ಬೀದರ್: ಬಸ್ ಸೀಟಿಗಾಗಿ (Bus Seat) ಇಬ್ಬರು ಮಹಿಳೆಯರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡಿರುವ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೀದರ್‌ನಿಂದ ಕಲಬುರಗಿ ಬಸ್‌ನಲ್ಲಿಇಬ್ಬರು ಶಕ್ತಿ ಯೋಜನೆ (Shakti Scheme) ಅಡಿ ಉಚಿತ ಟಿಕೆಟ್ (Free Ticket) ಪಡೆದ ಬಳಿಕ ಮಹಿಳೆಯರು ಕಿತ್ತಾಟ ನಡೆಸಿದ್ದಾರೆ. ಓರ್ವ ಮಹಿಳೆ, “ಸೀಟು ಬಿಡು, ಇದು ನನ್ನದು” ಎಂದು ಹೇಳಿದ್ದರೆ ಮತ್ತೊಬ್ಬಳು, “ನಾನು ಸೀಟ್ ಬಿಡಲ್ಲ. ಏನ್ ಮಾಡ್ತಿ” ಎಂದು ಪ್ರಶ್ನಿಸಿದ್ದಾಳೆ. ಇದನ್ನೂ ಓದಿ: ಚೀನಾ ಸಾಲದ ಸುಳಿಗೆ ಬಿದ್ದ ಮಾಲ್ಡೀವ್ಸ್‌ಗೆ ಐಎಂಎಫ್ ಎಚ್ಚರಿಕೆ
– ಪುರುಷರ ಬಟ್ಟೆ ಧರಿಸಿ ಬಂದ ತೃತೀಯ ಲಿಂಗಿಗೆ ಟಿಕೆಟ್ ನೀಡಲು ಕಂಡಕ್ಟರ್ ಪರದಾಟ
ಯಾದಗಿರಿ: ಪುರುಷರ ಬಟ್ಟೆ ಧರಿಸಿ ಬಂದಿದ್ದ ತೃತೀಯ ಲಿಂಗಿಗೆ (Third gender) ಟಿಕೆಟ್ ನೀಡಲು ಬಸ್ ಕಂಡಕ್ಟರ್ (Conductor) ಪರದಾಡಿರುವ ಘಟನೆ ಯಾದಗಿರಿ (Yadgiri) ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಶಹಾಪುರ ತಾಲೂಕಿನ ತಡಬಿಡಿ ಗ್ರಾಮದ ತೃತೀಯ ಲಿಂಗಿ ಲಕ್ಷ್ಮೀ ರಾಯಚೂರಿನಿಂದ ಯಾದಗಿರಿಗೆ ತೆರಳುತ್ತಿದ್ದ ಬಸ್‌ನಲ್ಲಿ (Bus) ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಲಕ್ಷ್ಮೀ ಫ್ರೀ ಟಿಕೆಟ್ ಕೇಳಿದಾಗ ಕಂಡಕ್ಟರ್ ಕಕ್ಕಾಬಿಕ್ಕಿಯಾಗಿದ್ದಾರೆ.
ಬೆಂಗಳೂರು: ಕೂಲಿ ಕಾರ್ಮಿಕರಿಗೆ ಉಚಿತ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸುವುದಕ್ಕಾಗಿ ಕೆಪಿಸಿಸಿಯು ಕೆಎಸ್‌ಆರ್‌ಟಿಸಿಗೆ 1 ಕೋಟಿ ರೂ. ದೇಣಿಗೆ ನೀಡಿದೆ.
ಬೆಂಗಳೂರಿನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕೂಲಿ ಕಾರ್ಮಿಕರು ತಮ್ಮ ಊರಿಗೆ ಹೋಗಲು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜಮಾಯಿಸಿದ್ದಾರೆ. ಹೀಗಾಗಿ ಅವರನ್ನು ಉಚಿತವಾಗಿ ಕರೆದೊಯ್ಯಲು ಕೆಪಿಸಿಸಿಯಿಂದ ಒಂದು ಕೋಟಿ ಚೆಕ್ ಅನ್ನು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಎಂ ಕಳಸದ್ ಅವರಿಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿದ್ದಾರೆ. ಅಷ್ಟೇ ಅಲ್ಲದೆ ಇನ್ನೂ ಹೆಚ್ಚಿನ ವೆಚ್ಚವಾದರೆ ಅದನ್ನು ಬರಿಸಲು ಕೆಪಿಸಿಸಿ ಸಿದ್ಧವಿದೆ ಎಂದು ತಿಳಿಸಿದ್ದಾರೆ.
ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಚಿವರಾದ ಎಚ್.ಕೆ.ಪಾಟೀಲ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಕಾಂಗ್ರೆಸ್ ನಿಯೋಗ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದೆ. ಈ ವೇಳೆ ಸಿದ್ದರಾಮಯ್ಯ ಅವರು ಬಸ್ ಹತ್ತಿ ಪ್ರಯಾಣಿಕರ ಸಮಸ್ಯೆಯನ್ನು ಆಲಿಸಿ, ಅಭಯ ನೀಡಿದರು.
ಪ್ರಯಾಣಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕೆಪಿಸಿಸಿ ವತಿಯಿಂದ ಒಂದು ಕೋಟಿ ರೂ ಚೆಕ್ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಕಾರ್ಮಿಕರಿಂದ ದುಪ್ಪಟ್ಟು ಹಣ ಪಡೆಯದಂತೆ ರಾಜ್ಯ ಸರ್ಕಾರಕ್ಕೆ ತಿಳಿಸಿದ್ದೆವು. ಆದರೆ ಅವರು ಉಚಿತ ಬಸ್ ಸೇವೆಯ ಬದಲು ಹಳೇ ದರದಲ್ಲಿ ಕಾರ್ಮಿಕರಿಂದ ಟಿಕೆಟ್ ಹಣ ಪಡೆಯುವಂತೆ ಆದೇಶ ನೀಡಿತ್ತು. ಹೀಗಾಗಿ ನಮ್ಮ ಪಕ್ಷ ಎಲ್ಲಾ ಮುಖಂಡರು ಚರ್ಚೆ ನಡೆಸಿ ಉಚಿತ ಬಸ್ ಸಂಚಾರಕ್ಕೆ 1 ಕೋಟಿ ರೂ. ದೇಣಿಗೆ ನೀಡಲು ನಿರ್ಧರಿಸಿದ್ದೆವು. ಇದರಿಂದಾಗಿ ಎಚ್ಚೆತ್ತ ರಾಜ್ಯ ಸರ್ಕಾರ ಕಾರ್ಮಿಕರಿಂದ ಯಾವುದೇ ರೀತಿ ಹಣ ಪಡೆಯದಂತೆ ರಾಜ್ಯ ಸಾರಿಗೆ ಇಲಾಖೆ ಸೂಚನೆ ನೀಡಿತು ಎಂದರು.
ಮೆಜೆಸ್ಟಿಕ್‍ನಲ್ಲಿ ಸಾವಿರಾರು ಜನರು ಸೇರಿದ್ದಾರೆ. ಹೀಗಾಗಿ ಅವರಿಗೆ ನೀರು, ಆಹಾರದ ವ್ಯವಸ್ಥೆಯನ್ನು ನಮ್ಮ ಪಕ್ಷದ ಕಾರ್ಯಕರ್ತರು ಮಾಡುತ್ತಿದ್ದಾರೆ. ಕಾರ್ಮಿಕರ ಸಮಸ್ಯೆಗೆ ಸ್ಪಂದಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ಅದನ್ನು ಮರೆಯಬಾರದು ಎಂದು ಹೇಳಿದರು.
ಪ್ರಿಯಾಂಕ ಖರ್ಗೆ ಮಾತನಾಡಿ, ರಾಜ್ಯ ಸರ್ಕಾರ ಕನ್ನಡಿಗರಿಗೆ ಆದ್ಯತೆ ನೀಡುತ್ತಿಲ್ಲ. ಬೇರೆ ರಾಜ್ಯದಲ್ಲಿರುವ ಕಾರ್ಮಿಕರಿಗೆ ಯಾವುದೇ ವ್ಯವಸ್ಥೆ ಮಾಡಿಲ್ಲ. ರಾಜ್ಯದ ಕಾರ್ಮಿಕರಿಗೆ ಉಚಿತವಾಗಿ ಕಳಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದೆವು. ನಮ್ಮ ಪಕ್ಷದ ವತಿಯಿಂದ ಅಳಿಲು ಸೇವೆ ಮಾಡಲಾಗುತ್ತದೆ ಎಂದು ಹೇಳಿದರು.
ಬೆಂಗಳೂರು: ತಮ್ಮ ಊರಿಗಳಿಗೆ ಹೋಗುತ್ತಿದ್ದ ವಲಸೆ ಕಾರ್ಮಿಕರಿಂದ ಹಣ ಪಡೆಯುತ್ತಿದ್ದ ಸರ್ಕಾರ ಈಗ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ.
ಕೆಎಸ್‌ಆರ್‌ಟಿಸಿ ಶನಿವಾರ ಕಾರ್ಮಿಕರಿಂದ ದುಪ್ಪಟ್ಟು ಹಣವನ್ನು ಪಡೆಯುವ ಬಗ್ಗೆ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡಿದ್ದ ರಾಜ್ಯ ಸರ್ಕಾರ ಹಳೇ ದರವನ್ನು ಪಡೆಯುವಂತೆ ಸೂಚನೆ ನೀಡಿತ್ತು. ಈ ಬೆನ್ನಲ್ಲೇ ಸರ್ಕಾರ ಇಂದು ಪ್ರಯಾಣಿಕರ ಬಳಿಯಿಂದ ಯಾವುದೇ ಹಣವನ್ನು ಪಡೆಯುವುದಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ವಲಸೆ ಕಾರ್ಮಿಕರಿಗೆ ಬಿಗ್ ಶಾಕ್- ಬೆಂಗ್ಳೂರಿನಿಂದ ಹೊರಟವ್ರಿಗೆ ಡಬಲ್ ದರದ ಬಿಸಿ
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಎಂ ಕಳಸದ್, ಸಾರಿಗೆ ನಿಗಮದಿಂದ ಕಾರ್ಮಿಕರಿಗೆ ಇಂದಿನಿಂದ 3 (ಮಂಗಳವಾರ) ದಿನಗಳವರೆಗೆ ಮೂರು ದಿನಗಳ ಕಾಲ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‍ಭಾಸ್ಕರ್ ಅವರ ನಿರ್ದೇಶನದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹುಷಾರಾಗಿ ಹೋಗಿ, ಪುಟ್ಟ ಮಗುವಿದೆ- ಧೈರ್ಯ ತುಂಬಿದ ಪೊಲೀಸ್
ಬಸ್‍ಗಳಲ್ಲಿ ಸಂಚರಿಸುವ ಎಲ್ಲರೂ ಕಾರ್ಮಿಕರೆಂದು ನಾವು ಭಾವಿಸಿದ್ದೇವೆ. ಉಚಿತ ಪ್ರಯಾಣ ನೀಡಿರುವುದು ಸಿಹಿ ಸುದ್ದಿಯಾಗಿದೆ. ಕಾರ್ಮಿಕರು ಯಾವುದೇ ಆತಂಕವಿಲ್ಲದೆ ಸುಖಕರವಾಗಿ ಪ್ರಯಾಣಿಸಬಹುದು. ಈಗಾಗಲೇ ಹಣ ಪಾವತಿಸಿ ಪ್ರಯಾಣಿಸುತ್ತಿರುವ ಕಾರ್ಮಿಕರಿಗೆ ಹಣ ಮರುಪಾವತಿ ಮಾಡಲಾಗುತ್ತದೆ ಎಂದು ಕಳಸದ್ ತಿಳಿಸಿದರು.
ಸಿಎಂ ಪತ್ರಿಕಾ ಪ್ರಕಟಣೆಯಲ್ಲಿ ಏನಿದೆ?:
ಕಾರ್ಮಿಕರು ಮತ್ತು ಬಡ ಕೂಲಿ ಕಾರ್ಮಿಕರ ಪರಿಸ್ಥಿತಿಯನ್ನು ಗಮನಿಸಿ ಇಂದಿನಿಂದ 3 (ಮಂಗಳವಾರ) ದಿನಗಳವರೆಗೆ ಜಿಲ್ಲಾ ಕೇಂದ್ರಗಳಿಂದ ಮತ್ತು ರಾಜಧಾನಿ ಬೆಂಗಳೂರಿನಿಂದ ಕರ್ನಾಟಕದಲ್ಲಿನ ತಮ್ಮ ತಮ್ಮ ಊರುಗಳಿಗೆ ಹೋಗುವ ಎಲ್ಲರಿಗೂ ಉಚಿತವಾಗಿ ಕೆಎಸ್‌ಆರ್‌ಟಿಸಿ ಬಸ್‍ಗಳಲ್ಲಿ ತೆರಳಲು ಅನುವು ಮಾಡಿಕೊಡಲಾಗಿದೆ. ಇದರ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ನನ್ನ ಕಳಕಳಿಯ ಮನವಿ ಯಾವುದೇ ಬಸ್ ನಿಲ್ದಾಣಗಳಲ್ಲಿ ಯಾರು ನೂಕುನುಗ್ಗಲು ಮಾಡಬಾರದು. ಜನರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಿಎಂ ಯಡಿಯೂರಪ್ಪ ಅವರು ಮನವಿ ಮಾಡಿಕೊಂಡಿದ್ದಾರೆ.
ಮೆಜೆಸ್ಟಿಕ್‍ನಲ್ಲಿ ಸಾವಿರಾರೂ ಕಾರ್ಮಿಕರು ಜಮಾಯಿಸಿದ್ದಾರೆ. ಹೀಗಾಗಿ ಕೆಎಸ್‌ಆರ್‌ಟಿಸಿ 200ಕ್ಕೂ ಹೆಚ್ಚು ಬಸ್ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಅಧಿಕಾರಿಗಳು ಮುಂದೆ ನಿಂತು ಕಾರ್ಯನಿರ್ವಹಿಸುತ್ತಿದ್ದಾರೆ. ಇಂದು ಬಸ್ ನಿಲ್ದಾಣದಲ್ಲಿ ಸೇರಿರುವ ಎಲ್ಲರನ್ನೂ ತಮ್ಮ ಜಿಲ್ಲೆಗಳಿಗೆ ಕಳಿಸಿಕೊಡಲು ಸಿದ್ಧತೆ ನಡೆದಿದೆ. ಅಷ್ಟೇ ಅಲ್ಲದೆ ದಾಖಲೆಗಳನ್ನು ತೋರಿಸಲೇ ಬೇಕು ಎಂದು ಸರ್ಕಾರ ಈ ಹಿಂದೆ ಸೂಚನೆ ನೀಡಿತ್ತು. ಆದರೆ ಈಗ ಯಾವುದೇ ದಾಖಲೆ ತೋರಿಸು ಅಗತ್ಯವಿಲ್ಲ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಸೋಮವಾರದಿಂದ 12 ಜಿಲ್ಲೆಯೊಳಗೆ ಬಸ್ ಸಂಚಾರ ಆರಂಭ
ಈ ಮೊದಲು ಎಲ್ಲಿಗೆ, ಎಷ್ಟು ದರ ಇತ್ತು?
ಬಾಗಲಕೋಟೆಗೆ ಈ ಹಿಂದೆ ನಿಗದಿಯಾಗಿದ್ದ 700 ರೂ. ಬದಲು 1,311 ರೂ. ಪಡೆಯಲಾಗುತ್ತಿದೆ. ಅಂತೆಯೇ ಬಳ್ಳಾರಿಗೆ ತೆರಳಲು 450 ರೂ. ಬದಲು 884 ರೂ., ಬೆಳಗಾವಿಗೆ ಹೋಗಲು 800 ರೂ. ಬದಲು 1,478 ರೂ., ವಸೂಲಿ ಮಾಡಲಾಗುತ್ತಿದೆ. ಬೆಳಗಾವಿಗೆ ಹೋಗಲು 800 ರೂ. ಬದಲು 1,478 ರೂ., ಚಿತ್ರದುರ್ಗಕ್ಕೆ ತೆರಳಲು 300 ರೂ. ಬದಲು 602 ರೂ., ಕೊಪ್ಪಳಕ್ಕೆ ತೆರಳಲು 600 ರೂಪಾಯಿ ಬದಲು 1,000 ರೂ., ಕಲಬುರಗಿಗೆ ತೆರಳಲು 900 ರೂಪಾಯಿ ಬದಲು 1,619 ರೂ. ಪಡೆಯಲಾಗುತ್ತಿದೆ. ಹೀಗೆ ವಿವಿಧ ಪ್ರದೇಶಗಳಿಗೆ ಹೋಗಲು ಸಿದ್ಧರಾದ ವಲಸೆ ಕಾರ್ಮಿಕರಿಗೆ ಬಸ್ ಟಿಕೆಟ್ ದರ ಆಘಾತ ನೀಡಿದೆ.
ನವದೆಹಲಿ: ದೇಶಾದ್ಯಂತ ಫಿಟ್ ಇಂಡಿಯಾ ಉತ್ತೇಜಿಸಲು ಕೇಂದ್ರ ಸರ್ಕಾರ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಇದರ ಭಾಗವಾಗಿ 30 ಬಸ್ಕಿ ಹೊಡೆದರೆ ಫ್ರೀ ಪ್ಲಾಟ್‍ಫಾರಂ ಟಿಕೆಟ್ ನೀಡುವ ಯೋಜನೆಯನ್ನು ದೆಹಲಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ.
ದೆಹಲಿಯ ಆನಂದ್ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ಬಸ್ಕಿ ಹೊಡೆದರೆ ಉಚಿತವಾಗಿ ಪ್ಲಾಟ್‍ಫಾರಂ ಟಿಕೆಟ್ ಕೊಡುವಂತಹ ಮೆಷಿನ್‍ನ್ನು ಇರಿಸಲಾಗಿದೆ. ಈ ಮಷಿನ್ ಮುಂದೆ 3 ನಿಮಿಷದಲ್ಲಿ 30 ಬಸ್ಕಿ ಹೊಡೆದರೆ ಅದು ಫ್ರೀಯಾಗಿ ಟಿಕೆಟ್ ಕೊಡುತ್ತದೆ.
फिटनेस के साथ बचत भी: दिल्ली के आनंद विहार रेलवे स्टेशन पर फिटनेस को प्रोत्साहित करने के लिए अनूठा प्रयोग किया गया है।
यहां लगाई गई मशीन के सामने एक्सरसाइज करने पर प्लेटफार्म टिकट निशुल्क लिया जा सकता है। pic.twitter.com/RL79nKEJBp
ಪ್ರಯಾಣಿಕರೊಬ್ಬರು ಫ್ರೀ ಟಿಕೆಟ್ ಪಡೆಯುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿರು ರೈಲ್ವೆ ಸಚಿವ ಪಿಯೂಷ್ ಗೋಯೆಲ್, ಫಿಟ್‍ನೆಸ್‍ನೊಂದಿಗೆ ಉಳಿತಾಯ. ದೆಹಲಿಯ ಆನಂದ್ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ಫಿಟ್‍ನೆಸ್ ಉತ್ತೇಜಿಸಲು ಒಂದು ವಿಶಿಷ್ಟ ಪ್ರಯೋಗವನ್ನು ಮಾಡಲಾಗಿದೆ. ಇಲ್ಲಿ ಇರಿಸಲಾದ ಯಂತ್ರದ ಮುಂದೆ ಬಸ್ಕಿ ಹೊಡೆದರೆ ಪ್ಲಾಟ್‍ಫಾರಂ ಟಿಕೆಟ್‍ಗಳನ್ನು ಉಚಿತವಾಗಿ ತೆಗೆದುಕೊಳ್ಳಬಹುದು ಎಂದು ಬರೆದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸದೃಢ ಭಾರತವನ್ನು ರೂಪಿಸುವ ಜೊತೆಗೆ ಭಾರತದ ನಾಗರಿಕರ ಆರೋಗ್ಯದ ಕಾಳಜಿಯಿಂದ ಫಿಟ್ ಇಂಡಿಯಾ ಯೋಜನೆ ಜಾರಿಗೆ ತಂದಿದ್ದಾರೆ. ಅದರ ಭಾಗವಾಗಿ ಪಿಯೂಷ್ ಗೋಯೆಲ್ ಅವರು ಫ್ರೀ ಪ್ಲಾಟ್‍ಫಾರಂ ಟಿಕೆಟ್ ಯೋಜನೆ ಜಾರಿಗೆ ತಂದಿದ್ದಾರೆ.
Exercise & Get Free Platform Ticket: Indian Railways has embarked on a novel initiative to encourage fitness at Anand Vihar Railway Station in Delhi.
Platform tickets will be given free of charge to those who exercise using the ‘Squat Kiosk' installed. pic.twitter.com/4DlqDdRATc
ಬೆಂಗಳೂರು: ಹೌದು, ಮನೆಮಂದಿಗೆ ಇಷ್ಟವಾಗೋ ಸ್ಟೈಲ್ ನ ಸಿನೆಮಾ ಇದಾಗಿರುವುದರಿಂದ ಕುಟುಂಬ ಸಮೇತ ಕೂತು ನೋಡುವ ವಿಶೇಷ ಪ್ರದರ್ಶನವೊಂದನ್ನು ಸಿನೆಮಾ ವೀಕ್ಷಿಸಿದ ಅಭಿಮಾನಿ ಬಳಗವೊಂದು ಅರೇಂಜ್ ಮಾಡಿದೆ. ಮೆಸೇಜ್ ಓರಿಯಂಟೆಡ್ ಸಿನೆಮಾ ಇದಾಗಿರುವುದರಿಂದ ‘ನಮ್ ಕನ್ನಡ ಸಿನ್ಮಾ ಸಪೋರ್ಟರ್ಸ್’ ತಂಡ ಈ ಪ್ರಯತ್ನಕ್ಕೆ ಕೈ ಹಾಕಿದೆ…
ಏನಿದು ವಿಶೇಷ ಪ್ರದರ್ಶನ?!
ನಿಮ್ಮ ಮನೆಯಲ್ಲಿ ನೀವು, ನಿಮ್ಮ ವೈಫು ಹಾಗೂ ನಿಮಗೆ ಪಿಯುಸಿ ಆಸುಪಾಸಿನ ಹೆಣ್ಣುಮಗಳು ಇದ್ದರೆ ಈಗಲೇ 9538000044 ನಂಬರಿಗೆ ವಾಟ್ಸಪ್ ಮಾಡಿ…ಪೋಟೋ ಇಲ್ಲ ಎಂದರೆ ಸಿನೆಮಾಗೆ ಪ್ರವೇಶವಿಲ್ಲ. ದುನಿಯಾ ವಿಜಿ ಹಾಗೂ ಅವರ ಮಗಳ ಜೊತೆ ಸಿನೆಮಾ ನೋಡುವ ಅವಕಾಶ ಇಲ್ಲ! ಈಗಲೇ ಗಂಡ ಹೆಂಡತಿ ಮತ್ತು ಮೊನ್ನೆ ತಾನೇ ಪಿಯುಸಿ ಮುಗಿಸಿರುವ ಮಗಳು ಅಕ್ಕ ಪಕ್ಕ ನಿಂತು ಸೆಲ್ಫೀ ತೆಗೆದು 9538000044 ಗೆ ವಾಟ್ಸಪ್ ಮಾಡಿ… ಮೊದಲು ಯಾವ 50 ಫೋಟೋಗಳು ವಾಟ್ಸಪ್ ಗೆ ಬಂದು ಸೇರುತ್ತದೆಯೋ ಆ ಫ್ಯಾಮಿಲಿಗೆ (50*3=150ಸೀಟುಗಳು ಮಾತ್ರ) ಮನೆ ಮನ ಗೆದ್ದ, ಫ್ಯಾಮಿಲಿ ಸಮೇತ ಕೂತು ನೋಡಬಹುದಾದ ಜಾನಿ ಜಾನಿ ಯೆಸ್ ಪಪ್ಪಾ ಸಿನೆಮಾವನ್ನ ಚಿತ್ರತಂಡದ ಜೊತೆ ನೋಡುವ ಅದೃಷ್ಟ… ಆ ಅದೃಷ್ಟ ನಿಮ್ಮ ಫ್ಯಾಮಿಲಿಗೂ ಲಭಿಸಬಹುದು, ಯಾರಿಗೆ ಗೊತ್ತು?
ಈಗಲೇ ಗಂಡ ಹೆಂಡತಿ ಜೊತೆ ನಿಮ್ಮ ಪಿಯುಸಿ ಆಸುಪಾಸಿನ ಮಗಳ ಜೊತೆ ಒಂದು ಕ್ಲಿಕ್ ತೆಗೆದು ವಾಟ್ಸಪ್ ಮಾಡಿ. ಮಾಗಡಿ ರಸ್ತೆಯ ಜಿಟಿ ಮಾಲ್ ನಲ್ಲಿ ಸಿನೆಮಾ ನೋಡೋ ಅವಕಾಶ ಪಡೆಯಿರಿ.
ನೀವು ನಿಮ್ಮ ಮಗಳ ಹಾಗೂ ಹೆಂಡತಿಯ ಜೊತೆಗೇ ಬಂದು ಸಿನೆಮಾ ನೋಡಿ ಅಂತ ಪರ್ಟಿಕ್ಯುಲರ್ ಆಗಿ ಹೇಳಲು ಒಂದು ರೀಸನ್ ಇದೆ. ಅದು ಏನು ಎಂದು ಸಿನೆಮಾ ನೋಡಿದ ನಂತರ ಖುದ್ದು ದುನಿಯಾ ವಿಜಯ್ ಅವರೇ ವಿವರಿಸುತ್ತಾರೆ.
ವಿಶೇಷ ಸೂಚನೆ: ಮೇಲಿರೋ ನಂಬರ್ ಗೆ ವಾಟ್ಸಪ್ ಮಾತ್ರ ಮಾಡಿ, ಮೊದಲು ಕಳಿಸಿದವರಿಗೆ ಮೊದಲ ಆದ್ಯತೆ. ಹಾಗೇ ಈ ಶೋ ನೋಡಲು ಆಯ್ಕೆಯಾದ ಗಂಡ ಹೆಂಡತಿ ಮಾತ್ರ ಟಿಕೆಟ್ ಖರೀದಿ ಮಾಡಿದ್ರೆ ಸಾಕು, ನಿಮ್ಮ ಮಗಳಿಗೆ ಟಿಕೆಟ್ ಉಚಿತ.