Tag: fresh

  • ಬೆಣ್ಣೆನಗರಿಯಲ್ಲಿ ನಾನ್ ವೆಜ್ ಸ್ಟಾಲ್‍ಗಳು ಖಾಲಿ ಖಾಲಿ.. ಏಕೆ ಗೊತ್ತಾ?

    ಬೆಣ್ಣೆನಗರಿಯಲ್ಲಿ ನಾನ್ ವೆಜ್ ಸ್ಟಾಲ್‍ಗಳು ಖಾಲಿ ಖಾಲಿ.. ಏಕೆ ಗೊತ್ತಾ?

    ದಾವಣಗೆರೆ:  ಯುಗಾದಿ ಹಬ್ಬದ ಹೊಸ ತೊಡಕಿನ ಹಿನ್ನೆಲೆಯಲ್ಲಿ ಮಾಂಸ ಮಾರಾಟ ಸ್ಥಳಗಳು ಗಿಜಿಗುಡುತ್ತವೆ. ಆದರೆ ಬೆಣ್ಣೆನಗರಿ ದಾವಣಗೆರೆಯಲ್ಲಿ ಮಾತ್ರ ಮಟನ್, ಚಿಕನ್ ಮಾರುಕಟ್ಟೆಗಳು ಸಂಪೂರ್ಣ ಖಾಲಿ ಖಾಲಿಯಾಗಿವೆ.

    ಬೆಳಗ್ಗೆ 8 ಗಂಟೆಯಾದರೂ ಜನರು ಮಟನ್, ಚಿಕನ್ ಖರೀದಿಗೆ ಆಗಮಿಸಿಲ್ಲ. ನಿನ್ನೆ ಚಂದ್ರ ದರ್ಶನವಾಗಿದ್ದರೆ ಇಂದು ನಾನ್ ವೆಜ್ ಮಾಡುತ್ತಿದ್ದರು. ಆದರೆ ಚಂದ್ರ ದರ್ಶನವಾಗದ ಹಿನ್ನೆಲೆ ಇಂದು ಕೂಡ ಸಿಹಿ ಮಾಡಿ ಇಂದು ಚಂದ್ರ ದರ್ಶನವಾದರೆ ನಾಳೆ ನಾನ್ ವೆಜ್ ಮಾಡುತ್ತಾರೆ.

    ಈ ಬಗ್ಗೆ ಇಲ್ಲಿನ ಮಟನ್ ವ್ಯಾಪಾರಸ್ಥರು ಮಾತನಾಡಿ, ಜಟ್ಕಾ ಕಟ್, ಹಲಾಲ್ ವಿವಾದ ಇಲ್ಲಿ ಇಲ್ಲ. ಮುಂದೆ ಹೇಗೆ ಬರುತ್ತೋ ನೋಡಿಕೊಂಡು ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಇಲ್ಲಿಯವರೆಗೂ ಯಾವುದೇ ಆ ರೀತಿಯ ವಿವಾದ ಇಲ್ಲಿಗೆ ಬಂದಿಲ್ಲ. ಎಲ್ಲರೂ ಕೂಡ ಸೌಹಾರ್ದಯುತವಾಗಿ ವ್ಯಾಪಾರ ವಹಿವಾಟು ನಡೆಸುತ್ತಿದ್ದೇವೆ ಎಂದರು. ಇದನ್ನೂ ಓದಿ: ಹಲಾಲ್ ಕಟ್, ಜಟ್ಕಾಕಟ್ ಫೈಟ್ ನಡುವೆಯೇ ಹೊಸ ತೊಡಕಿಗೆ ಮಾಂಸ ಖರೀದಿ ಜೋರು

    ಚಿಕನ್ ಸ್ಟಾಲ್‍ಗಳು ಕೂಡ ಸಂಪೂರ್ಣ ಖಾಲಿ ಖಾಲಿಯಾಗಿವೆ. ಕೆಲ ಚಿಕನ್ ಅಂಗಡಿಗಳನ್ನು ಮುಚ್ಚಿದ್ದಾರೆ. ಪ್ರತಿವರ್ಷ ಕಾಲಿಡಲು ಕೂಡ ಜಾಗ ಇರುತ್ತಿರಲಿಲ್ಲ. ಆದರೆ ಈ ಬಾರಿ ಖಾಲಿ ಖಾಲಿಯಾಗಿದೆ. ನಾಳೆ ಏನಾದರೂ ವ್ಯಾಪಾರ ವಹಿವಾಟು ಆಗಬಹುದೆಂಬ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: 13ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

  • ಹಲಾಲ್ ಕಟ್, ಜಟ್ಕಾಕಟ್ ಫೈಟ್ ನಡುವೆಯೇ ಹೊಸ ತೊಡಕಿಗೆ ಮಾಂಸ ಖರೀದಿ ಜೋರು

    ಹಲಾಲ್ ಕಟ್, ಜಟ್ಕಾಕಟ್ ಫೈಟ್ ನಡುವೆಯೇ ಹೊಸ ತೊಡಕಿಗೆ ಮಾಂಸ ಖರೀದಿ ಜೋರು

    ಬೆಂಗಳೂರು: ಯುಗಾದಿ ಹಬ್ಬದ ಹೊಸ ತೊಡಕಿನ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಮಾಂಸ ಮಾರಾಟ ಜೋರಾಗಿದೆ. ಮಾಂಸದ ಮಳಿಗೆಗಳಲ್ಲಿ ಜನರ ದಂಡೇ ನೆರೆದಿದೆ. ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ವಿವಾದದ ಮಧ್ಯೆಯೇ ಈ ಬಾರಿ ಮಾಂಸ ಮಾರಾಟ ಭರ್ಜರಿಯಾಗಿ ಸಾಗಿದೆ.

    ಬೆಂಗಳೂರು, ಮೈಸೂರು, ತುಮಕೂರು, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಧ್ಯರಾತ್ರಿಯಿಂದಲೇ ಮಾಂಸ ಮಾರಾಟ ಅಂಗಡಿಗಳಲ್ಲಿ ಸಿದ್ಧತೆ ನಡೆದಿತ್ತು. ಬೆಳಗ್ಗೆ ಮಾಂಸದಂಗಡಿಗಳತ್ತ ಜನರ ದಂಡು ಬರಲಾರಂಭಿಸಿತು. ಸರತಿ ಸಾಲಿನಲ್ಲಿ ನಿಂತು ಮಾಂಸ ಖರೀದಿಗೆ ಮುಗಿಬಿದ್ದಿರುವ ದೃಶ್ಯ ಸಾಮಾನ್ಯವಾಗಿತ್ತು. ಇದನ್ನೂ ಓದಿ: ಬೀದಿಬದಿ ಮಾಂಸಾಹಾರ ಮಾರಾಟಕ್ಕೆ ನಿರ್ಬಂಧ: ಗುಜರಾತ್‌ ಸಿಎಂ ಸಮರ್ಥನೆ 

    NONVEG

    ಬೆಂಗಳೂರಿನ ಯಶವಂತ ಮಾರುಕಟ್ಟೆ, ಮೈಸೂರಿನ ಪಾಪಣ್ಣ ಮಟನ್ ಸ್ಟಾಲ್, ಕೆ.ಜಿ.ಕೊಪ್ಪಲಿನಲ್ಲಿ ಗುಡ್ಡೆ ಮಾಂಸ ಖರೀದಿ, ತುಮಕೂರಿನ ಹಿಂದೂ ಮೀಟ್ ಮಾರ್ಟ್ ಸೇರಿದಂತೆ ವಿವಿಧ ಜಿಲ್ಲೆಯ ಪ್ರಮುಖ ಮಾರುಕಟ್ಟೆಗಳಲ್ಲಿ ಮಾಂಸ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಕೆಲ ಮಳಿಗೆಗಳಲ್ಲಿ ಹಲಾಲ್ ಕಟ್, ಜಟ್ಕಾ ಕಟ್ ಎಂಬ ಬೋರ್ಡ್‍ಗಳನ್ನೂ ಹಾಕಿದ್ದು, ಜಟ್ಕಾಕಟ್‍ಗೆ ಬೇಡಿಕೆ ಹೆಚ್ಚಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದಲೂ ನಿರಾಶೆಗೊಂಡಿದ್ದ ವ್ಯಾಪಾರಿಗಳ ಮೊಗದಲ್ಲೂ ಹರುಷ ತುಂಬಿದೆ. ಬರುವ ಗ್ರಾಹಕರಿಗೆ ಸಂತಸದಿಂದಲೇ ಮಾಂಸ ನೀಡಿ ಗಲ್ಲಾ ಪೆಟ್ಟಿಗೆ ತುಂಬಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಹನುಮ ಹುಟ್ಟಿದ ದಿನ ಗೊತ್ತಾ, ಸುಮ್ನೆ ತಿನ್ಲಾ- ಮಾಂಸಾಹಾರ ಭೋಜನ ಸವಿದ ಸಿದ್ದು

    NONVEG

    ದಾವಣಗೆರೆಯಲ್ಲಿ ವ್ಯಾಪಾರಿಗಳಿಗೆ ನಿರಾಶೆ
    ಯುಗಾದಿ ಹಬ್ಬದಂದು ಚಂದ್ರದರ್ಶನವಾಗದ ಹಿನ್ನಲೆಯಲ್ಲಿ ದಾವಣೆಗೆರೆ ಜಿಲ್ಲೆಯ ಜನರು ಚಿಕನ್, ಮಟನ್ ಖರೀದಿಗೆ ನಿರುತ್ಸಾಹ ತೋರಿದ್ದಾರೆ. ಪ್ರತಿ ವರ್ಷ ಹೊಸ ತೊಡಕಿನ ಸಂದರ್ಭದಲ್ಲಿ ಕಾಲಿಡಲು ಜಾಗವಿಲ್ಲದ ಸ್ಥಿತಿ ನಿರ್ಮಾಣವಾಗಿರುತ್ತಿತ್ತು. ಆದರೆ, ಇಂದು ಭಾನುವಾರವಾದರೂ ಮಾರುಕಟ್ಟೆ ಖಾಲಿ-ಖಾಲಿ ಹೊಡೆಯುತ್ತಿದೆ. ಇದರಿಂದ ಅಲಾಲ್ ಕಟ್, ಜಟ್ಕಾ ಕಟ್ ವಿವಾದ ಇಲ್ಲದಂತಾಗಿದೆ. ಚಂದ್ರದರ್ಶನವಾಗಿದ್ದರೆ ವ್ಯಾಪಾರ ಜಾತ್ರೆಯಂತಿರುತ್ತಿತ್ತು. ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ಮಾಂಸ ಖರೀದಿಗೆ ಜನ ಹಿಂದೇಟು ಹಾಕಿದ್ದಾರೆ. ಮುಂದೆ ಎಲ್ಲರೂ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದೇ ರೀತಿ ನಾವು ವ್ಯಾಪಾರ ಮಾಡುತ್ತೇವೆ. ಎಲ್ಲರೂ ಸಾಮರಸ್ಯದಿಂದ ಹಳೇ ಪದ್ದತಿಯಲ್ಲೇ ವ್ಯಾಪಾರ ವಹಿವಾಟು ನಡೆಸುತ್ತೇವೆ ಎನ್ನುತ್ತಾರೆ ಇಲ್ಲಿನ ವ್ಯಾಪಾರಸ್ಥರು.

     

  • ಬಿಯರ್ ಬಾಟ್ಲಿಗಳು ಹಸಿರು, ಕಂದುಬಣ್ಣದಲ್ಲಿ ಮಾತ್ರ ಏಕೆ?- ಇದಕ್ಕಿದೆ ಐತಿಹಾಸಿಕ ಹಿನ್ನೆಲೆ

    ಬಿಯರ್ ಬಾಟ್ಲಿಗಳು ಹಸಿರು, ಕಂದುಬಣ್ಣದಲ್ಲಿ ಮಾತ್ರ ಏಕೆ?- ಇದಕ್ಕಿದೆ ಐತಿಹಾಸಿಕ ಹಿನ್ನೆಲೆ

    ಬಿಯರ್ ವಿಶ್ವದ ಅತ್ಯಂತ ನೆಚ್ಚಿನ ಪಾನೀಯಗಳಲ್ಲಿ ಒಂದಾಗಿದೆ. ಪ್ರಪಂಚದ ಅತ್ಯಂತ ಹಳೆಯ ಪಾನೀಯಗಳಲ್ಲಿ ನೀರು, ಚಹಾದ ನಂತರ ಬಿಯರ್ ಮೂರನೇ ಸ್ಥಾನದಲ್ಲಿದೆ. ಅಂಕಿ ಅಂಶದ ಪ್ರಕಾರ, ಪ್ರಪಂಚದಾದ್ಯಂತ ಪ್ರತಿ ವರ್ಷ 43,52,65,50,00,000 ಬಿಯರ್ ಕ್ಯಾನ್‍ಗಳು ಖಾಲಿಯಾಗುತ್ತೆ. ಇಂದಿನ ಯುಗದಲ್ಲಿ ಪಬ್‍ನಲ್ಲಿ ಪಾರ್ಟಿ ಮೂಡ್ ಇರಲಿ ಅಥವಾ ಸ್ನೇಹಿತರ ಜೊತೆ ಸಂಭ್ರಮದ ವಾತಾವರಣವಿರಲಿ ಎಲ್ಲೆಲ್ಲೂ ಬಿಯರ್ ಇರುತ್ತೆ.

    ಗಮನಿಸಿದ್ದೀರಾ?
    ಬಿಯರ್ ಬಾಟ್ಲಿ ನೋಡಿದವರು ಹಸಿರು ಅಥವಾ ಕಂದು ಬಣ್ಣದಲ್ಲಿ ಬಾಟ್ಲಿ ಇರುವುದನ್ನು ಗಮನಿಸಿರಬೇಕು. ಈ ಎರಡು ಬಣ್ಣಗಳನ್ನು ಹೊರತುಪಡಿಸಿ ಬಿಯರ್ ಬಾಟ್ಲಿಯನ್ನು ಬೇರೆ ಬಣ್ಣದಲ್ಲಿ ನೋಡಿದ್ದೀರಾ? ಸಾಧ್ಯವಿಲ್ಲ. ಇದೇ ಬಣ್ಣದಲ್ಲಿ ಬಾಟ್ಲಿ ಮಾಡಲು ಕಾರಣವೇನು ಎಂಬುದು ಎಲ್ಲರಿಗೂ ತಿಳಿದಿಲ್ಲ.ಆದರೆ ಇದಕ್ಕೆ ಕಾರಣವಿದೆ. ಇದನ್ನೂ ಓದಿ: ಪುಟ್ಟ ಕಂದಮ್ಮನೊಂದಿಗೆ ಪತಿಯನ್ನು ಹುಡುಕುತ್ತಾ ಕಾಡಿಗೆ ತೆರಳಿದ ಪತ್ನಿ..!

    ಹಿನ್ನೆಲೆ:
    ಪ್ರಾಚೀನ ಮೆಸೊಪಟ್ಯಾಮಿಯಾದ ಸುಮೇರಿಯನ್ ನಾಗರಿಕತೆಯ ಕಾಲದಿಂದಲೂ ಮಾನವರು ಬಿಯರ್ ಬಳಸುತ್ತಿದ್ದರು ಎಂದು ಹೇಳಲಾಗುತ್ತದೆ. ಮೊದಲ ಬಿಯರ್ ಕಂಪನಿಯು ಸಾವಿರಾರು ವರ್ಷಗಳ ಹಿಂದೆ ಪ್ರಾಚೀನ ಈಜಿಪ್ಟ್‍ನಲ್ಲಿ ಪ್ರಾರಂಭವಾಯಿತು ಎಂದು ನಂಬಲಾಗಿದೆ. ನಂತರ ಬಿಯರ್ ಪ್ಯಾಕಿಂಗ್ ಪಾರದರ್ಶಕ ಬಾಟ್ಲಿಗಳಲ್ಲಿ ಮಾಡಲಾಯಿತು. ಆಗ ಬಿಳಿ ಬಾಟ್ಲಿಯಲ್ಲಿ ಪ್ಯಾಕ್ ಮಾಡುವುದರಿಂದ ಬಿಯರ್ ನ ಆಮ್ಲವು ಸೂರ್ಯನ ಕಿರಣಗಳಿಂದ ಹೊರಬರುವ ಅತಿನೇರಳೆ ಕಿರಣಗಳನ್ನು(ಅಲ್ಟ್ರಾವೈಲೆಟ್ ಕಿರಣಗಳು) ಹಾಳು ಮಾಡುತ್ತಿರುವುದು ಕಂಡುಬಂತು. ಇದರಿಂದ ಬಿಯರ್ ದುರ್ವಾಸನೆ ಬೀರುತ್ತಿದ್ದು, ಜನ ಕುಡಿಯುತ್ತಿರಲಿಲ್ಲ.

    ಕಂಪನಿಯ ಸೂತ್ರವೇನು?
    ಬಿಯರ್ ತಯಾರಕರು ಈ ಸಮಸ್ಯೆಯನ್ನು ಪರಿಹರಿಸಲು ಹಲವು ಯೋಜನೆಯನ್ನು ರೂಪಿಸಿದರು. ಇದರ ಅಡಿಯಲ್ಲಿ, ಕಂದು ಲೇಪಿತ ಬಾಟಲಿಗಳನ್ನು ಬಿಯರ್ ಬಾಟಲಿ ಬಣ್ಣವನ್ನ ಆಯ್ಕೆ ಮಾಡಲಾಯಿತು. ಈ ಟ್ರಿಕ್ ಕೆಲಸ ಮಾಡಿದೆ. ಈ ಬಣ್ಣದ ಬಾಟ್ಲಿಗಳಲ್ಲಿ ಇರಿಸಲಾದ ಬಿಯರ್ ಹಾಳಾಗಲಿಲ್ಲ, ಏಕೆಂದರೆ ಸೂರ್ಯನ ಕಿರಣಗಳು ಕಂದು ಬಾಟಲಿಗಳ ಮೇಲೆ ಪರಿಣಾಮ ಬೀರಲಿಲ್ಲ. ಇದನ್ನೂ ಓದಿ: ಕೆಐಡಿಬಿಯಿಂದ 1700 ಎಕರೆ ಭೂ ಸ್ವಾಧೀನಕ್ಕೆ ರೈತರ ವಿರೋಧ – ಬೃಹತ್ ಟ್ರಾಕ್ಟರ್ ರ‍್ಯಾಲಿ

    क्या आपको पता है, Beer की बोतल अधिकतर हरी या भूरे रंग की ही क्यों होती है?

    ಹಸಿರು ಬಾಟ್ಲಿ ಆಯ್ಕೆ ಮಾಡಿದ್ದು ಏಕೆ..?
    ವಾಸ್ತವವಾಗಿ, ಎರಡನೆಯ ಮಹಾಯುದ್ಧದ ಸಮಯದಲ್ಲಿ, ಕಂದು ಬಾಟ್ಲಿಗಳು ಲಭ್ಯವಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಸೂರ್ಯನ ಕಿರಣಗಳಿಂದ ಬಿಯರ್ ರಕ್ಷಿಸಲು ಏನು ಮಾಡುವುದು ಎಂದು ಎಲ್ಲರೂ ಯೋಚನೆಯಲ್ಲಿ ಮುಳುಗಿದ್ದರು. ಆಗ ಹಸಿರು ಬಣ್ಣವನ್ನು ಆರಿಸಲಾಯಿತು. ಅಂದಿನಿಂದ ಬಿಯರ್ ಹಸಿರು ಬಾಟ್ಲಿಗಳಲ್ಲಿ ಬರಲು ಪ್ರಾರಂಭವಾಯಿತು.