ಮೊದಲು ನಮ್ಮದು ಪವಿತ್ರ ಪ್ರೇಮ ಎಂದುಕೊಂಡಿದ್ದೆ. ಅವನನ್ನು ತುಂಬಾನೇ ನಂಬಿದ್ದೆ. ಅವನು ಕೂಡ ನನ್ನನ್ನು ಪ್ರೀತಿಸುವಂತೆ ನಾಟಕ ಮಾಡಿದೆ. ಆಮೇಲೆ ಅವನ ಮತ್ತೊಂದು ಮುಖ ಪರಿಚಯ ಆಯಿತು. ಅವನಿಗೆ ಅನೇಕ ಗರ್ಲ್ ಫ್ರೆಂಡ್ಸ್ ಇದ್ದಾರೆ. ಅವನು ಬೇರೆ ಹುಡುಗಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ’ ಎಂದು ಆರೋಪಿಸಿದ್ದಾರೆ.

    ಮೈಸೂರಿನಲ್ಲಿರುವ ಆದಿಲ್ ತಂದೆ ತಾಯಿಯನ್ನೂ ಮಾತನಾಡಿಸುವ ಪ್ರಯತ್ನವನ್ನು ಮಾಡಿದ್ದಾರಂತೆ ರಾಖಿ. ಆದರೆ, ಫೋನ್ ಸ್ವೀಕರಿಸುತ್ತಿಲ್ಲ ಎಂದು ಹೇಳಿದ್ದಾರೆ. ಈಗಲೂ ನಾನು ಅವರ ತಂದೆ ತಾಯಿ ಜೊತೆ ಮಾತನಾಡುವ ಉದ್ದೇಶ ಹೊಂದಿದ್ದೇನೆ. ಮಗನ ಬಗ್ಗೆ ಒಂದಷ್ಟು ವಿಷಯಗಳನ್ನು ಅವರಿಗೆ ತಿಳಿಸಬೇಕಿದೆ ಎಂದಿದ್ದಾರೆ ರಾಖಿ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗೆಳತಿ ಹತ್ಯೆಗೈದು ಫ್ರಿಡ್ಜ್‌ನಲ್ಲಿಟ್ಟ – ಕೆಲವೇ ಗಂಟೆಯಲ್ಲೇ ಬೇರೊಬ್ಬಳನ್ನು ಮದುವೆಯಾದ

    ಗೆಳತಿ ಹತ್ಯೆಗೈದು ಫ್ರಿಡ್ಜ್‌ನಲ್ಲಿಟ್ಟ – ಕೆಲವೇ ಗಂಟೆಯಲ್ಲೇ ಬೇರೊಬ್ಬಳನ್ನು ಮದುವೆಯಾದ

    ನವದೆಹಲಿ: ದೆಹಲಿಯಲ್ಲಿ (Delhi) ಮತ್ತೊಂದು ಶ್ರದ್ಧಾ ವಾಕರ್ (Shraddha Walker) ರೀತಿಯ ಭೀಕರ ಹತ್ಯೆ ನಡೆದಿದ್ದು, ರಾಷ್ಟ್ರ ರಾಜಧಾನಿಯ ನಜಾಫ್‍ಗಢ್‍ನ ಮಿತ್ರಾನ್ ಗ್ರಾಮದ ಹೊರವಲಯದಲ್ಲಿರುವ ಢಾಬಾದಲ್ಲಿ ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದ ಗೆಳತಿಯನ್ನು (Live In Partner) ಹತ್ಯೆಗೈದು, ಫ್ರಿಡ್ಜ್‌ನಲ್ಲಿ ಇಟ್ಟ ಘಟನೆ ನಡೆದಿದೆ.

    ಮೃತಳನ್ನು ನಿಕ್ಕಿ ಯಾದವ್ (22) ಎಂದು ಗುರುತಿಸಲಾಗಿದೆ. ಫೆ. 9ರ ಮಧ್ಯರಾತ್ರಿ ಕಾಶ್ಮೀರಿ ಗೇಟ್ ಐಎಸ್‍ಬಿಟಿ ಬಳಿ ನಿಕ್ಕಿ ಗೆಳೆಯ ಸಾಹಿಲ್ ಗೆಹ್ಲೋಟ್ (24) ಕತ್ತು ಹಿಸುಕಿ ಕೊಲೆ ಮಾಡಿ, ಯಾರಿಗೂ ಅನುಮಾನ ಬಾರದಿರಲಿ ಎಂದು ತನ್ನ ಢಾಬಾದ ಫ್ರಿಡ್ಜ್‌ನಲ್ಲಿ ( Fridge) ಆಕೆಯ ಶವವನ್ನು ಬಚ್ಚಿಟ್ಟಿದ್ದ. ಅಷ್ಟೇ ಅಲ್ಲದೇ ಕೃತ್ಯ ಎಸಗಿ ಕೆಲವೇ ಗಂಟೆಯಲ್ಲಿ ಬೇರೊಂದು ಯುವತಿಯ ಜೊತೆ ಮದುವೆ ಆಗಿರುವ ವಿಷಯ ಬೆಳಕಿಗೆ ಬಂದಿದೆ.

    ಘಟನೆಯೇನು?: ಮಿತ್ರಾನ್ ಗ್ರಾಮದ ನಿವಾಸಿಯಾದ ಸಾಹಿಲ್ ಹರಿಯಾಣದ ಜಜ್ಜರ್ ನಿವಾಸಿ ನಿಕ್ಕಿಯನ್ನು 2018ರಲ್ಲಿ ಉತ್ತಮ ನಗರ ಪ್ರದೇಶದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯುತ್ತಿದ್ದಾಗ ಭೇಟಿಯಾಗಿದ್ದ. ನಂತರ ಇವರಿಬ್ಬರು ನೋಯ್ಡಾದ ಒಂದೇ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದರು. ಅಲ್ಲಿಂದ ಸ್ನೇಹಿತರಾಗಿದ್ದರು. ಈ ಸ್ನೇಹವೇ ಲೀವ್ ಇನ್ ರಿಲೇಶನ್‍ಶಿಪ್‍ನಲ್ಲಿ ಇರಲು ನಾಂದಿ ಹಾಡಿತು.

    ಅದರಂತೆ ಇಬ್ಬರು ನೋಯ್ಡಾದಲ್ಲಿ ಬಾಡಿಗೆ ಮನೆಯನ್ನು ಪಡೆದು ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. ಆದರೆ ಸಾಹಿಲ್ ತನ್ನ ಸಂಬಂಧದ ಬಗ್ಗೆ ಕುಟುಂಬದ ಸದಸ್ಯರಿಗೆ ತಿಳಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಾಹಿಲ್ ಮನೆಯವರು ಬೇರೊಬ್ಬ ಯುವತಿಯನ್ನು ಮದುವೆ ಆಗುವಂತೆ ಒತ್ತಾಯಿಸಿದ್ದರು. ಅದಕ್ಕೆ ಸಾಹಿಲ್ ಒಪ್ಪಿಗೆ ಸೂಚಿಸಿದ್ದಕ್ಕೆ ಬೇರೆ ಯುವತಿಯ ಜೊತೆಗೆ ಫೆ. 10ಕ್ಕೆ ಮದುವೆಯ ದಿನಾಂಕವನ್ನು ಗೊತ್ತು ಮಾಡಿದ್ದರು.

    ಈ ವಿಷಯ ತಿಳಿದ ನಿಕ್ಕಿ, ಸಾಹಿಲ್ ಜೊತೆ ಜಗಳವಾಡಿದ್ದಳು. ಈ ಹಿನ್ನೆಲೆಯಲ್ಲಿ ಕೋಪಗೊಂಡ ಸಾಹಿಲ್ ನಿಕ್ಕಿಯನ್ನು ಕೊಲೆ ಮಾಡಲು ಯೋಜನೆ ರೂಪಿಸಿದ್ದಾನೆ. ಅದರಂತೆ ಸಾಹಿಲ್ ತನ್ನ ಮೊಬೈಲ್‍ನ ಡೇಟಾ ಕೇಬಲ್ ಅನ್ನು ಬಳಸಿ ತನ್ನ ಕಾರಿನಲ್ಲೇ ನಿಕ್ಕಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

    ನಂತರ ನಿಕ್ಕಿಯನ್ನು ಕೊಂದ ನಂತರ ಸಾಹಿಲ್ ಆಕೆಯ ಶವವನ್ನು ಮಿತ್ರಾನ್ ಗ್ರಾಮದ ಹೊರವಲಯದಲ್ಲಿರುವ ಢಾಬಾದ ಫ್ರಿಡ್ಜ್‌ನಲ್ಲಿ ಬಚ್ಚಿಟ್ಟು ವಿಕೃತಿಯನ್ನು ಮೆರೆದಿದ್ದಾನೆ. ಬಳಿಕ ಕೆಲವೇ ಗಂಟೆಯಲ್ಲಿ ಏನೂ ಆಗದ ರೀತಿಯಲ್ಲಿ ಹೋಗಿ ಮತ್ತೊಬ್ಬ ಯುವತಿಯನ್ನು ಮದುವೆಯಾಗಿದ್ದ. ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆ ರೇಸ್‍ನಲ್ಲಿ ಭಾರತ ಮೂಲದ ನಿಕ್ಕಿ ಹ್ಯಾಲೆ, ವಿವೇಕ್ ರಾಮಸ್ವಾಮಿ

    ಆದರೆ ಮಂಗಳವಾರ ಢಾಬಾದ ಫ್ರಿಡ್ಜ್‌ನಲ್ಲಿ ನಿಕ್ಕಿಯ ಶವವನ್ನು ಪೊಲೀಸರು ಪತ್ತೆ ಹಚ್ಚಿದ್ದು, ಈ ಹಿನ್ನೆಲೆಯಲ್ಲಿ ಸಾಹಿಲ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಏರ್‌ಬಸ್‌-ಬೋಯಿಂಗ್‌ ಜೊತೆ ಮೆಗಾ ಡೀಲ್‌ : ವಿಶ್ವದಾಖಲೆ ನಿರ್ಮಿಸಿದ ಏರ್‌ ಇಂಡಿಯಾ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮನೆಯಲ್ಲಿದ್ದ ಫ್ರಿಡ್ಜ್ ಬ್ಲಾಸ್ಟ್ – ಮೂವರು ಸಾವು, ಇಬ್ಬರಿಗೆ ಗಾಯ

    ಮನೆಯಲ್ಲಿದ್ದ ಫ್ರಿಡ್ಜ್ ಬ್ಲಾಸ್ಟ್ – ಮೂವರು ಸಾವು, ಇಬ್ಬರಿಗೆ ಗಾಯ

    ಚೆನ್ನೈ: ಮನೆಯಲ್ಲಿದ್ದ ಫ್ರಿಡ್ಜ್ (Fridge) ಸ್ಫೋಟಗೊಂಡ ಪರಿಣಾಮ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಚೆಂಗಲ್ಪಟ್ಟು ಜಿಲ್ಲೆಯ ಗುಡುವಂಚೇರಿ ಪಟ್ಟಣದಲ್ಲಿ (Guduvancheri town) ನಡೆದಿದೆ.

    ನವೆಂಬರ್ 4ರ ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದೆ. ವರ್ಷದ ಹಿಂದೆಯಷ್ಟೇ ಗುಡುವಂಚೇರಿಯಲ್ಲಿರುವ ಆರ್‌ಆರ್ ಬೃಂದಾವನ ಅಪಾರ್ಟ್‍ಮೆಂಟ್‍ನಲ್ಲಿ ವೆಂಕಟರಾಮನ್ ಅವರು ನಿಧನರಾಗಿದ್ದರು. ಹೀಗಾಗಿ ಅವರ ಪತ್ನಿ ಗಿರೀಜಾ (63) ದುಬೈನಲ್ಲಿ (Dubai) ನೆಲೆಸಿದ್ದರು. ಆದರೀಗ ವೆಂಕಟರಾಮನ್ ಅವರ ವಾರ್ಷಿಕ ವಿಧಿಗಳನ್ನು (ಶ್ರಾದ್ಧ) ಪಾವತಿಸಲು ಗುಡುವಂಚೇರಿ ಮನೆಗೆ ಮರಳಿದ್ದರು. ಈ ವೇಳೆ ಘಟನೆ ಸಂಭವಿಸಿದೆ. ಇದನ್ನೂ ಓದಿ: ಇರಾನ್‌ನಲ್ಲಿ ಹಿಜಬ್‌ ವಿರೋಧಿಸಿ ಪ್ರತಿಭಟನೆ – 6 ವಾರಗಳಲ್ಲಿ 14,000 ಮಂದಿ ಬಂಧನ

    ಶುಕ್ರವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಫ್ರಿಡ್ಜ್ ಬ್ಲಾಸ್ಟ್ ಆದಾಗ ಮನೆಯಲ್ಲಿ ಗಿರಿಜಾ, ಅವರ ಸಹೋದರಿ ರಾಧಾ (55), ಅವರ ಸಹೋದರ ರಾಜ್‍ಕುಮಾರ್ (47), ರಾಜ್‍ಕುಮಾರ್ ಅವರ ಪತ್ನಿ ಭಾರ್ಗವಿ (35) ಮತ್ತು ಅವರ ಪುತ್ರಿ ಆರಾಧನಾ (6) ಇದ್ದರು. ಫ್ರಿಡ್ಜ್ ಬ್ಲಾಸ್ಟ್ ಆದಾಗ ಮನೆಯ ತುಂಬಾ ಹೊಗೆ ಆವರಿಸಿತ್ತು. ಇದನ್ನೂ ಓದಿ: ಸ್ಥಳೀಯ ಪೊಲೀಸರನ್ನು ಟೆಸ್ಟ್ ಮಾಡಲು ಸಂತ್ರಸ್ತೆ ವೇಷ ತೊಟ್ಟ ಐಪಿಎಸ್ ಅಧಿಕಾರಿ – ನೆಟ್ಟಿಗರಿಂದ ಮೆಚ್ಚುಗೆ

    ಫ್ರಿಡ್ಜ್ ಸ್ಫೋಟಗೊಂಡ ಶಬ್ದ ಕೇಳಿ ಅಪಾರ್ಟ್‍ಮೆಂಟ್‍ನಲ್ಲಿದ್ದ ಅಕ್ಕಪಕ್ಕದವರು ಅಲ್ಲಿಗೆ ಧಾವಿಸಿ ಬಾಗಿಲು ಒಡೆದು ಹಾಕಲು ಯತ್ನಿಸಿದ್ದಾರೆ. ಆದರೆ ದುರದೃಷ್ಟವಶಾತ್ ಸ್ಫೋಟದ ಹೊಗೆಯಿಂದ ಉಸಿರುಗಟ್ಟಿ ಗಿರಿಜಾ, ರಾಧಾ ಮತ್ತು ರಾಜ್‍ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದೀಗ ಭಾರ್ಗವಿ ಮತ್ತು ಆರಾಧನಾ ಅವರನ್ನು ಕ್ರೋಂಪೇಟೆ ಸರ್ಕಾರಿ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • 20 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ಕುಳಿತು ಭೂಕುಸಿತದಿಂದ ಪಾರಾದ ಬಾಲಕ

    20 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ಕುಳಿತು ಭೂಕುಸಿತದಿಂದ ಪಾರಾದ ಬಾಲಕ

    ಮನಿಲಾ: ಫಿಲಿಪೀನ್ಸ್‌ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ 11 ವರ್ಷದ ಬಾಲಕನೊಬ್ಬ ಫ್ರಿಡ್ಜ್‌ನೊಳಗೆ ಇದ್ದು ಪವಾಡ ರೀತಿಯಲ್ಲಿ ಬದುಕುಳಿದಿದ್ದಾನೆ.

    ಸಿ.ಜೆ.ಜಸ್ಮೆ(11) ಬದುಕುಳಿದ ಬಾಲಕ. ಭಾರೀ ಬಿರುಗಾಳಿಯಿಂದ ಭೂ ಕುಸಿತ ಸಂಭವಿಸಿತ್ತು. ಆ ವೇಳೆಗೆ ಜಸ್ಮೆ ತನ್ನ ಕುಟುಂಬದೊಂದಿಗೆ ಮನೆಯಲ್ಲಿದ್ದ. ಆದರೆ ಭೂಕುಸಿತದಿಂದಾಗಿ ಆತ ಫ್ರಿಡ್ಜ್‌ನೊಳಗೆ ಕುಳಿತುಕೊಂಡಿದ್ದ. ಸತತ 20 ಗಂಟೆಗಳ ನಂತರ ಅಧಿಕಾರಿಗಳು ಕಾರ್ಯಾಚರಣೆ ಮಾಡುವಾಗ ಸಿಕ್ಕಿದ್ದಾನೆ.

    ಚಂಡಮಾರುತದ ಹಿನ್ನೆಲೆಯಲ್ಲಿ ಲೇಯ್ಟ್ ಪ್ರಾಂತ್ಯದಲ್ಲಿ ನಡೆಸಿದ ರಕ್ಷಣಾ ಕಾರ್ಯಾಚರಣೆಯ ಸಂದರ್ಭದಲ್ಲಿ ಅವೇಶೇಷಗಳ ಅಡಿಯಲ್ಲಿ ಫ್ರಿಡ್ಜ್ ಸಿಕ್ಕಿದೆ. ಅದನ್ನು ಸಾಗಿಸುವಾಗ ತೂಕ ಹೆಚ್ಚಾಗಿರುವುದನ್ನು ಅಧಿಕಾರಿಗಳು ಗಮನಿಸಿದ್ದಾರೆ. ನಂತರ ಬಾಗಿಲು ತೆರೆದಾಗ ಬಾಲಕ ಪ್ರತ್ಯಕ್ಷವಾಗಿದ್ದಾನೆ. ತಕ್ಷಣ ಆತನನ್ನು ಫ್ರೀಡ್ಜ್‌ನಿಂದ ತೆಗೆದು ರಕ್ಷಿಸಿದ್ದಾರೆ. ನಂತರ ಅವನಿಗೆ ನೀರನ್ನು ನೀಡಿ ಉಳಿದವರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು. ಆಗ ಜಸ್ಮೆ ನಾನು ಒಬ್ಬನೇ ಉಳಿದಿದ್ದೇನೆ ಎಂದು ಭಾವುಕನಾದನು. ಇದನ್ನೂ ಓದಿ: ವರ್ಗಾವಣೆ ಆದೇಶ ರದ್ದುಗೊಳಿಸುವಂತೆ 24 ವಿದ್ಯಾರ್ಥಿನಿಯರನ್ನು ಕೂಡಿ ಹಾಕಿದ ಶಿಕ್ಷಕರು

    ಈ ಬಗ್ಗೆ ಅಧಿಕಾರಿಯೊಬ್ಬರು ಮಾತನಾಡಿ, ಘಟನೆಯಿಂದಾಗಿ ಜಸ್ಮೆಯ ಕಾಲು ಮುರಿದಿದೆ. ಇದರಿಂದಾಗಿ ಆತನನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು. ಇದೀಗ ವೀಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: 15% ಜನರಿಗಾಗಿ 85% ನಾಗರಿಕರ ಮೂಲಭೂತ ಹಕ್ಕು ಉಲ್ಲಂಘನೆ – ಹಲಾಲ್ ಉತ್ಪನ್ನ ನಿಷೇಧಿಸುವಂತೆ ಸುಪ್ರೀಂನಲ್ಲಿ ಅರ್ಜಿ

  • ಒಳಗಡೆ ಇರೋ ವಸ್ತುಗಳನ್ನು ನೋಡಿ ರೆಸಿಪಿ ವಿವರ ನೀಡಲಿದೆ ಅಮೆಜಾನ್‌ ಸ್ಮಾರ್ಟ್‌ ಫ್ರಿಡ್ಜ್‌

    ಒಳಗಡೆ ಇರೋ ವಸ್ತುಗಳನ್ನು ನೋಡಿ ರೆಸಿಪಿ ವಿವರ ನೀಡಲಿದೆ ಅಮೆಜಾನ್‌ ಸ್ಮಾರ್ಟ್‌ ಫ್ರಿಡ್ಜ್‌

    ವಾಷಿಂಗ್ಟನ್‌: ಫ್ರಿಡ್ಜ್ ಒಳಗಡೆ ವಸ್ತುಗಳು ಕೆಲವೊಮ್ಮೆ ಖಾಲಿಯಾಗುತ್ತಿದ್ದರೂ ಅದು ನಮ್ಮ ಗಮನಕ್ಕೆ ಬರುವುದಿಲ್ಲ. ಹೀಗೆ ವಸ್ತುಗಳು ಖಾಲಿಯಾಗುತ್ತಿದ್ದಂತೆ “ವಸ್ತುಗಳು ಕಡಿಮೆ ಆಗುತ್ತಿದೆ. ಖರೀದಿಸುವುದು ಒಳ್ಳೆಯದು” ಎಂಬ ಸಂದೇಶ ಬರಬೇಕು ಎಂದು ನೀವು ಕಲ್ಪನೆ ಮಾಡುತ್ತಿದ್ದರೆ ನಿಮ್ಮ ಕಲ್ಪನೆ ಮುಂದಿನ ದಿನಗಳಲ್ಲಿ ನಿಜವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

    ಆನ್‌ಲೈನ್‌ ಶಾಪಿಂಗ್‌ ದೈತ್ಯ ಅಮೆಜಾನ್‌ ಈಗ ʼಸ್ಮಾರ್ಟ್‌ ಫ್ರಿಡ್ಜ್‌ʼ ನಿರ್ಮಾಣಕ್ಕೆ ಕೈ ಹಾಕಿದೆ. ಫ್ರಿಡ್ಜ್‌ನಲ್ಲಿರುವ ವಸ್ತುಗಳು ಖಾಲಿಯಾದರೆ ಅಥವಾ ಕಡಿಮೆ ಆಗುತ್ತಿದ್ದರೆ ನೋಟಿಫಿಕೇಶನ್‌ ಬರುವಂತೆ ಅಭಿವೃದ್ಧಿ ಪಡಿಸಲಾಗುತ್ತಿದೆ.

    ಕಳೆದ 2 ವರ್ಷಗಳಿಂದ ಕಂಪನಿ ಈ ಫ್ರಿಡ್ಜ್‌ ಅಭಿವೃದ್ಧಿ ಪಡಿಸುತ್ತಿದೆ ಎಂದು ವರದಿಯಾಗಿದೆ. ಒಟ್ಟು ಈ ಸ್ಮಾರ್ಟ್‌ ಫ್ರಿಡ್ಜ್‌ ಯೋಜನೆಗೆ 50 ದಶಲಕ್ಷ ಡಾಲರ್‌(ಅಂದಾಜು 374 ಕೋಟಿ ರೂ.) ಹೂಡಿಕೆ ಮಾಡಿದೆ. ಇದನ್ನೂ ಓದಿ: ವಿಶ್ವದಲ್ಲೇ ಅತಿ ಹೆಚ್ಚು ವಿಚ್ಛೇದನ ಜೀವನಾಂಶ ಪಡೆದ ಅಮೆಜಾನ್ ಸಂಸ್ಥಾಪಕನ ಪತ್ನಿ

    ಗ್ರಾಹಕ ಏನು ಖರೀದಿಸಿದ್ದಾನೆ? ಖರೀದಿಸಿದ ವಸ್ತುಗಳು ಎಷ್ಟು ಪ್ರಮಾಣದಲ್ಲಿ ಖಾಲಿಯಾಗಿದೆ? ನೀವು ಆಗಾಗ ಖರೀದಿಸುವ ಯಾವುದಾದರೂ ವಸ್ತು ಕಡಿಮೆ ಖರೀದಿಸಿದರೆ ಸೂಚನೆ ನೀಡುತ್ತದೆ. ವಸ್ತುವಿನ ಅವಧಿ ಮುಕ್ತಾಯಗೊಳ್ಳುತ್ತಿದ್ದರೂ ಗ್ರಾಹಕರಿಗೆ ಆ ಮಾಹಿತಿಯನ್ನು ಸಹ ನೀಡಲಿದೆ.

    ಈ ಫ್ರಿಡ್ಜ್‌ಗೆ ವಾಯ್ಸ್‌ ಅಸಿಸ್ಟೆಂಟ್‌ ಸಹ ಇರಲಿದೆ. ಫ್ರಿಡ್ಜ್‌ ಒಳಗಡೆ ಇರುವ ವಸ್ತುಗಳನ್ನು ನೋಡಿ ಯಾವ ಆಡುಗೆ ಮಾಡಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ಸಹ ನೀಡಲಿದೆ.

    ತನ್ನ ಕಿರಾಣಿ ವ್ಯಾಪಾರ ಹೆಚ್ಚಿಸಲು ಅಮೆಜಾನ್‌ ಈ ಸಾಹಸಕ್ಕೆ ಕೈ ಹಾಕಿದೆ. ಈ ಫ್ರಿಡ್ಜ್‌ ಬಿಡುಗಡೆಯಾದರೆ ಬೆಲೆ ಬಹಳ ದುಬಾರಿ ಇರಲಿದೆ. ಹೀಗಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುವುದರ ಬಗ್ಗೆ ಅನುಮಾನವಿದೆ ಎಂದು ವರದಿಯಾಗಿದೆ.

  • ಬೆಂಗಳೂರಿನ ಅಪಾರ್ಟ್‍ಮೆಂಟ್‍ನಲ್ಲಿ ಸ್ಫೋಟಕ್ಕೆ ಕಾರಣ ಫ್ರಿಡ್ಜ್?

    ಬೆಂಗಳೂರಿನ ಅಪಾರ್ಟ್‍ಮೆಂಟ್‍ನಲ್ಲಿ ಸ್ಫೋಟಕ್ಕೆ ಕಾರಣ ಫ್ರಿಡ್ಜ್?

    ಬೆಂಗಳೂರು: ದೇವರಚಿಕ್ಕನಹಳ್ಳಿ ಅಪಾರ್ಟ್‍ಮೆಮಟ್ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಫ್ರಿಡ್ಜ್ ಸ್ಫೋಟದಿಂದಲೇ ತಾಯಿ-ಮಗಳು ಸಾವನ್ನಪ್ಪಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ.

    ಅಪಾರ್ಟ್‍ಮೆಂಟ್‍ನಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಹೇಗೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್‍ಎಸ್‍ಎಲ್) ತಂಡದ ತನಿಖೆ ವೇಳೆ ಫ್ರಿಡ್ಜ್ ನಿಂದಲೇ ಬೆಂಕಿ ಹತ್ತಿಕೊಂಡಿರೋ ಶಂಕೆ ವ್ಯಕ್ತಪಡಿಸಿದೆ. ಬೆಂಕಿ ಹತ್ತಿಕೊಂಡ ಫ್ಯಾಟ್ ಪರಿಶೀಲನೆ ಬಳಿಕ ಎಫ್‍ಎಸ್‍ಎಲ್ ತಂಡ ಮಾಹಿತಿ ನೀಡಿದ್ದು, ಗ್ಯಾಸ್ ಪೈಪ್ ಲೀಕ್ ಆಗಿದ್ದರೂ ಸಿಲಿಂಡರ್ ಸ್ಫೋಟವಾಗಿಲ್ಲ. ಬೆಂಕಿ ಹತ್ತಿಕೊಂಡ ಇಡೀ ಫ್ಯಾಟ್ ಪರಿಶೀಲಿಸಲಾಗಿದ್ದು, ಹಾಲ್, ಅಡುಗೆ ಮನೆ, ಕೊಠಡಿ, ಬಾತ್ ರೂಂ ಕೂಡ ಪರಿಶೀಲನೆ ಮಾಡಲಾಗಿದೆ. ಟಿವಿ, ವಾಷಿಂಗ್ ಮಿಷನ್, ಚಾರ್ಜಿಂಗ್ ಪೋರ್ಟ್ ಕೂಡ ಪರಿಶೀಲನೆ ನಡೆಸಿದೆ. ಎಲ್ಲೂ ಕೂಡ ಶಾರ್ಟ್ ಸರ್ಕ್ಯೂಟ್ ಆಗಿರೋ ಸುಳಿವಿಲ್ಲ. ಫ್ರಿಡ್ಜ್ ಸ್ಫೋಟದಿಂದ ಬೆಂಕಿ ಹತ್ತಿಕೊಂಡಿರೋ ಬಗ್ಗೆ ಸಂಶಯ ಮೂಡಿದೆ ಎಂದು ತಿಳಿಸಿದೆ.

    ಅಪಾರ್ಟ್‍ಮೆಂಟ್ ಗ್ಯಾಸ್ ಲೀಕೆಜ್ ಬಗ್ಗೆಯೂ ಮಾಹಿತಿ ಪಡೆದ ಪೊಲೀಸರು, ಗ್ಯಾಸ್ ಏಜೆನ್ಸಿ ಸಿಬ್ಬಂದಿ ಕರೆತಂದು ಪರಿಶೀಲನೆ ನಡೆಸಿದ್ದು, ಗ್ಯಾಸ್ ಲೀಕೆಜ್ ಆಗಿದ್ಯಾ ಎಂಬ ಮಾಹಿತಿ ಪಡೆದು. ಬೆಸ್ಕಾಂ ಸಿಬ್ಬಂದಿಯಿಂದಲೂ ಸ್ವಿಚ್ ಬೋರ್ಡ್‍ಗಳ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಹೊತ್ತಿ ಉರಿದ ಬೆಂಗಳೂರಿನ ಫ್ಲ್ಯಾಟ್ – ನೋಡನೋಡುತ್ತಲೇ ಮಹಿಳೆ ಸಜೀವ ದಹನ

    ಮಾಲೀಕರ ನಿರ್ಲಕ್ಷ್ಯ..?
    ಅಗ್ನಿ ದುರಂತಕ್ಕೆ ಬಿಬಿಎಂಪಿ, ಅಪಾರ್ಟ್ ಮೆಂಟ್ ಮಾಲೀಕರ ನಿರ್ಲಕ್ಷ್ಯವೇ ಕಾರಣ ಅಂತ ಹೇಳಲಾಗುತ್ತಿದೆ. ಅಪಾರ್ಟ್ ಮೆಂಟ್‍ನಲ್ಲಿ ರೂಲ್ಸ್ ಫಾಲೋನೇ ಆಗಿಲ್ಲ. ಹೀಗಾಗಿ ಈ ಇಬ್ಬರ ನಿರ್ಲಕ್ಷ್ಯದಿಂದ ಎರಡು ಜೀವಗಳು ಸಜೀವ ದಹನವಾಗಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

    ಅಪಾರ್ಟ್ ಮೆಂಟ್‍ನಲ್ಲಿ ಜನರನ್ನು ಎಚ್ಚರಿಸುವ ಸೈರನ್ ವ್ಯವಸ್ಥೆ ಇಲ್ಲ. ಬೆಂಕಿ, ಹೊಗೆ ನಂದಿಸಲು ವಾಟರ್ ಲೈನ್ ವ್ಯವಸ್ಥೆ ಇಲ್ಲ. ಪ್ರತಿ ಅಂತಸ್ತಿನಲ್ಲಿ ರಾಸಾಯನಿಕ ಮಿಶ್ರಿತ ಬೆಂಕಿ ನಂದಿಸುವ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಇಲ್ಲ. ಅಪಾರ್ಟ್‍ಮೆಂಟ್ ಅಕ್ಕಪಕ್ಕ ಟ್ರಾನ್ಸ್ ಫಾರ್ಮರ್ ಇರಬಾರದು. ಆದರೆ ಅಪಾರ್ಟ್‍ಮೆಂಟ್ ಕಾಂಪೌಂಡ್ ಒಳಗೇ ಟ್ರಾನ್ಸ್ ಫಾರ್ಮರ್ ಇದೆ. ಇದ್ಯಾವುದನ್ನೂ ಬಿಬಿಎಂಪಿ ಪರಿಶೀಲನೆ ಮಾಡಿಯೇ ಇಲ್ಲ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಬೆಂಕಿ ಹೊತ್ತಿಕೊಂಡಿದ್ದು ಸಿಲಿಂಡರಿನಿಂದಲ್ಲ- ಯುಪಿಎಸ್, ಮೊಬೈಲ್ ಚಾರ್ಜರ್ ಬಗ್ಗೆ ಶಂಕೆ

    ಒಟ್ಟಿನಲ್ಲಿ ಅಗ್ನಿ ಅವಘಢ ಸಂಭಿಸಿದ ಪರಿಣಾಮ ನೋಡ ನೋಡುತ್ತಿದ್ದಂತೆಯೇ ತಾಯಿ-ಮಗಳು ಸಜೀವ ದಹನಾಗಿದ್ದಾರೆ. ಇಂದು ಇಬ್ಬರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಸೇಂಟ್ ಜಾನ್ ಆಸ್ಪತ್ರೆಯಲ್ಲಿ ನೆರವೇರಿಸಿ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗುತ್ತದೆ. ಇದನ್ನೂ ಓದಿ: ಹಾಲ್‍ನಲ್ಲಿ ಬೆಂಕಿ ಹೊತ್ತಿಕೊಂಡಿದೆ ಬಾರಪ್ಪ ಅಂದ್ರು: ಭಾಗ್ಯ ರೇಖಾ ಅಳಿಯ ಕಣ್ಣೀರು

  • ಮೈಸೂರಿನಲ್ಲಿ ಫ್ರಿಡ್ಜ್ ಸ್ಫೋಟಗೊಂಡು ಮೂವರಿಗೆ ಗಾಯ

    ಮೈಸೂರಿನಲ್ಲಿ ಫ್ರಿಡ್ಜ್ ಸ್ಫೋಟಗೊಂಡು ಮೂವರಿಗೆ ಗಾಯ

    ಮೈಸೂರು: ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಮನೆಯಲ್ಲಿದ ಫ್ರಿಡ್ಜ್ ಸ್ಫೋಟಗೊಂಡು ಮೂವರಿಗೆ ತೀವ್ರ ಗಾಯವಾಗಿರೋ ಘಟನೆ ಮೈಸೂರಿನ ಹುಣಸೂರು ಪಟ್ಟಣದ ಲಾಲ್ ಬಂದ್ ಬೀದಿಯಲ್ಲಿ ನಡೆದಿದೆ.

    ಆಟೋ ಚಾಲಕ ಚಂದ್ರುರಿಗೆ ಸೇರಿದ ಮನೆಯಲ್ಲಿ ಈ ಅವಘಡ ನಡೆದಿದೆ. ಅವಘಡಲ್ಲಿ ಲಕ್ಷಾಂತರ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿದೆ.

    ಅನಾಹುತ ತಪ್ಪಿಸಲು ತೆರಳಿದ ನೆರೆ ಮನೆ ನಿವಾಸಿ ಮೊಹಮ್ಮದ್ ಉರ್ ಘಟನೆಯಲ್ಲಿ ತೀವ್ರ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ.

  • ಕೊಲೆಗೈದು ಪತ್ನಿ ಶವವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಜ್‍ನಲ್ಲಿಟ್ಟ ಪತಿ

    ಕೊಲೆಗೈದು ಪತ್ನಿ ಶವವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಜ್‍ನಲ್ಲಿಟ್ಟ ಪತಿ

    – ತುಂಡರಿಸಿದ ಭಾಗಗಳನ್ನು ಬಕೆಟ್‍ನಲ್ಲಿ ತುಂಬಿ ಚರಂಡಿಗೆ ಎಸೆದ
    – ಪತ್ನಿ ಶವದ ಜೊತೆಗೆ 2 ಮಕ್ಕಳದೊಂದಿಗೆ ಅದೇ ಮನೆಯಲ್ಲಿದ್ದ

    ಮುಂಬೈ: ಪತ್ನಿಯನ್ನು ಕೊಂದು ಆಕೆಯ ಮೃತ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ 1 ವಾರ ಫ್ರಿಜ್‍ನಲ್ಲಿಟ್ಟು, ಬಳಿಕ ಅದನ್ನು ಚರಂಡಿಗೆ ಎಸೆದಿದ್ದ ಕ್ರೂರ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಸೋಮವಾರ ಆರೋಪಿ ಸಂಜಯ್ ರಂಗನಾಥ್ ಸಾಲ್ವೆ ಅಕ ಅಬ್ದುಲ್ ರೆಹಮಾನ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಅಬ್ದುಲ್ ತನ್ನ ಪತ್ನಿ ರೇಷ್ಮಾ ಪಠಾನ್ ಅವರನ್ನು ಕೊಲೆಗೈದಿದ್ದನು. ಬಳಿಕ 1 ವಾರದಿಂದ ನಾಪತ್ತೆಯಾಗಿದ್ದಾಳೆ ಎಂದು ನಾಟಕವಾಡಿದ್ದನು. ಆದರೆ ಸೋಮವಾರ ಅಬ್ದುಲ್ ನಿಜಬಣ್ಣವನ್ನು ಪೊಲೀಸರು ಬಯಲು ಮಾಡಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಯುವಕನ ಜೊತೆ ಮದ್ವೆಗೆ ವಿರೋಧ- ತಂದೆಯಿಂದ್ಲೇ ಮಗಳು ಪೀಸ್ ಪೀಸ್

    ಅಬ್ದುಲ್ 1 ವಾರದ ಹಿಂದೆಯೇ ಪತ್ನಿಯನ್ನು ಕೊಲೆ ಮಾಡಿ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮನೆಯ ಫ್ರಿಜ್‍ನಲ್ಲಿ ಇಟ್ಟಿದ್ದನು. ಅಲ್ಲದೆ, ಅದೇ ಮನೆಯಲ್ಲಿ ತನ್ನ ಇಬ್ಬರು ಮಕ್ಕಳ ಜೊತೆಗೆ ಆರೋಪಿ ವಾಸವಿದ್ದನು. ಸೋಮವಾರ ಬೆಳಗ್ಗೆ ಔರಂಗಾಬಾದಿನ ಅಶೋಕ ನಗರದ ದೊಡ್ಡ ಚರಂಡಿಯಲ್ಲಿ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಮೃತದೇಹಗಳ ಭಾಗಗಳು ಪತ್ತೆಯಾಗಿತ್ತು. ಬೆಳಗ್ಗೆ ಸ್ಥಳೀಯರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದರು. ಇದನ್ನೂ ಓದಿ: ವರದಕ್ಷಿಣೆ ನೀಡದ್ದಕ್ಕೆ ಅಪ್ರಾಪ್ತೆ ಗೆಳತಿಯನ್ನ ಜೀವಂತವಾಗಿ ಸುಟ್ಟ ಪ್ರಿಯಕರ

    ಈ ಸಂಬಂಧ ತನಿಖೆ ನಡೆಸುತ್ತಿದ್ದ ವೇಳೆ ಮುಂಜಾನೆ ಓರ್ವ ವ್ಯಕ್ತಿ ಬಕೆಟ್ ಹಿಡಿದುಕೊಂದು ಇಬ್ಬರು ಮಕ್ಕಳ ಜೊತೆಗೆ ಇಲ್ಲಿಗೆ ಬಂದಿದ್ದ ಎಂದು ಸ್ಥಳೀಯರು ತಿಳಿಸಿದರು. ಆಗ ಪೊಲೀಸ್ ಅಧಿಕಾರಿ ಸೈಯದ್ ಸುಲೆಮನ್ ಘಟನೆ ನಡೆದಿರುವ ಪ್ರದೇಶದ ಸುತ್ತಮುತ್ತಲ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತಾನೇ ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೆ ಸೋಮವಾರ ಮಧ್ಯಾಹ್ನದ ವೇಳೆಗೆ ಮೃತ ದೇಹದ ಇತರೆ ಭಾಗಗಳನ್ನೂ ಸಹ ಪೊಲೀಸರು ಆರೋಪಿ ಮನೆಯಿಂದ ವಶಪಡಿಸಿಕೊಂಡಿದ್ದಾರೆ.

  • ಮನೆ ಮಾಲೀಕನನ್ನೇ  ಫ್ರಿಡ್ಜ್‌ನಲ್ಲಿ ಹೊತ್ತೊಯ್ದ ಕೆಲಸಗಾರ

    ಮನೆ ಮಾಲೀಕನನ್ನೇ ಫ್ರಿಡ್ಜ್‌ನಲ್ಲಿ ಹೊತ್ತೊಯ್ದ ಕೆಲಸಗಾರ

    ನವದೆಹಲಿ: 91 ವರ್ಷದ ವೃದ್ಧ ವ್ಯಕ್ತಿಯನ್ನು ಅವರ ಮನೆಯ ಕೆಲಸದವನ ಸಹಾಯದಿಂದಲೇ ಅಪಹರಿಸಿ, ಫ್ರಿಡ್ಜ್‌ನಲ್ಲಿ ಸಾಗಿಸಿರುವ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ.

    ಕಿಶನ್ ತನ್ನ ಮಾಲೀಕ ಕೃಷ್ಣಾ ಖೋಸ್ಲಾ ಅವರೊಂದಿಗೆ ಅಸಮಾಧಾನಗೊಂಡು ಅವರ ಅಪಹರಣಕ್ಕೆ ಸಹಾಯ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

    ಶನಿವಾರ ಸಂಜೆ, ಗ್ರೇಟರ್ ಕೈಲಾಶ್-2 ಪ್ರದೇಶದ ಖೋಸ್ಲಾ ಅವರ ಮನೆಗೆ ಟೆಂಪೋದಲ್ಲಿ ಇತರ ಐವರೊಂದಿಗೆ ಕಿಶನ್ ಆಗಮಿಸಿ, ತನ್ನ ಯಜಮಾನನನ್ನು ಅಪಹರಿಸಿದ್ದಾನೆ. ಖೋಸ್ಲಾ ಹಾಗೂ ಅವರ ಪತ್ನಿಯನ್ನು ಈ ಆರು ಜನ ಸೇರಿ ಪ್ರಜ್ಞೆ ತಪ್ಪಿಸಿದ್ದು, ನಂತರ ಖೋಸ್ಲಾ ಅವರನ್ನು ಅಪಹರಿಸಿ ಫ್ರಿಡ್ಜ್‌ನಲ್ಲಿ ಕೂಡಿಹಾಕಿಕೊಂಡು ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

    ಕಿಶನ್ ಬಿಹಾರ ಮೂಲವನಾಗಿದ್ದು, ಖೋಸ್ಲಾ ಅವರ ಮನೆಯಲ್ಲಿ ಒಂದು ವರ್ಷದ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದನು. ಕೆಲಸದ ವಿಚಾರದಲ್ಲಿ ಅಸಮಾಧಾನಗೊಂಡು ಅಪಹರಿಸಿದ್ದಾನೆ ಎಂದು ತಿಳಿದು ಬಂದಿದೆ. ಘಟನೆಯಿಂದ ಸ್ಥಳೀಯರು ದಿಗ್ಭ್ರಮೆಗೊಂಡಿದ್ದು, ಈ ಪ್ರದೇಶದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚು ನಡೆಯುತ್ತವೆ. ಆದರೆ ಈ ರೀತಿ ಒಬ್ಬ ವ್ಯಕ್ತಿಯನ್ನು ಅಪಹರಿಸಿ, ಫ್ರಿಡ್ಜ್‌ನಲ್ಲಿ ಕೂಡಿ ಹಾಕಿಕೊಂಡು ಹೋಗಿರುವುದನ್ನು ಕೇಳಿದ್ದು ಇದೇ ಮೊದಲು ಎಂದು ಅಲ್ಲಿನ ನಿವಾಸಿ ಶ್ಯಾಮ್ ಕಲ್ರಾ ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಲು ಹಲವು ಪೊಲೀಸರ ತಂಡವನ್ನು ರಚಿಸಲಾಗಿದೆ.