Tag: Freestyle Wrestling

  • ತಲೆಗೂದಲು ಕಟ್‌, ರಕ್ತ ಹೊರತೆಗೆತ, ಕಠಿಣ ವ್ಯಾಯಾಮ, ಆಹಾರದಿಂದ ದೂರ – ತೂಕ ಇಳಿಸಲು ಏನೆಲ್ಲಾ ಮಾಡಿದ್ರು ವಿನೇಶ್‌?

    ತಲೆಗೂದಲು ಕಟ್‌, ರಕ್ತ ಹೊರತೆಗೆತ, ಕಠಿಣ ವ್ಯಾಯಾಮ, ಆಹಾರದಿಂದ ದೂರ – ತೂಕ ಇಳಿಸಲು ಏನೆಲ್ಲಾ ಮಾಡಿದ್ರು ವಿನೇಶ್‌?

    ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನ (Paris Olympics) ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆಜಿ ವಿಭಾಗದಲ್ಲಿ ಪದಕ ಗೆಲ್ಲುವ ಹೊಸ್ತಿಲಲ್ಲಿದ್ದ ವಿನೇಶ್‌ ಫೋಗಟ್‌ (Vinesh Phogat) ಹೆಚ್ಚುವರಿ ತೂಕದಿಂದಾಗಿ ಅನರ್ಹಗೊಂಡು ನಿರಾಸೆ ಮೂಡಿಸಿದರು. ಫೈನಲ್‌ ಪಂದ್ಯ ಆಡುವುದಕ್ಕಾಗಿ ತೂಕ ಕಡಿತಗೊಳಿಸಲು ಇಡೀ ದಿನ ಸಾಕಷ್ಟು ಕಸರತ್ತು, ಕಠಿಣ ವ್ಯಾಯಾಮ ಮತ್ತು ಆಹಾರ ಪದ್ಧತಿ ಅನುಸರಿಸಿದ್ದರು. ಅದಾಗ್ಯೂ ನಿಗದಿಯಷ್ಟು ತೂಕ ಇಳಿಸಲಾಗದೇ ಅನರ್ಹಗೊಂಡಿದ್ದಾರೆ.

    ಏನೇನು ಕಠಿಣ ಕ್ರಮ ಅನುಸರಿಸಿದ್ದರು ಕುಸ್ತಿಪಟು?
    ಪ್ರತಿ ಪಂದ್ಯದಲ್ಲಿ ಕುಸ್ತಿಪಟುಗಳ ತೂಕ ಮಾಡುವುದು ಕಡ್ಡಾಯ ನಿಯಮ. ನಿನ್ನೆಯ (ಆ.6) ಪಂದ್ಯದಲ್ಲಿ ಕುಸ್ತಿಪಟು 50 ಕೆಜಿ ಯೊಳಗಿದ್ದರು. ನಿನ್ನೆವರೆಗೂ ಎಲ್ಲವೂ ನಿಯಮಗಳ ಪ್ರಕಾರ ನಡೆದಿದೆ. ನಿನ್ನೆಯ ಪಂದ್ಯ ಅಂತ್ಯವಾದಾಗ ಅವರು 52 ಕೆಜಿ ಇದ್ದರು. ಇದನ್ನೂ ಓದಿ: ಕೇಂದ್ರ ಸರ್ಕಾರ ಒಲಿಂಪಿಕ್ಸ್ ಮಂಡಳಿಯೊಂದಿಗೆ ಚರ್ಚಿಸಿ ಫೈನಲ್ ಆಡಲು ಅವಕಾಶ ಕಲ್ಪಿಸಿಕೊಡಬೇಕು: ಬೊಮ್ಮಾಯಿ

    ಕುಸ್ತಿಪಟುಗಳು ತೂಕ ಇಳಿಸಲು ಅಗತ್ಯಕ್ಕೆ ಹೆಚ್ಚು ಡಯೆಟ್ ಮಾಡ್ತಾರೆ. ಕೆಲವೊಮ್ಮೆ ಬರೀ ನೀರು ಕುಡಿಯುತ್ತಾರೆ. ತೂಕ ಹೆಚ್ಚಾದ ಹಿನ್ನೆಲೆ ಈ ಅವಧಿಯಲ್ಲಿ ತೂಕ ಇಳಿಸಲು ವಿನೇಶ್‌ ಕೂಡ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ರಾತ್ರಿಯೆಲ್ಲಾ ತೂಕ ಇಳಿಸಲು ಪ್ರಯತ್ನ ಮಾಡಿದ್ದಾರೆ. ತೂಕ ಇಳಿಸಿದ ಮೇಲೂ 150 ಗ್ರಾಂ ಅಧಿಕವಾಯ್ತು. ಇದಾದ ಬಳಿಕ 30 ನಿಮಿಷ ತೂಕ ಇಳಿಸಲು ಅವಕಾಶ ನೀಡಿದ್ದರು. ಬಳಿಕ 15 ನಿಮಿಷ ಸಮಯ ನೀಡಲಾಗಿತ್ತು.

    ತಲೆಗೂದಲು ಕಟ್‌ ಮಾಡಿದ್ದ ವಿನೇಶ್‌!
    ತಲೆಗೂದಲು ಕಟ್ ಮಾಡುವ ಮೂಲಕ ಕುಸ್ತಿಪಟು ವಿನೇಶ್‌ ಫೋಗಟ್ ಎಲ್ಲ ರೀತಿಯ ಪ್ರಯತ್ನ ಮಾಡಿದರು.‌ ಬಳಿಕವೂ 100-150 ತೂಕ ಹೆಚ್ಚಿತ್ತು. ವೈದ್ಯರು ಇದಕ್ಕಿಂತ ಹೆಚ್ಚು ಏನು ಮಾಡಲು ಸಾಧ್ಯವಿಲ್ಲ. ಏನಾದರೂ ಮಾಡಿದರೆ ಜೀವಕ್ಕೆ ಅಪಾಯ ಎಂದು ಹೇಳಿದ್ದರು ಎನ್ನಲಾಗಿದೆ. ಇದನ್ನೂ ಓದಿ: Paris Olympics 2024 | ಅನರ್ಹಗೊಂಡ ಕೆಲವೇ ನಿಮಿಷಗಳಲ್ಲಿ ವಿನೇಶ್‌ ಆಸ್ಪತ್ರೆಗೆ ದಾಖಲು

    ವರದಿಯ ಪ್ರಕಾರ, ನಿನ್ನೆ ರಾತ್ರಿ ವಿನೇಶ್ 2 ಕೆಜಿ ಅಧಿಕ ತೂಕ ಹೊಂದಿದ್ದರು. ಹೆಚ್ಚುವರಿ ತೂಕವನ್ನು ಕಡಿತಗೊಳಿಸಲು ರಾತ್ರಿಯಿಡೀ ಕೆಲಸ ಮಾಡಿದರು. ವಿನೇಶ್ ಅವರು 12 ಗಂಟೆಗಳಿಗೂ ಹೆಚ್ಚು ಕಾಲ ಏನನ್ನೂ ತಿನ್ನಲಿಲ್ಲ. ಏನನ್ನೂ ಕುಡಿಯಲಿಲ್ಲ ಮತ್ತು ಕಠಿಣ ದಿನಚರಿಯಲ್ಲಿ ಭಾಗವಹಿಸಿದರು. ಜಾಗಿಂಗ್, ಸ್ಕಿಪ್ಪಿಂಗ್ ಮತ್ತು ಸೈಕ್ಲಿಂಗ್ ಕೂಡ ಮಾಡಿ ಶ್ರಮಿಸಿದ್ದರು.

    ಈಗ ಫೈನಲ್‌ನಿಂದ ಅನರ್ಹ ಆದ ಹಿನ್ನೆಲೆ ಬೆಳ್ಳಿ ಪದಕವೂ ಸಿಗುವುದಿಲ್ಲ. ನಿಯಮಗಳ ಪ್ರಕಾರ ಎಲ್ಲವೂ ನಡೆದಿದೆ. ಈ ಹಂತದಲ್ಲಿ ಯಾವುದೇ ಒತ್ತಡ ಹೇರಿದರೂ ಸಾಧ್ಯವಿಲ್ಲ. ಹಾಕಿ ಸೇರಿದಂತೆ ಬೇರೆ ಪಂದ್ಯಗಳಲ್ಲಿ ಅಂಪೈರ್‌ಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಬಹುದು. ಇದು ತೂಕದ ವಿಚಾರವಾಗಿರುವ ಹಿನ್ನೆಲೆ ಆಕ್ಷೇಪ ವ್ಯಕ್ತಪಡಿಸಲು ಸಾಧ್ಯವಿಲ್ಲ. 53 ಕೆಜಿ ಸ್ಪರ್ಧೆ ಮಾಡುತ್ತಿದ್ದ ವಿನೇಶ್‌ ಬಳಿಕ 50 ಕೆಜಿಗೆ ಸ್ಪರ್ಧಿಸಿದ್ದರು. ಸಾಕಷ್ಟು ಶ್ರಮ ಹಾಕಿ ತೂಕ ಇಳಿಸಿದ್ದರು. ಇದನ್ನೂ ಓದಿ: Paris Olympics| ಭಾರತಕ್ಕೆ ಆಘಾತ – ಫೈನಲ್‌ನಿಂದ ವಿನೇಶ್ ಫೋಗಟ್ ಅನರ್ಹ

  • CWG 2022: ಭಾರತಕ್ಕೆ ಕಂಚು – ಮೂರೇ ನಿಮಿಷದಲ್ಲಿ ಪಂದ್ಯ ಗೆದ್ದ ಮೋಹಿತ್

    CWG 2022: ಭಾರತಕ್ಕೆ ಕಂಚು – ಮೂರೇ ನಿಮಿಷದಲ್ಲಿ ಪಂದ್ಯ ಗೆದ್ದ ಮೋಹಿತ್

    ಬರ್ಮಿಗ್‌ಹ್ಯಾಮ್: ಭಾರತೀಯ ಕುಸ್ತಿಪಟು ಮೋಹಿತ್ ಗ್ರೆವಾಲ್ ಪುರುಷರ 125 ಕೆಜಿ ಫ್ರೀಸ್ಟೈಲ್‌ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾರೆ.

    ಕೊವೆಂಟ್ರಿ ಅರೆನಾ ವ್ರೆಸ್ಲಿಂಗ್ ಮ್ಯಾಟ್-ಬಿ ನಲ್ಲಿ ಜಮೈಕಾದ ಎದುರಾಳಿ ಆರನ್ ಜಾನ್ಸನ್ ಅವರನ್ನು 5-0 ಅಂತರದಲ್ಲಿ ಸೋಲಿಸುವ ಮೂಲಕ ಕಂಚಿನ ಪಕದ ಗೆದ್ದಿದ್ದಾರೆ. ಅಲ್ಲದೇ ಗ್ರೆವಾಲ್ ಕೇವಲ 3:30 ನಿಮಿಷಗಳಲ್ಲೇ ಪಂದ್ಯವನ್ನು ಕೈವಶ ಮಾಡಿಕೊಂಡಿದ್ದು ವಿಶೇಷ. ಇದನ್ನೂ ಓದಿ: CWG-2022: ಪಾಕಿಸ್ತಾನವನ್ನು ಬಗ್ಗುಬಡಿದ ಭಾರತೀಯ ದೀಪಕ್ ಪೂನಿಯಾಗೆ ಚಿನ್ನದ ಹಾರ

    ದಿವ್ಯಾ ಕಣ್ಣಲ್ಲಿ ಕಂಚಿನ ಹೊಳಪು: ಅಂತೆಯೇ ಮಹಿಳೆಯರ ವಿಭಾಗದ 68 ಕೆಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ದಿವ್ಯಾ ಕಕ್ರಾನ್‌ಗೆ ಕಂಚಿನ ಪದಕ ಲಭಿಸಿದೆ. ಕೊವೆಂಟ್ರಿ ಅರೆನಾ ವ್ರೆಸ್ಲಿಂಗ್ ಮ್ಯಾಟ್-ಬಿ ನಲ್ಲಿ ನಡೆದ ಪಂದ್ಯಲ್ಲಿ 2-0 ಅಂತರದಲ್ಲಿ ಎದುರಾಳಿಯನ್ನು ಬಗ್ಗು ಬಡಿಯುವ ಮೂಲಕ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇದನ್ನೂ ಓದಿ: ಕುಸ್ತಿಯಲ್ಲಿ ಬ್ಯಾಕ್ ಟು ಬ್ಯಾಕ್ ಚಿನ್ನ – ಸಾಕ್ಷಿ ಮಲಿಕ್ ಬಂಗಾರದ ಹುಡುಗಿ

    ಇದಕ್ಕೂ ಮುನ್ನ 8ನೇ ದಿನದ ಅಖಾಡದಲ್ಲಿ ಭಾರತ 5 ಪದಕಗಳನ್ನು ಪಡೆದುಕೊಂಡಿದೆ. 62 ಕೆಜಿ ವಿಭಾಗದಲ್ಲಿ ಸಾಕ್ಷಿ ಮಲಿಕ್, 65 ಕೆಜಿ ವಿಭಾಗದಲ್ಲಿ ಭಜರಂಗ್ ಪೂನಿಯಾ, 86 ಕೆಜಿ ವಿಭಾಗದಲ್ಲಿ ಕುಸ್ತಿಪಟು ದೀಪಕ್ ಪೂನಿಯಾ ಬಂಗಾರದ ಪದಕಗಳನ್ನ ಬಾಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • CWG-2022: ಪಾಕಿಸ್ತಾನವನ್ನು ಬಗ್ಗುಬಡಿದ ಭಾರತೀಯ ದೀಪಕ್ ಪೂನಿಯಾಗೆ ಚಿನ್ನದ ಹಾರ

    CWG-2022: ಪಾಕಿಸ್ತಾನವನ್ನು ಬಗ್ಗುಬಡಿದ ಭಾರತೀಯ ದೀಪಕ್ ಪೂನಿಯಾಗೆ ಚಿನ್ನದ ಹಾರ

    ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ.

    8ನೇ ದಿನದ ಕುಸ್ತಿ ಅಖಾಡದಲ್ಲಿ ಪದಕಗಳ ಬಂಪರ್ ಬೆಳೆ ಸುರಿದಿದೆ. ಕೇವಲ ಕುಸ್ತಿಯಲ್ಲಿಯೇ ಭಾರತಕ್ಕೆ 5 ಪದಕಗಳನ್ನು ಪಡೆದುಕೊಂಡಿದೆ. 62 ಕೆಜಿ ವಿಭಾಗದಲ್ಲಿ ಸಾಕ್ಷಿ ಮಲಿಕ್, 65 ಕೆಜಿ ವಿಭಾಗದಲ್ಲಿ ಭಜರಂಗ್ ಪೂನಿಯಾ, 86 ಕೆಜಿ ವಿಭಾಗದಲ್ಲಿ ಕುಸ್ತಿಪಟು ದೀಪಕ್ ಪೂನಿಯಾ ಬಂಗಾರದ ಪದಕಗಳನ್ನ ಬಾಚಿಕೊಂಡಿದ್ದಾರೆ.

    https://twitter.com/sbg1936/status/1555626699827847169

    ಕುಸ್ತಿಯ 57 ಕೆಜಿ ವಿಭಾಗದಲ್ಲಿ ಅನ್ಶು ಮಲಿಕ್ ಬೆಳ್ಳಿ, ದಿವ್ಯಾ ಮೋಹಿತ್ ಕಂಚಿನ ಪದಕಗಳನ್ನ ಗೆದ್ದುಕೊಂಡಿದ್ದಾರೆ. ಭಾರತದ ಗ್ರಾಪ್ಲರ್ ದೀಪಕ್ ಪೂನಿಯಾ ಪುರುಷರ 86 ಕೆಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ಪಾಕಿಸ್ತಾನದ ಎದುರಾಳಿ ಮೊಹಮ್ಮದ್ ಇನಾಮ್ ಅವರನ್ನು 3-0 ಅಂತರದಲ್ಲಿ ಬಗ್ಗು ಬಡಿಯುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದು ನಿನ್ನೆ ಕುಸ್ತಿಯಲ್ಲಿ ಗೆದ್ದ 3ನೇ ಚಿನ್ನದ ಪದಕವಾಗಿದೆ. ಇದನ್ನೂ ಓದಿ: CWG 2022: ಭಜರಂಗ್ ಪೂನಿಯಾ ಚಿನ್ನದ ಬೇಟೆ – ಭಾರತಕ್ಕೆ 7ನೇ ಚಿನ್ನ

    2-0 ಹಂತದವರೆಗೂ ಮುನ್ನಡೆ ಸಾಧಿಸಿದ್ದ ಪೂನಿಯಾಗೆ ಅಂತಿಮ ಸುತ್ತಿನಲ್ಲಿ ತೀವ್ರ ಪೈಪೋಟಿ ಎದುರಾಗಿತ್ತು. ಪಂದ್ಯದಲ್ಲಿ ಪುನಿಯಾ ಉತ್ತಮ ಫಾರ್ಮ್ನಲ್ಲಿದ್ದರು. ಹಾಗಾಗಿ ಅಂತಿಮ ಮೂರು ನಿಮಿಷಗಳಲ್ಲಿ ತಮ್ಮದೇ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. ಪೂನಿಯಾ ವಿರುದ್ಧ ಪಾಯಿಂಟ್ ಕದಿಯಲು ಹೆಣಗಾಡಿದ ಪಾಕಿಸ್ತಾನದ ಕುಸ್ತಿಪಟು ಅಂತಿಮ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿ ಹೊರನಡೆದರು.

    ಇದರಿಂದ ಭಾರತ ಈವರೆಗೆ 9 ಚಿನ್ನ, 8 ಬೆಳ್ಳಿ, 9 ಕಂಚಿನ ಪಕದ ಗೆದ್ದಿದ್ದು, 26 ಪದಕಗಳೊಂದಿಗೆ, ಪದಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿದಿದೆ. ಪದಕ ಗೆದ್ದ ಕ್ರೀಡಾಪಟುಗಳಿಗೆ ರಾಷ್ಟ್ರಪತಿ, ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]