Tag: Fresh salt

  • ಸಿರಿಧಾನ್ಯದಲ್ಲಿ ಒಂದಾದ ‘ನವಣೆ ಉಪ್ಪಿಟ್ಟು’ ಮಾಡಿ

    ಸಿರಿಧಾನ್ಯದಲ್ಲಿ ಒಂದಾದ ‘ನವಣೆ ಉಪ್ಪಿಟ್ಟು’ ಮಾಡಿ

    ವಣೆ ‘ಸಿರಿಧಾನ್ಯ’ಗಳಲ್ಲಿ ಒಂದು. ನವಣೆಯಲ್ಲಿ ಹೆಚ್ಚು ಕೊಬ್ಬಿನಂಶ ಇರುವುದಿಲ್ಲ. ಅದಕ್ಕೆ ಇದು ಡಯಟ್ ಫುಡ್‍ಗೆ ಹೆಚ್ಚು ಫೇಮಸ್. ಇತ್ತೀಚೆಗೆ ನವಣೆಯಲ್ಲಿ ಮಾಡಿದ ಆಹಾರಗಳು ರೆಸ್ಟೋರೆಂಟ್‌ನಿಂದ ಹಿಡಿದು ಬೀದಿ ವ್ಯಾಪಾರ ಮಾಡುವವರೆಗೂ ಸಿಗುತ್ತೆ. ಕೊರೊನಾ ನಂತರ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿದ್ದು, ಆರೋಗ್ಯಕರ ಆಹಾರಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಅದಕ್ಕೆ ಇಂದು ನೀವು ʼನವಣೆ ಉಪ್ಪಿಟ್ಟುʼ ಮಾಡಿ ಸವಿಯಿರಿ.

    ಬೇಕಾಗಿರುವ ಪದಾರ್ಥಗಳು:
    * ನವಣೆ – 1 ಕಪ್
    * ನೀರು – 2.5 ಕಪ್
    * ಸಾಸಿವೆ – 1/2 ಟೀಸ್ಪೂನ್
    * ಉದ್ದಿನ ಬೇಳೆ – 1 ಟೀಸ್ಪೂನ್
    * ಬೇಳೆ – 1 ಟೀಸ್ಪೂನ್
    * ಕಟ್ ಮಾಡಿದ ಈರುಳ್ಳಿ – 1 ಕಪ್


    * ಕಟ್ ಮಾಡಿದ ಟೊಮೆಟೊ – 1 ಕಪ್
    * ಹಸಿರು ಮೆಣಸಿನಕಾಯಿ – 2
    * ಕರಿಬೇವಿನ ಎಲೆಗಳು – 4-5
    * ಸಣ್ಣದಾಗಿ ಕಟ್ ಮಾಡಿದ ಶುಂಠಿ – 1 ಟೀಸ್ಪೂನ್
    * ಕಟ್ ಮಾಡಿದ ಕ್ಯಾರೆಟ್ – ಅರ್ಧ ಕಪ್
    * ಕಟ್ ಮಾಡಿದ ಬೀನ್ಸ್ – ಅರ್ಧ ಕಪ್
    * ನೆನೆಸಿದ ಹಸಿರು ಬಟಾಣಿ – ಅರ್ಧ ಕಪ್
    * ಅರಿಶಿನ ಪುಡಿ – 1/4 ಟೀಸ್ಪೂನ್
    * ಅಡುಗೆ ಎಣ್ಣೆ – 6-8 ಟೀಸ್ಪೂನ್
    * ಉಪ್ಪು – 1 ಟೀಸ್ಪೂನ್
    * ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    * ತುರಿದ ತೆಂಗಿನಕಾಯಿ – 1/4 ಕಪ್

    ಮಾಡುವ ವಿಧಾನ:
    * ನವಣೆಯನ್ನು ನೀರಿನಲ್ಲಿ ತೋಳೆದು, ಸ್ವಲ್ಪ ಸಮಯ ನೆನೆಹಾಕಿ.
    * ಕ್ಯಾರೆಟ್, ಬೀನ್ಸ್ ಮತ್ತು ಬಟಾಣಿಯನ್ನು ಕುಕ್ಕರ್‍ನಲ್ಲಿ ಬೇಯಿಸಿ.
    * ನಂತರ ಒಂದು ಬಾಣಲಿಗೆ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಸಾಸಿವೆ ಕಾಳು, ಉದ್ದಿನಬೇಳೆ ಮತ್ತು ಬೇಳೆಯನ್ನು ಹಾಕಿ ಫ್ರೈ ಮಾಡಿ. ಅದಕ್ಕೆ ಟೊಮೊಟೊ, ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ ಮಧ್ಯಮ ಉರಿಯಲ್ಲಿ ಬೇಯಿಸಿ.


    * ಬೇಳೆ ಕಂದು ಬಣ್ಣಕ್ಕೆ ತಿರುಗಿದಾಗ ಕರಿಬೇವಿನ ಎಲೆಗಳು, ಕತ್ತರಿಸಿದ ಶುಂಠಿ ಮತ್ತು ಕಟ್ ಮಾಡಿದ ಹಸಿರು ಮೆಣಸಿನಕಾಯಿ ಸೇರಿಸಿ. ಇತರ ಎಲ್ಲ ತರಕಾರಿಗಳನ್ನು ಸೇರಿಸಿ. ಸ್ವಲ್ಪ ಹೊತ್ತು ಹುರಿಯಿರಿ.
    * ಅರಿಶಿನ ಪುಡಿಯಲ್ಲಿ ಸೇರಿಸಿ. ಕೆಲವು ನಿಮಿಷಗಳ ಕಾಲ ಫ್ರೈ ಮಾಡಿ ನೀರಿನ್ನು ಸೇರಿಸಿ.
    * ಈ ಫ್ರೈಗೆ ನೆನೆಸಿದ ನವಣೆ ಮತ್ತು ಉಪ್ಪು ಸೇರಿ ಸರಿಯಾಗಿ ಮಿಶ್ರಣ ಮಾಡಿ ತಟ್ಟೆಯನ್ನು ಅದರ ಮೇಲೆ ಮುಚ್ಚಿ. ಮಧ್ಯಮ ಉರಿಯಲ್ಲಿ ಬೇಯಿಸಿ.
    * ನವಣೆ ಉಪ್ಪಿಟ್ಟು ತಯಾರಾದ ನಂತರ ತೆಂಗಿನಕಾಯಿ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ. 2 ಟೀಸ್ಪೂನ್ ನಿಂಬೆ ರಸ ಮಿಶ್ರಣ ಮಾಡಿ.