Tag: Free

  • 1975 ರಿಂದ ಇಲ್ಲಿವರೆಗೂ 10ರೂ. ಪಡೆದು ಚಿಕಿತ್ಸೆ ನೀಡುತ್ತಿದ್ದ ವೈದ್ಯ ಇನ್ನಿಲ್ಲ

    1975 ರಿಂದ ಇಲ್ಲಿವರೆಗೂ 10ರೂ. ಪಡೆದು ಚಿಕಿತ್ಸೆ ನೀಡುತ್ತಿದ್ದ ವೈದ್ಯ ಇನ್ನಿಲ್ಲ

    -ಮರೆಯಾಯ್ತು ಬಡವರ ಪಾಲಿನ ಆಶಾಕಿರಣ

    ಕೊಪ್ಪಳ: ರೋಗಿಗಳನ್ನು ಎಂತಹ ಸಂಧರ್ಭದಲ್ಲೂ ಅವರಿಗೆ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡುತ್ತಿದ್ದ ಕೊಪ್ಪಳದ ಹಿರಿಯ ವೈದ್ಯರೊಬ್ಬರು ಶನಿವಾರ ಕೊನೆಯುಸಿರೆಳೆದಿದ್ದಾರೆ.

    ಡಾ.ಬಾಬುರಾವ್ ಮೃತ ವೈದ್ಯರು. ಇವರು ಕೊಪ್ಪಳದ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ವೈದ್ಯ ವೃತ್ತಿಯನ್ನು ಆರಂಭಿಸಿದ್ದು, ಹೈದರಾಬಾದ್ ಕರ್ನಾಟಕದಲ್ಲಿ ಖ್ಯಾತಿ ಪಡೆದಿದ್ದರು. ಯಾರಿಗೆ ಹಾವು, ಚೇಳು ಕಚ್ಚಿದರೆ ಥಟ್ ಅಂತ ನೆನಪಾಗುವ ಹೆಸರೇ ಬಾಬುರಾವ್ ಅವರದ್ದು. ಎಂತಹ ಸಂದರ್ಭದಲ್ಲೂ ವ್ಯಕ್ತಿಯ ಪ್ರಾಣವನ್ನು ಬದುಕಿಸುತ್ತಿದ್ದರು. ಈ ಕಾರಣದಿಂದಲೇ ಬಾಬುರಾವ್ ಇಲ್ಲಿ ಮನೆ ಮನೆಗೂ ಚಿರಪರಿಚಿತರು.

    ಈ ಭಾಗದಲ್ಲಿ ಗದ್ದೆಗೆ ಬಳಸುವ ಎಣ್ಣೆಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಿವೆ. ಯಾರು ಎಲ್ಲೆ ರಾಸಾಯನಿಕ ಎಣ್ಣೆ ಕುಡಿದಿದ್ದಾರೆ ಅಂದರೆ ಅವರು ಎಲ್ಲೆ ಇರಲಿ ಮೊದಲು ಬಾಬುರಾವ್ ಹತ್ತಿರ ಬರುತ್ತಿದ್ದರು. ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕದ ಮೂಲೆ ಮೂಲೆಯಿಂದ ಈ ವೈದ್ಯರ ಹತ್ತಿರ ಚಿಕಿತ್ಸೆ ಪಡೆಯಲು ಜನ ಆಗಮಿಸುತ್ತಿದ್ದರು. ಬಡವರ ಪಾಲಿನ ಆಶಾಕಿರಣ ಅಂದರೆ ತಪ್ಪಾಗಲಾರದು. ಅವರ ಹತ್ತಿರ ದುಡ್ಡು ಇಲ್ಲದಿದ್ದರೂ ಉಚಿತವಾಗಿ ಚಿಕಿತ್ಸೆ ನೀಡಿ ಕಳುಹಿಸುತ್ತಿದ್ದರು.

    1975ರಲ್ಲಿ ಶ್ರೀರಾಮನಗರಕ್ಕೆ ಆಗಮಿಸಿದ ಬಾಬುರಾವ್ ಅವರು ಅಂದಿನಿಂದ ಇಂದಿನವರೆಗೆ ಕೇವಲ 10 ರೂಪಾಯಿ ಮಾತ್ರ ಪಡೆದು ಚಿಕಿತ್ಸೆ ನೀಡುತ್ತಿದ್ದರು. ಹುಬ್ಬಳ್ಳಿ ಧಾರವಾಡ, ರಾಯಚೂರಿನಿಂದ ಬಂದು ಇಲ್ಲಿ ಚಿಕಿತ್ಸೆ ಪಡೆದುಕೊಂಡು ಹೋಗಿದ್ದರು. ಇದೀಗ ಬಾಬುರಾವ್ ಅವರ ಅಕಾಲಿಕ ಅಗಲಿಕೆಯಿಂದ ಇಡೀ ಶ್ರೀರಾಮನಗರವೇ ಕಂಬನಿ ಮಿಡಿಯುತ್ತಿದೆ.

    ಇಂದು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬಾಬುರಾವ್ ಅವರ ಅಂತಿಮ ಯಾತ್ರೆಯಲ್ಲಿ ಸ್ಥಳೀಯರು ಪಾಲ್ಗೊಳುತ್ತಿದ್ದಾರೆ. ನಮ್ಮ ಶ್ರೀರಾಮನಗರಕ್ಕೆ ಇಂತಹ ಮತ್ತೊಬ್ಬ ವೈದ್ಯರು ಬರಲಿ ಬಾಬುರಾವ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರು ಮತ್ತೆ ಹುಟ್ಟಿಬರಲಿ ಎಂದು ಎಲ್ಲರು ಆಶಿಸುತ್ತಿದ್ದಾರೆ.

  • ಬೆರಳಿನಲ್ಲಿರುವ ಶಾಯಿ ತೋರಿಸಿದ್ರೆ ದಂತ ಚಿಕಿತ್ಸೆ ಉಚಿತ!

    ಬೆರಳಿನಲ್ಲಿರುವ ಶಾಯಿ ತೋರಿಸಿದ್ರೆ ದಂತ ಚಿಕಿತ್ಸೆ ಉಚಿತ!

    ಮೈಸೂರು: ಪ್ರತಿಯೊಬ್ಬ ನಾಗರಿಕನೂ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂಬ ಮತದಾನ ಜಾಗೃತಿಗಳು ಮೂಡಿ ಬಂದಿದೆ. ಆದ್ರೆ ಮೈಸೂರಿನಲ್ಲಿ ಮತದಾನ ಮಾಡಿದವರಿಗೆ ಉಚಿತವಾಗಿ ದಂತ ಚಿಕಿತ್ಸೆ ನೀಡಲಾಗುತ್ತಿದೆ.

    ಹೌದು. ಮೈಸೂರಿನ ಹೆಬ್ಬಾಳದ ಸಂಕ್ರಾಂತಿ ವೃತ್ತದಲ್ಲಿರುವ ಸ್ಮೈಲ್ ಆರ್ಕಿಟೆಕ್ ಡೆಂಟಲ್ ಕ್ಲಿನಿಕ್ ನಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.


    ಮೈಸೂರಿನ ಅನಿಫೌಂಡೇಶನ್ ವತಿಯಿಂದ ಈ ವಿಶಿಷ್ಟ ಅಭಿಯಾನ ನಡೆದಿದೆ. ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಮತದಾನ ಮಾಡಿ ಬಂದು ಬೆರಳಿನಲ್ಲಿರುವ ಶಾಯಿ ತೋರಿಸಿದರೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ.

    ಬೆರಳಿನಲ್ಲಿ ಶಾಯಿ ಎಷ್ಟು ದಿನ ಇರುತ್ತದೆ ಅಲ್ಲಿವರೆಗೂ ಉಚಿತ ಚಿಕಿತ್ಸೆ ಸೌಲಭ್ಯ ಪಡೆಯಬಹುದು ಎಂಬುದಾಗಿ ತಿಳಿದುಬಂದಿದೆ.

  • ಪರೀಕ್ಷೆ ಬರೆಯೋ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

    ಪರೀಕ್ಷೆ ಬರೆಯೋ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

    ಬೆಂಗಳೂರು: ಪರೀಕ್ಷೆ ಬರೆಯುತ್ತಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬಸ್ಸಿನಲ್ಲಿ ಉಚಿತ ಪ್ರಯಾಣ ಕಲ್ಪಿಸುವ ಮೂಲಕ ಸರ್ಕಾರ ಗುಡ್ ನ್ಯೂಸ್ ನೀಡಿದೆ.

    ಮಾರ್ಚ್ 1 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಸರ್ಕಾರಿ ಬಸ್ ಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ ಉಚಿತವಾಗಿ ಪ್ರಯಾಣಿಸಲು ಕೆಎಸ್‍ಆರ್ ಟಿಸಿ ಅವಕಾಶ ಕಲ್ಪಿಸಿದೆ.

    ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣ ಸಂಸ್ಥೆಗಳಲ್ಲದೆ ಬೇರೆ ಬೇರೆ ಶಿಕ್ಷಣ ಸಂಸ್ಥೆಗಳ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಿರುವುದಾಗಿ ಪದವಿಪೂರ್ವ ಶಿಕ್ಷಣ ಇಲಾಖೆ ತಿಳಿಸಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂದು ಕೆಎಸ್‍ಆರ್ ಟಿಸಿ ನಿಗಮದಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಮಾರ್ಚ್ 1 ರಿಂದ 18 ರವೆಗೆ ಮಾತ್ರ ಈ ಸೌಲಭ್ಯವಿರುತ್ತದೆ ಎಂದು ಕೆಎಸ್‍ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

    ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ಪರೀಕ್ಷಾ ಕೇಂದ್ರದವರೆಗೆ ಹಾಗೂ ಪರೀಕ್ಷೆ ಮುಗಿದ ಬಳಿಕ ಮತ್ತೆ ಅಲ್ಲಿಂದ ವಾಸಸ್ಥಳಕ್ಕೆ ಹಿಂದಿರುಗಬಹುದು. ವಿದ್ಯಾರ್ಥಿಗಳು ಬಸ್ ಹತ್ತಿದ ಮೇಲೆ ಪರೀಕ್ಷೆಯ ಪ್ರವೇಶ ಪತ್ರವನ್ನು ತೋರಿಸಿದರೆ ಉಚಿತವಾಗಿ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಫ್ರೀ ಸಾಫ್ಟ್ ವೇರ್ ಇದ್ರೂನೂ ಖಾಸಗಿಯೇ ಬೇಕು- ವಿವಿಗಳಿಂದ ಕೋಟಿ ಕೋಟಿ ಲೂಟಿ!

    ಫ್ರೀ ಸಾಫ್ಟ್ ವೇರ್ ಇದ್ರೂನೂ ಖಾಸಗಿಯೇ ಬೇಕು- ವಿವಿಗಳಿಂದ ಕೋಟಿ ಕೋಟಿ ಲೂಟಿ!

    ಬೆಂಗಳೂರು: ರೈತರ ಸಾಲ ಮನ್ನಾ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರೋ ಸರ್ಕಾರ, ಖರ್ಚು ಕಡಿಮೆ ಮಾಡಿ ಅಂತ ಸಿ.ಎಂ ಕುಮಾರಸ್ವಾಮಿಯವರು ಎಷ್ಟೇ ಮನವಿ ಮಾಡಿದ್ರು ಅವರ ಸಚಿವರು ಮಾತ್ರ ಖರ್ಚುಮಾಡ್ತಾನೆ ಇದ್ದಾರೆ.

    2015 ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಯನ್ನ ಬಳಸಿಕೊಳ್ಳದೇ ವಿವಿ ಬೇಜವಾಬ್ದಾರಿಯನ್ನು ತೋರಿದೆ. ಸರ್ಕಾರ ಉಚಿತವಾಗಿ ನೀಡಿರೋ ನಿಖ್ ಸಾಫ್ಟ್ ವೇರ್ ಅನ್ನು ಎಲ್ಲಾ ವಿವಿಗಳು ಬಳಸಬೇಕು ಅಂತ ಸರ್ಕಾರಿ ಆದೇಶವಿದ್ರೂ ಅದನ್ನು ಉಲ್ಲಂಘಿಸಿದೆ. ಅದನ್ನು ಬಳಸದೇ ಖಾಸಗಿ ಸಂಸ್ಥೆಗಳ ಮೂಲಕ ಮಹತ್ವದ ಪರೀಕ್ಷಾ ದಾಖಲಾತಿಗೆ ಮಾರ್ಕ್ಸ್ ಕಾರ್ಡ್ ಪ್ರಿಂಟ್‍ಗೆ ಟೆಂಡರ್ ಕರೆದಿದ್ದಾರೆ. ಹಾಗಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರ ತನ್ನ ವ್ಯಾಪ್ತಿ ಅಡಿಯಲ್ಲಿ ಬರೋ ಎಲ್ಲಾ ವಿಶ್ವವಿದ್ಯಾಲಯಗಳು ಖಾಸಗಿ ಸಾಫ್ಟ್ ವೇರ್ ಖರೀದಿಗೆ ಮೌಖಿಕ ಆದೇಶ ನೀಡಿದ್ದಾರೆ.

    ಒಂದೇ ಕೆಲಸಕ್ಕೆ ವಿವಿಗಳಿಂದ ಎರಡೆರಡು ಸಾಫ್ಟ್ ವೇರ್ ಅನ್ನ ಖರೀದಿ ಮಾಡುತ್ತಿದ್ದು, ಇದಕ್ಕಾಗಿ ಕೋಟಿ ಕೊಟಿ ರೂ ವೆಚ್ಚವನ್ನು ಖರ್ಚುಮಾಡುವ ಪರಿಸ್ಥಿತಿ ಬಂದಿದೆ. ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ದಾವಣಗೆರೆ, ಕಲಬರುಗಿ ವಿವಿಗಳಿಂದ ಈ ರೀತಿ ಖರೀದಿಗಳು ಸಾಧ್ಯವಾಗುತ್ತಿದೆ.

  • ಸರ್ಕಾರ ಉಚಿತವಾಗಿ ಬೋರ್‌ವೆಲ್‌ ಕೊರೆಸುತ್ತೆ ಅಂದುಕೊಂಡವ್ರಿಗೆ ಶಾಕಿಂಗ್ ನ್ಯೂಸ್

    ಸರ್ಕಾರ ಉಚಿತವಾಗಿ ಬೋರ್‌ವೆಲ್‌ ಕೊರೆಸುತ್ತೆ ಅಂದುಕೊಂಡವ್ರಿಗೆ ಶಾಕಿಂಗ್ ನ್ಯೂಸ್

    ಬೆಂಗಳೂರು: ಎಸ್‍ಸಿ-ಎಸ್‍ಟಿಗಳಿಗಾಗಿಯೇ ಇರುವ ಸರ್ಕಾರದ ಗಂಗಾಕಲ್ಯಾಣ ಯೋಜನೆಯಲ್ಲಿ ಭಾರೀ ಗೋಲ್ಮಾಲ್ ನಡೆದಿದೆ.

    ಎಸ್‍ಸಿ ಎಸ್‍ಟಿಗಳಿಗಾಗಿ, ಉಚಿತವಾಗಿ ಬೋರ್‌ವೆಲ್‌ ಕೊರೆದು ಕೇಸಿಂಗ್ ಪೈಪ್ ಹಾಕಿ, ಮೋಟಾರ್ ಹಾಗೂ ಕೇಬಲ್ ನೀಡುವ ಯೋಜನೆ ಇದಾಗಿದೆ. ಆದ್ರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಗಂಗಾ ಕಲ್ಯಾಣ ಯೋಜನೆಯಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಕಲ್ಯಾಣ ಆಗ್ತಿದೆಯೇ ಹೊರತು, ಬಡ ರೈತನದ್ದಲ್ಲ.

    ಗುತ್ತಿಗೆದಾರರು ಫಲಾನುಭವಿಗಳ ಜಮೀನಿನಲ್ಲಿ ಉಚಿತವಾಗಿ ಬೋರ್‌ವೆಲ್‌ ಕೊರೆಯುವುದಾಗಿ ಹೇಳಿ ಹಣ ಪೀಕಿದ್ದಾರೆ. ಹಣ ನೀಡದಿದ್ದರೆ ಪೂರ್ತಿ ಕೊರೆಯದೇ ಹಾಗೆ ಹೋಗ್ತೀವಿ ಅಂತ ಬೆದರಿಸಿದ್ದಾರೆ. ಹೀಗಾಗಿ ಬೇರೆ ವಿಧಿ ಇಲ್ಲದೇ ಫಲಾನುಭವಿಗಳು ತಮ್ಮ ಕಿವಿ ಓಲೆ, ಕುರಿ ಮಾರಿ ಹಣ ಕೊಟ್ಟಿರುವುದಲ್ಲದೆ, ಸಾಲ ಮಾಡಿ ದುಡ್ಡು ಕೊಟ್ಟಿದ್ದಾರೆ.

    ಮೊದಲು ಗುತ್ತಿಗೆದಾರರು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡದೇ ಭೂಗರ್ಭ ಶಾಸ್ತ್ರಜ್ಞರು ನೀಡುವ `ವಾಟರ್ ಸರ್ವೇ ರಿಪೋರ್ಟ್’ ಕುಂತಲ್ಲೇ ರೆಡಿ ಮಾಡಿದ್ದಾರೆ. ದಿನವೊಂದಕ್ಕೆ ಒಬ್ಬ ಜಿಯಾಲಜಿಸ್ಟ್ 3-4 ಸರ್ವೇ ಮಾಡಿ `ವಾಟರ್ ಸರ್ವೇ ರಿಪೋರ್ಟ್’ ರೆಡಿ ಮಾಡಬಹುದು. ಆದ್ರೆ ಇಲ್ಲಿ ಒಂದೇ ದಿನದಲ್ಲಿ 20-30 ರಿಪೋರ್ಟ್ ರೆಡಿ ಮಾಡಿರೋದು ಆರ್ ಟಿಐ ಅರ್ಜಿಯಿಂದ ಬಯಲಾಗಿದೆ.

    ಒಂದು ಜಿಲ್ಲೆಯಲ್ಲಿ ಏನಿಲ್ಲವೆಂದ್ರೂ 2000 ಬೋರ್‌ವೆಲ್‌ ಕೊರೆಸಲಾಗಿದೆ. ಹಾಗಿದ್ರೆ ರಾಜ್ಯದ ಎಲ್ಲಾ ಜಿಲ್ಲೆಗಳ ಗಂಗಾ ಕಲ್ಯಾಣ ಯೋಜನೆಯಲ್ಲಿ ಆಗಿರುವ ಗೋಲ್ಮಾಲ್ ಎಷ್ಟು ಅಂತ ಊಹಿಸಿಕೊಳ್ಳಿ. ಅಕ್ರಮದ ದಾಖಲೆ ಸಂಗ್ರಹಿಸಿರುವ ಸಾಮಾಜಿಕ ಕಾರ್ಯಕರ್ತ ಅನಿಲ್ ಕೊರ್ಟ್ ಮೊರೆ ಹೋಗೋದಾಗಿ ಹೇಳಿದ್ದಾರೆ. ಸಮಾಜ ಕಲ್ಯಾಣ ಇಲಾಖೆಗೆ ನೂತನ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ ಬಂದಿದ್ದಾರೆ, ಎಸ್‍ಟಿ-ಎಸ್‍ಟಿಗಾಗಿ ಮೀಸಲಿದ್ದ ಯೋಜನೆಯಲ್ಲಿ ದುಡ್ಡು ತಿಂದಿರುವವರ ವಿರುದ್ಧ ಕ್ರಮಕೈಗೊಳ್ತಾರಾ ಎಂಬುದನ್ನು ಕಾದುನೋಡಬೇಕಾಗಿದೆ.

  • ಜೆಡಿಎಸ್ ರ‍್ಯಾಲಿಗೆ ಬಂದ ನೂರಾರು ಬೈಕ್ ಸವಾರರಿಗೆ 500 ರೂ. ಪೆಟ್ರೋಲ್ ಭಾಗ್ಯ!

    ಜೆಡಿಎಸ್ ರ‍್ಯಾಲಿಗೆ ಬಂದ ನೂರಾರು ಬೈಕ್ ಸವಾರರಿಗೆ 500 ರೂ. ಪೆಟ್ರೋಲ್ ಭಾಗ್ಯ!

    ನೆಲಮಂಗಲ: ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳುವ ಹಿನ್ನೆಲೆಯಲ್ಲಿ ಕೊನೆಯ ಪ್ರಚಾರದ ಕಸರತ್ತಾಗಿ ಜೆಡಿಎಸ್ ಪಕ್ಷ ಬೈಕ್ ರ‍್ಯಾಲಿ ಆಯೋಜಿಸಿದೆ.

    ಬೈಕ್ ನಲ್ಲಿ ಬಂದ ನೂರಾರು ಕಾರ್ಯಕರ್ತರಿಗೆ ಭರ್ಜರಿ ಪೆಟ್ರೋಲ್ ಭಾಗ್ಯ ನೀಡಿದೆ. ಬೆಂಗಳೂರು ಹೊರವಲಯದ ನೆಲಮಂಗಲ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಕೆ.ಶ್ರೀನಿವಾಸಮೂರ್ತಿ ಪ್ರತಿಯೊಬ್ಬರಿಗೂ 500 ರೂ. ಟೋಕನ್ ನೀಡಿ ಕಾರ್ಯಕರ್ತರನ್ನು ಚುನಾವಣಾ ಪ್ರಚಾರಕ್ಕೆ ಮುಂದಾಗುವಂತೆ ತಿಳಿಸಿ ಪಕ್ಷವನ್ನು ಮುಜುಗರಕ್ಕೆ ಒಳಗಾಗುವಂತೆ ಮಾಡಿದ್ದಾರೆ.

    ನೆಲಮಂಗಲದ ಅರಿಶಿನಕುಂಟೆ ಬಳಿ ಇರುವ ಹೆಚ್.ಪಿ. ಪೆಟ್ರೋಲ್ ಬಂಕ್ ನಲ್ಲಿ ಸರದಿ ಸಾಲಿನಲ್ಲಿ ನಿಂತ ಬೈಕ್ ಸವಾರರು ನಾ ಮುಂದು ತಾ ಮುಂದು ಎಂಬಂತೆ ಬೈಕ್ ಗಳಿಗೆ ಪೆಟ್ರೋಲ್ ತುಂಬಿಸಿಕೊಂಡಿದ್ದಾರೆ.