Tag: French Guiana

  • ಜೇಮ್ಸ್‌ವೆಬ್‌ ಕಣ್ಣಲ್ಲಿ ಗುರು ಗ್ರಹದ ರಹಸ್ಯ

    ಜೇಮ್ಸ್‌ವೆಬ್‌ ಕಣ್ಣಲ್ಲಿ ಗುರು ಗ್ರಹದ ರಹಸ್ಯ

    ವಾಷಿಂಗ್ಟನ್: ಇತ್ತೀಚೆಗಷ್ಟೇ ತನ್ನ ಕಾರ್ಯಾಚರಣೆ ಆರಂಭಿಸಿರುವ ಜಗತ್ತಿನ ಅತ್ಯಂತ ದೊಡ್ಡ ಮತ್ತು ಶಕ್ತಿಶಾಲಿ ಬಾಹ್ಯಾಕಾಶ ದೂರದರ್ಶಕ `ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್’ ಮತ್ತೊಂದು ಮೋಡಿಮಾಡುವಂತಹ ಚಿತ್ರವನ್ನು ಸೆರೆಹಿಡಿದಿದೆ.

    ಕೆಲ ದಿನಗಳ ಹಿಂದೆಯಷ್ಟೇ ಬ್ರಹ್ಮಾಂಡ ಹುಟ್ಟಿದಾಗಿನ ಮೊದಲ ನಕ್ಷತ್ರಪುಂಜದ ಚಿತ್ರವನ್ನು ಸೆರೆ ಹಿಡಿದು ತನ್ನ ಬ್ಲಾಗ್‌ನಲ್ಲಿ ಪ್ರಕಟಿಸಿತ್ತು. ಇದೀಗ ಗುರು ಗ್ರಹದ ಚಿತ್ರಗಳನ್ನು ಸೆರೆ ಹಿಡಿದು ಅಚ್ಚರಿ ಮೂಡಿಸಿದೆ. ಅಲ್ಲದೇ ವಿಜ್ಞಾನಿಗಳಿಗೆ ಗುರುಗ್ರಹದ ಒಳನೋಟಗಳ ಬಗ್ಗೆ ತನ್ನ ಬ್ಲಾಗ್‌ಪೋಸ್ಟ್ನಲ್ಲಿ ಮಾಹಿತಿ ನೀಡುವುದಾಗಿ ಹೇಳಿದೆ. ಇದನ್ನೂ ಓದಿ: ಧರ್ಮ ನಿಂದನೆ ಆರೋಪ – ಹಿಂದೂ ವ್ಯಕ್ತಿ ಅಪಾರ್ಟ್ಮೆಂಟ್ ಸುತ್ತ ಜನವೋ ಜನ

    ಈಗ ಸೆರೆಹಿಡಿದಿರುವ ಗುರುಗ್ರಹದ ಚಿತ್ರದಲ್ಲಿ ಅಲಂಕಾರಿಕಾ ವಿನ್ಯಾಸಗಳನ್ನೂ ತೋರಿಸಿದೆ. ಜೊತೆಗೆ ಉತ್ತರ ಮತ್ತು ದಕ್ಷಿಣ ಧ್ರುವಗಳ ಮೇಲೆ ನೈಸರ್ಗಿಕ ಬೆಳಕಿನ ಪ್ರದರ್ಶನ(ಆರೋರಾ) ನೋಟವನ್ನೂ ಕಾಣುವಂತೆ ಗುರುತಿಸಿದೆ.

    ಇದರಿಂದ ಗುರು ಗ್ರಹ ಇಷ್ಟು ಉತ್ತಮ ಸ್ಥಿತಿಯಲ್ಲಿದೆ ಎಂದು ಊಹಿಸಿರಲಿಲ್ಲ ಎಂಬುದಾಗಿ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಎಮೆರಿಟಾ ಹಾಗೂ ಗ್ರಹಗಳ ಖಗೋಳಶಾಸ್ತ್ರಜ್ಞ ಇಮ್ಕೆ ಡಿ ಪಾಟರ್ ಪ್ರಶಂಸೆ ವ್ಯಕ್ತಪಡಿಸಿರುವುದಾಗಿ ನಾಸಾ ಉಲ್ಲೇಖಿಸಿದೆ. ಇದನ್ನೂ ಓದಿ: ಭಾರತದಲ್ಲಿ ಆತ್ಮಾಹುತಿ ದಾಳಿಗೆ ಸ್ಕೆಚ್ ಹಾಕಿದ್ದ ISIS ಭಯೋತ್ಪಾದಕ ರಷ್ಯಾದಲ್ಲಿ ಅರೆಸ್ಟ್

    ಗುರುಗ್ರಹದ ಸುತ್ತಲೂ ಇರುವ ಉಂಗುರಗಳು, ಸಣ್ಣ-ಸಣ್ಣ ಉಪಗ್ರಹಗಳು ಹಾಗೂ ಗೆಲಾಕ್ಸಿಗಳನ್ನು ಒಂದೇ ಚಿತ್ರದಲ್ಲಿ ಬರುವಂತೆ ಸೆರೆ ಹಿಡಿಯಲಾಗಿದೆ. ಜೇಮ್ಸ್ ವೆಬ್ ವೀಕ್ಷಣಾಲಯದ ನಿಯರ್-ಇನ್‌ಫ್ರಾರೆಡ್ ಕ್ಯಾಮೆರಾ ಗ್ರಹದ ವಿವರಗಳನ್ನು ಪ್ರದರ್ಶಿಸುವ ವಿಶೇಷ ಫಿಲ್ಟರ್‌ಗಳನ್ನೂ ಹೊಂದಿದೆ.

    ಗ್ರಹದ ಸುತ್ತಲೂ ಹೊಳೆಯುವ ಅರೋರಾ (ನೈಸರ್ಗಿಕ ಬೆಳಕಿನ ಪ್ರದರ್ಶನ) ಇದು ಮೋಡಗಳ ಮೇಲಿನ ಮಬ್ಬುಗಳನ್ನು ಸರಿಸಿ ಪ್ರತಿಫಲಿಸುವ ಬೆಳಕನ್ನು ತೋರಿಸುತ್ತದೆ. ಉತ್ತರ ಹಾಗೂ ದಕ್ಷಿಣ ದ್ರುವಗಳಲ್ಲಿ ಹೊಳೆಯುವ ಬೆಳಕನ್ನೂ ಗುರುತಿಸಿದೆ.

    ಜೇಮ್ಸ್ ವೆಬ್ ಟೆಲಿಸ್ಕೋಪ್ ಅನ್ನು 2021 ರಲ್ಲಿ ಫ್ರೆಂಚ್ ಗಯಾನಾದಿಂದ ಏರಿಯನ್ 5 ರಾಕೆಟ್ ಮೇಲೆ ಉಡಾವಣೆ ಮಾಡಲಾಯಿತು.

    Live Tv
    [brid partner=56869869 player=32851 video=960834 autoplay=true]

  • ನಭಕ್ಕೆ ಚಿಮ್ಮಿದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ – ಬ್ರಹ್ಮಾಂಡ ರಹಸ್ಯವನ್ನು ಅರಿಯುವ ಕಾಲ ಸನಿಹ

    ನಭಕ್ಕೆ ಚಿಮ್ಮಿದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ – ಬ್ರಹ್ಮಾಂಡ ರಹಸ್ಯವನ್ನು ಅರಿಯುವ ಕಾಲ ಸನಿಹ

    ಫ್ರೆಂಚ್ ಗಯಾನ: ಖಗೋಳ ಲೋಕದಲ್ಲಿ ಇವತ್ತಿಂದ ಹೊಸ ಅಧ್ಯಾಯ ಶುರುವಾಗಿದೆ. ಬ್ರಹ್ಮಾಂಡದ ರಹಸ್ಯವನ್ನು ಅರಿಯುವ ಟೈಮ್ ಮಷಿನ್, ವಿಶ್ವಕನ್ನಡಿ ಎಂದೇ ಹೇಳಲಾಗುತ್ತಿರುವ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಹೊತ್ತ ಏರಿಯನ್-5 ರಾಕೆಟ್ ಅಮೆರಿಕಾದ ಫ್ರೆಂಚ್ ಗಯಾನದಿಂದ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ.

    ಭಾರತೀಯ ಕಾಲಮಾನ ಸಂಜೆ 5:30ಕ್ಕೆ ಸರಿಯಾಗಿ ಏರಿಯಾನ್ ರಾಕೆಟ್ ಉಡಾವಣೆಗೊಂಡಿದೆ. ನಾಸಾ, ಯುರೋಪ್, ಕೆನಡಾ ಬಾಹ್ಯಾಕಾಶ ಸಂಸ್ಥೆಗಳು ಆರಂಭಿಕ ಖುಷಿಯಲ್ಲಿ ತೇಲಾಡಿದ್ದು, ಈ ಮಹಾ ಪಯಣ ಸರಿಸುಮಾರು ಒಂದು ತಿಂಗಳು ಸಾಗಲಿದ್ದು, ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿ ಜೇಮ್ಸ್ ಟೆಲಿಸ್ಕೋಪ್‍ನ್ನು ಫಿಕ್ಸ್ ಮಾಡಲಾಗುತ್ತದೆ. ಅಲ್ಲಿಂದಲೇ ಟೈಮ್ ಮಷಿನ್ ಮಾದರಿಯಲ್ಲಿ ಸಾವಿರಾರು ವರ್ಷಗಳ ಹಿಂದಕ್ಕೆ, ಮುಂದಕ್ಕೆ ಹೋಗಿ ಸೃಷ್ಟಿ ರಹಸ್ಯವನ್ನು ಅರಿಯುವ ಕೆಲಸವನ್ನು ಜೇಮ್ಸ್ ಸ್ಪೇಸ್ ಟೆಲಿಸ್ಕೋಪ್ ಮಾಡಲಿದೆ. ಇದನ್ನೂ ಓದಿ: ಬ್ರಹ್ಮಾಂಡದ ಸೃಷ್ಟಿ ರಹಸ್ಯ ಅರಿಯಲು ಟೈಮ್ ಮಷಿನ್ – ಜೇಮ್ಸ್‌ ವೆಬ್‌ ಸ್ಪೇಸ್‌ ಟೆಲಿಸ್ಕೋಪ್‌ ವಿಶೇಷತೆ ಏನು?

    ಜೇಮ್ಸ್ ಸ್ಪೇಸ್ ಟೆಲಿಸ್ಕೋಪ್ ಉಡಾವಣೆ ಆದ ನಂತರ ನಿಗದಿತ ಸ್ಥಳ ಸೇರಲು ಒಂದು ತಿಂಗಳು ಹಿಡಿಯುತ್ತದೆ. ಇದನ್ನು ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಲಾಗಾಂಗ್ರೆ ಪಾಯಿಂಟ್ ಎಲ್2 ಬಳಿ ಸ್ಥಿರ ಮಾಡಲಾಗುತ್ತದೆ. ಇಲ್ಲಿಂದ ವಿಶ್ವವನ್ನು ತುಂಬಾ ಸ್ಪಷ್ಟವಾಗಿ ಗಮನಿಸಲು ಅವಕಾಶ ಇದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಮಿಗ್-21 ವಿಮಾನ ಪತನ – ಪೈಲಟ್‍ ಹುತಾತ್ಮ

    ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಮೂಲಕ ಮುಂದಿನ ನಾಲ್ಕು ಶತಮಾನಗಳಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಕೇವಲ 10 ವರ್ಷಗಳಲ್ಲಿ ತಿಳಿದುಕೊಳ್ಳಬಹುದಾಗಿದೆ. ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್‍ನ್ನು ಅಮೆರಿಕದ ನಾಸಾ, ಯುರೋಪ್, ಕೆನಡಾ ಬಾಹ್ಯಾಕಾಶ ಸಂಸ್ಥೆಗಳು ಜಂಟಿಯಾಗಿ ರೂಪಿಸಿದ್ದು, ಇದು ಹಬಲ್ ಟೆಲಿಸ್ಕೋಪ್‍ಗಿಂತಲೂ ಶಕ್ತಿಶಾಲಿಯಾಗಿದೆ. ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್‍ಗೆ ಇನ್‍ಫ್ರಾರೆಡ್ ವಿಷನ್ ಮೂಲಕ 1,350 ವರ್ಷಗಳ ಹಿಂದಕ್ಕೆ ಹೋಗಿ ಅಲ್ಲೇನು ನಡೆದಿದೆ ಎಂಬುದನ್ನು ತಿಳಿಸುವ ಅದ್ಭುತ ಸಾಮರ್ಥ್ಯ ಇರುವುದು ವಿಶೇಷ.

    ವಿಶ್ವಸೃಷ್ಟಿಯ ಆರಂಭಿಕ ದಿನಗಳಲ್ಲಿ ನಕ್ಷತ್ರಗಳು, ನಕ್ಷತ್ರ ಮಂಡಲಗಳ ಹುಟ್ಟು. ಅವುಗಳ ಅಂತ್ಯ ಹೇಗೆ ಆಯಿತು ಎಂಬುದನ್ನು ತಿಳಿದುಕೊಳ್ಳಲು ಇದು ಸಹಾಯಕವಾಗಲಿದೆ. ಇದನ್ನು ಕೆಲವರು ನೆಕ್ಸ್ಟ್ ಜನೆರೇಷನ್ ಸ್ಪೇಸ್ ಟೆಲಿಸ್ಕೋಪ್ ಎಂದು ಕರೆಯುತ್ತಾರೆ. 2007ರಲ್ಲೇ ಇದನ್ನು ಪ್ರಯೋಗಿಸಲು ಸಿದ್ಧತೆ ನಡೆದಿತ್ತು. ಆದ್ರೆ ಇದು ಸಾಧ್ಯನಾ ಎಂದು ತುಂಬಾ ಮಂದಿ ಅನುಮಾನಿಸಿದ್ದರು. ಈಗ 75 ಸಾವಿರ ಕೋಟಿ(10 ಶತಕೋಟಿ ಡಾಲರ್) ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇದನ್ನೂ ಓದಿ: ಪ್ರಳಯ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ – ದೇಶದ ರಕ್ಷಣಾ ಕ್ಷೇತ್ರಕ್ಕೆ ಆನೆ ಬಲ

    ವಿಶೇಷತೆ ಏನು?
    ಹಬಲ್ ಟೆಲಿಸ್ಕೋಪ್‍ಗಿಂತ ಜೇಮ್ಸ್ ಟೆಲಿಸ್ಕೋಪ್ ವಿಸ್ತೀರ್ಣದಲ್ಲಿ ಎರಡೂವರೆ ಪಟ್ಟು ದೊಡ್ಡದು. ಕಾಂತಿಯನ್ನು ಗ್ರಹಿಸಲು ಅಳವಡಿಸಲಾದ ಪ್ರಧಾನ ಕನ್ನಡಿಯ ಅಗಲ 6.5 ಮೀಟರ್ ಇದೆ. ಈ ಪ್ರಧಾನ ಕನ್ನಡಿಯನ್ನು 18 ಷಟ್‍ಭುಜಾಕೃತಿಗಳಾಗಿ ವಿಂಗಡಿಸಿ ನಿರ್ಮಿಸಲಾಗಿದೆ.

    ಉಡಾವಣೆ ವೇಳೆ ಈ ಕನ್ನಡಿ ಮಡಚಿಟ್ಟ ಸ್ಥಿತಿಯಲ್ಲಿ ಇರುತ್ತದೆ. ಗಮ್ಯ ಸೇರಿದ ನಂತರ ತೆರೆದುಕೊಳ್ಳಲಿದೆ. ಸೂರ್ಯನ ಕಡೆ ಇರುವ ಟೆಲಿಸ್ಕೋಪ್ ಭಾಗ 22 ಮೀಟರ್ ಉದ್ದವಿದ್ದು ಇದು 85 ಡಿಗ್ರಿವರೆಗೂ ಬಿಸಿಯೇರಬಹುದು. ಟೆಲಿಸ್ಕೋಪ್‍ಗೆ ಆಗುವ ಸಂಭಾವ್ಯ ಹಾನಿ ತಡೆಯಲು ಏಳು ಸುತ್ತಿನ ರಕ್ಷಣಾ ಕವಚ ನಿರ್ಮಾಣ ಮಾಡಲಾಗಿದೆ.

    ಸೂರ್ಯನಿಗೆ ವಿರುದ್ಧವಿರುವ ಭಾಗ -233 ಡಿಗ್ರಿ ಸೆಂಟಿಗ್ರೇಡ್ ಇದ್ದು ಅತೀಶೀತಲವಾಗಿರುತ್ತದೆ. 40 ಕಿಲೋಮೀಟರ್ ದೂರದಲ್ಲಿರುವ ಒಂದು ನಾಣ್ಯವನ್ನು ಸ್ಪಷ್ಟವಾಗಿ ತೋರಿಸುವ ಸಾಮರ್ಥ್ಯ ಈ ಉಪಗ್ರಹಕ್ಕಿದೆ.

  • ಬ್ರಹ್ಮಾಂಡದ ಸೃಷ್ಟಿ ರಹಸ್ಯ ಅರಿಯಲು ಟೈಮ್ ಮಷಿನ್ – ಜೇಮ್ಸ್‌ ವೆಬ್‌ ಸ್ಪೇಸ್‌ ಟೆಲಿಸ್ಕೋಪ್‌ ವಿಶೇಷತೆ ಏನು?

    ಬ್ರಹ್ಮಾಂಡದ ಸೃಷ್ಟಿ ರಹಸ್ಯ ಅರಿಯಲು ಟೈಮ್ ಮಷಿನ್ – ಜೇಮ್ಸ್‌ ವೆಬ್‌ ಸ್ಪೇಸ್‌ ಟೆಲಿಸ್ಕೋಪ್‌ ವಿಶೇಷತೆ ಏನು?

    ಫ್ರೆಂಚ್‌ ಗಯಾನ: ಖಗೋಳ ಲೋಕದಲ್ಲಿ ಮಹಾನ್ ಕ್ರಾಂತಿಯೇ ನಡೆಯುತ್ತಿದೆ. ಅಸಾಧ್ಯ ಎಂದು ಭಾವಿಸಿದ್ದನ್ನು ಸಾಧ್ಯ ಮಾಡಲು ವಿಜ್ಞಾನಿಗಳು ಮುಂದಾಗಿದ್ದಾರೆ. ಕಳೆದ ಮೂರು ದಶಕಗಳಿಂದ ನಡೆಯುತ್ತಿದ್ದ ಪ್ರಯತ್ನ ಶೀಘ್ರವೇ ಸಾಕಾರಗೊಳ್ಳಲಿದೆ.

    ಹೌದು. ಬ್ರಹ್ಮಾಂಡ ಸೃಷ್ಟಿಯ ರಹಸ್ಯವನ್ನು ಬೇಧಿಸಲು ಟೈಮ್ ಮಷಿನ್ ಮಾದರಿಯ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಉಡಾವಣೆಗೆ ಫ್ರೆಂಚ್ ಗಯಾನದಲ್ಲಿ ಕೌಂಟ್‍ಡೌನ್ ಶುರುವಾಗಿದೆ. ಇದು ಯಶಸ್ವಿಯಾದಲ್ಲಿ ಮುಂದಿನ ನಾಲ್ಕು ಶತಮಾನಗಳಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಕೇವಲ 10 ವರ್ಷಗಳಲ್ಲಿ ತಿಳಿದುಕೊಳ್ಳಬಹುದಾಗಿದೆ.

    ಅಮೆರಿಕದ ನಾಸಾ, ಯುರೋಪ್, ಕೆನಡಾ ಬಾಹ್ಯಾಕಾಶ ಸಂಸ್ಥೆಗಳು ಜಂಟಿಯಾಗಿ ರೂಪಿಸಿದ್ದು, ಇದು ಹಬಲ್ ಟೆಲಿಸ್ಕೋಪ್‍ಗಿಂತಲೂ ಶಕ್ತಿಶಾಲಿಯಾಗಿದೆ. ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್‍ಗೆ ಇನ್‍ಫ್ರಾರೆಡ್ ವಿಷನ್ ಮೂಲಕ 1350 ವರ್ಷಗಳ ಹಿಂದಕ್ಕೆ ಹೋಗಿ ಅಲ್ಲೇನು ನಡೆದಿದೆ ಎಂಬುದನ್ನು ತಿಳಿಸುವ ಅದ್ಭುತ ಸಾಮರ್ಥ್ಯ ಇರುವುದು ವಿಶೇಷ.

    ವಿಶ್ವಸೃಷ್ಟಿಯ ಆರಂಭಿಕ ದಿನಗಳಲ್ಲಿ ನಕ್ಷತ್ರಗಳು, ನಕ್ಷತ್ರ ಮಂಡಲಗಳ ಹುಟ್ಟು. ಅವುಗಳ ಅಂತ್ಯ ಹೇಗೆ ಆಯಿತು ಎಂಬುದನ್ನು ತಿಳಿದುಕೊಳ್ಳಲು ಇದು ಸಹಾಯಕವಾಗಲಿದೆ. ಇದನ್ನು ಕೆಲವರು ನೆಕ್ಸ್ಟ್ ಜನೆರೇಷನ್ ಸ್ಪೇಸ್ ಟೆಲಿಸ್ಕೋಪ್ ಎಂದು ಕರೆಯುತ್ತಾರೆ. 2007ರಲ್ಲೇ ಇದನ್ನು ಪ್ರಯೋಗಿಸಲು ಸಿದ್ಧತೆ ನಡೆದಿತ್ತು. ಆದ್ರೆ ಇದು ಸಾಧ್ಯನಾ ಎಂದು ತುಂಬಾ ಮಂದಿ ಅನುಮಾನಿಸಿದ್ದರು. ಇದರ ನಿರ್ಮಾಣಕ್ಕೆ ಆರಂಭದಲ್ಲಿ 50 ಕೋಟಿ ಡಾಲರ್ ಆಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈಗ 75 ಸಾವಿರ ಕೋಟಿ(10 ಶತಕೋಟಿ ಡಾಲರ್) ವೆಚ್ಚದಲ್ಲಿ ನಿರ್ಮಾಣವಾಗಿದೆ. ಇದನ್ನೂ ಓದಿ: ಪ್ರಳಯ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ – ದೇಶದ ರಕ್ಷಣಾ ಕ್ಷೇತ್ರಕ್ಕೆ ಆನೆ ಬಲ

    ಉಡಾವಣೆ ಆದ ನಂತರ ನಿಗದಿತ ಸ್ಥಳ ಸೇರಲು ಒಂದು ತಿಂಗಳು ಹಿಡಿಯುತ್ತದೆ. ಇದನ್ನು ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಲಾಗಾಂಗ್ರೆ ಪಾಯಿಂಟ್ ಎಲ್2 ಬಳಿ ಸ್ಥಿರ ಮಾಡಲಾಗುತ್ತದೆ. ಇಲ್ಲಿಂದ ವಿಶ್ವವನ್ನು ತುಂಬಾ ಸ್ಪಷ್ಟವಾಗಿ ಗಮನಿಸಲು ಅವಕಾಶ ಇದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

    ಏರಿಯಾನ್ ರಾಕೆಟ್‌ ಮೂಲಕ ಶನಿವಾರ ಟೆಲಿಸ್ಕೋಪ್‌ ಉಡಾವಣೆ ನಡೆಯಬೇಕಿತ್ತು. ಆದರೆ ಈಗ ಬಂದಿರುವ ಮಾಹಿತಿ ಪ್ರಕಾರ ಭಾರೀ ಗಾಳಿಯ ಕಾರಣ ಈ ಟೆಲಿಸ್ಕೋಪ್ ಉಡಾವಣೆಯನ್ನು ಬುಧವಾರಕ್ಕೆ ಮುಂದೂಡಲಾಗಿದೆ. ಇದನ್ನೂ ಓದಿ: ರಷ್ಯಾದ ಮಹಿಳಾ ಗಗನಯಾತ್ರಿ ಸ್ಪೇಸ್ ಎಕ್ಸ್ ಮೂಲಕ ಬಾಹ್ಯಾಕಾಶಕ್ಕೆ

    ವಿಶೇಷತೆ ಏನು?
    ಹಬಲ್ ಟೆಲಿಸ್ಕೋಪ್‍ಗಿಂತ ಜೇಮ್ಸ್‌ ಟೆಲಿಸ್ಕೋಪ್‌ ವಿಸ್ತೀರ್ಣದಲ್ಲಿ ಎರಡೂವರೆ ಪಟ್ಟು ದೊಡ್ಡದು. ಕಾಂತಿಯನ್ನು ಗ್ರಹಿಸಲು ಅಳವಡಿಸಲಾದ ಪ್ರಧಾನ ಕನ್ನಡಿಯ ಅಗಲ 6.5 ಮೀಟರ್ ಇದೆ. ಈ ಪ್ರಧಾನ ಕನ್ನಡಿಯನ್ನು 18 ಷಟ್‍ಭುಜಾಕೃತಿಗಳಾಗಿ ವಿಂಗಡಿಸಿ ನಿರ್ಮಿಸಲಾಗಿದೆ.

    ಉಡಾವಣೆ ವೇಳೆ ಈ ಕನ್ನಡಿ ಮಡಚಿಟ್ಟ ಸ್ಥಿತಿಯಲ್ಲಿ ಇರುತ್ತದೆ. ಗಮ್ಯ ಸೇರಿದ ನಂತರ ತೆರೆದುಕೊಳ್ಳಲಿದೆ. ಸೂರ್ಯನ ಕಡೆ ಇರುವ ಟೆಲಿಸ್ಕೋಪ್ ಭಾಗ 22 ಮೀಟರ್ ಉದ್ದವಿದ್ದು ಇದು 85 ಡಿಗ್ರಿವರೆಗೂ ಬಿಸಿಯೇರಬಹುದು. ಟೆಲಿಸ್ಕೋಪ್‍ಗೆ ಆಗುವ ಸಂಭಾವ್ಯ ಹಾನಿ ತಡೆಯಲು ಏಳು ಸುತ್ತಿನ ರಕ್ಷಣಾ ಕವಚ ನಿರ್ಮಾಣ ಮಾಡಲಾಗಿದೆ.

    ಸೂರ್ಯನಿಗೆ ವಿರುದ್ಧವಿರುವ ಭಾಗ -233 ಡಿಗ್ರಿ ಸೆಂಟಿಗ್ರೇಡ್ ಇದ್ದು ಅತೀಶೀತಲವಾಗಿರುತ್ತದೆ. 40 ಕಿಲೋಮೀಟರ್ ದೂರದಲ್ಲಿರುವ ಒಂದು ನಾಣ್ಯವನ್ನು ಸ್ಪಷ್ಟವಾಗಿ ತೋರಿಸುವ ಸಾಮರ್ಥ್ಯ ಈ ಉಪಗ್ರಹಕ್ಕಿದೆ.

  • ಕಕ್ಷೆ ಸೇರಿದ ವರ್ಷದ ಮೊದಲ ಉಪಗ್ರಹ – ಫ್ರೆಂಚ್ ಗಯಾನದಿಂದ ಜಿಸ್ಯಾಟ್-30 ಉಡಾವಣೆ

    ಕಕ್ಷೆ ಸೇರಿದ ವರ್ಷದ ಮೊದಲ ಉಪಗ್ರಹ – ಫ್ರೆಂಚ್ ಗಯಾನದಿಂದ ಜಿಸ್ಯಾಟ್-30 ಉಡಾವಣೆ

    ಬೆಂಗಳೂರು: ಈ ವರ್ಷದ ಮೊದಲ ಉಪಗ್ರಹ ಜಿಸ್ಯಾಟ್-30 ಅನ್ನು ಇಸ್ರೋ ಕಕ್ಷೆಗೆ ಸೇರಿಸಿದೆ. ಮಧ್ಯರಾತ್ರಿ 2.35ಕ್ಕೆ ಫ್ರೆಂಚ್ ಗಯಾನದಿಂದ ಉಪಗ್ರಹವನ್ನು ಹೊತ್ತ ಏರಿಯನ್ ರಾಕೆಟ್ ನಭಕ್ಕೆ ಚಿಮ್ಮಿತು. 3,357 ಕೆ.ಜಿ ತೂಕದ ಜಿಸ್ಯಾಟ್-30 ಭೂಸ್ಥಿರ ಕಕ್ಷೆಯಲ್ಲಿ ಸುತ್ತಲಿದ್ದು ಟಿವಿ, ಮೊಬೈಲ್, ಇಂಟರ್‌ನೆಟ್ ಸಂಪರ್ಕದ ಗುಣಮಟ್ಟ ಸುಧಾರಿಸಲು ಸಹಕಾರಿಯಾಗಲಿದೆ.

    ಯುರೋಪಿಯನ್ ಬಾಹ್ಯಾಕಾಶ ಒಕ್ಕೂಟ ಏರಿಯಾನ್ ಸ್ಪೇಸ್‍ನ ಏರಿಯಾನ್ 5 ವಾಹನವು ಜಿಸ್ಯಾಟ್-30 ಉಪಗ್ರಹವನ್ನು ಸುಮಾರು 38 ನಿಮಿಷಗಳಲ್ಲಿ ಕಕ್ಷೆಗೆ ಸೇರ್ಪಡೆಗೊಳಿಸಿತು. 12ಸಿ ಮತ್ತು 12 ಕೆಯು ಬ್ಯಾಂಡ್ 3,357 ಕೆ.ಜಿ. ತೂಕವಿರುವ ಉಪಗ್ರಹವನ್ನು ಏರಿಯಾನ್-5 ಉಡ್ಡಯನ ವಾಹನದಿಂದ (ವಿಎ 251) ಭೂಸ್ಥಾಯಿ ವರ್ಗಾವಣೆ ಕಕ್ಷೆಗೆ(ಜಿಟಿಓ) ಕೆಳ ಪ್ರಯಾಣಿಕ ಸ್ಥಿತಿಯಿಂದ ಸೇರ್ಪಡೆಗೊಳಿಸಲಾಯಿತು. ಈ ಉಪಗ್ರಹವು ಇಸ್ರೋದ ಹಿಂದಿನ ಇನ್‍ಸ್ಯಾಟ್/ಜಿಸ್ಯಾಟ್ ಉಪಗ್ರಹ ಸೇವೆಗಳ ಸ್ವರೂಪವನ್ನು ಹೊಂದಿದ್ದು, 12ಸಿ ಮತ್ತು 12 ಕೆಯು ಬ್ಯಾಂಡ್ ಟ್ರಾನ್ಸ್‌ಪಾಂಡರ್‌ಗಳನ್ನು ಒಳಗೊಂಡಿದೆ.

    ವಿಶೇಷತೆ ಏನು?
    3 ಡಿಗ್ರಿ ರೇಖಾಂಶದಲ್ಲಿ ಉಪಗ್ರಹ ನೆಲೆಗೊಳ್ಳಲಿದ್ದು ಉತ್ತಮ ಗುಣಮಟ್ಟದ ಟಿವಿ, ಟೆಲಿ ಕಮ್ಯೂನಿಕೇಶನ್ ಮತ್ತು ಬ್ರಾಡ್‍ಕಾಸ್ಟಿಂಗ್ ಸೇವೆಗಳನ್ನು ನೀಡಲಿದೆ. ಉಪಗ್ರಹ ಟೆಲಿವಿಷನ್ ಅಪ್ ಲಿಂಕಿಂಗ್ ಹಾಗೂ ಡೌನ್‍ಲಿಂಕಿಂಗ್, ಡಿಜಿಟಲ್ ಸ್ಯಾಟಲೈಟ್ ನ್ಯೂಸ್ ಗ್ಯಾದರಿಂಗ್ (ಡಿಎಸ್‍ಎನ್‍ಜಿ), ಸೆಲ್ಯೂರಲ್ ಬ್ಯಾಕ್‍ಹೌಲ್ ಕನೆಕ್ಟಿವಿಟಿ, ಡಿಟಿಎಚ್, ಟೆಲಿಪೋರ್ಟ್ ಸೇವೆಗಳು ಸೇರಿದಂತೆ ಅನೇಕ ಸೇವೆಗಳನ್ನು ಭಾರತ, ಗಲ್ಫ್ ದೇಶಗಳು, ಏಷ್ಯಾದ ಹಲವು ದೇಶಗಳು, ಆಸ್ಟ್ರೇಲಿಯಾದಲ್ಲಿ ಸಿ-ಬ್ಯಾಂಡ್ ಮೂಲಕ ಮುಂದಿನ 15 ವರ್ಷಗಳವರೆಗೆ ನೀಡಲಿದೆ. ಸಿ-ಬ್ಯಾಂಡ್ ಟ್ರಾನ್ಸ್‌ಪಾಂಡರ್‌ ಅನ್ನು ಪ್ರಾಥಮಿಕವಾಗಿ ದೂರಸಂಪರ್ಕ ಉದ್ದೇಶಕ್ಕಾಗಿ ಮತ್ತು ಮಾಹಿತಿ ಪ್ರಸರಣ ಸೇವೆಗಾಗಿ ಬಳಸಲಾಗುತ್ತದೆ. ಇದೇ ಸೇವೆಗಳ ನಿರ್ವಹಣೆಗಾಗಿ ಈ ಹಿಂದೆ ಹಾರಿಬಿಡಲಾಗಿದ್ದ ‘ಇನ್‍ಸ್ಯಾಟ್-4ಎ’ ಉಪಗ್ರಹದ ಬದಲಿಗೆ ‘ಜಿಸ್ಯಾಟ್-30’ ಅನ್ನು ಉಡಾವಣೆ ಮಾಡಲಾಗಿದೆ.

    ಎರಡು ಉಪಗ್ರಹಗಳ ಉಡಾವಣೆ:
    ಜಿಸ್ಯಾಟ್-30 ಜೊತೆ ಏರಿಯಾನ್ 5 ಕನೆಕ್ಟ್ ಉಪಗ್ರಹವನ್ನು ನಭಕ್ಕೆ ಸಾಗಿಸಲಾಗಿದೆ. ಆರಂಭದಲ್ಲಿ ಕನೆಕ್ಟ್ ಉಪಗ್ರಹವನ್ನು ಕಕ್ಷೆಗೆ ಸೇರಿಸಿದ ಬಳಿಕ ಜಿಸ್ಯಾಟ್ ಕಕ್ಷೆಗೆ ಸೇರಿಸಲಾಗಿದೆ. ಯೂಟೆಲ್‍ಸ್ಯಾಟ್ ಕನೆಕ್ಟ್ ಉಪಗ್ರಹವನ್ನು ಥೇಲ್ಸ್ ಅಲೆನಿಯಾ ಸ್ಪೇಸ್ ಅಭಿವೃದ್ಧಿ ಪಡಿಸಿದ್ದು, ಈ ಟೆಲಿಕಾಂ ಉಪಗ್ರಹ ಯುರೋಪ್ ಮತ್ತು ಆಫ್ರಿಕಾದಲ್ಲಿ ಸೇವೆ ನೀಡಲಿದೆ. ಈ ಕಂಪನಿಯ ಸೇವೆ ಪಡೆಯುವ ಗ್ರಾಹಕರು 100 ಎಂಬಿಪಿಎಸ್(ಮೆಗಾ ಬೈಟ್ಸ್ ಪರ್ ಸೆಕೆಂಡ್) ವೇಗದಲ್ಲಿ ಇಂಟರ್‌ನೆಟ್ ಸೌಲಭ್ಯ ಪಡೆಯಲಿದ್ದಾರೆ.

  • ಭಾರತದ ಇಂಟರ್ ನೆಟ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಬಲ್ಲ ಜಿಸ್ಯಾಟ್ 11 ಉಪಗ್ರಹ ಉಡಾವಣೆಗೆ ಕ್ಷಣಗಣನೆ

    ಭಾರತದ ಇಂಟರ್ ನೆಟ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಬಲ್ಲ ಜಿಸ್ಯಾಟ್ 11 ಉಪಗ್ರಹ ಉಡಾವಣೆಗೆ ಕ್ಷಣಗಣನೆ

    ಬೆಂಗಳೂರು: ಭಾರತದ ಇಂಟರ್ ನೆಟ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಬಲ್ಲ ಜಿಸ್ಯಾಟ್ 11 ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಭಾರೀ ತೂಕದ ಉಪಗ್ರಹವ ಬುಧವಾರ ಉಡವಾಣೆಯಾಗಲಿದೆ.

    ಜಿಸ್ಯಾಟ್-11 ಉಪಗ್ರಹವನ್ನು ಯುರೋಪಿಯನ್ ಸ್ಪೇಸ್ ಏಜೆನ್ಸಿಯ ರಾಕೆಟ್ ಮೂಲಕ ಫ್ರೆಂಚ್ ಗಯಾನಾದಿಂದ ಉಡಾವಣೆ ಮಾಡಲಾಗುತ್ತಿದೆ. ಭಾರತೀಯ ಕಾಲಮಾನ ಬುಧವಾರ ನಸುಕಿನ ಜಾವ 2.08ಕ್ಕೆ ಉಪಗ್ರಹ ನಭಕ್ಕೆ ಚಿಮ್ಮಲಿದೆ. ಹೀಗಾಗಿ ಈ ಉಪಗ್ರಹ ಕುರಿತ ಕಿರು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಯಾಕೆ ಉಡಾವಣೆ?
    500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಉಪಗ್ರಹ 5,854 ಕೆ.ಜಿ. ತೂಕವನ್ನು ಹೊಂದಿದ್ದು, ಭೂಮಿಯಿಂದ 36 ಸಾವಿರ ಕಿ.ಮೀ. ಎತ್ತರದ ಕಕ್ಷೆಯಲ್ಲಿ ಕಾರ್ಯನಿರ್ವಹಿಸಲಿದೆ. ಜಿಸ್ಯಾಟ್-11 ಉಪಗ್ರಹವು ನಾಲ್ಕು ಸೋಲಾರ್ ಪ್ಯಾನಲ್‍ಗಳನ್ನು ಹೊಂದಿದೆ. ಭಾರತದ ಗ್ರಾಮೀಣ ಹಾಗೂ ದ್ವೀಪ ಪ್ರದೇಶಗಳಲ್ಲಿ ಉತ್ತಮ ಇಂಟರ್ ನೆಟ್ ಸೇವೆ ನೀಡಲು ಇಸ್ರೋ ಈ ಉಪಗ್ರಹವನ್ನು ಉಡಾವಣೆ ಮಾಡುತ್ತಿದೆ. ಇನ್‍ಸ್ಯಾಟ್ ಕಡಿಮೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದು, ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಜಿಸ್ಯಾಟ್-11 ಉಡಾವಣೆಗೆ ಇಸ್ರೋ ಮುಂದಾಗಿದೆ.

    ಇಂಟರ್ ನೆಟ್ ಕ್ರಾಂತಿ ಹೇಗೆ?
    ಜಿಸ್ಯಾಟ್ 11 ನಲ್ಲಿ ಕೆಯು ಮತ್ತು ಕೆಎ ಬ್ಯಾಂಡಿನ 40 ಟ್ರಾನ್ಸ್‌ಪಾಂಡರ್‌ಗಳಿವೆ. ಇವು ಪ್ರತಿ ಸೆಕೆಂಡಿಗೆ 14 ಗಿಗಾಬೈಟ್ ದತ್ತಾಂಶಗಳನ್ನು ವರ್ಗಾವಣೆ ಮಾಡುವ ಸಾಮರ್ಥ್ಯ ವನ್ನು ಪಡೆದುಕೊಂಡಿದೆ. ಜಿಸ್ಯಾಟ್ 19, 29, 11, 20 ಉಪಗ್ರಹಗಳು ಎಲ್ಲವೂ ಕಾರ್ಯನಿರ್ವಹಿಸಿದರೆ 2019ರ ವೇಳೆಗೆ ಪ್ರತಿ ಸೆಕೆಂಡಿಗೆ 100 ಗಿಗಾ ಬೈಟ್ ಸೆಕೆಂಡ್ ವೇಗದಲ್ಲಿ ದತ್ತಾಂಶಗಳನ್ನು ವರ್ಗಾವಣೆ ಮಾಡಬಹುದು ಎಂದು ಇಸ್ರೋ ಅಧ್ಯಕ್ಷ ಕೆ ಸಿವನ್ ಹೇಳಿದ್ದಾರೆ. ನಾಲ್ಕು ಉಪಗ್ರಹಗಳ ಪೈಕಿ ಜಿಸ್ಯಾಟ್ 19, ಜಿಸ್ಯಾಟ್ 29 ಉಪಗ್ರಹಗಳನ್ನು ಈಗಾಗಲೇ ಉಡಾವಣೆ ಮಾಡಲಾಗಿದ್ದು, ಜಿಸ್ಯಾಟ್20 ಮುಂದಿನ ವರ್ಷ ಉಡಾವಣೆಯಾಗಲಿದೆ. ಇದನ್ನು ಓದಿ: ವಿಶ್ವದಲ್ಲಿ ಆರಂಭಗೊಂಡಾಗ ಭಾರತದಲ್ಲೂ ಬಿಎಸ್‍ಎನ್‍ಎಲ್‍ನಿಂದ ಸಿಗಲಿದೆ 5ಜಿ ಸೇವೆ!

    ಉಡಾವಣೆಯಲ್ಲಿ ವಿಳಂಬವಾಗಿದ್ದು ಯಾಕೆ?
    ಜಿಸ್ಯಾಟ್-11 ಉಪಗ್ರಹವನ್ನು ಇದೇ ಮಾರ್ಚ್, ಎಪ್ರಿಲ್ ಮಧ್ಯ ಭಾಗದಲ್ಲಿ ಉಡಾವಣೆ ಮಾಡಲು ಇಸ್ರೋ ನಿರ್ಧರಿಸಿತ್ತು. ಈ ಉಪಗ್ರಹ ಉಡಾವಣೆಗೆ ಕೈ ಹಾಕಿದ ಸಮಯದಲ್ಲೇ ಜಿಸ್ಯಾಟ್-6 ಉಪಗ್ರಹವನ್ನು ಇದೇ ವರ್ಷ ಮಾರ್ಚ್ 29ರಂದು ನಭಕ್ಕೆ ಕಳುಹಿಸಲಾಗಿತ್ತು. ಆದರೆ ಉಪಗ್ರಹದಲ್ಲಿ ಎಲೆಕ್ಟ್ರಿಕ್ ಸರ್ಕ್ಯೂಟ್‍ ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಉಡಾವಣೆ ವಿಫಲವಾಗಿತ್ತು. ಈ ಕಾರಣಕ್ಕೆ ಜಿಸ್ಯಾಟ್ 11 ಉಪಗ್ರಹವನ್ನು ಹಿಂದಕ್ಕೆ ತರಿಸಿದ್ದ ಇಸ್ರೋ ಎಲ್ಲ ಪರೀಕ್ಷೆಗಳನ್ನು ಮಾಡಿ ಈಗ ಉಡಾವಣೆ ಮಾಡುತ್ತಿದೆ. ಇದನ್ನು ಓದಿ: 2020ರ ವೇಳೆಗೆ ಭಾರತದಲ್ಲಿ ಬರುತ್ತೆ 5ಜಿ: ನೆಟ್ ಸ್ಪೀಡ್ ಎಷ್ಟು ಗೊತ್ತಾ?

    ಫ್ರೆಂಚ್ ಗಯಾನಾದಲ್ಲಿ ಯಾಕೆ?
    ಇಸ್ರೋ ಅಭಿವೃದ್ಧಿ ಪಡಿಸಿರುವ ಜಿಎಸ್‍ಎಲ್‍ವಿ 3 ರಾಕೆಟ್ ಗರಿಷ್ಠ 4 ಟನ್ ಸಾಮರ್ಥ್ಯ ಉಪಗ್ರಹವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಪಡೆದಿದೆ. ಜಿಸ್ಯಾಟ್ 5 ಟನ್ ಇರುವ ಕಾರಣ ಫ್ರೆಂಚ್ ಗಯಾನಾದ ಮೂಲಕ ಉಡಾವಣೆ ಮಾಡಲು ಇಸ್ರೋ ಮುಂದಾಗಿದೆ. ಹೆಚ್ಚು ತೂಕದ ಉಪಗ್ರಹಗಳನ್ನು ಕಳುಹಿಸಲು ಇಸ್ರೋ ರಾಕೆಟ್ ತಯಾರಿಸುತ್ತಿದ್ದು, ಈ ನಿಟ್ಟಿನಲ್ಲಿ ಎಲಾನ್ ಮಸ್ಕ್ ರಾಕೆಟ್ ಕಂಪನಿ, ಸ್ಪೇಸ್ ಎಕ್ಸ್ ಜೊತೆಗೆ ಮಾತುಕತೆ ನಡೆಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv