Tag: fridge

  • ಮನೆಯಲ್ಲಿನ ಫ್ರಿಡ್ಜ್‌ ಸ್ಫೋಟ -ತಪ್ಪಿತು ಭಾರೀ ಅನಾಹುತ

    ಮನೆಯಲ್ಲಿನ ಫ್ರಿಡ್ಜ್‌ ಸ್ಫೋಟ -ತಪ್ಪಿತು ಭಾರೀ ಅನಾಹುತ

    ಬಳ್ಳಾರಿ: ಮನೆಯೊಂದರಲ್ಲಿದ್ದ ಫ್ರಿಡ್ಜ್‌ (Fridge) ಸ್ಫೋಟಗೊಂಡ (Blast) ಘಟನೆ ಕಂಪ್ಲಿ ಪಟ್ಟಣದ ವಾರ್ಡ್ ನಂ 13 ರಲ್ಲಿ ನಡೆದಿದೆ.

    ಶರೀಫ್‌ ಸಾಬ್ ಅವರ ಮನೆಯಲ್ಲಿದ್ದ ಫ್ರಿಡ್ಜ್‌ ಸ್ಫೋಟಗೊಂಡಿದೆ. ಅದೃಷ್ಟವಶಾತ್ ಮನೆಯಲ್ಲಿ (House) ಯಾರು ಇಲ್ಲದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಇದನ್ನೂ ಓದಿ: ರಾಜ್ಯದಲ್ಲಿ ಜಾತಿಗಣತಿಗೆ ದಿನಾಂಕ ಫಿಕ್ಸ್‌ ಸೆ.22ರಿಂದ ಅ.7ರ ವರೆಗೆ ಸಮೀಕ್ಷೆ ನಡೆಸಲು ನಿರ್ಧಾರ

    ರೆಫ್ರಿಜರೇಟರ್ ಸ್ಪೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಪೋಟದಿಂದ ಮನೆ ಗೋಡೆ ಬಿರಕು ಬಿಟ್ಟಿದ್ದು, ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಜೆಸ್ಕಾಂ ಎಇ ವಿನೋದ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ಯಾಸ್‌ ಲೀಕ್‌ ಆಗಿ ಫ್ರಿಡ್ಜ್‌ ಸ್ಫೋಟಗೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

  • ಬೆಂಗಳೂರಲ್ಲಿ ಮಹಿಳೆಯ ಬರ್ಬರ ಹತ್ಯೆ- ಪಶ್ಚಿಮ ಬಂಗಾಳದಲ್ಲಿ ಹಂತಕ ತಲೆಮರೆಸಿಕೊಂಡಿರೋ ಶಂಕೆ

    ಬೆಂಗಳೂರಲ್ಲಿ ಮಹಿಳೆಯ ಬರ್ಬರ ಹತ್ಯೆ- ಪಶ್ಚಿಮ ಬಂಗಾಳದಲ್ಲಿ ಹಂತಕ ತಲೆಮರೆಸಿಕೊಂಡಿರೋ ಶಂಕೆ

    ಬೆಂಗಳೂರು: ವೈಯಾಲಿಕಾವಲ್‌ನಲ್ಲಿ (Vyalikaval) ಮಹಿಳೆಯನ್ನು ಕೊಲೆ ಮಾಡಿ ಪಶ್ಚಿಮ ಬಂಗಾಳದ (West Bengal) ಕಡೆ ಎಸ್ಕೇಪ್ ಆಗಿದ್ದ ಮಾಹಿತಿ ಹಿನ್ನೆಲೆ ಹಂತಕನಿಗಾಗಿ ಪೊಲೀಸರು ತೀವ್ರ ಹುಡಕಾಟ ನಡೆಸುತ್ತಿದ್ದಾರೆ.

    ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿ ಮಹಾಲಕ್ಷ್ಮಿ ಕೊಲೆ ಪ್ರಕರಣ ಹಿನ್ನೆಲೆ, ಪಶ್ಚಿಮ ಬಂಗಾಳದ ಕಡೆ ಎಸ್ಕೇಪ್ ಆಗಿರುವ ಮಾಹಿತಿ ಲಭ್ಯವಾಗಿದೆ. ಹಂತಕನಿಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಿಸಿಟಿವಿ ಪರಿಶೀಲನೆ, ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ಪೊಲೀಸರು ವಿಚಾರಣೆ ಮಾಡಿ ಮಾಹಿತಿ ಪಡೆಯುತ್ತಿದ್ದಾರೆ. ಪೋಸ್ಟ್ ಮಾರ್ಟಂ ವರದಿ, ಮೊಬೈಲ್, ಸೋಷಿಯಲ್ ಮೀಡಿಯಾ ಅಕೌಂಟ್‌ಗಳ ಪರಿಶೀಲನೆ ಸೇರಿ ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಮಠ, ದೇವಾಲಯಗಳನ್ನ ಮುಜರಾಯಿ ಇಲಾಖೆಯಿಂದ ಮುಕ್ತಗೊಳಿಸಬೇಕು: ಮಂತ್ರಾಲಯ ಶ್ರೀ ಒತ್ತಾಯ

    ಪ್ರಕರಣ ಏನು?
    ಮಹಿಳೆಯೊಬ್ಬರನ್ನು ಭೀಕರವಾಗಿ ಕೊಲೆ ಮಾಡಿ 50 ತುಂಡುಗಳನ್ನಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟು ಆರೋಪಿ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ವೈಯಾಲಿಕಾವಲ್‌ನ ವಿನಾಯಕನಗರದಲ್ಲಿ ನಡೆದಿದೆ.
    ಮಹಾಲಕ್ಷ್ಮಿ (29) ಕೊಲೆಯಾದ ಮಹಿಳೆ. ವೈಯಾಲಿಕಾವಲ್‌ನ ಪೈಪ್‌ಲೈನ್ ರಸ್ತೆಯಲ್ಲಿ ಭೀಕರ ಹತ್ಯೆ ನಡೆದಿದೆ. ಮಹಿಳೆಯನ್ನು ಕೊಂದು ನಂತರ ಮೃತದೇಹವನ್ನು ಪೀಸ್ ಪೀಸ್ ಆಗಿ ಕತ್ತರಿಸಿ ಬಳಿಕ ಫ್ರಿಡ್ಜ್‌ನಲ್ಲಿಟ್ಟು ಆರೋಪಿ ಪರಾರಿಯಾಗಿದ್ದಾನೆ. ಹತ್ಯೆ ಬಳಿಕ ಮಾಂಸದ ಗುಡ್ಡೆ ಮಾಡಿ ತರಕಾರಿ ಜೋಡಿಸುವಂತೆ ಮೃತದೇಹದ ಭಾಗಗಳನ್ನು ಫ್ರಿಡ್ಜ್‌ನಲ್ಲಿ ಇರಿಸಿ ಆರೋಪಿ ಎಸ್ಕೇಪ್ ಆಗಿದ್ದಾನೆ. 15 ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ದಸರಾ ಆನೆ ಸೊಂಡಿಲು, ದಂತ ಹಿಡಿದು ರೀಲ್ಸ್ – ಅರಣ್ಯಾಧಿಕಾರಿಗಳ ದಿವ್ಯ ನಿರ್ಲಕ್ಷ್ಯ

    2-3 ತಿಂಗಳಿನಿಂದ ಮಹಿಳೆ ಮನೆಯಲ್ಲಿ ಬಾಡಿಗೆಗಿದ್ದರು. ಸಂಬಂಧಿಕರು ಬೀಗ ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಹಾಲಕ್ಷ್ಮಿ ಬೇರೆ ರಾಜ್ಯದವರಾಗಿದ್ದು, ಕರ್ನಾಟಕದಲ್ಲಿ ನೆಲೆಸಿದ್ದರು. ಗಂಡನಿಂದ ದೂರವಾಗಿದ್ದ ಮಹಾಲಕ್ಷ್ಮಿ ಒಬ್ಬಳೇ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಆರೋಪಿಯ ಪತ್ತೆಗಾಗಿ ತನಿಖೆ ಮುಂದುವರೆದಿದೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭೀಕರ ಅಪಘಾತ – ಮರಕ್ಕೆ ಕಾರು ಡಿಕ್ಕಿ ಹೊಡೆದು ಯುವಕ ಸಾವು

  • ದೇಹವನ್ನ ಪೀಸ್‌ ಪೀಸ್‌ ಮಾಡಿ ತರಕಾರಿ ಜೋಡಿಸಿದಂತೆ ಫ್ರಿಡ್ಜ್‌ನಲ್ಲಿ ತುಂಬಿಟ್ಟಿದ್ದ ಹಂತಕ; ಕ್ರೂರತೆಗೆ ಕೊನೆ ಇಲ್ವಾ?

    ದೇಹವನ್ನ ಪೀಸ್‌ ಪೀಸ್‌ ಮಾಡಿ ತರಕಾರಿ ಜೋಡಿಸಿದಂತೆ ಫ್ರಿಡ್ಜ್‌ನಲ್ಲಿ ತುಂಬಿಟ್ಟಿದ್ದ ಹಂತಕ; ಕ್ರೂರತೆಗೆ ಕೊನೆ ಇಲ್ವಾ?

    – ಮನುಷ್ಯರು ಹೀಗೆ ಮಾಡ್ತಾರಾ ಅಂತರ ಕಣ್ಣೀರಿಟ್ಟ ಮಹಾಲಕ್ಷ್ಮಿ ತಾಯಿ

    ಬೆಂಗಳೂರು: ಕೊಲೆ ಮಾಡಿದ್ಮೇಲೆ ಜೀವನೇ ಇರಲ್ಲ. ಅಂತದ್ರಲ್ಲಿ ದೇಹವನ್ನ ತುಂಡು ತುಂಡಾಗಿ ಕತ್ತರಿಸ್ತಾನೆ ಅಂದ್ರೆ ಹಂತಕನ ಮನಸ್ಸು ಅದೆಷ್ಟು ಕ್ರೂರವಾಗಿರಬೇಕು ಅನ್ನೋದು ಫೋಟೋವೊಂದರಿಂದ ಗೊತ್ತಾಗಿದೆ.

    ಹೌದು. ಗಂಡನಿಂದ ದೂರಾಗಿದ್ದ ಮಹಿಳೆಯನ್ನ (Bengaluru Woman) ಕೊಲೆ ಮಾಡಿ 50 ತುಂಡುಗಳನ್ನಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ತುಂಬಿಟ್ಟಿದ್ದ ಹಂತಕ, ಹಂತಕನ ಈ ಕ್ರೂರತ್ವ ಕುಟುಂಬದವರೇ ಬೆಚ್ಚಿ ಬೆರಗಾಗಿದ್ದಾರೆ. ಈ ಫೋಟೋ ಸಹ ʻಪಬ್ಲಿಕ್‌ ಟಿವಿʼಗೆ ಲಭ್ಯವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೊಲೆಯಾದ ಮಹಿಳೆ ತಾಯಿ ಮೀನಾ, ಮನೆ ಬೀಗ ತೇಗೆದಾಗ ಮಹಾಲಕ್ಷ್ಮಿ ದೇಹ ತುಂಡಾಗಿ ಫ್ರೀಡ್ಜ್‌ನಲ್ಲಿತ್ತು. ಕೊನೆಯದ್ದಾಗಿ ರಕ್ಷಾಬಂಧನ ಹಬ್ಬದಂದು ನೋಡಿದ್ದು, ನನಗೆ ಮನೆ ಓನರ್ ಫೋನ್‌ ಮಾಡಿದ್ರು. ಮನುಷ್ಯರು ಅನ್ನಿಸಿಕೊಂಡವರು ಇಂತಹ ಕೆಲಸ ಮಾಡ್ತಾರಾ? ನನ್ನ ಮಗಳ ಸಾವಿಗೆ ನ್ಯಾಯ ಸಿಗಬೇಕು ಎಂದು ಕಣ್ಣೀರಿಟ್ಟಿದ್ದಾರೆ.

    ಇನ್ನೂ ಮೃತ ಮಹಾಲಕ್ಷ್ಮಿ ಪತಿ ಹೇಮಂತ ಮಾತನಾಡಿ, ಮದುವೆಯಾಗಿ 6 ವರ್ಷ ಆಗಿತ್ತು. ಓನರ್‌ ಈಚೆಗೆ ರೂಂ ನಿಂದ ವಾಸನೆ ಬರ್ತಿದೆ ಅಂತ ಫೋನ್‌ ಮಾಡಿದ್ದರು. ಬಂದು ನೋಡಿದಾಗ ಹೀಗಾಗಿತ್ತು. ಮೂಲತಃ ನೇಪಾಳ ಆದ್ರು ಅವರ ಅಪ್ಪ ಇಲ್ಲೇ ನೆಲೆಸಿದ್ದರು. ಮಹಾಲಕ್ಷ್ಮಿ ಇಲ್ಲೇ ಹುಟ್ಟಿ ಬೆಳೆದವರು. ನಾನು ಬೇರೆ ಇರ್ತಿನಿ ಅಂತ ಹೇಳಿದ್ದರು. ಹಾಗಾಗಿ 9 ತಿಂಗಳಿಂದ ದೂರ ಇದ್ವಿ. ಮಗು ನನ್ನ ಜೊತೆಯೇ ಇದೆ ಎಂದಿದ್ದಾರೆ. ಇದನ್ನೂ ಓದಿ: Bengaluru | ಹೇಗೆ ನಡೆಯುತ್ತೆ ಭೀಕರ ಕೊಲೆಯ ಮರಣೋತ್ತರ ಪರೀಕ್ಷೆ?

    ನಾನು ಮಹಾಲಕ್ಷ್ಮಿ ಜೊತೆಗೆ ಸಂಪರ್ಕದಲ್ಲಿರಲಿಲ್ಲ. ಅಶ್ರಫ್ ಮೇಲೆ ದೂರು ಕೊಟ್ಟಿದ್ದಿನಿ, ಮೇ ತಿಂಗಳಲ್ಲಿ ನನಗೆ ಇವರ ಸಂಬಂಧಧ ಬಗ್ಗೆ ಗೊತ್ತಾಯ್ತು. 25 ದಿನಗಳ ಹಿಂದೆ ನೆಲಮಂಗಲದಲ್ಲಿ ಭೇಟಿ ಮಾಡಿದ್ದೆ, ಆಗ ಕೋಪ ಇರಲಿಲ್ಲ ಎಂದು ಸಹ ತಿಳಿಸಿದ್ದಾರೆ. ಇದನ್ನೂ ಓದಿ:  ನಾಗಮಂಗಲ ಗಲಭೆ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್‌ – ಚಿಕ್ಕಬಳ್ಳಾಪುರದಲ್ಲಿ ಗಣೇಶ ವಿಸರ್ಜನೆಗೆ 600 ಪೊಲೀಸರ ಭದ್ರತೆ

  • Bengaluru | ಹೇಗೆ ನಡೆಯುತ್ತೆ ಭೀಕರ ಕೊಲೆಯ ಮರಣೋತ್ತರ ಪರೀಕ್ಷೆ?

    Bengaluru | ಹೇಗೆ ನಡೆಯುತ್ತೆ ಭೀಕರ ಕೊಲೆಯ ಮರಣೋತ್ತರ ಪರೀಕ್ಷೆ?

    – 10 ದಿನಗಳ ಹಿಂದೆಯೇ ಮೊಬೈಲ್‌ ಸ್ವಿಚ್‌ಆಫ್‌ ಆಗಿತ್ತು; ರಹಸ್ಯ ಸ್ಫೋಟ

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಡೆಡ್ಲಿ ಮರ್ಡರ್‌ವೊಂದು ನಡೆದಿದೆ. 29 ವರ್ಷದ ಮಹಾಲಕ್ಷ್ಮಿ ಎಂಬ ಮಹಿಳೆಯನ್ನ ವ್ಯಕ್ತಿಯೋರ್ವ ರಣಭೀಕರವಾಗಿ ಹತ್ಯೆಗೈದಿದ್ದಾನೆ. ಮಹಿಳೆಯ ಮೃತದೇಹವನ್ನು ಒಂದಲ್ಲ, ಎರಡಲ್ಲ ಬರೋಬ್ಬರಿ 50ಕ್ಕೂ ಹೆಚ್ಚು ಪೀಸ್ ಮಾಡಿ ಫ್ರಿಡ್ಜ್‌ನಲ್ಲಿಟ್ಟಿರುವ (Fridge) ಘಟನೆ ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿದೆ. ನಗರದ ವೈಯಾಲಿಕಾವಲ್‌ನ ಮುನೇಶ್ವರ ಬ್ಲಾಕ್‌ನಲ್ಲಿ ನಡೆದಿರುವ ಈ ಪ್ರಕರಣದಲ್ಲಿ ಒಂದೊಂದೇ ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಿವೆ.

    10 ದಿನಗಳ ಹಿಂದೆಯೇ ಮೊಬೈಲ್‌ ಸ್ವಿಚ್‌ಆಫ್‌:
    ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಹತ್ತು ದಿನಗಳ ಹಿಂದೆಯೇ ಮಹಿಳೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯಾದ ಮಹಾಲಕ್ಷ್ಮಿ ಕಳೆದ ಒಂದು ವಾರದಿಂದ ಕೆಲಸಕ್ಕೆ ಹೋಗಿಲ್ಲ. ವಾಸವಿರುವ ಮನೆಯ ಬಳಿಯೂ ಯಾರ ಕಣ್ಣಿಗೂ ಕಾಣಿಸಿಕೊಂಡಿಲ್ಲ. 10 ದಿನಗಳ ಹಿಂದೆಯೇ ಮಹಾಲಕ್ಷ್ಮಿ ಮೊಬೈಲ್ (Mobile) ಸಹ ಸ್ವಿಚ್‌ಆಫ್‌ ಆಗಿದೆ. ಹಾಗಾಗಿ 10 ದಿನಗಳ ಹಿಂದೆಯೇ ಕೊಲೆಯಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳೆ ಕಗ್ಗೊಲೆ; ದೇಹವನ್ನು ಪೀಸ್ ಪೀಸ್ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟಿದ್ಯಾಕೆ ಹಂತಕ?

    ಬೌರಿಂಗ್ ಆಸ್ಪತ್ರೆಯಲ್ಲಿಂದು ಮರೋಣತ್ತರ ಪರೀಕ್ಷೆ:
    ಮಹಾಲಕ್ಷ್ಮಿ ಮೃತದೇಹ ತುಂಡುಗಳ ಮರಣೋತ್ತರ ಪರೀಕ್ಷೆ ಭಾನುವಾರ (ಇಂದು) ನಗರದ ಬೌರಿಂಗ್‌ ಆಸ್ಪತ್ರೆಯಲ್ಲಿ (Bowring Hospital) ನಡೆಯಲಿದೆ. ಬೆಳಗ್ಗೆ 10 ಘಂಟೆ ಬಳಿಕ ಪೋಸ್ಟ್ ಮಾರ್ಟಂ ಪ್ರಕ್ರಿಯೆ ಶುರುವಾಗಲಿದೆ. ಇದನ್ನೂ ಓದಿ: ಗಾಜಾದಲ್ಲಿ ಹಮಾಸ್ ಉಗ್ರರ ಮೇಲೆ ಇಸ್ರೇಲ್ ದಾಳಿ – 13 ಮಕ್ಕಳು ಸೇರಿ 22 ಮಂದಿ ಸಾವು

    ಹೇಗೆ ನಡೆಯುತ್ತೆ ಭೀಕರ ಕೊಲೆಯ ಪೋಸ್ಟ್ ಮಾರ್ಟಂ?
    1 ಮೊದಲು ಪ್ರತಿ ಪೀಸ್‌ಗೂ ನಂಬರಿಂಗ್ ಮಾಡಲಾಗುತ್ತೆ
    2 ಪ್ರತಿ ಪೀಸ್ಸ್‌ನ ರೆಡಿಯಾಲಿಜಿಕಲ್ ಎಕ್ಸಾಮೀನೇಶನ್ ಮಾಡಲಾಗುತ್ತೆ, ಸಿಟಿ ಸ್ಕ್ಯಾನ್ ಎಕ್ಸರೇ ಹೀಗೆ
    3 ಆಯ್ದ ತುಂಡುಗಳ ಟಾಕ್ಸಿಕಲ್ ಎಕ್ಸಾಮಿನೇಷನ್ ಮಾಡಲಾಗುತ್ತೆ
    4 ಆಯ್ದ ತುಂಡುಗಳ ಪ್ಯಾಥಾಲಿಜಿಕಲ್ ಎಕ್ಸಾಮಿನೇಷನ್ ಮಾಡಲಾಗುತ್ತೆ
    5 DNA ಪರೀಕ್ಷೆ ಮಾಡಲಾಗುತ್ತೆ
    6 ಅವಶ್ಯವಿದ್ದರೆ ಬಾಡಿ ರಿ ಅಸ್ಸೆಂಬಲ್ ಮಾಡಲಾಗುತ್ತೆ
    7 ಅಂತಿಮವಾಗಿ ಕಂಡು ಬಂದ ಅಂಶಗಳ ಕುರಿತು ವರದಿಯನ್ನ ಸಿದ್ಧಪಡಿಸಲಾಗುತ್ತೆ

    ಫ್ರಿಡ್ಜ್‌ನಿಂದ ರಕ್ತ ತೊಟ್ಟಿಕ್ಕುತ್ತಿತ್ತು:
    ದೇಹದ ಪೀಸ್‌ಗಳನ್ನ ನೀಟಾಗಿ ಜೋಡಿಸಿ ಫ್ರಿಡ್ಜ್ ಆನ್ ಮಾಡಿದ್ದ ಕಾರಣ ದೇಹದ ಪೀಸ್‌ಗಳು ಕೊಳೆಯುವ ಹಂತಕ್ಕೆ ಹೋಗಿರಲಿಲ್ಲ. ಬಿಲ್ಡಿಂಗ್‌ಗೆ ಎಫ್‌ಎಸ್‌ಎಲ್ ಟೀಂ ಎಂಟ್ರಿ ಕೊಟ್ಟಾಗ ಮೃತದೇಹದ ದುರ್ವಾಸನೆ ಬರುತ್ತಿತ್ತಂತೆ, ಅಷ್ಟೇ ಅಲ್ಲ ಫ್ರಿಡ್ಜ್‌ನೊಳಗೆ ಇಟ್ಟಿದ್ದ ದೇಹದ ತುಂಡುಗಳಿಂದ ರಕ್ತ ತೊಟ್ಟಿಕ್ಕುತ್ತಿದ್ದವು ಎನ್ನಲಾಗಿದೆ. ಕರೆಂಟ್ ಹೋದಂತ ಸಂಧರ್ಬದಲ್ಲಿ ಒಂದಷ್ಟು ರಕ್ತ ಫ್ರಿಡ್ಜ್ ನಿಂದ ಕೆಳ ಬಿದ್ದಿತ್ತು ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಡಿಸಿಗೆ ಧಮ್ಕಿ ಹಾಕ್ತಿದ್ದಾರೆ, ನಿಮ್ಮ ಗೊಡ್ಡು ಬೆದರಿಕೆಗೆ ಹೆದರಲ್ಲ: ಡಿಕೆಶಿ ಗರಂ

    https://youtu.be/_6AUt6S8aQM?si=-30qMwrG26AuzF7y

  • ಬೆಂಗಳೂರಿನಲ್ಲಿ ಮಹಿಳೆ ಕಗ್ಗೊಲೆ; ದೇಹವನ್ನು ಪೀಸ್ ಪೀಸ್ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟಿದ್ಯಾಕೆ ಹಂತಕ?

    ಬೆಂಗಳೂರಿನಲ್ಲಿ ಮಹಿಳೆ ಕಗ್ಗೊಲೆ; ದೇಹವನ್ನು ಪೀಸ್ ಪೀಸ್ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟಿದ್ಯಾಕೆ ಹಂತಕ?

    ಬೆಂಗಳೂರು: ಬಾಡಿಗೆಮನೆಯಲ್ಲಿ ಒಂಟಿಯಾಗಿ ವಾಸ ಮಾಡುತ್ತಿದ್ದ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದು 30ಕ್ಕೂ ಹೆಚ್ಚು ಪೀಸ್ ಆಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ (Fridge) ಇರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ವಿಷಯಗಳು ಬೆಳಕಿಗೆ ಬರುತ್ತಿವೆ. ಇದೀಗ ಕೊಲೆಗೈದ ಹಂತಕ ಹತ್ಯೆ ಮಾಡಿದ ದಿನ ಮತ್ತು ತಪ್ಪಿಸಿಕೊಳ್ಳಲು ಸಮಯ ಸಿಗುತ್ತದೆ ಎಂಬ ಸಲುವಾಗಿ ಮಹಿಳೆಯನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇರಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

    ಬಿಹಾರ ಮೂಲದ ಮಹಾಲಕ್ಷ್ಮಿ (29) ಕೊಲೆಯಾದ ದುರ್ದೈವಿ. ಈಕೆ ಈ ಮೊದಲು ಗಂಡ ಮತ್ತು 4 ವರ್ಷದ ಮಗುವಿನೊಂದಿಗೆ ನೆಲಮಂಗಲದಲ್ಲಿ ವಾಸವಾಗಿದ್ದಳು. ಕಳೆದ 6 ತಿಂಗಳ ಹಿಂದೆ ಗಂಡ-ಹೆಂಡತಿ ನಡುವೆ ಮನಸ್ಥಾಪ ಉಂಟಾಗಿತ್ತು. ಈ ಹಿನ್ನೆಲೆ ಮಹಾಲಕ್ಷ್ಮಿ ಗಂಡನಿಂದ ದೂರವಾಗಿ 3 ತಿಂಗಳಿನಿಂದ ಒಬ್ಬಂಟಿಯಾಗಿ ಬೆಂಗಳೂರಿನ (Bengaluru) ವೈಯಾಲಿಕಾವಲ್‌ನ (Vyalikaval) ವಿನಾಯಕನಗರದಲ್ಲಿ (Vinayaka Nagara) ಬಾಡಿಗೆ ಮನೆಯಲ್ಲಿದ್ದರು. ಅಲ್ಲದೇ ಪ್ರತಿಷ್ಠಿತ ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಸ್ಥಳೀಯರು ತಿಳಿಸಿದ್ದಾರೆ. ಇಂದು ಆಕೆ ವಾಸವಿದ್ದ ಮನೆಯಿಂದ ವಾಸನೆ ಬರುತ್ತಿದೆ ಎಂದು ಅವರ ಸಂಬಂಧಿಕರು ಬಾಗಿಲು ತೆಗೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಗಾಜಾದಲ್ಲಿ ಹಮಾಸ್ ಉಗ್ರರ ಮೇಲೆ ಇಸ್ರೇಲ್ ದಾಳಿ – 13 ಮಕ್ಕಳು ಸೇರಿ 22 ಮಂದಿ ಸಾವು

    ಮರಣೋತ್ತರ ಪರೀಕ್ಷಾ ವರದಿಯಿಂದ ಕೊಲೆ ನಡೆದ ದಿನಾಂಕ ಹೊರಬರುತ್ತಾ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ದೇಹ ತುಂಡರಿಸಿ ಫ್ರಿಡ್ಜ್‌ನಲ್ಲಿ ಇಟ್ಟಿರುವುದರಿಂದ ಕೊಲೆ ನಡೆದ ದಿನ, ಸಮಯ ಪತ್ತೆ ಹಚ್ಚೋದು ಅಷ್ಟು ಸುಲಭವಲ್ಲ. ಸಾಮಾನ್ಯವಾಗಿ ಸಾವು ಹೇಗಾಯಿತು? ಕೊಲೆ ನಡೆದ ಸಮಯ ಪತ್ತೆ ಹಚ್ಚಲು ಪೋಸ್ಟ್ ಮಾರ್ಟಂ ಮಾಡಲಾಗುತ್ತದೆ. ಆದರೆ ಇಲ್ಲಿ ಹಂತಕನೇ ಮಹಿಳೆಯನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ. ಅಲ್ಲದೇ ದೇಹದ ತುಂಡುಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟಿದ್ದಾನೆ. ಹೀಗಾಗಿ ಯಾವಾಗ ಕೊಲೆಯಾಗಿದೆ ಎಂದು ಪತ್ತೆ ಮಾಡೋದು ಕಷ್ಟ. ಹಂತಕ ಸಿಕ್ಕ ಬಳಿಕವಷ್ಟೇ ಕೊಲೆ ನಡೆದ ದಿನ ಹಾಗೂ ಕೊಲೆಯ ಉದ್ದೇಶ ಪತ್ತೆಯಾಗಬೇಕಿದೆ. ಇದನ್ನೂ ಓದಿ: ಕುಮಾರಸ್ವಾಮಿ ಡಿಸಿಗೆ ಧಮ್ಕಿ ಹಾಕ್ತಿದ್ದಾರೆ, ನಿಮ್ಮ ಗೊಡ್ಡು ಬೆದರಿಕೆಗೆ ಹೆದರಲ್ಲ: ಡಿಕೆಶಿ ಗರಂ

    ಪೊಲೀಸರಿಗೆ ಈ ಕೊಲೆ ತನಿಖೆಯೇ ಚಾಲೆಂಜ್ ಆಗಿದೆ. ಎಷ್ಟು ದಿನದ ಹಿಂದೆ ಕೊಲೆಯಾಗಿದೆ ಎನ್ನುವ ಬಗ್ಗೆ ಖಚಿತತೆ ಇಲ್ಲದಿರುವುದರಿಂದ ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಎಷ್ಟು ದಿನದ ಹಿಂದಿನಿಂದ ಈಕೆ ಹೊರಬಂದಿಲ್ಲ ಎನ್ನುವ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ. ಈಕೆ ಕೆಲಸ ಮಾಡುತ್ತಿದ್ದ ಜಾಗದಲ್ಲೂ ವಿಚಾರಣೆ ನಡೆಸಲಾಗುತ್ತಿದೆ. ಎಷ್ಟು ದಿನದಿಂದ ಕೆಲಸಕ್ಕೆ ಬಂದಿಲ್ಲ? ರಜೆ ಹಾಕುವ ಬಗ್ಗೆ ಮುಂಚಿತವಾಗಿ ಮಾಹಿತಿ ಕೊಟ್ಟಿದ್ರಾ? ಕೆಲಸಗಾರರ ಬಳಿ ಏನಾದ್ರೂ ಹೇಳಿಕೊಂಡಿದ್ರಾ ಹಾಗೂ ಆಕೆಯ ಲಾಸ್ಟ್ ಕಾಲ್ ಬಗ್ಗೆ ಕೂಡ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಟವರ್ ಡಂಪ್ ತೆಗೆದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಮರ್ ಪ್ರೀತ್ ಸಿಂಗ್ ವಾಯುಸೇನಾ ಮುಖ್ಯಸ್ಥರಾಗಿ ನೇಮಕ

    ಕೊಲೆ ಮಾಡಿ ಎಸ್ಕೇಪ್ ಆಗಲು ಹಂತಕ ಮಾಸ್ಟರ್ ಪ್ಲಾನ್ ಮಾಡಿದ್ನಾ ಎಂಬ ಬಗ್ಗೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿದೆ. ಫ್ರಿಜ್‌ನಲ್ಲಿ ಮೃತ ದೇಹದ ತುಂಡು ಕತ್ತರಿಸಿ ಇಟ್ಟರೆ ಅಷ್ಟು ಸುಲಭದಲ್ಲಿ ಗೊತ್ತಾಗಲ್ಲ. ತಪ್ಪಿಸಿಕೊಳ್ಳಲು ಸಮಯ ಸಿಗುತ್ತೆ ಎಂದು ಈ ಪ್ಲಾನ್ ಮಾಡಿದ್ನಾ? 15 ದಿನದ ಹಿಂದೆ ಕೊಲೆ ಆಗಿದ್ದರೂ ಕೂಡ ವಾಸನೆ ಬರೋದಿಲ್ಲ ಎಂದು ಫ್ರಿಡ್ಜ್ ಕೂಡ ಆನ್ ಮಾಡಿ ಇಟ್ಟುಹೋಗಿದ್ನಾ ಎಂಬ ಸಾಕಷ್ಟು ಅನುಮಾನ ಹುಟ್ಟುಕೊಂಡಿವೆ. ತಪ್ಪಿಸಿಕೊಳ್ಳಲು ಸಮಯ ಬೇಕಾಗುತ್ತೆ ಅಂತಲೇ ಈ ರೀತಿ ಮಾಡಿದ್ನಾ ಎಂಬ ಸಂಶಯ ಮೂಡಿದೆ. ಆರೋಪಿಯ ಜಾಡು ಪತ್ತೆ ಮಾಡುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಇದನ್ನೂ ಓದಿ: ಇಂದಿನಿಂದ ಮೋದಿ ಅಮೆರಿಕ ಪ್ರವಾಸ – 2 ಸ್ಟೇಜ್, 400 ಕಲಾವಿದರು

    ಕೊಲೆಯಾದ ಮಹಾಲಕ್ಷ್ಮಿ ಗಂಡ ಹೇಮಂತ್ ದಾಸ್ ಮಗುವಿನೊಂದಿಗೆ ನೆಲಮಂಗಲ ನಗರದ ಲೋಹತ್ ನಗರದಲ್ಲಿ ವಾಸ ಮಾಡುತ್ತಿದ್ದರು. 2023ರ ಡಿಸೆಂಬರ್ 1ರಂದು ಗಂಡ-ಹೆಂಡತಿ ವಿಚಾರದಲ್ಲಿ ಗಲಾಟೆ ನಡೆದು ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸರು ಎನ್‌ಸಿ ದಾಖಲು ಮಾಡಿ ಇಬ್ಬರನ್ನೂ ಕರೆಸಿ ರಾಜಿ ಸಂಧಾನ ಮಾಡಿದ್ದರು. ನಂತರ ಇಬ್ಬರು ಒಟ್ಟಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಪ್ರಾಣಪ್ರತಿಷ್ಠಾಪನೆ ದಿನ ಬಂದಿತ್ತು 300 ಕೆಜಿ ತಿರುಪತಿ ಲಡ್ಡು

    ಹೇಮಂತ್ ದಾಸ್ ನೇಪಾಳ ಮೂಲದವರಾಗಿದ್ದುಪತ್ನಿ ಅಕ್ರಮ ಸಂಬಂಧ ಹೊಂದಿದ್ದ ಬಗ್ಗೆ ಗಂಡನಿಗೆ ಅನುಮಾನವಿತ್ತಾ ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಪತ್ನಿಗೆ ಅನ್ಯ ಸಮುದಾಯದ ಯುವಕನ ಸಂಪರ್ಕ ಇದ್ದ ಬಗ್ಗೆ ಪತಿ ಹೇಮಂತ್ ದಾಸ್ ಎಚ್ಚರಿಕೆ ನೀಡಿದ್ದರು ಎಂಬ ಮಾಹಿತಿ ಲಭಿಸಿದೆ. ಅಲ್ಲದೇ ಪತ್ನಿಗೆ ನೆಲಮಂಗಲದಲ್ಲಿ ಮೊಬೈಲ್ ಅಂಗಡಿ ಕೂಡ ಇಟ್ಟುಕೊಟ್ಟಿದ್ದರು. ನಂತರದಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಸಾಕಷ್ಟು ಬಾರಿ ಗಲಾಟೆ ನಡೆದಿತ್ತು. ಬಳಿಕ ಮಹಾಲಕ್ಷ್ಮಿ ಗಂಡನನ್ನು ತೊರೆದು ಬೆಂಗಳೂರು ನಗರದಲ್ಲಿ ವಾಸವಿದ್ದಳು. ಇದನ್ನೂ ಓದಿ: ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ಲಾಂಚ್ ಆಯ್ತು ಟ್ರೈಲರ್

    ದೇಹದ ತುಂಡುಗಳಿಂದ ಹಂತ ಹಂತವಾಗಿ ರಕ್ತ ಫ್ರಿಜ್‌ನಿಂದ ತೊಟ್ಟಿಕ್ಕಿದೆ. ಬಳಿಕ ರಕ್ತ ತೊಟ್ಟಿಕ್ಕಿ ಗೊಬ್ಬರ ಮಾದರಿ ಆಗಿ ಹುಳ ಆಗಿದೆ. ಸದ್ಯ ಪೊಲೀಸರು ಹಾಗು ಎಫ್‌ಎಸ್‌ಎಲ್ ಮಾಹಿತಿ ಕಲೆಹಾಕುತ್ತಿದ್ದಾರೆ. ಸದ್ಯ ಸಿಕ್ಕಿರುವ ಎಫ್‌ಎಸ್‌ಎಲ್ ಫ್ರೀಜರ್‌ನಿಂದ ದೇಹದ ಪೀಸ್‌ಗಳನ್ನು ಹೊರ ತೆಗೆದು ಎಲ್ಲಾ ಆಯಾಮದಲ್ಲಿ ಸ್ಯಾಂಪಲ್ಸ್ ಕಲೆಹಾಕಿದ್ದಾರೆ. ಮಹಾಲಕ್ಷ್ಮಿ ಜೊತೆ ಓರ್ವ ಯುವಕ ನಿರಂತರ ಸಂಪರ್ಕದಲ್ಲಿದ್ದು, ಪಿಕಪ್ ಡ್ರಾಪ್ ಕೊಡುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಹೀಗಾಗಿ ಆತನ ಮೇಲೆ ಬಲವಾದ ಶಂಕೆ ವ್ಯಕ್ತವಾಗಿದ್ದು, ಆರೋಪಿಯ ಪತ್ತೆಗಾಗಿ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ದೆಹಲಿಯ ನೂತನ ಸಿಎಂ ಆಗಿ ಅತಿಶಿ ಮರ್ಲೆನಾ ಪ್ರಮಾಣವಚನ ಸ್ವೀಕಾರ

  • ಬೆಂಗಳೂರಿನಲ್ಲಿ ಮಹಿಳೆಯ ಬರ್ಬರ ಹತ್ಯೆ – 20ಕ್ಕೂ ಹೆಚ್ಚು ತುಂಡು ಮಾಡಿ ಫ್ರಿಡ್ಜ್‌ನಲ್ಲಿಟ್ಟು ಆರೋಪಿ ಎಸ್ಕೇಪ್

    ಬೆಂಗಳೂರಿನಲ್ಲಿ ಮಹಿಳೆಯ ಬರ್ಬರ ಹತ್ಯೆ – 20ಕ್ಕೂ ಹೆಚ್ಚು ತುಂಡು ಮಾಡಿ ಫ್ರಿಡ್ಜ್‌ನಲ್ಲಿಟ್ಟು ಆರೋಪಿ ಎಸ್ಕೇಪ್

    – ದೆಹಲಿ ಮಾದರಿ ಹತ್ಯೆಗೆ ಬೆಚ್ಚಿದ ಬೆಂಗಳೂರು

    ಬೆಂಗಳೂರು: ಮಹಿಳೆಯೊಬ್ಬರನ್ನು ಭೀಕರವಾಗಿ ಕೊಲೆ ಮಾಡಿ 20ಕ್ಕೂ ಹೆಚ್ಚು ತುಂಡುಗಳನ್ನಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟು (Fridge) ಆರೋಪಿ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ (Bengaluru) ವೈಯಾಲಿಕಾವಲ್‌ನ (Vyalikaval) ವಿನಾಯಕನಗರದಲ್ಲಿ (Vinayaka Nagar) ನಡೆದಿದೆ.

    ಮಹಾಲಕ್ಷ್ಮಿ (29) ಕೊಲೆಯಾದ ಮಹಿಳೆ. ವೈಯಾಲಿಕಾವಲ್‌ನ ಪೈಪ್‌ಲೈನ್‌ ರಸ್ತೆಯಲ್ಲಿ ಭೀಕರ ಹತ್ಯೆ ನಡೆದಿದೆ. ಮಹಿಳೆಯನ್ನು ಕೊಂದು ನಂತರ ಮೃತದೇಹವನ್ನು ಪೀಸ್ ಪೀಸ್ ಆಗಿ ಕತ್ತರಿಸಿ ಬಳಿಕ ಫ್ರಿಡ್ಜ್‌ನಲ್ಲಿಟ್ಟು ಆರೋಪಿ ಪರಾರಿಯಾಗಿದ್ದಾನೆ. ಹತ್ಯೆ ಬಳಿಕ ಮಾಂಸದ ಗುಡ್ಡೆ ಮಾಡಿ ತರಕಾರಿ ಜೋಡಿಸುವಂತೆ ಮೃತದೇಹದ ಭಾಗಗಳನ್ನು ಫ್ರಿಡ್ಜ್‌ನಲ್ಲಿ ಇರಿಸಿ  ಆರೋಪಿ ಎಸ್ಕೇಪ್ ಆಗಿದ್ದಾನೆ. 15 ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಅಮೆರಿಕ ಭಾರತೀಯ ರಾಯಭಾರ ಕಚೇರಿಯಲ್ಲಿ ಅಧಿಕಾರಿ ನಿಗೂಢ ಸಾವು

    2-3 ತಿಂಗಳಿನಿಂದ ಮಹಿಳೆ ಮನೆಯಲ್ಲಿ ಬಾಡಿಗೆಗಿದ್ದರು. ಇಂದು ಸಂಬಂಧಿಕರು ಬೀಗ ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಹಾಲಕ್ಷ್ಮಿ ಬೇರೆ ರಾಜ್ಯದವರಾಗಿದ್ದು, ಕರ್ನಾಟಕದಲ್ಲಿ ನೆಲೆಸಿದ್ದರು. ಗಂಡನಿಂದ ದೂರವಾಗಿದ್ದ ಮಹಾಲಕ್ಷ್ಮಿ ಒಬ್ಬಳೇ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಆದರೆ ಪಿಕಪ್‌ ಡ್ರಾಪ್‌ ಎಂದು ಒಬ್ಬ ಯುವಕ ಆಕೆಯನ್ನು ಕರೆದೊಯ್ಯುತ್ತಿದ್ದ. ಹೀಗಾಗಿ ಆತನೇ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.  ಘಟನಾ ಸ್ಥಳಕ್ಕೆ ವೈಯಾಲಿಕಾವಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯ ಪತ್ತೆಗಾಗಿ ತನಿಖೆ ಮುಂದುವರೆದಿದೆ.  ಇದನ್ನೂ ಓದಿ: ದರೋಡೆ ಗ್ಯಾಂಗ್ ಜೊತೆ ಕೈಜೋಡಿಸಿ 9 ಲಕ್ಷ ಪಡೆದಿದ್ದ ಪೊಲೀಸ್‌ – ಹೆಡ್ ಕಾನ್ಸ್‌ಟೇಬಲ್ ಸೇರಿ 7 ಮಂದಿ ಅರೆಸ್ಟ್‌

    ಕಳೆದ ಎರಡು ವರ್ಷಗಳ ಹಿಂದೆ ದೆಹಲಿಯಲ್ಲೂ ಇದೇ ಮಾದರಿಯ ಘಟನೆಯೊಂದು ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಆರೋಪಿ ಅಫ್ತಾಬ್ ಪೂನಾವಾಲಾ ಎಂಬಾತ ತನ್ನ ಲಿವ್ ಇನ್ ಗೆಳತಿ (Live-In Partner) ಶ್ರದ್ಧಾ ವಾಕರ್‌ನನ್ನು ಹತ್ಯೆ ಮಾಡಿದ್ದ ಘಟನೆ ನಡೆದಿತ್ತು. ಅಫ್ತಾಬ್ ತನ್ನ ಗೆಳತಿ ಶ್ರದ್ಧಾ ವಾಕರ್‌ ಕತ್ತು ಹಿಸುಕಿ ಕೊಲೆ ಮಾಡಿದ ನಂತರ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದ. ನಂತರ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ತನ್ನ ನಿವಾಸದಲ್ಲಿ ಸುಮಾರು 3 ವಾರಗಳ ಕಾಲ 300 ಲೀ. ಫ್ರಿಡ್ಜ್‍ನಲ್ಲಿ ಇರಿಸಿದ್ದ. ನಂತರ ವಿವಿಧೆಡೆ ಬಿಸಾಡಿದ್ದ. ಇದೀಗ ಅದೇ ರೀತಿಯ ಘಟನೆಯೊಂದು ಸಿಲಿಕಾನ್‌ ಸಿಟಿಯಲ್ಲಿ ನಡೆದಿದ್ದು, ಇಡೀ ಬೆಂಗಳೂರು ಜನತೆಯನ್ನು ಬೆಚ್ಚಿಬೀಳುವಂತೆ ಮಾಡಿದೆ.  ಇದನ್ನೂ ಓದಿ: ಮಂಡ್ಯದಲ್ಲಿ ಗಣೇಶ ವಿಸರ್ಜನೆ ವೇಳೆ ಚಾಕು ಇರಿತ

  • ಫ್ರಿಡ್ಜ್ ನಲ್ಲಿ ಪತ್ತೆಯಾಯ್ತು ಖ್ಯಾತ ಮಾಡೆಲ್ ಮೃತದೇಹ

    ಫ್ರಿಡ್ಜ್ ನಲ್ಲಿ ಪತ್ತೆಯಾಯ್ತು ಖ್ಯಾತ ಮಾಡೆಲ್ ಮೃತದೇಹ

    ಚಿತ್ರವಿಚಿತ್ರ ಸಾವಿನ ಪ್ರಕರಣಗಳು ದಾಖಲಾಗುತ್ತಿವೆ. ಅದರಲ್ಲೂ ಫ್ರಿಡ್ಜ್ ಕಂಡರೆ ಭಯವಾಗುತ್ತಿದೆ. ಪ್ರೇಮಿಯೊಬ್ಬ ಫ್ರಿಡ್ಜ್ ನಲ್ಲಿ ತನ್ನ ಪ್ರೇಯಸಿಯ ಮೃತದೇಹ ಇಟ್ಟಿದ್ದ ಪ್ರಕರಣ ಸಾಕಷ್ಟು ಸುದ್ದಿಯಾಗಿತ್ತು. ಇಂಥದ್ದೇ ಪ್ರಕರಣ ಲಾಸ್ ಏಂಜಲೀಸ್ ನಲ್ಲಿ ನಡೆದಿದೆ. ಚಿಕ್ಕ ಪ್ರಾಯದ ಮಾಡೆಲ್ ವೊಬ್ಬರ ಮೃತದೇಹ ಫ್ರಿಡ್ಜ್ (Fridge)ನಲ್ಲಿ ಪತ್ತೆಯಾಗಿದೆ.

    ಲಾಸ್ ಏಂಜಲೀಸ್ (Los Angeles) ನ ಹೆಸರಾಂತ ಮಾಟೆಲ್ ಮಲೀಸಾ ಮೂನಿಯಾ (Maleesa Mooney) ಮೃತದೇಹ ಫ್ರಿಡ್ಜ್ ನಲ್ಲಿ ಪತ್ತೆಯಾಗಿದೆ. ಕೈ ಕಾಲುಗಳನ್ನು ಬಿಗಿಯಾಗಿ ಕಟ್ಟಿದ ಸ್ಥಿತಿಯಲ್ಲಿ ಮಲೀಸಾ ದೇಹ ಪತ್ತೆಯಾಗಿದ್ದು, ಸಾವಿಗೆ ಕಾರಣ ಮಾತ್ರ ನಿಗೂಢವಾಗಿದೆ. ಈ ಸಮಯದಲ್ಲಿ ಮಲೀಸಾ ಎರಡು ತಿಂಗಳ ಗರ್ಭಿಣಿ ಎಂದು ಹೇಳಲಾಗುತ್ತಿದೆ.

     

    ಶವಪರೀಕ್ಷೆಯ ವರದಿ ಬಹಿರಂಗವಾಗಿದ್ದು, ಮಲೀಸಾ ದೇಹದ ಮೇಲೆ ಗಾಯದ ಗುರುತುಗಳು ಕಾಣಿಸಿವೆ. ಭೀಕರವಾಗಿಯೇ ಮಲೀಸಾ ಸಾವನ್ನಪ್ಪಿದ್ದಾರೆ. ಪೊಲೀಸರು ತನಿಖೆಯನ್ನು ಚುರುಕುಗೊಳಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫ್ರಿಡ್ಜ್‌ನ ಕಂಪ್ರೆಸರ್ ಸ್ಫೋಟ – ಒಂದೇ ಕುಟುಂಬದ ಐವರು ಸಾವು!

    ಫ್ರಿಡ್ಜ್‌ನ ಕಂಪ್ರೆಸರ್ ಸ್ಫೋಟ – ಒಂದೇ ಕುಟುಂಬದ ಐವರು ಸಾವು!

    ಚಂಡೀಗಢ: ಮನೆಯೊಂದರಲ್ಲಿ ಫ್ರಿಡ್ಜ್‌ನ (Fridge) ಕಂಪ್ರೆಸರ್ (Compressor) ಸ್ಫೋಟಗೊಂಡು (Blast) ಮೂವರು ಮಕ್ಕಳು ಸೇರಿಂತೆ ಒಂದೇ ಕುಟುಂಬದ ಒಟ್ಟು ಐವರು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಪಂಜಾಬ್‌ನ (Punjab) ಜಲಂಧರ್‌ನಲ್ಲಿ (Jalandhar) ನಡೆದಿರುವುದಾಗಿ ಸೋಮವಾರ ಪೊಲೀಸರು ತಿಳಿಸಿದ್ದಾರೆ.

    ದುರ್ಘಟನೆ ಭಾನುವಾರ ರಾತ್ರಿ ನಡೆದಿದ್ದು, ಸ್ಫೋಟದಿಂದಾಗಿ ಇಡೀ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಮೃತರನ್ನು ಯಶಪಾಲ್ ಘಾಯ್ (70), ರುಚಿ ಘಾಯ್ (40), ಮನ್ಶಾ (14), ದಿಯಾ (12) ಮತ್ತು ಅಕ್ಷಯ್ (10) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಇಸ್ರೇಲ್‍ನಲ್ಲಿ ಸಿಲುಕಿದ್ದ 18,000 ಭಾರತೀಯರು ಸೇಫ್

    ಸ್ಫೋಟಕ್ಕೆ ನಿಖರವಾದ ಕಾರಣ ಕಂಡುಹಿಡಿಯಲು ಮಾದರಿಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಜ್ಞರ ತಂಡವನ್ನು ಸ್ಥಳಕ್ಕೆ ಕರೆಯಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್ – 7 ಮಂದಿ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಒಂದು ಫ್ರಿಡ್ಜ್‌ಗಾಗಿ 7 ತಿಂಗಳ ಗರ್ಭಿಣಿಯ ಜೀವವೇ ಹೋಯ್ತು!

    ಒಂದು ಫ್ರಿಡ್ಜ್‌ಗಾಗಿ 7 ತಿಂಗಳ ಗರ್ಭಿಣಿಯ ಜೀವವೇ ಹೋಯ್ತು!

    ಪಾಟ್ನಾ: ಮದುವೆ ಸಂದರ್ಭದಲ್ಲಿ ವರದಕ್ಷಿಣೆಯಾಗಿ (Dowry) ಫ್ರಿಡ್ಜ್ ಗಿಫ್ಟ್ (Refrigerator Gift) ಕೊಟ್ಟಿಲ್ಲವೆಂದು 7 ತಿಂಗಳ ಗರ್ಭಿಣಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆಯೊಂದು ಬಿಹಾರದ ಪೂರ್ನಿಯಾದಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಅಂಗೂರಿ ಬೇಗಂ (30) ಎಂದು ಗುರುತಿಸಲಾಗಿದೆ. ಈಕೆ 2012ರಲ್ಲಿ ಮೊಮಿನತ್ ಅಲಾಂ ಎಂಬಾತನನ್ನು ಮದುವೆಯಾಗಿದ್ದು, ನಾಲ್ವರು ಮಕ್ಕಳಿದ್ದರು. ಇದೀಗ ಅಂಗೂರಿ ಮತ್ತೆ ಗರ್ಭಿಣಿಯಾಗಿದ್ದು, ಸದ್ಯ ಈಕೆಯನ್ನು ಬಾಮೈದರೇ ಕೊಲೆ ಮಾಡಿದ್ದಾರೆ.

    ಕೊಲೆ ನಡೆದ ಬೆನ್ನಲ್ಲೇ ಅಂಗೂರಿ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲಿಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ ಇದಕ್ಕೂ ಮುನ್ನವೇ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇದನ್ನೂ ಓದಿ: ಸೆಲ್ಫಿ ಹುಚ್ಚು – ಕಾಲು ಜಾರಿ ನದಿಯಲ್ಲಿ ಕೊಚ್ಚಿಹೋಗಿ ವ್ಯಕ್ತಿ ಸಾವು

    ಅಂಗೂರಿ ಮೃತದೇಹವನ್ನು ಪೊಲೀಸರು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆಂದು ರವಾನಿಸಿದ್ದಾರೆ. ಈ ವೇಳೆ ಆಕೆ 7 ತಿಂಗಳ ಗರ್ಭಿಣಿ ಎಂಬುದು ಬಯಲಾಗಿದ್ದು, ನಂತರ ಮೃತದೇಹವನ್ನು ಆಕೆಯ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

    ಮಹಿಳೆಯನ್ನು ಥಳಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಡುವೆ ಅಂಗೂರಿ ಸಹೋದರ ಪ್ರತಿಕ್ರಿಯಿಸಿ, ಒಂದು ಫ್ರಿಡ್ಜ್‍ಗೋಸ್ಕರ ನನ್ನ ಸಹೋದರಿಯ ಕೊಲೆಯಾಗಿದೆ. ಇದಕ್ಕೂ ಮುನ್ನ ಪತಿ ಹಾಗೂ ಆತನ ಸಹೋದರರಿಂದ ದೈಹಿಕ ಹಿಂಸೆಯನ್ನು ಕೂಡ ಆಕೆ ಅನುಭವಿಸಿದ್ದಳು ಎಂದು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಮಹಿಳೆಯನ್ನು ಕೊಲೆಗೈದು ದೇಹದ ಭಾಗಗಳನ್ನು ಫ್ರಿಡ್ಜ್‌ನಲ್ಲಿಟ್ಟ!

    ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಮಹಿಳೆಯನ್ನು ಕೊಲೆಗೈದು ದೇಹದ ಭಾಗಗಳನ್ನು ಫ್ರಿಡ್ಜ್‌ನಲ್ಲಿಟ್ಟ!

    ಹೈದರಾಬಾದ್: ವ್ಯಕ್ತಿಯೊಬ್ಬ ತನ್ನ ಮಹಿಳಾ ಪಾರ್ಟ್‌ ನರ್‌ಳನ್ನು ಬರ್ಬರವಾಗಿ ಕೊಲೆ ಮಾಡಿ, ದೇಹವನ್ನು ಪೀಸ್ ಪೀಸ್ ಮಾಡಿ ಫ್ರಿಡ್ಜ್ (Body Fridge) ನಲ್ಲಿಟ್ಟ ಆಘಾತಕಾರಿ ಘಟನೆ ನಡೆದಿರುವುದು ಹೈದರಾಬಾದ್‍ (Hyderabad Woman Murder)  ನಲ್ಲಿ ಬೆಳಕಿಗೆ ಬಂದಿದೆ.

    ಮೃತಳನ್ನು ಅನುರಾಧ ರೆಡ್ಡಿ(55) ಎಂದು ಗುರುತಿಸಲಾಗಿದೆ. ಈಕೆಯನ್ನು ಚಂದ್ರ ಮೋಹನ್(48) ಕೊಲೆ ಮಾಡಿದ್ದಾನೆ. ಸದ್ಯ ಈತನನ್ನು ಪೊಲೀಸರು ಬಂಧಿಸಿದ್ದಾರೆ. ಅನುರಾಧಳನ್ನು ಆರೋಪಿ ಚಂದ್ರ ಮೋಹನ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ನಂತರ ಆಕೆಯ ದೇಹವನ್ನು ವಿಲೇವಾರಿ ಮಾಡುವ ಸಲುವಾಗಿ ಹಲವು ತುಂಡುಗಳನ್ನಾಗಿ ಕತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೇ 17ರಂದು ಮೂಸಿ ನದಿ ಸಮೀಪವಿರುವ ಅಫ್ಜಲ್ ನಗರದ ಸಮುದಾಯ ಭವನದ ಬಳಿ ಇರುವ ತೀಗಲ್‍ಗಢ ಪ್ರದೇಶದಲ್ಲಿ ಕಪ್ಪು ಕವರಿನಲ್ಲಿ ಮಹಿಳೆಯೊಬ್ಬರ ತಲೆ ಪತ್ತೆಯಾಗಿತ್ತು. ಇದನ್ನು ಪೌರ ಕಾರ್ಮಿಕರೊಬ್ಬರು ಗಮನಿಸಿದ್ದು ನಂತರ ಪೊಲೀಸರಿಗೆ ದೂರು ನೀಡಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು 8 ತಂಡಗಳನ್ನು ರಚಿಸಿ ತನಿಖೆಗೆ ಇಳಿದರು. ಈ ವೇಳೆ ಆರೋಪಿ ಸಿಕ್ಕಿಬಿದ್ದಿದ್ದಾನೆ. ಬಳಿಕ ಆತನನ್ನು ವಿಚಾರಣೆ ನಡೆಸಿದಾಗ ಆರೋಪಿ ಚಂದ್ರ ಮೋಹನ್ ಹಾಗೂ ಮೃತ ಮಹಿಳೆ ಅನುರಾಧ ರೆಡ್ಡಿ ನಡುವೆ ಅಕ್ರಮ ಸಂಬಂಧ ಇರುವುದು ಬಯಲಾಗಿದೆ ಎಂದು ಆಗ್ನೇಯ ವಲಯ ಡಿಸಿಪಿ ರೂಪೇಶ್ ತಿಳಿಸಿದ್ದಾರೆ.

    2018ರಲ್ಲಿ ಅನುರಾಧಗೆ ಚಂದ್ರ ಮೋಹನ್ ತನ್ನ ಮನೆಯ ನೆಲ ಮಹಡಿಯಲ್ಲಿ ವಾಸಿಸಲು ಜಾಗ ನೀಡಿದ್ದಾನೆ. ಈ ವೇಳೆ ಆರೋಪಿ ಮೃತಳಿಂದ 7 ಲಕ್ಷ ರೂ. ಹಣವನ್ನು ಪಡೆದು ಹಿಂದಿರುಗಿಸದೆ ಆಟವಾಡಿಸುತ್ತಿದ್ದ. ಮಹಿಳೆ ಹಣ ನೀಡುವಂತೆ ಚಂದ್ರಮೋಹನ್ ನನ್ನು ಪೀಡಿಸುತ್ತಿದ್ದಳು. ಮಹಿಳೆಯ ಒತ್ತಡದಿಂದ ಸಿಟ್ಟಿಗೆದ್ದ ಚಂದ್ರಮೋಹನ್ ಆಕೆಯನ್ನು ಮುಗಿಸುವ ಚಿಂತನೆ ಮಾಡಿದ್ದಾನೆ. ಅಂತೆಯೇ ಮೇ 12ರಂದು ಹಣ ಹಿಂದಿರುಗಿಸುವ ನೆಪದಲ್ಲಿ ಆರೋಪಿ, ಮೃತಳ ಜೊತೆ ಗಲಾಟೆ ತೆಗೆದಿದ್ದಾನೆ. ಇದನ್ನೂ ಓದಿ: ಪತ್ನಿ ಜೊತೆ ಅನೈತಿಕ ಸಂಬಂಧ ಶಂಕೆ – ಪಾರ್ಟಿ ನೆಪದಲ್ಲಿ ಸ್ನೇಹಿತನ ಮರ್ಡರ್

    ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಮನ ಬಂದಂತೆ ಇರಿದು ಹತ್ಯೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಸಾಗಿಸುವ ಸಲುವಾಗಿ ಆರೋಪಿಯೂ ಕಲ್ಲು ಕತ್ತರಿಸುವ 2 ಮೆಷಿನ್‍ಗಳನ್ನು ಖರೀದಿಸಿದ್ದಾನೆ. ನಂತರ ದೇಹದ ಭಾಗಗಳನ್ನ ಮನಬಂದಂತೆ ತುಂಡರಿಸಿ ಪ್ಲಾಸ್ಟಿಕ್ ಕವರಿನಲ್ಲಿ ತುಂಬಿಸಿ ನಗರದ ವಿವಿಧೆಡೆ ಎಸೆದಿದ್ದಾನೆ.

    ಇಷ್ಟೇ ಅಲ್ಲದೆ ಮೃತಳ ಕೈ-ಕಾಲುಗಳನ್ನು ಫ್ರಿಡ್ಜ್‍ನಲ್ಲಿ ಇರಿಸಿದ್ದಾನೆ. ಉಳಿದ ಭಾಗಗಳನ್ನು ಬಿಸಾಕಲೆಂದು ಸೂಟ್‍ಕೇಸ್ ಕೂಡ ತಂದಿದ್ದಾನೆ. ಬಳಿಕ ಅನುರಾಧ ಮೊಬೈಲ್‍ನಿಂದ ಆಕೆಯ ಪರಿಚಯಸ್ಥರಿಗೆ ಮೆಸೇಜ್ ಮಾಡಿ ಜೀವಂತ ಇರುವುದಾಗಿ ನಂಬುವಂತೆ ಮಾಡಿದ್ದ. ಇನ್ನು ಮೃತ ದೇಹದಿಂದ ದುರ್ವಾಸನೆ ಬರದಂತೆ ಅದರ ಮೇಲೆ ವಿವಿಧ ದ್ರವಗಳನ್ನು ಸಿಂಪಡಿಸಿದ್ದಾನೆ ಎಂದು ರೂಪೇಶ್ ವಿವರಿಸಿದ್ದಾರೆ.